Tag: ಅಗ್ನಿಶಾಮಕ ದಳ

  • ದೆಹಲಿಯ ಕಟ್ಟಡವೊಂದರ 9ನೇ ಮಹಡಿ ಬೆಂಕಿಗಾಹುತಿ – ತಪ್ಪಿದ ದುರಂತ, ವರದಾನವಾಯ್ತು ವರುಣ

    ದೆಹಲಿಯ ಕಟ್ಟಡವೊಂದರ 9ನೇ ಮಹಡಿ ಬೆಂಕಿಗಾಹುತಿ – ತಪ್ಪಿದ ದುರಂತ, ವರದಾನವಾಯ್ತು ವರುಣ

    ನವದೆಹಲಿ: ಇಲ್ಲಿನ ಬರಾಖಂಬಾ ರಸ್ತೆಯಲ್ಲಿರುವ ಡಿಸಿಎಂ ಕಟ್ಟಡದ (DCM Building) 9ನೇ ಮಹಡಿಯಲ್ಲಿ ಶನಿವಾರ ಭಾರೀ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಅನೇಕ ವಸ್ತುಗಳು ಸುಟ್ಟು ಭಸ್ಮವಾಗಿವೆ. ಸೂಕ್ತ ಸಮಯಕ್ಕೆ ಮಳೆಯೂ ಅಪ್ಪಳಿಸಿದ್ದರಿಂದ ಹಾನಿ ಪ್ರಮಾಣ ಕಡಿಮೆಯಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

    ಶನಿವಾರ ಸಂಜೆ 6:21ರ ಸುಮಾರಿಗೆ ಕಟ್ಟಡಕ್ಕೆ ಬೆಂಕಿ ಬಿದ್ದಿರುವ ಕುರಿತು ಕರೆ ಬಂದ ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. 10 ಅಗ್ನಿಶಾಮಕ ವಾಹನಗಳು (Fire Engines) ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, ಈವರೆಗೆ ಯಾವುದೇ ಸಾವು-ನೋವಿನ ವರದಿಯಾಗಿಲ್ಲ. ಇದನ್ನೂ ಓದಿ: ದೆಹಲಿ ಪ್ರವಾಹಕ್ಕೆ ಬಿಜೆಪಿಯೇ ಕಾರಣ – AAP ಆರೋಪ

    ಕನ್ನಾಟ್ ಸ್ಥಳಕ್ಕೆ ಸಮೀಪದಲ್ಲಿರುವ ಬಾರಾಖಂಬಾ ರಸ್ತೆಯಲ್ಲಿರುವ ಡಿಸಿಎಂ ಕಟ್ಟಡದ 9ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಭಾರೀ ಪ್ರಮಾಣದಲ್ಲಿ ಧಗಧಗಿಸುತ್ತಿರುವುದನ್ನು ಕಂಡ ಕಟ್ಟಡದ ಮಾಲೀಕರು ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಅಗ್ನಿ ಶಾಮಕ ವಾಹನಗಳು ಬೆಂಕಿ ನಂದಿಸುವ ಕಾರ್ಯಾಚರಣೆಗಿಳಿಯುತ್ತಿದ್ದಂತೆ ಮಳೆಯೂ ಸಹ ಅಪ್ಪಳಿಸಿದ್ದು, ಕಾರ್ಯಾಚರಣೆಗೆ ನೆರವಾಗಿದೆ.

    ಈ ಕುರಿತ ವೀಡಿಯೋ ಹಾಗೂ ಚಿತ್ರಗಳು ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಮದುವೆಯಾದ 2 ಗಂಟೆಯಲ್ಲೇ ಪತ್ನಿಗೆ ತಲಾಖ್ ನೀಡಿದ ಪತಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮರಕ್ಕೆ ಕಾರು ಡಿಕ್ಕಿ – ಕುಟುಂಬದ ನಾಲ್ವರು ಸಜೀವ ದಹನ

    ಮರಕ್ಕೆ ಕಾರು ಡಿಕ್ಕಿ – ಕುಟುಂಬದ ನಾಲ್ವರು ಸಜೀವ ದಹನ

    ಭೋಪಾಲ್: ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇತ್ತೀಚಿಗೆ ಮದುವೆಯಾಗಿದ್ದ ದಂಪತಿ ಸೇರಿದಂತೆ ಕುಟುಂಬದ ನಾಲ್ವರು ಸಜೀವ ದಹನವಾಗಿರುವ (Burnt) ಘಟನೆ ಮಧ್ಯಪ್ರದೇಶದಲ್ಲಿ (Madhya Pradesh) ನಡೆದಿದೆ.

    ಮಧ್ಯಪ್ರದೇಶದ ಹರ್ದಾ (Harda) ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಕಾರು ವೇಗವಾಗಿ ಬಂದು ಮರಕ್ಕೆ ಗುದ್ದಿದ ಪರಿಣಾಮ ಕಾರಿಗೆ ಬೆಂಕಿ ಹತ್ತಿಕೊಂಡು ಕಾರಿನಲ್ಲಿದ್ದ ಮೂವರು ಪುರುಷರು ಮತ್ತು ಒರ್ವ ಮಹಿಳೆ ಜೀವಂತವಾಗಿ ಸುಟ್ಟುಹೋಗಿದ್ದಾರೆ. ಮದುವೆಗೆ ತೆರಳಿದ್ದ ಕುಟುಂಬಸ್ಥರು ಮನೆಗೆ ಹಿಂತಿರುಗುವ ವೇಳೆ ಘಟನೆ ನಡೆದಿದ್ದು, ಆರು ತಿಂಗಳ ಹಿಂದೆ ವಿವಾಹವಾಗಿದ್ದ ದಂಪತಿಗಳು ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: 25 ಬಾರಿ ಚಾಕುವಿನಿಂದ ಇರಿದು ಮಗಳನ್ನೇ ಕೊಂದ ಪಾಪಿ ತಂದೆ!

    ಘಟನೆಯ ಬಗ್ಗೆ ಮಾಹಿತಿ ತಿಳಿದ ತಕ್ಷಣ ಪೊಲೀಸರು ಅಗ್ನಿಶಾಮಕ ದಳದೊಂದಿಗೆ (Fire Brigade) ಸ್ಥಳಕ್ಕಾಗಮಿಸಿದ್ದು, ಬೆಂಕಿಯಲ್ಲಿ ಬೆಂದಿದ್ದ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲೆಯ ತಿಮರ್ನಿ ಆರೋಗ್ಯ ಸಮುದಾಯ ಕೇಂದ್ರಕ್ಕೆ ಕಳುಹಿಸಲಾಯಿತು. ಅಪಘಾತದಲ್ಲಿ ಮೃತಪಟ್ಟವರನ್ನು ಅಖಿಲೇಶ್ ಕುಶ್ವಾಹ, ಗೋಲು ಚೌಧರಿ, ರಾಕೇಶ್ ಕುಶ್ವಾಹ ಮತ್ತು ಅವರ ಪತ್ನಿ ಶಿವಾನಿ ಎಂದು ಗುರುತಿಸಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಆದಾಯ ತೆರಿಗೆ ಅಧಿಕಾರಿಗಳಂತೆ ನಟಿಸಿ ಚಿನ್ನ ಕಳವು – ನಾಲ್ವರ ಬಂಧನ

  • ಆಯತಪ್ಪಿ ಕೆರೆಗೆ ಬಿದ್ದು 4 ವರ್ಷದ ಬಾಲಕ ಸಾವು

    ಆಯತಪ್ಪಿ ಕೆರೆಗೆ ಬಿದ್ದು 4 ವರ್ಷದ ಬಾಲಕ ಸಾವು

    ಬೆಂಗಳೂರು: ಕೆರೆಯ ಬಳಿ ಆಟ ಆಡುತ್ತಿದ್ದ ಸಂದರ್ಭ ಆಯತಪ್ಪಿ ನೀರಿಗೆ ಬಿದ್ದು 4 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ಬೆಂಗಳೂರು (Bengaluru) ಹೊರವಲಯದ ಆನೇಕಲ್‌ನಲ್ಲಿ (Anekal) ನಡೆದಿದೆ.

    ಆನೇಕಲ್ ತಾಲೂಕಿನ ಗಟ್ಟಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಶಕ್ತಿ (4) ಮೃತ ಬಾಲಕ. ಬಾಲಕನ ಪೋಷಕರು ಮಾಗಡಿ ರಸ್ತೆಯ ಅಗ್ರಹಾರ ಮೂಲದವರಾಗಿದ್ದಾರೆ. ಬಾಲಕ ಪರಪ್ಪನ ಅಗ್ರಹಾರ ಸಮೀಪದ ನಾಗನಾಥಪುರಕ್ಕೆ (Naganathapura) ತನ್ನ ಅಜ್ಜಿ ಮನೆಗೆಂದು ಬಂದಿದ್ದು, ಕೆರೆ (Lake) ಬಳಿ ಆಟವಾಡುತ್ತಿದ್ದಾಗ ಆಯತಪ್ಪಿ ನೀರಿಗೆ ಬಿದ್ದು ಉಸಿರುಗಟ್ಟಿ ಮೃತಪಟ್ಟಿದ್ದಾನೆ. ಇದನ್ನೂ ಓದಿ: ಕೋಲಾರದಲ್ಲಿ ಹಳಿ ತಪ್ಪಿದ ಡಬಲ್‌ಡೆಕ್ಕರ್ ರೈಲು – ತಪ್ಪಿದ ಭಾರೀ ದುರಂತ

    ಘಟನೆ ನಡೆದ ಬಳಿಕ ಅಗ್ನಿಶಾಮಕ ದಳ (Fire Brigade) ಸಿಬ್ಬಂದಿ ಶೋಧಕಾರ್ಯ ನಡೆಸಿದ್ದು, ಸುಮಾರು 24 ಗಂಟೆಗಳ ಕಾಲ ಬಾಲಕನಿಗಾಗಿ ಕಾರ್ಯಾಚರಣೆನಡೆಸಿ ಬಾಲಕನ ಮೃತದೇಹವನ್ನು ಹೊರತೆಗೆದಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡುವ ಸಂದರ್ಭ ಪೋಷಕರು ಅಡ್ಡಿಪಡಿಸಿದ್ದಾರೆ. ಕೊನೆಗೆ ಅವರ ಮನವೊಲಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ. ಇದನ್ನೂ ಓದಿ: ಹಣವಿಲ್ಲದ್ದಕ್ಕೆ 5 ತಿಂಗಳ ಮಗುವಿನ ಶವವನ್ನು ಬ್ಯಾಗ್‍ನಲ್ಲಿ ತುಂಬಿಕೊಂಡು ಬಸ್‍ನಲ್ಲೇ ಕ್ರಮಿಸಿದ ತಂದೆ

    ಘಟನಾ ಸ್ಥಳದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಹೆಬ್ಬುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕಲ್ಲಿನಿಂದ ಜಜ್ಜಿ ಮಹಿಳೆಯ ಬರ್ಬರ ಹತ್ಯೆ

  • ಐತಿಹಾಸಿಕ ಬಾವಿಗೆ ಬಿದ್ದು ಯುವಕ ಆತ್ಮಹತ್ಯೆ

    ಐತಿಹಾಸಿಕ ಬಾವಿಗೆ ಬಿದ್ದು ಯುವಕ ಆತ್ಮಹತ್ಯೆ

    ಬೀದರ್: ಐತಿಹಾಸಿಕ ಬಾವಿಗೆ (Well) ಬಿದ್ದು ಯುವಕ ಆತ್ಮಹತ್ಯೆಗೆ (Suicide) ಶರಣಾದ ಘಟನೆ ಬೀದರ್ (Bidar) ತಾಲೂಕಿನ ಹಮಿಲಾಪೂರ್ ಗ್ರಾಮದ ಬಳಿ ನಡೆದಿದೆ.

    ಬೀರಪ್ಪ (16) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಯುವಕನಾಗಿದ್ದು, ಆತ್ಮಹತ್ಯೆಗೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ. ವಿಷಯ ತಿಳಿದು ಅಗ್ನಿಶಾಮಕ ದಳದ (Fire Brigade) ಸಿಬ್ಬಂದಿಗಳು ಮೃತದೇಹಕ್ಕಾಗಿ ಬಾವಿಯಲ್ಲಿ ಸತತ ಎರಡು ಗಂಟೆಗಳ ಕಾಲ ಶೋಧ ಕಾರ್ಯ ನಡೆಸಿದ್ದಾರೆ. ಬಳಿಕ ಹಗ್ಗದ ಮೂಲಕ ಮೃತದೇಹವನ್ನು ಬಾವಿಯಿಂದ ಮೇಲೆತ್ತುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: 12 ಸಾವಿರ ಕೋಟಿ ಮೌಲ್ಯದ 2.5 ಟನ್ ಡ್ರಗ್ಸ್ ಜಪ್ತಿ – ಪಾಕ್ ಆರೋಪಿಯ ಬಂಧನ

    ಈ ಕುರಿತು ಬೀದರ್ ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಚರಂಡಿ ಸ್ವಚ್ಛಗೊಳಿಸುತ್ತಿದ್ದಾಗ ಉಸಿರುಗಟ್ಟಿ ಒಂದೇ ಕುಟುಂಬದ 5 ಕಾರ್ಮಿಕರು ಸಾವು

  • ರೈಸ್ ಮಿಲ್ ಕಟ್ಟಡ ಕುಸಿತ – ನಾಲ್ವರು ಸಾವು, 20 ಮಂದಿಗೆ ಗಾಯ

    ರೈಸ್ ಮಿಲ್ ಕಟ್ಟಡ ಕುಸಿತ – ನಾಲ್ವರು ಸಾವು, 20 ಮಂದಿಗೆ ಗಾಯ

    ಚಂಡೀಗಢ: ಮೂರು ಅಂತಸ್ತಿನ ರೈಸ್ ಮಿಲ್ (Rice Mill) ಕಟ್ಟಡ ಕುಸಿದು (Collapse) ನಾಲ್ವರು ಸಾವನ್ನಪ್ಪಿ, 20 ಮಂದಿ ಗಂಭೀರ ಗಾಯಗೊಂಡಿರುವ ಘಟನೆ ಹರಿಯಾಣದ (Haryana) ಕರ್ನಾಲ್‌ನಲ್ಲಿ ನಡೆದಿದೆ.

    ಸೋಮವಾರ ರಾತ್ರಿ ಈ ಘಟನೆ ನಡೆದಿದ್ದು, ಕಟ್ಟಡ ಕುಸಿದ ಸಂದರ್ಭದಲ್ಲಿ ಕಟ್ಟಡದೊಳಗೆ ಸುಮಾರು 150 ಜನ ಕಾರ್ಮಿಕರಿದ್ದರು ಎಂದು ವರದಿಗಳು ತಿಳಿಸಿವೆ. ಕಟ್ಟಡ ಕುಸಿದ ವೇಳೆ 24 ಕಾರ್ಮಿಕರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದರು. ತಕ್ಷಣವೇ ಅಗ್ನಿಶಾಮಕ ದಳ (Fire Brigade), ಪೊಲೀಸ್ ಹಾಗೂ ಆಂಬುಲೆನ್ಸ್ ಸ್ಥಳಕ್ಕೆ ಧಾವಿಸಿದ್ದು, ಕಾರ್ಯಾಚರಣೆ ನಡೆಸಿ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದವರನ್ನು ಹೊರತೆಗೆದಿದ್ದಾರೆ. ಈ ವೇಳೆ ನಾಲ್ವರು ಮೃತಪಟ್ಟಿದ್ದು, ಉಳಿದ 20 ಮಂದಿ ಗಂಭೀರ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಅಕ್ರಮ ಮರಳು ಗಣಿಗಾರಿಕೆ ತಡೆಯಲು ಬಂದಿದ್ದ ಅಧಿಕಾರಿಗಳ ಮೇಲೆ ಕಲ್ಲು, ದೊಣ್ಣೆಯಿಂದ ಹಲ್ಲೆ 

    ರಕ್ಷಣಾ ಕಾರ್ಯಾಚರಣೆಗಳು ಮುಂದುವರೆದಿದ್ದು, ಘಟನೆ ಕುರಿತು ತನಿಖೆ ನಡೆಸಲು ಸಮಿತಿ ರಚಿಸಲಾಗುವುದು. ಅಲ್ಲದೇ ರೈಸ್ ಮಿಲ್ ಮಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಅನೀಶ್ ಯಾದವ್ ತಿಳಿಸಿದ್ದಾರೆ. ಇದನ್ನೂ ಓದಿ: BWSSB ಅರೆಬರೆ ಕಾಮಗಾರಿ – ಗುಂಡಿಗೆ ಬಿದ್ದ ಬಾಲಕ ಬಲಿ

  • ಮೀನು ಹಿಡಿಯಲು ಹೋಗಿ ಬಾಲಕರಿಬ್ಬರ ದಾರುಣ ಸಾವು

    ಮೀನು ಹಿಡಿಯಲು ಹೋಗಿ ಬಾಲಕರಿಬ್ಬರ ದಾರುಣ ಸಾವು

    ರಾಮನಗರ: ಕೆರೆಗೆ ಮೀನು ಹಿಡಿಯಲು ಹೋಗಿದ್ದ ಮೂವರ ಪೈಕಿ ಇಬ್ಬರು ಮಕ್ಕಳು ನೀರು ಪಾಲಾಗಿರುವ ದಾರುಣ ಘಟನೆ ಹಾರೋಹಳ್ಳಿಯ (Harohalli) ಮಾರಸಂದ್ರ ಗ್ರಾಮದಲ್ಲಿ ನಡೆದಿದೆ.

    ಮೃತಪಟ್ಟ ಬಾಲಕರನ್ನು ಪಟ್ಟಣದ ಸರ್ಕಲ್ ನಿವಾಸಿಗಳಾದ ಇಸ್ಮಾಯಿಲ್(13) ಮತ್ತು ಆಫ್ರಿದ್(12) ಎಂದು ಗುರುತಿಸಲಾಗಿದೆ. ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಮೀನು ಹಿಡಿಯುವ ಆಸೆಯಿಂದ ಪಟ್ಟಣದ ಮಸೀದಿ ಸರ್ಕಲ್ ನಿವಾಸಿಗಳಾದ ಮೂವರು ಬಾಲಕರು ಮಾರಸಂದ್ರ ಕೆರೆಯಲ್ಲಿ ಮೀನು ಹಿಡಿಯಲು ತೆರಳಿದ್ದಾರೆ. ಈ ವೇಳೆ ಒಬ್ಬ ಬಾಲಕ ಕೆರೆಯಲ್ಲಿದ್ದ ಸತ್ತೆಗೆ ಸಿಲುಕಿ ಮುಳುಗುವುದನ್ನು ಕಂಡು ಮತ್ತೊಬ್ಬ ಬಾಲಕ ಆತನನ್ನು ರಕ್ಷಿಸಲು ತೆರಳಿದ್ದಾನೆ. ಇದನ್ನು ಕಂಡ ಇನ್ನೊಬ್ಬ ಬಾಲಕ ಭಯಗೊಂಡು ಓಡಿದ್ದಾನೆ. ಈ ವೇಳೆ ಪಕ್ಕದಲ್ಲೇ ಕೆಲಸ ಮಾಡುತ್ತಿದ್ದ ಕೆಲವರು ರಕ್ಷಣೆಗಾಗಿ ಓಡೋಡಿ ಬಂದಿದ್ದಾರೆ. ಆದರೆ ಅಷ್ಟರಲ್ಲೇ ಬಾಲಕರಿಬ್ಬರ ಪ್ರಾಣಪಕ್ಷಿ ಹಾರಿ ಹೋಗಿದೆ. ಇದನ್ನೂ ಓದಿ: ಹೆಂಡತಿ ಇಬ್ಬರು ಮಕ್ಕಳನ್ನು ಕೊಲೆಗೈದು ವ್ಯಕ್ತಿ ನೇಣಿಗೆ ಶರಣು 

    ಈ ಸಂಬಂಧ ಸ್ಥಳೀಯರು ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಿದ್ದು, ಪೊಲೀಸರು ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ (Fire Brigade) ಸಿಬ್ಬಂದಿಗಳ ಸಹಾಯದಿಂದ ಬಾಲಕರಿಬ್ಬರ ಶವವನ್ನು ಹೊರತೆಗೆದಿದ್ದಾರೆ. ಮೃತ ಬಾಲಕರ ಪೋಷಕರು ಮೆಕ್ಕಾ ಮದೀನ ತೀರ್ಥಯಾತ್ರೆಗೆ ತೆರಳಿದ್ದು, ಸಾರ್ವಜನಿಕರು ಘಟನೆ ಕುರಿತು ಮರುಕ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: 100 ವರ್ಷದ ಹಳೆಯ ಮರ ಶೆಡ್ ಮೇಲೆ ಬಿದ್ದು 7 ಮಂದಿ ದಾರುಣ ಸಾವು

  • ಬೆಂಕಿ ಹೊತ್ತಿಕೊಂಡು ಎರಡು ಅಂಗಡಿಗಳು ಭಸ್ಮ

    ಬೆಂಕಿ ಹೊತ್ತಿಕೊಂಡು ಎರಡು ಅಂಗಡಿಗಳು ಭಸ್ಮ

    ಬೆಂಗಳೂರು: ಗ್ಯಾರೇಜ್ (Garej) ಅಂಗಡಿಗೆ ಹೊತ್ತಿಕೊಂಡ ಬೆಂಕಿ ಪಕ್ಕದ ಅಂಗಡಿಗೂ ಆವರಿಸಿ ಅಪಾರ ಪ್ರಮಾಣದ ವಸ್ತುಗಳು ಬೆಂಕಿಗಾಹುತಿಯಾಗಿರುವ ಘಟನೆ ಬೆಂಗಳೂರು (Bengaluru) ಹೊರವಲಯದ ಆನೇಕಲ್ (Anekal) ತಾಲೂಕಿನ ಜಿಗಣಿಯ ಎಪಿಸಿ ವೃತ್ತದಲ್ಲಿ ನಡೆದಿದೆ.

    ಗೋಪಿ ಎಂಬವರಿಗೆ ಸೇರಿದ ಗ್ಯಾರೇಜ್‌ನಲ್ಲಿ ಸೋಮವಾರ ಮಧ್ಯಾಹ್ನ 2:30ರ ಸಮಯಕ್ಕೆ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ಗ್ಯಾರೇಜ್‌ನಲ್ಲಿದ್ದ ಟಯರ್ ಹಾಗೂ ಆಯಿಲ್‌ಗೆ ಬೆಂಕಿ ಆವರಿಸಿಕೊಂಡಿದ್ದು, ಇದರಿಂದ ಪಕ್ಕದ ಸ್ಟಿಕ್ಕರ್ ಡಿಸೈನ್ ಅಂಗಡಿಗೂ ಕೂಡ ಬೆಂಕಿ ಆವರಿಸಿಕೊಂಡಿದೆ. ಆಯಿಲ್‌ಗೆ ಹತ್ತಿಕೊಂಡಿದ್ದ ಬೆಂಕಿಯ ಕೆನ್ನಾಲಿಗೆ ಇಡೀ ಕಟ್ಟಡವನ್ನೇ ಆವರಿಸಿದ್ದು, ಎರಡೂ ಅಂಗಡಿಯಲ್ಲಿರುವ ಬಹುತೇಕ ವಸ್ತುಗಳು ಬೆಂಕಿಗಾಹುತಿಯಾಗಿದೆ. ಇದನ್ನೂ ಓದಿ: 4 ಮಕ್ಕಳೊಂದಿಗೆ ಬಾವಿಗೆ ಹಾರಿದ ಮಹಿಳೆ – ಸಾವಿಗೆ ಹೆದರಿ ಹಿರಿಯ ಮಗಳೊಂದಿಗೆ ಮೇಲೆ ಬಂದ್ಲು

    ಗ್ಯಾರೇಜ್‌ನ ಆಯಿಲ್‌ಗೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹತ್ತಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದ್ದು, ಘಟನೆಯಿಂದಾಗಿ ಕೆಲ ಹೊತ್ತು ಅಕ್ಕಪಕ್ಕದ ಅಂಗಡಿ ಹಾಗೂ ಕಟ್ಟಡದಲ್ಲಿದ್ದ ಮನೆಗಳ ನಿವಾಸಿಗಳು ಆತಂಕಕ್ಕೆ ಒಳಗಾಗಬೇಕಾಯಿತು. ಜನನಿ ಬಿಡ ಪ್ರದೇಶದಲ್ಲಿ ಈ ಘಟನೆ ನಡೆದಿದ್ದರಿಂದ ಬಿಸಿಲಿನ ಝಳಕ್ಕೆ ಬೆಂಕಿಯ ಆರ್ಭಟ ಹೆಚ್ಚಾಗಿತ್ತು. ಸ್ಥಳಕ್ಕೆ ಆಗಮಿಸಿದ ಎರಡು ಅಗ್ನಿಶಾಮಕ ವಾಹನಗಳು (Fire Department) ಬೆಂಕಿಯನ್ನು ಹತೋಟಿಗೆ ತಂದಿದ್ದು, ಅಕ್ಕಪಕ್ಕದ ಅಂಗಡಿ ಹಾಗೂ ನಿವಾಸಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

    ಈ ಘಟನೆ ಕುರಿತು ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮಾಂಸ ತರದ್ದಕ್ಕೆ ನಡೆದ ಜಗಳ ಪತ್ನಿಯ ಕೊಲೆಯಲ್ಲಿ ಅಂತ್ಯ

  • ನೋಡನೋಡುತ್ತಲೇ ಕುಸಿದೇ ಬಿಡ್ತು ಬೆಂಕಿ ಹೊತ್ತಿಕೊಂಡಿದ್ದ ಕಟ್ಟಡ

    ನೋಡನೋಡುತ್ತಲೇ ಕುಸಿದೇ ಬಿಡ್ತು ಬೆಂಕಿ ಹೊತ್ತಿಕೊಂಡಿದ್ದ ಕಟ್ಟಡ

    ನವದೆಹಲಿ: ಬೆಂಕಿ (Fire) ಹೊತ್ತಿಕೊಂಡಿದ್ದ 3 ಅಂತಸ್ತಿನ ಕಟ್ಟಡವೊಂದು (Building) ನೋಡನೋಡುತ್ತಲೇ ಕುಸಿದು ಬಿದ್ದಿದ್ದು (Building Collapse), ಬೆಂಕಿ ನಂದಿಸಲು ಸ್ಥಳಕ್ಕೆ ಆಗಮಿಸಿದ್ದ ನೂರಾರು ಅಗ್ನಿಶಾಮಕ ಸಿಬ್ಬಂದಿ (firefighters) ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

    ಉತ್ತರ ದೆಹಲಿಯ (Delhi) ರೋಶನಾರ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಬುಧವಾರ ಬೆಂಕಿ ತಗುಲಿದ್ದ 3 ಅಂತಸ್ತಿನ ಕಟ್ಟಡ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದೆ. ಅಗ್ನಿಶಾಮಕ ದಳದವರು ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಕಟ್ಟಡ ಕುಸಿದಿದೆ. ಅದೃಷ್ಟವಶಾತ್ ಯಾವುದೇ ಸಿಬ್ಬಂದಿಗೂ ಪ್ರಾಣಾಪಾಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ವರದಿಗಳ ಪ್ರಕಾರ ಕಟ್ಟಡಕ್ಕೆ ಬೆಂಕಿ ಬುಧವಾರ ಬೆಳಗ್ಗೆ 11:30ರ ವೇಳೆಗೆ ಹೊತ್ತಿಕೊಂಡಿದೆ. ಬೆಂಕಿಯನ್ನು ನಿಯಂತ್ರಿಸಲು ಅಗ್ನಿಶಾಮಕ ದಳ 18 ಟ್ರಕ್‌ಗಳನ್ನು ಕಳುಹಿಸಿತ್ತು. ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನಿಸುತ್ತಿದ್ದಾಗ ಕಟ್ಟಡ ಕುಸಿದಿದೆ. ಕೇವಲ 5 ಸೆಕೆಂಡುಗಳಲ್ಲಿ ಕಟ್ಟಡ ಸಂಪೂರ್ಣವಾಗಿ ನೆಲಸಮವಾಗಿದೆ. ಇದನ್ನೂ ಓದಿ: ಹಾಡಹಗಲೇ ಕೊಲೆ – ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್‌ ಆಪ್ತನ ಮನೆ ನೆಲಸಮ

    ಕಟ್ಟಡಕ್ಕೆ ಬೆಂಕಿ ಹೊತ್ತಿಕೊಳ್ಳಲು ಕಾರಣವೇನು ಎಂಬುದನ್ನು ಕಂಡುಹಿಡಿಯಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ದಿನಕ್ಕೆ 5 ಬಾರಿ ನಮಾಜ್, 2 ಸಸಿ ನೆಡಬೇಕು – ಅಪರಾಧಿಗೆ ವಿಭಿನ್ನ ಶಿಕ್ಷೆ ನೀಡಿದ ಕೋರ್ಟ್

  • ರೈಲುಗಳ ನಡುವೆ ಭೀಕರ ಅಪಘಾತ- 32 ಮಂದಿ ದುರ್ಮರಣ

    ರೈಲುಗಳ ನಡುವೆ ಭೀಕರ ಅಪಘಾತ- 32 ಮಂದಿ ದುರ್ಮರಣ

    ಅಥೆನ್ಸ್: ಪ್ಯಾಸೆಂಜರ್ ಹಾಗೂ ಗೂಡ್ಸ್ ರೈಲಿನ (Train) ನಡುವೆ ಅಪಘಾತ ಸಂಭವಿಸಿ 32 ಜನರು ಮೃತಪಟ್ಟು, 85 ಮಂದಿ ಗಾಯಗೊಂಡ ಘಟನೆ ಮಂಗಳವಾರ ತಡರಾತ್ರಿ ಗ್ರೀಸ್‍ನ (Greece) ಟೆಂಪೆಯಲ್ಲಿ ನಡೆದಿದೆ.

    ಘಟನೆ ಬಗ್ಗೆ ಮಾಹಿತಿ ನೀಡಿರುವ ಥೆಸ್ಸಾಲಿ ಪ್ರದೇಶದ ಗವರ್ನರ್ (Governor) ಕಾನ್ಸಾಂಟಿನೋಸ್ ಅಗೋರಾಸ್ಟೋಸ್, ಅಪಘಾತ (Accident) ಬಹಳ ಪ್ರಬಲವಾಗಿ ನಡೆದಿದೆ. ರೈಲಿನ ಮುಂಭಾಗದ ನಾಲ್ಕು ಬೋಗಿಗಳು ಹಳಿ ತಪ್ಪಿವೆ. ಎದುರಿನ ಎರಡು ಬೋಗಿಗಳು ಸಂಪೂರ್ಣ ನಜ್ಜುಗುಜ್ಜಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಲಾರಿ ಮೇಲೆ ಮುರಿದು ಬಿದ್ದ ಭಾರೀ ಗಾತ್ರದ ಕಬ್ಬಿಣದ ಸಲಾಕೆ- ತಪ್ಪಿದ ಅನಾಹುತ

    ರೈಲಿನಲ್ಲಿ ಸುಮಾರು 350 ಪ್ರಯಾಣಿಕರಿದ್ದರು. ಅದರಲ್ಲಿ 250 ಪ್ರಯಾಣಿಕರನ್ನು (Passengers) ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಗವರ್ನರ್ ತಿಳಿಸಿದ್ದಾರೆ.

    ಎರಡು ರೈಲುಗಳ ನಡುವಿನ ಘರ್ಷಣೆಯ ತೀವ್ರತೆಯಿಂದ ರಕ್ಷಣಾ ಕಾರ್ಯದಲ್ಲಿ ವಿಳಂಬವಾಗುತ್ತಿದೆ ಎಂದು ಅಗ್ನಿಶಾಮಕ ದಳದ (Fire service) ವಕ್ತಾರ ವಾಸಿಲಿಸ್ ವರ್ತಕೊಯಾನಿಸ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

    ರಕ್ಷಣಾ ಕಾರ್ಯಕ್ಕೆ ಸೇನೆಯ ನೆರವುಕೋರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕಾಣೆಯಾಗಿದ್ದ 6ರ ಬಾಲಕಿ ಶವವಾಗಿ ಪತ್ತೆ – ಅತ್ಯಾಚಾರದ ಶಂಕೆ

  • ಮಡಿಕೇರಿ ಫರ್ನಿಚರ್ ಅಂಗಡಿಯಲ್ಲಿ ಅವಘಡ – 7 ಗಂಟೆ ಕಾರ್ಯಾಚರಣೆ ನಡೆಸಿದ್ರೂ ನಿಯಂತ್ರಣಕ್ಕೆ ಬಾರದ ಅಗ್ನಿ

    ಮಡಿಕೇರಿ ಫರ್ನಿಚರ್ ಅಂಗಡಿಯಲ್ಲಿ ಅವಘಡ – 7 ಗಂಟೆ ಕಾರ್ಯಾಚರಣೆ ನಡೆಸಿದ್ರೂ ನಿಯಂತ್ರಣಕ್ಕೆ ಬಾರದ ಅಗ್ನಿ

