Tag: ಅಗರ್ತಲಾ

  • Lokmanya Tilak Express | ಇಂಜಿನ್‌ ಸೇರಿ ಹಳಿತಪ್ಪಿದ 8 ಬೋಗಿಗಳು

    Lokmanya Tilak Express | ಇಂಜಿನ್‌ ಸೇರಿ ಹಳಿತಪ್ಪಿದ 8 ಬೋಗಿಗಳು

    ಅಗರ್ತಲಾ: ತ್ರಿಪುರಾದ ಅಗರ್ತಲಾದಿಂದ (Agartala) ಮುಂಬೈಗೆ (Mumbai) ತೆರಳುತ್ತಿದ್ದ ಎಕ್ಸ್‌ಪ್ರೆಸ್ (Lokmanya Tilak Express) ರೈಲಿನ ಇಂಜಿನ್ ಮತ್ತು 8 ಬೋಗಿಗಳು ಅಸ್ಸಾಂನ ದಿಬೋಲಾಂಗ್ ನಿಲ್ದಾಣದ ಬಳಿ ಹಳಿತಪ್ಪಿವೆ.

    12520 ಅಗರ್ತಲಾ-ಲೋಕಮಾನ್ಯ ತಿಲಕ್ ಟರ್ಮಿನಸ್ ಎಕ್ಸ್‌ಪ್ರೆಸ್ ಇಂದು ಬೆಳಿಗ್ಗೆ ಅಗರ್ತಲಾದಿಂದ ಹೊರಟಿತ್ತು. ಅಸ್ಸಾಂನ ಲುಮ್ಡಿಂಗ್-ಬದರ್‌ಪುರ್ ವಿಭಾಗದ ಬಳಿ ಈ ಘಟನೆ ನಡೆದಿದೆ. ಇಲ್ಲಿಯವರೆಗೆ ಯಾವುದೇ ಸಾವು-ನೋವುಗಳ ವರದಿಯಾಗಿಲ್ಲ.

    ರಕ್ಷಣಾ ಕಾರ್ಯಾಚರಣೆಗಾಗಿ ಹಿರಿಯ ಅಧಿಕಾರಿಗಳೊಂದಿಗೆ ಅಪಘಾತ ಸಂಭವಿಸಿದ ಸ್ಥಳಕ್ಕೆ ತೆರಳಿದ್ದಾರೆ. ಸದ್ಯಕ್ಕೆ ಲುಮ್ಡಿಂಗ್-ಬದರ್‌ಪುರ ವಿಭಾಗದಲ್ಲಿ ರೈಲು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ಈ ಬಗ್ಗೆ ಟ್ವೀಟ್‌ ಮೂಲಕ ಸ್ಪಷ್ಟನೆ ನೀಡಿರುವ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಎಲ್ಲಾ ಪ್ರಯಾಣಿಕರು ಸುರಕ್ಷತೆಯಿಂದ ಇದ್ದಾರೆ ಎಂದು ತಿಳಿಸಿದ್ದಾರೆ.

    ರೈನಲ್ಲಿ ಬಂದಿದ್ದ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಲೆಕ್ಕ ಹಾಕಲಾಗುತ್ತಿದೆ. ಹಳಿ ತಪ್ಪಿದ ಕಾರಣದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

    ಇತ್ತೀಚೆಗೆ ಕರ್ನಾಟದ ಮೈಸೂರು (Mysuru), ಬೆಂಗಳೂರು ಮೂಲಕವಾಗಿ ಬಿಹಾರದ ದರ್ಭಾಂಗ್‌ಗೆ (Darbhanga) ಹೊರಟಿದ್ದ ಭಾಗಮತಿ ಎಕ್ಸ್‌ಪ್ರೆಸ್ ರೈಲು ಚೆನ್ನೈನ ಕವರಪೆಟ್ಟೈ ಬಳಿ ಭೀಕರ ಅಪಘಾತಕ್ಕೊಳಗಾಗಿತ್ತು. ಲೂಪ್ ಲೈನ್‍ನಲ್ಲಿ ನಿಂತಿದ್ದ ಗೂಡ್ಸ್ ರೈಲಿಗೆ ಭಾಗಮತಿ ಎಕ್ಸ್‌ಪ್ರೆಸ್ ಡಿಕ್ಕಿ ಹೊಡೆದು, 13 ಬೋಗಿಗಳು ಹಳಿ ತಪ್ಪಿದ್ದವು.

  • ಮಯಾಂಕ್‌ ಅಗರ್ವಾಲ್‌ ಆರೋಗ್ಯ ಸ್ಥಿರ- ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ರವಾನೆ

    ಮಯಾಂಕ್‌ ಅಗರ್ವಾಲ್‌ ಆರೋಗ್ಯ ಸ್ಥಿರ- ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ರವಾನೆ

    – ನಿಮ್ಮ ಪ್ರೀತಿ, ಬೆಂಬಲ ಹಾಗೂ ಪ್ರಾರ್ಥನೆಗೆ ಧನ್ಯವಾದ ಅಂದ್ರು ಮಯಾಂಕ್

    ನವದೆಹಲಿ: ಕರ್ನಾಟಕದ ರಣಜಿ ಕ್ಯಾಪ್ಟನ್‌ ಮಯಾಂಕ್‌ ಅಗರ್ವಾಲ್‌ (Mayank Agarwal) ಆರೋಗ್ಯ ಸ್ಥಿರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗುವುದು ಎಂದು ರಣಜಿ ಟೀಂ ಮ್ಯಾನೇಜರ್‌ ರಮೇಶ್‌ (Ranji Team Manager Ramesh) ಹೇಳಿದ್ದಾರೆ.

    ಘಟನೆಯಲ್ಲಿ ಮಯಾಂಕ್‌ ಅವರು ಭಾರೀ ಅಪಾಯದಿಂದ ಪಾರಾಗಿದ್ದಾರೆ. ಸದ್ಯ ಪೊಲೀಸರು ಮಯಾಂಕ್‌ ಅವರ ಹೇಳಿಕೆಯನ್ನು ಪಡೆದುಕೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು. ಇದನ್ನೂ ಓದಿ: ICUನಲ್ಲಿ ಮಯಾಂಕ್ ಅಗರ್ವಾಲ್ – ಆರೋಗ್ಯದ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ILS ಆಸ್ಪತ್ರೆ

    ಘಟನೆ ಸಂಬಂಧ ಅಗರ್ತಲಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಘಟನೆಯ ಬಗ್ಗೆ ನಮಗೆ ನಿಖರ ಮಾಹಿತಿ ಇಲ್ಲ. ಅಂದು ಏನಾಗಿದೆ ಅನ್ನೋದು ಗೊತ್ತಿಲ್ಲ. ಸದ್ಯ ನಾವು ಅವರನ್ನು ಬೆಂಗಳೂರಿಗೆ ಕರೆದುಕೊಂಡು ಹೋಗುತ್ತಿದ್ದೇವೆ ಎಂದು ರಮೇಶ್‌ ಹೇಳಿದ್ದಾರೆ. ಈ ನಡುವೆ ಮಯಾಂಕ್‌ ಅವರು ಕೂಡ ತಾವು ಆಸ್ಪತ್ರೆಯಲ್ಲಿರುವ ಫೋಟೋದೊಂದಿಗೆ ಆರೋಗ್ಯ ಸುಧಾರಿಸುತ್ತಿದ್ದ, ನನಗೋಸ್ಕರ ಪ್ರಾರ್ಥನೆ ಮಾಡಿದ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದ್ದಾರೆ.

    ನಡೆದಿದ್ದೇನು..?: ಮಯಾಂಕ್‌ ಅವರು ಕರ್ನಾಟಕ ರಣಜಿ ತಂಡದೊಂದಿಗೆ ತ್ರಿಪುರಾದ ಅಗರ್ತಲಾದಿಂದ ಸೂರತ್‌ಗೆ ವಿಮಾನದಲ್ಲಿ ಪ್ರಯಾಣ ಬೆಳೆಸುತ್ತಿದ್ದರು. ಅಂತೆಯೇ ವಿಮಾನದಲ್ಲಿ ಕುಳಿತಿದ್ದ ಮಯಾಂಕ್, ಸೀಟಿನ ಮುಂಭಾಗದಲ್ಲಿ ಇಟ್ಟಿದ್ದ ದ್ರವ ಪದಾರ್ಥವನ್ನು ಸೇವಿಸಿದ್ದಾರೆ. ಇದನ್ನು  ಸೇವಿಸಿದ ಕೆಲ ಹೊತ್ತಿನ ಬಳಿಕ ಮಯಾಂಕ್ ಅವರಿಗೆ ಬಾಯಿ ಸುಟ್ಟ ಅನುಭವವಾಗಿದೆ. ನಂತರ ಅವರು ಅಸ್ವಸ್ಥಗೊಂಡಿದ್ದಾರೆ. ತಕ್ಷಣ ಅವರನ್ನು ಅಗರ್ತಲಾದ ಐಎಲ್‌ಎಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಅಲ್ಲಿ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

  • ಬಿಜೆಪಿ ಉಪಾಧ್ಯಕ್ಷೆ ಮೇಲೆ ಸಾಮೂಹಿಕ ಹಲ್ಲೆ- ಇಬ್ಬರು ಪೊಲೀಸರಿಗೆ ಗಾಯ

    ಬಿಜೆಪಿ ಉಪಾಧ್ಯಕ್ಷೆ ಮೇಲೆ ಸಾಮೂಹಿಕ ಹಲ್ಲೆ- ಇಬ್ಬರು ಪೊಲೀಸರಿಗೆ ಗಾಯ

    ಅಗರ್ತಲಾ: ಬಿಜೆಪಿ ಉಪಾಧ್ಯಕ್ಷೆ ಪತಲ್ ಕನ್ಯಾ ಜಮಾತಿಯಾ ಅವರ ಮೇಲೆ ಗುರುವಾರ ಸೆಪಹಿಜಾಲಾ ಜಿಲ್ಲೆಯ ಜಂಪೂಯಿಜಾಲಾದಲ್ಲಿ ಜನರ ಗುಂಪೊಂದು ದಾಳಿ ನಡೆಸಿದೆ. ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಮಂಗಳವಾರ ಗೋಮತಿ ಜಿಲ್ಲೆಯ ತೈಡುವಿನಲ್ಲಿ ಸ್ಥಳೀಯ ಜನರ ಮೇಲೆ ದಬ್ಬಾಳಿಕೆ ನಡೆಸಿದವರಿಗೆ ಸೂಕ್ತ ಉತ್ತರ ನೀಡಲಾಗುವುದು ಎಂದು ತಿಪ್ರಾ ಮೋಥಾ ಅಧ್ಯಕ್ಷ ಪ್ರದ್ಯೋತ್ ಕಿಶೋರ್ ದೆಬ್ಬರ್ಮಾ ಹೇಳಿದ ಕೆಲವೇ ಗಂಟೆಗಳ ನಂತರ ಪತಲ್ ಕನ್ಯಾ ಜಮಾತಿಯಾ ಅವರ ಮೇಲೆ ದಾಳಿ ನಡೆದಿದೆ. ಇದನ್ನೂ ಓದಿ: ಆ ಮನುಷ್ಯನಿಗೆ ಮಾನ, ಮರ್ಯಾದೆ ಇದ್ರೆ ರಾಜೀನಾಮೆ ಕೊಡಲಿ: ಶ್ರೀನಿವಾಸ್ ಗೌಡ ವಿರುದ್ಧ ಹೆಚ್‌ಡಿಕೆ ಕಿಡಿ

    ಜಂಪೈಜಾಲಾದಲ್ಲಿ ಪತಲ್ ಕನ್ಯಾ ಜಮಾತಿಯಾದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಬುಡಕಟ್ಟು ಕಲ್ಯಾಣ ಸಚಿವ ರಾಮಪಾದ, ಜಮಾತಿಯಾ ಮತ್ತು ಬಿಜೆಪಿ ಸಂಸದ ರೆಬಾಟಿ ತ್ರಿಪುರ ಅವರ ಬೆಂಗಾವಲು ಪಡೆಯನ್ನು ತಡೆದು ದಾಳಿ ನಡೆಸಲಾಗಿದೆ.

    ತೈಡು, ಜಂಪೂಯಿಜಾಲ ಹಾಗೂ ಸುತ್ತಲಿನ ಜಾಗಗಳು ಬುಡಕಟ್ಟು ಪ್ರಾಬಲ್ಯ ಹೊಂದಿರುವ ಪ್ರದೇಶಗಳಾಗಿವೆ. ಜಂಪೂಯಿಜಾಲದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬುಡಕಟ್ಟು ಕಲ್ಯಾಣ ಸಚಿವ ರಾಂಪದ ಜಮಾತಿಯಾ ಹಾಗೂ ಬಿಜೆಪಿ ಸಂಸದ ರೇಬತಿ ತ್ರಿಪುರಾ ಅವರ ಜತೆ ಪತಲ್ ಕನ್ಯಾ ಜಮಾತಿಯಾ ತೆರಳುತ್ತಿದ್ದರು. ಈ ಸಂದರ್ಭದಲ್ಲಿ, ಗುಂಪೊಂದು ಬೆಂಗಾವಲು ಪಡೆ ವಾಹನಗಳನ್ನು ತಡೆಯಲು ಮುಂದಾಗಿದೆ. ಇದೇ ವೇಳೆ ಪತಲ್ ಕನ್ಯಾ ಮೇಲೆ ಹಲ್ಲೆ ನಡೆದಿದೆ ಎಂದು ಇನ್ಸ್‌ಪೆಕ್ಟರ್ ಜನರಲ್ (ಕಾನೂನು ಸುವ್ಯವಸ್ಥೆ) ಅರಿಂದಮ್ ನಾಥ್ ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯಸಭಾ ಚುನಾವಣೆಯಲ್ಲಿ ಮೊದಲ ಅಡ್ಡಮತದಾನ

    ಗುಂಪಿನಲ್ಲಿ ಮಹಿಳೆಯರು ಸೇರಿದಂತೆ ನೂರಾರು ಜನ ಇದ್ದರು. ಘಟನೆಯಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿದ್ದು, ಎರಡು ವಾಹನಗಳಿಗೆ ಹಾನಿಯಾಗಿವೆ ಎಂದು ತಿಳಿಸಿದ್ದಾರೆ.

    ಹಲ್ಲೆ ನಡೆಯುತ್ತಿದ್ದಂತೆಯೇ ಪತಲ್ ಕನ್ಯಾ ಅವರನ್ನು ಸುತ್ತುವರಿದು ರಕ್ಷಿಸಿದ ಪೊಲೀಸರು ತ್ರಿಪುರಾ ಸ್ಟೇಟ್ ರೈಫಲ್ಸ್ (ಟಿಎಸ್‍ಆರ್) ಪ್ರಧಾನ ಕಚೇರಿಗೆ ಕರೆದೊಯ್ದರು. ಬಳಿಕ ಸ್ಥಳದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ತರಲಾಯಿತು ಎಂದು ಅವರು ಹೇಳಿದ್ದಾರೆ. ಇತ್ತೀಚೆಗಷ್ಟೇ ಪತಲ್ ಕನ್ಯಾ ಅವರು ತ್ರಿಪುರಾ ಪೀಪಲ್ಸ್ ಫ್ರಂಟ್ ತೊರೆದು ಬಿಜೆಪಿ ಸೇರಿದ್ದರು.

     

  • ಗಂಡನ ಶಿರಚ್ಛೇದ ಮಾಡಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ದೇಗುಲದಲ್ಲಿ ಕೂತಿದ್ಲು!

    ಗಂಡನ ಶಿರಚ್ಛೇದ ಮಾಡಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ದೇಗುಲದಲ್ಲಿ ಕೂತಿದ್ಲು!

    ಅಗರ್ತಲಾ: ಮಹಿಳೆಯೊಬ್ಬಳು ಇಂದು ಮುಂಜಾನೆ ದೇವಸ್ಥಾನದಲ್ಲಿ ತನ್ನ 50 ವರ್ಷದ ಗಂಡನ ಶಿರಚ್ಛೇದ ಮಾಡಿ ತಲೆಯನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಕುಳಿತ್ತಿದ್ದ ಆಘಾತಕಾರಿ ಘಟನೆ ತ್ರಿಪುರದ ಖೋವೈನಲ್ಲಿ ನಡೆದಿದೆ.

    ಇಂದಿರಾ ಕಾಲೋನಿ ಗ್ರಾಮದಲ್ಲಿ ಮಹಿಳೆ, ಪತಿ ರವೀಂದ್ರ ತಂತಿ ಮತ್ತು ಇಬ್ಬರು ಪುತ್ರರೊಂದಿಗೆ ವಾಸಿಸುತ್ತಿದ್ದಳು. ಕೊಲೆಗೆ ಕಾರಣವೇನು ಎಂಬುದು ತಿಳಿದುಬಂದಿಲ್ಲ. ಆದರೆ ದಂಪತಿ ಹಿರಿಯ ಮಗ ತನ್ನ ತಾಯಿ ಇತ್ತೀಚೆಗೆ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಳು. ಅಲ್ಲದೆ ಆಕೆಗೆ ಸ್ಥಳೀಯ ವೈದ್ಯರ ಬಳಿ ಚಿಕಿತ್ಸೆ ಕೊಡಿಸುತ್ತಿದ್ದೆವು ಎಂದು ಪೊಲೀಸರಿಗೆ ವಿವರಿಸಿದರು. ಇದನ್ನೂ ಓದಿ: ಸೋನಂ ಕಪೂರ್ ಮಾವನಿಗೆ 27 ಕೋಟಿ ರೂ. ವಂಚಿಸಿದ ಸೈಬರ್ ಕ್ರಿಮಿನಲ್ಸ್! 

    ಖೋವಾಯ್ ಪೊಲೀಸ್ ವರಿಷ್ಠಾಧಿಕಾರಿ ಭಾನುಪಾದ ಚಕ್ರವರ್ತಿ ಈ ಕುರಿತು ಮಾಹಿತಿ ನೀಡಿದ್ದು, ಕೊಲೆಯ ಹಿಂದಿನ ಕಾರಣ ಇನ್ನೂ ತಿಳಿದುಬಂದಿಲ್ಲ. ಇದರ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.

    ಘಟನೆ ಬಗ್ಗೆ ವಿವರಿಸಿದ ಹಿರಿಯ ಪುತ್ರ, ನನ್ನ ತಾಯಿ ಸಸ್ಯಾಹಾರಿಯಾಗಿದ್ದಳು. ಆದರೆ ನಿನ್ನೆ ರಾತ್ರಿ ಅವರು ಚಿಕನ್ ಸೇವಿಸಿದ್ದಳು. ಇದರಿಂದ ನಮಗೆ ಗಾಬರಿಯಾಯಿತು. ನಾವೆಲ್ಲರೂ ಮಲಗಲು ಹೋದೆವು. ಇದ್ದಕ್ಕಿದ್ದಂತೆ ನನಗೆ ಎಚ್ಚರಿಕೆ ಆಯ್ತು. ಆಗ ನನ್ನ ತಾಯಿ, ತಂದೆಯ ಶಿರಚ್ಛೇದ ಮಾಡುವುದನ್ನು ನೋಡಿದೆ. ಈ ವೇಳೆ ನನ್ನ ತಾಯಿ ರಕ್ತಸಿಕ್ತವಾಗಿ ಕುಳಿತುಕೊಂಡಿದ್ದಳು. ಈ ದೃಶ್ಯ ನೋಡಿ ನನಗೆ ಆಘಾತವಾಯಿತು. ನಂತರ ಆಕೆ ರೂಮಿನಿಂದ ಹೊರಗೆ ಧಾವಿಸಿ ನಮ್ಮ ದೇವಸ್ಥಾನದಲ್ಲಿ ತಂದೆಯ ತಲೆಯನ್ನು ಇಟ್ಟು ಕುಳಿತುಕೊಂಡಳು ಎಂದು ವಿವರಿಸಿದನು.

    ಸ್ಥಳೀಯರು ದೃಶ್ಯ ನೋಡಿ ಗಾಬರಿಗೊಂಡಿದ್ದು, ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ. ಪ್ರಸ್ತುತ ಪೊಲೀಸರು ಶವವನ್ನು ವಶಪಡಿಸಿಕೊಂಡಿದ್ದು, ಮಹಿಳೆಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ರಾತ್ರಿಯೆಲ್ಲಾ ಮೋಜು ಮಸ್ತಿ – ಬೆಳಗ್ಗೆ ಯುವಕ ಶವವಾಗಿ ಪತ್ತೆ

    ಫೋರೆನ್ಸಿಕ್ ತಂಡವು ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದೆ. ಆರೋಪಿಯ ಮಾನಸಿಕ ಅಸ್ವಸ್ಥತೆಯ ಬಗ್ಗೆ, ವೈದ್ಯರ ವರದಿಯಿಲ್ಲದೆ ಅದರ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದು ಪೊಲೀಸ್ ಅಧಿಕಾರಿ ಚಕ್ರವರ್ತಿ ತಿಳಿಸಿದ್ದಾರೆ.

  • ಮಹಿಳೆಯರಿಗೆ 33% ಸರ್ಕಾರಿ ಉದ್ಯೋಗ, 200 ಕೋಟಿ ವೆಚ್ಚದಲ್ಲಿ ವಿಶ್ವವಿದ್ಯಾಲಯ ನಿರ್ಮಾಣ: ಅಮಿತ್ ಶಾ

    ಮಹಿಳೆಯರಿಗೆ 33% ಸರ್ಕಾರಿ ಉದ್ಯೋಗ, 200 ಕೋಟಿ ವೆಚ್ಚದಲ್ಲಿ ವಿಶ್ವವಿದ್ಯಾಲಯ ನಿರ್ಮಾಣ: ಅಮಿತ್ ಶಾ

    ಅಗರ್ತಲಾ: ತ್ರಿಪುರಾದಲ್ಲಿ ಮಹಿಳೆಯರಿಗಾಗಿ 33% ಸರ್ಕಾರಿ ಉದ್ಯೋಗಗಳು, 200 ಕೋಟಿ ವೆಚ್ಚದಲ್ಲಿ ವಿಶ್ವವಿದ್ಯಾಲಯವನ್ನು ನಿರ್ಮಿಸುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭರವಸೆ ನೀಡಿದರು.

    ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಅವರು ತ್ರಿಪುರಾದಲ್ಲಿ ಶೇ. 33ರಷ್ಟು ಸರ್ಕಾರಿ ಉದ್ಯೋಗಗಳನ್ನು ಮಹಿಳೆಯರಿಗೆ ಮೀಸಲಿಡಲಾಗುವುದು ಎಂದು ಘೋಷಿಸಿದರು. ಇದನ್ನೂ ಓದಿ: ಕೊರೊನಾದಿಂದ ಮೃತಪಟ್ಟ ರೈತರ ಸಾಲಮನ್ನಾ ಅಸಾಧ್ಯ: ಎಸ್.ಟಿ. ಸೋಮಶೇಖರ್

    ಈಶಾನ್ಯ ರಾಜ್ಯದಲ್ಲಿ ಬಿಜೆಪಿ-ಐಪಿಎಫ್‍ಟಿ ಸರ್ಕಾರದ ನಾಲ್ಕನೇ ವಾರ್ಷಿಕೋತ್ಸವದ ಅಂಗವಾಗಿ ಅಗರ್ತಲಾದಲ್ಲಿ ನಡೆದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಪ್ಲಬ್ ದೇಬ್ ಅವರ ಆಡಳಿತವು ರಾಜಕೀಯ ಹಿಂಸಾಚಾರಕ್ಕೆ ಪೂರ್ಣ ವಿರಾಮ ಹಾಕಿದೆ. ನಾವು 200 ಕೋಟಿ ರೂಪಾಯಿ ವೆಚ್ಚದಲ್ಲಿ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯವನ್ನು ಸ್ಥಾಪಿಸುತ್ತೇವೆ. ರಾಜ್ಯದ ಯುವಜನರಿಗಾಗಿ ಕೇವಲ 4 ವರ್ಷಗಳಲ್ಲಿ ಪ್ರತಿ ವ್ಯಕ್ತಿಯ ಆದಾಯವು 13% ರಿಂದ 1.30 ಲಕ್ಷಕ್ಕೆ ಏರಿದೆ ಎಂದು ಹೇಳಿದರು. ಇದನ್ನೂ ಓದಿ: ಬಿಜೆಪಿಯದ್ದು ಸಬ್ ಕಾ ವಿಕಾಸ್ ನಹೀ ಹೇ, ಸಬ್ ಕಾ ಸರ್ವ ನಾಶ್ ಹೇ: ಸಿದ್ದರಾಮಯ್ಯ

    ಪ್ರಸ್ತುತ ನಮ್ಮ ಸರ್ಕಾರದ ಅಡಿಯಲ್ಲಿ ರೈತರ ಆದಾಯವು ದ್ವಿಗುಣಗೊಂಡಿದೆ. ತಲಾ ಆದಾಯವು ರೂ 1.3 ಲಕ್ಷಕ್ಕೆ ಏರಿದೆ. ರೈಲಿನ ಮೂಲಕ ಅಗರ್ತಲಾವನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸಲಾಗಿದೆ. ಒಟ್ಟು 542 ಕಿಮೀ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಲಾಗಿದೆ. ತ್ರಿಪುರಾದಲ್ಲಿ ನಡೆಯುವ ಘೋರ ಅಪರಾಧಗಳಲ್ಲಿ ಶೇ. 30ರಷ್ಟು ಇಳಿಕೆಯಾಗಿದೆ. ಶಿಕ್ಷೆಯ ಪ್ರಮಾಣವು ಶೇ.5 ರಿಂದ ಶೇ.53ಕ್ಕೆ ಏರಿದೆ ಎಂದು ತಿಳಿಸಿದರು.

    ಹಿಂದಿನ ಪ್ರಣಾಳಿಕೆಯಲ್ಲಿ ನೀಡಿದ ಎಲ್ಲಾ ಭರವಸೆಗಳನ್ನು ಆಡಳಿತ ವ್ಯವಸ್ಥೆಯು ಈಡೇರಿಸುತ್ತದೆ. ಮುಂದಿನ ವರ್ಷದ ಆರಂಭದಲ್ಲಿ ಈಶಾನ್ಯ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಹೀಗಾಗಿ ಮತ ಕೇಳಲು ತ್ರಿಪುರಾಕ್ಕೆ ಮತ್ತೆ ಹಿಂದಿರುಗುತ್ತೇನೆ ಎಂದರು.

  • ಆಲ್ಕೋಹಾಲ್ ಎಂದು ತಪ್ಪಾಗಿ ಆಸಿಡ್ ಕುಡಿದ!

    ಆಲ್ಕೋಹಾಲ್ ಎಂದು ತಪ್ಪಾಗಿ ಆಸಿಡ್ ಕುಡಿದ!

    ಅಗರ್ತಲಾ: ತ್ರಿಪುರಾದಲ್ಲಿ ವ್ಯಕ್ತಿಯೊರ್ವ ಆಲ್ಕೋಹಾಲ್ ಎಂದು ತಪ್ಪಾಗಿ ಆಸಿಡ್ ಕುಡಿದು ಸಾವನ್ನಪ್ಪಿದ್ದಾನೆ.

    ಶುಕ್ರವಾರ ತ್ರಿಪುರಾದ ಖೋವೈ ಜಿಲ್ಲೆಯ ಲಂಕಾಪುರ ಎಡಿಸಿ ಗ್ರಾಮದಲ್ಲಿ 55 ವರ್ಷದ ವ್ಯಕ್ತಿಯೊಬ್ಬ ಆಸಿಡ್ ಸೇವಿಸಿ ಮೃತಪಟ್ಟಿದ್ದಾನೆ. ಮೃತ ದುರ್ದೈವಿ ಕಾರ್ತಿಕ್ ಮೋಹನ್ ದೆಬ್ಬರ್ಮ ಮದ್ಯದ ಅಮಲಿನಲ್ಲಿ ಆಸಿಡ್ ತುಂಬಿದ ಬಾಟಲಿಯನ್ನು ಕುಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ದೆಬ್ಬರ್ಮ ದಿನನಿತ್ಯ ಕುಡಿಯುವ ಅಭ್ಯಾಸ ಬೆಳೆಸಿಕೊಂಡಿದ್ದ. ಶುಕ್ರವಾರ ರಾತ್ರಿ ಮದ್ಯದ ಅಮಲಿನಲ್ಲಿದ್ದ ಎಂದು ಪೊಲೀಸರು ಹೇಳಿದ್ದಾರೆ.

    ಮೂಲಗಳ ಪ್ರಕಾರ, ದೆಬ್ಬರ್ಮ ಸ್ಥಳೀಯ ಹಳ್ಳಿಗಾಡಿನ ಮದ್ಯದ ಅಂಗಡಿಯಲ್ಲಿ ಅತಿಯಾಗಿ ಕುಡಿದಿದ್ದು, ಮನೆಗೆ ಹೋಗಿ ಮಲಗಿಕೊಂಡಿದ್ದಾನೆ. ನಂತರ ಮಧ್ಯರಾತ್ರಿ ಎದ್ದು, ಮದ್ಯ ಕುಡಿಯಲು ಹುಡುಕಾಡಿದ್ದಾನೆ. ಆದರೆ ಆತನ ಕೈಗೆ ಮನೆಯಲ್ಲಿದ್ದ ಆಸಿಡ್ ಬಾಟಲಿ ಸಿಕ್ಕಿದೆ. ಅದನ್ನೇ ಮದ್ಯ ಎಂದು ತಿಳಿದ ದೆಬ್ಬರ್ಮ ಆಸಿಡ್ ಕುಡಿದಿದ್ದಾನೆ ಎಂದು ತಿಳಿದುಬಂದಿದೆ. ಇದನ್ನೂ ಓದಿ:  ಸರ್ಕಾರಿ ಶಾಲೆಯ ಕಂಪ್ಯೂಟರ್ ಕದ್ದ ಕಳ್ಳರು

    ALCOHOL

    ಆಸಿಡ್ ಕುಡಿದ ತಕ್ಷಣ ದೆಬ್ಬರ್ಮ ಪ್ರಜ್ಞಾಹೀನನಾಗಿದ್ದಾನೆ. ದೆಬ್ಬರ್ಮ ಕುಟುಂಬ ಸದಸ್ಯರು ಆತ ಪ್ರಜ್ಞಾಹೀನನಾಗಿರುವುದನ್ನು ನೋಡಿ ತಕ್ಷಣ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು. ಆದರೆ ವೈದ್ಯರು ಆತ ಮೃತಪಟ್ಟಿದ್ದಾನೆ ಎಂದು ತಿಳಿಸಿದರು ಎಂದು ಮೂಲಗಳು ಹೇಳಿದೆ.

  • ಸೋದರಿಯರನ್ನ ಕೂಡಿ ಹಾಕಿ 2 ದಿನ ಮೂವರಿಂದ ನಿರಂತರ ಗ್ಯಾಂಗ್‍ರೇಪ್

    ಸೋದರಿಯರನ್ನ ಕೂಡಿ ಹಾಕಿ 2 ದಿನ ಮೂವರಿಂದ ನಿರಂತರ ಗ್ಯಾಂಗ್‍ರೇಪ್

    ಅಗರ್ತಲಾ: 13 ವರ್ಷದ ಅಪ್ರಾಪ್ತೆ ಮತ್ತು ಆಕೆಯ ಸಹೋದರಿಯನ್ನು ಅಪಹರಿಸಿ ಎರಡು ದಿನಗಳ ಕಾಲ ಕೂಡಿ ಹಾಕಿ ಸಾಮೂಹಿಕವಾಗಿ ಅತ್ಯಾಚಾರ ಮಾಡಿರುವ ಘಟನೆ ತ್ರಿಪುರಾದ ಉನಾಕೋಟಿ ಜಿಲ್ಲೆಯಲ್ಲಿ ನಡೆದಿದೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ 34 ವರ್ಷದ ಆಟೋರಿಕ್ಷಾ ಚಾಲಕನನ್ನು ಬಂಧಿಸಲಾಗಿದೆ. ಆಟೋ ಚಾಲಕ ಸೇರಿ ಮೂವರು ಸಹೋದರಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಮೂವರಲ್ಲಿ ಈತನೇ ಮುಖ್ಯ ಆರೋಪಿ ಎಂದು ತಿಳಿದುಬಂದಿದೆ ಅಂತ ಪೊಲೀಸರು ತಿಳಿಸಿದ್ದಾರೆ.

    ಘಟನೆ ವಿವರ:
    ಸಂತ್ರಸ್ತ ಸಹೋದರಿಯರು ಮನೆಗೆ ಹೋಗಲು ಕೈಲಾಶಹಾರ್ ಪಟ್ಟಣದ ಸೇತುವೆ ಬಳಿ ವಾಹನಕ್ಕಾಗಿ ಕಾಯುತ್ತಿದ್ದರು. ಸ್ವಲ್ಪ ಸಮಯದ ಬಳಿಕ ಆಟೋರಿಕ್ಷಾ ಬಂದಿದೆ. ಇಬ್ಬರು ಸಹೋದರಿಯರು ಆ ಆಟೋ ರಿಕ್ಷಾವನ್ನು ಹತ್ತಿದ್ದಾರೆ. ಆದರೆ ದಾರಿ ಮಧ್ಯೆ ಆಟೋ ಚಾಲಕ ಇಬ್ಬರು ಪುರುಷ ಪ್ರಯಾಣಿಕರನ್ನು ಆಟೋಗೆ ಹತ್ತಿಸಿಕೊಂಡಿದ್ದಾನೆ. ಆಟೋ ಚಾಲಕನು ಅವರನ್ನು ಮನೆಗೆ ಬಿಡುವ ಬದಲು ಇಬ್ಬರ ಜೊತೆ ಸೇರಿ ಅವರಿಗೆ ಟವೆಲ್ ಹೊದಿಸಿ ಖೌವಾ ಜಿಲ್ಲೆಯ ತೆಲಿಯಮುರಾ ಪಟ್ಟಣಕ್ಕೆ ಕರೆದುಕೊಂಡು ಹೋಗಿದ್ದಾರೆ ಅಂತ ಸಂತ್ರಸ್ತೆಯರು ದೂರಿನಲ್ಲಿ ಉಲ್ಲೇಖಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

    ಇಬ್ಬರನ್ನು ಒಂದು ರೂಮಿನಲ್ಲಿ ಕೂಡಿ ಹಾಕಿ ನಿರಂತರವಾಗಿ ಮೂವರು ಕಾಮುಕರು ಎರಡು ದಿನಗಳ ಕಾಲ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಎರಡು ದಿನಗಳ ನಂತರ ಸಂತ್ರಸ್ತೆಯರನ್ನು ಟೆಲಿಮೂರ ರೈಲು ನಿಲ್ದಾಣದಲ್ಲಿ ಬಳಿ ಬಿಟ್ಟಿದ್ದಾರೆ. ಅಲ್ಲಿ ಅವರು ಸರ್ಕಾರಿ ರೈಲ್ವೆ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಮಹಿಳಾ ಪೊಲೀಸ್ ಅಧಿಕಾರಿ ಸಂಪಾ ದಾಸ್ ತಿಳಿಸಿದ್ದಾರೆ.

    ನಾವು ಸಂತ್ರಸ್ತೆಯರನ್ನು ನಮ್ಮ ವಶದಲ್ಲಿರಿಸಿಕೊಂಡು ಪೋಷಕರಿಗೆ ಮಾಹಿತಿ ತಿಳಿಸಿದ್ದೆವು. ಬಳಿಕ ಅವರು ಬಂದು ಕರೆದುಕೊಂಡು ಹೋಗಿದ್ದಾರೆ. ಸದ್ಯಕ್ಕೆ ಸಂತ್ರಸ್ತೆಯ ತಾಯಿ ಸಲ್ಲಿಸಿದ ದೂರಿನ ಆಧಾರದ ಮೇರೆಗೆ ಆಟೋರಿಕ್ಷಾ ಚಾಲಕನ ವಿರುದ್ಧ ದೂರು ದಾಖಲಿಸಿಕೊಂಡಿದ್ದು, ಆತನನ್ನು ಬಂಧಿಸಲಾಗಿದೆ. ಇತರ ಇಬ್ಬರು ಆರೋಪಿಗಳಿಗಾಗಿ ಬಲೆ ಬೀಸಿದ್ದೇವೆ ಎಂದು ಪೊಲೀಸ್ ಅಧಿಕಾರಿ ಸ್ವಪನ್ ದೇಬ್ಬರ್ಮಾ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಗೆಳತಿಯಿಂದ ರಾಖಿ ಕಟ್ಟಿಸಿಕೊ ಅಂತಾ ಶಿಕ್ಷಕರು ಒತ್ತಾಯಿಸಿದ್ದಕ್ಕೆ ಶಾಲೆಯಿಂದ ಹಾರಿದ ವಿದ್ಯಾರ್ಥಿ!

    ಗೆಳತಿಯಿಂದ ರಾಖಿ ಕಟ್ಟಿಸಿಕೊ ಅಂತಾ ಶಿಕ್ಷಕರು ಒತ್ತಾಯಿಸಿದ್ದಕ್ಕೆ ಶಾಲೆಯಿಂದ ಹಾರಿದ ವಿದ್ಯಾರ್ಥಿ!

    ಅಗರ್ತಲಾ: ರಕ್ಷಾಬಂಧನದ ನಿಮಿತ್ತ ಗೆಳತಿಯರಿಂದ ರಾಖಿ ಕಟ್ಟಿಸಿಕೊಳ್ಳುವಂತೆ ಶಿಕ್ಷಕಿ ಒತ್ತಾಯಿಸಿದ್ದಕ್ಕೆ ವಿದ್ಯಾರ್ಥಿಯೊಬ್ಬ ಶಾಲೆಯ ಕಟ್ಟಡದಿಂದ ಹಾರಿದ ಘಟನೆ ತ್ರಿಪುರಾದ ಅಗರ್ತಲಾದಲ್ಲಿ ನಡೆದಿದೆ.

    ದಿಲೀಪ್ ಕುಮಾರ್(18) ಸಹಾ ಶಾಲೆಯ ಕಟ್ಟದಿಂದ ಹಾರಿದ ವಿದ್ಯಾರ್ಥಿ. ರಕ್ಷಾ ಬಂಧನದ ನಂತರದ ದಿನವಾದ ಸೋಮವಾರ ದಿಲೀಪ್ ಪ್ರೀತಿಸುತ್ತಿದ್ದ ಗೆಳತಿಯ ಪೋಷಕರು ಶಾಲೆಗೆ ಬಂದಿದ್ದರು. ಅವರು ತಮ್ಮ ಮಗಳಿಂದ ದಿಲೀಪ್ ರಾಖಿ ಕಟ್ಟಿಸಿ, ಇಬ್ಬರು ಅಣ್ಣ ತಂಗಿಯಂತೆ ಇರಬೇಕೆಂದು ಶಿಕ್ಷಕರಿಗೆ ತಿಳಿಸಿದ್ದರು ಎಂದು ವರದಿಯಾಗಿದೆ.

    ದಿಲೀಪ್ ಗೆಳತಿಯ ಪೋಷಕರ ಮಾತು ಕೇಳಿದ ಶಾಲೆಯ ಪ್ರಾಚಾರ್ಯರ ಹಾಗೂ ಕೆಲವು ಶಿಕ್ಷಕರು ರಾಖಿ ಕಟ್ಟಿಸಲು ನಿರ್ಧರಿಸಿದ್ದರು. ಆದರೆ ಶಿಕ್ಷಕರೂ ಎಷ್ಟೇ ತಿಳಿಸಿ ಹೇಳಿದರೂ ದಿಲೀಪ್ ಹಾಗೂ ಆತನ ಗೆಳತಿ ಒಪ್ಪಲಿಲ್ಲ. ಆದರೆ ಬಲವಂತವಾಗಿ ಕೆಲವು ಶಿಕ್ಷಕರು ರಾಖಿ ಕಟ್ಟಿಸಲು ಮುಂದಾದಾಗ ದಿಲೀಪ್ ಶಾಲೆಯ ಎರಡನೇ ಮಹಡಿಯಿಂದ ಹಾರಿದ್ದಾನೆ. ಅದೃಷ್ವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಆತನ ಪರಿಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಶಾಲೆಯ ಶಿಕ್ಷಕರ ನಡೆಯನ್ನು ಖಂಡಿಸಿ, ದಿಲೀಪ್ ಪೋಷಕರು ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಕ್ಕಳ ಕಳ್ಳರ ಬಗ್ಗೆ ಜಾಗೃತಿ ಮೂಡಿಸಲು ಬಂದಿದ್ದ ಅಧಿಕಾರಿಗಳನ್ನೇ ಕೊಂದ್ರು!

    ಮಕ್ಕಳ ಕಳ್ಳರ ಬಗ್ಗೆ ಜಾಗೃತಿ ಮೂಡಿಸಲು ಬಂದಿದ್ದ ಅಧಿಕಾರಿಗಳನ್ನೇ ಕೊಂದ್ರು!

    ಅಗರ್ತಲಾ: ಮಕ್ಕಳ ಕಳ್ಳರು ಎಂದು ತಿಳಿದು ತ್ರಿಪುರಾದ ಮಾಹಿತಿ ಮತ್ತು ಸಂಸ್ಕೃತಿ ವಿಭಾಗದ ಒಬ್ಬರು ಸದಸ್ಯರು ಸೇರಿದಂತೆ ಇಬ್ಬರ ಮೇಲೆ ಹಲ್ಲೆ ನಡೆಸಿ ಕೊಂದ ಘಟನೆ ತ್ರಿಪುರದಲ್ಲಿ ನಡೆದಿದೆ.

    ಸುಕಾಂತ್ ಚಕ್ರವರ್ತಿ(33) ಕೊಲೆಯಾದ ವ್ಯಕ್ತಿ. ಸುಕಾಂತ್‍ರನ್ನು ಮಕ್ಕಳು ಕಳ್ಳ ಎಂದು ಭಾವಿಸಿದ ಗ್ರಾಮದ ಜನರು ಹಲ್ಲೆ ನಡೆಸಿ, ಕೊಲೆ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ಸ್ಮೃತಿ ರಂಜನ್ ದಾಸ್ ತಿಳಿಸಿದ್ದಾರೆ.

    ಸುಕಾಂತ್ ತ್ರಿಪುರಾದ ಮಾಹಿತಿ ಮತ್ತು ಸಂಸ್ಕೃತಿ ವಿಭಾಗದ ಸದಸ್ಯರಾಗಿದ್ದು, ಮಕ್ಕಳ ಕಳ್ಳರು ವದಂತಿ ಹಿನ್ನೆಲೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸುಲು ಅಭಿಯಾನವನ್ನು ಆಯೋಜಿಸಲಾಗಿತ್ತು. ಸ್ಥಳೀಯರಿಗೆ ಜಾಗೃತಿ ಮೂಡಿಸಲು ಹೋದ ಅಧಿಕಾರಿಯೇ ಕೊಲೆಯಾಗಿದ್ದಾರೆ.

    ಸುಕಾಂತ್ ಜನಸಂದಣಿ ಪ್ರದೇಶಗಳಲ್ಲಿ ಲೌಡ್ ಸ್ಪೀಕರ್ ಬಳಸಿ ಮಕ್ಕಳ ಕಳ್ಳರ ಜಾಗೃತಿಯ ಬಗ್ಗೆ ಅಭಿಯಾನ ನಡೆಸುತ್ತಿದ್ದರು. ಆಗ ಗ್ರಾಮಸ್ಥರು ಇವರೇ ಮಕ್ಕಳ ಕಳ್ಳ ಎಂದು ತಿಳಿದು ಅವರನ್ನು ಹೊಡೆದು ಕೊಂದಿದ್ದಾರೆ. ಅಲ್ಲದೇ ಸುಕಾಂತ್ ಜೊತೆಯಲ್ಲಿದ್ದ ಇಬ್ಬರ ಮೇಲೆಯೂ ಹಲ್ಲೆ ನಡೆಸಿ ಅಧಿಕಾರಿಗಳ ವಾಹನವನ್ನು ಜಖಂಗೊಳಿಸಿದ್ದಾರೆ. ಜನರಿಗೆ ಒಳ್ಳೆಯದಾಗಲು ಸರ್ಕಾರದವರೇ ನಮ್ಮನ್ನು ಕಳುಹಿಸಿದ್ದಾರೆ ಎಂದು ಮೂವರು ಹೇಳಿದರು ಅವರ ಮಾತನ್ನು ಕೇಳದೇ ಗ್ರಾಮಸ್ಥರು ದಾಳಿ ನಡೆಸಿದ್ದಾರೆ.

    ಸದ್ಯ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಘಟನೆ ನಡೆದ ನಂತರ ತ್ರಿಪುರಾ ಮುಖ್ಯಮಂತ್ರಿ ಬಿಪ್‍ಲಾಬ್ ಕುಮಾರ್ ದೇಬ್ ಜನರಲ್ಲಿ ಯಾವುದೇ ವದಂತಿಗೆ ಕಿವಿ ಕೊಡದೇ ಶಾಂತಿ ಕಾಪಾಡಲು ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ ಗುರುವಾರದಿಂದ 48 ಗಂಟೆ ಎಸ್‍ಎಂಎಸ್ ಹಾಗೂ ಇಂಟರ್ ನೆಟ್ ಸ್ಥಗಿತಗೊಳಿಸಿದ್ದಾರೆ.