Tag: ಅಕ್ಷಿತ್ ಶಶಿಕುಮಾರ್

  • ಶಶಿಕುಮಾರ್ ಪುತ್ರನ ‘ಕಾದಾಡಿ’ ಸಿನಿಮಾದ ಲಿರಿಕಲ್ ಸಾಂಗ್ ರಿಲೀಸ್

    ಶಶಿಕುಮಾರ್ ಪುತ್ರನ ‘ಕಾದಾಡಿ’ ಸಿನಿಮಾದ ಲಿರಿಕಲ್ ಸಾಂಗ್ ರಿಲೀಸ್

    ಸುಪ್ರೀಂ ಹೀರೋ ಶಶಿಕುಮಾರ್ ಪುತ್ರ ಅಕ್ಷಿತ್ ಶಶಿಕುಮಾರ್ (Akshit Shashikumar) ಈಗ ಆದಿತ್ಯ ಶಶಿಕುಮಾರ್ ಅಂತ ಹೆಸರು ಬದಲಾಯಿಸಿಕೊಂಡಿದ್ದು, ’ಕಾದಾಡಿ’ (Kaadadi) ಎನ್ನುವ ಚಿತ್ರದಲ್ಲಿ ನಟಿಸಿದ್ದಾರೆ. ಕನ್ನಡ, ತೆಲುಗು,ಹಿಂದಿ ಮತ್ತು ತಮಿಳು ಭಾಷೆಯಲ್ಲಿ ಸಿದ್ದಗೊಂಡಿರುವ ಸಿನಿಮಾವನ್ನು ಸತೀಶ್ ಮಾಲೆಂಪಾಟಿ ನಿರ್ದೇಶಿಸಿ, ಅರುಣಂ ಫಿಲಿಂಸ್ ಮುಖಾಂತರ ನಿರ್ಮಾಣ ಮಾಡಿದ್ದಾರೆ. ಪ್ರಚಾರದ ಸಲುವಾಗಿ ಮೊನ್ನೆಯಷ್ಟೇ ನಾಯಕನ ಪರಿಚಯದ ಎರಡನೇ ಲಿರಿಕಲ್ ವಿಡಿಯೋ ಹಾಡನ್ನು ಬಿಡುಗಡೆ ಮಾಡಲಾಗಿದೆ.

    ಎನ್.ಮಾರುತಿ ಸಾಹಿತ್ಯದ ’ಕಲೆಯು ಇರಬೇಕು, ಮನೆಯು ಇರಬೇಕು, ಗುಡಿಯು ಇರಬೇಕು, ಕುಲವುನೂ ಇರಬೇಕು. ಸಹನೆಯು ಇರಬೇಕು, ಸಾಧನೆಯು ಇರಬೇಕು, ಗೆಲುವು ಇರಬೇಕು, ಸೋತರೂ ಗೆಲ್ಲುವ ಛಲವು ಇರಬೇಕು’ ಹಾಡಿಗೆ ಶಶಾಂಕ್ ಶೇಷಗಿರಿ ಧ್ವನಿಯಾಗಿದ್ದಾರೆ.

    ತ್ಯಾಗಮಯವಾಗುತ್ತಿರುವ ಜನರ ಜೀವನವು ದಿನದ ಅಂತ್ಯದಲ್ಲಿ ಪ್ರತಿಯೊಬ್ಬರು ತ್ಯಾಗಮಯಿರಾಗುತ್ತಾರೆ. ನಾವೆಲ್ಲರೂ ಕಾದಾಡುತ್ತಾ ಒಂದು ದಿನ ಸಾಯುತ್ತೇವೆ. ಆದರೆ ನಮ್ಮ ಜೀವನವನ್ನು ತ್ಯಾಗ ಮಾಡುವ ಮೂಲಕ ಸಮಾಜಕ್ಕೆ ಏನನ್ನಾದರೂ ಕೊಡಬೇಕು. ಮಕ್ಕಳಿಗೆ ಏನಾದರೂ ಆಗಬೇಕು. ನಾವು ದಿನದಿಂದ ದಿನಕ್ಕೆ ಹೋರಾಟ ನಡೆಸುತ್ತಿದ್ದೆವೆ. ಇಂತಹ ಅಂಶಗಳನ್ನು ಥ್ರಿಲ್ಲರ್ ಮೂಲಕ ತೋರಿಸುವ ಪ್ರಯತ್ನ ಮಾಡಲಾಗಿದೆ.

    ಲಾವಣ್ಯ ಸಾಹುಕಾರ, ಚಾಂದಿನಿ ತಮಿಳರಸನ್ ನಾಯಕಿಯರು. ಉಳಿದಂತೆ ಪೋಸಾನಿ, ರವಿಕಾಳೆ, ಮಾರಿಮುತ್ತು, ಪ್ರೇಮ್‌ಮನೋಹರ್, ಶ್ರವಣ್‌ರಾಘವೇಂದ್ರ ಮುಂತಾದವರು ನಟಿಸಿದ್ದಾರೆ. ಆರು ಹಾಡುಗಳಿಗೆ ಭೀಮ್ಸ್ ಸಿಸಿರಿಲಿಯೋ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಡಿ.ಯೋಗಿಪ್ರಸಾದ್, ಕಲೆ ಅರ್ಜುನ್‌ಸೂರಿಸೆಟ್ಟಿ, ಸಂಕಲನ ಪ್ರಕಾಶ್‌ತೋಟ, ನೃತ್ಯ ರಾಜ್‌ಪಿಡಿ-ರಾಜ್‌ಕೃಷ್ಣ, ಸಾಹಸ ಬಿ.ಎಲ್.ಸತೀಶ್-ವಿನ್‌ಚೇನ್‌ಆಂಜಿ-ಬಿಂಬಸಾರ-ರಾಮಕೃಷ್ಣ-ರಾಮಸುಂಕರ ಅವರದಾಗಿದೆ. ಗೋವಾ, ಚಿಕ್ಕಮಗಳೂರು, ಹೈದರಬಾದ್, ಚೆನ್ನೈ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

  • ಶಶಿಕುಮಾರ್ ಪುತ್ರ  ಅಕ್ಷಿತ್ ನಟನೆಯ ‘ಓ ಮೈ ಲವ್’ ಟ್ರೇಲರ್ ಬಿಡುಗಡೆ

    ಶಶಿಕುಮಾರ್ ಪುತ್ರ ಅಕ್ಷಿತ್ ನಟನೆಯ ‘ಓ ಮೈ ಲವ್’ ಟ್ರೇಲರ್ ಬಿಡುಗಡೆ

    ಹಿರಿಯ ನಟ ಶಶಿಕುಮಾರ್ ಪುತ್ರ ಅಕ್ಷಿತ್ ನಟನೆಯ ‘ಓ ಮೈ ಲವ್’ ಚಿತ್ರದ ಟ್ರೇಲರ್ ಅನಾವರಣ ಕಾರ್ಯಕ್ರಮವು ಕಲಾವಿದರ ಸಂಘದಲ್ಲಿ ಅದ್ದೂರಿಯಾಗಿ ನಡೆಯಿತು. ನಟ, ಹಿರಿಯ ನಿರ್ದೇಶಕ ಎಸ್.ನಾರಾಯಣ್ ಮಾತನಾಡಿ ಚಿತ್ರರಂಗಕ್ಕೆ ಒಳ್ಳೆ ನಿರ್ಮಾಣ ಸಂಸ್ಥೆ ಬಂದಿದೆ. ನಾಯಕಿ ತಂದೆಯಾಗಿ 20 ದಿವಸ ಕೆಲಸ ಮಾಡಿದ್ದೇನೆ.  80ರ ದಶಕದಲ್ಲಿ ಶಿವಣ್ಣ-ರವಿಚಂದ್ರನ್ ಹೊರತುಪಡಿಸಿದರೆ ಅಂದು ಸುಂದರವಾದ ಯುವಕನೊಬ್ಬನ ಆಗಮನವಾಯಿತು. ಅದುವೇ ಶಶಿಕುಮಾರ್ ಮುಂದೆ ಸುಪ್ರಿಂ ಹೀರೋ ಆಗಿ ಖ್ಯಾತಿ ಪಡೆದರು. ಅವರೊಂದಿಗೆ ಚಿತ್ರ ಮಾಡಬೇಕಾಗಿತ್ತು. ಕಾರಣಾಂತರದಿಂದ ಆಗಲಿಲ್ಲ. ಪ್ರೀತಿ ಕುರಿತಾದ ಚಿತ್ರಗಳು ಸೋಲುವುದು ಕಡಿಮೆ. ಜನ ಇಂತಹ ಚಿತ್ರಗಳನ್ನು ಇಷ್ಟಪಡುತ್ತಾರೆ. ’ಚೈತ್ರದ ಪ್ರೇಮಾಂಜಲಿ’ ’ಚಲುವಿನ ಚಿತ್ತಾರ’ ’ಮುಂಗಾರು ಮಳೆ’ ಇನ್ನು ಮುಂತಾದವು ಕಣ್ಣ ಮುಂದೆ ಬರುತ್ತದೆ. ಇದರಲ್ಲಿ ಗೆಲುವಿಗೆ ಬೇಕಾದ ಕಥೆಯನ್ನು ನಿರ್ದೇಶಕರು ಆರಿಸಿಕೊಂಡಿದ್ದಾರೆ. ಗೊಂದಲ ಇಲ್ಲದಂತೆ ದೃಶ್ಯಗಳನ್ನು ಪೋಣಿಸಿದ್ದಾರೆ. ಗೆಲುವಿನ ಸಿಂಚನ ಕಾಣ್ತಾ ಇದೆ ಎಂದರು.

    ಹಿಂದಿನ ನೆನಪಿಗಳಿಗೆ ಜಾರಿದ ಶಶಿಕುಮಾರ್ ನನ್ನ ಬೆಳಸಿದಂತೆ ಮಗನನ್ನು ಮುಂದಕ್ಕೆ ತನ್ನಿರಿ. ಒಂದು ದಿವಸವು ಸೆಟ್‌ಗೆ ಹೋಗಿಲ್ಲ, ಚಿತ್ರವನ್ನು ನೋಡಿಲ್ಲ. ಪತ್ರಿಕೆಗಳಿಂದ ಬಂದ ವಿಮರ್ಶೆಗಳಿಂದ ಸಾಕಷ್ಟು ಕಲಿತೆ. ಇಂದು ಡಿಜಿಟಲ್ ಮಾಧ್ಯಮ ಬಂದಿರುವುದರಿಂದ ಹೆಚ್ಚು ಪರಿಣಾಮಕಾರಿಯಾಗಿದೆ. ಸರಿಯಾದ ಸಮಯಕ್ಕೆ ಬಂದು ಕೆಲಸ ಮಾಡಿಸುವುದರಲ್ಲಿ ಎಸ್.ನಾರಾಯಣ್ ಪ್ರಮುಖರಾಗಿರುತ್ತಾರೆ. ಅವರ ಶೂಟಿಂಗ್ ವರಸೆಯನ್ನು ಕಣ್ಣಾರೆ ಕಂಡಿರುವೆ. ಇಂತಹವರಿಂದ ಕಲಿಯುವುದು ಸಾಕಷ್ಟು ಇದೆ. ನಮ್ಮ ಜಮಾನ ಮುಗಿಯಿತು. ಇಂದಿನ ಪೀಳಿಗೆಯು ಇದನ್ನು ಮುಂದುವರೆಸಿಕೊಂಡು ಹೋಗಬೇಕೆಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ:ವಿಕ್ರಾಂತ್ ರೋಣ ಸಿನಿಮಾ ಆಗೋಕೆ ಇವರೇ ಸ್ಪೂರ್ತಿ: ಕಿಚ್ಚ ಹೀಗಂದಿದ್ದು ಯಾರ ಬಗ್ಗೆ?

