Tag: ಅಗ್ನಿ ಅವಘಡ

  • ಕೀನ್ಯಾ ಶಾಲೆಯಲ್ಲಿ ಅಗ್ನಿ ಅವಘಡ – 17 ಮಕ್ಕಳು ದಾರುಣ ಸಾವು

    ಕೀನ್ಯಾ ಶಾಲೆಯಲ್ಲಿ ಅಗ್ನಿ ಅವಘಡ – 17 ಮಕ್ಕಳು ದಾರುಣ ಸಾವು

    ನೈರೋಬಿ: ಕೀನ್ಯಾ (Kenya) ಶಾಲೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 17 ಮಕ್ಕಳು ಸಾವನ್ನಪ್ಪಿದ್ದಾರೆ. 70 ಮಂದಿ ಕಾಣೆಯಾಗಿದ್ದಾರೆ.

    ಕೀನ್ಯಾದ ಪ್ರಾಥಮಿಕ ವಸತಿ ಶಾಲೆಯಲ್ಲಿ ಬೆಂಕಿ ಅವಘಡ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇದನ್ನೂ ಓದಿ: ಹರಿಯಾಣ ಚುನಾವಣೆ ಸ್ಪರ್ಧೆಗೆ ವಿನೇಶ್‌ ಫೋಗಟ್‌ಗೆ ಕಾಂಗ್ರೆಸ್‌ ಟಿಕೆಟ್‌

    ಘಟನಾ ಸ್ಥಳದಲ್ಲಿ ಸುದ್ದಿಗಾರರೊಂದಿಗೆ ಉಪಾಧ್ಯಕ್ಷೆ ರಿಗತಿ ಗಚಾಗುವಾ (Deputy President Rigathi Gachagua) ಮಾತನಾಡಿ, ನೈರಿ ಕೌಂಟಿಯಲ್ಲಿರುವ (Nyeri county) ಹಿಲ್ ಸೈಡ್ ಎಂಡರಾಶಾ (Endarasha Academy) ಅಕಾಡೆಮಿಯಲ್ಲಿ ಮಧ್ಯರಾತ್ರಿ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಆ ಸಮಯದಲ್ಲಿ ಕೊಠಡಿಯಲ್ಲಿ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮಲಗಿದ್ದರು ಎಂದು ತಿಳಿದು ಬಂದಿದೆ. ಅದರಲ್ಲಿ 17 ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, 70 ಮಂದಿ ಸುಳಿವು ದೊರೆತಿಲ್ಲ ಎಂದು ತಿಳಿಸಿದ್ದಾರೆ.

    ರಾಷ್ಟ್ರೀಯ ಪೊಲೀಸ್ ವಕ್ತಾರ ರೆಸಿಲಿಯಾ ( Resila) ಮಾತನಾಡಿ, ಈಗಾಗಲೇ 17 ಮೃತದೇಹಗಳು ಪತ್ತೆಯಾಗಿದ್ದು, ಗುರುತಿಸಲಾಗದಷ್ಟು ಸುಟ್ಟು ಹೋಗಿವೆ. ಇನ್ನೂ ಕಾಣೆಯಾದವರನ್ನು ಪತ್ತೆಹಚ್ಚುವಂತೆ ಮನೆಯವರು ಹಾಗೂ ಸಂಬಂಧಿಕರು ಒತ್ತಾಯ ಹೇರುತ್ತಿದ್ದಾರೆ.ಇದನ್ನೂ ಓದಿ: ರಸ್ತೆ ದಾಟುತ್ತಿದ ಮಹಿಳೆಗೆ ಆಟೋ ಡಿಕ್ಕಿ – ಸ್ಥಿತಿ ಗಂಭೀರ

    ಡಿಎನ್‌ಎ ಪರೀಕ್ಷೆ ನಡೆಸಿ ಮೃತರ ಗುರುತು ಪತ್ತೆಗೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

  • ಮುಂಬೈನ ಟೈಮ್ಸ್ ಟವರ್‌ನಲ್ಲಿ ಅಗ್ನಿ ಅವಘಡ

    ಮುಂಬೈನ ಟೈಮ್ಸ್ ಟವರ್‌ನಲ್ಲಿ ಅಗ್ನಿ ಅವಘಡ

    ಮುಂಬೈ: ನಗರದ ಕಮಲಾ ಮಿಲ್ ಕಾಂಪೌಂಡ್‌ನ (Kamala Mill Compound) ಲೋವರ್ ಪರೇಲ್‌ನಲ್ಲಿ (Lower Parel) ಇಂದು ಬೆಳಗ್ಗೆ ಬೆಂಕಿ ಕಾಣಿಸಿಕೊಂಡು ಅವಘಡ ಉಂಟಾಗಿದೆ.

    ಏಳು ಅಂತಸ್ತಿನ ಕಟ್ಟಡ ಟೈಮ್ಸ್ ಟವರ್‌ನಲ್ಲಿ (Times Tower) ಬೆಂಕಿ ಕಾಣಿಸಿಕೊಂಡಿದ್ದು, ಭಾರೀ ಅಗ್ನಿ ಅವಘಡ ಸಂಭವಿಸಿದೆ ಎಂದು ಬೃಹತ್ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು (BMC) ತಿಳಿಸಿದ್ದಾರೆ. ಜೊತೆಗೆ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಇಂಡಸ್ಟ್ರಿಗೆ ದರ್ಶನ್ ಕಾಂಟ್ರುಬ್ಯುಷನ್ ತುಂಬಾ ಇದೆ: ನಟ ಪ್ರೇಮ್

    ತಕ್ಷಣವೇ ಸ್ಥಳಕ್ಕೆ ಒಂಬತ್ತು ಅಗ್ನಿಶಾಮಕ ವಾಹನಗಳು ದೌಡಾಯಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ.

    14 ಅಂತಸ್ತನ್ನು ಹೊಂದಿರುವ ಕಟ್ಟಡದಲ್ಲಿ 3 ರಿಂದ 7 ಮಹಡಿಯವರೆಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇದನ್ನೂ ಓದಿ: Kolkata Horror | ಆರ್‌.ಜಿ ಕರ್‌ ಕಾಲೇಜಿನ ಮಾಜಿ ಪ್ರಾಂಶುಪಾಲನ ಮನೆ ಸೇರಿ 7 ಕಡೆ ಇಡಿ ದಾಳಿ!

    2017ರ ಡಿ.29ರಂದು ಕಮಲಾ ಮಿಲ್ ಕಾಂಪೌಂಡ್‌ನ ರೆಸ್ಟೋರೆಂಟ್‌ಗೆ ಮಧ್ಯರಾತ್ರಿ 12:30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತ್ತು. ಆ ವೇಳೆ 14 ಜನ ಸಾವನ್ನಪ್ಪಿದ್ದು, ಕೆಲವರು ಗಾಯಗೊಂಡಿದ್ದರು.

  • ಕುವೈತ್‌ನ ಕಾರ್ಮಿಕರ ಶಿಬಿರದಲ್ಲಿ ಅಗ್ನಿ ದುರಂತ – 40 ಮಂದಿ ಭಾರತೀಯರು ಸಾವು

    ಕುವೈತ್‌ನ ಕಾರ್ಮಿಕರ ಶಿಬಿರದಲ್ಲಿ ಅಗ್ನಿ ದುರಂತ – 40 ಮಂದಿ ಭಾರತೀಯರು ಸಾವು

    – 30ಕ್ಕೂ ಹೆಚ್ಚು ಮಂದಿಗೆ ಗಾಯ

    ಕುವೈತ್‌: ಕಾರ್ಮಿಕರ ಶಿಬಿರದಲ್ಲಿ (Labour Camp) ಸಂಭವಿಸಿದ ಅಗ್ನಿ ದುರಂತರದಲ್ಲಿ ಕನಿಷ್ಠ 40 ಮಂದಿ ಭಾರತೀಯರು ಸಾವನ್ನಪ್ಪಿದ ಘಟನೆ ಕುವೈತ್‌ನ (Kuwait) ಮಂಗಾಫ್ ನಗರದಲ್ಲಿ (Mangaf City) ನಡೆದಿದೆ.

    ಸ್ಥಳೀಯ ಕಾಲಮಾನ ಬೆಳಗ್ಗೆ 6 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ಅಗ್ನಿ ಅವಘಡದಿಂದ ಗಾಯಗೊಂಡ ಸುಮಾರು 43ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕುವೈತ್ ಆರೋಗ್ಯ ಸಚಿವಾಲಯ ತಿಳಿಸಿದೆ. ಈ ಅವಘಡದಲ್ಲಿ 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕುವೈತ್‌ನಲ್ಲಿರುವ ಭಾರತೀಯ ರಾಯಭಾರಿ ತಿಳಿಸಿದ್ದಾರೆ. ಇದನ್ನೂ ಓದಿ: ಬೆಳಗಾವಿ ಕೋರ್ಟ್ ಆವರಣದಲ್ಲೇ ಪಾಕಿಸ್ತಾನ ಜಿಂದಾಬಾದ್ ಘೋಷಣೆ

    ಘಟನೆಯ ಕುರಿತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ಕುವೈತ್ ನಗರದಲ್ಲಿ ಅಗ್ನಿ ದುರಂತದ ಸುದ್ದಿ ಕೇಳಿ ತೀವ್ರ ಆಘಾತವಾಗಿದೆ. 40ಕ್ಕೂ ಹೆಚ್ಚು ಸಾವುಗಳು ಸಂಭವಿಸಿದ್ದು, 50ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ. ನಮ್ಮ ರಾಯಭಾರಿ ಶಿಬಿರಕ್ಕೆ ಹೋಗಿದ್ದಾರೆ. ನಾವು ಹೆಚ್ಚಿನ ಮಾಹಿತಿಗಾಗಿ ಕಾಯುತ್ತಿದ್ದೇವೆ ಎಂದು ಜೈಶಂಕರ್ ತಿಳಿಸಿದ್ದಾರೆ. ಇದನ್ನೂ ಓದಿ: ಭಾರತಕ್ಕೆ ಮೋಸ – ಚೀಟಿಂಗ್‌ ಕತಾರ್‌ ವಿರುದ್ಧ ಅಭಿಮಾನಿಗಳು ಕೆಂಡ

    ಕುವೈತ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಸಹಾಯವಾಣಿ ಸಂಖ್ಯೆಯನ್ನು ಬಿಡುಗಡೆ ಮಾಡಿದೆ. ಅಲ್ಲದೇ ಅಗ್ನಿ ಅವಘಡದಲ್ಲಿ ಕೆಲವು ಭಾರತೀಯ ಕಾರ್ಮಿಕರು ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ರಾಯಭಾರ ಕಚೇರಿಯು ಸಾಧ್ಯವಿರುವ ಎಲ್ಲಾ ಸಹಾಯವನ್ನು ನೀಡಲಿದೆ ಎಂದಿದ್ದಾರೆ. ಇದನ್ನೂ ಓದಿ: ಬಸವಕಲ್ಯಾಣದಲ್ಲಿ ಭಾರೀ ಮಳೆ – ಕೆರೆ ಒಡೆದು ರೈತರ ಜಮೀನಿಗೆ ನುಗ್ಗಿದ ನೀರು

    ಕಟ್ಟಡದಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ನಿಯಂತ್ರಿಸಿದ್ದು, ಅಧಿಕಾರಿಗಳು ಘಟನೆಗೆ ಕಾರಣವನ್ನು ಹುಡುಕುತ್ತಿದ್ದಾರೆ ಎಂದು ವರದಿಗಳು ತಿಳಿಸಿದೆ. ಇದನ್ನೂ ಓದಿ: ಮುಖ್ಯಮಂತ್ರಿಯಾಗಿ ಚಂದ್ರಬಾಬು ನಾಯ್ಡು, ಸಚಿವರಾಗಿ ಪವನ್‌ ಕಲ್ಯಾಣ್‌ ಪ್ರಮಾಣವಚನ ಸ್ವೀಕಾರ

  • ಹಾವೇರಿಯಲ್ಲಿ ಆಕಸ್ಮಿಕ ಬೆಂಕಿಗೆ 5 ಅಂಗಡಿಗಳು ಭಸ್ಮ- 30 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಹಾನಿ

    ಹಾವೇರಿಯಲ್ಲಿ ಆಕಸ್ಮಿಕ ಬೆಂಕಿಗೆ 5 ಅಂಗಡಿಗಳು ಭಸ್ಮ- 30 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಹಾನಿ

    – ಚಿಕ್ಕಮಗಳೂರಿನಲ್ಲಿ ರಸ್ತೆ ಮಧ್ಯೆ ಹೊತ್ತಿ ಉರಿದ ಕಾರು

    ಹಾವೇರಿ/ಚಿಕ್ಕಮಗಳೂರು: ಆಕಸ್ಮಿಕ ಬೆಂಕಿ ಹೊತ್ತಿಕೊಂಡು ಐದಕ್ಕೂ ಅಧಿಕ ಅಂಗಡಿಗಳು ಸುಟ್ಟು ಕರಕಲಾದ ಘಟನೆ ಹಾವೇರಿ (Haveri) ಜಿಲ್ಲೆ ಹಿರೇಕೆರೂರು ತಾಲೂಕಿನ ಚಿಕ್ಕೇರೂರು ಗ್ರಾಮದಲ್ಲಿ ನಡೆದಿದೆ.

    ಇಲೆಕ್ಟ್ರಿಕಲ್ ಅಂಗಡಿ, ಬೇಕರಿ, ಬೊಂಬೆ ಅಂಗಡಿ, ಫೂಟ್‌ವೇರ್ ಮತ್ತು ಹೊಟೇಲ್‌ಗೆ ಬೆಂಕಿ ಬಿದ್ದಿದ್ದು, ಅಂಗಡಿಯಲ್ಲಿನ (Shop) ವಸ್ತುಗಳು ಸುಟ್ಟು ಭಸ್ಮವಾಗಿವೆ. ಫೂಟ್‌ವೇರ್ ಅಂಗಡಿಯಿಂದ ದಟ್ಟಹೊಗೆ ಆವರಿಸಿದ್ದು, ದಟ್ಟವಾದ ಹೊಗೆಗೆ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಸುಮಾರು 30 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಹಾನಿಯಾಗಿವೆ ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಹಿರೇಕೆರೂರು ಶಾಸಕ ಯುಬಿ ಬಣಕಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಂಸಭಾವಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.‌ ಇದನ್ನೂ ಓದಿ: ಎಕ್ಸ್‌ಪ್ರೆಸ್‌ ವೇಯಲ್ಲಿ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಕಾರು- ನಾಲ್ವರು ಗಂಭೀರ

    ಇನ್ನೊಂದೆಡೆ ಶಾರ್ಟ್ ಸರ್ಕ್ಯೂಟ್‌ನಿಂದ (Short Circuit) ರಸ್ತೆ ಮಧ್ಯೆಯೇ ಕಾರು (Car) ಹೊತ್ತಿ ಉರಿದಿರುವ ಘಟನೆ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಕಡೂರು ತಾಲೂಕಿನ ಸರಸ್ವತಿಪುರ ಗೇಟ್ ಬಳಿ ನಡೆದಿದೆ. ನೋಡುನೋಡುತ್ತಿದ್ದಂತೆಯೇ ಬೆಂಕಿಯ ಕೆನ್ನಾಲಿಗೆಗೆ ಸ್ವಿಫ್ಟ್ ಕಾರು ಬೂದಿಯಾಗಿದೆ. ಚಿಕ್ಕಮಗಳೂರಿನಿಂದ ಹುಬ್ಬಳ್ಳಿಗೆ ತೆರಳುತ್ತಿದ್ದ ಸಂದರ್ಭ ಏಕಾಏಕಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕಾರಿನಲ್ಲಿದ್ದ ಪ್ರಯಾಣಿಕರು ಕೆಳಗಿಳಿದು ಜೀವ ಉಳಿಸಿಕೊಂಡಿದ್ದಾರೆ. ಬಳಿಕ ಕಡೂರು ಅಗ್ನಿ ಶಾಮಕ ಠಾಣೆಯ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಇಂದಿನಿಂದ ಜೂನ್ 12 ರ ವರೆಗೆ ರಾಜ್ಯದಲ್ಲಿ ಭಾರೀ ಮಳೆಯ ಎಚ್ಚರಿಕೆ

  • ಜವಳಿ ಕಾರ್ಖಾನೆಯಲ್ಲಿ ಭಾರೀ ಅಗ್ನಿ ಅವಘಡ!

    ಜವಳಿ ಕಾರ್ಖಾನೆಯಲ್ಲಿ ಭಾರೀ ಅಗ್ನಿ ಅವಘಡ!

    ಚಂಡೀಗಢ: ಹರಿಯಾಣದ ಗುರುಗ್ರಾಮ್‌ನಲ್ಲಿರುವ ಜವಳಿ ಕಾರ್ಖಾನೆಯಲ್ಲಿ (Cloth Manufacturing Unit) ಗುರುವಾರ ಸಂಜೆ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಬೆಂಕಿ ಎಷ್ಟು ತೀವ್ರವಾಗಿತ್ತು ಎಂದರೆ ಹಲವು ಅಗ್ನಿಶಾಮಕ ದಳದ ವಾಹನಗಳು ಗಂಟೆಗಟ್ಟಲೆ ಪ್ರಯತ್ನಿಸಿದರೂ ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಆದರೂ ಪಕ್ಕದ ಕಾರ್ಖಾನೆಗೆ ಬೆಂಕಿ ತಗುಲದಂತೆ ತಡೆಯಲಾಯಿತು.

