Tag: ಅಕ್ಷಯ್ ಕುಮಾರ್

  • ರಿಯಲ್ ಹೀರೋ ಅಕ್ಷಯ್‌ಕುಮಾರ್ ಮಾಡಿದ ಕಾರ್ಯ ಎಲ್ಲರಿಗೂ ಮಾದರಿ

    ರಿಯಲ್ ಹೀರೋ ಅಕ್ಷಯ್‌ಕುಮಾರ್ ಮಾಡಿದ ಕಾರ್ಯ ಎಲ್ಲರಿಗೂ ಮಾದರಿ

    ಸಿನಿಮಾ ತಾರೆಯರು ಕೇವಲ ರೀಲ್‌ನಲ್ಲಿ ಮಾತ್ರವಲ್ಲ, ರಿಯಲ್ ಲೈಫ್‌ನಲ್ಲೂ ಹೀರೋ ಆಗಿ ಮಾಡಿದ ಕಾರ್ಯಗಳು ಸಮಾಜಕ್ಕೆ ಮಾದರಿಗಳಾದ ಅದೆಷ್ಟೋ ಉದಾಹರಣೆಗಳಿವೆ. ಇದೀಗ ಬಾಲಿವುಡ್ ನಟ ಅಕ್ಷಯ್‌ಕುಮಾರ್ (Akshay Kumar) ಕೂಡಾ ಮಹತ್ವದ ಕೆಲಸ ಮಾಡಿದ್ದಾರೆ. ಇಡೀ ಭಾರತೀಯ ಸಿನಿಮಾ ಇಂಡಸ್ಟ್ರಿ ಅವರ ಈ ಮಹತ್ತರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ನಟ ಅಕ್ಷಯ್‌ಕುಮಾರ್, 650-700 ಜನ ಸ್ಟಂಟ್ ಮಾಸ್ಟರ್‌ಗಳಿಗೆ ಲೈಫ್ ಇನ್ಶುರೆನ್ಸ್, ಹೆಲ್ತ್ ಇನ್ಶುರೆನ್ಸ್ ಮಾಡಿಸಿಕೊಟ್ಟಿದ್ದಾರೆ.

    ಸಿನಿಮಾದ (Cinema) ಸಾಹಸ ದೃಶ್ಯಗಳನ್ನ ಮಾಡುವಾಗ ಸಾಕಷ್ಟು ಏಟುಗಳನ್ನ ಮಾಡಿಕೊಳ್ಳುತ್ತಾರೆ. ಕೆಲವೊಂದು ಬಾರಿ ಜೀವಕ್ಕೆ ಕುತ್ತು ಬರುವಂತಹ ರಿಸ್ಕಿ ದೃಶ್ಯಗಳಲ್ಲಿ ಸಾಹಸ ನಿರ್ದೇಶಕರು, ಸ್ಟಂಟ್ (Stunt) ಕೆಲಸದಲ್ಲಿ ತೊಡಗಿದವರು ಭಾಗಿಯಾಗುವಂತಹ ಸನ್ನಿವೇಶಗಳು ಎದುರಾಗುತ್ತವೆ. ಕೆಲದಿನಗಳ ಹಿಂದಷ್ಟೇ ತಮಿಳು ಸಿನಿಮಾದ ಚಿತ್ರೀಕರಣದ ವೇಳೆ ಮೋಹನ್ ರಾಜ್ ಎನ್ನುವ ಹಿರಿಯ ಸ್ಟಂಟ್‌ಮ್ಯಾನ್ ಮೃತಪಟ್ಟಿದ್ದರು. ಆ ವೇಳೆ ಚಿತ್ರತಂಡಕ್ಕೆ ಸಂಕಷ್ಟ ಕೂಡಾ ಎದುರಾಗಿತ್ತು. ಇದನ್ನೂ ಓದಿ: ಸುಪ್ರೀಂ ಟೆನ್ಶನ್‌ ನಡ್ವೆಯೂ ʻಡೆವಿಲ್ʼ ಸಂಭ್ರಮಕ್ಕೆ ಸಜ್ಜಾದ ಡಿಬಾಸ್‌ ಫ್ಯಾನ್ಸ್

    ಸ್ಟಂಟ್ ಮಾಸ್ಟರ್ ಮೋಹನ್ ರಾಜ್ (Mohan Raj) ನಿಧನದ ಘಟನೆ ಬಳಿಕ ಇದೀಗ ಬಾಲಿವುಡ್ ನಟ ಅಕ್ಷಯ್‌ಕುಮಾರ್ ಲಕ್ಷಾಂತರ ರೂಪಾಯಿ ಖರ್ಚು ಮಾಡಿ 650 ಮಂದಿಗೆ ಜೀವ ವಿಮೆ ಮಾಡಿಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ. ಸಿನಿಮಾ ಶೂಟಿಂಗ್ ವೇಳೆ ಅವಘಡ ನಡೆಯುತ್ತವೆ ಈ ಸಂದರ್ಭದಲ್ಲಿ ಅವರಿಗೆ ಚಿಕಿತ್ಸೆ ಪಡೆಯಲು ಸಹಾಯಕವಾಗಲಿ ಎನ್ನುವ ದೂರದೃಷ್ಟಿಯಿಂದ ಈ ಮಹತ್ತರ ಕಾರ್ಯ ಮಾಡಿದ್ದಾರೆ. ಇದನ್ನೂ ಓದಿ: ಸಿಡಿದೆದ್ದ ಜಯಂ ರವಿ: ಪರಿಹಾರಕ್ಕಾಗಿ 9 ಕೋಟಿ ಬೇಡಿಕೆ

    ಹಿರಿಯ ಸ್ಟಂಟ್‌ಮ್ಯಾನ್ ಹಾಗೂ ಸ್ಟಂಟ್‌ಮ್ಯಾನ್ ಅಸೋಸಿಯೇಷನ್ ಮುಖಂಡ ವಿಕ್ರಮ್ ಸಿಂಗ್ ದಹಿಯಾ ಅವರು ನಟ ಅಕ್ಷಯ್‌ಕುಮಾರ್ ಸಹಾಯವನ್ನ ಕೊಂಡಾಡಿದ್ದಾರೆ. ಸ್ವತಃ ತಾವೇ ಆ್ಯಕ್ಷನ್ ನಟರಾದ ಅಕ್ಷಯ್‌ಕುಮಾರ್ ಆ ದೃಶ್ಯಗಳನ್ನ ಕಣ್ಣಾರೆ ಕಂಡವರು ಹೀಗಾಗಿ 650 ಸ್ಟಂಟ್‌ಮ್ಯಾನ್‌ಗಳಿಗೆ ವಿಮೆ ಮಾಡಿಸಿ ಮಾನವೀಯತೆ ಮೆರೆದಿದ್ದಾರೆ. ಅಲ್ಲದೆ ಮತ್ತೊಬ್ಬರಿಗೂ ಮಾದರಿಯಾಗಿದ್ದಾರೆ ಎಂದಿದ್ದಾರೆ.

  • 5 ದಿನಕ್ಕೆ 10 ಕೋಟಿ – ಇದು ಅಕ್ಷಯ್‌ ಕುಮಾರ್‌ ಕಾಲ್‌ ಶೀಟ್!

    5 ದಿನಕ್ಕೆ 10 ಕೋಟಿ – ಇದು ಅಕ್ಷಯ್‌ ಕುಮಾರ್‌ ಕಾಲ್‌ ಶೀಟ್!

    ಮುಂಬೈ: ವಿಷ್ಣುಮಂಚು (Vishnu Manchu) ಅಭಿನಯದ ಕಣ್ಣಪ್ಪ (Kannappa) ಸಿನಿಮಾ ಬಹುಭಾಷೆಯಲ್ಲಿ ರಿಲೀಸ್ ಆಗಿದೆ ಈ ಚಿತ್ರದಲ್ಲಿ ಹಲವು ಭಾಷೆಯ ವಿವಿಧ ಖ್ಯಾತ ಕಲಾವಿದರು ನಟಿಸಿದ್ದು ಚಿತ್ರದ ಹೈಲೈಟ್‌ನಲ್ಲೊಂದು.

    ವಿಷ್ಣು ಮಂಚು ಕಣ್ಣಪ್ಪನಾಗಿ ಅಭಿನಯಿಸಿದರೆ ಅತಿಥಿ ಪಾತ್ರಗಳಲ್ಲಿ ಪ್ರಭಾಸ್, ಅಕ್ಷಯ್ ಕುಮಾರ್, ಮೋಹನ್‌ಲಾಲ್ ಅಭಿನಯಿಸಿದ್ದಾರೆ. ಗೆಸ್ಟ್ ಅಪೀಯರೆನ್ಸ್ ಮಾಡಿದ್ದ ಬೇರೆ ಭಾಷೆ ಕಲಾವಿದರು ಉಚಿತವಾಗಿಯೇ ಅಭಿನಯಿಸಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೀಗ ಅಕ್ಷಯ್ ಕುಮಾರ್ (Akshay Kumar) ಶಿವನ ಪಾತ್ರಕ್ಕಾಗಿ 10 ಕೋಟಿ ರೂ. ಸಂಭಾವನೆ ಪಡೆದು ಅಭಿನಯಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದನ್ನೂ ಓದಿ: ರಾಮ್‌ಚರಣ್‌ಗೆ ಕ್ಷಮೆ ಕೇಳಿದ `ಗೇಮ್ ಚೇಂಜರ್’ ಪ್ರೊಡ್ಯೂಸರ್

     

    ಶಿವನ ಪಾತ್ರ ಮಾಡಿದ್ದ ಅಕ್ಷಯ್ ಕುಮಾರ್ 5 ದಿನದ ಕಾಲ್‌ಶೀಟ್‌ಗಾಗಿ 10 ಕೋಟಿ ರೂ. ಸಂಭಾವನೆ ಪಡೆದಿದ್ದರು ಎನ್ನಲಾಗುತ್ತಿದೆ. ಆದರೆ ಪ್ರಭಾಸ್ ಹಾಗೂ ಮೋಹನ್‌ಲಾಲ್ ಮೋಹನ್‌ಬಾಬು ಮೇಲಿನ ಸ್ನೇಹ, ವಿಶ್ವಾಸದಿಂದ ರೆಮನ್ಯುರೇಶನ್ ಪಡೆಯದೇ ಅಭಿನಯಿಸಿದ್ದಾರೆ. ಆದರೆ ಐದೇ ದಿನದ ಕಾಲ್‌ಶೀಟ್‌ಗೆ ಅಕ್ಷಯ್ 10 ಕೋಟಿ ಪಡೆದುಕೊಂಡು ಹೋಗಿರುವುದು ಟಾಲಿವುಡ್ ವಲಯದಲ್ಲಿ ಬಹಳ ಚರ್ಚೆಯಾಗುತ್ತಿದೆ. ಇದನ್ನೂ ಓದಿ: ಓಂಪ್ರಕಾಶ್ ರಾವ್ ನಿರ್ದೇಶನದ 50ನೇ ಚಿತ್ರಕ್ಕೆ ಹಂಸಲೇಖ ಸಂಗೀತ

    ಅಕ್ಷಯ್ ದುರಾಸೆಯಿಂದ ಹಣ ಪಡೆದುಕೊಂಡು ಹೋಗಿದ್ದಾರೆ ಎಂದು ಚರ್ಚೆಯಾಗುತ್ತಿದೆ. ಆದರೆ ಅಕ್ಷಯ್ ಕೇಳಿದಷ್ಟು ಹಣಕ್ಕೆ ಒಪ್ಪಿಗೆಯಿಂದಲೇ ನಿರ್ಮಾಪಕರು ರೆಮನ್ಯುರೇಷನ್ ಕೊಟ್ಟಿರುತ್ತಾರೆ. ಹೀಗಾಗಿ ಅಕ್ಷಯ್ ಕುಮಾರ್ ಕೂಡ ಕಣ್ಣಪ್ಪ ಚಿತ್ರದ ಪ್ರಚಾರದಲ್ಲಿ ಭಾಗಿಯಾಗಿದ್ದು. ಆದರೆ ಮೋಹನ್‌ಲಾಲ್ ಆಗಲಿ ಪ್ರಭಾಸ್ ಆಗಲಿ ಭಾಗಿಯಾಗಿರಲಿಲ್ಲ. ಪ್ರಭಾಸ್ ಹಾಗೂ ಮೋಹನ್‌ಲಾಲ್ ಮುಂದೆ ಅಕ್ಷಯ್ ಸಣ್ಣವರಾದ್ರು ಅಷ್ಟೇ ಎನ್ನುತ್ತಿದ್ದಾರೆ ಪ್ರಭಾಸ್ ಫ್ಯಾನ್ಸ್.

  • ಜಾಲಿ ಎಲ್‌ಎಲ್‌ಬಿ-3: ಸೀಕ್ರೆಟ್ ಬಿಚ್ಚಿಟ್ಟ ಅಕ್ಷಯ್

    ಜಾಲಿ ಎಲ್‌ಎಲ್‌ಬಿ-3: ಸೀಕ್ರೆಟ್ ಬಿಚ್ಚಿಟ್ಟ ಅಕ್ಷಯ್

    ಕ್ಷಯ್‌ಕುಮಾರ್ ಮುಖ್ಯಪಾತ್ರದಲ್ಲಿ ನಟಿಸಿರುವ ಜಾಲಿ ಎಲ್‌ಎಲ್‌ಬಿ-3 (Jolly LLB-3) ಸಿನಿಮಾ ಇದೇ ಸೆಪ್ಟಂಬರ್‌ನಲ್ಲಿ ತೆರೆ ಕಾಣಲು ತಯಾರಿಯನ್ನ ನಡೆಸಿದೆ. ಸದ್ಯ ಅಕ್ಷಯ್‌ಕುಮಾರ್ ಕಣ್ಣಪ್ಪ ಸಿನಿಮಾದ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಹೌಸ್‌ಫುಲ್-5 (Housefull 5) ಸಿನಿಮಾದ ಸಕ್ಸಸ್‌ನ ಹ್ಯಾಂಗೋವರ್‌ನಲ್ಲಿ ತೇಲಾಡುತ್ತಿರುವ ಅಕ್ಷಯ್‌ ಕುಮಾರ್ (Akshay Kumar) ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ಮುಂದಿನ ಸಿನಿಮಾ ಜಾಲಿ ಎಲ್‌ಎಲ್‌ಬಿ-3 ಬಗ್ಗೆ ಮಾತ್ನಾಡಿದ್ಧಾರೆ.

    ಅಕ್ಷಯ್‌ಕುಮಾರ್ ಅಭಿನಯದ ಸ್ಕೈ ಫೋರ್ಸ್‌, ಕೇಸರಿ-2 ಹಾಗೂ ಹೌಸ್‌ಫುಲ್-5 ಸಿನಿಮಾಗಳು ಈ ವರ್ಷ ತೆರೆಕಂಡು ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಿವೆ. ಕಣ್ಣಪ್ಪ ಸಿನಿಮಾದಲ್ಲಿ ಅಕ್ಷಯ್‌ ಕುಮಾರ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಸಂದರ್ಶನದ ವೇಳೆ ಜಾಲಿ ಎಲ್‌ಎಲ್‌ಬಿ ಪಾರ್ಟ್-3 ಬಗೆಗಿನ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ. ಜಾಲಿ ಎಲ್‌ಎಲ್‌ಬಿ ಪಾರ್ಟ್-1, ಪಾರ್ಟ್-2 ಸಿನಿಮಾಗಳಂತೆ ಪಾರ್ಟ್-3 ಕೂಡಾ ನೈಜ ಘಟನೆಯಾಧಾರಿತ ಸಿನಿಮಾ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಚಿತಾ ರಾಮ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ : ನಿರ್ದೇಶಕ ನಾಗಶೇಖರ್ ಒತ್ತಾಯ

    ಜೊತೆಗೆ ಜಾಲಿ ಎಲ್‌ಎಲ್‌ಬಿ-1, ಪಾರ್ಟ್-2 ಸಿನಿಮಾದಲ್ಲಿ ಅರ್ಷದ್ ವಾರ್ಸಿ ಜೊತೆಗೆ ಕೆಲಸ ಮಾಡಿರುವ ಬಗ್ಗೆ ಮಾತಾಡಿದ್ದಾರೆ. ಇದೀಗ ಪಾರ್ಟ್-3 ಸಿನಿಮಾದಲ್ಲೂ ಅರ್ಷದ್ ಜೊತೆ ಕೆಲಸ ಮಾಡಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಅಂದಹಾಗೆ ಈ ಪಾರ್ಟ್-3 ಸಿನಿಮಾದಲ್ಲಿ ಅಕ್ಷಯ್‌ಕುಮಾರ್ ಜೊತೆ ಅರ್ಷದ್ ವಾರ್ಸಿ, ಅಮೃತಾ ರಾವ್, ಹುಮಾ ಖುರೇಶಿ, ಸೌರಭ್ ಶುಕ್ಲಾ, ಅನ್ನು ಕಪೂರ್ ಸೇರಿದಂತೆ ಅತೀ ದೊಡ ತಾರಾಗಣ ಈ ಚಿತ್ರದಲ್ಲಿರಲಿದೆ. ಇದನ್ನೂ ಓದಿ: ಇಷ್ಟ ಇಲ್ಲದಿದ್ರೆ ಸಿನಿಮಾ ನೋಡಬೇಡಿ: ಕರ್ನಾಟಕದಲ್ಲಿ ‘ಥಗ್‌ ಲೈಫ್‌’ ಸಿನಿಮಾ ರಿಲೀಸ್‌ಗೆ ಸುಪ್ರೀಂ ಸೂಚನೆ

    ಹೌಸ್‌ಫುಲ್-5 200 ಕೋಟಿ ರೂ. ಕ್ಲಬ್ ಸೇರಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದರ ಬೆನ್ನಲ್ಲೇ ಕಣ್ಣಪ್ಪ ಸಿನಿಮಾ ತೆರೆಗೆ ಸಿದ್ದವಾಗುತ್ತಿದೆ. ಇನ್ನೆರಡು ತಿಂಗಳು ಕಳೆದರೆ ಜಾಲಿ ಎಲ್‌ಎಲ್‌ಬಿ-3 ಸಿನಿಮಾ ಕೂಡಾ ತೆರೆಗೆ ಬರಲಿದೆ. ಈ ವರ್ಷದಲ್ಲಿ ಅಕ್ಷಯ್‌ಕುಮಾರ್ ನಟನೆಯ ಚಿತ್ರಗಳು ಬ್ಯಾಕ್ ಟು ಬ್ಯಾಕ್ ಥಿಯೇಟರ್‌ಗೆ ಎಂಟ್ರಿಕೊಡುತ್ತಿವೆ.

  • ಕುಂಟುತ್ತಲೇ 100 ಕೋಟಿ ಕ್ಲಬ್‌ ಸೇರಿದ ಹೌಸ್‌ಫುಲ್-5; 8ನೇ ದಿನ ಕೇವಲ 6 ಕೋಟಿ ಕಲೆಕ್ಷನ್‌

    ಕುಂಟುತ್ತಲೇ 100 ಕೋಟಿ ಕ್ಲಬ್‌ ಸೇರಿದ ಹೌಸ್‌ಫುಲ್-5; 8ನೇ ದಿನ ಕೇವಲ 6 ಕೋಟಿ ಕಲೆಕ್ಷನ್‌

    ಅಕ್ಷಯ್ ಕುಮಾರ್ (Akshay Kumar), ಅಭಿಷೇಕ್ ಬಚ್ಚನ್, ರಿತೇಶ್ ದೇಶಮುಖ್, ಜಾಕ್ವೆಲಿನ್ ಫರ್ನಾಂಡಿಸ್ ಸೇರಿದಂತೆ ಬಾಲಿವುಡ್‌ ಹಲವು ತಾರೆಯರನ್ನೊಳಗೊಂಡ ʻಹೌಸ್‌ಫುಲ್‌-5ʼ (Housefull 5) ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದೇ ಜೂನ್‌ 6ರಂದು ತೆರೆ ಕಂಡ ಈ ಚಿತ್ರ 8 ದಿನಗಳಲ್ಲೇ ನೂರು ಕೋಟಿಯ ಕ್ಲಬ್‌ ಸೇರಿದೆ.

    ಅಕ್ಷಯ್ ಕುಮಾರ್, ಅಭಿಷೇಕ್ ಬಚ್ಚನ್, ರಿತೇಶ್ ದೇಶಮುಖ್ (Riteish Deshmukh) ಮುಖ್ಯಪಾತ್ರದಲ್ಲಿ ನಟಿಸಿರುವ ಈ ಚಿತ್ರ ಜೂನ್‌ 6ರಂದು ತೆರೆ ಕಂಡಿತ್ತು. ಮೊದಲ ದಿನವೇ 24 ಕೋಟಿ ಗಳಿಕೆಯೊಂದಿಗೆ ಕುಂಟುತ್ತಾ ಸಾಗಿರುವ ʻಹೌಸ್‌ಫುಲ್‌ 5ʼ ಚಿತ್ರ ಕೊನೆಗೂ ನೂರು ಕೋಟಿ ಕ್ಲಬ್‌ ಸೇರಿದೆ. 8ನೇ ದಿನ 6 ಕೋಟಿ ಗಳಿಕೆಯೊಂದಿಗೆ ವಿಶ್ವಾದ್ಯಂತ ಒಟ್ಟು 200 ಕೋಟಿ ರೂ. ಗಳಿಸಿದೆ.

    8ನೇ ದಿನದ ಗಳಿಕೆಯಲ್ಲಿ ಭಾರೀ ಕುಸಿತ
    ಈ ಹಿಂದೆ ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡುತ್ತಾ ಆಕಾಶಕ್ಕೆ ಏಣಿ ಹಾಕಿ ಕುಂತಿದ್ದರು ಅಕ್ಷಯ್ ಕುಮಾರ್. ಆದ್ರೆ.. ಹಣೆಬರಹಕ್ಕೆ ಹೊಣೆ ಯಾರು? ಅನ್ನುವಂತೆ ಕೆಲ ವರ್ಷಗಳಿಂದ ಅದೃಷ್ಟ ಕೈ ಕೊಟ್ಟಿದೆ. ಹೆಚ್ಚಾಗಿ ಕಾಮಿಡಿ ಪಾತ್ರಗಳಲ್ಲೇ ಕಾಣಿಸಿಕೊಳ್ಳುತ್ತಿದ್ದು ಒಂದಾದ ಮೇಲೊಂದು ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ಸೋಲನ್ನು ಕಂಡಿವೆ. ಎಷ್ಟೇ ಕಷ್ಟಪಟ್ಟು ಚಿತ್ರ ಮಾಡಿದ್ರೂ ಪ್ರೇಕ್ಷಕರು ಕ್ಯಾರೇ ಎನ್ನುತ್ತಿಲ್ಲ.

    ಹೀಗಾಗಿಯೇ ಹಿಂದೆಯೆಲ್ಲ ಇವರನ್ನು ಲಕ್ಕಿ ಕುಮಾರ್ ಎಂದು ಕರೆಯುತ್ತಿದ್ದ ಬಾಲಿವುಡ್‌ ಈಗ ಇವರನ್ನು ಅನ್‌ಲಕ್ಕಿ ಕುಮಾರ್ ಎಂದು ಕರೆಯುತ್ತಿದೆ. ಆದ್ರೆ ಭಾರೀ ನಿರೀಕ್ಷೆ ಮೂಡಿಸಿದ್ದ ಹೌಸ್‌ಫುಲ್ ಚಿತ್ರದ ಕಲೆಕ್ಷನ್‌ ಕೂಡ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಮೊದಲ ವಾರದಲ್ಲಿ 127.25 ಕೋಟಿ ಗಳಿಸಿದ್ದ ʻಹೌಸ್‌ಫುಲ್‌ 5ʼ 2ನೇ ವಾರದ ಮೊದಲ ಕೇವಲ 6.07 ಕೋಟಿ ರೂ. ಗಳಿಸಿ ಭಾರೀ ನಿರಾಸೆ ಮೂಡಿಸಿದೆ. ಇದರೊಂದಿಗೆ ಚಿತ್ರದ ಒಟ್ಟು ಗಳಿಗೆ 133.32 ಕೋಟಿಗೆ ತಲುಪಿದೆ.

    ʻಹೌಸ್‌ಫುಲ್‌ 5ʼ ಯಾವ ದಿನ ಎಷ್ಟು ಕಲೆಕ್ಷನ್‌?
    – ಮೊದಲ ದಿನ – 24 ಕೋಟಿ ರೂ.
    – ಎರಡನೇ ದಿನ – 31 ಕೋಟಿ ರೂ.
    – ಮೂರನೇ ದಿನ – 32.5 ಕೋಟಿ ರೂ.
    – ನಾಲ್ಕನೇ ದಿನ – 13 ಕೋಟಿ ರೂ.
    – ಐದನೇ ದಿನ – 11.25 ಕೋಟಿ ರೂ.
    – ಆರನೇ ದಿನ – 8.5 ಕೋಟಿ ರೂ.
    – ಏಳನೇ ದಿನ – 7 ಕೋಟಿ ರೂ.
    – ಎಂಟನೇ ದಿನ – 6 ಕೋಟಿ ರೂ.
    ಒಟ್ಟು – 133.25 ಕೋಟಿ

    ಈ ಹಿಂದಿನ ಹೌಸ್‌ಫುಲ್ 4 ಸಿರೀಸ್‌ಗಳನ್ನು ನೋಡಿ ಪ್ರೇಕ್ಷಕರು ಭೇಷ್ ಎಂದಿದ್ದರು. ಆದರೀಗ ಕುಂಟುತ್ತಾ ಸಾಗಿರುವ 5ನೇ ಸರಣಿ 2ನೇ ವಾರದಲ್ಲಾದರೂ ಹಿಟ್‌ ಆಗುತ್ತಾ ಎನ್ನುವುದನ್ನು ಕಾದುನೋಡಬೇಕಿದೆ.

  • ಅಕ್ಷಯ್, ವಿಕ್ಕಿ ಕೌಶಲ್ ‘ಆಪರೇಷನ್ ಸಿಂಧೂರ’ ಸಿನಿಮಾಗಾಗಿ ಫೈಟ್ ಮಾಡ್ತಿಲ್ಲ: ಟ್ವಿಂಕಲ್ ಖನ್ನಾ

    ಅಕ್ಷಯ್, ವಿಕ್ಕಿ ಕೌಶಲ್ ‘ಆಪರೇಷನ್ ಸಿಂಧೂರ’ ಸಿನಿಮಾಗಾಗಿ ಫೈಟ್ ಮಾಡ್ತಿಲ್ಲ: ಟ್ವಿಂಕಲ್ ಖನ್ನಾ

    ಕ್ಷಯ್ ಕುಮಾರ್ (Akshay Kumar) ಮತ್ತು ವಿಕ್ಕಿ ಕೌಶಲ್ ‘ಆಪರೇಷನ್ ಸಿಂಧೂರ’ (Operation Sindoor) ಸಿನಿಮಾಗಾಗಿ ಫೈಟ್ ಮಾಡ್ತಿಲ್ಲ ಎಂದು ನಟ ಅಕ್ಷಯ್ ಕುಮಾರ್ ಪತ್ನಿ ಟ್ವಿಂಕಲ್ ಖನ್ನಾ (Twinkle Khanna) ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ:ಐಪಿಎಲ್ ಕುರಿತಾದ ಕ್ರೀಡಾ ಪ್ರಧಾನ ಚಿತ್ರದಲ್ಲಿ ಉಪ್ಪಿ-‘ಕರ್ವ’ ಡೈರೆಕ್ಟರ್ ಆ್ಯಕ್ಷನ್ ಕಟ್

    ನೈಜ ಕಥೆ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯನ್ನು ಸಿನಿಮಾ ಮಾಡಲು ಅಕ್ಷಯ್ ಕುಮಾರ್ ಮತ್ತು ವಿಕ್ಕಿ ಕೌಶಲ್ ನಡುವೆ ಪೈಪೋಟಿ ನಡೆಯುತ್ತಿದೆ ಎಂದೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಹಬ್ಬಿತ್ತು. ಇದು ಅಕ್ಷಯ್ ಪತ್ನಿ ಟ್ವಿಂಕಲ್ ಖನ್ನಾ ಗಮನಕ್ಕೂ ಬಂದಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿ ಫೇಕ್ ಸುದ್ದಿ ಎಂದಿದ್ದಾರೆ. ಈ ಸಿನಿಮಾಗಾಗಿ ಇಬ್ಬರೂ ಫೈಟ್ ಮಾಡ್ತಿಲ್ಲ. ಅಕ್ಷಯ್ ಮತ್ತು ವಿಕ್ಕಿ ತಾವು ಒಪ್ಪಿಕೊಂಡಿರುವ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ರೆಡ್ಡಿ ಮಗನ ಜೊತೆ ಶ್ರೀಲೀಲಾ ಡ್ಯುಯೆಟ್- ‘ಜೂನಿಯರ್’ ಚಿತ್ರದ ಸಾಂಗ್ ಔಟ್

    ಪಾಕ್‌ಗೆ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯ ಮೂಲಕ ಭಾರತೀಯ ಸೇನೆ ತಕ್ಕ ಪಾಠ ಕಲಿಸುತ್ತಿದೆ. ಇದನ್ನೇ ಸಿನಿಮಾ ಮಾಡಲು ಬಾಲಿವುಡ್ ನಿರ್ಮಾಪಕರಲ್ಲಿ ಪೈಪೋಟಿ ನಡೆಯುತ್ತಿದೆ. ಈ ವೇಳೆ, ಅಕ್ಷಯ್ ಮತ್ತು ವಿಕ್ಕಿ ಸಿನಿಮಾ ಮಾಡಲು ಕಿತ್ತಾಡುತ್ತಿದ್ದಾರೆ ಎಂಬ ಸುದ್ದಿ ಫೇಕ್ ಎಂದು ಕ್ಲ್ಯಾರಿಟಿ  ನೀಡಿದ್ದಾರೆ ಟ್ವಿಂಕಲ್ ಖನ್ನಾ.

    ಹೌಸ್‌ಫುಲ್ 5, ಜಾಲಿ ಎಲ್‌ಎಲ್‌ಬಿ 3, ವೆಲ್‌ಕಮ್ ಟು ದಿ ಜಂಗಲ್, ಕಣ್ಣಪ್ಪ ಸೇರಿದಂತೆ ಹಲವು ಚಿತ್ರಗಳು ಟ್ವಿಂಕಲ್ ಖನ್ನಾ ಕೈಯಲ್ಲಿವೆ. ವಿಕ್ಕಿ ಕೌಶಲ್ ಛಾವಾ ಸಕ್ಸಸ್ ಬಳಿಕ ಲವ್ & ವಾರ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

  • 17 ವರ್ಷದ ಬಳಿಕ ಒಂದೇ ಸಿನಿಮಾದಲ್ಲಿ ನಟಿಸಲಿದ್ದಾರೆ ಅಕ್ಷಯ್ ಕುಮಾರ್, ಸೈಫ್ ಅಲಿ ಖಾನ್

    17 ವರ್ಷದ ಬಳಿಕ ಒಂದೇ ಸಿನಿಮಾದಲ್ಲಿ ನಟಿಸಲಿದ್ದಾರೆ ಅಕ್ಷಯ್ ಕುಮಾರ್, ಸೈಫ್ ಅಲಿ ಖಾನ್

    ಬಾಲಿವುಡ್ ನಟ ಅಕ್ಷಯ್ ಕುಮಾರ್ (Akshay Kumar) ಮತ್ತು ಸೈಫ್ ಅಲಿ ಖಾನ್ (Saif Ali Khan) 17 ವರ್ಷಗಳ ಬಳಿಕ ಜೊತೆಯಾಗಿ ನಟಿಸಲು ಸಜ್ಜಾಗಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇದನ್ನೂ ಓದಿ:ಶಾರುಖ್ ಖಾನ್ ಬಳಿಕ ಮತ್ತೊಂದು ಬಿಗ್ ಪ್ರಾಜೆಕ್ಟ್‌ಗೆ ದೀಪಿಕಾ ಪಡುಕೋಣೆ ನಾಯಕಿ

    ಖ್ಯಾತ ನಿರ್ದೇಶಕ ಪ್ರಿಯದರ್ಶನ್ ಹೊಸ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಮತ್ತು ಸೈಫ್ ಜೊತೆಯಾಗಿ ನಟಿಸುತ್ತಿದ್ದಾರೆ. ವಿಭಿನ್ನ ಕಥಾಹಂದರ ಹೊಂದಿರುವ ಥ್ರಿಲ್ಲರ್ ಚಿತ್ರವೊಂದಕ್ಕೆ ನಟಿಸಲು ಇಬ್ಬರೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಚಿತ್ರ ಮುಂದಿನ ವರ್ಷ ರಿಲೀಸ್‌ ಆಗಲಿದೆ. ಇದನ್ನೂ ಓದಿ:‘ಕಾಲನಾಗಿಣಿ’ ಚಿತ್ರದ ಪೋಸ್ಟರ್ ರಿಲೀಸ್ ಮಾಡಿದ ಅಶ್ವಿನಿ ಪುನೀತ್ ರಾಜ್‌ಕುಮಾರ್

    17 ವರ್ಷಗಳ ಹಿಂದೆ ‘ತಶನ್’ ಚಿತ್ರದಲ್ಲಿ (Tashan) ಅಕ್ಷಯ್ ಕುಮಾರ್ ಹಾಗೂ ಸೈಫ್ ಅಲಿ ಖಾನ್ ಜೊತೆಯಾಗಿ ನಟಿಸಿದ್ದರು. ಈ ಚಿತ್ರದಲ್ಲಿ ಕರೀನಾ ಕಪೂರ್, ಅನಿಲ್ ಕಪೂರ್ ಕೂಡ ಬಣ್ಣ ಹಚ್ಚಿದ್ದರು. ವಿಜಯ್ ಕೃಷ್ಣ ಆಚಾರ್ಯ ನಿರ್ದೇಶನ ಹಾಗೂ ಆದಿತ್ಯಾ ಚೋಪ್ರಾ ನಿರ್ಮಾಣ ಮಾಡಿದ್ದರು.

  • ಬಹುನಿರೀಕ್ಷಿತ ‘ಹೌಸ್‌ಫುಲ್ 5’ ಚಿತ್ರದ ಟೀಸರ್ ಔಟ್

    ಬಹುನಿರೀಕ್ಷಿತ ‘ಹೌಸ್‌ಫುಲ್ 5’ ಚಿತ್ರದ ಟೀಸರ್ ಔಟ್

    ಬಾಲಿವುಡ್‌ನ ಬಹುನಿರೀಕ್ಷಿತ ‘ಹೌಸ್‌ಫುಲ್ 5’ ಚಿತ್ರದ (Housefull 5) ಟೀಸರ್ ರಿಲೀಸ್ ಆಗಿದೆ. ಟೀಸರ್‌ನಲ್ಲಿ ಅಕ್ಷಯ್ ಕುಮಾರ್, ರಿತೇಶ್, ಅಭಿಷೇಕ್ ಬಚ್ಚನ್ ಕಾಮಿಡಿ ನೋಡಿ ಪ್ರೇಕ್ಷಕರು ಖುಷಿಪಟ್ಟಿದ್ದಾರೆ. ‘ಹೌಸ್‌ಫುಲ್ 5’ ಟೀಸರ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಇದನ್ನೂ ಓದಿ:ಪ್ರತಿ ಜನ್ಮಕೂ ನೀನೇ ಬೇಕು – ಚಿರು ಜೊತೆಗಿನ ಸ್ಪೆಷಲ್‌ ಫೋಟೋ ಹಂಚಿಕೊಂಡ ಮೇಘನಾ

    ಈ ಹಿಂದಿನ ಹೌಸ್‌ಫುಲ್ 4 ಸಿರೀಸ್‌ಗಳನ್ನು ನೋಡಿ ಪ್ರೇಕ್ಷಕರು ಭೇಷ್ ಎಂದಿದ್ದರು. ಈಗ ‘ಹೌಸ್‌ಫುಲ್ 5’ ಚಿತ್ರದ ರಿಲೀಸ್‌ಗೆ ಸಿದ್ಧವಾಗಿದೆ. ಈ ಹಿನ್ನೆಲೆ ಚಿತ್ರದ ಟೀಸರ್ ರಿಲೀಸ್ ಮಾಡಲಾಗಿದೆ. ಮಲ್ಟಿ ಸ್ಟಾರ್‌ಗಳು ಸಿನಿಮಾದಲ್ಲಿ ನಟಿಸಿದ್ದು, ಟೀಸರ್‌ಗೆ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿದೆ. ಇದನ್ನೂ ಓದಿ: ಮದುವೆ ಬಳಿಕ ಮೊದಲ ಬಾರಿಗೆ ಪತಿಯೊಂದಿಗಿನ ಫೋಟೋ ಹಂಚಿಕೊಂಡ ಗಾಯಕಿ ಪೃಥ್ವಿ ಭಟ್

    ಅಕ್ಷಯ್ ಕುಮಾರ್, ರಿತೇಶ್ ದೇಶಮುಖ್, ಅಭಿಷೇಕ್ ಬಚ್ಚನ್, ಜಾಕ್ವೆಲಿನ್, ಸೋನಮ್ ಬಾಜ್ವಾ, ಫರ್ಧಿನ್ ಖಾನ್, ಶ್ರೇಯಸ್ ತಲ್ಪಡೆ, ಚಂಪಿ ಪಾಂಡೆ, ಜಾನಿ ಲಿವರ್, ಸಂಜಯ್ ದತ್, ಜಾಕಿ ಶ್ರಾಫ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಕೌಟುಂಬಿಕ ಸಿನಿಮಾ ಇದಾಗಿದ್ದು, ಕಾಮಿಡಿ ಜೊತೆ ಕ್ರೈಮ್‌ ಕಥೆಯು ಒಳಗೊಂಡಿದೆ. ಜೂನ್ 6ರಂದು ಸಿನಿಮಾ ರಿಲೀಸ್ ಆಗಲಿದೆ. ತರುಣ್ ಮನ್ಸುಖಾನಿ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.

    ಅಂದಹಾಗೆ, 2010ರಲ್ಲಿ ‘ಹೌಸ್‌ಫುಲ್‌ 1’ ಮೊದಲ ಸರಣಿ ರಿಲೀಸ್‌ ಆಗಿತ್ತು. 5 ಸಿರೀಸ್‌ಗಳಲ್ಲಿ ಈ ಚಿತ್ರ ಬರುವ ಮೂಲಕ 15 ವರ್ಷಗಳಿಂದ ಚಿತ್ರತಂಡ ಪ್ರೇಕ್ಷಕರನ್ನು ರಂಜಿಸುತ್ತಿದೆ. ಹಾಗಾದ್ರೆ ಈ ಬಾರಿಯೂ ‘ಹೌಸ್‌ಫುಲ್‌ 5’ ಚಿತ್ರ ಸಕ್ಸಸ್‌ ಕಾಣುತ್ತಾ? ಎಂದು ಕಾದುನೋಡಬೇಕಿದೆ.

  • ಕಥಕ್ಕಳಿ ವೇಷದಲ್ಲಿ ಅಕ್ಷಯ್ ಕುಮಾರ್- ‘ಕೇಸರಿ 2’ ಚಿತ್ರದ ಪೋಸ್ಟರ್ ಔಟ್

    ಕಥಕ್ಕಳಿ ವೇಷದಲ್ಲಿ ಅಕ್ಷಯ್ ಕುಮಾರ್- ‘ಕೇಸರಿ 2’ ಚಿತ್ರದ ಪೋಸ್ಟರ್ ಔಟ್

    ಬಾಲಿವುಡ್ ನಟ ಅಕ್ಷಯ್ ಕುಮಾರ್ (Akshay Kumar) ಸದಾ ಹೊಸ ಬಗೆಯ ಪಾತ್ರಗಳ ಮೂಲಕ ಗಮನ ಸೆಳೆಯುತ್ತಲೇ ಇರುತ್ತಾರೆ. ಕಥಕ್ಕಳಿ ವೇಷದಲ್ಲಿ ಅಕ್ಷಯ್ ಕಾಣಿಸಿಕೊಂಡಿದ್ದಾರೆ. ‘ಕೇಸರಿ 2’ (Kesari 2) ಸಿನಿಮಾ ಪೋಸ್ಟರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಏಪ್ರಿಲ್ 10ರಂದು ತೆರೆಗಾಣಲು ಸಜ್ಜಾದ ‘ವಿದ್ಯಾಪತಿ’!

    ಕಥಕ್ಕಳಿ ಲುಕ್‌ನಲ್ಲಿರುವ ಫೋಟೋ ಶೇರ್ ಮಾಡಿ ಇದು ಕೇವಲ ಕಾಸ್ಟ್ಯೂಮ್ ಅಲ್ಲ, ನಮ್ಮ ದೇಶದ ಸಂಪ್ರದಾಯದ ಪ್ರತೀಕ ಎಂದು ಅಕ್ಷಯ್ ಕುಮಾರ್ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಏ.22ರಿಂದ ಜ್ಯೂ.ಎನ್‌ಟಿಆರ್, ಪ್ರಶಾಂತ್ ನೀಲ್ ಸಿನಿಮಾದ ಶೂಟಿಂಗ್ ಶುರು

     

    View this post on Instagram

     

    A post shared by Akshay Kumar (@akshaykumar)

    ‘ಕೇಸರಿ 2’ ಚಿತ್ರದಲ್ಲಿ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಕುರಿತು ಚಿತ್ರೀಕರಿಸಿದ್ದಾರೆ. ಇದಕ್ಕಾಗಿ ಸಿ. ಶಂಕರನ್ ನಾಯರ್ ನೇತೃತ್ವದಲ್ಲಿ ನ್ಯಾಯಕ್ಕಾಗಿ ನಡೆದ ಹೋರಾಟದ ಅಸಲಿ ಕಥೆಯನ್ನೇ ಈ ಸಿನಿಮಾದಲ್ಲಿ ತೋರಿಸಲು ಹೊರಟಿದ್ದಾರೆ. ಇದೇ ಏ.18ರಂದು ಸಿನಿಮಾ ರಿಲೀಸ್ ಆಗಲಿದೆ.

     

    View this post on Instagram

     

    A post shared by Akshay Kumar (@akshaykumar)

    ಧರ್ಮ ಸಂಸ್ಥೆ ನಿರ್ಮಾಣದ ಸಿನಿಮಾ ಇದಾಗಿದ್ದು, 2019ರಲ್ಲಿ ತೆರೆಕಂಡ ‘ಕೇಸರಿ’ ಚಿತ್ರದ ಸೀಕ್ವೆಲ್ ಇದಾಗಿದೆ. ಈ ಚಿತ್ರವನ್ನು ಕರಣ್ ಸಿಂಗ್ ತ್ಯಾಗಿ ನಿರ್ದೇಶನ ಮಾಡಿದ್ದಾರೆ. ‘ಕೇಸರಿ 2’ನಲ್ಲಿ ಅಕ್ಷಯ್ ಜೊತೆ ಅನನ್ಯಾ ಪಾಂಡೆ (Ananya Panday), ತಮಿಳು ನಟ ಆರ್. ಮಾಧವನ್ ನಟಿಸಿದ್ದಾರೆ.

  • 3.5 ಕೋಟಿಗೆ ಖರೀದಿಸಿದ್ದ ಅಪಾರ್ಟ್‌ಮೆಂಟ್‌ 6.6 ಕೋಟಿಗೆ ಮಾರಿದ ಅಕ್ಷಯ್ ಕುಮಾರ್

    3.5 ಕೋಟಿಗೆ ಖರೀದಿಸಿದ್ದ ಅಪಾರ್ಟ್‌ಮೆಂಟ್‌ 6.6 ಕೋಟಿಗೆ ಮಾರಿದ ಅಕ್ಷಯ್ ಕುಮಾರ್

    ಬಾಲಿವುಡ್ ನಟ ಅಕ್ಷಯ್ ಕುಮಾರ್ (Akshay Kumar) ಅವರು ಮುಂಬೈನಲ್ಲಿರುವ ಎರಡು ಅಪಾರ್ಟ್‌ಮೆಂಟ್‌ ಅನ್ನು ದುಬಾರಿ ಮೊತ್ತಕ್ಕೆ ಸೇಲ್ ಮಾಡಿದ್ದಾರೆ. 3.5 ಕೋಟಿ ರೂ.ಗೆ ಖರೀದಿಸಿದ್ದ ಅಪಾರ್ಟ್‌ಮೆಂಟ್‌ ಅನ್ನು 6.6 ಕೋಟಿ ರೂ.ಗೆ ಮಾರಾಟ ಮಾಡಿ ಲಾಭ ಗಳಿಸಿದ್ದಾರೆ.

    ಮುಂಬೈನಲ್ಲಿ ಬೊರಿವಲಿಯಲ್ಲಿ ಎರಡು ಅಪಾರ್ಟ್‌ಮೆಂಟ್‌ ಅನ್ನು ಮಾರಾಟ ಮಾಡುವ ಮೂಲಕ 6.6 ಕೋಟಿ ರೂ. ಗಳಿಸಿದ್ದಾರೆ. ಇವುಗಳಲ್ಲಿ ಒಂದು 5.35 ಕೋಟಿ ರೂ.ಗೆ ಮಾರಾಟವಾಗಿದೆ. ಮತ್ತೊಂದು 1.25 ಕೋಟಿ ರೂ.ಗೆ ಸೇಲ್ ಆಗಿದೆ. ಇದನ್ನೂ ಓದಿ:‌’ಸಿಕಂದರ್‌’ ಚಿತ್ರದ ಟ್ರೈಲರ್‌ನಲ್ಲಿ ಮಿಂಚಿದ ಕನ್ನಡಿಗ ಕಿಶೋರ್

    ಮೂಲಗಳ ಪ್ರಕಾರ, 5.35 ಕೋಟಿ ರೂ.ಗೆ ಮಾರಾಟವಾಗಿರೋ ಅಪಾರ್ಟ್‌ಮೆಂಟ್‌ ಅನ್ನು 2017ರ ನವೆಂಬರ್‌ನಲ್ಲಿ 2.82 ಕೋಟಿ ರೂ.ಗೆ ಖರೀದಿಸಿದ್ದರು ಅಕ್ಷಯ್. ಈಗ ಅದರ ಬೆಲೆ 89%ರಷ್ಟು ಹೆಚ್ಚಾಗಿದೆ. ಈ ಅಪಾರ್ಟ್‌ಮೆಂಟ್‌ 1,080 ಚದರ ಅಡಿ ಹೊಂದಿದೆ. ಇದರ ಮುದ್ರಾಂಕ ಶುಲ್ಕ 32.1 ಲಕ್ಷ ರೂ. ಮತ್ತು ನೋಂದಣಿ ಶುಲ್ಕ 30,000 ರೂ. ಆಗಿದೆ.

    ಮತ್ತೊಂದು ಅಪಾರ್ಟ್‌ಮೆಂಟ್‌ 1.25 ಕೋಟಿ ರೂ.ಗೆ ಮಾರಾಟ ಆಗಿದೆ. 2017ರಲ್ಲಿ ಇದನ್ನು 67.19 ಲಕ್ಷ ರೂ.ಗೆ ಖರೀದಿಸಲಾಗಿದೆ. ಈ ಅಪಾರ್ಟ್‌ಮೆಂಟ್‌ 252 ಚದರ ಅಡಿ ಹೊಂದಿದೆ. ಇದರ ಮುದ್ರಾಂಕ ಶುಲ್ಕ 7.5 ಲಕ್ಷ ರೂ. ಮತ್ತು ನೋಂದಣಿ ಶುಲ್ಕ 30,000 ರೂ. ಆಗಿದೆ.

  • ಮಹಾ ಕುಂಭಮೇಳ: ತ್ರಿವೇಣಿಯಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಪುಣ್ಯಸ್ನಾನ

    ಮಹಾ ಕುಂಭಮೇಳ: ತ್ರಿವೇಣಿಯಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಪುಣ್ಯಸ್ನಾನ

    ಪ್ರಯಾಗ್‌ರಾಜ್: 144 ವರ್ಷಗಳ ಬಳಿಕ ಪ್ರಯಾಗ್‌ರಾಜ್‌ನಲ್ಲಿ (Prayagraj) ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ (Maha Kumbh Mela) ಬಾಲಿವುಡ್ ನಟ ಅಕ್ಷಯ್ ಕುಮಾರ್ (Akshay Kumar) ತೆರಳಿ, ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದರು.

    ಮಹಾ ಕುಂಭಮೇಳಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಹಾ ಕುಂಭಮೇಳದಲ್ಲಿ ಒಳ್ಳೆಯ ವ್ಯವಸ್ಥೆ ಮಾಡಲಾಗಿದೆ. ಅದ್ಭುತ ವ್ಯವಸ್ಥೆ ಮಾಡಿದ್ದಕ್ಕಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಧನ್ಯವಾದ ಹೇಳುತ್ತೇನೆ. 2019ರಲ್ಲಿ ನಡೆದ ಕುಂಭ ಮೇಳದಲ್ಲಿ ಜನರು ಸಂಕಷ್ಟ ಅನುಭವಿಸಿದ್ದು ನನಗೆ ನೆನಪಿದೆ. ಈ ಬಾರಿ ಅನೇಕ ಗಣ್ಯರು ಮಹಾ ಕುಂಭಮೇಳಕ್ಕೆ ಭೇಟಿ ನೀಡಿದ್ದಾರೆ. ಅಂಬಾನಿ, ಅದಾನಿ ಕುಟುಂಬದವರು ಹಾಗೂ ಅನೇಕ ದೊಡ್ಡ ದೊಡ್ಡ ನಟರು ಭೇಟಿ ನೀಡಿದ್ದಾರೆ. ಪೊಲೀಸರು ಹಾಗೂ ಸೇವಕರಿಗೆ ಕೈಮಗಿದು ಧನ್ಯವಾದ ಹೇಳುತ್ತಿದ್ದೇನೆ ಎಂದರು. ಇದನ್ನೂ ಓದಿ: ಬೊಜ್ಜು ವಿರುದ್ಧ ಅಭಿಯಾನ – ಒಮರ್ ಅಬ್ದುಲ್ಲಾ, ಆನಂದ್ ಮಹೀಂದ್ರಾ ಸೇರಿ 10 ಗಣ್ಯರ ನಾಮ ನಿರ್ದೇಶನ ಮಾಡಿದ ಮೋದಿ

    ಈ ಮೊದಲು ಮಹಾ ಕುಂಭಮೇಳಕ್ಕೆ ಬಾಲಿವುಡ್‌ನ ಸೊನಾಲಿ ಬೆಂದ್ರೆ, ವಿಕ್ಕಿ ಕೌಶಲ್, ತಮನ್ನ ಭಾಟಿಯಾ, ರಾಜ್‌ಕುಮಾರ್ ರಾವ್, ಹೇಮ ಮಾಲಿನಿ ಹಾಗೂ ಇನ್ನಿತರ ಸ್ಟಾರ್ ನಟರು ಭೇಟಿ ನೀಡಿ, ಪುಣ್ಯಸ್ನಾನ ಮಾಡಿದ್ದರು. ಮಹಾಶಿವರಾತ್ರಿಯಂದು ಮುಕ್ತಾಯಗೊಳ್ಳಲಿರುವ ಮಹಾ ಕುಂಭಮೇಳಕ್ಕೆ ಕೆಲವೇ ದಿನ ಬಾಕಿಯಿರುವಾಗ ನಟ ಅಕ್ಷಯ್ ಕುಮಾರ್ ಭೇಟಿ ನೀಡಿದ್ದಾರೆ. ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿ ವೇಳೆ ವಿದೇಶಿಯರ ಅಪಹರಣಕ್ಕೆ ಇಸ್ಲಾಮಿಕ್ ಸ್ಟೇಟ್ ಸಂಚು – ಪಾಕ್ ಗುಪ್ತಚರ ಸಂಸ್ಥೆ ಎಚ್ಚರಿಕೆ