    ಒಮ್ಮೆ ಚಿತ್ರಮಂದಿರಕ್ಕೆ ಭೇಟಿ ನೀಡಿ ಸಿನಿಮಾ ನೋಡಿದರೆ ನೀವುಗಳು ಓ ಮೈ ಲವ್ ಕುಟುಂಬದವರಾಗುತ್ತೀರಾ. ನಿರ್ಮಾಪಕರು ಒಳ್ಳೆ ಕಥೆಯನ್ನು ಬರೆದಿದ್ದಾರೆ. ಅದಕ್ಕೆ ತಕ್ಕಂತೆ ಸನ್ನಿವೇಶಗಳನ್ನು ಸೃಷ್ಟಿಸಿ ಶ್ರೀಮಂತವಾಗಿ ಚಿತ್ರೀಕರಿಸಲಾಗಿದೆ. ಬಳ್ಳಾರಿ ಭಾಗದವರು ಮೊದಲ ಬಾರಿ ಸಿನಿಮಾರಂಗಕ್ಕೆ ಬಂದಿದ್ದಾರೆ. ಅಂತಹವರನ್ನು ಉಳಿಸಿಕೊಳ್ಳುವುದು ನಮ್ಮ ಜವಬ್ದಾರಿಯಾಗಿದೆ ಅಂತ ನಿರ್ದೇಶಕ ಸ್ಮೈಲ್ ಶ್ರೀನು ಹೇಳಿದರು.

    ನಾಯಕ ಅಕ್ಷಿತ್‌ ಶಶಿಕುಮಾರ್, ನಾಯಕಿ ಕೀರ್ತಿ ಕಲ್ಕರೆ ಇಬ್ಬರಿಗೂ ಹೊಸ ಅನುಭವವಾಗಿದ್ದರಿಂದ ಹೆಚ್ಚೇನು ಮಾತನಾಡಲಿಲ್ಲ. ಸುಂದರಶ್ರೀ, ಸಂಗೀತ, ಪೃಥ್ವಿ, ವಿತರಕ ಕಮ್ಮರ್ ಮುಂತಾದವರು ಆಸೀನರಾಗಿದ್ದರು. ನಿರ್ಮಾಪಕ ಜಿ.ರಾಮಾಂಜಿನಿ ಅವರು ಹೆಚ್ಚು ಸಂಪರ್ಕ ಹೊಂದಿರುವುದರಿಂದ ಬಳ್ಳಾರಿಯಿಂದ ಹೆಚ್ಚು ಅತಿಥಿಗಳು ಕಾರ್ಯಕ್ರಮಕ್ಕೆ ಆಗಮಿಸಿದ್ದು ವಿಶೇಷವಾಗಿತ್ತು.

    Live Tv

  • ಅದ್ದೂರಿ ಹಾಡುಗಳ ಚಿತ್ರೀಕರಣದಲ್ಲಿ ಬ್ಯುಸಿಯಾದ ‘ಓ ಮೈ ಲವ್’ ಚಿತ್ರತಂಡ

    ಅದ್ದೂರಿ ಹಾಡುಗಳ ಚಿತ್ರೀಕರಣದಲ್ಲಿ ಬ್ಯುಸಿಯಾದ ‘ಓ ಮೈ ಲವ್’ ಚಿತ್ರತಂಡ

    ಸುಪ್ರೀಂ ಸ್ಟಾರ್ ಶಶಿಕುಮಾರ್ ಪುತ್ರ ಅಕ್ಷಿತ್ ಶಶಿಕುಮಾರ್ ಅಭಿನಯದ ‘ಓ ಮೈ ಲವ್’ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಅದ್ದೂರಿಯಾಗಿ ಬಹು ಕೋಟಿ ವೆಚ್ಚದಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ಬಳ್ಳಾರಿ ದರ್ಬಾರ್ ಖ್ಯಾತಿಯ ಸ್ಮೈಲ್ ಶ್ರೀನು ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಅಕ್ಷಿತ್ ಶಶಿಕುಮಾರ್‌ಗೆ ಜೋಡಿಯಾಗಿ ಕೀರ್ತಿ ಕಲ್ಕೆರೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ನವ ಹಾಗೂ ಅನುಭವಿ ಕಲಾವಿದರ ಬಳಗ ಇರುವ ಸಿನಿಮಾ ತಂಡ ಚಿತ್ರದ ಹಾಡುಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದೆ.

     Oh My Love

    ಜಿಸಿಬಿ ಪ್ರೊಡಕ್ಷನ್ಸ್ ಲಾಂಚನದಲ್ಲಿ ಬಹು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಜಿ. ರಾಮಾಂಜಿನಿ ಚೆಂದದ ಕಥೆ ಬರೆದು ನಿರ್ಮಾಣ ಮಾಡುತ್ತಿದ್ದಾರೆ. ನಿರ್ದೇಶಕ ಸ್ಮೈಲ್ ಶ್ರೀನು ಜಿ ರಾಮಾಂಜಿನಿ ಅವರ ಕಥೆಗೆ ಚಿತ್ರಕತೆ-ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಪಕ್ಕಾ ಲವ್ ಸಬ್ಜೆಕ್ಟ್ ಸಿನಿಮಾ ‘ಓ ಮೈ ಲವ್’. ಇದರ ಜೊತೆಗೆ ಆಕ್ಷನ್, ಕಾಮಿಡಿ, ಸೆಂಟಿಮೆಂಟ್ ಎಲಿಮೆಂಟ್‍ಗಳು ಚಿತ್ರದಲ್ಲಿದೆ. ಸದ್ಯ ಚಿತ್ರತಂಡ ಚಿತ್ರದ ಬಹು ನಿರೀಕ್ಷಿತ ‘ಏನಾಯ್ತೋ ಕಾಣೆ’ ಹಾಡಿನ ಚಿತ್ರೀಕರಣ ಮುಗಿಸಿ ಸದ್ದು ಮಾಡುತ್ತಿದೆ. ಇದನ್ನೂ ಓದಿ: ಹುಟ್ಟುಹಬ್ಬದ ಸಂಭ್ರಮಾಚರಣೆಗೆ ಬ್ರೇಕ್ ಹಾಕಿದ ‘ಜೋಗಿ ಪ್ರೇಮ್’

     Oh My Love

    ಖ್ಯಾತ ಗೀತ ರಚನೆಕಾರ ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ಕೃಷಿಯಲ್ಲಿ ‘ಏನಾಯ್ತೋ ಕಾಣೆ’ ಹಾಡಿನ ಸಾಲುಗಳು ಸೊಗಸಾಗಿ ಮೂಡಿ ಬಂದಿದ್ದು ಅಷ್ಟೇ ಸೊಗಸಾಗಿ ಡಾನ್ಸ್ ಮಾಸ್ಟರ್ ಮುರಳಿ ನೃತ್ಯ ನಿರ್ದೇಶನದ ಮಾಡಿದ್ದಾರೆ. ಯಲಹಂಕದ ನಿಟ್ಟೆ ಮೀನಾಕ್ಷಿ ಕಾಲೇಜಿನಲ್ಲಿ ಈ ಹಾಡಿನ ಚಿತ್ರೀಕರಣ ಅದ್ದೂರಿಯಾಗಿ ನಡೆದಿದ್ದು, ಅಕ್ಷಿತ್ ಶಶಿಕುಮಾರ್. ನಾಯಕಿ ಕೀರ್ತಿ ಕಲ್ಕೆರೆ, ದೀಪಿಕಾ ಆರಾಧ್ಯ, ಅಕ್ಷತಾ ಶೌರ್ಯ, ಸುವೇದ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇದನ್ನೂ ಓದಿ:  ಮೊದಲ ಬಾರಿಗೆ ಮಗನನ್ನು ಭೇಟಿಯಾದ ಶಾರೂಖ್

     Oh My Love

    ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಉಳಿಸಿಕೊಂಡಿರುವ ಚಿತ್ರತಂಡ ಏನಾಯ್ತೋ ಕಾಣೆ ಸಾಂಗ್ ಹೊರತು ಪಡಿಸಿ ಇನ್ನೂ ಮೂರು ಹಾಡಿನ ಚಿತ್ರೀಕರಣಕ್ಕೆ ಸಜ್ಜಾಗುತ್ತಿದೆ. ಇದು ಮುಗಿಯುತ್ತಿದ್ದಂತೆ ಚಿತ್ರೀಕರಣಕ್ಕೆ ಕುಂಬಳಕಾಯಿ ಒಡೆಯಲಿದೆ. ಎಸ್. ನಾರಾಯಣ್ ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದು, ತೆಲುಗು ಖ್ಯಾತ ನಟ ದೇವ್ ಗಿಲ್ ಸೇರಿದಂತೆ ದೀಪಿಕಾ ಆರಾಧ್ಯ, ಪೃಥ್ವಿರಾಜ್, ಸಾಧುಕೋಕಿಲ, ಪವಿತ್ರಾ ಲೋಕೇಶ್, ಸಂಗೀತಾ, ಆನಂದ್, ಭಾಗ್ಯಶ್ರೀ, ಶಿಲ್ಪಾ, ರವಿ ರಾವ್‍ಕುಮಾರ್ ಚಿತ್ರದ ತಾರಾ ಬಳಗದಲ್ಲಿದ್ದಾರೆ. ಚರಣ್ ಅರ್ಜುನ್ ಸಂಗೀತ ಸಂಯೋಜನೆ, ಹಾಲೇಶ್ ಎಸ್ ಕ್ಯಾಮೆರಾ ವರ್ಕ್, ಡಿ. ಮಲ್ಲಿ ಸಂಕಲನ ಚಿತ್ರಕ್ಕಿದೆ. ಇದನ್ನೂ ಓದಿ: ಪುನೀತ್ ಜೊತೆ ಗನ್ ಹಿಡಿದು ಫೋಟೋಗೆ ವಿದೇಶಿ ಹುಡ್ಗೀರ ಪೋಸ್

  • ಸುಪ್ರೀಂ ಹೀರೋ ಪುತ್ರನಿಗೆ ಒಲಿದು ಬಂದ ಅದೃಷ್ಟ – ಬಿಗ್ ಬಜೆಟ್ ಸಿನಿಮಾದಲ್ಲಿ ಅಕ್ಷಿತ್ ಶಶಿಕುಮಾರ್!

    ಸುಪ್ರೀಂ ಹೀರೋ ಪುತ್ರನಿಗೆ ಒಲಿದು ಬಂದ ಅದೃಷ್ಟ – ಬಿಗ್ ಬಜೆಟ್ ಸಿನಿಮಾದಲ್ಲಿ ಅಕ್ಷಿತ್ ಶಶಿಕುಮಾರ್!

    ಸುಪ್ರೀಂ ಹೀರೋ ಶಶಿಕುಮಾರ್ ಪುತ್ರ ಅಕ್ಷಿತ್ ಶಶಿಕುಮಾರ್ ಚಂದನವನಕ್ಕೆ ಎಂಟ್ರಿ ಕೊಟ್ಟಿರೋದು ಎಲ್ಲರಿಗೂ ಗೊತ್ತಿರೋ ವಿಷ್ಯ. ಸೀತಾಯಣ ಸಿನಿಮಾ ಮೂಲಕ ಸಿನಿ ಜರ್ನಿ ಆರಂಭಿಸಿರುವ ಅಕ್ಷಿತ್ ಗೆ ಮೊದಲ ಸಿನಿಮಾ ಬಿಡುಗಡೆಗೂ ಮುನ್ನವೇ ಹಲವು ಸಿನಿಮಾ ಆಫರ್ ಗಳು ಅರಸಿ ಬರುತ್ತಿವೆ. ಇದೀಗ ಅಕ್ಷಿತ್ ಶಶಿಕುಮಾರ್ ಬಿಗ್ ಬಜೆಟ್ ಸಿನಿಮಾವೊಂದಕ್ಕೆ ಸಹಿ ಹಾಕಿದ್ದು, ಚಿತ್ರದ ಅದ್ಧೂರಿ ಫೋಟೋ ಶೂಟ್‍ನಲ್ಲೂ ಭಾಗಿಯಾಗಿದ್ದಾರೆ.

    ಹೌದು, ಬಳ್ಳಾರಿ ದರ್ಬಾರ್ ಸಿನಿಮಾ ಖ್ಯಾತಿಯ ನಿರ್ದೇಶಕ ಸ್ಮೈಲ್ ಶ್ರೀನು ನಿರ್ದೇಶನದ `ಓ ಮೈ ಲವ್’ ಸಿನಿಮಾದಲ್ಲಿ ಅಕ್ಷಿತ್ ನಟಿಸುತ್ತಿದ್ದಾರೆ. ಚಿತ್ರಕ್ಕಾಗಿ ಅದ್ಧೂರಿ ಫೋಟೋ ಶೂಟ್ ಕೂಡ ನಡೆಯುತ್ತಿದ್ದು, ಅಕ್ಷಿತ್ ಶಶಿಕುಮಾರ್ ಜೋಡಿಯಾಗಿ ನಟಿ ಕೀರ್ತಿ ಕಲಕೇರಿ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ.

    ಹದಿ ಹರೆಹಯದ ವಯಸ್ಸಿನ ಯುವಕ-ಯುವತಿಯರ ಪ್ರೀತಿ ಪುರಾಣ, ತಳಮಳಗಳನ್ನು ಓ ಮೈ ಲವ್ ಸಿನಿಮಾ ಹೇಳ ಹೊರಟಿದ್ದು, ಫ್ಯಾಮಿಲಿ ಸೆಂಟಿಮೆಂಟ್ ಕೂಡ ಸಿನಿಮಾದಲ್ಲಿದೆ. ನಿರ್ದೇಶಕ ಸ್ಮೈಲ್ ಶ್ರೀನು ರೆಗ್ಯೂಲರ್ ಜಾನರ್ ಹೊರತುಪಡಿಸಿ ಡಿಫ್ರೆಂಟ್ ಆದ ನಿರೂಪಣೆ ಮೂಲಕ ‘ಓ ಮೈ ಲವ್’ ಸಿನಿಮಾ ಕಟ್ಟಿಕೊಡಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಬಿಗ್ ಬಜೆಟ್ ನಲ್ಲಿ ಸಿನಿಮಾ ತಯಾರಾಗಲಿದ್ದು, ಮೇಕಿಂಗ್, ಸಾಂಗ್ಸ್, ಸ್ಟಾರ್ ಕಾಸ್ಟ್ ಎಲ್ಲದರಲ್ಲೂ ಸಿನಿಮಾ ಅದ್ಧೂರಿತನ ಮೇರೆಯಲಿದೆ ಎಂದು ಚಿತ್ರತಂಡ ತಿಳಿಸಿದೆ.

    ಜಿಸಿಬಿ ಪ್ರೊಡಕ್ಷನ್ಸ್ ಮೂಲಕ ಸಿನಿಮಾ ನಿರ್ಮಾಣವಾಗುತ್ತಿದ್ದು, ಜಿಸಿಬಿ ರಾಮಾಂಜಿನಿ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ, ಚರಣ್ ಅರ್ಜುನ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಬೆಂಗಳೂರು, ಮಂಗಳೂರು, ಹೈದ್ರಾಬಾದ್ ಸೇರಿದಂತೆ ಕರ್ನಾಟಕದ ಹಲವು ಭಾಗಗಳಲ್ಲಿ ‘ಓ ಮೈ ಲವ್’ ಸಿನಿಮಾ ಚಿತ್ರೀಕರಣ ನಡೆಯಲಿದೆ.