Tag: ಅಗ್ನಿಶಾಮಕ ದಳ

  • ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ – ಒಟ್ಟಿಗೆ 48 ವಾಹನಗಳು ಜಖಂ

    ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ – ಒಟ್ಟಿಗೆ 48 ವಾಹನಗಳು ಜಖಂ

    ಮುಂಬೈ: ಪುಣೆಯಲ್ಲಿರುವ ಬೆಂಗಳೂರು ಹೆದ್ದಾರಿಯ (Pune Bengaluru National Highway) ನವಲೆ ಸೇತುವೆಯಲ್ಲಿ (Fire Brigade) ಭೀಕರ ಅಪಘಾತ ಸಂಭವಿಸಿದ್ದು, ಒಟ್ಟಿಗೆ 48 ವಾಹನಗಳು ಜಖಂಗೊಂಡಿವೆ. ಟ್ಯಾಂಕರ್‌ವೊಂದರ ಬ್ರೇಕ್ ವೈಫಲ್ಯದಿಂದಾಗಿ ಕನಿಷ್ಠ 48 ವಾಹನಗಳು ಅಪಘಾತಕ್ಕೀಡಾಗಿವೆ.

    ರಾತ್ರಿ 8:30ರ ಸುಮಾರಿಗೆ ಘಟನೆ ನಡೆದಿದ್ದು, ಹಲವರು ಗಾಯಗೊಂಡಿರುವ ಶಂಕೆ ವ್ಯಕ್ಯವಾಗಿದೆ. ಸದ್ಯ ಪುಣೆ ಅಗ್ನಿಶಾಮಕ ದಳ ಮತ್ತು ಪುಣೆ ಮೆಟ್ರೋಪಾಲಿಟನ್ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ (PMRDA) ರಕ್ಷಣಾ ತಂಡಗಳು ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆ ನಡೆಸುತ್ತಿವೆ. ಸಾರ್ವಜನಿಕರ ಸುರಕ್ಷತೆಗಾಗಿ ಅಂಬುಲೆನ್ಸ್‌ಗಳ ವ್ಯವಸ್ಥೆಯನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕಾಡಾನೆ ದಾಳಿಗೆ ಮಹಿಳೆ ಬಲಿ – ಮೃತದೇಹ ನೋಡಲು ಬಂದ ಶಾಸಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ

    ಪಿಎಂಆರ್‌ಡಿಎ (PMRDA) ಅಗ್ನಿಶಾಮಕ ದಳದ ಅಧಿಕಾರಿ ಸುಜಿತ್ ಪಾಟೀಲ್ ಮಾತನಾಡಿ, ಪ್ರಾಥಮಿಕ ಮಾಹಿತಿಯ ಪ್ರಕಾರ ಟ್ಯಾಂಕರ್ ಬ್ರೇಕ್ ವೈಫಲ್ಯದ ನಂತರ ಕನಿಷ್ಠ 48 ವಾಹನಗಳು ಅಪಘಾತಕ್ಕೀಡಾಗಿವೆ. ಹಾನಿಗೊಳಗಾದ ವಾಹನಗಳಿಂದ ಗಾಯಗೊಂಡ ಕೆಲ ನಾಗರಿಕರನ್ನ ಹತ್ತಿರದ ಆಸ್ಪತ್ರೆಗಳಿಗೆ (Hospital) ಕರೆದೊಯ್ಯಲಾಗಿದೆ. ಸದ್ಯಕ್ಕೆ ಗಾಯಗೊಂಡವರ ಸಂಖ್ಯೆ ಮತ್ತು ಅವರ ಗಾಯಗಳ ಸ್ವರೂಪದ ನಮಗೆ ತಿಳಿದಿಲ್ಲ. ಅಗ್ನಿಶಾಮಕ ದಳದ ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಉಗ್ರರ ಅಡಗುತಾಣವಾಗ್ತಿದ್ಯಾ ಮಂಗಳೂರು – ಕರಾವಳಿ ಜಿಲ್ಲೆಯಾದ್ಯಂತ ಹೈ ಅಲರ್ಟ್

    Live Tv
    [brid partner=56869869 player=32851 video=960834 autoplay=true]

  • ರನ್‌ವೇಯಲ್ಲಿ ಅಗ್ನಿಶಾಮಕ ಟ್ರಕ್‌ಗೆ ಪ್ಯಾಸೆಂಜರ್ ವಿಮಾನ ಡಿಕ್ಕಿ- ಇಬ್ಬರು ಸಿಬ್ಬಂದಿ ಸಾವು

    ರನ್‌ವೇಯಲ್ಲಿ ಅಗ್ನಿಶಾಮಕ ಟ್ರಕ್‌ಗೆ ಪ್ಯಾಸೆಂಜರ್ ವಿಮಾನ ಡಿಕ್ಕಿ- ಇಬ್ಬರು ಸಿಬ್ಬಂದಿ ಸಾವು

    ಲಿಮಾ: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (Airport) ರನ್‌ವೇಯಲ್ಲಿ (Runway) ಟೇಕ್ ಆಫ್ ಆಗುತ್ತಿದ್ದ ಪ್ಯಾಸೆಂಜರ್ ವಿಮಾನವೊಂದು (plane) ಅಗ್ನಿಶಾಮಕ ಟ್ರಕ್‌ಗೆ (Firefighter) ಡಿಕ್ಕಿ ಹೊಡೆದು, ಇಬ್ಬರು ಸಿಬ್ಬಂದಿ ಸಾವಾಗೀಡಾಗಿರುವ ಘಟನೆ ಪೆರುವಿನ (Peru) ಜಾರ್ಜ್ ಚಾವೆಜ್‌ನಲ್ಲಿ ನಡೆದಿದೆ. ದುರ್ಘಟನೆಯ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.

    ವೀಡಿಯೋದಲ್ಲಿ ಅಗ್ನಿಶಾಮಕ ಟ್ರಕ್ ರನ್‌ವೇಯಲ್ಲಿ ವೇಗವಾಗಿ ಸಾಗುತ್ತಿರುವುದು ಕಂಡುಬಂದಿದ್ದು, ಎದುರುಗಡೆ ಲ್ಯಾಂಡ್ ಆಗುತ್ತಿದ್ದ ವಿಮಾನವನ್ನು ಕಂಡ ಅಗ್ನಿಶಾಮಕ ಟ್ರಕ್‌ನಲ್ಲಿದ್ದವರು ಅಪಘಾತವನ್ನು ತಪ್ಪಿಸಲು ವಾಹನವನ್ನು ಯೂ ಟರ್ನ್ ಹೊಡೆದಿದ್ದಾರೆ. ಆದರೂ ಅಪಘಾತವನ್ನು ತಪ್ಪಿಸಲು ಸಾಧ್ಯವಾಗದೇ ವಿಮಾನ ವೇಗವಾಗಿ ಬಂದು ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಇದನ್ನೂ ಓದಿ: ಪಾಕ್ ಪರ ಘೋಷಣೆ ಕೂಗಿದ್ದ ಮೂವರು ವಿದ್ಯಾರ್ಥಿಗಳು ರಿಲೀಸ್

    ಅಪಘಾತಕ್ಕೊಳಗಾದ ಲತಮ್ ಏರ್‌ಲೈನ್ಸ್‌ನ ಎ320 ಏರ್‌ಬಸ್‌ನಲ್ಲಿ 102 ಪ್ರಯಾಣಿಕರಿದ್ದರು. ಡಿಕ್ಕಿ ಸಂಭವಿಸಿದ ಪರಿಣಾಮ ವಿಮಾನದ ರೆಕ್ಕೆ, ಹಿಂಭಾಗಕ್ಕೆ ಬೆಂಕಿ ತಗುಲಿದೆ. ಸದ್ಯ ಎಲ್ಲಾ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

    ಘಟನೆಯ ಬಳಿಕ ವಿಮಾನ ನಿಲ್ದಾಣದ ಎಲ್ಲಾ ಕಾರ್ಯಾಚರಣೆ ಸ್ಥಗಿತಗೊಂಡಿದೆ. ಅಪಘಾತದ ಕಾರಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರಿಗೆ ಎಲ್ಲಾ ರೀತಿಯ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಏರ್‌ಪೋರ್ಟ್ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮೊದಲ ಬಾರಿ ಸಾರ್ವಜನಿಕವಾಗಿ ಮಗಳೊಂದಿಗೆ ಕಾಣಿಸಿಕೊಂಡ ಕಿಮ್ ಜಾಂಗ್ ಉನ್

    Live Tv
    [brid partner=56869869 player=32851 video=960834 autoplay=true]

  • ಪೊಲೀಸ್ ವಿಚಾರಣೆಗೆ ಹೆದರಿ 3 ವರ್ಷದ ಮಗಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ಟೆಕ್ಕಿ

    ಪೊಲೀಸ್ ವಿಚಾರಣೆಗೆ ಹೆದರಿ 3 ವರ್ಷದ ಮಗಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ಟೆಕ್ಕಿ

    ಕೋಲಾರ: ಬೆಂಗಳೂರಿನಲ್ಲಿ (Bengaluru) ಬಂದು ನೆಲೆಸಿದ್ದ ಗುಜರಾತ್ (Gujarat) ವ್ಯಕ್ತಿಯೊಬ್ಬ ಪೊಲೀಸ್ ವಿಚಾರಣೆಗೆ (Police Enquiry) ಹೆದರಿ ತನ್ನ ಮೂರು ವರ್ಷದ ಮಗಳನ್ನೂ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ.

    ಕೋಲಾರ ತಾಲ್ಲೂಕು ಕೆಂದಟ್ಟಿ ಗ್ರಾಮದ ಕೆರೆಯಲ್ಲಿ ಕಳೆದ ರಾತ್ರಿ 3 ವರ್ಷದ ಮಗುವಿನ ಶವ ಪತ್ತೆಯಾಗಿದೆ. ಜೊತೆಗೆ ಕೆರೆಯ ದಡದಲ್ಲೇ ನೀಲಿ ಬಣ್ಣದ I-20 ಕಾರು ಸಹ ಪತ್ತೆಯಾಗಿದೆ. ಇದರಿಂದ ಅನುಮಾನಗೊಂಡ ಸ್ಥಳೀಯರು ಕೋಲಾರ ಗ್ರಾಮಾಂತರ ಠಾಣಾ ಪೊಲೀಸರಿಗೆ (Kolar Rural Police) ಮಾಹಿತಿ ನೀಡಿದ್ದಾರೆ. ಪರಿಶೀಲನೆ ನಡೆಸಿದ ಬಳಿಕ ಬೆಂಗಳೂರಿನ ಬಾಗಲೂರು ರಾಗಾ ಅಪಾರ್ಟ್ಮೆಂಟ್‌ನಲ್ಲಿ ವಾಸವಿರುವ, ಗುಜರಾತ್ ಮೂಲದ ಕುಟುಂಬ ಅನ್ನೋದು ಮಾಹಿತಿ ತಿಳಿದು ಬಂದಿದೆ. ಇದನ್ನೂ ಓದಿ: ಅಲೆಮಾರಿ ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ಪಡೆದುಕೊಳ್ಳಲಿ: ಈಶ್ವರಪ್ಪ

    ಸ್ಥಳಕ್ಕೆ ಬಂದ ಪತ್ನಿ ಭವ್ಯ, ಪತಿ ರಾಹುಲ್ ಹಾಗೂ ಮೂರು ವರ್ಷದ ಮಗು ಜಿಯಾ ಎಂಬುದಾಗಿ ಗುರುತಿಸಿದ್ದಾರೆ. ನಿನ್ನೆ ಬೆಳಗ್ಗೆ ಮಗುವನ್ನು ಶಾಲೆಗೆ (School) ಬಿಟ್ಟು ಬರೋದಾಗಿ ರಾಹುಲ್ ಹೇಳಿ ಹೋಗಿದ್ದರು. ಬಳಿಕ ಫೋನ್ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಈಗ ಶವವಾಗಿ ಪತ್ತೆಯಾಗಿದ್ದಾರೆ. ಇದನ್ನೂ ಓದಿ: ಕ್ರೈಸ್ತ ಧರ್ಮಕ್ಕೆ ಮತಾಂತರವಾದ್ರೆ ಮಾತ್ರ ಸಂಸಾರ – ಪತ್ನಿ ವಿರುದ್ಧ ಠಾಣೆಯ ಮೆಟ್ಟಿಲೇರಿದ ಪತಿ

    ಏನಿದು ಘಟನೆ?
    2-3 ವರ್ಷಗಳ ಹಿಂದೆಯಷ್ಟೇ ರಾಹುಲ್ – ಭವ್ಯ ದಂಪತಿ ಗುಜರಾತ್‌ನಿಂದ (Gujarat) ಬೆಂಗಳೂರಿನಲ್ಲಿ ಬಂದು ನೆಲೆಸಿದ್ದರು. ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಕಳೆದ 6 ತಿಂಗಳಿನಿಂದ ರಾಹುಲ್ ಕೆಲಸವಿಲ್ಲದೆ ಮನೆಯಲ್ಲೇ ಇದ್ದರು. ಇದರಿಂದ ಸಾಲದ ಹೊರೆ ಹೆಚ್ಚಾಯಿತು. ಇದೇ ವಿಚಾರಕ್ಕೆ ರಾಹುಲ್ ತುಂಬಾ ಬೇಸರ ಮಾಡಿಕೊಂಡಿದ್ದರು.

    ಇತ್ತೀಚೆಗೆ ರಾಹುಲ್ ತಮ್ಮ ಮನೆಯಲ್ಲಿ ಚಿನ್ನಾಭರಣ ಕಳ್ಳತನವಾಗಿದೆ ಎಂದು ಬಾಗಲೂರು ಪೊಲೀಸ್ ಠಾಣೆಗೆ (Bagaluru Police Station) ದೂರು ನೀಡಿದ್ದರು. ಪದೇ-ಪದೇ ಪೊಲೀಸ್ ಠಾಣೆಗೆ ಹೋಗಿ ವಿಚಾರಿಸಿ ಬರುತ್ತಿದ್ದರು. ಪೊಲೀಸರು ದೂರಿನ ಅನ್ವಯ ತನಿಖೆ ನಡೆಸಿದಾಗ, ಮನೆಯಲ್ಲಿ ಇದ್ದ ಒಡವೆಯನ್ನು ರಾಹುಲ್ ತಾನೇ ಕದ್ದು ಚೆಮ್ಮನೂರ್ ಜ್ಯುವೆಲರ್ಸ್‌ನಲ್ಲಿ ಅಡವಿಟ್ಟು, ಬಳಿಕ ಕಳ್ಳತನದ ನಾಟಕವಾಡಿ ಸುಳ್ಳು ದೂರು ನೀಡಿದ್ದ ವಿಚಾರ ತಿಳಿದು ಬಂದಿದೆ. ಇದರಿಂದ ಪೊಲೀಸರು ರಾಹುಲ್ ಮೇಲೆ ಕೋಪಗೊಂಡು ಠಾಣೆಗೆ ಬರುವಂತೆ ತಾಕೀತು ಮಾಡಿದ್ದಾರೆ. ಮನೆಗೂ ಬಂದು ಹೇಳಿ ಹೋಗಿದ್ದಾರೆ. ಇದೇ ವಿಚಾರಕ್ಕೆ ಭಯ ಪಟ್ಟು ರಾಹುಲ್ ಏನಾದ್ರೂ ಮಾಡಿಕೊಂಡಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ.

