Tag: ಅಗ್ನಿಶಾಮಕ ದಳ

  • ಹಬ್ಬದಂದೇ ಅಂಗಡಿಯಲ್ಲಿ ಅಗ್ನಿ ಅವಘಡ – ಲಕ್ಷಾಂತರ ಮೌಲ್ಯದ ಬಟ್ಟೆಗಳು ಭಸ್ಮ

    ಹಬ್ಬದಂದೇ ಅಂಗಡಿಯಲ್ಲಿ ಅಗ್ನಿ ಅವಘಡ – ಲಕ್ಷಾಂತರ ಮೌಲ್ಯದ ಬಟ್ಟೆಗಳು ಭಸ್ಮ

    ಚಿಕ್ಕೋಡಿ: ಗಣೇಶ ಹಬ್ಬದಂದೇ ಬಟ್ಟೆ ಅಂಗಡಿಗೆ ಅಗ್ನಿ ಅವಘಡ ಸಂಭವಿಸಿದ್ದು, ಲಕ್ಷಾಂತರ ಬೆಲೆ ಬಾಳುವ ಬಟ್ಟೆಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದಿದೆ.

    ಈ ಅವಘಡ ಬೆಳಗ್ಗೆ 8.30 ಕ್ಕೆ ಸಂಭವಿಸಿದ್ದು, ಪಿಂಟು ರಾಥೋಡ್ ಎಂಬವರಿಗೆ ಸೇರಿದ ಆರ್ ಆರ್ ಕಲೆಕ್ಷನ ಬಟ್ಟೆ ಅಂಗಡಿಗೆ ಬೆಂಕಿ ತಗುಲಿದೆ. ಇದರ ಪರಿಣಾಮ ಲಕ್ಷಾಂತರ ಮೌಲ್ಯದ ಬೆಲೆ ಬಾಳುವ ಬಟ್ಟೆಗಳು ಬೆಂಕಿಗೆ ಆಹುತಿಯಾಗಿದ್ದು, ಭಾರೀ ಅನಾಹುತ ತಪ್ಪಿದೆ. ಆದ್ರೆ ಅದೃಷ್ಟವಶಾತ್ ಯಾವುದೇ ಪ್ರಾಣಪಾಯಗಳು ಸಂಭವಿಸಿಲ್ಲ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

    ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಯಿತು. ಮಾರುಕಟ್ಟೆ ಪ್ರದೇಶದಲ್ಲಿ ಅಂಗಡಿ ಇದ್ದರೂ ಬೇರೆ ಎಲ್ಲೂ ವ್ಯಾಪಿಸದ ಬೆಂಕಿ ರಾಥೋಡ್ ಅವರ ಅಂಗಡಿಯಲ್ಲಿ ಕಾಣಿಸಿಕೊಂಡಿದೆ.

    ಈ ಘಟನೆ ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹೊತ್ತಿ ಉರಿದ ಬಟ್ಟೆ ಅಂಗಡಿ – 20 ಲಕ್ಷ ರೂ. ನಷ್ಟ

    ಹೊತ್ತಿ ಉರಿದ ಬಟ್ಟೆ ಅಂಗಡಿ – 20 ಲಕ್ಷ ರೂ. ನಷ್ಟ

    ಮೈಸೂರು: ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದಲ್ಲಿ ಬಟ್ಟೆ ಅಂಗಡಿಯೊಂದು ಧಗಧಗನೆ ಹೊತ್ತಿ ಉರಿದಿದ್ದು, ಸುಟ್ಟು ಹೋಗಿದೆ.

    ರಮೇಶ್ ಎಂಬವರಿಗೆ ಸೇರಿದ ನಾಕೋಡ ಹೆಸರಿನ ಅಂಗಡಿ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. ಬೆಂಕಿ ಅವಘಡದಿಂದ ಸುಮಾರು 20 ಲಕ್ಷ ರೂ. ಮೌಲ್ಯದ ಬಟ್ಟೆ ಪಿಠೋಪಕರಣ ಬೆಂಕಿಗಾಹುತಿಯಾಗಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಅದನ್ನು ಗಮನಿಸಿದ ಜನರು ಅಗ್ನಿಶಾಮಕ ದಳದವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

    ಮಾಹಿತಿ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಬಂದು ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ಒಂದು ಗಂಟೆಗೂ ಹೆಚ್ಚು ಕಾಲ ಅಗ್ನಿಶಾಮಕ ದಳ ಕಾರ್ಯಚರಣೆ ಮಾಡಿ ಬೆಂಕಿಯನ್ನು ನಂದಿಸಿದ್ದಾರೆ. ಇಂದು ಮುಂಜಾನೆ ಸುಮಾರು 3 ಗಂಟೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ವಿದ್ಯುತ್ ಶಾರ್ಟ್ ಸರ್ಕ್ಯೂಟ್‍ ನಿಂದ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ.

    ಈ ಘಟನೆ ಬೆಟ್ಟದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಾಲುವೆಗೆ ಬಿದ್ದ 14 ಮಂದಿ ಮಹಿಳಾ ಕಾರ್ಮಿಕರಿದ್ದ ಟ್ರ್ಯಾಕ್ಟರ್ – ಇಬ್ಬರ ಮೃತದೇಹ ಪತ್ತೆ

    ಕಾಲುವೆಗೆ ಬಿದ್ದ 14 ಮಂದಿ ಮಹಿಳಾ ಕಾರ್ಮಿಕರಿದ್ದ ಟ್ರ್ಯಾಕ್ಟರ್ – ಇಬ್ಬರ ಮೃತದೇಹ ಪತ್ತೆ

    ಕೊಪ್ಪಳ: ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಟ್ರ್ಯಾಕ್ಟರ್ ಉರುಳಿ ನಾಲ್ವರು ಮಹಿಳೆಯರು ನೀರುಪಾಲಾಗಿರುವ ಘಟನೆ ಜಿಲ್ಲೆಯ ಕಾರಟಗಿ ತಾಲೂಕಿನ ಸೋಮನಾಳ ಬಳಿ ಸಂಭವಿಸಿದೆ.

    ಗಂಗಾವತಿ ತಾಲೂಕಿನ ಸೋಮನಾಳ ಸೇತುವೆ ಸಮೀಪದ ಕಾಲುವೆಗೆ ಟ್ರ್ಯಾಕ್ಟರ್ ಬಿದ್ದಿದೆ. ಈ ಟ್ರ್ಯಾಕ್ಟರ್ ನಲ್ಲಿ ಒಬ್ಬ ಡ್ರೈವರ್ ಸೇರಿ 15 ಮಂದಿ ಮಹಿಳೆಯರು ಇದ್ದರು. ಸದ್ಯಕ್ಕೆ 11ಜನ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಅವಘಡದಿಂದ ನಾಲ್ವರು ಮಹಿಳಾ ಕಾರ್ಮಿಕರು ನೀರುಪಾಲಾಗಿದ್ದು, ಅವರಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿದೆ. ಮತ್ತಿಬ್ಬರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

    ಸೋಮವಾರ ಗಂಗಾವತಿ ತಾಲೂಕಿನ ನವಲಿ ಗ್ರಾಮದ ಕೂಲಿ ಕಾರ್ಮಿಕರು ಸೋಮನಾಳ ಗ್ರಾಮದಲ್ಲಿ ಹೊಲದಲ್ಲಿ ಕಳೆ ಕೀಳುವ ಕೆಲಸಕ್ಕೆ ಹೋಗಿದ್ದರು. ಕೆಲಸ ಮುಗಿಸಿ ವಾಪಸ್ ಬರುತ್ತಿದ್ದಾಗ ಸೋಮನಾಳ ಸೇತುವೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಟ್ರಾಲಿ ಸಮೇತ ಎಡದಂಡೆ ಕಾಲುವೆಗೆ ಉರುಳಿ ಬಿದ್ದಿದೆ. ಪರಿಣಾಮ ಟ್ರ್ಯಾಕ್ಟರ್ ಕಾಲುವೆಯಲ್ಲಿ ಪೂರ್ತಿಯಾಗಿ ಮುಳುಗಿದೆ.

    ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸ್ ಮತ್ತು ಅಗ್ನಿಶಾಮಕ ಠಾಣೆ ಸಿಬ್ಬಂದಿ ಬಂದು ಕಾರ್ಯಾಚರಣೆ ಆರಂಭಿಸಿ ಕಾಲುವೆಗೆ ಬಿದ್ದವರಲ್ಲಿ 11 ಜನರನ್ನು ರಕ್ಷಣೆ ಮಾಡಲಾಗಿದೆ. ಅವರನ್ನು ಕಾರಟಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಲ್ವರು ಮಹಿಳಾ ಕಾರ್ಮಿಕರಲ್ಲಿ ಇಬ್ಬರ ಶವ ಪತ್ತೆಯಾಗಿದ್ದು, ಉಳಿದ ಇಬ್ಬರು ಮಹಿಳೆಯರಿಗಾಗಿ ಕಾರ್ಯಚರಣೆ ಮುಂದುವರಿದಿದೆ.

    ಈ ಘಟನೆ ಕಾರಟಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೃಷ್ಣಾನದಿ ನಡುಗಡ್ಡೆಯಲ್ಲಿ ಸಿಲುಕಿಕೊಂಡ 6 ಮಂದಿ, 200 ಕುರಿಗಳ ರಕ್ಷಣಾ ಕಾರ್ಯಾಚರಣೆ ಆರಂಭ

    ಕೃಷ್ಣಾನದಿ ನಡುಗಡ್ಡೆಯಲ್ಲಿ ಸಿಲುಕಿಕೊಂಡ 6 ಮಂದಿ, 200 ಕುರಿಗಳ ರಕ್ಷಣಾ ಕಾರ್ಯಾಚರಣೆ ಆರಂಭ

    ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ಚಿಂಚೋಡಿ ಗ್ರಾಮದ ಬಳಿ ಕುರಿ ಮೇಯಿಸಲು ಹೋಗಿ ಕೃಷ್ಣಾ ನದಿ ನಡುಗಡ್ಡೆಯಲ್ಲಿ ಕೆಲವರು ಸಿಲುಕಿಕೊಂಡಿದ್ದರು. ನಡುಗಡ್ಡೆಯಲ್ಲಿ ಸಿಲುಕಿದ್ದ ಕುರಿಗಾಹಿಗಳು ಹಾಗೂ ಕುರಿಗಳ ರಕ್ಷಣಾ ಕಾರ್ಯ ಇಂದು ಆರಂಭವಾಗಿದೆ.

    ಅಗ್ನಿಶಾಮಕ ದಳದ ಜಿಲ್ಲಾ ಮಟ್ಟದ ಅಧಿಕಾರಿ ರವೀಂದ್ರ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಬುಧವಾರ ಬೆಳಗ್ಗೆ ಕುರಿ ಮೇಯಿಸಲು ನದಿ ದಾಟಿ ಹೋಗಿದ್ದ ಚಿಂಚೊಡಿ ಗ್ರಾಮದ ಮುದೇಪ್ಪ, ಮಲ್ಲಪ್ಪ, ಹುಸೇನಪ್ಪ, ಸಿದ್ದಪ್ಪ ಸೇರಿ 6 ಜನ ನಡುಗಡ್ಡೆಯಲ್ಲಿದ್ದಾರೆ. 200 ಕುರಿಗಳನ್ನ ನಡುಗಡ್ಡೆಯಿಂದ ಹೊರಗೆ ಕರೆತರುವುದೇ ಸಿಬ್ಬಂದಿಗಳಿಗೆ ಸವಾಲಾಗಿದೆ.

    ದಿಢೀರನೇ ಕೃಷ್ಣಾ ನದಿಗೆ 1 ಲಕ್ಷ 5 ಸಾವಿರ ಕ್ಯೂಸೆಕ್ಸ್ ನೀರು ಹರಿಬಿಟ್ಟ ಹಿನ್ನೆಲೆ ಕುರಿಗಾಹಿಗಳು ನಡುಗಡ್ಡೆಯಲ್ಲಿ ಸಿಲುಕಿಕೊಂಡಿದ್ದರು. ನಡುಗಡ್ಡೆ ವಿಶಾಲವಾಗಿರುವುದರಿಂದ ಯಾವುದೇ ಅಪಾಯವಿಲ್ಲ. ಮೇಕ್ಯಾನಿಸಂ ಬೋಟ್ ಮೂಲಕ ರಕ್ಷಣಾ ಕಾರ್ಯಚರಣೆ ಆರಂಭಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮುಂಡರಗಿ ರೈತ ಸಂಪರ್ಕ ಕೇಂದ್ರದ ಬಳಿ ಅಗ್ನಿ ಅವಘಡ

    ಮುಂಡರಗಿ ರೈತ ಸಂಪರ್ಕ ಕೇಂದ್ರದ ಬಳಿ ಅಗ್ನಿ ಅವಘಡ

    ಗದಗ: ಮುಂಡರಗಿ ರೈತ ಸಂಪರ್ಕ ಕೇಂದ್ರ ಬಳಿ ಅಗ್ನಿ ಅವಘಡ ಸಂಭವಿಸಿ ಲಕ್ಷಾಂತರ ರೂಪಾಯಿಯ ಬೆಲೆ ಬಾಳುವ ಕೃಷಿ ಸಾಮಾಗ್ರಿಗಳು ಸುಟ್ಟು ಭಸ್ಮವಾಗಿವೆ.

    ಜಿಲ್ಲೆಯ ಮುಂಡರಗಿ ಪಟ್ಟಣದ ಹಳೆ ಎಪಿಎಂಸಿ ಆವರಣದಲ್ಲಿ ಈ ಘಟನೆ ನಡೆದಿದ್ದು, ಅಗ್ನಿ ಅವಘಡದಿಂದಾಗಿ ಪೈಪ್ ಹಾಗೂ ಸಿಮೆಂಟ್ ಸುಟ್ಟು ಕರಕಲಾಗಿವೆ. ಹೈದರಾಬಾದ್ ಮೂಲದ ಎಎಸ್‍ಆರ್ ಕಂಪನಿಗೆ ಸೇರಿದ ಪೈಪ್‍ಗಳಾಗಿದ್ದು, 14 ಕಿಲೋಮೀಟರ್ ನೀರು ಸರಬರಾಜು ಕಾಮಗಾರಿಗಾಗಿ ಸಂಗ್ರಹಿಸಿ ಇಡಲಾಗಿತ್ತು. ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

    ಘಟನೆ ನಡೆದ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದು, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹಿರಣ್ಯಕೇಶಿ ನದಿಯಲ್ಲಿ ಕೊಚ್ಚಿ ಹೋದ ವ್ಯಕ್ತಿ – ಹುಡುಕಾಟದಲ್ಲಿ ಪೊಲೀಸರು

    ಹಿರಣ್ಯಕೇಶಿ ನದಿಯಲ್ಲಿ ಕೊಚ್ಚಿ ಹೋದ ವ್ಯಕ್ತಿ – ಹುಡುಕಾಟದಲ್ಲಿ ಪೊಲೀಸರು

    ಚಿಕ್ಕೋಡಿ: ತುಂಬಿ ಹರಿಯುತ್ತಿರುವ ಹಿರಣ್ಯಕೇಶಿ ನದಿಯಲ್ಲಿ ವ್ಯಕ್ತಿಯೊಬ್ಬರು ಕಾಲು ಜಾರಿ ಬಿದ್ದು, ಕೊಚ್ಚಿ ಹೋಗಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ನಡೆದಿದೆ.

    ಸಂಕೇಶ್ವರ ಪಟ್ಟಣ ನಿವಾಸಿ ಅಸ್ಲಮ ಜಮಾದಾರ(34) ನದಿ ಪಾಲಾಗಿರುವ ವ್ಯಕ್ತಿ. ಜಮಾದಾರ ಅವರು ಉಕ್ಕಿ ಹರಿಯುತ್ತಿರುವ ಹಿರಣ್ಯಕಾಶಿ ನದಿಯ ಬಳಿ ಬೈಕ್ ಮೇಲೆ ದಂಡೆಗೆ ಹೋದಾಗ ಕಾಲು ಜಾರಿ ಬಿದ್ದು ಕೊಚ್ಚಿ ಹೋಗಿದ್ದಾರೆ.

    ಈ ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸಂಕೇಶ್ವರ ಪೊಲೀಸರು ಮತ್ತು ಅಗ್ನಿ ಶಾಮಕದಳ ಸಿಬ್ಬಂದಿ ಭೇಟಿ ನೀಡಿದ್ದು, ಜಮಾದಾರ ಅವರಿಗೆ ಹುಡುಕಾಟವನ್ನು ಪ್ರಾರಂಭಿಸಿದ್ದಾರೆ. ಬೆಳಗಾವಿಯಲ್ಲಿ ನಿರಂತರ ಮಳೆಯಿಂದ ಹಿರಣ್ಯಕೇಶಿ ನದಿ ತುಂಬಿ ಹರಿಯುತ್ತಿದೆ. ಆದ್ದರಿಂದ ಜಮಾದಾರ ಕೊಚ್ಚಿ ಹೋಗಿದ್ದರಿಂದ ಬದುಕುಳಿದಿರುವುದು ಕಷ್ಟ ಎಂದು ಪೊಲೀಸರು ಶಂಕಿಸಿದ್ದಾರೆ.

    ಈ ಘಟನೆ ಸಂಕೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಸ್ತೆ ಬದಿ ಕಾರ್ ನಿಲ್ಲಿಸಿ ಏಕಾಏಕಿ ಕೆರೆಗೆ ಹಾರಿದ ಯುವಕ

    ರಸ್ತೆ ಬದಿ ಕಾರ್ ನಿಲ್ಲಿಸಿ ಏಕಾಏಕಿ ಕೆರೆಗೆ ಹಾರಿದ ಯುವಕ

    ಬೆಂಗಳೂರು: ಜೀವನದಲ್ಲಿ ಜಿಗುಪ್ಸೆ ಹೊಂದಿದ್ದ ಯುವಕನೊಬ್ಬ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನಲ್ಲಿ ನಡೆದಿದೆ.

    ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಬೆಂಗಳೂರಿನ ಬಸವೇಶ್ವರ ನಗರದ ನಿವಾಸಿ ಸುಮಂತ್(25) ಎಂದು ಗುರುತಿಸಲಾಗಿದೆ. ಆನೇಕಲ್ ತಾಲೂಕಿನ ಗಡಿ ತಮಿಳುನಾಡಿಗೆ ಹೊಂದಿಕೊಂಡಿರುವ ಹೊಸೂರು ರಸ್ತೆಯ ಗುಡ್ನಹಳ್ಳಿ ಗ್ರಾಮದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಗುರುವಾರ ಬೆಳಗ್ಗೆ ಮನೆಯಿಂದ ಹೊರಟಿದ್ದ ಸುಮಂತ್ ಮಧ್ಯಾಹ್ನ ಕೆಎ.51.ಎನ್.8958 ನ ಕಾರಿನಲ್ಲಿ ಬಂದಿದ್ದು, ಕಾರನ್ನು ಕರೆಯ ಸಮೀಪ ನಿಲ್ಲಿಸಿ ಏಕಾಏಕಿ ಕೆರೆಗೆ ಹಾರಿದ್ದಾನೆ. ಬಳಿಕ ಅಲ್ಲಿಯೇ ಇದ್ದ ಸ್ಥಳೀಯರು ನೀರಿನಲ್ಲಿ ಮುಳುಗುತ್ತಿದ್ದ ಸುಮಂತ್ ನನ್ನು ರಕ್ಷಣೆ ಮಾಡಲು ಮುಂದಾಗಿದ್ದಾರೆ. ಆದ್ರೆ ಅಷ್ಟರಲ್ಲಿ ಯುವಕ ಸಂಪೂರ್ಣವಾಗಿ ಮುಳುಗಿದ್ದಾನೆ.

    ನಾವು ಕಾರಿನಲ್ಲಿ ಸ್ವಲ್ಪ ದೂರದ ಹಿಂದೆ ಬರುತ್ತಿದ್ದೆವು. ಯುವಕ ಏಕಾಏಕಿ ಕಾರು ನಿಲ್ಲಿಸಿ ಕೆರೆಗೆ ಹಾರಿದ್ದಾನೆ. ನಾವು ರಕ್ಷಿಸಲು ಮುಂದಾಗುವಷ್ಟರಲ್ಲಿ ಆತ ನೀರಿನಲ್ಲಿ ಮುಳುಗಿದ್ದನು. ನಂತರ ನಾವು ಆನೇಕಲ್ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

    ಮಾಹಿತಿ ತಿಳಿದು ಘಟನೆ ಸ್ಥಳಕ್ಕೆ ಆನೇಕಲ್ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಶವಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಈ ಘಟನೆ ಸಂಬಂಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸೇತುವೆ ಮೇಲೆ ಹೊತ್ತಿ ಉರಿದು ಸಂಪೂರ್ಣ ಸುಟ್ಟು ಹೋಯ್ತು ಕಾರು!

    ಸೇತುವೆ ಮೇಲೆ ಹೊತ್ತಿ ಉರಿದು ಸಂಪೂರ್ಣ ಸುಟ್ಟು ಹೋಯ್ತು ಕಾರು!

    ಕಾರವಾರ: ಆಕಸ್ಮಿಕ ಬೆಂಕಿ ತಗುಲಿ ಚಲಿಸುತ್ತಿದ್ದ ಕಾರೊಂದು ಸಂಪೂರ್ಣ ಸುಟ್ಟು ಹೋಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ದಿವಗಿ ಸೇತುವೆ ಬಳಿ ನಡೆದಿದೆ.

    ಗೋವಾ ಮೂಲದ ಜಗದೀಶ್ ಅವರಿಗೆ ಸೇರಿದ್ದ ಕಾರು ಇದಾಗಿದ್ದು, ಇವರು ಭಟ್ಕಳದ ಕಡೆಗೆ ಪ್ರಯಾಣಿಸುತ್ತಿದ್ದರು. ಕುಮಟಾದ ದಿವಗಿ ಸೇತುವೆ ಬಳಿ ಹೋಗುತ್ತಿದ್ದಂತೆ ಕಾರಿನ ಸ್ಟೇರಿಂಗ್ ಬಳಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಜಗದೀಶ್ ಅವರು ತಕ್ಷಣ ಕಾರಿನಿಂದ ಕೆಳಗಿಳಿದಿದ್ದಾರೆ. ನಂತರ ಅಗ್ನಿಶಾಮಕ ದಳದವರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ.

    ಮಾಹಿತಿ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ದಳದವರು ಬರುವಷ್ಟರಲ್ಲಿ ಕಾರು ಸಂಪೂರ್ಣ ಸುಟ್ಟು ಹೋಗಿದೆ. ಸದ್ಯ ಈ ಬೆಂಕಿ ಅವಘಡದಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಈ ಘಟನೆ ಸಂಬಂಧ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನೋಡನೋಡುತ್ತಿದ್ದಂತೆ ನೀರಿನಲ್ಲಿ ಮುಳುಗಿದ ವ್ಯಕ್ತಿ – ಮೊಬೈಲಿನಲ್ಲಿ ಸೆರೆ

    ನೋಡನೋಡುತ್ತಿದ್ದಂತೆ ನೀರಿನಲ್ಲಿ ಮುಳುಗಿದ ವ್ಯಕ್ತಿ – ಮೊಬೈಲಿನಲ್ಲಿ ಸೆರೆ

    ಚಿಕ್ಕಮಗಳೂರು: ತುಂಬಿ ಹರಿಯುತ್ತಿದ್ದ ಭದ್ರಾ ಬಲ ದಂಡೆ ನಾಲೆಯಲ್ಲಿ ಈಜಲು ಹೋದ ವ್ಯಕ್ತಿಯೊಬ್ಬರು ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಭದ್ರಾ ಡ್ಯಾಂ ಸಮೀಪ ನಡೆದಿದೆ.

    ದಾವಣಗೆರೆ ಮೂಲದ ಪ್ರವಾಸಿ ಬಸವರಾಜ್ ನೀರಿನಲ್ಲಿ ಕೊಚ್ಚಿ ಹೋಗಿರುವ ವ್ಯಕ್ತಿ. ಬಸವರಾಜ್ ತನ್ನ ಐವರು ಸ್ನೇಹಿತರೊಂದಿಗೆ ಎರಡು ದಿನಗಳ ಹಿಂದೆ ಪ್ರವಾಸಕ್ಕೆಂದು ಲಕ್ಕವಳ್ಳಿ ಡ್ಯಾಂಗೆ ಬಂದಿದ್ದರು. ಈ ವೇಳೆ ಸಹ ಸ್ನೇಹಿತರು ಅಲ್ಲೇ ನಾಲೆಯ ಮತ್ತೊಂದು ಬದಿಯಲ್ಲಿ ಅಡುಗೆ ಮಾಡುವ ವೇಳೆ ಬಸವರಾಜ್ ಏಕಾಂಗಿಯಾಗಿ ಈಜುತ್ತಿದ್ದರು. ಅವರ ಸ್ನೇಹಿತರು ಬೇಡ ಬಾ ಎಂದ್ರು ಬಾರದ ಬಸವರಾಜ್ ಈಜುತ್ತಲೇ ಸ್ನೇಹಿತರು ನೋಡುತ್ತಿದ್ದಂತೆಯೇ ಮುಳುಗಿ ಹೋಗಿದ್ದಾರೆ.

    ಈ ಸನ್ನಿವೇಶವನ್ನ ಸ್ನೇಹಿತರು ಮೊಬೈಲಿನಲ್ಲಿ ಸೆರೆ ಹಿಡಿದಿದ್ದಾರೆ. ಕಳೆದ ಎರಡು ದಿನಗಳಿಂದ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಮೃತದೇಹಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆದರೆ ಮೃತದೇಹ ಸಿಗುವ ಲಕ್ಷಣಗಳು ತೀರಾ ಕಡಿಮೆ ಎಂದು ಹೇಳಲಾಗುತ್ತಿದೆ. ಯಾಕೆಂದರೆ ಈ ನಾಲೆ ದಾವಣಗೆರೆಗೆ ಹೋಗಿ ವಾಣಿವಿಲಾಸ ಸಾಗರದವರೆಗೂ ಹರಿಯಲಿದೆ.

    ದಾವಣಗೆರೆಯಿಂದ ಕೂಡ ನೂರಾರು ಜನ ಬಂದು ಮೃತದೇಹ ಹುಡುಕಾಟ ನಡೆಸುತ್ತಿದ್ದಾರೆ. ನಲ್ಲೂರು ಬಳಿ ನಾಲೆ ಎರಡು ವಿಭಾಗವಾಗಿ ಹರಿಯಲಿದೆ. ಒಂದು ವಾಣಿವಿಲಾಸ ಸಾಗರಕ್ಕೆ ಹೋದರೆ ಮತ್ತೊಂದು ಬೇರೆ ಕಡೆ ಹೋಗುತ್ತೆದೆ. ಸದ್ಯಕ್ಕೆ ಪೊಲೀಸರು ಮಾರ್ಗದುದ್ದಕ್ಕೂ ಹುಡುಕುತ್ತಿದ್ದಾರೆ.

    ನಲ್ಲೂರು ಪೊಲೀಸರು, ಸ್ಥಳಿಯರು ಮತ್ತು ಈಜು ತಜ್ಞರು ಮೃತದೇಹ ತೇಲಿಬರಬಹುದೆಂದು ಕಾಯುತ್ತಿದ್ದಾರೆ. ಈ ಘಟನೆ ಲಕ್ಕವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ಶಾಲೆಗೆ ಹೋಗ್ತಿದ್ದ ವಿದ್ಯಾರ್ಥಿ ನೀರುಪಾಲು

    ಶಾಲೆಗೆ ಹೋಗ್ತಿದ್ದ ವಿದ್ಯಾರ್ಥಿ ನೀರುಪಾಲು

    ಬೆಳಗಾವಿ: ಸೈಕಲಿನಲ್ಲಿ ಶಾಲೆಗೆ ಹೊರಟಿದ್ದ ಬಾಲಕ ಆಯತಪ್ಪಿ ನದಿಗೆ ಬಿದ್ದು, ನೀರುಪಾಲಾಗಿರುವ ಘಟನೆ ಜಿಲ್ಲೆಯ ಗೋಕಾಕ್ ತಾಲೂಕಿನ ಸುನದೋಳಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.

    ಎಂಟನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಬಸವರಾಜ್ ನೀರುಪಾಲದ ಬಾಲಕ. ಬಸವರಾಜ್ ಇಂದು ಸೈಕಲ್ ಮೇಲೆ ಶಾಲೆಗೆ ಹೊರಟ್ಟಿದ್ದನು. ಘಟಪ್ರಭಾ ನದಿಯ ಸೇತುವೆ ಮೇಲೆ ಹೋಗುವಾಗ ಎದುರುಗಡೆಯಿಂದ ವಾಹನವೊಂದು ಬರುತ್ತಿತ್ತು. ಈ ವೇಳೆ ವಾಹನದಿಂದ ತಪ್ಪಿಸಿಕೊಳ್ಳಲು ಸೈಕಲ್ ನನ್ನು ಪಕ್ಕಕ್ಕೆ ತೆಗೆದುಕೊಳ್ಳಲು ಹೋಗಿದ್ದಾನೆ. ಆಗ ಆಯ ತಪ್ಪಿ ಘಟಪ್ರಭಾ ನದಿಗೆ ಸೈಕಲ್ ಸಮೇತ ಬಿದ್ದಿದ್ದಾನೆ.

    ಬಾಲಕ ಬಿದ್ದ ತಕ್ಷಣ ಅಲ್ಲಿದ್ದವರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದ ಕುಲಗೋಡ ಪೊಲೀಸರು ಸ್ಥಳಕ್ಕೆ ದೌಡಾಯಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಜೊತೆಗೆ ಅಗ್ನಿಶಾಮಕ ದಳ ಸಿಬ್ಬಂದಿ ಬಾಲಕನಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.

    ಘಟಪ್ರಭಾ ಸೇತುವೆಗೆ ತಡೆಗೋಡೆ ಇಲ್ಲದ್ದರಿಂದ ಈ ಅವಘಡ ನಡೆದಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇತ್ತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.