Tag: ಅಖಂಡ ಶ್ರೀನಿವಾಸ ಮೂರ್ತಿ

  • ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

    ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

    ಬೆಂಗಳೂರು: ಪುಲಿಕೇಶಿ ನಗರದ ಕಾಂಗ್ರೆಸ್‌ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆ ಮತ್ತು ಕಚೇರಿ ಮೇಲೆ ಗುಂಪೊಂದು ಕಲ್ಲು ತೂರಾಟ ನಡೆಸಿ ಬೆಂಕಿ ಹಚ್ಚಿದೆ.

    ಶಾಸಕರ ಆಪ್ತ ನವೀನ್ ಎಂಬವರು ಫೇಸ್ ಬುಕ್ ನಲ್ಲಿ ಸಮುದಾಯವನ್ನು ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ಗುಂಪೊಂದು ದಿಢೀರ್‌ ಆಗಿ ರಾತ್ರಿ ಕಾವಲ್ ಭೈರಸಂದ್ರದಲ್ಲಿರುವ ಶಾಸಕರ ಮನೆ ಮುಂದೆ ಜಮಾಯಿಸಿ ಬೆಂಕಿ ಹಚ್ಚಿದೆ.

    100ಕ್ಕೂ ಹೆಚ್ಚು ಪುಂಡರು ಕಲ್ಲು ತೂರಾಟ ನಡೆಸಿ ದೊಣ್ಣೆ ಹಿಡಿದು ಕಚೇರಿಯನ್ನು ಒಡೆದು ಹಾಕಲು ಯತ್ನಿಸಿದ್ದಾರೆ. ಈ ವೇಳೆ ವಿಡಿಯೋ ಮಾಡುತ್ತಿದ್ದವರ ಮೇಲೆ ಹಲ್ಲೆ ನಡೆಸಿ ಮೊಬೈಲ್‌ ಕಿತ್ತುಕೊಳ್ಳಲು ಯತ್ನಿಸಿದ್ದಾರೆ.

    ಘಟನೆಯಲ್ಲಿ ಶಾಸಕರ ಮನೆ ಕಿಟಕಿ ಗಾಜುಗಳು ಪುಡಿ ಪುಡಿಯಾಗಿದ್ದು, ಆಫೀಸ್ ಬಳಿ ನಿಂತಿದ್ದ ಕಾರುಗಳ ಮೇಲೆ ಬೆಂಕಿ ಹಚ್ಚಿದ್ದಾರೆ. ಬೆಂಕಿಯನ್ನು ನೋಡಿ ಅಲ್ಲಿದ್ದ ಜನ ಓಡಿ ಹೋಗಿ ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ.  ಪೊಲೀಸರು ಅಕ್ಕಪಕ್ಕದ ಎಲ್ಲಾ ರಸ್ತೆ ಗಳನ್ನು ಮುಚ್ಚಿದ್ದಾರೆ. ಪೊಲೀಸರ ಮೇಲೆ ಯುವಕರ ಗುಂಪು ದಾಳಿ ಮಾಡಿದೆ.

  • ಅಣ್ಣ ಬೆಂಗಳೂರಿನ ಪ್ರಭಾವಿ ಶಾಸಕ, ತಮ್ಮ ಪುಡಿ ರೌಡಿ!

    ಅಣ್ಣ ಬೆಂಗಳೂರಿನ ಪ್ರಭಾವಿ ಶಾಸಕ, ತಮ್ಮ ಪುಡಿ ರೌಡಿ!

    – ಸಿಕ್ಕ ಸಿಕ್ಕ ಜಾಗಕ್ಕೆ ಕಾಪೌಂಡ್ ಹಾಕ್ತಾನೆ ಎಂಎಲ್‍ಎ ಖಾಸಾ ತಮ್ಮ..!
    – ಅಖಂಡ ಶ್ರೀನಿವಾಸ ಮೂರ್ತಿ ತಮ್ಮ ದರ್ಬಾರಿಗೆ ಭಯಗೊಂಡಿದ್ದಾರೆ ಜನ

    ಬೆಂಗಳೂರು: ಅಣ್ಣ ಕಾಂಗ್ರೆಸ್ ಪ್ರಭಾವಿ ಶಾಸಕ. ಆದ್ರೆ ತಮ್ಮ ಮಾತ್ರ ಅಣ್ಣನ ಹೆಸರು ಹೇಳಿಕೊಂಡ ಸಿಕ್ಕ ಸಿಕ್ಕ ಜಾಗದಲ್ಲಿ ಕಾಂಪೌಂಡ್ ಹಾಕ್ತಾನೆ. ಒಂದು ವೇಳೆ ತನಗೆ ಆ ಜಾಗ ಬೇಕಿದ್ದರೆ ಅಲ್ಲಿರುವ ಮನೆಗಳನ್ನು ಧ್ವಂಸ ಮಾಡುತ್ತಾನೆ. ಈ ಕುರಿತು ವರದಿ ಮಾಡಲು ತೆರಳಿದ್ದ ಪಬ್ಲಿಕ್ ಟಿವಿ ಸಿಬ್ಬಂದಿ ಮೇಲೆಯೂ ಹಲ್ಲೆಗೆ ಯತ್ನಿಸಿದ್ದಾನೆ. ಹಲ್ಲೆಯನ್ನು ಪ್ರಶ್ನಿಸಿದ್ದ ಪಬ್ಲಿಕ್ ಟಿವಿ ಸಿಬ್ಬಂದಿ ಮೇಲೆ ತನ್ನ ಬೆಂಬಲಿಗರಿಂದ ಬೆದರಿಕೆ ಹಾಕಿಸಿದ್ದಾನೆ.

    ಬೆಂಗಳೂರಿನ ಪುಲಕೇಶಿ ವಿಧಾನಸಭಾ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿಯವರ ಸಹೋದರ ಮಲ್ಲು ಅಲಿಯಾಸ್ ಮುಗ್ಗೇಶ್ ನ ದರ್ಬಾರಿಗೆ ಸ್ಥಳೀಯರು ಬೇಸತ್ತಿದ್ದಾರೆ. ಕಾವಲ್ ಬೈರಸಂದ್ರದಲ್ಲಿರುವ ಚಿನ್ನಪ್ಪ ಎಂಬರಿಗೆ ಸೇರಿದ ಮನೆಯನ್ನು ಶಾಸಕರ ತಮ್ಮ ಕೆಡವಿ ಹಾಕಿದ ಪಬ್ಲಿಕ್ ಟಿವಿಗೆ ವಿಡಿಯೋ ಲಭ್ಯವಾಗಿತ್ತು. ಈ ಬಗ್ಗೆ ವರದಿಗೆ ತೆರಳಿದ್ರೆ ಪುಡಿ ರೌಡಿಗಳು ಪಬ್ಲಿಕ್ ಟಿವಿ ಮೇಲೆಯೂ ಆಟ್ಯಾಕ್ ಮಾಡುವುದಕ್ಕೆ ಮುಂದಾದರು.

    ಈ ಬಗ್ಗೆ ಸ್ಪಷ್ಟನೆ ಕೇಳಿದರೆ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮಾತ್ರ ನನ್ನ ತಮ್ಮನದ್ದು ತಪ್ಪೇ ಇಲ್ಲ, ಇದು ಸರ್ಕಾರಿ ಜಾಗ ರಾಜಕಾಲುವೆ ಮೇಲೆ ಮನೆ ಕಟ್ಟಿಕೊಂಡಿದ್ದಾರೆ ಅದಕ್ಕೆ ತೆರವು ಮಾಡಿದ್ದೇವೆ ಎಂದು ಹೇಳುತ್ತಾರೆ. ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲು ಬಿಬಿಎಂಪಿ ಇದೆ. ಬಿಬಿಎಂಪಿ ಅಧಿಕಾರಿಗಳು ಯಾರು ಸ್ಥಳದಲ್ಲಿ ಇರದೇ ಮಲ್ಲುಗೆ ಮನೆ ಕೆಡವಲು ಅಧಿಕಾರ ಕೊಟ್ಟವರು ಯಾರು ಅನ್ನುವ ಪ್ರಶ್ನೆಗೆ ಶಾಸಕರ ಬಳಿ ಉತ್ತರವಿಲ್ಲ. ಅಖಂಡ ಶ್ರೀನಿವಾಸ್ ಮೂರ್ತಿ ತಮ್ಮನ ರೌಡಿಸಂಗೆ ನಾವು ಭಯದಿಂದ ಜೀವನ ಮಾಡುವ ಸ್ಥಿತಿಗೆ ಬಂದಿದ್ದೇವೆ ಎಂದು ಜನ ಹೇಳಿದ್ದಾರೆ.

    https://www.youtube.com/watch?v=HcHwLezIBHw

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv