Tag: ಅಕ್ರಮ ಸಂಬಂಧ

  • ಪತ್ನಿಯ ಅಕ್ರಮ ಸಂಬಂಧಕ್ಕೆ ತಮ್ಮನ ಕೊಲೆಗೈದಿದ್ದ ಮೂವರು ಅರೆಸ್ಟ್

    ಪತ್ನಿಯ ಅಕ್ರಮ ಸಂಬಂಧಕ್ಕೆ ತಮ್ಮನ ಕೊಲೆಗೈದಿದ್ದ ಮೂವರು ಅರೆಸ್ಟ್

    ಬೆಳಗಾವಿ: ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ತಮ್ಮನನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಖಾನಾಪೂರ ತಾಲೂಕಿನ ಬೇಡರಹಟ್ಟಿ ಗ್ರಾಮದ ಬಸವರಾಜ ಯಲ್ಲಪ್ಪ ನಾಯಕ (40), ಗಂದಿಗವಾಡ ಗ್ರಾಮದ ಶಂಕರ ಚನ್ನಬಸಪ್ಪ ಜಕರಾಯ(25) ಹಾಗೂ ಗೋಕಾಕ ತಾಲೂಕಿನ ಮಲ್ಲಮರಡಿ ಗ್ರಾಮದ ಮಲ್ಲೇಶ ಯಲ್ಲಪ್ಪ ಪೂಜೇರಿ(20) ಬಂಧಿತರು. ಗುರು ಉರ್ಪ್ ಕರಿಯಪ್ಪ ಯಲ್ಲಪ್ಪ ನಾಯಕ(30) ಹತ್ಯೆಗೀಡಾಗಿದ್ದ ವ್ಯಕ್ತಿ.

    ಮೃತ ಕರಿಯಪ್ಪನಿಗೂ ಹಿರಿಯ ಸಹೋದರ ಬಸವರಾಜನ ಪತ್ನಿಗೂ ಅಕ್ರಮ ಸಂಬಂಧವಿತ್ತು. ಕಳೆದ 12 ವರ್ಷಗಳ ಹಿಂದೆಯೇ ಮಕ್ಕಳನ್ನು ಕರೆದುಕೊಂಡು ಊರು ಬಿಟ್ಟು ಹೋಗಿದ್ದನು. ಬಳಿಕ ಫೆ.13 ರಂದು ತಮ್ಮ ಊರಿನಲ್ಲಿ ಜಾತ್ರೆ ಇರುವುದರಿಂದ ಮರಳಿ ಬಂದಿದ್ದನು. ವೈಮನಸ್ಸು ಹೊಂದಿದ್ದರಿಂದ ಬಸವರಾಜ ತನ್ನ ಸಂಬಂಧಿಕಾರದ ಶಂಕರ ಹಾಗೂ ಮಲ್ಲೇಶ್ ಅವರೊಂದಿಗೆ ಸೇರಿಕೊಂಡು ಕರಿಯಪ್ಪನನ್ನು ಕೊಲೆ ಮಾಡಿದ್ದಾರೆ. ನಂತರ ಈ ಪ್ರಕರಣ ಮುಚ್ಚಿ ಹಾಕುವ ಹಾಗೂ ಸಾಕ್ಷ್ಯ ಉದ್ದೇಶದಿಂದ ಇದ್ದಲಹೊಂಡದ ರೈಲ್ವೆ ನಿಲ್ದಾಣ ಹತ್ತಿರ ಶವವನ್ನು ರೈಲು ಹಳಿಯ ಮೇಲೆ ಎಸೆದು ಹೋಗಿದ್ದರು.

    ಫೆ.14 ರಂದು ಬೆಳಗಾವಿ ರೈಲ್ವೆ ಪೊಲೀಸರಿಗೆ ಅನಾಮಧೇಯ ಶವ ಪತ್ತೆಯಾಗಿದ್ದರಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಸಂದರ್ಭದಲ್ಲಿ ಮೃತ ವ್ಯಕ್ತಿ ಗುರು ಉರ್ಪ್ ಕರಿಯಪ್ಪ ಯಲ್ಲಪ್ಪ ನಾಯಕ, ಖಾನಾಪೂರ ತಾಲೂಕಿನ ಬೇಡರಹಟ್ಟಿ ಗ್ರಾಮದವನು ಎಂಬ ಸುಳಿವು ಸಿಕ್ಕಿದೆ.

    ಈ ಹಿನ್ನೆಲೆಯಲ್ಲಿ ತನಿಖೆ ಚುರುಕುಗೊಳಿಸಿದ ಪೊಲೀಸರು ಮೃತ ವ್ಯಕ್ತಿಯ ಮನೆಯವರನ್ನು ವಿಚಾರಣೆ ನಡೆಸಿದ ಸಮಯದಲ್ಲಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.

  • ಪ್ರಿಯಕರನೊಂದಿಗೆ ಅತ್ತೆಯ ಕೈಗೆ ಸಿಕ್ಕಿಬಿದ್ದಳು- ಸೊಸೆಯಿಂದ ಅತ್ತೆಯ ಕೊಲೆ

    ಪ್ರಿಯಕರನೊಂದಿಗೆ ಅತ್ತೆಯ ಕೈಗೆ ಸಿಕ್ಕಿಬಿದ್ದಳು- ಸೊಸೆಯಿಂದ ಅತ್ತೆಯ ಕೊಲೆ

    -ಅತ್ತೆ, ಗಂಡ ಇಲ್ಲದಿದ್ದಾಗ ಇನಿಯನನ್ನ ಕರೆಸಿಕೊಂಡ್ಳು
    -ಮನೆಯಲ್ಲೇ ಗೆಳೆಯನೊಂದಿಗೆ ಸರಸ ಸಲ್ಲಾಪ

    ಬೆಂಗಳೂರು: ಪ್ರಿಯಕರನೊಂದಿಗೆ ಸೇರಿ ಸ್ವಂತ ಅತ್ತೆಯನ್ನೇ ಕೊಲೆ ಮಾಡಿದ್ದ ಸೊಸೆಯನ್ನು ಬೆಂಗಳೂರಿನ ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ.

    ಸೌಂದರ್ಯ ಅತ್ತೆಯನ್ನೇ ಕೊಲೆ ಮಾಡಿ ಹೈಡ್ರಾಮ ಆಡಿದ್ದ ಖತಾರ್ನಾಕ್ ಸೊಸೆ. ಬ್ಯಾಟರಾಯನಪುರದಲ್ಲಿ ಫೆಬ್ರವರಿ 19 ರಂದು ವೃದ್ಧೆ ರಾಜಮ್ಮ ಮನೆಯಲ್ಲಿದ್ದ ವೇಳೆ ಬರ್ಬರವಾಗಿ ಕೊಲೆಯಾಗಿದ್ದರು. ಈ ವೇಳೆ ಗಂಡನಿಗೆ ಕರೆ ಮಾಡಿದ ಸೊಸೆ ಸೌಂದರ್ಯ ಅತ್ತೆ ಒಬ್ಬಳೇ ಮನೆಯಲ್ಲಿದ್ದ ವೇಳೆ ಯಾರೋ ಅಪರಿಚಿತರು, ಚಿನ್ನಾಭರಣಕ್ಕಾಗಿ ಅತ್ತೆ ರಾಜಮ್ಮಳನ್ನು ಕೊಲೆ ಮಾಡಿದ್ದಾರೆ ಎಂದು ಹೇಳಿದ್ದಳು.

    ವಿಷಯ ತಿಳಿದ ಸ್ಥಳಕ್ಕೆ ಬಂದ ಸಂಬಂಧಿಕರು ಹಾಗೂ ಪೊಲೀಸರ ಮುಂದೆ ಸೊಸೆ ಸೌಂದರ್ಯ ಕಣ್ಣೀರು ಹಾಕಿ ಹೈಡ್ರಾಮಾ ಮಾಡಿದ್ದಳು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಸೊಸೆಯ ನಡುವಳಿಕೆಯಿಂದ ಅನುಮಾನಗೊಂಡ ವಿಚಾರಣೆ ನಡೆಸಿದ ವೇಳೆ ಸ್ಫೋಟಕ ಸತ್ಯ ಹೊರಬಿದ್ದಿದೆ. ಸೊಸೆ ಸೌಂದರ್ಯ ಮದುವೆಯಾಗಿ ಗಂಡನಿದ್ದರು ಮತ್ತೊಬ್ಬ ವ್ಯಕ್ತಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು.

    ಫೆಬ್ರವರಿ 19 ರಂದು ಗಂಡ ಕೆಲಸಕ್ಕೆ ಹೋದ ವೇಳೆ ಪ್ರಿಯಕರನನ್ನು ಮನೆಗೆ ಕರೆಸಿಕೊಂಡ ಸೊಸೆ ಸೌಂದರ್ಯ ಮನೆಯಲ್ಲೇ ಸರಸ ಸಲ್ಲಾಪದಲ್ಲಿ ತೊಡಗಿದ್ದಳು. ಈ ವೇಳೆ ಹೊರ ಹೋಗಿದ್ದ ಅತ್ತೆ ರಾಜಮ್ಮ ಸೊಸೆಯ ಕಳ್ಳಾಟವನ್ನು ಕಣ್ಣಾರೆ ನೋಡಿದ್ದರು. ಈ ವಿಷಯವನ್ನು ಗಂಡನಿಗೆ ಹೇಳುತ್ತಾಳೆ ಎಂದು ಭಯಬಿದ್ದು ಅತ್ತೆಯ ತಲೆಗೆ ಹೊಡೆದು ಬರ್ಬರವಾಗಿ ಕೊಲೆ ಮಾಡಿ ಚಿನ್ನಾಭರಣಕ್ಕಾಗಿ ಯಾರೋ ಕೊಲೆ ಮಾಡಿದ್ದಾರೆ ಎಂದು ಡ್ರಾಮಾ ಮಾಡಿದ್ದಳು.

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಬ್ಯಾಟರಾಯನಪುರ ಪೊಲೀಸರು ಸೊಸೆ ಸೌಂದರ್ಯ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ.

  • ತಾಯಿಯ ಅನೈತಿಕ ಸಂಬಂಧದ ಬಗ್ಗೆ ತಂದೆಗೆ ವಿವರಿಸಿದ 4ರ ಬಾಲಕ

    ತಾಯಿಯ ಅನೈತಿಕ ಸಂಬಂಧದ ಬಗ್ಗೆ ತಂದೆಗೆ ವಿವರಿಸಿದ 4ರ ಬಾಲಕ

    – ಅಪ್ರಾಪ್ತನ ಹೊಡೆದು ಕೊಂದ ತಾಯಿಯ ಪ್ರಿಯತಮ
    – ತಾಯಿ ಅರೆಸ್ಟ್, ಪ್ರಿಯತಮ ಎಸ್ಕೇಪ್

    ಮಧುರೈ: ತನ್ನ ತಾಯಿಯ ಅಕ್ರಮ ಸಂಬಂಧದ ಕುರಿತು ತಂದೆಗೆ ಹೇಳಿದ ಅಪ್ರಾಪ್ತ ಬಾಲಕನನ್ನು ಕೊಲೆಗೈದ ಘಟನೆಯೊಂದು ತಮಿಳುನಾಡಿನ ಮಧುರೈನಲ್ಲಿ ನಡೆದಿದೆ.

    ಬಾಲಕ ಲೋಕೇಶ್(4)ನನ್ನು ಸೂರಿಮುತ್ತು ಎಂಬ ತಾಯಿಯ ಪ್ರಿಯತಮ ಕೊಲೆಗೈದು ಪರಾರಿಯಾಗಿದ್ದಾನೆ. ಸದ್ಯ ಪೊಲೀಸರು ಸೂರಿಮುತ್ತುಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಸೂರಿಮುತ್ತು ಹಾಗೂ ಬಾಲಕನ ತಾಯಿ ದೀಪಾಳ ಮಧ್ಯೆ ಅಕ್ರಮ ಸಂಬಂಧವಿತ್ತು. ಈ ವಿಚಾರವನ್ನು ಬಾಲಕ ತನ್ನ ತಂದೆಯ ಬಳಿ ಹೇಳಿದ್ದೇ ಈ ಘಟನೆಗೆ ಕಾರಣವಾಗಿದೆ.

    ಕೊಯಂಬತ್ತೂರಿನ ಪೊಲ್ಲಾಚಿ ನಿವಾಸಿಯಾಗಿರೋ ದೀಪಾಳಿಗೆ 2005ರಲ್ಲಿ ಆಂಟೋನಿ ಪ್ರಕಾಶ್ ಎಂಬಾತನ ಜೊತೆ ವಿವಾಹವಾಗಿತ್ತು. ಆ ಬಳಿಕ ದಂಪತಿ ಆಂಟೋನಿ ಗ್ರಾಮದಲ್ಲೇ ವಾಸವಾಗಿದ್ದು, ದಂಪತಿಗೆ ಗಂಡು ಮಗುವೂ ಜನಿಸಿತ್ತು.

    ನಡೆದಿದ್ದೇನು?
    ಒಂದು ದಿನ ದೀಪಾ ಹಾಗೂ ಸೂರಿಮುತ್ತು ಮಧ್ಯೆ ಸಂಬಂಧ ಬೆಳೆದಿದೆ. ಅಂತೆಯೇ ಪತಿ ಆಂಟೋನಿ ಕೆಲಸಕ್ಕೆಂದು ಹೊರಗಡೆ ಹೋದ ಬಳಿಕ ದೀಪಾ ಹಾಗೂ ಸೂರಿಮುತ್ತು ಖಾಸಗಿ ಲಾಡ್ಜ್ ಗೆ ತೆರಳಿದ್ದಾರೆ. ಈ ವೇಳೆ ದೀಪಾ ತನ್ನ ಮಗನನ್ನೂ ಕರೆದುಕೊಂಡು ಹೋಗಿದ್ದಾಳೆ.

    ಇತ್ತ ಕೆಲಸದ ನಿಮಿತ್ತ ಹೊರಗಡೆ ತೆರಳಿದ್ದ ಪತಿ ವಾಪಸ್ ಬಂದಾಗ ದೀಪಾ ಮನೆಯಲ್ಲಿ ಇಲ್ಲದ್ದನ್ನು ಮನಗಂಡು ವಾಟ್ಸಾಪ್‍ನಲ್ಲಿ ವಿಡಿಯೋ ಕಾಲ್ ಮಾಡಿದ್ದಾರೆ. ಯಾಕೆಂದರೆ ಪತ್ನಿ ಎಲ್ಲಿದ್ದಾಳೆ ಎಂಬ ಸಂಶಯವೂ ಕಾಡಿದ್ದು, ಅದಕ್ಕೆ ತಕ್ಕಂತೆ ಆಕೆ ಫೋನ್ ಕೂಡ ರಿಸೀವ್ ಮಾಡಿಲ್ಲ. ಇದರಿಂದ ಆಂಟೋನಿ ತನ್ನ ಪತ್ನಿಯ ಬಗ್ಗೆ ಮತ್ತಷ್ಟು ಸಂಶಯಗೊಂಡರು. ಪತಿಯ ಕರೆಯನ್ನು ಲೆಕ್ಕಿಸದೆ ದೀಪಾ ತನ್ನ ಮಗನನ್ನು ತಾವಿದ್ದ ರೂಮಿನಿಂದ ಹೊರಗಡೆ ಕಳುಹಿಸಿದ್ದಾಳೆ. ಅಲ್ಲದೆ ಇದೇ ವೇಳೆ ಸೂರಿಮುತ್ತು ಅಪ್ರಾಪ್ತ ಬಾಲಕನಿಗೆ ಥಳಿಸಿದ್ದಾನೆ ಎಂಬ ಆರೋಪವೂ ಕೇಳಿ ಬಂದಿದೆ.

    ಕೆಲ ವರದಿಗಳ ಪ್ರಕಾರ, ಬಾಲಕ ಲೊಕೇಶ್ ತನ್ನ ತಾಯಿಯ ಮೊಬೈಲ್ ಹಿಡಿದುಕೊಂಡು ರೂಮಿನ ಹೊರಗಡೆ ನಿಂತುಕೊಂಡಿದ್ದನು. ಇದೇ ಸಂದರ್ಭದಲ್ಲಿ ಆಂಟೋನಿ ಮತ್ತೆ ಕಾಲ್ ಮಾಡಿದ್ದಾರೆ. ಈ ವೇಳೆ ಬಾಲಕ ಕರೆ ಸ್ವೀಕರಿಸಿ ಸೂರಿಮುತ್ತು ಬಗ್ಗೆ ತಿಳಿಸಿದ್ದಾನೆ. ಅಲ್ಲದೆ ತನಗೆ ಸೂರಿಮುತ್ತು ಹೊಡೆದಿರುವ ಬಗ್ಗೆಯೂ ವಿವರಿಸಿದ್ದಾನೆ. ಇತ್ತ ಬಾಲಕ ತನ್ನ ತಂದೆಯ ಬಳಿ ಹೇಳಿದ್ದೆಲ್ಲವನ್ನೂ ಕೇಳಿಸಿಕೊಂಡ ಸೂರಿಮುತ್ತು, ಆತನಿಗೆ ಚೆನ್ನಾಗಿ ಥಳಿಸಿದ್ದಾನೆ. ಪರಿಣಾಮ ಬಾಲಕ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಕೂಡಲೇ ಆತನನ್ನು ತಿರುನೆಲ್ವೆಲ್ಲಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಾಲಕನನ್ನು ಆಸ್ಪತ್ರೆಗೆ ದಾಖಲಿಸುತ್ತಿದ್ದಂತೆಯೇ ಇತ್ತ ಆರೋಪಿ ಸೂರಿಮುತ್ತು ಸ್ಥಳದಿಂದ ಕಾಲ್ಕಿತ್ತಿದ್ದಾನೆ.

    ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಮರುದಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಬಳಿಕ ಪೊಲೀಸರು ಬಾಲಕನ ತಾಯಿ ದೀಪಾಳನ್ನು ಬಂಧಿಸಿದ್ದಾರೆ. ಆದರೆ ಇದೂವರೆಗೂ ಎಫ್‍ಐಆರ್ ದಾಖಲಿಸಿಕೊಂಡಿಲ್ಲ.

  • ದಂತ ವೈದ್ಯ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ – ಬೆಂಗಳೂರಲ್ಲಿ ಡಾಕ್ಟರ್ ಪ್ರಿಯತಮೆಯೂ ಆತ್ಮಹತ್ಯೆ

    ದಂತ ವೈದ್ಯ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ – ಬೆಂಗಳೂರಲ್ಲಿ ಡಾಕ್ಟರ್ ಪ್ರಿಯತಮೆಯೂ ಆತ್ಮಹತ್ಯೆ

    – ಡೆತ್‍ನೋಟ್ ಬರೆದಿಟ್ಟು ನೇಣಿಗೆ ಶರಣು
    – ಒಂದು ಕೊಲೆ, ಎರಡು ಆತ್ಮಹತ್ಯೆ, ಮೂರು ಮಕ್ಕಳು ಅನಾಥ

    ಬೆಂಗಳೂರು: ಚಿಕ್ಕಮಗಳೂರಿನ ದಂತವೈದ್ಯ ಡಾ.ರೇವಂತ್ ಪ್ರೇಯಸಿ ಹರ್ಷಿತಾ ಆತ್ಮಹತ್ಯೆಗೆ ಶರಣಾಗಿದ್ದಾಳೆ.

    ಡಾ.ರೇವಂತ್ ಪತ್ನಿ ಕವಿತಾಳನ್ನು ಕೊಲೆಗೈದು ಕಡೂರಿನ ಮಸಾಲ ಡಾಬಾದ ಸಮೀಪ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದನು. ಪ್ರಿಯಕರ ರೇವಂತ್ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಬೆಂಗಳೂರಿನಲ್ಲಿದ್ದ ಪ್ರಿಯತಮೆ ಹರ್ಷಿತಾ (32) ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪತಿಯಿಂದ ದೂರವಾಗಿರುವ ಹರ್ಷಿತಾ ಮಗಳ ಜೊತೆ ಬೆಂಗಳೂರಿನ ರಾಜರಾಜೇಶ್ವರಿ ನಗರದ ಜವರೇಗೌಡ ಬಡಾವಣೆಯಲ್ಲಿ ವಾಸವಾಗಿದ್ದಳು. ಫ್ಯಾಶನ್ ಡಿಸೈನರ್ ಆಗಿರುವ ಹರ್ಷಿತಾ ದಂತವೈದ್ಯ ರೇವಂತ್ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಹರ್ಷಿತಾ ಪತಿ ಸುದೀಂದ್ರ ಬಿಎಂಟಿಸಿ ಚಾಲಕರಾಗಿ ಕೆಲಸ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

    ಡೆತ್ ನೋಟ್ ಬರೆದಿಟ್ಟು ಫ್ಯಾನಿಗೆ ನೇಣು ಹಾಕಿಕೊಂಡು ಹರ್ಷಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿರಿಸಲಾಗಿದೆ. ಈ ಸಂಬಂಧ ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಏನಿದು ಪ್ರಕರಣ? ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ ಡಾ.ರೇವಂತ್ ಪರ ಸ್ತ್ರೀ ವ್ಯಾಮೋಹಕ್ಕ ಸಿಲುಕಿ ಪತ್ನಿ ಕವಿತಾಳನ್ನು ಕೊಲೆ ಮಾಡಿದ್ದನು. ಕೊಲೆಯ ಬಳಿಕ ಪೊಲೀಸ್ ತನಿಖೆಗೆ ಹೆದರಿದ ರೇವಂತ್ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದನು. ಪತಿಯ ಅಕ್ರಮ ಸಂಬಂಧದ ವಿಷಯ ತಿಳಿದ ಪತ್ನಿ ಕವಿತಾ ಹಲವು ಬಾರಿ ಬುದ್ಧಿ ಹೇಳಿದ್ದರೂ ಈ ಡಾಕ್ಟರ್ ತನ್ನ ಚಾಳಿ ಬಿಟ್ಟಿರಲಿಲ್ಲ. ಆದರೂ ಹೆಂಡತಿ ಮಾತು ಕೇಳದ ಈತ ಇಟ್ಕೊಂಡವಳ ಮೋಹ ಪಾಶದಲ್ಲಿ ಮುಂದುವರಿದಿದ್ದನು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾಗ ಹೆಂಡತಿಯನ್ನೇ ಕೊಲೆಗೈದು, ದುಷ್ಕರ್ಮಿಗಳಿಗೆ ಮನೆಗೆ ನುಗ್ಗಿ ಕವಿತಾಳನ್ನು ಹತ್ಯೆ ಮಾಡಿದ್ದಾರೆ ಎಂದು ಕಥೆ ಕಟ್ಟಿ ಮೊಸಳೆ ಕಣ್ಣೀರು ಹಾಕಿದ್ದನು.

    ಕೊಲೆಗೂ ಮುನ್ನ ಪತ್ನಿಗೆ ಒಡವೆ ಕೊಡಿಸಿದ್ದ: ಐದು ದಿನಗಳ ಹಿಂದೆಯೇ ಕೊಲೆಗೆ ಸ್ಕೆಚ್ ಹಾಕಿದ್ದ ಡಾಕ್ಟರ್ ರೇವಂತ್ ಫೆಬ್ರವರಿ 17ರಂದು ರೇವಂತ್ ಪತ್ನಿ ಕವಿತಾಗೆ ಒಡವೆ ಕೊಡಿಸಿದ್ದಾನೆ. ಮನೆಗೆ ಬಂದ ಕೂಡಲೇ ಕವಿತಾ ಬಾಯಿಗೆ ಬಟ್ಟೆ ತುರುಕಿ ಹೊಟ್ಟೆ ಭಾಗಕ್ಕೆ ಇಂಜೆಕ್ಷನ್ ಕೊಟ್ಟಿದ್ದಾನೆ. ಕವಿತಾ ಕೆಲವೇ ಕ್ಷಣಗಳಲ್ಲಿ ಪ್ರಜ್ಞೆ ತಪ್ಪಿದ್ದಾರೆ. ಕವಿತಾಳನ್ನು ಕಾರ್ ಶೆಡ್ಡಿಗೆ ಎಳೆದೊಯ್ದಿದು ಆರು ತಿಂಗಳ ಮಗುವಿನ ಮುಂದೆಯೇ ಪತ್ನಿಯ ಕತ್ತು ಕೊಯ್ದಿದ್ದಾನೆ. ಕೊಲೆಯ ಬಳಿಕ ರಕ್ತ ಹರಿಯಬಾರದೆಂದು ಕವಿತಾ ಸುತ್ತ ಮ್ಯಾಟ್ ಹಾಕಿದ್ದಾನೆ. ಮನೆಯಲ್ಲಿಯೇ ಇದ್ದ 5 ವರ್ಷದ ಕಂದಮ್ಮ ಅಮ್ಮ ಎಂದು ಕೇಳಿದಾಗ ವಾಶ್ ರೂಂಗೆ ಹೋಗಿದ್ದಾಳೆ ಎಂದು ಸುಳ್ಳು ಹೇಳಿದ್ದಾನೆ. ಕೊಲೆಯ ಬಳಿಕ ಮಕ್ಕಳನ್ನು ಕರೆದುಕೊಂಡು ಕ್ಲಿನಿಕ್ ಗೆ ಹೋಗಿದ್ದನು.

    ಮೊಸಳೆ ಕಣ್ಣೀರು ಸುರಿಸಿದ್ದ: ಪೊಲೀಸರ ತನಿಖೆಯ ದಿಕ್ಕು ತಪ್ಪಿಸಲು ಯಾರೋ ದುಷ್ಕರ್ಮಿಗಳು ಮನೆಗೆ ಬಂದು ಕೊಲೆ ಮಾಡಿ, ಚಿನ್ನಾಭರಣವನ್ನ ದೋಚಿ ಹೋಗಿದ್ದಾರೆ ಅಂತ ದೂರು ನೀಡಿ, ಎಲ್ಲರೆದರು ಮೊಸಳೆ ಕಣ್ಣೀರು ಸುರಿಸಿದ್ದ. ಆದರೆ ಕವಿತಾ ಮರಣೋತ್ತರ ವರದಿಯಲ್ಲಿ ದಂತವೈದ್ಯನ ಅಸಲಿ ಮುಖವನ್ನ ಬಯಲು ಮಾಡಿತ್ತು. ಕವಿತಾಳ ಕೊಲೆ ಮಾಡುವ ಮುನ್ನ ಆಕೆಗೆ ಇಂಜೆಕ್ಷನ್ ನೀಡಲಾಗಿತ್ತು ಅಂತ ವರದಿ ಹೇಳಿತ್ತು. ಇದರಿಂದ ಹೆದರಿದ ರೇವಂತ್, ಕಡೂರಿನ ಮಸಾಲ ಡಾಬಾದ ಸಮೀಪ ಕಾರು ನಿಲ್ಲಿಸಿ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದುರಂತ ಅಂದರೆ 6 ತಿಂಗಳ ಹಸುಗೂಸು, 5 ವರ್ಷದ ಮಗು ಇದೀಗ ಅಪ್ಪ-ಅಮ್ಮ ಇಬ್ಬರನ್ನೂ ಕಳೆದುಕೊಂಡು ಅನಾಥರಾಗಿದ್ದಾರೆ. ಇತ್ತ ಹರ್ಷಿತಾ ಪುತ್ರಿಯೂ ಅಮ್ಮನನ್ನು ಕಳೆದುಕೊಂಡು ಅನಾಥವಾಗಿದ್ದಾಳೆ. ಅಕ್ರಮ ಸಂಬಂಧ ಮೂವರನ್ನ ಬಲಿ ಪಡೆದಿದೆ.

  • ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತ್ನಿ – ಜುಟ್ಟು ಹಿಡಿದು ಥಳಿಸಿದ ಪೊಲೀಸ್ ಪೇದೆ: ವಿಡಿಯೋ

    ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತ್ನಿ – ಜುಟ್ಟು ಹಿಡಿದು ಥಳಿಸಿದ ಪೊಲೀಸ್ ಪೇದೆ: ವಿಡಿಯೋ

    ಭೋಪಾಲ್: ತನ್ನ ಅಕ್ರಮ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ ಪತ್ನಿಯನ್ನು ಪೊಲೀಸ್ ಪೇದೆಯೋರ್ವ ಸಾರ್ವಜನಿಕವಾಗಿ ಥಳಿಸಿರುವ ಘಟನೆ ಮಧ್ಯ ಪ್ರದೇಶದ ಧಾರ್ ಜಿಲ್ಲೆಯಲ್ಲಿ ನಡೆದಿದೆ.

    ಮಧ್ಯಪ್ರದೇಶದ ಧಾರ್ ಜಿಲ್ಲೆಯ ಪೊಲೀಸ್ ಠಾಣೆಯೊಂದರಲ್ಲಿ ಉಸ್ತುವಾರಿಯಾಗಿರುವ ಪೊಲೀಸ್ ಪೇದೆ ನರೇಂದ್ರ ಸೂರ್ಯವಂಶಿ, ತನ್ನ ಹೆಂಡತಿಯನ್ನು ಸಾರ್ವಜನಿಕವಾಗಿ ಜುಟ್ಟು ಹಿಡಿದು ಎಳೆದುತಂದು ಥಳಿಸಿದ್ದಾನೆ. ಈ ಘಟನೆಯನ್ನು ಸ್ಥಳೀಯರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ವಿಡಿಯೋ ಮಾಡಿದ್ದಾರೆ.

    https://twitter.com/ANI/status/1227444605500690433

    ಈ ವಿಡಿಯೋದಲ್ಲಿ ಪೇದೆ ಸೂರ್ಯವಂಶಿ ತನ್ನ ಮಡದಿಯನ್ನು ಎಳೆದುತಂದು, ಸಾರ್ವಜನಿಕವಾಗಿ ಥಳಿಸಿದ್ದಾನೆ. ಜೊತೆಗೆ ಆಕೆಯನ್ನು ನೆಲೆದ ಮೇಲೆ ಹಾಕಿ ತುಳಿದು ತನ್ನ ಚಪ್ಪಲಿಯಿಂದ ಹೊಡೆಯಲು ಪ್ರಯತ್ನಿಸಿದ್ದಾನೆ. ಈ ವೇಳೆ ಅಲ್ಲಿ ಸಾರ್ವಜನಿಕರೂ ಇದ್ದು, ಅವರು ದಂಪತಿಯ ಜಗಳವನ್ನು ಬಿಡಿಸಲು ಮುಂದಾಗಿದ್ದಾರೆ. ಮಂಗಳವಾರ ನಡೆದಿರುವ ಈ ಘಟನಾ ಸ್ಥಳದಲ್ಲಿ ಸಮವಸ್ತ್ರ ಧರಿಸಿದ ಪೊಲೀಸರು ಇರುವುದು ವಿಡಿಯೋದಲ್ಲಿ ಸೆರೆಯಾಗಿದೆ.

    ವರದಿಯ ಪ್ರಕಾರ ಸೂರ್ಯವಂಶಿ ಬೇರೆ ಮಹಿಳೆಯ ಜೊತೆ ಅಕ್ರಮ ಸಂಬಂಧ ಇಟ್ಟಿಕೊಂಡಿದ್ದು, ಇದನ್ನು ವಿರೋಧಿಸಿದ ತನ್ನ ಹೆಂಡತಿಗೆ ಹೀಗೆ ಥಳಿಸಿದ್ದಾನೆ ಎಂದು ಹೇಳಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಸೂರ್ಯವಂಶಿ ವಿರುದ್ಧ ಪ್ರಕರಣ ದಾಖಲಾಗಿದ್ದು ತನಿಖೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

  • ಒಂದು ಕೊಲೆ, ಒಂದು ಆತ್ಮಹತ್ಯೆ – ಎರಡು ಕೊಲೆ ಯತ್ನದ ಹಿಂದೆ ಹಲವು ಅನುಮಾನಗಳು

    ಒಂದು ಕೊಲೆ, ಒಂದು ಆತ್ಮಹತ್ಯೆ – ಎರಡು ಕೊಲೆ ಯತ್ನದ ಹಿಂದೆ ಹಲವು ಅನುಮಾನಗಳು

    ಬೆಂಗಳೂರು: ಸಿಲಿಕಾನ್ ಸಿಟಿಯ ರಾಜಗೋಪಾಲನಗರದ ಹೆಗ್ಗನಹಳ್ಳಿಯಲ್ಲಿ ನಡೆದಿದ್ದ ಹೆಂಡತಿಯ ಕೊಲೆ, ಗಂಡ ಮತ್ತು ಮಗಳ ಕೊಲೆ ಯತ್ನ, ಬಾಡಿಗೆದಾರ ನೇಣು ಬಿಗಿದುಕೊಂಡು ಸಾವು ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿದೆ.

    ಹೆಗ್ಗನಹಳ್ಳಿ ನಿವಾಸಿಯಾದ ಲಕ್ಷ್ಮಿ ಬರ್ಬರವಾಗಿ ಕೊಲೆಯಾಗಿದ್ದಾರೆ. ಅದೇ ಮನೆಯಲ್ಲಿ ಲಕ್ಷ್ಮಿ ಗಂಡ ಶಿವರಾಜ್ ಮತ್ತು ಮಗಳು ಚೈತ್ರ ರಕ್ತದ ಮಡುವಿನಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರು. ಜೊತೆಗೆ ಅದೇ ಮನೆಯ ಮೇಲೆ ಬಾಡಿಗೆಗೆ ವಾಸವಾಗಿದ್ದ ಚಿತ್ರದುರ್ಗ ಮೂಲದ ರಂಗದಾಮಯ್ಯ ಅನುಮಾನಸ್ಪದ ರೀತಿಯಲ್ಲಿ ನೇಣಿಗೆ ಶರಣಾಗಿದ್ದರು.

    ಸ್ಥಳಕ್ಕೆ ಬಂದ ಪೊಲೀಸರು ಅರೆ ಪ್ರಜ್ಞಾವಸ್ಥೆಯಲ್ಲಿದ್ದ ತಂದೆ ಮತ್ತು ಮಗಳನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರು. ಮನೆ ಮಾಲೀಕಿ ಲಕ್ಷ್ಮಿ ತಲೆಗೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿ ಕೊಲೆ ಮಾಡಲಾಗಿದ್ದು, ಬಾಡಿಗೆದಾರ ರಂಗದಾಮಯ್ಯ ಹೊಟ್ಟೆಗೆ ಚಾಕು ಇರಿದ ಸ್ಥಿತಿಯಲ್ಲಿ ನೇಣು ಬಿಗಿದುಕೊಂಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

    ಲಕ್ಷ್ಮಿ ಮತ್ತು ಬಾಡಿಗೆದಾರ ರಂಗದಾಮಯ್ಯನ ನಡುವೆ ಅಕ್ರಮ ಸಂಬಂಧದ ಶಂಕೆ ವ್ಯಕ್ತವಾಗಿದ್ದು, ಇದೇ ಕಾರಣಕ್ಕೆ ಗಲಾಟೆ ನಡೆದು ಲಕ್ಷ್ಮಿಯನ್ನು ಬಾಡಿಗೆದಾರ ರಂಗದಾಮಯ್ಯನೆ ಕೊಲೆ ಮಾಡಿ ನಂತರ ಗಂಡ ಮತ್ತು ಮಗಳ ಕೊಲೆಗೆ ಯತ್ನಿಸಿರಬಹುದು ಅಂತಾ ಶಂಕಿಸಲಾಗಿದೆ. ಆದರೆ ರಂಗದಾಮಯ್ಯನ ಹೊಟ್ಟೆಗೆ ಚಾಕು ಹಾಕಿದ್ದು ಯಾರು? ಚಾಕು ಹಾಕಿ ತೀವ್ರ ರಕ್ತಸ್ರಾವ ಆದ ನಂತರ ಹೇಗೆ ನೇಣುಬಿಗಿದುಕೊಂಡ ಎಂಬ ಹಲವು ಅನುಮಾನಗಳು ಪೊಲೀಸರನ್ನು ಕಾಡತೊಡಗಿವೆ.

    ಈ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡ ರಾಜಗೋಪಾಲನಗರ ಪೊಲೀಸರು ಈ ಎಲ್ಲಾ ಅಯಾಮಗಳಿಂದ ತನಿಖೆ ನಡೆಸಿದ್ದಾರೆ.

  • ಪ್ರಿಯತಮೆಯ ಕೊಂದು, ಆಕೆಯ ಗಂಡನಿಗೆ ಚಾಕು ಇರಿದು ನೇಣಿಗೆ ಶರಣಾದ

    ಪ್ರಿಯತಮೆಯ ಕೊಂದು, ಆಕೆಯ ಗಂಡನಿಗೆ ಚಾಕು ಇರಿದು ನೇಣಿಗೆ ಶರಣಾದ

    ಬೆಂಗಳೂರು: ಪ್ರಿಯಕರನೋರ್ವ ತಾನು ಅಕ್ರಮ ಸಂಬಂಧ ಇಟ್ಟಿಕೊಂಡಿದ್ದ ಪ್ರಿಯತಮೆಯನ್ನು ಹತ್ಯೆ ಮಾಡಿ, ಆಕೆಯ ಗಂಡ ಮತ್ತು ಮಗುವಿಗೆ ಗಂಭೀರವಾಗಿ ಹಲ್ಲೆ ಮಾಡಿ ಬಳಿಕ ತಾನೂ ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರಿನ ಪೀಣ್ಯ ಸೆಕೆಂಡ್ ಸ್ಟೇಜ್‍ನಲ್ಲಿ ನಡೆದಿದೆ.

    ಇಂದು ಬೆಳಗಿನ ಜಾವ ಈ ಘಟನ ನಡಿದಿದ್ದು, ಮಧ್ಯಾಹ್ನ 12 ಗಂಟೆಗೆ ಗೊತ್ತಾಗಿದೆ. ಆರೋಪಿ ಚಿತ್ರದುರ್ಗ ಮೂಲದ ರಂಗಧಾಮಯ್ಯ ಮೊದಲಿಗೆ ತನ್ನ ಪ್ರಿಯತಮೆ ಲಕ್ಷ್ಮಿ (30)ಯನ್ನು ಕೊಲೆ ಮಾಡಿದ್ದಾನೆ. ಬಳಿಕ ಲಕ್ಷ್ಮಿಯ ಪತಿ ಶಿವರಾಜ್ ಮತ್ತು ಮಗಳು ಚೈತ್ರಾಳ ಮೇಲೆ ಚಾಕುವಿನಿಂದ ಗಂಭೀರ ಹಲ್ಲೆ ಮಾಡಿದ್ದಾನೆ. ಗಂಭೀರ ಹಲ್ಲೆಗೊಳಗಾದ ಶಿವರಾಜ್ ಮತ್ತು ಮಗುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಕೊನೆಯದಾಗಿ ಮಹಡಿ ಮೇಲಿನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಚಿಲ್ಲರೆ ವ್ಯಾಪಾರಿಯಾಗಿದ್ದ ಶಿವರಾಜ್ 15 ವರ್ಷಗಳ ಹಿಂದೆ ಲಕ್ಷ್ಮಿಯನ್ನ ವರಿಸಿದ್ದರು. ಇತ್ತೀಚೆಗೆ ಶಿವರಾಜ್‍ಗೆ ಸ್ಟ್ರೋಕ್ ಆಗಿತ್ತು. ಹಾಗಾಗಿ ಲಕ್ಷ್ಮಿ ಗಾರ್ಮೆಂಟ್ಸ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದಳು. ಈ ವೇಳೆ ಆರೋಪಿಯ ಜೊತೆ ಒಡನಾಟ ಹೊಂದಿದ್ದಳು ಎನ್ನಲಾಗಿದೆ. ಇಂದು ಮಧ್ಯಾಹ್ನ ಲಕ್ಷ್ಮಿ ಕೆಲಸ ಮಾಡುತ್ತಿದ್ದ ಗಾರ್ಮೆಂಟ್ಸ್ ಸೂಪರ್ ವೈಸರ್ ರೋಜನ್ ಬಾಗಿಲು ಬಡಿದಾಗ ವಿಷಯ ಗೊತ್ತಾಗಿದೆ.

    ಕಳೆದ ಒಂದು ವರ್ಷದ ಹಿಂದೆ ರಂಗಧಾಮಯ್ಯನ ಪತ್ನಿ ತೀರಿ ಹೋಗಿದ್ದು, ಶಿವರಾಜ್ ಮನೆಯವರ ಜೊತೆ ನಿಕಟ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಆರೋಪಿ ಇತ್ತೀಚೆಗೆ ಲಕ್ಷ್ಮಿ ಜೊತೆ ಮನಸ್ತಾಪ ಹೊಂದ್ದಿದು, ಇದೇ ವಿಚಾರವಾಗಿ ಆಕೆಯನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಸದ್ಯ ಈ ಬಗ್ಗೆ ರಾಜಗೋಪಾಲನಗರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ತನಿಖೆ ನಡೆಸುತ್ತಿದ್ದಾರೆ.

  • ಅಕ್ರಮ ಸಂಬಂಧ – ಬೆಂಕಿ ಹಚ್ಚಿಕೊಂಡು ಮಗಳ ಸಹಿತ ದಂಪತಿ ಆತ್ಮಹತ್ಯೆಗೆ ಶರಣು

    ಅಕ್ರಮ ಸಂಬಂಧ – ಬೆಂಕಿ ಹಚ್ಚಿಕೊಂಡು ಮಗಳ ಸಹಿತ ದಂಪತಿ ಆತ್ಮಹತ್ಯೆಗೆ ಶರಣು

    ಚಿತ್ರದುರ್ಗ: ಗಂಡನ ಅಕ್ರಮ ಸಂಬಂಧದಿಂದಾಗಿ ನಿತ್ಯ ಮನೆಯಲ್ಲಿ ನಡೆಯುತಿದ್ದ ಕೌಟುಂಬಿಕ ಕಲಹದಿಂದ ಬೇಸತ್ತು ಮಗಳ ಸಹಿತ ದಂಪತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಆಘಾತಕಾರಿ ಘಟನೆ ನಗರದಲ್ಲಿ ನಡೆದಿದೆ.

    ಚಿತ್ರದುರ್ಗದ ಗಾರೆಹಟ್ಟಿ ಬಡಾವಣೆಯಲ್ಲಿ ಘಟನೆ ನಡೆದಿದ್ದು, ಅರುಣ್(40), ಲತಾ(35) ಹಾಗೂ ಅಮೃತ(13) ಸಾವನ್ನಪ್ಪಿದ್ದಾರೆ ಎಂದು ಗುರುತಿಸಲಾಗಿದೆ.

    ಜಿಲ್ಲೆಯ ಹಿರಿಯೂರು ತಾಲೂಕಿನ ತಾಳವಟ್ಟಿ ಗ್ರಾಮದ ಮೃತ ಅರುಣ್, ಖಾಸಗಿ ಬಸ್ ಏಜೆಂಟ್ ಆಗಿದ್ದು, ಪತ್ನಿ ಲತಾ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮೃತ ಅರುಣ್ ಅನೇಕ ಮಹಿಳೆಯರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಹಿನ್ನಲೆ ಮನೆಯಲ್ಲಿ ನಿತ್ಯ ಜಗಳವಾಗುತಿತ್ತು ಎನ್ನುವ ವಿಚಾರ ಸ್ಥಳೀಯರಿಂದ ತಿಳಿದು ಬಂದಿದೆ.

    ಬೆಳಗಿನ ಜಾವ 7:20ಕ್ಕೆ ಗಂಡ ಹೆಂಡತಿ ನಡುವೆ ಜಗಳ ನಡೆದಿದ್ದು, ಈ ವೇಳೆ ದಂಪತಿ ತಮ್ಮ ಮಗಳಿಗೂ ಬೆಂಕಿ ಹಚ್ಚಿ ತಾವೂ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಮೂಲಕ ಏನೂ ತಪ್ಪು ಮಾಡದ ದಂಪತಿಯ ಪುತ್ರಿ ಅಮೃತ ಸಹ ಬಲಿಯಾಗಿದ್ದಾಳೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

    ಮನೆಯ ಕಿಟಕಿ ಹಾಗೂ ಬಾಗಿಲಿನ ಕಿಂಡಿಗಳಿಂದ ಹೊಗೆ ಜೋರಾಗಿ ಹೊರ ಬರುತ್ತಿರುವುದನ್ನು ಗಮನಿಸಿದ ಸ್ಥಳಿಯರು, ಕಬ್ಬಿಣದ ರಾಡ್ ಹಾಗು ಸುತ್ತಿಗೆಯಿಂದ ಮುಚ್ಚಿದ್ದ ಬಾಗಿಲನ್ನು ಒಡೆದು, ಮನೆಯೊಳಗೆ ತೆರಳಿದ್ದಾರೆ. ಈ ವೇಳೆ ಸಾವಿನಿಂದ ಪಾರಾಗಲು, ಅರುಣ್ ಹಾಗೂ ಬಾಲಕಿ ಅಮೃತ ಯತ್ನಿಸಿದ್ದು, ಪ್ರಯತ್ನ ವಿಫಲವಾಗಿ ಬಾಗಿಲ ಬಳಿಯೇ ಸುಟ್ಟು ಕರಕಲಾಗಿದ್ದಾರೆ.

    ಸ್ಥಳಕ್ಕೆ ಅಗ್ನಿ ಶಾಮಕ ದಳದ ಅಧಿಕಾರಿಗಳಾದ ಜಯರಾಂ ಹಾಗು ಶಶಿಧರ್ ಒಳಗೊಂಡ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಸಾವಿಗೀಡಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಆದರೆ ಕೃತ್ಯದಲ್ಲಿ ಯಾರು ಮೊದಲು ಆತ್ಮಹತ್ಯೆಗೆ ಯತ್ನಸಿದರು, ಹೇಗೆ ಕೃತ್ಯ ನಡೆಯಿತು ಎಂಬುದರ ಕುರಿತ ಮಾಹಿತಿ ನಿಗೂಢವಾಗಿದೆ. ಈ ಸಂಬಂಧ, ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

  • ಪತ್ನಿ ಜೊತೆ ಅಕ್ರಮ ಸಂಬಂಧ ಶಂಕೆ – ಹಾಡಹಗಲೇ ಇಬ್ಬರ ಮಧ್ಯೆ ಮಾರಾಮಾರಿ

    ಪತ್ನಿ ಜೊತೆ ಅಕ್ರಮ ಸಂಬಂಧ ಶಂಕೆ – ಹಾಡಹಗಲೇ ಇಬ್ಬರ ಮಧ್ಯೆ ಮಾರಾಮಾರಿ

    ಚಿಕ್ಕಬಳ್ಳಾಪುರ: ಇಬ್ಬರು ಯುವಕರು ಹಾಡಹಗಲೇ ನಡು ರಸ್ತೆಯಲ್ಲಿ ಮಾರಾಮಾರಿ ಮಾಡಿಕೊಂಡ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರದಲ್ಲಿ ನಡೆದಿದೆ.

    ನಗರದ ನದಿಗಟ್ಟೆ ಆಂಜನೇಯಸ್ವಾಮಿ ದೇವಾಲಯದ ಸಂತೆಮೈದಾನದ ಬಳಿ ಈ ಘಟನೆ ನಡೆದಿದ್ದು, ವೆಂಕಟೇಶ್ ಹಾಗೂ ಮನೋಹರ್ ರಕ್ತ ಬರುವ ಹಾಗೆ ಬಡಿದಾಡಿಕೊಂಡಿದ್ದಾರೆ. ವೆಂಕಟೇಶ್ ತನ್ನ ಹೆಂಡತಿ ಜೊತೆ ಆಕ್ರಮ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಿ ವೆಂಕಟೇಶ್ ಮೇಲೆ ಮನೋಹರ್ ಮೊದಲಿಗೆ ಗಲಾಟೆ ಮಾಡಿ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

    ಘಟನೆಯಲ್ಲಿ ಸ್ಕ್ರೂ ಡ್ರೈವರ್ ನಿಂದ ವೆಂಕಟೇಶ್ ತಲೆಗೆ ತಿವಿದ ಪರಿಣಾಮ ವೆಂಕಟೇಶ್ ತಲೆಯಿಂದ ತೀವ್ರವಾದ ರಕ್ತಸ್ರಾವವಾಗಿದೆ. ಈ ವೇಳೆ ರಕ್ತದ ನಡುವೆಯೇ ನಡುರಸ್ತೆಯಲ್ಲಿ ಇಬ್ಬರು ನಾನಾ ನೀನಾ ಎಂದು ಪೈಪೋಟಿಗೆ ಬಿದ್ದು ಜಗಳ ನಡೆಸಿದ್ದಾರೆ. ಸ್ಥಳೀಯರು ಸಂಬಂಧಿಕರು ಎಷ್ಟೇ ಬಿಡಿಸಿದರೂ ಮರಳಿ ಗಲಾಟೆ ಮಾಡಿಕೊಳ್ಳುತ್ತಿದ್ದ ಯುವಕರ ಕಾದಾಟ ನೋಡುಗರಿಗೆ ಉಚಿತ ಮನರಂಜನೆ ನೀಡಿತ್ತು.

    ಕೊನೆಗೆ ವೆಂಕಟೇಶ್ ಗೌರಿಬಿದನೂರು ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾನೆ. ಸದ್ಯ ಗಾಯಾಳು ವೆಂಕಟೇಶ್ ಸೇರಿದಂತೆ ಮನೋಹರ್ ಹಾಗೂ ಆತನ ಪತ್ನಿಯನ್ನು ವಶಕ್ಕೆ ಪಡೆದಿರುವ ಗೌರಿಬಿದನೂರು ನಗರ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಗೌರಿಬಿದನೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ಅನೈತಿಕ ಸಂಬಂಧ ಮುಚ್ಚಿಡಲು ಮಗ, ಅತ್ತಿಗೆಯನ್ನೇ ಕೊಲೆಗೈದ್ಳು

    ಅನೈತಿಕ ಸಂಬಂಧ ಮುಚ್ಚಿಡಲು ಮಗ, ಅತ್ತಿಗೆಯನ್ನೇ ಕೊಲೆಗೈದ್ಳು

    ಚಿಕ್ಕೋಡಿ(ಬೆಳಗಾವಿ): ತನ್ನ ಅನೈತಿಕ ಸಂಬಂಧವನ್ನು ಮುಚ್ಚಿಡಲು ಮಹಿಳೆಯೊಬ್ಬಳು ತನ್ನ ಹೆತ್ತ ಮಗ ಹಾಗೂ ಅತ್ತಿಗೆಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿ ನಡೆದಿದೆ.

    ಮೃತ ಮಗನನ್ನು ಪ್ರವೀಣ್ ಹಾಗೂ ಅತ್ತಿಗೆಯನ್ನು ಭಾಗ್ಯಶ್ರೀ ಎಂದು ಗುರುತಿಸಲಾಗಿದೆ. ಮಗನನ್ನು ಬಾವಿಗೆ ತಳ್ಳಿ ಆರೋಪಿ ಸುಧಾ ಕೊಲೆ ಮಾಡಿದ್ರೆ, ಅತ್ತಿಗೆಯನ್ನು ಬೆಂಕಿ ಹಚ್ಚಿ ಹತ್ಯೆ ಮಾಡಿದ್ದಾಳೆ.

    ಏನಿದು ಪ್ರಕರಣ:
    ಬೆಲ್ಲದ ಬಾಗೇವಾಡಿ ಗ್ರಾಮದ ಸುಧಾ ಸುರೇಶ್ ಕರೀಗಾರ ಮತ್ತು ರಮೇಶ್ ಬಸ್ತವಾಡೆ ನಡುವೆ ಸರಸ ಸಲ್ಲಾಪ ನಡೆದಿತ್ತು. ಇವರಿಬ್ಬರೂ ಮೊಬೈಲ್ ನಲ್ಲಿ ಮಾತಾಡುವುದನ್ನು ಸುಧಾಳ ಗಂಡನ ಅಣ್ಣನ ಹೆಂಡತಿ ಭಾಗ್ಯಶ್ರೀ ಕೇಳಿಸಿಕೊಂಡು ತನ್ನ ಗಂಡನಿಗೆ ತಿಳಿಸಿದ್ದಾಳೆ. ಅಲ್ಲದೆ ತಮ್ಮನ ಹೆಂಡತಿಗೆ ಬುದ್ಧಿ ಮಾತು ಹೇಳುವಂತೆಯೂ ಹೇಳಿದ್ದಾರೆ.

    ಈ ಹಿನ್ನೆಲೆಯಲ್ಲಿ ಭಾಗ್ಯಶ್ರೀಯ ಗಂಡ ಚಿನ್ನಪ್ಪ, ತನ್ನ ತಮ್ಮನ ಹೆಂಡತಿ ಅಂದರೆ ಸುರೇಶ್ ಕರೀಗಾರ ಹೆಂಡತಿ ಸುಧಾಗೆ ಬುದ್ಧಿ ಹೇಳಿದ್ದಾರೆ ತನ್ನ ಅನೈತಿಕ ಸಂಬಂಧದ ಬಗ್ಗೆ ಭಾಗ್ಯಶ್ರೀ ಎಡವಟ್ಟು ಮಾಡಿದ್ದಾಳೆ. ಅವಳು ಗಂಡನ ಎದುರು ಬಾಯಿಬಿಟ್ಟರೆ ನನ್ನ ಬದುಕು ಬುಡಮೇಲಾದೀತು ಎಂಬ ಭಯದಿಂದ ಆಕೆಯ ಮೇಲೆ ಸೇಡು ತೀರಿಸಿಕೊಳ್ಳಲು ಸುಧಾ ಪ್ಲಾನ್ ಮಾಡಿ, ಭಾಗ್ಯಶ್ರೀ ಮಲಗಿರುವಾಗ ಸುಧಾ ಸಮಯ ಸಾಧಿಸಿ ಆಕೆಯ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾಳೆ.

    ಇತ್ತ ರಮೇಶ್ ಬಸ್ತವಾಡೆ ಎಂಬಾತನ ಜೊತೆ ಅನೈತಿಕ ಸಂಬಂಧ ಹೊಂದಿರುವ ವಿಷಯ ಸುಧಾಳ ಮಗ ಪ್ರವೀಣಗೂ ಗೊತ್ತಾಗಿದೆ. ಈ ವಿಚಾರ ತಿಳಿದ ಸುಧಾ, ಮಗ ಪ್ರವೀಣನನ್ನು ಬಾವಿ ಹತ್ತಿರ ಕರೆದುಕೊಂಡು ಹೋಗಿ ಬಾವಿಗೆ ತಳ್ಳಿ ಕೊಲೆ ಮಾಡಿದ್ದಾಳೆ.

    ಸುಧಾ ಕರೀಗಾರ ಗಂಡನ ಅಣ್ಣ ಚಿನ್ನಪ್ಪ ಕರೀಗಾರ ಕೊಟ್ಟ ದೂರು ದಾಖಲಿಸಿಕೊಂಡ ಪೋಲೀಸರು ಮೊದಲು ಇದನ್ನು ಸಹಜ ಸಾವು ಎಂದು ತಿಳಿದುಕೊಂಡಿದ್ದರು. ಬಳಿಕ ಹುಕ್ಕೇರಿ ಪೊಲೀಸ್ ಠಾಣೆಯ ಸಿಪಿಐ ಗುರುರಾಜ ಕಲ್ಯಾಣಶೆಟ್ಟಿ ಹಾಗೂ ಪಿಎಸ್‍ಐ ಶಿವಾನಂದ ಗುಡಗನಟ್ಟಿ ಅವರು ತನಿಖೆ ನಡೆಸಿ ಪ್ರಕರಣದ ಬೆನ್ನು ಹತ್ತಿದ್ದಾರೆ. ಹೀಗಾಗಿ ಜೋಡಿ ಕೊಲೆ ಮಾಡಿದ ಸುಧಾ ಕರೀಗಾರ ಮತ್ತು ರಮೇಶ್ ಬಸ್ತವಾಡೆ ಎಂಬಾತರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಸತ್ಯ ಬಯಲಿಗೆ ಬಂದಿದೆ. ಕೊಲೆ ಮಾಡಿರುವ ಸುಧಾ ಹಾಗೂ ಆತನ ಪ್ರಿಯಕರ ರಮೇಶ್ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ.