Tag: ಅಗಿಲೆ ಯೋಗೀಶ್

  • ನನ್ನ ಕೊಲೆ ಆದರೆ ಅದಕ್ಕೆ ಶಾಸಕ ಪ್ರೀತಂ ಗೌಡರೇ ಕಾರಣ: ಅಗಿಲೆ ಯೋಗೀಶ್ ಗಂಭೀರ ಆರೋಪ

    ನನ್ನ ಕೊಲೆ ಆದರೆ ಅದಕ್ಕೆ ಶಾಸಕ ಪ್ರೀತಂ ಗೌಡರೇ ಕಾರಣ: ಅಗಿಲೆ ಯೋಗೀಶ್ ಗಂಭೀರ ಆರೋಪ

    ಹಾಸನ: ನನ್ನ ಕೊಲೆ ಆದರೆ ಅದಕ್ಕೆ ಶಾಸಕ ಪ್ರೀತಂ ಗೌಡರೇ ಕಾರಣ. ನನಗೆ ರಾಜಕೀಯವಾಗಿ ಯಾರೂ ವೈರಿಗಳಿಲ್ಲ. ಅವರಿಗೆ ನಾನೊಬ್ಬನೇ ಪ್ರಬಲ ಎದುರಾಳಿ. ಹೀಗಾಗಿ ಅವರು ನನ್ನನ್ನು ಮುಗಿಸಬೇಕೆಂಬ ಪ್ಲಾನ್ ಮಾಡಿದ್ದಾರೆ ಎಂದು ಸಮಾಜ ಸೇವಕ, ಜೆಡಿಎಸ್ ಮುಖಂಡರಾಗಿದ್ದ ಅಗಿಲೆ ಯೋಗೀಶ್ ಗಂಭೀರ ಆರೋಪ ಮಾಡಿದ್ದಾರೆ.

    ಹಾಸನದ ಪತ್ರಿಕಾ ಭವನದಲ್ಲಿ ತಾವು ಜೆಡಿಎಸ್ ತೊರೆಯುವುದಾಗಿ ಮಾಹಿತಿ ನೀಡಿ ನಂತರ ಶಾಸಕರ ವಿರುದ್ಧ ಆರೋಪಿಸಿರುವ ಯೋಗಿಶ್, ನನ್ನ ಕೊಲೆಗೆ ಪ್ಲಾನ್ ಆಗಿದೆ. ನನ್ನ ಕೊಲೆ ಆದರೆ ಅದಕ್ಕೆ ಹಾಸನ ವಿಧಾನಸಭಾ ಕ್ಷೇತ್ರದ ಶಾಸಕರೇ ಕಾರಣ ಎಂದು ನೇರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಖಾದಿ ಧ್ವಜಕ್ಕೆ ಬೆಲೆ ಜಾಸ್ತಿ, 10 ಕೋಟಿ ಧ್ವಜ ತಯಾರಿಸುವುದು ಅಸಾಧ್ಯ: ಪ್ರಹ್ಲಾದ್ ಜೋಶಿ

    ಹಿಂದಿನ ಎಸ್‌ಪಿ ನನಗೆ ಕೊಲೆ ಬೆದರಿಕೆ ಇರುವುದನ್ನು ಹೇಳಿದ್ದರು. ಒಬ್ಬ ಗನ್‌ಮ್ಯಾನ್ ಅನ್ನು ಕೊಡುತ್ತೇನೆ ಎಂದಿದ್ದರು. ಆದರೆ ಈವರೆಗೂ ನನಗೆ ರಕ್ಷಣೆ ಒದಗಿಸಿಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

    2018 ರಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿ ಆಗಿದ್ದ ಅಗಿಲೆ ಯೋಗೀಶ್, ತಮಗೆ ಟಿಕೆಟ್ ಕೈತಪ್ಪಿದ ಬಳಿಕ ಚುನಾವಣೆ ನಂತರ ಜೆಡಿಎಸ್ ಸೇರಿದ್ದರು. ಇದೀಗ ಜೆಡಿಎಸ್‌ನಲ್ಲೂ ಸೂಕ್ತ ಸ್ಥಾನಮಾನ ಸಿಗದ ಹಿನ್ನೆಲೆಯಲ್ಲಿ ಇಂದು ಜೆಡಿಎಸ್ ತೊರೆಯುವುದಾಗಿ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: ಮುಂಬೈ ವಿವಾದ – ಮಹಾರಾಷ್ಟ್ರ ರಾಜ್ಯಪಾಲರ ಹೇಳಿಕೆ ಒಪ್ಪಲ್ಲ ಎಂದ ಸಿಎಂ ಶಿಂದೆ

    ಕೋವಿಡ್ ಸಂದರ್ಭದಲ್ಲೂ ಜನರಿಗೆ ಸಾಕಷ್ಟು ನೆರವು ನೀಡಿದ್ದ ಯೋಗೀಶ್ ಎಲ್ಲರ ಮೆಚ್ಚುಗೆ ಗಳಿಸಿದ್ದರು.

    Live Tv
    [brid partner=56869869 player=32851 video=960834 autoplay=true]