Tag: ಅಖಿಲಾ ಪಜಿಮಣ್ಣು

  • ಯುವ ಗಾಯಕಿ ಅಖಿಲಾ ಪಜಿಮಣ್ಣು ಬಾಳಲ್ಲಿ ಬಿರುಗಾಳಿ – ವಿವಾಹ ವಿಚ್ಛೇದನಕ್ಕೆ ಅರ್ಜಿ

    ಯುವ ಗಾಯಕಿ ಅಖಿಲಾ ಪಜಿಮಣ್ಣು ಬಾಳಲ್ಲಿ ಬಿರುಗಾಳಿ – ವಿವಾಹ ವಿಚ್ಛೇದನಕ್ಕೆ ಅರ್ಜಿ

    ಇತ್ತೀಚೆಗೆ ಸೆಲೆಬ್ರಿಟಿಗಳು ವಿಚ್ಛೇದನ (Divorce) ತೆಗೆದುಕೊಳ್ಳುತ್ತಿರುವ ಪ್ರಕರಣ ಹೆಚ್ಚಾಗುತ್ತಿದೆ. ಪ್ರತಿ ದಿನ ಒಬ್ಬರಲ್ಲ ಒಬ್ಬರ ಡಿವೋರ್ಸ್ ಸುದ್ದಿಗಳು ಬೆಳಕಿಗೆ ಬರುತ್ತಲೇ ಇವೆ, ಈಗ ಆ ಸಾಲಿಗೆ ʻಕನ್ನಡ ಕೋಗಿಲೆʼ ರಿಯಾಲಿಟಿ ಶೋನ ಗಾಯಕಿ ಅಖಿಲಾ ಪಜಿಮಣ್ಣು ಕೂಡ ಸೇರಿಕೊಂಡಿದ್ದಾರೆ. ಮಧುರ ಕಂಠದಿಂದ ಜನಮನ ಗೆದ್ದಿದ್ದ ಅಖಿಲಾ ಪಜಿಮಣ್ಣು (Akhila Pajimannu) ಈಗ ದಾಂಪತ್ಯ ವಿಷಯವಾಗಿ ಸುದ್ದಿಯಲ್ಲಿದ್ದಾರೆ.

    ಅಖಿಲಾ ಮೂರು ವರ್ಷಗಳ ಹಿಂದೆ ಅಮೆರಿಕದಲ್ಲಿ ಸಾಫ್ಟ್‌ವೇರ್‌ ಇಂಜಿನಿಯರ್ ಧನಂಜಯ್ ಶರ್ಮಾ ಅವರೊಂದಿಗೆ ವಿವಾಹವಾಗಿದ್ದರು. ಆದ್ರೀಗ ಇವರ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಇಬ್ಬರು‌ ಪರಸ್ಪರ ಒಪ್ಪಿ ವಿಚ್ಛೇದನಕ್ಕೆ ಮುಂದಾಗಿದ್ದಾರೆ. ಇದನ್ನೂ ಓದಿ: ಮೋಹದ ಬಣ್ಣ ನೀಲಿ: ಯೋಗರಾಜ್ ಭಟ್ಟರ ಹೊಸ ಪ್ರಯೋಗ

    ಗಾಯಕಿ ಅಖಿಲಾ ಪಜಿಮಣ್ಣು ಮತ್ತು ಪತಿ ಟಿ.ಆರ್ ಧನರಾಜ್ ಶರ್ಮಾ ಪರಸ್ಪರ ಒಪ್ಪಿ ಇದೇ ಜೂನ್ 12 ರಂದು ಪುತ್ತೂರು ಕೋರ್ಟ್‌ನಲ್ಲಿ (Puttur Court) ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಪುತ್ತೂರಿನ ವಕೀಲ ಮಹೇಶ್ ಕಜೆ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ಮಾಜಿ ಪತಿಯ ಅಂತ್ಯಕ್ರಿಯೆ ನೆರವೇರಿಸಿದ ಕರಿಷ್ಮಾ ಕಪೂರ್

    ಅಖಿಲಾ ಪಜಿಮಣ್ಣು ಹಾಗೂ ಧನಂಜಯ್ ಶರ್ಮಾ ಇಬ್ಬರದ್ದೂ ಅರೇಂಜ್ಡ್‌ ಮ್ಯಾರೇಜ್. ಎರಡು ಕುಟುಂಬಗಳ ಸಮ್ಮುಖದಲ್ಲಿ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು. ಎಲ್ಲವೂ ಖುಷಿ ಖುಷಿಯಾಗಿಯೇ ಇದ್ದ ಇಬ್ಬರ ದಾಂಪತ್ಯದಲ್ಲಿ ಅಂತಹದ್ದೇನಾಯ್ತೋ ಗೊತ್ತಿಲ್ಲ. ಬೇರೆಯಾಗುವುದಕ್ಕೆ ಇಬ್ಬರೂ ನಿರ್ಧರಿಸಿದ್ದಾರೆ. ಸದ್ಯ ಗಾಯಕಿಯ ಅಭಿಮಾನಿಗಳಿಗೆ ಈ ಸುದ್ದಿ ಬೇಸರ ಮೂಡಿಸಿದೆ.

    2022ರಲ್ಲಿ ಕನ್ನಡ ಕೋಗಿಲೆ ಗಾಯಕಿ ಅಖಿಲಾ ಪಜಿಮಣ್ಣು ಹಾಗೂ ಧನಂಜಯ್ ಶರ್ಮಾ ಇಬ್ಬರೂ ಗುರು ಹಿರಿಯರ ಆಸೆಯಂತೆಯೇ ವಿವಾಹವಾಗಿದ್ದರು. ಆದ್ರೀಗ ಪರಸ್ಪರ ಒಪ್ಪಿಗೆ ಮೇಲೆ ಡಿವೋರ್ಸ್ ಪಡೆಯುವುದಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ:  ರುಕ್ಮಿಣಿ ಸೆಲ್ಫಿ `ಟೈಗರ್’ ಪ್ರಿಂಟ್ ಶರ್ಟ್ ಸೀಕ್ರೆಟ್ ರಿವೀಲ್! ಜೂ.ಎನ್‌ಟಿಆರ್‌ಗೆ ನಾಯಕಿ?

  • ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಗಾಯಕಿ – ಧನಂಜಯ್ ಜೊತೆ ಅಖಿಲಾ ನಿಶ್ಚಿತಾರ್ಥ

    ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಗಾಯಕಿ – ಧನಂಜಯ್ ಜೊತೆ ಅಖಿಲಾ ನಿಶ್ಚಿತಾರ್ಥ

    ಬೆಂಗಳೂರು: ತನ್ನ ಸುಮಧುರ ಕಂಠದಿಂದಲೇ ಮನೆಮಾತಾಗಿರುವ ಗಾಯಕಿ ಅಖಿಲಾ ಪಜಿಮಣ್ಣು ಅವರು ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ನೀಡಿದ್ದು, ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗಿದ್ದ ‘ಕನ್ನಡ ಕೋಗಿಲೆ’ಯ ಮೂಲಕ ಮನೆಮಾತಾಗಿದ್ದ ಗಾಯಕಿ ಅಖಿಲಾ ಪಜಿಮಣ್ಣು ಅವರ ನಿಶ್ಚಿತಾರ್ಥ ಕಾರ್ಯಕ್ರಮ ನೆರವೇರಿದೆ. ಈ ಕುರಿತು ಸಿಂಗರ್ ತಮ್ಮ ಇನ್‍ಸ್ಟಾದಲ್ಲಿ ಅಧಿಕೃತವಾಗಿ ತಿಳಿಸಿದ್ದಾರೆ.

