Tag: ಅಕ್ಷತಾ ಪಾಂಡವಪುರ

  • ಅಕ್ಷತಾ ಪಾಂಡವಪುರ ಪ್ರಧಾನ ಪಾತ್ರದಲ್ಲಿ ಮೋಡ ಮಳೆ ಮತ್ತು ಶೈಲ

    ಅಕ್ಷತಾ ಪಾಂಡವಪುರ ಪ್ರಧಾನ ಪಾತ್ರದಲ್ಲಿ ಮೋಡ ಮಳೆ ಮತ್ತು ಶೈಲ

    ಶ್ರೀಕೃಷ್ಣ ಪ್ರೊಡಕ್ಷನ್ ಬ್ಯಾನರ್‌ನ ಅಡಿಯಲ್ಲಿ ಆದರ್ಶ್ ಅಯ್ಯಂಗಾರ್ ನಿರ್ಮಾಣದಲ್ಲಿ ಎರಡನೇ ಪ್ರಯತ್ನವಾಗಿ ಸಿದ್ಧವಾಗುತ್ತಿರುವ ಚಿತ್ರ ‘ಮೋಡ, ಮಳೆ ಮತ್ತು ಶೈಲ’. ವಿಭಿನ್ನ ಪ್ರಯತ್ನದ ‘ತಿಮ್ಮನ ಮೊಟ್ಟೆಗಳು’ ಚಿತ್ರಕ್ಕಾಗಿ ಒಂದಾಗಿದ್ದ ನಿರ್ದೇಶಕ ರಕ್ಷಿತ ತೀರ್ಥಹಳ್ಳಿ ಹಾಗೂ ನಿರ್ಮಾಪಕ ಆದರ್ಶ ಅಯ್ಯಂಗಾರ್ ಇದೀಗ ಮತ್ತೆ ಒಂದಾಗಿ ‘ಮೋಡ, ಮಳೆ ಮತ್ತು ಶೈಲ’ ಚಿತ್ರ ತಯಾರಿಸಿದ್ದಾರೆ. ಇದೊಂದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ಮುಖ್ಯ ಪಾತ್ರದಲ್ಲಿ ಅಕ್ಷತಾ ಪಾಂಡವಪುರ ನಟಿಸಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆ, ಸಂಪತ್ ಮೈತ್ರೇಯ, ಉತ್ಪಲ್ ಗೌಡ, ರಾಘು ರಾಮನಕೊಪ್ಪ, ಬಲರಾಜ್ ವಾಡಿ, ಅಶ್ವಿನ್ ಹಾಸನ ಪ್ರಮುಖ ತಾರಾಬಳಗದಲ್ಲಿದ್ದಾರೆ. ಈಗಾಗಲೇ ಶೂಟಿಂಗ್ ಮುಗಿಸಿಕೊಂಡಿರುವ ಈ ಚಿತ್ರದ ಶೀರ್ಷಿಕೆಯನ್ನು ಇತ್ತೀಚೆಗೆ ಪಿಆರ್‌ಓ ಸುಧೀಂದ್ರ ವೆಂಕಟೇಶ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಚಿತ್ರದ ಬರಹಗಾರ ಮತ್ತು ನಿರ್ದೇಶಕ ರಕ್ಷಿತ ತೀರ್ಥಹಳ್ಳಿ, ‘ಸದ್ಯ ನಮ್ಮ ಚಿತ್ರದ ಶೂಟಿಂಗ್ ಮುಕ್ತಾಯವಾಗಿ ಪೋಸ್ಟ್ ಪ್ರೊಡಕ್ಷನ್ ಕೊನೆಯ ಹಂತದಲ್ಲಿದೆ. ಆದರ್ಶ ಅಯ್ಯಂಗಾರ್ ಅವರಿಗೆ ಕಥೆ ಹೇಳಿದಾಗ ಕಂಟೆಂಟ್ ಸ್ಟ್ರಾಂಗ್ ಆಗಿದೆ ಚಿತ್ರ ಮಾಡೋಣ ಎಂದರು. ಈ ಚಿತ್ರವನ್ನು ಸಂಪೂರ್ಣ ಮಳೆಯಲ್ಲಿಯೇ ಸಿಂಕ್ ಸೌಂಡ್ ನಲ್ಲಿ ಶೂಟ್ ಮಾಡಲಾಗಿದೆ. ಈ ಮೊದಲಿನ ಮೂರು ಚಿತ್ರಗಳನ್ನು ವಿಷಯಗಳ ಮೇಲೆ ಮಾಡಿದ್ದೆ. ಈಗ ಶೈಲ ಕಥೆ ಹೇಳಲು ಹೊರಟಿದ್ದೇನೆ. ಕಲಾವಿದರು ಚೆನ್ನಾಗಿ ನಟಿಸಿದ್ದು, ಇದು ಕಲಾವಿದರ ಸಿನಿಮಾ ಎನ್ನಬಹುದು. ಡ್ರಾಮಾ ಥ್ರಿಲ್ಲರ್ ಜಾನರ್ ಸಿನಿಮಾ ಇದಾಗಿದೆ. ತೀರ್ಥಹಳ್ಳಿ, ಕುಂದಾಪುರ ಗಡಿಭಾಗಗಳ ಸುತ್ತಮುತ್ತ ಶೂಟಿಂಗ್ ಮಾಡಲಾಗಿದೆ. ನಾನು 2012-13ರ ಕಾಲಘಟ್ಟದಲ್ಲಿ ನೋಡಿದ ಹಾಗೂ ಕೇಳಿದ ಒಂದಿಷ್ಟು ಕಥೆ ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೇನೆ’ ಎಂದು ಹೇಳಿದರು.ಇದನ್ನೂ ಓದಿ: ರೂಮರ್ ಬಾಯ್‍ಫ್ರೆಂಡ್ ಜೊತೆ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದ ಸಮಂತಾ!

    ನಂತರ ಚಿತ್ರದ ಪ್ರಮುಖ ಪಾತ್ರಧಾರಿ ಅಕ್ಷತಾ ಪಾಂಡವಪುರ ಮಾತನಾಡಿ, ‘ನಾನಿಲ್ಲಿ ಶೈಲ ಪಾತ್ರ ಮಾಡಿದ್ದೇನೆ. ಮೂಲತಃ ರಂಗಭೂಮಿ ಕಲಾವಿದೆ. ಇಂತಹ ಸಿನಿಮಾ ನನ್ನ ಕೆರಿಯರ್ ನಲ್ಲಿ ಮುಂದೆ ಸಿಗುತ್ತೋ ಇಲ್ವೋ..! ಹಾಗಾಗಿ ನಂಗೆ ಇದು ಸ್ಪೆಷಲ್ ಸಿನಿಮಾ. ಇದರಲ್ಲಿ ನಿರ್ದೇಶಕರು ಮಲೆನಾಡಿನ ಒಂಟಿ ಹೆಣ್ಣಿನ ಕಥೆ ಹೇಳ ಹೊರಟಿದ್ದಾರೆ. ಚಿತ್ರಕ್ಕಾಗಿ ನಿರ್ದೇಶಕರು ತುಂಬಾ ಶ್ರಮ ಪಟ್ಟಿದ್ದಾರೆ. ಇದರಲ್ಲಿ ಮಳೆ ಕೂಡ ಒಂದು ಪ್ರಮುಖ ಪಾತ್ರವಾಗಿ ತೋರಿಸಲಾಗಿದೆ. ನಾನು ಸಿನಿಮಾ ನೋಡಲು ಕಾತುರದಿಂದ ಕಾಯುತ್ತಿದ್ದೇನೆ’ ಎಂದರು. ವೇದಿಕೆಯಲ್ಲಿ ನಟರಾದ ಸಂಪತ್ ಮೈತ್ರೇಯ, ಉತ್ಪಲ್ ಗೌಡ, ಕಣಿವೆ ವಿನಯ್, ಅಶ್ವಿನ್ ಹಾಸನ, ಶ್ರೀಹರ್ಷ ಗೋಭಟ್ ಹಾಗೂ ಸಂಕಲನಕಾರ ಅಕ್ಷಯ ಪಿ. ರಾವ್, ಛಾಯಾಗ್ರಾಹಕ ಸಾಗರ ಹೆಚ್.ಜಿ ತಮ್ಮ ಅನುಭವ ಹಂಚಿಕೊಂಡರು. ಈ ಮೊದಲು ರಕ್ಷಿತ ತೀರ್ಥಹಳ್ಳಿ ‘ಹೊಂಬಣ್ಣ’, ‘ಎಂಥಾ ಕಥೆ ಮಾರಾಯ’, ‘ತಿಮ್ಮನ ಮೊಟ್ಟೆಗಳು’ ಸಿನಿಮಾ ನಿರ್ದೇಶಿಸಿದ್ದು ಇದೀಗ ನಾಲ್ಕನೇ ಪ್ರಯತ್ನವಾಗಿ ‘ಮೋಡ ಮಳೆ ಮತ್ತು ಶೈಲ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

  • ಕಂದೀಲು ತಂಡದಿಂದ ಕೌಮುದಿ: ಅಕ್ಷತಾ ಪಾಂಡವಪುರ ಲೀಡ್‍ ರೋಲ್

    ಕಂದೀಲು ತಂಡದಿಂದ ಕೌಮುದಿ: ಅಕ್ಷತಾ ಪಾಂಡವಪುರ ಲೀಡ್‍ ರೋಲ್

    ‘ಕಂದೀಲು’ ಚಿತ್ರಕ್ಕೆ ಹಲವು ಅಂತರರಾಷ್ಟ್ರೀಯ ಪ್ರಶಸ್ತಿ ಲಭಿಸಿದ್ದು ಸಿನಿಮಾವು ಸದ್ಯದಲ್ಲೆ ಬಿಡುಗಡೆಯಾಗಲಿದೆ. ಈಗ ಇದೇ ತಂಡದಿಂದ  ನಾಗೇಶ್.ಎನ್ ಕಥೆಯನ್ನು ಆಧರಿಸಿರುವ ’ಕೌಮುದಿ’ (Kaumudi) ಚಿತ್ರವೊಂದು ಸೆಟ್ಟೇರಿದೆ. ಹಾರೋಹಳ್ಳಿ ತಾಲ್ಲೋಕಿನ ದಿಂಬದಹಳ್ಳಿಯಲ್ಲಿರುವ ಬಿಸಲಮ್ಮ ದೇವಸ್ಥಾನದಲ್ಲಿ ಸರಳವಾಗಿ ಮುಹೂರ್ತ ಆಚರಿಸಿಕೊಂಡಿತು.  ದೊಡ್ಡ ಮುದುವಾಡಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ದಿವ್ಯ.ಎಸ್  ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಬ್ಲೈಂಡ್ ಬಿಲೀಫ್ ಎಂಬ ಅಡಿಬರಹವು ಇಂಗ್ಲೀಷ್‌ನಲ್ಲಿ ಇರಲಿದೆ. ಸ್ವಸ್ಕಿಕ್ ಎಂಟರ್‌ಟೈನ್‌ಮೆಂಟ್ ಅಡಿಯಲ್ಲಿ ಯಶೋದ ಪ್ರಕಾಶ್ ಕೊಟ್ಟುಕತ್ತೀರ (Yashoda Prakash Kottukattir) ಬಂಡವಾಳ ಹೂಡುವುದರ ಜತೆಗೆ ನಿರ್ದೇಶನ ಮಾಡುತ್ತಿರುವ ಮೂರನೇ ಸಿನಿಮಾ ಇದಾಗಿದೆ. ನಿರ್ಮಾಣ ನಿರ್ವಹಣೆ ಮತ್ತು ಛಾಯಾಗ್ರಹಣ ಜವಬ್ದಾರಿಯನ್ನು ಪಿ.ವಿ.ಆರ್.ಸ್ವಾಮಿ ಗೂಗಾರೆದೊಡ್ಡಿ ವಹಿಸಿಕೊಂಡಿದ್ದಾರೆ.

    ಶಿಕ್ಷಣ ಹಾಗೂ ವೈಜ್ಘಾನಿಕ ಕೊರತೆಯಿಂದಾಗಿ ಮೂಲನಂಬಿಕೆ, ಮೂಡನಂಬಿಕೆಯ ವ್ಯತ್ಯಾಸ ತಿಳಿಯದೆ ಬದುಕಿಗೆ ಅಪಾಯ ತಂದೊಡ್ಡುವ ಸಂಪ್ರದಾಯ, ಆಚರಣೆಗಳ ಸತ್ಯ-ವಾಸ್ತವಗಳ ಸುತ್ತ ಸಿನಿಮಾವು ಬೆಳಕು ಚೆಲ್ಲಲಿದೆ. ಗತಕಾಲದಿಂದ ಇಂದಿನವರೆಗೂ ಗ್ರಾಮೀಣ ಭಾಗದಲ್ಲಿ ಇಂತಹ ಪದ್ದತಿಗಳನ್ನು ಅನುಸರಿಸುತ್ತಿದ್ದಾರೆ. ಕಥಾನಾಯಕಿ ಇದರ ವಿರುದ್ದ ಧ್ವನಿ ಎತ್ತಿ, ಯಾವ ರೀತಿ ಹೋರಾಟ ಮಾಡುತ್ತಾಳೆ ಎಂಬುದನ್ನು ಅರ್ಥಪೂರ್ಣ ಸನ್ನಿವೇಶಗಳ ಮೂಲಕ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ.

    ’ಪಿಂಕಿ ಎಲ್ಲಿ’ ಮತ್ತು ’ಕೋಳಿಎಸ್ರು’ ಚಿತ್ರಗಳ ಖ್ಯಾತಿಯ ಅಕ್ಷತಾ ಪಾಂಡವಪುರ (Akshata Pandavapura) ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇವರೊಂದಿಗೆ ಕುಮಾರಿ ದೀಪಿಕಾ, ಪ್ರತೀಕ, ಅಂಕಿತಾಮೂರ್ತಿ ಉಳಿದಂತೆ ನೀನಾಸಂ ನಟರಾಜ್, ಕಾವೇರಿಶ್ರೀಧರ್, ಪಿ.ಬಿ.ರಾಜುನಾಯಕ, ರೋಹಿಣಿ, ತಾರರಘು, ಬಂಗಾರಶೆಟ್ಟಿ ಮುಂತಾದವರು ಅಭಿನಯಿಸುತ್ತಿದ್ದಾರೆ.

    ಸಂಗೀತ ಶ್ರೀಸುರೇಶ್, ಸಂಭಾಷಣೆ,ಸಂಕಲನ ನಾಗೇಶ್.ಎನ್,  ಚಿತ್ರಕಥೆ ನಾಗೇಶ್.ಎನ್,ಹರೀಶ್.ಎಸ್ ಅವರದಾಗಿದೆ. ದಿಂಬಹಳ್ಳಿ, ಬಾಚಹಳ್ಳಿ ದೊಡ್ಡಿ ಹಾಗೂ ಕನಕಪುರ ಸುತ್ತಮುತ್ತ ಒಂದೇ ಹಂತದಲ್ಲಿ ಚಿತ್ರೀಕರಣವನ್ನು ಸಿಂಕ್ ಸೌಂಡ್‌ದಲ್ಲಿ ಮುಗಿಸಲು ತಂಡವು ಯೋಜನೆ ರೂಪಿಸಿಕೊಂಡಿದೆ.

  • ‘ಪಿಂಕಿ’ಯ ಸೃಷ್ಟಿಕರ್ತ ಪೃಥ್ವಿ ತೆರೆದಿಟ್ಟ ಅಚ್ಚರಿ!

    ‘ಪಿಂಕಿ’ಯ ಸೃಷ್ಟಿಕರ್ತ ಪೃಥ್ವಿ ತೆರೆದಿಟ್ಟ ಅಚ್ಚರಿ!

    ಲ್ಲೆಡೆಯಿಂದಲೂ ಕುತೂಹಲ ಮೂಡಿಸಿರುವ ‘ಪಿಂಕಿ ಎಲ್ಲಿ’ (Pinki Elli) ಚಿತ್ರ ಈ ವಾರ ಅಂದರೆ, ಜೂನ್ 2ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಸಿನಿಮೋತ್ಸವಗಳಲ್ಲಿ ಪ್ರದರ್ಶನಗೊಂಡು ಪ್ರಶಸ್ತಿ ಪಡೆದುಕೊಂಡ ಸಿನಿಮಾಗಳು ಸಾಮಾನ್ಯ ಪ್ರೇಕ್ಷಕರಿಗೆ ತಲುಪುವುದಿಲ್ಲ ಅಂತೊಂದು ಅಪವಾದವಿತ್ತು. ಅದನ್ನು ಒಡೆಯುವಂತೆ ಇದೀಗ ‘ಪಿಂಕಿ ಎಲ್ಲಿ’ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲು ತಯಾರಾಗಿದೆ. ಇದೆಲ್ಲದರ ಹಿಂದಿರುವ ಶಕ್ತಿಯಂಥವರು ನಿರ್ದೇಶಕ ಪೃಥ್ವಿ ಕೋಣನೂರು.

    ಈ ಹಿಂದೆ ‘ರೈಲ್ವೆ ಚಿಲ್ಡ್ರನ್ಸ್’ ಎಂಬ ಚಿತ್ರದ ಮೂಲಕ ವ್ಯಾಪಕವಾಗಿ ಹೆಸರು ಗಳಿಸಿಕೊಂಡಿದ್ದ ಪೃಥ್ವಿ, ಪಿಂಕಿ ಎಲ್ಲಿಚಿತ್ರದ ಮೂಲಕ ತಮ್ಮದು ಭಿನ್ನ ಪಥವೆಂಬುದನ್ನು ಸಾಬೀತುಗೊಳಿಸಿದ್ದಾರೆ. ಈಗಾಗಲೇ ‘ಪಿಂಕಿ ಎಲ್ಲಿ’ಯ ಒಂದಷ್ಟು ಝಲಕ್ಕುಗಳು ಹೊರ ಬಂದಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನಗೊಂಡಿರುವ ಈ ಚಿತ್ರ ಒಂದಷ್ಟು ಪ್ರಶಸ್ತಿಗಳನ್ನೂ ಬಾಚಿಕೊಂಡಿದೆ. ಇದೆಲ್ಲವನ್ನೂ ನೋಡುತ್ತಿದ್ದರೆ, ಇಂಥಾದ್ದೊಂದು ಕಥೆ ಹುಟ್ಟಿಕೊಂಡಿರೋದು ಹೇಗೆಂಬ ಪ್ರಶ್ನೆ ಸಹಜವಾಗಿಯೇ ಮೂಡಿಕೊಳ್ಳುತ್ತೆ. ಅದರ ಬಗ್ಗೆ ಪೃಥ್ವಿ (Pruthvi) ಒಂದಷ್ಟು ಅಚ್ಚರಿಯ ಅಂಶಗಳನ್ನು ತೆರೆದಿಟ್ಟಿದ್ದಾರೆ.

    ಸದಾ ಭಿನ್ನ ಕಥಾನಕಗಳ ಧ್ಯಾನದಲ್ಲಿರುವ ಪೃಥಿ ಅವರೊಳಗೆ ಈ ಕಥೆ ಮೂಡಿಕೊಂಡಿದ್ದದ್ದು ವರ್ಷಾಂತರಗಳ ಹಿಂದೆ. 2007-08ನೇ ಸಾಲಿನಲ್ಲಿ ಒಂದು ಘಟನೆ ಮಾಧ್ಯಮಗಳಲ್ಲಿಯೂ ಸದ್ದು ಮಾಡಿತ್ತು. ಅದರ ಬಗ್ಗೆ ಕೇಳಿ ಜನಸಾಮಾನ್ಯರೂ ಬೆಚ್ಚಿಬಿದ್ದಿದ್ದರು. ಆ ಎಳೆಯಿಟ್ಟುಕೊಂಡೇ ಭಿನ್ನ ಕಥೆಯೊಂದನ್ನು ಸಹಜವಾಗಿ ಸಿದ್ಧಪಡಿಸಲು ಪೃಥ್ವಿ ಮುಂದಾಗಿದ್ದರು. ಆದರೆ ಅದೇನು ಸಲೀಸಿನ ವಿಚಾರವಾಗಿರಲಿಲ್ಲ. ಅದಕ್ಕಾಗಿ ಈ ವ್ಯವಸ್ಥೆಯ ಒಳ ಹೊಕ್ಕು, ರಿಸರ್ಚುಗಳನ್ನು ನಡೆಸಬೇಕಾಗಿತ್ತು. ಅದೆಲ್ಲವನ್ನ ವರ್ಷಗಳ ಕಾಲ ಮಾಡಿದ ಪೃಥ್ವಿ ಕಡೆಗೂ ಕಥೆ ಚಿತ್ರಕಥೆಯೆಲ್ಲವನ್ನೂ ಮುಗಿಸಿಕೊಂಡು ರೆಡಿಯಾಗಿದ್ದರು. ಆಗ ಎದುರಾದ ಪ್ರಶ್ನೆಯೇ ನಿರ್ಮಾಪಕರು ಯಾರು ಎಂದು. ಈ ಬಗ್ಗೆ ಕೃಷ್ಣೇಗೌಡರ ಬಳಿ ಚರ್ಚಿಸಿದಾಗ ಅವರು ಬೇರೇನೂ ಯೋಚಿಸದೆ ತಾವು ಹಣ ಹೂಡುವುದಾಗಿ ಒಪ್ಪಿಕೊಂಡಿದ್ದರಂತೆ. ಆ ನಂತರ ಯಾವುದರಲ್ಲಿಯೂ ಹಸ್ತಕ್ಷೇಪ ಮಾಡದೆ, ಸಿನಿಮಾ ಮೂಡಿ ಬರಲು ಸಹಕರಿಸಿದರು. ಇದನ್ನೂ ಓದಿ:ಮಕ್ಕಳಿಗೆ ಗುಲಾಬಿ ಹೂ, ಚಾಕ್ಲೇಟ್‌ ನೀಡಿ ಸ್ವಾಗತಿಸಿದ ಡಾಲಿ

    ಈ ಚಿತ್ರಕ್ಕೆ ಗ್ರಾಮೀಣ ಭಾಗದ ಪ್ರತಿಭೆಗಳನ್ನು ಹುಡುಕಿ ಅವರಿಗೆ ನಟನೆ ಕಲಿಸಿದ್ದೂ ಒಂದು ಸಾಹಸ. ಗುಂಜಾಲಮ್ಮ, ಸಂಗಮ್ಮ, ಅನಸೂಯ ಮುಂತಾದ ಮಹಿಳೆಯರು ಈ ಚಿತ್ರದಲ್ಲಿ ಮನೋಜ್ಞವಾಗಿ ನಟಿಸಿದ್ದಾರೆ. ‘ಬಿಗ್‌ ಬಾಸ್‌’ (Bigg Boss Kannada) ಖ್ಯಾತಿಯ ಅಕ್ಷತಾ ಪಾಂಡವಪುರ (Akshatha Pandavapura) ಕೂಡಾ ಅಷ್ಟೇ ತೀವ್ರವಾದ ಪಾತ್ರಕ್ಕೆ ಜೀವ ತುಂಬಿದ್ದಾರೆ. ಹೀಗೆ ‘ಪಿಂಕಿ ಎಲ್ಲಿ’ ಮೂಲಕ ಸುದ್ದಿಯಲ್ಲಿರುವ ಪೃಥ್ವಿ ಮೂಲತಃ ಐಟಿ ವಲಯದವರು. ಸಿನಿಮಾದಲ್ಲೇನಾದರೂ ಸಾಧಿಸಬೇಕೆಂಬ ಹಂಬಲದೊಂದಿಗೆ ಬಂದ ಅವರು ಪದೇ ಪದೆ ಭಿನ್ನ ಪ್ರಯತ್ನಗಳ ಮೂಲಕ ಹೆಸರಾಗುತ್ತಿದ್ದಾರೆ. ‘ಪಿಂಕಿ ಎಲ್ಲಿ’ ಚಿತ್ರವಂತೂ ಅವರಿಗೆ ಮತ್ತಷ್ಟು ಹೆಸರು ತಂದು ಕೊಟ್ಟಿದೆ.

  • ಶೀಘ್ರದಲ್ಲೇ ತೆರೆಗೆ ಬರಲಿದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿ ಪಿಂಕಿ ಎಲ್ಲಿ ಚಿತ್ರ

    ಶೀಘ್ರದಲ್ಲೇ ತೆರೆಗೆ ಬರಲಿದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿ ಪಿಂಕಿ ಎಲ್ಲಿ ಚಿತ್ರ

    ಸಿದ್ಧಸೂತ್ರಗಳ ಸರಹದ್ದು ದಾಟಿದ ಚಿತ್ರಗಳು ಕನ್ನಡದಲ್ಲಿ ಆಗಾಗ ಸದ್ದು ಮಾಡುತ್ತವೆ. ಕನ್ನಡ ಚಿತ್ರರಂಗದ ಘನತೆಯನ್ನು ಗಡಿಗಳಾಚೆಗೂ ಎತ್ತಿ ಹಿಡಿದು ಇತಿಹಾಸ ಬರೆಯುತ್ತವೆ. ಆ ಸಾಲಿಗೆ ಇತ್ತೀಚಿನ ಸೇರ್ಪಡೆ `ಪಿಂಕಿ ಎಲ್ಲಿ?’ (Pinki Elli)  ಸಿನಿಮಾ. ಹಲವಾರು ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು, ಪ್ರಶಸ್ತಿಗಳಿಗೆ ಭಾಜನವಾಗಿರುವ ಈ ಚಿತ್ರವೀಗ ಬಿಡುಗಡೆಗೆ ಅಣಿಗೊಂಡಿದೆ. ಬಹುಮುಖ ಪ್ರತಿಭೆಯ ಖ್ಯಾತ ನಿರ್ಮಾಪಕ ಕೃಷ್ಣೇ ಗೌಡ (Krishna Gowda) ನಿರ್ಮಾಣ ಮಾಡಿ, ಪೃಥ್ವಿ ಕೋಣನೂರು (Prithvi Konanur) ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರ ಇದೇ ಜೂನ್ 2ರಂದು ಅದ್ದೂರಿಯಾಗಿ  ರಿಲೀಸ್ ಆಗುತ್ತಿದೆ.

    ಸತ್ಯ ಘಟನೆಯನ್ನಾಧರಿಸಿ ರೂಪುಗೊಂಡಿರುವ ಈ ಸಿನಿಮಾ ಭಿನ್ನ ಧಾಟಿಯದ್ದು. ಕಮರ್ಶಿಯಲ್ ಅಲೆಯ ಅಬ್ಬರದಾಚೆಗೂ ಉಸಿರು ಬಿಗಿ ಹಿಡಿದು ನೋಡುವಂತೆ ಮಾಡುವ, ವಾಸ್ತವಿಕ ನೆಲೆಯಲ್ಲಿಯೇ ಕುತೂಹಲ ನಿಗಿನಿಗಿಸುವಂತೆ ಮಾಡುವ, ಕಣ್ಣಂಚನ್ನು ತೇವಗೊಳಿಸುತ್ತಲೇ ಆಲೋಚನೆಗೆ ಹಚ್ಚುವ ಈ ಸಿನಿಮಾ ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದೆ. ಒಂದು ಮನಸು ಮುರಿದ ದಂಪತಿ ಮತ್ತು ಪುಟ್ಟ ಮಗುವಿನ ಸುತ್ತಾ, ನಾನಾ ಕಾಡುವ ಪಾತ್ರಗಳೊಂದಿಗೆ ಚಲಿಸುವ ಈ ಕಥಾನಕ ಕನ್ನಡದ ಮಟ್ಟಿಗೆ ವಿಭಿನ್ನ ಪ್ರಯತ್ನ. ಇದನ್ನೂ ಓದಿ:RRR ಸಿನಿಮಾದ ಐರಿಶ್ ನಟ ರೇ ಸ್ಟೀವನ್ಸನ್ ನಿಧನ

    ಸಾಮಾನ್ಯವಾಗಿ ಸಿನಿಮೋತ್ಸವಗಳಲ್ಲಿ ಪ್ರದರ್ಶಿತಗೊಂಡ, ಪ್ರಶಸ್ತಿಗಳನ್ನು ಬಾಚಿಕೊಂಡ ಸಿನಿಮಾಗಳು ಕಮರ್ಶಿಯಲ್ ಸಿನಿಮಾಗಳಿಗೆ ಪೈಪೋಟಿ ಕೊಟ್ಟು ಸಿನಿಮಾ ಮಂದಿರಗಳಲ್ಲಿ ಬಿಡುಗಡೆಯಾಗೋದು, ಸಾಮಾನ್ಯ ಪ್ರೇಕ್ಷಕರನ್ನು ತಲುಪೋದು ಅತ್ಯಂತ ಅಪರೂಪ. ಆದರೆ ನಿರ್ಮಾಪಕರಾದ ಕೃಷ್ಣೇಗೌಡ ಅದನ್ನು ಸಾಧ್ಯವಾಗಿಸಿದ್ದಾರೆ. ನಿರ್ದೇಶಕ ಪೃಥ್ವಿ ಕೋಣನೂರರ ಕಲಾವಂತಿಕೆ ಅದಕ್ಕೆ ಸೂಕ್ತ ರೀತಿಯಲ್ಲಿ ಸಾಥ್ ಕೊಟ್ಟಿದೆ. ಈ ಹಿಂದೆ ರೈಲ್ವೆ ಚಿಲ್ಡ್ರನ್ ಎಂಬ ಚೆಂದದ ಚಿತ್ರ ಮಾಡಿ ಗಮನ ಸೆಳೆದಿದ್ದ ಪೃಥ್ವಿ, ಈ ಮೂಲಕ ಮತ್ತೊಂದು ಭಿನ್ನ ಚಿತ್ರದೊಂದಿಗೆ ಅಚ್ಚರಿ ಮೂಡಿಸಿದ್ದಾರೆ.

    ಈ ಸಿನಿಮಾದಲ್ಲಿ ಅತ್ಯಂತ ಸಹಜ ಸ್ಥಿತಿಯಲ್ಲಿ ಕದಲುವ ನಾನಾ ಪಾತ್ರಗಳಿವೆ. ಅದರಲ್ಲಿ ಪ್ರಧಾನ ಪಾತ್ರವನ್ನು ಪ್ರತಿಭಾನ್ವಿತ ರಂಗಭೂಮಿ ಕಲಾವಿದೆ, ನಟಿ ಅಕ್ಷತಾ ಪಾಂಡವಪುರ (Akshata Pandavapur) ನಿಭಾಯಿಸಿದ್ದಾರೆ. ಸವಾಲಿನದ್ದಾದ ಈ ಪಾತ್ರವನ್ನು ಲೀಲಾಜಾಲವಾಗಿ ಆವಾಹಿಸಿಕೊಳ್ಳುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸಿಕೊಂಡಿದ್ದಾರೆ. ಪ್ರಶಸ್ತಿಗೂ ಭಾಜನರಾಗಿದ್ದಾರೆ. ದೀಪಕ್ ಸುಬ್ರಮಣ್ಯ, ಪೃಥ್ವಿ ಕೋಣನೂರು ಮುಂತಾದವರ ತಾರಾಗಣವಿದೆ.

    ಈ ಬಗೆಯ ಚಿತ್ರಗಳು ವ್ಯಾವಹಾರಿಕವಾಗಿ ಗೆಲುವು ಕಾಣೋದು ಕಷ್ಟ ಎಂಬಂಥಾ ವಾತಾವರಣ ಇದುವರೆಗಿತ್ತು. ಆದರೆ ಪಿಂಕಿ ಎಲ್ಲಿ ಚಿತ್ರ ಅದನ್ನು ಸುಳ್ಳಾಗಿಸಿದೆ. ಈಗಾಗಲೇ ಇದರ ರೀಮೇಕ್ ಹಕ್ಕುಗಳಿಗೆ ಬೇಡಿಕೆ ಬರುತ್ತಿದೆ. ಡಬ್ಬಿಂಗ್ ಹಕ್ಕುಗಳಿಗಾಗಿ ಮಾತುಕತೆ ನಡೆಯುತ್ತಿದೆ. ಇದೆಲ್ಲವೂ ಚಿತ್ರತಂಡವನ್ನು ಖುಷಿಗೊಳಿಸಿದೆ. ಇಂಥಾ ನಾನಾ ವಿಶೇಷತೆಗಳನ್ನು ಹೊಂದಿರುವ ಈ ಸಿನಿಮಾ ಇದೇ ಜೂನ್ 2ರಂದು ತೆರೆಗೆ ಬರಲಿದೆ.

  • ಚಂಪಾ ಶೆಟ್ಟಿ ನಿರ್ದೇಶನದ ‘ಕೋಳಿ ಎಸ್ರು’ ಚಿತ್ರಕ್ಕೆ ಅಂತಾರಾಷ್ಟ್ರೀಯ ಗರಿ

    ಚಂಪಾ ಶೆಟ್ಟಿ ನಿರ್ದೇಶನದ ‘ಕೋಳಿ ಎಸ್ರು’ ಚಿತ್ರಕ್ಕೆ ಅಂತಾರಾಷ್ಟ್ರೀಯ ಗರಿ

    ನಾಲ್ಕು ವರ್ಷಗಳ ಹಿಂದೆ ‘ಅಮ್ಮಚ್ಚಿಯೆಂಬ ನೆನಪು’ ಸಿನಿಮಾ ರಾಷ್ಟೀಯ, ಅಂತರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಹಲವಾರು ಪ್ರಶಸ್ತಿಗಳನ್ನು ಪಡೆದಿತ್ತು. ಅಲ್ಲದೆ ಥಿಯೇಟರ್‌ನಲ್ಲಿ ರಿಲೀಸ್ ಕೂಡ ಆಗಿ ಯಶಸ್ವಿ 31 ದಿನಗಳ ಕಾಲ ಪ್ರದರ್ಶನವಾಗಿತ್ತು. ಇದೀಗ ಅದೇ ತಂಡದಿಂದ ‘ಕೋಳಿ ಎಸ್ರು’ ಎಂಬ ವಿಭಿನ್ನ ಸಿನಿಮಾ ಸಿದ್ಧವಾಗಿದೆ. ಈಗಾಗಲೇ ರಾಷ್ಟ್ರೀಯ, ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವೆಲ್‌ಗಳಲ್ಲಿ ಪ್ರದರ್ಶನಗೊಂಡ ‘ಕೋಳಿ ಎಸ್ರು’ (Koli Esru) ಪ್ರಶಂಸೆಯ ಜೊತೆಗೆ ಪ್ರಶಸ್ತಿಗಳನ್ನು ಬಾಚಿಕೊಂಡಿದೆ.

    ಈ ಸಂತಸವನ್ನು ಹಂಚಿಕೊಳ್ಳಲು ಇತ್ತೀಚೆಗೆ ಚಿತ್ರತಂಡ ಮಾಧ್ಯಮಗೋಷ್ಠಿ ಆಯೋಜಿಸಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಚಿತ್ರದ ನಿರ್ದೇಶಕಿ ಚಂಪಾ ಶೆಟ್ಟಿ (Champa Shetty) ‘ನಮ್ಮ ಮೊದಲ ಪ್ರಯತ್ನದ ‘ಅಮ್ಮಚ್ಚಿಯಂಬ ನೆನಪು’ ಚಿತ್ರಕ್ಕೂ ಒಳ್ಳೆ ಪ್ರತಿಕ್ರಿಯೆ ಸಿಕ್ಕಿತ್ತು. ನಂತರ ಮತ್ತೊಂದು ಸಿನಿಮಾ ಮಾಡಲು ಯೋಚನೆ ಮಾಡಿ ಸಾಕಷ್ಟು ಕಥೆಗಳನ್ನು ಹುಡುಕುತ್ತಿದ್ದೆ. ಆಗ ನಾನು ನಟಿಸಿದ್ದ ನಾಟಕದ ಕಥೆಯೊಂದನ್ನು ಆಯ್ಕೆ ಮಾಡಿಕೊಂಡು ಈ ಸಿನಿಮಾ ಮಾಡಲು ಮುಂದಾದೆ. ಈ ಚಿತ್ರವನ್ನು ಕಾ.ತಾ ಚಿಕ್ಕಣ್ಣ ಅವರು ಬರೆದ ‘ಹುಚ್ಚೇರಿಯ ಎಸರಿನ ಪ್ರಸಂಗ’ ಕಥೆಯನ್ನು ಆಧರಿಸಿ ಮಾಡಲಾಗಿದೆ. ಇದು ನಾಟಕವಾಗಿ ಪ್ರದರ್ಶನ ಕಂಡು ಯಶಸ್ವಿಯಾಗಿತ್ತು. 80ರ ದಶಕದ ಈ ಕಥೆ ತೆಗೆದುಕೊಂಡು ಇಂದಿನ ಸಮಾಜಕ್ಕೆ ಒಗ್ಗುವಂತೆ ಮೂಲ ಕತೆಗೆ ಧಕ್ಕೆ ಆಗದಂತೆ ಸಿನಿಮಾ ಮಾಡಲಾಗಿದೆ. ಇದರಲ್ಲಿ ಒಂದು ಹೆಣ್ಣು ಏನೆಲ್ಲಾ ಕಷ್ಟ ಅನುಭವಿಸಿ ಗೆಲ್ಲುತ್ತಾಳೆ ಎಂಬುದನ್ನು ತೋರಿಸಲಾಗಿದೆ. ಹಳ್ಳಿ ಬ್ಯಾಗ್ರೌಂಡ್‌ನಲ್ಲಿ ಚಿತ್ರವಿದ್ದು, ಕಲಾತ್ಮಕವಾಗಿ ಮಾಡಲಾಗಿದೆ. ಇದೀಗ ಈ ಸಿನಿಮಾ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿರುವುದು ಖುಷಿ ಇದೆ. ಈ ಚಿತ್ರ ನಿರ್ಮಾಣಕ್ಕೆ ಮುನಿವೆಕಟಪ್ಪನವರು ಸೇರಿದಂತೆ ಸಾಕಷ್ಟು ಜನ ಕೈ ಜೋಡಿಸಿದ್ದಾರೆ’ ಎಂದು ಹೇಳಿದರು. ಇದನ್ನೂ ಓದಿ:ಆದಿಲ್ ಖಾನ್ ಜೊತೆ ಮದುವೆಯಾದ ಬೆನ್ನಲ್ಲೇ ರಾಖಿ ಸಾವಂತ್ ಬಂಧನ

    ವೇದಿಕೆಯಲ್ಲಿ ಕಥೆಗಾರ ಕಾ.ತಾ ಚಿಕ್ಕಣ್ಣ ‘ಕಥೆಯಲ್ಲಿ ಹಳ್ಳಿಯ ಹೆಣ್ಣು ಮಗಳೊಬ್ಬಳು ಬಡತನದಿಂದ ಊರಲ್ಲಿ ಯಾರ ಮನೆಯಲ್ಲಿ ಕೋಳಿ ಸಾರ್ ಮಾಡಿದರೂ, ಎಸರಿಗಾಗಿ ಕಾಯ್ದು ತೆಗೆದುಕೊಂಡು ಬರುತ್ತಿರುತ್ತಾಳೆ. ತನ್ನ ದಾರಿಯಲ್ಲಿಯೇ ಮಗಳು ಕೂಡ ಸಾಗುತ್ತಿರುವುದನ್ನು ಕಂಡು ಹೇಗೆ ಬದಲಾದಳು ಎಂಬ ಕತೆ ಇದೆ. ಮೂಲ ಕತೆಗೆ ಧಕ್ಕೆ ಆಗದಂತೆ ಚಂಪಾ ಸುಂದರವಾಗಿ ಸಿನಿಮಾ ಮಾಡಿದ್ದು, ಇಂದು ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿದೆ. ಅದರಲ್ಲೂ ಈ ಕತೆ ನಾಟಕವಾಗಿ ಪ್ರದರ್ಶನ ಕಂಡಾಗ ಹುಚ್ಚೇರಿ ಪಾತ್ರಕ್ಕೆ ಪ್ರಶಸ್ತಿ ಬಂದಿತ್ತು. ಈಗ ಚಿತ್ರದಲ್ಲೂ ಆ ಪಾತ್ರಕ್ಕೆ ಪ್ರಶಸ್ತಿ ಬಂದಿರುವುದು ತುಂಬಾ ಖುಷಿ ಕೊಟ್ಟಿದೆ’ ಎಂದರು.

    ಅಂದಂಗೆ ‘ಕೋಳಿ ಎಸ್ರು’ ಸಿನಿಮಾ ಈಗಾಗಲೇ ‘ನ್ಯೂಯಾರ್ಕ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್’ಗೆ ಆಯ್ಕೆಯಾಗಿ ಯಶಸ್ವಿ ಪ್ರದರ್ಶನ ಕಂಡಿದೆ. ಇತ್ತೀಚೆಗೆ ಔರಂಗಾಬಾದ್‌ನಲ್ಲಿ ನಡೆದ ಪ್ರತಿಷ್ಠಿತ ‘ಅಜಂತಾ ಎಲ್ಲೋರ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’ದಲ್ಲಿ ಆಯ್ಕೆಯಾಗಿ ಪ್ರದರ್ಶನಗೊಂಡು ಪ್ರೇಕ್ಷಕರ ಮೆಚ್ಚುಗೆ ಪಡೆದಿದೆ. ಅಲ್ಲದೆ ಇಂಡಿಯನ್ ಕಾಂಪಿಟೇಷನ್ ಸ್ಪರ್ಧೆಯಲ್ಲಿ ಇನ್ನುಳಿದ ಎಂಟು ಚಿತ್ರಗಳೊಂದಿಗೆ ಸ್ಪರ್ಧಿಸಿ ಎರಡು ಪ್ರಶಸ್ತಿಗಳನ್ನು ‘ಕೋಳಿ ಎಸ್ರು’ ಬಾಚಿಕೊಂಡಿದೆ.  ಔರಂಗಾಬಾದ್ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಚಿತ್ರದ ನಾಯಕಿ ಅಕ್ಷತಾ ಪಾಂಡವಪುರ ಮತ್ತು ತೀರ್ಪುಗಾರರ ವಿಶೇಷ ಪ್ರಶಸ್ತಿಯನ್ನು ಬಾಲ ನಟಿ ಅಪೇಕ್ಷಾ ಚೋರನಹಳ್ಳಿ ಪಡೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ಸೇರಿದಂತೆ ಸಾಕಷ್ಟು ಚಿತ್ರೋತ್ಸಗಳಿಗೆ ಸಿನಿಮಾವನ್ನು ಕಳಿಸುವ ಜೊತೆಗೆ ಥಿಯೇಟರ್‌ನಲ್ಲಿ ಸಿನಿಮಾ ಬಿಡುಗಡೆ ಮಾಡುವುದಕ್ಕೆ ತಂಡ ತಯಾರಿ ನಡೆಸಿದೆ. ಪತ್ರಿಕಾಗೋಷ್ಠಿಯಲ್ಲಿ ನಟಿ ಅಕ್ಷತಾ ಪಾಂಡವಪುರ (Akshata Pandavapura) ಹಾಗೂ ಚಿತ್ರದ ಸಂಕಲನಕಾರ ಹರೀಶ್ ತಮ್ಮ ಅನುಭವ ಹಂಚಿಕೊಂಡರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅಕ್ಷತಾ ಪಾಂಡವಪುರಗೆ ನ್ಯೂಯಾರ್ಕ್ ಇಂಡಿಯನ್ ಫಿಲ್ಮ್ ಪ್ರಶಸ್ತಿ

