Tag: ಅಕ್ಷಯ್ ಕುಮಾರ್

  • 14 ವರ್ಷಗಳ ಬಳಿಕ ನಿರ್ದೇಶಕ ಪ್ರಿಯದರ್ಶನ್ ಜೊತೆ ಕೈಜೋಡಿಸಿದ ಅಕ್ಷಯ್ ಕುಮಾರ್

    14 ವರ್ಷಗಳ ಬಳಿಕ ನಿರ್ದೇಶಕ ಪ್ರಿಯದರ್ಶನ್ ಜೊತೆ ಕೈಜೋಡಿಸಿದ ಅಕ್ಷಯ್ ಕುಮಾರ್

    ಬಾಲಿವುಡ್ ನಟ ಅಕ್ಷಯ್ ಕುಮಾರ್ (Akshay Kumar) ‘ಬಡೆ ಮಿಯಾನ್ ಚೋಟೆ ಮಿಯಾನ್’ ಸಿನಿಮಾದ ನಂತರ ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. 14 ವರ್ಷಗಳ ಬಳಿಕ ನಿರ್ದೇಶಕ ಪ್ರಿಯದರ್ಶನ್ ಜೊತೆ ನಟ ಕೈಜೋಡಿಸಿದ್ದಾರೆ. ಇದನ್ನೂ ಓದಿ:ಟಾಪ್‌ಲೆಸ್ ಆಗಿ ಕಾಣಿಸಿಕೊಂಡ ‘ಕೆಜಿಎಫ್’ ನಟಿ- ಸಖತ್ ಹಾಟ್ ಎಂದ ನೆಟ್ಟಿಗರು

    ‘ಬಡೆ ಮಿಯಾನ್ ಚೋಟೆ ಮಿಯಾನ್’ ಸಿನಿಮಾ ಹೇಳಿಕೊಳ್ಳುವಂತಹ ಯಶಸ್ಸು ಕಾಣಲಿಲ್ಲ. ಸದ್ಯ ಅಕ್ಷಯ್ ಹೊಸ ಸಿನಿಮಾಗಳತ್ತ ಗಮನ ಹರಿಸುತ್ತಿದ್ದಾರೆ. ಖ್ಯಾತ ನಿರ್ದೇಶಕ ಪ್ರಿಯದರ್ಶನ್ (Director Priyadarshan) ಜೊತೆ ಹಾರರ್ ಸಿನಿಮಾ ಮಾಡಲು ಅಕ್ಷಯ್ ಓಕೆ ಎಂದಿದ್ದಾರೆ.

    ಈ ಹಿಂದೆ ‘ಹೇರಾ ಪೇರಿ’, ‘ಭೂಲ್ ಭುಲಯ್ಯ’ ಚಿತ್ರಗಳು ಚಿತ್ರಮಂದಿರದಲ್ಲಿ ಸಕ್ಸಸ್ ಕಂಡಿತ್ತು. ಅಕ್ಷಯ್ ಕುಮಾರ್ ನಟಿಸಿರುವ ಸಿನಿಮಾಗೆ ಪ್ರಿಯದರ್ಶನ್ ನಿರ್ದೇಶನ ಮಾಡಿದ್ದರು. 14 ವರ್ಷಗಳ ಬಳಿಕ ಅಕ್ಷಯ್‌ಗಾಗಿ ವಿಭಿನ್ನ ಕಥೆಯನ್ನು ಪ್ರಿಯದರ್ಶನ್ ರೆಡಿ ಮಾಡಿದ್ದಾರೆ. ಸದ್ಯದಲ್ಲೇ ಸಿನಿಮಾ ಶೂಟಿಂಗ್ ಶುರುವಾಗಲಿದೆ. ಏಕ್ತಾ ಕಪೂರ್ (Ekta Kapoor) ಅವರು ಈ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ. ಈ ಸಿನಿಮಾದಲ್ಲಿ ಫ್ಯಾಂಟಸಿ ಇರಲಿದೆ. ಜಾದೂ ಹಿನ್ನೆಲೆಯಲ್ಲಿ ಕಥೆ ಸಾಗಲಿದೆ.

    ಅಂದಹಾಗೆ, ಹಿಂದಿ ಮತ್ತು ಮಲಯಾಳಂ ಭಾಷೆಯಲ್ಲಿ 90ಕ್ಕೂ ಹೆಚ್ಚು ಸಿನಿಮಾ ಪ್ರಿಯದರ್ಶನ್ ನಿರ್ದೇಶನ ಮಾಡಿದ್ದಾರೆ. ಇವರ ಪುತ್ರಿ ಕಲ್ಯಾಣಿ (Kalyani Priyadarshan) ಕೂಡ ಚಿತ್ರರಂದಲ್ಲಿ ಸಕ್ರಿಯರಾಗಿದ್ದಾರೆ. ‘ಹೃದಯಂ’ ಚಿತ್ರದ ಮೂಲಕ ನಟಿ ಫೇಮಸ್ ಆಗಿದ್ದಾರೆ.

  • ಅಕ್ಷಯ್ ಜೊತೆಗಿನ ವಯಸ್ಸಿನ ಅಂತರದ ಬಗ್ಗೆ ಮೌನ ಮುರಿದ ಮಾನುಷಿ ಚಿಲ್ಲರ್

    ಅಕ್ಷಯ್ ಜೊತೆಗಿನ ವಯಸ್ಸಿನ ಅಂತರದ ಬಗ್ಗೆ ಮೌನ ಮುರಿದ ಮಾನುಷಿ ಚಿಲ್ಲರ್

    ಟಿ ಮಾನುಷಿ ಚಿಲ್ಲರ್ (Manushi Chhillar) ಬಾಲಿವುಡ್‌ನ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಅಕ್ಷಯ್ ಕುಮಾರ್ (Akshay Kumar) ಜೊತೆಗಿನ 30 ವರ್ಷಗಳ ಅಂತರದ ಬಗ್ಗೆ ನಟಿ ಮಾತನಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿನ ಹಲವು ಟ್ರೋಲ್‌ಗಳ ಬಗ್ಗೆ ನಟಿ ಮೌನ ಮುರಿದಿದ್ದಾರೆ.

    ಅಕ್ಷಯ್ ಕುಮಾರ್, ಮಾನುಷಿ ಎರಡು ಸಿನಿಮಾಗಳು ಜೊತೆಯಾಗಿ ನಟಿಸಿದ್ದಾರೆ. ಅಕ್ಷಯ್‌ಗೆ 56 ವರ್ಷ, ಮಾನುಷಿಗೆ 26 ವರ್ಷವಾಗಿದ್ದು, ಇಬ್ಬರ ನಡುವೆ 30 ವರ್ಷಗಳ ಅಂತರವಿದೆ. ಈ ವಿಚಾರ ಕೀಳು ಮಟ್ಟದಲ್ಲಿ ಟ್ರೋಲ್ ಆಗಿತ್ತು. ಈ ಬಗ್ಗೆ ನಟಿಗೆ ಸಂದರ್ಶನವೊಂದರಲ್ಲಿ ಪ್ರಶ್ನೆ ಎದುರಾಗಿದೆ. ಇದನ್ನೂ ಓದಿ:ತೆಲುಗು ಚಿತ್ರಗಳಿಂದ ಶ್ರೀಲೀಲಾ ಔಟ್- ಕಾಲಿವುಡ್‌ನತ್ತ ‘ಕಿಸ್’ ನಟಿ

    ನಟಿ ಪ್ರತಿಕ್ರಿಯಿಸಿ, ಸೂಪರ್ ಸ್ಟಾರ್ ಜೊತೆಗೆ ಕೆಲಸ ಮಾಡುವುದು ಒಳ್ಳೆಯದು. ನೀವು ಹಲವು ವಿಚಾರಗಳನ್ನು ಅರಿತುಕೊಳ್ಳುತ್ತೀರಿ. ಅಕ್ಷಯ್ ಕುಮಾರ್ ಅವರೊಂದಿಗೆ ನಟಿಸಿರುವುದು ಖುಷಿಯಿದೆ. ನಟನೆ ಅಂತ ಬಂದಾಗ ವಯಸ್ಸಿನ ಅಂತರ ಮ್ಯಾಟರ್‌ ಆಗಲ್ಲ ಎಂದು ತಿಳಿಸಿದ್ದಾರೆ. ನನ್ನ ಮೊದಲ ಸಿನಿಮಾದಲ್ಲಿ ನಟನೆಗೆ ಸ್ಕೋಪ್ ಇತ್ತು. ‘ಬಡೆ ಮಿಯಾನ್ ಚೋಟೆ ಮಿಯಾನ್’ ಸಿನಿಮಾದಲ್ಲಿ ಮಾರ್ಕೆಟಿಂಗ್‌ಗಾಗಿ ಹಾಡುಗಳನ್ನು ಮಾಡಿದ್ದೇವೆ. ಇದು ಲವ್ ಸ್ಟೋರಿ ಸಿನಿಮಾ ಅಲ್ಲ ಎಂದಿದ್ದಾರೆ.

    ಮಾನುಷಿ ಚಿಲ್ಲರ್ ನಟಿಸಿದ ಮೊದಲ ಸಿನಿಮಾನೇ ‘ಸಾಮ್ರಾಟ್ ಪೃಥ್ವಿರಾಜ್’ ಈ ಚಿತ್ರದಲ್ಲಿ ಅಕ್ಷಯ್‌ಗೆ ನಾಯಕಿಯಾಗಿ ನಟಿಸಿದ್ದರು. ಬಡೆ ಮಿಯಾನ್ ಚೋಟೆ ಮಿಯಾನ್ ಸಿನಿಮಾದಲ್ಲಿಯೂ ಮಾನುಷಿ ನಟಿಸಿದ್ದಾರೆ.

  • ತೆಲುಗಿನ ‘ಕಣ್ಣಪ್ಪ’ ಚಿತ್ರತಂಡ ಸೇರಿಕೊಂಡ ಅಕ್ಷಯ್ ಕುಮಾರ್

    ತೆಲುಗಿನ ‘ಕಣ್ಣಪ್ಪ’ ಚಿತ್ರತಂಡ ಸೇರಿಕೊಂಡ ಅಕ್ಷಯ್ ಕುಮಾರ್

    ಟಾಲಿವುಡ್‌ನ ಬಿಗ್ ಬಜೆಟ್ ‘ಕಣ್ಣಪ್ಪ’ (Kanappa) ಸಿನಿಮಾದ ಚಿತ್ರೀಕರಣ ಇದೀಗ ಭರದಿಂದ ಸಾಗುತ್ತಿದೆ. ಇದೀಗ ಬಾಲಿವುಡ್ (Bollywood) ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ (Akshay Kumar) ತೆಲುಗು ಸಿನಿಮಾಗೆ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ಅಕ್ಷಯ್ ಎಂಟ್ರಿ ಬಗ್ಗೆ ಅಧಿಕೃತ ಮಾಹಿತಿ ನೀಡಿದೆ ಚಿತ್ರತಂಡ.

    ಬಾಬಿ ಡಿಯೋಲ್, ಜಾನ್ವಿ ಕಪೂರ್, ಸಂಜಯ್ ದತ್ ಸೇರಿದಂತೆ ಅನೇಕ ಬಾಲಿವುಡ್ ನಟ-ನಟಿಯರು ಸೌತ್ ಸಿನಿಮಾಗಳತ್ತ ಮುಖ ಮಾಡಿದ್ದಾರೆ. ಈಗ ಅಕ್ಷಯ್ ಕುಮಾರ್ ಕೂಡ ‘ಕಣ್ಣಪ್ಪ’ ಚಿತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಹೊಸ ಜರ್ನಿ ಶುರು ಮಾಡಿದ್ದಾರೆ. ಇದನ್ನೂ ಓದಿ:‘ಗುಂಮ್ಟಿ’ ಸಿನಿಮಾಗೆ ಹೀರೋನೇ ನಿರ್ದೇಶಕ

     

    View this post on Instagram

     

    A post shared by Vishnu Manchu (@vishnumanchu)

    ಅಕ್ಷಯ್‌ ಕುಮಾರ್‌ ಅವರನ್ನು ಖುಷಿಯಿಂದ ಮೋಹನ್‌ ಬಾಬು ಮತ್ತು ವಿಷ್ಣು ಮಂಚು ಬರಮಾಡಿಕೊಳ್ಳುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆದರೆ ಈ ಸಿನಿಮಾದಲ್ಲಿ ಅವರು ಯಾವ ಪಾತ್ರ ಮಾಡ್ತಾರೆ ಎಂಬುದುನ್ನು ರಿವೀಲ್ ಮಾಡಿಲ್ಲ.

    ‘ಕಣ್ಣಪ್ಪ’ ಸಿನಿಮಾದಲ್ಲಿ ಸ್ಟಾರ್ ಕಲಾವಿದರ ದಂಡೇ ಇರಲಿದೆ. ಅನುಷ್ಕಾ ಶೆಟ್ಟಿ, ಶಿವಣ್ಣ, ಮೋಹನ್ ಲಾಲ್, ಪ್ರಭಾಸ್, ನಯನತಾರಾ ಸೇರಿದಂತೆ ಹಲವರು ಸಾಥ್‌ ನೀಡಿದ್ದಾರೆ.

  • ನಟ ಅಕ್ಷಯ್ ಕುಮಾರ್ ಹೆಸರಿನಲ್ಲಿ ಯುವತಿಗೆ ಮೋಸ

    ನಟ ಅಕ್ಷಯ್ ಕುಮಾರ್ ಹೆಸರಿನಲ್ಲಿ ಯುವತಿಗೆ ಮೋಸ

    ಬಾಲಿವುಡ್ ನಟ ಅಕ್ಷಯ್ ಕುಮಾರ್ (Akshay Kumar) ಹೆಸರಿನಲ್ಲಿ ಯುವತಿಗೆ ಮೋಸ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಮೋಸ ಮಾಡಿದ ವ್ಯಕ್ತಿ ಸದ್ಯ ಪೊಲೀಸರ ಅತಿಥಿ ಕೂಡ ಆಗಿದ್ದಾನೆ. ಅಕ್ಷಯ್ ಕುಮಾರ್ ಅವರ ಸಿನಿಮಾದಲ್ಲಿ ನಟಿಸುವ ಆಫರ್ ತೋರಿಸಿ ಬರೋಬ್ಬರಿ ಆರು ಲಕ್ಷ ರೂಪಾಯಿ ವಂಚಿಸಲು ಹೋದ ರೋಹನ್ ಹೆಸರಿನ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಮುಂಬೈನ ಪೂಜಾ ಎನ್ನುವ ಯುವತಿಗೆ ಕಾಲ್ ಮಾಡಿದ್ದ ವ್ಯಕ್ತಿಯು ತಾನು ರೋಹನ್ ಎಂದು ಪರಿಚಯ ಮಾಡಿಕೊಂಡಿದ್ದಾನೆ. ಅಕ್ಷಯ್ ಕುಮಾರ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಕೇಪ್ ಆಫ್ ಗುಡ್ ಫಿಲ್ಮ್ಸ್ ಕಡೆಯಿಂದ ಸಿನಿಮಾ ಆಗುತ್ತಿದ್ದು, ಅದರಲ್ಲಿ ನೀವು ಶಾರ್ಟ್ ಲಿಸ್ಟ್ ಆಗಿದ್ದೀರಿ ಎಂದು ಹೇಳಿದ್ದಾನೆ. ಪ್ರೊಫೈಲ್ ಬಿಲ್ಡ್ ಮಾಡಲು ಆರು ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದಾನೆ.

    ರೋಹನ್ ಮಾತಿನಿಂದ ಅನುಮಾನಗೊಂಡ ಹುಡುಗಿ ನೇರವಾಗಿ ಅಕ್ಷಯ್ ಕುಮಾರ್ ಮ್ಯಾನೇಜರ್ ಗೆ ಕಾಲ್ ಮಾಡಿದ್ದಾಳೆ. ಆಗ ತಾನು ಮೋಸ ಹೋಗುತ್ತಿರುವ ವಿಚಾರ ಗೊತ್ತಾಗಿದೆ. ಕೂಡಲೇ ಮುಂಬೈನ ಜುಹು ಪೊಲೀಸರಿಗೆ ದೂರು ನೀಡಿದ್ದಾಳೆ. ಪೊಲೀಸರು ಹೇಳಿದಂತೆ ರೋಹನ್ ಭೇಟಿ ಮಾಡಲು ಕೇಳಿದ್ದಾಳೆ.

     

    ಯುವತಿ ಹೇಳಿದ ಸ್ಥಳಕ್ಕೆ ಬಂದಿದ್ದ ರೋಹನ್ ನನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ನಡೆಸಿದಾಗ ಅವರು ಅಸಲಿಯಾಗಿ ರೋಹನ್ ಅಲ್ಲ ಎನ್ನುವುದು ಗೊತ್ತಾಗಿದೆ. ಪ್ರಿನ್ಸ್ ಕುಮಾರ್ ತನ್ನ ಹೆಸರು ಬದಲಾಯಿಸಿಕೊಂಡು ಹೀಗೆ ಮೋಸ ಮಾಡುತ್ತಿದ್ದ ಎನ್ನುವುದು ಪೊಲೀಸರ ಮಾಹಿತಿ.

  • ಈದ್ ಹಬ್ಬಕ್ಕೆ ‘ಬಡೆ ಮಿಯಾನ್ ಚೋಟೆ ಮಿಯಾನ್’

    ಈದ್ ಹಬ್ಬಕ್ಕೆ ‘ಬಡೆ ಮಿಯಾನ್ ಚೋಟೆ ಮಿಯಾನ್’

    ‘ಬಡೆ ಮಿಯಾನ್ ಚೋಟೆ ಮಿಯಾನ್’ (Bade Miyan Chote Miyan) ಸಿನಿಮಾದ ಟ್ರೇಲರ್‌  ಈಗಾಗಲೇ ಕುತೂಹಲ ಹೆಚ್ಚಿಸಿದೆ. ಅಕ್ಷಯ್ ಕುಮಾರ್ ಹಾಗೂ ಟೈಗರ್‌ ಶ್ರಾಫ್ ಜುಗಲ್ ಬಂದಿ ನೋಡೋದಿಕ್ಕೆ ಪ್ರೇಕ್ಷಕರು ಕಾತರರಾಗಿದ್ದಾರೆ. ಇದೇ ತಿಂಗಳ‌ 11ರ ಈದ್ ಮಿಲ್ ಹಬ್ಬಕ್ಕೆ ಬಡೆ ಮಿಯಾನ್ ಚೋಟೆ ಮಿಯಾನ್ ತೆರೆಗೆ ಬರ್ತಿದೆ.

    ಅಕ್ಕಿ ಹಾಗೂ ಟೈಗರ್ ಶ್ರಾಫ್ ನಾಯಕನಾಗಿ ನಟಿಸಿದ್ದು, ಪೃಥ್ವಿರಾಜ್ ಸುಕುಮಾರನ್‌‌‌ ಖಳನಾಯಕನಾಗಿ ಅಭಿಯಸಿದ್ದಾರೆ.ಬಾಲಿವುಡ್ ನಟಿಮಣಿಯರಾದ ಸೋನಾಕ್ಷಿ ಸಿನ್ಹಾ, ಮಾನುಷಿ ಚಿಲ್ಲರ್, ಅಲಯಾ ಎಫ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

    ಮುಂಬೈ, ಲಂಡನ್, ಅಬುಧಾಬಿ, ಸ್ಕಾಟ್ಲೆಂಡ್ ಮತ್ತು ಜೋರ್ಡಾನ್ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಹಾಲಿವುಡ್ ರೇಂಜ್ಗೆ ಬಿಗ್ ಬಜೆಟ್ನಲ್ಲಿ ‘ಬಡೇ ಮಿಯಾನ್ ಚೋಟೆ ಮಿಯಾನ್’ ಅನ್ನು ನಿರ್ಮಿಸಲಾಗಿದೆ. ಟೈಗರ್ ಜಿಂದಾ ಹೈ, ಸುಲ್ತಾನ್ ಸಿನಿಮಾಗಳನ್ನು ನಿರ್ದೇಶಿಸಿರುವ ಅಲಿ ಅಬ್ಬಾಸ್ ಜಫರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

    ವಶು ಭಗ್ನಾನಿ, ದೀಪಿಕ್ಷಾ ದೇಶ್ಮುಖ್, ಜಾಕಿ ಭಗ್ನಾನಿ, ಹಿಮಾಂಶು ಕಿಶನ್ ಮೆಹ್ರಾ, ಅಲಿ ಅಬ್ಬಾಸ್ ಜಾಫರ್ ಚಿತ್ರ ನಿರ್ಮಾಣ ಮಾಡಿದ್ದಾರೆ. ವಶು ಭಗ್ನಾನಿ ಮತ್ತು ಪೂಜಾ ಎಂಟರ್ಟೈನ್ಮೆಂಟ್ ಎಎಝೆಡ್ ಫಿಲ್ಮ್ಸ್ ಸಹಯೋಗದಡಿ ಈ ಚಿತ್ರವನ್ನು ಪ್ರಸ್ತುತಪಡಿಸುತ್ತಿದ್ದಾರೆ.  ಹಿಂದಿ, ಕನ್ನಡ, ತೆಲುಗು, ತಮಿಳು, ಮಲೆಯಾಳಂ ಭಾಷೆಯಲ್ಲಿ ಈ ಚಿತ್ರ ಬಿಡುಗಡೆ ಆಗಲಿದೆ.

  • ಟಾಲಿವುಡ್‌ನತ್ತ ಅಕ್ಷಯ್ ಕುಮಾರ್- ‘ಕಣ್ಣಪ್ಪ’ ಸಿನಿಮಾದಲ್ಲಿ ಕಿಲಾಡಿ

    ಟಾಲಿವುಡ್‌ನತ್ತ ಅಕ್ಷಯ್ ಕುಮಾರ್- ‘ಕಣ್ಣಪ್ಪ’ ಸಿನಿಮಾದಲ್ಲಿ ಕಿಲಾಡಿ

    ಬಾಲಿವುಡ್ (Bollywood) ಹೀರೋ ಅಕ್ಷಯ್ ಕುಮಾರ್‌ಗೆ (Akshay Kumar) ಹಿಂದಿ ಸಿನಿಮಾರಂಗದಲ್ಲೇ ಭಾರೀ ಬೇಡಿಕೆ ಇದೆ. ಇದರ ನಡುವೆ ಟಾಲಿವುಡ್‌ನಲ್ಲಿ ಅಕ್ಷಯ್ ಕುಮಾರ್ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಈಗ ವಿಷ್ಣು ಮಂಚು ನಟನೆಯ ‘ಕಣ್ಣಪ್ಪ’ ಸಿನಿಮಾಗೆ ಸಾಥ್‌ ನೀಡಲಿದ್ದಾರೆ. ಇದನ್ನೂ ಓದಿ:ಪಂಚ ಭಾಷೆಗಳಲ್ಲಿ ‘ಶಬರಿ’: ಸಿನಿಮಾ ರಿಲೀಸ್ ಡೇಟ್ ಫಿಕ್ಸ್

    ಇದೀಗ ಸಿನಿಮಾರಂಗದಲ್ಲಿ ಹೆಚ್ಚೆಚ್ಚು ಸಕ್ಸಸ್ ಕಾಣುತ್ತಿರುವ ಸಿನಿಮಾಗಳಂದ್ರೆ ದಕ್ಷಿಣದ ಸಿನಿಮಾಗಳು. ಅದಕ್ಕಾಗಿಯೇ ಈಗಾಗಲೇ ಮೃಣಾಲ್ ಠಾಕೂರ್ (Mrunal Thakur), ಜಾನ್ವಿ ಕಪೂರ್ (Janhvi Kapoor), ಬಾಬಿ ಡಿಯೋಲ್, ಸಂಜಯ್ ದತ್, ಸನ್ನಿ ಲಿಯೋನ್ ಹೀಗೆ ಅನೇಕರು ಬಾಲಿವುಡ್‌ನಿಂದ ಟಾಲಿವುಡ್‌ಗೆ ಬಂದು ಸಕ್ಸಸ್ ಕಂಡಿದ್ದಾರೆ. ಅದೇ ಹಾದಿಯಲ್ಲಿ ಅಕ್ಷಯ್ ಕುಮಾರ್ ಕೂಡ ಹೆಜ್ಜೆ ಇಡುತ್ತಿದ್ದಾರೆ.

    ಸದ್ಯ ವಿಷ್ಣು ಮಂಚು (Vishnu Manchu) ನಟನೆಯ ಸಿನಿಮಾ ಕಣ್ಣಪ್ಪ ಚಿತ್ರದಲ್ಲಿ ಪ್ರಭಾಸ್, ಮೋಹನ್ ಲಾಲ್, ಶರತ್ ಕುಮಾರ್ ಈಗಾಗಲೇ ಚಿತ್ರತಂಡವನ್ನು ಸೇರಿದ್ದಾರೆ. ಅಕ್ಷಯ್ ಕುಮಾರ್ ಕೂಡ ಈ ಪ್ರಾಜೆಕ್ಟ್‌ಗಳಲ್ಲಿ ನಟಿಸಲಿದ್ದಾರೆ. ಬಹುಮುಖ್ಯ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ಪಾತ್ರದ ಕುರಿತು ಮುಂದಿನ ದಿನಗಳಲ್ಲಿ ತಂಡದ ಕಡೆಯಿಂದ ಮಾಹಿತಿ ಸಿಗಲಿದೆ.

    ಬಿಗ್ ಬಜೆಟ್‌ನಲ್ಲಿ ಕಣ್ಣಪ್ಪ ಸಿನಿಮಾ ಮೂಡಿ ಬರಲಿದೆ. ಮಲ್ಟಿ ಸ್ಟಾರ್‌ಗಳು ಈ ಸಿನಿಮಾದಲ್ಲಿ ನಟಿಸುತ್ತಿರುವ ಕಾರಣ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ.

  • ಬಾಕ್ಸ್ ಆಫೀಸ್ ಸ್ಟಾರ್ ವಾರ್ : 9ನೇ ಬಾರಿ ಈ ಸ್ಟಾರ್ ನಟರು ಮುಖಾಮುಖಿ

    ಬಾಕ್ಸ್ ಆಫೀಸ್ ಸ್ಟಾರ್ ವಾರ್ : 9ನೇ ಬಾರಿ ಈ ಸ್ಟಾರ್ ನಟರು ಮುಖಾಮುಖಿ

    ಬಾಲಿವುಡ್ ನಲ್ಲಿ ಸ್ಟಾರ್ ವಾರ್ ಹೊಸದೇನೂ ಅಲ್ಲ. ಆದರೂ, ಹೊಂದಾಣಿಕೆಯ ಮೇಲೆ ಸಿನಿಮಾಗಳನ್ನು ರಿಲೀಸ್ ಮಾಡಿಕೊಂಡು ಬರಲಾಗುತ್ತಿದೆ. ಆದರೆ, ಈ ಬಾರಿ ಅಕ್ಷಯ್ ಕುಮಾರ್ ಮತ್ತು ಅಜಯ್ ದೇವಗನ್ ಮತ್ತೆ ಮುಖಾಮುಖಿ ಆಗುತ್ತಿದ್ದಾರೆ. ಏಪ್ರಿಲ್ 10ರಂದು ಅಕ್ಷಯ್ ಕುಮಾರ್ ನಟನೆಯ ಬಡೆ ಮಿಯಾ ಚೋಟೆ ಮಿಯಾ ಹಾಗೂ ಅಜಯ್ ದೇವಗನ್ ಅವರ ಮೈದಾನ (Maidan) ಸಿನಿಮಾ ಏಕಕಾಲಕ್ಕೆ ಬಿಡುಗಡೆ ಆಗುತ್ತಿದೆ. ಹೀಗೆ ಈ ಕಲಾವಿದರ ಚಿತ್ರಗಳು ಒಂದೇ ದಿನಾಂಕದಂದು ರಿಲೀಸ್ ಆಗುತ್ತಿರುವುದು 9ನೇ ಬಾರಿ ಎನ್ನುವುದು ವಿಶೇಷ.

    ಮೊನ್ನೆಯಷ್ಟೇ ಅಕ್ಷಯ್ ಕುಮಾರ್ (Akshay Kumar) ಹಾಗೂ ಟೈಗರ್ ಶ್ರಾಫ್ (Tiger Shroff) ನಟನೆಯ ಬಡೆ ಮಿಯಾ ಚೋಟೆ ಮಿಯಾ (bade miyan chote miyan)  ಸಿನಿಮಾದ ಟ್ರೈಲರ್ (Trailer) ರಿಲೀಸ್ ಆಗಿದೆ. ಹಿಂದಿ, ಕನ್ನಡ ಸೇರಿದಂತೆ ಐದು ಭಾಷೆಯಲ್ಲಿಯೂ ಮೊದಲ ನೋಟ ಅನಾವರಣಗೊಂಡಿದೆ. 3 ನಿಮಿಷ 3 ಸೆಕೆಂಡ್ ಇರುವ ಪವರ್ ಪ್ಯಾಕ್ಡ್ ಟ್ರೈಲರ್ ನಲ್ಲಿ ಅಕ್ಷಯ್ ಹಾಗೂ ಟೈಗರ್ ಭರ್ಜರಿ ಆಕ್ಷನ್ ಮೂಲಕ ಅಬ್ಬರಿಸಿದ್ದಾರೆ.

    ಬಡೆ ಮಿಯಾ ಚೋಟೆ ಮಿಯಾ ಟ್ರೈಲರ್ ನಲ್ಲಿ ಮೈ ಜುಮ್ ಎನಿಸುವ ಹೈ ಆಕ್ಷನ್ ಸೀಕ್ವೆನ್ಸ್ ಹೈಲೆಟ್ ಆಗಿವೆ. ದೇಶಭಕ್ತಿ ಉಕ್ಕಿಸುವ ಈ ಝಲಕ್ ನಲ್ಲಿ ಕಿಲಾಡಿ ಟೈಗರ್ ಜುಗಲ್ ಬಂಧಿ ನೋಡುಗರಿಗೆ ಸಖತ್ ಕಿಕ್ ಕೊಡಲಿದೆ. ಖಳನಾಯಕನಾಗಿ ಪೃಥ್ವಿರಾಜ್ ಸುಕುಮಾರನ್ ಕಾಣಿಸಿಕೊಂಡಿದ್ದು, ಆದ್ರೆ ಟ್ರೇಲರ್ ನಲ್ಲಿ ಅವರ ಮುಖವನ್ನೇ ರಿವೀಲ್ ಮಾಡದೇ ಚಿತ್ರತಂಡ ಸೀಕ್ರೆಟ್ ಕಾಯ್ದುಗೊಂಡಿದೆ. ಬಾಲಿವುಡ್ ನಟಿಮಣಿಯರಾದ ಸೋನಾಕ್ಷಿ ಸಿನ್ಹಾ, ಮಾನುಷಿ ಚಿಲ್ಲರ್, ಅಲಯಾ ಎಫ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

    ಮುಂಬೈ, ಲಂಡನ್, ಅಬುಧಾಬಿ, ಸ್ಕಾಟ್ಲೆಂಡ್ ಮತ್ತು ಜೋರ್ಡಾನ್ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಹಾಲಿವುಡ್ ರೇಂಜ್ಗೆ ಬಿಗ್ ಬಜೆಟ್ನಲ್ಲಿ ‘ಬಡೇ ಮಿಯಾನ್ ಚೋಟೆ ಮಿಯಾನ್’ ಅನ್ನು ನಿರ್ಮಿಸಲಾಗಿದೆ. ಟೈಗರ್ ಜಿಂದಾ ಹೈ, ಸುಲ್ತಾನ್ ಸಿನಿಮಾಗಳನ್ನು ನಿರ್ದೇಶಿಸಿರುವ ಅಲಿ ಅಬ್ಬಾಸ್ ಜಫರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

     

    ವಶು ಭಗ್ನಾನಿ, ದೀಪಿಕ್ಷಾ ದೇಶ್ಮುಖ್, ಜಾಕಿ ಭಗ್ನಾನಿ, ಹಿಮಾಂಶು ಕಿಶನ್ ಮೆಹ್ರಾ, ಅಲಿ ಅಬ್ಬಾಸ್ ಜಾಫರ್ ಚಿತ್ರ ನಿರ್ಮಾಣ ಮಾಡಿದ್ದಾರೆ. ವಶು ಭಗ್ನಾನಿ ಮತ್ತು ಪೂಜಾ ಎಂಟರ್ಟೈನ್ಮೆಂಟ್ ಎಎಝೆಡ್ ಫಿಲ್ಮ್ಸ್ ಸಹಯೋಗದಡಿ ಈ ಚಿತ್ರವನ್ನು ಪ್ರಸ್ತುತಪಡಿಸುತ್ತಿದ್ದಾರೆ. 2024ರ ಏಪ್ರಿಲ್ – ಈದ್ ಸಂದರ್ಭ ಹಿಂದಿ, ಕನ್ನಡ, ತೆಲುಗು, ತಮಿಳು, ಮಲೆಯಾಳಂ ಭಾಷೆಯಲ್ಲಿ ಈ ಚಿತ್ರ ಬಿಡುಗಡೆ ಆಗಲಿದೆ.

  • ಅಕ್ಷಯ್, ಟೈಗರ್ ಶ್ರಾಫ್ ಕಾಂಬಿನೇಷನ್ ‘ಬಡೆ ಮಿಯಾ ಚೋಟೆ ಮಿಯಾ’ ಟ್ರೇಲರ್ ರಿಲೀಸ್

    ಅಕ್ಷಯ್, ಟೈಗರ್ ಶ್ರಾಫ್ ಕಾಂಬಿನೇಷನ್ ‘ಬಡೆ ಮಿಯಾ ಚೋಟೆ ಮಿಯಾ’ ಟ್ರೇಲರ್ ರಿಲೀಸ್

    ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ (Akshay Kumar) ಹಾಗೂ ಟೈಗರ್ ಶ್ರಾಫ್ (Tiger Shroff) ನಟನೆಯ ಬಡೆ ಮಿಯಾ ಚೋಟೆ ಮಿಯಾ (bade miyan chote miyan)  ಸಿನಿಮಾದ ಟ್ರೇಲರ್ (Trailer) ರಿಲೀಸ್ ಆಗಿದೆ. ಹಿಂದಿ, ಕನ್ನಡ ಸೇರಿದಂತೆ ಐದು ಭಾಷೆಯಲ್ಲಿಯೂ ಮೊದಲ ನೋಟ ಅನಾವರಣಗೊಂಡಿದೆ. 3 ನಿಮಿಷ 3 ಸೆಕೆಂಡ್ ಇರುವ ಪವರ್ ಪ್ಯಾಕ್ಡ್ ಟ್ರೈಲರ್ ನಲ್ಲಿ ಅಕ್ಷಯ್ ಹಾಗೂ ಟೈಗರ್ ಭರ್ಜರಿ ಆಕ್ಷನ್ ಮೂಲಕ ಅಬ್ಬರಿಸಿದ್ದಾರೆ.

    ಬಡೆ ಮಿಯಾ ಚೋಟೆ ಮಿಯಾ ಟ್ರೈಲರ್ ನಲ್ಲಿ ಮೈ ಜುಮ್ ಎನಿಸುವ ಹೈ ಆಕ್ಷನ್ ಸೀಕ್ವೆನ್ಸ್ ಹೈಲೆಟ್ ಆಗಿವೆ. ದೇಶಭಕ್ತಿ ಉಕ್ಕಿಸುವ ಈ ಝಲಕ್ ನಲ್ಲಿ ಕಿಲಾಡಿ ಟೈಗರ್ ಜುಗಲ್ ಬಂಧಿ ನೋಡುಗರಿಗೆ ಸಖತ್ ಕಿಕ್ ಕೊಡಲಿದೆ. ಖಳನಾಯಕನಾಗಿ ಪೃಥ್ವಿರಾಜ್ ಸುಕುಮಾರನ್ ಕಾಣಿಸಿಕೊಂಡಿದ್ದು, ಆದ್ರೆ ಟ್ರೇಲರ್ ನಲ್ಲಿ ಅವರ ಮುಖವನ್ನೇ ರಿವೀಲ್ ಮಾಡದೇ ಚಿತ್ರತಂಡ ಸೀಕ್ರೆಟ್ ಕಾಯ್ದುಗೊಂಡಿದೆ. ಬಾಲಿವುಡ್ ನಟಿಮಣಿಯರಾದ ಸೋನಾಕ್ಷಿ ಸಿನ್ಹಾ, ಮಾನುಷಿ ಚಿಲ್ಲರ್, ಅಲಯಾ ಎಫ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

    ಮುಂಬೈ, ಲಂಡನ್, ಅಬುಧಾಬಿ, ಸ್ಕಾಟ್ಲೆಂಡ್ ಮತ್ತು ಜೋರ್ಡಾನ್ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಹಾಲಿವುಡ್ ರೇಂಜ್ಗೆ ಬಿಗ್ ಬಜೆಟ್ನಲ್ಲಿ ‘ಬಡೇ ಮಿಯಾನ್ ಚೋಟೆ ಮಿಯಾನ್’ ಅನ್ನು ನಿರ್ಮಿಸಲಾಗಿದೆ. ಟೈಗರ್ ಜಿಂದಾ ಹೈ, ಸುಲ್ತಾನ್ ಸಿನಿಮಾಗಳನ್ನು ನಿರ್ದೇಶಿಸಿರುವ ಅಲಿ ಅಬ್ಬಾಸ್ ಜಫರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

    ವಶು ಭಗ್ನಾನಿ, ದೀಪಿಕ್ಷಾ ದೇಶ್ಮುಖ್, ಜಾಕಿ ಭಗ್ನಾನಿ, ಹಿಮಾಂಶು ಕಿಶನ್ ಮೆಹ್ರಾ, ಅಲಿ ಅಬ್ಬಾಸ್ ಜಾಫರ್ ಚಿತ್ರ ನಿರ್ಮಾಣ ಮಾಡಿದ್ದಾರೆ. ವಶು ಭಗ್ನಾನಿ ಮತ್ತು ಪೂಜಾ ಎಂಟರ್ಟೈನ್ಮೆಂಟ್ ಎಎಝೆಡ್ ಫಿಲ್ಮ್ಸ್ ಸಹಯೋಗದಡಿ ಈ ಚಿತ್ರವನ್ನು ಪ್ರಸ್ತುತಪಡಿಸುತ್ತಿದ್ದಾರೆ. 2024ರ ಏಪ್ರಿಲ್ – ಈದ್ ಸಂದರ್ಭ ಹಿಂದಿ, ಕನ್ನಡ, ತೆಲುಗು, ತಮಿಳು, ಮಲೆಯಾಳಂ ಭಾಷೆಯಲ್ಲಿ ಈ ಚಿತ್ರ ಬಿಡುಗಡೆ ಆಗಲಿದೆ.

  • IPL ವೇದಿಕೆಯಲ್ಲಿ ಅಕ್ಷಯ್ ಕುಮಾರ್, ಟೈಗರ್ ಶ್ರಾಫ್ ಡ್ಯಾನ್ಸ್ ಧಮಾಕ

    IPL ವೇದಿಕೆಯಲ್ಲಿ ಅಕ್ಷಯ್ ಕುಮಾರ್, ಟೈಗರ್ ಶ್ರಾಫ್ ಡ್ಯಾನ್ಸ್ ಧಮಾಕ

    17ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ (IPL) ಅದ್ಧೂರಿಯಾಗಿ ಇಂದು (ಮಾ.22) ಚಾಲನೆ ಸಿಕ್ಕಿದೆ. ಈ ಕಾರ್ಯಕ್ರಮದಲ್ಲಿ ಬಾಲಿವುಡ್ ನಟರಾದ ಅಕ್ಷಯ್ ಕುಮಾರ್ (Akshay Kumar), ಟೈಗರ್ ಶ್ರಾಫ್ (Tiger Shroff) ಡ್ಯಾನ್ಸ್ ಮೂಲಕ ರಂಗೇರಿಸಿದ್ದಾರೆ. ಹಿಂದಿ ಚಿತ್ರದ ಸುಂದರ ಹಾಡುಗಳಿಗೆ ಇಬ್ಬರೂ ಹೆಜ್ಜೆ ಹಾಕಿದ್ದಾರೆ.

    ಚೇಪಾಕ್ ಕ್ರೀಡಾಂಗಣದಲ್ಲಿ ಉದ್ಘಾಟನಾ ಸಮಾರಂಭವನ್ನು ಬಿಸಿಸಿಐ ಆಯೋಜಿಸಿದೆ. ಮಾ.22ರ ಸಂಜೆ 6:30ಕ್ಕೆ ಸಮಾರಂಭ ಆರಂಭವಾಗಿದೆ. ಬಾಲಿವುಡ್ ನಟರಾದ ಅಕ್ಷಯ್ ಕುಮಾರ್, ಟೈಗರ್ ಶ್ರಾಫ್ ಹೆಜ್ಜೆ ಹಾಕುವ ಮೂಲಕ ಐಪಿಎಲ್ ಕ್ರಿಕೆಟ್ ಪ್ರೇಕ್ಷಕರಿಗೆ ರಂಜಿಸಿದ್ದಾರೆ. ವೇದಿಕೆಗೆ ಎಂಟ್ರಿ ಕೊಡುವಾಗಲೇ ತ್ರಿವರ್ಣ ಧ್ವಜ ಹಿಡಿದು ಅಕ್ಷಯ್‌ ಕುಮಾರ್‌ ಹೆಜ್ಜೆ ಹಾಕಿದ್ದಾರೆ. ಇದನ್ನೂ ಓದಿ:ರಾಧಿಕಾ ಪಂಡಿತ್‌ಗೆ ಸಿಕ್ಕರು ಕ್ಯೂಟ್ ಫೋಟೋಗ್ರಾಫರ್

    ಖ್ಯಾತ ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್, ಖ್ಯಾತ ಗಾಯಕ ಸೋನು ನಿಗಮ್ (Sonu Nigam) ಸೇರಿದಂತೆ ಪ್ರಮುಖರು ಪ್ರೇಕ್ಷಕರನ್ನು ರಂಜಿಸಿದ್ದಾರೆ. ಐಪಿಎಲ್ (IPL 2024) ಸುಂದರ ಸಂಜೆಗೆ ಎ.ಆರ್ ರೆಹಮಾನ್ ಮತ್ತು ಸೋನು ನಿಗಮ್ ಹಾಡು ಪ್ರೇಕ್ಷಕರಿಗೆ ಕಿಕ್ ಸ್ಟಾರ್ಟ್ ಕೊಟ್ಟಿದೆ.

    ಇಂದಿನ ಮೊದಲ ಮ್ಯಾಚ್, ಚೆನ್ನೈ ಸೂಪರ್ ಕಿಂಗ್ಸ್ (CSK) ಎದುರು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಸೆಣಸಾಡಲಿದೆ. ಈ ಪಂದ್ಯ ರಾತ್ರಿ 8 ಗಂಟೆಗೆ ಶುರುವಾಗಲಿದೆ.‌

  • ‘ಬಡೇ ಮಿಯಾನ್ ಚೋಟೆ ಮಿಯಾನ್’ ಟೈಟಲ್ ಟ್ರ‍್ಯಾಕ್ ಔಟ್

    ‘ಬಡೇ ಮಿಯಾನ್ ಚೋಟೆ ಮಿಯಾನ್’ ಟೈಟಲ್ ಟ್ರ‍್ಯಾಕ್ ಔಟ್

    ಬಾಲಿವುಡ್‌ನ ಪವರ್ ಪ್ಯಾಕ್ಡ್ ಜೋಡಿಗಳಾದ ಅಕ್ಷಯ್ ಕುಮಾರ್ (Akshay Kumar) ಮತ್ತು ಟೈಗರ್ ಶ್ರಾಫ್ (Tiger Shroff)n ನಟನೆಯ ‘ಬಡೇ ಮಿಯಾನ್ ಚೋಟೆ ಮಿಯಾನ್’ ಸಿನಿಮಾದ ಟೈಟಲ್ ಟ್ರ‍್ಯಾಕ್ ರಿಲೀಸ್ ಆಗಿದೆ. ಬಾಸ್ಕೊ-ಸೀಸರ್ ನೃತ್ಯ ಸಂಯೋಜನೆಯಲ್ಲಿ ಮೂಡಿಬಂದಿರುವ ಹಾಡಿಗೆ ಅಕ್ಷಯ್ ಮತ್ತು ಟೈಗರ್ ಶ್ರಾಫ್ ಹೆಜ್ಜೆ ಹಾಕಿದ್ದಾರೆ. ಅನಿರುದ್ಧ್ ರವಿಚಂದರ್ ಮತ್ತು ವಿಶಾಲ್ ಮಿಶ್ರಾ ಧ್ವನಿಯಾಗಿರುವ ಟೈಟಲ್ ಟ್ರ‍್ಯಾಕ್‌ಗೆ ವಿಶಾಲ್ ಮಿಶ್ರಾ ಮ್ಯೂಸಿಕ್‌ ಕಂಪೋಸ್‌ ಮಾಡಿದ್ದಾರೆ.

    ‘ಬಡೇ ಮಿಯಾನ್ ಚೋಟೆ ಮಿಯಾನ್’ (Bade Miyan Chote Miyan) ಟೈಟಲ್ ಟ್ರ‍್ಯಾಕ್ ಡೆಹರೂಡನ್‌ನಲ್ಲಿ ಚಿತ್ರೀಕರಿಸಲಾಗಿರುವ ಹಾಡಿಗೆ 100ಕ್ಕೂ ಹೆಚ್ಚು ನೃತ್ಯಗಾರರು ಕುಣಿದು ಕುಪ್ಪಳಿಸಿದ್ದಾರೆ. ಕನ್ನಡದಲ್ಲಿಯೂ ಹಾಡು ಮೂಡಿಬಂದಿದ್ದು, ಸಂತೋಷ್ ವಿಶ್ವರತ್ನ ಸಾಹಿತ್ಯ ಬರೆದಿದ್ದು, ಅನಿರುದ್ಧ ಶಾಸ್ತ್ರಿ, ಅಭಿಷೇಕ್ ಎಂ.ಆರ್ ಹಾಗೂ ಋಷಿಕೇಶ ಬಿ.ಆರ್ ಹಾಡಿಗೆ ಧ್ವನಿಯಾಗಿದ್ದಾರೆ. ಇದನ್ನೂ ಓದಿ:ದರ್ಶನ್ ಹುಟ್ಟುಹಬ್ಬಕ್ಕೆ ಫ್ಯಾನ್ಸ್ ಕೊಟ್ಟ ದಿನಸಿ ಸಾಮಾಗ್ರಿ ಪೌರಕಾರ್ಮಿಕರಿಗೆ ವಿತರಣೆ

    ಅಕ್ಷಯ್ ಕುಮಾರ್- ಟೈಗರ್ ಶ್ರಾಫ್ ನಾಯಕರಾಗಿ ನಟಿಸಿದ್ದು, ಖಳನಾಯಕನಾಗಿ ಪೃಥ್ವಿರಾಜ್ ಸುಕುಮಾರನ್ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ನಟಿಮಣಿಯರಾದ ಸೋನಾಕ್ಷಿ ಸಿನ್ಹಾ (Sonakshi Sinha), ಮಾನುಷಿ ಚಿಲ್ಲರ್ (Manushi Chhillar) ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

    ಮುಂಬೈ, ಲಂಡನ್, ಅಬುಧಾಬಿ, ಸ್ಕಾಟ್ಲೆಂಡ್ ಮತ್ತು ಜೋರ್ಡಾನ್ ಸ್ಥಳಗಳಲ್ಲಿ ಸಿನಿಮಾವನ್ನು ಚಿತ್ರೀಕರಿಸಲಾಗಿದೆ. ಹಾಲಿವುಡ್ ರೇಂಜ್‌ಗೆ ದೊಡ್ಡ ಬಜೆಟ್‌ನಲ್ಲಿ ‘ಬಡೇ ಮಿಯಾನ್ ಚೋಟೆ ಮಿಯಾನ್’ ಚಿತ್ರ ನಿರ್ಮಿಸಿದ್ದಾರೆ. ಅಲಿ ಅಬ್ಬಾಸ್ ಝಫರ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ವಶು ಭಗ್ನಾನಿ, ದೀಪಿಕ್ಷಾ ದೇಶಮುಖ್, ಜಾಕಿ ಭಗ್ನಾನಿ, ಹಿಮಾಂಶು ಕಿಶನ್ ಮೆಹ್ರಾ, ಅಲಿ ಅಬ್ಬಾಸ್ ಜಾಫರ್ ಚಿತ್ರ ನಿರ್ಮಾಣ ಮಾಡಿದ್ದಾರೆ.

    ವಶು ಭಗ್ನಾನಿ ಮತ್ತು ಪೂಜಾ ಫಿಲ್ಮ್ಸ್‌ ಸಹಯೋಗದಡಿ ‘ಬಡೇ ಮಿಯಾನ್ ಚೋಟೆ ಮಿಯಾನ್’  ಚಿತ್ರವನ್ನು ಪ್ರಸ್ತುತಪಡಿಸುತ್ತಿದ್ದಾರೆ. ಏಪ್ರಿಲ್ 2024 ಈದ್ ಸಂದರ್ಭದಲ್ಲಿ ಹಿಂದಿ, ಕನ್ನಡ, ತೆಲುಗು, ತಮಿಳು, ಮಲೆಯಾಳಂ ಭಾಷೆಯಲ್ಲಿ ಈ ಚಿತ್ರ ಬಿಡುಗಡೆ ಆಗಲಿದೆ.