Tag: ಅಗಸ್ತ್ಯ ಸಂತೋಷ್

  • ರಿಚ್ಚಿಗಾಗಿ ಹಾಡಿದ ಸರಿಗಮಪ ಖ್ಯಾತಿಯ ಅಂಕಿತಾ ಕುಂಡು

    ರಿಚ್ಚಿಗಾಗಿ ಹಾಡಿದ ಸರಿಗಮಪ ಖ್ಯಾತಿಯ ಅಂಕಿತಾ ಕುಂಡು

    ಮಾರುತಿ ಮೂವೀ ಮೇಕರ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ‘ರಿಚ್ಚಿ’ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ. ಚಿತ್ರ ಬಿಡುಗಡೆಗೂ ಮುನ್ನ ಚಿತ್ರತಂಡ ಹಾಡುಗಳ ಬಿಡುಗಡೆ ಮಾಡುತ್ತಿದೆ. ಇತ್ತೀಚೆಗೆ ರಿಚ್ಚಿ ಚಿತ್ರಕ್ಕಾಗಿ ಕುನಾಲ್ ಗಾಂಜಾವಾಲ ಅವರು ಬಹಳ ವರ್ಷಗಳ ನಂತರ ಹಾಡಿರುವ ಹಾಡೊಂದು ಬಿಡುಗಡೆಯಾಗಿ, ಎಲ್ಲರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಈಗ ಚಿತ್ರದ ಮತ್ತೊಂದು ಹಾಡು ಜುಲೈ ಮೊದಲ ವಾರದಲ್ಲಿ ಬಿಡುಗಡೆಯಾಗಲಿದೆ.

    ವಿನೋದ್  ಅವರು ಈ‌ ಹಾಡನ್ನು ಬರೆದಿದ್ದು, ಹೆಸರಾಂತ ಗಾಯಕಿ ಅಂಕಿತಾ ಕುಂಡು ಹಾಡಿದ್ದಾರೆ. ಅಗಸ್ತ್ಯ ಸಂತೋಷ್ ಸಂಗೀತ ನೀಡಿದ್ಧಾರೆ.  ರಿಚ್ಚಿ ಇದು ಸಿನಿಮಾ‌ ಹೆಸರು ಮಾತ್ರವಲ್ಲ, ನಿರ್ದೇಶಕ ಹಾಗೂ ನಾಯಕನ ಹೆಸರು ಕೂಡ. ಹೌದು ತಮ್ಮ ಹೆಸರನ್ನೇ ಚಿತ್ರದ ಶೀರ್ಷಿಕೆಯಾಗಿಸಿದ್ದಾರೆ ರಿಚ್ಚಿ. ಚಿತ್ರದ ನಿರ್ಮಾಪಕರೂ ಇವರೆ.‌ ರಾಕೇಶ್ ರಾವ್ ಹಾಗೂ ವೆಂಕಟಾಚಲಯ್ಯ ರಿಚ್ಚಿ ಚಿತ್ರದ ಸಹ ನಿರ್ಮಾಪಕರು. ಅಣಜಿ ನಾಗರಾಜ್ ಈ ಚಿತ್ರವನ್ನು ಅರ್ಪಿಸುತ್ತಿದ್ದಾರೆ. ಇದನ್ನೂ ಓದಿ: ಪಡ್ಡೆಹುಡುಗರ ಕಣ್ಣು ಕುಕ್ಕುವಂತೆ ಹಾಟ್‌ ಆಗಿ ಕಾಣಿಸಿಕೊಂಡ ‘ಕೆಜಿಎಫ್‌’ ನಟಿ

    ಲವ್ ಮತ್ತು ಸಸ್ಪೆನ್ಸ್ ಥ್ರಿಲ್ಲರ್ ‌ಕಥಾಹಂದರ ಹೊಂದಿರುವ ಈ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ ರಿಚ್ಚಿ ನಿರ್ಮಾಣವಾಗಿದೆ. ಅಗಸ್ತ್ಯ ಸಂತೋಷ್ ಅವರು ಸಂಗೀತ ನೀಡಿರುವ ನಾಲ್ಕು ಸುಮಧುರ ಹಾಡುಗಳು ಈ ಚಿತ್ರದಲ್ಲಿವೆ. ಸೋನು ನಿಗಮ್, ಕುನಾಲ್ ಗಾಂಜಾವಾಲ ಹಾಗೂ ಅಂಕಿತಾ ಕುಂಡು ಹಾಡುಗಳನ್ನು ಹಾಡಿದ್ದಾರೆ. ಗೌಸ್ ಫಿರ್, ಆನಂದ್ ಹಾಗೂ ವಿನೋದ್ ಹಾಡುಗಳನ್ನು ಬರೆದಿದ್ದಾರೆ. ಹಿಂದಿ ಭಾಷೆಯಲ್ಲಿ ಈ ಚಿತ್ರದ ಹಾಡುಗಳನ್ನು ಜಾವೇದ್ ಅಲಿ, ಪಲಾಕ್ ಮುಚ್ಚಲ್ ಹಾಗೂ ಕುನಾಲ್ ಗಾಂಜಾವಾಲ ಹಾಡಿದ್ದಾರೆ.

     

    ಅಜಿತ್ ಕುಮಾರ್ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ, ಚಿನ್ನಿಪ್ರಕಾಶ್, ಧನಂಜಯ ಹಾಗೂ ಭೂಷಣ್ ನೃತ್ಯ ನಿರ್ದೇಶನ ಹಾಗೂ ವಿಕ್ರಮ್ ಮೋರ್, ಡಿಫರೆಂಟ್ ಡ್ಯಾನಿ ಅವರ ಸಾಹಸ ನಿರ್ದೇಶನ‌ ಈ ಚಿತ್ರಕ್ಕಿದೆ. ರಿಚ್ಚಿ ಅವರಿಗೆ ನಾಯಕಿಯಾಗಿ ಕನ್ನಡತಿ ಧಾರಾವಾಹಿ ಖ್ಯಾತಿಯ ರಮೋಲ ಅಭಿನಯಿಸಿದ್ದಾರೆ. ಮನೋಜ್, ಮಿಮಿಕ್ರಿ ಗೋಪಿ, ಮಜಾಭಾರತ ಚಂದ್ರಪ್ರಭ, ಕಾಮಿಡಿ ಕಿಲಾಡಿಗಳು ರಾಘವೇಂದ್ರ ಮುಂತಾದವರು ತಾರಾಬಳಗದಲ್ಲಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ಹಾಡಿನ ಮೂಲಕ ಪ್ರೇಮಲೋಕಕ್ಕೆ ಆಹ್ವಾನ ನೀಡಿದ್ದಾರೆ ರಿಚ್ಚಿ

    ಹಾಡಿನ ಮೂಲಕ ಪ್ರೇಮಲೋಕಕ್ಕೆ ಆಹ್ವಾನ ನೀಡಿದ್ದಾರೆ ರಿಚ್ಚಿ

    ಹಾಡುಗಳೇ ಚಿತ್ರಕ್ಕೆ ಮೊದಲು ಆಮಂತ್ರಣವಿದ್ದಂತೆ. ಇಂಥದ್ದೊಂದು ಆಮಂತ್ರಣವನ್ನು ತಯಾರಿಸಿ ಜನರ ಮುಂದೆ ಹೋಗಿದ್ದಾರೆ ನಿರ್ದೇಶಕ, ನಟ, ನಿರ್ಮಾಪಕ ರಿಚ್ಚಿ (Richie). ಈ ಚಿತ್ರದ ಮೋಹಕ ಹಾಡೊಂದು ಇದೀಗ ಬಿಡುಗಡೆಯಾಗಿದ್ದು, ಕುನಾಲ್ ಗಾಂಜಾವಾಲಾ ಸಂಗೀತದೊಂದಿಗೆ ಹಾಡು (Song) ಮೂಡಿ ಬಂದಿದೆ. ಈ ಚೆಂದದ ಹಾಡು ಕೇಳುಗರನ್ನೆಲ್ಲ ಒಂದೇ ಸಲಕ್ಕೆ ಪ್ರೇಮ ಲೋಕದಲ್ಲಿ ತೇಲಾಡಿಸುತ್ತಿದೆ.

    ‘ಕಳೆದು ಹೋಗಿರುವೆ ನಿನ್ನ ನೋಡಿ, ಜೀವ ಹಿಂಡುತಿದೆ ಒಲವು ಮೂಡಿ’ ಅಂತ ಶುರುವಾಗುವ ಈ ಹಾಡು ಸಾಹಿತ್ಯ, ಸಂಗೀತ ಸೇರಿದಂತೆ ಎಲ್ಲದರಲ್ಲಿಯೂ ಮೋಡಿ ಮಾಡುವಂತಿದೆ. ಅದರಲ್ಲಿಯೂ ರಿಚ್ಚಿ ಮತ್ತು ರಮೋಲಾ ಜೋಡಿ ಎಲ್ಲರನ್ನೂ ಆವರಿಸಿಕೊಳ್ಳುವಂತೆ ಕಾಣಿಸಿಕೊಂಡಿದೆ. ಈ ಮೂಲಕ ಇದೊಂದು ಅದ್ಭುತ ಪ್ರೇಮ ಕಥಾನಕವಾಗಿ ದಾಖಲಾಗುವ ಭರವಸೆಯಂತೂ ದಟ್ಟವಾಗಿದೆ. ಈ ಹಾಡಿನ ಮೂಲಕ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಗೀತರಚನೆಕಾರ ಗೌಸ್ ಪೀರ್ ಖಾತೆಗೆ ಮತ್ತೊಂದು ಮಧುರವಾದಗೀತೆ  ಜಮೆಯಾಗಿದೆ. ಅಗಸ್ತ್ಯ ಸಂತೋಷ್ (Agastya Santosh) ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಗೀತೆಯನ್ನು, ಕುನಾಲ್ ಗಾಂಜಾವಾಲಾ(Kunal Ganjawala)  ಹಾಡಿದ್ದಾರೆ.

    ಅಣಜಿ ನಾಗರಾಜ್ ಅರ್ಪಿಸುವ ಈ ಸಿನಿಮಾ, ರಿಚ್ಚಿ ಪಾಲಿನ ಕನಸಿನ ಕೂಸು. ಸ್ವತಃ ನಿರ್ಮಾಪಕರಾಗಿ ಈ ಸಿನಿಮಾವನ್ನು ಪೊರೆದಿರುವ ಅವರಿಗೆ ರಾಕೇಶ್ ರಾವ್ ಸಹ ನಿರ್ಮಾಪಕರಾಗಿ ಹೆಗಲು ಕೊಟ್ಟಿದ್ದಾರೆ. ಈ  ವೀಡಿಯೋ ಸಾಂಗ್ ಮೂಲಕ ರೊಮ್ಯಾಂಟಿಕ್ ಲೋಕಕ್ಕೆ ಕರೆದೊಯ್ಯುತ್ತಾರೆ. ಲವ್ ಮತ್ತು ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಜಾನರ್ ನಲ್ಲಿ ಈ ಸಿನಿಮಾ ಮೂಡಿ ಬಂದಿದೆ. ಇದನ್ನೂ ಓದಿ:ಸಹೋದರ ವರುಣ್ ತೇಜ್- ಲಾವಣ್ಯ ಮದುವೆ ಬಗ್ಗೆ ನಿಹಾರಿಕಾ ಪ್ರತಿಕ್ರಿಯೆ

    ಖ್ಯಾತ ನೃತ್ಯ ನಿರ್ದೇಶಕ ಚಿನ್ನಿ ಮಾಸ್ಟರ್ ನೃತ್ಯ ಸಂಯೋಜನೆ ಚಿತ್ರಕ್ಕಿದ್ದು, ಪ್ರತಿಭಾವಂತ ತಾರಾಗಣ ಹಾಗೂ ನುರಿತ ತಾಂತ್ರಿಕ ವರ್ಗ ಚಿತ್ರಕ್ಕಾಗಿ ಕೆಲಸ ಮಾಡಿದೆ. ಅಜಿತ್ ಕುಮಾರ್ ಎನ್ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ, ಚಿನ್ನಿ ಪ್ರಕಾಶ್, ಧನಂಜಯ ಮತ್ತು ಭೂಷಣ್ ನೃತ್ಯ ನಿರ್ದೇಶನ, ಥ್ರಿಲ್ಲರ್ ಮಂಜು, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಸದ್ಯ ರಿಲೀಸ್ ಆಗಿರುವ ಹಾಡಿನ ಮೂಲಕ ಚಿತ್ರ ನಿರೀಕ್ಷೆ ಮೂಡಿಸಿದೆ.