Tag: ಅಖಿಲ್

  • ದಕ್ಷಿಣದ ಸಿನಿಮಾರಂಗ ತವರು ಮನೆಯಂತೆ ಅನಿಸುತ್ತಿದೆ : ಜಾನ್ವಿ ಕಪೂರ್

    ದಕ್ಷಿಣದ ಸಿನಿಮಾರಂಗ ತವರು ಮನೆಯಂತೆ ಅನಿಸುತ್ತಿದೆ : ಜಾನ್ವಿ ಕಪೂರ್

    ಹುಭಾಷಾ ನಟಿ ಶ್ರೀದೇವಿ ಕಪೂರ್ (Sridevi Kapoor) ಪುತ್ರಿ ಜಾನ್ವಿ ಕಪೂರ್ (Janhavi Kapoor) ಅಮ್ಮನ ಮಾದರಿಯಲ್ಲೇ ಹೆಜ್ಜೆ ಇಡುತ್ತಿದ್ದಾರೆ. ಶ್ರೀದೇವಿ ರೀತಿಯಲ್ಲೇ ಜಾನ್ವಿ ದಕ್ಷಿಣದ ಸಿನಿಮಾಗಳತ್ತ ಹೆಚ್ಚು ಗಮನ ನೀಡ್ತಿದ್ದಾರೆ. ಹಾಗಾಗಿ ಸದ್ಯ ಜಾನ್ವಿ ಎರಡು ತೆಲುಗು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ.

    ಚಿತ್ರೀಕರಣಕ್ಕಾಗಿ ಹಲವು ದಿನಗಳಿಂದ ಹೈದರಾಬಾದ್ ನಲ್ಲೇ ಬೀಡು ಬಿಟ್ಟಿರುವ ಜಾನ್ವಿ, ದಕ್ಷಿಣದ ಸಿನಿಮಾ ರಂಗ ನನ್ನ ತವರು ಮನೆಯಂತೆ ಭಾಸವಾಗುತ್ತಿದೆ. ಪ್ರತಿ ಕ್ಷಣವೂ ಅಮ್ಮ ನೆನಪಾಗುತ್ತಿದ್ದಾರೆ ಎಂದು ಮಾತನಾಡಿದ್ದಾರೆ. ಸ್ಟಾರ್ ನಟರ ಜೊತೆ ನಟಿಸುವುದಕ್ಕೆ ಅವಕಾಶ ಕೊಟ್ಟಿರುವುದಕ್ಕಾಗಿ ಧನ್ಯವಾದ ತಿಳಿಸಿದ್ದಾರೆ.

    ಇತ್ತೀಚೆಗಷ್ಟೇ ಜಾನ್ವಿ ಕಪೂರ್,  ಜ್ಯೂನಿಯರ್ ಎನ್‌ಟಿಆರ್ (Jr.ntr) ಒಪ್ಪಿಕೊಂಡಿದ್ದರು. ಆ ಸಿನಿಮಾದ ಶೂಟಿಂಗ್ ಕೂಡ ಇನ್ನೂ ಮುಗಿದಿಲ್ಲ, ಅದಕ್ಕೂ ಮುನ್ನವೇ ಮತ್ತೊಂದು ಬಂಪರ್ ಆಫರ್‌ ಅನ್ನು ನಟಿ ತಮ್ಮದಾಗಿಸಿಕೊಂಡಿದ್ದಾರೆ. ಜಾನ್ವಿ ಇದೀಗ ಮತ್ತೊಬ್ಬ ತೆಲುಗಿನ ನಟನ ಜೊತೆ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಹೊಸ ಬಗೆಯ ಕಥೆಯಲ್ಲಿ ಜಾನ್ವಿ ಕಮಾಲ್‌ ಮಾಡಲಿದ್ದಾರೆ. ಇದನ್ನೂ ಓದಿ:ದಾಂಪತ್ಯಕ್ಕೆ ಅಂತ್ಯ ಹಾಡಿದ ನಟಿ, ಡಿವೋರ್ಸ್ ಬಗ್ಗೆ ಬಿಗ್ ಬಾಸ್ ಚೈತ್ರಾ ಅಪ್‌ಡೇಟ್

    ಈ ಹೊಸ ಸಿನಿಮಾದಲ್ಲಿ ನಾಗಾರ್ಜುನ ಪುತ್ರ ಅಖಿಲ್ ಅಕ್ಕಿನೇನಿಗೆ (Akhil Akkineni)  ನಾಯಕಿಯಾಗಿ ಜಾನ್ವಿ ಕಪೂರ್ ಸೆಲೆಕ್ಟ್ ಆಗಿದ್ದಾರೆ. ಯುವ ನಿರ್ದೇಶಕ ಅನಿಲ್ ಕುಮಾರ್ (Anil Kumar) ನಿರ್ದೇಶನದಲ್ಲಿ ಅಖಿಲ್- ಜಾನ್ವಿ ಆಕ್ಟ್ ಮಾಡಲಿದ್ದಾರೆ. ಅನಿಲ್ ಈ ಹಿಂದೆ ಪ್ರಭಾಸ್ ನಟನೆಯ ‘ಸಾಹೋ’ (Saho) ಚಿತ್ರದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ.

    ಅಲ್ಲದೇ, ಕೊರಟಾಲ ಶಿವ ನಿರ್ದೇಶನದ ಸಿನಿಮಾದಲ್ಲಿ ಮೂಡಿ ಬರುತ್ತಿರುವ ‘ದೇವರ’ ಸಿನಿಮಾದಲ್ಲಿ ಜ್ಯೂ.ಎನ್‌ಟಿಆರ್‌ಗೆ ನಾಯಕಿಯಾಗಿ ಜಾನ್ವಿ ಕಪೂರ್ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ನಲ್ಲೂ ಅವರು ಪಾಲ್ಗೊಂಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಿಮ್ಮ ಹೆಣ್ಣಿನ ಹುಚ್ಚಿಗೆ ನನ್ನ ಮೇಲೆ ಆರೋಪ ಬೇಡ – ರಾಜೇಶ್ ಧ್ರುವ ಪತ್ನಿ ಕಣ್ಣೀರು

    ನಿಮ್ಮ ಹೆಣ್ಣಿನ ಹುಚ್ಚಿಗೆ ನನ್ನ ಮೇಲೆ ಆರೋಪ ಬೇಡ – ರಾಜೇಶ್ ಧ್ರುವ ಪತ್ನಿ ಕಣ್ಣೀರು

    – ರೀಲ್ ಹುಡುಗನ ರಿಯಲ್ ಕಹಾನಿ

    ಬೆಂಗಳೂರು: ಖಾಸಾಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಗ್ನಿಸಾಕ್ಷಿ ಧಾರವಾಹಿಯ ಸಹನಟ ರಾಜೇಶ್ ಧ್ರುವ ವಿರುದ್ಧ ಪತ್ನಿ ದೂರು ದಾಖಲಿಸಿದ್ದು, ಇದೀಗ ಪತ್ನಿ ಶೃತಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾರೆ.

    ತನ್ನ ಮನದ ಮಾತನ್ನು ಬಿಟ್ಟಿಟ್ಟ ರಾಜೇಶ್ ಪತ್ನಿ, ನಾನು ಡಿವೋರ್ಸ್ ಕೊಡಲ್ಲ. ನನ್ನ ಮೇಲೆ ಮಾಡಿದ ಆರೋಪಗಳಿಗೆ ನನಗೆ ಸಾಕ್ಷಿ ಬೇಕು. ಅವರ ಮೇಲೆ ನಾನು ಮಾಡಿದ ಆರೋಪಗಳಿಗೆ ನನ್ನ ಬಳಿ ಸಾಕ್ಷಿ ಇದೆ ಎಂದು ಹೇಳುತ್ತಾ ಕಣ್ಣೀರು ಹಾಕಿದ್ದಾರೆ.

    ಪತ್ನಿ ಹೇಳಿದ್ದೇನು..?
    ಅವರು ನನ್ನ ಬಗ್ಗೆ ಏನೇನು ಆರೋಪ ಮಾಡಿದ್ದಾರೆ ಗೊತ್ತಿಲ್ಲ. ಅರ್ಥಮಾಡಿಕೊಳ್ಳಲ್ಲ. ಮನೆಯಲ್ಲಿ ಅಮ್ಮನಿಗೆ ಬೈದಿದ್ದೇನೆ ಎಂದೆಲ್ಲ ಹೇಳಿದ್ದಾರೆ. ಇದಕ್ಕೆ ನನಗೆ ಪ್ರೂಫ್ ಬೇಕು. ಅವರಿಗೆ ಅಫೇರ್ ಇದೆ ಎಂದು ನಾನು ಹೇಳಿದ್ದಕ್ಕೆ ಅವರು ನನಗೂ ಅಫೇರ್ ಇದೆ ಎಂದು ಹೇಳಿದ್ದಾರೆ. ಇದೆಲ್ಲದಕ್ಕೂ ನನಗೆ ಸಾಕ್ಷಿ ಬೇಕು. ಅವರ ಬಗ್ಗೆ ನಾನು ಸಾಕ್ಷಿ ಕೊಡುತ್ತೇನೆ ಅಂದಿದ್ದಾರೆ.

