ತುಮಕೂರು : ನಟ ಡಾಲಿ ಧನಂಜಯ (Dolly Dhananjay) ನಟನೆಯ ಹೆಡ್ ಬುಷ್ (Head Bush) ಚಿತ್ರದಲ್ಲಿನ ವಿವಾದಿತ ದೃಶ್ಯಕ್ಕೆ ಕತ್ತರಿ ಹಾಕುವಂತೆ ಆಗ್ರಹಿಸಿ ಪಂಚವಾದ್ಯದ ವಿನೂತನ ಪ್ರತಿಭಟನೆ (Protest) ತುಮಕೂರಿನಲ್ಲಿ ನಡೆಸಲಾಯಿತು. ತುಮಕೂರು ನಗರದ ಮಾರುತಿ ಚಿತ್ರ ಮಂದಿರ ಹಾಗೂ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿದ್ದಲ್ಲದೆ ನಿರ್ದೇಶಕ, ಕತೆ, ಸಂಭಾಷಣೆಗಾರ ಅಗ್ನಿ ಶ್ರೀಧರ್ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಕರ್ನಾಟಕ ರಾಜ್ಯ ಕಲಾವಿದರ ಒಕ್ಕೂಟದ ವತಿಯಿಂದ ನಡೆಸಲಾದ ಪ್ರತಿಭಟನೆಯ ನೇತೃತ್ವವನ್ನು ಶ್ರೀ ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ವಹಿಸಿದ್ದರು. ಸರಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಪಂಚವಾದ್ಯವನ್ನು ನುಡಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರದ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿಯ ಗಮನ ಸೆಳೆಯಲಾಯಿತು. ಇದನ್ನೂ ಓದಿ:ಹಿಂದಿಯಲ್ಲಿ 50 ಕೋಟಿ ಗಳಿಸಿದ ‘ಕಾಂತಾರ’ ಸಿನಿಮಾ
ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಧರ್ಮವನ್ನು ಬಿತ್ತರಿಸುವಂತಹ ಕಲೆಗೆ ಬಹಳಷ್ಟು ನೋವುಂಟು ಮಾಡಿದೆ. ಚಲನಚಿತ್ರದಲ್ಲಿನ ವಿವಾದಿತ ದೃಶ್ಯವನ್ನು ಕಟ್ ಮಾಡಿ ಜನರಿಗೆ ಒಳ್ಳೆಯ ಸಂದೇಶ ಸಾರುವಂತಾಗಬೇಕು ಎಂದು ಮನವಿ ಮಾಡಿದರು. ಭಾರತೀಯ ಸಂಸ್ಕೃತಿಯ ಕಲೆಗಳನ್ನು ಉಳಿಸುವಂತಹ ಬಹಳಷ್ಟು ಕಲೆಗಳಿವೆ. ಅಂತಹ ಕಲೆಗಳನ್ನು ಹೆಡ್‌ಬುಷ್ ಮಾತ್ರವಲ್ಲ ಯಾವುದೇ ಚಲನಚಿತ್ರಗಳು ನಮ್ಮ ಸಂಸ್ಕೃತಿಗಳನ್ನು ತುಳಿಯುವಂತಹ, ಅವಮಾನ ಮಾಡುವಂತಹ ಕೆಲಸ ಮಾಡಬಾರದು ಎಂದರು.
ನಮ್ಮ ಸಂಸ್ಕೃತಿನ ನಾವೇ ಉಳಿಸಲಿಲ್ಲ ಅಂದರೆ ಇನ್ಯಾರು ಉಳಿಸಿಯಾರು. ಮುಂದಿನ ದಿನಗಳಲ್ಲಿ ಆ ರೀತಿ ಆಗದಂತೆ ಕಾಪಾಡಬೇಕು ಎಂದು ಸ್ವಾಮೀಜಿ ಎಲ್ಲರಲ್ಲಿ ಪ್ರಾರ್ಥನೆ ಮಾಡಿದರು.
Live Tv
[brid partner=56869869 player=32851 video=960834 autoplay=true]
ಕೋಟಿ ಕೋಟಿ ಬಂಡವಾಳ ಸುರಿದು ‘ಹೆಡ್ ಬುಷ್’ ಸಿನಿಮಾ ಮಾಡಿದ್ದಾರೆ ಡಾಲಿ ಧನಂಜಯ್. ಅವರೇ ಮುಖ್ಯ ಪಾತ್ರದಲ್ಲಿ ನಟಿಸಿ, ಹೆಸರಾಂತ ತಾರಾ ಬಳಗವನ್ನೇ ಹಾಕಿಕೊಂಡು ಹೊಸ ರೀತಿಯ ಚಿತ್ರ ಮಾಡಲಾಗಿದೆ. ಆದರೆ, ಏಕಾಏಕಿ ಸಿನಿಮಾದ ಕುರಿತು ಅಪಸ್ವರ ಎದ್ದಿದ್ದು, ಸಿನಿಮಾದ ಶೂಟಿಂಗ್ ಮುಗಿದ ಹೊತ್ತಿನಲ್ಲಿ ಈ ವಿವಾದ ಶುರುವಾಗಿದ್ದರಿಂದ ಧನಂಜಯ್ ಅವರಿಗೆ ಇದೊಂದು ರೀತಿಯಲ್ಲಿ ಅಗ್ನಿ ಪರೀಕ್ಷೆಯೇ ಆಗಿದೆ. ಇದನ್ನೂ ಓದಿ : ಪ್ರಶಾಂತ್ ನೀಲ್ -ಜ್ಯೂ.ಎನ್‌ಟಿಆರ್ ವಿವಾಹ ವಾರ್ಷಿಕೋತ್ಸವ ಸಂಭ್ರಮ ಹೇಗಿತ್ತು ಗೊತ್ತಾ?
ಸಿನಿಮಾ ತಂಡವೇ ಘೋಷಿಸಿಕೊಂಡಂತೆ ಅಗ್ನಿ ಶ್ರೀಧರ್ ಅವರ ಪುಸ್ತಕವನ್ನು ಆಧರಿಸಿದ ಚಿತ್ರವಿದು. ಈ ಸಿನಿಮಾದಲ್ಲಿ ಧನಂಜಯ್ ಬೆಂಗಳೂರು ಭೂಗತ ಜಗತ್ತಿನ ಡಾನ್ ಎಂದೇ ಖ್ಯಾತರಾಗಿದ್ದ ಜಯರಾಜ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ವಿಷಯವನ್ನು ಸಿನಿಮಾ ತಂಡವೇ ಈ ಹಿಂದೆ ಹೇಳಿಕೊಂಡಿದೆ. ಹಾಗಾಗಿ ಜಯರಾಜ್ ಪುತ್ರ ಅಜಿತ್ ಈ ಸಿನಿಮಾದ ಬಗ್ಗೆ ಅಪಸ್ವರ ತಗೆದಿದ್ದಾರೆ. ಇದನ್ನೂ ಓದಿ : ಯಶ್ ಮುಂದಿನ ಚಿತ್ರ ಯಾರ ಜೊತೆ? ಹೊರಬಿತ್ತು ಬಿಗ್ ನ್ಯೂಸ್
ನನ್ನ ತಂದೆಯ ಕುರಿತು ಸಿನಿಮಾ ಮಾಡುತ್ತಿದ್ದಾರೆ ಎಂದು ಗೊತ್ತಾದಾಗ ಸಿನಿಮಾ ತಂಡವನ್ನು ಸಂಪರ್ಕಿಸಿದೆ. ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಗಲಿಲ್ಲ. ನನ್ನ ತಂದೆಯ ಕುರಿತಾಗಿ ಯಾರೂ ಸಿನಿಮಾ ಮಾಡಬಾರದು. ಮಾಡಿರುವ ಸಿನಿಮಾವನ್ನು ರಿಲೀಸ್ ಮಾಡಕೂಡದು ಎಂದು ಅಜಿತ್ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರವೊಂದನ್ನು ನೀಡಿದ್ದಾರೆ. ಅಲ್ಲದೇ, ಈ ಕುರಿತಾಗಿ ಕಾನೂನು ಹೋರಾಟವನ್ನೂ ಮಾಡುವುದಾಗಿ ಎಚ್ಚರಿಸಿದ್ದಾರೆ. ಇದನ್ನೂ ಓದಿ : ಹಾಲಿವುಡ್‌ಗೆ ಹಾರಲಿದ್ದಾರೆ ಬಾಲಿವುಡ್ ರಾಧೆ ಆಲಿಯಾ ಭಟ್
ಅಸಲಿ ವಿಷಯ ಹೇಳುವುದಾದರೆ, ಧನಂಜಯ್ ಮತ್ತು ಅಜಿತ್ ಇಬ್ಬರೂ ಆತ್ಮೀಯರು. ಒಟ್ಟೊಟ್ಟಿಗೆ ಅನೇಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ. ಧನಂಜಯ್ ಅವರು ಸ್ವತಃ ಅಜಿತ್ ಮದುವೆಗೂ ಹೋಗಿದ್ದರು. ಹೆಡ್ ಬುಷ್ ಸಿನಿಮಾ ಆಗುವ ಸಂದರ್ಭದಲ್ಲಿ ಅಜಿತ್ ಚಿತ್ರಕ್ಕೆ ಶುಭ ಹಾರೈಸಿದ್ದರು. ಇದೀಗ ಏಕಾಏಕಿ ಉಲ್ಟಾ ಹೊಡೆದಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಧನಂಜಯ್, ‘ಕೋಟಿ ಕೋಟಿ ಸುರಿದು ಸಿನಿಮಾ ಮಾಡಿದ್ದೇವೆ. ರಿಲೀಸ್ ಹೊತ್ತಿನಲ್ಲಿ ತೊಂದರೆ ಮಾಡುವುದು ಸರಿಯಲ್ಲ. ಅವರ ತಂದೆಯವರನ್ನು ನಾನು ಕೆಟ್ಟದಾಗಿ ಬಿಂಬಿಸಿಲ್ಲ. ಸಿನಿಮಾ ನೋಡಿದ ನಂತರ ಅವರು ಮಾತನಾಡಿದರೆ ಅದಕ್ಕೊಂದು ಅರ್ಥವಿರುತ್ತದೆ. ಅಗ್ನಿ ಶ್ರೀಧರ್ ಅವರು ಬರೆದ ಪುಸ್ತಕದ ಹಕ್ಕನ್ನು ಪಡೆದು ಸಿನಿಮಾ ಮಾಡಲಾಗಿದೆ’ ಎನ್ನುತ್ತಾರೆ. ಹೆಡ್ ಬುಷ್ ಸಿನಿಮಾ ಮಾಡುವಾಗಲೇ ಕಥೆ, ಪಾತ್ರದ ಬಗ್ಗೆ ಸಿನಿಮಾ ತಂಡ ಹೇಳಿಕೊಂಡಿದೆ. ಪಾತ್ರಗಳ ಪರಿಚಯದ ಪೋಸ್ಟರ್ ರಿಲೀಸ್ ಮಾಡುವಾಗಲೇ ಪಾತ್ರದ ಬಗ್ಗೆ ಪರಿಚಯಿಸಿದೆ. ಇದೀಗ ಸಿನಿಮಾ ಮುಗಿದ ಮೇಲೆ ಏಕಾಏಕಿ ಸಿನಿಮಾ ನಿಲ್ಲಿಸಬೇಕು ಎನ್ನುವುದು ಎಷ್ಟು ಸರಿ ಎನ್ನುತ್ತಿದೆ ಹೆಡ್ ಬುಷ್ ತಂಡ.
ಬೆಂಗಳೂರು:`ಹಲವು ಕಾರಣಗಳಿಂದಾಗಿ 1981 ರಿಂದ 1998ರ ಅವಧಿಯವರೆಗೂ ನಾನು ಭೂಗತ ಜಗತ್ತಿನಲ್ಲಿ ಇದ್ದೆ. 1986ರಲ್ಲಿ ನಡೆದ ಕುಖ್ಯಾತ ಭೂಗತ ಪಾತಕಿ ಕೊತ್ವಾಲ್ ರಾಮಚಂದ್ರ ಕೊಲೆ ಪ್ರಕರಣದಲ್ಲಿ ನಾನು ಭಾಗಿಯಾಗಿದ್ದೆ. ತುಂಡರಿಸದ ಸರಪಣಿ ರೀತಿ ಹತ್ತು ಹಲವು ಘಟನಾವಳಿಗಳ ನಡೆದು ಹೋದ ಕಾರಣ ನಾನು 13 ವರ್ಷ ಭೂಗತ ಪ್ರಪಂಚದಲ್ಲಿ ಇದ್ದೆ’ ಎಂದು ಅಗ್ನಿ ಶ್ರೀಧರ್ ಡಿಜಿಪಿ ಆರ್‍ಕೆ ದತ್ತಾಗೆ ಸಲ್ಲಿಸಿರುವ ಮನವಿಯೇ ಈಗ ಆತನಿಗೆ ಉರುಳಾಗುವ ಸಾಧ್ಯತೆಯಿದೆ.
ಹೌದು.ಭೂಗತ ಜಗತ್ತಿನ ದಿನಗಳ ಬಗ್ಗೆ ವಿವರಣೆ ಇರುವ ಮನವಿ ಪತ್ರವನ್ನು ಡಿಜಿಪಿಗೆ ಅಗ್ನಿ ಶ್ರೀಧರ್ ಕೊಟ್ಟಿದ್ದ. ಕೊತ್ವಾಲ್ ಮರ್ಡರ್ ಕೇಸ್‍ನಲ್ಲಿ ನಾನು ಭಾಗಿಯಾಗಿದ್ದೇನೆ ಎನ್ನುವ ಅಂಶವನ್ನು ಅಗ್ನಿ ಶ್ರೀಧರ್ ಈ ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದ. ಈ ಅಂಶವನ್ನು ಉಲ್ಲೇಖಿಸಿದ ಹಿನ್ನೆಲೆಯಲ್ಲಿ ಮತ್ತೆ ಈ ಕೊಲೆ ಕೇಸಿಗೆ ಮರು ಜೀವ ನೀಡಲು ಬೆಂಗಳೂರು ಪೊಲೀಸರು ಸಿದ್ದತೆ ಮಾಡಿಕೊಂಡಿದ್ದಾರೆ.ಇವತ್ತು ಮಾಧ್ಯಮಗಳ ಜೊತೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್, ಅಗ್ನಿಶ್ರೀಧರ್ ಮನವಿ ಪತ್ರವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಅಂಥ ಹೇಳಿದ್ದಾರೆ.
ನಗರ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ದರ್ಪ ತೋರಿಸಿ ನನ್ನ ಮೇಲೆ ಸುಳ್ಳು ಆರೋಪ ದಾಖಲಿಸಿದ್ದಾರೆ. ಆದರೆ ನಾನು ಈಗ ಭೂಗತ ಜಗತ್ತಿನಿಂದ ಹೊರ ಬಂದಿದ್ದೇನೆ. ಈ ಪ್ರಕರಣದಲ್ಲಿ ನಾನು ವಿಲನ್ ಅಲ್ಲ. ನಿಂಬಾಳ್ಕರ್ ನನಗೆ ಕಿರುಕುಳ ನೀಡುತ್ತಿದ್ದಾರೆ. ಹೀಗಾಗಿ ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಬೇಕೆಂದು ಅಗ್ನಿ ಶ್ರೀಧರ್ ಮನವಿ ಮಾಡಿದ್ದ.
ಏನಿದು ಕೊತ್ವಾಲ್ ಮರ್ಡರ್ ಕೇಸ್?
80ರ ದಶಕದಲ್ಲಿ ಕೊತ್ವಾಲ್ ರಾಮಚಂದ್ರಪ್ಪ ಬೆಂಗಳೂರಿನ ಅಂಡರ್ ವಲ್ರ್ಡ್ ಡಾನ್ ಆಗಿದ್ದ. 1986ರ ಮಾರ್ಚ್ 22 ರಂದು ಕುಣಿಗಲ್ ಸಮೀಪ ತೋಟದ ಮನೆಯೊಂದಕ್ಕೆ ಕರೆದುಕೊಂಡು ಹೋಗಿ ಹತ್ಯೆ ಮಾಡಿದ್ದರು. ಈ ಕೊಲೆ ಪ್ರಕರಣದಲ್ಲಿ ಜೈರಾಜ್, ಸೀತಾರಾಮ್ ಶೆಟ್ಟಿ, ಶ್ರೀಧರ್‍ಮೂರ್ತಿ ಅಲಿಯಾಸ್ ಅಗ್ನಿಶ್ರೀಧರ್ ಸೇರಿದಂತೆ ಅನೇಕರನ್ನು ಆರೋಪಿಗಳನ್ನಾಗಿ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಕೋರ್ಟ್‍ನಲ್ಲಿ ಖುಲಾಸೆ :
ಈ ಪ್ರಕರಣದಲ್ಲಿ ಸಾಕ್ಷ್ಯ ಹೇಳಲು ಬಂದಿದ್ದವರು ಹೆದರಿಕೊಂಡು ಹೋಗಿದ್ದರಂತೆ. ಸಾಕ್ಷ್ಯಗಳ ಕೊರತೆಯಿಂದಾಗಿ ಕೊತ್ವಾಲ್ ಕೊಲೆ ಪ್ರಕರಣದಲ್ಲಿದ್ದ ಎಲ್ಲ ಆರೋಪಿಗಳನ್ನು ಕೋರ್ಟ್ ಖುಲಾಸೆಗೊಳಿಸಿತ್ತು. ಈಗ ಅಗ್ನಿ ಶ್ರೀಧರ್ ಕೊತ್ವಾಲ್ ಕೊಲೆ ಕೇಸ್‍ನಲ್ಲಿ ನಾನು ಭಾಗಿಯಾಗಿದ್ದೇನೆ ಎಂದು ಸಹಿ ಹಾಕಿರುವ ಪತ್ರವನ್ನು ಡಿಜಿಗೆ ನೀಡಿದ್ದು ಈ ಪ್ರಕರಣಕ್ಕೆ ಹೊಸ ತಿರುವು ಪಡೆದುಕೊಂಡಿದೆ.
ದಾಳಿಯಾಗಿದ್ದು ಯಾಕೆ?
ಕಡಬಗೆರೆ ಶ್ರೀನಿವಾಸ್ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಿಮಿನಲ್ಸ್‍ಗೆ ಆಶ್ರಯ ನೀಡಿದ್ದ ಮಾಹಿತಿ ಮೇರೆಗೆ ಇತ್ತೀಚೆಗೆ ಪೊಲೀಸರು ಅಗ್ನಿ ಶ್ರೀಧರ್ ಮನೆ ಮೇಲೆ ದಾಳಿ ನಡೆಸಿದ್ದರು. ಈ ಸಂದರ್ಭ ಮನೆಯಲ್ಲಿ ಅಕ್ರಮ ಶಸ್ತ್ರಾಸ್ತ್ರ, ವಿದೇಶಿ ಮದ್ಯ ದೊರಕಿತ್ತು. ದಾಳಿ ನಡೆದಾಗ ಅತಿಯಾದ ರಕ್ತದೊತ್ತಡದಿಂದ ಕುಸಿದು ಬಿದ್ದಿದ್ದರಿಂದ ಅಗ್ನಿ ಶ್ರೀಧರ್ ಕುಮಾರಸ್ವಾಮಿ ಲೇಔಟ್‍ನಲ್ಲಿರುವ ಸಾಗರ್ ಆಸ್ಪತ್ರೆಗೆ ದಾಖಲಾಗಿದ್ದ. ಬಳಿಕ ಶ್ರೀಧರ್ ಆಪ್ತ, ಬಲಗೈ ಬಂಟ ಬಚ್ಚನ್ ಸೇರಿದಂತೆ 7 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.
ಸಾಗರ್ ಆಸ್ಪತ್ರೆಯ ಸ್ಪೆಶಲ್ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶ್ರೀಧರ್, ಬಂಧನದ ಭೀತಿ ಹಿನ್ನೆಲೆಯಲ್ಲಿ ವಕೀಲರ ಮೂಲಕ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಸೆಷನ್ಸ್ ಕೋರ್ಟ್ ಜಾಮೀನು ಮಂಜೂರು ಮಾಡಿ ಆದೇಶ ನೀಡಿತ್ತು.
ಬೆಂಗಳೂರು: ಮಾಜಿ ರೌಡಿಶೀಟರ್ ಅಗ್ನಿ ಶ್ರೀಧರ್‍ಗೆ ಜಾಮೀನು ಸಿಕ್ಕಿದೆ. 53 ನೇ ಸೆಷನ್ಸ್ ನ್ಯಾಯಾಲಯ 15 ದಿನಗಳ ಕಾಲ ಮಧ್ಯಂತರ ಜಾಮೀನನ್ನು ಮಂಜೂರು ಮಾಡಿದೆ.
ಅಗ್ನಿ ಶ್ರೀಧರ್ ಪರವಾಗಿ ಹಿರಿಯ ವಕೀಲ ಸಿ.ಹೆಚ್.ಹನುಮಂತರಾಯಪ್ಪ, ನಿರೀಕ್ಷಣಾ ಜಾಮೀನು ಇತ್ಯರ್ಥವಾಗೋವರೆಗೋ ಮಧ್ಯಂತರ ಜಾಮೀನಿಗಾಗಿಯೂ ಮನವಿ ಮಾಡಿದ್ರು. ಈ ಮನವಿಯನ್ನು ಪುರಸ್ಕರಿಸಿದ 53ನೇ ಸೆಷನ್ಸ್ ನ್ಯಾಯಾಲಯ 15 ದಿನಗಳ ಕಾಲ ಮದ್ಯಂತರ ಜಾಮೀನನ್ನು ಮಂಜೂರು ಮಾಡಿದೆ.
ಕಾಂಗ್ರೆಸ್ ಮುಖಂಡ ಕಡಬಗೆರೆ ಶ್ರೀನಿವಾಸ್ ಮೇಲಿನ ಮೇಲೆ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಸರು ಕೇಳಿ ಬಂದ ಹಿನ್ನಲೆಯಲ್ಲಿ ಪೊಲೀಸರು ಶ್ರೀಧರ್ ನಿವಾಸದ ಮೇಲೆ ದಾಳಿ ನಡೆಸಿ ಅಕ್ರಮ ಶಸ್ತ್ರಾಸ್ತ್ರಗಳನ್ನು ವಶ ಪಡೆಸಿಕೊಂಡಿದ್ದರು. ಶ್ರೀಧರ್ ಸಹಚರರಾದ ಬಚ್ಚನ್ ಸೇರಿದಂತೆ ಇತರರನ್ನು ಬಂಧಿಸಿ ಎಫ್‍ಐಆರ್ ದಾಖಲಿಸಿದ್ದರು.
ಲಘು ಹೃದಯಾಘಾತವಾಗಿ ಕುಮಾರಸ್ವಾಮಿ ಲೇಔಟ್‍ನಲ್ಲಿರುವ ಸಾಗರ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಹೆಚ್ಚಿನ ತನಿಖೆಗಾಗಿ ಬಂಧನವಾಗುವ ಸಾಧ್ಯತೆಗಳು ಇದ್ದ ಕಾರಣ ನಿರೀಕ್ಷಣಾ ಜಾಮೀನಿಗಾಗಿ ಅಗ್ನಿ ಶ್ರೀಧರ್ ಕೋರ್ಟ್ ಮೋರೆ ಹೋಗಿದ್ದರು.
ಬೆಂಗಳೂರು: ಅಗ್ನಿ ಶ್ರೀಧರ್ ಮನೆಯ ಮೇಲೆ ದಾಳಿ ನಡೆಸದಂತೆ ಸರ್ಕಾರದ ಪ್ರಭಾವಿ ಸಚಿವರೊಬ್ಬರು ಪೊಲೀಸರ ಮೇಲೆ ಒತ್ತಡ ಹೇರಿದ್ದರು ಎನ್ನುವ ಎಕ್ಸ್ ಕ್ಲೂಸಿವ್ ಮಾಹಿತಿ ಪಬ್ಲಿಕ್ ಟಿವಿಗೆ ಸಿಕ್ಕಿದೆ.
ಹೌದು. ಮಂಗಳವಾರ ಪೊಲೀಸರು ಮನೆ ಮೇಲೆ ದಾಳಿ ನಡೆಸುತ್ತಾರೆ ಎನ್ನುವ ವಿಚಾರ ಗೊತ್ತಾಗಿ ಸಿದ್ದು ಸರ್ಕಾರದ ಪ್ರಭಾವಿ ಸಚಿವರು ದಾಳಿ ನಡೆಸದಂತೆ ಮತ್ತು ಪ್ರಕರಣದಿಂದ ಅಗ್ನಿ ಶ್ರೀಧರ್ ಹೆಸರನ್ನು ಕೈ ಬಿಡುವಂತೆ ಒತ್ತಡ ಹೇರಿದ್ದರು ಎನ್ನುವ ವಿಚಾರ ಪೊಲೀಸ್ ಮೂಲಗಳಿಂದ ಸಿಕ್ಕಿದೆ.
ಅಗ್ನಿ ಶ್ರೀಧರ್ ಮನೆಯಲ್ಲಿ ಶೋಧ ನಡೆಸಬೇಡಿ ಎಂದು ಬೆಳಗ್ಗೆಯಿಂದ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮಂತ್ರಿಯೊಬ್ಬರು ಪದೇ ಪದೇ ಕರೆ ಮಾಡುತ್ತಿದ್ದರು. ಆದರೆ ಈ ಕರೆಯ ಒತ್ತಡಕ್ಕೆ ಮಣಿಯದ ಅಧಿಕಾರಿ 5 ಗಂಟೆಗೆ ಮಾತನಾಡುತ್ತೇನೆ ಎಂದು ಪ್ರತಿಕ್ರಿಯಿಸಿದ್ದರು.
ಶೋಧ ಕಾರ್ಯ ನಡೆಸಿ ಎಫ್‍ಐಆರ್ ಹಾಕಿದ ಮೇಲೆ ಪೊಲೀಸ್ ಅಧಿಕಾರಿ ಸಚಿವರಿಗೆ ಕರೆ ಮಾಡಿದ್ದರು. ಈ ವೇಳೆ ಅಧಿಕಾರಿಯ ಉತ್ತರವನ್ನು ಕೇಳಿಸಿಕೊಂಡು ಗರಂ ಆದ ಸಚಿವರು, “ಆಯ್ತು ಏನೋ ಮಾಡಿ ಅಂಥ ಹೇಳಿ” ಫೋನ್ ಕಟ್ ಮಾಡಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.
ಬೆಂಗಳೂರು: ರೌಡಿಗಳ ಸಭೆ ಕೇಳಿದ್ರಾ? ಇಲ್ಲದ್ರೆ ಕೇಳಿ. ರೌಡಿಗಳ ಮೇಲೆ ಪೊಲೀಸ್ ದಾಳಿ ನಡೆಸಿದ್ದಕ್ಕೆ ಈಗ ಬೆಂಗಳೂರಿನ ರೌಡಿಗಳು ಪೊಲೀಸರ ವಿರುದ್ಧ ತಿರುಗಿ ಬಿದ್ದಿದ್ದು ಭಯಂಕರ ಅಪರಾಧಗಳನ್ನು ನಡೆಸಲು ಮುಂದಾಗಿದ್ದಾರೆ.
ಹೌದು. ಸೈಲೆಂಟ್ ಸುನಿಲ್, ಒಂಟೆ ರೋಹಿತನ ಬಂಧನ ಹಿನ್ನೆಲೆಯಲ್ಲಿ ಪೊಲೀಸರ ಮೇಲೆ ದಾಳಿ ನಡೆಸಲು ನಗರದ ಅಪಾರ್ಟ್ ಮೆಂಟ್‍ನಲ್ಲಿ ರೌಡಿಗಳು ಸಭೆ ನಡೆಸಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಸಿಕ್ಕಿದೆ.
ನಿರ್ದಾಕ್ಷಿಣ್ಯವಾಗಿ ರೌಡಿಗಳನ್ನು ಬಂಧನ ಮಾಡುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರ ಮೇಲೆ ದಾಳಿ ನಡೆಸಲಲು ರೌಡಿಗಳು ಪ್ಲಾನ್ ಮಾಡಿದ್ದಾರೆ. ಭಯಂಕರವಾಗಿ ಅಪರಾಧ ನಡೆಸಿ ಪೊಲೀಸರಿಗೆ ರೌಡಿ ಚಟುವಟಿಕೆ ಬಿಸಿ ಮುಟ್ಟಿಸೋಕೆ ಸಭೆ ನಡೆಸಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.
ಬುಧವಾರ ಸುದ್ದಿಗೋಷ್ಠಿ ನಡೆಸಿದ್ದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಬಾಳ್ಕರ್, ಇಲ್ಲಿಯವರೆಗೆ ರೌಡಿ ಚಟುವಟಿಕೆಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೆವು. ಇನ್ನು ಮುಂದೆ ರೌಡಿಗಳ ಅಕ್ರಮ ಆಸ್ತಿಗಳನ್ನು ಕಲೆ ಹಾಕಲಾಗುವುದು ಎಂದು ಹೇಳಿದ್ದರು.
ಸಾರ್ವಜನಿಕರ ಹಿತಾಸಕ್ತಿ ಕಾಪಾಡುವುದು ನಮ್ಮ ಹೊಣೆ. ಕಾನೂನು ಸುವ್ಯವಸ್ಥೆ ವಿರುದ್ಧವಾಗಿದ್ದವರನ್ನು ಸುಮ್ಮನೇ ಬಿಡುವುದಿಲ್ಲ. ಸಾರ್ವಜನಿಕರು ಧೈರ್ಯವಾಗಿ ಮುಂದೆ ಬಂದು ದೂರು ನೀಡಿ. ಸ್ಥಳೀಯ ಠಾಣೆಗಳಿಗೆ ದೂರು ನೀಡಿ, ಇಲ್ಲವಾದಲ್ಲಿ ನಮ್ಮ ಬಳಿ ಬನ್ನಿ ಎಂದು ಅವರು ತಿಳಿಸಿದ್ದರು.
ಬೆಂಗಳೂರಿನಲ್ಲಿ ಅಂಡರ್ ವಲ್ರ್ಡ್ ಮಾಫಿಯಾ, ರಿಯಲ್ ಎಸ್ಟೇಟ್, ಪುಡಿ ರೌಡಿಗಳ ಉಪಟಳ ಹೆಚ್ಚಾಗಿದೆ. ಗುಂಪಿನಲ್ಲಿದ್ದರೆ ಮಾತ್ರ ಅವರು ರೌಡಿಗಳು, ಒಬ್ಬರೆ ಇದ್ದರೆ ಇವರು ಪುಕ್ಕಲರು. ಭೂಮಾಫಿಯಾ, ಗಾರ್ಬೆಜ್ ಮಾಫಿಯಾ, ಸಂಬಂಧ ವಿಲ್ಲದ ವಿಚಾರಗಳಿಗೆ ತಲೆಹಾಕುವವರ ವಿರುದ್ಧ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಮಂತ್ ನಿಂಬಾಳ್ಕರ್ ಎಚ್ಚರಿಕೆ ನೀಡಿದ್ದರು.
ಬೆಂಗಳೂರು: ಮಂಗಳವಾರ ಪೊಲೀಸರ ಹಠಾತ್ ದಾಳಿಯಿಂದ ಮಧ್ಯಾಹ್ನ ಲಘು ಹೃದಯಾಘಾತವಾಗಿ ಕುಸಿದುಬಿದ್ದು ಕುಮಾರಸ್ವಾಮಿ ಲೇಔಟ್‍ನಲ್ಲಿರುವ ಸಾಗರ್ ಆಸಸ್ಪತ್ರೆಗೆ ದಾಖಲಾಗಿದ್ದ ಅಗ್ನಿ ಶ್ರೀಧರ್‍ಗೆ ಚಿಕಿತ್ಸೆ ಮುಂದುವರಿಯುತ್ತಿದೆ.
ಎದೆನೋವು ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ಐಸಿಯುನಲ್ಲಿರು ಆರೋಪಿ ಅಗ್ನಿ ಶ್ರೀಧರ್‍ಗೆ ಹೃದ್ರೋಗ ತಜ್ಞ ಡಾ. ಕಿಶೋರ್ ನೇತೃತ್ವದ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ. ಇಂದು ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ಬಳಿಕ ಅಗ್ನಿ ಶ್ರೀಧರ್ ಬಂಧನವಾಗುವ ಸಾಧ್ಯತೆಯಿದೆ.
ರಾತ್ರಿಯಿಡಿ ಆಸ್ಪತ್ರೆ ಬಳಿ ಒಂದು ಕೆಎಸ್ ಆರ್ ಪಿ ತುಕಡಿ ಹಾಗೂ ಕುಮಾರಸ್ವಾಮಿ ಲೇಔಟ್ ಪೆÇಲೀಸರಿಂದ ಭದ್ರತೆಗೆ ನಿಯೋಜನೆಗೊಂಡಿದ್ದು, ವಾರ್ಡ್ ಬಳಿ ಎಂಟು ಜನ ಪೆÇಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಚಂಪಾ ಭೇಟಿ: ಹಿರಿಯ ಸಾಹಿತಿ ಚಂದ್ರಶೇಖರ್ ಪಾಟೀಲ ಅವರು ಸಾಗರ್ ಆಸ್ಪತ್ರೆಗೆ ಭೇಟಿ ನೀಡಿ ಅಗ್ನಿ ಶ್ರೀಧರ್ ಆರೋಗ್ಯ ವಿಚಾರಿಸಿದರು.
ಠಾಣೆಗೆ ಬಂದ ಹೊಟ್ಟೆ ಕೃಷ್ಣ: ಲೋಕಾಯುಕ್ತ ಡೀಲ್ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದ ಹೊಟ್ಟೆ ಕೃಷ್ಣ ಆರೋಪಿ ಬಚ್ಚನ್ ನೋಡಲು ಕುಮಾರಸ್ವಾಮಿ ಲೇಔಟ್ ಠಾಣೆಗೆ ಆಗಮಿಸಿದ್ದ. ಬಚ್ಚನ್ ಅಕ್ಕನ ಮಗನಾಗಿರುವ ಬಿಬಿಎಂಪಿಯ ಬನಶಂಕರಿ ದೇಗುಲ ವಾರ್ಡ್ ಸದಸ್ಯ ಅನ್ಸರ್ ಪಾಷಾ ಕೂಡ ಬಚ್ಚನ್ ಯೋಗಕ್ಷೇಮ ವಿಚಾರಿಸಿದ್ರು..
ಪೊಲೀಸ್ ಕಸ್ಟಡಿಗೆ: ಕಾಂಗ್ರೆಸ್ ಮುಖಂಡ ಕಡಬಗೆರೆ ಶ್ರೀನಿವಾಸ್ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾದ 10 ಆರೋಪಿಗಳನ್ನು ನ್ಯಾಯಾಲಯ ಪೊಲೀಸ್ ಕಸ್ಟಡಿಗೆ ನೀಡಿದೆ.
ಬಂಧಿತ ಆರೋಪಿಗಳನ್ನು ಬುಧವಾರ 44 ನೇ ಎಸಿಎಂ ನ್ಯಾಯಾಲಯಕ್ಕೆ ಪೊಲೀಸರು ಹಾಜರು ಪಡಿಸಿದರು. ಈ ವೇಳೆ ಕೋರ್ಟ್ ಫೆ.20ರವರೆಗೆ ಪೊಲೀಸ್ ಕಸ್ಟಡಿ ನೀಡಿ ಆದೇಶ ಪ್ರಕಟಿಸಿತು.
ಕೇಸ್ ವರ್ಗಾವಣೆ: ಅಗ್ನಿ ಶ್ರೀಧರ್ ಮನೆಯ ಮೇಲೆ ದಾಳಿಗೆ ಸಂಬಂಧಿಸಿದಂತೆ ಮಂಗಳವಾರ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈಗ ಈಶಾನ್ಯ ವಿಭಾಗಕ್ಕೆ ಪ್ರಕರಣ ವರ್ಗಾವಣೆಯಾಗಿದ್ದು, ಸಂಪಿಗೆಹಳ್ಳಿ ಠಾಣೆಯ ಇನ್ಸ್‍ಪೆಕ್ಟರ್‍ಗೆ ತನಿಖೆ ಜವಾಬ್ದಾರಿ ವಹಿಸಿದ್ದಾರೆ.
ಬೆಂಗಳೂರು: ಇಲ್ಲಿಯವರೆಗೆ ರೌಡಿ ಚಟುವಟಿಕೆಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೆವು. ಇನ್ನು ಮುಂದೆ ರೌಡಿಗಳ ಅಕ್ರಮ ಆಸ್ತಿಗಳನ್ನು ಕಲೆ ಹಾಕಲಾಗುವುದು ಎಂದು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಬಾಳ್ಕರ್ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಾರ್ವಜನಿಕರ ಹಿತಾಸಕ್ತಿ ಕಾಪಾಡುವುದು ನಮ್ಮ ಹೊಣೆ. ಕಾನೂನು ಸುವ್ಯವಸ್ಥೆ ವಿರುದ್ಧವಾಗಿದ್ದವರನ್ನು ಸುಮ್ಮನೇ ಬಿಡುವುದಿಲ್ಲ. ಸಾರ್ವಜನಿಕರು ಧೈರ್ಯವಾಗಿ ಮುಂದೆ ಬಂದು ದೂರು ನೀಡಿ. ಸ್ಥಳೀಯ ಠಾಣೆಗಳಿಗೆ ದೂರು ನೀಡಿ, ಇಲ್ಲವಾದಲ್ಲಿ ನಮ್ಮ ಬಳಿ ಬನ್ನಿ ಎಂದು ಅವರು ಹೇಳಿದರು.
ಬೆಂಗಳೂರಿನಲ್ಲಿ ಅಂಡರ್ ವರ್ಲ್ಡ್ ಮಾಫಿಯಾ, ರಿಯಲ್ ಎಸ್ಟೇಟ್, ಪುಡಿ ರೌಡಿಗಳ ಉಪಟಳ ಹೆಚ್ಚಾಗಿದೆ. ಗುಂಪಿನಲ್ಲಿದ್ದರೆ ಮಾತ್ರ ಅವರು ರೌಡಿಗಳು, ಒಬ್ಬರೆ ಇದ್ದರೆ ಇವರು ಪುಕ್ಕಲರು. ಭೂಮಾಫಿಯಾ, ಗಾರ್ಬೆಜ್ ಮಾಫಿಯಾ, ಸಂಬಂಧ ವಿಲ್ಲದ ವಿಚಾರಗಳಿಗೆ ತಲೆಹಾಕುವವರ ವಿರುದ್ಧ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಟಾಟಾ ರಮೇಶ ನೀಡಿದ ದೂರಿನನ್ವಯ ಮಂಗಳವಾರ ಅಗ್ನಿ ಶ್ರೀಧರ್ ನಿವಾಸದ ಮೇಲೆ 150 ಕೂ ಹೆಚ್ಚು ಅಧಿಕಾರಿ ಹಾಗು ಸಿಬ್ಬಂದಿಯಿಂದ ದಾಳಿ ನಡೆಸಿದ್ದೆವು. ದಾಳಿ ನಡೆಸಿದ್ದ ಸಂದರ್ಭದಲ್ಲಿ ಅಕ್ರಮ ಶಸ್ತ್ರಸ್ತ್ರಗಳು ಪತ್ತೆಯಾಗಿವೆ. ಶ್ರೀಧರ್‍ಗೆ ಲಘು ಹೃದಯಘಾತವಾಗಿದ್ದು, ಪೊಲೀಸ್ ಭದ್ರತೆಯಲ್ಲಿ ಚಿಕಿತ್ಸೆ ನಡೆಸಲಾಗ್ತಿದೆ.
ಏಳು ಮಂದಿ ಆರೋಪಿಗಳ ಮೇಲೆ ಕುಮಾರಸ್ವಾಮಿ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ರೋಹಿತ್ ಅಲಿಯಾಸ್ ಒಂಟೆ ಮತ್ತು ಸೈಲೆಂಟ್ ಸುನಿಲನ್ನು ಟಾಟಾ ರಮೇಶ್ ಕೊಲೆ ಬೆದರಿಕೆ ಮೇಲೆ ವಿಚಾರಣೆ ನಡೆಸಲಾಗ್ತಿದೆ. ಕಬಡಗೆರೆ ಶ್ರೀನಿವಾಸ್ ಶೂಟೌಟ್ ಪ್ರಕರಣದಲ್ಲಿ ಇವರು ಶಾಮೀಲಾಗಿರುವ ಶಂಕೆ ಇದ್ದು ವಿಚಾರಣೆ ನಡೆಯುತ್ತಿದೆ ಎಂದು ಅವರು ತಿಳಿಸಿದರು.
ಬೆಂಗಳೂರು: ಕಾಂಗ್ರೆಸ್ ಮುಖಂಡ, ಎಪಿಎಂಸಿ ಅಧ್ಯಕ್ಷ ಕಡಬಗೆರೆ ಶ್ರೀನಿವಾಸ್ ಶೂಟೌಟ್ ಪ್ರಕರಣದಲ್ಲಿ ಇವತ್ತು ಬೆಂಗಳೂರಿನ ಅಂಡರ್ ವರ್ಲ್ಡ್ ಗಢಗಢ ನಡುಗಿದೆ.
ಈಗಾಗಲೇ ಪೊಲೀಸರ ವಶದಲ್ಲಿರುವ ಬಿಜೆಪಿ ಶಾಸಕರ ಬಲಗೈ ಬಂಟ ಸತೀಶ್ ನೀಡಿದ ಮಾಹಿತಿ ಮೇರೆಗೆ ಇವತ್ತು ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ನೇತೃತ್ವದಲ್ಲಿ ಖ್ಯಾತ ಪತ್ರಕರ್ತ ಅಗ್ನಿ ಶ್ರೀಧರ್ ಅವರ ಇಸ್ರೋ ಲೇಔಟ್ ನಿವಾಸದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ
ಐವರು ಡಿಸಿಪಿಗಳ ತಂಡ ದಾಳಿ ನಡೆಸಿ ರೌಡಿ ಒಂಟೆ ರೋಹಿತ್, ಸೈಲೆಂಟ್ ಸುನೀಲ ಸೇರಿದಂತೆ ಕೆಲ ಆರೋಪಿಗಳನ್ನು ಹುಡುಕಾಡಿದೆ. ಪೊಲೀಸ್ ದಾಳಿ ವೇಳೆ ಅಗ್ನಿ ಶ್ರೀಧರ್ ಮಧ್ಯಾಹ್ನ 3.30ರ ವೇಳೆಗೆ ಲಘು ಹೃದಯಾಘಾತವಾಗಿದ್ದು ಆಂಬುಲೆನ್ಸ್‍ನಲ್ಲೇ ಕುಮಾರಸ್ವಾಮಿ ಲೇಔಟ್‍ನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಚ್ಚನ್ ಸೇರಿದಂತೆ ಪೊಲೀಸರು 7 ಮಂದಿಯನ್ನು ಅರೆಸ್ಟ್ ಮಾಡಿದ್ದಾರೆ.
ದಾಳಿ ಹೇಗಾಯ್ತು?
ಟಾಟಾ ರಮೇಶ್ ಹಾಗೂ ಕಡಬಗೆರೆ ಶ್ರೀನಿವಾಸ್‍ಗೆ ಒಂಟೆ ರೋಹಿತ್, ಸೈಲೆಂಟ್ ಸುನೀಲ ಬೆದರಿಕೆ ಹಾಕಿದ್ದರು. ಇವರಿಬ್ಬರ ಮೊಬೈಲ್ ಟವರ್ ಲೊಕೇಶನ್ ಬೆನ್ನತ್ತಿದ್ದಾಗ ಇಬ್ಬರು ಪತ್ರಕರ್ತ ಅಗ್ನಿ ಶ್ರೀಧರ್ ಮನೆಯಲ್ಲಿದ್ದಾರೆ ಎನ್ನುವ ಶಂಕೆ ಆಧಾರದಲ್ಲಿ ದಾಳಿ ನಡೆಸಲಾಯಿತು.
ತಕ್ಷಣ ಸರ್ಚ್ ವಾರೆಂಟ್ ಪಡೆದು ಐವರು ಡಿಸಿಪಿಗಳ ತಂಡದಿಂದ ಏಕಕಾಲಕ್ಕೆ ದಾಳಿ ನಡೆಯುತ್ತದೆ. ಸರ್ಚ್ ವಾರೆಂಟ್ ಇಲ್ಲದ ಕಾರಣ 10 ನಿಮಿಷ ಗೇಟ್ ಮುಂದೆ ಪೊಲೀಸರನ್ನು ಅಗ್ನಿ ಶ್ರೀಧರ್ ನಿಲ್ಲಿಸುತ್ತಾರೆ. ಈ ವೇಳೆ ಅಗ್ನಿ ಶ್ರೀಧರ್ ಮನೆಯಲ್ಲಿದ್ದ 10ಕ್ಕೂ ಹೆಚ್ಚು ಯುವಕರನ್ನು ಪೊಲೀಸರು ವಶಕ್ಕೆ ಪಡೆಯುತ್ತಾರೆ.
ದಾಳಿ ವೇಳೆ ಮನೆಯಲ್ಲಿ ಲೈಸೆನ್ಸ್ ಇಲ್ಲದ ಗನ್, ಮಾರಕಾಸ್ತ್ರಗಳು ಹಾಗೂ 70 ವಿದೇಶಿ ಮದ್ಯದ ಬಾಟಲ್‍ಗಳು, ಗಾಂಜಾ ಹಾಗೂ ಚಿನ್ನಾಭರಣ ಪತ್ತೆಯಾಗಿದೆ. ಈ ಸಂಬಂಧ ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ ಕಾಯ್ದೆಯಡಿ ಅಗ್ನಿ ಶ್ರೀಧರ್ ಮೇಲೆ ಎಫ್‍ಐಆರ್ ದಾಖಲಾಗಿದೆ.
ಅಗ್ನಿ ಶ್ರೀಧರ್ ಆಪ್ತ, ಭೂಗತಪಾತಕಿ ಚೋಟಾ ರಾಜನ್ ಸಹಚರನಾಗಿದ್ದ ಅಮಾನ್ ಅಲಿಯಾಸ್ ಸೈಯದ್ ಅಮಾನುಲ್ಲಾ ಬಚ್ಚನ್ ನನ್ನು ಪೊಲೀಸರು ಬಂಧಿಸಿದ್ದಾರೆ. ದಯಾನಂದ ಸಾಗರ್ ಆಸ್ಪತ್ರೆಯಲ್ಲಿ ಅಗ್ನಿ ಶ್ರೀಧರ್ ನೋಡಲು ಬಂದ ವೇಳೆ ರಾತ್ರಿ 8.30ರ ವೇಳೆ ಸೈಲೆಂಟ್ ಸುನೀಲನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸೈಲೆಂಟ್ ಸುನೀಲನ ಗಾಯತ್ರಿನಗರ, ಪ್ರಕಾಶ್ ನಗರ, ಕುಮಾರಸ್ವಾಮಿ ಲೇಔಟ್‍ನ ಮನೆಗಳ ಮೇಲೆ ಪೊಲೀಸರು ಶೋಧ ನಡೆಸಿದ್ದರು.
ಬೆಂಗಳೂರು: ಬರಹಗಾರ ಅಗ್ನಿ ಶ್ರೀಧರ್‍ಗೆ ಲಘು ಹೃದಯಾಘಾತವಾಗಿದ್ದು, ಕುಮಾರಸ್ವಾಮಿ ಲೇಔಟ್‍ನಲ್ಲಿರುವ ಸಾಗರ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಡಬಗೆರೆ ಶ್ರೀನಿವಾಸ್ ಹತ್ಯೆ ಸಂಚು ಕೇಸ್‍ನಲ್ಲಿ ರೌಡಿ ಶೀಟರ್ ರೋಹಿತ್ ಕೈವಾಡದ ಶಂಕೆ ಇರುವ ಹಿನ್ನೆಲೆಯಲ್ಲಿ ಇಸ್ರೋ ಲೇಔಟ್‍ನಲ್ಲಿರುವ ಅಗ್ನಿ ಶ್ರೀಧರ್ ಮನೆಯ ಮೇಲೆ ಮಂಗಳವಾರ ಬೆಳಗ್ಗೆ ಪೊಲೀಸರು ದಾಳಿ ನಡೆಸಿ ಶೋಧ ಆರಂಭಿಸಿದ್ದರು.
ಬೆಳಗ್ಗೆಯಿಂದ ಪೊಲೀಸರ ವಿಚಾರಣೆ ಉತ್ತರಿಸುತ್ತಿದ್ದ ಅಗ್ನಿ ಶ್ರೀಧರ್‍ಗೆ ಮಧ್ಯಾಹ್ನ 3.30ರ ವೇಳೆಗೆ ಲಘು ಹೃದಯಾಘಾತಕ್ಕೆ ತುತ್ತಾದರು. ಕೂಡಲೇ ಅವರನ್ನು ಅಂಬುಲೆನ್ಸ್ ನಲ್ಲಿ ಸಮೀಪದಲ್ಲಿದ್ದ ಸಾಗರ್ ಆಸ್ಪತ್ರೆಗೆ ದಾಖಲಿಸಲಾಯಿತು.
ಎಪಿಎಂಸಿ ಅಧ್ಯಕ್ಷ ಕಡಬಗೆರೆ ಸೀನ ಹತ್ಯೆಗೆ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಯಲಹಂಕ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಬಲಗೈ ಬಂಟ ಸತೀಶ್ ಬಂಧನವಾಗಿತ್ತು. ವಿಚಾರಣೆ ವೇಳೆ ಸತೀಶ್ ರೋಹಿತ್ ಮತ್ತು ಸೈಲೆಂಟ್ ಸುನೀಲ್ ಅಗ್ನಿ ಶ್ರೀಧರ್ ಮನೆಯಲ್ಲಿ ಇರುವುದಾಗಿ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಕೋರ್ಟ್‍ನಿಂದ ಸರ್ಚ್ ವಾರೆಂಟ್ ಪಡೆದು ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್, ಡಿಸಿಪಿಗಳಾದ ಹರ್ಷ, ನಾರಾಯಣ್, ಶರಣಪ್ಪ, ಅನುಚೇತ್ ನೇತೃತ್ವದಲ್ಲಿ ಪೊಲೀಸರು ಇಂದು ಫೀಲ್ಡಿಗೆ ಇಳಿದು ಶೋಧ ಆರಂಭಿಸಿದ್ದರು.