Tag: ಅಕ್ಷತಾ ಮೂರ್ತಿ

  • ರಿಷಿ ಸುನಕ್‌ ವಿದಾಯ ಭಾಷಣದ ವೇಳೆ ಗಮನಸೆಳೆದ ಪತ್ನಿ ಅಕ್ಷತಾ ಡ್ರೆಸ್-‌ ಫುಲ್‌ ಟ್ರೋಲ್‌

    ರಿಷಿ ಸುನಕ್‌ ವಿದಾಯ ಭಾಷಣದ ವೇಳೆ ಗಮನಸೆಳೆದ ಪತ್ನಿ ಅಕ್ಷತಾ ಡ್ರೆಸ್-‌ ಫುಲ್‌ ಟ್ರೋಲ್‌

    ಲಂಡನ್:‌ ಮಾಜಿ ಪ್ರಧಾನಿ ರಿಷಿ ಸುನಕ್‌ (Rishi Sunak) ಅವರ ವಿದಾಯ ಭಾಷಣದ ವೇಳೆ ಪತ್ನಿ ಅಕ್ಷತಾ ಮೂರ್ತಿ (Akshata Murthy) ಅವರ ಡ್ರೆಸ್‌ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ. ಅಲ್ಲದೇ ಇದೀಗ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ.

    ಬ್ರಿಟಿಷ್ ಸಾರ್ವತ್ರಿಕ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಬಳಿಕ ರಿಷಿ ಸುನಕ್‌ ಅವರು ಡೌನಿಂಗ್ ಸ್ಟ್ರೀಟ್‌ನಲ್ಲಿರುವ ಪ್ರಧಾನ ಮಂತ್ರಿ ಕಚೇರಿಯ ಹೊರಗೆ ತಮ್ಮ ವಿದಾಯ ಭಾಷಣ ಮಾಡಿದರು. ಈ ವೇಳೆ ಪತ್ನಿ ಅಕ್ಷತಾ ಮೂರ್ತಿಯವರು ಪತಿಯ ಹಿಂದೆ ಶಾಂತವಾಗಿ ನಿಂತು ಭಾಷಣ ಕೇಳುತ್ತಿರುವುದು ಕಂಡುಬಂತು. ಆದರೆ ಅಕ್ಷತಾ ಮೂರ್ತಿ ಪತಿಯ ವಿದಾಯ ಭಾಷಣದ ವೇಳೆ ಧರಿಸಿದ್ದ ಡ್ರೆಸ್ (Akshata Murthy Dress) ಈಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅಕ್ಷತಾ ಅವರ ಈ ಉಡುಗೆ ಸಾಕಷ್ಟು ಟ್ರೋಲ್ ಆಗುತ್ತಿದೆ.

    ಡ್ರೆಸ್‌ ಟ್ರೋಲ್‌ ಯಾಕೆ..?: ಅಕ್ಷತಾ ಅವರು ಕಡು ನೀಲಿ, ಬಿಳಿ ಮತ್ತು ಕೆಂಪು ಬಣ್ಣವಿರುವ ಉಡುಪನ್ನು ಧರಿಸಿದ್ದರು. ಸುನಕ್‌ನ ಭಾಷಣದ ಸಮಯದಲ್ಲಿ ಎಲ್ಲರ ಕಣ್ಣುಗಳು ಅಕ್ಷತಾ ಉಡುಪಿನತ್ತ ವಾಲಿದೆ. ಈ ಡ್ರೆಸ್ ಬೆಲೆ 395 ಪೌಂಡ್ ಅಂದರೆ ಬರೋಬ್ಬರಿ 42 ಸಾವಿರ ರೂಪಾಯಿ ಆಗಿರುತ್ತದೆ. ಹಾಗಾದ್ರೆ ಈ ಡ್ರೆಸ್‌ನಲ್ಲಿ ಏನಿತ್ತು? ಟ್ರೋಲ್‌ಗೆ ಏಕೆ ಕಾರಣವಾಯಿತು? ಎಂಬುದನ್ನು ನೋಡೋದಾದ್ರೆ ವಾಸ್ತವವಾಗಿ ನೀಲಿ, ಬಿಳಿ ಮತ್ತು ಕೆಂಪು ಬಣ್ಣಗಳು ಬ್ರಿಟಿಷ್ ಧ್ವಜವನ್ನು ಹೋಲುತ್ತವೆ. ಇದನ್ನೂ ಓದಿ: UK Elections 2024: ಕ್ಷಮೆ ಕೇಳಿ ಸೋಲಿನ ಹೊಣೆ ಹೊತ್ತುಕೊಂಡ ರಿಷಿ ಸುನಾಕ್‌

    ಅಕ್ಷತಾ ಧರಿಸಿರುವ ಡ್ರೆಸ್‌ ಕೆಂಪು, ನೀಲಿ ಮತ್ತು ಬಿಳಿ ಪಟ್ಟೆಗಳನ್ನು ಹೊಂದಿತ್ತು. ಅವುಗಳು ಟೋರಿ ಧ್ವಜದ (The Tory Flag) ಬಣ್ಣಗಳಾಗಿವೆ. ಹೀಗಿರುವಾಗ ಅಕ್ಷತಾ ಮೂರ್ತಿ ಈ ಡ್ರೆಸ್ ತೊಡುವ ಮೂಲಕ ಟೋರಿಯ ಸದ್ಯದ ಪರಿಸ್ಥಿತಿಯನ್ನು ಬಿಂಬಿಸಿದ್ದಾರೆ ಎಂದು ಅಲ್ಲಿನ ಜನ ಹೇಳುತ್ತಿದ್ದಾರೆ.

    ಸದ್ಯ ಅಕ್ಷತಾ ಡ್ರೆಸ್‌ ಟ್ರೋಲ್‌ ಆಗುತ್ತಿದ್ದು, ಅಕ್ಷತಾ ಮೂರ್ತಿ ಅವರ ಉಡುಗೆ ಸ್ಟೀರಿಯೋಗ್ರಾಮ್ ಆಗಿದೆ ಎಂದು ಓರ್ವ ಬಳಕೆದಾರ ಹೇಳಿದರೆ, ಇನ್ನೊಬ್ಬ ಈ ಡ್ರೆಸ್‌ ಅನ್ನು ತುಂಬಾ ದೂರದಿಂದ ನೀವು ನೋಡಿದರೆ, ʼನೀವು ಕ್ಯಾಲಿಫೋರ್ನಿಯಾಗೆ ಹಾರುತ್ತಿರುವ ವಿಮಾನವನ್ನು ನೋಡುತ್ತೀರಿ’ ಎಂದು ಹೇಳಿದ್ದಾರೆ. ಹೀಗೆ ಹಲವಾರು ಮಂದಿ ಡ್ರೆಸ್‌ ಬಗ್ಗೆ ಟ್ರೋಲ್‌ ಮಾಡುತ್ತಿದ್ದಾರೆ.

  • ಬ್ರಿಟನ್‌ನಲ್ಲಿ ಹಿಂದೂಗಳೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ರಿಷಿ ಸುನಾಕ್‌, ಪತ್ನಿ ಅಕ್ಷತಾ ಮೂರ್ತಿ

    ಬ್ರಿಟನ್‌ನಲ್ಲಿ ಹಿಂದೂಗಳೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ರಿಷಿ ಸುನಾಕ್‌, ಪತ್ನಿ ಅಕ್ಷತಾ ಮೂರ್ತಿ

    ಲಂಡನ್‌: ಬ್ರಿಟನ್‌ ಪ್ರಧಾನ ಮಂತ್ರಿ ಹಾಗೂ ಭಾರತದ ಅಳಿಯ ರಿಷಿ ಸುನಕ್ (Rishi Sunak) ಅವರು ಡೌನಿಂಗ್ ಸ್ಟ್ರೀಟ್‌ಗೆ ಹಿಂದೂ ಸಮುದಾಯದ ಅತಿಥಿಗಳನ್ನು ಸ್ವಾಗತಿಸಿ ದೀಪಾವಳಿ (Diwali) ಹಬ್ಬ ಆಚರಿಸಿದ್ದಾರೆ.

    ಯುಕೆ ಪ್ರಧಾನ ಮಂತ್ರಿ ಕಚೇರಿಯು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ, ಪ್ರಧಾನ ಮಂತ್ರಿ ರಿಷಿ ಸುನಾಕ್ ಅವರು ದೀಪಾವಳಿಗೆ ಹಿನ್ನೆಲೆಯಲ್ಲಿ ಡೌನಿಂಗ್ ಸ್ಟ್ರೀಟ್‌ಗೆ ಹಿಂದೂ ಸಮುದಾಯದ ಅತಿಥಿಗಳನ್ನು ಸ್ವಾಗತಿಸಿದರು. ಇದು ಕತ್ತಲೆಯ ವಿರುದ್ಧ ಬೆಳಕಿನ ವಿಜಯೋತ್ಸವದ ಆಚರಣೆಯಾಗಿದೆ ಎಂದು ಪೋಸ್ಟ್‌ ಮಾಡಿದೆ. ಇದನ್ನೂ ಓದಿ: ಅಮೆರಿಕದಲ್ಲಿ ಚಾಕು ಇರಿತ; 11 ದಿನ ಸಾವು-ಬದುಕಿನ ನಡುವೆ ಹೋರಾಡಿದ್ದ ಭಾರತೀಯ ವಿದ್ಯಾರ್ಥಿ ಕೊನೆಯುಸಿರು

    ಈ ವಾರಾಂತ್ಯದಿಂದ ಯುಕೆ ಮತ್ತು ಪ್ರಪಂಚದಾದ್ಯಂತ ಆಚರಿಸುತ್ತಿರುವ ಎಲ್ಲರಿಗೂ ಶುಭ ದೀಪಾವಳಿ ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ. ಪೋಸ್ಟ್‌ ಜೊತೆ ದೀಪಾವಳಿ ಆಚರಣೆಯ ಫೋಟೊಗಳನ್ನು ಸಹ ಹಂಚಿಕೊಳ್ಳಲಾಗಿದೆ.

    ಬ್ರಿಟನ್‌ ಪ್ರಧಾನಿ ರಿಷಿ ಸುನಾಕ್‌ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ (Akshata Murty) ದೀಪಗಳನ್ನು ಬೆಳಗಿದ್ದಾರೆ. ಅವರೊಟ್ಟಿಗೆ ಭಾರತ ಮೂಲದ ನಾರಿಯರು ಸಹ ದೀಪಾವಳಿ ಆಚರಣೆಯಲ್ಲಿ ಪಾಲ್ಗೊಂಡಿದ್ದರು. ಎಲ್ಲರಿಗೂ ದೀಪಾವಳಿ ಶುಭಾಶಯಗಳು ಎಂದು ಪ್ರಧಾನಿ ಕಚೇರಿ ವಿಶ್‌ ಮಾಡಿದೆ. ಇದನ್ನೂ ಓದಿ: ಸಿರಿಯಾದಲ್ಲಿ ಇರಾನ್‌ ಬೆಂಬಲಿತ ಶಸ್ತ್ರಾಸ್ತ್ರ ಘಟಕಗಳ ಮೇಲೆ ಅಮೆರಿಕ ದಾಳಿ – 9 ಮಂದಿ ಸಾವು

    ದೀಪಾವಳಿಯು ಹಿಂದೂಗಳ ಹಬ್ಬವಾಗಿದೆ. ಇದು ಕತ್ತಲೆಯ ಮೇಲೆ ಬೆಳಕಿನ ಆಧ್ಯಾತ್ಮಿಕ ವಿಜಯವನ್ನು ಸಂಕೇತಿಸುತ್ತದೆ. ಕೇಡಿನ ವಿರುದ್ಧ ಒಳ್ಳೆಯದರ ಜಯ. ಈ ವರ್ಷ ದೀಪಾವಳಿಯನ್ನು ನವೆಂಬರ್ 12 ರಂದು ಆಚರಿಸಲಾಗುತ್ತದೆ.

    ಈಚೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ರಿಷಿ ಸುನಕ್ ಅವರು ತಮ್ಮ ದೂರವಾಣಿ ಸಂಭಾಷಣೆಯಲ್ಲಿ ಮುಕ್ತ ವ್ಯಾಪಾರ ಒಪ್ಪಂದದ ಪ್ರಗತಿ ಬಗ್ಗೆ ಚರ್ಚಿಸಿದ್ದರು. ಭಾರತದಲ್ಲಿ ಈಗ ನಡೆಯುತ್ತಿರುವ ಕ್ರಿಕೆಟ್ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ಉತ್ತಮ ಪ್ರದರ್ಶನಕ್ಕಾಗಿ ಸುನಕ್, ಪ್ರಧಾನಿ ಮೋದಿ ಅವರನ್ನು ಅಭಿನಂದಿಸಿದ್ದಾರೆ.

  • ಪತ್ನಿ ಅಕ್ಷತಾ ಮೂರ್ತಿಯೊಂದಿಗೆ ಅಕ್ಷರಧಾಮ ದೇವಾಲಯಕ್ಕೆ ಬ್ರಿಟನ್ ಪ್ರಧಾನಿ ಭೇಟಿ

    ಪತ್ನಿ ಅಕ್ಷತಾ ಮೂರ್ತಿಯೊಂದಿಗೆ ಅಕ್ಷರಧಾಮ ದೇವಾಲಯಕ್ಕೆ ಬ್ರಿಟನ್ ಪ್ರಧಾನಿ ಭೇಟಿ

    ನವದೆಹಲಿ: ಬ್ರಿಟನ್ ಪ್ರಧಾನಿ ರಿಷಿ ಸುನಕ್ (Rishi Sunak) ಅವರು ಭಾನುವಾರ ಪತ್ನಿ ಅಕ್ಷತಾ ಮೂರ್ತಿಯವರೊಂದಿಗೆ (Akshata Murthy) ದೆಹಲಿಯ ಅಕ್ಷರಧಾಮ ದೇವಾಲಯಕ್ಕೆ (Akshardham Temple)  ಭೇಟಿ ನೀಡಿ ದೇವರ ದರ್ಶನ ಪಡೆದರು.

    ಜಿ20 ಶೃಂಗಸಭೆಯಲ್ಲಿ (G20 Summit) ಭಾಗವಹಿಸುವ ಸಲುವಾಗಿ ರಿಷಿ ಸುನಕ್ ದಂಪತಿ ನವದೆಹಲಿಗೆ (New Delhi) ಆಗಮಿಸಿದ್ದು, ಕೆಲ ವಿಶ್ವ ನಾಯಕರ ಜೊತೆಗೆ ವಿಶ್ವದ ಕೆಲವು ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಬ್ರಿಟನ್ ಪ್ರಧಾನಿಯಾದ ಬಳಿಕ ರಿಷಿ ಸುನಕ್ ಅವರು ಮೊದಲ ಬಾರಿಗೆ ಭಾರತಕ್ಕೆ ಅಧಿಕೃತವಾಗಿ ಭೇಟಿ ನೀಡಿದ್ದಾರೆ. ಇದನ್ನೂ ಓದಿ: G20 Summit: ಮೊದಲ ದಿನದ ಅಧಿವೇಶನಗಳು ಯಶಸ್ವಿ – ಇಂದಿನ ಕಾರ್ಯಕ್ರಮಗಳೇನು?

    ಅಕ್ಷರಧಾಮ ದೇವಾಲಯಕ್ಕೆ ಆಗಮಿಸಿದ ಹಿನ್ನೆಲೆ ದೇವಸ್ಥಾನದ ಸುತ್ತಮುತ್ತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ದೆಹಲಿಗೆ ಆಗಮಿಸಿದ ಸಂದರ್ಭ ರಿಷಿ ಸುನಕ್ ನಾನೊಬ್ಬ ಹೆಮ್ಮೆಯ ಹಿಂದೂ ಎಂದು ಹೇಳಿದ್ದರು. ಅಲ್ಲದೇ ಹಲವು ದೇವಸ್ಥಾನಕ್ಕೆ ಭೇಟಿ ನೀಡುವುದಾಗಿಯೂ ತಿಳಿಸಿದ್ದರು. ಇಷ್ಟು ಮಾತ್ರವಲ್ಲದೇ ತಾವು ದೆಹಲಿಯಲ್ಲಿ ಆಗಾಗ ಭೇಟಿ ನೀಡುತ್ತಿದ್ದ ಕೆಲವು ರೆಸ್ಟೋರೆಂಟ್‌ಗಳಿಗೆ ಭೇಟಿ ನೀಡಲು ಯೋಜನೆ ಹಾಕಿಕೊಂಡಿರುವುದಾಗಿ ಮಾಹಿತಿ ನೀಡಿದ್ದರು. ಇದನ್ನೂ ಓದಿ: ಭಾರತ-ಮಧ್ಯಪ್ರಾಚ್ಯ-ಯುರೋಪ್ ನಡುವೆ ಮೆಗಾ ಕಾರಿಡಾರ್; ಜಿ20 ಶೃಂಗಸಭೆಯಲ್ಲಿ ಬಿಗ್ ಡೀಲ್

    ಸೆಪ್ಟೆಂಬರ್ 9ರಂದು ನಡೆದ ಜಿ20 ಶೃಂಗಸಭೆಯಲ್ಲಿ ಸುನಕ್ ಅವರು ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ವ್ಯಾಪಾರ ಸಂಬಂಧಗಳನ್ನು ಗಟ್ಟಿಗೊಳಿಸಲು ಮತ್ತು ಹೂಡಿಕೆಯನ್ನು ಹೆಚ್ಚಿಸುವ ಮಾರ್ಗಗಳ ಕುರಿತು ಚರ್ಚಿಸಿದರು. ಇದನ್ನೂ ಓದಿ: G20 ಡಿನ್ನರ್‌ಗೆ ಸಿರಿಧಾನ್ಯಗಳ ವೈವಿಧ್ಯತೆ – ಮೆನುವಿನಲ್ಲಿ ಏನೇನಿತ್ತು?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೂಚಿಪುಡಿ ನೃತ್ಯ ಪ್ರದರ್ಶಿಸಿದ ಬ್ರಿಟನ್ ಪ್ರಧಾನಿ ಮಗಳು

    ಕೂಚಿಪುಡಿ ನೃತ್ಯ ಪ್ರದರ್ಶಿಸಿದ ಬ್ರಿಟನ್ ಪ್ರಧಾನಿ ಮಗಳು

    ಲಂಡನ್: ಬ್ರಿಟನ್ ಪ್ರಧಾನಿ ರಿಷಿ ಸುನಾಕ್ (Rishi Sunak) ಅವರ ಪುತ್ರಿ ಅನುಷ್ಕಾ ಸುನಾಕ್ (Anoushka Sunak) ಲಂಡನ್‍ನಲ್ಲಿ (London) ಕೂಚಿಪುಡಿ ( Kuchipudi) ನೃತ್ಯವನ್ನು ಪ್ರದರ್ಶಿಸಿದರು.

    ಲಂಡನ್‍ನಲ್ಲಿ ನಡೆದ ರಂಗ್ – ಇಂಟರ್‌ನ್ಯಾಷನಲ್ ಕೂಚಿಪುಡಿ ಡ್ಯಾನ್ಸ್ ಫೆಸ್ಟಿವಲ್ 2022ರ ಕಾರ್ಯಕ್ರಮದಲ್ಲಿ ಭಾಗಿಯಾಗಿ ಹಲವು ಮಕ್ಕಳೊಂದಿಗೆ ಅನುಷ್ಕಾ ಸುನಾಕ್ (9) ನೃತ್ಯ ಮಾಡಿದ್ದಾರೆ. ಈ ವೇಳೆ ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟಿದ್ದರು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸೇರಿದಂತೆ 4- 85 ವರ್ಷ ವಯಸ್ಸಿನ 100 ಕ್ಕೂ ಅಧಿಕ ಕಲಾವಿದರು ಭಾಗಿಯಾಗಿದ್ದರು.

    ಕಾರ್ಯಕ್ರಮದಲ್ಲಿ ರಿಷಿ ಸುನಾಕ್ ಪತ್ನಿಯಾದ ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಮಗಳು ಅಕ್ಷತಾ ಮೂರ್ತಿ, ರಿಷಿ ಸುನಾಕ್ ಅವರ ಪೋಷಕರು ಕಾರ್ಯಕ್ರಮದಲ್ಲಿ ಹಾಜರಾಗಿದ್ದರು. ಇದನ್ನೂ ಓದಿ: ಭಾರತ್ ಜೋಡೋ ಪಾದಯಾತ್ರೆಯಲ್ಲಿ ಮುಗ್ಗರಿಸಿ ಬಿದ್ದ ದಿಗ್ವಿಜಯ್‌ ಸಿಂಗ್

    ಬ್ರಿಟನ್‍ನ 57ನೇ ಪ್ರಧಾನ ಮಂತ್ರಿಯಾಗಿರುವ ರಿಷಿ ಸುನಾಕ್ ಈ ಹುದ್ದೆಯನ್ನು ಅಲಂಕರಿಸಿದ ಮೊದಲ ಭಾರತೀಯ ಮೂಲದ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 42 ವರ್ಷದ ರಿಷಿ ಸುನಾಕ್ ಬ್ರಿಟನ್‍ನ ಅತ್ಯಂತ ಕಿರಿಯ ಪ್ರಧಾನಿ ಎನಿಸಿಕೊಂಡಿದ್ದಾರೆ. ಅವರು ತಮ್ಮ ಕಚೇರಿಯಲ್ಲಿ ಗಣೇಶನ ಪ್ರತಿಮೆಯನ್ನು ಇಟ್ಟುಕೊಂಡಿದ್ದಾರೆ. ಇದನ್ನೂ ಓದಿ: ರಾಣಿ ಎಲಿಜಬೆತ್ ಸಾವಿಗೆ ವೃದ್ಧಾಪ್ಯವಲ್ಲ, ಕ್ಯಾನ್ಸರ್ ಕಾರಣವಂತೆ!

    Live Tv
    [brid partner=56869869 player=32851 video=960834 autoplay=true]

  • ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಪತ್ನಿ ಜೊತೆಗೆ ದೇವಾಲಯಕ್ಕೆ ರಿಷಿ ಸುನಕ್ ಭೇಟಿ

    ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಪತ್ನಿ ಜೊತೆಗೆ ದೇವಾಲಯಕ್ಕೆ ರಿಷಿ ಸುನಕ್ ಭೇಟಿ

    ನವದೆಹಲಿ: ಬ್ರಿಟನ್ ಪ್ರಧಾನಿ ಅಭ್ಯರ್ಥಿ ರಿಷಿ ಸುನಕ್ ಅವರು ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ತಮ್ಮ ಪತ್ನಿ ಅಕ್ಷತಾ ಮೂರ್ತಿ ಅವರೊಂದಿಗೆ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.

    ದೇವಾಲಯಕ್ಕೆ ಭೇಟಿ ನೀಡಿರುವ ಫೋಟೋಗಳು ರಿಷಿ ಸುನಕ್ ಅವರು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದು, ಶ್ರೀಕೃಷ್ಣನ ಜನ್ಮದಿನವನ್ನು ಆಚರಿಸುವ ಜನಪ್ರಿಯ ಹಿಂದೂ ಹಬ್ಬಕ್ಕೆ ಮುಂಚಿತವಾಗಿ ಜನ್ಮಾಷ್ಟಮಿಯನ್ನು ಆಚರಿಸಲು ನಾನು ಇಂದು ನನ್ನ ಪತ್ನಿ ಅಕ್ಷತಾ ಅವರೊಂದಿಗೆ ಭಕ್ತಿವೇದಾಂತ ಮೇನರ್ ದೇವಾಲಯಕ್ಕೆ ಭೇಟಿ ನೀಡಿದ್ದೇನೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

     

    View this post on Instagram

     

    A post shared by Rishi Sunak (@rishisunakmp)

     

    ಕೃಷ್ಣ ಜನ್ಮಾಷ್ಟಮಿಯು ಹಿಂದೂ ಹಬ್ಬವಾಗಿದ್ದು, ಈ ದಿನದಂದು ಭಗವಾನ್ ಕೃಷ್ಣನ ಜನ್ಮವನ್ನು ಆಚರಿಸಲಾಗುತ್ತದೆ. ಈ ದಿನದಂದು ಭಕ್ತರು ಕೃಷ್ಣನಂತೆ ವೇಷವನ್ನು ಧರಿಸುತ್ತಾರೆ ಮತ್ತು ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ಇಂದು ಹಿಂದೂಗಳಿಗೆ ವಿಶೇಷ ದಿನವಾಗಿದೆ. ಇದನ್ನೂ ಓದಿ: ಸೌದಿಯಲ್ಲಿ ಪತ್ನಿ ಮೋಜು – ತುಮಕೂರಿನಲ್ಲಿ ಮೂವರು ಮಕ್ಕಳೊಂದಿಗೆ ಪತಿ ಆತ್ಮಹತ್ಯೆ

    ರಿಷಿ ಸುನಕ್ ಅವರ ಪತ್ನಿ ಅಕ್ಷತಾ ಮೂರ್ತಿ ಅವರು ಭಾರತೀಯ ಸಾಫ್ಟ್‍ವೇರ್ ಉದ್ಯಮಿ ಎನ್‍ಆರ್ ನಾರಾಯಣ ಮೂರ್ತಿ ಅವರ ಪುತ್ರಿಯಾಗಿದ್ದಾರೆ. ಸ್ಟ್ಯಾನ್‍ಫೋರ್ಡ್ ವಿಶ್ವವಿದ್ಯಾನಿಲಯದಲ್ಲಿ ಎಂಬಿಎ ಓದುತ್ತಿದ್ದಾಗ ಭೇಟಿಯಾದ ಈ ದಂಪತಿ 2006ರಲ್ಲಿ ಬೆಂಗಳೂರಿನಲ್ಲಿ ವಿವಾಹವಾದರು. ಇದನ್ನೂ ಓದಿ: ಟ್ವೀಟ್ ಮಾಡಿದ್ದಕ್ಕೆ ಸೌದಿ ಮಹಿಳೆಗೆ 34 ವರ್ಷ ಜೈಲು ಶಿಕ್ಷೆ

    Live Tv
    [brid partner=56869869 player=32851 video=960834 autoplay=true]