    ಒಂದು ಹುಡುಗಿ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಬಾರದು. ಇದ್ದರೆ ಅದನ್ನು ಪ್ರೂವ್ ಮಾಡಲಿ. 2013ರಲ್ಲಿ ಮದುವೆ ರಿಜಿಸ್ಟರ್ ಆಗಿದೆ. ಇಬ್ಬರೂ ಲವ್ ಮಾಡಿದ್ದು, ಅವರೇ ನಮ್ಮ ಅಪ್ಪನ ಬಳಿ ಬಂದು ಮದುವೆ ಮಾತುಕತೆ ನಡೆಸಿದ್ದಾರೆ. ಆಗ ನನ್ನ ಅಪ್ಪ ಈವಾಗ ಬೇಡ ಓದಿ, ಒಳ್ಳೆಯ ಕೆಲಸ ಸಿಕ್ಕ ಬಳಿಕ ನೋಡೋಣ ಎಂದು ಹೇಳಿದ್ದರು. ನಂತರ ಅವರ ಅಮ್ಮ ಒಪ್ಪಿಕೊಂಡು ಬಳಿಕ ಜಾತಿ ಬೇರೆ ಬೇರೆಯಾಗಿದೆ. ಹೀಗಾಗಿ ಬೇಡ ಎಂದಿದ್ದರು. ಈ ವೇಳೆಯೂ ರಾಜೇಶ್, ಇಲ್ಲ ಅವಳು ಇಲ್ಲದೆ ನಾನು ಇರಲ್ಲ. ಸತ್ತು ಹೋಗ್ತೀನಿ ಎಂದು ಹೇಳಿದ್ದರು. ಇಷ್ಟೆಲ್ಲ ಆದ ಬಳಿಕ ನಾವು ರಿಜಿಸ್ಟರ್ ಮ್ಯಾರೇಜ್ ಆಗಿದ್ದೇವೆ ಎಂದು ವಿವರಿಸಿದ್ರು.

    ಇಷ್ಟವಿಲ್ಲದಿದ್ದರೂ ನೈಟ್ ಶಿಫ್ಟ್:
    ಮದುವೆ ಆದ ಕೂಡಲೇ ನಾವು ಬೆಂಗಳೂರಿಗೆ ಬಂದೆವು. ನನಗೆ ಇಲ್ಲಿಗೆ ಬರುವ ನೆಸೆಸಿಟಿ ಇರಲಿಲ್ಲ. ಇವರು ಸಿರಿಯಲ್ ಬೇಕು ಅಂದ್ರು. ಹೀಗಾಗಿ ಅವರನ್ನು ನಂಬಿಕೊಂಡು ನಾನು ಕೂಡ ಇಲ್ಲಿಗೆ ಬಂದೆ. ಸ್ವಲ್ಪ ದಿನ ಕೆಲಸ ಮಾಡಿದೆ. ಇಷ್ಟ ಇಲ್ಲದಿದ್ದರೂ ನೈಟ್ ಶಿಫ್ಟ್ ಮಾಡಿದೆ. ಅವರು ಕೂಡ 3, 4 ತಿಂಗಳು ಕೆಲಸ ಮಾಡಿದ್ರು. ನಂತರ ನೈಟ್ ಶಿಫ್ಟ್ ಆಗಲ್ಲ ಎಂದು ಹೇಳಿ ಕೆಲಸ ಬಿಟ್ಟರು. ಆ ಸಂದರ್ಭದಲ್ಲಿ ನಾವು ಬಾಡಿಗೆ ಮನೆಯಲ್ಲಿ ಇದ್ದೆವು. ಹೀಗಾಗಿ ಮನೆ ನಡೆಸಬೇಕು ಎಂದು ಕಷ್ಟಪಟ್ಟು ನೈಟ್ ಶಿಫ್ಟ್ ಮಾಡಿದೆ ಅಂದ್ರು.

    ಕೆಲ ದಿನಗಳ ನಂತರ ವಾಪಸ್ ಊರಿಗೆ ಹೋಗೋಣ ಎಂಬ ಮಾತು ಬಂತು. ಆ ವೇಳೆ ಅವರಿಗೆ ಸೀರಿಯಲ್ ನಲ್ಲಿ ಚಾನ್ಸ್ ಸಿಕ್ಕಿರಲಿಲ್ಲ. ಹೀಗಾಗಿ ವಾಪಸ್ ಊರಿಗೆ ತೆರಳಿ ಯಾವುದೋ ಒಂದು ಫಿಲಂನಲ್ಲಿ ನಟಿಸಿದ್ರು. ಕೆಲಸದಿಂದ ನನ್ನನ್ನು ಬಿಡಿಸಿದ್ರು. ಹೀಗೆ ಊರಲ್ಲಿ ಒಂದು ವರ್ಷ ಇದ್ದೆವು. ಮತ್ತೆ ಬೆಂಗಳೂರಿಗೆ ಬಂದೆವು. ಆಗ ಅವರಿಗೆ ಪರಿಚಯಸ್ಥರೊಬ್ಬರು ಸೀರಿಯಲ್ ನಲ್ಲಿ ಅವಕಾಶ ಕೊಡಿಸೋದಾಗಿ ಹೇಳಿದ್ರು. ಹೀಗೆ ಒಂದು ವರ್ಷ ಅವಕಾಶದ ನೆಪದಲ್ಲಿ ಎಲ್ಲಾ ಕಡೆ ಹೋದ್ರು.

    ಮದ್ವೆಯಾದ ಬಳಿಕವೇ ಅವಕಾಶ:
    ನಾನು ಅವರ ಫೇಮ್ ನೋಡಿ ಮದುವೆಯಾಗಿಲ್ಲ. ನಮ್ಮ ಮದುವೆ ಆದ ಬಳಿಕವೇ ಅವರಿಗೆ ನಟನೆಯಲ್ಲಿ ಅವಕಾಶ ಸಿಕ್ಕಿರೋದು. ಯಾವಾಗ ಚಿತ್ರರಂಗಕ್ಕೆ ಕಾಲಿಟ್ಟರೋ ಆವಾಗಿಂದಲೇ ತುಂಬಾ ಹುಡುಗಿಯರ ಜೊತೆ ಮೆಸೇಜ್ ಮಾಡುತ್ತಿದ್ದರು. ರಾತ್ರಿಯೆಲ್ಲ ಕದ್ದುಮುಚ್ಚಿ ಮಾತಾಡುತ್ತಿದ್ದರು. ನಾನು ಕೇಳಿದ್ರೆ ಏನೂ ಹೇಳ್ತಾ ಇರಲಿಲ್ಲ. ಅಲ್ಲದೇ ನನ್ನ ವೃತ್ತಿಯ ಬಗ್ಗೆ ನೀನು ತಲೆ ಹಾಕಬೇಡ ಎಂದು ಹೇಳುತ್ತಿದ್ದರು. ಹುಡುಗಿಯರ ಜೊತೆ ಇರುವಾಗ್ಲೇ ನನಗೆ ಸಿಕ್ಕಿ ಹಾಕಿಕೊಂಡಿದ್ದರು. ಕೇಳಿದ್ರೆ ಒಪ್ಪಿಕೊಳ್ಳುತ್ತಿರಲಿಲ್ಲ. ಸಾಕ್ಷಿ ಮುಂದಿಟ್ಟರೆ ನನಗೆ ಟೆನ್ಶನ್ ಇತ್ತು. ಹೀಗಾಗಿ ಈ ರೀತಿ ದಾರಿ ತಪ್ಪಿದ್ದೀನಿ ಎಂದು ಹೇಳಿ ತಪ್ಪಿಸಿಕೊಳ್ಳುತ್ತಿದ್ದರು ಎಂದು ಹೇಳಿದ್ರು.

    ಒಂದು ವರ್ಷದಿಂದ ಹುಡುಗಿಯೊಬ್ಬಳ ಜೊತೆ ಅಫೇರ್ ಇಟ್ಕೊಂಡಿದ್ದಾರೆ. ಅವಳ ಮನೆಗೆ ಕೂಡ ಹೋಗಿದ್ದಾರೆ. ಇದು ಅವಳ ಮನೆ ಮಾಲೀಕರಿಗೂ ಗೊತ್ತು. ಆದ್ರೆ ಅವಳು ನನಗೆ ತಂಗಿ ಎಂದು ಹೇಳಿ ಅವಳ ಮನೆಗೆ ಹೋಗುತ್ತಿದ್ದರು ಎಂದು ತನ್ನ ಪತಿಯ ಬಗ್ಗೆ ಹೇಳಿಕೊಂಡು ಕಣ್ಣೀರು ಹಾಕಿದ್ದಾರೆ.

    ಎಲ್ಲವನ್ನು ಸಹಿಸಿಕೊಂಡಿದ್ದೆ:
    ಸೀರಿಯಲ್ ಮುಗಿಸಿಕೊಂಡು ಮನೆಗೆ ಬಂದಾಗ ನಾನೇನಾದ್ರೂ ಕೇಳಿದ್ರೆ, ನನ್ನನ್ನು ಕೇಳುವ ಅಧಿಕಾರ ನಿನಗಿಲ್ಲ. ನಾನು ಗಂಡಸು ಎಲ್ಲಾದ್ರೂ ಹೋಗ್ತೀನಿ ಎಂದು ಗದರುತ್ತಿದ್ದರು. ಹುಡುಗಿಯರ ಜೊತೆ ಮೆಸೇಜ್ ಮಾಡೋ ಬಗ್ಗೆ ಕೇಳಿದ್ರೆ, ಅವರು ನನ್ನ ಫ್ಯಾನ್ಸ್. ಹೀಗಾಗಿ ಲವ್ ಎಂದು ಹೇಳುತ್ತಾರೆ ಅನ್ನುತ್ತಿದ್ದರು. ಮೆಸೇಜ್ ಮಾಡಲಿ. ಆದ್ರೆ ತೀರಾ ಹೋಗೋದು ತಪ್ಪು. ಯಾಕಂದ್ರೆ ಅವರಿಗೂ ಒಂದು ಫೀಲಿಂಗ್ಸ್ ಇರುತ್ತದೆ. ಇನ್ನು ಫೇಸ್ ಬುಕ್ ನಲ್ಲೂ 4,5 ಅಕೌಂಟ್ ಗಳು ಇತ್ತು. ಈವಾಗ ಗೊತ್ತಿಲ್ಲ ಯಾಕಂದ್ರೆ ನನ್ನನ್ನು ಈಗ ಬ್ಲಾಕ್ ಮಾಡಿದ್ದಾರೆ ಎಂದು ಹೇಳಿದ್ರು.

    ಇದನ್ನೆಲ್ಲಾ ಗಮನಿಸಿದ ಬಳಿಕ ನಾನು ಯಾವಗ್ಲೋ ಅವರನ್ನು ಬಿಟ್ಟು ಹೋಗಬಹುದಿತ್ತು. ಆದ್ರೆ ಇವತ್ತಲ್ಲ ನಾಳೆ ಸರಿಹೋಗಬಹುದೆಂದು ಎಲ್ಲವನ್ನು ಸಹಿಸಿಕೊಂಡು ಇಷ್ಟು ದಿನ ಜೊತೆ ಇದ್ದೆ. ಯಾವಾಗ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿ ಮನೆಯಿಂದ ಹೊರಗೆ ಹಾಕಿದ್ದಾರೆ. ನಾನು ಈಗ ಎಲ್ಲಿ ಹೋಗಬೇಕು ಎಂದು ಗದ್ಗದಿತರಾದ್ರು.

    ಅತ್ತೆಯ ಬಗ್ಗೆ:
    ರಾಜೇಶ್ ತಂದೆ ತೀರಿಕೊಂಡ ಬಳಿಕ ಅವರ ಅಮ್ಮ ಇತ್ತೀಚೆಗೆ ನಮ್ಮ ಜೊತೆ ಬಂದ್ರು. ಅವರ ಅಮ್ಮನ ಜೊತೆ ನಾನು ಇರಬೇಕಾದ ಪರಿಸ್ಥಿತಿ ಬಂತು. ಹೀಗಾಗಿ ದೊಡ್ಡ ಮನೆ ಮಾಡಬೇಕು. ಸ್ವಲ್ಪ ಹಣ ಅಜೆಸ್ಟ್ ಮಾಡು ಎಂದು ಹೇಳಲು ಆರಂಭಿಸಿದ್ರು. ಹೀಗಾಗಿ ಹಣನೂ ಕೊಟ್ಟೆ. ಆದ್ರೆ ಅದೆಲ್ಲವನ್ನು ಈಗ ಕೇಳಿದ್ರೆ ನನಗೆ ಸಾಕ್ಷಿ ಬೇಕು ಎಂದು ಹೇಳುತ್ತಿದ್ದಾರೆ. ಗಂಡನಿಗೆ ಹಣ ಕೊಡುವಾಗ ರೆಕಾರ್ಡ್ ಮಾಡಬೇಕಿತ್ತಾ. ಅವರು ಹೀಗೆ ಮಾಡುತ್ತಾರೆ ಎಂದು ನನಗೆ ಗೊತ್ತಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ರು.

    ನಾನು ಮಾಂಸಹಾರ ತಿನ್ನುತ್ತೇನೆ. ನನ್ನ ಯಜಮಾನ್ರು ಕೂಡ ನಾನ್ ವೆಜ್ ತಿನ್ನುತ್ತಾರೆ. ಆದ್ರೆ ಅವರು ಮನೆಯಲ್ಲಿ ತಿನ್ನಲ್ಲ. ಓರ್ವ ಬ್ರಾಹ್ಮಣನಾಗಿ ಅವರು ತಿನ್ನಬಹುದು, ನಾನು ಮಾತ್ರ ಯಾಕೆ ತಿನ್ನಬಾರದು ಅಂತಾರೆ. ಸರಿ ಮನೆಯಲ್ಲಿ ತಿನ್ನಬಾರದು ಎಂದು ಒಂದು ದಿನಾನೂ ನಾನು ಮನೆಯಲ್ಲಿ ತಿಂದಿಲ್ಲ. ಅವರು ಹೇಳ್ತಾರೆ ನಾನ್ ವೆಜ್ ತಿಂದು ಮನೆಯಲ್ಲಿ ಗಲೀಜು ಮಾಡ್ತಾಳೆ ಎಂದು ಆದ್ರೆ ಯಾವ ರೀತಿ ಗಲೀಜು ಮಾಡುತ್ತೇನೆ ಎಂದು ನನಗೆ ಸಾಕ್ಷಿ ಬೇಕು ಒತ್ತಾಯಿಸಿದ್ರು.


    ಆಫೇರ್ ಆರೋಪದ ಬಗ್ಗೆ:
    ಸಂದರ್ಶನಕ್ಕೆ ಒಬ್ಬರ ಜೊತೆ ಗಾಡಿಯಲ್ಲಿ ಹೋಗಿರುವುದು ಹೌದು. ಬೇಕಿದ್ರೆ ಅವರನ್ನು ನಾನು ಕರೆಸ್ತೀನಿ. ನಾನು ಕದ್ದು ಮುಚ್ಚಿ ಅವರ ಜೊತೆ ಹೋಗಿಲ್ಲ. ನಾನು ಹೋಗುತ್ತಿರೋದು ಅತ್ತೆಗೂ ಗೊತ್ತು. ನನಗೆ ಅಫೇರ್ ಇದ್ರೆ ಮನೆ ಮುಂದೆ ಯಾಕೆ ಅವರನ್ನು ಕರೆಸುತ್ತೇನೆ. ಕೆಲಸ ಬಿಟ್ಟ ಸಮಯದಲ್ಲಿ ನನ್ನ ಬಳಿ ಹಣ ಇರಲಿಲ್ಲ. ಹೀಗಾಗಿ ಅವರಿಗೂ ಕೆಲಸ ಬೇಕಿತ್ತು. ಹೀಗಾಗಿ ಇಬ್ಬರೂ ಒಟ್ಟಿಗೆ ಬೈಕ್ ನಲ್ಲಿ ಹೋಗಿ, ಸಂದರ್ಶನ ಮುಗಿಸಿ ನನ್ನ ಮನೆ ಬಳಿಯೇ ಬಿಟ್ಟು ಹೋಗಿದ್ದರು.

    ಲೇಟ್ ನೈಟ್ ಮೇಸೇಜ್:
    ರಾಜೇಶ್ ಅವರ ಅಮ್ಮನ ಜೊತೆ ಮಲಗುತ್ತಿದ್ದರು. ನಾನು ಒಬ್ಬಳೇ ರೂಮಿನಲ್ಲಿ ಮಲಗುತ್ತಿದ್ದೆ. ಹೀಗಾಗಿ ಅವರಿಗೆ ನಾನು ರಾತ್ರಿಯಿಡೀ ಚಾಟ್ ಮಾಡುತ್ತಿರುತ್ತೇನೆ ಎಂದು ಹೇಗೆ ಗೊತ್ತು ಎಂದು ಪ್ರಶ್ನಿಸಿದ್ರು.

    ಯಾಕೆ ಗಂಡನ ಬಳಿ ಡ್ರಾಪ್ ಕೇಳಿಲ್ಲ..?
    ರಾಜೇಶ್ ನನ್ನ ಬಳಿ ಮಾತಾಡುತ್ತಿರಲಿಲ್ಲ. ಒಂದು ದಿನ ನನ್ನ ಕೈಯಲ್ಲಿ ಹಣ ಇಲ್ಲವೆಂದು 20 ರೂ. ಕೇಳಿದ್ದೆ. ಇಲ್ಲ ಎಂದು ಹೇಳಿದ್ದರು. ನಾನು ಅವರ ಬ್ಯಾಗ್ ಚೆಕ್ ಮಾಡಿದೆ. ಆಗ ಅವರು ನನಗೆ ಕೆಟ್ಟ ಪದಗಳಿಂದ ಬೈದ್ರು. ಇನ್ನು ಊರಿಗೆ ಡ್ರಾಪ್ ಮಾಡಿ ಅಂದ್ರೆ ಮಾಡಲ್ಲ. ನಿಮ್ಮ ಗಂಡನ ಬೇರೆ ಹುಡುಗಿಯರ ಜೊತೆ ನೋಡಿದ್ದೀನಿ ಎಂದು ನನ್ನ ಫ್ರೆಂಡ್ಸೇ ಎಷ್ಟೋ ಬಾರಿ ಹೇಳಿದ್ದಾರೆ. ಈ ವಿಚಾರವನ್ನು ಅವರ ಅಮ್ಮನ ಬಳಿ ಹೇಳಿದ್ರೆ, ಹುಡುಗಿಯರನ್ನು ಡ್ರಾಪ್ ಮಾಡ್ತಾರೆ ಎಂದು ಹೇಳುತ್ತಾರೆ. ಒಟ್ಟಿನಲ್ಲಿ ನಾನು ಡ್ರಾಪ್ ತಗೊಂಡ್ರೆ ಅದು ಅಫೇರ್. ಅವರು ಡ್ರಾಪ್ ಕೊಟ್ರೆ ಅದು ಮಾನವೀಯತೆಯೇ ಎಂದು ಪ್ರಶ್ನಿಸಿದ್ರು.

    ಡಿವೋರ್ಸ್ ಕೊಡಲ್ಲ:
    ನಾನು ಡಿವೋರ್ಸ್ ಕೊಡಲು ರೆಡಿ ಇಲ್ಲ. ಯಾಕಂದ್ರೆ ನನ್ನ ಜೀವನ ಹಾಳಾಗಿದೆ. ಹೀಗಾಗಿ ನಾನು ಸುಮ್ಮನೆ ಇರಲ್ಲ. ನನಗೆ ಎಲ್ಲದಕ್ಕೂ ಕಾರಣ ಬೇಕು ಅಷ್ಟೇ. ಅರ್ಥ ಮಾಡಿಕೊಳ್ಳಲ್ಲ. ಮನೆಯಲ್ಲಿ ಹೊಂದಾಣಿಕೆಯಿಲ್ಲ ಎಲ್ಲ ಕಾರಣ ಬೇಡ ಎಂದು ಅವರು ಹೇಳಿದ್ರು.

    2ನೇ ಮದ್ವೆಗೆ ಪ್ಲಾನ್:
    ಮಗನಿಗೆ ಎರಡನೆ ಮದುವೆಯ ಯೋಗ ಇದೆ. ಹೀಗಾಗಿ ಅವನಿಗೆ ನಾವು 2ನೇ ಮದುವೆ ಮಾಡುತ್ತೇವೆ. ಹೀಗಾಗಿ ನೀನು ಅವನನ್ನು ಬಿಟ್ಟು ಹೋಗು. ನನ್ನ ಕುಟುಂಬಕ್ಕೆ ನೀನು ಹೊಂದಾಣಿಕೆಯಾಗಲ್ಲ ಎಂದು ಹೇಳುತ್ತಿದ್ದಾರೆ. ಮನೆಯಲ್ಲಿ ನನ್ನ ಡೈನಿಂಗ್ ಟೇಬಲ್ ನಲ್ಲಿ ಕೂರಕ್ಕೆ ಬಿಡಲ್ಲ. ಕಿಚನ್ ಗೆ ಎಂಟ್ರಿ ಇಲ್ಲ. ಅವರ ಪಾತ್ರೆಗಳನ್ನು ಮುಟ್ಟಬಾರದು. ಫ್ರಿಡ್ಜ್ ಗೆ ಲಾಕ್ ಮಾಡ್ತಾರೆ ಎಂದು ಕಣ್ಣೀರು ಹಾಕಿದ್ದಾರೆ.

    ಅಬಾರ್ಷನ್ ಮಾಡಿಸಿದ್ರು:
    3, 4 ವರ್ಷಗಳ ಹಿಂದೆ ಅವರು ನನಗೆ ಬಲವಂತವಾಗಿ ಅಬಾರ್ಷನ್ ಮಾಡಿಸಿದ್ರು. ಆಗ ನನಗೆ ಮೂರೂವರೆ ತಿಂಗಳು ಆಗಿತ್ತು. ಅಬಾರ್ಷನ್ ಮಾಡೋದು ನನಗೆ ಒಂದು ಚೂರು ಇಷ್ಟ ಇರಲಿಲ್ಲ. ಆದ್ರೆ ಅವರೇ ಬಲವಂತವಾಗಿ ಮಾಡಿಸಿದ್ರು ಅಂದ್ರು.

    ಚಿತ್ರರಂಗದ ಬಳಿ ವಿನಂತಿ;
    ನನ್ನ ವೈಯಕ್ತಿಕ ವಿಚಾರವನ್ನು ನೀವು ಪರಿಹರಿಸಬೇಡಿ. ಆದ್ರೆ ಮದುವೆ ಆಗಿದ್ರೂನೂ ಆಗಿಲ್ಲ ಎಂದು ಹೇಳಿ ತುಂಬಾ ಹುಡುಗಿಯರಿಗೆ ಬೇರೆ ಬೇರೆ ಅಕೌಂಟ್ ನಿಂದ ಫ್ಲರ್ಟ್ ಮಾಡಿದ್ದಾರೆ. ಹೀಗಾಗಿ ಚಿತ್ರರಂಗದವರು ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿಕೊಂಡರು.

    ಕೂಲಿ ಕೆಲಸ ಮಾಡಿದ್ರೂ ಪತಿ ಬೇಕು:
    ನನಗೆ ಪತಿ ಬೇಕು. ಯಾಕಂದ್ರೆ ನಾನು ಹುಡುಗಿಯಾಗಿದ್ದು, ನನಗೆ ಮುಂದೆ ಏನು ಮಾಡಲು ಸಾಧ್ಯ. ಅವರು ಸೀರಿಯಲ್ ನಲ್ಲಿ ಇದ್ರೂ, ತೆಗೆದ್ರೂ, ಕೂಲಿ ಕೆಲಸ ಮಾಡಿದ್ರೂ ನಾನು ಅವರನ್ನು ಒಪ್ಪಿಕೊಳ್ಳಲೇ ಬೇಕು. ಯಾಕಂದ್ರೆ ನಾವು ಪ್ರೀತಿಸಿ ಬಂದವರು. ಅವರಿಗೆ ಫೀಲಿಂಗ್ ಇದೆಯೋ ಇಲ್ಲವೋ ಗೊತ್ತಿಲ್ಲ. ಆದ್ರೆ ನನಗೆ ಅವರು ಬೇಕು ಎಂದು ಹೇಳಿದ್ರು.

    ರಾಜೇಶ್ ಅಫೇರ್ ಬಗ್ಗೆ:
    ಒಬ್ಬಳ ಜೊತೆ ಚಾಟ್ ಮಾಡ್ತಿದ್ದರು. ಅಲ್ಲದೇ ಅವಳ ರೂಮಲ್ಲೇ ಇರುವ ಗೆಳತಿಯ ಜೊತೆನೂ ಮೆಸೇಜ್ ಮಾಡುತ್ತಿದ್ದರು. ಇದು ಆ ಹುಡುಗಿಯರಿಬ್ಬರಿಗೂ ಗೊತ್ತಿತ್ತು. ಆದ್ರೆ ಇವರಿಗೆ ಗೊತ್ತಿರಲಿಲ್ಲ. ಇವರು ಅವರ ಜೊತೆ ಕೆಟ್ಟದಾಗಿ ಮೆಸೇಜ್ ಮಾಡುತ್ತಿದ್ದರು. ಈ ಬಗ್ಗೆ ಅವರೇ ನನ್ನ ಬಳಿ ಹೇಳಿಕೊಂಡಿದ್ದಾರೆ. ಅಲ್ಲದೇ ಈ ಬಗ್ಗೆ ಹುಡುಗಿಯರು ಇವರ ವಿರುದ್ಧ ಕೇಸ್ ದಾಖಲಿಸಿದ್ದರು. ಆ ಸಂದರ್ಭದಲ್ಲಿ ರಾಜೇಶ್ ನನ್ನ ಬಳಿ ಬಂದು ನಾನು ತಪ್ಪು ಮಾಡಿದ್ದೇನೆ. ಮತ್ತೆ ಈ ರೀತಿ ಮಾಡಲ್ಲ ಎಂದು ಹೇಳಿದ್ದರು. ಬಳಿಕ ನಾನೇ ಆ ಹುಡುಗಿಯರನ್ನು ಒಪ್ಪಿಸಿ ದೂರು ಹಿಂಪಡಿದಿದ್ದೇನೆ ಎಂದು ತಿಳಿಸಿದರು.

    https://www.youtube.com/watch?v=gdBQ-VU9wfI

    https://www.youtube.com/watch?v=z83AFF9LPEY

    https://www.youtube.com/watch?v=sIIPhN9lvjM

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಗ್ನಿಸಾಕ್ಷಿ ಅಖಿಲ್ ವಿರುದ್ಧ ದೂರು ದಾಖಲು

    ಅಗ್ನಿಸಾಕ್ಷಿ ಅಖಿಲ್ ವಿರುದ್ಧ ದೂರು ದಾಖಲು

    ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಅಗ್ನಿಸಾಕ್ಷಿ’ ಧಾರವಾಹಿಯ ಅಖಿಲ್ ಪಾತ್ರಧಾರಿ ರಾಜೇಶ್ ಧ್ರುವ ವಿರುದ್ಧ ದೂರು ದಾಖಲಾಗಿದೆ.

    ರಾಜೇಶ್ ಧ್ರುವ 2017ರಲ್ಲಿ ಶ್ರುತಿ ಅವರನ್ನು ಮದುವೆಯಾಗಿ ಬಳಿಕ ಅವರಿಗೆ ವರದಕ್ಷಿಣೆ ತರುವಂತೆ ಟಾರ್ಚರ್ ನೀಡಿದ್ದಾರೆ. ಅಲ್ಲದೇ ಮಾನಸಿಕ ಹಿಂಸೆ ನೀಡಿ ಮನೆಯಿಂದ ಹೊರ ಹಾಕಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.

    ಶೃತಿ ಜೊತೆ ಲಿವಿಂಗ್ ಟುಗೆದರ್ ರಿಲೇಶನ್‍ಶಿಪ್‍ನಲ್ಲಿದ್ದ ಧ್ರುವ ಅವರು 2017ರಲ್ಲಿ ಶ್ರುತಿ ಜೊತೆ ಮದುವೆಯಾಗಿದ್ದರು. ಮದುವೆ ಆದ ಬಳಿಕ ಮುಖ್ಯಮಂತ್ರಿ ಚಂದ್ರು ಅವರ ಮನೆಯಲ್ಲಿ ಬಾಡಿಗೆಗೆ ಇದ್ದರು. ಮದುವೆ ಆದರೂ ನನಗೆ ಮದುವೆಯಾಗಿಲ್ಲ ಎಂದು ಧ್ರುವ ಹೇಳಿ ತಿರುಗಾಡುತ್ತಿದ್ದರು.

    ಮದುವೆಯಾದ ಬಳಿಕ ಧ್ರುವ ಬೇರೆ ಯುವತಿಯರ ಜೊತೆ ಆಫೇರ್ ಇಟ್ಟುಕೊಂಡಿದ್ದರು. ‘ತಕಧಿಮಿತ’ ರಿಯಾಲಿಟಿ ಶೋನಲ್ಲಿ ಸ್ಪರ್ಧಿ ಆಗಿ ಭಾಗವಹಿಸುತ್ತಿದ್ದಾರೆ. ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ಸಂಬಂಧ ಕೆ.ಎಸ್ ಪೊಲೀಸ್ ಠಾಣೆಯಲ್ಲಿ ಶೃತಿ ಪ್ರಕರಣ ದಾಖಲಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv