Tag: ಅಘ್ಘಾನ್

  • ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಹೊಸ ಸರ್ಕಾರ ರಚನೆ- ಎರಡು ವಾರಗಳ ಬಳಿಕ ಆಡಳಿತ ಆರಂಭ?

    ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಹೊಸ ಸರ್ಕಾರ ರಚನೆ- ಎರಡು ವಾರಗಳ ಬಳಿಕ ಆಡಳಿತ ಆರಂಭ?

    ಕಾಬೂಲ್: ಅಘ್ಘಾನಿಸ್ತಾನದಲ್ಲಿ ಇಂದು ತಾಲಿಬಾನ್ ಸರ್ಕಾರ ರಚನೆಯಾಗುವ ಸಾಧ್ಯತೆಯಿದ್ದು, ಈ ಮೂಲಕ ಅಫ್ಘಾನ್ ವಶಪಡಿಸಿಕೊಂಡ ಎರಡು ವಾರಗಳ ಬಳಿಕ ಆಡಳಿತ ಆರಂಭಿಸುವ ನಿರೀಕ್ಷೆ ಇದೆ.

    ಇಂದು ತಾಲಿಬಾನ್ ಮುಖ್ಯಸ್ಥರಿಂದ ಅಧಿಕೃತ ಘೋಷಣೆ ಸಾಧ್ಯತೆ ಇದ್ದು, ನಿನ್ನೆಯೇ ಘೋಷಣೆಯಾಗಬೇಕಿದ್ದ ಸರ್ಕಾರ ರಚನೆ ಕಡೆಯ ಕ್ಷಣದಲ್ಲಿ ತಾಲಿಬಾನ್ ರದ್ದುಗೊಳಿಸಿತ್ತು. ತಾಲಿಬಾನ್ ಸಹ ಸಂಸ್ಥಾಪಕ ಮುಲ್ಲಾ ಅಬ್ದುಲ್ ಘನಿ ಬರದಾರ್ ಪ್ರಧಾನಿ ಹುದ್ದೆಗೆ ಹೆಸರು ಕೇಳಿಬರುತ್ತಿದ್ದು, ಅಫ್ಘಾನ್ ನಲ್ಲಿ ಇರಾನ್ ಮಾದರಿಯ ಅಧ್ಯಕ್ಷೀಯ ಸರ್ಕಾರದ ರಚನೆ ಚಿಂತನೆ ನಡೆದಿದೆ. ಇದನ್ನೂ ಓದಿ: ಪಂಜ್‍ಶೀರ್ ವಶಕ್ಕೆ ಪಡೆದ ತಾಲಿಬಾನಿಗಳಿಂದ ಗಾಳಿಯಲ್ಲಿ ಗುಂಡು!

    ಅಫ್ಘಾನ್ ಅಧ್ಯಕ್ಷರಾಗಲು ತಾಲಿಬಾನ್ ಸರ್ವೋಚ್ಚ ನಾಯಕ ಮುಲ್ಲಾ ಹೆಬತುಲ್ಲಾಹ್ ಅಖುನ್ದಝದ ಸಿದ್ಧರಾಗಿದ್ದು, ಈ ನಿರ್ಧಾರವನ್ನು ಕೈಗೊಳ್ಳಲು ದೋಹಾ ತಾಲಿಬಾನ್ ನಾಯಕರು ನಿರ್ಣಾಯಕ ಪಾತ್ರವಹಿಸಲಿದ್ದಾರೆ. ತಾಲಿಬಾನ್ ಸರ್ಕಾರದಲ್ಲಿ ಶೇ.80ರಷ್ಟು ಪ್ರಾತಿನಿಧ್ಯ ಹೊಂದುವ ನಿರೀಕ್ಷೆ ಇದ್ದು, ಸರ್ಕಾರದಲ್ಲಿ ಮಹಿಳೆಯರ ಪಾತ್ರ ಅನುಮಾನ, ಮಹಿಳೆಯರಿಗೆ ಸರ್ಕಾರದಲ್ಲಿ ಸ್ಥಾನ ಮಾನ ನೀಡದಿರಲು ನಿರ್ಧಾರ ಕೈಗೊಂಡಿದೆ.

