Tag: ಅಗ್ನಿ ಶಾಮಕ ಸಿಬ್ಬಂದಿ

  • ಹಾವೇರಿಯಲ್ಲಿ ಸ್ಪಿರಿಟ್ ಲಾರಿಯ ಟೈಯರ್ ಬ್ಲಾಸ್ಟ್ – ತಪ್ಪಿದ ದೊಡ್ಡ ದುರಂತ!

    ಹಾವೇರಿಯಲ್ಲಿ ಸ್ಪಿರಿಟ್ ಲಾರಿಯ ಟೈಯರ್ ಬ್ಲಾಸ್ಟ್ – ತಪ್ಪಿದ ದೊಡ್ಡ ದುರಂತ!

    ಹಾವೇರಿ: ಸ್ಪಿರಿಟ್ ತುಂಬಿದ ಲಾರಿಯ ಟೈಯರ್ ಬ್ಲಾಸ್ಟ್ (Lorry Spirit Tire Blast), ಲಾರಿಗೆ ಚಕ್ರಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸರ ಕಾರ್ಯಾಚರಣೆಯಿಂದ ದೊಡ್ಡ ದುರಂತವೊಂದು ತಪ್ಪಿರುವ ಘಟನೆ ಹಾವೇರಿಯ ತೋಟದಯಲ್ಲಾಪುರ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ-48 (National Highway 48) ರಲ್ಲಿ ನಡೆದಿದೆ.

    ಸ್ಪಿರಿಟ್ ತುಂಬಿದ ಲಾರಿ ಬೆಳಗಾವಿಯಿಂದ ಬೆಂಗಳೂರು ಕಡೆ ಹೊರಟ್ಟಿತ್ತು. ಲಾರಿಯಲ್ಲಿ ಸುಮಾರು 24 ಲಕ್ಷ ರೂ. ಮೌಲ್ಯದ ವೈಟ್ ಸ್ಪಿರಿಟ್ ತುಂಬಿತ್ತು. ಇದನ್ನೂ ಓದಿ: ದರ್ಶನ್‌ ಬಳಿ 70 ಲಕ್ಷ ರೂ. ಪತ್ತೆ – ʻದಾಸʼನಿಗೆ ಕೊಲೆ ಆರೋಪದ ಜೊತೆಗೆ ಐಟಿ ಸಂಕಷ್ಟ!

    ಲಾರಿಯ ಟೈಯರ್ ಹೀಟ್‌ ಆಗಿದ್ದರಿಂದ ಚಕ್ರಕ್ಕೆ ಬೆಂಕಿ ಹೊತ್ತಿಕೊಂಡಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸಮಯಪ್ರಜ್ಞೆಯಿಂದ ಮುಂದಾಗುವ ದುರಂತ ತಪ್ಪಿಸಿದ್ದಾರೆ.

    ಹೆದ್ದಾರಿಯಲ್ಲಿ ಸ್ವಲ್ಪ ದೂರದಲ್ಲೇ ಎಲ್ಲಾ ವಾಹನಗಳನ್ನು ನಿಲ್ಲಿಸಿ, ಅಗ್ನಿಶಾಮಕ ದಳದ ಸಿಬ್ಬಂದಿ ಪೊಲೀಸರು ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ರೇಣುಕಸ್ವಾಮಿ ಕೊಲೆಗೆ ಸಂಚು ರೂಪಿಸಿದ್ದೇ ಪವಿತ್ರಾಗೌಡ – ಹೊಸ ರಿಮ್ಯಾಂಡ್‌ ಕಾಪಿಯಲ್ಲಿ ಏನಿದೆ?

  • ರಾತ್ರಿ ಹೋಗಿದ್ದು ಬಹಿರ್ದೆಸೆಗೆ, ಬಿದ್ದಿದ್ದು ತೆರೆದ ಬಾವಿಗೆ

    ರಾತ್ರಿ ಹೋಗಿದ್ದು ಬಹಿರ್ದೆಸೆಗೆ, ಬಿದ್ದಿದ್ದು ತೆರೆದ ಬಾವಿಗೆ

    ಶಿವಮೊಗ್ಗ: ರಾತ್ರಿ ವೇಳೆ ಬಹಿರ್ದೆಸೆಗೆ ತೆರಳುತ್ತಿದ್ದ ವ್ಯಕ್ತಿಯೋರ್ವ ಕಾಲು ಜಾರಿ ಸುಮಾರು 60 ಅಡಿ ಆಳದ ತೆರೆದ ಬಾವಿಗೆ ಬಿದ್ದ ಘಟನೆ ಜಿಲ್ಲೆಯ ಸೊರಬ ತಾಲೂಕಿನ ಹೊಸಬಾಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎನ್. ದೊಡ್ಡೇರಿ ಗ್ರಾಮದಲ್ಲಿ ನಡೆದಿದೆ.

    ಬಾವಿಗೆ ಬಿದ್ದ ವ್ಯಕ್ತಿಯನ್ನು ಹನುಮಂತಪ್ಪ (48) ಎಂದು ಗುರುತಿಸಲಾಗಿದೆ. ಬಾವಿಗೆ ಬಿದ್ದ ಹನುಮಂತಪ್ಪ ನಂತರ ಮೇಲೆ ಬರಲು ಪ್ರಯತ್ನಿಸಿದ್ದಾರೆ. ಆದರೆ ಸಾಧ್ಯವಾಗಲಿಲ್ಲ. ನಂತರ ರಕ್ಷಣೆ ಮಾಡುವಂತೆ ಕೂಗಾಡಿಕೊಂಡಿದ್ದಾರೆ. ಹನುಮಂತಪ್ಪನ ಕೂಗಾಟ ಕೇಳಿ ಸ್ಥಳೀಯರು ಬಾವಿಯ ಬಳಿ ಜಮಾಯಿಸಿದ್ದಾರೆ. ನಂತರ ಅಗ್ನಿಶಾಮಕ ಸಿಬ್ಬಂದಿ ಗಮನಕ್ಕೆ ವಿಷಯ ತಿಳಿಸಿದ್ದಾರೆ.

    ಕ್ಷಣಾರ್ಧದಲ್ಲಿಯೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಸತತ ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ, ಬಾವಿಗೆ ಬಿದ್ದ ವ್ಯಕ್ತಿಯನ್ನು ಸುರಕ್ಷಿತವಾಗಿ ಮೇಲಕ್ಕೆ ಕರೆ ತಂದಿದ್ದಾರೆ. ಸಣ್ಣಪುಟ್ಟ ಗಾಯವಾಗಿದ್ದ ಹಿನ್ನೆಲೆಯಲ್ಲಿ ಚಿಕಿತ್ಸೆಗೆ ಸೊರಬದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದನ್ನೂ ಓದಿ: ನಡು ರಸ್ತೆಯಲ್ಲಿ ಉಪನ್ಯಾಸಕನ ಬರ್ಬರ ಹತ್ಯೆ

    ಬದುಕುಳಿದ ಗಾಯಳು ಹನುಮಂತಪ್ಪ ಅಗ್ನಿ ಶಾಮಕ ಸಿಬ್ಬಂದಿ ಸೇವೆಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಮಹಾಬಲೇಶ್ವರ, ಚಾಲಕ ಪ್ರಶಾಂತ್, ಸಿಬ್ಬಂದಗಳಾದ ಮಂಜುನಾಥ, ಪ್ರದೀಪ್, ಪರಶುರಾಮಪ್ಪ, ಪ್ರಸನ್ನ ಕುಮಾರ್, ಭಾಗವಹಿಸಿದ್ದರು. ಇದನ್ನೂ ಓದಿ: ಆ್ಯಸಿಡ್ ದಾಳಿಗೊಳಗಾದ ಯುವತಿ ಆರೋಗ್ಯದಲ್ಲಿ ಚೇತರಿಕೆ

  • ಹೇಮಾವತಿ ನದಿಯಲ್ಲಿ ತೆಪ್ಪ ಮುಳುಗಿ ಮಹಿಳೆ ನೀರುಪಾಲು

    ಹೇಮಾವತಿ ನದಿಯಲ್ಲಿ ತೆಪ್ಪ ಮುಳುಗಿ ಮಹಿಳೆ ನೀರುಪಾಲು

    ಹಾಸನ: ಹೇಮಾವತಿ ನದಿಯಲ್ಲಿ ತೆಪ್ಪ ಮುಳುಗಿದ್ದರಿಂದ ಮಹಿಳೆ ನೀರು ಪಾಲಗಿರುವ ಘಟನೆ ಸಕಲೇಶಪುರ ತಾಲೂಕಿನ ಐಗೂರು ಬಳಿ ನಡೆದಿದೆ.

    ಸತತವಾಗಿ ಸುರಿದ ಮಳೆಯಿಂದ ಗ್ರಾಮದ ಸೇತುವೆ ಕೊಚ್ಚಿ ಹೋಗಿತ್ತು. ಹೀಗಾಗಿ ಸೌಮ್ಯ ಎಂಬವರು ಬುಧವಾರ ಸಂಜೆ ಕೃಷಿ ಕೆಲಸ ಮುಗಿಸಿ ತೆಪ್ಪದಲ್ಲಿ ನದಿ ದಾಟಬೇಕಿತ್ತು. ನದಿ ದಾಟುವಾಗ ತೆಪ್ಪ ಮುಗುಚಿದ್ದರಿಂದ ಸೌಮ್ಯ ನೀರು ಪಾಲಾಗಿದ್ದಾರೆ. ಈ ವೇಳೆ ತೆಪ್ಪದಲ್ಲಿ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯಕ್ಕೆ ಸೌಮ್ಯ ನದಿಯಲ್ಲಿ ಮುಳುಗಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

    ಸ್ಥಳೀಯರ ನೆರವಿನೊಂದಿಗೆ ಅಗ್ನಿಶಾಮಕ ಸಿಬ್ಬಂದಿ ಸೌಮ್ಯಾಗಾಗಿ ಶೋಧ ಕಾರ್ಯ ನಡೆಯುತ್ತಿದ್ದು, ಯಸಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv