Tag: ಅಗ್ನಿ ಅವಘಡ

  • Maharashtra | ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಅವಘಡ – ನಾಲ್ವರು ಸಾವು, 10 ಮಂದಿಗೆ ಗಾಯ

    Maharashtra | ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಅವಘಡ – ನಾಲ್ವರು ಸಾವು, 10 ಮಂದಿಗೆ ಗಾಯ

    ಮುಂಬೈ: ಮಹಾರಾಷ್ಟ್ರದ (Maharshtra) ನವಿ ಮುಂಬೈ (Navi Mumbai) ಟೌನ್‌ಶಿಪ್‌ನಲ್ಲಿರುವ ಬಹುಮಹಡಿ ವಸತಿ ಕಟ್ಟಡದಲ್ಲಿ ಸೋಮವಾರ ತಡರಾತ್ರಿ ಬೆಂಕಿ ಅವಘಡ ಸಂಭವಿಸಿದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, 10 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ವಾಶಿ ಪ್ರದೇಶದ ಸೆಕ್ಟರ್ 14ರಲ್ಲಿರುವ ರಹೇಜಾ ರೆಸಿಡೆನ್ಸಿಯ ಎಂಜಿಎಂ ಕಾಂಪ್ಲೆಕ್ಸ್‌ನ 10ನೇ ಫ್ಲೋರ್‌ನಲ್ಲಿರುವ ಫ್ಲಾಟ್‌ನಲ್ಲಿ ಸೋಮವಾರ ಮಧ್ಯರಾತ್ರಿ 12:30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಕೆನ್ನಾಲಿಗೆ 11 ಮತ್ತು 12ನೇ ಮಹಡಿಗೂ ಹರಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಡ್ರೆಸ್ಸಿಂಗ್‌ ರೂಮಿನಲ್ಲಿ ಇಸ್ಲಾಂ ಪ್ರಚಾರ ಮಾಡಿದ್ದಕ್ಕೆ ಕ್ಯಾಪ್ಟನ್ಸಿಯಿಂದ ರಿಜ್ವಾನ್‌ ಔಟ್‌!

    ಬೆಂಕಿ ಅವಘಡದಲ್ಲಿ ಇಬ್ಬರು ಮಹಿಳೆಯರು, ಒಬ್ಬ ಪುರುಷ ಮತ್ತು 6 ವರ್ಷದ ಬಾಲಕಿ ಸಾವನ್ನಪ್ಪಿದ್ದು, 10 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ವಾಶಿಯ ಎರಡು ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಇದನ್ನೂ ಓದಿ: ಇಂದಿನಿಂದ ನಾಲ್ಕು ದಿನ ರಾಷ್ಟ್ರಪತಿ ದ್ರೌಪದಿ ಮುರ್ಮು ಕೇರಳ ಪ್ರವಾಸ

    ಬೆಂಕಿ ಅವಘಡದ ಕುರಿತು ಮಾಹಿತಿ ದೊರೆಯುತ್ತಿದ್ದಂತೆ 40 ಅಗ್ನಿಶಾಮಕ ದಳದ ಸಿಬ್ಬಂದಿ, 8 ಅಗ್ನಿಶಾಮಕ ದಳ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದರು. ಮಂಗಳವಾರ ಬೆಳಗ್ಗೆ 4 ಗಂಟೆಯ ಸುಮಾರಿಗೆ ಬೆಂಕಿಯನ್ನು ನಂದಿಸುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಅಗ್ನಿ ಅವಘಡಕ್ಕೆ ಕಾರಣ ಏನು ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ಇದನ್ನೂ ಓದಿ: ಪಟಾಕಿ ಸಿಡಿಸಲು ಹೋಗಿ ಅನಾಹುತ – ನಾರಾಯಣ ನೇತ್ರಾಲಯದಲ್ಲಿ 20 ಕೇಸ್ ದಾಖಲು

  • ಯಲಹಂಕ ಲಾಡ್ಜ್‌ನಲ್ಲಿ ಅಗ್ನಿ ದುರಂತ – ಪೆಟ್ರೋಲ್ ಸುರಿದುಕೊಂಡು ಪ್ರೇಮಿಗಳ ಆತ್ಮಹತ್ಯೆ

    ಯಲಹಂಕ ಲಾಡ್ಜ್‌ನಲ್ಲಿ ಅಗ್ನಿ ದುರಂತ – ಪೆಟ್ರೋಲ್ ಸುರಿದುಕೊಂಡು ಪ್ರೇಮಿಗಳ ಆತ್ಮಹತ್ಯೆ

    – ಮನೆಯಲ್ಲಿ ಪ್ರೀತಿಗೆ ಒಪ್ಪದಿದ್ದಕ್ಕೆ ಲಾಡ್ಜ್‌ನಲ್ಲಿ ಆತ್ಮಹತ್ಯೆ

    ಬೆಂಗಳೂರು: ಇಲ್ಲಿನ ಯಲಹಂಕ ನ್ಯೂ ಟೌನ್ (Yelahanka Lodge New Town) ವ್ಯಾಪ್ತಿಯಲ್ಲಿಂದು ಮಧ್ಯಾಹ್ನ ನಡೆದ ದಾರುಣ ಘಟನೆಯೊಂದು ನಡೆದಿದೆ. ಪ್ರೇಮಿಗಳಿಬ್ಬರು ಲಾಡ್ಜ್‌ನಲ್ಲಿ ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆಗೆ ಶರಣಾದ ಪರಿಣಾಮ ರೆಸ್ಟೋರೆಂಟ್‌ನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಪ್ರೇಮಿಗಳು (Lovers) ಸಜೀವ ದಹನವಾಗಿದ್ದಾರೆ. ಘಟನೆ ಸ್ಥಳೀಯರನ್ನ ಬೆಚ್ಚಿ ಬೀಳುವಂತೆ ಮಾಡಿದೆ.

    ಪ್ರೀತಿಗೆ ಮನೆಯವರ ವಿರೋಧ
    ಅಗ್ನಿ ದುರಂತದಲ್ಲಿ ಮೃತಪಟ್ಟ ಪ್ರೇಮಿಗಳಿಬ್ಬರು ಕೆಲಸ ಮಾಡ್ತಿದ್ದರು. ಯುವಕ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮತ್ತು ಯುವತಿ ಸ್ಪಾ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದಳು ಎನ್ನಲಾಗಿದೆ. ಇವರಿಬ್ಬರಿಗೂ ಹಲವು ವರ್ಷಗಳಿಂದ ಪ್ರೇಮ ಸಂಬಂಧವಿತ್ತು. ಆದರೆ ಮನೆಯವರಿಂದ ಈ ಸಂಬಂಧಕ್ಕೆ ಒಪ್ಪಿಗೆ ಸಿಗದ ಹಿನ್ನೆಲೆ ಸಾವಿನ ನಿರ್ಧಾರ ಕೈಗೊಂಡರು ಎಂದು ಪ್ರಾಥಮಿಕ ಮೂಲಗಳಿಂದ ತಿಳಿದುಬಂದಿದೆ.

    ಇಂದು ಮಧ್ಯಾಹ್ನ ಇಬ್ಬರೂ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣಾ (Yelahanka New Town Police Station) ವ್ಯಾಪ್ತಿಯಲ್ಲಿರುವ ಕಿಚನ್-6 ಫ್ಯಾಮಿಲಿ ರೆಸ್ಟೋರೆಂಟ್ ಕಟ್ಟಡದ ಮೂರನೇ ಮಹಡಿಯಲ್ಲಿರುವ ಲಾಡ್ಜ್‌ಗೆ ಬಂದಿದ್ದರು. ಲಾಡ್ಜ್‌ನಲ್ಲಿ ಕೊಠಡಿ ಪಡೆದ ಕೆಲವೇ ಸಮಯದಲ್ಲಿ, ಪೆಟ್ರೋಲ್ ತಂದು ತಮ್ಮ ಮೈ ಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ಬೆಂಕಿ ಹೊತ್ತಿಕೊಂಡ ತಕ್ಷಣ ಯುವಕ ಮತ್ತು ಯುವತಿ ಚೀರಾಡಿದ ಧ್ವನಿ ಕೇಳಿ ಲಾಡ್ಜ್ ಸಿಬ್ಬಂದಿ ದೌಡಾಯಿಸಿದ್ದಾರೆ. ತಕ್ಷಣ ಅಲ್ಲಿನ ಸಿಬ್ಬಂದಿ ಅಗ್ನಿಶಾಮಕ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

    ನಂತರ ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ.

    ಉಸಿರುಗಟ್ಟಿ ಯುವತಿ ಸಾವು
    ಸದ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿರುವ ಯಲಹಂಕ ನ್ಯೂ ಟೌನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ನಡೆದ ವೇಳೆ ರಮೇಶ್ ಸುಟ್ಟಗಾಯಗಳಿಂದ ಸಾವನ್ನಪ್ಪಿದ್ದು, ಯುವತಿ ಕಾವೇರಿ ಉಸಿರುಗಟ್ಡಿ ಸಾವನ್ನಪ್ಪಿರೋದು ಗೊತ್ತಾಗಿದೆ. ಇವರಿಬ್ಬರು ಪ್ರೇಮಿಗಳು ಅನ್ನೋ ಶಂಕೆ ಕೂಡ ವ್ಯಕ್ತವಾಗಿದೆ. ಇಬ್ಬರ ನಡುವೆ ಜಗಳ ನಡೆದು ರಮೇಶ್ ಪೆಟ್ರೋಲ್ ಸುರಿದುಕೊಂಡು ಯುವತಿಗೂ ಪೆಟ್ರೋಲ್ ಸುರಿಯೋಕೆ ಯತ್ನಿಸಿದ್ದಾನೆ.

    ಈ ವೇಳೆ ಯುವತಿ ಬಾತ್ ರೂಂ ಒಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾರೆ. ಆಗ ರಮೇಶ್ ತಾನು ಬೆಂಕಿ ಹಚ್ಚಿಕೊಂಡು ಬಾತ್ ರೂಂ ಬಾಗಿಲಿಗೂ ಪೆಟ್ರೋಲ್ ಸುರಿದು ಬೆಂಕಿ‌ಹಾಕಿದ್ದಾನೆ. ಅದರಿಂದಲೇ ಲಾಡ್ಜ್ ಪೂರ್ತಿ ಬೆಂಕಿ ಅವರಿಸಿಕೊಂಡಿದೆ ಅನ್ನೋ ಶಂಕೆ ವ್ಯಕ್ತವಾಗಿದೆ. ಸದ್ಯ ಯಲಹಂಕ ನ್ಯೂ ಟೌನ್ ಪೊಲೀಸರು ತನಿಖೆ ಕೈಗೊಂಡಿದ್ದು, ಇದು ಆತ್ಮಹತ್ಯೆ ನಾ ಅಥವಾ ಬೆಂಕಿಯ ಅವಘಡ ದಿಂದ ನಡೆದಿದ್ಯಾ ಅನ್ನೋದು ಗೊತ್ತಾಗಬೇಕಿದೆ.

  • ನೆಲಮಂಗಲ | ಬೆಳ್ಳಂಬೆಳಗ್ಗೆ ಈರುಳ್ಳಿ ತುಂಬಿದ್ದ ಲಾರಿ ಬೆಂಕಿಗಾಹುತಿ

    ನೆಲಮಂಗಲ | ಬೆಳ್ಳಂಬೆಳಗ್ಗೆ ಈರುಳ್ಳಿ ತುಂಬಿದ್ದ ಲಾರಿ ಬೆಂಕಿಗಾಹುತಿ

    ನೆಲಮಂಗಲ: ಲಾರಿಯ ಇಂಜಿನ್‌ನಲ್ಲಿ ಉಂಟಾದ ಶಾರ್ಟ್‌ಸರ್ಕ್ಯೂಟ್‌ನಿಂದಾಗಿ ಮಾರುಕಟ್ಟೆಗೆ ಹೊರಟಿದ್ದ ಈರುಳ್ಳಿ ತುಂಬಿದ್ದ ಲಾರಿ ಬೆಂಕಿಗಾಹುತಿಯಾಗಿರುವ ಘಟನೆ ಬೆಂಗಳೂರು (Bengaluru) ಹೊರವಲಯದ ನೆಲಮಂಗಲ (Nelmangala) ತಾಲೂಕಿನ ಬೂದಿಹಾಳ್ (Budihal Gate) ಗೇಟ್ ಬಳಿ ನಡೆದಿದೆ.

    ಶನಿವಾರ (ಅ.4) ಬೆಳಗ್ಗೆ ಈರುಳ್ಳಿ ತುಂಬಿದ್ದ ಲಾರಿ ಚಿತ್ರದುರ್ಗದಿಂದ ನೆಲಮಂಗಲದ ದಾಸನಪುರ ಎಪಿಎಂಸಿಗೆ ಬರುತ್ತಿತ್ತು. ಈ ವೇಳೆ ಮಾರ್ಗಮಧ್ಯೆ ಲಾರಿಯ ಇಂಜಿನ್‌ನಲ್ಲಿ ಶಾರ್ಟ್‌ಸರ್ಕ್ಯೂಟ್‌ ಉಂಟಾಗಿ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮ ಲಕ್ಷಾಂತರ ಮೌಲ್ಯದ ಈರುಳ್ಳಿ ಬೆಂಕಿಗಾಹುತಿಯಾಗಿದೆ.ಇದನ್ನೂ ಓದಿ: ಬೆಳಗಾವಿ | ಕಲ್ಲು ತೂರಾಟಕ್ಕೆ ಹಿಂದೂ ಯುವಕರ ಕೌಂಟರ್ – `ಐ ಲವ್ ಶ್ರೀರಾಮ್‌’ ಫಲಕ ಅಳವಡಿಕೆ

    ಈರುಳ್ಳಿ ನಾಶದಿಂದ ರೈತ ಕಂಗಾಲಾಗಿದ್ದು, ಲಾರಿಯ ಚಾಲಕ ಹಾಗೂ ಕ್ಲೀನರ್ ಪ್ರಾಣಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ನೆಲಮಂಗಲ ಟ್ರಾಫಿಕ್ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸದ್ಯ ಈ ಸಂಬಂಧ ಪ್ರಕರಣ ದಾಖಲಾಗಿದೆ.

  • ವಿಜಯದಶಮಿ ದಿನವೇ ಬೆಂಗ್ಳೂರಲ್ಲಿ ಅಗ್ನಿ ಅವಘಡ – ಸುಟ್ಟು ಕರಕಲಾದ 19 ಇವಿ ಬೈಕ್‌ಗಳು

    ವಿಜಯದಶಮಿ ದಿನವೇ ಬೆಂಗ್ಳೂರಲ್ಲಿ ಅಗ್ನಿ ಅವಘಡ – ಸುಟ್ಟು ಕರಕಲಾದ 19 ಇವಿ ಬೈಕ್‌ಗಳು

    ಬೆಂಗಳೂರು: ವಿಜಯದಶಮಿ ದಿನವೇ ಸಿಲಿಕಾನ್ ಸಿಟಿಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಯಲಚೇನಹಳ್ಳಿಯ (Yelachenahalli) ಕಮರ್ಷಿಯಲ್ ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 19 ಇವಿ ಬೈಕ್‌ಗಳು ಸುಟ್ಟು ಕರಕಲಾಗಿವೆ.

    ಕನಕಪುರ ಮುಖ್ಯರಸ್ತೆಯಲ್ಲಿರುವ ಮೂರಂತಸ್ತಿನ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಟ್ಟಡದ ಬೇಸ್ಮೆಂಟ್‌ನಲ್ಲಿದ್ದ ಇವಿ ಬೈಕ್ ಚಾರ್ಜಿಂಗ್ ಪಾಯಿಂಟ್ ಓವರ್ ಹೀಟ್ ಆಗಿದ್ದು, ಪರಿಣಾಮ ಅಲ್ಲಿದ್ದ ಬೈಕ್‌ಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಜೊತೆಗೆ ಬೆಂಕಿ ಕೆನ್ನಾಲಿಗೆಗೆ ಸಿಲುಕಿ ಆರು ಸಿಲಿಂಡರ್‌ಗಳ ಗ್ಯಾಸ್ ಸೋರಿಕೆಯಾಗಿದ್ದು, ಒಂದು ಸಿಲಿಂಡರ್ ಬ್ಲಾಸ್ಟ್ ಆಗಿದೆ.ಇದನ್ನೂ ಓದಿ: ಕಾಂತಾರ ಚಾಪ್ಟರ್ 1 ವಿಶ್ವದಾದ್ಯಂತ ಇಂದು ರಿಲೀಸ್

    ಸದ್ಯ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಜೊತೆಗೆ ಕುಮಾರಸ್ವಾಮಿ ಲೇಔಟ್ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

  • 75 ಮಂದಿ ಪ್ರಯಾಣಿಕರಿದ್ದ BMTC ಬಸ್‌ನಲ್ಲಿ ಭಾರೀ ಬೆಂಕಿ – ಬಸ್‌ ಸುಟ್ಟು ಕರಕಲು

    75 ಮಂದಿ ಪ್ರಯಾಣಿಕರಿದ್ದ BMTC ಬಸ್‌ನಲ್ಲಿ ಭಾರೀ ಬೆಂಕಿ – ಬಸ್‌ ಸುಟ್ಟು ಕರಕಲು

    – ಬೆಳ್ಳಂಬೆಳಗ್ಗೆಯೇ ಅಗ್ನಿ ಅವಘಡ

    ಬೆಂಗಳೂರು: ಚಲಿಸುತ್ತಿದ್ದ ಬಿಎಂಟಿಸಿ ಬಸ್‌ನಲ್ಲಿ ಏಕಾಏಕಿ ಬೆಂಕಿ (BMTC Bus Fire) ಕಾಣಿಸಿಕೊಂಡು, ಬಸ್‌ ಸುಟ್ಟು ಕರಕಲಾಗಿರುವ ಘಟನೆ ನಗರದ ಹೆಚ್ಎಎಲ್ (HAL) ಮುಖ್ಯದ್ವಾರದ ಬಳಿ ನಡೆದಿದೆ.

    ಬೆಳಗ್ಗಿನ ಜಾವ 5:10ಕ್ಕೆ ಅಗ್ನಿ ದುರಂತ ಸಂಭವಿಸಿದೆ. ದುರಂತಕ್ಕೀಡಾದ ಬಸ್‌ (ಸಂಖ್ಯೆ KA57 F 4568) ಮೆಜೆಸ್ಟಿಕ್‌ನಿಂದ ಕಾಡುಗೋಡಿಗೆ ತೆರಳುತ್ತಿತ್ತು. ಈ ಬಸ್‌ನಲ್ಲಿ ಸುಮಾರು 75 ಮಂದಿ ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಬೈಪಾಸ್ ಗಣೇಶ ವಿಸರ್ಜನೆ ವೀಕ್ಷಿಸಲು ಹೊರಟವರ ಕಾರು ಅಪಘಾತ – ಇಬ್ಬರು ಸಾವು

    ಬಸ್‌ ಚಲಿಸುತ್ತಿದ್ದಂತೆ ಎಂಜಿನ್‌ನಲ್ಲಿ ಹೊಗೆ ಕಾಣಿಸಿಕೊಂಡಿದೆ. ಇದರಿಂದ ಎಚ್ಚೆತ್ತ ಚಾಲಕ, ನಿರ್ವಾಹಕರು ತಕ್ಷಣ ಪ್ರಯಾಣಿಕರನ್ನ ಕೆಳಗಿಳಿಸಿದ್ದಾರೆ. ಕ್ರಮೇಣ ಭಾರೀ ಪ್ರಮಾಣದ ಬೆಂಕಿ ಕಾಣಿಸಿಕೊಂಡು ಬಸ್‌ ಧಗಧಗಿಸಿದೆ. ಚಾಲಕನ ಸಮಯಪ್ರಜ್ಷೆಯಿಂದ 75 ಪ್ರಯಾಣಿಕರು ಸೇಫ್‌ ಆಗಿದ್ದಾರೆ. ಇದನ್ನೂ ಓದಿ: ಅಪ್ಪ-ಅಮ್ಮನ ಜಗಳಕ್ಕೆ ಮಕ್ಕಳು ಬಲಿ; ತಂದೆ ನೇಣಿಗೆ ಶರಣು, ಪ್ರಾಣಪಾಯದಿಂದ ತಾಯಿ ಪಾರು

    ಬಳಿಕ ಹೆಚ್ಎಲ್ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಹೆಚ್ಎಎಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸದ್ಯ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಎಂಟಿಸಿ ಬೆಂಕಿ ಕಾಣಿಸಿಕೊಳ್ಳಲು ಕಾರಣ ಪತ್ತೆ ಹಚ್ಚಲು ಮುಂದಾಗಿದೆ. ಇದನ್ನೂ ಓದಿ: ಥಾಯ್ಲೆಂಡ್‌ನಲ್ಲಿ ಝೂ ಸಿಬ್ಬಂದಿಯನ್ನೇ ಕೊಂದು ತಿಂದ ಸಿಂಹಪಡೆ

  • ಆಯಿಲ್ ಕಾರ್ಖಾನೆಯಲ್ಲಿ ಭಾರೀ ಅಗ್ನಿ ಅವಘಡ – ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಬೆಂಕಿಗಾಹುತಿ

    ಆಯಿಲ್ ಕಾರ್ಖಾನೆಯಲ್ಲಿ ಭಾರೀ ಅಗ್ನಿ ಅವಘಡ – ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಬೆಂಕಿಗಾಹುತಿ

    ಆನೇಕಲ್: ಆಯಿಲ್ ಕಾರ್ಖಾನೆಯಲ್ಲಿ (Oil Factory) ಭಾರೀ ಅಗ್ನಿ ಅವಘಡ (Fire Incident) ಸಂಭವಿಸಿದ ಪರಿಣಾಮ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ಬೆಂಗಳೂರು (Bengaluru) ಹೊರವಲಯ ಆನೇಕಲ್ (Anekal) ತಾಲೂಕಿನ ಹೀಲಲಿಗೆಯಲ್ಲಿ ನಡೆದಿದೆ.

    ವಿಶಾಲ್ ಟ್ರೈಬೊಟೆಕ್ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಯಲ್ಲಿ ಹೆಚ್ಚಿನ ಪ್ರಮಾಣದ ಆಯಿಲ್ ಬ್ಯಾರೆಲ್‌ಗಳನ್ನು ಶೇಖರಿಸಲಾಗಿತ್ತು. ಏಕಾಏಕಿ ಕಾರ್ಖಾನೆಯಲ್ಲಿ ಬೆಂಕಿ ಹೊತ್ತಿಕೊಂಡು ಕ್ಷಣಾರ್ಧದಲ್ಲಿ ಇಡೀ ಕಾರ್ಖಾನೆಯನ್ನು ಆವರಿಸಿದೆ. ಸ್ಥಳಕ್ಕೆ ಹತ್ತಕ್ಕೂ ಹೆಚ್ಚು ಅಗ್ನಿಶಾಮಕ ದಳದ ವಾಹನಗಳು ಆಗಮಿಸಿದ್ದು, ಅಗ್ನಿಶಾಮಕ ಸಿಬ್ಬಂದಿ ಕಳೆದ ಐದು ಗಂಟೆಗಳಿಂದ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಇದನ್ನೂ ಓದಿ: ದಾವಣಗೆರೆ | ವೃದ್ಧ ದಂಪತಿಯ ಕೈಕಾಲು ಕಟ್ಟಿ 8 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ಗ್ಯಾಂಗ್

    ಸೂರ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಅದೃಷ್ಟವಶಾತ್ ಅಗ್ನಿ ಅವಘಡದಿಂದ ಯಾವುದೇ ಸಾವು ನೋವು ಸಂಭವಿಸಿಲ್ಲ. ಕಾರ್ಖಾನೆಯಲ್ಲಿ ಸುಮಾರು 40 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಆದರೆ ಇಂದು ಭಾನುವಾರ ಆಗಿರುವುದರಿಂದ ರಜೆ ಇತ್ತು. ಹೀಗಾಗಿ ಅಗ್ನಿ ಅವಘಡದ ವೇಳೆ ಕಾರ್ಖಾನೆಯಲ್ಲಿ ಕಾರ್ಮಿಕರು ಇರಲಿಲ್ಲ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹತ್ತಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಇದನ್ನೂ ಓದಿ: ಚಂದ್ರಗ್ರಹಣ ಕಣ್ತುಂಬ ನೋಡಿ ಸಂಭ್ರಮಿಸಿ: ಭೌತವಿಜ್ಞಾನಿ ಎ.ಪಿ.ಭಟ್‌

  • ಬೆಂಗಳೂರಿನಲ್ಲಿ ಭೀಕರ ಅಗ್ನಿ ದುರಂತ – ಒಂದೇ ಕುಟುಂಬದ ನಾಲ್ವರು ಸೇರಿ ಐವರು ಸಜೀವ ದಹನ

    ಬೆಂಗಳೂರಿನಲ್ಲಿ ಭೀಕರ ಅಗ್ನಿ ದುರಂತ – ಒಂದೇ ಕುಟುಂಬದ ನಾಲ್ವರು ಸೇರಿ ಐವರು ಸಜೀವ ದಹನ

    ಬೆಂಗಳೂರು: ಇಲ್ಲಿನ ಕೆ.ಆರ್ ಮಾರ್ಕೆಟ್ (KR Market) ಬಳಿಯ ನಗರ್ತಪೇಟೆಯ ವಾಣಿಜ್ಯ ಕಟ್ಟಡದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ (Massive Fire) ಒಂದೇ ಕುಟುಂಬದ ನಾಲ್ವರು ಸೇರಿ ಐವರು ಸಾವನ್ನಪ್ಪಿರುವ ಘಟನೆ ನಡೆದಿದೆ.

    ದುರಂತದಲ್ಲಿ ಸಜೀವ ದಹನವಾದ ಮದನ್ (38), ಪತ್ನಿ ಸಂಗೀತಾ (33) ಮಿತೇಶ್ (8), ವಿಹಾನ್ (5) ಒಂದೇ ಕುಟುಂಬದವರಾಗಿದ್ದು, ಮತ್ತೊಂದು ಮಹಡಿಯಲ್ಲಿ ಸುರೇಶ್‌ ಎಂಬವರೂ ಸುಟ್ಟು ಕರಕಲಾಗಿದ್ದಾರೆ. ಇದನ್ನೂ ಓದಿ: ಮುಂಬೈನಲ್ಲಿ ಭಾರೀ ಮಳೆಯಿಂದ ಭೂಕುಸಿತ – ಇಬ್ಬರು ಸಾವು, ಇಂದು ರೆಡ್ ಅಲರ್ಟ್ ಘೋಷಣೆ

    ಇನ್ನೂ ಘಟನಾ ಸ್ಥಳಕ್ಕೆ ನಗರ ಪೊಲೀಸ್‌ ಆಯುಕ್ತ (Bengaluru Police Commissioner) ಸೀಮಂತ್‌ ಕುಮಾರ್‌ ಸಿಂಗ್‌ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ರಾತ್ರಿ 2.30ರ ಸುಮಾರಿಗೆ ಅಗ್ನಿ ಅವಗಢ ಸಂಭವಿಸಿದ ಮಾಹಿತಿ ಬಂತು. ಅಗ್ನಿಶಾಮಕ ದಳದವರು ನಮ್ಮ ಪೊಲೀಸ್ರು ಪರಿಶೀಲನೆ ಮಾಡ್ತಿದ್ದಾರೆ. ಗ್ರೌಂಡ್ ಫ್ಲೋರ್ ನಲ್ಲಿರುವ ಗೋಡೌನ್ ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ನಂತರ ಅದು ಮೇಲಿನ ಫ್ಲೋರ್ ಗಳಿಗೆ ಆವರಿಸಿದೆ. ಬೆಂಕಿ ಹೊತ್ತಿಕೊಂಡ ಕೂಡಲೇ ಕಟ್ಟಡದಲ್ಲಿದ್ದ ಬಹುತೇಕ ಜನ ಓಡಿ ಹೋಗಿದ್ದಾರೆ. ಆದ್ರೆ ಒಂದು ಫ್ಯಾಮಿಲಿ ಮಾತ್ರ ಬೆಂಕಿ ಕೆನ್ನಾಲಿಗೆಗೆ ಸಿಲುಕಿಕೊಂಡಿದೆ.

    ಎರಡು ಮೃತದೇಹಗಳನ್ನ ಈಗಾಗಲೇ ಹೊರ ತೆಗೆಯಲಾಗಿದೆ. ಮೇಲಿನ ಫ್ಲೋರ್ ನಲ್ಲಿ ಕಂಪ್ಲೀಟ್ ಬೆಂಕಿ, ಹೊಗೆ ಆವರಿಸಿದೆ ಒಳಗಡೆ ಹೋಗೋದಕ್ಕೆ ಆಗ್ತಿಲ್ಲ, ಹೀಗಾಗಿ ಒಳಗಡೆ ಸಿಲುಕಿದವರನ್ನ ಹುಡುಕಲು ಆಗ್ತಿಲ್ಲ. ಕಾರ್ಯಾಚರಣೆ ಮುಂದುವರಿಸಲಾಗಿದೆ. ಅಗ್ನಿಶಾಮಕ ಸಿಬ್ಬಂದಿ, ವಿಧಿವಿಜ್ಞಾನ ಪ್ರಯೋಗಾಲಯ ಅಧಿಕಾರಿಗಳು ಹಾಗೂ ನಮ್ಮ ರಕ್ಷಣಾ ತಂಡದವರು ಕಾರ್ಯಾಚರಣೆ ಮಾಡ್ತಿದ್ದಾರೆ. ಇನ್ನು ಮೃತದೇಹಗಳು ಇರುವ ಶಂಕೆ ಇದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು | ನಗರ್ತಪೇಟೆಯಲ್ಲಿ ಭೀಕರ ಅಗ್ನಿ ದುರಂತ – ಓರ್ವ ಸುಟ್ಟು ಕರಕಲು, ಸಾವಿನ ಸಂಖ್ಯೆ ಏರಿಕೆ ಸಾಧ್ಯತೆ

    ಏನಿದು ದುರಂತ?
    ಕೆ.ಆರ್ ಮಾರ್ಕೆಟ್ ಬಳಿಯ ನಗರ್ತಪೇಟೆಯ ವಾಣಿಜ್ಯ ಕಟ್ಟಡದಲ್ಲಿದ್ದ ಮಹಡಿ ಮನೆಯಲ್ಲಿ ತಡರಾತ್ರಿ ಬೆಂಕಿ ಕಾಣಿಸಿಕೊಂಡಿತ್ತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ್ದ ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಸ್ಥಳದಲ್ಲಿ ಅಂಬುಲೆನ್ಸ್‌ಗಳನ್ನ ನಿಯೋಜನೆ ಮಾಡಲಾಗಿದೆ. ಇದನ್ನೂ ಓದಿ: ಸರ್ಕಾರ ಧರ್ಮಸ್ಥಳದ ಜೊತೆಗಿರುತ್ತೆ, ದಿಕ್ಕು ತಪ್ಪಿಸಿದವರನ್ನ ನಾವು ಬಿಡಲ್ಲ: ಲಕ್ಷ್ಮಿ ಹೆಬ್ಬಾಳ್ಕರ್

  • ಬೆಂಗಳೂರು | ನಗರ್ತಪೇಟೆಯಲ್ಲಿ ಭೀಕರ ಅಗ್ನಿ ದುರಂತ – ಓರ್ವ ಸುಟ್ಟು ಕರಕಲು, ಸಾವಿನ ಸಂಖ್ಯೆ ಏರಿಕೆ ಸಾಧ್ಯತೆ

    ಬೆಂಗಳೂರು | ನಗರ್ತಪೇಟೆಯಲ್ಲಿ ಭೀಕರ ಅಗ್ನಿ ದುರಂತ – ಓರ್ವ ಸುಟ್ಟು ಕರಕಲು, ಸಾವಿನ ಸಂಖ್ಯೆ ಏರಿಕೆ ಸಾಧ್ಯತೆ

    ಬೆಂಗಳೂರು: ಇಲ್ಲಿನ ಕೆ.ಆರ್ ಮಾರ್ಕೆಟ್ (KR Market) ಬಳಿಯ ನಗರ್ತಪೇಟೆಯ ವಾಣಿಜ್ಯ ಕಟ್ಟಡದಲ್ಲಿದ್ದಲ್ಲಿ ಭೀಕರ ಅಗ್ನಿ ಅವಘಡ (Massive fire) ಸಂಭವಿಸಿದ್ದು, ಓರ್ವ ವ್ಯಕ್ತಿ ಸುಟ್ಟುಕರಕಲಾಗಿರುವ ಘಟನೆ ನಡೆದಿದೆ.

    ರಾಜಸ್ಥಾನ ಮೂಲದ ಮದನ್ ಸಿಂಗ್ ಮೃತಪಟ್ಟಿರುವ‌ ವ್ಯಕ್ತಿ. ವಾಣಿಜ್ಯ ಕಟ್ಟಡದ (Commercial building) 3ನೇ ಅಂತಸ್ಥಿನಲ್ಲಿದ್ದ ಮನೆಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ದುರಂತ ಸಂಭವಿಸಿದೆ. ಈ ವೇಳೆ ಮಳಿಗೆಯಲ್ಲೇ ಇದ್ದ ಮದನ್ ಸಿಂಗ್ ಸಾವನ್ನಪ್ಪಿದ್ದಾನೆ. ಇನ್ನೂ ದುರಂತ ನಡೆದ ಮಳಿಗೆಯಲ್ಲಿ ಒಂದೇ ಕುಟುಂಬದ ಇನ್ನೂ ಮೂವರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಒಟ್ಟು ನಾಲ್ವರು ಮನೆಯಲ್ಲಿ ವಾಸಿಸುತ್ತಿದ್ದರು. ಮನೆಯಲ್ಲಿ ಪತಿ, ಪತ್ನಿ ಹಾಗೂ 8 ಮತ್ತು 5 ವರ್ಷದ ಇಬ್ಬರು ಮಕ್ಕಳಿದ್ದರು. ಮದನ್‌ ಸಿಂಗ್‌ ಎಂಬಾತ ಸಾವನ್ನಪ್ಪಿದ್ದು, ಉಳಿದ ಮೂವರು ಸಾವನ್ನಪ್ಪಿರುವ ಶಂಕ್ಯೆ ವ್ಯಕ್ತವಾಗಿದೆ. ಇದನ್ನೂ ಓದಿ: ಈ ದೇಶಗಳಲ್ಲಿ ಬೀದಿ ನಾಯಿಗಳಿಗೆ ಗ್ಯಾಸ್‌ ಚೇಂಬರ್‌, ದಯಾಮರಣ ಶಿಕ್ಷೆ – ಯಾವ ದೇಶದಲ್ಲಿ ಏನು ಕಾನೂನು?

    ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿರುವ ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಇದರೊಂದಿಗೆ ಸ್ಥಳದಲ್ಲಿ ಮೂರು ಅಂಬುಲೆನ್ಸ್‌ಗಳನ್ನ ನಿಯೋಜನೆ ಮಾಡಲಾಗಿದೆ. ಇದನ್ನೂ ಓದಿ: ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಟ್ರಕ್‌ಗೆ ಬಸ್ ಡಿಕ್ಕಿ – 10 ಮಂದಿ ಯಾತ್ರಿಕರು ಸಾವು

    ಘಟನಾ ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿರುವ ಹಿನ್ನೆಲೆ ರಕ್ಷಣಾ ಸಿಬ್ಬಂದಿ ಆಕ್ಸಿಜನ್ ಸಿಲಿಂಡರ್ ಧರಿಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇನ್ನೂ ದುರಂತ ನಡೆದ ಮಳಿಗೆಯಲ್ಲಿ ತಾಯಿ-ಮಗು ಒಳಗೆ ಸಿಲುಕಿದ್ದಾರೆಂದು ಹೇಳಲಾಗುತ್ತಿದೆ. ಅವಘಡಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಇದನ್ನೂ ಓದಿ: ಇಂದು ಬಿಜೆಪಿಯಿಂದ ʻಧರ್ಮಸ್ಥಳ ಚಲೋʼ – 500 ಕಾರುಗಳಲ್ಲಿ ಬೃಹತ್‌ ಯಾತ್ರೆ

  • ಕಳ್ಳತನ ಮಾಡಿ ಅಂಗಡಿಗೆ ಬೆಂಕಿಯಿಟ್ಟ ಖದೀಮರು – 23 ಲಕ್ಷ ಮೌಲ್ಯದ ವಸ್ತುಗಳು ಭಸ್ಮ

    ಕಳ್ಳತನ ಮಾಡಿ ಅಂಗಡಿಗೆ ಬೆಂಕಿಯಿಟ್ಟ ಖದೀಮರು – 23 ಲಕ್ಷ ಮೌಲ್ಯದ ವಸ್ತುಗಳು ಭಸ್ಮ

    ಬೀದರ್: ಅಂಗಡಿಯೊಂದರಲ್ಲಿ ಖದೀಮರು ಕಳ್ಳತನ ಮಾಡಿ, ಬಳಿಕ ಬೆಂಕಿ ಹಚ್ಚಿ ಪರಾರಿಯಾದ ಘಟನೆ ಬೀದರ್  (Bidar) ನಗರದ ನ್ಯೂ ಆದರ್ಶ ಕಾಲೋನಿಯಲ್ಲಿ ನಡೆದಿದೆ.ಇದನ್ನೂ ಓದಿ: ಸದನದಲ್ಲೂ ರಾಜೀನಾಮೆ ವಿಚಾರಕ್ಕೆ ಜೋರು ಜಟಾಪಟಿ – ಉತ್ತರ ಕೊಡದೇ ಜಾರಿಕೊಂಡ ರಾಜಣ್ಣ

    ಪೃಥ್ವಿರಾಜ್ ಮಡಿವಾಳರ್ ಅವರಿಗೆ ಸೇರಿದ್ದ ಸ್ಟುಡಿಯೋ ಹಾಗೂ ಅದರ ಪಕ್ಕದಲ್ಲಿರುವ ಸೀಮನ್ ಅವರಿಗೆ ಸೇರಿದ್ದ ಬೇಕರಿಯಲ್ಲಿ ಕಳ್ಳತನ ಮಾಡಿದ್ದಾರೆ. ಈ ವೇಳೆ 70 ಸಾವಿರ ರೂ. ನಗದು, ಒಂದು ಐಪೋನ್, ಎರಡು ಕ್ಯಾಮೆರಾವನ್ನು ಕದ್ದುಕೊಂಡು ಹೋಗಿದ್ದಾರೆ. ಕಳ್ಳತನದ ಬಳಿಕ ಸ್ಟುಡಿಯೋಗೆ ಬೆಂಕಿ ಹಚ್ಚಿದ್ದು, 15 ಲಕ್ಷ ರೂ. ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿದೆ.

    ಅದೇ ಬೆಂಕಿ ಪಕ್ಕದ ಬೇಕರಿಗೆ ಹರಡಿಕೊಂಡು ಅದರಲ್ಲಿದ್ದ ಫ್ರಿಡ್ಜ್ ಸೇರಿದಂತೆ 8 ಲಕ್ಷ ರೂ. ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ. ಗಾಂಧಿಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಇದನ್ನೂ ಓದಿ: ರಾಜಣ್ಣ ರಾಜೀನಾಮೆ| ಎರಡು ಕೈ ಮುಗಿದು ಒಳಗೆ ಹೋದ ಡಿಕೆಶಿ

  • ಶಾರ್ಟ್ ಸರ್ಕ್ಯೂಟ್‌ನಿಂದ ತಹಶೀಲ್ದಾರ್ ಕಚೇರಿಯಲ್ಲಿ ಅಗ್ನಿ ಅವಘಡ; ಮಹತ್ವದ ದಾಖಲೆಗಳು ಭಸ್ಮ

    ಶಾರ್ಟ್ ಸರ್ಕ್ಯೂಟ್‌ನಿಂದ ತಹಶೀಲ್ದಾರ್ ಕಚೇರಿಯಲ್ಲಿ ಅಗ್ನಿ ಅವಘಡ; ಮಹತ್ವದ ದಾಖಲೆಗಳು ಭಸ್ಮ

    – ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲು

    ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ನಾಡ ತಹಶಿಲ್ದಾರ ಕಚೇರಿಯಲ್ಲಿ (Tahsildar office) ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡು ಮಹತ್ವದ ದಾಖಲೆಗಳು, ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ.

    ರಾತ್ರಿ ವೇಳೆ ಅಗ್ನಿ ಅವಘಡ ನಡೆದಿದ್ದು ಕಂಪ್ಯೂಟರ್, ಸಾರ್ವಜನಿಕರ ಮಹತ್ವದ ದಾಖಲೆಗಳು, ಪೀಠೋಪಕರಣಗಳು ಸುಟ್ಟು ಕರಕಲಾಗಿವೆ. ಮಳೆಯಿಂದ ಹಳೆಯ ಕಟ್ಟಡದ ಗೋಡೆಗಳು ಒದ್ದೆಯಾಗಿದ್ದು ಅಲ್ಲಲ್ಲಿ ಸೋರಿದ್ದರಿಂದ ಶಾರ್ಟ್ ಸರ್ಕ್ಯೂಟ್ (Short circuit) ಉಂಟಾಗಿದೆ. ಇನ್ವೊಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಸ್ಫೋಟಗೊಂಡಿದೆ. ಇದರಿಂದ ಕಚೇರಿಯಲ್ಲಿನ ವಸ್ತುಗಳೆಲ್ಲಾ ಸುಟ್ಟು ಕರಕಲಾಗಿವೆ.

    ಎರಡನೇ ಬಾರಿ ನಾಡ ತಹಶಿಲ್ದಾರ ಕಚೇರಿ ಅಗ್ನಿದುರಂತಕ್ಕೆ ಈಡಾಗಿದೆ. ಮಹತ್ವದ ದಾಖಲೆಗಳು ಸುಟ್ಟು ಹೋಗಿರುವುದರಿಂದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಬ್ಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.