Tag: ಅಗ್ರಿಮೆಂಟ್

  • ಮದುವೆಗೂ ಮುಂಚೆ ಕಂಡೀಷನ್ಸ್ ಅಪ್ಲೈ- ಬೆಂಗಳೂರಿನ ವಧು, ವರರ ನಯಾ ಟ್ರೆಂಡ್

    ಮದುವೆಗೂ ಮುಂಚೆ ಕಂಡೀಷನ್ಸ್ ಅಪ್ಲೈ- ಬೆಂಗಳೂರಿನ ವಧು, ವರರ ನಯಾ ಟ್ರೆಂಡ್

    ಬೆಂಗಳೂರು: ಮದುವೆ ಸ್ವರ್ಗದಲ್ಲೇ ನಿಶ್ಚಯ ಆಗಿರುತ್ತೆ ಅಂತಾರೆ. ಮದುವೆ ಜನುಮ ಜನುಮಗಳ ಅನುಬಂಧ ಅಂತಾರೆ. ಆದರೆ ಇತ್ತೀಚಿನ ದಾಂಪತ್ಯ ಜೀವನ ಸುದೀರ್ಗ ಬಂಧನವನ್ನೇ ಕಳೆದುಕೊಂಡು ಬಿಡುತ್ತವೆ. ಇಂತಹ ದಿನಗಳಲ್ಲಿ ಮದುವೆಯಲ್ಲೂ ಹೊಸ ಟ್ರೆಂಡ್ ಶುರುವಾಗಿದೆ. ಇಂದಿನ ಜನರೇಶನ್ ಮದುವೆ ವಿಚಾರದಲ್ಲಿ ಒಂದು ಹೆಜ್ಜೆ ಮುಂದಿಟ್ಟಿದೆ. ಅರ್ಥಾಥ್ ಬೆಂಗಳೂರಿನಲ್ಲಿ ವಧು-ವರರ ನಯಾ ಟ್ರೆಂಡ್ ಶುರುವಾಗಿದೆ.

    ಹೌದು, ಸಪ್ತಪದಿ ತುಳಿಯೋಕೆ ಮುನ್ನಾ ಕಾಂಟ್ರಕ್ಟ್. ಮಾಂಗಲ್ಯಧಾರಣೆಗೂ ಮುನ್ನವೇ ಆಗ್ರಿಮೆಂಟ್ (Marriage Agreement) ಅಂದರೆ ಕರಾರು ಒಪ್ಪಂದ ಶುರುವಾಗಿದೆ. ಮದುವೆಯಾಗಲು ನಿರ್ಧರಿಸುವ ವಧು-ವರರ ಈ ಲೇಟೆಸ್ಟ್ ಟ್ರೆಂಡ್ ಈಗ ವಕೀಲರನ್ನೇ ನಿದ್ದೆಗೆಡಿಸಿದೆ. ಇದನ್ನೂ ಓದಿ: ಕೋಟ್ಯಧಿಪತಿಯನ್ನ ಮದುವೆ ಆಗಿದ್ದೀರಾ ಅನ್ನೋರಿಗೆ ಅದಿತಿ ಪ್ರಭುದೇವ ಖಡಕ್ ಉತ್ತರ

    ಏನಿದು ಮ್ಯಾರೇಜ್ ಕಂಡೀಷನ್?: ಮದುವೆಗೂ ಮುನ್ನ ವಧು-ವರ ಪರಸ್ಪರ ಕರಾರು ಪತ್ರ ಆರಂಭವಾಗಿದೆ. ಭಾರತದಲ್ಲಿ ಮಾನ್ಯತೆ ಇಲ್ಲದೇ ಇದ್ರೂ ಟ್ರೆಂಡ್ ಹೆಚ್ಚಳವಾಗಿದೆ. ಪತಿ ಅಥವಾ ಪತ್ನಿ ಹೀಗೆ ಇರಬೇಕು ಎನ್ನುವುದರ ಬಗ್ಗೆ ವಿವಾಹಕ್ಕೂ ಮುನ್ನ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ. ಸಂಸಾರದಲ್ಲಿ ಸಾಮರಸ್ಯ ಕಂಡು ಬಂದರೆ ಮುಂದಿನ ನಿರ್ಧಾರ ಉಲ್ಲೇಖ ಮಾಡಲಾಗುತ್ತಿದೆ. ವಿಚ್ಛೇದನ (Divorce) ದ ಬಳಿಕ ಜೀವನಾಂಶ ಎಷ್ಟು ಕೊಡಬೇಕು ಎಂಬುದರ ಪ್ರಸ್ತಾಪಿಸಲಾಗುತ್ತಿದೆ. ಪತಿಯ ಮನೆಯವರಿಂದ ಪ್ರತ್ಯೇಕ ವಾಸದ ಬಗ್ಗೆಯೂ ಅಗ್ರಿಮೆಂಟ್, ಇಷ್ಟು ಮಾತ್ರವಲ್ಲದೇ ಮಕ್ಕಳಾಗದೇ ಇದ್ರೆ ಬೇರೆ ಮದ್ವೆಯಾಗುವುದರ ಬಗ್ಗೆಯೂ ಪ್ರಸ್ತಾಪ ಮಾಡಲಾಗುತ್ತಿದೆ.

