Tag: ಅಗ್ನಿಶಾಮಕ ದಳ

  • ಮಾರ್ಬಲ್ ಅಂಗಡಿಯಲ್ಲಿ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಬೆಂಕಿಗಾಹುತಿ

    ಮಾರ್ಬಲ್ ಅಂಗಡಿಯಲ್ಲಿ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಬೆಂಕಿಗಾಹುತಿ

    ಕೊಡಗು: ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕುಶಾಲನಗರದಲ್ಲಿ ಮಾರ್ಬಲ್ ಅಂಗಡಿಯಲ್ಲಿ ಆಕಸ್ಮಿಕವಾಗಿ ಅಗ್ನಿ ಅವಘಡ ಸಂಭವಿಸಿದೆ.

    ಮಾರ್ಬಲ್ ಅಂಗಡಿ ರಾಜಸ್ಥಾನ ಮೂಲದ ಪುರುಷೋತ್ತಮ್ ಎಂಬವರಿಗೆ ಸೇರಿದ ಮಳಿಗೆಯಾಗಿದ್ದು, ಆಕಸ್ಮಿಕವಾಗಿ ಸಂಭವಿಸಿದ ಈ ಅಗ್ನಿ ಅವಘಡದಿಂದಾಗಿ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ. ಕೂಡಲೇ ಸ್ಥಳಕ್ಕೆ ಆಗಮಿಸಿದ 3 ಅಗ್ನಿಶಾಮಕ ವಾಹನಗಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಈ ಕುರಿತು ಕುಶಾಲನಗರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕಾಲುಜಾರಿ ಭದ್ರಾ ನದಿಗೆ ಬಿದ್ದು ಕೊಚ್ಚಿ ಹೋದ ಮಂಗ್ಳೂರು ಎಂಜಿನಿಯರ್

    ಕಾಲುಜಾರಿ ಭದ್ರಾ ನದಿಗೆ ಬಿದ್ದು ಕೊಚ್ಚಿ ಹೋದ ಮಂಗ್ಳೂರು ಎಂಜಿನಿಯರ್

    ಚಿಕ್ಕಮಗಳೂರು: ಪ್ರವಾಸಕ್ಕೆಂದು ಬಂದಿದ್ದ ಯುವಕನೊಬ್ಬ ಕಾಲುಜಾರಿ ಭದ್ರಾ ನದಿಯಲ್ಲಿ ಬಿದ್ದು ಕೊಚ್ಚಿ ಹೋಗಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಸಮೀಪದ ಅಂಬುತೀರ್ಥದ ಬಳಿ ನಡೆದಿದೆ.

    ಕಿರಣ್ ಕೊಟ್ಯಾನ್(26) ನದಿಯಲ್ಲಿ ಕೊಚ್ಚಿ ಹೋದ ಯುವಕ. ಮಂಗಳೂರಿನಿಂದ 13 ಮಂದಿಯ ತಂಡ ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ ಸುತ್ತಮುತ್ತ ಪ್ರವಾಸಕ್ಕೆಂದು ಬಂದಿತ್ತು. ಈ ವೇಳೆ ಅಂಬುತೀರ್ಥದ ಬಳಿ ಕಿರಣ್ ಕೊಟ್ಯಾನ್ ಯುವಕ ಕಾಲು ಜಾರಿ ಭದ್ರಾ ನದಿಯಲ್ಲಿ ಕೊಚ್ಚಿ ಹೋಗಿದ್ದಾರೆ. ಬಳಿಕ ಅವರ ಸ್ನೇಹಿತರು ಕಿರಣ್ ಕೊಟ್ಯಾನ್ ಅವರನ್ನು ಹುಡುಕಾಡಿದ್ದಾರೆ. ಆದರೆ ಎಲ್ಲೂ ಪತ್ತೆಯಾಗಿಲ್ಲ. ಕೊನೆಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಮಾಹಿತಿ ತಿಳಿದ ತಕ್ಷಣ ಕಳಸ ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಸ್ಥಳಕ್ಕೆ ಬಂದು ಭದ್ರಾ ನದಿಯಲ್ಲಿ ಕೊಚ್ಚಿ ಹೋಗಿರುವ ಕಿರಣ್ ಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ. ಕಿರಣ್ ಜೊತೆಯಲ್ಲಿ ಬಂದಿದ್ದವರು ಸ್ಥಳದಲ್ಲಿದ್ದು, ಪೊಲೀಸರಿಗೆ ಶೋಧಕಾರ್ಯಕ್ಕಾಗಿ ಮಾಹಿತಿ ನೀಡುತ್ತಿದ್ದಾರೆ.

    ಕಿರಣ್ ಕೊಟ್ಯಾನ್ ಮಂಗಳೂರಿನ ಖಾಸಗಿ ಕಂಪೆನಿಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರೆಂದು ತಿಳಿದು ಬಂದಿದೆ. ಈ ಸಂಬಂಧ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.

  • ನಾಪತ್ತೆಯಾಗಿದ್ದ ಬೆಂಗ್ಳೂರು ವಿದ್ಯಾರ್ಥಿ ಮಂಗ್ಳೂರಿನ ಗುರುವಾಯನಕೆರೆಯಲ್ಲಿ ಶವವಾಗಿ ಪತ್ತೆ

    ನಾಪತ್ತೆಯಾಗಿದ್ದ ಬೆಂಗ್ಳೂರು ವಿದ್ಯಾರ್ಥಿ ಮಂಗ್ಳೂರಿನ ಗುರುವಾಯನಕೆರೆಯಲ್ಲಿ ಶವವಾಗಿ ಪತ್ತೆ

    ಮಂಗಳೂರು: ಬೆಂಗಳೂರಿನಿಂದ ನಾಪತ್ತೆಯಾಗಿದ್ದ ವಿದ್ಯಾರ್ಥಿಯೊಬ್ಬ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

    ವಿದ್ಯಾರ್ಥಿಯ ಶಾಲಾ ಬ್ಯಾಗ್, ಶಾಲಾ ಐಡಿ ಕಾರ್ಡ್, ಆಧಾರ್ ಕಾರ್ಡ್ ಬುಧವಾರ ಸಂಜೆ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಗ್ರಾಮದ ಕೆರೆ ಬಳಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ತೀವ್ರ ಶೋಧ ಕಾರ್ಯ ಮುಂದುವರಿಸಿದ್ದರಿಂದ, ಬಾಲಕನ ಶವ ಪತ್ತೆಯಾಗಿದೆ.

    ಘಟನೆ ವಿವರ?:
    ಬೆಂಗಳೂರಿನ ಐಟಿಐ ವಿದ್ಯಾಮಂದಿರದ 9ನೇ ತರಗತಿ ವಿದ್ಯಾರ್ಥಿ ಯಶವಂತ್ ಸಾಯಿ ಮಂಗಳವಾರ ಬೆಳಿಗ್ಗೆಯಿಂದ ನಾಪತ್ತೆಯಾಗಿದ್ದನು. ಬೆಂಗಳೂರಿನ ಹೂಡಿ ಮುನಿಸ್ವಾಮಿ ಶೆಟ್ಟಿ ಬಡಾವಣೆ ನಿವಾಸಿ ಎನ್.ವಿ. ಪ್ರೇಮಕುಮಾರ್ ಅವರ ಪುತ್ರನಾಗಿದ್ದು, ಮಂಗಳವಾರ ಯಶವಂತ್ ಅಜ್ಜ ಶಾಲೆಗೆ ಕಳುಹಿಸಲು ಕರೆ ತಂದು ಬಸ್ ನಿಲ್ದಾಣದಲ್ಲಿ ಬಿಟ್ಟು ಮನೆಗೆ ಮರಳಿದ್ದರು. ಆ ಬಳಿಕ ವಿದ್ಯಾರ್ಥಿ, ಕುಟುಂಬದವರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಯಶವಂತ್ ಸಾಯಿ ನಾಪತ್ತೆಯಾಗಿರುವುದು ಗೊತ್ತಾಗುತ್ತಿದ್ದಂತೆ ಆತನ ಕುಟುಂಬದವರು ಬೆಂಗಳೂರಿನ ಮಹದೇವಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

    ಇತ್ತ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಗ್ರಾಮದ ಬಳಿ ಬುಧವಾರ ಸಂಜೆ ಶಾಲಾ ಬ್ಯಾಗ್, ಶಾಲಾ ಐಡಿ ಕಾರ್ಡ್, ಆಧಾರ್ ಕಾರ್ಡ್ ಪತ್ತೆಯಾಗಿತ್ತು. ಇದನ್ನು ಕಂಡ ಸ್ಥಳೀಯರು ಈ ಬಗ್ಗೆ ಬೆಳ್ತಂಗಡಿ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಶೋಧ ನಡೆಸಿದಾಗ ಬಾಲಕನ ಶವ ಪತ್ತೆಯಾಗಿದೆ.

    ಬೆಂಗಳೂರಿನಿಂದ ಮಂಗಳೂರಿಗೆ ಮಾಡಿರುವ 372 ರೂಪಾಯಿಯ ಟಿಕೆಟ್ ಮತ್ತು ಬೆಳ್ತಂಗಡಿಯಿಂದ ಕಾರ್ಕಳಕ್ಕೆ ಮಾಡಿರುವ 53 ರೂಪಾಯಿಯ ಟಿಕೆಟ್ ಕೂಡಾ ಬ್ಯಾಗಿನಲ್ಲಿ ಪತ್ತೆಯಾಗಿದೆ.

  • ಮೈಸೂರಿನ ಮಿನಿ ವಿಧಾನಸೌಧದಲ್ಲಿ ಬೆಂಕಿ ಅವಘಡ- ಪ್ರಾಣಾಪಾಯದಿಂದ ಪಾರು

    ಮೈಸೂರಿನ ಮಿನಿ ವಿಧಾನಸೌಧದಲ್ಲಿ ಬೆಂಕಿ ಅವಘಡ- ಪ್ರಾಣಾಪಾಯದಿಂದ ಪಾರು

    ಮೈಸೂರು: ಜೀಪ್ ನ ಹಳೆಯ ಟೈರ್ ಗಳು ಸ್ಫೋಟಗೊಂಡು ಬೆಂಕಿ ಕಾಣಿಸಿಕೊಂಡಿರುವ ಘಟನೆ ಜಿಲ್ಲೆಯ ಟಿ. ನರಸೀಪುರದ ಮಿನಿ ವಿಧಾನಸೌಧದಲ್ಲಿ ನಡೆದಿದೆ.

    ಇಂದು ಬೆಳಗ್ಗೆ ಮಿನಿ ವಿಧಾನಸೌಧದಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡುವ ಸ್ಥಳದಲ್ಲಿ ಈ ಘಟನೆ ಸಂಭವಿಸಿದ್ದು, ವಾಹನಗಳ ಟೈರುಗಳು ಹಳೆಯದಾದ ಕಾರಣ ತಹಶೀಲ್ದಾರರ ಹಳೆಯ ಜೀಪು ಹಾಗೂ ಮೂರು ಬೈಕ್‍ಗಳು ಭಸ್ಮವಾಗಿದೆ.

    ಬೆಂಕಿ ಕಾಣಿಸಿಕೊಂಡ ಪರಿಣಾಮ ಯಾರಾದರೂ ಒಳಗೆ ಸಿಲುಕಿ ಕೊಂಡಿರಬಹುದು ಎಂಬ ಆತಂಕ ವ್ಯಕ್ತವಾಗಿತ್ತು. ಆದರೆ ಅವಘಡ ಸಂಭವಿಸಿದ ಕೂಡಲೇ ಎಲ್ಲರೂ ಹೊರಬಂದಿದ್ದಾರೆ. ಜೀಪ್ ನ ಟೈರ್ ಸ್ಫೋಟಗೊಳ್ಳುತ್ತಿದ್ದಂತೆ ಬೆಂಕಿ ಕಾಣಿಕೊಂಡಿದ್ದು, ಪಕ್ಕದಲ್ಲಿ ಪಾರ್ಕಿಂಗ್ ಮಾಡಿದ್ದ ಮೂರು ಬೈಕ್ ಗಳು ಕೂಡ ಬೆಂಕಿಗೆ ಆಹುತಿಯಾಗಿವೆ.

    ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ.

  • ಮೋರಿಯಲ್ಲಿ ಬಿದ್ದು 1 ಗಂಟೆ ನರಳಾಡಿದ ಹಸುವಿನ ರಕ್ಷಣೆ

    ಮೋರಿಯಲ್ಲಿ ಬಿದ್ದು 1 ಗಂಟೆ ನರಳಾಡಿದ ಹಸುವಿನ ರಕ್ಷಣೆ

    ಮೈಸೂರು: ದೊಡ್ಡ ಮೋರಿಯಲ್ಲಿ ಬಿದ್ದ ಹಸುವನ್ನು ಅಗ್ನಿಶಾಮಕ ದಳದವರು ರಕ್ಷಣೆ ಮಾಡಿರುವ ಘಟನೆ ಜಿಲ್ಲೆಯ ಜೆ.ಪಿ. ನಗರದಲ್ಲಿ ನಡೆದಿದೆ.

    ಹಸು ಮೇವು ಮೇಯುತ್ತಾ ಹಳ್ಳಕ್ಕೆ ಬಿದ್ದಿದೆ. ಆದರೆ ಅಲ್ಲಿಂದ ಮೇಲೆ ಬರಲು ಸಾಧ್ಯವಾಗದೇ 1 ಗಂಟೆಗೂ ಹೆಚ್ಚು ಕಾಲ ನರಳಾಡಿದೆ. ಬಳಿಕ ಹಸುವಿನ ನರಳಾಟ ನೋಡಿದ ಸ್ಥಳೀಯರು ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.

    ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಸಿಬ್ಬಂದಿ ಹಗ್ಗದ ಸಹಾಯದಿಂದ ಹಸುವನ್ನು ರಕ್ಷಿಸಿದ್ದಾರೆ. ಅರ್ಧ ಗಂಟೆಗೂ ಹೆಚ್ಚು ಕಾಲ ಕಾರ್ಯಚರಣೆ ನಡೆದಿದೆ. ಮಳೆಯ ಹಿನ್ನೆಲೆಯಲ್ಲಿ ಮೋರಿ ತುಂಬಿ ಹೋಗಿತ್ತು. ಮೋರಿಯಲ್ಲಿ ಹುಲ್ಲು ಬೆಳೆದಿದ್ದ ಕಾರಣ ಹಸು ಮೇಯಲು ಹೋಗಿ ಮೋರಿಯೊಳಗೆ ಸಿಲುಕಿದೆ.

  • ಬೀದರ್ ಬ್ರೀಮ್ಸ್ ಕಾಲೇಜಿನಲ್ಲಿ ಅಗ್ನಿ ಅವಘಡ – ನಿರ್ದೇಶಕರ ಹಾಲ್ ನಲ್ಲಿ ಮಾತ್ರ ಬೆಂಕಿ!

    ಬೀದರ್ ಬ್ರೀಮ್ಸ್ ಕಾಲೇಜಿನಲ್ಲಿ ಅಗ್ನಿ ಅವಘಡ – ನಿರ್ದೇಶಕರ ಹಾಲ್ ನಲ್ಲಿ ಮಾತ್ರ ಬೆಂಕಿ!

    ಬೀದರ್: ಶಾರ್ಟ್ ಸರ್ಕ್ಯೂಟ್‍ ನಿಂದಾಗಿ ಗುರುವಾರ ತಡರಾತ್ರಿ ಬೀದರ್ ನ ಬ್ರೀಮ್ಸ್ ಮೆಡಿಕಲ್ ಕಾಲೇಜು ನಿರ್ದೇಶಕರ ಹಾಲ್ ನಲ್ಲಿ ಬೆಂಕಿ ಅನಾಹುತ ಸಂಭವಿಸಿದೆ.

    ಗುರುವಾರ ತಡರಾತ್ರಿ ಈ ಬೆಂಕಿ ಅನಾಹುತ ಸಂಭವಿಸಿದ್ದು, ಕಾಲೇಜಿನ ಮಹತ್ವದ ದಾಖಲೆಗಳು, ಒಂದು ಕಂಪ್ಯೂಟರ್, ಎಲ್‍ಇಡಿ ಟಿವಿ ಸೇರಿದಂತೆ ನಿರ್ದೇಶಕರ ಹಾಲ್ ಸಂಪೂರ್ಣ ಸುಟ್ಟು ಭಸ್ನವಾಗಿದೆ. ಕಳೆದ ಹಲವು ದಿನಗಳ ಹಿಂದೆ ನಿರ್ದೇಶಕ ಡಾ.ಚನ್ನಣ್ ವರ್ಗಾವಣೆಗೊಂಡಿದ್ದು ಸದ್ಯ ಡಾ.ಕ್ಷೀರಸಾಗರ ಪ್ರಭಾರಿಯಾಗಿ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ.

    ಕಾಲೇಜಿನ ಎಲ್ಲಾ ಕೊಠಡಿ ಬಿಟ್ಟು ನಿರ್ದೇಶಕರ ಹಾಲ್ ನಲ್ಲಿ ಮಾತ್ರ ಬೆಂಕಿ ಅವಘಡ ಸಂಭವಿಸಿದ್ದು, ಹಲವು ಅನುಮಾನಗಳಿಗೆ ದಾರಿ ಮಾಡಿದೆ. ಅಗ್ನಿ ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ನಂದಿಸಿದ್ದಾರೆ.

    ನ್ಯೂಟೌನ್ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಎಲ್ಲಾ ಅನುಮಾನಗಳಿಗೆ ಪೊಲೀಸರ ತನಿಖೆಯಿಂದ ಮಾತ್ರ ಉತ್ತರ ಸಿಗಬೇಕಿದೆ.

  • ತಮಾಷೆ ಮಾಡಲು ಹೋಗಿ ಗೋಕಾಕ್ ಫಾಲ್ಸ್ ನಲ್ಲಿ ಬಿದ್ದು ಮೃತಪಟ್ಟಿದ್ದ ಯುವಕನ ಶವ ಪತ್ತೆ

    ತಮಾಷೆ ಮಾಡಲು ಹೋಗಿ ಗೋಕಾಕ್ ಫಾಲ್ಸ್ ನಲ್ಲಿ ಬಿದ್ದು ಮೃತಪಟ್ಟಿದ್ದ ಯುವಕನ ಶವ ಪತ್ತೆ

    ಬೆಳಗಾವಿ: ಗೋಕಾಕ್ ಜಲಪಾತದಲ್ಲಿ ಬಿದ್ದು ಸಾವನ್ನಪ್ಪಿದ್ದ ಯುವಕನ ಶವ ಸೋಮವಾರ ಮಧ್ಯಾಹ್ನ ಪತ್ತೆಯಾಗಿದೆ.

    ಜಿಲ್ಲೆಯ ಗೋಕಾಕ್ ಪಟ್ಟಣದ ಹೊರವಲಯದಲ್ಲಿರು ಫಾಲ್ಸ್ ನಲ್ಲಿ ಎರಡು ದಿನಗಳ ಹಿಂದೆ ಸ್ನೇಹಿತರೊಂದಿಗೆ ತಮಾಷೆಮಾಡಲು ಹೋಗಿ ಘಟಪ್ರಭಾ ನಿವಾಸಿ ರೆಹೆಮಾನ್ ಉಸ್ಮಾನ್ ಖಾಜಿ (35) ಎಂಬ ಯುವಕ ಜಲಪಾತದಲ್ಲಿ ಜಾರಿ ಬಿದ್ದು ಸಾವನ್ನಪ್ಪಿದ್ದ.

    ಯುವಕನ ಶವಕ್ಕಾಗಿ ಕಳೆದ ಎರಡು ದಿನಗಳಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಟ ನಡೆಸುತ್ತಿತ್ತು. ಆಳ ಹೆಚ್ಚಾಗಿದ್ದರಿಂದ ಶವ ಪತ್ತೆ ಕಾರ್ಯಕ್ಕೆ ಜಲಪಾತದ ಕೆಳಗೆ ಇಳಿಯಲಾಗದೇ ಸಾಕಷ್ಟು ಅಡಚಣೆಯಾಗಿತ್ತು. ಆದರೆ ಸತತ ಎರಡು ದಿನಗಳ ಕಾರ್ಯಾಚರಣೆ ನಂತರ ಶವವನ್ನು ಹೊರತೆಗೆಯುವಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

  • ಗುಜರಿ ಅಂಗಡಿಗೆ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮ

    ಗುಜರಿ ಅಂಗಡಿಗೆ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮ

    ಯಾದಗಿರಿ: ಗುಜರಿ ಅಂಗಡಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ಗುಜರಿ ಸಾಮಾನು ಸುಟ್ಟು ಕರಕಲಾಗಿರುವ ಘಟನೆ ನಗರದ ಮುಸ್ಲಿಂಪುರಾ ಬಡಾವಣೆಯಲ್ಲಿ ನಡೆದಿದೆ.

    ಅಂಗಡಿಯಲ್ಲಿ ಎರಡ್ಮೂರು ಘಂಟೆಗಳ ಕಾಲ ಭೀಕರವಾಗಿ ಅಗ್ನಿ ಆವರಿಸಿದ ಪರಿಣಾಮ ಪಕ್ಕದಲ್ಲಿರುವ ಮೂರು ಅಂಗಡಿಗಳಿಗೂ ಬೆಂಕಿ ವ್ಯಾಪಿಸಿದೆ. ಬಡಾವಣೆ ಸುತ್ತಲು ಬೆಂಕಿ ಕಿಡಿಗಳ ದಟ್ಟನೆಯಿಂದ ಕೆಲಕಾಲ ಬಡಾವಣೆಯ ಜನರು ಆತಂಕದಲ್ಲಿದ್ದರು. ಸ್ಥಳಕ್ಕೆ ಎರಡು ಅಗ್ನಿಶಾಮಕ ದಳದ ವಾಹನ ಆಗಮಿಸಿ ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸಪಟ್ಟಿದ್ದಾರೆ.

    ಅಬ್ದುಲ್ ರಹಿಮಾನ್ ಸೇರಿದ ಗುಜರಿ ಅಂಗಡಿ ಸೇರಿದಂತೆ ಕಿರಾಣ, ಕ್ಷೌರಿಕ ಹಾಗೂ ಕಟ್ಟಿಗೆಯ ಅಂಗಡಿಗೆ ಬೆಂಕಿ ಆವರಿಸಿದ್ದರಿಂದ ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗೆ ಸುಟ್ಟು ಭಸ್ಮವಾಗಿವೆ. ಈ ಅವಘಡವು ಶಾರ್ಟ್ ಸರ್ಕಿಟ್ ನಿಂದ ಸಂಭವಿಸಿದೆ ಅಂತ ಬಡಾವಣೆ ಜನರು ಅನುಮಾನ ವ್ಯಕ್ತಪಡಿಸಿದ್ದಾರೆ.

    ಬಡಾವಣೆ ಸುತ್ತಲೂ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗಿದೆ. ಘಟನಾ ಸ್ಥಳಕ್ಕೆ ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಹೋಗಿರುವುದರಿಂದ ಅಂಗಡಿ ಮಾಲೀಕರಿಗೆ ಪರಿಹಾರ ಕಲ್ಪಿಸಿಕೊಡುವ ಭರವಸೆಯನ್ನು ಶಾಸಕರು ನೀಡಿದ್ದಾರೆ.

  • ಉಡುಪಿ, ಮಂಗ್ಳೂರಲ್ಲಿ ಮತ್ತೆ ಮಳೆ- ಮೃತರ ಕುಟುಂಬಗಳಿಗೆ 5 ಲಕ್ಷ ಪರಿಹಾರ

    ಉಡುಪಿ, ಮಂಗ್ಳೂರಲ್ಲಿ ಮತ್ತೆ ಮಳೆ- ಮೃತರ ಕುಟುಂಬಗಳಿಗೆ 5 ಲಕ್ಷ ಪರಿಹಾರ

    ಉಡುಪಿ/ಮಂಗಳೂರು: ಮಂಗಳವಾರ ಭಾರೀ ಅವಾಂತರ ಸೃಷ್ಟಿಸಿದ್ದ ಮಳೆ ಉಡುಪಿ ಹಾಗೂ ದಕ್ಷಿಣ ಕ್ನಡ ಜಿಲ್ಲೆಯಲ್ಲಿ ಇಂದೂ ಕೂಡ ಮುಂದುವರೆದಿದೆ. ಕಳೆದ ರಾತ್ರಿ ಕೊಂಚ ಕಡಿಮೆಯಾಗಿದ್ದ ಮಳೆ ಆರ್ಭಟ ಬೆಳಗ್ಗೆ ಮತ್ತೆ ಶುರುವಾಗಿದೆ.

    ಜಿಲ್ಲೆಯಾದ್ಯಂತ ಧಾರಾಕಾರವಾಗಿ ಮಳೆಯಾಗುತ್ತಿದ್ದು, ಕಾರ್ಮೋಡದ ಆವರಿಸಿದೆ. ವಾತಾವರಣ ನೋಡುವಾಗ ದಿನಪೂರ್ತಿ ಮಳೆಯಾಗುವ ಸಾಧ್ಯತೆಯಿದೆ. ಕಾರ್ಕಳ ತಾಲೂಕಿನಲ್ಲಿ ವಿಪರೀತ ಜಡಿಮಳೆಯಾಗುತ್ತಿದ್ದು, ನದಿಗಳಲ್ಲಿ ನೀರು ಹರಿಯುತ್ತಿದೆ. ಮೀನುಗಾರರಿಗೆ ಹಾಗೂ ಸಾರ್ವಜನಿಕರಿಗೆ ಜಿಲ್ಲಾಡಳಿತದಿಂದ ಎಚ್ಚರಿಕೆ ಸಂದೇಶ ರವಾನೆ ಮಾಡಲಾಗಿದೆ. ಇದನ್ನೂ ಓದಿ: ನೀರುಪಾಲಾದ ಬಾಲೆ ಶವವಾಗಿ ಪತ್ತೆ – ಮುಗಿಲುಮುಟ್ಟಿದ ಹೆತ್ತವರ ಆಕ್ರಂದನ

    ಮುಂದಿನ ಸೂಚನೆ ನೀಡುವವರೆಗೆ ಕಡಲಿಗೆ ಇಳಿಯಕೂಡದು ಅಂತ ಆದೇಶ ಮಾಡಿದೆ. ಸಾರ್ವಜನಿಕರು ಅಪಾಯವಿರುವಲ್ಲಿ ಜಾಗರೂಕತೆ ವಹಿಸಬೇಕು ಅಂತ ಪ್ರಕಟಣೆ ಹೊರಡಿಸಿದೆ. ಕುಂದಾಪುರ, ಕಾಪು ಬೈಂದೂರಲ್ಲಿ ಭಾರೀ ಮಳೆ ಸುರಿಯುತ್ತಿದ್ದು ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಉಡುಪಿಯ ಬೈಲಕರೆಯಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಭಾರೀ ಮಳೆಯಿಂದಾಗಿ ತೊರೆಗಳು ತುಂಬಿ ಹರಿಯುತ್ತಿವೆ.


    ಮಂಗಳೂರಲ್ಲಿ ಕೂಡ ಮತ್ತೆ ಮಳೆ ಆರಂಭವಾಗಿದ್ದು, ತಗ್ಗು ಪ್ರದೇಶಗಳಿಗೆ ಮತ್ತೆ ನೀರು ನುಗ್ಗುವ ಆತಂಕ ಎದುರಾಗಿದೆ. ತಗ್ಗು ಪ್ರದೇಶಗಳಲ್ಲಿ ಪ್ರವಾಹದ ನೀರು ಇನ್ನೂ ಹರಿದು ಹೋಗಿಲ್ಲ. ಹೀಗಾಗಿ ಇದೀಗ ಮತ್ತೆ ಮಳೆ ಸುರಿಯಲಾರಂಭಿಸಿದ್ದು, ನಗರವಾಸಿಗಳು ಆತಂಕಕ್ಕೀಡಾಗಿದ್ದಾರೆ. ಮಳೆ ನಡುವೆಯೇ ಅಗ್ನಿಶಾಮಕದಳ ಕಾರ್ಯಾಚರಣೆ ನಡೆಸುತ್ತಿದೆ.  ಇದನ್ನೂ ಓದಿ: ಭಾರೀ ಮಳೆಯಿಂದಾಗಿ ರೈಲು ಹಳಿಗಳಲ್ಲಿ ಭೂಕುಸಿತ- ವಿಮಾನ ಹಾರಾಟದಲ್ಲಿ ವ್ಯತ್ಯಯ

    ನಿನ್ನೆಯ ಮಹಾ ಮಳೆಗೆ ಇಬ್ಬರು ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಕುಟುಂಬಗಳಿಗೆ ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ತಲಾ 5 ಲಕ್ಷ ಪರಿಹಾರ ನೀಡಲಾಗಿದೆ. ಕೆಪಿಟಿ ಬಳಿಯ ಉದಯನಗರದಲ್ಲಿಧರೆ ಕುಸಿದು ಸಾವನ್ನಪ್ಪಿದ್ದ ಮೋಹಿನಿ (55) ಹಾಗೂ ಮನೆಗೆ ನೀರು ನುಗ್ಗಿ ನೀರಲ್ಲಿ ಮುಳುಗಿ ಸಾವನ್ನಪ್ಪದ್ದ ವೃದ್ಧೆ ಮುಕ್ತಾ ಭಾಯಿ(80) ಇಬ್ಬರಿಗೆ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಪರಿಹಾರ ನೀಡಿದ್ದಾರೆ. ಇದನ್ನೂ ಓದಿ: ಕರಾವಳಿ ಮಳೆ – ಅಧಿಕಾರಿಗಳ ಜೊತೆ ಮಾತನಾಡಿದ ಮೋದಿ

  • ಕೆರೆಯಲ್ಲಿ ಈಜಲು ಹೋಗಿ ಎಂಜಿನಿಯರಿಂಗ್ ವಿದ್ಯಾರ್ಥಿ ದುರ್ಮರಣ

    ಕೆರೆಯಲ್ಲಿ ಈಜಲು ಹೋಗಿ ಎಂಜಿನಿಯರಿಂಗ್ ವಿದ್ಯಾರ್ಥಿ ದುರ್ಮರಣ

    ರಾಮನಗರ: ಕೆರೆಯಲ್ಲಿ ಈಜಲು ಹೋಗಿ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ಘಟನೆ ರಾಮನಗರ ತಾಲೂಕಿನ ಅವ್ವೇರಹಳ್ಳಿಯ ಬಳಿ ನಡೆದಿದೆ.

    ಬೆಂಗಳೂರಿನ ವೈಟ್ ಫಿಲ್ಡ್ ಸಮೀಪದ ಬೋಜನ ಹೊಸಹಳ್ಳಿಯ ಚೇತನ್(24) ಮೃತ ವಿದ್ಯಾರ್ಥಿ. ಶನಿವಾರ ಪ್ರವಾಸಿ ಹಾಗೂ ಪುರಾಣ ಪ್ರಸಿದ್ಧ ರೇವಣಸಿದ್ದೇಶ್ವರ ಬೆಟ್ಟಕ್ಕೆ ಕಾಲೇಜು ವಿದ್ಯಾರ್ಥಿಗಳು ಬಂದಿದ್ದರು.

    ಮಧ್ಯಾಹ್ನದ ನಂತರ ಬೆಟ್ಟದ ತಪ್ಪಲಿನಲ್ಲಿರುವ ಹೊಸಕೆರೆಯಲ್ಲಿ ಈಜಲು 8 ಜನ ಸ್ನೇಹಿತರು ಹೋಗಿದ್ದಾರೆ. ಆದರೆ ಕೆರೆಯಲ್ಲಿ ಇಳಿದ ಚೇತನ್ ಮುಳುಗಿ ಸಾವನ್ನಪ್ಪಿದ್ದಾನೆ. ನಂತರ ಚೇತನ್ ನ ಶವಕ್ಕಾಗಿ ಸ್ನೇಹಿತರೇ ಕೆರೆಯಲ್ಲಿ ಹುಡುಕಾಟ ನಡೆಸಿದ್ದಾರೆ. ಆದರೆ ಸಾಯಂಕಾಲದ ವೇಳೆಗೆ ಆರಂಭವಾದ ಮಳೆಯಿಂದ ಕೆರೆಯ ಬಳಿ ಕಾಲ ಕಳೆಯುವಂತಾಗಿತ್ತು.

    ಸ್ನೇಹಿತರು ರಾತ್ರಿ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇಂದು ಬೆಳಗ್ಗೆಯೇ ಶವಕ್ಕಾಗಿ ಪೊಲೀಸರು ಮತ್ತು ಅಗ್ನಿ ಶಾಮಕ ಸಿಬ್ಬಂದಿಗಳಿಂದ ಹುಟುಕಾಟ ನಡೆಸುತ್ತಿದ್ದಾರೆ.