    ಈಗಾಗಲೇ ಸಂವಿಧಾನವನ್ನು ರಚನೆ ಮಾಡಿರುವ ತಾಲಿಬಾನ್ ಸರ್ಕಾರ, ರಾಷ್ಟ್ರಗೀತೆ ಮತ್ತು ರಾಷ್ಟ್ರ ಧ್ವಜದ ಬಗ್ಗೆ ನಿರ್ಧಾರ ಮಾಡಿದೆ. ಈಗಾಗಲೇ ಪೊಲೀಸ್ ಮುಖ್ಯಸ್ಥರು, ರಾಜ್ಯಪಾಲರ ಆಯ್ಕೆ ಮಾಡಿರುವ ತಾಲಿಬಾನ್ ನಾಯಕರು, ಇಂದು ಸರ್ಕಾರದ ಘೋಷಣೆ ಮಾಡುವ ನಿರೀಕ್ಷೆ ಇದ್ದು, ಅಫ್ಘಾನ್ ವಶಪಡಿಸಿಕೊಂಡ ಎರಡು ವಾರಗಳ ಬಳಿಕ ಅಫ್ಘಾನ್ ನಲ್ಲಿ ತಾಲಿಬಾನ್ ಆಡಳಿತ ಆರಂಭಿಸಲು ಮಹತ್ವದ ಹೆಜ್ಜೆ ಇಟ್ಟಿದೆ. ಇದನ್ನೂ ಓದಿ: ಕಾಬೂಲ್ ತೊರೆಯುವ ಮುನ್ನ 73 ಏರ್​​ಕ್ರಾಫ್ಟ್ ನಿಷ್ಕ್ರಿಯಗೊಳಿಸಿದ ಅಮೆರಿಕ ಸೈನಿಕರು

  • ಕ್ಯಾನ್ಸರ್ ರೋಗ 4ನೇ ಹಂತ ತಲುಪಿದಾಗ ಏನಾಗುತ್ತೋ ಹಾಗೆ ಅತ್ಯಾಚಾರಿಗಳಿಗೆ ಶಿಕ್ಷೆಯಾಗ್ಬೇಕು: ವಿನಯ್ ಗುರೂಜಿ

    ಕ್ಯಾನ್ಸರ್ ರೋಗ 4ನೇ ಹಂತ ತಲುಪಿದಾಗ ಏನಾಗುತ್ತೋ ಹಾಗೆ ಅತ್ಯಾಚಾರಿಗಳಿಗೆ ಶಿಕ್ಷೆಯಾಗ್ಬೇಕು: ವಿನಯ್ ಗುರೂಜಿ

    ರಾಯಚೂರು: ಮೈಸೂರಿನಲ್ಲಿ ನಡೆದಿರುವ ಗ್ಯಾಂಗ್‍ರೇಪ್ ಸಂಬಂಧಿಸಿದಂತೆ ಕ್ಯಾನ್ಸರ್ ರೋಗ ನಾಲ್ಕನೇ ಹಂತ ತಲುಪಿದಾಗ ಏನಾಗುತ್ತದೆಯೋ ಹಾಗೆ ಅತ್ಯಾಚಾರಿಗಳಿಗೆ ಶಿಕ್ಷೆಯಾಗಬೇಕು ಎಂದು ಅವದೂತ ವಿನಯ್ ಗುರೂಜಿ ಅಭಿಪ್ರಾಯಪಟ್ಟಿದ್ದಾರೆ.

    ರಾಯಚೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೈಸೂರಿನಲ್ಲಿ ನಡೆದಿರುವ ಅತ್ಯಾಚಾರ ಪ್ರಕರಣ ಖಂಡನೀಯವಾಗಿದೆ. ರಾಜ್ಯದಲ್ಲಿ ಅತ್ಯಾಚಾರ ಪ್ರಕರಣದ ಕಾನೂನನ್ನು ಮತ್ತಷ್ಟು ಬಿಗಿಗೊಳಿಸಬೇಕಿದೆ. ಪಕ್ಷ ಭೇದವಿಲ್ಲದೆ ಕಾನೂನನ್ನು ಬಿಗಿಗೊಳಿಸುವ ಕೆಲಸ ಆಗಬೇಕು. ಅಹಿಂಸಾವಾದಿಯಾದ ನಾನು ಎಲ್ಲವನ್ನೂ ಹೇಳಲಾಗುವುದಿಲ್ಲ. ಆದರೆ ಅತ್ಯಾಚಾರಿಗಳಿಗೆ ಸರಿಯಾದ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಬಿಯರ್ ಬಾಟ್ಲಿ, ಬಸ್ ಟಿಕೆಟ್ ಆಧರಿಸಿ ಅತ್ಯಾಚಾರಿಗಳ ಬಂಧನ

    ಅತ್ಯಾಚಾರಿಗಳಿಗೆ, ಹೈದರಾಬಾದ್ ನಲ್ಲಿ ನಡೆದ ಅತ್ಯಾಚಾರ ಪ್ರಕರಣದ ಕ್ರಮದಂತೆ ಇಲ್ಲಿಯೂ ಮಾಡಲಿ. ಕ್ಯಾನ್ಸರ್ ರೋಗ ನಾಲ್ಕನೇ ಹಂತ ತಲುಪಿದಾಗ ಏನಾಗುತ್ತದಯೋ ಹಾಗೆ ಅತ್ಯಾಚಾರಿಗಳಿಗೆ ಶಿಕ್ಷೆಯಾಗಬೇಕು ಎನ್ನುವ ಮೂಲಕ ಪರೋಕ್ಷವಾಗಿ ಶೂಟ್ ಮಾಡಿ ಎಂದರು. ಇದನ್ನೂ ಓದಿ: ದರೋಡೆ ಮಾಡಲು ಹೋಗಿ ಏನೂ ಸಿಗದಿದ್ದಾಗ ಯುವತಿಯ ಅತ್ಯಾಚಾರವೆಸಗಿದ ಕಾಮುಕರು!

    ಪ್ರಪಂಚದ ಎಲ್ಲ ದೇಶಗಳು ಒಂದಾದರೆ ತಾಲಿಬಾನ್ ಉಗ್ರರನ್ನು ಮಟ್ಟ ಹಾಕಬಹುದು. ತಾಲಿಬಾನ್ ಮೇಲೆ ದಾಳಿ ಮಾಡಿರುವ ಉಗ್ರರು ಪ್ರಾಯೋಗಿಕವಾಗಿ ಅಘ್ಘಾನ್ ದೇಶವನ್ನು ಬಳಸಿಕೊಂಡಿದ್ದಾರೆ. ಚೀನಾ ಮತ್ತು ಪಾಕಿಸ್ತಾನ, ಭಾರತದ ಮೇಲೆ ದಾಳಿ ಮಾಡುವ ಸಂಚಿನಲ್ಲಿವೆ ಎಂದು ವಿನಯ್ ಗುರೂಜಿ ಅಭಿಪ್ರಾಯಪಟ್ಟರು.

  • ಅಘ್ಘಾನ್ ಪ್ರಜೆಗಳಲ್ಲಿ ಇ-ವೀಸಾವಿದ್ದರೆ ಮಾತ್ರ ಭಾರತ ಪ್ರವೇಶ

    ಅಘ್ಘಾನ್ ಪ್ರಜೆಗಳಲ್ಲಿ ಇ-ವೀಸಾವಿದ್ದರೆ ಮಾತ್ರ ಭಾರತ ಪ್ರವೇಶ

    ನವದಹಲಿ: ಅಫ್ಘಾನಿಸ್ತಾನದಲ್ಲಿ ಪ್ರಸ್ತುತ ಅಭದ್ರತಾ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಇನ್ನು ಮುಂದೆ ಎಲ್ಲಾ ಅಘ್ಘಾನ್ ಪ್ರಜೆಗಳು ಇ-ವೀಸಾದೊಂದಿಗೆ ಮಾತ್ರ ಭಾರತಕ್ಕೆ ಪ್ರಯಾಣಿಸಬೇಕು ಎಂದು ಗೃಹ ವ್ಯವಹಾರಗಳ ಸಚಿವಾಲಯ ನಿರ್ಧರಿಸಿದೆ.

