Tag: ಅಗ್ನಿ

  • ವಿದ್ಯುತ್‌ ಸಬ್‌ಸ್ಟೇಷನ್‌ನಲ್ಲಿ ಅಗ್ನಿ ಅನಾಹುತ – ಲಂಡನ್‌ ಹೀಥ್ರೂ ವಿಮಾನ ನಿಲ್ದಾಣ ದಿನಪೂರ್ತಿ ಬಂದ್‌

    ವಿದ್ಯುತ್‌ ಸಬ್‌ಸ್ಟೇಷನ್‌ನಲ್ಲಿ ಅಗ್ನಿ ಅನಾಹುತ – ಲಂಡನ್‌ ಹೀಥ್ರೂ ವಿಮಾನ ನಿಲ್ದಾಣ ದಿನಪೂರ್ತಿ ಬಂದ್‌

    ಲಂಡನ್‌: ವಿಶ್ವದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ (Airport) ಒಂದಾಗಿರುವ ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣ (London’s Heathrow Airport) ವಿದ್ಯುತ್‌ ಸಮಸ್ಯೆಯಿಂದ (Power Outage) 21 ರ ಮಧ್ಯರಾತ್ರಿಯವರೆಗೆ ವಿಮಾನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ.

    ವಿಮಾನ ನಿಲ್ದಾಣದ ಹತ್ತಿರದಲ್ಲೇ ಇರುವ ವಿದ್ಯುತ್‌ ಸಬ್‌ಸ್ಟೇಷನ್‌ನಲ್ಲಿ ಅಗ್ನಿ ಅನಾಹುತ ಸಂಭವಿಸಿದೆ. ವಿದ್ಯುತ್ ಸಮಸ್ಯೆಯಿಂದ ಸಾವಿರಾರು ವಿಮಾನಗಳ ಸೇವೆಯಲ್ಲಿ ವ್ಯತ್ಯಯವಾಗಿದೆ.

    ನಮ್ಮ ಪ್ರಯಾಣಿಕರು ಮತ್ತು ಸಹೋದ್ಯೋಗಿಗಳ ಸುರಕ್ಷತೆಯ ಸಂಬಂಧ ಶುಕ್ರವಾರ ಪೂರ್ಣ ದಿನ ಹೀಥ್ರೂವನ್ನು ಮುಚ್ಚುವುದನ್ನು ಬಿಟ್ಟು ನಮಗೆ ಬೇರೆ ದಾರಿಯಿಲ್ಲ ಎಂದು ವಿಮಾನ ನಿಲ್ದಾಣ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

    ಫ್ಲೈಟ್‌ರಾಡರ್ 24 ಪ್ರಕಾರ, ಹೀಥ್ರೂ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದ ಕನಿಷ್ಠ 120 ವಿಮಾನಗಳನ್ನು ಬೇರೆ ಸ್ಥಳಗಳಿಗೆ ತಿರುಗಿಸಲಾಗಿದೆ. ಬ್ರಿಟಿಷ್ ಏರ್‌ವೇಸ್, ಎಮಿರೇಟ್ಸ್ ಮತ್ತು ಏರ್ ಇಂಡಿಯಾ ಕಂಪನಿಗಳು ವಿಮಾನ ನಿಲ್ದಾಣಕ್ಕೆ ತೆರಳುವ ಮತ್ತು ಅಲ್ಲಿಂದ ಮರಳುವ ಎಲ್ಲಾ ವಿಮಾನಗಳ ಸೇವೆಯನ್ನು ರದ್ದುಗೊಳಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿವೆ.

    ಈ ಅನಾಹುತದಿಂದ ಪಶ್ಚಿಮ ಲಂಡನ್‌ನ ಜನತೆ ವಿದ್ಯುತ್ ಇಲ್ಲದೇ ಗುರುವಾರ ರಾತ್ರಿ ಕಳೆದಿದ್ದಾರೆ. 16,300 ಕ್ಕೂ ಹೆಚ್ಚು ಮನೆಗಳಿಗೆ ಸಮಸ್ಯೆಯಾಗಿದೆ. ಸಬ್‌ಸ್ಟೇಷನ್‌ನ ಕಾಣಸಿದ ಅಗ್ನಿಯ ಜ್ವಾಲೆ ಹಲವು ಕಿ.ಮೀ ದೂರದವರೆಗೆ ಕಾಣಿಸಿತ್ತು.

    ಲಂಡನ್ ಅಗ್ನಿಶಾಮಕ ದಳ 10 ಅಗ್ನಿಶಾಮಕ ವಾಹನಗಳು ಮತ್ತು ಸುಮಾರು 70 ಅಗ್ನಿಶಾಮಕ ದಳದವರನ್ನು ನಿಯೋಜಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ಮಾಡಿದೆ. ಅಗ್ನಿ ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.

  • ಬೆಂಗಳೂರಿನಲ್ಲಿ ಅಗ್ನಿ ಅವಘಡ – ಕಾರು, ಬೈಕ್‌ ಸೇರಿ 100ಕ್ಕೂ ಹೆಚ್ಚು ವಾಹನಗಳು ಬೆಂಕಿಗಾಹುತಿ

    ಬೆಂಗಳೂರಿನಲ್ಲಿ ಅಗ್ನಿ ಅವಘಡ – ಕಾರು, ಬೈಕ್‌ ಸೇರಿ 100ಕ್ಕೂ ಹೆಚ್ಚು ವಾಹನಗಳು ಬೆಂಕಿಗಾಹುತಿ

    ಬೆಂಗಳೂರು: ಜೆಡಿಎಸ್ ಕಚೇರಿ ಪಕ್ಕದ ಮೈದಾನದಲ್ಲಿ ಅಗ್ನಿ ಅವಘಡ ಸಂಭವಿಸಿ 100ಕ್ಕೂ ಹೆಚ್ಚು ವಾಹನಗಳು ಬೆಂಕಿಗಾಹುತಿಯಾಗಿದೆ.

    ಜಪ್ತಿ ಮಾಡಿದ್ದ ವಾಹನಗಳನ್ನು ಪೊಲೀಸರು ಶೇಷಾದ್ರಿಪುರಂ ಬಳಿಯ ಜಕ್ಕರಾಯನ ಕೆರೆ ಗ್ರೌಂಡ್‌ನಲ್ಲಿ ಪಾರ್ಕ್ ಮಾಡಿದ್ದರು. ಈ ಜಾಗಕ್ಕೆ ಇಂದು ಬೆಳಗ್ಗೆ ಬೆಂಕಿ ಬಿದ್ದಿದೆ.

    ಈಗಾಗಲೇ ಐದು ಕಾರು, ಐದು ಆಟೋ, 50 ಕ್ಕೂ ಹೆಚ್ಚು ಬೈಕ್‌ಗಳು ಸುಟ್ಟು ಹೋಗಿವೆ. ಮತ್ತಷ್ಟು ವಾಹನಗಳಿಗೆ ಬೆಂಕಿ ಹೊತ್ತಿಕೊಳ್ಳುತ್ತಿದ್ದು ನಾಲ್ಕು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಬಂದು ನಂದಿಸುವ ಕೆಲಸ ಮಾಡುತ್ತಿದೆ.

    ಮೈದಾನದಲ್ಲಿ ಹುಲ್ಲು, ಗಿಡ ಬೆಳೆದುಕೊಂಡಿತ್ತು. ಇಂದು ಯಾರೋ ಸಿಗರೇಟ್‌ಗಾಗಿ ಬೆಂಕಿ ಕಡ್ಡಿ ಗೀರಿ ಎಸೆದು ಹೋಗಿದ್ದರಿಂದ ಈ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.

  • ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ಅಗ್ನಿ ಅವಘಡ – ಹೊತ್ತಿ ಉರಿದ ಎರಡು ಕಾರುಗಳು

    ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ಅಗ್ನಿ ಅವಘಡ – ಹೊತ್ತಿ ಉರಿದ ಎರಡು ಕಾರುಗಳು

    ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಮತ್ತೊಂದು ಅವಘಡ ಸಂಭವಿಸಿದೆ. ಎಲೆಕ್ಟ್ರಾನಿಕ್ ಸಿಟಿಯ (Electronic City) ಸಿಂಘಸಂದ್ರದ ಬಳಿಯ ಮಣಿಪಾಲ್ ಕಂಟ್ರಿ ರಸ್ತೆಯಲ್ಲಿರುವ ಟಿಂಬರ್‌ನಲ್ಲಿ ಬೆಂಕಿ (Fire) ಕಾಣಿಸಿದೆ.

    ಕಟ್ಟಿಗೆಗಳನ್ನು ಸಂಗ್ರಹ ಮಾಡಿದ್ದ ಜಾಗದಲ್ಲಿ ಮಧ್ಯರಾತ್ರಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಕೆನ್ನಾಲಿಗೆಗೆ ಪಕ್ಕದಲ್ಲಿದ್ದ ಕಾರ್‌ ವಾಶ್‌ ರೂಂನಲ್ಲಿದ್ದ ಎರಡು ಕಾರುಗಳು (Car) ಭಸ್ಮಗೊಂಡಿದೆ.  ಇದನ್ನೂ ಓದಿ: ಐತಿಹಾಸಿಕ ಬೆಂಗಳೂರು ಕರಗ ಶಕ್ತ್ಯೋತ್ಸವ ಸಂಪನ್ನ

    ಟಿಂಬರ್ ಹಿಂದೆಯಿದ್ದ ಗಾರ್ಮೆಂಟ್ಸ್ ಕಟ್ಟಡದ ನಾಲ್ಕನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬ್ರ್ಯಾಂಡೆಡ್ ರೆಡಿಮೆಡ್ ಬಟ್ಟೆಗಳು ಪ್ಯಾಕ್ ಆಗಿದ್ದ ಬಾಕ್ಸ್‌ಗಳು ಸುಟ್ಟು ಹೋಗಿವೆ.

    5 ಅಗ್ನಿಶಾಮಕ ದಳ ವಾಹನಗಳು (Fire Engine Vehicle) ಅಗಮಿಸಿ ಬೆಂಕಿ ನಂದಿಸಿದೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

  • ಮಾಲ್ಡೀವ್ಸ್‌ನಲ್ಲಿ ಭೀಕರ ಅಗ್ನಿ ದುರಂತ – 9 ಮಂದಿ ಭಾರತೀಯರು ಸಾವು

    ಮಾಲ್ಡೀವ್ಸ್‌ನಲ್ಲಿ ಭೀಕರ ಅಗ್ನಿ ದುರಂತ – 9 ಮಂದಿ ಭಾರತೀಯರು ಸಾವು

    ಮಾಲೆ: ಬೇರೆ ಬೇರೆ ದೇಶಗಳಿಂದ ಕೆಲಸಕ್ಕಾಗಿ ಬಂದು ಮಾಲ್ಡೀವ್ಸ್ (Maldives) ರಾಜಧಾನಿ ಮಾಲೆಯಲ್ಲಿ (Male) ವಾಸವಾಗಿದ್ದವರ ಇಕ್ಕಟ್ಟಾದ ವಸತಿಗೃಹಗಳಲ್ಲಿ ಅಗ್ನಿ ಅವಘಡ ಕಾಣಿಸಿಕೊಂಡಿದ್ದು, ಕನಿಷ್ಠ 10 ಮಂದಿ ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

    ನೆಲ ಮಹಡಿಯಲ್ಲಿ ವಾಹನಗಳನ್ನು ರಿಪೇರಿ ಮಾಡುವ ಗ್ಯಾರೇಜ್‍ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಬೆಂಕಿಯನ್ನು ನಂದಿಸಲು ಸುಮಾರು ನಾಲ್ಕು ಗಂಟೆಗಳ ಕಾಲ ಬೇಕಾಯಿತು. ಘಟನೆಯಲ್ಲಿ 10 ಮಂದಿ ಸಾವನ್ನಪ್ಪಿದ್ದು, ಇದೀಗ ಕಟ್ಟಡದ ಮೇಲಿನ ಮಹಡಿಯಿಂದ 10 ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೃತರಲ್ಲಿ ಒಂಬತ್ತು ಮಂದಿ ಭಾರತ ಮೂಲದವಾರಗಿದ್ದು, ಓರ್ವ ಬಾಂಗ್ಲಾದೇಶದ ಪ್ರಜೆಯಾಗಿದ್ದಾನೆ ಎಂದು ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  ಇದನ್ನೂ ಓದಿ: ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆ- ವಿವಾದಿತ ವಸ್ತುವಿನ ರಕ್ಷಣೆ ವಿಸ್ತರಣೆಗೆ ಮನವಿ

    ಘಟನೆ ಕುರಿತಂತೆ ಮಾಲ್ಡೀವ್ಸ್‍ನಲ್ಲಿರುವ ಭಾರತದ ಹೈಕಮಿಷನ್ ಅಗ್ನಿ ದುರಂತದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿದೆ. ಮಾಲೆಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ನಮ್ಮ ಭಾರತೀಯ ಮೂಲದ ಪ್ರಜೆಗಳು ಸೇರಿದಂತೆ ಹಲವರು ಸಾವನ್ನಪ್ಪಿದ್ದಾರೆ. ನಾವು ಮಾಲ್ಡೀವ್ಸ್ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದೇವೆ ಎಂದು ಹೈಕಮಿಷನ್ ಟ್ವೀಟ್ ಮಾಡಿದೆ. ಇದನ್ನೂ ಓದಿ: ಗುಜರಾತ್ ವಿಧಾನಸಭೆ ಚುನಾವಣೆ – 14 ಮಂದಿ ಮಹಿಳೆಯರು ಸೇರಿ 160 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಪ್ರಕಟ

    ಬೇರೆ ಬೇರೆ ದೇಶದಿಂದ ಇಲ್ಲಿಗೆ ಬಂದಿದ್ದ ಮತ್ತು ಮಾಲ್ಡೀವ್ಸ್‍ನಲ್ಲಿ ವಾಸವಾಗಿದ್ದ ಉದ್ಯೋಗಿಗಳು ಈ ಕಟ್ಟದಲ್ಲಿ ಅರ್ಧದಷ್ಟು ಜನ ಇದ್ದರು ಮತ್ತು ಹೆಚ್ಚಾಗಿ ಬಾಂಗ್ಲಾದೇಶ, ಭಾರತ, ನೇಪಾಳ, ಪಾಕಿಸ್ತಾನ ಮತ್ತು ಶ್ರೀಲಂಕಾದಿಂದ ಬಂದವರು ಎಂದು ಹೇಳಲಾಗುತ್ತದೆ. ಯಾವುದೇ ಸಹಾಯಕ್ಕಾಗಿ, HCI ಅನ್ನು ಈ ಸಂಖ್ಯೆಗಳಲ್ಲಿ ಸಂಪರ್ಕಿಸಿ ಎಂದು +9607361452 ; +9607790701 ಮಾಲ್ಡೀವ್ಸ್ ಟ್ವೀಟ್ ಮಾಡಿದೆ.

    ದ್ವೀಪಗಳ ರಾಜಧಾನಿ, ರಜೆಯನ್ನು ಕಳೆಯಲು ಮತ್ತು ಉನ್ನತ ಮಾರುಕಟ್ಟೆಯನ್ನು ಹೊಂದಿರುವ ಮಾಲ್ಡೀವ್ಸ್ ಪ್ರಸಿದ್ಧ ತಾಣವಾಗಿದ್ದು, ಇದು ವಿಶ್ವದ ಅತ್ಯಂತ ಜನನಿಬಿಡ ನಗರಗಳಲ್ಲಿ ಒಂದಾಗಿದೆ.

    Live Tv
    [brid partner=56869869 player=32851 video=960834 autoplay=true]

  • ದೆಹಲಿಯಲ್ಲಿ ಭಾರೀ ಅಗ್ನಿ ದುರಂತ- 7 ಸಾವು, 60 ಗುಡಿಸಲು ಭಸ್ಮ

    ದೆಹಲಿಯಲ್ಲಿ ಭಾರೀ ಅಗ್ನಿ ದುರಂತ- 7 ಸಾವು, 60 ಗುಡಿಸಲು ಭಸ್ಮ

    ನವದೆಹಲಿ: ರಾಷ್ಟ್ರ ರಾಜಧಾನಿಯ ಗೋಕುಲಪುರಿಯಲ್ಲಿ ಸಂಭವಿಸಿದ ಭಾರೀ ಅಗ್ನಿ ದುರಂತದಲ್ಲಿ 60 ಗುಡಿಸಲು ಭಸ್ಮವಾಗಿದ್ದು, 7 ಜನ ಸಾವನ್ನಪ್ಪಿದ ಘಟನೆ ನಡೆದಿದೆ.

    ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಗೋಕುಲಪುರಿ ಪಿಎಸ್ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ದೆಹಲಿ ಅಗ್ನಿಶಾಮಕ ಸೇವೆಯ ಮಾಹಿತಿಯ ಪ್ರಕಾರ, ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದ್ದು, ಅಗ್ನಿಶಾಮಕ ಇಲಾಖೆಯಿಂದ ದುರಂತದಲ್ಲಿ ಸಾವನ್ನಪ್ಪಿದ್ದ 7 ಶವಗಳನ್ನು ಹೊರತೆಗೆಯಲಾಗಿದೆ ಎಂದು ತಿಳಿಸಿದೆ.

    ಈ ಬಗ್ಗೆ ಈಶಾನ್ಯ ದೆಹಲಿ ಹೆಚ್ಚುವರಿ ಡಿಸಿಪಿ ಮಾತನಾಡಿ, ಘಟನೆ ನಡೆದಾಕ್ಷಣ ನಾವು ಕಾರ್ಯಪ್ರವೃತ್ತರಾಗಿದ್ದು, ಸ್ಥಳಕ್ಕೆ ತಲುಪಿದ್ದೆವು. ಜೊತೆಗೆ ಅಗ್ನಿ ಶಾಮಕದಳದವರನ್ನು ಸಂಪರ್ಕಿಸಿದ್ದೇವೆ. ಅವರು ಕೂಡ ಉತ್ತಮಾಗಿ ಸ್ಪಂದನೆ ನೀಡಿದ್ದಾರೆ. ಬೆಂಕಿಯನ್ನು ಸುಮಾರು 4 ಗಂಟೆ ವೇಳೆಗೆ ನಂದಿಸಿದ್ದೇವೆ. ಆದರೆ ಅಷ್ಟರಲ್ಲಾಗಲೇ 30 ಗುಡಿಸಲು ಸುಟ್ಟುಹೋಗಿದ್ದು, 7 ಜನರು ಮೃತರಾಗಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಉಕ್ರೇನ್‌ ಮೇಯರ್‌ ಕಿಡ್ನಾಪ್ ಮಾಡಿದ ರಷ್ಯಾ ಸೇನೆ

    ಘಟನೆ ಕುರಿತು ಮಾಹಿತಿ ಕಲೆಹಾಕಿದ ಬಳಿಕ ಸ್ಥಳಕ್ಕೆ 13 ಅಗ್ನಿಶಾಮಕ ವಾಹನಗಳು ಧಾವಿಸಿವೆ. ಅಗ್ನಿ ಅವಘಡಕ್ಕೆ ಕಾರಣವೇನು ಎಂಬುದನ್ನು ತನಿಖೆ ನಡೆಸಲಾಗುವುದು ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮೂರು ಪ್ರತ್ಯೇಕ ಎನ್‍ಕೌಂಟರ್‌ಗಳಲ್ಲಿ ನಾಲ್ವರು ಉಗ್ರರ ಹತ್ಯೆ

  • ಕೆಮಿಕಲ್ ಕಾರ್ಖಾನೆಯಲ್ಲಿ ಸ್ಫೋಟ- 8 ಜನಕ್ಕೆ ಗಾಯ, ಓರ್ವ ಸಾವಿನ ಶಂಕೆ

    ಕೆಮಿಕಲ್ ಕಾರ್ಖಾನೆಯಲ್ಲಿ ಸ್ಫೋಟ- 8 ಜನಕ್ಕೆ ಗಾಯ, ಓರ್ವ ಸಾವಿನ ಶಂಕೆ

    ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ ಸಂಭವಿಸಿದೆ. ಅತ್ತಿಬೆಲೆ ವಡ್ಡರ ಪಾಳ್ಯ ಸಮೀಪವಿರುವ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿ 8 ಮಂದಿ ಗಾಯಗೊಂಡು ಓರ್ವ ಸಾವಿನ ಶಂಕೆ ವ್ಯಕ್ತವಾಗಿದೆ.

    ಅತ್ತಿಬೆಲೆ ವಡ್ಡರ ಪಾಳ್ಯ ಸಮೀಪ ಲೇಟ್ ಕೆಮಿಕಲ್ ಫ್ಯಾಕ್ಟರಿಯಲ್ಲಿ ಬಾಯ್ಲರ್ ಸ್ಫೋಟಗೊಂಡು ದುರ್ಘಟನೆ ಸಂಭವಿಸಿದೆ. ಬಾಯ್ಲರ್ ಸ್ಫೋಟದಿಂದ ಹೊಗೆ 3 ಕಿ.ಮೀ ವ್ಯಾಪಿಸಿದೆ. ಈಗಾಗಲೇ 8 ಮಂದಿಗೆ ಗಾಯ ಓರ್ವ ಸಾವಿನ ಶಂಕೆ ವ್ಯಕ್ತವಾಗಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿರುವ ಜನರಲ್ಲಿ ಆತಂಕ ಎದುರಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಸರಣಿ ಸ್ಫೋಟ – ಮೂವರು ಸಾವು, ನಾಲ್ವರ ಸ್ಥಿತಿ ಗಂಭೀರ

    ಫ್ಯಾಕ್ಟರಿಯಲ್ಲಿ ಉಂಟಾದ ಸ್ಫೋಟದ ಪರಿಣಾಮ ಮೇಲ್ಭಾಗದ ಶಿಟ್‍ಗಳು ಹಾರಿ ಹೋಗಿದೆ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಚರಣೆ ಭರದಿಂದ ಸಾಗಿದೆ. ಈಗಾಗಲೇ ಸ್ಫೋಟದಿಂದ ಕೆಟ್ಟ ವಾಸನೆ ಬರಲಾರಂಭಿಸಿದೆ ಎಂದು ವರದಿಯಾಗಿದ್ದು, ಈ ಹಿಂದೆ ಕೂಡ ಸ್ಫೋಟ ಸಂಭವಿಸಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.

  • ಗಣ ಹೋಮದ ಅಗ್ನಿಯಲ್ಲಿ ಮೂಡಿದ ಗಣೇಶ- ಫೋಟೋ ವೈರಲ್

    ಗಣ ಹೋಮದ ಅಗ್ನಿಯಲ್ಲಿ ಮೂಡಿದ ಗಣೇಶ- ಫೋಟೋ ವೈರಲ್

    ಶಿವಮೊಗ್ಗ: ಗಣಹೋಮದ ವೇಳೆ ಅಗ್ನಿಯಲ್ಲಿ ಗಣೇಶನ ಬಿಂಬ ಕಂಡು ಭಕ್ತರು ಕ್ಷಣಕಾಲ ಪುಳಕಿತರಾದ ಘಟನೆ ಶುಕ್ರವಾರ ಶಿವಮೊಗ್ಗದಲ್ಲಿ ನಡೆದಿದೆ. ಸದ್ಯ ಇದರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ನಗರದ ದೈವಜ್ಞ ಕಲ್ಯಾಣ ಮಂದಿರದಲ್ಲಿ ನೂತನ ದೈವಜ್ಞ ಸಭಾಭವನದ ಪ್ರಾರಂಭೋತ್ಸವದ ಹಿನ್ನೆಲೆಯಲ್ಲಿ ಗಣಹೋಮ ಆಯೋಜಿಸಲಾಗಿತ್ತು. ಈ ವೇಳೆ ಹೋಮದ ಅಗ್ನಿ ಕುಂಡದಲ್ಲಿ ಗಣೇಶನ ಬಿಂಬ ಪ್ರತ್ಯಕ್ಷವಾಗಿದೆ.

    ಈ ಬಿಂಬವನ್ನು ಸ್ಥಳದಲ್ಲಿದ್ದ ಭಕ್ತರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಜೊತೆಗೆ ಸ್ಥಳದಲ್ಲಿದ್ದ ಭಕ್ತರು ಈ ದೃಶ್ಯ ಕಂಡು ಆಶ್ಚರ್ಯ ಚಕಿತರಾಗಿದ್ದಾರೆ.

  • ಪುಣೆಯ ಸೀರಂ ಸಂಸ್ಥೆಯಲ್ಲಿ ಭಾರೀ ಅಗ್ನಿ ಅವಘಡ

    ಪುಣೆಯ ಸೀರಂ ಸಂಸ್ಥೆಯಲ್ಲಿ ಭಾರೀ ಅಗ್ನಿ ಅವಘಡ

    ಪುಣೆ: ವಿಶ್ವದ ಅತಿದೊಡ್ಡ ಲಸಿಕೆ ಉತ್ಪಾದನೆ ಮಾಡುವ ಪುಣೆಯ ಸೀರಂ ಸಂಸ್ಥೆಯಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ.

    ಕೋವಿಶೀಲ್ಡ್‌ ಅಭಿವೃದ್ಧಿ ಪಡಿಸುತ್ತಿರುವ ಸೀರಂ ಸಂಸ್ಥೆಯ ಒಂದನೇ ಗೇಟ್‌ನಲ್ಲಿ ಅಗ್ನಿ ದುರಂತ ಸಂಭವಿಸಿದೆ. ಈಗಾಗಲೇ 10 ಅಗ್ನಿ ಶಾಮಕ ದಳದ ವಾಹನಗಳು ಸ್ಥಳಕ್ಕೆ ದೌಡಾಯಿಸಿದ್ದು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ.

    ಇಂಗ್ಲೆಂಡಿನ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಮತ್ತು ಆಸ್ಟ್ರಜೆನಿಕಾ ಕಂಪನಿ ಅಭಿವೃದ್ಧಿ ಪಡಿಸಿದ್ದ ಕೋವಿಶೀಲ್ಡ್‌ ಲಸಿಕೆಯ ಉತ್ಪಾದನೆ ಸೀರಂ ಸಂಸ್ಥೆಯಲ್ಲಿ ನಡೆಯಿತಿತ್ತು.

    ಕೋವಿಶೀಲ್ಡ್‌ ಲಸಿಕೆಯನ್ನು ಸಂಗ್ರಹಿಟ್ಟ ಜಾಗದಲ್ಲಿ ಅಗ್ನಿ ಅವಘಡ ಸಂಭವಿಸಿಲ್ಲ ಎಂದು ವರದಿಯಾಗಿದೆ.

  • ಬೆಂಕಿಯಲ್ಲಿ ಅಗ್ನಿ ದೇವತೆ ಪ್ರತ್ಯಕ್ಷ- ವಿಸ್ಮಯ ಕಂಡು ಪುಳಕಿತರಾದ ಭಕ್ತರು

    ಬೆಂಕಿಯಲ್ಲಿ ಅಗ್ನಿ ದೇವತೆ ಪ್ರತ್ಯಕ್ಷ- ವಿಸ್ಮಯ ಕಂಡು ಪುಳಕಿತರಾದ ಭಕ್ತರು

    ಬೆಳಗಾವಿ: ದೇವರು ಮಾತನಾಡಲಿಲ್ಲ ಎಂದು ಬೆಳಗಾವಿ ತಾಲೂಕಿನ ಗೊಡಿಹಾಳ ಗ್ರಾಮದಲ್ಲಿ ಹತ್ತಾರು ವರ್ಷಗಳ ಬಳಿಕ ಜನ ಹೋಮ ಹವನ ಮಾಡಿಸಿದ್ದಾರೆ. ಆದರೆ ಈ ವೇಳೆ ಅಗ್ನಿ ಕುಂಡದಲ್ಲಿ ಮಗುವಿನ ಆಕಾರವೊಂದು ಪ್ರತಕ್ಷವಾಗಿದೆ. ಇದು ವಿಸ್ಮಯವೋ ಪವಾಡವೋ ಗೊತ್ತಿಲ್ಲ ಜನ ಮಾತ್ರ ವಿಡಿಯೋ ನೋಡಿ ಅಶ್ಚರ್ಯಗೊಳಗಾಗಿದ್ದಾರೆ.

    ಈ ವಿಸ್ಮಯ ಬೆಳಗಾವಿ ತಾಲೂಕಿನ ಗೊಡಿಹಾಳ ಗ್ರಾಮದಲ್ಲಿ ನಡೆದಿದೆ. ಸಿದ್ದೇಶ್ವರ ದೇವರು ನಮ್ಮ ಗ್ರಾಮದ ಸಮಸ್ಯೆಗಳನ್ನು ನಿವಾರಿಸಲು ಪ್ರತ್ಯಕ್ಷನಾಗಿದ್ದಾನೆ ಎಂದು ಭಕ್ತಿಪರವಶರಾಗಿದ್ದಾರೆ. 11 ದಿನಗಳ ಅಗ್ನಿ ಪೂಜೆಯ ನಂತರ ಕಡೆ ದಿನ ಈ ಘಟನೆ ನಡೆದಿದೆ. ಇದನ್ನೂ ಓದಿ: 

    ಇದು ನಂಬಿಕೆಯೋ ಅಥವಾ ಮುಢ ನಂಬಿಕೆಯೋ ಗೊತ್ತಿಲ್ಲ ಆದರೆ ಮುಗ್ಧ ಮಗುವಿನ ಆಕಾರದಲ್ಲಿರುವ ದೃಶ್ಯಗಳು ಇದೀಗ ಪಬ್ಲಿಕ್ ಟಿವಿಗೆ ಲಭ್ಯವಾಗಿವೆ. ಸಿದ್ದೇಶ್ವರ ದೇವರು ನಮ್ಮ ಗ್ರಾಮದ ಸಮಸ್ಯೆಗಳನ್ನು ನಿವಾರಿಸಲು ಪ್ರತ್ಯಕ್ಷನಾಗಿದ್ದಾನೆ. ಇನ್ನು ಮುಂದೆ ನಮ್ಮ ಕಷ್ಟ ಕಾರ್ಪಣ್ಯಗಳು ಎಲ್ಲವೂ ದೂರಾಗುತ್ತವೆ ಎಂದು ಗ್ರಾಮಸ್ಥರು ನಂಬಿದ್ದಾರೆ. ಪೂಜೆಗೆ ಸನ್ನಿಧೀವಹಿಸಿದ ಭೂತರಾಮನಹಟ್ಟಿ ಶ್ರೀಗಳು ಆಶ್ಚರ್ಯ ಚಕಿತರಾಗಿದ್ದಾರೆ. ಇದನ್ನೂ ಓದಿ:  ಕಣ್ಣೀರು ಸುರಿಸಿದ ಆರೋಗ್ಯಮಾತೆ: ನೋಡಲು ಮುಗಿಬಿದ್ದ ಸಾರ್ವಜನಿಕರು

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಕಾರು ಚಲಿಸಿದ ಕೂಡ್ಲೇ ಉರುಳಿ ಬಿದ್ದು ಧಗಧಗನೇ ಉರಿಯಿತು ಪೆಟ್ರೋಲ್ ಪಂಪ್!- ವಿಡಿಯೋ

    ಕಾರು ಚಲಿಸಿದ ಕೂಡ್ಲೇ ಉರುಳಿ ಬಿದ್ದು ಧಗಧಗನೇ ಉರಿಯಿತು ಪೆಟ್ರೋಲ್ ಪಂಪ್!- ವಿಡಿಯೋ

    ವಾಷಿಂಗ್ಟನ್: ಕಾರು ಚಾಲಕನ ಎಡವಟ್ಟಿನಿಂದಾಗಿ ಪೆಟ್ರೋಲ್ ಬಂಕ್ ಹೊತ್ತಿ ಉರಿದ ಘಟನೆ ಅಮೆರಿಕದ ನ್ಯೂಜೆರ್ಸಿಯಲ್ಲಿ ನಡೆದಿದೆ.

    ಕಾರು ಚಾಲಕ ಬಂಕ್ ಗೆ ಬಂದು ಪೆಟ್ರೋಲ್ ತುಂಬಿಸಿದ್ದಾನೆ. ತುಂಬಿಸಿದ ಬಳಿಕ ಟ್ಯಾಂಕ್‍ನಿಂದ ಪೈಪ್ ತೆಗೆಯಲಾಗಿದೆ ಎಂದು ಭಾವಿಸಿ ಕಾರನ್ನು ಓಡಿಸಿದ್ದಾನೆ. ಆದರೆ ಪೈಪ್ ಟ್ಯಾಂಕ್‍ನಲ್ಲೇ ಇದ್ದ ಕಾರಣ ಕಾರು ಚಲಿಸಿದ ರಭಸಕ್ಕೆ ಪಂಪ್ ಕುಸಿದು ಬಿದ್ದಿದೆ. ಕುಸಿದು ಬಿದ್ದ ರಭಸಕ್ಕೆ ಕೂಡಲೇ ಬೆಂಕಿ ಹೊತ್ತಿಕೊಂಡಿದೆ.

    ಕೂಡಲೇ ಅಲ್ಲಿಂದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಹ್ಯಾಕ್ಸಾಕ್ ಅಗ್ನಿಶಾಮಕ ಸಿಬ್ಬಂದಿ ಫೇಸ್‍ಬುಕ್ ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.