ಬೆಂಗಳೂರು: ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಅವರು ಇಂದು ಡಿ.ಜೆ ಹಳ್ಳಿ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದು, ಈ ವೇಳೆ ಸ್ಟೇಷನ್ ಮುಂದೆ ಮತ್ತೆ ಭಾರೀ ಹೈಡ್ರಾಮ ನಡೆಯಿತು.
ನಮ್ಮ ಮಕ್ಕಳನ್ನು ಹಿಡಿದು ತಂದಿದ್ದಾರೆ. ಅವರೆಲ್ಲ ಯಾವ ತಪ್ಪು ಕೂಡ ಮಾಡಿಲ್ಲ. ಸುಖಾ ಸುಮ್ಮನೆ ಮಕ್ಕಳನ್ನು ಎಳೆದು ತಂದಿದ್ದಾರೆ. ಅವರನ್ನ ಬಿಡಿಸಿಕೊಡಿ ಎಂದು ಪೋಷಕರು ಶಾಸಕರಿಗೆ ಮುತ್ತಿಗೆ ಹಾಕಿದ ಪ್ರಸಂಗ ನಡೆಯಿತು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಖಂಡ, ನಾನೇ ಠಾಣೆಗೆ ಬಂದಿದ್ದೆ. ನಮ್ಮ ಕ್ಷೇತ್ರದ ಅಮಾಯಕರಿಗೆ ತೊಂದರೆ ಆಗಬಾರದು. ಅಪರಾಧಿಗಳಿಗೆ ಶಿಕ್ಷೆಯಾಗಲಿ. ವಿಡಿಯೋಗಳಲ್ಲಿ ಇರೋರಿಗೆ ಶಿಕ್ಷೆಯಾಗಲಿ ಎಂದು ಹೇಳುವ ಮೂಲಕ ಪರೋಕ್ಷವಾಗಿ ಆರೋಪಿಗಳ ಬೆನ್ನಿಗೆ ನಿಂತ್ರಾ ಅನ್ನೋ ಅನುಮಾನ ಮೂಡಿದೆ.
ನಮ್ಮ ಕ್ಷೇತ್ರದಲ್ಲಿ ಅಮಾಯಕರು ಮತ್ತು ಕೂಲಿ ಕಾರ್ಮಿಕರು ಇದ್ದಾರೆ. ನನಗೆ ಯಾವ ಹೈಕಮಾಂಡ್ ಒತ್ತಡವೂ ಇಲ್ಲ. ಘಟನೆಯಲ್ಲಿ ತೊಂದರೆಗೆ ಒಳಗಾಗಿರುವವರಿಗೆ ಪರಿಹಾರ ಕೊಡಲು ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿಕೊಂಡಿದ್ದೇನೆ ಎಂದು ತಿಳಿಸಿದರು.
ಒಟ್ಟಿನಲ್ಲಿ ಬಂಧಿತ ಗಲಭೆಕೊರರಲ್ಲಿ ಅಮಾಯಕರನ್ನ ಬಿಡಲು ಶಾಸಕರು ಠಾಣೆಗೆ ಬಂದು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡಿ ಹೋಗಿದ್ದಾರೆ. ಅಷ್ಟೇ ಅಲ್ಲ ಶಾಸಕರ ಮಾತಿನಂತೆ ಒಂದಷ್ಟು ಬಂಧಿತ ಗಲಭೆಕೊರರನ್ನ ಬಿಡುಗಡೆ ಮಾಡಲು ತಯಾರಿ ಕೂಡ ಮಾಡಿಕೊಳ್ಳಲಾಗಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಬೆಂಗಳೂರು: ನನ್ನನ್ನು ರಾಜಕೀಯವಾಗಿ ಮುಗಿಸಬೇಕು ಅಂದಿದ್ರೆ ಈ ಮಟ್ಟಕ್ಕೆ ಇಳಿಯಬಾರದಿತ್ತು. ರಾಜಕೀಯವಾಗಿ ನನ್ನನ್ನು ಫೇಸ್ ಮಾಡಬೇಕಿತ್ತು ಎಂದು ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಕಣ್ಣೀರು ಹಾಕಿದ್ದಾರೆ.
ಇಂದು ಕಮಿಷನರ್ ಕಚೇರಿಗೆ ಆಗಮಿಸಿದ ಅಖಂಡ ಶ್ರೀನಿವಾಸ್ ಅವರನ್ನು ಸಿಸಿಬಿ ಡಿಸಿಪಿ ರವಿಕುಮಾರ್ ವಿಚಾರಣೆ ನಡೆಸಿದರು. ಈ ವೇಳೆ ಅಖಂಡ ಅವರು, ನನಗೆ ಈ ರೀತಿ ಮಾಡುತ್ತಾರೆ ಅಂತ ಅಂದುಕೊಂಡಿರಲಿಲ್ಲ. ಸಾಕಷ್ಟು ಆಸ್ತಿ ಪತ್ರ ಹಾಳಾಗಿದೆ. ಡೈರಿ ಎಲ್ಲಾ ಸುಟ್ಟು ಹೋಗಿದೆ. ರಾಜಕೀಯವಾಗಿ ಮುಗಿಸಬೇಕು ಅಂದಿದ್ರೆ ಈ ಮಟ್ಟಕ್ಕೆ ಇಳಿಯಬಾರದಿತ್ತು. ರಾಜಕೀಯವಾಗಿಯೇ ನನ್ನನ್ನು ಫೇಸ್ ಮಾಡಬೇಕಿತ್ತು ಎಂದು ಕಣ್ಣೀರು ಹಾಕಿದರು.
ನನ್ನ ಮೇಲೆ ದ್ವೇಷ ಇದ್ದರೆ ರಾಜಕೀಯವಾಗಿ ಮುಗಿಸಲಿ. ನಾನು ಅಂದು ಸಿಕ್ಕಿದ್ರೆ ಜೀವಂತವಾಗಿ ಸುಡುತ್ತಾ ಇದ್ರು. ಜೀವಂತವಾಗಿಯೇ ಸುಡಲು ಪ್ಲಾನ್ ಕೂಡ ಮಾಡಿದ್ರು. ನಾನು ಗೆದ್ದೇ ಗೆಲ್ತೀನಿ ಸರ್. ಇದನ್ನು ಸಹಿಸೋಕೆ ಆಗದೆ ಈ ರೀತಿ ಮಾಡುತ್ತಾರೆ. ನಾನು ಪಕ್ಷಾಂತರವಾಗಿ ಚುನಾವಣೆ ಸ್ಪರ್ಧಿಸಿದ್ರೂ ಗೆಲ್ತೀನಿ ಸರ್. ನನಗೆ ನನ್ನ ಜನ ಇದ್ದಾರೆ. ಇವತ್ತು ಅವರೇ ತಿರುಗಿ ಬಿದ್ರಾ ಅನ್ನೋ ಅನುಮಾನ ಇದೆ ಎಂದಿದ್ದಾರೆ. ಇದನ್ನೂ ಓದಿ: ಪೋಸ್ಟ್ ಕೇವಲ ನೆಪ, ಇದು ದಲಿತ ಶಾಸಕರ ವಿರುದ್ಧ ನಡೆದ ವ್ಯವಸ್ಥಿತ ಪಿತೂರಿ – ಇದು ಬಿಜೆಪಿ ಶೋಧಿಸಿದ ಸತ್ಯ
ಘಟನೆಯಿಂದ ಇಂದು ನನ್ನ ಹೆಂಡತಿ ಮಕ್ಕಳೆಲ್ಲಾ ಬೀದಿಯಲ್ಲಿ ನಿಂತಿದ್ದಾರೆ. ನಾನು ಎಷ್ಟೇ ಸಂಪಾದನೆ ಮಾಡಿದರೂ ಪ್ರಯೋಜನ ಆಗಲಿಲ್ಲ. ನಮ್ಮ ಪಕ್ಷದವರೇ ನನಗೆ ಈ ರೀತಿ ಡ್ಯಾಮೇಜ್ ಮಾಡುತ್ತಾರೆ. ನಾನು ಕಾರ್ಪೊರೇಟರ್ ಗಳ ಜೊತೆ ಚೆನ್ನಾಗಿಯೇ ಇದ್ದೆ. ಯಾರಿಗೂ ನಾನು ಹಿಂಸೆ ಕೊಟ್ಟಿರಲಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕರ್ಫ್ಯೂ ತೆಗೆಯಿರಿ, ಒಂದು ವೇಳೆ ಅಲ್ಲಿ ಮತ್ತೆ ಏನಾದ್ರೂ ಆದರೆ ಅದಕ್ಕೆ ನಾವು ಜವಾಬ್ದಾರರಲ್ಲ
ಟೆಂಡರ್ ಅಲ್ಲೂ ಯಾರಿಗೂ ಮೋಸ ಮಾಡಿಲ್ಲ. ಖಲೀಂ ಪಾಷಾ ನನ್ನನ್ನು ಬೈಯಾ ಅಂತ ಚೆನ್ನಾಗಿಯೇ ಇದ್ದ. ಅವನಿಗೂ ನನ್ನ ಮೇಲೆ ಹೇಗೆ ದ್ವೇಷ ಬಂತೋ ಗೊತ್ತಿಲ್ಲ ಎಂದು ಸುಮಾರು 2 ಗಂಟೆಗಳ ಕಾಲ ನಡೆದ ವಿಚಾರಣೆಯ ವೇಳೆ ಅಖಂಡ ಕಣ್ಣೀರುಡುತ್ತಲೇ ಹೇಳಿಕೆಗಳನ್ನು ನೀಡಿದ್ದಾರೆ. ಇದನ್ನೂ ಓದಿ: ನಮ್ಮವರು ನಿರ್ದೋಷಿಗಳು, ಅರೆಸ್ಟ್ ಮಾಡಿದ್ರೆ ಮನೆ ನಡೆಯುವುದಾದ್ರೂ ಹೇಗೆ?
ಬೆಂಗಳೂರು: ನವೀನ್ ನ ಅವಹೇಳನಕಾರಿ ಫೇಸ್ ಬುಕ್ ಪೋಸ್ಟ್ ಕೇವಲ ನೆಪ ಆಗಿತ್ತು. ಪೋಸ್ಟ್ ನೆಪದಲ್ಲಿ ಮುಸ್ಲಿಂ ಸಮುದಾಯದೊಳಗೆ ಕಿಡಿ ಹತ್ತಿಸಿ ಹಬ್ಬಿಸಿ ಗಲಭೆ ನಡೆಯುವಂತೆ ಸಂಚು ರೂಪಿಸಿಲಾಗಿತ್ತು – ಇದು ಬಿಜೆಪಿ ಶೋಧಿಸಿದ ಸತ್ಯ.
ದೇವರಜೀವನ ಹಳ್ಳಿ ಮತ್ತು ಕಾಡಗೊಂಡನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಸಂಬಂಧ ರಾಜ್ಯ ಬಿಜೆಪಿ ಅರವಿಂದ ಲಿಂಬಾವಳಿ, ಮಾಲೀಕಯ್ಯ ಗುತ್ತೇದಾರ್, ಎಂ ಶಂಕರಪ್ಪ, ಪಿ ಸಿ ಮೋಹನ್, ಎ ನಾರಾಯಣಸ್ವಾಮಿ, ಛಲವಾದಿ ನಾರಾಯಣಸ್ವಾಮಿ ಅವರಿದ್ದ ಸತ್ಯಶೋಧನಾ ಸಮಿತಿಯನ್ನು ನೇಮಿಸಿತ್ತು.
ಮೂರು ದಿನಗಳ ಹಿಂದೆ ರಚನೆ ಆಗಿದ್ದ ಸಮಿತಿ ಈಗ ಮಾಹಿತಿಗಳನ್ನು ಕಲೆ ಹಾಕಿ ವರದಿ ತಯಾರಿಸಿದ್ದು ಇಂದು ಸಂಜೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಸಲ್ಲಿಸಲಿದೆ.
ಬಿಜೆಪಿಯ ಸತ್ಯ ಶೋಧನೆ ಏನು?
ಪ್ರಕರಣದಲ್ಲಿ ಪುಲಿಕೇಶಿ ನಗರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯವರೇ ಟಾರ್ಗೆಟ್ ಆಗಿದ್ದರು. ಕಾಂಗ್ರೆಸ್‌ನಲ್ಲಿದ್ದರೂ ಅಖಂಡ ಶ್ರೀನಿವಾಸ ಮೂರ್ತಿ ಒಬ್ಬಂಟಿಯಾಗಿದ್ದರು. ಕ್ಷೇತ್ರದಲ್ಲಿ ಅಖಂಡ ಪರ ಯಾವ ಕಾಂಗ್ರೆಸ್ ಮುಖಂಡರು, ನಾಯಕರು ಇರಲಿಲ್ಲ.
ಮುಂಬರುವ ಬಿಬಿಎಂಪಿ ಚುನಾವಣೆ ಮತ್ತು ವಿಧಾನಸಭೆ ಕ್ಷೇತ್ರಗಳ ಚುನಾವಣೆಯಲ್ಲಿ ಅಖಂಡ ಶ್ರೀನಿವಾಸ ಮೂರ್ತಿಗೆ ಬೆಂಬಲಿಸಬಾರದು, ಟಿಕೆಟ್ ಸಿಗದಂತೆ ನೋಡಿಕೊಳ್ಳಬೇಕು. ಟಿಕೆಟ್ ಸಿಕ್ಕಿದ್ದರೂ ಸೋಲಿಸಬೇಕು ಎಂಬ ಉದ್ದೇಶ ಇತ್ತು.
ನವೀನ್ ನ ಅವಹೇಳನಕಾರಿ ಫೇಸ್ ಬುಕ್ ಪೋಸ್ಟ್ ಕೇವಲ ನೆಪ ಆಗಿತ್ತು. ಪೋಸ್ಟ್ ನೆಪದಲ್ಲಿ ಮುಸ್ಲಿಂ ಸಮುದಾಯದೊಳಗೆ ಕಿಡಿ ಹತ್ತಿಸಿ ಹಬ್ಬಿಸಿ ಗಲಭೆ ನಡೆಯುವಂತೆ ಸಂಚು ರೂಪಿಸಲಾಗಿತ್ತು. ಪ್ರತಿಭಟನೆ ಉದ್ದೇಶ ಇದ್ದ ಗುಂಪಿಗೆ ಅಖಂಡ ಮೇಲೆ ದಾಳಿ ಮಾಡುವಂತೆ ಪ್ರಚೋದಿಸಲಾಗಿತ್ತು.
ಗಲಭೆಗೆ ಕಾಂಗ್ರೆಸ್ ಸ್ಥಳೀಯ ಮುಖಂಡರು, ಲೋಕಲ್ ಪಾಲಿಟಿಕ್ಸ್, ಎಸ್‌ಡಿಪಿಐ ಕಾರಣ. ಇದು ದಲಿತ ಶಾಸಕರೊಬ್ಬರ ವಿರುದ್ಧ ನಡೆದ ವ್ಯವಸ್ಥಿತ ರಾಜಕೀಯ ಹುನ್ನಾರ.
– ಭದ್ರತೆ ಹೆಚ್ಚಳಕ್ಕೂ ಸಿಎಂ ಬಳಿ ಮನವಿ
– ಕಾಂಗ್ರೆಸ್ ಬಿಡೋ ಮಾತೇ ಇಲ್ಲ
ಬೆಂಗಳೂರು: ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಯಡಿಯೂರಪ್ಪ ಅವರನ್ನು ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಭೇಟಿ ಮಾಡಿದ್ದಾರೆ.
ಘಟನೆಯ ಬಳಿಕ ಮೊದಲ ಬಾರಿಗೆ ಶಾಸಕ ಅರವಿಂದ ಲಿಂಬಾವಳಿ ಜೊತೆ ಬಂದು ಕಾವೇರಿ ನಿವಾಸದಲ್ಲಿ ಸಿಎಂ ಭೇಟಿಯಾದ ಅಖಂಡ, ಗಲಭೆ ಕುರಿತು ಬಿಎಸ್‍ವೈ ಜೊತೆ ಚರ್ಚೆ ನಡೆಸಿದ್ದಾರೆ. ಪ್ರಕರಣದ ಬಗ್ಗೆ ಸಿಎಂ ಬಿಎಸ್‍ವೈಗೆ ಅಖಂಡ ವಿವರಣೆ ನೀಡಿದ್ದಾರೆ.
ಈ ಗಲಭೆ ಪ್ರಮುಖ ಕಾರಣ ಯಾರು, ಗಲಭೆ ನಡೆದ ದಿನದಿಂದ ಇಲ್ಲಿವರೆಗೂ ಆಗಿರುವ ಬೆಳವಣಿಗೆ, ಪ್ರಕರಣದ ಕುರಿತು ತನಿಖೆ ಬಗ್ಗೆ ಚರ್ಚೆ ಮಾಡಿದ್ದಾರೆ. ಎಸ್‍ಡಿಪಿಐ ಸಂಘಟನೆಯ ಕೈವಾಡ ಹಾಗೂ ಸ್ಥಳೀಯ ನಾಯಕರ ಆಂತರಿಕ ಭಿನ್ನಾಭಿಪ್ರಾಯ ಸೇರಿದಂತೆ ಹಲವು ವಿಷಯಗಳ ಗಳ ಬಗ್ಗೆ ಸಿಎಂಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಮುಂದೆ ಯಾವ ರೀತಿ ತನಿಖೆ ನಡೆಸಬೇಕು ಎಂಬುದರ ಬಗ್ಗೆಯೂ ಸಮಾಲೋಚನೆ ನಡೆಸಲಾಗಿದೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಖಂಡ, ಭದ್ರತೆ ಹೆಚ್ಚಳಕ್ಕೆ ಮನವಿ ಮಾಡಿದ್ದೇನೆ. ಸಿಬಿಐ ತನಿಖೆ ಮಾಡಿಸುವಂತೆ ಕೇಳಿಕೊಂಡಿದ್ದೇನೆ. ತನಿಖೆ ಬಳಿಕ ಪರಿಶೀಲಿಸಿ ನೋಡೋದಾಗಿ ಸಿಎಂ ಹೇಳಿದ್ದಾರೆ. ಯಾರೇ ಇದ್ರೂ ತಪ್ಪಿತಸ್ಥರನ್ನು ಬಂಧಿಸಲು ಮನವಿ ಮಾಡಿದ್ದೇನೆ ಎಂದರು.
ನನಗೆ ಸರ್ಕಾರ ಇನ್ನೂ ಪೊಲೀಸ್ ಭದ್ರತೆ ಕೊಟ್ಟಿಲ್ಲ. ನನ್ನ ಮನೆಗೆ ಭದ್ರತೆ ಕೊಟ್ಟಿದ್ದಾರೆ. ಭದ್ರತೆ ವಿಚಾರದಲ್ಲಿ ಸರ್ಕಾರ ಸ್ಪಂದಿಸಿಲ್ಲ ಎಂದು ಇದೇ ವೇಳೆ ಅಖಂಡ ಆರೋಪ ಮಾಡಿದರು. ಮೊನ್ನೆ ಸಿಎಂ ಜೊತೆ ಫೋನಲ್ಲಿ ಮಾತಾಡಿದ್ದೆ. ನಮ್ಮನೆ ಅಕ್ಕ-ಪಕ್ಕ ಮನೆ, ವಾಹನಗಳನ್ನು ಸುಟ್ಟಿದ್ದಾರೆ. ಇವರಿಗೆಲ್ಲ ಪರಿಹಾರ ಕೊಡಲು ಸಿಎಂಗೆ ಮನವಿ ಮಾಡಿಕೊಂಡಿದ್ದೇನೆ. ಅಪರಾಧಿಗಳು ಯಾರೇ ಇರಲಿ, ಎಷ್ಟೇ ಪ್ರಭಾವಿಗಳಿದ್ರೂ ಶಿಕ್ಷೆ ಆಗಲೇಬೇಕು ಎಂದು ಕಟುವಾಗಿ ಹೇಳಿದರು.
ಇದೇ ವೇಳೆ ಮಾಜಿ ಶಾಸಕ ಪ್ರಸನ್ನಕುಮಾರ್ ಮತ್ತೆ ಕಾಂಗ್ರೆಸ್ ಸೇರೋ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಅಖಂಡ,ಪ್ರಸನ್ನಕುಮಾರ್ ಕಾಂಗ್ರೆಸ್ ಸೇರೋ ವಿಷಯ ನನಗೆ ಗೊತ್ತೇ ಇಲ್ಲ. ನನ್ನ ಗಮನಕ್ಕೂ ಬಂದಿಲ್ಲ. ಪ್ರಸನ್ನಕುಮಾರ್ ಸೇರ್ಪಡೆಯಿಂದ ನನಗೆ ತೊಂದರೆ ಇಲ್ಲ. ಕಾಂಗ್ರೆಸ್ಸಿಗೆ ಯಾರು ಬೇಕಾದರೂ ಬರಬಹುದು. ಪ್ರಸನ್ನಕುಮಾರ್ ಕಾಂಗ್ರೆಸ್ ಸೇರೋ ವಿಷಯ ಅಧ್ಯಕ್ಷರಿಗೆ ಬಿಟ್ಟಿದು ಎಂದು ತಿಳಿಸಿದರು.
ಆದರೆ ಪ್ರಸನ್ನಕುಮಾರ್ ಅವರು ಕಾಂಗ್ರೆಸ್ ಸೇರಲು ಬಯಸಿರುವ ವಿಷಯ ಅಖಂಡ ಶ್ರೀನಿವಾಸ್ ಗಮನಕ್ಕೆ ತಂದಿರೋದಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಈ ಹಿಂದೆ ತಿಳಿಸಿದ್ದರು. ಪ್ರಸನ್ನಕುಮಾರ್ ಸೇರ್ಪಡೆಗೆ ಅಖಂಡ ವಿರೋಧ ಇಲ್ಲ ಅಂದಿದ್ದರು. ಆದರೆ ಈಗ ಪ್ರಸನ್ನಕುಮಾರ್ ಮತ್ತೆ ಬರೋ ವಿಷಯ ನನಗೆ ಗೊತ್ತಿಲ್ಲ ಎಂದು ಅಖಂಡ ಹೇಳುತ್ತಿದ್ದಾರೆ. ಇದನ್ನು ಗಮನಿಸಿದರೆ ಡಿಕೆಶಿ ಸುಳ್ಳು ಹೇಳಿದ್ರಾ?, ಸುಳ್ಳೇ ಹೇಳಿದ್ರೂ ಯಾಕೆ ಹೇಳಿದ್ರು ಎಂಬ ಪ್ರಶ್ನೆ ಮೂಡಿದೆ.