    ಅಫ್ಘಾನಿಸ್ತಾನದಲ್ಲಿ ಪ್ರಸ್ತುತ ನೆಲೆಸಿರುವ ಅಭದ್ರತಾ ಪರಿಸ್ಥಿತಿ ಹಿನ್ನೆಲೆಯಲ್ಲಿ ಮತ್ತು ಇ-ತುರ್ತು ಎಕ್ಸ್-ಮಿಸಲೇನಿಯಸ್ ವೀಸಾ’ವನ್ನು ಪರಿಚಯಿಸುವ ಮೂಲಕ ವೀಸಾ ಪ್ರಕ್ರಿಯೆಯನ್ನು ಸುವ್ಯವಸ್ಥಿತಗೊಳಿಸಿರುವುದರಿಂದ, ಇನ್ನು ಮುಂದೆ ಎಲ್ಲಾ ಅಘ್ಘಾನ್ ಪ್ರಜೆಗಳು ಇ-ವೀಸಾದೊಂದಿಗೆ ಮಾತ್ರ ಭಾರತಕ್ಕೆ ಪ್ರಯಾಣಿಸಲು ಅವಕಾಶ ನೀಡಲು ಗೃಹ ಸಚಿವಾಲಯ ತಯಾರಿ ನಡೆಸಿದೆ. ಇದನ್ನೂ ಓದಿ: ತಾಲಿಬಾನಿಗಳು ಹುಡುಕುತ್ತಾ ನನ್ನ ಮನೆಗೆ ಬಂದ್ರು: ಅಫ್ಘಾನಿಸ್ತಾನದ ಮೊದಲ ಮಹಿಳಾ ಮೇಯರ್

    ಕೆಲವು ಅಘ್ಘಾನ್ ಪ್ರಜೆಗಳ ಪಾಸ್‌ಪೋರ್ಟ್ ಗಳು ಕಳೆದುಹೋಗಿವೆ ಎಂಬ ವರದಿಗಳನ್ನು ಗಮನದಲ್ಲಿಟ್ಟುಕೊಂಡು, ಪ್ರಸ್ತುತ ಭಾರತದಲ್ಲಿಲ್ಲದ ಎಲ್ಲಾ ಅಘ್ಘಾನ್ ಪ್ರಜೆಗಳಿಗೆ ಈ ಹಿಂದೆ ನೀಡಲಾಗಿದ್ದ ವೀಸಾಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನ್ಯಗೊಳಿಸಲಾಗಿದೆ. ಇನ್ನು ಮುಂದೆ ಭಾರತಕ್ಕೆ ಪ್ರಯಾಣಿಸಲು ಬಯಸುವ ಆಫ್ಘನ್ ಪ್ರಜೆಗಳು www.indianvisaonline.gov.in ಮೂಲಕ ಇ-ವೀಸಾಗೆ ಅರ್ಜಿ ಸಲ್ಲಿಸಬಹುದು ಎಂದು ಗೃಹ ಸಚಿವಾಲಯ ಆದೇಶ ಹೊರಡಿಸಿದೆ. ಇದನ್ನೂ ಓದಿ: ಜನರು ಕೊರೊನಾ ಜೊತೆ ಬದುಕೋದನ್ನ ಕಲಿತುಕೊಳ್ಳಬೇಕು: WHO ಡಾ. ಸೌಮ್ಯ ಸ್ವಾಮಿನಾಥನ್