Tag: ಅಕ್ಷರ ತಪ್ಪು

  • ಕನ್ನಡ ರಾಜ್ಯೋತ್ಸವದಂದು ಕ್ಷಮೆ ಕೋರಿದ ಕಿಚ್ಚ ಸುದೀಪ್!

    ಕನ್ನಡ ರಾಜ್ಯೋತ್ಸವದಂದು ಕ್ಷಮೆ ಕೋರಿದ ಕಿಚ್ಚ ಸುದೀಪ್!

    ಬೆಂಗಳೂರು: ಕನ್ನಡ ರಾಜ್ಯೋತ್ಸವದ ದಿನವಾದ ಇಂದು ಟ್ಟಿಟ್ಟರ್‍ನಲ್ಲಿ ಆದ ಕಾಗುಣಿತ ದೋಷ ಸರಿಪಡಿಸಿಕೊಂಡು ನಟ ಸುದೀಪ್ ಅಭಿಮಾನಿಗಳ ಕ್ಷಮೆ ಕೋರಿದ್ದಾರೆ.

    ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಟ ಸುದೀಪ್ ಕನ್ನಡದಲ್ಲಿ ಟ್ವೀಟ್ ಮಾಡಿ ಶುಭಾಶಯ ಹೇಳಿದ್ದರು. ಆದರೆ ಇದರಲ್ಲಿ ಕಾಗುಣಿತ ದೋಷವಿದ್ದ ಹಿನ್ನೆಲೆಯಲ್ಲಿ ಅಭಿಮಾನಿಗಳು ಅಕ್ಷರ ತಪ್ಪನ್ನು ಸರಿಪಡಿಸುವಂತೆ ಮನವಿ ಮಾಡಿದರು.

    ಈ ವಿಚಾರ ತಿಳಿದ ಬಳಿಕ ಆಗಿರುವ ಪ್ರಮಾದವನ್ನು ಸರಿಪಡಿಸಿಕೊಂಡು ಸುದೀಪ್ ರೀ ಟ್ವೀಟ್ ಮಾಡಿ ಮತ್ತೊಮ್ಮೆ ಶುಭಾಶಯ ಹೇಳಿದರು. ಟೈಪಿಂಗ್ ನಲ್ಲಿ ಆಗಿರುವ ಪ್ರಮಾದಕ್ಕೆ ಕ್ಷಮೆ ಕೂಡ ಕೇಳಿದರು.

    ನನ್ನ ಪ್ರೀತಿಯ ಸ್ನೇಹಿತರೇ. ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಕನ್ನಡವಿಲ್ಲದೆ ನಾವಿಲ್ಲ, ಕನ್ನಡವಿಲ್ಲದೆ ನಾವೇನೂ ಅಲ್ಲ. ನಿಮ್ಮ..ಕಿಚ್ಚ ಎಂಬುದಾಗಿ ಟ್ವೀಟ್ ಮಾಡಿದ್ದಾರೆ.

    https://twitter.com/Shashi444456/status/925641895497179137