ನಾನು ಕಾಂಗ್ರೆಸ್ ಬಿಡಲ್ಲ. ನಮ್ಮ ತಂದೆಯೂ ಕಾಂಗ್ರೆಸ್ಸಿನಲ್ಲೇ ಇದ್ದಿದ್ದು. ಹೀಗಾಗಿ ನಾನು ಕಾಂಗ್ರೆಸ್ ಪಕ್ಷ ಬಿಡೋ ಮಾತೇ ಇಲ್ಲ. ನನ್ನ ರಕ್ತದಲ್ಲಿ ಇರೋದು ಕಾಂಗ್ರೆಸ್. ನನ್ನ ರಕ್ಷಣೆಗೆ ಸರ್ಕಾರ ಸೇರಿದಂತೆ ನಮ್ಮ ಪಕ್ಷದ ನಾಯಕರು ಬರಬೇಕು. ಸಿಎಲ್‍ಪಿ ನಾಯಕ ಸಿದ್ದರಾಮಯ್ಯ ಸೇರಿದಂತೆ ಡಿಕೆ ಶಿವಕುಮಾರ್ ನನ್ನ ರಕ್ಷಣೆಗೆ ಬರಬೇಕು. ನನ್ನ ಮೇಲೆ ಯಾರಿಂದಲೂ ಒತ್ತಡ ಇಲ್ಲ, ಯಾವ ಒತ್ತಡವೂ ಇಲ್ಲ ಎಂದರು.
ಬಿಜೆಪಿ ಶಾಸಕರ ಜೊತೆ ಸಿಎಂ ಭೇಟಿಗೆ ಬಂದ ವಿಚಾರದ ಕುರಿತು ಸ್ಪಷ್ಟನೆ ನೀಡಿದ ಅವರು, ನಮ್ಮ ಭೋವಿ ಸಮಾಜದ ಮುಖಂಡರ ಜೊತೆ ನಾನು ಸಿಎಂ ಭೇಟಿಗೆ ಆಗಮಿಸಿದೆ. ನಮ್ಮ ಸಮಾಜದ ಮುಖಂಡರು ಇದ್ದರು. ಅರವಿಂದ ಲಿಂಬಾವಳಿ ಭೋವಿ ಜನಾಂಗದ ಶಾಸಕರು. ನಮ್ಮ ಜನಾಂಗದ ಶಾಸಕರ ಜೊತೆ ನಾನು ಬಂದಿದ್ದೇನೆ. ಭೋವಿ ಜನಾಂಗದ ಅಧ್ಯಕ್ಷ ಮಾಕಳಿ ರವಿಯವರು ಬಂದಿದ್ದಾರೆ. ಅವರ ಜೊತೆಯಲ್ಲಿ ನಾನು ಬಂದು ಸಿಎಂ ಭೇಟಿ ಮಾಡಿದ್ದೇನೆ ಅಷ್ಟೇ ಎಂದರು.
ಬೆಂಗಳೂರು: ಕೊತ್ತಂಬರಿ, ಕರಿಬೇವಿನ ಸೊಪ್ಪು ತರೋಕೆ ಹೋದವರ ಲಿಸ್ಟ್ ಎಲ್ಲಾ ಇದೆ. ಯಾವ ಯಾವ ಕಾಂಗ್ರೆಸ್ ನಾಯಕರ ಕೈಲಿ ಕೊತ್ತಂಬರಿ, ಕರಿಬೇವಿನ ಸೊಪ್ಪು ಇದೆ ಅಂತ ಮಾಹಿತಿ ಇದೆ ಎಂದು ಕಂದಾಯ ಸಚಿವ ಆರ್ ಅಶೋಕ್ ವ್ಯಂಗ್ಯವಾಡಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಾ, ಅಖಂಡ ಶ್ರೀನಿವಾಸ ಮೂರ್ತಿಯವರನ್ನು ಸೆಳೆಯಲು ಬಿಜೆಪಿ ಒತ್ತಡ ಹಾಕ್ತಿದೆ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಅಖಂಡ ಶ್ರೀನಿವಾಸ ಮೂರ್ತಿಯವರನ್ನು ಬಿಜೆಪಿಗೆ ಕರೆಯೋದೇ ಇಲ್ಲ. ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳೋ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಎಸ್‍ಡಿಪಿಐ, ಶಾಸಕರು ಹಾಗೂ ಕಾರ್ಪೊರೇಟರ್ ಮೂವರ ನಡುವೆ ಆಗಿರುವ ಗಲಾಟೆ ಇದು. ಇದು ತ್ರಿಕೋನ ಫೈಟ್. ಕೊಲೆಯಾದ್ರೆ, ತಿದ್ದುಕೊಳ್ಳಲು ಅವಕಾಶವಿದೇಯೇ ಎಂದು ಪ್ರಶ್ನಿಸಿದ ಅವರು, ಕೆ.ಜಿ ಹಳ್ಳಿ ಪ್ರಕರಣದಲ್ಲಿ ಕಾಂಗ್ರೆಸ್ ಮುಖ ಬಟಾಬಯಲಾಗಿದೆ. ಅಖಂಡ ಶ್ರೀನಿವಾಸ ಮತ್ತು ಸ್ಥಳೀಯರ ಜೊತೆ ಸಂಬಂಧ ಚೆನ್ನಾಗಿ ಇರಲಿಲ್ಲ ಎಂದು ಸ್ವತಃ ಕಾಂಗ್ರೆಸ್ ಮಾಜಿ ಶಾಸಕ ಪ್ರಸನ್ನ ಕುಮಾರ್ ಹೇಳಿದ್ದಾರೆ. ಈ ಮೂಲಕ ಕಾಂಗ್ರೆಸ್ ಒಳ ರಾಜಕೀಯವೇ ಗಲಭೆಗೆ ಕಾರಣ ಅನ್ನೋದು ಬಯಲಾದಂತಾಗಿದೆ ಎಂದರು.
ಜಮೀರ್ ಅವರು ಅಖಂಡ ಅವರಿಗೆ ಈಗ ಹೊಸ ಮನೆ ಕಟ್ಟಿಸಿಕೊಡುತ್ತೇವೆ ಎಂದು ಹೇಳಿದ್ದಾರೆ. ಆದರೆ ಅಖಂಡ ಶ್ರೀನಿವಾಸ ಸುಟ್ಟು ಹೋಗಿರುವ ಮನೆ ವಾಪಸ್ ಸಿಗುತ್ತಾ?. ಅಖಂಡ ಕುಟುಂಬದವರು ಕಟ್ಟಿಸಿದ ಮನೆ ಅದಾಗಿತ್ತು. ಈಗ ಜಮೀರ್ ಆ ಥರದ, ಪ್ರೀತಿಯಿದ್ದ ಮನೆ ಕಟ್ಟಿಸ್ತಾರಾ?, ಶಾಸಕರ ತಾಯಿಯ ತಾಳಿ ಸುಟ್ಟು ಹೋಗಿದೆ. ಅದನ್ನ ಕೊಡಲಿಕ್ಕೆ ನಿಮ್ಮಿಂದ ಆಗುತ್ತಾ ಎಂದು ಜಮೀರ್ ಗೆ ತಿರುಗೇಟು ನಿಡಿದರು.
ನಮ್ಮ ಸಮಾಜದಿಂದ ಅವರಿಗೆ ಮನೆ, ಕಾರು ಕೊಡ್ತೇವೆ ಎಂದ ಜಮೀರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕೊತ್ತಂಬರಿ ಸೊಪ್ಪು ರಾತ್ರಿ ಒಂದು ಗಂಟೆಗೆ ಸಿಗುತ್ತಾ?. ಕಾಂಗ್ರೆಸ್ಸಿನವರು ಕೊತ್ತಂಬರಿ, ಕರಿಬೇವು ಸೊಪ್ಪು ಕತೆ ಬಿಡಿ. ಕಾರಣ ಇಲ್ಲದೇ ನಡೆದ ಘಟನೆ ಇದು. ಕಾಂಗ್ರೆಸ್ಸಿನ ಒಳ ಜಗಳದ ದಳ್ಳೂರಿಯಿಂದಾಗಿ ಗಲಭೆ ನಡೆದು ಬೆಂಗಳೂರಿಗೆ ಕಪ್ಪುಚುಕ್ಕೆ ಮಾಡುವ ಹಾಗಾಯಿತು ಎಂದು ಕಿಡಿಕಾರಿದರು.
ಅಡಕೆಗೆ ಹೋದ ಮಾನ ಆನೆ ಕೊಟ್ರು ಬರಲ್ಲ. ಮಾತು ಆಡಿದರೆ ಹೋಯ್ತು. ಮುತ್ತು ಒಡೆದ್ರೆ ಹೋಯ್ತು ಅನ್ನೋ ಹಾಗೇ ಡಿಕೆ ಶಿವಕುಮಾರ್, ಗೃಹ ಸಚಿವರ ವಿರುದ್ಧ ಮಾತಾಡಿದ್ದು ಸರಿಯಲ್ಲ. ರಾಜಕಾರಣದಲ್ಲಿ ಸಾಕಷ್ಟು ಆಸೆಗಳನ್ನ ಇಟ್ಟುಕೊಂಡಿರುವ ನಿಮಗೆ ಇಂತಹ ಹೇಳಿಕೆಗಳಿಂದ ಹಿನ್ನಡೆಯಾಗುತ್ತೆ. ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಎಸ್‍ಡಿಪಿಐ ಬ್ಯಾನ್ ಮಾಡುವ ಬಗ್ಗೆ ಮಾತಾಡ್ತಾ ಇಲ್ಲ. ನಾವು ಬ್ಯಾನ್ ಮಾಡಿ ಅಂತ ಹೇಳ್ತಿದ್ದೇವೆ. ಕಾಂಗ್ರೆಸ್ ಮತ್ತು ಎಸ್‍ಡಿಪಿಐ ಒಂದೇ ನಾಣ್ಯದ ಎರಡು ಮುಖಗಳು ಎಂದರು.
ಎಸ್‍ಡಿಪಿಐ ಬ್ಯಾನ್ ಮಾಡೋಕೆ ಬೇಕಾದ ಎಲ್ಲಾ ವರದಿ ರೆಡಿ ಮಾಡುತ್ತಿದ್ದೇವೆ. 20 ಕೊಲೆಗಳಲ್ಲಿ ಎಸ್‍ಡಿಪಿಐ ಕೈವಾಡ ಇರುವ ಬಗ್ಗೆ ಮಾಹಿತಿ ಇದೆ. ಹೀಗಾಗಿ ಅದೆಲ್ಲಾ ವರದಿ ಮಾಡಿ ಬ್ಯಾನ್ ಮಾಡೋಕೆ ವರದಿ ಸಿದ್ಧವಾಗ್ತಿದೆ. ಕಾಂಗ್ರೆಸ್ ಮತ್ತು ಎಸ್‍ಡಿಪಿಐ ಒಂದೇ ನಾಣ್ಯದ ಎರಡು ಮುಖ. ಪೊಲೀಸ್ ಮೇಲೆ ಕಾಂಗ್ರೆಸ್ ಮಾಡುವ ಆರೋಪ ಸರಿಯಲ್ಲ ಎಂದರು.
ಬೆಂಗಳೂರು: ಅಲ್ಲಾ ಎಲ್ಲವನ್ನೂ ಕೊಡ್ತಾನೆ ಯಾವುದೇ ಕಾರಣಕ್ಕೂ ಚಿಂತೆ ಮಾಡಬೇಡಿ ಎಂದು ಪುಲಿಕೇಶಿ ನಗರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರಿಗೆ ಮೌಲ್ವಿಗಳು ಧೈರ್ಯ ತುಂಬಿದ್ದಾರೆ.
ಗಲಭೆಯಿಂದ ಹೊತ್ತಿ ಉರಿದ ಶಾಸಕರ ಕಾವಲ್ ಭೈರಸಂದ್ರದಲ್ಲಿರುವ ಶಾಸಕರ ನಿವಾಸಕ್ಕೆ ಚಾಮರಾಜಪೇಟೆಯ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ನೇತೃತ್ವದಲ್ಲಿ ಮೌಲ್ವಿಗಳು ಭೇಟಿ ನೀಡಿ ವೀಕ್ಷಿಸಿದರು.
ಹೊತ್ತಿ ಉರಿದ ಮನೆಯನ್ನು ಅಖಂಡ ತೋರಿಸುವ ಸಂದರ್ಭದಲ್ಲಿ ಮೌಲ್ವಿ ಇರ್ಷಾದ್ ಅಹಮ್ಮದ್, ಅಖಂಡ ಶ್ರೀನಿವಾಸ್ ನಮಗೆ ಮನೆ ಮಗ ಇದ್ದಂತೆ. ಎಲ್ಲಾ ಮಸೀದಿಗಳು ನಿಮ್ಮ ಜೊತೆ ಇರುತ್ತದೆ. ಅಲ್ಲಾ ಎಲ್ಲವನ್ನೂ ಕೊಡುತ್ತಾನೆ. ಯಾವುದೇ ಕಾರಣಕ್ಕೂ ಚಿಂತೆ ಮಾಡಬೇಡಿ ಎಂದು ಹೇಳಿ ಧೈರ್ಯ ತುಂಬಿದರು. ಇದನ್ನೂ ಓದಿ: ‘ಬೆಂಕಿ’ ಗಲಾಟೆಯ ಸಂಚುಕೋರನಿಗೆ ಭಯೋತ್ಪಾದಕ ಸಂಘಟನೆಯ ನಂಟು?
ಮಾಧ್ಯಮಗಳ ಜೊತೆ ಮಾತನಾಡಿದ ಜಮೀರ್, ಮನೆ ಕಟ್ಟಿಸಿಕೊಡುವುದಾಗಿ ಧರ್ಮಗುರುಗಳು ಹೇಳಿದ್ದಾರೆ. ಶಾಸಕರು ಒಪ್ಪಿದರೆ ನಾವು ಸ್ವಂತ ಹಣ ದಿಂದ ಮನೆ ಕಟ್ಟಿಸಿಕೊಡೊದಾಗಿ ಹೇಳಿದ್ದಾರೆ. ಯಾರೇ ಕಾನೂನನ್ನು ಕೈಗೆ ತೆಗೆದುಕೊಳ್ಳಬೇಡಿ. ಕಾನೂನಿನ ಮೇಲೆ ನಂಬಿಕೆ ಇದೆ ಎಂದು ಹೇಳಿದರು.
ಈ ವೇಳೆ ಮಾತನಾಡಿದ ಅಖಂಡ, ಮನೆಯನ್ನು ನಾನೇ ನಿರ್ಮಿಸುತ್ತೇನೆ. ಗುರುಗಳ ಆಶೀರ್ವಾದ ಸದಾ ಇರಲಿ. ನಾವೇ ಹೋಗಿ ಮಾತನಾಡಿಕೊಂಡು ಬರಬೇಕಾಗಿತ್ತು. ಗುರುಗಳೇ ಬಂದು ಆಶೀರ್ವಾದ ಮಾಡಿದ್ದಕ್ಕೆ ಧನ್ಯವಾದಗಳು ಎಂದು ತಿಳಿಸಿದರು.
ಈ ಮೊದಲು ಮಾಧ್ಯಮಗಳ ಜೊತೆ ಮಾತನಾಡಿದ್ದ ಅಖಂಡ ಶ್ರೀನಿವಾಸ ಮೂರ್ತಿ, ಯಾರು ಈ ಕೃತ್ಯಗಳನ್ನು ಮಾಡಿದ್ದಾರೆ ಎಂಬುದನ್ನು ಪೊಲೀಸ್ ಇಲಾಖೆ ತನಿಖೆ ಮಾಡಿ, ನ್ಯಾಯ ಒದಗಿಸಿಕೊಡಬೇಕು ಎಂದು ದೂರನ್ನು ಕೊಟ್ಟಿದ್ದೇವೆ. ಈ ಗಲಭೆಯಿಂದ ಏನೇನು ನಷ್ಟ ಆಗಿದೆ ಎಂದು ಒಂದು ಪಟ್ಟಿ ಮಾಡಿ ಮಾಡಿಕೊಡುತ್ತೇನೆ. ದೂರಿನಲ್ಲಿ ಯಾರ ಹೆಸರನ್ನು ಹೇಳಿಲ್ಲ. ತನಿಖೆಯ ವೇಳೆ ಪೊಲೀಸರು ಘಟನೆಯ ಬಗ್ಗೆ ಬಹಿರಂಗ ಪಡಿಸುತ್ತಾರೆ ಎಂದು ತಿಳಿಸಿದ್ದರು.
ಮಾಧ್ಯಮಗಳ ಜೊತೆ ಮಾತನಾಡಿದ ಅಖಂಡ ಶ್ರೀನಿವಾಸ ಮೂರ್ತಿ, ಯಾರು ಈ ಕೃತ್ಯಗಳನ್ನು ಮಾಡಿದ್ದಾರೆ ಎಂಬುದನ್ನು ಪೊಲೀಸ್ ಇಲಾಖೆ ತನಿಖೆ ಮಾಡಿ, ನ್ಯಾಯ ಒದಗಿಸಿಕೊಡಬೇಕು ಎಂದು ದೂರನ್ನು ಕೊಟ್ಟಿದ್ದೇವೆ. ಈ ಗಲಭೆಯಿಂದ ಏನೇನು ನಷ್ಟ ಆಗಿದೆ ಎಂದು ಒಂದು ಪಟ್ಟಿ ಮಾಡಿ ಮಾಡಿಕೊಡುತ್ತೇನೆ. ನಾನು ಯಾರ ಹೆಸರು ಹೇಳಿಲ್ಲ, ತನಿಖೆಯ ವೇಳೆ ಪೊಲೀಸರು ಘಟನೆಯ ಬಗ್ಗೆ ಬಹಿರಂಗ ಪಡಿಸುತ್ತಾರೆ ಎಂದರು.
ನಾನು ಎಲ್ಲರ ಜೊತೆಯೂ ಸಮಾನವಾಗಿ ಇದ್ದೇನೆ. ಅವರು ನನ್ನ ಮೇಲೆ ದ್ವೇಷ ಸಾಧಿಸುವ ಅವಶ್ಯಕತೆ ಇಲ್ಲ. ಆದರೂ ನನ್ನ ಮನೆಯನ್ನು ಹಾಳು ಮಾಡಿದ್ದಾರೆ. ಒಂದು ವೇಳೆ ಮನೆಯಲ್ಲಿ ಮಕ್ಕಳಿದಿದ್ದರೆ ಯಾರು ಕಾಪಾಡುತ್ತಿದ್ದರು. ಅದಕ್ಕೆ ನಾನು ಪೊಲೀಸರ ಭದ್ರತೆಗೆ ಕೇಳಿಕೊಂಡಿದ್ದೇನೆ. ಜೊತೆಗೆ ರಾಜ್ಯ ಸರ್ಕಾರದ ಬಳಿಯೂ ರಕ್ಷಣೆಗಾಗಿ ಮನವಿ ಮಾಡಿಕೊಂಡಿದ್ದೇನೆ ಎಂದು ತಿಳಿಸಿದರು.
ಮನೆ ಸಂಪೂರ್ಣವಾಗಿ ನಾಶವಾಗಿದೆ. ನಮ್ಮ ಮನೆ ಹಾಳು ಮಾಡಿದರಲ್ಲ ಎಂಬ ದುಃಖ ಇದೆ. ಯಾಕೆಂದರೆ ನಾನು ಹುಟ್ಟಿ ಬೆಳೆದಂತಹ ಮನೆ ಅದು. ನಾನು ಆ ಪಕ್ಷ, ಈ ಪಕ್ಷ ಎಂದು ಭೇದ ಭಾವ ಮಾಡಿಲ್ಲ. ಎಲ್ಲರ ಜೊತೆಗೆ ಒಟ್ಟಾಗಿ ಕೆಲಸ ಮಾಡಿದ್ದೇನೆ. ಪ್ರತಿದಿನ ನನ್ನ ಕ್ಷೇತ್ರ ಬಿಟ್ಟು ಹೊರಗೆ ಹೋಗಿಲ್ಲ. ಅಲ್ಲದೇ ನಾವು ಯಾರ ಮೇಲೂ ದ್ವೇಷಕ್ಕೆ ಹೋಗಿಲ್ಲ. ಎಲ್ಲರೂ ಅಣ್ಣ-ತಮ್ಮಂದಿರ ರೀತಿ ಇದ್ದೇವೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲರೂ ಒಟ್ಟಾಗಿ ಇದ್ದೀವಿ. ನಮ್ಮ ಕ್ಷೇತ್ರದಲ್ಲಿ 24 ವರ್ಷದಿಂದ ಯಾವ ಘಟನೆಗಳು ಆಗಿಲ್ಲ. ಮುಂದಕ್ಕೂ ಆಗಬಾರದು ಎಂದು ಶ್ರೀವಿನಾಸ ಮೂರ್ತಿ ಹೇಳಿದರು.
ನವೀನ್ ನನ್ನ ಅಕ್ಕನ ಮಗ. ಆದರೆ ನನಗೂ ಅವನಿಗೂ ಸಂಬಂಧ ಇಲ್ಲ. ಮನೆಯಲ್ಲಿರೋ ಆಸ್ತಿ-ಪಾಸ್ತಿ ಬಗ್ಗೆ ಪಟ್ಟಿ ಮಾಡಿ ನಂತರ ದೂರು ಕೊಡಲಾಗುತ್ತೆ. ಯಾರಿಗೆಲ್ಲಾ ಸಮಸ್ಯೆ ಆಗಿದೆ ಅವರೆಲ್ಲರಿಗೂ ಪ್ರತ್ಯೇಕ ದೂರು ಕೊಡಲು ತಿಳಿಸಲಾಗಿದೆ. ನಾನು ಪ್ರತ್ಯೇಕವಾಗಿ ದೂರು ಕೊಡುತ್ತೇನೆ. ಮನೆ, ಮನೆಯಲ್ಲಿದ್ದ ವಸ್ತು, ದಾಖಲಾತಿ ಎಲ್ಲವೂ ಹಾಳಾಗಿದೆ. ಒಟ್ಟು ಸುಮಾರು ಮೂರು ಕೋಟಿಯಷ್ಟು ನಷ್ಟವಾಗಿದೆ. ಪೊಲೀಸರು ಈ ಕುರಿತು ತನಿಖೆ ಮಾಡಿ ನ್ಯಾಯ ಒದಗಿಸಿಕೊಡಬೇಕು ಎಂದು ಮನವಿ ಮಾಡಿಕೊಂಡರು.
ಬೆಂಗಳೂರು: ಆರೋಪಿ ನವೀನ್ ʼಬೆಂಕಿ ಪೋಸ್ಟ್ʼನಿಂದ ಬೆಂಗಳೂರು ಹೊತ್ತಿ ಉರಿದಿದ್ದು ಈಗ ಇತಿಹಾಸ. ಆದರೆ ನವೀನ್ ಒಮ್ಮೆ ಬಿಜೆಪಿ ಕಾರ್ಯಕರ್ತ ಮತ್ತೊಮ್ಮೆ ಕಾಂಗ್ರೆಸ್ ಕಾರ್ಯಕರ್ತನಂತೆ ಪೋಸ್ಟ್ ಯಾಕೆ ಹಾಕುತ್ತಿದ್ದ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ನವೀನ್ ಮುಸ್ಲಿಮ್ ಧರ್ಮದ ವಿರುದ್ಧವಾಗಿ, ಬಿಜೆಪಿ ಪರವಾಗಿ, ಕಾಂಗ್ರೆಸ್ ಅಭಿಮಾನಿಯಾಗಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕುತ್ತಿದ್ದ. ಒಂದೇ ಪಕ್ಷದ ಕಾರ್ಯಕರ್ತನಾಗಿದ್ದರೆ ಒಂದು ವಿಚಾರದ ಪರವಾದ ಬಗ್ಗೆ ಪೋಸ್ಟ್ ಹಾಕುತ್ತಿದ್ದ. ಆದರೆ ಈತ ಒಮ್ಮೊಮ್ಮೆ ಒಂದೊಂದು ವಿಚಾರದ, ವ್ಯಕ್ತಿಗಳಿಗೆ ಸಂಬಂಧಿಸಿದ ಪೋಸ್ಟ್ ಹಾಕುವ ಮೂಲಕ ಈತ ಯಾರ ಪರವಾಗಿದ್ದಾನೆ ಎಂಬುದೇ ದೊಡ್ಡ ಪ್ರಶ್ನೆಯಾಗಿತ್ತು. ಆದರೆ ಈಗ ಈ ರೀತಿಯ ಪೋಸ್ಟ್ ಹಾಕಿ ಗೊಂದಲ ಮೂಡಿಸುವ ಹಿಂದೆ ದೊಡ್ಡ ಪ್ಲಾನ್ ಅಡಗಿತ್ತು ಎಂಬ ವಿಚಾರ ಈಗ ತಿಳಿದು ಬಂದಿದೆ.
ಅಖಂಡ ಶ್ರೀನಿವಾಸ ಮೂರ್ತಿ ಜೆಡಿಎಸ್‌ನಲ್ಲಿದ್ದು ಕಳೆದ ಚುನಾವಣೆಯಲ್ಲಿ ಪುಲಿಕೇಶಿ ನಗರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಜಯಗಳಿಸಿದ್ದರು. ಅಖಂಡ ಅವರ ಅಕ್ಕನ ಮಗನಾದ ನವೀನ್‌ಗೆ ಸಹ ರಾಜಕೀಯದಲ್ಲಿ ಬೆಳೆಯಬೇಕೆಂಬ ಆಸೆ ವ್ಯಕ್ತವಾಗಿತ್ತು. ಆದರೆ ಅಖಂಡ ಅವರು ನವೀನ್ ರಾಜಕೀಯ ಬರುವುದನ್ನು ತಿರಸ್ಕರಿಸಿದ್ದರು.
ಪ್ರವಾದಿ ಮಹಮದ್ ಅವರ ವಿರುದ್ಧ ಪ್ರಚೋದನಕಾರಿ ಪೋಸ್ಟ್ ಹಾಕಿರುವ ನವೀನ್ ಎನ್ನುವ ಯುವಕ ಬಿಜೆಪಿ ಪಕ್ಷದ ಕಟ್ಟಾ ಅಭಿಮಾನಿ, ಬೆಂಬಲಿಗ ಹಾಗೂ ಮತದಾರ.
ಬಿಜೆಪಿಗೆ ತಾನು ಮತ ನೀಡಿರುವುದಾಗಿ ಹಿಂದೊಮ್ಮೆ ಸಾಮಾಜಿಕ ಜಾಲತಾಣದಲ್ಲೂ ಹೇಳಿಕೊಂಡಿದ್ದ.
ಅಖಂಡ ಶ್ರೀನಿವಾಸಮೂರ್ತಿ ಬಹುತೇಕ ಫ್ಯಾಮಿಲಿ ರಾಜಕೀಯ ಹಿನ್ನಲೆಯವರಾಗಿದ್ದು ಅಕ್ಕನನ್ನು ಏಳೆಂಟು ವರ್ಷದ ಹಿಂದೆಯೇ ಅಖಾಡಕ್ಕೆ ಇಳಿಸಿದ್ದರು. ನಂತರ ಸಹೋದರ ಮಹೇಶ್‍ರನ್ನು ಕೂಡ ರಾಜಕೀಯವಾಗಿ ಬೆಳೆಯಲು ಶ್ರಮ ಪಟ್ಟಿದ್ದರು. ಈ ಕಾರಣಕ್ಕೆ ಮಾವನಾಗಿರುವ ಶ್ರೀನಿವಾಸ ಮೂರ್ತಿ ನನ್ನನ್ನೂ ಅವರಂತೆ ಬೆಳೆಸಲಿ ಎಂದು ಕಾಯುತ್ತಿದ್ದ. ಆದರೆ ಅಖಂಡ ಅವರು ಈತನನ್ನು ಕಡೆಗಣಿಸಿದ್ದರು. ಈ ಕಾರಣಕ್ಕೆ ಬಿಜೆಪಿ ಪರ ಪೋಸ್ಟ್ ಹಾಕಿ ಗೊಂದಲ ಮೂಡಿಸುತ್ತಿದ್ದ ಎಂಬ ವಿಚಾರ ಈಗ ಮೂಲಗಳಿಂದ ತಿಳಿದು ಬಂದಿದೆ.
ಪ್ರವಾದಿ ಮಹಮದ್ ಅವರ ವಿರುದ್ಧ ಪ್ರಚೋದನಕಾರಿ ಪೋಸ್ಟ್ ಹಾಕಿರುವ ನವೀನ್ ಎನ್ನುವ ಯುವಕ ಬಿಜೆಪಿ ಪಕ್ಷದ ಕಟ್ಟಾ ಅಭಿಮಾನಿ, ಬೆಂಬಲಿಗ ಹಾಗೂ ಮತದಾರ. ಬಿಜೆಪಿಗೆ ತಾನು ಮತ ನೀಡಿರುವುದಾಗಿ ಹಿಂದೊಮ್ಮೆ ಸಾಮಾಜಿಕ ಜಾಲತಾಣದಲ್ಲೂ ಹೇಳಿಕೊಂಡಿದ್ದ. ಈ ಯುವಕ ಹಿಂದೆಯೂ ಇದೇ ರೀತಿ ಪ್ರಚೋದನಕಾರಿ ಪೋಸ್ಟ್ ಪ್ರಕಟಿಸಿದ್ದ. – @DKShivakumarpic.twitter.com/J1VrPysmOQ
ಮುಸ್ಲಿಂ ಮುಖಂಡರು ನೀಡಿರುವ ದೂರು ಆಧರಿಸಿ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ನವೀನ್ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.
Instead of condemning the attack on their MLA & the rioting,KPCC President @DKShivakumar digresses & gives a spin to the issue suggesting that the boy accused of making derogatory posts is a BJP supporter! Here are his other posts…please see for yourself Sir #BangaloreRiotspic.twitter.com/XuLxjiKIHf
ರಮ್ಜಾನ್ ಸಂದರ್ಭದಲ್ಲಿ ಆರೋಪಿ, ತನ್ನ ಫೋಟೊ ಹಾಗೂ ಅಖಂಡ ಶ್ರೀನಿವಾಸಮೂರ್ತಿ ಫೋಟೊ ಸೇರಿಸಿ ಮುಸ್ಲಿಂ ಬಾಂಧವರಿಗೆ ಶುಭ ಕೋರಿದ್ದ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ “ಈ ಬಾರಿ ಬಿಜೆಪಿಗೆ ಮತ ಹಾಕಿದ್ದೇನೆ. ಚುನಾವಣೆ ದಿನ ಮಳೆ ಇತ್ತು. ಹೀಗಾಗಿ, ಮೇ 23ರ ಫಲಿತಾಂಶದಂದು ಕಮಲ ಅರಳಲಿದೆ” ಎಂದು ಬರೆದುಕೊಂಡಿದ್ದ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನವೀನ್ ಬಿಜೆಪಿ ಏಜೆಂಟ್ ಎಂದು ದೂರಿದ್ದರೆ ಬಿಜೆಪಿಯವರು ಈತ ಕಾಂಗ್ರೆಸ್ ಪರವಾಗಿ ಮಾಡಿರುವ ಪೋಸ್ಟ್‌ಗಳನ್ನು ಹಾಕಿ ಇದಕ್ಕೆ ಏನು ಹೇಳುತ್ತಿದ್ದೀರಿ ಎಂದು ಪ್ರಶ್ನಿಸುತ್ತಿದ್ದಾರೆ.
ಬಳ್ಳಾರಿ: ಕಾಂಗ್ರೆಸ್ ಶಾಸಕ ಬೆಂಬಲಕ್ಕೆ ಬೋವಿ ವಡ್ಡರ ಸಮಾಜ ನಿಂತಿದ್ದು, ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಗೆ ಹಾನಿ ಮಾಡಿರುವುದನ್ನು ತೀವ್ರವಾಗಿ ಖಂಡಿಸಿದೆ.
ಈ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐಗೆ ವಹಿಸಬೇಕು. ಇಲ್ಲವಾದಲ್ಲಿ ಬೆಂಗಳೂರು ಚಲೋ ಕಾರ್ಯಕ್ರಮ ಮಾಡುತ್ತೇವೆ ಎಂದು ಬೋವಿ ಸಂಘಟನೆಯ ರಾಜ್ಯಾಧ್ಯಾಕ್ಷ ವೈ.ಕೊಟ್ರೇಶ್ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಬಳ್ಳಾರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರಕ್ಕೆ 19 ದಿನಗಳ ಕಾಲ ಸಮಯವಕಾಶ ನೀಡುತ್ತೇವೆ. ಸಿಬಿಐಗೆ ವಹಿಸದೇ ಇದ್ದರೆ ಇಡೀ ಬೋವಿ ಸಮಾಜ ರಾಜ್ಯದ ಎಲ್ಲ ಕಡೆಯಿಂದ ಬೋವಿ ಜನರು ಬೆಂಗಳೂರು ಚಲೋ ಕಾರ್ಯಕ್ರಮ ಮಾಡುತ್ತೇವೆ ಎಂದರು. ಇದನ್ನೂ ಓದಿ: ಸ್ಥಳೀಯ ಮುಸ್ಲಿಂ ಯುವಕರಲ್ಲದಿದ್ದರೆ ಇಂದು ನಾನು ಬದುಕುಳಿಯುತ್ತಿರಲಿಲ್ಲ: ನವೀನ್ ತಾಯಿ
ಮತಾಂಧ ಶಕ್ತಿ, ಮುಸ್ಲಿಂ ಸಂಘಟನೆ ಮತ್ತು ರಾಜಕೀಯ ಕುತಂತ್ರದಿಂದ ಶಾಸಕರ ಮೇಲೆ ಹಲ್ಲೆ ನಡೆದಿದೆ. ಕೃತ್ಯದಲ್ಲಿ ಭಾಗಿಯಾದ ದುಷ್ಕರ್ಮಿಗಳನ್ನು ಬಂಧಿಸಬೇಕು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಬೋವಿ ಹಿಂದುಳಿದ ಜನಾಂಗದ ಶಾಸಕ ಬೆಳೆಯಬಾರದು ಎಂದು ರಾಜಕೀಯ ಕುತಂತ್ರದಿಂದ ಈ ಕೃತ್ಯ ಮಾಡಲಾಗಿದೆ ಎಂದು ಆರೋಪ ಮಾಡಿದ್ದಾರೆ. ಅಲ್ಲದೇ ದುಷ್ಕರ್ಮಿಗಳನ್ನು ರಾಜ್ಯದಿಂದ ಗಡಿಪಾರು ಮಾಡಬೇಕು. ಇದರಲ್ಲಿ ರಾಜಕೀಯ ಷಡ್ಮಂತ್ರ ಅಡಗಿದೆ ಸಿಬಿಐ ಇದನ್ನು ಬಯಲಿಗೆ ಎಳೆಯಬೇಕು ಎಂದಿದ್ದಾರೆ.
Karnataka Congress MLA Akhanda Srinivas murthy house attacked by peaceful people for a controversial post on Prophet Muhammad by one of his relative.
In TN, DMK/DK/NTK mocking our Hindu gods and still Hindus are called intolerance people.
ಬೆಂಗಳೂರು: ಎಫ್‌ಬಿ ಪೋಸ್ಟ್‌ನಿಂದ ಹೊತ್ತಿ ಉರಿದ ಬೆಂಗಳೂರು ಪ್ರಕರಣದ ಮುಖ್ಯ ಆರೋಪಿಯೊಬ್ಬ ಮಾಜಿ ಗೃಹ ಸಚಿವ ಕೆಜೆ ಜಾರ್ಜ್ ಅವರ ಜೊತೆ ಸುತ್ತಾಡಿದ ವಿಡಿಯೋ ಈಗ ಲಭ್ಯವಾಗಿದೆ.
ಹೌದು. ನಾಗವಾರ ವಾರ್ಡ್‌ನ ಕಾಂಗ್ರೆಸ್ ಪಾಲಿಕೆ ಸದಸ್ಯೆ ಇರ್ಷಾದ್ ಬೇಗಂ ಪತಿ ಖಲೀಂ ಪಾಷಾ ಬೆಂಗಳೂರು ಗಲಭೆಯ 7ನೇ ಆರೋಪಿಯಾಗಿದ್ದಾನೆ. ಗಲಾಟೆ ನಡೆದ ರಾತ್ರಿ ಈತನ ಬಂಧನಕ್ಕೆ ಪೊಲೀಸರು ಹುಡುಕಾಟ ನಡೆಸಿದ್ದರು. ಆದರೆ ಈತ ಮನೆಯಲ್ಲಿ ಇರಲಿಲ್ಲ. ಆದರೆ ಖಲೀಂ ಜಾರ್ಜ್ ಜೊತೆ ಸುತ್ತಾಡಿದ್ದಾನೆ.
ಅಷ್ಟೇ ಅಲ್ಲದೇ ಆರೋಪಿ ಜಾರ್ಜ್ ಹೊತೆ ಪೊಲೀಸ್ ಠಾಣೆಗೆ ಬಂದಿದ್ದಾನೆ. ಠಾಣೆಗೆ ಬಂದಿದ್ದರೂ ಪೊಲೀಸರು ಆತನನ್ನು ಬಂಧಿಸಿಲ್ಲ.
ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಖಲೀಂ ಪಾಷಾ, ನಾನು ಗಲಭೆಯಲ್ಲಿ ಭಾಗಿಯಾಗಿಲ್ಲ. ನನ್ನ ವಿರುದ್ಧ ಎಫ್‌ಐಆರ್ ಆಗಿರುವುದು ನನಗೆ ಗೊತ್ತಿಲ್ಲ. ಪೊಲೀಸರು ಬಂದಾಗ ನಾನು ಮನೆಗೆ ಬೀಗ ಹಾಕಿರಲಿಲ್ಲ. ಹೆಂಡತಿ ಮನೆಯಲ್ಲಿ ಇದ್ದೆ ಅದಕ್ಕೆ ಪೊಲೀಸರು ತಪ್ಪು ತಿಳಿದುಕೊಂಡಿದ್ದಾರೆ. ನನಗೂ ಗಲಭೆಗೂ ಯಾವುದೇ ಸಂಬಂಧ ಇಲ್ಲ ಎಂದು ತಿಳಿಸಿದ್ದಾನೆ.