Tag: ಅಗ್ನಿಪಥ

  • ಅಗ್ನಿಪಥ್‌ನಲ್ಲಿ ಬದಲಾವಣೆ? – ಯೋಜನೆ ಪರಿಷ್ಕರಣೆಗೆ ರಕ್ಷಣಾ ಇಲಾಖೆ ಶಿಫಾರಸು

    ಅಗ್ನಿಪಥ್‌ನಲ್ಲಿ ಬದಲಾವಣೆ? – ಯೋಜನೆ ಪರಿಷ್ಕರಣೆಗೆ ರಕ್ಷಣಾ ಇಲಾಖೆ ಶಿಫಾರಸು

    ನವದೆಹಲಿ: ಅಗ್ನಿವೀರ್ (Agniveers) ಯೋಜನೆಗೆ ಪ್ರತಿಪಕ್ಷಗಳ ಜೊತೆಗೆ ಎನ್‌ಡಿಎ (NDA) ಒಕ್ಕೂಟದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿರುವ ಹೊತ್ತಲ್ಲೇ ಯೋಜನೆಯಲ್ಲಿ ಪರಿಷ್ಕರಣೆ ಮಾಡಲು ರಕ್ಷಣಾ ಇಲಾಖೆ ನಿರ್ಧರಿಸಿದೆ. ಸೇನೆಯಲ್ಲಿ ಅಗ್ನಿವೀರ್ ಸಂಖ್ಯೆ ಹೆಚ್ಚಿಸಲು ವೇತನ ಮತ್ತು ಅರ್ಹತೆಗಳನ್ನು ಬದಲಾವಣೆ ಮಾಡಬಹುದು ಎಂದು ಕೇಂದ್ರ ಸರ್ಕಾರಕ್ಕೆ ಅದು ಶಿಫಾರಸು ಮಾಡಿದೆ.

    ಅಗ್ನಿಪಥ್ ಯೋಜನೆಯಲ್ಲಿ (Agnipath Scheme) ಪರಿಷ್ಕರಣೆ ಮಾಡಿರುವ ಕೇಂದ್ರ ರಕ್ಷಣಾ ಇಲಾಖೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದು, ಪ್ರಸ್ತುತ ಕೇವಲ 25 ಪ್ರತಿಶತದಷ್ಟು ಅಗ್ನಿವೀರರನ್ನು ಅವರ ಆರಂಭಿಕ ಸೇವಾ ಅವಧಿಯ ನಂತರ ಉಳಿಸಿಕೊಳ್ಳಲಾಗಿದೆ. ಮುಂದಿನ ನಾಲ್ಕು ವರ್ಷಗಳಲ್ಲಿ 50% ಅಗ್ನಿವೀರ್ ಸಂಖ್ಯೆ ಹೆಚ್ಚಿಸಬೇಕಿದ್ದು ಬದಲಾವಣೆ ಅಗತ್ಯ ಎಂದು ಹೇಳಿದೆ. ಇದನ್ನೂ ಓದಿ: ರಾಜಸ್ಥಾನ ಪೊಲೀಸ್‌ ಅಧೀನ ಸೇವೆಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿ

    ವಿವಿಧ ಘಟಕಗಳು ಮತ್ತು ರಚನೆಗಳಲ್ಲಿ ನಡೆಸಿದ ಆಂತರಿಕ ಪ್ರತಿಕ್ರಿಯೆ ಮತ್ತು ಸಮೀಕ್ಷೆಗಳನ್ನು ಅನುಸರಿಸಿ ಸೇನೆಯು ಈ ಸಂಭಾವ್ಯ ಬದಲಾವಣೆಗಳ ಕುರಿತು ಸರ್ಕಾರಕ್ಕೆ ಈಗಾಗಲೇ ಶಿಫಾರಸುಗಳನ್ನು ಸಲ್ಲಿಸಿದೆ. ಪ್ರಕ್ರಿಯೆಯು ಸಮಯ ತೆಗೆದುಕೊಳ್ಳಬಹುದಾದರೂ, ಅಗ್ನಿಪಥ್ ಯೋಜನೆಯನ್ನು ಹೆಚ್ಚಿಸಲು ಅಗತ್ಯ ಪರಿಷ್ಕರಣೆಗಳನ್ನು ಮಾಡಲಾಗುವುದು ಎಂದು ಉನ್ನತ ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.

    ಸಶಸ್ತ್ರ ಪಡೆಗಳಲ್ಲಿ ಸಂಖ್ಯೆಯನ್ನು ಹೆಚ್ಚಿಸಲು ಮತ್ತು ರಕ್ಷಣಾ ವಲಯದ ಪಿಂಚಣಿ ಬಿಲ್ ಕಡಿಮೆ ಮಾಡುವ ಪ್ರಯತ್ನದಲ್ಲಿ ಕೇಂದ್ರ ಸರ್ಕಾರವು 2022 ರಲ್ಲಿ ಈ ಯೋಜನೆಯನ್ನು ಪರಿಚಯಿಸಿತು. ಯೋಜನೆಯ ಪ್ರಕಾರ, ಅಗ್ನಿವೀರ್ಸ್ ಎಂದು ಕರೆಯಲ್ಪಡುವ ಸಿಬ್ಬಂದಿಯನ್ನು ನಾಲ್ಕು ವರ್ಷಗಳ ಅಲ್ಪಾವಧಿಯ ಒಪ್ಪಂದದ ಮೇಲೆ ಸೇನೆ, ನೌಕಾಪಡೆ ಮತ್ತು ವಾಯುಪಡೆಗೆ ನೇಮಿಸಿಕೊಳ್ಳಲಾಗುತ್ತದೆ. ಒಟ್ಟು ವಾರ್ಷಿಕ ನೇಮಕಾತಿಗಳಲ್ಲಿ 25% ಸಿಬ್ಬಂದಿಯನ್ನು ಮಾತ್ರ ಶಾಶ್ವತವಾಗಿ ಮುಂದುವರಿಯಲು ಅನುಮತಿಸಲಾಗಿದೆ. ಇದನ್ನೂ ಓದಿ: ಪಕ್ಷಾಂತರ ಮಾಡುವ ಶಾಸಕರಿಗೆ ಪಿಂಚಣಿ ಇಲ್ಲ: ಹಿಮಾಚಲ ವಿಧಾನಸಭೆಯಲ್ಲಿ ಹೊಸ ಮಸೂದೆ ಅಂಗೀಕಾರ

    ಯೋಜನೆ ವಿರುದ್ಧ ಸಾಕಷ್ಟು ಆಕ್ಷೇಪ ಕೇಳಿ ಬಂದಿತ್ತು. ನಾಲ್ಕು ವರ್ಷಗಳ ಬಳಿಕ ಯುವಕರ ಜೀವನ ಅನಿಶ್ಚಿತತೆಯಿಂದ ಕೂಡಿದೆ ಎಂದು ಆರೋಪಿಸಿ ದೇಶದ್ಯಾಂತ ಪ್ರತಿಭಟನೆ ನಡೆಸಲಾಯಿತು. ವಿರೋಧ ಪಕ್ಷಗಳು ಸಾಕಷ್ಟು ಆಕ್ರೋಶ ಹೊರ ಹಾಕಿದ್ದವು. ಚುನಾವಣೆಯಲ್ಲಿ ಬಿಜೆಪಿ ಹಿನ್ನಡೆಗೆ ಇದು ಒಂದು ಕಾರಣ ಎನ್ನಲಾಗಿದ್ದು, ಎನ್‌ಡಿಎ ಒಕ್ಕೂಟದಲ್ಲಿನ ಕೆಲವು ಪಕ್ಷಗಳು ಯೋಜನೆಗೆ ಪರಿಷ್ಕರಣೆಗೆ ಆಗ್ರಹಿಸಿದ್ದವು.

  • ಅಗ್ನಿಪಥ್‌ ಯೋಜನೆ ಹಿಂಪಡೆಯುವ ಪ್ರಶ್ನೆಯೇ ಇಲ್ಲ: ದೋವಲ್‌

    ಅಗ್ನಿಪಥ್‌ ಯೋಜನೆ ಹಿಂಪಡೆಯುವ ಪ್ರಶ್ನೆಯೇ ಇಲ್ಲ: ದೋವಲ್‌

    ನವದೆಹಲಿ: ʼಅಗ್ನಿಪಥ್ʼ ಯೋಜನೆಯನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ರಾಷ್ಟ್ರೀಯ ರಕ್ಷಣಾ ಸಲಹೆಗಾರ (ಎನ್‌ಎಸ್‌ಎ) ಅಜಿತ್‌ ದೋವಲ್‌ ತಿಳಿಸಿದ್ದಾರೆ.

    ಭಾರತವು ವಿಶ್ವದಲ್ಲೇ ಹೆಚ್ಚಿನ ಸಂಖ್ಯೆಯ ಯುವಸಮುದಾಯವನ್ನು ಹೊಂದಿದೆ. ಹೀಗಾಗಿ ಹೆಚ್ಚಿನ ಸರಾಸರಿ ವಯಸ್ಸಿನವರನ್ನು ಸೈನ್ಯದಲ್ಲಿ ಹೊಂದಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

    ಕೃಷಿ ಕಾಯ್ದೆಗಳಂತೆಯೇ ಇದಕ್ಕೂ ಮಂಡಿಯೂರಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಈ ಯೋಜನೆಯು ದಶಕಗಳಿಂದ ಚರ್ಚೆಯಲ್ಲಿದೆ. ರಾಷ್ಟ್ರೀಯ ಹಿತಾಸಕ್ತಿಗಾಗಿ ಒಂದು ಹೆಜ್ಜೆ ಮುಂದೆ ಹೋಗಿ ರಾಜಕೀಯವಾಗಿ ರಿಸ್ಕ್‌ ತೆಗೆದುಕೊಳ್ಳುತ್ತೇನೆಂದು ಪ್ರಧಾನಿ ನರೇಂದ್ರ ಮೋದಿಯಂತಹ ನಾಯಕರು ಮಾತ್ರ ಹೇಳಬಲ್ಲರು ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ರಾಷ್ಟ್ರಪತಿ ಹುದ್ದೆಗೆ ಪ್ರತಿಪಕ್ಷದ ಅಭ್ಯರ್ಥಿಯಾಗಿ ಯಶವಂತ್ ಸಿನ್ಹಾ ಹೆಸರು ಪ್ರಸ್ತಾಪ

    ಪ್ರತಿಭಟನೆ ಹಾಗೂ ಹಿಂಸಾಚಾರ ಕುರಿತು ಮಾತನಾಡಿದ ಅವರು, ಉದ್ಯೋಗಾಕಾಂಕ್ಷಿಗಳು ಈ ರೀತಿ ಮಾಡುವುದಿಲ್ಲ. ನಿಜವಾದ ಆಕಾಂಕ್ಷಿಗಳು ಮನೆಯಲ್ಲಿದ್ದು, ತಯಾರಿ ನಡೆಸುತ್ತಿದ್ದಾರೆ. ಸರ್ಕಾರವನ್ನು ಅಪಖ್ಯಾತಿಗೊಳಿಸಲು ಸಮಾಜದಲ್ಲಿ ಸಂಘರ್ಷವನ್ನು ಬಯಸುವ ಜನರಿದ್ದಾರೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: MVA ಸರ್ಕಾರವನ್ನು ಅಲುಗಾಡಿಸುತ್ತಿರುವ ಏಕನಾಥ್ ಶಿಂಧೆ ಯಾರು?

    ಕೇಂದ್ರ ಸರ್ಕಾರ ಘೋಷಿಸಿರುವ ʼಅಗ್ನಿಪಥ್ʼ ಯೋಜನೆ ವಿರುದ್ಧ ದೇಶಾದ್ಯಂತ ವ್ಯಾಪಕ ಪ್ರತಿಭಟನೆ ನಡೆಯುತ್ತಿದೆ. ಕೂಡಲೇ ಯೋಜನೆಯನ್ನು ಹಿಂಪಡೆಯಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದ್ದು, ಯೋಜನೆಯಲ್ಲಿ ಅಗತ್ಯ ಮಾರ್ಪಾಡಿಗೆ ಕೇಂದ್ರ ಸರ್ಕಾರ ಮುಂದಾಗಿದೆ.

    Live Tv

  • ಯಾವ ದೇಶದಲ್ಲಿ ಸೈನಿಕ ಸೇವೆ ಕಡ್ಡಾಯ? – ಟೂರ್ ಆಫ್ ಡ್ಯೂಟಿ ಎಲ್ಲಿದೆ?

    ಯಾವ ದೇಶದಲ್ಲಿ ಸೈನಿಕ ಸೇವೆ ಕಡ್ಡಾಯ? – ಟೂರ್ ಆಫ್ ಡ್ಯೂಟಿ ಎಲ್ಲಿದೆ?

    ನವದೆಹಲಿ: ಭಾರತದಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ಸೇನೆಯಲ್ಲಿ ಅಲ್ಪ ಕಾಲಾವಧಿಗೆ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಮುಂದಾಗಿದೆ. ಆದ್ರೆ ಜಗತ್ತಿನ ಕೆಲವು ದೇಶಗಳಲ್ಲಿ ಇದು ಹೊಸದಲ್ಲ. ಹಲವು ದೇಶಗಳಲ್ಲಿ ಈಗಾಗಲೇ ಈ ರೀತಿಯ ಯೋಜನೆ ಜಾರಿಯಾಗಿದೆ.

    ಇಸ್ರೇಲ್
    ಪುರುಷರು ಕನಿಷ್ಠ 3 ವರ್ಷ, ಮಹಿಳೆಯರು ಕನಿಷ್ಠ 2 ವರ್ಷ ಸೇನೆಯಲ್ಲಿ ಕೆಲಸ ಮಾಡುವುದು ಕಡ್ಡಾಯ. ವಿದೇಶಗಳಲ್ಲಿ ಇರುವ ಪೌರರಿಗೂ ಇದು ಅನ್ವಯವಾಗುತ್ತದೆ. ವಲಸೆಗಾರರಿಗೆ, ಕೆಲ ಅನ್ಯ ಧರ್ಮೀಯರಿಗೆ, ರೋಗಿಗಳಿಗೆ ವಿನಾಯಿತಿ ನೀಡಲಾಗಿದೆ. ಇದನ್ನೂ ಓದಿ: ಅಗ್ನಿಪಥ್ ಯೋಜನೆ ವಿರೋಧಿಸಿ ಬೆಳಗಾವಿ ಬಂದ್ ಕರೆ – ರ‍್ಯಾಪಿಡ್ ಆಕ್ಷನ್ ಫೋರ್ಸ್‌ನಿಂದ ಪಂಥ ಸಂಚಲನ 

    ದಕ್ಷಿಣ ಕೊರಿಯಾ
    ಸದೃಢ ಪುರುಷರಿಗೆ ಸೇನೆ ಕರ್ತವ್ಯ ಕಡ್ಡಾಯ. 21 ತಿಂಗಳು ಭೂಸೇನೆ, 23 ತಿಂಗಳು ನೌಕಾಸೇನೆ, 24 ತಿಂಗಳು ವಾಯುಸೇನೆಯಲ್ಲಿ ಕೆಲಸ ಮಾಡಬೇಕು.

    ಉತ್ತರ ಕೊರಿಯಾ
    ದೇಶದ ಪ್ರಜೆಗಳು ಸೇನೆ ಸೇರುವುದು ಕಡ್ಡಾಯ. ಪುರುಷರು 11 ವರ್ಷ, ಮಹಿಳೆಯರು 7 ವರ್ಷ ಸೇನೆಯಲ್ಲಿ ಕೆಲಸ ಕಡ್ಡಾಯ.

    ಎರ್ರಿಟ್ರಿಯಾ
    ಪುರುಷರು, ಅವಿವಾಹಿತ ಯುವತಿಯರು ಕನಿಷ್ಠ 18 ತಿಂಗಳು ಸೇನೆಯಲ್ಲಿರಬೇಕು(ಇದು ಹೆಚ್ಚಾಗಲೂಬಹುದು).

    ಸ್ವಿಟ್ಜರ್‌ಲ್ಯಾಂಡ್
    18-34 ವರ್ಷದೊಳಗಿನ ಪುರುಷರಿಗೆ ಸೈನ್ಯದಲ್ಲಿ ಕೆಲಸ ಕಡ್ಡಾಯ. 21 ವರ್ಷಗಳ ಕಾಲ ಕಡ್ಡಾಯ ಕೆಲಸ ಮಾಡಬೇಕು. ಪ್ರತಿ ವರ್ಷಕ್ಕೊಮ್ಮೆ ಸೈನಿಕ ಶಿಕ್ಷಣ. ಇದನ್ನೂ ಓದಿ: ಮುಸ್ಲಿಂ ಹುಡುಗಿಯರು 16ನೇ ವಯಸ್ಸಿನಲ್ಲಿ ಮದುವೆಯಾಗಬಹುದು: ಹೈಕೋರ್ಟ್ 

    ಬ್ರೆಜಿಲ್
    ವಯಸ್ಕ ಪುರುಷರು 10-12 ತಿಂಗಳು ಸೇನೆಯಲ್ಲಿರುವುದು ಕಡ್ಡಾಯ(ಓದುತ್ತಿದ್ದರೆ ಶಿಕ್ಷಣ ಮುಗಿದ ಕೂಡಲೇ ಸೇನೆ ಸೇರಬೇಕು)

    ಸಿರಿಯಾ
    ಸೇನೆಯಲ್ಲಿ ಕೆಲಸ ಮಾಡಿಲ್ಲ ಎಂದರೇ ಉದ್ಯೋಗ ಸಿಗಲ್ಲ. ಸರ್ವೀಸ್ ತಪ್ಪಿಸಿಕೊಂಡವರಿಗೆ 15 ವರ್ಷದವರೆಗೂ ಜೈಲು.

    ಇದೇ ರೀತಿ, ಜಾರ್ಜಿಯಾ, ಲಿಥುವೇನಿಯಾ, ಸ್ವೀಡನ್‍ನಲ್ಲಿಯೂ ಕಡ್ಡಾಯ ಸೈನಿಕ ಸೇವೆ ಕಡ್ಡಾಯವಾಗಿದೆ.

    Live Tv