    ಹೀಗೆ ಮದುವೆಗೂ ಮುನ್ನ ವಧು-ವರ ಕರಾರು ಒಪ್ಪಂದ ಮಾಡಿಕೊಳ್ಳೋದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಸದ್ಯ ಈ ಆಗ್ರಿಮೆಂಟ್‍ಗೆ ಯಾವುದೇ ಕಾನೂನು ಮಾನ್ಯತೆ ಇಲ್ಲ. ಆದರೆ ಕೆಲ ಡಿವೋರ್ಸ್ ಸಂದರ್ಭದಲ್ಲಿ ಇದೇ ವಿಚಾರಕ್ಕೆ ಗಲಾಟೆಯಾಗ್ತಿದೆ. ಹೀಗಾಗಿ ವಕೀಲರಿಗೆ ಈ ಆಗ್ರಿಮೆಂಟ್‍ನಿಂದ ದೊಡ್ಡ ತಲೆನೋವು ಉಂಟಾಗಿದೆ. ಹೀಗಾಗಿ ಇದಕ್ಕೆ ಮಾನ್ಯತೆ ಇರದ ಆಗ್ರಿಮೆಂಟ್ ಮಾಡಿಕೊಂಡು ಮೋಸ ಹೋಗಬೇಡಿ ಎಂದು ವಕೀಲರು (Lawyer) ಸಂದೇಶ ರವಾನಿಸುತ್ತಿದ್ದಾರೆ.

    ಐಟಿಬಿಟಿ ವಲಯದಲ್ಲಿ ಈ ಆಗ್ರಿಮೆಂಟ್‍ಗಳು ಹೆಚ್ಚಾಗುತ್ತಿದೆ. ವಿದ್ಯಾವಂತರಾವರು ಈ ರೀತಿಯ ಆಗ್ರಿಮೆಂಟ್‍ಗಳನ್ನು ಮಾಡಿಕೊಳ್ಳುವ ಮುನ್ನ ಎಚ್ಚರವಾಗಿರಬೇಕು. ಇದನ್ನೂ ಓದಿ: ರಾಖಿ ಸಾವಂತ್ ಪತಿ, ಮೈಸೂರು ಹುಡುಗ ಆದಿಲ್ ಪೊಲೀಸ್ ವಶಕ್ಕೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮನೆ ಬಾಡಿಗೆ ವೇಳೆ `ಸೆಕ್ಸ್ ಒಪ್ಪಂದ’ಕ್ಕೆ ಸಹಿ ಹಾಕಿದ ಮಹಿಳೆ- ಮುಂದೇನಾಯ್ತು..?

    ಮನೆ ಬಾಡಿಗೆ ವೇಳೆ `ಸೆಕ್ಸ್ ಒಪ್ಪಂದ’ಕ್ಕೆ ಸಹಿ ಹಾಕಿದ ಮಹಿಳೆ- ಮುಂದೇನಾಯ್ತು..?

    ವಾಷಿಂಗ್ಟನ್: ಸಾಮಾನ್ಯವಾಗಿ ಮನೆ ಬಾಡಿಗೆ ಪಡೀಬೇಕಾದ್ರೆ ಬಾಡಿಗೆದಾರರು ಕೆಲವು ಒಪ್ಪಂದಗಳಿಗೆ ಸಹಿ ಮಾಡಿಸಿಕೊಳ್ತಾರೆ. `ಕೆಲವರು ನೋ ಪಾರ್ಟಿ, ನೋ ಸ್ಮೋಕಿಂಗ್, ನೋ ಶೌಟಿಂಗ್’ ಹೀಗೆ ಏನೇನೋ ಕಾರಣಗಳನ್ನ ನೀಡಿ, ತಮಗೂ ತೊಂದರೆಯಾದಂತೆ ನೋಡಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಮಾಲೀಕ ಮನೆ ಬಾಡಿಗೆ ನೀಡಬೇಕಾದ್ರೆ `ಲೈಂಗಿಕ ಸಂಭೋಗ- ಸೆಕ್ಸ್’ ಒಪ್ಪಂದಕ್ಕೆ ಸಹಿ ಮಾಡಿಸಿಕೊಂಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

    ಅಮೆರಿಕದ ನೆವಾಡಾದ ಲಾಸ್ ವೇಗಸ್‌ನಲ್ಲಿರುವ ವ್ಯಕ್ತಿಯೊಬ್ಬ ಸ್ಥಳೀಯ ಮಹಿಳೆಗೆ ಬಾಡಿಗೆ ನೀಡಲು ಮಾಲೀಕ `ಸೆಕ್ಸ್ ಒಪ್ಪಂದಕ್ಕೆ’ ದಾಖಲೆಗಳ ಮೇಲೆ ಸಹಿ ಮಾಡಿಸಿಕೊಂಡಿದ್ದಾನೆ. ಕೆಲ ದಿನಗಳ ನಂತರ ಮನೆಯ ಮಾಲೀಕನ ವಿರುದ್ಧ ಸ್ಥಳೀಯ ಫೆಡರಲ್ ನ್ಯಾಯಾಲಯಲ್ಲಿ ವಿಚಾರಣೆ ಬಂದಾಗ ದಾಖಲೆಗಳನ್ನು ನೀಡಿದ್ದು, ವಿಚಾರ ಬಹಿರಂಗಗೊಂಡಿದೆ. ಇದನ್ನೂ ಓದಿ: ಬೆಂಗ್ಳೂರಿನಲ್ಲಿ ನಿಲ್ಲದ ವೀಲ್ಹಿಂಗ್ ಪುಂಡರ ಹಾವಳಿ – ಪೊಲೀಸರಿಗೂ ಡೋಂಟ್‌ ಕೇರ್‌

    ಸಂತ್ರಸ್ತ ಮಹಿಳೆಗೆ ಮನೆ ಬಾಡಿಗೆ ಪಡೆಯುವ ಸಂದರ್ಭದಲ್ಲಿ ತನ್ನ ಮಕ್ಕಳಿಗಾಗಿ ಮನೆ ಅವಶ್ಯವಿತ್ತು. ಇದೇ ಕಾರಣದಿಂದಾಗಿ ಮನೋ ವಿಕೃತಿ ಮೆರೆದಿರುವ ಮಾಲೀಕ ಅಲನ್ ರೋಥ್‌ಸ್ಟೈನ್ ಮನೆಯ ಬಾಡಿಗೆ ಪಡೆಯುವ ಸಲುವಾಗಿ ಲೈಂಗಿಕ ಬೇಡಿಕೆಗಳಿಗೆ ಸಹಿ ಮಾಡಿಸಿರುತ್ತಾನೆ. ನಂಬಲು ಅಸಾಧ್ಯವಾದರೂ ಒಪ್ಪಂದಕ್ಕೆ ಒಳಪಟ್ಟಿರುವುದು ದಾಖಲೆಗಳಲ್ಲಿ ಸಾಬೀತಾಗಿದೆ. ಇದು ವಂಚನೆ ಹಾಗೂ ಕಿರುಕುಳಕ್ಕೆ ಸಮನಾಗಿದೆ ಎಂದು ನ್ಯಾಯಾಲಯ ಹೇಳಿದೆ. ಇದನ್ನೂ ಓದಿ: ಯುವತಿ ಮೇಲೆ ಗೆಳತಿಯ ಸಹೋದರನಿಂದ್ಲೆ ಅತ್ಯಾಚಾರ- ಮದ್ವೆ ಕ್ಯಾನ್ಸಲ್ ಭಯದಿಂದ ಆತ್ಮಹತ್ಯೆಗೆ ಯತ್ನ

    ನ್ಯಾಯಾಲಯದ ದಾಖಲೆಗಳ ಪ್ರಕಾರ, ನವೆಂಬರ್ 2018 ರಲ್ಲಿ ಲಾಸ್ ವೇಗಸ್ ಬೌಲೆವಾರ್ಡ್ ಮತ್ತು ಸೇಂಟ್ ರೋಸ್ ಪಾರ್ಕ್ವೇಗೆ ಸಮೀಪವಿರುವ ವೆಡ್ಜ್‌ಬ್ರೂಕ್ ಸ್ಟ್ರೀಟ್‌ನಲ್ಲಿ 4 ಬೆಡ್‌ರೂಮ್ ಮನೆಯನ್ನು ಬಾಡಿಗೆಗೆ ಪಡೆಯುವ ಸಲುವಾಗಿ ಆತ ವಿಕೃತಿ ಮೆರಿದ್ದಾನೆ. ಸಂಭಾವ್ಯ ಬಾಡಿಗೆದಾರರಿಂದ ಸಹಿ ಮಾಡಿಸಿ ಬಲಿಪಶುಗಳನ್ನಾಗಿ ಮಾಡಿದ್ದಾನೆ ಎಂದು ಹೇಳಲಾಗಿದೆ.

    ಸದ್ಯ ವಿಚಾರಣೆ ನಂತರ ಬಾಡಿಗೆ ಪರವಾನಗಿಗಳನ್ನು ನಿಷೇಧಿಸಲಾಗಿದ್ದು, ಈ ಹಿಂದಿನ ಹಿಡುವಳಿದಾರನಿಂದ ಮೊಕದ್ದಮೆ ಹೂಡಲ್ಪಟ್ಟಿದೆ. ಒಂದು ವೇಳೆ ನ್ಯಾಯಾಧೀಶರು ಫೇರ್ ಹೌಸಿಂಗ್ ಆಕ್ಟ್ ಅನ್ನು ಉಲ್ಲಂಘಿಸಿದ್ದಾರೆಂದು ಪರಿಗಣಿಸಿದರೆ ಕಾನೂನು ಕ್ರಮವಾಗುತ್ತದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

    Live Tv
    [brid partner=56869869 player=32851 video=960834 autoplay=true]

  • 5 ವರ್ಷಕ್ಕೆ ಒಪ್ಪಂದ ಆಗಿದೆ, ಬೇರೆ ಸಿಎಂ ಚರ್ಚೆ ಅನಾವಶ್ಯಕ: ದಿನೇಶ್ ಗುಂಡೂರಾವ್

    5 ವರ್ಷಕ್ಕೆ ಒಪ್ಪಂದ ಆಗಿದೆ, ಬೇರೆ ಸಿಎಂ ಚರ್ಚೆ ಅನಾವಶ್ಯಕ: ದಿನೇಶ್ ಗುಂಡೂರಾವ್

    ದಾವಣಗೆರೆ: ಜೆಡಿಎಸ್ ಪಕ್ಷಕ್ಕೆ 5 ವರ್ಷಗಳ ಮುಖ್ಯಮಂತ್ರಿ ಸ್ಥಾನಕ್ಕೆ ಕಾಂಗ್ರೆಸ್ ಒಪ್ಪಂದ ಮಾಡಿಕೊಟ್ಟಿದೆ. ಹೀಗಾಗಿ ಬೇರೆ ಸಿಎಂ ಬಗ್ಗೆ ಚರ್ಚೆಮಾಡುವುದು ಅನವಶ್ಯಕವೆಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

    ನಗರದ ಬಾಪೂಜಿ ಅತಿಥಿ ಗೃಹದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಸಿದ ಅವರು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಸಮ್ಮಿಶ್ರ ಸರ್ಕಾರ ರಚನೆಯಾಗಿದೆ. ನಾವುಗಳು 5 ವರ್ಷಗಳ ಕಾಲ ಯಾವುದೇ ಬೇರೆ ಮುಖ್ಯಮಂತ್ರಿಗಳನ್ನು ಆಯ್ಕೆ ಮಾಡುವುದಿಲ್ಲವೆಂದು ಒಪ್ಪಂದ ಮಾಡಿಕೊಟ್ಟಿದ್ದೇವೆ. ಹೀಗಾಗಿ ಒಪ್ಪಂದ ಮುಗಿಯುವವರೆಗೂ ಬೇರೆ ಸಿಎಂ ಬಗ್ಗೆ ಚರ್ಚೆ ಮಾಡುವುದು ಅನಾವಶ್ಯಕವೆಂದರು.  ಇದನ್ನೂ ಓದಿ: ಒಂದು ಕಾಲ್, ಒಂದು ಡೋಸ್, ಒಂದು ಒಪ್ಪಂದ- ಚೆಕ್ ಕೊಟ್ಟು ಗೆದ್ದ ಎಚ್‍ಡಿಡಿ

    ಸಿದ್ದರಾಮಯ್ಯನವರ ಹೇಳಿಕೆಯ ಬಗ್ಗೆ ಮಾತನಾಡಿ, ಕಾರ್ಯಕರ್ತರು ಯಾವುದೇ ಊಹಾಪೋಹಳಿಗೆ ಕಿವಿಕೊಡಬಾರದು, ಸಮ್ಮಿಶ್ರ ಸರ್ಕಾರ ಐದು ವರ್ಷಗಳ ಕಾಲ ಸುಭದ್ರವಾಗಿರುತ್ತದೆ. ಸಮ್ಮಿಶ್ರ ಸರ್ಕಾರ ಉರುಳಿಸುವ ವಿಚಾರ ಕೇವಲ ವಂದತಿಯಾಗಿದೆ. ಮೈಸೂರು ಮಹಾನಗರ ಪಾಲಿಕೆ ಚುನಾವಣೆ ನಡೆಯುತ್ತಿದ್ದು, ನಮ್ಮ ಸರ್ಕಾರದ ಅವಧಿಯಲ್ಲಿ ಆಗಿರುವ ಕೆಲಸಗಳ ಬಗ್ಗೆ ನಾವು ಹೇಳಿಕೊಳ್ಳುತ್ತೇವೆ. ಜೆಡಿಎಸ್‍ಗೆ ಕಳೆದ ಐದು ವರ್ಷಗಳ ಅಭಿವೃದ್ಧಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಹೀಗಾಗಿ ಅವರು ತಮ್ಮ ಅವಧಿಯಲ್ಲಿ ಆದ ಕೆಲಸಗಳ ಬಗ್ಗೆ ಹೇಳಿಕೊಳ್ಳುತ್ತಿದ್ದಾರೆ ಅಷ್ಟೇ ಎಂದು ತಿಳಿಸಿದರು. ಇದನ್ನೂ ಓದಿ : ಎಚ್‍ಡಿಡಿ ಮುಂದೆ 18 ಪುಟಗಳ ಒಪ್ಪಂದಕ್ಕೆ ಸಹಿ- ಮೈತ್ರಿ ಸುಗಮಕ್ಕೆ 6 ಸೂತ್ರ

    ಮಾಜಿ ಸಚಿವ ಎ.ಮಂಜು ಹಾಗೂ ರೇವಣ್ಣ ನಡುವಿನ ವಾಕ್ಸಮರಕ್ಕೆ ಬಗ್ಗೆ ಮಾತನಾಡಿದ ಅವರು, ಹಾಸನ ಹಾಗೂ ಮಂಡ್ಯದ ರಾಜಕೀಯವೇ ಬೇರೆ. ಅದನ್ನು ರಾಜ್ಯ ರಾಜಕೀಯಕ್ಕೆ ಹೋಲಿಕೆ ಮಾಡುವಂತಿಲ್ಲ. ರೇವಣ್ಣ ಪವರ್ ಮಿನಿಸ್ಟರ್ ಹಾಗೂ ನಮ್ಮ ಸರ್ಕಾರದ ಸಚಿವರು. ಅವರ ಬಗ್ಗೆ ನಾವು ಏನು ಹೇಳಲು ಬಯಸುವುದಿಲ್ಲವೆಂದು, ಪರೋಕ್ಷವಾಗಿ ರೇವಣ್ಣ ಪವರ್ ಮಿನಿಸ್ಟರ್ ಎಂದು ಒಪ್ಪಿಕೊಂಡರು. ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ಧ ದೂರು ನೀಡಿ ಕಾಂಗ್ರೆಸ್ಸಿಗೆ 3 ಷರತ್ತು ವಿಧಿಸಿದ ದೇವೇಗೌಡರು!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv