Tag: ಅಗತ್ಯವಸ್ತುಗಳು

  • ಗೋವಾ ಕನ್ನಡಿಗರ ನೆರವಿಗೆ ಬಂದ ಕನ್ನಡ ಸಂಘ – ಅಗತ್ಯವಸ್ತುಗಳ ವಿತರಣೆ

    ಗೋವಾ ಕನ್ನಡಿಗರ ನೆರವಿಗೆ ಬಂದ ಕನ್ನಡ ಸಂಘ – ಅಗತ್ಯವಸ್ತುಗಳ ವಿತರಣೆ

    ಕಾರವಾರ: ಗೋವಾ ಸರ್ಕಾರದ ಕಾರ್ಮಿಕ ಆಯೋಗದ ವತಿಯಿಂದ ಅಖಿಲ ಗೋವಾ ಕನ್ನಡ ಮಹಾಸಂಘದ ಗೌರವಧ್ಯಕ್ಷ ಸಿದ್ಧಣ್ಣ ಮೇಟಿ ನೇತೃತ್ವದ ಕನ್ನಡ ಸಂಘಟನೆಗಳು 8 ಸಾವಿರ ಕನ್ನಡಿಗ ಕುಟುಂಬಗಳಿಗೆ ಒಂದು ತಿಂಗಳ ಉಚಿತ ಅಕ್ಕಿ ಮತ್ತು ಇತರ ಆಹಾರ ಧಾನ್ಯ ವಿತರಿಸಿದ್ದಾರೆ.

    ಪಣಜಿಯ ಮಾಪ್ಸಾ, ಕಲಂಗುಟ್, ವಾಗಾತೋರ್ನಲ್ಲಿರುವ ಕನ್ನಡಿಗ ಕೂಲಿ ಕಾರ್ಮಿಕರ ಕುಟುಂಬಗಳಿಗೆ ಆಹಾರ ಧಾನ್ಯಗಳನ್ನು ವಿತರಿಸಲಾಯಿತು. ಇದರಿಂದಾಗಿ ಗೋವಾದಲ್ಲಿರುವ ಕೂಲಿ ಕಾರ್ಮಿಕರ ಕುಟುಂಬಗಳಿಗೆ ಪ್ರಸಕ್ತ ತಿಂಗಳ ಆಹಾರ ಧಾನ್ಯಗಳು ಉಚಿತವಾಗಿ ಲಭಿಸಿದಂತಾಗಿದೆ. ಭಾರತ ಲಾಕ್‍ಡೌನ್‍ನಿಂದಾಗಿ ಕರ್ನಾಟಕದ ಕೂಲಿ ಕಾರ್ಮಿಕರು ಕರ್ನಾಟಕ ಸರ್ಕಾರದ ಸಹಾಯದ ನಿರೀಕ್ಷೆಯಲ್ಲಿದ್ದರು.

    ಗೋವಾದಲ್ಲಿನ ಕನ್ನಡಿಗ ಕೂಲಿ ಕಾರ್ಮಿಕರು ಸದ್ಯದ ಲಾಕ್‍ಡೌನ್‍ನಿಂದ ಹೆಚ್ಚಿನ ತೊಂದರೆ ಅನುಭವಿಸುತ್ತಿದ್ದಾರೆ. ಸದ್ಯ ಕೆಲಸವಿಲ್ಲದ ಕಾರಣ ಅವರಿಗೆ ಒಂದು ಹೊತ್ತಿನ ಊಟಕ್ಕೂ ತೊಂದರೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಗೋವಾ ಸರ್ಕಾರದ ಕಾರ್ಮಿಕ ಆಯೋಗದ ವತಿಯಿಂದ ನಮ್ಮ ಎಲ್ಲ ಕೂಲಿ ಕಾರ್ಮಿಕ ಕನ್ನಡಿಗರಿಗೆ ಪ್ರಸಕ್ತ ತಿಂಗಳು ಸಾಕಾಗುಷ್ಟು ಆಹಾರ ಧಾನ್ಯ ಮಂಜೂರು ಮಾಡಿಸಿಕೊಳ್ಳುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಈ ಆಹಾರ ಧಾನ್ಯವನ್ನು ನಾವು ಎಲ್ಲ ಕುಟುಂಬಗಳಿಗೂ ವಿತರಣೆ ಮಾಡುತ್ತಿದ್ದೇವೆ ಎಂದು ಅಖಿಲ ಗೋವಾ ಕನ್ನಡ ಮಹಾಸಂಘದ ಅಧ್ಯಕ್ಷ ಸಿದ್ಧಣ್ಣ ಮೇಟಿ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.