Tag: ಅಗ್ನಿವೀರ

  • ಗುಂಡು ತಗುಲಿದ ಸ್ಥಿತಿಯಲ್ಲಿ ಅಗ್ನಿವೀರನ ಮೃತದೇಹ ಪತ್ತೆ

    ಗುಂಡು ತಗುಲಿದ ಸ್ಥಿತಿಯಲ್ಲಿ ಅಗ್ನಿವೀರನ ಮೃತದೇಹ ಪತ್ತೆ

    ಶ್ರೀನಗರ: ಸೇನಾ ಘಟಕದ (Indian Army) ಕಾವಲಿಗೆ ನೇಮಿಸಿದ್ದ ಅಗ್ನಿವೀರರೊಬ್ಬರು (Agniveer) ಗುಂಡಿನ ಗಾಯಗಳಿಂದ ಅನುಮಾನಾಸ್ಪದವಾಗಿ ಸಾವಿಗೀಡಾದ ಘಟನೆ ಜಮ್ಮು ಮತ್ತು ಕಾಶ್ಮೀರದ (Jammu and Kashmir) ಅಖ್ನೂರ್‌ನಲ್ಲಿ ಸಂಭವಿಸಿದೆ.

    ಅಗ್ನಿವೀರನ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿಲ್ಲ. ಅಗ್ನಿವೀರ್‌ಗೆ ಹೇಗೆ ಗುಂಡು ತಗುಲಿದೆ ಎಂಬುದು ಇನ್ನೂ ಖಚಿತವಾಗಿಲ್ಲ. ಆತನ ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಹಾರಿಸಲ್ಪಟ್ಟಿದೆಯೇ? ಅಥವಾ ಆತ್ಮಹತ್ಯೆಯೇ? ಅಥವಾ ಘಟಕದೊಳಗೆ ಇದ್ದ ಬೇರೆಯ ಸಿಬ್ಬಂದಿಯಿಂದ ಗುಂಡು ಹಾರಿಸಲಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೇ ಓದಿ: 55 ವರ್ಷದ ವ್ಯಕ್ತಿಯಿಂದ 3ರ ಕಂದಮ್ಮನ ಮೇಲೆ ಅತ್ಯಾಚಾರಕ್ಕೆ ಯತ್ನ!

    ಮಂಗಳವಾರ ಸಂಜೆಯ ವೇಳೆಗೆ ಸೇನಾ ಘಟಕದಲ್ಲಿದ್ದ ಇತರರು ಗುಂಡಿನ ಶಬ್ದ ಕೇಳಿ ಹೊರಗೆ ಬಂದಾಗ ಅಗ್ನಿವೀರ ಗಾಯಗೊಂಡು ಬಿದ್ದಿರುವುದನ್ನು ನೋಡಿದ್ದಾರೆ. ಕೂಡಲೇ ಅವರನ್ನು ಹತ್ತಿರದ ಸೇನಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

    ಘಟನೆಯ ಬಗ್ಗೆ ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೇ ಓದಿ: ಸಮಾಜ ಸೇವೆಗೆ ಹೆಸರಾಗಿದ್ದ ಕಾಪುವಿನ ಲೀಲಾಧರ ಶೆಟ್ಟಿ ದಂಪತಿ ಆತ್ಮಹತ್ಯೆಗೆ ಶರಣು

  • ಯಾವ ದೇಶದಲ್ಲಿ ಸೈನಿಕ ಸೇವೆ ಕಡ್ಡಾಯ? – ಟೂರ್ ಆಫ್ ಡ್ಯೂಟಿ ಎಲ್ಲಿದೆ?

    ಯಾವ ದೇಶದಲ್ಲಿ ಸೈನಿಕ ಸೇವೆ ಕಡ್ಡಾಯ? – ಟೂರ್ ಆಫ್ ಡ್ಯೂಟಿ ಎಲ್ಲಿದೆ?

    ನವದೆಹಲಿ: ಭಾರತದಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ಸೇನೆಯಲ್ಲಿ ಅಲ್ಪ ಕಾಲಾವಧಿಗೆ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಮುಂದಾಗಿದೆ. ಆದ್ರೆ ಜಗತ್ತಿನ ಕೆಲವು ದೇಶಗಳಲ್ಲಿ ಇದು ಹೊಸದಲ್ಲ. ಹಲವು ದೇಶಗಳಲ್ಲಿ ಈಗಾಗಲೇ ಈ ರೀತಿಯ ಯೋಜನೆ ಜಾರಿಯಾಗಿದೆ.

    ಇಸ್ರೇಲ್
    ಪುರುಷರು ಕನಿಷ್ಠ 3 ವರ್ಷ, ಮಹಿಳೆಯರು ಕನಿಷ್ಠ 2 ವರ್ಷ ಸೇನೆಯಲ್ಲಿ ಕೆಲಸ ಮಾಡುವುದು ಕಡ್ಡಾಯ. ವಿದೇಶಗಳಲ್ಲಿ ಇರುವ ಪೌರರಿಗೂ ಇದು ಅನ್ವಯವಾಗುತ್ತದೆ. ವಲಸೆಗಾರರಿಗೆ, ಕೆಲ ಅನ್ಯ ಧರ್ಮೀಯರಿಗೆ, ರೋಗಿಗಳಿಗೆ ವಿನಾಯಿತಿ ನೀಡಲಾಗಿದೆ. ಇದನ್ನೂ ಓದಿ: ಅಗ್ನಿಪಥ್ ಯೋಜನೆ ವಿರೋಧಿಸಿ ಬೆಳಗಾವಿ ಬಂದ್ ಕರೆ – ರ‍್ಯಾಪಿಡ್ ಆಕ್ಷನ್ ಫೋರ್ಸ್‌ನಿಂದ ಪಂಥ ಸಂಚಲನ 

    ದಕ್ಷಿಣ ಕೊರಿಯಾ
    ಸದೃಢ ಪುರುಷರಿಗೆ ಸೇನೆ ಕರ್ತವ್ಯ ಕಡ್ಡಾಯ. 21 ತಿಂಗಳು ಭೂಸೇನೆ, 23 ತಿಂಗಳು ನೌಕಾಸೇನೆ, 24 ತಿಂಗಳು ವಾಯುಸೇನೆಯಲ್ಲಿ ಕೆಲಸ ಮಾಡಬೇಕು.

    ಉತ್ತರ ಕೊರಿಯಾ
    ದೇಶದ ಪ್ರಜೆಗಳು ಸೇನೆ ಸೇರುವುದು ಕಡ್ಡಾಯ. ಪುರುಷರು 11 ವರ್ಷ, ಮಹಿಳೆಯರು 7 ವರ್ಷ ಸೇನೆಯಲ್ಲಿ ಕೆಲಸ ಕಡ್ಡಾಯ.

    ಎರ್ರಿಟ್ರಿಯಾ
    ಪುರುಷರು, ಅವಿವಾಹಿತ ಯುವತಿಯರು ಕನಿಷ್ಠ 18 ತಿಂಗಳು ಸೇನೆಯಲ್ಲಿರಬೇಕು(ಇದು ಹೆಚ್ಚಾಗಲೂಬಹುದು).

    ಸ್ವಿಟ್ಜರ್‌ಲ್ಯಾಂಡ್
    18-34 ವರ್ಷದೊಳಗಿನ ಪುರುಷರಿಗೆ ಸೈನ್ಯದಲ್ಲಿ ಕೆಲಸ ಕಡ್ಡಾಯ. 21 ವರ್ಷಗಳ ಕಾಲ ಕಡ್ಡಾಯ ಕೆಲಸ ಮಾಡಬೇಕು. ಪ್ರತಿ ವರ್ಷಕ್ಕೊಮ್ಮೆ ಸೈನಿಕ ಶಿಕ್ಷಣ. ಇದನ್ನೂ ಓದಿ: ಮುಸ್ಲಿಂ ಹುಡುಗಿಯರು 16ನೇ ವಯಸ್ಸಿನಲ್ಲಿ ಮದುವೆಯಾಗಬಹುದು: ಹೈಕೋರ್ಟ್ 

    ಬ್ರೆಜಿಲ್
    ವಯಸ್ಕ ಪುರುಷರು 10-12 ತಿಂಗಳು ಸೇನೆಯಲ್ಲಿರುವುದು ಕಡ್ಡಾಯ(ಓದುತ್ತಿದ್ದರೆ ಶಿಕ್ಷಣ ಮುಗಿದ ಕೂಡಲೇ ಸೇನೆ ಸೇರಬೇಕು)

    ಸಿರಿಯಾ
    ಸೇನೆಯಲ್ಲಿ ಕೆಲಸ ಮಾಡಿಲ್ಲ ಎಂದರೇ ಉದ್ಯೋಗ ಸಿಗಲ್ಲ. ಸರ್ವೀಸ್ ತಪ್ಪಿಸಿಕೊಂಡವರಿಗೆ 15 ವರ್ಷದವರೆಗೂ ಜೈಲು.

    ಇದೇ ರೀತಿ, ಜಾರ್ಜಿಯಾ, ಲಿಥುವೇನಿಯಾ, ಸ್ವೀಡನ್‍ನಲ್ಲಿಯೂ ಕಡ್ಡಾಯ ಸೈನಿಕ ಸೇವೆ ಕಡ್ಡಾಯವಾಗಿದೆ.

    Live Tv

  • ‘ಅಗ್ನಿಪಥ್’ ವಿರೋಧದ ನಡುವೆ ಗೃಹ ಇಲಾಖೆಯಿಂದ ಮಹತ್ವದ ನಿರ್ಧಾರ

    ‘ಅಗ್ನಿಪಥ್’ ವಿರೋಧದ ನಡುವೆ ಗೃಹ ಇಲಾಖೆಯಿಂದ ಮಹತ್ವದ ನಿರ್ಧಾರ

    ನವದೆಹಲಿ: ಅಗ್ನಿಪಥ್ ವಿರೋಧದ ನಡುವೆಯೇ ಕೇಂದ್ರ ಗೃಹ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದ್ದು, ಅಗ್ನಿವೀರರಿಗೆ ಶೇ. 10ರಷ್ಟು ಮೀಸಲಾತಿ ನೀಡಲು ನಿರ್ಧರಿಸಿದೆ.

    ಅಗ್ನಿಪಥ್ ವಿರೋಧಿಸಿ ಈಗಾಗಲೇ ದೇಶದ್ಯಾಂತ ಪ್ರತಿಭಟನೆ ನಡೆಯುತ್ತಿದೆ. ಉತ್ತರಪ್ರದೇಶ, ಬಿಹಾರ ಹಾಗೂ ತೆಲಂಗಾಣಗಳಲ್ಲಿ ಪ್ರತಿಭಟನೆಯೂ ಹಿಂಸಾತ್ಮಕಕ್ಕೆ ತಿರುಗಿದ್ದು, ಪ್ರತಿಭಟನಾಕಾರರು ರೈಲು ಬೋಗಿಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಈ ನಡುವೆ ಕೇಂದ್ರ ಗೃಹ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಇಲಾಖೆ, ಅಗ್ನಿವೀರರಿಗೆ 10% ಮೀಸಲಾತಿ ನೀಡಿದ್ದು, CAPF ಮತ್ತು ಅಸ್ಸಾಂ ರೈಫಲ್ಸ್ ನೇಮಕಾತಿಯಲ್ಲಿ ಮೀಸಲಾತಿ ನೀಡಲಾಗಿದೆ ಎಂದು ತಿಳಿಸಿದೆ.

    ಅಷ್ಟೇ ಅಲ್ಲದೇ ಎರಡು ಪಡೆಗಳ ನೇಮಕಾತಿಯಲ್ಲಿ ಅಗ್ನಿವೀರರಿಗೆ ಗರಿಷ್ಠ ವಯಸ್ಸಿನ ಮಿತಿಯನ್ನು 3 ವರ್ಷಕ್ಕೆ ಸಡಿಲಿಕೆ ಮಾಡಿದ್ದು, ಅಗ್ನಿವೀರ್ ಮೊದಲ ಬ್ಯಾಚ್ ನೇಮಕಾತಿಗೆ 5 ವರ್ಷ ಸಡಿಲಿಸಿದೆ. ಇದನ್ನೂ ಓದಿ: ಲಾಲೂ ಯಾದವ್ ಪಕ್ಷದ ಬೆಂಬಲದೊಂದಿಗೆ ಅಗ್ನಿಪಥ್ ವಿರೋಧಿಸಿ ಇಂದು ಬಿಹಾರ್ ಬಂದ್

    ಅಗ್ನಿಪಥ್‍ಗೆ ಯಾಕಿಷ್ಟು ವಿರೋಧ?: ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಲು ಮತ್ತು ದೇಶದ ಮಿಲಿಟರಿಯಲ್ಲಿ ಸೇವೆ ಮಾಡಲು ಯುವ ಜನರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಅಗ್ನಿಪಥ್ ಯೋಜನೆ ಆರಂಭಿಸಲಾಗಿದೆ ಎಂದು ಸರ್ಕಾರ ತಿಳಿಸಿತ್ತು. ಆದರೆ ಇದು ತಾತ್ಕಾಲಿಕ ಪರಿಹಾರ ಎನ್ನುವುದು ವಿರೋಧಿಸುತ್ತಿರುವವರ ವಾದವಾಗಿದೆ. ಇದನ್ನೂ ಓದಿ: ಇಸ್ರೇಲ್ ಮಾದರಿಯ ʼಅಗ್ನಿಪಥ್ʼ- ಏನಿದು ಯೋಜನೆ, ಯಾಕಿಷ್ಟು ವಿರೋಧ?

    4 ವರ್ಷದ ಬಳಿಕ ವಾಟ್ ನೆಕ್ಸ್ಟ್ ಎನ್ನುವ ಪ್ರಶ್ನೆಯೂ ಮೂಡುತ್ತದೆ. ಇದರ ಬದಲು ಬೇರೆ ವಲಯಕ್ಕೆ ಸೀಮಿತವಾಗುವಂತೆ ಉದ್ಯೋಗಾವಕಾಶವನ್ನು ಮಾಡಬಹುದು. 4 ವರ್ಷದ ಅವಧಿಗೆ ಕೆಲಸ ಮಾಡುವ ಉದ್ದೇಶ ಇದ್ದರೆ ಇವರಲ್ಲಿ ದೇಶ ಸೇವೆಯ ಮನೋಭಾವ ಬರಲ್ಲ ಎನ್ನುವ ವಾದದ ಮೇಲೆ ವಿರೋಧ ವ್ಯಕ್ತವಾಗುತ್ತಿದೆ.

    Live Tv