Tag: ಅಕ್ಷಯ್ ಕುಮರ್

  • ಮೊದಲ ಬಾರಿಗೆ ಮಿಮ್ಸ್ ಬಗ್ಗೆ ಮೋದಿ ಪ್ರತಿಕ್ರಿಯೆ

    ಮೊದಲ ಬಾರಿಗೆ ಮಿಮ್ಸ್ ಬಗ್ಗೆ ಮೋದಿ ಪ್ರತಿಕ್ರಿಯೆ

    ನವದೆಹಲಿ: ಬಾಲಿವುಡ್ ಕಿಲಾಡಿ ನಟ ಅಕ್ಷಯ್ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಂದರ್ಶನ ಮಾಡಿದ್ದಾರೆ. ಈ ಸಂದರ್ಶನ ಇಂದು ಬೆಳಗ್ಗೆ ಪ್ರಸಾರವಾಗಿದ್ದು, ಮೋದಿ ಅವರು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಮಿಮ್ಸ್‍ಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

    ನರೇಂದ್ರ ಮೋದಿ ಅವರು ಮೊದಲ ಬಾರಿಗೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ನಟ ಅಕ್ಷಯ್ ಕುಮಾರ್ ಬಳಿ ಹಂಚಿಕೊಂಡಿದ್ದಾರೆ. ಅಕ್ಷಯ್ ಕುಮಾರ್ ಅವರು ಮೋದಿಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಮಿಮ್ಸ್ ಗಳನ್ನು ತೋರಿಸಿ ಇದರ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸುವಂತೆ ಹೇಳಿದ್ದಾರೆ.

    ಈ ಬಗ್ಗೆ ಮಾತನಾಡಿದ ಮೋದಿ ಅವರು, ನಾನು ಮಿಮ್ಸ್ ಗಳನ್ನು ಸಾಕಷ್ಟು ಎಂಜಾಯ್ ಮಾಡುತ್ತೇನೆ. ನಾನು ಇವುಗಳನ್ನು ನೋಡಿ ನೊಂದುಕೊಳ್ಳುವುದಿಲ್ಲ. ಬದಲಾಗಿ ಇವುಗಳ ಮೂಲಕ ನಾನು ಜನರ ಕ್ರಿಯೆಟಿವಿಟಿಯನ್ನು ನೋಡುತ್ತೇನೆ. ಸಾಮಾಜಿಕ ಜಾಲತಾಣದಿಂದ ಆಗುವ ದೊಡ್ಡ ಲಾಭ ಏನೆಂದರೆ ಸಾಮಾನ್ಯ ಜನರು ನನ್ನ ಬಗ್ಗೆ ಏನೂ ಯೋಚನೆ ಮಾಡುತ್ತಾರೆ ಎಂದು ನಾನು ತಿಳಿದುಕೊಳ್ಳಬಹುದು ಎಂದು ತಿಳಿಸಿದರು.

    ಅಲ್ಲದೆ ನಾನು ಕೆಟ್ಟದರ ಬಗ್ಗೆ ಅಥವಾ ಕೆಟ್ಟ ಜನರ ಬಗ್ಗೆ ಪ್ರತಿಕ್ರಿಯಿಸಲು ಹೋಗುವುದಿಲ್ಲ. ನಾನು ಅವರಿಗೆ ಪ್ರತಿಕ್ರಿಯೆ ನೀಡಿದರೆ ಅವರು ಅಸಹಾಯಕರಾಗಿದ್ದೇನೆ ಎಂಬ ಅನುಭವ ಆಗುತ್ತದೆ. ಹಾಗಾಗಿ ನಾನು ಇದಕ್ಕೆ ಪ್ರತಿಕ್ರಿಯೆ ನೀಡುವುದಕ್ಕೆ ಹೋಗಲ್ಲ ಎಂದು ಮೋದಿ ಸಂದರ್ಶನದಲ್ಲಿ ಹೇಳಿದರು.