Tag: ಅಕ್ಷಯ್ ಕುಮಾರ್

  • ಅಕ್ಷಯ್ ಕುಮಾರ್ ನಟನೆಯ ಹೊಸ ಚಿತ್ರಕ್ಕೆ ಆರ್.ಮಾಧವನ್, ಅನನ್ಯಾ ಪಾಂಡೆ ಸಾಥ್

    ಅಕ್ಷಯ್ ಕುಮಾರ್ ನಟನೆಯ ಹೊಸ ಚಿತ್ರಕ್ಕೆ ಆರ್.ಮಾಧವನ್, ಅನನ್ಯಾ ಪಾಂಡೆ ಸಾಥ್

    ಬಾಲಿವುಡ್ ನಟ ಅಕ್ಷಯ್ ಕುಮಾರ್ (Akshay Kumar) ಅವರು ಲಾಯರ್ (Lawyer) ಆಗಿ ಬೆಳ್ಳಿಪರದೆಯಲ್ಲಿ ಅಬ್ಬರಿಸಲು ಸಜ್ಜಾಗಿದ್ದಾರೆ. ಲಾಯರ್ ಸಿ. ಶಂಕರನ್ ನಾಯರ್ (C. Sankaran Nair) ಬಯೋಪಿಕ್‌ನಲ್ಲಿ ಅಕ್ಷಯ್ ಕುಮಾರ್ ಜೊತೆ ನಟಿಸಲು ಅನನ್ಯಾ ಪಾಂಡೆ (Ananya Panday) ಮತ್ತು ತಮಿಳು ನಟ ಆರ್. ಮಾಧವನ್ (R.Madhavan) ಕೈಜೋಡಿಸಿದ್ದಾರೆ.

    ಸಿನಿಮಾದಿಂದ ಸಿನಿಮಾಗೆ ಭಿನ್ನ ಪಾತ್ರಗಳನ್ನು ಆಯ್ಕೆ ಮಾಡೋ ಅಕ್ಷಯ್ ಕುಮಾರ್ ಈಗ ಕಪ್ಪು ಕೋಟ್ ಧರಿಸಿ ಲಾಯರ್ ಆಗಿ ನ್ಯಾಯದ ಪಾಠ ಮಾಡಲು ರೆಡಿಯಾಗಿದ್ದಾರೆ. ಖ್ಯಾತ ಅಡ್ವೋಕೇಟ್ ಸಿ. ಶಂಕರನ್ ನಾಯರ್ ಜೀವನ ಆಧರಿಸಿದ ಕಥೆಯಲ್ಲಿ ಅಕ್ಷಯ್ ಲೀಡ್ ರೋಲ್‌ನಲ್ಲಿ ನಟಿಸುತ್ತಿದ್ದಾರೆ. ಇದನ್ನೂ ಓದಿ:‘ಶೇರ್ಷಾ’ ಬಳಿಕ ಮತ್ತೊಂದು ಲವ್ ಸ್ಟೋರಿ ಸಿನಿಮಾದಲ್ಲಿ ಸಿದ್ಧಾರ್ಥ್, ಕಿಯಾರಾ?

     

    View this post on Instagram

     

    A post shared by Dharma Productions (@dharmamovies)

    ಅಕ್ಷಯ್ ಕುಮಾರ್ ಜೊತೆ ಅನನ್ಯಾ ಪಾಂಡೆ ಮತ್ತು ತಮಿಳು ನಟ ಆರ್. ಮಾಧವನ್ ಕೂಡ ಕಾಣಿಸಿಕೊಳ್ತಿದ್ದಾರೆ. ಅವರ ಪಾತ್ರಕ್ಕೂ ಪ್ರಾಮುಖ್ಯತೆ ಇದೆ. ಕರಣ್ ಜೋಹರ್ ಈ ಚಿತ್ರವನ್ನು ನಿರ್ಮಾಣ ಮಾಡೋದಾಗಿ ಅನೌನ್ಸ್ ಮಾಡಿದ್ದು, ಮುಂದಿನ ವರ್ಷ ಮಾರ್ಚ್ 14ರಂದು ರಿಲೀಸ್ ಆಗಲಿದೆ ಎಂದು ಘೋಷಿಸಿದ್ದಾರೆ.

    ಇನ್ನೂ ಅಕ್ಷಯ್ ನಟನೆಯ ಸಾಲು ಸಾಲು ಸಿನಿಮಾಗಳು ಚಿತ್ರಮಂದಿರದಲ್ಲಿ ಮಕಾಡೆ ಮಲಗಿವೆ. ಹಾಗಾಗಿ ಒಂದು ಗೆಲುವಿಗಾಗಿ ಎದುರು ನೋಡ್ತಿರುವ ನಟನಿಗೆ ಈ ಚಿತ್ರ ಕೈಹಿಡಿಯುತ್ತಾ? ಕಾದುನೋಡಬೇಕಿದೆ.

  • ‘ಭೂತ್ ಬಂಗ್ಲಾ’ ಕಥೆ ಹೇಳಲು ಸಜ್ಜಾದ ಅಕ್ಷಯ್ ಕುಮಾರ್

    ‘ಭೂತ್ ಬಂಗ್ಲಾ’ ಕಥೆ ಹೇಳಲು ಸಜ್ಜಾದ ಅಕ್ಷಯ್ ಕುಮಾರ್

    ಬಾಲಿವುಡ್ ನಟ ಅಕ್ಷಯ್ ಕುಮಾರ್ (Akshay Kumar) ಇಂದು (ಸೆ.9) 57ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ದಿನ ಫ್ಯಾನ್ಸ್‌ಗೆ ನಟ ಸಿಹಿಸುದ್ದಿ ಕೊಟ್ಟಿದ್ದಾರೆ. ‘ಭೂತ್‌ ಬಂಗ್ಲಾ’ (Bhooth Bangla) ಕಥೆ ಹೇಳಲು ನಟ ರೆಡಿಯಾಗಿದ್ದಾರೆ. ಇದನ್ನೂ ಓದಿ:ಹೊಸ ರಿಯಾಲಿಟಿ ಶೋಗೆ ‘ಬಿಗ್ ಬಾಸ್’ ವಿನ್ನರ್ ಕಾರ್ತಿಕ್ ಹೋಸ್ಟ್‌

    ಅಕ್ಷಯ್ ನಟನೆಯ ‘ಭೂತ್ ಬಂಗ್ಲಾ’ ಇಂದು ಸಿನಿಮಾದ ಫಸ್ಟ್ ಲುಕ್ ರಿವೀಲ್ ಆಗಿದೆ. ಕೈಯಲ್ಲಿ ಹಾಲಿನ ಬೌಲ್ ಹಿಡಿದು, ನಟನ ಬೆನ್ನ ಮೇಲೆ ಕಪ್ಪು ಬಣ್ಣದ ಬೆಕ್ಕೊಂದು ಉಗ್ರವಾಗಿ ಪೋಸ್ ಕೊಟ್ಟಿದೆ. ನಟ ಹಾಲನ್ನು ಬೆಕ್ಕಿನಂತೆ ಕುಡಿಯುತ್ತಿದ್ದಾರೆ. ಅವರ ಹಿಂದೆ ಭಯಾನಕವಾಗಿರುವ ಅರಮನೆಯೊಂದು ಇದೆ. ಸದ್ಯ ಈ ಪೋಸ್ಟರ್‌ಗೆ ಅಭಿಮಾನಿಗಳಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.

     

    View this post on Instagram

     

    A post shared by Akshay Kumar (@akshaykumar)

    ನಟ ಅಕ್ಷಯ್ ಕುಮಾರ್ ಪೋಸ್ಟರ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ, ನನ್ನ ಜನ್ಮದಿನದಂದು ಶುಭ ಹಾರೈಸಿದ ಎಲ್ಲರಿಗೂ, ನಿಮ್ಮ ಪ್ರೀತಿಗೂ ಧನ್ಯವಾದಗಳು. ‘ಭೂತ್ ಬಂಗ್ಲಾ’ದ ಮೊದಲ ಲುಕ್ ಈಗ ರಿಲೀಸ್ ಆಗಿದೆ. 14 ವರ್ಷಗಳ ನಂತರ ಮತ್ತೆ ಪ್ರಿಯದರ್ಶನ್ ಜೊತೆ ಕೆಲಸ ಮಾಡುತ್ತಿರೋದು ತುಂಬಾ ಖುಷಿ ತಂದಿದೆ. ಈ ಅದ್ಭುತ ಪ್ರಯಾಣವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ನಾನು ಕಾಯುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

    ಈ ಹಿಂದೆ ಇಬ್ಬರ ಕಾಂಬಿನೇಷನ್‌ನಲ್ಲಿ ‘ಹೇರಾ ಫೇರಿ’, ‘ಭೂಲ್ ಭುಲೈಯಾ’ ಸೂಪರ್ ಸಕ್ಸಸ್ ಕಂಡಿದೆ. ಹಾಗಾಗಿ 14 ವರ್ಷಗಳ ನಂತರ ಅಕ್ಷಯ್ ಮತ್ತು ಪ್ರಿಯದರ್ಶನ್ ಕೈಜೋಡಿಸುತ್ತಿದ್ದಾರೆ. ಸಾಲು ಸಾಲು ಸಿನಿಮಾಗಳ ಸೋಲಿನ ಸುಳಿಯಲ್ಲಿರುವ ಅಕ್ಷಯ್‌ಗೆ ಈ ಸಿನಿಮಾ ಕೈಹಿಡಿಯುತ್ತಾ ಕಾದುನೋಡಬೇಕಿದೆ.

  • Stree 3: ರಶ್ಮಿಕಾ ಮಂದಣ್ಣಗೆ ವಿಲನ್ ಆದ ಅಕ್ಷಯ್ ಕುಮಾರ್

    Stree 3: ರಶ್ಮಿಕಾ ಮಂದಣ್ಣಗೆ ವಿಲನ್ ಆದ ಅಕ್ಷಯ್ ಕುಮಾರ್

    ಶ್ರದ್ಧಾ ಕಪೂರ್ ನಟನೆಯ ‘ಸ್ತ್ರೀ 2’ (Stree 2) ಸಿನಿಮಾದ ಗೆಲುವು ಬಾಲಿವುಡ್‌ಗೆ ಮರುಜೀವ ಸಿಕ್ಕಂತೆ ಆಗಿದೆ. ‘ಸ್ತ್ರೀ 1’ ಮತ್ತು ‘ಸ್ತ್ರೀ 2’ರ ಸಕ್ಸಸ್ ನಂತರ ಪಾರ್ಟ್ 3 (Stree 3) ಬರುವ ಬಗ್ಗೆ ಕೂಡ ಅಧಿಕೃತ ಘೋಷಣೆಯಾಗಿದೆ. ಆದರೆ ಮುಂಬರುವ ಸೀಕ್ವೆಲ್‌ನಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಲಿದ್ದು, ಅಕ್ಷಯ್ ಕುಮಾರ್ (Akshay Kumar) ವಿಲನ್ ಆಗಿ ಅಬ್ಬರಿಸಲಿದ್ದಾರೆ.

    ‘ಸ್ತ್ರೀ 2’ ಸಿನಿಮಾಗಿಂತ ಪಾರ್ಟ್ 3 ಇನ್ನೂ ದೊಡ್ಡ ಮಟ್ಟದಲ್ಲಿ ಮೂಡಿ ಬರಲಿದೆ. ಮುಂದುವರೆದ ಸೀಕ್ವೆಲ್‌ನಲ್ಲಿ ರಶ್ಮಿಕಾ (Rashmika Mandanna) ಜೊತೆ ತಮನ್ನಾ ಭಾಟಿಯಾ (Tamannaah Bhatia), ಆಯುಷ್ಮಾನ್ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ವಿಶೇಷ ಏನಪ್ಪಾ ಅಂದರೆ, ಈ ಚಿತ್ರದಲ್ಲಿ ಸ್ಟಾರ್ ನಟ ಅಕ್ಷಯ್ ಕುಮಾರ್ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

    ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣಗೆ ಉತ್ತಮ ಪಾತ್ರವೇ ಸಿಕ್ಕಿದೆ. ನಟನೆಗೆ ಸ್ಕೋಪ್ ಇರುವಂತ ಪಾತ್ರವನ್ನೇ ನಟಿ ಆಯ್ಕೆ ಮಾಡಿಕೊಂಡಿದ್ದಾರೆ. ಈ ಸಿನಿಮಾ ಮುಂದಿನ ವರ್ಷ ಚಿತ್ರಮಂದರಕ್ಕೆ ಲಗ್ಗೆ ಇಡಲಿದೆ. ಇದನ್ನೂ ಓದಿ:ಕೊಡಗಿನಲ್ಲಿ ಅದ್ಧೂರಿಯಾಗಿ ನಡೆಯಿತು ಕಿರಣ್ ಅಬ್ಬಾವರಂ ಡೆಸ್ಟಿನೇಷನ್ ವೆಡ್ಡಿಂಗ್

    ಇನ್ನೂ ಪುಷ್ಪ, ಅನಿಮಲ್ (Animal) ಸಿನಿಮಾದ ಸಕ್ಸಸ್ ನಂತರ ರಶ್ಮಿಕಾ ಬೇಡಿಕೆ ಹೆಚ್ಚಾಗಿದೆ. ಬಾಲಿವುಡ್ ಹಲವು ಬಿಗ್ ಬಜೆಟ್ ಸಿನಿಮಾಗಳ ಆಫರ್ ಅರಸಿ ಬರುತ್ತಿದೆ. ‘ಛಾವಾ’ ಮತ್ತು ‘ಪುಷ್ಪ 2’ (Pushpa 2) ಸಿನಿಮಾ ರಿಲೀಸ್‌ಗೆ ಸಿದ್ಧವಾಗಿದೆ. ಅನಿಮಲ್ 2, ದಿ ಗರ್ಲ್‌ಫ್ರೆಂಡ್, ರೈನ್‌ಬೋ, ಸಿಖಂದರ್ ಸೇರಿದಂತೆ ಹಲವು ಚಿತ್ರಗಳು ನಟಿಯ ಕೈಯಲ್ಲಿವೆ.

  • ಕೈಹಿಡಿಯದ ಅದೃಷ್ಟ- ಅಕ್ಷಯ್ ಕುಮಾರ್ ನಟನೆಯ ‘ಖೇಲ್ ಖೇಲ್ ಮೇ’ ಚಿತ್ರ ಹೀನಾಯ ಸೋಲು

    ಕೈಹಿಡಿಯದ ಅದೃಷ್ಟ- ಅಕ್ಷಯ್ ಕುಮಾರ್ ನಟನೆಯ ‘ಖೇಲ್ ಖೇಲ್ ಮೇ’ ಚಿತ್ರ ಹೀನಾಯ ಸೋಲು

    ಕ್ಷಯ್ ಕುಮಾರ್‌ಗೆ (Akshay Kumar) ಅದೃಷ್ಟ ಕೈಹಿಡಿಯುತ್ತಿಲ್ಲ. ನಟಿಸಿದ ಸಿನಿಮಾಗಳೆಲ್ಲವೂ ಚಿತ್ರಮಂದಿರದಲ್ಲಿ ಮಕಾಡೆ ಮಲಗುತ್ತಿದೆ. ಆ.15ರಂದು ರಿಲೀಸ್ ಆಗಿದ್ದ ‘ಖೇಲ್ ಖೇಲ್ ಮೇ’ ಸಿನಿಮಾವು 15 ಕೋಟಿ ರೂ. ಗಳಿಸಲು ಕೂಡ ಒದ್ದಾಡುತ್ತಿದೆ. ಇದನ್ನೂ ಓದಿ:ರಕುಲ್ ದಾಂಪತ್ಯ ಮುರಿದು ಬೀಳಲಿದೆ- ಭವಿಷ್ಯ ನುಡಿದ ಸೆಲೆಬ್ರಿಟಿ ಜ್ಯೋತಿಷಿ

    ರಾಜ್‌ಕುಮಾರ್ ರಾವ್ ಮತ್ತು ಶ್ರದ್ಧಾ ಕಪೂರ್ (Shraddha Kapoor) ನಟನೆಯ ಸ್ತ್ರೀ 2 200 ಕೋಟಿ ರೂ. ಕಲೆಕ್ಷನ್ ಮಾಡುತ್ತ ದಾಪುಗಾಲಿಡುತ್ತಿದೆ. ಆದರೆ ಈ ಚಿತ್ರದ ಮುಂದೆ ‘ಖೇಲ್ ಖೇಲ್ ಮೇ’ (Khel Khel Mein) ಸಿನಿಮಾ ಕಲೆಕ್ಷನ್‌ಗೆ ಪೆಟ್ಟು ಬಿದ್ದಿದೆ. 50ರಿಂದ 60 ಕೋಟಿ ರೂ. ಸಂಭಾವನೆ ಪಡೆಯುವ ಅಕ್ಷಯ್ ನಟಿಸಿದ ಚಿತ್ರ 15 ಕೋಟಿ ಕೂಡ ಕಲೆಕ್ಷನ್ ಮಾಡದೇ ಇರೋದು ಬೇಸರದ ಸಂಗತಿ.

    ಈ ವರ್ಷ ಅಕ್ಷಯ್ ಕುಮಾರ್ ನಟಿಸಿದ್ದ ‘ಬಡೇ ಮಿಯಾ ಚೋಟೆ ಮಿಯಾ’, ‘ಸರ್ಫಿರಾ’ ಸಿನಿಮಾಗಳು ಸೋತಿವೆ. ಇದನ್ನೂ ಓದಿ:ಪೊಲೀಸ್ ಅಧಿಕಾರಿಯಾಗಿ ತಲೈವಾ- ಅ.10ಕ್ಕೆ ‘ವೆಟ್ಟೈಯಾನ್’ ರಿಲೀಸ್‌ಗೆ ರೆಡಿ

    ಇನ್ನೂ ಸಕ್ಸಸ್ ಸಿಗದೆ ಕಂಗಾಲಾಗಿರುವ ಅಕ್ಷಯ್ ಕುಮಾರ್ ಅವರು ಸೌತ್‌ನತ್ತ ಮುಖ ಮಾಡಿದ್ದಾರೆ. ‘ಕಣ್ಣಪ್ಪ’ ಸಿನಿಮಾದಲ್ಲಿ ಅಕ್ಷಯ್ ಕಾಣಿಸಿಕೊಂಡಿದ್ದಾರೆ.

  • ರಾಜ್‌ಕುಮಾರ್ ರಾವ್‌ಗೆ ಮಾನುಷಿ ಚಿಲ್ಲರ್ ನಾಯಕಿ

    ರಾಜ್‌ಕುಮಾರ್ ರಾವ್‌ಗೆ ಮಾನುಷಿ ಚಿಲ್ಲರ್ ನಾಯಕಿ

    ಬಾಲಿವುಡ್ ಬೆಡಗಿ ಮಾನುಷಿ ಚಿಲ್ಲರ್ (Manushi Chhillar) ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುತ್ತಲೇ ಇರುತ್ತಾರೆ. ಸಕ್ಸಸ್‌ಗಾಗಿ ಉತ್ತಮ ಅವಕಾಶಕ್ಕಾಗಿ ಎದುರು ನೋಡ್ತಿರೋ ಮಾನುಷಿಗೆ ಈಗ ಬಂಪರ್ ಆಫರ್‌ವೊಂದು ಸಿಕ್ಕಿದೆ. ಬಿಗ್‌ ಬಜೆಟ್‌ ಸಿನಿಮಾದಲ್ಲಿ ರಾಜ್‌ಕುಮಾರ್ ರಾವ್ (Rajkumar Rao) ಜೊತೆ ನಟಿಸುವ ಚಾನ್ಸ್‌ ಸಿಕ್ಕಿದೆ.

    ವಿಭಿನ್ನ ಪ್ರೇಮಕಥೆಯಲ್ಲಿ ರಾಜ್‌ಕುಮಾರ್ ರಾವ್ ಮತ್ತು ಮಾನುಷಿ ಜೊತೆಯಾಗಿ ನಟಿಸಲಿದ್ದಾರೆ. ಈ ಜೋಡಿಗೆ ‘ಭಕ್ಷಕ್’ ಸಿನಿಮಾ ಡೈರೆಕ್ಟರ್ ಪುಲ್ಕಿತ್ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಇದೇ ಸೆಪ್ಟೆಂಬರ್‌ನಿಂದ ಶೂಟಿಂಗ್ ಶುರುವಾಗಲಿದೆ. ಚಿತ್ರವನ್ನು ಮುಂದಿನ ವರ್ಷ ರಿಲೀಸ್‌ ಮಾಡಲು ಚಿತ್ರತಂಡ ನಿರ್ಧರಿಸಿದೆ. ಇದನ್ನೂ ಓದಿ:ಸಮಂತಾ ಪ್ರಪೋಸ್ ಮಾಡಿದ ದಿನಾಂಕದಂದೇ ಶೋಭಿತಾಗೆ ರಿಂಗ್ ತೊಡಿಸಿದ ನಾಗಚೈತನ್ಯ

    ಸ್ತ್ರೀ, ಶ್ರೀಕಾಂತ್ ಸಿನಿಮಾ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ರಾಜ್‌ಕುಮಾರ್ ರಾವ್‌ಗೆ ಮೊದಲ ಬಾರಿಗೆ ಮಾನುಷಿ ಜೋಡಿಯಾಗ್ತಿರೋದ್ರಿಂದ ಈ ಸಿನಿಮಾದ ಬಗ್ಗೆ ಬೆಟ್ಟದಷ್ಟು ನಿರೀಕ್ಷೆ ಫ್ಯಾನ್ಸ್‌ಗೆ ಇದೆ. ಇಬ್ಬರ ಕಾಂಬಿನೇಷನ್‌ ಅದ್ಯಾವ ರೀತಿ ಮೂಡಿ ಬರಲಿದೆ ಎಂದು ಫ್ಯಾನ್ಸ್‌ ಎದುರು ನೋಡ್ತಿದ್ದಾರೆ.

    ಅಂದಹಾಗೆ, ‘ಸಾಮ್ರಾಟ್ ಪೃಥ್ವಿರಾಜ್’ ಸಿನಿಮಾದಲ್ಲಿ ಅಕ್ಷಯ್ ಕುಮಾರ್‌ಗೆ (Akshay Kumar) ನಾಯಕಿಯಾಗಿ ಮಾನುಷಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ ಕೆರಿಯರ್‌ಗೆ ಬ್ರೇಕ್‌ ಕೊಡುವಂತಹ ಸಿನಿಮಾ ಇನ್ನೂ ಸಿಕ್ಕಿಲ್ಲ.

  • ಕನ್ನಡಿಗನ ಕಥೆಯಲ್ಲಿ ಅಕ್ಷಯ್ ಕುಮಾರ್- ‘ಸರ್ಫಿರಾ’ ಟ್ರೈಲರ್ ಔಟ್

    ಕನ್ನಡಿಗನ ಕಥೆಯಲ್ಲಿ ಅಕ್ಷಯ್ ಕುಮಾರ್- ‘ಸರ್ಫಿರಾ’ ಟ್ರೈಲರ್ ಔಟ್

    ಚಿತ್ರರಂಗದಲ್ಲಿ ಇದೀಗ ಬಯೋಪಿಕ್‌ಗಳ ಹಾವಳಿ ಜೋರಾಗಿದೆ. ಸ್ಟಾರ್ ಕಲಾವಿದರ ಕಥೆ, ಕ್ರಿಕೆಟ್ ಕ್ಷೇತ್ರದಲ್ಲಿ ಸಾಧನೆ ಮಾಡಿದವರ ಜೀವನ ಚರಿತ್ರೆ ಸೇರಿದಂತೆ ಹಲವು ಸಿನಿಮಾ ಕಥೆಗಳು ಬಂದು ಹೋಗಿವೆ. ಕನ್ನಡಿಗನ ಯಶೋಗಾಥೆಯನ್ನು ಬಾಲಿವುಡ್‌ನಲ್ಲಿ ತೋರಿಸಲು ಮುಂದಾಗಿದ್ದಾರೆ. ‘ಸರ್ಫಿರಾ’ (Sarfira Film) ಎಂಬ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡುತ್ತಿದೆ.

    ಕನ್ನಡಿಗ ಕ್ಯಾಪ್ಟನ್ ಜಿ.ಆರ್ ಗೋಪಿನಾಥ್ ಸಾಹಸಗಾಥೆಯನ್ನು ಬೆಳ್ಳಿಪರದೆಯಲ್ಲಿ ತೋರಿಸಲು ಹೊರಟಿದ್ದಾರೆ. ಈ ಹಿಂದೆ ತಮಿಳಿನಲ್ಲಿ ‘ಸೂರರೈ ಪೋಟ್ರು’ ಮೂಲಕ ಜಿ.ಆರ್ ಗೋಪಿನಾಥ್ ಯಶೋಗಾಥೆಯನ್ನು ತೋರಿಸಲಾಗಿತ್ತು. ಈಗ ಬಾಲಿವುಡ್‌ನಲ್ಲಿ ಮತ್ತೆ ಪ್ರಯತ್ನ ಮುಂದುವರೆದಿದೆ. ಇದನ್ನೂ ಓದಿ:ಹೆಸರು ಬದಲಿಸಿಕೊಂಡ ಅಣ್ಣಾವ್ರ ಮೊಮ್ಮಗ ಧೀರೇನ್


    ಅತ್ಯಂತ ಕಡಿಮೆ ವೆಚ್ಚದಲ್ಲಿ ಸಾಮಾನ್ಯ ಜನರಿಗೆ ವಿಮಾನ ಸೇವೆ ಒದಗಿಸಬೇಕು ಎನ್ನುವ ಒಬ್ಬ ಯುವಕನ ಕನಸಿನ ಕಥೆಯ ಸುತ್ತ ಸಿನಿಮಾ ಸುತ್ತುತ್ತದೆ. ಈ ಹಾದಿಯಲ್ಲಿ ಆತನ ಏಳು ಬೀಳುಗಳಿಗೆ ದೃಶ್ಯ ರೂಪ ಸಿಕ್ಕಿದೆ. ಸಿನಿಮಾದಲ್ಲಿ ಜಿ.ಆರ್ ಗೋಪಿನಾಥ್  ಆಗಿ ಅಕ್ಷಯ್‌ ಕುಮಾರ್‌ (Akshay Kumar) ಜೀವತುಂಬಿದ್ದಾರೆ. ಇನ್ನು ತಮಿಳು ನಟ ಸೂರ್ಯ (Suriya) ಕೂಡ ‘ಸರ್ಫಿರಾ’ ಚಿತ್ರದಲ್ಲಿ ಗೆಸ್ಟ್ ಅಪಿಯರೆನ್ಸ್ ಮಾಡಿದ್ದಾರೆ.

    ಈ ಸಿನಿಮಾದಲ್ಲಿ ಪರೇಶ್ ರಾವಲ್, ರಾಧಿಕಾ ಮದನ್, ಸೀಮಾ ಬಿಸ್ವಾಸ್ ಚಿತ್ರದ ಮುಖ್ಯ ತಾರಾಗಣದಲ್ಲಿದ್ದಾರೆ. ‘ಸೂರರೈ ಪೋಟ್ರು’ ಸಿನಿಮಾದಂತೆಯೇ ಸರ್ಫಿರಾ ಅದ್ಧೂರಿಯಾಗಿ ಮೂಡಿ ಬಂದಿದೆ. ತಮಿಳು ನಟ ಸೂರ್ಯ ಮಾಡಿದ್ದ ಪಾತ್ರಕ್ಕೆ ಅಕ್ಷಯ್ ಕುಮಾರ್ ನ್ಯಾಯ ಸಲ್ಲಿಸುವ ಸುಳಿವು ಸಿಕ್ಕಿದೆ. ‘ಸರ್ಫಿರಾ’ ಟ್ರೈಲರ್ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಈ ಸಿನಿಮಾವನ್ನು ಕೂಡ ಸುಧಾ ಕೊಂಗರಾ ನಿರ್ದೇಶನ ಮಾಡಿದ್ದು, ಇದೇ ಜುಲೈ 12ಕ್ಕೆ ಸಿನಿಮಾ ರಿಲೀಸ್ ಆಗಲಿದೆ.

  • ನನ್ನ ಮಗ ಸೆಕೆಂಡ್ ಹ್ಯಾಂಡ್ ಬಟ್ಟೆಗಳನ್ನು ಧರಿಸುತ್ತಾನೆ ಎಂದ ಅಕ್ಷಯ್ ಕುಮಾರ್

    ನನ್ನ ಮಗ ಸೆಕೆಂಡ್ ಹ್ಯಾಂಡ್ ಬಟ್ಟೆಗಳನ್ನು ಧರಿಸುತ್ತಾನೆ ಎಂದ ಅಕ್ಷಯ್ ಕುಮಾರ್

    ಬಾಲಿವುಡ್ ನಟ ಅಕ್ಷಯ್ ಕುಮಾರ್‌ಗೆ (Akshay Kumar) ಲಕ್ ಕೈ ಕೊಟ್ಟಿಂತಿದೆ. ಅವರು ನಟಿಸಿರುವ ಸಾಲು ಸಾಲು ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿವೆ. ಇದರ ನಡುವೆ ಇದೀಗ ಮಗನ ಬಗ್ಗೆ ಅಕ್ಷಯ್ ನೀಡಿರುವ ಹೇಳಿಕೆ ಈಗ ಸದ್ದು ಮಾಡುತ್ತಿದೆ. ನನ್ನ ಮಗ ಸೆಕೆಂಡ್ ಹ್ಯಾಂಡ್ ಬಟ್ಟೆಗಳನ್ನು ಧರಿಸುತ್ತಾನೆ ಎಂದು ಅಕ್ಷಯ್ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

    ಲಂಡನ್ ವಿಶ್ವವಿದ್ಯಾನಿಲಯದಲ್ಲಿ ಆರವ್ ಓದುತ್ತಿದ್ದಾನೆ. 15 ವರ್ಷಕ್ಕೆ ಮಗ ಮನೆ ತೊರೆದಿದ್ದನು. ವಿದ್ಯಾಭ್ಯಾಸದ ಬಗ್ಗೆ ಅವನಿಗೆ ಯಾವಾಗಲೂ ಆಸಕ್ತಿ ಇತ್ತು. ಒಬ್ಬನೇ ಇರಲು ಇಷ್ಟಪಡುತ್ತಾನೆ. ಆದರೆ ಆರವ್ (Aarav Kumar) ಲಂಡನ್‌ಗೆ ಹೋಗೋದು ನನಗೆ ಇಷ್ಟವಿರಲಿಲ್ಲ. ಆದರೆ ಅದು ಅವನ ನಿರ್ಧಾರ. ಹಾಗಂತ ನಾನು ಅವನನ್ನು ತಡೆಯಲಿಲ್ಲ. ಯಾಕೆಂದರೆ ನಾನು ಕೂಡ 14ನೇ ವಯಸ್ಸಿಗೆ ಮನೆ ಬಿಟ್ಟಿದ್ದೆ ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ.

    ಆರವ್ ತನ್ನ ಬಟ್ಟೆಯನ್ನು ತಾನೇ ತೊಳೆದುಕೊಳ್ಳುತ್ತಾನೆ. ಚೆನ್ನಾಗಿ ಅಡುಗೆ ಮಾಡುತ್ತಾನೆ ಕೂಡ. ದುಬಾರಿಯಾದ ಬಟ್ಟೆಗಳನ್ನು ಖರೀದಿಸಲು ಆತ ಇಷ್ಟಪಡುವುದಿಲ್ಲ. ಬಟ್ಟೆ ಖರೀದಿಸಲು ಸೆಕೆಂಡ್ ಹ್ಯಾಂಡ್ ಸ್ಟೋರ್‌ಗೆ ಹೋಗುತ್ತಾನೆ. ಸುಮ್ಮನೆ ಖರ್ಚು ಮಾಡುವುದು ಅವನಿಗೆ ಇಷ್ಟ ಇಲ್ಲ ಎಂದಿದ್ದಾರೆ. ಇದನ್ನೂ ಓದಿ:ರಾಮ್ ಚರಣ್ ತಾಯಿಯ ಪಾತ್ರದಲ್ಲಿ ವಿಜಯ ಶಾಂತಿ

    ಆರವ್ ಕುಮಾರ್‌ಗೆ ಈಗ 21 ವರ್ಷ ವಯಸ್ಸು. ಹಾಗಾದ್ರೆ ನಟನೆಗೆ ಎಂಟ್ರಿ ಕೊಡುವುದು ಯಾವಾಗ ಎಂದು ಕೇಳಲಾಯ್ತು. ಆರವ್‌ಗೆ ನಟನೆ ಇಷ್ಟವಿಲ್ಲ. ಫ್ಯಾಷನ್ ಕ್ಷೇತ್ರದಲ್ಲಿ ಸಾಧನೆ ಮಾಡಲು ಅವರು ನಿರ್ಧರಿಸಿದ್ದಾರೆ. ಪತ್ನಿ ಮಗನನ್ನು ಬೆಳೆಸಿರುವ ರೀತಿಯ ಬಗ್ಗೆ ಖುಷಿಯಿದೆ ಎಂದು ಅಕ್ಷಯ್ ಮಾತನಾಡಿದ್ದಾರೆ.

  • ಪೌರತ್ವದ ನಂತರ ಮೊದಲ ಬಾರಿಗೆ ಮತದಾನ ಮಾಡಿದ ನಟ ಅಕ್ಷಯ್ ಕುಮಾರ್

    ಪೌರತ್ವದ ನಂತರ ಮೊದಲ ಬಾರಿಗೆ ಮತದಾನ ಮಾಡಿದ ನಟ ಅಕ್ಷಯ್ ಕುಮಾರ್

    ವರೆಗೂ ಕೆನಡಾ ಪೌರತ್ವ ಪಡೆದಿದ್ದ ಬಾಲಿವುಡ್ ನಟ ಅಕ್ಷಯ್ ಕುಮಾರ್ (Akshay Kumar) ಇತ್ತೀಚೆಗಷ್ಟೇ ಭಾರತದ ಪೌರತ್ವ ಪಡೆದುಕೊಂಡಿದ್ದರು. ಹಾಗಾಗಿ ಮೊದಲ ಬಾರಿಗೆ ಅವರು ಭಾರತದಲ್ಲಿ ಮತದಾನ ಮಾಡಿದ್ದಾರೆ. ಇಂದು ಮತದಾನ ಮಾಡಿದ ನಂತರ ಮಾತನಾಡಿದ ಅಕ್ಷಯ್, ಭಾರತದ ಅಭಿವೃದ್ಧಿ ಮತ್ತು ಬಲಿಷ್ಠ ರಾಷ್ಟ್ರಕ್ಕಾಗಿ ಮತದಾನ ಮಾಡಿ ಎಂದಿದ್ದಾರೆ.

    ಇಂದು ಲೋಕಸಭೆಗೆ ಐದನೇ ಹಂತದಲ್ಲಿ (Loksabha Elections 2024) ಮತದಾನ ನಡೆಯುತ್ತಿದೆ. 6 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿನ ಒಟ್ಟು 49 ಕ್ಷೇತ್ರಗಳಲ್ಲಿ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೂ ಮತದಾನ ನಡೆಯಲಿದೆ. ಬಿಹಾರದ 5, ಜಮ್ಮು ಮತ್ತು ಕಾಶ್ಮೀರದ 1, ಜಾರ್ಖಂಡ್ 3, ಲಡಾಖ್ 1, ಮಹಾರಾಷ್ಟ್ರದ 13, ಒಡಿಶಾದ 5, ಉತ್ತರ ಪ್ರದೇಶದ 14 ಮತ್ತು ಪಶ್ಚಿಮ ಬಂಗಾಳದ 7 ಸ್ಥಾನಗಳಿಗೆ ಮತದಾನ ನಡೆಯಲಿದೆ. ಅಮೇಥಿ, ರಾಯ್ ಬರೇಲಿ, ಲಕ್ನೋ, ಕೈಸರ್ ಗಂಜ್, ಸರನ್ ಮತ್ತು ಮುಂಬೈನ ಎಲ್ಲಾ ಕ್ಷೇತ್ರಗಳು ಹೈವೊಲ್ಟೇಜ್ ಕ್ಷೇತ್ರಗಳಾಗಿವೆ.

    ಉತ್ತರ ಪ್ರದೇಶದ ಅಮೇಥಿಯಿಂದ ಸ್ಮೃತಿ ಇರಾನಿ ಮತ್ತು ಕೆಎಲ್ ಶರ್ಮಾ, ರಾಯ್ ಬರೇಲಿಯಿಂದ ರಾಹುಲ್ ಗಾಂಧಿ ಮತ್ತು ದಿನೇಶ್ ಪ್ರತಾಪ್ ಸಿಂಗ್, ಲಕ್ನೋದಿಂದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಹಾರದ ಸರಣ್ನಿಂದ ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ರೋಹಿಣಿ ಆಚಾರ್ಯ, ಮಹಾರಾಷ್ಟ್ರ ಕಲ್ಯಾಣದಿಂದ ಸಿಎಂ ಏಕನಾಥ್ ಶಿಂಧೆ ಅವರ ಪುತ್ರ ಡಾ.ಶ್ರೀಕಾಂತ್ ಶಿಂಧೆ, ಮುಂಬೈ ಉತ್ತರದಿಂದ ಕೇಂದ್ರ ಸಚಿವ ಪಿಯೂಷ್ ಗೋಯಲ್, ಹಿರಿಯ ವಕೀಲ ಉಜ್ವಲ್ ನಿಕಮ್, ಮಧ್ಯ ಮುಂಬೈ ವರ್ಷಾ ಗಾಯಕ್ವಾಡ್ ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ

     

    ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ದಿನೇಶ್ ಪ್ರತಾಪ್ ಸಿಂಗ್, ರಾಯ್ ಬರೇಲಿ ಬಿಜೆಪಿ ಅಭ್ಯರ್ಥಿ ದಿನೇಶ್ ಪ್ರತಾಪ್ ಸಿಂಗ್, ಮುಂಬೈ ಉತ್ತರ ಬಿಜೆಪಿ ಅಭ್ಯರ್ಥಿ ಪಿಯೂಷ್ ಗೊಯೇಲ್, ಅಮಿರ್ ಪುರ್ ನಲ್ಲಿ ಕೇಂದ್ರ ಸಚಿವೆ ಸಾಧ್ವಿ ನಿರಂಜನ ಜ್ಯೋತಿ ಹಾಗೂ ಕೈಸರಗಂಜ್ ನಲ್ಲಿ ಬ್ರಿಜ್ ಭೂಷಣ್ ಶರಣ್ ಸಿಂಗ್ ಈಗಾಗಲೇ ಮತದಾನ ಮಾಡಿದ್ದಾರೆ. ಇನ್ನು ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರು ಕುಟುಂಬ ಸಮೇತರಾಗಿ ಮುಂಬೈನಲ್ಲಿ ತಮ್ಮ ಹಕ್ಕು ಚಲಾಯಿಸಿದ್ದಾರೆ.

  • ಬಾಲಿವುಡ್‌ನಲ್ಲಿ ಸಿಕ್ತು ಗೋಲ್ಡನ್ ಚಾನ್ಸ್- ಸ್ಟಾರ್‌ ನಟನಿಗೆ ಕೀರ್ತಿ ಸುರೇಶ್‌ ನಾಯಕಿ

    ಬಾಲಿವುಡ್‌ನಲ್ಲಿ ಸಿಕ್ತು ಗೋಲ್ಡನ್ ಚಾನ್ಸ್- ಸ್ಟಾರ್‌ ನಟನಿಗೆ ಕೀರ್ತಿ ಸುರೇಶ್‌ ನಾಯಕಿ

    ‘ಮಹಾನಟಿ’ ಕೀರ್ತಿ ಸುರೇಶ್ (Keerthy Suresh) ಸದ್ಯ ಬಾಲಿವುಡ್ (Bollywood) ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ವರುಣ್ ಧವನ್‌ಗೆ (Varun Dhawan) ನಾಯಕಿಯಾಗಿ ಬಿಟೌನ್‌ಗೆ ಪಾದಾರ್ಪಣೆ ಮಾಡಿದ ಬೆನ್ನಲ್ಲೇ ಕೀರ್ತಿ ಸುರೇಶ್‌ಗೆ ಬಂಪರ್‌ ಅವಕಾಶವೊಂದು ಸಿಕ್ಕಿದೆ.

    ವರುಣ್ ಧವನ್ ಹೊಸ ಸಿನಿಮಾದಲ್ಲಿ ಕೀರ್ತಿ ಸುರೇಶ್ ನಟಿಸುತ್ತಿದ್ದಾರೆ. ‘ಬೇಬಿ ಜಾನ್’ (Baby John) ಎಂದು ಈ ಸಿನಿಮಾಗೆ ಟೈಟಲ್ ಇಡಲಾಗಿದೆ. ಈ ಚಿತ್ರವನ್ನು ‘ಜವಾನ್’ (Jawan) ಡೈರೆಕ್ಟರ್ ಅಟ್ಲಿ ನಿರ್ದೇಶನ ಮಾಡುತ್ತಿದ್ದಾರೆ. ಇದರ ನಡುವೆ ಅಕ್ಷಯ್ ಕುಮಾರ್‌ಗೆ (Akshay Kumar) ನಾಯಕಿಯಾಗಿ ನಟಿಸುವ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ. ಇದನ್ನೂ ಓದಿ:ಮನೆಕೆಲಸದಾಕೆಯಿಂದ್ಲೇ ನಟಿ ಛಾಯಾಸಿಂಗ್ ತಾಯಿ ಮನೆಯಲ್ಲಿ ಕಳ್ಳತನ

    ಸತತ ಸೋಲಿನಿಂದ ಸುಸ್ತಾಗಿರುವ ಅಕ್ಷಯ್ ಕುಮಾರ್ (Akshay Kumar) ಇದೀಗ ಖ್ಯಾತ ನಿರ್ದೇಶಕ ಪ್ರಿಯದರ್ಶನ್ ಜೊತೆ ಕೈಜೋಡಿಸಿದ್ದಾರೆ. ಇಬ್ಬರ ಕಾಂಬಿನೇಷನ್‌ನಲ್ಲಿ ಸಿನಿಮಾ ಬರುವ ಬಗ್ಗೆ ಘೋಷಣೆ ಕೂಡ ಆಗಿದೆ. ಈ ಸಿನಿಮಾದಲ್ಲಿ ನಟಿಸಲು ಹಲವು ನಟಿಮಣಿಯರ ಹೆಸರು ಸದ್ದು ಮಾಡಿತ್ತು. ಕಡೆಯದಾಗಿ ಕೀರ್ತಿ ಸುರೇಶ್ ಸೂಕ್ತ ಎಂದೆನಿಸಿ ನಟಿಗೆ ಸಿನಿಮಾ ಟೀಮ್ ಮಣೆ ಹಾಕಿದೆ.

    ಕಾಮಿಡಿ ಕಮ್ ಲವ್ ಸ್ಟೋರಿ ಇರುವ ಸಿನಿಮಾ ಇದಾಗಿದ್ದು, ನಾಯಕನಿಗೆ ಪ್ರಾಮುಖ್ಯತೆ ಇರುವಷ್ಟೇ ಕೀರ್ತಿ ಪಾತ್ರಕ್ಕೂ ವ್ಯಾಲ್ಯೂ ಇದೆಯಂತೆ. ಹಾಗಾಗಿ ನಟಿ ನಟಿಸಲು ಒಪ್ಪಿಕೊಂಡಿದ್ದಾರೆ. ಸಾಲು ಸಾಲು ಸಿನಿಮಾಗಳು ಮಕಾಡೆ ಮಲಗಿದ ಬೆನ್ನಲ್ಲೇ ಸೌತ್ ನಟಿಗೆ ಚಿತ್ರತಂಡ ಮಣೆ ಹಾಕಿದೆ. ಅಂದಹಾಗೆ, ಮೊದಲ ಬಾರಿಗೆ ಜೋಡಿಯಾಗಿ ಕಾಣಿಸಿಕೊಳ್ತಿರುವ ಅಕ್ಷಯ್- ಕೀರ್ತಿ ಲವ್ ಸ್ಟೋರಿಯೂ ಪ್ರೇಕ್ಷಕರಿಗೆ ಇಷ್ಟ ಆಗುತ್ತಾ ಎಂದು ಕಾಯಬೇಕಿದೆ.

  • ‘ಹೌಸ್‌ಫುಲ್ 5’ ಚಿತ್ರತಂಡ ಸೇರಿಕೊಂಡ ಅಭಿಷೇಕ್ ಬಚ್ಚನ್

    ‘ಹೌಸ್‌ಫುಲ್ 5’ ಚಿತ್ರತಂಡ ಸೇರಿಕೊಂಡ ಅಭಿಷೇಕ್ ಬಚ್ಚನ್

    ಬಾಲಿವುಡ್ ನಟ ಅಭಿಷೇಕ್ ಬಚ್ಚನ್ (Abhishek Bachchan) ಅವರು ಇದೀಗ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ. ‘ಹೌಸ್‌ಫುಲ್’ (Housefull- 5) ಸೀಕ್ವೆಲ್‌ನಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಅಕ್ಷಯ್ ಕುಮಾರ್ ಜೊತೆ ಮತ್ತೆ ನಗಿಸಲು ಅಭಿಷೇಕ್ ಬಚ್ಚನ್ ರೆಡಿಯಾಗಿದ್ದಾರೆ.

    ಅಕ್ಷಯ್ ಕುಮಾರ್ (Akshay Kumar) ಮತ್ತು ರಿತೇಶ್ ದೇಶ್‌ಮುಖ್ (Rithesh Deshmukh) ಮೊದಲಾದವರು ನಟಿಸಿರುವ ಈ ಚಿತ್ರವನ್ನು ಪಾರ್ಟ್ 5 ಮಾಡಲು ಸಿದ್ಧತೆ ಮಾಡಲಾಗುತ್ತಿದೆ. ಅಕ್ಷಯ್ ಜೊತೆ ಅನಿಲ್ ಕಪೂರ್, ನಾನಾ ಪಾಟೇಕರ್, ರಿತೇಶ್, ಚಂಕಿ ಪಾಂಡೆ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಹೌಸ್‌ಫುಲ್-5ರಲ್ಲಿ ಅಭಿಷೇಕ್ ಬಚ್ಚನ್ ಕೂಡ ಲೀಡ್ ರೋಲ್‌ನಲ್ಲಿ ನಟಿಸಲಿದ್ದಾರೆ. ಈ ಚಿತ್ರವನ್ನು ಚಿತ್ರವನ್ನು ಸಾಜಿದ್ ನಿರ್ಮಾಣ ಮಾಡಲಿದ್ದಾರೆ.

    ‘ಹೌಸ್‌ಫುಲ್’ ನನ್ನ ಫೇವರಿಟ್ ಕಾಮಿಡಿ ಫ್ರಾಂಚೈಸ್‌ಗಳಲ್ಲಿ ಒಂದು. ಇದರಲ್ಲಿ ನಟಿಸೋದು ಮನೆಗೆ ಮರಳಿದ ಭಾವನೆ ಕೊಡುತ್ತದೆ. ಸಾಜಿದ್ ಜೊತೆ ಕೆಲಸ ಮಾಡೋದು ಖುಷಿ ನೀಡುತ್ತದೆ. ಅಕ್ಷಯ್ ಹಾಗೂ ರಿತೇಶ್ ಜೊತೆ ಸೆಟ್‌ನಲ್ಲಿ ಫನ್ ಮಾಡಲು ಕಾದಿದ್ದೇನೆ ಎಂದು ಖುಷಿಯಿಂದ ಅಭಿಷೇಕ್ ಬಚ್ಚನ್ ಮಾತನಾಡಿದ್ದಾರೆ. ಇದನ್ನೂ ಓದಿ:‘ಕೊರಗಜ್ಜ’ ಚಿತ್ರಕ್ಕೆ ಅಭಯ ನೀಡಿದ ದೈವ ಕೊರಗಜ್ಜ

    ‘ಹೌಸ್‌ಫುಲ್’ ಸಿನಿಮಾ ಅಂದರೆ ಅಲ್ಲಿ ನಗುವಿಗೆ ಕೊರತೆ ಇರುವುದಿಲ್ಲ. ಈ ಸಿನಿಮಾದ ಸೀಕ್ವೆಲ್ ಬರುವ ಬಗ್ಗೆ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.