    ಮನೇಸರ್‌ನಲ್ಲಿರುವ (Manesar) ಈ ಕಾರ್ಖಾನೆಯಲ್ಲಿ ನಡೆದ ಅಗ್ನಿ ಅವಘಢಕ್ಕೆ ಕಾರಣ ತಿಳಿದುಬಂದಿಲ್ಲ. ಆದರೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಘಟನೆ ನಡೆದ ತಕ್ಷಣವೇ ಸ್ಥಳಕ್ಕೆ ಸುಮಾರು 35 ಅಗ್ನಿಶಾಮಕ ದಳದ ವಾಹನಗಳು ದೌಡಾಯಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟವು. ಇದನ್ನೂ ಓದಿ: ಗೋವುಗಳನ್ನು ಹಿಡಿದ ಪೊಲೀಸರು- ಹಿಂದೂ ಕಾರ್ಯಕರ್ತರಿಂದ ಠಾಣೆಗೆ ಮುತ್ತಿಗೆ

    ಮನೇಸರ್‌ನ ಸೆಕ್ಟರ್ 8 ರಲ್ಲಿನ ಪ್ಲಾಟ್ ಸಂಖ್ಯೆ 408 ರಲ್ಲಿ ಇರುವ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಕುರಿತು ಗುರುವಾರ ಸಂಜೆ 5.30ಕ್ಕೆ ಅಗ್ನಿಶಾಮಕ ದಳಕ್ಕೆ ಮಾಹಿತಿ ಲಭಿಸಿದೆ. ಕೂಡಲೇ ಹಲವು ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕಾಗಮಿಸಿದವು. ಆದರೆ ಗಾಳಿಯ ರಭಸಕ್ಕೆ ಬೆಂಕಿ ವ್ಯಾಪಿಸಿದ್ದು ನಿಯಂತ್ರಿಸಲು ಕಷ್ಟವಾಯಿತು. ಗುರುಗ್ರಾಮ್ ಸೆಕ್ಟರ್ 29 ಮತ್ತು ಸೆಕ್ಟರ್ 37 ರಿಂದ ವಾಹನಗಳನ್ನು ಕೂಡ ಸ್ಥಳಕ್ಕೆ ಕರೆಸಲಾಯಿತು. ಸುಮಾರು 35 ವಾಹನಗಳು ಸ್ಥಳಕ್ಕೆ ತಲುಪಿದವು. ಆದರೆ ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಈ ನಡುವೆ ಹತ್ತಿರದಲ್ಲಿದ್ದ ಕಂಪನಿಗೆ ಬೆಂಕಿ ಹರಡುವುದನ್ನು ನಿಲ್ಲಿಸಲಾಯಿತು ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ತಿಳಿಸಿದ್ದಾರೆ.

    ಜವಳಿ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡು ಅಪಾರ ಹಾನಿ ಸಂಭವಿಸಿದೆ. ಆದರೆ ಈ ಅವಘಡದಲ್ಲಿ ಯಾವುದೇ ಸಾವು -ನೋವು ಸಂಭವಿಸಿರುವ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಅಗ್ನಿ ಅವಘಡದ ಬಗ್ಗೆ ಮಾಹಿತಿ ಬಂದ ತಕ್ಷಣ ಎಲ್ಲ ಸಿಬ್ಬಂದಿ ಹೊರಗೆ ಬಂದರು. ಇದರಿಂದಾಗಿ ಎಲ್ಲರ ಪ್ರಾಣ ಉಳಿಯಿತು ಎಂಬುದಾಗಿ ವರದಿಯಾಗಿದೆ.

  • ಗೇಮಿಂಗ್ ಝೋನ್‌ನಲ್ಲಿ ಅಗ್ನಿ ಅವಘಡ ಪ್ರಕರಣ – 7 ಅಧಿಕಾರಿಗಳು ಅಮಾನತು

    ಗೇಮಿಂಗ್ ಝೋನ್‌ನಲ್ಲಿ ಅಗ್ನಿ ಅವಘಡ ಪ್ರಕರಣ – 7 ಅಧಿಕಾರಿಗಳು ಅಮಾನತು

    – ಹೈಕೋರ್ಟ್‌ ತರಾಟೆ ಬಳಿಕ ಎಚ್ಚೆತ್ತ ಗುಜರಾತ್‌ ಸರ್ಕಾರ

    ಗಾಂಧಿನಗರ: ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಮೇ 25ರಂದು ಗೇಮಿಂಗ್‌ ಝೋನ್‌ನಲ್ಲಿ ನಡೆದ ಅಗ್ನಿ ಅವಘಡ (Gaming Zone Fire Accident) ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್‌ ಸರ್ಕಾರ (Gujarat Govt) ಸೋಮವಾರ 7 ಅಧಿಕಾರಿಗಳನ್ನು ಅಮಾನತುಗೊಳಿಸಿದೆ.

    ಅಗತ್ಯ ಅನುಮೋದನೆಗಳಿಲ್ಲದೇ ಗೇಮಿಂಗ್‌ ಝೋನ್‌ ಕಾರ್ಯನಿರ್ವಹಿಸಲು ಅನುಮತಿ ನೀಡಿದ್ದು ಅಧಿಕಾರಿಗಳ ನಿರ್ಲಕ್ಷ್ಯವನ್ನು ತೋರಿಸಿದೆ. ಹಾಗಾಗಿ ವಿಶೇಷ ತನಿಖಾ ತಂಡ (SIT) ಸಲ್ಲಿಸಿದ ವರದಿ ಆಧರಿಸಿ 7 ಅಧಿಕಾರಿಗಳನ್ನ ಅಮಾನತುಗೊಳಿಸಲಾಗಿದೆ. ಪ್ರಕರಣದಲ್ಲಿ ಪೊಲೀಸರು ಈಗಾಗಲೇ ಕೆಲವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ ಅವರನ್ನ ಪತ್ತೆ ಮಾಡಿ ಬಂಧಿಸಲು 17 ತಂಡಗಳನ್ನ ರಚಿಸಲಾಗಿದೆ ಎಂದು ಗೃಹ ಸಚಿವ ಹರ್ಷ ಸಾಂಘ್ವಿ (Harsh Sanghavi) ತಿಳಿಸಿದ್ದಾರೆ. ಇದನ್ನೂ ಓದಿ: ಅದಾನಿ ಗ್ರೂಪ್‌ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡದಂತೆ ಮೋದಿ, ರಾಹುಲ್‌ಗೆ ನಿರ್ದೇಶಿಸಿ: ಕೋರ್ಟ್‌ಗೆ ಅರ್ಜಿ ಸಲ್ಲಿಕೆ

    ಹೈಕೋರ್ಟ್‌ ತರಾಟೆ ಬಳಿಕ ಎಚ್ಚೆತ್ತ ಸರ್ಕಾರ:
    ರಾಜ್‌ಕೋಟ್‌ನ ಟಿಆರ್‌ಪಿ ಗೇಮಿಂಗ್ ಝೋನ್‌ನಲ್ಲಿ ಸಂಭವಿಸಿದ ಅಗ್ನಿಅವಘಡಕ್ಕೆ ಸಂಬಂಧಿಸಿದಂತೆ ಮುನ್ಸಿಪಲ್ ಕಾರ್ಪೊರೇಷನ್ ಅನ್ನು ಗುಜುರಾತ್ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ಅಧಿಕಾರಿಗಳ ನಿರ್ಲಕ್ಷ್ಯ ಆಡಳಿತ ಯಂತ್ರದ ಮೇಲಿನ ನಂಬಿಕೆಯನ್ನು ಪ್ರಶ್ನಿಸುವಂತಾಗಿದೆ ಎಂದು ಹೇಳಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾ. ಬಿರೇನ್ ವೈಷ್ಣವ್ ಮತ್ತು ನ್ಯಾ.ದೇವನ್ ದೇಸಾಯಿ ಅವರನ್ನೊಳಗೊಂಡ ವಿಶೇಷ ಪೀಠ, ಗೇಮಿಂಗ್ ವಲಯ ನಿರ್ವಾಹಕರು ರಾಜ್‌ಕೋಟ್ ಮುನ್ಸಿಪಲ್ ಕಾರ್ಪೊರೇಷನ್‌ನಿಂದ (Muncipal Corporation) ಕಡ್ಡಾಯ ಅನುಮತಿಗಳು ಮತ್ತು ಪರವಾನಗಿಗಳನ್ನು ತೆಗೆದುಕೊಂಡಿಲ್ಲ ಎಂದು ವರದಿಯಾಗಿದೆ. ಅಧಿಕಾರಿಗಳು ಏನು ನಿದ್ದೆ ಮಾಡುತ್ತಿದ್ದಾರ ಎಂದು ಖಾರವಾಗಿ ಪ್ರಶ್ನಿಸಿತ್ತು. ಕೋರ್ಟ್‌ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕೆಲವೇ ಗಂಟೆಗಳಲ್ಲಿ ಸರ್ಕಾರ 7 ಅಧಿಕಾರಿಗಳನ್ನ ಅಮಾನತುಗೊಳಿದೆ. ಇದನ್ನೂ ಓದಿ: ಮುಂಬೈ ತಾಜ್‌ ಹೋಟೆಲ್‌, ಏರ್‌ಪೋರ್ಟ್‌ಗೆ ಬಾಂಬ್‌ ಬೆದರಿಕೆ – ಉತ್ತರ ಪ್ರದೇಶದಲ್ಲಿ ಲೊಕೇಶನ್‌ ಪತ್ತೆ!

    ಡಿಎನ್‌ಎ ಮೂಲಕ ಗುರುತು ಪತ್ತೆ ಕಾರ್ಯ:
    ಅಗ್ನಿ ದುರಂತಕ್ಕೆ ಸಿಕ್ಕಿ ಸಜೀವ ಹೊಂದಿರುವವರ ಗುರುತನ್ನು ಡಿಎನ್‌ಎ ಮೂಲಕ ಪತ್ತೆ ಮಾಡುವ ಕಾರ್ಯಕ್ಕೆ ಸರ್ಕಾರ ಮುಂದಾಗಿದೆ. ಶನಿವಾರ ಸಂಭವಿಸಿದ ಬೆಂಕಿ ಅವಘಡದಲ್ಲಿ 7 ಅಪ್ರಾಪ್ತರು ಸೇರಿ 28 ಮಂದಿ ಸಾವನ್ನಪ್ಪಿದ್ದರು. ಈ ಪೈಕಿ ಒಬ್ಬರ ಮೃತದೇಹ ಮಾತ್ರ ನಾಪತ್ತೆಯಾಗಿದ್ದು, ಉಳಿದ ಮೃತದೇಹಗಳನ್ನ ಹೊರತೆಗೆಯಲಾಗಿದೆ. ಸೋಮವಾರವಾದ ಇಂದು ಟಿಆರ್‌ಪಿ ಗೇಮಿಂಗ್ ಝೋನ್ ಫೈರ್ ಸೈಟ್‌ನಿಂದ ಪತ್ತೆಯಾದ ಕನಿಷ್ಠ 5 ಸುಟ್ಟ ದೇಹಗಳ ಗುರುತುಗಳನ್ನು ಡಿಎನ್‌ಎ ಮೂಲಕ ದೃಢಪಡಿಸಲಾಗಿದೆ. ಉಳಿದ ಮಾದರಿಗಳ ಪರೀಕ್ಷೆ ನಡೆಯುತ್ತಿದ್ದು, ಶೀಘ್ರವೇ ಎಲ್ಲ ಮೃತ ದೇಹಗಳ ಗುರುತು ಪತ್ತೆಯಾಗಲಿದೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರಣಾಳಿಕೆ ಭರವಸೆಯಿಂದಾಗುವ ಆರ್ಥಿಕ ಲಾಭ ಅಭ್ಯರ್ಥಿಯ ಭ್ರಷ್ಟಾಚಾರವಲ್ಲ – ಜಮೀರ್‌ಗೆ ಸುಪ್ರೀಂ ರಿಲೀಫ್

  • ಗೇಮಿಂಗ್ ಝೋನ್‌ನಲ್ಲಿ ಅಗ್ನಿ ಅವಘಡ ಪ್ರಕರಣ – ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್

    ಗೇಮಿಂಗ್ ಝೋನ್‌ನಲ್ಲಿ ಅಗ್ನಿ ಅವಘಡ ಪ್ರಕರಣ – ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್

    ಅಹಮದಾಬಾದ್: ರಾಜ್‌ಕೋಟ್‌ನ (Rajkot) ಟಿಆರ್‌ಪಿ ಗೇಮಿಂಗ್ ಝೋನ್‌ನಲ್ಲಿ (Gaming Zone) ಸಂಭವಿಸಿದ ಅಗ್ನಿಅವಘಡಕ್ಕೆ (Fire Accident) ಸಂಬಂಧಿಸಿದಂತೆ ಮುನ್ಸಿಪಲ್ ಕಾರ್ಪೊರೇಷನ್ (Muncipal Corporation) ಅನ್ನು ಗುಜುರಾತ್ ಹೈಕೋರ್ಟ್ (Gujarat Highcourt) ತೀವ್ರ ತರಾಟೆಗೆ ತೆಗೆದುಕೊಂಡಿದೆ. ಅಧಿಕಾರಿಗಳ ನಿರ್ಲಕ್ಷ್ಯ ಆಡಳಿತ ಯಂತ್ರದ ಮೇಲಿನ ನಂಬಿಕೆಯನ್ನು ಪ್ರಶ್ನಿಸುವಂತಾಗಿದೆ ಎಂದು ಹೇಳಿದೆ.

    ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಬಿರೇನ್ ವೈಷ್ಣವ್ ಮತ್ತು ನ್ಯಾ.ದೇವನ್ ದೇಸಾಯಿ ಅವರನ್ನೊಳಗೊಂಡ ವಿಶೇಷ ಪೀಠ, ಗೇಮಿಂಗ್ ವಲಯ ನಿರ್ವಾಹಕರು ರಾಜ್‌ಕೋಟ್ ಮುನ್ಸಿಪಲ್ ಕಾರ್ಪೊರೇಷನ್‌ನಿಂದ ಕಡ್ಡಾಯ ಅನುಮತಿಗಳು ಮತ್ತು ಪರವಾನಗಿಗಳನ್ನು ತೆಗೆದುಕೊಂಡಿಲ್ಲ ಎಂದು ವರದಿಯಾಗಿದೆ. ಅಧಿಕಾರಿಗಳು ಏನು ನಿದ್ದೆ ಮಾಡುತ್ತಿದ್ದಾರ ಎಂದು ಖಾರವಾಗಿ ಪ್ರಶ್ನಿಸಿದೆ. ಇದನ್ನೂ ಓದಿ: ನಕ್ಸಲರಿಂದ ನಿರಂತರ ಬೆದರಿಕೆ- ಪದ್ಮಶ್ರೀ ಹಿಂದಿರುಗಿಸಲು ಹೇಮಚಂದ್ ಮಾಂಝಿ ನಿರ್ಧಾರ

    ನಮ್ಮ ಆದೇಶದ ನಾಲ್ಕು ವರ್ಷಗಳ ನಂತರವೂ ಅಗ್ನಿ ಸುರಕ್ಷತೆಯ ವಿಷಯದಲ್ಲಿ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಆರ್‌ಎಂಸಿ ಹೇಗೆ ಹೊಣೆಯಾಗುವುದಿಲ್ಲ? ಇದಕ್ಕೆ ಅಧಿಕಾರಿಗಳು ಹೊಣೆ. ಈ ಬಗ್ಗೆ ಪರಿಶೀಲನೆ ನಡೆಯದಿರುವುದು ಯಾರ ತಪ್ಪು ಎಂದು ಆಕ್ರೋಶ ವ್ಯಕ್ತಪಡಿಸಿತು. ಇದನ್ನೂ ಓದಿ: ಇವಿಎಂ ಯಂತ್ರಗಳು ಏನು ಆಗದೇ ಹೋದರೆ ಸರಿ, ಜನ ನಮ್ಮ ಪರವಾಗಿದ್ದಾರೆ: ಡಿಕೆಶಿ

    ಗೇಮಿಂಗ್ ಝೋನ್‌ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಒಂಭತ್ತು ಮಕ್ಕಳು ಸೇರಿ 28 ಮಂದಿ ಸಾವನ್ನಪ್ಪಿದ್ದರು. ಘಟನೆ ಬಳಿಕ ಮಾಲೀಕ ಸೇರಿ ಮೂವರನ್ನು ಬಂಧಿಸಲಾಗಿತ್ತು. ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿದ ಆರು ಅಧಿಕಾರಿಗಳನ್ನು ಅಮಾನತುಗೊಳಿಸಿ ಗುಜರಾತ್ ಸರ್ಕಾರ ಸೋಮವಾರ ಆದೇಶ ಹೊರಡಿಸಿತ್ತು. ಇದನ್ನೂ ಓದಿ:  ಶಾರ್ಟ್‌ಸರ್ಕ್ಯೂಟ್‌ನಿಂದ ಎಲೆಕ್ಟ್ರಿಕ್‌ ಚಾರ್ಜಿಂಗ್ ಬ್ಯಾಟರಿ ಅಂಗಡಿ ಧಗಧಗ

  • ಶಾರ್ಟ್‌ಸರ್ಕ್ಯೂಟ್‌ನಿಂದ ಎಲೆಕ್ಟ್ರಿಕ್‌ ಚಾರ್ಜಿಂಗ್ ಬ್ಯಾಟರಿ ಅಂಗಡಿ ಧಗಧಗ

    ಶಾರ್ಟ್‌ಸರ್ಕ್ಯೂಟ್‌ನಿಂದ ಎಲೆಕ್ಟ್ರಿಕ್‌ ಚಾರ್ಜಿಂಗ್ ಬ್ಯಾಟರಿ ಅಂಗಡಿ ಧಗಧಗ

    – ಬೆಂಕಿ ಕೆನ್ನಾಲಿಗೆಗೆ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ನಾಶ

    ರಾಯಚೂರು: ನಗರದ ಮಹಾವೀರ ಚೌಕ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ (Short Circuit Fire) ಎಲೆಕ್ಟ್ರಿಕ್‌ ಚಾರ್ಜಿಂಗ್ ಬ್ಯಾಟರಿ (Electric Charging Battery) ಅಂಗಡಿಗೆ ಬೆಂಕಿ ತಗುಲಿದ್ದು, ಬೆಂಕಿಯ ಕೆನ್ನಾಲಿಗೆಗೆ ಅಂಗಡಿಯಲ್ಲಿನ ವಸ್ತುಗಳು ಸುಟ್ಟು ಭಸ್ಮವಾಗಿವೆ.

    ರಾಯಚೂರಿನ (Raichur) ಆರ್.ಕೆ ಭಂಡಾರಿ ‌ಎಂಬುವವರಿಗೆ ಸೇರಿದ ಅಂಗಡಿಗೆ ಬೆಂಕಿ ತಗುಲಿದ್ದು ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ. ಇದನ್ನೂ ಓದಿ: ಹನುಮಾನ್ ಚಾಲೀಸಾ ಹಾಕಲು ಅನುಮತಿ ಇಲ್ಲ, ರಸ್ತೆಯಲ್ಲಿ ನಮಾಜ್‌ ಮಾಡಲು ಅನುಮತಿ ಬೇಕಿಲ್ಲ: ಬಿಜೆಪಿ ಕಿಡಿ

    ಅದೃಷ್ಟವಶಾತ್ ಅಂಗಡಿಯಲ್ಲಿದ್ದ ಕೆಲಸಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಭಾರೀ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡಿದ್ದರಿಂದ ಬೆಂಕಿ ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ಇದನ್ನೂ ಓದಿ: ಪ್ರಜಾಪ್ರಭುತ್ವ, ಜಾತ್ಯತೀತ ತತ್ವದಲ್ಲಿ ದೇಶದ ಅಭಿವೃದ್ಧಿಗೆ ಅಡಿಪಾಯ ಹಾಕಿದ್ದು ನೆಹರೂ – ಸಿದ್ದರಾಮಯ್ಯ

    ಮೂರು ಅಂತಸ್ತಿನ ಕಟ್ಟಡಕ್ಕೆ ಬೆಂಕಿ ಆವರಿಸಿದ್ದು ಸುತ್ತಮುತ್ತಲಿನ ಅಂಗಡಿಗಳ ವ್ಯಾಪಾರಸ್ಥರು ಸಹ ಆತಂಕಕ್ಕೆ ಒಳಗಾಗಿದ್ದರು. ಈ ಸಂಬಂಧ ಸದರ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ತೀರ್ಥಯಾತ್ರೆ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಬಸ್‌ ಬೆಂಕಿಗಾಹುತಿ – 9 ಮಂದಿ ಭಕ್ತರು ಸಜೀವ ದಹನ!

    ತೀರ್ಥಯಾತ್ರೆ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಬಸ್‌ ಬೆಂಕಿಗಾಹುತಿ – 9 ಮಂದಿ ಭಕ್ತರು ಸಜೀವ ದಹನ!

    ಚಂಡಿಗಢ: ಹರಿಯಾಣದ ಕುಂಡಲಿ-ಮನೇಸರ್-ಪಲ್ವಾಲ್ ಎಕ್ಸ್‌ಪ್ರೆಸ್‌ ವೇನಲ್ಲಿ (Kundali Manesar Palwal Expressway) ನಡೆದ ಭೀಕರ ಅಗ್ನಿ ಅವಘಡದಲ್ಲಿ 9 ಮಂದಿ ಭಕ್ತರು ಸಜೀವ ದಹನವಾಗಿರುವ ಘಟನೆ ಶನಿವಾರ (ಇಂದು) ನಸುಕಿನ ಜಾವದಲ್ಲಿ ನಡೆದಿದೆ.

    9 ಮಂದಿ ಭಕ್ತರು ಸಜೀವ ದಹನ ಹೊಂದಿದ್ದು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಉತ್ತರ ಪ್ರದೇಶದ ಮಥುರಾ ಮತ್ತು ವೃಂದಾವನಕ್ಕೆ ತೀರ್ಥಯಾತ್ರೆಯಿಂದ (Pilgrimage) ಕೈಗೊಂಡು ಹಿಂದಿರುಗುತ್ತಿದ್ದಾಗ ನುಹ್‌ ಪ್ರದೇಶದ ಬಳಿ ಬಸ್‌ನಲ್ಲಿ ಬೆಂಕಿ (Bus Fire) ಕಾಣಿಸಿಕೊಂಡು ಭಕ್ತರು ಸುಟ್ಟು ಕರಕಲಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

    ಬಸ್‌ನಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಒಂದೇ ಕುಟುಂಬದ 60ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು. ಇವರೆಲ್ಲರೂ ಪಂಜಾಬ್‌ ಮೂಲದವರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಮೊದಲ ಬಾರಿಗೆ ED ಜಾಹೀರಾತು ನೋಡುತ್ತಿದ್ದೇವೆ: ಬಾಂದ್ರಾ-ವರ್ಲಿ ಸೀ ಲಿಂಕ್ ಉದಾಹರಿಸಿ ರಶ್ಮಿಕಾಗೆ ಕೇರಳ ಕಾಂಗ್ರೆಸ್‌ ತಿರುಗೇಟು

    ನಾವು 10 ದಿನಗಳ ಕಾಲ ಪವಿತ್ರ ಕ್ಷೇತ್ರಗಳಿಗೆ ತೀರ್ಥಯಾತ್ರೆ ಕೈಗೊಂಡಿದ್ದು, ಅದಕ್ಕಾಗಿ ಬಾಡಿಗೆ ಬಸ್‌ ಪಡೆದಿದ್ದವು. ಶನಿವಾರ ನಸುಕಿನ ಜಾವ 1.30ರ ಸುಮಾರಿಗೆ ಮನೆಗೆ ಮರಳುತ್ತಿದ್ದ ವೇಳೆ ಬಸ್‌ನ ಹಿಂಭಾಗದಲ್ಲಿ ಬೆಂಕಿಯ ಕಿಡಿ ಹತ್ತಿಕೊಂಡಿರುವುದು ಗಮನಿಸಿ ಚಾಲಕನನ್ನು ಎಚ್ಚರಿಸಲು ಪ್ರಯತ್ನಿಸಿದ್ದೆವು. ಆದರೆ ಅಷ್ಟರಲ್ಲಿ ಅವಘಡ ಸಂಭವಿಸಿತು ಎಂದು ಬದುಕುಳಿದವರು ತಿಳಿಸಿದ್ದಾರೆ.