    ಧನಂಜಯ್ ಶರ್ಮಾ ಎಂಬವರ ಜೊತೆ ಅಖಿಲಾ ನಿಶ್ಚಿತಾರ್ಥ ನೆರವೇರಿದೆ. ಎಂಗೇಜ್ಮೆಂಟ್ ಕಾರ್ಯಕ್ರಮದ ಸಂಪೂರ್ಣ ವೀಡಿಯೋವನ್ನು ಅಖಿಲಾ ತಮ್ಮ ಇನ್ ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಮೂಲಕ ತಾನು ಎಂಗೇಜ್ ಆಗಿರುವ ವಿಚಾರವನ್ನು ತಮ್ಮ ಅಭಿಮಾನಿಗಳಲ್ಲಿ ಹಂಚಿಕೊಂಡಿದ್ದಾರೆ.

    ಅಖಿಲಾ ಅವರು ಈ ಶುಭಸುದ್ದಿಯ ವೀಡಿಯೋ ಹಂಚಿಕೊಳ್ಳುತ್ತಿದ್ದಂತೆಯೇ ಅಭಿಮಾನಿಗಳು ಅವರಿಗೆ ಶುಭ ಹಾರೈಸಿದ್ದಾರೆ. ಅಲ್ಲದೆ ಕೆಲವರು ಲವ್ ಅಥವಾ ಅರೇಂಜ್ ಮ್ಯಾರೇಜ್ ಅಂತ ಪ್ರಶ್ನೆ ಮಾಡಿದ್ದಾರೆ.

  • ಅಖಿಲಾ ಪಜಿಮಣ್ಣು ಜೇನ್ದನಿಯಲ್ಲಿ ಬೆಳದಿಂಗಳಂಥ ಕವರ್ ಸಾಂಗ್!

    ಅಖಿಲಾ ಪಜಿಮಣ್ಣು ಜೇನ್ದನಿಯಲ್ಲಿ ಬೆಳದಿಂಗಳಂಥ ಕವರ್ ಸಾಂಗ್!

    – ಮತ್ತೆ ಮತ್ತೆ ಕೇಳಿದರೂ ಮುಸುಕಾಗದ ಪುಳಕ!

    ಬೆಂಗಳೂರು: ಕನ್ನಡದ ಮ್ಯೂಸಿಕ್ ರಿಯಾಲಿಟಿ ಶೋಗಳಿಂದ ಒಂದಷ್ಟು ಗಟ್ಟಿ ಪ್ರತಿಭೆಗಳು ಬೆಳಕು ಕಂಡಿವೆ. ಅಂಥವರೆಲ್ಲ ಸಿನಿಮಾ ಸೇರಿದಂತೆ ನಾನಾ ಸ್ವರೂಪದಲ್ಲಿ ಸಂಗೀತ ಪ್ರೇಮಿಗಳನ್ನು ತಾಕುತ್ತಾ, ಮುದ ನೀಡುತ್ತಾ ಮುಂದುವರಿಯುತ್ತಿದ್ದಾರೆ. ಈ ರೀತಿಯ ಪ್ರತಿಭಾವಂತ ಗಾಯಕಿಯರ ಸಾಲಿಗೆ ಇತ್ತೀಚಿನ ಸೇರ್ಪಡೆ ದಕ್ಷಿಣ ಕನ್ನಡ ಮೂಲದ ಹುಡುಗಿ ಅಖಿಲಾ ಪಜಿಮಣ್ಣು.

    ‘ಕನ್ನಡ ಕೋಗಿಲೆ’ ರಿಯಾಲಿಟಿ ಶೋ ಮೂಲಕ ಪ್ರವರ್ಧಮಾನಕ್ಕೆ ಬಂದ ಅಖಿಲಾ ಇತ್ತೀಚಿನ ದಿನಗಳಲ್ಲಿ ಕನ್ನಡದ ಅಚ್ಚಳಿಯದ ಹಾಡುಗಳ ಕವರ್ ಸಾಂಗ್ ಮೂಲಕ ಸುದ್ದಿಯಲ್ಲಿದ್ದಾರೆ. ಇದೀಗ ಕನ್ನಡ ಸಿನಿಮಾ ಪ್ರೇಮಿಗಳು ಎಂದೂ ಮರೆಯದ ‘ಅಮೃತವರ್ಷಿಣಿ’ ಚಿತ್ರದ ಚೆಂದದ ಹಾಡೊಂದು ಅಖಿಲಾ ಜೇನ್ದನಿಗೆ ಅದ್ದಿಕೊಂಡು ಹೊಸ ಸ್ವರೂಪದಲ್ಲಿ ಕೇಳುಗರನ್ನು ತಲುಪಿಕೊಂಡಿದೆ.

    ರಿಯಾಲಿಟಿ ಶೋಗಳಲ್ಲಿ ವೆರೈಟಿ ಸಾಂಗುಗಳನ್ನು ಹಾಡೋ ಮೂಲಕ ಸಂಗೀತಾಸಕ್ತರನ್ನು ಸಮ್ಮೊಹನಗೊಳಿಸಿದ್ದರು ಅಖಿಲಾ ಪಜಿಮಣ್ಣು. ಇತ್ತೀಚೆಗಷ್ಟೇ ಅವರು ಹಾಡಿರೋ `ಸಂಗಾತಿ ನಿನ್ನ ಸಂಪ್ರೀತಿಯಿಂದ…’ ಕವರ್ ಸಾಂಗ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಬಿಟ್ಟಿತ್ತು. ಈಗ ಅಮೃತವರ್ಷಿಣಿ ಚಿತ್ರದ `ಈ ಸುಂದರ ಬೆಳದಿಂಗಳ ಈ ತಂಪಿನ ಅಂಗಳದಲಿ’ ಕವರ್ ಸಾಂಗ್ ಬಿಡುಗಡೆಯಾಗಿದೆ. ಅಖಿಲಾ ಸ್ವರದಲ್ಲಿ ಮೂಡಿ ಬಂದಿರುವ ಈ ಹಾಡು ಯಥಾಪ್ರಕಾರ ಮತ್ತೆ ಮತ್ತೆ ಕೇಳಿ ಪುಳಕಗೊಳ್ಳುವಂತಿದೆ.

    ಅಖಿಲಾ ಅವರ ಅಫಿಶಿಯಲ್ ಯೂಟ್ಯೂಬ್ ಚಾನಲ್‍ನಲ್ಲಿಯೇ ಈ ಕವರ್ ಸಾಂಗ್ ಬಿಡುಗಡೆಯಾಗಿದೆ. ಅದು ಬಿಡುಗಡೆಯಾಗಿ ಎರಡ್ಮೂರು ಘಂಟೆಗಳು ಕಳೆಯೋದರೊಳಗಾಗಿಯೇ ಸಾವಿರಗಟ್ಟಲೆ ವೀವ್ಸ್ ಪಡೆಯೋ ಮೂಲಕ ವೈರಲ್ ಆಗುವ ಮುನ್ಸೂಚನೆಯನ್ನೂ ನೀಡುತ್ತಿದೆ. ಕಮೆಂಟುಗಳ ಮೂಲಕ ಅಖಿಲಾಭಿಮಾನಿಗಳೆಲ್ಲ ವ್ಯಾಪಕವಾಗಿ ಈ ಕವರ್ ಸಾಂಗ್ ಅನ್ನು ಮೆಚ್ಚಿ ಕೊಂಡಾಡುತ್ತಿದ್ದಾರೆ. ಅಷ್ಟಕ್ಕೂ ಈ ಕವರ್ ಸಾಂಗ್ ಕೇಳಿದ ಯಾರೇ ಆದರೂ ಒಂದರೆಕ್ಷಣ ಕಣ್ಮುಚ್ಚಿ ಕಾಣದ ಲೋಕದಲ್ಲಿ ತೇಲಾಡುವಷ್ಟು ಚೆಂದಗಿದೆ.

    ಅಮೃತವರ್ಷಿಣಿ ಮ್ಯೂಸಿಕಲ್ ಹಿಟ್ ಚಿತ್ರ. ಇದರ ಮೂಲಕವೇ ಕೆ ಕಲ್ಯಾಣ್ ಎಂಬ ಪ್ರತಿಭಾವಂತ ಸಾಹಿತಿ ಕನ್ನಡಕ್ಕಾಗಮಿಸಿದ್ದರು. ಅವರು ಬರೆದ ಈ ಸುಂದರ ಬೆಳದಿಂಗಳ ಹಾಡನ್ನು ಎಸ್.ಪಿ ಬಾಲಸುಬ್ರಹ್ಮಣ್ಯಂ ಮತ್ತು ಕೆ.ಎಸ್ ಚಿತ್ರಾ ಹಾಡಿದ್ದರು. ಆ ಬಳಿಕ ಯಾವ್ಯಾವ ಥರದ ಹಾಡುಗಳು ಬಂದರೂ ಈ ಹಾಡುಗಳನ್ನು ಮಂಕಾಗಿಸಲು ಸಾಧ್ಯವಾಗಿಲ್ಲ. ಇಂಥಾ ಹಾಡುಗಳ ಕವರ್ ವರ್ಷನ್ ಮಾಡೋದೆಂದರೆ ಅದೇನು ಸಲೀಸಿನ ಸಂಗತಿಯಲ್ಲ. ಎಸ್‍ಪಿಬಿ ಮತ್ತು ಚಿತ್ರಾ ಎಂಬ ಮೇರು ಗಾಯಕ ಗಾಯಕಿಯರಿಗೆ ಗೌರವ ಸಲ್ಲಿಸುವಂತೆ ರೂಪಿಸುವ ಘನವಾದ ಜವಾಬ್ದಾರಿ ಇರುತ್ತದೆ.

    ಅಖಿಲಾ ಪಜಿಮಣ್ಣು ಈ ಹಾಡನ್ನು ಮತ್ತಷ್ಟು ಹೊಳಪುಗಟ್ಟಿಸುವಂತೆ ಕವರ್ ವರ್ಷನ್ನಿಗೆ ಧ್ವನಿಯಾಗಿದ್ದಾರೆ. ಇನ್ನುಳಿದಂತೆ ದೃಶ್ಯವಾಗಿಯೂ ಈ ಕವರ್ ಸಾಂಗ್ ಅನ್ನು ಅಕ್ಷಯ್ ನಾಯಕ್ ಅವರ ಕ್ಯಾಮೆರಾ ವರ್ಕ್ ಕಳೆಗಟ್ಟಿಸಿದೆ. ಬೇರೆ ಭಾಷೆಗಳಿಗೆ ಹೋಲಿಸಿದರೆ ಈ ಕವರ್ ಸಾಂಗ್‍ಗಳ ಸಂಖ್ಯೆ ಕನ್ನಡದಲ್ಲಿ ತುಸು ಕಡಿಮೆಯಿತ್ತು. ಅಖಿಲಾ ಪಜಿಮಣ್ಣು ಅದಕ್ಕೊಂದು ಹೊಸ ಓಘ ನೀಡುವಂಥಾ ಕವರ್ ಸಾಂಗ್‍ಗಳನ್ನು ಸೃಷ್ಟಿಸುತ್ತಿದ್ದಾರೆ. ಯಾವ ಥರದ ಹಾಡುಗಳಿಗಾದರೂ ಒಗ್ಗಿಕೊಳ್ಳುವಂಥಾ, ಯಾವ ಹಾಡನ್ನಾದರೂ ಮತ್ತೆ ಮತ್ತೆ ಕೇಳಬೇಕೆಂಬ ಆಸೆ ಮೂಡಿಸುವಂತೆ ಹಾಡುವ ಕಲೆ ಹೊಂದಿರೋ ಯುವ ಗಾಯಕಿ ಅಖಿಲಾ. ಈ ಕವರ್ ಸಾಂಗ್ ಕೂಡಾ ಹೆಚ್ಚು ವೀಕ್ಷಣೆ ಪಡೆಯುವ ಸಾಧ್ಯತೆಯಿದೆ.