    ರಾಹುಲ್ ಬಳಿಯಿದ್ದ ಪರ್ಸ್, ಮೊಬೈಲ್ ಎಲ್ಲವೂ ಕಾರ್‌ನಲ್ಲೇ ಇದೆ. ಕೋಲಾರ ಗ್ರಾಮಾಂತರ ಪೊಲೀಸರು ಹಾಗೂ ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸುತ್ತಿದ್ದು, ಕೆಂದಟ್ಟಿ ಕೆರೆಯಲ್ಲಿ ರಾಹುಲ್ ಶವಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮನೆ ಮೇಲೆ ಬಿದ್ದ ಆಕಾಶ ಬುಟ್ಟಿ – ಹೊತ್ತಿ ಉರಿದ ಇಡೀ ಮನೆ

    ಮನೆ ಮೇಲೆ ಬಿದ್ದ ಆಕಾಶ ಬುಟ್ಟಿ – ಹೊತ್ತಿ ಉರಿದ ಇಡೀ ಮನೆ

    ಹುಬ್ಬಳ್ಳಿ: ಮನೆ ಮೇಲೆ ಆಕಾಶ ಬುಟ್ಟಿ (Sky Lantern Hot Air Balloon) ಬಿದ್ದ ಪರಿಣಾಮ ಮನೆ ಧಗಧಗ ಎಂದು ಹೊತ್ತಿ ಉರಿದ ಘಟನೆ ಹುಬ್ಬಳ್ಳಿಯ (Hubballi) ಘಂಟಿಕೇರಿ ಓಣಿಯ ರಾಘವೇಂದ್ರ ಮಠದ ಬಳಿ ನಡೆದಿದೆ.

    ಎಲ್ಲಿಂದಲೋ ಬಂದ ಆಕಾಶ ಬುಟ್ಟಿ ದಿಢೀರ್ ಶಿವರಾಜ ತಾಳಿಕೋಟಿ ಎಂಬುವರಿಗೆ ಸೇರಿದ ಮನೆ ಮೇಲೆ ಬಿದ್ದಿದೆ. ಈ ವೇಳೆ ದೊಡ್ಡ ಮಟ್ಟದಲ್ಲಿ ಹೊತ್ತಿಕೊಂಡ ಬೆಂಕಿಗೆ ಇಡೀ ಮನೆ ಹೊತ್ತಿ ಉರಿದಿದೆ. ಈ ದೃಶ್ಯವನ್ನು ಕಂಡು ಅಕ್ಕಪಕ್ಕದ ಮನೆಯವರು ಗಾಬರಿಯಾಗಿದ್ದು, ಇದೀಗ ಸ್ಥಳಕ್ಕೆ ಅಗ್ನಿಶಾಮಕ ದಳ (Fire Brigade) ಆಗಮಿಸಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಸದ್ಯ ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಇದನ್ನೂ ಓದಿ: ಕಸದಲ್ಲಿ ಸಿಕ್ತು 50 ಗ್ರಾಂ ಮಾಂಗಲ್ಯ ಸರ – ಮಾಲೀಕರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ಪೌರಕಾರ್ಮಿಕ

    ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಹೆಚ್ಚಾಗಿ ಆಕಾಶಬುಟ್ಟಿಗಳು ಕಂಡುಬರುತ್ತದೆ. ಗೂಡುದೀಪ, ಬೆಳಕಿನ ಬುಟ್ಟಿ ಎಂದು ಬೇರೆ ಬೇರೆ ಹೆಸರಿನಿಂದ ಕರೆಯಿಸಿಕೊಳ್ಳುವ ಆಕಾಶ ಬುಟ್ಟಿ ನಮ್ಮ ಭಾವನೆ, ನೆನಪು, ಸಂಸ್ಕೃತಿಯ ಜೊತೆ ಬೆಸೆದುಕೊಂಡಿದೆ. ಮೊದಲೆಲ್ಲ ಆಚರಣೆ ಒಂದು ಭಾಗವಾಗಿದ್ದ ಆಕಾಶ ಬುಟ್ಟಿಗಳು ಆಧುನಿಕತೆಯ ಭರಾಟೆಯಲ್ಲಿ ಕೆಲವರಿಗೆ ಪ್ರತಿಷ್ಠೆಯಾದರೆ ಇನ್ನೂ ಕೆಲವರು ತಮ್ಮ ಮನೆ ಅಂದ, ಅಲಂಕಾರಕ್ಕೆ ಇವುಗಳನ್ನು ಹಾಕುತ್ತಿದ್ದಾರೆ. ಇದನ್ನೂ ಓದಿ: ರಿಷಬ್ ಶೆಟ್ಟಿ ವಿಚಾರವಾದಿ ಆಗದಿದ್ದರೆ ಮೂರ್ಖ ಜನ ಸುಮ್ಮನೆ ಬಿಡ್ತಿರ್ಲಿಲ್ಲ: ಸಾಹಿತಿ ಬಿ.ಟಿ.ಲಲಿತಾ ನಾಯಕ್

    Live Tv
    [brid partner=56869869 player=32851 video=960834 autoplay=true]

  • ಆಕಸ್ಮಿಕ ಅಗ್ನಿ ಅವಘಡ – 700 ಮಳಿಗೆಗಳು ಭಸ್ಮ

    ಆಕಸ್ಮಿಕ ಅಗ್ನಿ ಅವಘಡ – 700 ಮಳಿಗೆಗಳು ಭಸ್ಮ

    ಇಟಾನಗರ: ಅರುಣಾಚಲ ಪ್ರದೇಶದ (Arunachal Pradesh) ನಹರ್ಲಗುನ್ ಪ್ರದೇಶದಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡಿದ್ದು, ಅಗ್ನಿ ಅವಘಡದಿಂದ 700ಕ್ಕೂ ಹೆಚ್ಚು ಮಳಿಗೆಗಳು ಸುಟ್ಟು ಭಸ್ಮವಾಗಿವೆ.

    ಇಷ್ಟು ದೊಡ್ಡ ಪ್ರಮಾಣದಲ್ಲಿ ಬೆಂಕಿ (Fire) ಕಾಣಿಸಿಕೊಳ್ಳಲು ನಿಖರ ಕಾರಣ ಏನೆಂಬುದು ತಿಳಿದುಬಂದಿಲ್ಲ. ಸದ್ಯ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ವರದಿಯಾಗಿದೆ. ಇದನ್ನೂ ಓದಿ: ಅಪಾರ್ಟ್‍ಮೆಂಟ್ ಕಿಟಕಿಗಳಿಗೆ ರಾಕೆಟ್ ಬಿಟ್ಟ ಕಿಡಿಗೇಡಿ – ವೀಡಿಯೋ ವೈರಲ್

    ಮೂಲಗಳ ಪ್ರಕಾರ, ಬೆಂಕಿ ಕಾಣಿಸಿಕೊಂಡ ಎರಡು ಗಂಟೆಗಳವರೆಗೆ ಕೇವಲ 2 ಮಳಿಗೆಗಳಿಗೆ ಮಾತ್ರ ಆವರಿಸಿತ್ತು. ಆದರೆ ಅಗ್ನಿಶಾಮಕ ದಳ (Fire Department) ಬೆಂಕಿ ನಿಯಂತ್ರಿಸುವಲ್ಲಿ ವಿಫಲವಾದ್ದರಿಂದ ಗಾಢವಾಗಿ ವ್ಯಾಪಿಸಿದೆ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅಗ್ನಿಶಾಮಕ ದಳಕ್ಕೆ ಸೇರ್ಪಡೆಯಾಯ್ತು 90 ಮೀಟರ್ ಏರುವ ಏರಿಯಲ್ ಲ್ಯಾಡರ್ ವಾಹನ

    ಅಗ್ನಿಶಾಮಕ ದಳಕ್ಕೆ ಸೇರ್ಪಡೆಯಾಯ್ತು 90 ಮೀಟರ್ ಏರುವ ಏರಿಯಲ್ ಲ್ಯಾಡರ್ ವಾಹನ

    ಬೆಂಗಳೂರು: ಬೃಹತ್ ಕಟ್ಟಡಗಳಲ್ಲಿ ಉಂಟಾಗುವ ಅಗ್ನಿ ಅವಘಡಗಳನ್ನ ನಿಭಾಯಿಸಲು ಅತ್ಯಾಧುನಿಕ ತಂತ್ರಜ್ಞಾನದ 90 ಮೀಟರ್ ಎತ್ತರ ಏರುವ ಏರಿಯಲ್ ಲ್ಯಾಡರ್ (Aerial Ladder) ವಾಹನವನ್ನು ರಾಜ್ಯ ಸರ್ಕಾರ ಖರೀದಿ ಮಾಡಿ ಅಗ್ನಿಶಾಮಕ ಇಲಾಖೆಗೆ ನೀಡಿದೆ.

    ವಿಧಾನಸೌಧದ (Vidhansaudha) ಗ್ರ್ಯಾಂಡ್ ಸ್ಟೆಪ್ಸ್ ಮೇಲೆ ನಡೆದ ಕಾರ್ಯಕ್ರಮದಲ್ಲಿ ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ((Basavaraj Bommai)) ಹಾಗೂ ಸಚಿವರು ಏರಿಯಲ್ ಲ್ಯಾಡರ್ ಮೇಲೆ ಏರಿ ನೂತನ ಏರಿಯಲ್ ಲ್ಯಾಡರ್ ವಾಹನವನ್ನು ಲೋಕಾರ್ಪಣೆ ಮಾಡಿದರು. ಇದನ್ನೂ ಓದಿ: ಭಾರತ-ಪಾಕ್ ಕ್ರಿಕೆಟ್ ಬೋರ್ಡ್‍ಗಳ ಕದನ – ಭಾರತ ಯಾರ ಮಾತನ್ನು ಕೇಳಲ್ಲ: ಅನುರಾಗ್ ಠಾಕೂರ್

    ಈ ಏರಿಯಲ್ ಲ್ಯಾಡರ್ ವಾಹನಕ್ಕೆ ಸುಮಾರು 32 ಕೋಟಿ ವೆಚ್ಚವಾಗಿದೆ. ಫಿನ್ಲೆಂಡ್‍ನ ಬ್ರೊಂಟೋ ಕಂಪನಿಯಿಂದ ಈ ವಾಹನವನ್ನು ಖರೀದಿ ಮಾಡಲಾಗಿದೆ. ಈ ಏರಿಯಲ್ ಲ್ಯಾಡರ್ ವಾಹನ 90 ಮೀಟರ್ ಎತ್ತರದಲ್ಲಿ ಸಂಭವಿಸಬಹುದಾದ ಅಗ್ನಿ ನಂದಿಸಲು ಸಹಾಯಕವಾಗಲಿದೆ.

    ಅತ್ಯಾಧುನಿಕ ಏರಿಯಲ್ ಲ್ಯಾಡರ್ ವಾಹನ ಏಕ ಕಾಲಕ್ಕೆ 500 ಕೆಜಿ ತೂಕ, ಸುಮಾರು 6 ಜನರನ್ನು ರಕ್ಷಣೆ ಮಾಡುವ ಸಾಮರ್ಥ್ಯ ಹೊಂದಿದೆ. ಇದಲ್ಲದೆ 3,600 ಲೀಟರ್ ನೀರನ್ನು ಏಕಕಾಲಕ್ಕೆ ಹೊರ ಹಾಕುವ ಸಾಮರ್ಥ್ಯವನ್ನು ಒಳಗೊಂಡಿದೆ. ಇದನ್ನೂಓದಿ: ಮಗನ ಸಾವಿನ ಪ್ರಕರಣವನ್ನು ಮತ್ತೆ ಸಿಬಿಐಗೆ ಒಪ್ಪಿಸಿ – ಸಿಎಂಗೆ ಮನವಿ ಸಲ್ಲಿಸಿದ ಪರೇಶ್ ಮೆಸ್ತಾ ತಂದೆ

    ನಮ್ಮ ದೇಶದಲ್ಲಿ ಮುಂಬೈ ನಗರದಲ್ಲಿ ಬಿಟ್ಟರೆ 90 ಮೀಟರ್ ಏರಿಯಲ್ ಲ್ಯಾಡರ್ ವಾಹನ ಯಾವ ನಗರದಲ್ಲೂ ಇರಲಿಲ್ಲ. ಈಗ ಬೆಂಗಳೂರಿಗೆ ಈ ವಾಹನವನ್ನು ಖರೀದಿ ಮಾಡಲಾಗಿದೆ. ಸದ್ಯ ನಮ್ಮ ಅಗ್ನಿಶಾಮಕ ದಳದಲ್ಲಿ 32 ಮತ್ತು 54 ಮೀಟರ್ ಏರಿಯಲ್ ಲ್ಯಾಡರ್ ವಾಹನ ಇತ್ತು. ಈಗ 90 ಮೀಟರ್ ಲ್ಯಾಡರ್ ಖರೀದಿ ಮಾಡಿದ್ದು, ಸುಮಾರು 30 ಅಂತಸ್ತಿನವರೆಗೂ ಅಗ್ನಿ ನಂದಿಸಲು ಸಹಕಾರಿಯಾಗಲಿದೆ.

    Live Tv
    [brid partner=56869869 player=32851 video=960834 autoplay=true]

  • ಅಗ್ನಿ ದುರಂತಗಳಿಂದ ಜನರನ್ನು ರಕ್ಷಿಸುವ ಸಾಮರ್ಥ್ಯ ಹೆಚ್ಚಳ: ಬೊಮ್ಮಾಯಿ

    ಅಗ್ನಿ ದುರಂತಗಳಿಂದ ಜನರನ್ನು ರಕ್ಷಿಸುವ ಸಾಮರ್ಥ್ಯ ಹೆಚ್ಚಳ: ಬೊಮ್ಮಾಯಿ

    ಬೆಂಗಳೂರು: ಅಗ್ನಿ ದುರಂತವಾದ ಸಂದರ್ಭದಲ್ಲಿ ಸಮರ್ಥವಾಗಿ ಅಗ್ನಿಯನ್ನು ನಂದಿಸಲು ಹಾಗೂ ಜನರ ಪ್ರಾಣ ರಕ್ಷಣೆ ಮಾಡಲು ನಮ್ಮ ಸಾಮರ್ಥ್ಯ ಹೆಚ್ಚಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ತಿಳಿಸಿದರು.

    ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಇಲಾಖೆಯ ವತಿಯಿಂದ ವಿಧಾನಸೌಧ (VidhanaSoudha)ದ ಬೃಹತ್ ಮೆಟ್ಟಿಲುಗಳ ಬಳಿ ಆಯೋಜಿಸಿರುವ 90 ಮೀಟರ್ ಏರಿಯಲ್ ಲ್ಯಾಡರ್ ಪ್ಲಾಟ್‍ಫಾರಂ (Aerial ladder platform) ವಾಹನ ಲೋಕಾರ್ಪಣೆ ಹಾಗೂ ಹಸಿರು ದೀಪಾವಳಿ ಸಾರ್ವಜನಿಕ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

    ಭಾರತದಲ್ಲಿ ಮುಂಬೈ (Mumbai) ಹೊರತುಪಡಿಸಿದರೆ ಬೆಂಗಳೂರಿನಲ್ಲಿ ಮಾತ್ರ ಇಷ್ಟು ದೊಡ್ಡ ಏಣಿ ಇರುವ ವಾಹನಗಳನ್ನು ಪರಿಚಯಿಸಲಾಗಿದೆ. ಜನರ ರಕ್ಷಣೆ ಹಾಗೂ ಇನ್ನಷ್ಟು ಎತ್ತರದ ಕಟ್ಟಡಗಳ ನಿರ್ಮಾಣವನ್ನು ಇದು ಸಾಧ್ಯವಾಗಿಸಿದೆ. ನಗರ ಬೆಳೆಯಲು ಹಾಗೂ ಅಗ್ನಿ ದುರಂತಗಳನ್ನು ನಿಯಂತ್ರಣ ಮಾಡಲು 90 ಮೀಟರ್ ಏಣಿ ಉಪಯುಕ್ತವಾಗಿದೆ. ಈ ಕಾರ್ಯವನ್ನು ಸಾಧ್ಯವಾಗಿಸಿರುವ ಗೃಹ ಸಚಿವರು, ಗೃಹ ಇಲಾಖೆ ಹಾಗೂ ಅಗ್ನಿಶಾಮಕ ದಳದ ಎಲ್ಲಾ ಮುಖ್ಯಸ್ಥರನ್ನು ಅಭಿನಂದಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು. ಇದನ್ನೂ ಓದಿ: SC-ST ಮೀಸಲಾತಿ ಹೆಚ್ಚಳಕ್ಕೆ ಸುಗ್ರೀವಾಜ್ಞೆ ಹೊರಡಿಸಲು ಮುಂದಾದ ಸರ್ಕಾರ

    ವಾಹನದಲ್ಲಿ ಎತ್ತರಕ್ಕೆ ಹೋದ ಅನುಭದ ಬಗ್ಗೆ ವಿವರಿಸಿದ ಮುಖ್ಯಮಂತ್ರಿಗಳು ವಿಧಾನಸೌಧದ ಗೋಪುರದಲ್ಲಿ ಶಿಲಾವಿನ್ಯಾಸವನ್ನು ಕಂಡು ಆಶ್ಚರ್ಯವಾಯಿತು. ಆ ಕಾಲದಲ್ಲಿ ಎಷ್ಟು ಶ್ರಮವಹಿಸಿ ಶಿಲೆಯನ್ನು ಕೊಂಡೊಯ್ದಿದ್ದಾರೆ. ಅಶೋಕ ಸ್ಥಂಭ ವನ್ನು ಹತ್ತಿರದಿಂದ ಕಂಡು ಸಂತೋಷವಾಯಿತು. ಅಗ್ನಿ ಅವಘಡಗಳಿಂದ ಜನರ ರಕ್ಷಣೆಯಾಗುತ್ತದೆ ಎನ್ನುವುದು ಸಮಾಧಾನಕರವಾದ ಸಂಗತಿಯಾಗಿದೆ ಎಂದರು.

    Live Tv
    [brid partner=56869869 player=32851 video=960834 autoplay=true]

  • ಬಸ್ ಪಲ್ಟಿ – ಭೀಕರ ರಸ್ತೆ ಅಪಘಾತದಲ್ಲಿ 20 ಮಂದಿ ಸಾವು

    ಬಸ್ ಪಲ್ಟಿ – ಭೀಕರ ರಸ್ತೆ ಅಪಘಾತದಲ್ಲಿ 20 ಮಂದಿ ಸಾವು

    ಬೊಗೋಟಾ: ನೈರುತ್ಯ ಕೊಲಂಬಿಯಾದ (Colambia) ಪ್ಯಾನ್-ಅಮೆರಿಕ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಬಸ್ ಪಲ್ಟಿಯಾಗಿ (Bus Accident) 20 ಮಂದಿ ದಾರುಣ ಸಾವಿಗೀಡಾದ ಘಟನೆ ತಡರಾತ್ರಿ ನಡೆದಿದೆ.

    ಕನಿಷ್ಠ 20 ಮಂದಿ ಮೃತಪಟ್ಟಿದ್ದು, 15 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ 3 ವರ್ಷದ ಬಾಲಕಿ ಮತ್ತು 8 ವರ್ಷದ ಬಾಲಕ ಸೇರಿದ್ದಾರೆ. ಈ ಬಸ್ಸು ಕೊಲಂಬಿಯಾದ ಟೊಮಾಕೊ ಬಂದರು ನಗರ ಹಾಗೂ ಈಶಾನ್ಯ ನಡುವೆ ಪ್ರಯಾಣಿಸುತ್ತಿತ್ತು ಎಂಬುದಾಗಿ ನರಿನೋ ವಿಭಾಗದ ಟ್ರಾಫಿಕ್ ಪೊಲೀಸ್ (Traffic Police) ಕ್ಯಾಪ್ಟನ್ ಆಲ್ಬರ್ಟ್ಲ್ಯಾಂಡ್ ಅಗುಡೆಲೊ ತಿಳಿಸಿದ್ದಾರೆ.

    ಮಂಜು ಕವಿದ ವಾತಾವರಣದಿಂದಾಗಿ ಚಾಲಕನ ನಿಯಂತ್ರಣ ತಪ್ಪಿದೆ ಎಂಬುದಾಗಿ ಪ್ರಾಥಮಿಕ ವರದಿ ಹೇಳಿದೆ. ಇನ್ನೇನಾದರೂ ತಾಂತ್ರಿಕ ವ್ಯವಸ್ಥೆಗಳಲ್ಲಿ ವ್ಯತ್ಯಾಸವಾಗಿದೆಯೇ ಎನ್ನುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಧರ್ಮಸ್ಥಳ, ಹಾಸನಾಂಬೆ ದರ್ಶನ ಮುಗಿಸಿ ವಾಪಸಾಗುತ್ತಿದ್ದಾಗ ಭೀಕರ ಅಪಘಾತ – ಮಕ್ಕಳು ಸೇರಿ 9 ಮಂದಿ ದುರ್ಮರಣ

    ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸ್, ಅಗ್ನಿಶಾಮಕ ದಳದ (Fire Departments) ಸಿಬ್ಬಂದಿ ಸತತ 9 ಗಂಟೆಗಳ ಕಾರ್ಯಾಚರಣೆ ನಡೆಸಿದ್ದಾರೆ. ಮೃತದೇಹಗಳನ್ನು ಹೊರತೆಗೆದು ಗಾಯಗೊಂಡವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೊಪ್ಪಳ: ಹಳ್ಳದಲ್ಲಿ ಕೊಚ್ಚಿಹೋದ ನಾಲ್ವರು ಮಹಿಳೆಯರು

    ಕೊಪ್ಪಳ: ಹಳ್ಳದಲ್ಲಿ ಕೊಚ್ಚಿಹೋದ ನಾಲ್ವರು ಮಹಿಳೆಯರು

    ಕೊಪ್ಪಳ: ಹರಿಯುತ್ತಿದ್ದ ನೀರಿನ ರಭಸಕ್ಕೆ ಹಳ್ಳದಲ್ಲಿ ನಾಲ್ವರು ಮಹಿಳೆಯರು (Women) ಕೊಚ್ಚಿಹೋಗಿರುವ ಘಟನೆ ಕೊಪ್ಪಳದ (Koppal) ಸಂಕನೂರು ಗ್ರಾಮದ ಹೊರವಲಯದಲ್ಲಿ ನಡೆದಿದೆ.

    ಯಲಬುರ್ಗಾ ತಾಲೂಕಿನ ಸಂಕನೂರು ಗ್ರಾಮದ ಗಿರಿಜಾ ಮಾಲಿಪಾಟೀಲ್(32), ಭುವನೇಶ್ವರಿ ಪೊಲೀಸ್ ಪಾಟೀಲ್(40), ಪವಿತ್ರಾ ಪೊಲೀಸ್ ಪಾಟೀಲ್(45) ಹಾಗೂ ವೀಣಾ ಮಾಲಿಪಾಟೀಲ್(19) ಮಹಿಳೆಯರು ನೀರಿಗೆ ಸಿಕ್ಕಿ ಕೊಚ್ಚಿಹೋಗಿದ್ದಾರೆ. ಕೆಲಸಕ್ಕೆ ಹೋಗಿ ಮರಳಿ ಗ್ರಾಮಕ್ಕೆ ಬರುವಾಗ ಘಟನೆ ನಡೆದಿದೆ. ಇದನ್ನೂ ಓದಿ: ನಮೀಬಿಯಾದಿಂದ ಬಂದ ಚೀತಾ `ಆಶಾ’ ಗರ್ಭಿಣಿಯಾಗಿದ್ಯಾ – ಅಧಿಕಾರಿಗಳು ಹೇಳೋದೇನು?

    ಸಂಕನೂರು ಗ್ರಾಮದ ಹೊರವಲಯದ ಹಳ್ಳದಲ್ಲಿ ನೀರನ ರಭಸವನ್ನೂ ಲೆಕ್ಕಿಸದೇ ಹಳ್ಳಕ್ಕೆ ಇಳಿಯಲು ಮುಂದಾಗಿದ್ದಾರೆ. ನೀರಿಗೆ ಇಳಿಯುತ್ತಿದ್ದಂತೆ ಪವಿತ್ರಾ, ವೀಣಾ ಕೊಚ್ಚಿಕೊಂಡು ಹೋಗಿದ್ದಾರೆ. ಗಿರಿಜಾ, ಭುವನೇಶ್ವರಿ ಕೆಲಹೊತ್ತು ಹಳ್ಳದಲ್ಲಿನ ಗಿಡಗಳನ್ನು ಹಿಡಿದುಕೊಂಡಿದ್ದರು. ಇನ್ನೇನು ಗ್ರಾಮಸ್ಥರು ರಕ್ಷಿಸಲು ಮುಂದಾಗುತ್ತಿದ್ದಂತೆ ಆಯತಪ್ಪಿ, ಅವರೂ ಕೊಚ್ಚಿಕೊಂಡು ಹೋಗಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳದ (Fire Brigade) ಸಿಬ್ಬಂದಿ ಆಗಮಿಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಯಲಬುರ್ಗಾ ಪೊಲೀಸ್ (Police) ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    Live Tv
    [brid partner=56869869 player=32851 video=960834 autoplay=true]

  • ನಿರ್ಮಾಣ ಹಂತದಲ್ಲಿದ್ದ 4 ಅಂತಸ್ತಿನ ಕಟ್ಟಡ ಕುಸಿತ – ಮೂವರ ದುರ್ಮರಣ

    ನಿರ್ಮಾಣ ಹಂತದಲ್ಲಿದ್ದ 4 ಅಂತಸ್ತಿನ ಕಟ್ಟಡ ಕುಸಿತ – ಮೂವರ ದುರ್ಮರಣ

    ನವದೆಹಲಿ: ಇಲ್ಲಿನ ಆಜಾದ್ ಮಾರುಕಟ್ಟೆ (Azad Market)ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ 4 ಅಂತಸ್ತಿನ ಕಟ್ಟಡ (Construction Building)ಕುಸಿದು ಮೂವರು ದುರ್ಮರಣಕ್ಕೀಡಾಗಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.

    ಕಟ್ಟಡಲ್ಲಿ ಕೆಲಸ ನಡೆಯುತ್ತಿದ್ದಾಗಲೇ ಇಂದು ಬೆಳಗ್ಗೆ 8:50ರ ಸುಮಾರಿಗೆ ಇದ್ದಕ್ಕಿದ್ದಂತೆ ಕುಸಿದಿದೆ. ಪ್ರಾಥಮಿಕ ವರದಿಗಳ ಪ್ರಕಾರ ಇಬ್ಬರು ಗಾಯಗೊಂಡಿರುವುದು ತಿಳಿದುಬಂದಿದೆ. ಇದನ್ನೂ ಓದಿ: Exclusive: ಈ ನಿಯಮ ಪಾಲನೆ ಮಾಡಿದ್ರೆ ಮಾತ್ರ ಶಾಲೆಗಳು ಅಧಿಕೃತ, ಇಲ್ಲವಾದ್ರೆ ಎತ್ತಂಗಡಿ

    ಮೂವರು ಮೃತಪಟ್ಟಿದ್ದು, ಕನಿಷ್ಠ ಐವರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಅಗ್ನಿಶಾಮಕ ದಳದ (Fire Rescue Team) ಸಿಬ್ಬಂದಿ ಹಾಗೂ ಸ್ಥಳೀಯ ಪೊಲೀಸರು (Police) ಸ್ಥಳಕ್ಕೆ ಆಗಮಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

    Live Tv
    [brid partner=56869869 player=32851 video=960834 autoplay=true]