    ಅಕ್ಷತಾ ಪಾಂಡವಪುರಗೆ ನ್ಯೂಯಾರ್ಕ್ ಇಂಡಿಯನ್ ಫಿಲ್ಮ್ ಪ್ರಶಸ್ತಿ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ, ರಂಗಭೂಮಿ ಕಲಾವಿದೆ ಅಕ್ಷತಾ ಪಾಂಡವಪುರ ಅವರಿಗೆ ಪ್ರತಿಷ್ಠಿತ ನ್ಯೂಯಾರ್ಕ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್ (ಎನ್‍ವೈಐಎಫ್‍ಎಫ್)ನಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ.

    ಪಿಂಕಿ ಎಲ್ಲಿ? ಚಿತ್ರದಲ್ಲಿನ ನಟನೆಗಾಗಿ ಅಕ್ಷತಾ ಈ ಪ್ರಶಸ್ತಿ ಪಡೆದಿದ್ದಾರೆ. ಇದೇ ಸಿನಿಮಾಕ್ಕೆ ಚಿತ್ರಕತೆ ಬರೆದ ಕನ್ನಡದ ಚಿತ್ರ ನಿರ್ದೇಶಕ ಪೃಥ್ವಿ ಕೋಣನೂರ್ ಅವರಿಗೆ ಅತ್ಯುತ್ತಮ ಚಿತ್ರಕತೆ ಪ್ರಶಸ್ತಿ ಲಭಿಸಿದೆ. ಇದನ್ನೂ ಓದಿ:  ಹೋಟೆಲ್‍ನಲ್ಲಿ ಕೆಲಸ ಮಾಡಿ ತಮ್ಮನ ಓದಿಗೆ ಸಹಾಯ ಮಾಡಿದ್ದ ವಿಜಯ್

    ಜೂನ್ 4ರಿಂದ 13ರವರೆಗೆ ವರ್ಚುವಲ್ ಮಾಧ್ಯಮದಲ್ಲಿ 2021ನೇ ಸಾಲಿನ ಎನ್‍ವೈಐಎಫ್‍ಎಫ್ ನಡೆಯಿತು. ಪ್ರಶಸ್ತಿ ವಿಜೇತರಿಗೆ ಆನ್‍ಲೈನ್‍ನಲ್ಲೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ವೇಳೆ ಅಕ್ಷತಾ ಹಾಗೂ ಪೃಥ್ವಿ ಅವರು ಕ್ರಮವಾಗಿ ಅತ್ಯುತ್ತಮ ನಟಿ ಹಾಗೂ ಅತ್ಯುತ್ತಮ ಚಿತ್ರಕತೆ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು. ಅಮೆರಿಕದಲ್ಲಿ ಭಾರತೀಯ ಸಿನಿಮಾಗಳಿಗೆ ವೇದಿಕೆ ಕಲ್ಪಿಸುವ ಚಿತ್ರೋತ್ಸವ ಇದಾಗಿದ್ದು, ಇಂಡೋ-ಅಮೆರಿಕನ್ ಆಟ್ರ್ಸ್ ಕೌನ್ಸಿಲ್ (ಐಎಎಸಿ) ಇದನ್ನು ಏರ್ಪಡಿಸುತ್ತದೆ.  ಇದನ್ನೂ ಓದಿ: ಸಿನಿಮಾ ಆಗಲಿದೆ ರೋಹಿಣಿ ಸಿಂಧೂರಿ ಜೀವನ ಕಥೆ

     

    ಚಿತ್ರೋತ್ಸವದಲ್ಲಿ ಮಹಾತ್ಮ ಗಾಂಧಿ ಕುರಿತಾದ ಸೇವಾ ಸಾಕ್ಷ್ಯಚಿತ್ರಕ್ಕೆ ಅತ್ಯುತ್ತಮ ಸಾಕ್ಷ್ಯಚಿತ್ರ ಪ್ರಶಸ್ತಿ, ಲಾಕ್‍ಡೌನ್ ವೇಳೆ ವಿವಾಹಿತ ಮಹಿಳೆಯ ಮನಸ್ಥಿತಿಯನ್ನು ಕಟ್ಟಿಕೊಡುವ ಬಂಗಾಳಿ ಕಿರುಚಿತ್ರ ತಶೇರ್ ಗಾವ್‍ಗೆ ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿ, ನಾಸಿರ್‍ಗೆ ಅತ್ಯುತ್ತಮ ಚಿತ್ರ ಪ್ರಶಸ್ತಿ, ಜೂನ್ ಸಿನಿಮಾದಲ್ಲಿನ ನಟನೆಗಾಗಿ ಸಿದ್ಧಾರ್ಥ ಮೆನನ್‍ಗೆ ಅತ್ಯುತ್ತಮ ನಟ ಪ್ರಶಸ್ತಿ, ಫೈರ್ ಇನ್ ದಿ ಮೌಂಟೇನ್ಸ್ ಚಿತ್ರಕ್ಕಾಗಿ ಅಜಿತ್ ಪಾಲ್‍ಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಲಭಿಸಿವೆ.

    ಪ್ರಸ್ತುತ ಕರ್ನಾಟಕದಲ್ಲಿ ಚರ್ಚೆಯಲ್ಲಿರುವ ಐಎಎಸ್ ಅಧಿಕಾರಿ ಹಾಗೂ ನಿರ್ಗಮಿತ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಜೀವನ ಕಥೆ ಸಿನಿಮಾವಾಗಲಿದೆ. ಈ ಸಿನಿಮಾದಲ್ಲಿನಟಿಯಾಗಿ ರಂಗಭೂಮಿ ಕಲಾವಿದೆ ಹಾಗೂ ಬಿಗ್ ಬಾಸ್ ಖ್ಯಾತಿಯ ಅಕ್ಷತಾ ಪಾಂಡವಪುರ ಅವರು ರೋಹಿಣಿ ಸಿಂಧೂರಿ ಪಾತ್ರವನ್ನು ನಿರ್ವಹಿಸಲಿದ್ದಾರೆ

  • ಸಿನಿಮಾ ಆಗಲಿದೆ ರೋಹಿಣಿ ಸಿಂಧೂರಿ ಜೀವನ ಕಥೆ

    ಸಿನಿಮಾ ಆಗಲಿದೆ ರೋಹಿಣಿ ಸಿಂಧೂರಿ ಜೀವನ ಕಥೆ

    ಮಂಡ್ಯ: ಪ್ರಸ್ತುತ ಕರ್ನಾಟಕದಲ್ಲಿ ಚರ್ಚೆಯಲ್ಲಿರುವ ಐಎಎಸ್ ಅಧಿಕಾರಿ ಹಾಗೂ ನಿರ್ಗಮಿತ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಜೀವನ ಕಥೆ ಸಿನಿಮಾವಾಗಲಿದೆ. ಇದನ್ನು ಓದಿ:ರಶ್ಮಿಕಾ ಬಗ್ಗೆ ಕಮೆಂಟ್ ಮಾಡಿದವರ ಚಳಿ ಬಿಡಿಸಿದ ರಕ್ಷಿತ್ ಶೆಟ್ಟಿ

    ಮಂಡ್ಯ ನಗರದ ಸ್ವರ್ಣಸಂದ್ರ ಬಡಾವಣೆಯ ಸಾಹಿತಿ ಕೃಷ್ಣ ಸ್ವರ್ಣಸಂದ್ರ ಅವರು ರೋಹಿಣಿ ಸಿಂಧೂರಿ ಅವರ ಬಯೋಪಿಕ್‍ನ್ನು ಸಿನಿಮಾ ಮಾಡಲು ಶ್ರೀ ರಾಜರ್ಷಿ ನಾಲ್ವಡಿ ಕೃಷ್ಣರಾಜ ಫಿಲಂಸ್ ಬ್ಯಾನರ್ ಅಡಿ 2020 ಜೂನ್ 15 ರಂದು ಭಾರತ ಸಿಂಧೂರಿ ಎಂಬ ಟೈಟಲ್‍ನ್ನು ರಿಜಿಸ್ಟರ್ ಮಾಡಿಸಿದ್ದಾರೆ.

    ಈ ಸಿನಿಮಾದಲ್ಲಿ ರೋಹಿಣಿ ಸಿಂಧೂರಿ ಅವರು ಆರಂಭದಲ್ಲಿ ಮಂಡ್ಯದ ಸಿಇಓ ಆಗಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಮಾಡಿದ್ದ ಕೆಲಸ ಹಾಗೂ ಸಾಧನೆ ಮತ್ತು ಹಾಸನ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಆಗಿದ್ದ ಸಂದರ್ಭಗಳು ಅಲ್ಲದೇ, ಸದ್ಯ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ವೇಳೆ ನಡೆದ ಬೆಳವಣಿಗೆಗಳನ್ನು ಈ ಚಿತ್ರ ಕಥೆಯಲ್ಲಿ ಹೆಣೆಯಲಾಗಿದೆ. ಅಲ್ಲದೇ ಅವರು ಬೆಳೆದು ಬಂದ ಹಾದಿಯನ್ನು ಸಹ ಚಿತ್ರಕಥೆಯಲ್ಲಿ ಸೇರಿಸಲಾಗಿದೆ.

    2020ರಲ್ಲೇ ಈ ಸಿನಿಮಾದ ಹೆಸರನ್ನು ರಿಜಿಸ್ಟರ್ ಮಾಡಿಸಲಾಗಿದ್ದು ಕಥೆ, ಚಿತ್ರಕಥೆ, ಸಾಹಿತ್ಯ, ರಚನೆ, ನಿರ್ದೇಶನದ ಜವಾಬ್ದಾರಿಯನ್ನು ಕೃಷ್ಣ ಸ್ವರ್ಣಸಂದ್ರ ಅವರೇ ಹೊತ್ತಿದ್ದಾರೆ. ಇನ್ನೂ ನಟಿಯಾಗಿ ರಂಗಭೂಮಿ ಕಲಾವಿದೆ ಹಾಗೂ ಬಿಗ್ ಬಾಸ್ ಖ್ಯಾತಿಯ ಅಕ್ಷತಾ ಪಾಂಡವಪುರ ಅವರಿಗೆ ನೀಡಲಾಗಿದೆ. ಇನ್ನೂ ಎರಡು ಮೂರು ತಿಂಗಳಿನಲ್ಲಿ ಈ ಚಿತ್ರ ಸೆಟ್ಟರಲಿದೆ ಎಂದು ಕೃಷ್ಣ ಸ್ವರ್ಣಸಂದ್ರರವರು ಹೇಳಿದ್ದಾರೆ. ಇದನ್ನು ಓದಿ: ಕೊರೊನಾ ವಾರಿಯರ್​​​ಗಳಿಗೆ ಆಹಾರ ಕಿಟ್ ವಿತರಿಸಿದ ನಿಖಿಲ್ ಕುಮಾರಸ್ವಾಮಿ

  • ಹೆಣ್ಣು ಮಗುವಿನ ತಾಯಿಯಾದ ಅಕ್ಷತಾ ಪಾಂಡವಪುರ

    ಹೆಣ್ಣು ಮಗುವಿನ ತಾಯಿಯಾದ ಅಕ್ಷತಾ ಪಾಂಡವಪುರ

    ಬೆಂಗಳೂರು: ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದ ಬಿಗ್‍ಬಾಸ್ ಸ್ಪರ್ಧಿ, ರಂಗಭೂಮಿ ಕಲಾವಿದೆ ಅಕ್ಷತಾ ಪಾಂಡವಪುರ ಅವರಿಗೆ ಹೆಣ್ಣು ಮಗುವಿನ ಜನನವಾಗಿದೆ.

    ಈ ವಿಚಾರವನ್ನು ಸ್ವತಃ ಅಕ್ಷತಾ ಅವರೇ ತಮ್ಮ ಇನ್‍ಸ್ಟಾ ಖಾತೆಯಲ್ಲಿ ಈ ಸಿಹಿಸುದ್ದಿಯನ್ನು ಹಂಚಿಕೊಂಡಿದ್ದಾರೆ. ಜನವರಿ 15ರಂದು ಇನ್ ಸ್ಟಾದಲ್ಲಿ ಗರ್ಭಿಣಿಯಾಗಿದ್ದ ಫೋಟೋ ಹಂಚಿಕೊಂಡು, ಆ ಫೋಟೋದ ಮೇಲೆ ಲಕ್ಷ್ಮಿ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಮಗಳು.. ಥ್ಯಾಂಕ್ಯೂ ಗಾಡ್ ಹೆಣ್ಣು ಮಗು ಎಂದು ಕ್ಯಾಪ್ಷನ್ ಕೂಡ ನೀಡಿದ್ದಾರೆ. ಮೂಲಕ ಹುಟ್ಟಿದ ಮಗು ಎಂದು ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ.

    ಈ ಹಿಂದೆ ತಾವು ಗರ್ಭಿಣಿಯಾಗಿರುವ ವಿಚಾರವನ್ನು ಕೂಡ ಅಕ್ಷತಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಬದುಕೆಂಬ ಪುಸ್ತಕದಲ್ಲಿ ಮುಂದಿನ ಅಧ್ಯಾಯಕ್ಕೆ ಕೆಲವೇ ದಿನಗಳು ಬಾಕಿ. ಹೊಸವರ್ಷ ಹೊಸಬೆಳಕಿನ ನಿರೀಕ್ಷೆಯಲ್ಲಿದ್ದೇವೆ. ಈ ವಿಸ್ಮಯ ಜಗತ್ತಿನಲ್ಲಿ ಮತ್ತೊಂದು ವಿಸ್ಮಯ ಅಂದ್ರೆ ಮತ್ತೆಂದೂ ಬಾರದ ಈ ಘಳಿಗೆ…ಇನ್ನೂ ಜನವರಿ 2021ಕ್ಕೆ ಮತ್ತೊಂದು ವಿಶೇಷ ಘಳಿಗೆಯ ನಿರೀಕ್ಷೆಯಲ್ಲಿರೋದಾಗಿ ಅಕ್ಷತಾ ತಮ್ಮ ಎಫ್‍ಬಿಯಲ್ಲಿ ಬರೆದುಕೊಂಡಿದ್ದರು.

    ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಅಕ್ಷತಾ ಫೋಟೋಶೂಟ್ ಸಹ ಮಾಡಿಸಿಕೊಂಡಿದ್ದು, ಜನವರಿಯಲ್ಲಿ ಮಗುವಿನ ಆಗಮನವಾಗಲಿದೆ ಎಂದು ತಿಳಿಸಿದ್ದರು. ಕೆಂಪು-ಹಳದಿ ಬಾರ್ಡರಿನ ಕಪ್ಪು ಬಣ್ಣದ ಸೀರೆ ತೊಟ್ಟು, ದೊಡ್ಡ ಕತ್ತಿನ ಸರ ಮತ್ತು ಮೂಗುತಿ ತೊಟ್ಟು ಅಕ್ಷತಾ ಫೋಟೋಶೂಟ್ ಮಾಡಿಸಿಕೊಂಡಿದ್ದರು. ಅಕ್ಷತಾ ಪಾಂಡವಪುರ ಕನ್ನಡ ಬಿಗ್‍ಬಾಸ್ ಆರನೇ ಆವೃತ್ತಿಯಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು.

    ಅಕ್ಷತಾ ಪತಿ ಪ್ರಸನ್ ಸಾಗರ್ ನಿರ್ದೇಶಕರಾಗಿದ್ದಾರೆ. ಪ್ರಸನ್ನ್ ಶಿವಮೊಗ್ಗ ಜಿಲ್ಲೆಯ ಸಾಗರ್ ಮೂಲದವರಾಗಿದ್ದು, ಅಕ್ಷತಾರನ್ನ ಪ್ರೀತಿಸಿ ಮದುವೆ ಆಗಿದ್ದಾರೆ. ಎಂಟು ವರ್ಷಗಳ ಹಿಂದೆ ಗುರು-ಹಿರಿಯರ ಸಮ್ಮುಖದಲ್ಲಿ ಅಕ್ಷತಾ- ಪ್ರಸನ್ನ ಮದುವೆ ನಡೆದಿತ್ತು.

  • ಹೊಸ ವರ್ಷ, ಹೊಸ ಬೆಳಕಿನ ನಿರೀಕ್ಷೆಯಲ್ಲಿ ಅಕ್ಷತಾ ಪಾಂಡವಪುರ

    ಹೊಸ ವರ್ಷ, ಹೊಸ ಬೆಳಕಿನ ನಿರೀಕ್ಷೆಯಲ್ಲಿ ಅಕ್ಷತಾ ಪಾಂಡವಪುರ

    ಬೆಂಗಳೂರು: ಬಿಗ್‍ಬಾಸ್ ಸ್ಪರ್ಧಿ, ರಂಗಭೂಮಿ ಕಲಾವಿದೆ ಅಕ್ಷತಾ ಪಾಂಡವಪುರ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸಂತಸದ ಸುದ್ದಿಯನ್ನ ಸೋಶಿಯಲ್ ಮೀಡಿಯಾ ಮುಖಾಂತರ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

    ಹೊಸ ಬೆಳಕಿನ ನಿರೀಕ್ಷೆ: ಬದುಕೆಂಬ ಪುಸ್ತಕದಲ್ಲಿ ಮುಂದಿನ ಅಧ್ಯಾಯಕ್ಕೆ ಕೆಲವೇದಿನಗಳು ಬಾಕಿ.ಹೊಸವರ್ಷ ಹೊಸಬೆಳಕಿನ ನಿರೀಕ್ಷೆಯಲ್ಲಿದ್ದೇವೆ. ಈ ವಿಸ್ಮಯ ಜಗತ್ತಿನಲ್ಲಿ ಮತ್ತೊಂದು ವಿಸ್ಮಯ ಅಂದ್ರೆ ಮತ್ತೆಂದೂ ಬಾರದ ಈ ಘಳಿಗೆ…ಇನ್ನೂ ಜನವರಿ 2021ಕ್ಕೆ ಮತ್ತೊಂದು ವಿಶೇಷ ಘಳಿಗೆಯ ನಿರೀಕ್ಷೆಯಲ್ಲಿರೋದಾಗಿ ಅಕ್ಷತಾ ತಮ್ಮ ಎಫ್‍ಬಿಯಲ್ಲಿ ಬರೆದುಕೊಂಡಿದ್ದಾರೆ.

    ಗರ್ಭಿಣಿಯಾಗಿರುವ ಅಕ್ಷತಾ ಫೋಟೋಶೂಟ್ ಸಹ ಮಾಡಿಸಿಕೊಂಡಿದ್ದು, ಜನವರಿಯಲ್ಲಿ ಮಗುವಿನ ಆಗಮನವಾಗಲಿದೆ ಎಂದು ತಿಳಿಸಿದ್ದಾರೆ. ಕೆಂಪು-ಹಳದಿ ಬಾರ್ಡರಿನ ಕಪ್ಪು ಬಣ್ಣದ ಸೀರೆ ತೊಟ್ಟು, ದೊಡ್ಡ ಕತ್ತಿನ ಸರ ಮತ್ತು ಮೂಗುತಿ ತೊಟ್ಟು ಅಕ್ಷತಾ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಅಕ್ಷತಾ ಪಾಂಡವಪುರ ಕನ್ನಡ ಬಿಗ್‍ಬಾಸ್ ಆರನೇ ಆವೃತ್ತಿಯಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು.

    ಅಕ್ಷತಾ ಪತಿ ಪ್ರಸನ್ ಸಾಗರ್ ನಿರ್ದೇಶಕರಾಗಿದ್ದಾರೆ. ಪ್ರಸನ್ನ್ ಶಿವಮೊಗ್ಗ ಜಿಲ್ಲೆಯ ಸಾಗರ್ ಮೂಲದವರಾಗಿದ್ದು, ಅಕ್ಷತಾರನ್ನ ಪ್ರೀತಿಸಿ ಮದುವೆ ಆಗಿದ್ದಾರೆ. ಎಂಟು ವರ್ಷಗಳ ಹಿಂದೆ ಗುರು-ಹಿರಿಯರ ಸಮ್ಮುಖದಲ್ಲಿ ಅಕ್ಷತಾ- ಪ್ರಸನ್ನ್ ಮದುವೆ ನಡೆದಿತ್ತು.

  • ಬಿಗ್ ಮನೆಯಲ್ಲಿ ತಾಯಿಯ ಮಾತನ್ನೇ ಧಿಕ್ಕರಿಸಿದ ಅಕ್ಷತಾ

    ಬಿಗ್ ಮನೆಯಲ್ಲಿ ತಾಯಿಯ ಮಾತನ್ನೇ ಧಿಕ್ಕರಿಸಿದ ಅಕ್ಷತಾ

    ಬೆಂಗಳೂರು: ಬಿಗ್ ಬಾಸ್ ಸೀಸನ್ 6ರಲ್ಲಿ ಅಕ್ಷತಾ ಪಾಂಡವಪುರ ತನ್ನ ತಾಯಿಯ ಮಾತಿಗೆ ಸ್ವಲ್ಪವೂ ಬೆಲೆ ನೀಡದೇ ಮತ್ತೆ ತಮ್ಮ ಗೆಳೆಯ ರಾಕೇಶ್ ಜೊತೆ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ.

    ಶನಿವಾರ ಬಿಗ್ ಬಾಸ್ 50 ದಿನಗಳನ್ನು ಪೂರೈಸಿತ್ತು. ಈ ವೇಳೆ ‘ವಾರದ ಕತೆ ಕಿಚ್ಚನ ಜೊತೆ’ ಸಂಚಿಕೆಯಲ್ಲಿ ಸುದೀಪ್ ಅವರು ಸ್ಪರ್ಧಿಗಳಿಗೆ ತಮ್ಮ ಕುಟುಂಬಸ್ಥರ ಆಡಿಯೋವೊಂದು ಬರುತ್ತದೆ ಎಂದು ಹೇಳಿದರು. ಹಾಗೆಯೇ ಅಕ್ಷತಾ ತಾಯಿ ಅವರ ಆಡಿಯೋ ಕೂಡ ಬಿಗ್ ಬಾಸ್ ಮನೆಯಲ್ಲಿ ಪ್ರಸಾರವಾಗಿತ್ತು.

    ಸಂದೇಶವೇನು?
    ನಮಸ್ಕಾರ ಮಗಳೇ. ನೀನು ಚೆನ್ನಾಗಿ ಆಟ ಆಡುತ್ತಿದ್ದೀಯಾ. ಆದರೆ ಕೆಲವೊಂದು ಸಲ ನಿನ್ನ ನೋಡುವುದಕ್ಕೆ ಕಷ್ಟ ಆಗುತ್ತೆ. ನೀನು ರಾಕೇಶ್‍ನಿಂದ ದೂರು ಇದ್ದರೆ ಒಳ್ಳೆಯದು. ನಿನ್ನನ್ನು ನಂಬಿರುವ ಸಾಕಷ್ಟು ಜೀವ ಇಲ್ಲಿದೆ. ಹಾಗಾಗಿ ನೀನು ಎಲ್ಲರನ್ನೂ ಚೆನ್ನಾಗಿ ನೋಡಿಕೋ ಹಾಗೂ ನಿನ್ನ ಆಟವನ್ನು ನೀನು ಯಾರಿಗೂ ಬಿಟ್ಟುಕೊಡಬೇಡ. ಆಡಿಕೊಳ್ಳುವವರ ಬಾಯಿಗೆ ಆಹಾರವಾಗಬೇಡ. ಅತಿಯಾದರೆ ಅಮೃತ ಕೂಡ ವಿಷವಾಗುತ್ತದೆ. ನಿನ್ನ ತಮಾಷೆ ಗುಣ ಇಲ್ಲಿ ಕಾಣಿಸುತ್ತಿಲ್ಲ ಎಂದು ಅಕ್ಷತಾ ತಾಯಿ ಸಂದೇಶ ಕಳುಹಿಸಿದ್ದರು.

    ಈ ಸಂದೇಶ ಬಂದ ಬಳಿಕ ರಾಕೇಶ್, ನನ್ನಿಂದ ದೂರ ಇರಬೇಕೆಂದು ನಿಮ್ಮ ಕುಟುಂಬದವರು ಒಂದು ಸಂದೇಶ ನೀಡಿದ್ದಾರೆ. ನೀವು ಈ ವಿಷಯವನ್ನು ನಿರ್ಧಾರ ಮಾಡಿ. ನಾನು ಈ ವಿಷಯವನ್ನು ನಿಮಗೆ ಬಿಡುವೆ ಹಾಗೂ ನಿಮ್ಮ ನಿರ್ಧಾರವನ್ನು ನಾನು ಗೌರವಿಸುತ್ತೇನೆ ಎಂದು ಅಕ್ಷತಾಗೆ ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv