Tag: ಅಗ್ನಿವೀರ್

  • ಬಾಗಲಕೋಟೆ | ತಂದೆಯಂತೆ ಮಗಳು – ನೌಕಾಸೇನೆಗೆ ಸೇರ್ಪಡೆ

    ಬಾಗಲಕೋಟೆ | ತಂದೆಯಂತೆ ಮಗಳು – ನೌಕಾಸೇನೆಗೆ ಸೇರ್ಪಡೆ

    ಬಾಗಲಕೋಟೆ: ಜಿಲ್ಲೆಯ ಸಹನಾ ಶಿವಪುತ್ರಪ್ಪ ಅಂಗಡಿ ಅಗ್ನಿವೀರ್‌ (Agniveer) ಆಗಿ ನೌಕಾ ಸೇನೆಗೆ (Indian Navy) ಸೇರ್ಪಡೆಯಾಗಿದ್ದಾರೆ.

    ಬಾಗಲಕೋಟೆ (Bagalkote) ಜಿಲ್ಲೆಯಿಂದ ಆಯ್ಕೆಯಾದ ಏಕೈಕ ಮಹಿಳಾ ಅಭ್ಯರ್ಥಿಯಾಗಿದ್ದಾರೆ. ಸಹನಾ ಬಾದಾಮಿ ಪಟ್ಟಣದ ಚಾಲುಕ್ಯ ನಗರದ ನಿವಾಸಿ ನಿವೃತ್ತ ಯೋಧ ಶಿವಪುತ್ರಪ್ಪ ಅಂಗಡಿ ಇವರ ಪುತ್ರಿಯಾಗಿದ್ದಾರೆ.

    ಓಡಿಶಾದಲ್ಲಿ ತರಬೇತಿ ಮುಗಿಸಿ ಇವರಿಗೆ ಮುಂಬೈನಲ್ಲಿ ಪೋಸ್ಟಿಂಗ್‌ ನೀಡಿದ್ದಾರೆ.  ಇದನ್ನೂ ಓದಿ: ಶಾರ್ಟ್ ಸರ್ಕ್ಯೂಟ್‌ನಿಂದ ಹೊತ್ತಿ ಉರಿದ ಸರ್ಕಾರಿ ಸಾರಿಗೆ ಬಸ್ – ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು

    ತಂದೆ ಶಿವಪುತ್ರಪ್ಪ ಅಂಗಡಿ ಸಿಆರ್‌ಪಿಎಫ್‌ನಲ್ಲಿ 21 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿ ಸದ್ಯ ಬಾದಾಮಿ ಪಟ್ಟಣದ ಚಾಲುಕ್ಯ ನಗರದಲ್ಲಿ ವಾಸವಾಗಿದ್ದಾರೆ.

  • ಭಾರತದಲ್ಲಿ ಮತ್ತೊಂದು ಮಂಕಿಪಾಕ್ಸ್‌ ಕೇಸ್‌ ಪತ್ತೆ – ಇತರೇ ಟಾಪ್-10 ನ್ಯೂಸ್‌

    ಭಾರತದಲ್ಲಿ ಮತ್ತೊಂದು ಮಂಕಿಪಾಕ್ಸ್‌ ಕೇಸ್‌ ಪತ್ತೆ – ಇತರೇ ಟಾಪ್-10 ನ್ಯೂಸ್‌

    – ಚೇನಾಬ್ ರೈಲು ಸೇತುವೆಯ ರುದ್ರರಮಣೀಯ ದೃಶ್ಯ; ವೀಡಿಯೋ ನೋಡಿ…

    1. ಅಬ್ದುಲ್ ಕಲಾಂರನ್ನ ಲಾಡೆನ್‌ಗೆ ಹೋಲಿಸಿ ವಿವಾದ

    ಸಮಾಜದ ಪರಿಸ್ಥಿತಿಗಳೇ ಒಸಾಮಾ ಬಿನ್ ಲಾಡೆನ್‌ನನ್ನು ಭಯೋತ್ಪಾಕನನ್ನಾಗಿ ಮಾಡಿತು ಅಂತ ಮಹಾರಾಷ್ಟ್ರದ ಶರದ್ ಪವಾರ್ ಎನ್‌ಸಿಪಿ ಪಕ್ಷದ ನಾಯಕ ಜಿತೇಂದ್ರ ಅವಧ್ ಪತ್ನಿ ಋತು ಅವಧ್ ಸಾರ್ವಜನಿಕ ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದ್ದಾರೆ. ಲಾಡೆನ್ ಜೀವನ ಚರಿತ್ರೆ ಓದಿ.. ಅಬ್ದುಲ್ ಕಲಾಂ ಹೇಗೆ ರಾಷ್ಟ್ರಪತಿ ಆದ್ರೋ, ಲಾಡೆನ್ ಹೇಗೆ ಉಗ್ರನಾದನೋ ಗೊತ್ತಾಗುತ್ತೆ ಎಂದು ಮಕ್ಕಳಿಗೆ ಕರೆ ನೀಡಿದ್ದಾರೆ. ಇದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಉಗ್ರರ ಪರ ಮಾತಾಡೋದು ಇಂಡಿ ಕೂಟದ ರಕ್ತದಲ್ಲೇ ಇದೆ ಎಂದು ಬಿಜೆಪಿ ಕಿಡಿಕಾರಿದೆ.

    2. ಅಜಿತ್‌ ‌ಪವಾರ್‌ ಭಿನ್ನರಾಗ

    ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಸನಿಹದಲ್ಲಿ ಡಿಸಿಎಂ ಅಜಿತ್ ಪವಾರ್ ಭಿನ್ನರಾಗ ತೆಗೆದಿದ್ದಾರೆ. ಸಮ್ಮಿಶ್ರ ಸರ್ಕಾರ ಇದ್ದರೇ ಇದೇ ಪ್ರಾಬ್ಲಂ… ಯಾವುದೇ ಅಭಿವೃದ್ದಿ ಕೆಲಸಗಳು ಆಗಲ್ಲ ಎಂದಿದ್ದಾರೆ. ಅಜಿತ್ ಪವಾರ್ ಹೇಳಿಕೆಗೆ ಈಗ ಆಡಳಿತ ಮೈತ್ರಿಕೂಟದಲ್ಲಿ ಅಸಮಾಧಾನದ ಹೊಗೆ ಎಬ್ಬಿಸಿದೆ.

    3. ಪಿಯೂಶ್‌ ಗೋಯೆಲ್‌ ವಿರುದ್ಧ ಪ್ರಿಯಾಂಕ್‌ ಕಿಡಿ

    ಬೆಂಗಳೂರು ಬೈ ಬೈ ಅಂದ್ರೆ.. ಭಾರತ ಬೈ ಬೈ ಎಂದು ಹೇಳಬೇಕಾಗುತ್ತದೆ ಎಂದು ಕೇಂದ್ರ ಸಚಿವ ಪಿಯೂಶ್ ಗೋಯೆಲ್ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ಹೊರಹಾಕಿದ್ದಾರೆ. ಪಿಯೂಶ್ ಗೋಯಲ್ ಬಾಯ್ ಬಾಯ್ ಬೆಂಗಳೂರು ಅಂತ ಹೇಳಿದ್ರು. ಅವರು ದೇಶದ ಮಂತ್ರಿಗಳಾಗಿಲ್ಲ.. ಮೋದಿಯವರಿಗೆ ಮಂತ್ರಿಗಳಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ರು. ಸೆಮಿ ಕಂಡಕ್ಟರ್‌ನ 4 ವಲಯಗಳು ಗುಜರಾತ್‌ಗೆ ಹೋಗಿವೆ. ಇದಕ್ಕೆ ಕುಮಾರಸ್ವಾಮಿ ಉತ್ತರ ಕೊಡಬೇಕು ಎಂದು ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ರು.

    4. ಅಗ್ನಿವೀರರಿಗೆ ಉದ್ಯೋಗ ಮೀಸಲಾತಿ

    ಅಗ್ನಿವೀರರಿಗೆ ಬ್ರಹ್ಮೋಸ್ ಏರೋಸ್ಪೇಸ್ ಸಂಸ್ಥೆ ಉದ್ಯೋಗ ಮೀಸಲಾತಿ ನೀಡಿದೆ. ತಾಂತ್ರಿಕ ಮತ್ತು ಸಾಮಾನ್ಯ ಆಡಳಿತ ವಿಭಾಗದಲ್ಲಿ ಶೇ.15ರಷ್ಟು ಮೀಸಲಾತಿ ಪ್ರಕಟಿಸಿದೆ. ಭದ್ರತಾ ವಿಭಾಗದಲ್ಲಿ ಕನಿಷ್ಠ ಶೇ.50ರಷ್ಟು ಮೀಸಲಾತಿ ಕಲ್ಪಿಸಿದೆ. ಈ ಮೂಲಕ ಬ್ರಹ್ಮೋಸ್ ಏರೋಸ್ಪೇಸ್ ಸಂಸ್ಥೆ ಅಗ್ನಿವೀರರಿಗೆ ಉದ್ಯೋಗ ಮೀಸಲಾತಿ ನೀಡಿದ ಮೊದಲ ಸಂಸ್ಥೆ ಎನಿಸಿದೆ.

    5. ಪೊಲೀಸರ ಮೇಲೆ ಗುಂಪು ದಾಳಿ

    ಪೊಲೀಸರಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಅಕ್ರಮ ಗಣಿಗಾರಿಕೆ ಆರೋಪಿ ವಾಹನದಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ. ಇದ್ರಿಂದ ಸಿಟ್ಟಿಗೆದ್ದ ಗ್ರಾಮಸ್ಥರು ಪೊಲೀಸರ ಮೇಲೆ ಗುಂಪು ದಾಳಿ ನಡೆಸಿದ ಘಟನೆ ಉತ್ತರಪ್ರದೇಶದ ಮೊರದಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಪೊಲೀಸರಿಗೆ ಕಲ್ಲು ಹೊಡೆದಿದ್ದಾರೆ. ಘಟನೆಯಲ್ಲಿ ಹಲವು ಪೊಲೀಸರು ಗಾಯಗೊಂಡಿದ್ದಾರೆ.

    6. ಸ್ನೇಹಮಯಿ ಕೃಷ್ಣ ವಿರುದ್ಧ ವಂಚನೆ ಕೇಸ್‌

    ಮೂರು ಲಕ್ಷ ಹಣ ಪಡೆದು ವಂಚನೆ ಎಸಗಿರುವ ಆರೋಪ ಕೇಸಲ್ಲಿ ಮೈಸೂರಿನ ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರಿಂದು ಚಾಮರಾಜನಗರ ಕೋರ್ಟ್‌ಗೆ ತೆರಳಿ ವಿಚಾರಣೆ ಎದುರಿಸಿದ್ರು. ಬಳಿಕ ಮಾತಾಡಿದ ಅವರು, ಕರುಣಾಕರ ಎಂಬುವರು ನನ್ನ ವಿರುದ್ದ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ನನ್ನ ನೈತಿಕ ಶಕ್ತಿ ಕುಗ್ಗಿಸುವ ಯತ್ನ ನಡೆಯುತ್ತಿದೆ. ಶೀಘ್ರವೇ ಸತ್ಯ ಗೊತ್ತಾಗುತ್ತೆ ಎಂದಿದ್ದಾರೆ

    7. ಬಿಜೆಪಿಯಲ್ಲೇ ಫೈಟ್

    ರಾಜ್ಯ ಬಿಜೆಪಿಯಲ್ಲಿ ಬಣ ಸಂಘರ್ಷ ತಾರಕಕ್ಕೇರಿದೆ. ನಿನ್ನೆ ಯತ್ನಾಳ್ ಟೀಂ ನಡೆಸಿದ್ದ ರೆಬೆಲ್ ಸಭೆಗೆ ಪ್ರತಿಯಾಗಿ ರೇಣುಕಾಚಾರ್ಯ ಬೆಂಗಳೂರಲ್ಲಿ ಸಭೆ ನಡೆಸಿದ್ದಾರೆ. ಕಟ್ಟಾ ಸುಬ್ರಹ್ಮಣ್ಯನಾಯ್ಡು ಮನೆಯಲ್ಲಿ ನಡೆದ ಸಭೆಯಲ್ಲಿ ಎಲ್ರೂ ವಿಜಯೇಂದ್ರ ಪರ ಬ್ಯಾಟ್ ಬೀಸಿದ್ರು. ರಾಜ್ಯಾಧ್ಯಕ್ಷರ ಬದಲಾವಣೆ ಸಾಧ್ಯವಿಲ್ಲ. ವಿಜಯೇಂದ್ರರನ್ನ ಇಳಿಸಿ ನೋಡಿ ಎಂದು ಸವಾಲ್ ಹಾಕಿದ್ರು. ಪಕ್ಷ ವಿರೋಧಿಗಳನ್ನು ಉಚ್ಛಾಟಿಸಬೇಕು ಎಂದು ಆಗ್ರಹಿಸಿದ್ರು

    8. ಸ್ವತಂತ್ರ ಸೇನಾನಿ ಎಕ್ಸ್‌ಪ್ರೆಸ್ ರೈಲಿನ ಮೇಲೆ ಕಲ್ಲು ತೂರಾಟ

    ಬಿಹಾರದ ಸಮಷ್ಟಿಪುರ ಜಿಲ್ಲೆಯಲ್ಲಿ ಸ್ವತಂತ್ರ ಸೇನಾನಿ ಎಕ್ಸ್‌ಪ್ರೆಸ್‌ ರೈಲಿನ ಮೇಲೆ ಕಲ್ಲು ತೂರಾಟ ನಡೆದಿದೆ. ಘಟನೆಯಲ್ಲಿ ರೈಲಿನ ಗಾಜುಗಳು ಪುಡಿ ಪುಡಿಯಾಗಿದ್ದು, ಕೆಲವು ಪ್ರಯಾಣಿಕರಿಗೆ ಗಾಯಗಳಾಗಿವೆ. ರೈಲ್ವೇ ಪೊಲೀಸರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

    9. ಭಾರತದಲ್ಲಿ ಮತ್ತೊಂದು ಮಂಕಿಪಾಕ್ಸ್‌ ಕೇಸ್‌ ಪತ್ತೆ

    ಭಾರತದಲ್ಲಿ ಮತ್ತೊಂದು ಮಂಕಿಪಾಕ್ಸ್ ಕೇಸ್ ಪತ್ತೆಯಾಗಿದೆ. ಕೇರಳದ ಎರ್ನಾಕುಲಂನಲ್ಲಿ ವ್ಯಕ್ತಿಯೊಬ್ಬರಿಗೆ ಈ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ದೇಶದಲ್ಲಿ ಎಂ-ಪಾಕ್ಸ್ ಪ್ರಕರಣಗಳ ಸಂಖ್ಯೆ ಮೂರಕ್ಕೇರಿದೆ. ಕೇರಳದಲ್ಲೇ ಮೂರೂ ಪ್ರಕರಣಗಳು ಪತ್ತೆಯಾಗಿರುವುದು ಗಮನಾರ್ಹ.

    10. ಚೇನಾಬ್ ರೈಲ್ ಬ್ರಿಡ್ಜ್ ಸ್ಪಷಲ್‌ ವೀಡಿಯೋ

    ಕಾಶ್ಮೀರ ಕಣಿವೆಯನ್ನು ಸಂಪರ್ಕಿಸುವ ಚೇನಾಬ್ ರೈಲ್ವೇ ಸೇತುವೆಯ ರುದ್ರರಮಣೀಯ ದೃಶ್ಯವನ್ನು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಹಂಚಿಕೊಂಡಿದ್ದಾರೆ. ಇದು ವಿಶ್ವದ ಅತಿ ಎತ್ತರದ ರೈಲು ಸೇತುವೆ ಮತ್ತು ವಿಶ್ವದ ಅತಿ ಎತ್ತರದ ಕಮಾನು ಸೇತುವೆ ಎಂದು ಅಶ್ವಿನಿ ವೈಷ್ಣವ್ ಬಣ್ಣಿಸಿದ್ದಾರೆ. ಈ ಸೇತುವೆಯು ನದಿಯಿಂದ 1,178 ಅಡಿ ಎತ್ತರದಲ್ಲಿದೆ.

  • ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಗ್ನಿವೀರ್ ರದ್ದು, ಒಪಿಎಸ್ ಜಾರಿ: ನಾಸಿರ್ ಹುಸೇನ್

    ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಗ್ನಿವೀರ್ ರದ್ದು, ಒಪಿಎಸ್ ಜಾರಿ: ನಾಸಿರ್ ಹುಸೇನ್

    ಜಮ್ಮು: ಕೇಂದ್ರದಲ್ಲಿ ಕಾಂಗ್ರೆಸ್ (Congress) ಅಧಿಕಾರಕ್ಕೆ ಬಂದರೆ ಅಗ್ನಿವೀರ್ (Agniveer) ಯೋಜನೆಯನ್ನು ರದ್ದುಪಡಿಸುವುದರ ಜೊತೆಗೆ ಹಳೆಯ ಪಿಂಚಣಿ ಯೋಜನೆಯನ್ನು (OPS) ಜಾರಿ ಮಾಡಲಾಗುವುದು ಎಂದು ರಾಜ್ಯಸಭೆ ಸಂಸದ, ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ ಸೈಯದ್ ನಾಸಿರ್ ಹುಸೇನ್ ( Syed Naseer Hussain) ಹೇಳಿದ್ದಾರೆ.

    ವಿಧಾನಸಭೆ ಚುನಾವಣೆ ಹಿನ್ನೆಲೆ ಜಮ್ಮುವಿನಲ್ಲಿ (Jammu) ಮಾತನಾಡಿದ ಅವರು, ಅಗ್ನಿವೀರ್ ಯೋಜನೆ ಅನುಷ್ಠಾನದಿಂದ ಅನೇಕ ರಾಜ್ಯಗಳ ವಿಶೇಷವಾಗಿ ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಮತ್ತು ಲಡಾಖ್‌ನಂತಹ ಗುಡ್ಡಗಾಡು ಪ್ರದೇಶದ ಯುವಕರು ಬಹಳಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ನಾಲ್ಕು ವರ್ಷಗಳ ಸೈನಿಕ ಸೇವೆಯ ನಂತರ ಯುವಕರು ಮತ್ತೆ ನಿರುದ್ಯೋಗಿಗಳಾಗಲಿದ್ದಾರೆ ಎಂದರು. ಇದನ್ನೂ ಓದಿ: ಪಿತೃಪಕ್ಷದ ಊಟಕ್ಕೆ ಹೋಗಲು ಪೊಲೀಸ್ ಜೀಪ್ ಕರೆಸಿಕೊಂಡ ಭೂಪ!

    ಪ್ರಧಾನಿ ನರೇಂದ್ರ ಮೋದಿ (Narendra Modi) ಸರ್ಕಾರ ಈ ಯೋಜನೆಯನ್ನು ಪರಿಚಯಿಸುವ ಮೂಲಕ ದೇಶದ ಭದ್ರತೆ, ಸಂರಕ್ಷಣೆಯೊಂದಿಗೆ ರಾಜಿ ಮಾಡಿಕೊಂಡಿದೆ. ಕೇಂದ್ರದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದ ನಂತರ ಈ ಯೋಜನೆಯನ್ನು ರದ್ದುಗೊಳಿಸಲು ನಿರ್ಧರಿಸಿದ್ದೇವೆ. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೂಡ ಘೋಷಣೆ ಮಾಡಿದ್ದಾರೆ. ಈ ಯುವ ವಿರೋಧಿ ಯೋಜನೆಯನ್ನು ರದ್ದುಗೊಳಿಸುವ ಮೂಲಕ ಕಾಂಗ್ರೆಸ್ ದೇಶದ ಯುವಕರಿಗೆ ದೊಡ್ಡ ಪರಿಹಾರವನ್ನು ನೀಡುತ್ತದೆ ಎಂದರು. ಇದನ್ನೂ ಓದಿ: ನಿಮ್ಮಿಂದ ನಮ್ಮ ಸಿದ್ದರಾಮಯ್ಯಗೆ ಈ ಸ್ಥಿತಿ ಬಂತು – ಮುಡಾ ಅಧ್ಯಕ್ಷರಿಗೆ ಕಾಂಗ್ರೆಸ್ ಕಾರ್ಯಕರ್ತರಿಂದ ಘೇರಾವ್

    ಕಾಂಗ್ರೆಸ್ ಪಕ್ಷವು ರಾಜಸ್ಥಾನ ಮತ್ತು ಹಿಮಾಚಲ ಪ್ರದೇಶದಲ್ಲಿ ಮಾಡಿದಂತೆ ಹಳೆಯ ಪಿಂಚಣಿ ಯೋಜನೆ ಪುನಶ್ಚೇತನಕ್ಕೆ ಸಂಬಂಧಿಸಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕರ್ನಾಟಕ, ರಾಜಸ್ಥಾನ (Rajasthan) ಮತ್ತು ಹಿಮಾಚಲ ಪ್ರದೇಶದಲ್ಲಿಯೂ (Himachal Pradesh) ಈಗಾಗಲೇ ಮಾಡಿದ್ದೇವೆ. ಇಲ್ಲಿ ಕಾಂಗ್ರೆಸ್-ನ್ಯಾಷನಲ್ ಕಾನ್ಫರೆನ್ಸ್ ಮೈತ್ರಿಕೂಟದ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಜಮ್ಮು ಕಾಶ್ಮೀರದಲ್ಲಿ ಹಳೆಯ ಪಿಂಚಣಿ ಯೋಜನೆಯನ್ನು ಮರಳಿ ತರಲು ಬದ್ಧವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಆನ್‌ಲೈನ್‌ನಲ್ಲಿ ಹಣ ಹೂಡಿಕೆ ಮಾಡಿ 91 ಲಕ್ಷ ರೂ. ಕಳೆದುಕೊಂಡ ಖಾಸಗಿ ಶಾಲಾ ಶಿಕ್ಷಕ

    ಜಮ್ಮು ಮತ್ತು ಕಾಶ್ಮೀರದ (Kashmir) ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ 60,000 ಕ್ಕೂ ಹೆಚ್ಚು ದಿನಗೂಲಿಗಳು, ಗುತ್ತಿಗೆದಾರರು ಮತ್ತು ಇತರ ಹಂಗಾಮಿ ಕಾರ್ಮಿಕರ ಅನಿಶ್ಚಿತ ಭವಿಷ್ಯದ ಬಗ್ಗೆ ಕಾಂಗ್ರೆಸ್ ಪಕ್ಷದ ಕೆಲವು ಯೋಜನೆಯನ್ನು ಪರಿಗಣಿಸಿದೆ. ನ್ಯಾಷನಲ್ ಕಾನ್ಫರೆನ್ಸ್ ಕೂಡ ತನ್ನ ಮೊದಲ ಆದ್ಯತೆಯಲ್ಲಿ ಇಟ್ಟುಕೊಂಡಿದೆ. ದೀರ್ಘಕಾಲದಿಂದ ಶೋಷಣೆಯನ್ನು ಎದುರಿಸುತ್ತಿರುವ ಈ ಕಾರ್ಮಿಕರ ಭವಿಷ್ಯವನ್ನು ಖಂಡಿತವಾಗಿಯೂ ನಿರ್ಧರಿಸುತ್ತದೆ. ಎಲ್ಲಾ ದಿನಗೂಲಿ ಕಾರ್ಮಿಕರನ್ನು ಕಾಯಂಗೊಳಿಸಲಾಗುವುದು ಮತ್ತು ಜೆ & ಕೆ ನಲ್ಲಿ ಕನಿಷ್ಠ ವೇತನ ಕಾಯ್ದೆಯ ಅಡಿಯಲ್ಲಿ ಕಾರ್ಮಿಕರಿಗೆ ಕೇಂದ್ರ ನಿಯಮಗಳ ಪ್ರಕಾರ ಸಾಕಷ್ಟು ವೇತನವನ್ನು ಒದಗಿಸಲಾಗುವುದು ಎಂದರು. ಇದನ್ನೂ ಓದಿ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯರಾಗಿ ಭಾರತವನ್ನು ಸೇರಿಸಿ: ಫ್ರಾನ್ಸ್ ಅಧ್ಯಕ್ಷ ಒತ್ತಾಯ

    ಸತ್ಯಪಾಲ್ ಮಲಿಕ್ ಅವರನ್ನು ಬಿಜೆಪಿಯಿಂದ ನೇಮಿಸಲಾಗಿದೆಯೇ ಹೊರತು ಕಾಂಗ್ರೆಸ್ ಪಕ್ಷದಿಂದಲ್ಲ, ಅವರು ಪುಲ್ವಾಮದಂತಹ ಗಂಭೀರ ಆರೋಪಗಳನ್ನು ಎತ್ತಿದ್ದರೆ ಬಿಜೆಪಿ ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಬೇಕಿತ್ತು. ‘ಸಮಸ್ಯೆಯ ಬಗ್ಗೆ ಮೌನವಾಗಿರಿ’ ಎಂದು ಪಿಎಂಒ ಮತ್ತು ಗೃಹ ಸಚಿವಾಲಯವು ಅವರಿಗೆ ಸೂಚಿಸಿದೆ. ಇದರ ಬಗ್ಗೆ ನಾವು ಯೋಚಿಸಬೇಕಿದೆ ಎಂದರು. ಇದನ್ನೂ ಓದಿ: ಮಹಾಲಕ್ಷ್ಮಿ ಕೊಲೆ ಬಳಿಕ ಬೆಂಗಳೂರಿನಿಂದ ಒಡಿಶಾಗೆ ಬೈಕ್‌ನಲ್ಲೇ ಪ್ರಯಾಣ – ಮೂರು ದಿನ 1,550 ಕಿಮೀ ಬೈಕ್ ಓಡಿಸಿದ್ದ ಹಂತಕ!

  • ಏಕರೂಪ ನಾಗರಿಕ ಸಂಹಿತೆ, ಅಗ್ನಿವೀರ್ ಬಗ್ಗೆ ಮರುಚಿಂತನೆ ಮಾಡಬೇಕಿದೆ- ಜೆಡಿಯು ಕ್ಯಾತೆ

    ಏಕರೂಪ ನಾಗರಿಕ ಸಂಹಿತೆ, ಅಗ್ನಿವೀರ್ ಬಗ್ಗೆ ಮರುಚಿಂತನೆ ಮಾಡಬೇಕಿದೆ- ಜೆಡಿಯು ಕ್ಯಾತೆ

    ನವದೆಹಲಿ: ಎನ್‌ಡಿಎ ಸರ್ಕಾರ ರಚನೆಗೂ ಮುನ್ನವೇ ಜೆಡಿಯು ಕ್ಯಾತೆ ತೆಗೆದಿದ್ದು, ಏಕರೂಪ ನಾಗರಿಕ ಸಂಹಿತೆ, ಅಗ್ನಿವೀರ್ (Agniveer Scheme) ಬಗ್ಗೆ ಮರುಚಿಂತನೆ ಮಾಡಬೇಕಿದೆ ಎಂದು ಹಿರಿಯ ನಾಯಕ ಕೆ.ಸಿ ತ್ಯಾಗಿ (K C Tyagi) ಹೊಸ ವರಸೆ ಎತ್ತಿದ್ದಾರೆ.

    ಅಗ್ನಿವೀರ್ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರ ಹೊಸ ರೀತಿಯಲ್ಲಿ ಯೋಚಿಸಬೇಕಾಗಿದೆ. ಒಂದು ವರ್ಗದ ಮತದಾರರು ಅಗ್ನಿವೀರ್ ಯೋಜನೆ ಬಗ್ಗೆ ಕೋಪಗೊಂಡಿದ್ದಾರೆ. ಸಾರ್ವಜನಿಕರು ಪ್ರಶ್ನೆಗಳನ್ನು ಎತ್ತಿರುವ ನ್ಯೂನತೆಗಳ ಬಗ್ಗೆ ವಿವರವಾಗಿ ಚರ್ಚಿಸಬೇಕು ಮತ್ತು ಅವುಗಳನ್ನು ತೆಗೆದುಹಾಕಬೇಕು ಎಂದು ನಮ್ಮ ಪಕ್ಷ ಬಯಸುತ್ತದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿರುವ ಸಿಎಂ, ಏಕರೂಪ ನಾಗರಿಕ ಸಂಹಿತೆ (UCC) ಕುರಿತು ಕಾನೂನು ಆಯೋಗದ ಮುಖ್ಯಸ್ಥರಿಗೆ ಪತ್ರ ಬರೆದಿದ್ದಾರೆ. ಇದಕ್ಕೆ ನಮ್ಮ ವಿರೋಧವಿಲ್ಲ ಆದರೆ ಮೈತ್ರಿ ಒಕ್ಕೂಟದೊಂದಿಗೆ ಮಾತನಾಡಿ ಪರಿಹಾರ ಕಂಡುಕೊಳ್ಳಬೇಕು ಎಂದು ತಿಳಿಸಿದರು.

    ಜಾತಿ ಆಧಾರಿತ ಜನಗಣತಿ ಕುರಿತು ಮಾತನಾಡಿದ ಕೆ.ಸಿ.ತ್ಯಾಗಿ, ದೇಶದ ಯಾವ ಪಕ್ಷವೂ ಜಾತಿ ಆಧಾರಿತ ಜನಗಣತಿಯನ್ನು ತಿರಸ್ಕರಿಸಿಲ್ಲ. ಜಾತಿ ಆಧಾರಿತ ಜನಗಣತಿ ಇಂದಿನ ಅಗತ್ಯವಾಗಿದೆ. ನಾವು ಅದನ್ನು ಮುಂದಕ್ಕೆ ಕೊಂಡೊಯ್ಯುತ್ತೇವೆ. ಯಾವುದೇ ಪೂರ್ವ ಷರತ್ತುಗಳಿಲ್ಲ. ಬೇಷರತ್ ಬೆಂಬಲವಿದೆ. ಆದರೆ ಬಿಹಾರಕ್ಕೆ ವಿಶೇಷ ಸ್ಥಾನಮಾನ ಸಿಗಬೇಕು ಎಂಬುದು ನಮ್ಮ ಮನಸ್ಸಲ್ಲಿದೆ ಎಂದರು. ಇದನ್ನೂ ಓದಿ: ರಾಹುಲ್ ಗಾಂಧಿಗೆ ವಿಪಕ್ಷ ನಾಯಕನ ಸ್ಥಾನ?

  • ಅಗ್ನಿವೀರ್ ತರಬೇತಿ ಪಡೆಯುತ್ತಿದ್ದ ಯುವತಿ ಹಾಸ್ಟೆಲ್‌ನಲ್ಲಿ ಆತ್ಮಹತ್ಯೆ

    ಅಗ್ನಿವೀರ್ ತರಬೇತಿ ಪಡೆಯುತ್ತಿದ್ದ ಯುವತಿ ಹಾಸ್ಟೆಲ್‌ನಲ್ಲಿ ಆತ್ಮಹತ್ಯೆ

    ಮುಂಬೈ: ಅಗ್ನಿವೀರ್ (Agniveer) ತರಬೇತಿ ಪಡೆಯುತ್ತಿದ್ದ 20 ವರ್ಷದ ಯುವತಿ (Woman) ಮುಂಬೈನ ಹಾಸ್ಟೆಲ್ ಕೊಠಡಿಯಲ್ಲಿ ಆತ್ಮಹತ್ಯೆ (Suicide) ಮಾಡಿಕೊಂಡಿರುವುದಾಗಿ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

    ಯುವತಿ ಕೇರಳದ ನಿವಾಸಿಯಾಗಿದ್ದು ನೌಕಾಪಡೆ ತರಬೇತಿ ಪಡೆಯಲು 2 ವಾರಗಳ ಹಿಂದೆ ಮುಂಬೈಗೆ ಬಂದಿದ್ದಳು. ಸೋಮವಾರ ಬೆಳಗ್ಗೆ ಯುವತಿ ಹಾಗೂ ಆಕೆಯ ಗೆಳೆಯ ಜಗಳವಾಡಿಕೊಂಡಿದ್ದು, ಬಳಿಕ ಆತ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ. ಇದಾದ ಕೆಲವೇ ಹೊತ್ತಿನಲ್ಲಿ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಯುವತಿಯ ಶವ ಮಲಾಡ್ ವೆಸ್ಟ್‌ನ ಐಎನ್‌ಎಸ್ ಹಮ್ಲಾ ಬೇಸ್‌ನಲ್ಲಿರುವ ಆಕೆಯ ಕೋಠಡಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ವೈದ್ಯರಿಗೆ ಮಾಹಿತಿ ನೀಡಿದ ಬಳಿಕ ಆಕೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಮಾಳವಾನಿ ಪೊಲೀಸರು ಇದನ್ನು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ಬ್ಯಾಟ್‌ನಲ್ಲಿ ಪ್ಯಾಲೆಸ್ತೀನ್‌ ಚಿತ್ರ ಪ್ರದರ್ಶಿಸಿದ ಪಾಕ್‌ ಬ್ಯಾಟರ್‌ಗೆ ದಂಡ

    ಅಗ್ನಿಪಥ ಯೋಜನೆಯಡಿ ‘ಅಗ್ನಿವೀರ್’ ಸೈನಿಕರು 4 ವರ್ಷಗಳ ಕಾಲ ಸೇವೆ ಸಲ್ಲಿಸುತ್ತಾರೆ. ಇದರಲ್ಲಿ 6 ತಿಂಗಳ ತರಬೇತಿ ಮತ್ತು ಮೂರುವರೆ ವರ್ಷಗಳ ಕಾಲ ಕರ್ತವ್ಯದಲ್ಲಿರಬೇಕು. ಇದರ ಬಳಿಕ ಅವರು ಸಶಸ್ತ್ರ ಪಡೆಗಳಲ್ಲಿ ಮುಂದುವರಿಯಲು ಅರ್ಜಿ ಸಲ್ಲಿಸಬಹುದು. ಇದನ್ನೂ ಓದಿ: ಗ್ರೇಟ್‌ ಸುರಂಗ ಆಪರೇಷನ್‌ – ಸಾವು ಗೆದ್ದ 41 ಕಾರ್ಮಿಕರು, ಯಾವುದೇ ಕ್ಷಣದಲ್ಲಿ ಹೊರ ಬರುವ ಸಾಧ್ಯತೆ

  • ಸಿಯಾಚಿನ್‌ನಲ್ಲಿ ಹುತಾತ್ಮನಾದ ಅಗ್ನಿವೀರನ ಕುಟುಂಬಕ್ಕೆ 10 ಲಕ್ಷ ಪರಿಹಾರ ಘೋಷಿಸಿದ ಮಹಾರಾಷ್ಟ್ರ ಸಿಎಂ

    ಸಿಯಾಚಿನ್‌ನಲ್ಲಿ ಹುತಾತ್ಮನಾದ ಅಗ್ನಿವೀರನ ಕುಟುಂಬಕ್ಕೆ 10 ಲಕ್ಷ ಪರಿಹಾರ ಘೋಷಿಸಿದ ಮಹಾರಾಷ್ಟ್ರ ಸಿಎಂ

    ಮುಂಬೈ: ಕಳೆದ ವಾರ ಸಿಯಾಚಿನ್‌ನಲ್ಲಿ (Siachen) ಕರ್ತವ್ಯದ ವೇಳೆ ಹುತಾತ್ಮನಾದ ಅಗ್ನಿವೀರ್ (Agniveer) ಅಕ್ಷಯ್ ಲಕ್ಷ್ಮಣ್ ಗವಾಟೆ (Akshay Laxman Gawate) ಕುಟುಂಬಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ಅವರು 10 ಲಕ್ಷ ರೂ. ನೆರವು ಘೋಷಿಸಿದ್ದಾರೆ.

    ಮಹಾರಾಷ್ಟ್ರದ (Maharashtra) ಬುಲ್ಧಾನಾ ಜಿಲ್ಲೆಯ ಪಿಂಪಲ್‌ಗಾಂವ್ ಸರಾಯ್ ಮೂಲದ ಗವಾಟೆ ಕಳೆದ ವಾರ ಸಿಯಾಚಿನ್‌ನಲ್ಲಿ ಕರ್ತವ್ಯದ ವೇಳೆ ಹುತಾತ್ಮರಾಗಿದ್ದರು. ಅಗ್ನಿವೀರನ ಅಗಲಿಕೆಗೆ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಮತ್ತು ಪಡೆಯ ಎಲ್ಲಾ ಶ್ರೇಣಿಗಳು ಸಂತಾಪ ಸೂಚಿಸಿದ್ದಾರೆ. ಇದೀಗ ಗವಾಟೆ ನಿಧನದಿಂದ ದುಃಖತಪ್ತ ಕುಟುಂಬಕ್ಕೆ ಮಹಾರಾಷ್ಟ್ರ ಮುಖ್ಯ ಮಂತ್ರಿ ಶಿಂಧೆ ಸಂತಾಪ ಸೂಚಿಸಿದ್ದು, 10 ಲಕ್ಷ ರೂ. ಪರಿಹಾರ ಘೋಷಿಸಿರುವುದಾಗಿ ಸಚಿವಾಲಯ ತಿಳಿಸಿದೆ.

    ಅಗ್ನಿವೀರನ ಅಗಲಿಕೆಗೆ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಕಾದಾಡಿಕೊಂಡಿವೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗವಾಟೆ ನಿಧನಕ್ಕೆ ಸಂತಾಪ ಸೂಚಿಸಿದ್ದು, ಅಗ್ನಿವೀರ್ ದೇಶದ ವೀರರನ್ನು ಅವಮಾನಿಸುವ ಯೋಜನೆ. ಅಗ್ನಿವೀರ್ ಹುತಾತ್ಮರ ಕುಟುಂಬಗಳಿಗೆ ಯಾವುದೇ ಗ್ರಾಚ್ಯೂಟಿ, ಮಿಲಿಟರಿ ಸೌಲಭ್ಯಗಳು ಅಥವಾ ಪಿಂಚಣಿಗಳನ್ನು ವಿಸ್ತರಿಸಲಾಗಿಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಅಗ್ನಿವೀರರಿಗೆ ಮಿಲಿಟರಿ ಸೌಲಭ್ಯಗಳಿಲ್ಲ- ರಾಹುಲ್‌ ಆರೋಪಕ್ಕೆ ಸೇನೆಯಿಂದ ಪಟ್ಟಿ ರಿಲೀಸ್‌

    ಈ ಆರೋಪಕ್ಕೆ ಭಾರತೀಯ ಸೇನೆ ಪ್ರತಿಕ್ರಿಯೆ ನೀಡಿತ್ತು. ಅಗ್ನಿವೀರರಿಗೆ ಒಟ್ಟು 1.13 ಕೋಟಿ ರೂ. ಪರಿಹಾರ ಸಿಗುತ್ತದೆ ಎಂದು ತಿಳಿಸುವ ಮೂಲಕ ರಾಹುಲ್ ಗಾಂಧಿ ಮಾಡಿರುವ ಆರೋಪ ಸುಳ್ಳು ಎಂದು ಸೇನೆ ಪರೋಕ್ಷವಾಗಿ ಹೇಳಿತ್ತು. ಇದನ್ನೂ ಓದಿ: ಕೋರಮಂಗಲ ಕೆಫೆಯಲ್ಲಿ ಅಗ್ನಿ ಅವಘಡ – 54 ಪಬ್‌ಗಳಿಗೆ ಬಿಬಿಎಂಪಿಯಿಂದ ಬೀಗ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಗ್ನಿವೀರರಿಗೆ ಮಿಲಿಟರಿ ಸೌಲಭ್ಯಗಳಿಲ್ಲ- ರಾಹುಲ್‌ ಆರೋಪಕ್ಕೆ ಸೇನೆಯಿಂದ ಪಟ್ಟಿ ರಿಲೀಸ್‌

    ಅಗ್ನಿವೀರರಿಗೆ ಮಿಲಿಟರಿ ಸೌಲಭ್ಯಗಳಿಲ್ಲ- ರಾಹುಲ್‌ ಆರೋಪಕ್ಕೆ ಸೇನೆಯಿಂದ ಪಟ್ಟಿ ರಿಲೀಸ್‌

    ನವದೆಹಲಿ: ಕರ್ತವ್ಯದಲ್ಲಿದ್ದಾಗ ಹುತಾತ್ಮರಾದ ಅಗ್ನಿವೀರರಿಗೆ (Agniveer) ಸರ್ಕಾರದಿಂದ ಯಾವುದೇ ಹಣ ಸಿಗುವುದಿಲ್ಲ ಎಂದು ಆರೋಪಿಸಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಆರೋಪಕ್ಕೆ ಭಾರತೀಯ ಸೇನೆ (Indian Army) ಪ್ರತಿಕ್ರಿಯೆ ನೀಡಿದೆ.

    ಅಗ್ನಿವೀರರಿಗೆ ಒಟ್ಟು 1.13 ಕೋಟಿ ರೂ. ಪರಿಹಾರ ಸಿಗುತ್ತದೆ ಎಂದು ತಿಳಿಸುವ ಮೂಲಕ ರಾಹುಲ್ ಗಾಂಧಿ ಮಾಡಿರುವ ಆರೋಪ ಸುಳ್ಳು ಎಂದು ಸೇನೆ ಪರೋಕ್ಷವಾಗಿ ಹೇಳಿದೆ. ಇದನ್ನೂ ಓದಿ: ರೇವಣ್ಣ ಆಪ್ತನ ಕಿಡ್ನ್ಯಾಪ್ ಯತ್ನ ಕೇಸ್ – ಇನ್ಸ್‌ಪೆಕ್ಟರ್‌ಗೆ ಭೂಗತ ಪಾತಕಿ ಲಿಂಕ್

    ರಾಹುಲ್‌ ಗಾಂಧಿ ಹೇಳಿದ್ದೇನು?
    ಸಿಯಾಚಿನ್‌ನಲ್ಲಿ ಹುತಾತ್ಮರಾದ ಅಗ್ನಿವೀರ್ ಅಕ್ಷಯ್ ಲಕ್ಷ್ಮಣ್‌ಗೆ ಸಂತಾಪ ಸೂಚಿಸಿದ್ದ ರಾಹುಲ್ ಗಾಂಧಿ, ಒಬ್ಬ ಯೋಧ ಹುತಾತ್ಮರಾಗಿದ್ದಾರೆ. ಆದರೆ ಅವರಿಗೆ ಯಾವುದೇ ಗ್ರಾಚ್ಯೂಟಿ ಇಲ್ಲ. ಮಿಲಿಟರಿ ಸೌಲಭ್ಯಗಳಿಲ್ಲ, ಕುಟುಂಬಕ್ಕೆ ಪಿಂಚಣಿ ಇಲ್ಲ ಎಂದು ಆರೋಪಿಸಿದ್ದರು. ಅಷ್ಟೇ ಅಲ್ಲದೇ ಭಾರತದ ವೀರರನ್ನು ಅಪಮಾನಿಸುವ ಯೋಜನೆ ಎಂದು ಕಿಡಿಕಾರಿದರು.

    ಎಡಿಜಿಪಿ ಇಂಡಿಯನ್‌ ಆರ್ಮಿ (ADGP Indian Army) ಎಕ್ಸ್‌ನಲ್ಲಿ ಕರ್ತವ್ಯದಲ್ಲಿರುವ ಅಗ್ನಿವೀರರಿಗೆ ಸರ್ಕಾರದಿಂದ ಸಿಗುವ ಪರಿಹಾರದ ವಿವರಗಳನ್ನು ಪಟ್ಟಿ ಮಾಡಿ ತಿಳಿಸಿದೆ.

    ಕಾರಕೋರಂ ಶ್ರೇಣಿಯಲ್ಲಿ ಸುಮಾರು 20,000 ಅಡಿ ಎತ್ತರದಲ್ಲಿರುವ ಸಿಯಾಚಿನ್ ಹಿಮನದಿಯು ವಿಶ್ವದ ಅತಿ ಎತ್ತರದ ಮಿಲಿಟರಿ ವಲಯವಾಗಿದೆ. ಅಲ್ಲಿ ಸೈನಿಕರು ಹಿಮಪಾತ ಮತ್ತು ಶೀತ ಗಾಳಿಯೊಂದಿಗೆ ಹೋರಾಡಬೇಕಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಿಯಾಚಿನ್‌ನಲ್ಲಿ ಕರ್ತವ್ಯದಲ್ಲಿದ್ದ ಅಗ್ನಿವೀರ್‌ ಹುತಾತ್ಮ – ಸೇನೆಯಿಂದ ಗೌರವ

    ಸಿಯಾಚಿನ್‌ನಲ್ಲಿ ಕರ್ತವ್ಯದಲ್ಲಿದ್ದ ಅಗ್ನಿವೀರ್‌ ಹುತಾತ್ಮ – ಸೇನೆಯಿಂದ ಗೌರವ

    ನವದೆಹಲಿ: ಸಿಯಾಚಿನ್‌ನಲ್ಲಿ (Siachen) ಕರ್ತವ್ಯದ ವೇಳೆ ಅಗ್ನಿವೀರ್ (Agniveer) ಹುತಾತ್ಮರಾಗಿದ್ದಾರೆ ಎಂದು ಸೇನೆಯ ಲೇಹ್ ಪ್ರಧಾನ ಕಚೇರಿಯ ಫೈರ್ ಅಂಡ್ ಫ್ಯೂರಿ ಕಾರ್ಪ್ಸ್ ಭಾನುವಾರ ತಿಳಿಸಿದೆ.

    ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಮತ್ತು ಸೇನಾ ಪಡೆ, ಮಹಾರಾಷ್ಟ್ರ ಮೂಲದ ಅಗ್ನಿವೀರ್ ಗವಟೆ ಅಕ್ಷಯ್ ಲಕ್ಷ್ಮಣ್ ಅವರ ನಿಧನಕ್ಕೆ ಸಂತಾಪ ಸೂಚಿಸಿದರು. ಇದನ್ನೂ ಓದಿ: Israel Hamas War: ಸಂಕಷ್ಟದಲ್ಲಿರುವ ಪ್ಯಾಲೆಸ್ತೀನಿಯರಿಗೆ ಭಾರತದಿಂದ ಮಾನವೀಯ ನೆರವು

    ಕಾರಕೋರಂ ಶ್ರೇಣಿಯಲ್ಲಿ ಸುಮಾರು 20,000 ಅಡಿ ಎತ್ತರದಲ್ಲಿರುವ ಸಿಯಾಚಿನ್ ಹಿಮನದಿಯು ವಿಶ್ವದ ಅತಿ ಎತ್ತರದ ಮಿಲಿಟರಿ ವಲಯವಾಗಿದೆ. ಅಲ್ಲಿ ಸೈನಿಕರು ಹಿಮಪಾತ ಮತ್ತು ಶೀತ ಗಾಳಿಯೊಂದಿಗೆ ಹೋರಾಡಬೇಕಿದೆ. ಲಕ್ಷ್ಮಣ್ ಸಾವಿನ ನಿಖರ ಮಾಹಿತಿ ತಿಳಿದುಬಂದಿಲ್ಲ.

    ಅಗ್ನಿವೀರ್ (ಆಪರೇಟರ್) ಗವಟೆ ಅಕ್ಷಯ್ ಲಕ್ಷ್ಮಣ್ ಅವರ ಅತ್ಯುನ್ನತ ತ್ಯಾಗಕ್ಕೆ ನಮಸ್ಕರಿಸುತ್ತೇವೆ. ಕುಟುಂಬಕ್ಕೆ ತೀವ್ರವಾದ ಸಂತಾಪಗಳು ಎಂದು ಎಕ್ಸ್‌ನಲ್ಲಿ ಫೈರ್ ಅಂಡ್ ಫ್ಯೂರಿ ಕಾರ್ಪ್ಸ್ ಪೋಸ್ಟ್‌ ಮಾಡಿದೆ. ಇದನ್ನೂ ಓದಿ: ಗಾರ್ಬಾ ನೃತ್ಯದಲ್ಲಿ ತೊಡಗಿದ್ದವರಿಗೆ ಹೃದಯಾಘಾತ – 10 ಸಾವು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಗ್ನಿವೀರ್ ಪರೀಕ್ಷೆಯಲ್ಲಿ ಫೇಲ್‌- ಸೇನಾ ಆಕಾಂಕ್ಷಿ ಆತ್ಮಹತ್ಯೆ

    ಅಗ್ನಿವೀರ್ ಪರೀಕ್ಷೆಯಲ್ಲಿ ಫೇಲ್‌- ಸೇನಾ ಆಕಾಂಕ್ಷಿ ಆತ್ಮಹತ್ಯೆ

    ಡೆಹ್ರಾಡೂನ್: ಅಗ್ನಿವೀರ್ ನೇಮಕಾತಿ ಪರೀಕ್ಷೆಯಲ್ಲಿ ಆಯ್ಕೆಯಾಗದ ಹಿನ್ನೆಲೆಯಲ್ಲಿ ಸೇನಾ ಆಕಾಂಕ್ಷಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರಾಖಂಡದಲ್ಲಿ ನಡೆದಿದೆ.

    ಮೃತರನ್ನು ಪೌರಿ ಗರ್ವಾಲ್ ಜಿಲ್ಲೆಯ ನೌಗಾಂವ್ ಕಮಂದ ಗ್ರಾಮದ ನಿವಾಸಿ ಸುಮಿತ್ ಕುಮಾರ್(23) ಎಂದು ಗುರುತಿಸಲಾಗಿದೆ. ಅಗ್ನಿವೀರ್ ನೇಮಕಾತಿ ಆಯ್ಕೆಯಲ್ಲಿ ಪಾಲ್ಗೊಳ್ಳಲು ಕೋಟ್‍ದ್ವಾರಕ್ಕೆ ತೆರಳಿದ್ದರು. ಆದರೆ ಅಲ್ಲಿ ವಿಫಲರಾದರು. ಮುಂದಿನ ಬಾರಿ ವಯಸ್ಸಿನ ಕಾರಣದಿಂದ ಮತ್ತೆ ಅವಕಾಶವನ್ನು ಪಡೆಯಲು ಸಾಧ್ಯವಿಲ್ಲ ಎಂದು ಸುಮಿತ್ ಮನನೊಂದಿದ್ದಾರೆ.

    ಈ ಹಿನ್ನೆಲೆಯಲ್ಲಿ ಮನೆಗೆ ಬಂದ ಸುಮಿತ್ ಯಾರೊಂದಿಗೂ ಮಾತನಾಡದೇ ತನ್ನ ಕೋಣೆಗೆ ಹೋಗಿ ಬಾಗಿಲನ್ನು ಹಾಕಿಕೊಂಡಿದ್ದರು. ಮನೆಯ ಸದಸ್ಯರು ಆಯ್ಕೆ ಆಗದಿದ್ದಕ್ಕೆ ಬೇಸರ ಮಾಡಿಕೊಂಡಿರಬೇಕು. ಸ್ವಲ್ಪ ಸಮಯದ ನಂತರ ಸರಿ ಹೋಗುತ್ತಾನೆ ಎಂದುಕೊಂಡಿದ್ದಾರೆ. ಇದನ್ನೂ ಓದಿ: ಮಕ್ಕಳ ಬುದ್ಧಿ ಕೆಡಿಸಿ ದೂರು: ಮುರುಘಾ ಮಠದ ವಕೀಲ ವಿಶ್ವನಾಥಯ್ಯ

    ಆದರೆ ಮಾರನೇ ದಿನವಾದರೂ ಬಾಗಿಲು ತೆಗೆಯದಿದ್ದನ್ನು ಗಮನಿಸಿದ ಕುಟುಂಬಸ್ಥರು ಸುಮಿತ್ ರೂಮ್‍ನ ಬಾಗಿಲನ್ನು ಒಡೆದಿದ್ದಾರೆ. ಆಗ ಸುಮಿತ್‍ನ ಮೃತದೇಹ ಸೀಲಿಂಗ್ ಫ್ಯಾನ್‍ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.

    ಅಗ್ನಿಪಥ್ ಯೋಜನೆಯಡಿ ಗರ್ವಾಲ್ ರೈಫಲ್ಸ್ ಅಗ್ನಿವೀರ್ ಆರ್ಮಿ ನೇಮಕಾತಿ ಪ್ರಕ್ರಿಯೆ ಆ. 19 ರಿಂದ ಆ. 31 ರವರೆಗೆ ಕೋಟ್‍ದ್ವಾರದಲ್ಲಿ ನಡೆಯುತ್ತಿದೆ. ಗರ್ವಾಲ್ ವಿಭಾಗದ ಏಳು ಜಿಲ್ಲೆಗಳಿಂದ 63,000ಕ್ಕೂ ಹೆಚ್ಚು ಸೇನಾ ಆಕಾಂಕ್ಷಿಗಳು ನೋಂದಾಯಿಸಿಕೊಂಡಿದ್ದಾರೆ. ಇದನ್ನೂ ಓದಿ: 54 ವರ್ಷ, ಮಾಡಿರೋದು 164 + ಕಳ್ಳತನ – ಭೂಪನಿಗಿದ್ದಾರೆ ಮೂವರು ಹೆಂಡ್ತಿರು, 7 ಮಕ್ಳು

    Live Tv
    [brid partner=56869869 player=32851 video=960834 autoplay=true]

  • ಬೆಂಗಳೂರಿನಲ್ಲಿ ಮಹಿಳೆಯರಿಗೆ ಅಗ್ನಿವೀರ್‌ ನೇಮಕಾತಿ ಪ್ರಕ್ರಿಯೆ – ಅರ್ಹತೆ ಏನು? ಪರೀಕ್ಷೆ ಹೇಗಿರುತ್ತೆ?

    ಬೆಂಗಳೂರಿನಲ್ಲಿ ಮಹಿಳೆಯರಿಗೆ ಅಗ್ನಿವೀರ್‌ ನೇಮಕಾತಿ ಪ್ರಕ್ರಿಯೆ – ಅರ್ಹತೆ ಏನು? ಪರೀಕ್ಷೆ ಹೇಗಿರುತ್ತೆ?

    ನವದೆಹಲಿ: ಅಗ್ನಿಪಥ್ ಯೋಜನೆಯಡಿ ಕರ್ನಾಟಕದಲ್ಲಿ ನವೆಂಬರ್ 1ರಿಂದ 3ರವರೆಗೆ ಮಿಲಿಟರಿ ಪೊಲೀಸರ ಸಾಮಾನ್ಯ ಕರ್ತವ್ಯ ವರ್ಗದ ಮಹಿಳಾ ಅಭ್ಯರ್ಥಿಗಳ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ.

    ಈ ನೇಮಕಾತಿ ಪ್ರಕ್ರಿಯೆಯು ಪ್ರಧಾನ ಕಛೇರಿ ನೇಮಕಾತಿ ವಲಯದ ಆಶ್ರಯದಲ್ಲಿ ಬೆಂಗಳೂರಿನ ಮಾಣಿಕ್‌ಷಾ ಪರೇಡ್ ಮೈದಾನದಲ್ಲಿ ನಡೆಯಲಿದೆ ರಕ್ಷಣಾ ಇಲಾಖೆ ತಿಳಿಸಿದೆ. ಕರ್ನಾಟಕ, ಕೇರಳ ಮತ್ತು ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪ ಮತ್ತು ಮಾಹೆಯ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

    ಅರ್ಹತೆಗಳೇನು?
    ಅರ್ಜಿ ಸಲ್ಲಿಸುವವರು 17 ವರ್ಷ 5 ತಿಂಗಳು ಮೀರಿರಬೇಕು ಮತ್ತು 23 ವರ್ಷದ ಒಳಗಿನವರಾಗಿರಬೇಕು.  ಅಭ್ಯರ್ಥಿಗಳು 162 ಮೀಟರ್‌ ಎತ್ತರ ಹೊಂದಿರಬೇಕು. 10ನೇ ತರಗತಿ ಪರೀಕ್ಷೆಯನ್ನು ಶೇ.45 ಅಂಕದೊಂದಿಗೆ ಉತ್ತೀರ್ಣರಾಗಿಬೇಕು ಮತ್ತು ಎಲ್ಲ ವಿಷಯದಲ್ಲಿ ಶೇ.35 ಅಂಕ ಪಡೆದಿರಬೇಕು. ಆಗಸ್ಟ್‌ 9 ರಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಸೆಪ್ಟೆಂಬರ್‌ 7ಕ್ಕೆ ಕೊನೆಯಾಗಲಿದೆ. ಇದನ್ನೂ ಓದಿ: ಅಗ್ನಿವೀರರಿಗೆ ಆರಂಭಿಕ ಸಂಬಳ ಎಷ್ಟಿರುತ್ತೆ?

    ಪರೀಕ್ಷೆಯ ಸಮಯದಲ್ಲಿ ಅಭ್ಯರ್ಥಿಗಳು 1.6 ಕಿ.ಮೀ ಓಡಬೇಕಾಗುತ್ತದೆ. 10 ಅಡಿ ಉದ್ದ ಜಿಗಿತ, 3 ಅಡಿ ಎತ್ತರ ಜಿಗಿತದಲ್ಲಿ ತೇರ್ಗಡೆಯಾದವರಿಗೆ ಮೆಡಿಕಲ್‌ ಪರೀಕ್ಷೆ ನಡೆಸಲಾಗುತ್ತದೆ. ಹೆಚ್ಚಿನ ವಿವರಗಳಿಗೆ www.joinindianarmy.nic.in ಭೇಟಿ ನೀಡಬಹುದು.

    Live Tv
    [brid partner=56869869 player=32851 video=960834 autoplay=true]