Tag: ಅಗ್ನಿಶಾಮಕ ಇಲಾಖೆ

  • ಬ್ರೆಜಿಲ್ | ಬಸ್ ಟೈರ್ ಸ್ಫೋಟಗೊಂಡು ಟ್ರಕ್‌ಗೆ ಡಿಕ್ಕಿ – 37 ಮಂದಿ ಬಲಿ

    ಬ್ರೆಜಿಲ್ | ಬಸ್ ಟೈರ್ ಸ್ಫೋಟಗೊಂಡು ಟ್ರಕ್‌ಗೆ ಡಿಕ್ಕಿ – 37 ಮಂದಿ ಬಲಿ

    ಬ್ರೆಸಿಲಿಯಾ: ಬಸ್ ಟೈರ್ ಸ್ಫೋಟಗೊಂಡ ಪರಿಣಾಮ ನಿಯಂತ್ರಣ ತಪ್ಪಿ ಟ್ರಕ್‌ಗೆ ಡಿಕ್ಕಿ ಹೊಡೆದಿದ್ದು, 37 ಮಂದಿ ಬಲಿ ಸಾವನ್ನಪ್ಪಿರುವ ಘಟನೆ ಬ್ರೆಜಿಲ್ (Brazil) ಮಿನಾಸ್ ಗೆರೈಸ್‌  (Minas Gerais) ರಾಜ್ಯದ ಫೆರ್ನಾವೊ ಡಯಾಸ್ ರಾಷ್ಟ್ರೀಯ ಹೆದ್ದಾರಿಯ (Fernao Dias National Highway) ಲಾಜಿನ್ಹಾ ಪಟ್ಟಣದ ಬಳಿ ನಡೆದಿದೆ.

    ಶನಿವಾರ (ಡಿ.21) ಬೆಳಿಗ್ಗೆ ಈ ಘಟನೆ ನಡೆದಿದೆ. ಸಾವ್ ಪಾಲೊದಿಂದ 45 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಟಿಯೊಫಿಲೊ ಒಟೊನಿ ನಗರದ ಬಳಿ ಅಪಘಾತಕ್ಕೀಡಾಗಿದೆ. 37 ಜನರು ಸಾವನ್ನಪ್ಪಿದ್ದು, 13ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಒಟೋನಿಯ ಟಿಯೋಫಿಲೋ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇದನ್ನೂ ಓದಿ: ತ್ರಾಸಿ ಬೀಚ್‌ನಲ್ಲಿ ಟೂರಿಸ್ಟ್ ಬೋಟ್ ಪಲ್ಟಿ – ರೈಡರ್ ಕಣ್ಮರೆ

    ಘಟನಾ ಸ್ಥಳಕ್ಕೆ ಮಿನಾಸ್ ಗೆರೈಸ್ ಅಗ್ನಿಶಾಮಕ ಇಲಾಖೆ ದೌಡಾಯಿಸಿದ್ದು, ಕ್ರೇನ್ ಮೂಲಕ ಅವಶೇಷಗಳನ್ನು ಹೊರತೆಗೆದಿದ್ದಾರೆ. ಜೊತೆಗೆ ಇದೇ ವೇಳೆ ಮೂವರು ಪ್ರಯಾಣಿಕರಿದ್ದ ಕಾರು ಬಸ್‌ಗೆ ಡಿಕ್ಕಿ ಹೊಡೆದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನೂ ಬಸ್ ಟೈರ್ ಸ್ಫೋಟಗೊಂಡಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಟ್ರಕ್‌ಗೆ ಡಿಕ್ಕಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.

    ಅಪಘಾತದಲ್ಲಿ ಹೊತ್ತಿಕೊಂಡ ಬೆಂಕಿಯಿಂದಾಗಿ ದೇಹಗಳು ಛಿದ್ರಗೊಂಡ ಪರಿಣಾಮ ನಿಖರವಾಗಿ ಮೃತದೇಹಗಳ ಸಂಖ್ಯೆ ನಿರ್ದಿಷ್ಟಪಡಿಸಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇದನ್ನೂ ಓದಿ: Maharashtra | ನೂತನ ಸಚಿವರಿಗೆ ಖಾತೆ ಹಂಚಿಕೆ, ಗೃಹಖಾತೆ ತನ್ನಲ್ಲೇ ಉಳಿಸಿಕೊಂಡ ಬಿಜೆಪಿ – ಇಲ್ಲಿದೆ ಕಂಪ್ಲೀಟ್‌ ಲಿಸ್ಟ್‌!

  • ಮರ್ಮಾಂಗಕ್ಕೆ ಜಿಮ್ ಪ್ಲೇಟ್ ಅಂಟಿಸಿಕೊಂಡ! ತೆಗೆಯಲು ಅಗ್ನಿಶಾಮಕ ಸಿಬ್ಬಂದಿ ಬರ್ಬೇಕಾಯ್ತು

    ಮರ್ಮಾಂಗಕ್ಕೆ ಜಿಮ್ ಪ್ಲೇಟ್ ಅಂಟಿಸಿಕೊಂಡ! ತೆಗೆಯಲು ಅಗ್ನಿಶಾಮಕ ಸಿಬ್ಬಂದಿ ಬರ್ಬೇಕಾಯ್ತು

    ಬರ್ಲಿನ್: ಜಿಮ್‍ಗೆ ಹೋಗೋದು ದೇಹವನ್ನು ದೃಢವಾಗಿಸಿಕೊಂಡು, ಬಲಿಷ್ಠವಾಗಿ ಕಾಣಿಸಿಕೊಳ್ಳಲು. ಆದರೆ ಜರ್ಮನಿಯಲ್ಲಿ ವ್ಯಕ್ತಿಯೊಬ್ಬ ಹುಚ್ಚು ಸಾಹಸ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾನೆ.

    ಸೆಪ್ಟಂಬರ್ 15 ರಂದು ಜರ್ಮನಿ ಪಟ್ಟಣದ ವೊಮ್ರ್ಸ್ ನಿವಾಸಿ ಇಂತಹ ಮೂರ್ಖ ಸಾಹಸವನ್ನು ತಮ್ಮ ಸ್ಥಳೀಯ ಜಿಮ್‍ನಲ್ಲಿ ಮಾಡಿದ್ದಾನೆ. ಈತ ಸುಮಾರು 2.5 ಕೆ.ಜಿ ತೂಕದ ಪ್ಲೇಟ್ ನಲ್ಲಿ ಮರ್ಮಾಂಗಕ್ಕೆ ತೂರಿಸಿದ್ದಾನೆ. ಬಳಿಕ ಪ್ಲೇಟ್ ನಿಂದ ಮರ್ಮಾಂಗವನ್ನು ಬಿಡಿಸಿಕೊಳ್ಳಲು ಆಗದೇ ಒದ್ದಾಡಿದ್ದಾನೆ.

    ವಿಚಾರ ತಿಳಿದು ವೈದ್ಯರು ಬಂದು ತೆಗೆಯಲು ಪ್ರಯತ್ನಿಸಿದ್ದಾರೆ. ಅವರಿಂದಲೂ ಪ್ಲೇಟ್ ತೆಗೆಯಲು ಸಾಧ್ಯವಾಗಲಿಲ್ಲ. ಕೊನೆಗೆ ಅಗ್ನಿಶಾಮಕ ದಳ ಬಂದು ಪ್ಲೇಟ್ ತೆಗೆದಿದ್ದಾರೆ. ಹೈಡ್ರಾಲಿಕ್ ಸಾಧನ ಬಳಸಿ ಮೂರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಪ್ಲೇಟನ್ನು ಕತ್ತರಿಸಿ ಆತನನ್ನು ರಕ್ಷಿಸಿದ್ದಾರೆ.

    ಈ ಕಾರ್ಯಾಚರಣೆ ನಡೆದ ಬಳಿಕ `ದಯವಿಟ್ಟು ಯಾರು ಇಂತಹ ಕಠಿಣ ಸಾಹಸವನ್ನು ಮಾಡಬೇಡಿ’ ಎಂದು ಜರ್ಮನಿಯ ಅಗ್ನಿಶಾಮಕ ಘಟಕ ಫೇಸ್‍ಬುಕ್ ನಲ್ಲಿ ತುಂಡು ತುಂಡಾಗಿ ಬಿದ್ದಿದ್ದ ಪ್ಲೇಟಿನ ಫೋಟೋ ವನ್ನು ಪ್ರಕಟಿಸಿದೆ.