Tag: ಅಗ್ನಿಶಾಮಕ ದಳ

  • ದೆಹಲಿಯಲ್ಲಿ ಕುಸಿದು ಬಿದ್ದ 4 ಅಂತಸ್ತಿನ ಕಟ್ಟಡ – 14 ತಿಂಗಳ ಮಗು ಸೇರಿ 8 ಮಂದಿ ರಕ್ಷಣೆ

    ದೆಹಲಿಯಲ್ಲಿ ಕುಸಿದು ಬಿದ್ದ 4 ಅಂತಸ್ತಿನ ಕಟ್ಟಡ – 14 ತಿಂಗಳ ಮಗು ಸೇರಿ 8 ಮಂದಿ ರಕ್ಷಣೆ

    – ಹಲವರು ಅವಶೇಷಗಳ ಅಡಿ ಸಿಲುಕಿರುವ ಶಂಕೆ

    ನವದೆಹಲಿ: ಈಶಾನ್ಯ ದೆಹಲಿಯ ಸೀಲಾಮ್‌ಪುರದಲ್ಲಿ 4 ಅಂತಸ್ತಿನ ಕಟ್ಟಡ ಕುಸಿದು (Building Collapses) ಬಿದ್ದ ಅವಘಡ ಸಂಭವಿಸಿದ್ದು, ಹಲವರು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

    ದೆಹಲಿಯ ವೆಲ್ಕಮ್ ಪ್ರದೇಶದಲ್ಲಿರುವ (Delhi’s Welcome area) ಜನತಾ ಮಜ್ದೂರ್ ಕಾಲೋನಿಯಲ್ಲಿ ಶನಿವಾರ‌ ಜುಲೈ 12 ರಂದ ಬೆಳಗ್ಗೆ 7 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ಈಗಾಗಲೇ 14 ತಿಂಗಳ ಮಗು ಸೇರಿ 8 ಮಂದಿಯನ್ನ ರಕ್ಷಿಸಲಾಗಿದೆ. ಇನ್ನೂ 6ಕ್ಕೂ ಹೆಚ್ಚು ಮಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, 7 ಅಗ್ನಿಶಾಮಕ ದಳದವರಿಂದ (Fire Tenders) ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಇದನ್ನೂ ಓದಿ: Air India Crash | 2 ಎಂಜಿನ್‌ಗಳಿಗೆ ಇಂಧನ ಪೂರೈಕೆ ಆಗದಿದ್ದೇ ದುರಂತಕ್ಕೆ ಕಾರಣ – AAIB ಪ್ರಾಥಮಿಕ ವರದಿ ಬಹಿರಂಗ

    ಬೆಳಗ್ಗೆ 7 ಗಂಟೆಗೆ ಕಟ್ಟಡ ಕುಸಿದ ಬಗ್ಗೆ ನಮಗೆ ಕರೆ ಬಂದಿದೆ. ಹಲವು ತಂಡಗಳು ಕಾರ್ಯನಿರ್ವಹಿಸುತ್ತಿವೆ. ಏಳು ಅಗ್ನಿಶಾಮಕ ಟೆಂಡರ್‌ಗಳು ಸ್ಥಳದಲ್ಲಿವೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಸಿಲುಕಿರುವವರನ್ನು ರಕ್ಷಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ರಕ್ಷಣಾ ತಂಡಗಳು ಒಟ್ಟಾಗಿ ಕೆಲಸ ಮಾಡುತ್ತಿವೆ. ಇದನ್ನೂ ಓದಿ: ಪ್ರೀತಿಸಿ ಮದುವೆಯಾದ ಜೋಡಿಗೆ ನೇಗಿಲು ಕಟ್ಟಿ ಎತ್ತುಗಳಂತೆ ಉಳುಮೆ ಮಾಡಿಸಿ ಚಿತ್ರಹಿಂಸೆ

    ದೆಹಲಿಯಲ್ಲಿ ಶುಕ್ರವಾರವೂ ಕಟ್ಟಡ ಕುಸಿದಿತ್ತು. ವಾರದಲ್ಲಿ 2 ಭೂಕಂಪ ಸಂಭವಿಸಿತ್ತು. ಇದೀಗ ಶನಿವಾರವೂ ಕಟ್ಟಡ ಕುಸಿತ ಆಗಿದ್ದು, ಸಾಲು ಸಾಲು ಅನಾಹುತಗಳು ರಾಷ್ಟ್ರರಾಜಧಾನಿಯಲ್ಲಿ ಸಂಭವಿಸುತ್ತಿದ್ದು, ಜನರ ನಿದ್ದೆಗೆಡುವಂತೆ ಮಾಡಿದೆ. ಇದನ್ನೂ ಓದಿ: ಮೋದಿ ನಿವೃತ್ತಿಗೆ‌ ಮೋಹನ್ ಭಾಗವತ್ ಸೂಚನೆ? – ವಿಪಕ್ಷಗಳಿಂದ ಬಿಜೆಪಿಗೆ ಪ್ರಶ್ನೆಗಳ ಸುರಿಮಳೆ

  • ದಾಸರಹಳ್ಳಿಯಲ್ಲಿ ಸಿಲಿಂಡರ್ ಸ್ಫೋಟ – ಮಗು ಸೇರಿ ನಾಲ್ವರಿಗೆ ಗಾಯ

    ದಾಸರಹಳ್ಳಿಯಲ್ಲಿ ಸಿಲಿಂಡರ್ ಸ್ಫೋಟ – ಮಗು ಸೇರಿ ನಾಲ್ವರಿಗೆ ಗಾಯ

    ಬೆಂಗಳೂರು: ಇಲ್ಲಿನ ಟಿ.ದಾಸರಹಳ್ಳಿಯ (T.Dasarahalli) ಚೊಕ್ಕಸಂದ್ರದಲ್ಲಿ (Chokkasandra) ಸಿಲಿಂಡರ್ ಸೋರಿಕೆಯಾಗಿ ಸ್ಫೋಟಗೊಂಡ ಪರಿಣಾಮ ಮಗು ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ.

    ಇಂದು (ಜ.13) ಬೆಳಗ್ಗೆ 8:25ಕ್ಕೆ ಈ ಅವಘಡ ಸಂಭವಿಸಿದ್ದು, ಸ್ಫೋಟದಿಂದ ಮನೆಯಲ್ಲಿದ್ದ ಎಲ್ಲಾ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ. ಸ್ಫೋಟದ ತೀವ್ರತೆಗೆ ಬಾಗಿಲು, ಕಿಟಕಿ ಚೂರಾಗಿದ್ದು, ಕಿಟಕಿಗೆ ಹಾಕಿದ್ದ ಬಟ್ಟೆ ಸುಟ್ಟು ಕರಕಲಾಗಿದೆ. ಜೊತೆಗೆ ಅಕ್ಕಪಕ್ಕದ ಮನೆಗಳಿಗೂ ಹಾನಿಯುಂಟು ಮಾಡಿದೆ.ಇದನ್ನೂ ಓದಿ: ಚಿತ್ರದುರ್ಗ | ಕೋಡಿಬಿದ್ದ ವಾಣಿವಿಲಾಸ ಸಾಗರ ಜಲಾಶಯ – ಜ.18ಕ್ಕೆ ಸಿಎಂ ಬಾಗಿನ

    ಒಂದು ಮಗು ಹಾಗೂ ಎದುರು ಮನೆಯಲ್ಲಿದ್ದ 25 ವರ್ಷದ ವ್ಯಕ್ತಿ ಸೇರಿ ಇಬ್ಬರು ಪುರುಷರು ಗಾಯಗೊಂಡಿದ್ದು, ಓರ್ವ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಳುಗಳನ್ನ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

    ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸಿದ್ದು, ಸ್ಥಳೀಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.ಇದನ್ನೂ ಓದಿ: ಪ್ರೀತಿಸುವಂತೆ ಮುಸ್ಲಿಂ ಯುವಕನಿಂದ ಕಿರುಕುಳ – ಅಪ್ರಾಪ್ತೆ ಆತ್ಮಹತ್ಯೆ, ಆರೋಪಿ ಬಂಧನ

  • New Delhi| ರಜೌರಿ ಗಾರ್ಡನ್ ರೆಸ್ಟೋರೆಂಟ್‌ನಲ್ಲಿ ಭಾರೀ ಅಗ್ನಿ ಅವಘಡ

    New Delhi| ರಜೌರಿ ಗಾರ್ಡನ್ ರೆಸ್ಟೋರೆಂಟ್‌ನಲ್ಲಿ ಭಾರೀ ಅಗ್ನಿ ಅವಘಡ

    – 10 ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸುವ ಕಾರ್ಯ

    ನವದೆಹಲಿ: ಪಶ್ಚಿಮ ದೆಹಲಿಯ ರಜೌರಿ ಗಾರ್ಡನ್ (Rajouri Garden) ಪ್ರದೇಶದ ಜಂಗಲ್ ಜಾಂಬೋರಿ ರೆಸ್ಟೋರೆಂಟ್‌ನಲ್ಲಿ (Jungle Jamboree Restaurant) ಸೋಮವಾರ ಭಾರೀ ಅಗ್ನಿ ಅವಘಡ ಸಂಭವಿಸಿದೆ.

    ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ 10 ಅಗ್ನಿಶಾಮಕ ವಾಹನ ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದೆ. ಸೋಮವಾರ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ರಾಜೌರಿ ಗಾರ್ಡನ್ ಮೆಟ್ರೋ ನಿಲ್ದಾಣದ ಬಳಿ ಬೆಂಕಿ ಅವಘಡ ಸಂಭವಿಸಿರುವುದಾಗಿ ನಮಗೆ ಕರೆ ಬಂದಿದೆ. ಬೆಂಕಿಯನ್ನು ನಿಯಂತ್ರಿಸಲು 10 ಅಗ್ನಿಶಾಮಕ ಟೆಂಡರ್‌ಗಳನ್ನು ತಕ್ಷಣವೇ ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ದೆಹಲಿ ಅಗ್ನಿಶಾಮಕ ಸೇವೆಗಳ ಮುಖ್ಯಸ್ಥ ಅತುಲ್ ಗಾರ್ಗ್ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ. ಇದನ್ನೂ ಓದಿ: ಪಕ್ಷದ ಚೌಕಟ್ಟಿನಲ್ಲಿ ಏನೇ ತೀರ್ಮಾನ ಆದರೂ ಪಾಲಿಸಲು ಬದ್ಧ – ರಾಜ್ಯಧ್ಯಕ್ಷ ಹುದ್ದೆ ಬಗ್ಗೆ ನಿಖಿಲ್ ಮಾತು

    ಅಗ್ನಿ ಅವಘಡಕ್ಕೆ ಕಾರಣವೇನು ಎಂಬುದು ಇಲ್ಲಿಯವರೆಗೆ ತಿಳಿದುಬಂದಿಲ್ಲ. ಘಟನೆಯಿಂದ ಅಕ್ಕಪಕ್ಕದ ಅಂಗಡಿಯವರಲ್ಲಿ ಆತಂಕ ಮನೆಮಾಡಿದೆ. ಘಟನೆ ನಡೆದ ವೇಳೆ ರೆಸ್ಟೋರೆಂಟ್‌ನಲ್ಲಿ ಸುಮಾರು 20 ಮಂದಿ ಇದ್ದರು. ಬೆಂಕಿ ಹಾಗೂ ದಟ್ಟ ಹೊಗೆ ಕಾಣಿಸಿಕೊಳ್ಳುತ್ತಿದ್ದಂತೆ ಎಲ್ಲರೂ ಹೋಟೆಲ್‌ನಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. ಸದ್ಯ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: 9 ಕಂಪನಿಗಳಿಗೆ ನೀಡಿರೋ 5,150 ಎಕ್ರೆ ಗುತ್ತಿಗೆ ಅರಣ್ಯ ಭೂಮಿ ವಶಕ್ಕೆ ‌ಕ್ರಮ: ಈಶ್ವರ್ ಖಂಡ್ರೆ

  • ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿ 3 ಮಕ್ಕಳು ಸೇರಿ 7 ಜನ ಸಜೀವ ದಹನ

    ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿ 3 ಮಕ್ಕಳು ಸೇರಿ 7 ಜನ ಸಜೀವ ದಹನ

    – ನೆಲಮಹಡಿಯಲ್ಲಿದ್ದ ಇಬ್ಬರು ಪಾರು

    ಮುಂಬೈ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ (Short Circuit)  ಅಂಗಡಿಗೆ ಬೆಂಕಿ ತಗುಲಿ ಒಂದೇ ಕುಟುಂಬದ 7 ಜನರು ಸಜೀವ ದಹನಗೊಂಡಿರುವ ಘಟನೆ ಮುಂಬೈನ (Mumbai) ಸಿದ್ದಾರ್ಥ ಕಾಲೋನಿಯ ಕೆಎನ್ ಗಾಯಕ್ವಾಡ್ ಮಾರ್ಗದಲ್ಲಿದ್ದ ಚೇಂಬೂರ್ ಅಂಗಡಿಯಲ್ಲಿ ನಡೆದಿದೆ.

    ಮೃತ ಏಳು ಜನರ ಪೈಕಿ ಮೂವರು ಮಕ್ಕಳಿದ್ದು, ಒಂದೇ ಕುಟುಂಬದವರು. ಮೃತರನ್ನು ಪ್ರೆಸಿ ಗುಪ್ತಾ (6), ಮಂಜು ಗುಪ್ತಾ (30), ಅನಿತಾ ಧರಮದೇವ್ ಗುಪ್ತಾ (39), ಪ್ರೇಮ ಚೇಡಿರಾಮ್ ಗುಪ್ತಾ (30), ನರೇಂದ್ರ ಗುಪ್ತಾ (10), ವಿಧಿ ಚೇಡಿರಾಮ್ ಗುಪ್ತಾ (15), ಗೀತಾದೇವಿ ಧರಮ್‌ದೇವ್ ಗುಪ್ತಾ (60) ಎಂದು ಗುರುತಿಸಲಾಗಿದೆ.ಇದನ್ನೂ ಓದಿ:

    ಭಾನುವಾರ ನಸುಕಿನ ಜಾವ 5.20ರ ಸುಮಾರಿಗೆ ಕಟ್ಟಡದ ನೆಲ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 7 ಜನರು ಸಜೀವ ದಹನಗೊಂಡಿದ್ದಾರೆ ಎಂದು ಬೃಹತ್ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು (BMMC) ತಿಳಿಸಿದ್ದಾರೆ.

    ವಲಯ ಡಿಸಿಪಿ ಹೇಮರಾಜ್ ಸಿಂಗ್ ರಜಪೂತ್ (DCP Hemraj Singh Rajaput) ಮಾತನಾಡಿ, ಬೆಳಿಗ್ಗೆ 6 ರ ಸುಮಾರಿಗೆ ಕರೆಯೊಂದು ಬಂದಿತ್ತು. ಸ್ಥಳಕ್ಕೆ ಧಾವಿಸಿದಾಗ ಕಟ್ಟಡದ ಎರಡು ಮಹಡಿಯಲ್ಲಿ ವಾಸಿಸುತ್ತಿದ್ದ ಕುಟುಂಬದ 7 ಜನರು ಸಾವನ್ನಪ್ಪಿದ್ದು, ನೆಲಮಹಡಿಯಲ್ಲಿದ್ದ 2 ಪಾರಾಗಿದ್ದಾರೆ. ಸದ್ಯ ನಮ್ಮ ತಂಡ ಹಾಗೂ ಅಗ್ನಿಶಾಮಕ ದಳವು (Fire Brigade) ತನಿಖೆ ನಡೆಸುತ್ತಿದ್ದು, ಬೆಂಕಿ ಅವಘಡಕ್ಕೆ ನಿಖರ ಕಾರಣವನ್ನು ಪತ್ತೆ ಹಚ್ಚುತ್ತಿದ್ದಾರೆ ಎಂದು ತಿಳಿಸಿದರು.

    ಅಂಗಡಿಯ ಬಳಿ ಅಳವಡಿಸಿದ್ದ ವಿದ್ಯುತ್ ವೈರ್‌ನಿಂದಾಗಿ ಬೆಂಕಿ ಹೊತ್ತಿಕೊಂಡಿದ್ದು, ನಿಖರವಾದ ಮಾಹಿತಿ ತಿಳಿದು ಬಂದಿಲ್ಲ. 3 ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯ ಪೋಲಿಸರಿಂದ ರಕ್ಷಣಾ ಕಾರ್ಯಾಚರಣೆ ನಡೆದಿದೆ. ಪಕ್ಕದ ಮನೆಗೆ ಬೆಂಕಿ ಆವರಿಸಿಕೊಂಡಿದ್ದು, ಹಲವರು ಗಂಭೀರ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ:

  • ಅಡುಗೆ ಮಾಡುವ ವೇಳೆ ಗ್ಯಾಸ್ ಸಿಲಿಂಡರ್ ಸ್ಫೋಟ – 8 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಹಾನಿ!

    ಅಡುಗೆ ಮಾಡುವ ವೇಳೆ ಗ್ಯಾಸ್ ಸಿಲಿಂಡರ್ ಸ್ಫೋಟ – 8 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಹಾನಿ!

    ಕಾರವಾರ: ಮನೆಯಲ್ಲಿ ಅಡುಗೆ ಮಾಡುತಿದ್ದ ವೇಳೆ ಗ್ಯಾಸ್‌ ಸಿಲಿಂಡರ್ ಸ್ಫೋಟಗೊಂಡು (LPG Cylinder Blast) ಮನೆಯ ವಸ್ತುಗಳು ಬೆಂಕಿಗಾಹುತಿಯಾದ ಘಟನೆ ಉತ್ತರ ಕನ್ನಡ (UttaraKannada) ಜಿಲ್ಲೆಯ ಕಾರವಾರ ತಾಲೂಕಿನ ನಂದನಗದ್ದಾದಲ್ಲಿ ನಡೆದಿದೆ.

    ನಿಲೇಶ್ ತಾಳೇಕರ್ ಎಂಬುವವರ ಮನೆಯಲ್ಲಿ ಗ್ಯಾಸ್‌ ಸಿಲಿಂಡರ್‌ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಮನೆಯ ಪೀಠೋಪಕರಣ, ಫ್ರಿಜ್ , ವಾಶಿಂಗ್ ಮಿಷನ್, ಅಡುಗೆ ಸಾಮಗ್ರಿ ಸೇರಿ ಹಲವು ವಸ್ತುಗಳು ಬೆಂಕಿಗಾಹುತಿಯಾಗಿದೆ. ಈ ಘಟನೆಯಲ್ಲಿ ಸುಮಾರು 8 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಹಾನಿಯಾಗಿವೆ. ಇದನ್ನೂ ಓದಿ: ಪಿಂಚಣಿ, ನರೇಗಾ ಹಣ ಸಾಲ ಮರುಪಾವತಿಗೆ ಹೊಂದಿಸದಂತೆ ʼಕೈʼ ಸರ್ಕಾರ ಆದೇಶ ನೀಡಲಿ: ಅಶೋಕ್ ಆಗ್ರಹ

    ಸ್ಫೋಟದಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಮನೆ ಮಾಲೀಕ ನಿಲೇಶ್ ತಾಳೇಕರ್‌ ಗಾಯಗೊಂಡಿದ್ದಾರೆ. ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ (Fire Department) ಬೆಂಕಿ ನಂದಿಸಿ ದೊಡ್ಡ ಅನಾಹುತ ತಪ್ಪಿಸಿದ್ದಾರೆ. ಇದನ್ನೂ ಓದಿ: ನನ್ನ ಎದೆ, ಹೊಟ್ಟೆ, ಸೊಂಟಕ್ಕೆ ಒದ್ದು, ಕೆನ್ನೆಗೆ ಹೊಡೆದಿದ್ದಾನೆ – ಕೇಜ್ರಿವಾಲ್ ಆಪ್ತನ ವಿರುದ್ಧ ಮಲಿವಾಲ್ ದೂರು 

  • ಬೆಂಗ್ಳೂರಲ್ಲಿ ಮತ್ತೊಂದು ಅಗ್ನಿ ದುರಂತ – 30 ಲಕ್ಷಕ್ಕೂ ಅಧಿಕ ಮೌಲ್ಯ ವಸ್ತುಗಳು ಬೆಂಕಿಗಾಹುತಿ

    ಬೆಂಗ್ಳೂರಲ್ಲಿ ಮತ್ತೊಂದು ಅಗ್ನಿ ದುರಂತ – 30 ಲಕ್ಷಕ್ಕೂ ಅಧಿಕ ಮೌಲ್ಯ ವಸ್ತುಗಳು ಬೆಂಕಿಗಾಹುತಿ

    ಬೆಂಗಳೂರು: ನಗರದಲ್ಲಿ ಮತ್ತೊಂದು ಅಗ್ನಿ ದುರಂತ (Fire Tragedy) ಸಂಭವಿಸಿದ್ದು, ಬರೋಬ್ಬರಿ 30 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ.

    ನಗರದ ಬಳೆಪೇಟೆಯ ಪೇಯಿಂಟ್ ಶಾಪ್‌ನಲ್ಲಿ (Paint Shop) ಬೆಂಕಿ ಕಾಣಿಸಿಕೊಂಡಿದ್ದು, ಎರಡು ಅಂತಸ್ಥಿನ ಕಟ್ಟದ ಹೊತ್ತಿ ಉರಿದಿದೆ. ಅಪಾರ ಪ್ರಮಾಣದ ವಸ್ತುಗಳು ಬೆಂಕಿಗೆ ಆಹುತಿಯಾಗಿದ್ದು, ಅಂಗಡಿ ಕಳೆದುಕೊಂಡ ಕುಟುಂಬ ಕಣ್ಣೀರಿಟ್ಟಿದೆ. ಇದನ್ನೂ ಓದಿ: ದೆಹಲಿಯ ಕರ್ತವ್ಯ ಪಥದಲ್ಲಿ NCC ಪಥಸಂಚಲನದ ನೇತೃತ್ವ ವಹಿಸಿದ ಕೊಡಗಿನ ಪುಣ್ಯಾ ಪೊನ್ನಮ್ಮ

    ಬಳೆಪೇಟೆಯ ಪೇಯಿಂಟ್ ಶಾಪ್‌ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು, ಕೆಲ ಕ್ಷಣಗಳಲ್ಲೇ ಎರಡು ಅಂತಸ್ಥಿಗೆ ವ್ಯಾಪಿಸಿದೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಮಾಲೀಕ ಕೃಷ್ಣಮೂರ್ತಿ ಕುಟುಂಬ, ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. 20 ವರ್ಷಗಳಷ್ಟು ಹಳೆಯ ಬಿಲ್ಡಿಂಗ್‌ನಲ್ಲಿ ಇದೇ ಮೊದಲಬಾರಿಗೆ ಅಗ್ನಿ ಅನಾಹುತ ಸಂಭವಿಸಿದೆ ಎಂದು ಸಹ ಕೃಷ್ಣಮೂರ್ತಿ ತಿಳಿಸಿದ್ದಾರೆ.

    ಇನ್ನೂ ಬೆಂಕಿ ನಂದಿಸುವ ಕಾರ್ಯಾಚರಣೆ ವೇಳೆ ಕಟ್ಟಡದ ಒಳಗೆ ಪ್ರವೇಶಿಸಿ ಅಲ್ಲಿಯೇ ಸಿಲುಕಿದ್ದ ಯುವಕನನ್ನು ಅಗ್ನಿ ಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಸತತ ನಾಲ್ಕು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ, ಜೆಸಿಬಿ ಬಳಸಿ ಕಟ್ಟಡದ ಶಟರ್ ಮುರಿದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಘಟನೆಗೆ ನಿಖರ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಉಪ್ಪಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: 75th Republic Day: M-29 ಯುದ್ಧ ವಿಮಾನ ಹಾರಾಟ ನಡೆಸಿ ಮಿಂಚಿದ ಕೊಡಗಿನ ಪುಣ್ಯಾ ನಂಜಪ್ಪ

  • ಮುಂಬೈನಲ್ಲಿ ಬೆಳ್ಳಂಬೆಳಗ್ಗೆ ಅಗ್ನಿ ಅವಘಡ – 6 ಮಂದಿ ಸಜೀವ ದಹನ

    ಮುಂಬೈನಲ್ಲಿ ಬೆಳ್ಳಂಬೆಳಗ್ಗೆ ಅಗ್ನಿ ಅವಘಡ – 6 ಮಂದಿ ಸಜೀವ ದಹನ

    ಮುಂಬೈ: ಮಹಾರಾಷ್ಟ್ರದ (Maharashtra) ಗ್ಲೌಸ್ ಕಾರ್ಖಾನೆಯೊಂದರಲ್ಲಿ ಭಾನುವಾರ (ಇಂದು) ಮುಂಜಾನೆ ಸಂಭವಿಸಿದ ಭಾರೀ ಅಗ್ನಿ ಅವಘಡದಲ್ಲಿ (Fire Accident) ಆರು ಸಜೀವ ದಹನವಾಗಿರುವ ಘಟನೆ ನಡೆದಿದೆ.

    ಮುಂಜಾನೆ 2 ಗಂಟೆಯ ಸುಮಾರಿಗೆ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಕಾರ್ಖಾನೆಯ ಒಳಗೆ ಸಿಲುಕಿದ್ದ 6 ಜನ ಸಾವಿಗೀಡಾಗಿದ್ದಾರೆ. ಕೂಡಲೇ ಆವರಣದೊಳಗೆ ಮಲಗಿದ್ದ ಕಾರ್ಮಿಕರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ ವಿಷಯ ತಿಳಿಸಿದ್ದಾರೆ. ಇದನ್ನೂ ಓದಿ: ಪತ್ನಿ ಮಾಡ್ರನ್‌ ಡ್ರೆಸ್‌ ಧರಿಸುತ್ತಿದ್ದಕ್ಕೆ ಕೆಂಡವಾದ ಪತಿ – ಕತ್ತು ಕೊಯ್ದು ಬರ್ಬರವಾಗಿ ಹತ್ಯೆ

    ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತಲುಪಿದಾಗ ಇಡೀ ಕಾರ್ಖಾನೆಗೆ ಬೆಂಕಿ ಹೊತ್ತಿಕೊಂಡಿತ್ತು. ಕಾರ್ಯಾಚರಣೆ ನಡೆಸಿದ ಸಿಬ್ಬಂದಿ 6 ಜನರ ಮೃತದೇಹಗಳನ್ನ ಹೊರತೆಗೆದಿದ್ದಾರೆ ಎಂದು ಅಗ್ನಿಶಾಮಕ ಅಧಿಕಾರಿ ಮೋಹನ್ ಮುಂಗ್ಸೆ ತಿಳಿಸಿದ್ದಾರೆ.

    ಬೆಳಗಿನ ವೇಳೆಗೆ ಬೆಂಕಿ ಹತೋಟಿಗೆ ಬಂದಿದ್ದು, ಬೆಂಕಿ ಅನಾಹುತಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮರಗಳ್ಳತನ ಪ್ರಕರಣದಲ್ಲಿ ಸಂಸದ ಪ್ರತಾಪ್‌ ಸಿಂಹ ಸಹೋದರ ವಿಕ್ರಂ ಸಿಂಹ ಬಂಧನ

  • ಮಾರತಹಳ್ಳಿ, ಮಲ್ಲೇಶ್ವರಂನಲ್ಲಿ ಅಗ್ನಿ ದುರಂತ – ಲಕ್ಷಾಂತರ ರೂಪಾಯಿ ಮೌಲ್ಯದ ಬಟ್ಟೆಗಳು ಬೆಂಕಿಗಾಹುತಿ

    ಮಾರತಹಳ್ಳಿ, ಮಲ್ಲೇಶ್ವರಂನಲ್ಲಿ ಅಗ್ನಿ ದುರಂತ – ಲಕ್ಷಾಂತರ ರೂಪಾಯಿ ಮೌಲ್ಯದ ಬಟ್ಟೆಗಳು ಬೆಂಕಿಗಾಹುತಿ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಅಗ್ನಿ ದುರಂತ ಸಂಭವಿಸಿದ್ದು ಲಕ್ಷಾಂತರ ರೂಪಾಯಿ ಮೌಲ್ಯದ ಬಟ್ಟೆಗಳು ಬೆಂಕಿಗಾಹುತಿಯಾಗಿರುವ ಘಟನೆ ನಡೆದಿದೆ.

    ಬೆಂಗಳೂರಿನ ಮಲ್ಲೇಶ್ವರಂ (Malleshwaram) ಹಾಗೂ ಮಾರತಹಳ್ಳಿ ಮುಖ್ಯರಸ್ತೆಯಲ್ಲಿ ತಡರಾತ್ರಿ ಅಗ್ನಿ ದುರಂತ ಸಂಭವಿಸಿದೆ. ಇದನ್ನೂ ಓದಿ: ಇತಿಹಾಸದಲ್ಲೇ ಮೊದಲ ಬಾರಿಗೆ ಅತಿ ಹೆಚ್ಚು ಸಂಸದರ ಅಮಾನತು – ಯಾವ್ಯಾವ ಅವಧಿಯಲ್ಲಿ ಎಷ್ಟು ಮಂದಿ ಸಸ್ಪೆಂಡ್‌?

    ಮಾರತಹಳ್ಳಿಯ ಮುಖ್ಯರಸ್ತೆಯಲ್ಲಿರುವ ಕಟ್ಟಡವೊಂದರಲ್ಲಿ ತಡರಾತ್ರಿ ಟ್ರಾನ್ಸ್‌ಫಾರ್ಮರ್‌ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಅಗ್ನಿ ಅವಘಡ (Fire Disaster) ಸಂಭವಿಸಿದೆ. ಈ ವೇಳೆ ಬಿಲ್ಡಿಂಗ್‌ನಲ್ಲಿದ್ದ 4 ಅಂಗಡಿಗಳು ಬೆಂಕಿಗಾಹುತಿಯಾಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಬಟ್ಟೆಗಳು ಸುಟ್ಟು ಕರಕಲಾಗಿವೆ.

    ಮಧ್ಯರಾತ್ರಿ ಸತತ 3 ಗಂಟೆಗಳ ಕಾಲ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆದಿದೆ. ಅದೃಷ್ಟವಶಾತ್ ಕಟ್ಟಡದಲ್ಲಿ ಮಲಗಿದ್ದ ಮೂವರು ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಎಚ್‌ಎಎಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ:  28 ಸಾವಿರ ಹಣ ಪಡೆದೂ ಕೆಲಸ ಮಾಡಿಕೊಡದ ಸರ್ವೇಯರ್ – ಮತ್ತೆ ಹಣ ಪಡೆಯುವ ವೇಳೆ ಲೋಕಾ ಬಲೆಗೆ

    ಮಲ್ಲೇಶ್ವರಂನಲ್ಲೂ ಅಗ್ನಿ ಅನಾಹುತ: ಇಲ್ಲಿನ ಸಂಪಿಗೆ ರಸ್ತೆಯ ಸಿಗ್ನಲ್ ಬಳಿಯ ಬಟ್ಟೆ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಂಗಡಿಯಲ್ಲಿದ್ದ ಬಟ್ಟೆಗಳು ಸುಟ್ಟುಹೋಗಿವೆ. ಕಂಪ್ಯೂಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಅವಘಡ ಸಂಭವಿಸಿದೆ. ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ (Fire Brigade Employee) ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಆಗಿಲ್ಲ ಎಂದು ತಿಳಿದುಬಂದಿದೆ.

  • ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ- 7 ಜನರ ದುರ್ಮರಣ

    ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ- 7 ಜನರ ದುರ್ಮರಣ

    ಕೋಲ್ಕತ್ತಾ: ಅಕ್ರಮ ಪಟಾಕಿ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ ಏಳು ಮಂದಿ ಸಾವನ್ನಪ್ಪಿದ ಘಟನೆ ಪಶ್ಚಿಮ ಬಂಗಾಳದ (West Bengal) ದತ್ತಪುಕೂರ್‌ನ ನಡೆದಿದೆ.

    ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ. ಅಲ್ಲದೇ ಸ್ಫೋಟದ ತೀವ್ರತೆಗೆ ಈ ಪ್ರದೇಶದಲ್ಲಿನ ಹಲವಾರು ಕಟ್ಟಡಗಳಿಗೆ ಹಾನಿಯಾಗಿದೆ. ಎರಡು ಅಂತಸ್ತಿನ ಮನೆಯೊಳಗೆ ಅಕ್ರಮವಾಗಿ ಪಟಾಕಿ ಕಾರ್ಖಾನೆ ನಡೆಸಲಾಗುತ್ತಿತ್ತು ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕುಕ್ಕರ್‌ನಿಂದ ಹೊಡೆದು ಪ್ರಿಯತಮೆಯ ಕೊಲೆಗೈದ ಪ್ರಿಯಕರ

    ಇದೇ ವರ್ಷ ಮೇ ತಿಂಗಳಲ್ಲಿ ಮಿಡ್ನಾಪುರ ಜಿಲ್ಲೆಯ ಎಗ್ರಾ ಎಂಬಲ್ಲಿ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಒಂಬತ್ತು ಮಂದಿ ಸಾವನ್ನಪ್ಪಿದರು. ಅಲ್ಲದೇ ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಮತ್ತೊಂದು ಪ್ರಕರಣದಲ್ಲಿ ಪಟಾಕಿ ತಯಾರಿಕಾ ಘಟಕದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ ಮೂರು ಜನರು ಸಾವನ್ನಪ್ಪಿದ್ದರು.

    ಹಲವಾರು ಸ್ಫೋಟಗಳ ಬಳಿಕ ರಾಜ್ಯ ಸರ್ಕಾರವು ಹೊಸ ನೀತಿಯನ್ನು ಘೋಷಿಸಿತ್ತು. ಇದರ ಅಡಿಯಲ್ಲಿ ಕೈಗಾರಿಕಾ ಕೇಂದ್ರಗಳಲ್ಲಿ ಮಾತ್ರ ಪಟಾಕಿಗಳನ್ನು ತಯಾರಿಸಲು ಸೂಚಿಸಲಾಗಿತ್ತು. ಅಲ್ಲದೇ ಅಕ್ರಮ ಪಟಾಕಿ ತಯಾರಿಕಾ ಘಟಕಗಳ ಪತ್ತೆಗೆ ಅಧಿಕಾರಿಗಳ ತಂಡವನ್ನು ರಚಿಸಲಾಗಿತ್ತು. ಇದನ್ನೂ ಓದಿ: ತಾಳಿ ಕಟ್ಟೋ ವೇಳೆ ಹಸೆಮಣೆಯಿಂದ ಎದ್ದ ವಧು – ಮುರಿದು ಬಿತ್ತು ಮದುವೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೀನು ಹಿಡಿಯಲು ಹೋಗಿ ಯುವಕರಿಬ್ಬರು ನೀರುಪಾಲು

    ಮೀನು ಹಿಡಿಯಲು ಹೋಗಿ ಯುವಕರಿಬ್ಬರು ನೀರುಪಾಲು

    ತುಮಕೂರು: ಮೀನು ಹಿಡಿಯಲು ಹೋದ ಇಬ್ಬರು ಯುವಕರು ನೀರು ಪಾಲಾದ ಘಟನೆ ಗುಬ್ಬಿಯ (Gubbi) ಕಡಬಾ ಕೆರೆಯಲ್ಲಿ ನಡೆದಿದೆ.

    ಮೃತರನ್ನು ಹರೀಶ್ (31) ಯೋಗೀಶ್ (36) ಎಂದು ಗುರುತಿಸಲಾಗಿದೆ. ಆಡುಗೊಂಡನಹಳ್ಳಿ ನಿವಾಸಿಗಳಾದ ಇಬ್ಬರು ಶನಿವಾರ ರಾತ್ರಿ ವೇಳೆ ಕಡಬಾ ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದರು. ರಾತ್ರಿ ವೇಳೆ ವಿಪರೀತ ಮಳೆಯಾಗಿದ್ದು ಕೆರೆಯ ನೀರಿನ ಮಟ್ಟ ಅರಿಯದೆ ಮುಳುಗಿ ಹೋಗಿದ್ದಾರೆ. ಮನೆಗೆ ವಾಪಸ್ ಆಗದ ಕಾರಣ ಕುಟುಂಬಸ್ಥರಿಗೆ ಅನುಮಾನ ಮೂಡಿದ್ದು ಕೆರೆ ಬಳಿ ಬಂದು ನೋಡಿದಾಗ ಇಬ್ಬರು ಮುಳುಗಿರುವುದು ಖಾತ್ರಿಯಾಗಿದೆ. ಇದನ್ನೂ ಓದಿ: ಹೆಚ್ಚು ಜನ ಪ್ರಯಾಣಿಸುವ ಬಿಎಂಟಿಸಿ ರೂಟ್ ಮಾರ್ಕ್ ಮಾಡಿಕೊಂಡಿದ್ದ ಶಂಕಿತರು!

    ಈ ಬಗ್ಗೆ ಕುಟುಂಬಸ್ಥರು ಅಗ್ನಿಶಾಮಕ ಸಿಬ್ಬಂದಿಗೆ (Fire and Emergency Services) ಮಾಹಿತಿ ನೀಡಿದ್ದಾರೆ. ಬಳಿಕ ಶೋಧ ಕಾರ್ಯ ನಡೆಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಮುಳುಗಿರುವ ಶವಗಳನ್ನು ಪತ್ತೆ ಹಚ್ಚಿದ್ದಾರೆ. ಶವಗಳು ಸಿಗುತ್ತಿದ್ದಂತೆ ಯುವಕರ ಕುಟುಂಬಸ್ಥರ ಶೋಕ ಮುಗಿಲು ಮುಟ್ಟಿದೆ. ಇದನ್ನೂ ಓದಿ: ಪತಿಯ ಮುಂದೆಯೇ ಸೋದರ ಸಂಬಂಧಿಯನ್ನು ವರಿಸಿದ ಪತ್ನಿ!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]