Tag: ಅಖಿಲಾ ಪ್ರಕಾಶ್

  • ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಅಖಿಲಾ ಪ್ರಕಾಶ್

    ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಅಖಿಲಾ ಪ್ರಕಾಶ್

    ‘ಅಣ್ಣ ತಂಗಿ’ ಸೀರಿಯಲ್ ನಟಿ ಅಖಿಲಾ ಪ್ರಕಾಶ್ (Akhila Prakash) ಅವರು ದಾಂಪತ್ಯ ಜೀವನಕ್ಕೆ (Wedding) ಕಾಲಿಟ್ಟಿದ್ದಾರೆ. ಭರತ್ ಕಾಂತ್ ಎಂಬುವವರ ಜೊತೆ ಅಖಿಲಾ ಹೊಸ ಬಾಳಿಗೆ ಕಾಲಿಟ್ಟಿದ್ದು, ಹೊಸ ಜೋಡಿಗೆ ಅಭಿಮಾನಿಗಳು ಶುಭಕೋರುತ್ತಿದ್ದಾರೆ.

    ಕೊಡಗಿನ ಕುವರಿ ಅಖಿಲಾ ಪ್ರಕಾಶ್ ಮತ್ತು ಭರತ್ ಕಾಂತ್ (Bharath Kanth) ಹಲವು ವರ್ಷಗಳು ಪ್ರೀತಿಸಿ, ಗುರುಹಿರಿಯರ ಸಮ್ಮತಿ ಪಡೆದು ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ಕೆಲ ತಿಂಗಳುಗಳ ಹಿಂದೆ ಇಬ್ಬರೂ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು. ಇದೀಗ ಮದುವೆಯಾಗಿದ್ದಾರೆ. ಇದನ್ನೂ ಓದಿ:ರಜನಿ 170ನೇ ಸಿನಿಮಾಗೆ ಟೈಟಲ್ ಫಿಕ್ಸ್: ಟೈಟಲ್ ಟೀಸರ್ ಔಟ್

    ಅಖಿಲಾ ಪ್ರಕಾಶ್ ಮದುವೆಗೆ ‘ಅಣ್ಣ ತಂಗಿ’ (Anna Thangi Serial) ಸೀರಿಯಲ್ ತಂಡ ಮತ್ತು ಹಲವು ಕಿರುತೆರೆ ಕಲಾವಿದರು ಆಗಮಿಸಿ ಹೊಸ ಜೋಡಿಗೆ ಶುಭಹಾರೈಸಿದ್ದಾರೆ. ಇದನ್ನೂ ಓದಿ:ತೆಲುಗಿನ ಬಿಗ್ ಬಾಸ್ ಮನೆಯಿಂದ ಕನ್ನಡತಿ ಔಟ್

    ‘ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು 3’ ಮೂಲಕ ಸ್ಪರ್ಧಿಯಾಗಿ ಕಾಲಿಟ್ಟರು. ಇದೀಗ ‘ಅಣ್ಣ ತಂಗಿ’ ಸೀರಿಯಲ್‌ನಲ್ಲಿ ತಂಗಿಯ ಪಾತ್ರದಲ್ಲಿ ಅಖಿಲಾ ನಟಿಸುತ್ತಿದ್ದಾರೆ. ತುಳಸಿ ಎಂಬ ಮುಗ್ಧ ಹಳ್ಳಿ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  • ಎಂಗೇಜ್‌ಮೆಂಟ್‌ ಸಂಭ್ರಮದಲ್ಲಿ ‘ಅಣ್ಣ- ತಂಗಿ’ ಸೀರಿಯಲ್‌ ನಟಿ ಅಖಿಲಾ ಪ್ರಕಾಶ್

    ಎಂಗೇಜ್‌ಮೆಂಟ್‌ ಸಂಭ್ರಮದಲ್ಲಿ ‘ಅಣ್ಣ- ತಂಗಿ’ ಸೀರಿಯಲ್‌ ನಟಿ ಅಖಿಲಾ ಪ್ರಕಾಶ್

    ಕಿರುತೆರೆಯ ಜನಪ್ರಿಯ ‌’ಅಣ್ಣ ತಂಗಿ’ (Anna Thangi) ಸೀರಿಯಲ್ ನಟಿ ಅಖಿಲಾ ಪ್ರಕಾಶ್ (Akhila Prakash) ಅವರು ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ಬಹುಕಾಲದ ಗೆಳೆಯನ ಜೊತೆ ಮೈಸೂರಿನಲ್ಲಿ ಸರಳವಾಗಿ ನಟಿ ಎಂಗೇಜ್‌ಮೆಂಟ್ (Engagement) ಮಾಡಿಕೊಂಡಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ:ಮೆಗಾ ಪ್ರಿನ್ಸ್ ವರುಣ್ ತೇಜ್- ಲಾವಣ್ಯ ತ್ರಿಪಾಠಿ ಗ್ರ್ಯಾಂಡ್‌ ಎಂಗೇಜ್‌ಮೆಂಟ್

    ಕನ್ನಡದ ‘ಸೋಜಿಗ’, ’18 ರಿಂದ 25′, ‘ರತ್ನಮಂಜರಿ’, ‘ಗಾಂಚಾಲಿ’ ಸಿನಿಮಾಗಳು ಹಾಗೂ ‘ಅಣ್ಣ ತಂಗಿ’ ಧಾರಾವಾಹಿಯಲ್ಲಿ ನಟಿಸಿರುವ ಅಖಿಲಾ ಪ್ರಕಾಶ್ ಅವರು ಭರತ್ ಕಾಂತ (Bharath Kanth) ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದು ಲವ್ ಮ್ಯಾರೇಜ್ ಎನ್ನಲಾಗಿದೆ.

    ಕೂರ್ಗ್ ಮೂಲದ ಅಖಿಲಾ ಅವರ ತಂದೆ ಪೊಲೀಸ್ ಇಲಾಖೆಯಲ್ಲಿ ಕೆಲಸ ನಿರ್ವಹಿಸಿದ್ದರು. ಮೈಸೂರಿನಲ್ಲಿಯೇ ಬೆಳೆದ ಅಖಿಲಾ ಅವರು ವಾಹಿನಿಯೊಂದರಲ್ಲಿ ಪ್ರಸಾರ ಆಗುತ್ತಿದ್ದ ‘ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್ ಸೀಸನ್ 3’ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಟಾಪ್ 5 ಸ್ಪರ್ಧಿಗಳಲ್ಲಿ ಓರ್ವರಾಗಿದ್ದರು. ಡಾಕ್ಟರ್ ಆಗಬೇಕು ಎಂದುಕೊಂಡಿದ್ದ ಅಖಿಲಾ ಅವರು ಆಕ್ಟರ್ ಆದರು.

    ಪ್ರಸ್ತುತ ಅಣ್ಣ-ತಂಗಿ ಧಾರಾವಾಹಿಯಲ್ಲಿ ತುಳಸಿ ಪಾತ್ರದಲ್ಲಿ ಅಖಿಲಾ ಪ್ರಕಾಶ್ ನಟಿಸುತ್ತಿದ್ದಾರೆ. ಅಖಿಲಾ ಎಂಗೇಜ್‌ಮೆಂಟ್ ಅಣ್ಣ ತಂಗಿ ಧಾರಾವಾಹಿ ತಂಡ ಆಗಮಿಸಿತ್ತು. ‘ರಾಜ ರಾಣಿ’ ಶೋ ಖ್ಯಾತಿಯ ಅಕ್ಷಿತಾ ರಜತ್ ಭಾಗಿಯಾಗಿ, ಹೊಸ ಜೋಡಿಗೆ ಶುಭಕೋರಿದ್ದಾರೆ.

  • ಥ್ರಿಲ್ಲರ್ ಅನುಭವ ನೀಡುವ ರೋಚಕ ರತ್ನಮಂಜರಿ!

    ಥ್ರಿಲ್ಲರ್ ಅನುಭವ ನೀಡುವ ರೋಚಕ ರತ್ನಮಂಜರಿ!

    ಬೆಂಗಳೂರು: ವಿದೇಶದಲ್ಲಿ ನೆಲೆಸಿರುವ ಕನ್ನಡಿಗರು ಅಪ್ಪಟ ಸಿನಿಮಾ ಪ್ರೇಮದಿಂದ ರೂಪಿಸಿರುವ ಚಿತ್ರ ರತ್ನಮಂಜರಿ. ರಾಜ್ ಚರಣ್ ನಾಯಕನಾಗಿ ನಟಿರೋ ಈ ಚಿತ್ರದ ಬಗ್ಗೆ ಆರಂಭದಿಂದಲೂ ಕುತೂಹಲವಿತ್ತು. ಅದಕ್ಕೆ ತಕ್ಕುದಾದ ರೋಚಕ ವಿಚಾರಗಳೇ ಚಿತ್ರತಂಡದ ಕಡೆಯಿಂದ ಹೊರ ಬೀಳುತ್ತಾ ಸಾಗಿ ಬಂದಿತ್ತು. ಇದೀಗ ಈ ಚಿತ್ರ ತೆರೆ ಕಂಡಿದೆ. ವಿಶಿಷ್ಟವಾದ ಕಥೆ, ವಿಭಿನ್ನ ನಿರೂಪಣೆ, ಎದೆ ಝಲ್ಲೆನ್ನಿಸುವಂಥಾ, ಕಣ್ಣಿಗೆ ಹಬ್ಬದಂಥಾ ದೃಷ್ಯ ಶ್ರೀಮಂತಿಕೆಯಿಂದ ಪ್ರೇಕ್ಷಕರ ಮನಸು ತಾಕಿದೆ.

    ಪ್ರಸಿದ್ಧ್ ನಿರ್ದೇಶನದ ಚೊಚ್ಚಲ ಚಿತ್ರವಾದ ರತ್ನಮಂಜರಿಯನ್ನು ವಿದೇಶದಲ್ಲಿ ನೆಲೆಸಿರುವ ಕನ್ನಡಿಗರಾದ ಸಂದೀಪ್, ನಟರಾಜ್ ಹಳೇಬೀಡು ಮತ್ತು ಸಂದೀಪ್ ಹಳೇಬೀಡು ನಿರ್ಮಾಣ ಮಾಡಿದ್ದಾರೆ. ಪ್ರೇಮಸಲ್ಲಾಪದೊಂದಿಗೇ ವಿದೇಶದಲ್ಲಿ ತೆರೆದುಕೊಂಡು, ಅಲ್ಲಿನ ಕಾರ್ಪೋರೇಟ್ ಕಾರಿಡಾರುಗಳ ತುಂಬಾ ಅಡ್ಡಾಡಿ, ಒಂದು ನಿಗೂಢ ಕೊಲೆಯ ಚುಂಗು ಹಿಡಿದು ಸೀದಾ ಕೊಡಗಿನ ಪಥದತ್ತ ಹೊರಳಿಕೊಳ್ಳೋ ಕಥೆ ಪಕ್ಕಾ ಕಮರ್ಷಿಯಲ್ ಪಟ್ಟುಗಳೊಂದಿಗೆ ಎಲ್ಲರ ಗಮನ ಸೆಳೆಯುವಂತೆ ಮೂಡಿ ಬಂದಿದೆ.

    ರಾಜ್ ಚರಣ್ ನಾಯಕನಾಗಿ ಸಿದ್ಧಾರ್ಥ್ ಎಂಬ ಪಾತ್ರಕ್ಕೆ ಜೀವ ತುಂಬಿದ್ದಾರೆ. ಸಿದ್ಧಾರ್ಥ್ ಎಳವೆಯಿಂದಲೂ ಸೂಕ್ಷ್ಮ ಸ್ವಭಾವದ ಹುಡುಗ. ಬೆಳೆದು ದೊಡ್ಡವನಾದ ನಂತರವೂ ಅದೇ ಮನಸ್ಥಿತಿ ಹೊಂದಿರೋ ಆತ ಅಮೆರಿಕಾದಲ್ಲಿ ಸಸ್ಯಶಾಸ್ತ್ರಜ್ಞನಾಗಿ ಕಾರ್ಯ ನಿರ್ವಹಿಸುತ್ತಿರುತ್ತಾನೆ. ಅವನ ಮನೆ ಪಕ್ಕದಲ್ಲಿಯೇ ಕೊಡಗು ಮೂಲದ ದಂಪತಿಯೂ ವಾಸವಾಗಿರುತ್ತಾರೆ. ಆದರೆ ಅದೊಂದು ದಿನ ಆ ದಂಪತಿ ಕೊಲೆಯಾಗಿ ಬಿಡುತ್ತಾರೆ. ಸಸ್ಯಶಾಸ್ತ್ರಜ್ಞ ನಾಯಕ ಈ ಕೊಲೆಯ ಬೆಂಬಿದ್ದು ಕೊಡಗಿಗೆ ಬಂದಿಳಿಯೋ ಮೂಲಕ ಅಲ್ಲಿ ಕಥೆಯ ಓಟ ಆರಂಭವಾಗುತ್ತೆ. ಆ ನಂತರದ ಜರ್ನಿಯ ಪ್ರತಿ ತಿರುವುಗಳೂ ಕೂಡಾ ರೋಚಕ ಅನುಭವವನ್ನೇ ನೋಡುಗರಿಗೆ ದಾಟಿಸುತ್ತದೆ.

    ಅಮೆರಿಕದಲ್ಲಿ ಕೊಲೆಯಾದ ನಾಣಯ್ಯ ಒಡೆತನದ ರತ್ನಮಂಜರಿ ಎಂಬ ಎಸ್ಟೇಟಿನ ನಿಗೂಢದ ಸುತ್ತ ಕಥೆ ರೋಚಕವಾಗಿ ಚಲಿಸುತ್ತದೆ. ಆ ವಾತಾವರಣದ ಇಂಚಿಂಚು ಸೌಂದರ್ಯವನ್ನೂ ಪ್ರೀತಂ ತೆಗ್ಗಿನಮನೆ ತಮ್ಮ ಕ್ಯಾಮೆರಾದಲ್ಲಿ ಸೆರೆಯಾಗಿಸಿದ್ದಾರೆ. ನಿರ್ದೇಶಕ ಸಿದ್ಧಾರ್ಥ್ ಅಂಥಾ ಪ್ರಾಕೃತಿಕ ಸೌಂದರ್ಯದ ನಡುವೆಯೂ ಪ್ರೇಕ್ಷಕರು ಬೆಚ್ಚಿ ಬೀಳುವಂಥಾ ಆವೇಗದೊಂದಿಗೆ ದೃಶ್ಯ ಕಟ್ಟಿದ್ದಾರೆ. ಒಟ್ಟಾರೆಯಾಗಿ ಅಮೆರಿಕಾದಲ್ಲಿ ನಾಣಯ್ಯ ದಂಪತಿ ಕೊಲೆಯಾಗಲು ಕಾರಣವೇನು ಅನ್ನೋದರಿಂದ ಮೊದಲ್ಗೊಂಡು ರೋಚಕ ಕಥನವೇ ಈ ಚಿತ್ರದಲ್ಲಿದೆ.

    ನಿರ್ದೇಶಕ ಪ್ರಸಿದ್ಧ್ ಈ ಮೂಲಕ ಮೊದಲ ಹೆಜ್ಜೆಯಲ್ಲಿಯೇ ಭರವಸೆ ಮೂಡಿಸಿದ್ದಾರೆ. ನಾಯಕ ರಾಜ್ ಚರಣ್ ಕೂಡಾ ನಾಯಕನಾಗಿ ನೆಲೆಗೊಳ್ಳೋ ಲಕ್ಷಣಗಳನ್ನು ನಟನೆಯ ಮೂಲಕ ಹೊಮ್ಮಿಸಿದ್ದಾರೆ. ಅಖಿಲಾ ಪ್ರಕಾಶ್ ಮುದ್ದಾಗಿ ಪ್ರೇಕ್ಷಕರನ್ನು ಆವರಿಸಿಕೊಂಡಿದ್ದಾರೆ. ಇನ್ನುಳಿದಂತೆ ಈಗಾಗಲೇ ಪ್ರತಿಭಾವಂತ ನಟಿಯಾಗಿ ಗುರುತಿಸಿಕೊಂಡಿರುವ ಪಲ್ಲವಿ ರಾಜು ಕೂಡಾ ಚೆಂದಗೆ ನಟಿಸಿದ್ದಾರೆ. ವಿದೇಶದ ಕಾರ್ಪೋರೇಟ್ ಜಗತ್ತಿನಲ್ಲಿ ಸುತ್ತಾಡಿಸಿ ಕೊಡಗಿನ ನಿಗೂಢದಲ್ಲಿ ಕಥೆ ಸಾಗುವ ಈ ಚಿತ್ರ ಪ್ರತಿ ವರ್ಗದ ಪ್ರೇಕ್ಷಕರಿಗೂ ಮಜವಾದ ಅನುಭವ ನೀಡುವಂತೆ ಮೂಡಿ ಬಂದಿದೆ.

    ರೇಟಿಂಗ್: 4/5

  • ರತ್ನ ಮಂಜರಿ ಮೇ 17ಕ್ಕೆ ಬಿಡುಗಡೆ

    ರತ್ನ ಮಂಜರಿ ಮೇ 17ಕ್ಕೆ ಬಿಡುಗಡೆ

    ಎನ್ ಆರ್ ಐ ಕನ್ನಡಿಗರ ಪ್ರಾಮಾಣಿಕ ಪ್ರಯತ್ನದ ಸಿನೆಮಾ `ರತ್ನ ಮಂಜರಿ’ ಇದೇ ಶುಕ್ರವಾರ ಮೇ 17ರಂದು ಬಿಡುಗಡೆಯಾಗುತ್ತಿದೆ. ಶರಾವತಿ ಫಿಲ್ಮ್ಸ್ ಅಡಿಯಲ್ಲಿ ಸಂದೀಪ್ ಕುಮಾರ್, ಡಾ. ನವೀನ್ ಕೃಷ್ಣ ಹಾಗೂ ನಟರಾಜ ಹಳೇಬೀಡು ನಿರ್ಮಾಣದ ಸಿನಿಮಾಕ್ಕೆ ಅಮೆರಿಕದಲ್ಲಿ ನಡೆದ ಘಟನೆಗೆ ಕರ್ನಾಟಕದ ಕನೆಕ್ಷನ್ ಬೆಸೆಯಲಾಗಿದೆ.

    ಅಮೆರಿಕದಲ್ಲಿ ದಶಕಗಳ ಹಿಂದೆ ನಡೆದೊಂದು ಕಥೆಯ ಬೇಸಿನಲ್ಲಿ ರತ್ನಮಂಜರಿ ಚಿತ್ರದ ಕಥೆ ರೂಪುಗೊಂಡಿದೆ. ಅದು ಸಂದೀಪ್ ಸೇರಿದಂತೆ ನಿರ್ಮಾಪಕರೆಲ್ಲರ ಇಷಾರೆಯೊಂದಿಗೇ ರೆಡಿಯಾಗಿರೋ ಕಥೆ. ನಂತರ ಈ ಚಿತ್ರದ ಐವತ್ತರಷ್ಟು ಭಾಗದ ಕಥೆಯನ್ನು ಯುಎಸ್ ನಲ್ಲಿ ಮತ್ತುಳಿದ ಅರ್ಧ ಭಾಗವನ್ನು ಮಡಿಕೇರಿಯಲ್ಲಿ ನಡೆಸಲು ತೀರ್ಮಾನಿಸಲಾಗಿತ್ತು. ಅದರಂತೆಯೇ ಇಡೀ ಚಿತ್ರೀಕರಣವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಲಾಗಿದೆ.

    ಪ್ರತಿಯೊಂದು ವಿಚಾರದಲ್ಲಿಯೂ ಕೂಡಾ ಹೊಸತನವೇ ತುಂಬಿಕೊಳ್ಳಬೇಕೆಂಬುದು ಸಂದೀಪ್ ಅವರ ಇರಾದೆಯಾಗಿತ್ತು. ತಮ್ಮಂತೆಯೇ ಕಲೆಯ ಗುಂಗು ಹೊಂದಿದ್ದ ಹೊರನಾಡ ಕನ್ನಡಿಗರಿಗೂ ಅವಕಾಶ ಮಾಡಿಕೊಡಬೇಕೆಂಬ ಆಲೋಚನೆಯೂ ಅವರಲ್ಲಿತ್ತು. ಆದ್ದರಿಂದಲೇ ಈ ಚಿತ್ರದ ಪಾತ್ರಕ್ಕಾಗಿ ವಿದೇಶದಲ್ಲಿ ಆಡಿಷನ್ ಕರೆದಾಗ ಸಾವಿರಕ್ಕೂ ಹೆಚ್ಚು ಆಸಕ್ತರು ಮುಂದೆ ಬಂದಿದ್ದರು. ಕಡೆಗೂ ಅವರಲ್ಲಿ ಹತ್ತು ಮಂದಿಯನ್ನು ಆಯ್ಕೆ ಮಾಡಿ ನಟಿಸಲು ಅವಕಾಶ ಮಾಡಿ ಕೊಡಲಾಗಿದೆ. ಅವರೆಲ್ಲರೂ ವಿದೇಶದಲ್ಲಿಯೇ ರಂಗಭೂಮಿಯ ಸಖ್ಯ ಹೊಂದಿದ್ದವರು.

    ನಿರ್ದೇಶಕ ಪ್ರಸಿದ್ದ್ ಡೆನ್ಮಾರ್ಕ್ ನಿವಾಸಿ ಈ ಚಿತ್ರವನ್ನು ಅನೇಕ ಬಾರಿ ಅವಲೋಕನ ಮಾಡಿ ತೆರೆಗೆ ತಂದಿದ್ದಾರೆ. ರಾಜ್ ಚರಣ್, ಅಖಿಲಾ ಪ್ರಕಾಶ್, ಪಲ್ಲವಿ ರಾಜು, ಕನ್ನಿಕಾ ಹಾಗೂ ಶ್ರದ್ಧಾ ಸಾಲಿಯಾನ್ ಪೈಕಿ ಯಾರು ರತ್ನ ಮಂಜರಿ ಎಂಬುದು ಕುತೂಹಲದ ವಿಚಾರ.

    ಅಮೆರಿಕದಲ್ಲಿ ಹಾಗೂ ಕರ್ನಾಟಕದ ಮನೋಹರವಾದ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಪ್ರೀತಂ ಮತ್ತು ಕಿಟ್ಟಿ ಛಾಯಾಗ್ರಹಣ, ಹರ್ಷವರ್ಧನ ರಾಜ್ ಸಂಗೀತ ಸಂಯೋಜನೆ, ಪವನ್ ರಾಮ್ ಶೆಟ್ಟಿ ಸಂಕಲನ, ವಿಕ್ರಮ್ ಮೋರ್ ಸಾಹಸ ಈ ಸಿನಿಮಾಕ್ಕೆ ಒದಗಿಸಿದ್ದಾರೆ.

  • ರತ್ನಮಂಜರಿಯಲ್ಲಿದೆ ಹಾಲಿವುಡ್ ಮಾದರಿಯ ತಾಂತ್ರಿಕ ಶ್ರೀಮಂತಿಕೆ!

    ರತ್ನಮಂಜರಿಯಲ್ಲಿದೆ ಹಾಲಿವುಡ್ ಮಾದರಿಯ ತಾಂತ್ರಿಕ ಶ್ರೀಮಂತಿಕೆ!

    ಬೆಂಗಳೂರು: ಅಮೆರಿಕದಂಥಾ ವಿದೇಶಗಳಲ್ಲಿ ನೆಲೆಸಿದ್ದರೂ ಕನ್ನಡತನ ಮರೆಯದ, ಬೇರುಗಳಿಗಾಗಿ ತುಡಿಯುವ ಅದೆಷ್ಟೋ ಮನಸುಗಳಿವೆ. ಇಂಥಾ ಮನಸುಗಳಿಂದಲೇ ಕನ್ನಡದ ಸಾಂಸ್ಕೃತಿಕ ಜಗತ್ತಿಗೆ ಒಂದಷ್ಟು ಮೌಲ್ಯಯುತ ಕೊಡುಗೆಗಳೂ ಸಿಕ್ಕಿವೆ. ಇದೇ ರೀತಿಯ ಕನ್ನಡತನದ ಮನಸುಗಳೇ ಸೇರಿ ನಿರ್ಮಾಣ ಮಾಡಿರೋ ಚಿತ್ರ ರತ್ನಮಂಜರಿ. ಈಗಾಗಲೇ ನಾನಾ ದಿಕ್ಕುಗಳಿಂದ ಕುತೂಹಲ ಹುಟ್ಟಿಸುತ್ತಲೇ ಬಹು ನಿರೀಕ್ಷಿತ ಚಿತ್ರವಾಗಿಯೂ ಹೊರ ಹೊಮ್ಮಿದೆ. ರತ್ನಮಂಜರಿ ಇದೇ ತಿಂಗಳ ಹದಿನೇಳರಂದು ಅದ್ಧೂರಿಯಾಗಿ ತೆರೆ ಕಾಣಲಿದೆ.

    ವಿದೇಶ ವಾಸಿಗಳಾಗಿರುವ ನಟರಾಜ್ ಹಳೆಬೀಡು, ಸಂದೀಪ್ ಕುಮಾರ್, ಡಾ. ನವೀನ್ ರತ್ನಮಂಜರಿಯನ್ನು ನಿರ್ಮಾಣ ಮಾಡಿದ್ದಾರೆ. ಪ್ರಸಿದ್ಧ್ ನಿರ್ದೇಶನದ ಈ ಚಿತ್ರದ ಮೂಲಕವೇ ರಾಜ್ ಚರಣ್ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಅಖಿಲಾ ಪ್ರಕಾಶ್, ಪಲ್ಲವಿ ರಾಜು ಮತ್ತು ಶ್ರದ್ಧಾ ಸಾಲಿಯಾನ್ ನಾಯಕಿಯರಾಗಿ ನಟಿಸಿದ್ದಾರೆ.

    ಕಥೆ ಸೇರಿದಂತೆ ಎಲ್ಲದರಲ್ಲಿಯೂ ವಿಶೇಷವಾಗಿರಬೇಕೆಂಬ ಪ್ರತಿಜ್ಞೆಯೊಂದಿಗೇ ರತ್ನಮಂಜರಿ ಶುರುವಾಗಿತ್ತು. ಹೇಳಿ ಕೇಳಿ ಇದು ವಿದೇಶದಲ್ಲಿ ಬೀಡು ಬಿಟ್ಟಿರುವ ಕನ್ನಡಿಗರೇ ಸೇರಿಕೊಂಡು ಮಾಡಿರೋ ಚಿತ್ರ. ಹಾಗಿದ್ದ ಮೇಲೆ ತಾಂತ್ರಿಕವಾಗಿಯೂ ಶ್ರೀಮಂತವಾಗಿರಲಿದೆ ಎಂಬ ನಿರೀಕ್ಷೆ ಎಲ್ಲರಿಗೂ ಇದ್ದೇ ಇರುತ್ತೆ. ಇದನ್ನು ಮನಗಂಡೇ ಕನ್ನಡಕ್ಕೆ ತೀರಾ ಹೊಸತಾದ ತಾಂತ್ರಿಕ ಕೌಶಲ್ಯಗಳೊಂದಿಗೆ ಈ ಚಿತ್ರವನ್ನು ರೂಪಿಸಲಾಗಿದೆಯಂತೆ. ಹಾಲಿವುಡ್ ಚಿತ್ರಗಳಿಗೆ ಕಾರ್ಯ ನಿರ್ವಹಿಸಿದ ತಂತ್ರಜ್ಞರೂ ರತ್ನಮಂಜರಿಗೆ ಸಾಥ್ ಕೊಟ್ಟಿದ್ದಾರೆ. ಈ ಕಾರಣದಿಂದಲೇ ಈ ಚಿತ್ರ ತಾಂತ್ರಿಕವಾಗಿ ಹಾಲಿವುಡ್ ಫ್ಲೇವರಿನೊಂದಿಗೆ ಮೂಡಿ ಬಂದಿದೆ. ಅದರ ಚಮತ್ಕಾರವೇನನ್ನೋದು ಇನ್ನು ವಾರದೊಪ್ಪತ್ತಿನಲ್ಲಿಯೇ ಗೊತ್ತಾಗಲಿದೆ!

  • ರತ್ನಮಂಜರಿ ಟ್ರೈಲರ್ ರಿಲೀಸಾಯ್ತು!

    ರತ್ನಮಂಜರಿ ಟ್ರೈಲರ್ ರಿಲೀಸಾಯ್ತು!

    ಬೆಂಗಳೂರು: ಸಸ್ಪೆನ್ಸ್ ಥ್ರಿಲ್ಲರ್ ಕಥಾನಕವನ್ನು ಒಳಗೊಂಡಿರುವ ರತ್ನಮಂಜರಿ ಚಿತ್ರದ ಟ್ರೈಲರ್ ಕಳೆದ ವಾರ ಬಿಡುಗಡೆಯಾಯಿತು. ಪ್ರಸಿದ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ರಚಿಸಿ ನಿರ್ದೇಶನ ಮಾಡಿದ್ದಾರೆ.

    ಅಮೆರಿಕಾದಲ್ಲಿ ನಡೆದ ನೈಜ ಘಟನೆಯೊಂದನ್ನಾಧರಿಸಿ ಈ ಚಿತ್ರದ ಕಥೆಯನ್ನು ಮಾಡಲಾಗಿದ್ದು ರಾಂಚರಣ್ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಖಿಲಾ ಪ್ರಕಾಶ್, ಪಲ್ಲವಿರಾಜು ಹಾಗೂ ಶ್ರದ್ಧಾ ಸಾಲಿಯಾನ್ ಮೂರು ಜನ ನಾಯಕಿಯರಾಗಿ ಅಭಿನಯಿಸಿದ್ದಾರೆ. ಈ ಮೂವರಲ್ಲಿ ರತ್ನಮಂಜರಿ ಯಾರು ಎನ್ನುವುದೇ ಚಿತ್ರದ ಸಸ್ಪೆನ್ಸ್. ಹರ್ಷವರ್ಧನ ರಾಜ್ ಅವರ ಸಂಗೀತ ಸಂಯೋಜನೆ ಹಾಗೂ ಪ್ರೀತಂ ತೆಗ್ಗಿನಮನೆ ಅವರ ಛಾಯಾಗ್ರಹಣ ಕೂಡ ಈ ಚಿತ್ರಕ್ಕಿದೆ.

    ಮೊನ್ನೆ ನಡೆದ ಪತ್ರಿಕಾಗೋಷ್ಟಿಯಲ್ಲಿ ನಾಯಕ ರಾಂಚರಣ್ ಮಾತನಾಡಿ, ಸಿದ್ಧಾಂತ್ ಎಂಬ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದು, ಅಮೆರಿಕಾದ ಕಂಪನಿಯೊಂದರಲ್ಲಿ ಸಸ್ಯ ವಿಜ್ಞಾನಿಯಾಗಿರುತ್ತೇನೆ. ನನ್ನಲ್ಲಿರುವ ಒಂದು ವಿಶೇಷ ಫೋಟೋಗ್ರಫಿಕ್ ಮೆಮೋರಿಯಿಂದ ಅಲ್ಲಿ ನಡೆದ ಕೊಲೆಯೊಂದರ ಮೂಲವನ್ನು ಹುಡುಕುತ್ತಾ ಹೊರಟಾಗ ನೂರಾರು ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಯು.ಎಸ್.ನಲ್ಲಿ ಶೂಟ್ ಮಾಡುವಾಗ ಸ್ವಲ್ಪ ತೊಂದರೆಯಾದರೂ ಅಲ್ಲಿನ ಕನ್ನಡಿಗರು ತುಂಬಾ ಸಹಾಯ ಮಾಡಿದರು. ನಮಗೆ ಮಳೆ ತುಂಬಾ ಅನುಕೂಲ ಮಾಡಿಕೊಟ್ಟಿತು ಎಂದು ಹೇಳಿದರು. ನಾಯಕಿ ಅಖಿಲಾ ಪ್ರಕಾಶ್ ಮಾತನಾಡಿ, ಗೌರಿ ಎಂಬ ಫ್ಯಾಷನ್ ಡಿಸೈನರ್ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದೇನೆ. ಯು.ಎಸ್.ನಲ್ಲಿದ್ದರೂ ನಮ್ಮ ಸಂಪ್ರದಾಯ ಮರೆತಿರುವುದಿಲ್ಲ. ಹಾಡುಗಳನ್ನು ಮಲೇಷಿಯಾ ಹಾಗೂ ಕೂರ್ಗ್ ನಲ್ಲಿ ಶೂಟ್ ಮಾಡಿದ್ದೇವೆ. ನಾವು ಮೂವರು ನಾಯಕಿಯರಿದ್ದು ಅದರಲ್ಲಿ ರತ್ನಮಂಜರಿ ಯಾರು ಅಂತ ನಮಗೂ ಗೊತ್ತಿಲ್ಲ. ಚಿತ್ರ ಬಂದ ಮೇಲಷ್ಟೇ ಅದು ಗೊತ್ತಾಗಲಿದೆ ಎಂದು ಹೇಳಿಕೊಂಡರು. ಮತ್ತೊಬ್ಬ ನಾಯಕಿ ಪಲ್ಲವಿರಾಜು ಮಾತನಾಡಿ, ಮನೆ ಕೆಲಸ ಮಾಡುವ ಹುಡುಗಿ ಪಾತ್ರ ನನ್ನದು. ಸ್ವಲ್ಪ ತಲೆಹರಟೆ ಪಾತ್ರ ಎಂದು ಹೇಳಿದರು.