Tag: ಅಗ್ನಿಶಾಮಕ ದಳ

  • ಮದ್ವೆಯಾಗಿ ಮೊದ್ಲ ಬಾರಿಗೆ ಪತಿಯ ಮನೆಗೆ ಈ ಕಾರಿನಲ್ಲೇ ಬಂದಿದ್ದೆ: ಕಾರ್ ಮಾಲಕಿ ಕಣ್ಣೀರು

    ಮದ್ವೆಯಾಗಿ ಮೊದ್ಲ ಬಾರಿಗೆ ಪತಿಯ ಮನೆಗೆ ಈ ಕಾರಿನಲ್ಲೇ ಬಂದಿದ್ದೆ: ಕಾರ್ ಮಾಲಕಿ ಕಣ್ಣೀರು

    -ಪುಟ್ಟ ಮಗುವಿನಂತೆ ನೋಡಿಕೊಳ್ತಿದ್ರು

    ಬೆಂಗಳೂರು: ನಾನು ಮದುವೆಯಾಗಿ ಪತಿಯ ಮನೆಗೆ ಮೊದಲ ಬಾರಿಗೆ ಹೋಗಬೇಕಾದರೆ ಇದೇ ಕಾರು ನನ್ನನ್ನು ಕರೆದುಕೊಂಡು ಹೋಗಿತ್ತು. ಪುಟ್ಟ ಮಗುವಿನ ರೀತಿ ಕಾರನ್ನು ನೋಡಿಕೊಂಡಿದ್ವಿ, ಈಗ ತುಂಬಾ ನೋವಾಗುತ್ತಿದೆ ಎಂದು ಏರೋ ಇಂಡಿಯಾ ಶೋನಲ್ಲಿ ನಡೆದ ಅಗ್ನಿ ದುರಂತದಲ್ಲಿ ಕಾರ್ ಕಳೆದುಕೊಂಡ ಮಹಿಳೆಯೊಬ್ಬರು ಕಣ್ಣೀರು ಹಾಕಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಕಾರು ಕಳೆದುಕೊಂಡ ಅರ್ಚನಾ ಅವರು, ಟಿಕೆಟ್ ಎಲ್ಲ ಕ್ಲಿಯರ್ ಮಾಡಿಕೊಂಡು ಒಳಗೆ ಹೋಗಿದ್ದೆವೆ. ಆದರೆ ಐದು ನಿಮಿಷಗಳಲ್ಲಿಯೇ ಅಲ್ಲಿಂದ ಹೊಗೆ ಬರುತ್ತಿತ್ತು. ಏರ್ ಶೋ ನಡೆಯುತ್ತಿದ್ದ ಜಾಗದಿಂದ ಪಾಕ್ ಪಾರ್ಕಿಂಗ್ ಮಾಡಿದ್ದ ಜಾಗಕ್ಕೂ ಸುಮಾರು 2-3 ಕಿ.ಮೀ ದೂರವಿತ್ತು. ಹೀಗಾಗಿ ನಮಗೆ ಏನಾಯ್ತು ಎಂದು ಗೊತ್ತಾಗಿಲ್ಲ ಎಂದು ನಡೆದ ಘಟನೆಯ ಬಗ್ಗೆ ವಿವರಿಸಿದ್ದಾರೆ.

    ಸ್ವಲ್ಪ ಸಮಯದ ನಂತರ ನನ್ನ ಸಹೋದರಿ ಫೋನ್ ಮಾಡಿ ಮಾಧ್ಯಮಗಳಲ್ಲಿ ಅಗ್ನಿ ಅವಘಡ ಆಗಿದೆ ಎಂದು ಸುದ್ದಿ ಬರುತ್ತಿದೆ ಅಂತ ಹೇಳಿದ್ದಳು. ತಕ್ಷಣ ನಾವು ಬಂದು ನೋಡಿದಾಗ ಸಾಲು ಸಾಲು ಕಾರುಗಳಿಗೂ ಬೆಂಕಿ ಹೊತ್ತಿಕೊಂಡಿತ್ತು. ಯಾವ ಕಾರು ಎಂದು ಕಂಡು ಹಿಡಿಯಲು ಸಾಧ್ಯವಾಗದ ರೀತಿಯಲ್ಲಿ ಎಲ್ಲವೂ ಸುಟ್ಟು ಹೋಗಿವೆ. ಸ್ವಲ್ಪ ಸ್ವಲ್ಪ ಮಾರ್ಕ್ ನೋಡಿಕೊಂಡು ನಮ್ಮ ಕಾರನ್ನು ಹುಡುಕಬೇಕು. ಆದರೆ ಕಾರ್ ನೋಡಿದರೆ ದುಃಖವಾಗಿದೆ. ಎಲ್ಲರಿಗೂ ಇದೊಂದು ದೊಡ್ಡ ಆಘಾತವಾಗಿದೆ. ಆದರೆ ಜನಕ್ಕೆ ಏನು ಆಗದಿದ್ದರೆ ಸಾಕು, ಪೊಲೀಸರು ಮತ್ತು ಇಲ್ಲಿನ ಜನರು ಸಹಾಯ ಮಾಡುತ್ತಿದ್ದಾರೆ ಎಂದು ಅರ್ಚನಾ ಹೇಳಿದ್ದಾರೆ.

    ಇದೆಲ್ಲಾ 5-10 ನಿಮಿಷದಲ್ಲಿ ಆಗಿದೆ. ನಮ್ಮ ಕಾರು ಐ-20 ಆಗಿದ್ದು, ನನಗೆ ಇತ್ತೀಚೆಗೆ ಮದುವೆಯಾಗಿದೆ. ನಾನು ಮದುವೆಯಾಗಿ ಪತಿಯ ಮನೆಗೆ ಮೊದಲ ಬಾರಿಗೆ ಹೋಗಬೇಕಾದರೆ ಇದೇ ಕಾರು ನನ್ನನ್ನು ಕರೆದುಕೊಂಡು ಹೋಗಿತ್ತು. ನಮ್ಮ ಮನೆಯವರು ಮೂರು ವರ್ಷಗಳ ಹಿಂದೆ ಕಾರ್ ತೆಗೆದುಕೊಂಡಿದ್ದು, ಕಾರನ್ನು ತುಂಬಾ ಪ್ರೀತಿಯಿಂದ ನೋಡಿಕೊಂಡಿದ್ದರು. ನಮ್ಮ ಮನೆಯವರಲ್ಲಿ ಒಬ್ಬರಂತೆ ಕಾರಿನ ಮೇಲೆ ತುಂಬಾ ಅಫೆಕ್ಷನ್ ಇತ್ತು. ಆದರೆ ಇಂದು ಈ ರೀತಿ ಆಗಿದೆ ತುಂಬಾ ನೋವಾಗಿದೆ ಎಂದು ಕಣ್ಣೀರು ಹಾಕಿದ್ದಾರೆ.

    ನಮ್ಮ ಮನೆಯವರು ಮದುವೆಯಾಗಿಂದ ಅದನ್ನು ಪುಟ್ಟ ಮಗುವಿನಂತೆ ನೋಡಿಕೊಳ್ಳುತ್ತಿದ್ದರು. ಅವರಿಗೆ ಕಾರ್ ಎಂದರೆ ತುಂಬಾ ಪ್ರೀತಿ ಇದೆ. ನನ್ನಿಂದ ಅವರಿಗೂ ತುಂಬಾ ನೋವಾಗಿದೆ. ಇದೇ ಮೊದಲ ಬಾರಿಗೆ ಈ ರೀತಿಯಾಗಿ ಅವಘಡ ಏರೋ ಇಂಡಿಯಾದಲ್ಲಿ ಆಗಿದೆ. ಆದರೆ ಈ ಅವಘಡದಿಂದ ಯಾರಿಗೂ ತೊಂದರೆ ಆಗಬಾದರು. ಎಲ್ಲರೂ ಸಣ್ಣ ಸಣ್ಣ ಸೇವಿಂಗ್ಸ್ ಇಟ್ಟುಕೊಂಡು ಕಾರ್ ತೆಗೆದುಕೊಂಡಿರುತ್ತಾರೆ. ಈ ರೀತಿ ಆದರೆ ಮಧ್ಯಮ ವರ್ಗದ ನಮಗೆ ತುಂಬಾ ನೋವಾಗುತ್ತದೆ ಎಂದು ಹೇಳಿದ್ದಾರೆ.

    https://www.youtube.com/watch?v=NCs_XVL0SKE

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಂಗಳೂರು ಸಿಟಿ ಸೆಂಟರ್ ಮಾಲ್‍ನಲ್ಲಿ ಅಗ್ನಿ ಅವಘಡ!

    ಮಂಗಳೂರು ಸಿಟಿ ಸೆಂಟರ್ ಮಾಲ್‍ನಲ್ಲಿ ಅಗ್ನಿ ಅವಘಡ!

    ಮಂಗಳೂರು: ಶಾರ್ಟ್ ಸರ್ಕ್ಯೂಟ್‌ನಿಂದ ಮಂಗಳೂರಿನ ಪ್ರಸಿದ್ಧ ಸಿಟಿ ಸೆಂಟರ್ ಮಾಲ್‍ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಸ್ಥಳದಲ್ಲಿ ಉಸಿರು ಗಟ್ಟಿಸುವ ವಾತಾವರಣ ನಿರ್ಮಾಣವಾಗಿತ್ತು.

    ಕೆ.ಎಸ್ ರಾವ್ ರಸ್ತೆಯಲ್ಲಿರುವ ಸಿಟಿ ಸೆಂಟರ್ ಮಾಲ್‍ನ ನಾಲ್ಕನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮಾಲ್‍ನ ನಾಲ್ಕನೇ ಮಹಡಿಯಲ್ಲಿವ ಫುಡ್ ಕೋರ್ಟಿನಲ್ಲಿ ಶಾರ್ಟ್ ಸರ್ಕ್ಯೂಟ್‌ ಆಗಿ ಈ ಅಗ್ನಿ ಅನಾಹುತವಾಗಿದ್ದು, ಮಾಲ್ ತುಂಬೆಲ್ಲ ಹೊಗೆ ಆವರಿಸಿಕೊಂಡ ಪರಿಣಾಮ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿತ್ತು.

    ಅಗ್ನಿ ಅವಘಡ ಸಂಭವಿಸಿದ ಕೂಡಲೇ ಮಾಲ್‍ನಲ್ಲಿ ಕರ್ತವ್ಯ ಸಲ್ಲಿಸುತ್ತಿದ್ದ ಸಾವಿರಾರು ಸಿಬ್ಬಂದಿಯನ್ನು ಹಾಗೂ ಜನರನ್ನು ಪೊಲೀಸರು ಹೊರಕ್ಕೆ ಕಳುಹಿಸಿದರು. ಸ್ಥಳಕ್ಕೆ 3 ಅಗ್ನಿಶಾಮಕ ದಳದ ವಾಹನ ಆಗಮಿಸಿ ಬೆಂಕಿ ನಂದಿಸಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವೃದ್ಧೆ ಸೇರಿ 5 ಕುರಿಗಳು ಸಜೀವ ದಹನ

    ವೃದ್ಧೆ ಸೇರಿ 5 ಕುರಿಗಳು ಸಜೀವ ದಹನ

    ಗದಗ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ತೋಟದ ಗುಡಿಸಲು ಮನೆಗೆ ಬೆಂಕಿ ತಗುಲಿ, ವೃದ್ಧೆ ಹಾಗೂ 5 ಕುರಿಗಳು ಸಜೀವ ದಹನವಾಗಿರುವ ಘಟನೆ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನಾಗೇಂದ್ರಗಡ ಗ್ರಾಮದಲ್ಲಿ ನಡೆದಿದೆ.

    ಸುಮಾರು 70 ವರ್ಷದ ಹನುಮವ್ವ ಹಂಡಿ ಹಾಗೂ 5 ಕುರಿಗಳು ಸಜೀವ ದಹನವಾಗಿವೆ. ಗುಡಿಸಲ ಮೇಲ್ಭಾಗದಲ್ಲಿ ಹಾದುಹೋಗಿದ್ದ ವಿದ್ಯುತ್ ತಂತಿಯ ಸ್ಪರ್ಶದಿಂದ ಗುಡಿಸಲು ಮನೆಗೆ ಬೆಂಕಿ ತಗುಲಿದೆ ಎನ್ನಲಾಗುತ್ತಿದ್ದು, ರಾತ್ರಿ ವೇಳೆ ತೋಟದ ಮನೆಯಲ್ಲಿ ಯಾರು ಇಲ್ಲದ ವೇಳೆ ಘಟನೆ ಸಂಭವಿಸಿದೆ. ಪರಿಣಾಮ ವೃದ್ಧೆ ಸೇರಿದಂತೆ 5 ಕುರಿಗಳು ಹೊರಬರಲಾರದೆ ಸಜೀವ ದಹನವಾಗಿವೆ.

    ಗುಡಿಸಲಿಗೆ ಸಂಪೂರ್ಣ ಬೆಂಕಿ ಆವರಿಸಿಕೊಂಡಿದ್ದು, ಹಣ, ಬಟ್ಟೆ, ಗೃಹೋಪಯೋಗಿ ವಸ್ತುಗಳು ಹಾಗೂ ಕೃಷಿ ಸಲಕರಣೆಗಳು ಸಹ ಸುಟ್ಟು ಭಸ್ಮವಾಗಿವೆ. ಈ ಬಗ್ಗೆ ಸ್ಥಳೀಯರಿಗೆ ತಡವಾಗಿ ವಿಚಾರ ತಿಳಿದಿದೆ. ತಕ್ಷಣ ಅಗ್ನಿಶಾಮಕ ದಳದವರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ.

    ಮಾಹಿತಿ ತಿಳಿದು ಸ್ಥಳಕ್ಕೆ ಅಗ್ನಿಶಾಮಕದಳ ಬಂದು ಅವರೊಂದಿಗೆ ಸ್ಥಳೀಯರು ಸೇರಿ ಬೆಂಕಿಯನ್ನು ನಂದಿಸಿದ್ದಾರೆ. ನಂತರ ಸ್ಥಳಕ್ಕೆ ಗಜೇಂದ್ರಗಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಚಾರ್ಜ್ ಗೆ ಹಾಕಿದ್ದಾಗ ಹೊತ್ತಿ ಉರಿಯಿತು ಎಲೆಕ್ಟ್ರಿಕ್ ಕಾರು

    ಚಾರ್ಜ್ ಗೆ ಹಾಕಿದ್ದಾಗ ಹೊತ್ತಿ ಉರಿಯಿತು ಎಲೆಕ್ಟ್ರಿಕ್ ಕಾರು

    ಬಾಗಲಕೋಟೆ: ಎಲೆಕ್ಟ್ರಿಕ್ ಕಾರಿಗೆ ಚಾರ್ಜ್ ಹಾಕಿದಾಗ ಶಾರ್ಟ್ ಸರ್ಕ್ಯೂಟ್ ನಿಂದ ಎರಡು ಕಾರುಗಳು ಬೆಂಕಿಯಿಂದ ಹೊತ್ತಿ ಉರಿದ ಘಟನೆ ಬಾಗಲಕೋಟೆ ನಗರದಲ್ಲಿ ನಡೆದಿದೆ.

    ನವನಗರದ 38ನೇ ಸೆಕ್ಟರ್ ನಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ, ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಇಸಾಕ್ ದಾಂಡಿಯಾ ಅವರಿಗೆ ಸೇರಿದ ಕಾರುಗಳಾಗಿದ್ದು, ಅವರು ಎಂದಿನಂತೆ ಇಲೆಕ್ಟ್ರಿಕ್ ಕಾರಿಗೆ ಚಾರ್ಜ್ ಮಾಡಲು ಪಿನ್ ಹಾಕಿದ್ದಾರೆ.

    ಈ ವೇಳೆ ಶಾರ್ಟ್ ಸರ್ಕ್ಯೂಟ್  ಉಂಟಾಗಿ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮ ಅದರ ಪಕ್ಕದಲ್ಲಿಯೇ ಇನ್ನೊಂದು ಇಂಡಿಗೊ ಕಾರಿಗೂ ಸಹ ಬೆಂಕಿ ತಗುಲಿ ಅದು ಸಹ ಸುಟ್ಟು ಹೋಗಿದೆ. ತಕ್ಷಣ ಇದನ್ನು ಗಮನಿಸಿದ ಸ್ಥಳೀಯರು ಅಗ್ನಿಶಾಮದ ದಳದವರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ತಂಡ ಬಂದು ಬೆಂಕಿಯನ್ನು ನಂದಿಸಲು ಹರಸಾಹಸ ಪಟ್ಟಿದ್ದಾರೆ.

    ಮನೆ ಮುಂದೆ ಬೆಂಕಿ ಹೊತ್ತಿಕೊಂಡಿದ್ದರಿಂದ ಮುಂದಿನ ಮೆಟ್ಟಿಲೂ ಕೂಡ ಸುಟ್ಟು ಹೋಗಿವೆ. ಇನ್ನೂ ಬೆಂಕಿಗೆ ಕಾರುಗಳು ಸಂಪೂರ್ಣ ಸುಟ್ಟು ಹೋಗಿದೆ. ಈ ಕುರಿತು ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಿಶೀಲನೆ ನಡೆಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದಾಂಪತ್ಯ ಜೀವನಕ್ಕೆ ಕಾಲಿಡುವ ಮೊದ್ಲೇ ವಧು ಸೇರಿ ಐವರು ಸಜೀವ ದಹನ

    ದಾಂಪತ್ಯ ಜೀವನಕ್ಕೆ ಕಾಲಿಡುವ ಮೊದ್ಲೇ ವಧು ಸೇರಿ ಐವರು ಸಜೀವ ದಹನ

    ಇಸ್ಲಾಮಾಬಾದ್: ಮದುವೆ ಮನೆಯಲ್ಲಿ ಅಗ್ನಿ ಅವಘಡ ಸಂಭವಿಸಿದ ಪರಿಣಾಮ ವಧು ಮತ್ತು ಆಕೆಯ ಸ್ನೇಹಿತರು ಸೇರಿ ಐವರು ಸಜೀವ ದಹನವಾಗಿರುವ ಘಟನೆ ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ನಡೆದಿದೆ.

    ರಾವಲ್ಪಿಂಡಿ ರಸ್ತೆಯಲ್ಲಿರುವ ಮನೆಯಲ್ಲಿ ಮದುವೆಗೆ ಸಿದ್ಧತೆ ನಡೆಯುತ್ತಿತ್ತು. ಮಂಗಳವಾರ ಮೆಹಂದಿ ಶಾಸ್ತ್ರ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ. ಅಂದು ವಧುವಿನ ಜೊತೆ ಕೊಠಡಿಯಲ್ಲಿ ಆಕೆಯ ಐವರು ಸ್ನೇಹಿತರು ಇದ್ದರು. ಇತ್ತ ಸಂಬಂಧಿಗಳು ಮದುವೆಗಾಗಿ ತಯಾರಿ ಮಾಡಿಕೊಳ್ಳುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದ್ದು, ಮದುವೆ ಮನೆಯಲ್ಲಿ ಬೆಂಕಿ ಆವರಿಸಿದೆ. ಆಗ ಕೊಠಡಿಯಿಂದ ಹೊರಬರಲು ಸಾಧ್ಯವಾಗದೇ ವಧು ಸೇರಿದಂತೆ ನಾಲ್ವರು ಸ್ನೇಹಿತರು ಬೆಂಕಿಯಲ್ಲಿ ಸಜೀವ ದಹನರಾಗಿದ್ದಾರೆ.

    ಮೆಹಂದಿ ಶಾಸ್ತ್ರದಲ್ಲಿ ಸುಮಾರು 40-50 ಅತಿಥಿಗಳು ಉಪಸ್ಥಿತರಿದ್ದು, ಬೆಂಕಿ ಆವರಿಸಿದ ತಕ್ಷಣ ಕೆಲವರು ಕೆಳಗೆ ಧುಮುಕಿ ಮನೆಯಿಂದ ಪರಾರಿಯಾಗಿದ್ದಾರೆ. ಇತ್ತ ರಕ್ಷಣಾ ಪಡೆ ಬೇಗ ಬಂದಿದ್ದರೆ ನನ್ನ ಮಗಳು ಉಳಿಯುತ್ತಿದ್ದಳು. ಸಿಬ್ಬಂದಿಯ ಉದಾಸೀನತೆಯಿಂದ ಈ ದೊಡ್ಡ ಘಟನೆ ನಡೆದಿದೆ ಎಂದು ವಧುವಿನ ಪೋಷಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

    ಈ ಘಟನೆಯ ಬಗ್ಗೆ ಅಗ್ನಿಶಾಮಕ ದಳದವರಿಗೆ ಮಾಹಿತಿ ತಿಳಿಸಿದರೂ ಅವರು ತಡವಾಗಿ ಬಂದಿದ್ದಾರೆ. ಅವರು ಬೇಗ ಬಂದಿದ್ದಾರೆ ವಧುವನ್ನು ಉಳಿಸಬಹುದಾಗಿತ್ತು. ಹೀಗಾಗಿ ರಕ್ಷಣಾ ತಂಡದ ನಿರ್ಲಕ್ಷ್ಯದಿಂದಾಗಿ ವಧು ಮತ್ತು ಆಕೆಯ ಸ್ನೇಹಿತೆಯರು ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.

    ಕೆಲವು ಜನರು ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಅಥವಾ ಗ್ಯಾಸ್ ಸೋರಿಕೆ ಕಾರಣದಿಂದಾಗಿ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಹೇಳಿದ್ದಾರೆ. ಸದ್ಯಕ್ಕೆ ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸುತ್ತಿದ್ದಾರೆ.

    ಈ ಘಟನೆ ಬಗ್ಗೆ ಮಾಹಿತಿ ತಿಳಿದ ತಕ್ಷಣ ರೈಲ್ವೆ ಮಂತ್ರಿ ಸ್ಥಳಕ್ಕೆ ಹೋಗಿ ಮೃತ ಕುಟುಂಬದವರನ್ನು ಭೇಟಿಯಾಗಿ ಸಾಂತ್ವಾನ ಹೇಳಿದ್ದಾರೆ. ಇಡೀ ಮನೆಯನ್ನು ಮರದಿಂದ ಮಾಡಲ್ಪಟ್ಟಿತ್ತು. ಆದ್ದರಿಂದ ಬೆಂಕಿಯು ವೇಗವಾಗಿ ಮನೆಯನ್ನು ಆವರಿಸಿದೆ. ಈ ಬಗ್ಗೆ ತನಿಖೆ ಕೈಗೊಂಡು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿಲಿಂಡರ್ ಸ್ಫೋಟದಿಂದ ಅವಘಡ – ಬೀದಿಗೆ ಬಂದ ಇಪ್ಪತ್ತು ಕುಟುಂಬಗಳು

    ಸಿಲಿಂಡರ್ ಸ್ಫೋಟದಿಂದ ಅವಘಡ – ಬೀದಿಗೆ ಬಂದ ಇಪ್ಪತ್ತು ಕುಟುಂಬಗಳು

    ಚಿತ್ರದುರ್ಗ: ಆಕಸ್ಮಿಕವಾಗಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮವಾಗಿ 20 ಗುಡಿಸಲುಗಳು ಬೆಂಕಿಗಾಹುತಿ ಆಗಿರುವ ಘಟನೆ ಜಿಲ್ಲೆಯ ಚಳ್ಳಕೆರೆ ಪಟ್ಟಣದ ವೆಂಕಟೇಶ್ವರ ಬಡವಾಣೆಯಲ್ಲಿ ನಡೆದಿದೆ.

    ಕಡು ಬಡವರೇ ಹೆಚ್ಚು ವಾಸವಾಗಿರುವ ಈ ಬಡಾವಣೆಯಲ್ಲಿ ಎಲ್ಲರೂ ಬಹುತೇಕ ಮಂದಿ ಕೂಲಿಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಾರೆ. ಇಂದು ಅವರೆಲ್ಲ ಕೆಲಸಕ್ಕೆ ತೆರಳಿರುವ ವೇಳೆ ಅವಘಡ ನಡೆದಿದೆ. ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಲಕ್ಷಾಂತರ ರೂ. ಮೌಲ್ಯದ ಬೆಲೆಬಾಳುವ ವಸ್ತುಗಳು, ಮನೆಯಲ್ಲಿ ಇಟ್ಟಿದ್ದ ಬಂಗಾರ, ಬಟ್ಟೆ ಹಾಗು ದಿನ ಬಳಕೆ ಪದಾರ್ಥಗಳು ಸುಟ್ಟು ಕರಕಲಾಗಿವೆ.

    ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಅಲ್ಲದೇ ಸರಿಯಾದ ಸಮಯಕ್ಕೆ ಮಾಹಿತಿ ಪಡೆದು ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಬೆಂಕಿ ಸುತ್ತಮುತ್ತಲಿನ ಬೇರೆ ಪ್ರದೇಶಗಳಿಗೆ ಹರಡಿ ಹೆಚ್ಚಿನ ಸಮಸ್ಯೆ ಉಲ್ಬಣಿಸದಂತೆ ಎಚ್ಚರ ವಹಸಿ ಬೆಂಕಿ ನಂದಿಸಿದ್ದಾರೆ.

    ಘಟನೆಯಿಂದಾಗಿ ಸುಮಾರು ಇಪ್ಪತ್ತು ಕುಟುಂಬಗಳು ಸೂರಿಲ್ಲದೇ ಬೀದಿಗೆ ಬೀಳುವಂತಾಗಿದ್ದೂ, ಆಶ್ರಯದ ನೆರವು ಕೋರಿದ್ದಾರೆ. ಈ ಘಟನೆ ಸಂಬಂಧ ಚಳ್ಳಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾಜಕಾಲುವೆ ಕಾಮಗಾರಿ ವೇಳೆ ಮಣ್ಣು ಕುಸಿದು ಕಾರ್ಮಿಕ ದುರ್ಮರಣ

    ರಾಜಕಾಲುವೆ ಕಾಮಗಾರಿ ವೇಳೆ ಮಣ್ಣು ಕುಸಿದು ಕಾರ್ಮಿಕ ದುರ್ಮರಣ

    ಬೆಂಗಳೂರು: ರಾಜಕಾಲುವೆ ಕಾಮಗಾರಿಯ ವೇಳೆ ಮಣ್ಣು ಕುಸಿದ ಪರಿಣಾಮ ಮಣ್ಣಿನಡಿ ಸಿಲುಕಿದ್ದ ಕಾರ್ಮಿಕ ಮೃತಪಟ್ಟ ಘಟನೆ ಇಂದು ನಡೆದಿದೆ.

    ಮೃತ ದುರ್ದೈವಿ ಕಾರ್ಮಿಕನನ್ನು 27 ವರ್ಷದ ಮಡಿವಾಳಪ್ಪ ಗೌಡ ಎಂದು ಗುರುತಿಸಲಾಗಿದೆ. ಇವರು ಕಲಬುರಗಿ ಜಿಲ್ಲೆಯ ಶಹಾಪುರ ತಾಲೂಕಿನ ಆಲಗಡಲಿ ಗ್ರಾಮದ ನಿವಾಸಿಯಾಗಿದ್ದಾರೆ. ಕಳೆದ ಮೂರು ದಿನಗಳಿಂದ ಮಡಿವಾಳಪ್ಪ ಇಲ್ಲಿ ಕೆಲಸ ಮಾಡುತ್ತಿದ್ದು, ಇಂದು ಈ ಅವಘಡಕ್ಕೆ ಬಲಿಯಾಗಿದ್ದಾರೆ.

    ಅವಘಡವೇನು..?
    ರಾಜರಾಜೇಶ್ವರಿ ನಗರದ ಪದ್ಮಾವತಿ ಕಲ್ಯಾಣ ಮಂಟಪದ ಬಳಿ ಬಿಡಬ್ಲ್ಯುಎಸ್‍ಎಸ್‍ಬಿ ಛೇಂಬರ್ ವತಿಯಿಂದ ಕಾಮಗಾರಿ ನಡೆಯುತ್ತಿತ್ತು. ಕಾಮಗಾರಿಗಾಗಿ ಮೂವರು ಕಾರ್ಮಿಕರು ರಾಜಕಾಲುವೆಗೆ ಇಳಿದಿದ್ದಾರೆ. ಈ ವೇಳೆ ಮೂವರ ಮೇಲೆಯೂ ಮಣ್ಣು ಕುಸಿದಿದೆ. ಕೂಡಲೇ ಇಬ್ಬರನ್ನು ಸ್ಥಳೀಯರು ಮೇಲೆತ್ತುವ ಮೂಲಕ ರಕ್ಷಣೆ ಮಾಡಿದ್ದಾರೆ. ಆದ್ರೆ ಒಬ್ಬರು ಮಣ್ಣಿನಡಿ ಸಿಲುಕಿದ್ದಾರೆ.

    ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ದಳ ದೌಡಾಯಿಸಿ ಕಾರ್ಯಾಚರಣೆ ನಡೆಸಿದೆ. ಜೆಸಿಬಿ ಸಹಾಯದಿಂದ ಅಗ್ನಿಶಾಮಕ ಸಿಬ್ಬಂದಿ ಶವವನ್ನು ಹೊರ ತೆಗೆದಿದ್ದಾರೆ. ಕೈ ಕಾಣಿಸಿದ ಹಿನ್ನೆಲೆಯಲ್ಲಿ ದೇಹವನ್ನು ಹೊರಗೆಳೆಯಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇಎಸ್‍ಐಸಿ ಆಸ್ಪತ್ರೆಯಲ್ಲಿ ಬೆಂಕಿ – 6 ಮಂದಿ ಸಾವು, 140ಕ್ಕೂ ಹೆಚ್ಚು ಮಂದಿಯ ರಕ್ಷಣೆ

    ಇಎಸ್‍ಐಸಿ ಆಸ್ಪತ್ರೆಯಲ್ಲಿ ಬೆಂಕಿ – 6 ಮಂದಿ ಸಾವು, 140ಕ್ಕೂ ಹೆಚ್ಚು ಮಂದಿಯ ರಕ್ಷಣೆ

    ಮುಂಬೈ: ರಾಜ್ಯ ನೌಕರರ ವಿಮಾ ನಿಗಮ (ಇಎಸ್‍ಐಸಿ) ಆಸ್ಪತ್ರೆಯಲ್ಲಿ ಬೆಂಕಿ ದುರಂತ ಸಂಭವಿಸಿ 6 ಮಂದಿ ಮೃತಪಟ್ಟು, ಹಲವು ಮಂದಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ರಾಜಧಾನಿ ಮುಂಬೈ ನಗರದ ಅಂಧೇರಿಯ ಮಾರೊಲ್ ಪ್ರದೇಶದಲ್ಲಿ ನಡೆದಿದೆ.

    ಇಂದು ಸಂಜೆ 4.30ರ ವೇಳೆ ಇಎಸ್‍ಐಸಿ ಕಾಮ್‍ಗರ್ ಆಸ್ಪತ್ರೆಯ 3ನೇ ಮಹಡಿಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿಯ ಕೆನ್ನಾಲಿಗೆಗೆ 6 ಮಂದಿ ಸಾವನ್ನಪ್ಪಿದ್ದರೆ, ಹಲವು ಮಂದಿ ಗಾಯಗೊಂಡಿದ್ದಾರೆ. ಅಲ್ಲದೇ ಕಟ್ಟಡದಲ್ಲಿ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

    ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ 8 ಅಗ್ನಿಶಾಮಕ ವಾಹನಗಳು ಹಾಗೂ ಸಿಬ್ಬಂದಿ ಆಗಮಿಸಿದ್ದು, ಭರದಿಂದ ರಕ್ಷಣಾ ಕಾರ್ಯಚರಣೆ ನಡೆಸಿದ್ದಾರೆ. ಇದೂವರೆಗೂ ಆಸ್ಪತ್ರೆಯಿಂದ ಒಟ್ಟು 140 ಮಂದಿಯನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದಾರೆ. ಅಲ್ಲದೇ ರೋಗಿಗಳನ್ನು ಬೇರೊಂದು ಆಸ್ಪತ್ರೆಗೆ ರವಾನಿಸಿದ್ದಾರೆ.

    ಘಟನೆ ಕುರಿತು ಪ್ರತಿಕ್ರಿಯಿಸಿರುವ ಅಗ್ನಿಶಾಮಕ ದಳ ಮುಖ್ಯಸ್ಥ ಪಿ ರಹಂಗ್ದಾಳೆ, ಸಂಪೂರ್ಣ ಕಟ್ಟಡ ಹೊಗೆಯಿಂದ ಆವೃತಗೊಂಡಿದೆ. ಆಸ್ಪತ್ರೆಯಲ್ಲಿ ಹಲವಾರು ರೋಗಿಗಳು ಸಿಲುಕಿಕೊಂಡಿದ್ದಾರೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕೆಲವರು ಕಟ್ಟಡದ ಮೇಲ್ಭಾಗಕ್ಕೆ ತೆರಳಿದ್ದರು. ಸದ್ಯ ಅವರನ್ನು ರಕ್ಷಿಸುತ್ತಿದ್ದೇವೆಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪೆಟ್ರೋಲ್ ಬಂಕ್ ಬಳಿಯೇ ಹೊತ್ತು ಉರಿದ ಕಾರು-ಸ್ವಲ್ಪದರಲ್ಲೇ ತಪ್ಪಿದ ಭಾರೀ ದುರಂತ

    ಪೆಟ್ರೋಲ್ ಬಂಕ್ ಬಳಿಯೇ ಹೊತ್ತು ಉರಿದ ಕಾರು-ಸ್ವಲ್ಪದರಲ್ಲೇ ತಪ್ಪಿದ ಭಾರೀ ದುರಂತ

    ದಾವಣಗೆರೆ: ಪೆಟ್ರೋಲ್ ಬಂಕ್ ಸಮೀಪವೇ ಮ್ಯಾಟಿಜ್ ಕಾರೊಂದು ಹೊತ್ತಿ ಉರಿದು ಕೆಲಕಾಲ ಆತಂಕ ಸೃಷ್ಟಿಸಿದ ಘಟನೆ ನಗರದ ಅಂಬೇಡ್ಕರ್ ಸರ್ಕಲ್ ಬಳಿ ನಡೆದಿದೆ.

    ಇಂದು ಮಧ್ಯಾಹ್ನ ಬೆಂಗಳೂರು ಮೂಲದ ಮಹಮ್ಮದ್ ಸರ್ಮದ್ ಎಂಬವರಿಗೆ ಸೇರಿದ್ದ ಮ್ಯಾಟಿಜ್ ಕಾರು ನಗರದ ಅಂಬೇಡ್ಕರ್ ಸರ್ಕಲ್ ಹತ್ತಿರದ ಭಾರತ್ ಪೆಟ್ರೋಲ್ ಬಂಕ್ ಬಳಿ ಹೊತ್ತಿ ಉರಿದಿದೆ.

    ಸರ್ಮದ್ ಕಾರಿನಲ್ಲಿ ರೋಗಿಯೊಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಈ ವೇಳೆ ಎಂಜಿನ್ ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿತ್ತು. ಕೂಡಲೇ ಎಚ್ಚೆತ್ತ ಅವರು ಕಾರನ್ನು ನಿಲ್ಲಿಸಿ ಕೆಳಗಿಳಿದಿದ್ದಾರೆ. ಬಳಿಕ ರೋಗಿಯನ್ನು ಬೇರೊಂದು ವಾಹನದ ಮೂಲಕ ಆಸ್ಪತ್ರೆಗೆ ರವಾನಿಸಿದ್ದಾರೆ.

    ಬೆಂಕಿ ಹೊತ್ತಿದ ಪರಿಣಾಮ ಮ್ಯಾಟಿಜ್ ಕಾರು ಹೊತ್ತಿ ಉರಿಯತೊಡಗಿದೆ. ಸರ್ಮದ್ ಹಾಗೂ ಸ್ಥಳೀಯರು ಬೆಂಕಿಯನ್ನು ನಂದಿಸುವಲ್ಲಿ ಯತ್ನಿಸಿದ್ದರೂ ಪ್ರಯೋಜನವಾಗಿರಲಿಲ್ಲ. ಕೂಡಲೇ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಸುದ್ದಿ ಮುಟ್ಟಿಸಿದ್ದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ ಹೊತ್ತಿ ಉರಿದ ಸಮೀಪವೇ ಪೆಟ್ರೋಲ್ ಬಂಕ್ ಇದ್ದ ಕಾರಣ ಕ್ಷಣಕಾಲ ಭಯದ ವಾತಾವರಣ ಉಂಟಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೆಂಗ್ಳೂರಿನಲ್ಲಿ ವಾಲಿದೆ ಬಹುಮಹಡಿ ಕಟ್ಟಡ- 5 ತಿಂಗ್ಳ ಹಿಂದೆಯಷ್ಟೇ ನಿರ್ಮಾಣವಾಗಿದ್ದ ಬಿಲ್ಡಿಂಗ್..!

    ಬೆಂಗ್ಳೂರಿನಲ್ಲಿ ವಾಲಿದೆ ಬಹುಮಹಡಿ ಕಟ್ಟಡ- 5 ತಿಂಗ್ಳ ಹಿಂದೆಯಷ್ಟೇ ನಿರ್ಮಾಣವಾಗಿದ್ದ ಬಿಲ್ಡಿಂಗ್..!

    ಬೆಂಗಳೂರು: ಸಿಲಿಕಾನ್ ಟಿಸಿಯಲ್ಲಿ ಇತ್ತೀಚೆಗಷ್ಟೇ ನಿರ್ಮಾಣಗೊಂಡಿದ್ದ ಕಟ್ಟಡವೊಂದು ವಾಲಿದ್ದು, ಕುಸಿಯುವ ಭೀತಿಯಲ್ಲಿದೆ.

    ನಗರದ ಮಾರತ್‍ಹಳ್ಳಿ ಸಮೀಪದ ಅಶ್ವಥ್ ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡ ಬಹುಮಹಡಿ ಕಟ್ಟಡ ಕುಸಿಯುವ ಭೀತಿಯಲ್ಲಿದೆ. ಈ ಕಟ್ಟಡವೂ ಮೂರು ತಿಂಗಳ ಹಿಂದಷ್ಟೇ ನಿರ್ಮಾಣವಾಗಿತ್ತು. ಸದ್ಯ ಕಟ್ಟಡದಲ್ಲಿ ಪಿಜಿ ನಡೆಸುತ್ತಿದ್ದರು.

    ಕಟ್ಟಡದ ಪಿಲ್ಲರ್ ಬಿರುಕು ಬಿಟ್ಟ ಪರಿಣಾಮ ಮತ್ತೊಂದು ಕಟ್ಟಡದ ಮೇಲೆ ವಾಲಿಕೊಂಡು ಕುಸಿಯುವ ಭೀತಿಯಲ್ಲಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಕಟ್ಟಡದಲ್ಲಿದ್ದ ನಿವಾಸಿಗಳನ್ನು ಬೇರೆಡೆಗೆ ಸ್ಥಳಾಂತರಿಸಿದ್ದಾರೆ. ಈ ವೇಳೆ ಜನರನ್ನು ಚದುರಿಸಲು ಹೆಚ್.ಎ.ಎಲ್ ಪೊಲೀಸರು ಹರಸಾಹಸ ಪಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv