Tag: ಅಕ್ರಮ ಸಂಬಂಧ

  • ಅಕ್ರಮ ಸಂಬಂಧ – ಟ್ರ್ಯಾಕ್ಟರ್ ಹತ್ತಿಸಿ ಮನೆ ಸೊಸೆ, ಆಕೆಯ ಗೆಳೆಯನನ್ನು ಕೊಂದ ತಂದೆ, ಮಗ

    ಅಕ್ರಮ ಸಂಬಂಧ – ಟ್ರ್ಯಾಕ್ಟರ್ ಹತ್ತಿಸಿ ಮನೆ ಸೊಸೆ, ಆಕೆಯ ಗೆಳೆಯನನ್ನು ಕೊಂದ ತಂದೆ, ಮಗ

    – ಓಡಿ ಹೋಗಿದ್ದವರನ್ನು ಕಾಣೆಯಾದ ಪ್ರಕರಣ ದಾಖಲಿಸಿ ಕರೆಸಿದರು
    – ಸ್ವಲ್ಪ ದಿನ ಕಳೆಯುತ್ತಿದ್ದಂತೆ ಟ್ರ್ಯಾಕ್ಟರ್ ಹತ್ತಿಸಿ ಬರ್ಬರವಾಗಿ ಕೊಲೆ

    ಮುಂಬೈ: ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಮಹಿಳೆ ಹಾಗೂ ಆಕೆಯ ಸ್ನೇಹಿತನ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಜಲ್ನಾ ಜಿಲ್ಲೆಯಲ್ಲಿ ನಡೆದಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯ ಮಾವ ಹಾಗೂ ಆತನ ಮಗನನ್ನು ಬಂಧಿಸಲಾಗಿದೆ. ಚಾಪಾಲ್ಗಾಂವ್ ನಿವಾಸಿಗಳಾದ ಬಾತ್ವೆಲ್ ಸಂಪತ್ ಲಾಲ್ಜಾರೆ ಹಾಗೂ ಅವರ ಮಗ ವಿಖಾಸ್ ಲಾಲ್ಜಾರೆಯನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ ಎಂದು ಅಂಬಾಡ್ ಠಾಣೆಯ ಇನ್‍ಸ್ಪೆಕ್ಟರ್ ಅನಿರುದ್ಧ ನಾಂದೇಡ್ಕರ್ ತಿಳಿಸಿದ್ದಾರೆ.

    ಬಾತ್ವೆಲ್ ಲಾಲ್ಜಾರೆ ಕೊಲೆಯಾದ ಮಹಿಳೆ ಮಾರಿಯಾಳ ಮಾವನಾಗಿದ್ದು, ವಿಖಾಸ್ ಲಲ್ಜಾರೆ ಮಹಿಳೆಯ ಅಳಿಯ. 32 ವರ್ಷದ ಮಾರಿಯಾ ಲಲ್ಜಾರೆ ಪತಿ 10 ವರ್ಷಗಳ ಹಿಂದೆ ಮೃತಪಟ್ಟಿದ್ದು, ತಮ್ಮ ಮಾವ ಹಾಗೂ ಅಳಿಯಂದಿರೊಂದಿಗೆ ಮಹಿಳೆ ವಾಸವಿದ್ದಳು. ಅಲ್ಲದೆ ಅದೇ ಗ್ರಾಮದ ವಿವಾಹಿತ ವ್ಯಕ್ತಿ ಅರ್ಬಕ್ ಭಾಗ್ವತ್(27) ಜೊತೆ ಅಕ್ರಮ ಸಂಬಂಧ ಹೊಂದಿದ್ದಳು.

    ಇದಕ್ಕೆ ಮಹಿಳೆಯ ಮಾವ ಹಾಗೂ ಅಳಿಯಂದಿರು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ ಹಲವು ಬಾರಿ ಭಾಗ್ವತ್‍ಗೆ ಬೆದರಿಕೆ ಸಹ ಹಾಕಿದ್ದರು. ತಂದೆ, ಮಗ ನನಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಭಾಗ್ವತ್ ಅಂಬಾಡ್ ಪೊಲೀಸ್ ಠಾಣೆಯಲ್ಲಿ ಹಾಗೂ ಎಸ್‍ಪಿಗೆ ದೂರು ದಾಖಲಿಸಿದ್ದರು.

    ಇದಾದ ಬಳಿಕ ಮಾರ್ಚ್ 30 ರಂದು ಭಾಗ್ವತ್ ಹಾಗೂ ಮಾರಿಯಾ ಇಬ್ಬರೂ ಓಡಿ ಹೋಗಿ ಗುಜರಾತ್‍ನಲ್ಲಿ ತಂಗಿದ್ದರು. ಬಳಿಕ ಮಾರಿಯಾ ಮನೆ ಕಡೆಯವರು ಕಾಣೆಯಾಗಿರುವ ಕುರಿತು ಪೊಲೀಸರಿಗೆ ದೂರು ಸಲ್ಲಿಸಿದ್ದರು. ಹೀಗಾಗಿ ಏಪ್ರಿಲ್ 22ರಂದು ಪೊಲೀಸರು ಇಬ್ಬರನ್ನೂ ಗುಜರಾತ್‍ನಿಂದ ಮರಳಿ ಕರೆ ತಂದಿದ್ದರು. ಇದಾದ ಬಳಿಕ ಇಬ್ಬರೂ ಒಟ್ಟಿಗೆ ಅದೇ ಊರಿನಲ್ಲಿ ವಾಸಿಸುತ್ತಿದ್ದರು.

    ಅಕ್ಟೋಬರ್ 28 ರಂದು ಈ ಜೋಡಿ ಕಾರ್ಯಕ್ರಮಕ್ಕೆಂದು ಹತ್ತಿರದ ಹಳ್ಳಿಗೆ ಬೈಕ್ ಮೇಲೆ ತೆರಳಿತ್ತು. ಇದನ್ನು ಗಮನಿಸಿ ಆರೋಪಿ ವಿಕಾಸ್ ಲಾಲ್ಜಾರೆ ಜೋಡಿ ಇದ್ದ ಬೈಕ್‍ಗೆ ಟ್ರ್ಯಾಕ್ಟರ್ ಗುದ್ದಿಸಿದ್ದು, ಅವರು ಕೆಳಗೆ ಬೀಳುತ್ತಿದ್ದಂತೆ ಇಬ್ಬರ ಮೇಲೂ ಟ್ರ್ಯಾಕ್ಟರ್ ಹಾಯಿಸಿದ್ದಾನೆ. ಈ ವೇಳೆ ಇಬ್ಬರಿಗೂ ತೀವ್ರ ಗಾಯಗಳಾಗಿದ್ದು, ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ತೀವ್ರ ಗಾಯಗಳಾಗಿದ್ದರಿಂದ ಇಬ್ಬರೂ ಸಾವನ್ನಪ್ಪಿದ್ದಾರೆ.

    ಭಾಗ್ವತ್ ಪತ್ನಿ ಈ ಕುರಿತು ಮಾತನಾಡಿ, ವಿಕಾಸ್ ಲಾಲ್ಜಾರೆ ಹಾಗೂ ಆತನ ತಂದೆ ಇಬ್ಬರೂ ಸೇರಿ ನನ್ನ ಪತಿ ಹಾಗೂ ಮಾರಿಯಾಳನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ವಿಕಾಸ್ ಹಾಗೂ ಆತನ ತಂದೆಯ ವಿರುದ್ಧ ಐಪಿಸಿ ಸೆಕ್ಷನ್ 302(ಕೊಲೆ) ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಇನ್ಸ್‍ಪೆಕ್ಟರ್ ನಾಂದೇಡ್ಕರ್ ತಿಳಿಸಿದ್ದಾರೆ.

  • ತ್ರಿಕೋನ ಪ್ರೇಮ ಕಥೆಯಲ್ಲಿ ಹೋಯ್ತು ಬಿಜೆಪಿ ಲೀಡರ್ ಮಗನ ಪ್ರಾಣ

    ತ್ರಿಕೋನ ಪ್ರೇಮ ಕಥೆಯಲ್ಲಿ ಹೋಯ್ತು ಬಿಜೆಪಿ ಲೀಡರ್ ಮಗನ ಪ್ರಾಣ

    – ಮಹಿಳೆ ಜೊತೆ ಅಕ್ರಮ ಸಂಬಂಧಕ್ಕಾಗಿ ಇಬ್ಬರ ನಡುವೆ ಜಗಳ
    – ಕೋಲಿನಿಂದ ಹೊಡೆದು ಕೊಲೆ

    ಲಕ್ನೋ: ತ್ರಿಕೋನ ಪ್ರೇಮ ಕಥೆಯಲ್ಲಿ ಉತ್ತರ ಪ್ರದೇಶದ ಬಿಜೆಪಿ ಲೀಡರ್ ಪುತ್ರನ ಪ್ರಾಣ ಪಕ್ಷಿ ಹಾರಿ ಹೋಗಿದೆ. ಉತ್ತರ ಪ್ರದೇಶದ ಗುಲರಿಹಾ ಕ್ಷೇತ್ರದ ಸೊನಬರಸ ಅರಣ್ಯ ಪ್ರದೇಶದಲ್ಲಿ ಕೊಲೆ ನಡೆದಿದೆ.

    ಸೊನಬರಸ್ ಬೂತ್ ನ ಬಿಜೆಪಿ ಅಧ್ಯಕ್ಷ ಹೀರಾಲಾಲ್ ಪುತ್ರ ರಾಣಾ ಪ್ರತಾಪ್ ಶವ ಅಕ್ಟೋಬರ್ 16ರಂದು ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿತ್ತು. ಆರೋಪಿಗಳು ಶವದ ಮೇಲೆ ಬೈಕ್ ಬೀಳಿಸಿ ಮೇಲ್ನೋಟಕ್ಕೆ ಅಪಘಾತ ಎಂದು ಬಿಂಬಿಸಿದ್ದರು. ಸದ್ಯ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನ ಬಂಧಿಸಿದ್ದು, ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.

    ರಾಕೇಶ್ ಯಾದವ್, ರಾಮಕೇಶ್ ಯಾದವ್ ಮತ್ತು ಪನ್ನೆ ಲಾಲ್ ಬಂಧಿತ ಆರೋಪಿಗಳು. ಬಂಧಿತರು ತಮ್ಮ ತಪ್ಪೊಪ್ಪಿಕೊಂಡಿದ್ದು, ಕೊಲೆ ಮಾಡಿದ್ದೇಕೆ ಎಂಬುದರ ರಹಸ್ಯ ಬಿಚ್ಚಿಟ್ಟಿದ್ದಾರೆ. ಐಪಿಸಿ ಸೆಕ್ಷನ್ 302, 3(2)5 ಎಸ್‍ಸಿ/ಎಸ್‍ಟಿ ಆ್ಯಕ್ಟ್ ಪ್ರಕಾರ ಪ್ರಕರಣ ದಾಖಲಾಗಿದೆ.

    ಅಕ್ರಮ ಸಂಬಂಧ: ಆರೋಪಿ ರಾಮಕೇಶ್ ಯಾದವ್ ಮಹಿಳೆ ಜೊತೆ ಅಕ್ರಮ ಸಂಬಂಧ ಹೊಂದಿದ್ದನು. ಇದೇ ಮಹಿಳೆಯನ್ನ ಮೃತ ರಾಣಾ ಪ್ರತಾಪ್ ಕದ್ದುಮುಚ್ಚಿ ಭೇಟಿಯಾಗುತ್ತಿದ್ದನು. ವಿಷಯ ತಿಳಿದ ರಾಮಕೇಶ್ ಯಾದವ್ ಮಹಿಳೆಯನ್ನ ಭೇಟಿಯಾಗಬೇಡ ಎಂದು ರಾಣಾಗೆ ಎಚ್ಚರಿಕೆ ನೀಡಿದ್ದನು. ಆದ್ರೂ ರಾಣಾ ಮಹಿಳೆ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದನು. ಇದರಿಂದ ಕೋಪಗೊಂಡ ರಾಣಾ ಕೊಲೆಗೆ ರಾಮಕೇಶ್ ಸ್ನೇಹಿತರ ಜೊತೆ ಸೇರಿ ಪ್ಲಾನ್ ಮಾಡಿದ್ದನು.

    ರಾಣಾ ಅರಣ್ಯ ಪ್ರದೇಶದಲ್ಲಿ ಹೋಗುತ್ತಿರುವಾಗ ಆತನನ್ನ ರಾಮಕೇಶ್ ತನ್ನಿಬ್ಬರ ಸ್ನೇಹಿತತ ಜೊತೆ ಸೇರಿ ತಡೆದಿದ್ದಾರೆ. ಈ ವೇಳೆ ಕೋಲಿನಿಂದ ರಾಣಾ ತಲೆಗೆ ಹೊಡೆದು ಕೊಲೆಗೈದಿದ್ದಾರೆ. ಕೊನೆಗೆ ಅನುಮಾನ ಬಾರದಿರಲಿ ಎಂದು ರಾಣಾ ಶವದ ಮೇಲೆ ಆತನ ಬೈಕ್ ಬೀಳಿಸಿ ಸ್ಥಳದಿಂದ ಕಾಲ್ಕಿತ್ತಿದ್ದರು.

  • ವಯಸ್ಸು 58 ಆದ್ರು ಮೂವರ ಜೊತೆ ಸಂಬಂಧ- 50ಕ್ಕೂ ಅಧಿಕ ಬಾರಿ ಇರಿದು ಕೊಂದ್ಳು

    ವಯಸ್ಸು 58 ಆದ್ರು ಮೂವರ ಜೊತೆ ಸಂಬಂಧ- 50ಕ್ಕೂ ಅಧಿಕ ಬಾರಿ ಇರಿದು ಕೊಂದ್ಳು

    – ಪ್ರಿಯಕರನನ್ನ ಕೊಂದು ಆತ್ಮಹತ್ಯೆಗೆ ಶರಣಾದ್ಳು
    – ಪತ್ನಿಗೆ ಬ್ಯುಸಿನೆಸ್ ಟ್ರಿಪ್ ಅಂತ ಸುಳ್ಳು ಹೇಳ್ತಿದ್ದ

    ಸೌಥ್ ವೇಲ್: ಪ್ರಿಯಕರನಿಗೆ 50ಕ್ಕೂ ಅಧಿಕ ಬಾರಿ ಇರಿದು ಮಹಿಳೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸೌಥ್ ವೇಲ್ ನಲ್ಲಿ ನಡೆದಿದೆ.

    58 ವರ್ಷದ ಗೈರಿ ವಿಲಿಯಮ್ಸ್ ಕೊಲೆಯಾದ ವ್ಯಕ್ತಿ. 46 ವರ್ಷದ ಶೆರಿಡಿನ್ ಗೆಳೆಯನನ್ನ ಕೊಂದು ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಸೌಥ್ ವೇಲ್ ನಿವಾಸಿಯಾಗಿದ್ದ ವಿಲಿಯಮ್ಸ್ ಗೆ ಮದುವೆಯಾಗಿದ್ದರೂ ಇಬ್ಬರ ಜೊತೆ ಅಕ್ರಮ ಸಂಬಂಧ ಹೊಂದಿದ್ದನು. ಆದ್ರೆ ಮೂವರಿಗೂ ಈ ವಿಷಯ ತಿಳಿಯದಂತೆ ರಹಸ್ಯ ಕಾಪಾಡಿಕೊಂಡಿದ್ದನು. ಇದನ್ನೂ ಓದಿ: ಅತ್ಯಾಚಾರಕ್ಕೆ ವಿರೋಧ- 13 ವರ್ಷದ ಬಾಲಕಿಗೆ ಬೆಂಕಿ ಹಚ್ಚಿದ ಮಾಲೀಕ

    ಅಕ್ರಮ ಸಂಬಂಧದ ವಿಷಯ ಶೆರಿಡಿನ್ ಗೆ ಗೊತ್ತಾಗಿದೆ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಜಗಳ ವಿಕೋಪಕ್ಕೆ ತಿರುಗಿದಾಗ ವಿಲಿಯಮ್ಸ್ ಗೆ ಹರಿತವಾದ ವಸ್ತುವಿನಿಂದ ಇರಿದು ಕೊಂದಿದ್ದಾಳೆ. ಕೊಲೆಯ ಬಳಿಕ ಆತಂಕಗೊಂಡ ಶೆರಿಡಿನ್ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದನ್ನೂ ಓದಿ: ಮಧ್ಯ ಪ್ರದೇಶದಲ್ಲಿ ಮೃತದೇಹ, ಬೆಂಗಳೂರಿನಲ್ಲಿ ತಲೆ ಪತ್ತೆ

    ಮೃತ ವಿಲಿಯಮ್ಸ್ ಬ್ಯುಸಿನೆಸ್ ಟ್ರಿಪ್ ಅಂತ ಸುಳ್ಳು ಹೇಳಿ ಇನ್ನಿಬ್ಬರು ಗೆಳತಿಯರ ಜೊತೆ ಕಾಲ ಕಳೆಯುತ್ತಿದ್ದನು. ವಿಲಿಯಮ್ಸ್ ಮರಣೋತ್ತರ ಪರೀಕ್ಷೆಯಲ್ಲಿ ಆತನನ್ನು 50ಕ್ಕೂ ಅಧಿಕ ಬಾರಿ ಇರಿದು ಕೊಲ್ಲಲಾಗಿದೆ ಎಂದು ವರದಿಯಾಗಿದೆ. . ಇದನ್ನೂ ಓದಿ: ಮನೆಯ ಬಳಿ ಬಂದು ಕರೆದ್ರು – ಹತ್ತಿರ ಬರ್ತಿದ್ದಂತೆ ಗುಂಡಿಕ್ಕಿ ಬಿಜೆಪಿ ಕೌನ್ಸಿಲರ್ ಹತ್ಯೆ

  • ಇನಿಯನ ಜೊತೆ ಸೇರಿ ಗಂಡನ ಮರ್ಮಾಂಗಕ್ಕೆ ಆ್ಯಸಿಡ್ ಹಾಕಿದ ಪತ್ನಿ

    ಇನಿಯನ ಜೊತೆ ಸೇರಿ ಗಂಡನ ಮರ್ಮಾಂಗಕ್ಕೆ ಆ್ಯಸಿಡ್ ಹಾಕಿದ ಪತ್ನಿ

    – ಕಾಮದಾಟದಲ್ಲಿ ತೊಡಗಿದ್ದ ಪತ್ನಿಯನ್ನ ಹಿಡಿದಿದ್ದ ಪತಿ
    – ಮನನೊಂದ ಆತ್ಮಹತ್ಯೆಗೆ ಶರಣಾದ ಪತಿರಾಯ
    – ಪತಿ ಊಟದಲ್ಲಿ ನಶೆ ಪದಾರ್ಥ ಸೇರಿಸಿ ಅಕ್ರಮ ಸಂಬಂಧ

    ಲಕ್ನೋ: ಇನಿಯನ ಜೊತೆ ಸೇರಿದ ಪತ್ನಿ ಗಂಡನ ಮರ್ಮಾಂಗಕ್ಕೆ ಆ್ಯಸಿಡ್ ಎರಚಿರುವ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿಯ ಟಿಪಿ ನಗರದಲ್ಲಿ ನಡೆದಿದೆ. ಪತ್ನಿಯ ದಾಳಿಯಿಂದ ಮನನೊಂದ ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಮೃತ ವ್ಯಕ್ತಿ ಸದ್ಯ ಗುರುನಾನಕ ನಗರದಲ್ಲಿ ಪತ್ನಿ ಮತ್ತು ಮೂವರು ಹೆಣ್ಣು ಮಕ್ಕಳೊಂದಿಗೆ ವಾಸವಾಗಿದ್ದನು. ಇತ್ತೀಚೆಗೆ ಸ್ಥಳೀಯ ವೈದ್ಯನೊಬ್ಬನ ಜೊತೆ ಕಾಮದಾಟದಲ್ಲಿ ತೊಡಗಿದ್ದ ವೇಳೆ ಪತ್ನಿಯನ್ನ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದರು. ತದನಂತರ ಇನಿಯನ ಜೊತೆ ಸೇರಿದ ಪ್ಲಾನ್ ಮಾಡಿಕೊಂಡು ಪತಿಯ ಮರ್ಮಾಂಗಕ್ಕೆ ಆ್ಯಸಿಡ್ ಎರಚಿದ್ದನು. ಈ ಸಂಬಂಧ ಪತ್ನಿ ವಿರುದ್ಧ ಪತಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದನ್ನೂ ಓದಿ: ಸೆಕ್ಸ್ ವೇಳೆ ಸ್ಫೋಟಗೊಂಡ ಕಾಂಡೋಮ್-ದೂರು ದಾಖಲಿಸಿದ ಮಹಿಳೆ

    ಮಹಿಳೆ ಕುಟುಂಬಸ್ಥರ ಆಹಾರದಲ್ಲಿ ನಶೆ ಪದಾರ್ಥ ಸೇರಿಸುತ್ತಿದ್ದಳು. ಎಲ್ಲರೂ ನಿದ್ದೆಗೆ ಜಾರಿದ ಬೆನ್ನಲ್ಲೇ ವೈದ್ಯನ ಜೊತೆ ದೈಹಿಕ ಸಂಪರ್ಕ ಹೊಂದುತ್ತಿದ್ದಳು. ಆ್ಯಸಿಡ್ ದಾಳಿಯಿಂದಾಗಿ ವ್ಯಕ್ತಿಗೆ ಖಾಸಗಿ ಭಾಗದಲ್ಲಿ ಗಂಭೀರ ಗಾಯಗಳಾಗಿದ್ದವು. ಇದರಿಂದ ಮಾನಸಿಕವಾಗಿ ನೊಂದ ಪತಿ ಕಾರ್ಖಾನೆಯೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಮೃತದೇಹವನ್ನು ಮರಣೋತ್ತರ ಶವ ಪರೀಕ್ಷೆಗಾಗಿ ರವಾನಿಸಿದ್ದಾರೆ. ಇದನ್ನೂ ಓದಿ: ಕಾರು ನಿಲ್ಲಿಸಿ ವಿಳಾಸ ಕೇಳಿದ – ಮಹಿಳೆ ಹತ್ತಿರ ಬರ್ತಿದ್ದಂತೆ ಫ್ಯಾಂಟ್ ಬಿಚ್ಚಿದ

    ಮರ್ಮಾಂಗಕ್ಕೆ ಆ್ಯಸಿಡ್ ಎರಚಿದ ಪ್ರಕರಣದಲ್ಲಿ ಮಹಿಳೆ ಮತ್ತು ಆಕೆಯ ಪ್ರಿಯಕರ ಜೈಲಿನಲ್ಲಿದ್ದಾರೆ. ಇತ್ತ ಪತಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಇತ್ತ ದಂಪತಿಯ ಮೂರು ಮಕ್ಕಳ ಆಕ್ರಂದನ ಮುಗಿಲು ಮುಟ್ಟಿದೆ. ಡಾಕ್ಟರ್ ಅಂಕಲ್ ಮನೆಗೆ ಬರುತ್ತಿದ್ದರು. ಪ್ರತಿಬಾರಿಯೂ ತಿಂಡಿ ತರುತ್ತಿದ್ದರು ಎಂದು ಮಹಿಳೆಯ ಮಕ್ಕಳು ಹೇಳುತ್ತಾರೆ. ಇದನ್ನೂ ಓದಿ: ಗೆಳತಿಗೆ ಹೇಳದೇ ಕಾಂಡೋಮ್‍ಗೆ ರಂಧ್ರ ಹಾಕಿ ಸೆಕ್ಸ್- 4 ವರ್ಷ ಜೈಲು ಶಿಕ್ಷೆ

  • ಅಳಿಯನ ಜೊತೆ ಅತ್ತೆಯ ಕಳ್ಳ ಸಂಬಂಧ- ಅಡ್ಡಿಯಾದ ಗಂಡನನ್ನೇ ಕೊಂದ್ಳು

    ಅಳಿಯನ ಜೊತೆ ಅತ್ತೆಯ ಕಳ್ಳ ಸಂಬಂಧ- ಅಡ್ಡಿಯಾದ ಗಂಡನನ್ನೇ ಕೊಂದ್ಳು

    -ಕೊಂದು ಪಕ್ಕದ್ಮನೆಯಲ್ಲಿ ಶವ ನೇತಾಕಿದ್ರು
    -ಅತ್ತೆ ಮೇಲಿನ ವ್ಯಾಮೋಹಕ್ಕೆ ತನ್ನೂರು ತೊರೆದಿದ್ದ ಅಳಿಯ
    -ಸುಳ್ಳು ಕಥೆ ಹೇಳಿದ ಅಪ್ರಾಪ್ತ ಮಗ

    ಪಾಟ್ನಾ/ವೈಶಾಲಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನು ಅಳಿಯನ ಜೊತೆ ಸೇರಿ ಮಹಿಳೆ ಕೊಲೆ ಮಾಡಿರುವ ಘಟನೆ ವೈಶಾಲಿ ಜಿಲ್ಲೆಯ ದೇಸ್ರಿ ಠಾಣಾ ವ್ಯಾಪ್ತಿಯ ಮುರೌವತಪುರನಲ್ಲಿ ನಡೆದಿದೆ.

    50 ವರ್ಷದ ತಿಲಕ್ ರಾಯ್ ಕೊಲೆಯಾದ ವ್ಯಕ್ತಿ. ತಿಲಕ್ ಪತ್ನಿ ಸವಿತಾ ಅಳಿಯ ಮೋಹನ್ ರಾಯ್ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಅಳಿಯ ಮೋಹನ್ ನಿಂದ ದೂರವಿರುವಂತೆ ತಿಲಕ್ ಪತ್ನಿಗೆ ಎಚ್ಚರಿಕೆ ಸಹ ನೀಡಿದ್ದನು. ರಾತ್ರಿ ನಶೆಯಲ್ಲಿ ಪತಿಯನ್ನು ಸವಿತಾ ಮತ್ತು ಮೋಹನ್ ಥಳಿಸಿ ಕೊಂದಿದ್ದಾರೆ. ತಮ್ಮ ಮೇಲೆ ಅನುಮಾನ ಬರದಿರಲಿ ಅಂತ ಪಕ್ಕದಲ್ಲಿಯ ನಿರ್ಮಾಣ ಹಂತಹ ಮನೆಯಲ್ಲಿ ಶವವನ್ನ ನೇತು ಹಾಕಿ ಮನೆ ಸೇರಿದ್ದಾರೆ. ಬೆಳಗ್ಗೆ ಗ್ರಾಮಸ್ಥರು ಶವ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

    ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಈ ವೇಳೆ ಸವಿತಾಳ ಅಪ್ರಾಪ್ತ ಮಗ, ತಂದೆ ಪ್ರತಿದಿನ ಕುಡಿದು ಬಂದು ನಮ್ಮ ಮೇಲೆ ಹಲ್ಲೆ ನಡೆಸುತ್ತಿದ್ದರು. ನಿನ್ನೆ ರಾತ್ರಿಯೂ ಪಾನಮತ್ತನಾಗಿ ಬಂದ ತಂದೆ ನಮ್ಮ ಮೇಲೆ ಹಲ್ಲೆ ನಡೆಸಿ ಮನೆಯಿಂದ ಹೊರ ಹೋಗಿದ್ದರು. ಈ ವೇಳೆ ನೇಣು ಹಾಕಿಕೊಂಡಿರಬಹುದು ಎಂದು ಹೇಳಿದ್ದನು. ಇದನ್ನೂ ಓದಿ: ಸೊಸೆ ಜೊತೆ ಮಾವನ ಸರಸ- ವಿಷ್ಯ ತಿಳಿದು ಇಬ್ಬರನ್ನೂ ಬರ್ಬರವಾಗಿ ಕೊಂದ ಮಗ

    ಶವದ ಮೇಲೆ ಗಾಯದ ಗುರುತುಗಳು ಕಂಡು ಅನುಮಾನಗೊಂಡ ತಿಲಕ್ ಸೋದರ ಪೊಲೀಸ್ ಠಾಣೆಗೆ ತೆರಳಿ ಅತ್ತಿಗೆ, ಅಳಿಯ ಮೋಹನ್ ಮತ್ತು ಮಗನ ವಿರುದ್ಧ ದೂರು ದಾಖಲಿಸಿದ್ದರು. ಅನುಮಾನದ ಮೇಲೆ ಮೂವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಮಾವನ ಜೊತೆ 10 ತಿಂಗ್ಳ ಮಗುವಿನ ಸಮೇತ ಸೊಸೆ ಎಸ್ಕೇಪ್

    ಅಳಿಯ ಮೋಹನ್ ಜೊತೆ ಅಕ್ರಮ ಸಂಬಂಧ ಹೊಂದಿರೋದನ್ನ ಅತ್ತೆ ಸವಿತಾ ಒಪ್ಪಿಕೊಂಡಿದ್ದಾಳೆ. ಅತ್ತೆಯ ಮೇಲಿನ ವ್ಯಾಮೋಹದಿಂದ ಸಮಸ್ತಿಪುರದ ನಿವಾಸಿಯಾಗಿದ್ದ ಮೋಹನ್ ರಾಯ್ ಮುರೌವತಪುರನಲ್ಲಿಯೇ ಉಳಿದುಕೊಂಡಿದ್ದನು. ಇಬ್ಬರ ಅಕ್ರಮ ಸಂಬಂಧ ವಿಷಯ ತಿಳಿದ ತಿಲಕ್ ಕುಡಿದು ಬಂದು ಗಲಾಟೆ ಮಾಡುತ್ತಿದ್ದನು.  ಇದನ್ನೂ ಓದಿ: ಮಗನೊಂದಿಗೆ ಸೆಕ್ಸ್ ಮಾಡದಂತೆ ಸೊಸೆಯನ್ನ ತಡೆದ ಮಾವ

  • ಸರಸದ ವೇಳೆ ಸಿಕ್ಕಿಬಿದ್ದ ಜೋಡಿ- ಬೆತ್ತಲೆಗೊಳಿಸಿ, ಚಪ್ಪಲಿ ಹಾರ ಹಾಕಿ ಮೆರವಣಿಗೆ

    ಸರಸದ ವೇಳೆ ಸಿಕ್ಕಿಬಿದ್ದ ಜೋಡಿ- ಬೆತ್ತಲೆಗೊಳಿಸಿ, ಚಪ್ಪಲಿ ಹಾರ ಹಾಕಿ ಮೆರವಣಿಗೆ

    -ಮದ್ವೆಯಾಗಿದ್ರೂ ಯುವಕನ ಜೊತೆ ಅಕ್ರಮ ಸಂಬಂಧ
    -ಯುವಕನಿಗೆ 5 ಲಕ್ಷ ರೂ. ದಂಡ

    ರಾಂಚಿ: ಜೋಡಿಯನ್ನು ಬೆತ್ತಲೆಗೊಳಿಸಿ ಗ್ರಾಮದಲ್ಲಿ ಮೆರವಣಿಗೆ ನಡೆಸಿರುವ ಅಮಾನವೀಯ ಘಟನೆ ಜಾರ್ಖಂಡ್ ರಾಜ್ಯದ ಸಾಹಿಬ್‍ಗಂಜ್ ಜಿಲ್ಲೆಯ ಎಂಜಿಆರ್ ರೈಲ್ವೇಲೈನ್ ಗ್ರಾಮದಲ್ಲಿ ನಡೆದಿದೆ. ಮೆರವಣಿಗೆ ಎಲ್ಲ ದೃಶ್ಯಗಳನ್ನು ಗ್ರಾಮಸ್ಥರ ಮೊಬೈಲ್ ಗಳಲ್ಲಿ ಸೆರೆಯಾಗಿದ್ದು, ಸ್ಥಳೀಯ ಮಟ್ಟದಲ್ಲಿ ವೈರಲ್ ಆಗಿದೆ.

    ಬಾಕುಡಿ ಗ್ರಾಮದ ವಿವಾಹಿತ ಮಹಿಳೆ ಸಂಬಂಧಿಯೊಬ್ಬರ ಮನೆಯಲ್ಲಿದ್ದಳು. ಮದುವೆಯಾಗಿದ್ದರೂ ಯುವಕನೊಬ್ಬನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಎಂಜಿಆರ್ ರೈಲ್ವೇಲೈನ್ ಗ್ರಾಮದ ಮನೆಯೊಂದರಲ್ಲಿ ಇಬ್ಬರು ಸರಸ ಸಲ್ಲಾಪದಲ್ಲಿ ತೊಡಗಿದ್ದ ವೇಳೆ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾರೆ.

    ಜೋಡಿಯನ್ನ ಗ್ರಾಮದ ಕೇಂದ್ರಭಾಗಕ್ಕೆ ಕರೆ ತಂದು ವಿವಸ್ತ್ರಗೊಳಿಸಿ, ಕೊರಳಿಗೆ ಚಪ್ಪಲಿಗೆ ಹಾರ ಹಾಕಿ ಮೆರವಣಿಗೆ ಮಾಡಿ, ಥಳಿಸಿದ್ದಾರೆ. ಕೊನೆಗೆ ಯುವಕನ ಕುಟುಂಬಸ್ಥರನ್ನು ಕರೆಸಿ ಮಾಹಿತಿ ನೀಡಿದ್ದಾರೆ. ಕುಟುಂಬಸ್ಥರ ಸಮ್ಮುಖದಲ್ಲಿ ಪಂಚಾಯ್ತಿ ನಡೆಸಿ ಯುವಕನ ಕುಟುಂಬಕ್ಕೆ 5 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ.

    ಘಟನೆಯ ಮಾಹಿತಿ ತಿಳಿಯತ್ತಿದ್ದಂತೆ ಸ್ಥಳಕ್ಕೆ ಎಸ್‍ಡಿಪಿಐ ಪ್ರಮೋದ್ ಕುಮಾರ್ ಮಿಶ್ರಾ ನೇತೃತ್ವದಲ್ಲಿ ರಾಂಗಾ, ಬರಹರವಾ, ರಾಧಾ ಮತ್ತು ಬರ್ಹೆಟ್ ಠಾಣೆಯ ಪೊಲೀಸರು ಹೋಗಿದ್ದಾರೆ. ಹಲ್ಲೆಗೊಳಗಾಗುತ್ತಿದ್ದ ಜೋಡಿಯನ್ನು ರಕ್ಷಿಸಿ ಠಾಣೆಗೆ ಕರೆತಂದಿದ್ದಾರೆ. ಗ್ರಾಮದಲ್ಲಿ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಪೊಲೀಸರನ್ನು ನಿಯೋಜಿಸಲಾಗಿದೆ. ಹಲ್ಲೆಗೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೂ ಯಾರನ್ನು ಬಂಧಿಸಿಲ್ಲ.

  • ಪಕ್ಕದ್ಮೆನೆ ಆಂಟಿ ಜೊತೆ 19ರ ಯುವಕನ ಲವ್- ಕತ್ತು ಹಿಸುಕಿ, ಥಳಿಸಿ ಕೊಂದ್ರು

    ಪಕ್ಕದ್ಮೆನೆ ಆಂಟಿ ಜೊತೆ 19ರ ಯುವಕನ ಲವ್- ಕತ್ತು ಹಿಸುಕಿ, ಥಳಿಸಿ ಕೊಂದ್ರು

    -ಮಹಿಳೆಯ ಗಂಡ, ಕುಟುಂಬಸ್ಥರಿಂದ ಕೊಲೆ
    -ಘಟನೆ ಬಳಿಕ ಆರೋಪಿಗಳು ಪರಾರಿ

    ಪಾಟ್ನಾ: ಪಕ್ಕದ ಮನೆಯ ಮಹಿಳೆಯನ್ನ ಪ್ರೀತಿಸುತ್ತಿದ್ದ 19 ವರ್ಷದ ಯುವಕನನ್ನು ಕೊಲೆಗೈದಿರುವ ಘಟನೆ ಬಿಹಾರದ ಇಮಾಮಗಂಜ್ ಜಿಲ್ಲೆಯ ಡಿಬರ್ ಗ್ರಾಮದಲ್ಲಿ ನಡೆದಿದೆ.

    ಸಂಜೀವ್ ಕುಮಾರ್ ಕೊಲೆಯಾದ ಯುವಕ. ಮಹಿಳೆಯ ಪತಿ ವಿಕಾಸ್ ಕುಮಾರ್ ತನ್ನ ಸಹಚರರ ಜೊತೆ ಸೇರಿ ಸಂಜೀವ್ ನನ್ನು ಕೋಲುಗಳಿಂದ ಹೊಡೆದು, ಕತ್ತು ಹಿಸುಕಿ ಕೊಲೆಗೈಯಲಾಗಿದೆ. ಘಟನೆ ಬಳಿಕ ಆರೋಪಿಗಳು ಪರಾರಿಯಾಗಿದ್ದಾರೆ.

    ನನ್ನ ಸೋದರ ವಿಕಾಸ್ ಕುಮಾರ್ ಪತ್ನಿಯನ್ನ ಪ್ರೀತಿಸುತ್ತಿದ್ದನು. ಇಬ್ಬರ ಪ್ರೇಮ ವಿಚಾರ ತಿಳಿದ ವಿಕಾಸ್ ಕುಮಾರ್ ಸೋದರನಿಗೆ ಜೀವ ಬೆದರಿಕೆ ಸಹ ಹಾಕಿದ್ದನು. ಸೋದರನ ಶವವೂ ಆರೋಪಿ ವಿಕಾಸ್ ಮನೆ ಹಿಂದೆಯ ಜಮೀನಿನಲ್ಲಿ ಸಿಕ್ಕಿದೆ. ತಮ್ಮನನ್ನು ವಿಕಾಸ್ ಕೊಲೆ ಮಾಡಿದ್ದಾನೆ ಎಂದು ಸಂಜೀವ್ ಸೋದರಿ ಆರೋಪಿಸಿದ್ದಾರೆ. ಇತ್ತ ಸಂಜೀವ್ ತಂದೆ ಜುಗೇಶ್ ಪ್ರಸಾದ್ ಮಗನನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಕಣ್ಣೀರು ಹಾಕುತ್ತಿದ್ದಾರೆ.

    ವಿಷಯ ತಿಳಿದು ಸ್ಥಳಕ್ಕಾಗಮಿಸಿರುವ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಹಾಗೆ ಸಂಜೀವ್ ಕುಟುಂಬಸ್ಥರು ಹಾಗೂ ಗ್ರಾಮಸ್ಥರ ಹೇಳಿಕೆಯನ್ನ ದಾಖಲಿಸಿಕೊಂಡಿದ್ದಾರೆ. ಆರೋಪಿಗಳನ್ನು ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದು ಪೊಲೀಸರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  • ಮತ್ತೊಬ್ಬಳ ಜತೆ ಅಕ್ರಮ ಸಂಬಂಧ- ಮಹಿಳೆಯ ಕುಟುಂಬಸ್ಥರಿಂದ ಕೊಲೆ?

    ಮತ್ತೊಬ್ಬಳ ಜತೆ ಅಕ್ರಮ ಸಂಬಂಧ- ಮಹಿಳೆಯ ಕುಟುಂಬಸ್ಥರಿಂದ ಕೊಲೆ?

    ಚಾಮರಾಜನಗರ: ಗ್ರಾಮ ಪಂಚಾಯತಿಯ ಬಿಲ್ ಕಲೆಕ್ಟರ್ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ತಾಲೂಕಿನ ವೆಂಕಟಯ್ಯನ ಛತ್ರದಲ್ಲಿ ನಡೆದಿದೆ.

    ವೆಂಕಟಯ್ಯನ ಛತ್ರದ ನಿವಾಸಿ ಬಸವರಾಜು (35) ಮೃತಪಟ್ಟ ದುರ್ದೈವಿ. ಬಸವರಾಜು ಇಂದು ಅದೇ ಗ್ರಾಮದ ಮಹಿಳೆಯೊಬ್ಬರ ಮನೆ ಮುಂದೆ ಶವ ಪತ್ತೆಯಾಗಿದ್ದು, ಕುಟುಂಬಸ್ಥರು ಕೊಲೆ ಆರೋಪ ಮಾಡಿದ್ದಾರೆ.

    ವಿವಾಹಿತ ಬಸವರಾಜು ಅದೇ ಗ್ರಾಮದ ಮಹಿಳೆಯೊಬ್ಬರ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದರು. ಹೀಗಾಗಿ ಪತ್ನಿಯ ಜೊತೆಗೆ ಆಗಾಗ ಜಗಳವಾಗುತ್ತಿತ್ತು. ಬುಧವಾರ ರಾತ್ರಿ ಫೋನ್ ಕರೆ ಬಂತೆಂದು ತೆರಳಿದ ಬಸವರಾಜು ಇಂದು ಬೆಳಗ್ಗೆ ಮಹಿಳೆ ಮನೆಯ ಮುಂದೆ ಪತ್ತೆಯಾಗಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

    ಸ್ಥಳಕ್ಕೆ ಚಾಮರಾಜನಗರ ಪೂರ್ವ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ಚಾಮರಾಜನಗರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

  • ಕಾರ್ ನೊಳಗೆ ಜೋಡಿ ‘ಲಾಕ್‍ಡೌನ್’-ಪೊಲೀಸರ ಕೈಗೆ ಸಿಕ್ಕಾಗ ಸತ್ಯ ಬಿಚ್ಚಿಟ್ರು

    ಕಾರ್ ನೊಳಗೆ ಜೋಡಿ ‘ಲಾಕ್‍ಡೌನ್’-ಪೊಲೀಸರ ಕೈಗೆ ಸಿಕ್ಕಾಗ ಸತ್ಯ ಬಿಚ್ಚಿಟ್ರು

    -ವಿವಾಹಿತನ ಜೊತೆ ವಿಚ್ಛೇದಿತ ಮಹಿಳೆಯ ಲವ್
    -ಲಾಕ್‍ಡೌನ್‍ನಿಂದಾಗಿ ಕದ್ದುಮುಚ್ಚಿ ಕಾರ್ ನಲ್ಲಿಯೇ ಭೇಟಿ

    ಅಹಮದಾಬಾದ್: ಲಾಕ್‍ಡೌನ್ ನಡುವೆ ಕಾರ್ ನಲ್ಲಿ ಭೇಟಿಯಾದ ಜೋಡಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವ ಘಟನೆ ಗುಜರಾತಿನ ಅಹಮದಾಬಾದ್ ನ ವಸ್ತ್ರಾಪುರದಲ್ಲಿ ನಡೆದಿದೆ.

    ಈ ಜೋಡಿ ಲಾಕ್‍ಡೌನ್ ಆದಾಗಿನಿಂದ ಭೇಟಿಯಾಗಿರಲಿಲ್ಲ. ಹಾಗಾಗಿ ಮನೆಯಿಂದ ಹೊರ ಬಂದು ರಸ್ತೆಯಲ್ಲಿಯೇ ಕಾರ್ ನಿಲ್ಲಿಸಿ ಕುಶಲೋಪಚರಿ ವಿಚಾರಿಸುತ್ತ ಏಕಾಂತದಲ್ಲಿ ಮೈ ಮರೆತಿದ್ದರು. ಈ ವೇಳೆ ಪೊಲೀಸರು ಅನುಮಾನಗೊಂಡು ಕಾರ್ ಪರಿಶೀಲನೆ ನಡೆಸಿದಾಗ ಜೋಡಿ ಸಿಕ್ಕಿಬಿದ್ದಿದಾರೆ. ಪೊಲೀಸರನ್ನು ಕಂಡ ಕೂಡಲೇ ಗಾಬರಿಗೊಳಗಾದ ಜೋಡಿ, ರಸ್ತೆ ಬದಿಯ ನಾಯಿಗಳಿಗೆ ಹಾಲು ಹಾಕಲು ಬಂದಿರೋದಾಗಿ ಸುಳ್ಳು ಹೇಳಿದೆ.

    ಇಬ್ರು ಪ್ರೇಮಿಗಳಾ? ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಸತ್ಯ ಬಿಚ್ಚಿಟ್ಟಿದ್ದಾರೆ. 30 ವರ್ಷದ ವಿವಾಹಿತ ವ್ಯಕ್ತಿಯ ಜೊತೆ 40 ವರ್ಷದ ವಿಚ್ಛೇದಿತ ಮಹಿಳೆ ಅಕ್ರಮ ಸಂಬಂಧ ಹೊಂದಿದ್ದಳು. ಲಾಕ್‍ಡೌನ್ ಬಳಿಕ ಮನೆಯಲ್ಲಿ ಬಂಧಿಯಾಗಿದ್ದರಿಂದ ಜೋಡಿ ಭೇಟಿಯಾಗಿರಲಿಲ್ಲ. ಹಾಗಾಗಿ ಭೇಟಿಯಾಗಲು ನಿರ್ಧರಿಸಿ, ರಸ್ತೆ ಬದಿಯಲ್ಲಿಯೇ ಕಾರ್ ನಿಲ್ಲಿಸಿ ಏಕಾಂತದಲ್ಲಿದ್ದರು. ಏಕಾಂತದಲ್ಲಿದ್ದಾಗಲೇ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಇಬ್ಬರು ಲಾಕ್‍ಡೌನ್ ನಿಯಮ ಉಲ್ಲಂಘಿಸಿದಕ್ಕೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಕೊರೊನಾ ತಡೆಗಾಗಿ ಸರ್ಕಾರ ಲಾಕ್‍ಡೌನ್ ಘೋಷಣೆ ಮಾಡಿದ್ದು, ಜನರು ಮಾತ್ರ ಕುಂಟು ನೆಪಗಳನ್ನು ರಸ್ತೆಗಿಳಿಯುತ್ತಿದ್ದಾರೆ.

  • ಪ್ರೇಯಸಿಯನ್ನು ಕೊಂದು ಮೃತದೇಹದೊಂದಿಗೆ ದುಬೈ ಸುತ್ತಿದ ಪ್ರಿಯಕರ

    ಪ್ರೇಯಸಿಯನ್ನು ಕೊಂದು ಮೃತದೇಹದೊಂದಿಗೆ ದುಬೈ ಸುತ್ತಿದ ಪ್ರಿಯಕರ

    – ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾಳೆಂದು ಕತ್ತನ್ನೇ ಕೊಯ್ದ
    – ತಾನೇ ಬಂದು ಠಾಣೆಗೆ ಶರಣಾದ ಭಾರತೀಯ

    ದುಬೈ: ಭಾರತೀಯ ಮೂಲದ ವ್ಯಕ್ತಿಯೊಬ್ಬ ತನ್ನ ಗೆಳತಿಯನ್ನು ಕೊಲೆ ಮಾಡಿ, ನಂತರ ಅವಳ ಮೃತದೇಹವನ್ನು ಕಾರಿನ ಮುಂದಿನ ಸೀಟಿನಲ್ಲಿ ಇಟ್ಟುಕೊಂಡು 45 ನಿಮಿಷಗಳ ಕಾಲ ದುಬೈ ಸಿಟಿಯಲ್ಲಿ ರೌಂಡ್ ಹಾಕಿರುವ ಘಟನೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಲ್ಲಿ ನಡೆದಿದೆ.

    27 ವರ್ಷದ ಭಾರತೀಯ ಮೂಲದ ವ್ಯಕ್ತಿ ಭಾರತೀಯಳೇ ಆದ ತನ್ನ ಪ್ರೇಯಸಿಯನ್ನು ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಆರೋಪಿ ಮತ್ತು ಕೊಲೆಯಾದ ಯುವತಿ 5 ವರ್ಷದಿಂದ ಪ್ರೀತಿಸುತ್ತಿದ್ದರು. ಆದರೆ ಇತ್ತೀಚೆಗೆ ಯುವತಿ ಬೇರೆಯವನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಇದರಿಂದ ಕೋಪಗೊಂಡ ಆತ ಆಕೆಯನ್ನು ಕಾರಿನಲ್ಲೇ ಕತ್ತು ಸೀಳಿ ಕೊಲೆ ಮಾಡಿದ್ದಾನೆ.

    ಈ ಬಗ್ಗೆ ಮಾಹಿತಿ ನೀಡಿರುವ ದುಬೈ ಪೊಲೀಸರು, ಈ ಇಬ್ಬರು ಪ್ರೀತಿ ಮಾಡುತ್ತಿರುತ್ತಾರೆ. ಆದರೆ ಕೊಲೆಯಾದ ಸಂತ್ರಸ್ತೆ ಬೇರೆಯೊಬ್ಬರ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿರುತ್ತಾಳೆ. ಇದನ್ನು ತಿಳಿದ ಆರೋಪಿ ಆಕೆಯ ಜೊತೆ ಜಗಳವಾಡಿರುತ್ತಾನೆ. ಆದರೆ ಕೊಲೆಯಾದ ದಿನ ಇಬ್ಬರು ಕಾರಿನಲ್ಲಿ ಕುಳಿತು ಈ ವಿಚಾರಕ್ಕೆ ವಾದ ಮಾಡುತ್ತಿರುತ್ತಾರೆ. ಈ ವೇಳೆ ಕೋಪ ವಿಕೋಪಕ್ಕೆ ತಿರುಗಿ ಮಾಲ್‍ವೊಂದರ ಪಾರ್ಕಿಂಗ್ ಸ್ಥಳದಲ್ಲಿ ಆರೋಪಿ ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ತಿಳಿಸಿದ್ದಾರೆ.

    ಆರೋಪಿ ಕೊಲೆ ಮಾಡಿದ ನಂತರ ಆಕೆಯ ಮೃತದೇಹವನ್ನು ಕಾರಿನ ಮುಂದಿನ ಸೀಟಿನಲ್ಲಿ ಇಟ್ಟುಕೊಂಡೇ ಸಿಟಿಯಲ್ಲಿ 45 ನಿಮಿಷ ಸುತ್ತಿದ್ದಾನೆ. ನಂತರ ಒಂದು ಹೋಟೆಲ್‍ಗೆ ಹೋಗಿ ಅಲ್ಲಿ ಊಟ ಮತ್ತು ನೀರಿನ ಬಾಟಲಿಯನ್ನು ಖರೀದಿಸಿರುತ್ತಾನೆ. ಆದರೆ ಕೊನೆಯಲ್ಲಿ ಆತ ಪೊಲೀಸ್ ಠಾಣೆಗೆ ಬಂದು ನಾನು ನನ್ನ ಪ್ರೇಯಸಿಯನ್ನು ಕೊಲೆ ಮಾಡಿದ್ದೇನೆ. ಆಕೆಯ ಮೃತದೇಹ ಕಾರಿನಲ್ಲಿ ಇದೆ ಎಂದು ಹೇಳಿ ಪೊಲೀಸರಿಗೆ ಶರಣಾಗಿದ್ದಾನೆ.

    ಆರೋಪಿಯ ಹೇಳಿಕೆ ಬಳಿಕೆ ಪೊಲೀಸ್ ಠಾಣೆಯ ಪಾರ್ಕಿಂಗ್ ಏರಿಯಾದಲ್ಲಿ ನಿಂತಿದ್ದ ಕಾರಿನ ಬಳಿ ಪೊಲೀಸರು ಹೋಗಿ ತಪಾಸಣೆ ಮಾಡಿದ್ದಾರೆ. ಈ ವೇಳೆ ಆಕೆ ರಕ್ತದ ಮಡುವಿನಲ್ಲಿ ಸೀಟಿನ ಮೇಲೆ ಬಿದ್ದಿರುತ್ತಾಳೆ. ಆಕೆಯ ಕತ್ತು ಸೀಳಿದ ಚಾಕು ಕೂಡ ಕಾರಿನ ಹಿಂಬದಿಯ ಸೀಟಿನಲ್ಲಿ ಕಂಡು ಬಂದಿರುತ್ತದೆ. ಪೂರ್ವನಿಯೋಜಿತ ಕೊಲೆ ಎಂದು ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.