Tag: ಅಗ್ನಿಶಾಮಕ ದಳ

  • ಅಗ್ನಿಶಾಮಕ ದಳದ ಎಡವಟ್ಟಿಗೆ ಸುಟ್ಟು ಭಸ್ಮವಾಯ್ತು ಮನೆ, ದನದ ಕೊಟ್ಟಿಗೆ!

    ಅಗ್ನಿಶಾಮಕ ದಳದ ಎಡವಟ್ಟಿಗೆ ಸುಟ್ಟು ಭಸ್ಮವಾಯ್ತು ಮನೆ, ದನದ ಕೊಟ್ಟಿಗೆ!

    – ಬೆಂಕಿ ನಂದಿಸಲು ನೀರು ತುಂಬಿರದ ವಾಹನ ತಂದಿದ್ದ ಸಿಬ್ಬಂದಿ

    ಕಾರವಾರ: ಮನೆ ಹಾಗೂ ಕೊಟ್ಟಿಗೆಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ನಂದಿಸಲು ಬಂದಿದ್ದ ವಾಹನದಲ್ಲಿ ನೀರು ಇಲ್ಲದೆ ಅಗ್ನಿಶಾಮಕ ಸಿಬ್ಬಂದಿ ಪರದಾಡಿದ ಘಟನೆ ಉತ್ತರ ಕನ್ನಡ ಸಿದ್ದಾಪುರ ತಾಲೂಕಿನ ಬೇಡ್ಕಣಿ ಗ್ರಾಮದಲ್ಲಿ ನಡೆದಿದೆ.

    ಬೇಡ್ಕಣಿ ಗ್ರಾಮದ ಗಣಪತಿ ಎಂ.ನಾಯ್ಕ ಎಂಬವರ ಮನೆಗೆ ನಿನ್ನೆ ತಡರಾತ್ರಿ ಬೆಂಕಿ ಬಿದ್ದಿತ್ತು. ಈ ಕುರಿತು ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ನೀರು ಬಿಡಲು ಮುಂದಾಗಿದ್ದಾರೆ. ಆದರೆ ವಾಹನದಲ್ಲಿ ನೀರು ಖಾಲಿಯಾಗಿದ್ದರಿಂದ ಕೆಲ ಹೊತ್ತು ಪರದಾಡುವಂತಾಯಿತು. ಅಷ್ಟೇ ಅಲ್ಲದೆ ನೀರು ಪಂಪ್ ಮಾಡುವ ಮಷಿನ್ ಕೂಡ ದುರಸ್ತಿಯಾಗಿತ್ತು. ಇದರಿಂದಾಗಿ ಬೆಂಕಿ ಆರಿಸಲು ಸಾಧ್ಯವಾಗಲಿಲ್ಲ.

    ಅಗ್ನಿಶಾಮಕ ದಳದ ಎಡವಟ್ಟಿನಿಂದಾಗಿ ಕೊಟ್ಟಿಗೆಯಲ್ಲಿದ್ದ ಮೇವು ಸಂಪೂರ್ಣ ನಾಶವಾಗಿದ್ದು, ಮನೆಯ ಮೇಲ್ಚಾವಣಿ ಸುಟ್ಟು ಭಸ್ಮವಾಗಿದೆ. ಆದರೆ ಕುಟುಂಬದ ಸದಸ್ಯರು ಮನೆಯಲ್ಲಿದ್ದ ಅಗತ್ಯ ವಸ್ತುಗಳನ್ನು ಅಂಗಳದಲ್ಲಿ ತಂದು ಇಟ್ಟು ಭಾರೀ ಹಾನಿಯನ್ನು ತಪ್ಪಿಸಿದ್ದಾರೆ. ಸುಮಾರು 5 ಲಕ್ಷ ರೂ.ಗಿಂತ ಅಧಿಕ ಹಾನಿಯಾಗಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

    ಭಾರೀ ಹಾನಿಗೆ ಅಗ್ನಿಶಾಮಕ ದಳದ ನಿರ್ಲಕ್ಷ್ಯವೇ ಮುಖ್ಯ ಕಾರಣ. ವಾಹನದಲ್ಲಿ ನೀರು ಇಲ್ಲದೆ ಬೆಂಕಿ ನಂದಿಸಲು ಬಂದಿರುವುದು ಸಿಬ್ಬಂದಿಯ ಬೇಜವಾಬ್ದಾರಿ ತೋರಿಸುತ್ತದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಮನೆಯ ಮಾಲೀಕ ಗಣಪತಿ ನಾಯ್ಕ್ ಸಣ್ಣ ಪುಟ್ಟ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಬಸ್ಸಿನ ಆಯಸ್ಸು ಮುಗಿದಿದ್ದರೂ 3 ವರ್ಷ ಚಾಲನೆ ಮಾಡಿದ್ದು ಹೇಗೆ: ಮಂಗ್ಳೂರು ಮಾಲೀಕ

    ಬಸ್ಸಿನ ಆಯಸ್ಸು ಮುಗಿದಿದ್ದರೂ 3 ವರ್ಷ ಚಾಲನೆ ಮಾಡಿದ್ದು ಹೇಗೆ: ಮಂಗ್ಳೂರು ಮಾಲೀಕ

    ಮಂಗಳೂರು: ಬಸ್ಸು ಆಯಸ್ಸು ಮುಗಿದಿದ್ದರೂ 3 ವರ್ಷ ಚಾಲನೆ ಮಾಡಿದ್ದು ಹೇಗೆ ಎನ್ನುವುದೇ ನನಗೆ ಅನುಮಾನ ಉಂಟಾಗಿದೆ ಎಂದು ಬಸ್ಸಿನ ಮೂಲ ಮಾಲೀಕರಾಗಿದ್ದ ರಾಘವ ಕರ್ಕೇರ ಹೇಳಿದ್ದಾರೆ.

    ಮಂಡ್ಯದ ಕನಗನಮರಡಿ ಬಸ್ ದುರಂತಕ್ಕೆ ಸಂಬಂಧಿಸಿದಂತೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು, ನಾನು ಆ ಬಸ್ ಖರೀದಿ ಮಾಡುವ ವೇಳೆಗೆ ಆದರ ಆಯಸ್ಸು 11 ವರ್ಷ ಆಗಿತ್ತು. ಬಳಿಕ ನನಗೆ ಇಲ್ಲಿ 1 ವರ್ಷ ಮಾತ್ರ ಓಡಿಸಲು ಅವಕಾಶವಿತ್ತು. ಆದ್ದರಿಂದ ನಾನು ಬಸ್ ಖರೀದಿ ಮಾಡಿ ಉತ್ತಮವಾಗಿ ನಿರ್ವಹಣೆ ಮಾಡಿದ್ದೆ. ಬಸ್ ಸ್ಥಿತಿ ಉತ್ತಮವಾಗಿದ್ದ ಕಾರಣ ಮೂರು ವರ್ಷಕ್ಕೆ ರಿನೀವಲ್ ಆಗಿತ್ತು. 12 ವರ್ಷ ಬಸ್ಸಿನ ಆಯಸ್ಸು ಇದ್ದರೂ ಚೆನ್ನಾಗಿ ನಿರ್ವಹಣೆ ಮಾಡಿದ್ದರೆ 15 ವರ್ಷ ಇಲ್ಲಿ ಓಡಿಸಬಹುದು ಎಂದು ತಿಳಿಸಿದರು.

    ಬಸ್ಸಿನ ಆಯಸ್ಸು 15 ವರ್ಷಕ್ಕೆ 4 ತಿಂಗಳು ಬಾಕಿ ಇರುವ ವೇಳೆ ನಾನು ಮಾರಾಟ ಮಾಡಿದೆ. ಆಗ ಅವರಿಗೆ ಒಂದು ಅವಧಿಗೆ ಚಾಲನೆ ಮಾಡಲು ಅವಕಾಶವಿತ್ತು. ಈಗ ಬಸ್ ಹೆಚ್ಚುವರಿಯಾಗಿ 3 ವರ್ಷ ಓಡಿಸಿದ್ದಾರೆ. ಇದಕ್ಕೆ ಹೇಗೆ ಅನುಮತಿ ಸಿಕ್ಕಿದೆ ಎನ್ನುವುದರ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.

    ನಾನು ಬಸ್ ಕಡಿಮೆ ಅವಧಿಗೆ ಚಾಲನೆ ಮಾಡುವ ಉದ್ದೇಶದಿಂದ ಖರೀದಿ ಮಾಡಿದ್ದೆ. ಕಡಿಮೆ ಕಲೆಕ್ಷನ್ ಆಗುತ್ತಿದ್ದ ಕಾರಣ ಈ ರೂಟ್ ನಲ್ಲಿ ಹೊಸ ಬಸ್ ಓಡಿಸಲು ಸಾಧ್ಯವಿರಲಿಲ್ಲ. ಆದ್ದರಿಂದ ಉತ್ತಮ ಸ್ಥಿತಿಯಲ್ಲೇ ಇಟ್ಟು ಮಾರಾಟ ಮಾಡಿದ್ದೇನೆ. ಅವರಿಗೆ ಹೆಚ್ಚುವರಿ ಅನುಮತಿ ಹೇಗೆ ಲಭಿಸಿದೆ ಎನ್ನುವುದು ತಿಳಿದುಕೊಳ್ಳಬೇಕಿದೆ. ಅಲ್ಲದೇ ಯಾವುದೇ ಅಪಘಾತವಾದ ಬಳಿಕ ತನ್ನ ಜೀವ ಕೊಟ್ಟು ಪ್ರಯಾಣಿಕರ ಜೀವ ಉಳಿಸುವುದು ಚಾಲಕನ ಕರ್ತವ್ಯ. ಆದರೆ ಈ ಘಟನೆಯಲ್ಲಿ ಚಾಲಕ ಸ್ಥಳದಿಂದ ಪರಾರಿಯಾಗಿರುವುದು ಬೇಸರ ತಂದಿದೆ ಎಂದು ತಿಳಿಸಿದರು.  ಇದನ್ನು ಓದಿ: 30ಕ್ಕೂ ಹೆಚ್ಚು ಜನರ ಬಲಿ ತೆಗೆದುಕೊಂಡ ಮಂಡ್ಯ ದುರಂತಕ್ಕೆ ಕಾರಣ ಸಿಕ್ತು!

    ಇತಿಹಾಸ ಕೆದಕಿದಾಗ ಮತ್ತಷ್ಟು ಮಾಹಿತಿ ಸಿಕ್ಕಿದ್ದು ಇದೂವರೆಗೆ 9 ಮಂದಿ ಈ ಬಸ್ಸಿನ ಮಾಲೀಕರಾಗಿದ್ದಾರೆ. 2001ರ ಜೂ.1ಕ್ಕೆ ಆರ್ ಟಿಓ ಕಚೇರಿಯಲ್ಲಿ ನೋಂದಣಿ ಆಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ಬಸ್ಸಿನ ಗರಿಷ್ಟ ಆಯಸ್ಸು 15 ವರ್ಷವಾಗಿದ್ದು, ನಂತರ ಈ ಬಸ್ಸನ್ನು ಓಡಿಸುವಂತಿಲ್ಲ ಎನ್ನುವ ನಿರ್ಧಾರವನ್ನು ಮಂಗಳೂರು ಸಾರಿಗೆ ಪ್ರಾಧಿಕಾರ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • 30ಕ್ಕೂ ಹೆಚ್ಚು ಜನರ ಬಲಿ ತೆಗೆದುಕೊಂಡ ಮಂಡ್ಯ ದುರಂತಕ್ಕೆ ಕಾರಣ ಸಿಕ್ತು!

    30ಕ್ಕೂ ಹೆಚ್ಚು ಜನರ ಬಲಿ ತೆಗೆದುಕೊಂಡ ಮಂಡ್ಯ ದುರಂತಕ್ಕೆ ಕಾರಣ ಸಿಕ್ತು!

    ಮಂಡ್ಯ: ಜಿಲ್ಲೆಯ ಪಂಡಾವಪುರ ಬಳಿಕ ನಡೆದ ಭೀಕರ ಬಸ್ ದುರಂತ ಸಂಭವಿಸಿದ್ದು, ಸುಮಾರು 30 ಮಂದಿ ಮೃತಪಟ್ಟಿದ್ದಾರೆ. ಈ ಅಪಘಾತಕ್ಕೆ ಸ್ಟೇರಿಂಗ್ ಲಾಕ್ ಆಗಿದ್ದೆ ಕಾರಣ ಎಂದು ತಿಳಿದು ಬಂದಿದೆ.

    ಇಂದು ಮಧ್ಯಾಹ್ನ ಕೆಎ-19, 5676 ನೊಂದಣಿ ಸಂಖ್ಯೆಯ ಪಂಚಲಿಂಗೇಶ್ವರ ಬಸ್ ಪಾಂಡವಪುರದಿಂದ ಮಂಡ್ಯಕ್ಕೆ ತೆರಳುತ್ತಿತ್ತು. ಈ ವೇಳೆ ಚಿಕ್ಕಬ್ಯಾಡರಹಳ್ಳಿ-ಕನಗನಮರಡಿ ಮಾರ್ಗದಲ್ಲಿ ಹೋಗುತ್ತಿದ್ದಂತೆ ವಿ.ಸಿ ನಾಲೆಗೆ ನೇರವಾಗಿ ಬಸ್ ಮುಳುಗಿತ್ತು. ಪರಿಣಾಮ ಬಸ್ಸಿನಿಂದ ಹೊರಬರಲಾಗದೇ ಪ್ರಯಾಣಿಕರು ಪರದಾಡಿ ಜಲಸಮಾಧಿಯಾಗಿದ್ದಾರೆ.

    ಇನ್ನೂ ಅಪಘಾತದಲ್ಲಿ ಗಿರೀಶ್ ಮತ್ತು ಬಾಲಕ ಲೋಹಿತ್ ಮಾತ್ರ ಅದೃಷ್ಟವಶಾತ್ ಬದುಕುಳಿದಿದ್ದಾರೆ. ಸ್ಥಳದಲ್ಲಿದ್ದವರು ಅಪಘಾತ ಬಗ್ಗೆ ಮಾತನಾಡಿದ್ದು, ಈ ಮಾರ್ಗದಲ್ಲಿ ಅಪಘಾತ ಸಂಭವಿಸಿರಲಿಲ್ಲ. ರಸ್ತೆಯೂ ಕೂಡ ದೊಡ್ಡದಾಗಿತ್ತು. ಯಾವುದೇ ತಿರುವು ಕೂಡ ಇರಲಿಲ್ಲ. ಬಸ್ ವಿಸಿ ನಾಲೆಯ ಬಳಿ ಬರುತ್ತಿದ್ದಂತೆ ಸ್ಟೇರಿಂಗ್ ಲಾಕ್ ಆಗಿದೆ. ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ, ಆತನ ಅಜಾಗರುಕತೆಯಿಂದ ಬಸ್ ನಾಲೆಗೆ ಬಿದ್ದಿದೆ ಎಂದು ಸ್ಥಳೀಯರು ಹೇಳಿದ್ದಾರೆ.

    ಮಂಗಳೂರಿನ ನೋಂದಣಿ ಸಂಖ್ಯೆಯನ್ನು ಹೊಂದಿರುವ ರಾಜಕುಮಾರ ಹೆಸರಿನ ಬಸ್ ಇದ್ದಾಗಿದ್ದು, ಬಸ್ ನ ಮಾಲೀಕ ಶ್ರೀನಿವಾಸ್ ಎಂದು ತಿಳಿದು ಬಂದಿದೆ. 2001ರ ಜನವರಿಯಲ್ಲಿ ನೊಂದಣಿಯಾಗಿದ್ದು, ದುರಂತಕ್ಕೀಡಾದ ಬಸ್ಸಿಗೆ ಮುಂದಿನ ವರ್ಷದ ಮೇ 15 ರವೆಗೆ ಫಿಟ್‍ನೆಸ್ ಸರ್ಟಿಫಿಕೇಟ್ ಇತ್ತು. ಇದೇ ನವೆಂಬರ್ 30ರವರೆಗೆ ಬಸ್ಸಿಗೆ ತೆರಿಗೆಯನ್ನು ಕೂಡ ಕಟ್ಟಲಾಗಿತ್ತು. ಬಸ್ ಇನ್ಸೂರೆನ್ಸ್ ಕೂಡ ಮುಂದಿನ ವರ್ಷ 15ರವೆಗೂ ಇತ್ತು.

    ಸದ್ಯಕ್ಕೆ ಸಿಎಂ ಕುಮಾರಸ್ವಾಮಿ ಅಪಘಾತದ ಸ್ಥಳಕ್ಕೆ ಭೇಟಿ ನೀಡಿ ಸಂಬಂಧಿಕರಿಗೆ ಸಾಂತ್ವನ ಹೇಳುತ್ತಿದ್ದು, ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಇತ್ತ ಬಸ್ ನಿರ್ವಾಹಕ ಹೇಗೋ ಈಜಿಕೊಂಡು ಪರಾರಿಯಾಗಿದ್ದಾನೆ.

    https://www.youtube.com/watch?v=nMUgrgqecdA

    https://www.youtube.com/watch?v=qf38bZ6WU1c

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಬಟ್ಟೆ ಕಾರ್ಖಾನೆಯಲ್ಲಿ ಬೆಂಕಿ ಅವಘಡ: ನಾಲ್ವರು ಸಜೀವ ದಹನ!

    ಬಟ್ಟೆ ಕಾರ್ಖಾನೆಯಲ್ಲಿ ಬೆಂಕಿ ಅವಘಡ: ನಾಲ್ವರು ಸಜೀವ ದಹನ!

    ನವದೆಹಲಿ: ಬಟ್ಟೆ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಬೆಂಕಿ ಅವಘಡದಿಂದಾಗಿ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರು ಸಜೀವವಾಗಿ ದಹನವಾಗಿರುವ ಘಟನೆ ದೆಹಲಿಯ ಕರೋಲ್ ಬಾಗ್ ಪ್ರದೇಶದಲ್ಲಿ ನಡೆದಿದೆ.

    ಸೋಮವಾರ ಮಧ್ಯಾಹ್ನ 12.30ರ ವೇಳೆಗೆ ಬಟ್ಟೆ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ ನಾಲ್ವರು ಸಜೀವವಾಗಿ ಸುಟ್ಟುಹೋಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಎರಡು ಅಗ್ನಿಶಾಮಕ ವಾಹನಗಳು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿವೆ.

    ಈ ಕುರಿತು ಪ್ರತಿಕ್ರಿಯಿಸಿರುವ ಅಗ್ನಿಶಾಮಕ ಅಧಿಕಾರಿ, ಕಾರ್ಖಾನೆಯಲ್ಲಿ ಕಾರ್ಮಿಕರು ಬಟ್ಟೆಗಳನ್ನು ಸ್ಟೀಮ್ ಮಾಡುವ ಮೂಲಕ ಒಣಗಿಸುವ ಕೆಲಸ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಬೆಂಕಿ ಹತ್ತಿಕೊಂಡಿದೆ. ಬೆಂಕಿಯಿಂದ ತಪ್ಪಿಸಿಕೊಳ್ಳಲು ಹೊರಬರುತ್ತಿರುವಾಗ ಓರ್ವ ಬಲಶಾಲಿ ವ್ಯಕ್ತಿ ಬಾಗಿಲಿನಲ್ಲಿ ಸಿಕ್ಕಿಹಾಕಿಕೊಂಡಿದ್ದಾನೆ. ಇದರಿಂದಾಗಿ ನಾಲ್ವರು ಹೊರಬರಲಾಗದೇ ಬೆಂಕಿಗೆ ಆಹುತಿಯಾಗಿದ್ದಾರೆ. ಕಾರ್ಖಾನೆಯಯಲ್ಲಿ ಒಂದೇ ಒಂದು ದ್ವಾರವನ್ನು ಹೊರತುಪಡಿಸಿ, ಬೇರೆ ಯಾವುದೇ ಮಾರ್ಗಗಳು ಇರಲಿಲ್ಲವೆಂದು ತಿಳಿಸಿದ್ದಾರೆ.

    ಮೃತರನ್ನು ಬಗಾನ್ ಪ್ರಸಾದ್(55), ಆರ್.ಎಂ.ನರೇಶ್(40), ಆರತಿ (20) ಹಾಗೂ ಆಶಾ(40) ಎಂದು ಗುರುತಿಸಲಾಗಿದ್ದು, 25 ವರ್ಷದ ಅಜಿತ್ ಎಂಬವರ ಸ್ಥಿತಿ ಗಂಭೀರವಾಗಿದೆ. ಗಾಯಾಳುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿರುವುದಾಗಿ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ರಾಕೆಟ್ ಪಟಾಕಿಯಿಂದ ಫರ್ನೀಚರ್ ಗೋದಾಮು ಭಸ್ಮವಾಯ್ತು!

    ರಾಕೆಟ್ ಪಟಾಕಿಯಿಂದ ಫರ್ನೀಚರ್ ಗೋದಾಮು ಭಸ್ಮವಾಯ್ತು!

    ಬೆಂಗಳೂರು: ಪಟಾಕಿಯೊಂದು ಸಿಡಿದ ಪರಿಣಾಮ ಫರ್ನೀಚರ್ ತುಂಬಿದ್ದ ಗೋದಾಮಿಗೆ ಬೆಂಕಿ ತಗುಲಿ, ಸಂಪೂರ್ಣ ಕಟ್ಟಡ ಹೊತ್ತಿ ಉರಿದ ಘಟನೆ ಆನೇಕಲ್ ತಾಲೂಕಿನ ಚಂದಾಪುರದ ಬನಹಳ್ಳಿಯಲ್ಲಿ ನಡೆದಿದೆ.

    ದೀಪಾವಳಿ ಹಬ್ಬದ ಸಂಭ್ರಮಾಚರಣೆಯಲ್ಲಿ ಸ್ಥಳೀಯರು ಹಚ್ಚಿದ್ದ ಪಟಾಕಿಯೊಂದು, ಫರ್ನೀಚರ್ ತುಂಬಿದ್ದ ಗೋದಾಮಿಗೆ ತಗುಲಿದೆ. ಪರಿಣಾಮ ಸಂಪೂರ್ಣ ಕಟ್ಟಡಕ್ಕೆ ಬೆಂಕಿ ವ್ಯಾಪಿಸಿದೆ. ಕಟ್ಟಡದಲ್ಲಿ ಮರದ ವಸ್ತುಗಳೇ ಹೆಚ್ಚಾಗಿ ಸಂಗ್ರಹಿಸಿದ್ದರಿಂದ ಅಗ್ನಿಯ ಕೆನ್ನಾಲಿಗೆ ತೀವ್ರತೆಯನ್ನು ಪಡೆದುಕೊಂಡಿದೆ.

    ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ 2 ಅಗ್ನಿಶಾಮಕ ವಾಹನ ಹಾಗೂ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಸ್ಥಳೀಯರ ಮಾಹಿತಿಯ ಪ್ರಕಾರ ರಾಕೆಟ್ ಪಟಾಕಿಯೊಂದು, ಗೋದಾಮಿನ ಮೇಲೆ ಸಂಗ್ರಹಿಸಿಟ್ಟಿದ್ದ ಸ್ಪಾಂಜ್‍ಗೆ ತಗುಲಿದ್ದರಿಂದ ಇಡೀ ಕಟ್ಟಡಕ್ಕೆ ಬೆಂಕಿ ವ್ಯಾಪಿಸಿದೆ.

    ಫರ್ನೀಚರ್ ಗೋದಾಮು ಕೇರಳ ಮೂಲದ ಶಾಜಿ ಎಂಬವರಿಗೆ ಸೇರಿದ್ದಾಗಿದೆ. ಘಟನೆ ಸಂಬಂಧ ಸೂರ್ಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೆಟ್ರೋ ಕಾಮಗಾರಿ ವೇಳೆ ಗ್ಯಾಸ್ ಪೈಪ್ ಲೀಕೇಜ್ – ಸಾರ್ವಜನಿಕರಲ್ಲಿ ಆತಂಕ

    ಮೆಟ್ರೋ ಕಾಮಗಾರಿ ವೇಳೆ ಗ್ಯಾಸ್ ಪೈಪ್ ಲೀಕೇಜ್ – ಸಾರ್ವಜನಿಕರಲ್ಲಿ ಆತಂಕ

    ಬೆಂಗಳೂರು: ಮೆಟ್ರೋ ಕಾಮಗಾರಿ ವೇಳೆ ಡ್ರಿಲ್ಲಿಂಗ್ ಮಾಡುವಾಗ ಗ್ಯಾಸ್ ಪೈಪ್ ಲೀಕೇಜ್ ಆಗಿ ಕೆಲ ಗಂಟೆಗಳ ಕಾಲ ರಸ್ತೆಯಲ್ಲಿ ಸಂಚಾರಿಸುವ ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

    ಬೆಂಗಳೂರಿನ ಮಹದೇವಪುರ ಬಳಿಯ ಗರುಡಾಚಾರ್ ಪಾಳ್ಯದಲ್ಲಿ ಈ ಘಟನೆ ನಡೆದಿದೆ. ತಡರಾತ್ರಿ ನಡೆಯುತ್ತಿದ್ದ ಮೆಟ್ರೋ ಕಾಮಗಾರಿ ವೇಳೆ ಬೆಳಗಿನ ಜಾವ ಸುಮಾರು 3 ಗಂಟೆ ಸುಮಾರಿಗೆ ಡ್ರಿಲ್ಲಿಂಗ್ ಮಾಡುವಾಗ ಅಲ್ಲಿದ್ದಂತಹ 70 ಕಿ.ಲೋ ಫೋರ್ಸ್ ನ ಗ್ಯಾಸ್ ಪೈಪ್ ಲೈನ್ ಲೀಕೇಜ್ ಆಗಿದೆ.

    ಗ್ಯಾಸ್ ಲೀಕೇಜ್ ಬಳಿಕ ಕೆಲ ಗಂಟೆಗಳ ಕಾಲ ಅಲ್ಲಿನ ಸಾರ್ವಜನಿಕರಲ್ಲಿ ಆತಂಕ ವಾತಾವರಣ ನಿರ್ಮಾಣವಾಗಿತ್ತು. ಐಟಿಪಿಎಲ್ ಪ್ರಮುಖ ರಸ್ತೆಯು ಕೆಲ ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಅವಘಡದ ಆತಂಕದಲ್ಲಿ ಅಲ್ಲಿನ ಸುತ್ತಮುತ್ತಲಿನ ಕಡೆ ಮೊಬೈಲ್ ಫೋನ್ ಸಹ ನಿಷೇಧಿಸಲಾಗಿತ್ತು.

    ಸಮಸ್ಯೆ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಗ್ಯಾಸ್ ಲೀಕೇಜ್ ನಿಲ್ಲಿಸಲು ಹರಸಾಹಸ ಪಡಬೇಕಾಯಿತು. ನಂತರ ಕೆಲ ಗಂಟೆಗಳ ಬಳಿಕ ಗ್ಯಾಸ್ ಪೈಪ್ ಲೀಕೇಜ್  ನ್ನು ನಿಲ್ಲಿಸುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಿಲಿಂಡರ್ ಲಾರಿ, ಬೈಕ್ ಡಿಕ್ಕಿ – ಮುಖದ ಗುರುತು ಸಿಗದಂತೆ ಸವಾರ ದುರ್ಮರಣ

    ಸಿಲಿಂಡರ್ ಲಾರಿ, ಬೈಕ್ ಡಿಕ್ಕಿ – ಮುಖದ ಗುರುತು ಸಿಗದಂತೆ ಸವಾರ ದುರ್ಮರಣ

    – ಅಪಘಾತದ ರಭಸಕ್ಕೆ ಹೊತ್ತಿ ಉರಿದ ಬೈಕ್-ಲಾರಿ

    ಬೆಂಗಳೂರು: ಬೈಕ್ ಹಾಗೂ ಸಿಲಿಂಡರ್ ಲಾರಿ ನಡುವೆ ಭೀಕರ ರಸ್ತೆ ಅಪಘಾತ ಸಂಬಂಧಿಸಿದ್ದು, ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಂಗಳೂರು ಹೊರವಲಯ ಮಂಡೂರು ಸಮೀಪದ ಕಟ್ಟುಗೊಲ್ಲಹಳ್ಳಿ ಬಳಿ ನಡೆದಿದೆ.

    ಬಸವರಾಜ್ ಮೃತ ದುರ್ದೈವಿ. ಈತ ದೇವನಹಳ್ಳಿ ತಾಲೂಕಿನ ಭಟ್ಟರಮಾರೆನಹಳ್ಳಿ ಮೂಲದವರು ಎಂದು ತಿಳಿದು ಬಂದಿದೆ. ಬೈಕ್ ಸವಾರ ಏರ್ ಪೋರ್ಟ್ ಮಾರ್ಗವಾಗಿ ಹೋಗುತ್ತಿದ್ದರು. ಈ ವೇಳೆ ಎದುರುಗಡೆಯಿಂದ ಗ್ಯಾಸ್ ಸಿಲಿಂಡರ್ ಲಾರಿ ಬಂದು ಬೈಕಿಗೆ ಡಿಕ್ಕಿ ಹೊಡೆದಿದೆ.

    ಲಾರಿ ಡಿಕ್ಕಿ ಹೊಡೆದ ಪರಿಣಾಮ ಸವಾರ ಬಸವರಾಜ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಡಿಕ್ಕಿಯ ರಭಸಕ್ಕೆ ಬೈಕ್ ಹಾಗೂ ಸಿಲಿಂಡರ್ ಲಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಬೈಕ್ ಮತ್ತು ಲಾರಿ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ಅಪಘಾತದಿಂದಾಗಿ ಬೂದಿಗೆರೆ ಮಾರ್ಗದ ಏರ್ ಪೋರ್ಟ್ ರಸ್ತೆಯು ಸಂಪೂರ್ಣ ಬಂದ್ ಆಗಿತ್ತು.

    ಅಪಘಾತ ನಡೆದ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವಲಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸೆಲ್ಫಿ ಕ್ರೇಜ್‍ಗೆ ಕೆರೆಯಲ್ಲಿ ಮುಳುಗಿ ಮೂವರು ಎನ್‍ಎಸ್‍ಎಸ್ ವಿದ್ಯಾರ್ಥಿಗಳು ಬಲಿ!

    ಸೆಲ್ಫಿ ಕ್ರೇಜ್‍ಗೆ ಕೆರೆಯಲ್ಲಿ ಮುಳುಗಿ ಮೂವರು ಎನ್‍ಎಸ್‍ಎಸ್ ವಿದ್ಯಾರ್ಥಿಗಳು ಬಲಿ!

    ಬೆಂಗಳೂರು: ಸೆಲ್ಫಿ ಹುಚ್ಚಿಗೆ ಕೆರೆಯಲ್ಲಿ ಮುಳುಗಿ ಮೂವರು ವಿದ್ಯಾರ್ಥಿಗಳು ಬಲಿಯಾಗಿರುವಂತ ದಾರುಣ ಘಟನೆ ಸಂಭವಿಸಿದೆ.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಹಳೇ ನಿಜಗಲ್ ಗ್ರಾಮದ ಕರೆಯಲ್ಲಿ ಈ ಘಟನೆ ನಡೆದಿದೆ. ಎನ್‍ಎಸ್‍ಎಸ್ ಕ್ಯಾಂಪಿಗೆ ಬಂದಿದ್ದ ವಿದ್ಯಾರ್ಥಿಗಳಾದ ಪೂರ್ಣಚಂದ್ರ (17), ಮೊಹಮ್ಮದ್ ಮೂರ್ತಜ್ (16) ಮತ್ತು ಶಶಾಂಕ್ (17) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ.

    ಪೂರ್ಣಚಂದ್ರ ಹಾಗೂ ಮೊಹಮ್ಮದ್ ಮೂರ್ತಜ್ ತುಮಕೂರಿನ ಸಿದ್ದಗಂಗಾ ಬಾಲಕರ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಮತ್ತೋರ್ವ ವಿದ್ಯಾರ್ಥಿ ಶಶಾಂಕ್ ತುರುವೇಕೆರೆ ಸರ್ಕಾರಿ ಪಿಯು ಕಾಲೇಜಿನಲ್ಲಿ ಓದುತ್ತಿದ್ದ ಎನ್ನಲಾಗಿದೆ.

    ಎನ್‍ಎಸ್‍ಎಸ್ ಕ್ಯಾಂಪಿಗೆ ಬಂದಿದ್ದ ಸುಮಾರು 7-8 ವಿದ್ಯಾರ್ಥಿಗಳು ಮೋಜು-ಮಸ್ತಿಗಾಗಿ ಕೆರೆಯಲ್ಲಿ ಈಜಾಡಲು ಹೋಗಿದ್ದಾರೆ. ಈ ವೇಳೆ ಸೆಲ್ಫಿ ತೆಗೆದುಕೊಳ್ಳುವ ಕ್ರೇಜಿನಿಂದ ದಡಕ್ಕೆ ಬಂದು ಫೋಟೋ ಕ್ಲಿಕ್ಕಿಸುವುದು, ಮತ್ತೆ ಹೋಗುವುದು ಈ ರೀತಿ ಮಾಡುತ್ತಿದ್ದರು. ಈ ವೇಳೆ ಕೆರೆಯಲ್ಲಿನ ಗುಂಡಿಗೆ ಸಿಲುಕಿ ಈ ಮೂವರು ವಿದ್ಯಾರ್ಥಿಗಳು ಮುಳುಗಿ ಮೃತಪಟ್ಟಿದ್ದಾರೆ. ಇನ್ನುಳಿದ ವಿದ್ಯಾರ್ಥಿಗಳು ಭಯದಿಂದ ಓಡಿಹೋಗಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

    ಸ್ಥಳಿಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಸಳಕ್ಕೆ ನೆಲಮಂಗಲ ಅಗ್ನಿಶಾಮಕ ಸಿಬ್ಬಂದಿ ಬಂದು ವಿದ್ಯಾರ್ಥಿಗಳ ಶವಕ್ಕಾಗಿ ಶೋಧ ಕಾರ್ಯದಲ್ಲಿ ನಿರತರಾಗಿದ್ದಾರೆ. ಈ ಘಟನೆ ಸಂಬಂಧ ಡಾಬಸ್‍ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸ್ನಾನ ಮಾಡಲು ಹೋಗಿದ್ದ ಯುವಕ ನೀರು ಪಾಲು

    ಸ್ನಾನ ಮಾಡಲು ಹೋಗಿದ್ದ ಯುವಕ ನೀರು ಪಾಲು

    ಹಾವೇರಿ: ತುಂಗಾ ಮೇಲ್ದಂಡೆ ಕಾಲುವೆಯಲ್ಲಿ ಸ್ನಾನ ಮಾಡಲು ಹೋಗಿದ್ದ ಯುವಕ ನೀರು ಪಾಲಾದ ಘಟನೆ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ದೇವರಗುಡ್ಡ ಗ್ರಾಮದ ಬಳಿ ನಡೆದಿದೆ.

    ಯುವಕನನ್ನ 23 ವರ್ಷದ ರಾಮಣ್ಣ ಪರಶುಗೊಂಡ ಎಂದು ಗುರುತಿಸಲಾಗಿದೆ. ಗುರುವಾರ ದೇವರಗುಡ್ಡ ಗ್ರಾಮದ ಮಾಲತೇಶ ದೇವಸ್ಥಾನಕ್ಕೆ ಬಂದಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

    ರಾಮಣ್ಣ ಪರಶುಗೊಂಡ ಸಂಬಂಧಿಕರೊಬ್ಬರ ಕಾರ್ಯಕ್ರಮದ ನಿಮಿತ್ತ ಮಾಲತೇಶ ದೇವಸ್ಥಾನಕ್ಕೆ ಬಂದಿದ್ದರು. ತುಂಗಾ ಮೇಲ್ದಂಡೆ ಕಾಲುವೆಯಲ್ಲಿ ಸ್ನಾನ ಮಾಡಲು ಹೋಗಿದ್ದರು. ಈ ವೇಳೆ ರಾಮಣ್ಣ ಕಾಲುಜಾರಿ ಕಾಲುವೆಯಿಂದ ಕೊಚ್ಚಿಕೊಂಡು ಹೋಗಿದ್ದಾರೆ. ಬಳಿಕ ಸ್ಥಳದಲ್ಲಿದ್ದವರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.

    ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸರು ರಾಮಣ್ಣ ಪರಶುಗೊಂಡಗಾಗಿ ಶೋಧಕಾರ್ಯ ನಡೆಸಿದ್ದಾರೆ. ಈ ಘಟನೆ ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಾರು ಚಲಿಸಿದ ಕೂಡ್ಲೇ ಉರುಳಿ ಬಿದ್ದು ಧಗಧಗನೇ ಉರಿಯಿತು ಪೆಟ್ರೋಲ್ ಪಂಪ್!- ವಿಡಿಯೋ

    ಕಾರು ಚಲಿಸಿದ ಕೂಡ್ಲೇ ಉರುಳಿ ಬಿದ್ದು ಧಗಧಗನೇ ಉರಿಯಿತು ಪೆಟ್ರೋಲ್ ಪಂಪ್!- ವಿಡಿಯೋ

    ವಾಷಿಂಗ್ಟನ್: ಕಾರು ಚಾಲಕನ ಎಡವಟ್ಟಿನಿಂದಾಗಿ ಪೆಟ್ರೋಲ್ ಬಂಕ್ ಹೊತ್ತಿ ಉರಿದ ಘಟನೆ ಅಮೆರಿಕದ ನ್ಯೂಜೆರ್ಸಿಯಲ್ಲಿ ನಡೆದಿದೆ.

    ಕಾರು ಚಾಲಕ ಬಂಕ್ ಗೆ ಬಂದು ಪೆಟ್ರೋಲ್ ತುಂಬಿಸಿದ್ದಾನೆ. ತುಂಬಿಸಿದ ಬಳಿಕ ಟ್ಯಾಂಕ್‍ನಿಂದ ಪೈಪ್ ತೆಗೆಯಲಾಗಿದೆ ಎಂದು ಭಾವಿಸಿ ಕಾರನ್ನು ಓಡಿಸಿದ್ದಾನೆ. ಆದರೆ ಪೈಪ್ ಟ್ಯಾಂಕ್‍ನಲ್ಲೇ ಇದ್ದ ಕಾರಣ ಕಾರು ಚಲಿಸಿದ ರಭಸಕ್ಕೆ ಪಂಪ್ ಕುಸಿದು ಬಿದ್ದಿದೆ. ಕುಸಿದು ಬಿದ್ದ ರಭಸಕ್ಕೆ ಕೂಡಲೇ ಬೆಂಕಿ ಹೊತ್ತಿಕೊಂಡಿದೆ.

    ಕೂಡಲೇ ಅಲ್ಲಿಂದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಹ್ಯಾಕ್ಸಾಕ್ ಅಗ್ನಿಶಾಮಕ ಸಿಬ್ಬಂದಿ ಫೇಸ್‍ಬುಕ್ ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.