Tag: ಅಖಂಡ ಭಾರತ ಸಂಕಲ್ಪ ದಿವಸ

  • ಅಖಂಡ ಭಾರತ ಸಂಕಲ್ಪ ದಿವಸ- ಮಧ್ಯರಾತ್ರಿ ಧ್ವಜಾರೋಹಣ

    ಅಖಂಡ ಭಾರತ ಸಂಕಲ್ಪ ದಿವಸ- ಮಧ್ಯರಾತ್ರಿ ಧ್ವಜಾರೋಹಣ

    ಬೆಂಗಳೂರು: ಅಖಂಡ ಭಾರತ ಸಂಕಲ್ಪ ದಿವಸ ಆಚರಣೆಯ ಭಾಗವಾಗಿ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಹೋಬಳಿಯ ದೇವರಾಜ ಮೊದಲಿಯರ್ ವೃತ್ತದಲ್ಲಿ ರಾತ್ರಿ 12 ಗಂಟೆಗೆ ಧ್ವಜಾರೋಹಣ ಮಾಡಲಾಯಿತು.

    ಹಿಂದೂ ಜಾಗರಾಣ ವೇದಿಕೆಯಿಂದ ಈ ಧ್ವಜಾರೋಹಣ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು, ರಾತ್ರಿ 12 ಗಂಟೆಗೆ ವನಕಲ್ಲು ಮಠದ ಬದವರಮಾನಂದ ಸ್ವಾಮೀಜಿ ಧ್ವಜಾರೋಹಣ ಮಾಡಿದರು.

    ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಅಖಂಡ ಭಾರತ ಸಂಕಲ್ಪ ದಿವಸ ಆಚರಣೆ ಮಾಡಿದ ಸಂಘಟಕರಲ್ಲಿ ದೇಶ ಭಕ್ತಿ ಮುಗಿಲು ಮುಟ್ಟಿತ್ತು. ಈ ವೇಳೆ ನೂರಾರು ಹಿಂದೂ ಪರ ಸಂಘಟಕರು ಭಾಗಿಯಾಗಿ ಹೋಬಳಿಯ ಪ್ರಮುಖ ಬೀದಿಗಳಲ್ಲಿ ಪಂಜಿನ ಮೆರವಣಿಗೆ ಮಾಡಿದರು.