    ಮಡಿಕೇರಿ: ನಗರದಲ್ಲಿ ಇರುವ ಪೀಠೋಪಕರಣಗಳ ಅಂಗಡಿಯೊಂದರಲ್ಲಿ (Furniture Store) ಸೋಮವಾರ ನಸುಕಿನ ವೇಳೆ ಬೆಂಕಿ (Fire) ಕಾಣಿಸಿಕೊಂಡಿದೆ. ಸತತ 7 ಗಂಟೆಗಳಿಂದ ಅಗ್ನಿಶಾಮಕ ದಳದವರು ಬೆಂಕಿ ನಂದಿಸಲು ಹರಸಾಹಸ ಪಟ್ಟರೂ ಇನ್ನೂ ಅಗ್ನಿ ನಿಯಂತ್ರಣಕ್ಕೆ ಬಂದಿಲ್ಲ ಎಂದು ತಿಳಿಸಿದ್ದಾರೆ.

    ನಗರದ ಕೈಗಾರಿಕಾ ಬಡಾವಣೆಯಲ್ಲಿ ಪ್ರಶಾಂತ್ ಫರ್ನಿಚರ್ ಅವರ ದಾಸ್ತಾನು ಮಳಿಗೆಗೆ ಸೋಮವಾರ ನಸುಕಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಕೆನ್ನಾಗಿಲಿಗೆ ಎಷ್ಟು ತೀವ್ರವಾಗಿದೆ ಎಂದರೆ 30 ಲೋಡ್‌ನಷ್ಟು ನೀರು ಖಾಲಿಯಾದರೂ ಬೆಂಕಿ ಇನ್ನೂ ಉರಿಯುತ್ತಿದೆ. ಸ್ಥಳಕ್ಕೆ ಬಂದಿರುವ ಪೊಲೀಸರು ಕೈಗಾರಿಕಾ ಬಡಾವಣೆಯ ಕೋಹಿನೂರ್ ಜಂಕ್ಷನ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಸಂಚಾರವನ್ನು ಬಂದ್ ಮಾಡಿದ್ದಾರೆ.

    ನೀರು ತುಂಬಿಕೊಂಡ ಅಗ್ನಿಶಾಮಕ ವಾಹನಗಳು ಒಂದರ ಮೇಲೊಂದರಂತೆ ಸ್ಥಳಕ್ಕೆ ಬರುತ್ತಲೇ ಇವೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸಪಡುತ್ತಿದ್ದಾರೆ. ಮರದ ವಸ್ತುಗಳಿಗೆ ಹೊತ್ತಿಕೊಂಡಿರುವ ಬೆಂಕಿಯನ್ನು ನಂದಿಸಲು ಸಾಧ್ಯವಾಗುತ್ತಿಲ್ಲ ಎಂದು ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಡಿ.ರೂಪಾ, ರೋಹಿಣಿ ಸಿಂಧೂರಿಗೆ ನೋಟಿಸ್ ನೀಡಲು ಸೂಚನೆ

    ಕಳೆದ ರಾತ್ರಿ 2 ಗಂಟೆ ವೇಳೆಗೆ ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಫರ್ನಿಚರ್ ಅಂಗಡಿಯೊಳಗೆ ಸಣ್ಣ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ನೋಡನೋಡುತ್ತಲೇ ಬೆಂಕಿಯ ಕೆನ್ನಾಲಿಗೆ ಲಕ್ಷಾಂತರ ರೂ. ಬೆಲೆ ಬಾಳುವ ಮರದ ವಸ್ತುಗಳನ್ನು ಸಂಪೂರ್ಣವಾಗಿ ನಾಶಪಡಿಸಿದೆ. ಫರ್ನಿಚರ್ ಅಂಗಡಿ ಒಳಗೆ ಮೂವರು ಕೂಲಿ ಕಾರ್ಮಿಕರು ಮಲಗುತ್ತಿದ್ದರು. ಬೆಂಕಿ ಕಾಣಿಸಿಕೊಳ್ಳುತ್ತಲೇ ಅವರು ಅಲ್ಲಿಂದ ಹೊರ ಬಂದು ತಮ್ಮ ಪ್ರಾಣವನ್ನು ಉಳಿಸಿಕೊಂಡಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯವನ್ನು ಮುಂದುವರಿಸಿದ್ದಾರೆ. ಇದನ್ನೂ ಓದಿ: ಮೋರ್ಬಿ ಸೇತುವೆ ದುರಂತ – ಅರ್ಧದಷ್ಟು ತಂತಿಗಳಿಗೆ ತುಕ್ಕು ಹಿಡಿದಿದ್ದೇ ಕಾರಣ: ತನಿಖಾ ವರದಿ

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k