    ಹೆಚ್ಚುತ್ತಿರುವ ಬೆಂಕಿಯನ್ನು ನೋಡಿದ ಬೈಕ್ ಸವಾರನೊಬ್ಬ ಬಸ್ ಅನ್ನು ಹಿಂಬಾಲಿಸಿ ನಿಲ್ಲಿಸಲು ಚಾಲಕನಿಗೆ ಎಚ್ಚರಿಕೆ ನೀಡಿದ್ದ. ಬಳಿಕ ಸ್ಥಳೀಯರು ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರು. ಬಸ್‌ನ ಮುಂಭಾಗದಲ್ಲಿದ್ದ ಹಲವರನ್ನು ರಕ್ಷಿಸಲಾಯಿತು. ಬೆಂಕಿ ಕಾಣಿಸಿಕೊಳ್ಳಲಿರುವ ಕಾರಣ ಇನ್ನೂ ಪತ್ತೆಯಾಗಿಲ್ಲ. ಘಟನೆ ಬಗ್ಗೆ ತನಿಖೆ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಇದೇ ವೇಳೆ ಬಸ್ ಸಂಪೂರ್ಣ ಸುಟ್ಟು ಕರಕಲಾದ 3 ಗಂಟೆಗಳ ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಿಮಿಸಿದ್ದಾರೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಸ್ವಾತಿ ಆರೋಪ ಸುಳ್ಳು – ಮಲಿವಾಲ್‌ ಸಿಎಂ ಮನೆಗೆ ಕಳುಹಿಸಿದ್ದೇ ಬಿಜೆಪಿ: ಸಚಿವೆ ಅತಿಶಿ ತಿರುಗೇಟು!

  • ವಿದ್ಯುತ್ ಪ್ರಸರಣ ಘಟಕದಲ್ಲಿ ಬೆಂಕಿ – ನೋಡನೋಡುತ್ತಲೇ ಮುಗಿಲೆತ್ತರಕ್ಕೆ ವ್ಯಾಪಿಸಿದ ಅಗ್ನಿ

    ವಿದ್ಯುತ್ ಪ್ರಸರಣ ಘಟಕದಲ್ಲಿ ಬೆಂಕಿ – ನೋಡನೋಡುತ್ತಲೇ ಮುಗಿಲೆತ್ತರಕ್ಕೆ ವ್ಯಾಪಿಸಿದ ಅಗ್ನಿ

    ರಾಯ್ಪುರ: ಛತ್ತೀಸ್‌ಗಢದ ಗುಧಿಯಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಭಾರತ್ ಮಾತಾ ಚೌಕ್ ಬಳಿಯಿರುವ ವಿದ್ಯುತ್ ಪ್ರಸರಣ ಘಟಕದಲ್ಲಿ ಅಗ್ನಿ ಅವಘಡವೊಂದು ಸಂಭವಿಸಿದೆ. ನೋಡು ನೋಡುತ್ತಲೇ ಬೆಂಕಿಯ ಕೆನ್ನಾಲಿಗೆ ಮುಗಿಲೆತ್ತರಕ್ಕೆ ವ್ಯಾಪಿಸಿದೆ.

    ಮಾಹಿತಿ ಪ್ರಕಾರ, ಗೋದಾಮಿನಲ್ಲಿಟ್ಟಿದ್ದ 1,500 ಟ್ರಾನ್ಸ್ ಫಾರ್ಮರ್ ಗಳು ಸುಟ್ಟು ಭಸ್ಮವಾಗಿವೆ. ಗೋದಾಮಿನಲ್ಲಿ ಸುಮಾರು 6,000 ಪರಿವರ್ತಕಗಳನ್ನು ಇರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಇದರಿಂದ ವಿದ್ಯುತ್ ಇಲಾಖೆ ಕಚೇರಿಯಲ್ಲಿ ಬೆಂಕಿ ಕಾಣಿಸಿಕೊಂಡು ಸುತ್ತಮುತ್ತಲಿನ ಪ್ರದೇಶದಲ್ಲಿ ಅಸ್ತವ್ಯಸ್ತವಾಗಿದೆ. ಸುತ್ತಮುತ್ತಲ ಪ್ರದೇಶದಲ್ಲಿ ವಾಸಿಸುವ ಜನರು ಮನೆ ಖಾಲಿ ಮಾಡುತ್ತಿದ್ದಾರೆ. ಸ್ಥಳದಲ್ಲಿ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

    ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆಯೇ ಅದರ ಕೆನ್ನಾಲಿಗೆ ಎಲ್ಲಾ ಕಡೆ ವ್ಯಾಪಿಸಿದೆ. ಬೆಂಕಿ ಹೆಚ್ಚುತ್ತಿರುವುದನ್ನು ಕಂಡ ಸ್ಥಳೀಯರು ಅಗ್ನಿಶಾಮಕ ದಳ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆಯೇ ನಾಲ್ಕು ಅಗ್ನಿಶಾಮಕ ವಾಹನಗಳು ಆಗಮಿಸಿ ಬೆಂಕಿ ನಂದಿಸುತ್ತಿವೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ. ಇದನ್ನೂ ಓದಿ: ಉತ್ತರ ಗೆದ್ದರೆ ಡೆಲ್ಲಿ ಗೆದ್ದಂತೆ! -ಯಾಕೆ ಉತ್ತರ ಪ್ರದೇಶಕ್ಕೆ ಇಷ್ಟೊಂದು ಮಹತ್ವ?

    ಈ ಸಂಬಂಧ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ವಿದ್ಯುತ್ ಇಲಾಖೆಯ ಉಪವಿಭಾಗ ಕಚೇರಿಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ವಿದ್ಯುತ್ ಪೂರೈಕೆ ಸಂಪೂರ್ಣ ವ್ಯತ್ಯಯವಾಗಿದೆ. ಇಲಾಖಾ ಕಚೇರಿಯಲ್ಲಿ ಬೆಂಕಿ ಕಾಣಿಸಿಕೊಂಡ ಸುದ್ದಿ ತಿಳಿಯುತ್ತಿದ್ದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಟ್ರಾನ್ಸ್‌ಫಾರ್ಮರ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ.