Tag: ಅಕ್ರಮ ಸಂಬಂಧ

  • ಕಿರಿಯ ಸೊಸೆಯೊಂದಿಗೆ ಅಕ್ರಮ ಸಂಬಂಧ- ಪತಿಯನ್ನೆ ಕೊಂದ ಪತ್ನಿ

    ಕಿರಿಯ ಸೊಸೆಯೊಂದಿಗೆ ಅಕ್ರಮ ಸಂಬಂಧ- ಪತಿಯನ್ನೆ ಕೊಂದ ಪತ್ನಿ

    – ಹಿರಿಯ ಸೊಸೆ ಜೊತೆ ಸೇರಿ ಪತಿಯ ಹತ್ಯೆ

    ಲಕ್ನೋ: ಕಿರಿಯ ಸೊಸೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದನ್ನು ಅರಿತ ಪತ್ನಿ ತನ್ನ ಹಿರಿಯ ಸೊಸೆಯೊಂದಿಗೆ ಸೇರಿ ಪತಿಯನ್ನೇ ಹತ್ಯೆ ಮಾಡಿದ್ದಾಳೆ.

    ಉತ್ತರ ಪ್ರದೇಶದ ಭಾದೋಹಿ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ವ್ಯಕ್ತಿ ತನ್ನ ಕಿರಿಯ ಸೊಸೆಯೊಂದಿಗೇ ಅಕ್ರಮ ಸಂಬಂಧ ಹೊಂದಿದ್ದ. ಹೀಗಾಗಿ ಆತನ ಪತ್ನಿ ಹಾಗೂ ಹಿರಿಯ ಸೊಸೆ ಸೇರಿ 55 ವರ್ಷದ ವ್ಯಕ್ತಿಯನ್ನು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.

    ಭಾನುವಾರ ತಡರಾತ್ರಿ ಕೊಯಿರಾನಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪತ್ನಿ ಹಾಗೂ ಹಿರಿಯ ಸೊಸೆ ಸೇರಿಕೊಂಡು ವ್ಯಕ್ತಿಯ ಮೇಲೆ ದಾಳಿ ನಡೆಸಿದ್ದಾರೆ. ಚಾಕೂವಿನಿಂದ ವ್ಯಕ್ತಿಯ ಗಂಟಲನ್ನು ಕುಯ್ದು ಹತ್ಯೆ ಮಾಡಿದ್ದಾರೆ ಎಂದು ಭಾದೋಹಿ ಎಸ್‍ಪಿ ರಾಮ್ ಬದನ್ ಸಿಂಗ್ ಮಾಹಿತಿ ನೀಡಿದ್ದಾರೆ.

    ಘಟನೆ ಬಳಿಕ ತಕ್ಷಣವೇ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಸಾವನ್ನಪ್ಪಿದ ವ್ಯಕ್ತಿಗೆ ನಾಲ್ವರು ಗಂಡು ಮಕ್ಕಳಿದ್ದು, ಎಲ್ಲರೂ ಮುಂಬೈನಲ್ಲಿ ವಲಸೆ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ಇಬ್ಬರಿಗೆ ವಿವಾಹವಾಗಿದ್ದು, ಇಬ್ಬರ ಪತ್ನಿಯರು ಸಹ ಅತ್ತೆ, ಮಾವರ ಜೊತೆ ಗ್ರಾಮದಲ್ಲೇ ನೆಲೆಸಿದ್ದರು. ಈ ವೇಳೆ ಮಾವ ತನ್ನ ಕಿರಿಯ ಸೊಸೆಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದು, ಇದು ಪತ್ನಿ ಹಾಗೂ ಹಿರಿಯ ಸೊಸೆಗೆ ತಿಳಿದಿದೆ. ಬಳಿಕ ಇಬ್ಬರೂ ಅಕ್ರಮ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಬಳಿಕ ಕಿರಿಯ ಸೊಸೆಯನ್ನು ತವರು ಮನೆಗೆ ಸಹ ಕಳುಹಿಸಿದ್ದಾರೆ.

    ಇದರಿಂದ ಕೋಪಗೊಂಡ ವ್ಯಕ್ತಿ, ಸ್ವಲ್ಪ ಸಮಯದ ಬಳಿಕ ತನ್ನ ಹಿರಿಯ ಸೊಸೆ ಮೇಲೆ ದಾಳಿ ನಡೆಸಿ ಆಕೆಯ ಕಣ್ಣಿಗೆ ಹಾನಿ ಮಾಡಿದ್ದಾನೆ. ಅಲ್ಲದೆ ತನ್ನ ಪತ್ಬಿ ಹಾಗೂ ಹಿರಿಯ ಸೊಸೆಯನ್ನು ಮುಖ್ಯ ಮನೆಯಿಂದ ಹೊರಗೆ ಹಾಕಿದ್ದಾನೆ. ಅಲ್ಲದೆ 100 ಮೀ. ದೂರದಲ್ಲಿರುವ ಬೇರೆ ಮನೆಯಲ್ಲಿ ವಾಸಿಸುವಂತೆ ಒತ್ತಾಯಿಸಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.

    ಬಳಿಕ ನಾಲ್ಕೈದು ದಿನಗಳ ಹಿಂದೆ ವ್ಯಕ್ತಿ ತನ್ನ ಜೊತೆ ಇರಲು ತವರು ಮನೆಯಿಂದ ಸೊಸೆಯನ್ನು ಕರೆ ತಂದಿದ್ದಾನೆ. ಇದರಿಂದ ಕೋಪಗೊಂಡ ವ್ಯಕ್ತಿಯ ಪತ್ನಿ ಹಾಗೂ ಹಿರಿಯ ಸೊಸೆ, ದಾಳಿ ನಡೆಸಿ ಆತನನ್ನು ಮನೆಯಿಂದ ಹೊರಗೆಳೆದು ಹೊಡೆದಿದ್ದಾರೆ. ಈ ವೇಳೆ ಕಿರಿಯ ಸೊಸೆ ಪರಾರಿಯಾಗಿದ್ದಾಳೆ. ಬಳಿಕ ಪೊಲೀಸ್ ಠಾಣೆಗೆ ತೆರಳಿ ಅತ್ತೆ ಹಾಗೂ ಅಕ್ಕ ನನ್ನ ಹಾಗೂ ಮಾವನ ಮೇಲೆ ದಾಳಿ ನಡೆಸಿದ್ದಾರೆ ಎಂದು ದೂರು ನೀಡಿದ್ದಾಳೆ.

    ಬಳಿಕ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಈ ವೇಳೆ ವ್ಯಕ್ತಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಗಮನಿಸಿದ್ದಾರೆ. ಅಲ್ಲದೆ ಕುತ್ತಿಗೆ ಸೀಳಿರುವುದನ್ನು ಗಮನಿಸಿದ್ದಾರೆ. ತಕ್ಷಣವೇ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವ್ಯಕ್ತಿ ಬದುಕುಳಿಯಲಿಲ್ಲ ಎಂದು ಪೊಲೀಸರು ವಿವರಿಸಿದ್ದಾರೆ.

    ಸಾವನ್ನಪ್ಪಿದ ವ್ಯಕ್ತಿ ತನ್ನ ಕಿರಿಯ ಸೊಸೆಯೊಂದಿಗೆ ಅಕ್ರಮ ಸಂಬಂಧ ಹೊಂದಿರುವುದು ಪ್ರಾಥಮಿಕ ತನಿಖೆ ವೇಳೆ ಬಯಲಾಗಿದೆ. ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಕೊಲೆಯಾದ ವ್ಯಕ್ತಿಯ ನಾಲ್ಕೂ ಮಕ್ಕಳಿಗೆ ವಿಷಯ ತಿಳಿಸಲಾಗಿದೆ ಎಂದು ಎಸ್‍ಪಿ ತಿಳಿಸಿದ್ದಾರೆ.

  • ಅಪ್ರಾಪ್ತೆ ಜೊತೆ ಅಂಕಲ್ ಲವ್ – ವಿರೋಧಿಸಿದ್ದಕ್ಕೆ ಆತ್ಮಹತ್ಯೆಗೆ ಯತ್ನ

    ಅಪ್ರಾಪ್ತೆ ಜೊತೆ ಅಂಕಲ್ ಲವ್ – ವಿರೋಧಿಸಿದ್ದಕ್ಕೆ ಆತ್ಮಹತ್ಯೆಗೆ ಯತ್ನ

    – ಅಪ್ರಾಪ್ತೆ ಸಾವು, ಗಂಭೀರ ಸ್ಥಿತಿಯಲ್ಲಿ 2 ಮಕ್ಕಳ ತಂದೆ

    ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಪೈದೊಡ್ಡಿಯಲ್ಲಿ ಅನೈತಿಕ ಸಂಬಂಧಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

    ಘಟನೆಯಲ್ಲಿ 17 ವರ್ಷದ ಹುಡುಗಿ ಸಾವನ್ನಪ್ಪಿದ್ದು, ಯರಜಂತಿ ಗ್ರಾಮದ ನರಸಪ್ಪನ ಸ್ಥಿತಿ ಗಂಭೀರವಾಗಿದೆ. ಇಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.

    ನರಸಪ್ಪನಿಗೆ ಮದುವೆಯಾಗಿ ಎರಡು ಮಕ್ಕಳಿವೆ. ಆದರೂ ಈತ ಅಪ್ರಾಪ್ತೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದನು. ಆದರೆ ಈ ಪ್ರೇಮ ಸಂಬಂಧಕ್ಕೆ ಮನೆಯಲ್ಲಿ ವಿರೋಧ ಮಾಡಿದ ಹಿನ್ನೆಲೆ ಇಬ್ಬರೂ ಸಾವಿನ ನಿರ್ಧಾರ ತೆಗೆದುಕೊಂಡಿದ್ದಾರೆ. ಅಂತೆಯೇ ವಿಷ ಸೇವನೆ ಮಾಡಿದ್ದಾರೆ. ಪರಿಣಾಮ ಹುಡುಗಿ ಸಾವನ್ನಪ್ಪಿ, ಅಂಕಲ್ ಪಾರಾಗಿದ್ದಾನೆ.

    ಈ ಹಿಂದೆ ಅಪ್ರಾಪ್ತೆಯನ್ನ ನರಸಪ್ಪನಿಂದ ದೂರ ಮಾಡಿ ಮಹಿಳಾ ಸಾಂತ್ವ ಕೇಂದ್ರದಲ್ಲಿ ಇರಿಸಲಾಗಿತ್ತು. ಆದರೆ ಅಲ್ಲಿಂದ ಹೊರಬಂದ ಅಪ್ರಾಪ್ತೆ ನರಸಪ್ಪನೊಂದಿಗೆ ಆತ್ಮಹತ್ಯೆಗೆ ಮುಂದಾಗಿದ್ದಾಳೆ. ನಮ್ಮ ಹಣ, ಎಟಿಎಂನಲ್ಲಿರುವ ಉಂಗುರ ನನ್ನ ಮಕ್ಕಳಿಗೆ ಕೊಡಿ. ಮುಂದಿನ ಜನ್ಮದಲ್ಲಿ ನಾವಿಬ್ಬರು ಗಂಡ ಹೆಂಡತಿಯಾಗುತ್ತೇವೆ ಎಂದು ಚೀಟಿ ಬರೆದು ವಿಷ ಸೇವನೆ ಮಾಡಿದ್ದಾರೆ.

    ಕೈ ಮೇಲೆ ಒಬ್ಬರಿಗೊಬ್ಬರು ಹೆಸರುಗಳನ್ನ ಬರೆದುಕೊಂಡು ವಿಷ ಸೇವನೆ ಮಾಡಿದ್ದಾರೆ. ನರಸಪ್ಪನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪತ್ನಿಯೊಂದಿಗೆ ಅಕ್ರಮ ಸಂಬಂಧ – ವ್ಯಕ್ತಿಯನ್ನು ರಾಡ್‍ನಿಂದ ಬಡಿದು ಕೊಂದ ಪತಿ

    ಪತ್ನಿಯೊಂದಿಗೆ ಅಕ್ರಮ ಸಂಬಂಧ – ವ್ಯಕ್ತಿಯನ್ನು ರಾಡ್‍ನಿಂದ ಬಡಿದು ಕೊಂದ ಪತಿ

    ರಾಯಚೂರು: ನಗರದ ಮಹಿಳಾ ಸಮಾಜ ಆವರಣದಲ್ಲಿನ ಪಾಳು ಕೋಣೆಯಲ್ಲಿ ಪತ್ತೆಯಾಗಿದ್ದ ಶವದ ಕೊಲೆ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಕೊಲೆಗೆ ಅನೈತಿಕ ಸಂಬಂಧವೇ ಕಾರಣ ಅನ್ನೋದು ಬಯಲಾಗಿದೆ.

    ನವೆಂಬರ್ 30ರಂದು ದೇವನಪಲ್ಲಿಯ ಖಾಸಗಿ ಬ್ಯಾಂಕ್ ಉದ್ಯೋಗಿ 32 ವರ್ಷದ ಸೈಯದ್ ಇಮ್ರಾನ್ ಖಾದ್ರಿ ಶವವಾಗಿ ಪತ್ತೆಯಾಗಿದ್ದ. ಕೊಲೆ ಪ್ರಕರಣ ಆರೋಪಿ ರಾಯಚೂರಿನ ಬೈರೂನ್ ಕಿಲ್ಲಾ ನಿವಾಸಿ ಅಬ್ದುಲ್ ರಷೀದ್‍ನನ್ನ ಬಂಧಿಸಲಾಗಿದೆ. ರಾಡ್ ನಿಂದ ತಲೆಗೆ ಹೊಡೆದು ಕೊಲೆ ಮಾಡಿ ಆರೋಪಿ ಪರಾರಿಯಾಗಿದ್ದ. ಅನುಮಾನದ ಮೇಲೆ ಆರೋಪಿಯನ್ನ ಬಂಧಿಸಿರುವ ಪೊಲೀಸರು ಸತ್ಯ ಬಾಯಿಬಿಡಿಸಿದ್ದಾರೆ.

    ಸೈಯದ್ ಇಮ್ರಾನ್ ಖಾದ್ರಿ ಜೊತೆ ತನ್ನ ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆ ಅಂತ ಅಬ್ದುಲ್ ರಶೀದ್ ಅನುಮಾನಗೊಂಡಿದ್ದ. ಅಲ್ಲದೆ ತನ್ನಿಂದ ದೂರವಾಗಿರುವ ಪತ್ನಿ ಇಮ್ರಾನ್ ಕುಮ್ಮಕ್ಕಿನಿಂದ ಪೊಲೀಸ್ ಠಾಣೆಯಲ್ಲಿ ಕೌಟುಂಬಿಕ ಹಿಂಸೆ ಹಾಗೂ ಜೀವನಾಂಶ ಪ್ರಕರಣ ದಾಖಲಿದ್ದಾಳೆ ಎಂದು ಸಿಟ್ಟಿನಿಂದ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ. ಕೊಲೆಯಾದ ಇಮ್ರಾನ್ ಸಹ ತನ್ನ ಪತ್ನಿಯಿಂದ ದೂರವಾಗಿದ್ದ, ವಿವಾಹ ವಿಚ್ಛೇದನ ಪ್ರಕರಣವೂ ನಡೆಯುತ್ತಿತ್ತು. ಹೀಗಾಗಿ ಕೊಲೆಯ ಹಿಂದೆ ಇಮ್ರಾನ್ ಪತ್ನಿ ಕಡೆಯವರ ಕೈವಾಡವಿದೆ ಅಂತ ಇಮ್ರಾನ್ ಕುಟುಂಬಸ್ಥರು ಆರೋಪಿಸಿದ್ದರು. ಆದರೆ ಪೊಲೀಸ್ ತನಿಖೆಯಲ್ಲಿ ಆರೋಪಿ ಅಬ್ದುಲ್ ರಶೀದ್ ಸಿಕ್ಕಿಬಿದ್ದಿದ್ದು, ತಪ್ಪೊಪ್ಪಿಕೊಂಡಿದ್ದಾನೆ.

    ಸದರ ಬಜಾರ್ ಠಾಣಾ ಪೊಲೀಸರು ಘಟನೆ ನಡೆದು ಒಂದೇ ದಿನದಲ್ಲಿ ಪ್ರಕರಣ ಭೇದಿಸಿ ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಅಧಿಕಾರಿಗಳು ಅತೀ ಕಡಿಮೆ ಸಮಯದಲ್ಲಿ ಆರೋಪಿಯನ್ನು ಬಂಧಿಸಿದ್ದಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ನಿಕಮ್ ತನಿಖಾ ತಂಡವನ್ನು ಅಭಿನಂದಿಸಿದ್ದಾರೆ.

  • 20 ವರ್ಷದ ಹಿಂದೆ ಪತ್ನಿ ಜೊತೆ ಸಂಬಂಧ ಹೊಂದಿದ್ದವನನ್ನು ಹುಡುಕಿ ಕೊಂದ ಪತಿ

    20 ವರ್ಷದ ಹಿಂದೆ ಪತ್ನಿ ಜೊತೆ ಸಂಬಂಧ ಹೊಂದಿದ್ದವನನ್ನು ಹುಡುಕಿ ಕೊಂದ ಪತಿ

    – ಜ್ಯೋತಿಷಿಯಿಂದ ಬಯಲಾಗಿತ್ತು, ಪತ್ನಿಯ ಹಳೆ ಅಕ್ರಮ ಸಂಬಂಧ

    ಅಹಮದಾಬಾದ್: 20 ವರ್ಷದ ಹಿಂದೆ ತನ್ನ ಪತ್ನಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಪತಿ ಈಗ ಹುಡುಕಿ ಕೊಲೆ ಮಾಡಿರುವ ಘಟನೆ ಗುಜರಾತ್‍ನ ಅಹಮದಾಬಾದ್‍ನಲ್ಲಿ ನಡೆದಿದೆ.

    ಕೊಲೆಯಾದ ವ್ಯಕ್ತಿಯನ್ನು 40 ವರ್ಷದ ರಾಜು ಹುಡಾ ಎಂದು ಗುರುತಿಸಲಾಗಿದೆ. ಚೇಲಾ ಭರದ್ ತನ್ನ ಸೋದರ ಮಾವ ದೌಲಾ ಭರ್ವಾಡ್, ಆನಂದ್‍ನಗರದ ನಿವಾಸಿ ಮಹೇಶ್ ಭರದ್ ಮತ್ತು ಸೂರತ್ ನಿವಾಸಿಗಳಾದ ರಮೇಶ್ ಮಾರ್ವಾಡಿ ಮತ್ತು ಪ್ರತೀಕ್ ಶೆಟ್ಟಿ ಜೊತೆ ಸೇರಿಕೊಂಡು ಕೊಲೆ ಮಾಡಿದ್ದಾನೆ. ಈಗ ಈ ಐವರನ್ನು ಪೊಲೀಸರು ಬಂಧಿಸಿದ್ದಾರೆ.

    ನಡೆದಿದ್ದೇನು?
    20 ವರ್ಷದ ಹಿಂದೆ ಮದುವೆಯಾಗಿದ್ದ ಚೇಲಾ ಭರದ್‍ನಿಗೆ ಈಗ ಜ್ಯೋತಿಷಿಯೊಬ್ಬ ನಿನ್ನ ಪತ್ನಿ ಮದುವೆಗೂ ಮುಂಚೆ ಅಕ್ರಮ ಸಂಬಂಧ ಹೊಂದಿದ್ದಳು ಎಂದು ಹೇಳಿದ್ದ. ಅದನ್ನು ಮನಸ್ಸಿನಲ್ಲೇ ಇಟ್ಟುಕೊಂಡಿದ್ದ ಚೇಲಾ ಮನೆಗೆ ಬಂದು ಹೆಂಡತಿಯನ್ನು ಹೊಡೆದು ಯಾರು ಹೇಳು ಎಂದು ಹೆದರಿಸಿದ್ದ. ಪತಿಯ ಕೋಪಕ್ಕೆ ಭಯಪಟ್ಟ ಹೆಂಡತಿ ಮದುವೆಗೂ ಮುಂಚೆ ನನಗೆ ನಮ್ಮ ಊರಿನ ರಾಜು ಹುಡಾ ಜೊತೆ ಸಂಬಂಧವಿತ್ತು ಎಂದು ಒಪ್ಪಿಕೊಂಡಿದ್ದಳು. ಆಗ ಚೇಲಾ ಆತನನ್ನು ಕೊಲೆ ಮಾಡಬೇಕು ಎಂದು ನಿರ್ಧಾರ ಮಾಡಿದ್ದ.

    ಹೀಗಿರುವಾಗ ರಾಜು ತನ್ನ ಸೋದರ ಅತ್ತೆಗೆ ಹುಷಾರಿಲ್ಲವೆಂದು ನೋಡಿಕೊಂಡು ಬರಲು ಚೇಲಾ ಅವರ ಊರಿಗೆ ಬಂದಿದ್ದ. ಇದನ್ನೆ ಉಪಯೋಗಿಸಿಕೊಂಡ ಚೇಲಾ, ರಾಜು ಹುಡಾನನ್ನು ಫೋನ್ ಮಾಡಿ ಕರೆಸಿಕೊಂಡು ತನ್ನ ಸಚಹರರೊಂದಿಗೆ ಸೇರಿ ಕೊಲೆ ಮಾಡಿ ಮೃತದೇಹವನ್ನು ಕಾಲುವೆಗೆ ತೇಲಿ ಬಿಟ್ಟಿರುತ್ತಾನೆ. ರಾಜುವಿನ ಮೃತದೇಹ ಕಾಲುವೆಯಲ್ಲಿ ಪತ್ತೆಯಾದ ನಂತರ ಪೊಲೀಸರು ತನಿಖೆ ಮಾಡಿ ಐದು ಜನರನ್ನು ಬಂಧಿಸಿದ್ದಾರೆ.

    ಫೋನ್ ಕರೆಗಳ ಆಧಾರದ ಮೇಲೆ ಚೇಲಾನನ್ನು ಮೊದಲು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಆತ ನಾನೇ ಕೊಲೆ ಮಾಡಿದ್ದು ಎಂದು ಒಪ್ಪಿಕೊಂಡಿದ್ದಾನೆ. ಜೊತೆಗೆ ತನ್ನ ಹೆಂಡತಿಯ ಜೊತೆ ಆತ ಮದುವೆಗೂ ಮುಂಚೆ ಅಕ್ರಮ ಸಂಬಂಧ ಹೊಂದಿದ್ದ ಕಾರಣ ಆತನನ್ನು ಕೊಲೆ ಮಾಡಿದ್ದೇನೆ ಎಂದು ಹೇಳಿದ್ದಾನೆ.

  • ಮಕ್ಕಳ ಮೊಬೈಲ್‍ಗೆ ಬಂತು ಅಮ್ಮನ ಖಾಸಗಿ ಫೋಟೋ

    ಮಕ್ಕಳ ಮೊಬೈಲ್‍ಗೆ ಬಂತು ಅಮ್ಮನ ಖಾಸಗಿ ಫೋಟೋ

    – ಠಾಣೆ ಮೆಟ್ಟಿಲೇರಿದ ಮಹಿಳೆ

    ಅಹ್ಮದಾಬಾದ್: ಮಹಿಳೆಯೊಂದಿಗೆ ತಾನಿದ್ದ ಖಾಸಗಿ ಫೋಟೋಗಳನ್ನು ಎಕ್ಸ್ ಲವರ್ ಆಕೆಯ ಮಕ್ಕಳಿಗೆ ಕಳುಹಿಸಿರುವ ಆಘಾತಕಾರಿ ಘಟನೆ ನಡೆದಿದ್ದು, ಮಾಜಿ ಪ್ರಿಯತಮನ ವಿರುದ್ಧ ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

    ಗುಜರಾತ್‍ನ ಅಹ್ಮದಾಬಾದ್‍ನಲ್ಲಿ ಪ್ರಕರಣ ನಡೆದಿದ್ದು, 43 ವರ್ಷದ ಮಹಿಳೆ ತನ್ನ ಇಬ್ಬರು ಮಕ್ಕಳೊಂದಿಗೆ ಅಂಬಾವಾಡಿಯಲ್ಲಿ ನೆಲೆಸಿದ್ದು, ಕ್ಯಾಟರಿಂಗ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಕಳೆದ 15 ವರ್ಷಗಳಿಂದ ಪತಿಯಿಂದ ತಾನು ದೂರವಾಗಿರುವುದಾಗಿ ಮಹಿಳೆ ತಿಳಿಸಿದ್ದಾಳೆ.

    ಸುಮಾರು ಒಂದೂವರೆ ವರ್ಷದ ಹಿಂದೆ ಮಹಿಳೆ ತಾನು ಕೆಲಸ ಮಾಡುವ ಸಂಸ್ಥೆಯಲ್ಲಿ ವತ್ವ ಮೂಲದ ಆರೋಪಿ ಮಿತೇಶ್ ಪರ್ಮರ್‍ನನ್ನು ಭೇಟಿಯಾಗಿದ್ದಾಳೆ. ಈ ವೇಳೆ ಇಬ್ಬರ ನಡುವೆ ಸ್ನೇಹ ಬೆಳೆದಿದ್ದು, ಬಾಂಧ್ಯವ್ಯ ವೃದ್ಧಿಸಿದೆ. ಬಳಿಕ ದೈಹಿಕ ಸಂಪರ್ಕ ಬೆಳೆಸಿದ್ದಾರೆ.

    ಸ್ನೇಹ ಬೆಳೆದ ಸುಮಾರು ಮೂರು ತಿಂಗಳ ಬಳಿಕ ಅಂಬಾವಾಡಿ ನಿವಾಸಿ ಮಹಿಳೆ ತನ್ನ ಮಕ್ಕಳಿಗೆ ಮುಜುಗರವಾಗುತ್ತದೆ ಎಂಬ ಕಾರಣಕ್ಕೆ ಸಂಬಂಧವನ್ನು ಕಡಿತಗೊಳಿಸಲು ನಿರ್ಧರಿಸಿದ್ದಾಳೆ. ಇದನ್ನು ಸಹಿಸದ ಪರ್ಮರ್, ತಾನು ಸಂಬಂಧ ಹೊಂದಿದಾಗಿನ ಖಾಸಗಿ ಫೋಟೋಗಳನ್ನು ಇಟ್ಟುಕೊಂಡು ಬೆದರಿಸಲು ಆರಂಭಿಸಿದ್ದಾನೆ ಎಂದು ಮಹಿಳೆ ಆರೋಪಿದ್ದಾಳೆ.

    ಸಂಬಂಧವನ್ನು ಮುಂದುವರಿಸದಿದ್ದಲ್ಲಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿದ್ದಾನೆ. ಆದರೆ ಮಹಿಳೆ ಇದನ್ನು ಧಿಕ್ಕರಿಸಿ, ಆರೋಪಿಯೊಂದಿಗಿನ ಸಂಬಂಧವನ್ನು ಕಡಿತಗೊಳಿಸಿದ್ದಾಳೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಮಹಿಳೆ ಪಶ್ಚಾತ್ತಾಪ ಪಟ್ಟು ನಿರಾಕರಿಸಿದ್ದರಿಂದ ಆರೋಪಿ ಮಹಿಳೆಯೊಂದಿಗಿದ್ದ ಖಾಸಗಿ ಫೋಟೋಗಳನ್ನು ಆಕೆಯ ಮಕ್ಕಳಿಗೆ ಕಳುಹಿಸಿದ್ದಾನೆ. ಬಳಿಕ ಗುರುವಾರ ಮಹಿಳೆ ಅಹ್ಮದಾಬಾದ್‍ನ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ದೂರಿನ ಆಧಾರದ ಮೇಲೆ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸೈಬರ್ ಸೆಲ್‍ನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

  • ಗೆಳತಿಯ ಪತಿಯನ್ನು ಕಲ್ಲಿನಿಂದ ಜಜ್ಜಿ ಕೊಂದೇ ಬಿಟ್ಟ

    ಗೆಳತಿಯ ಪತಿಯನ್ನು ಕಲ್ಲಿನಿಂದ ಜಜ್ಜಿ ಕೊಂದೇ ಬಿಟ್ಟ

    ಹುಬ್ಬಳ್ಳಿ: ಪತ್ನಿ ಹಾಗೂ ಮಗುವನ್ನು ನೋಡಲು ಬಂದು ಬೀದಿ ಹೆಣವಾಗಿದ್ದ ವ್ಯಕ್ತಿಯ ಕೊಲೆಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಪ್ರಕರಣ ನಡೆದ 24 ಗಂಟೆಗಳಲ್ಲಿ ಆರೋಪಿಯ ಬಂಧಿಸುವಲ್ಲಿ ಹುಬ್ಬಳ್ಳಿಯ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

    ಹಾವೇರಿ ಜಿಲ್ಲೆಯ ಹಾನಗಲ್ ಪಟ್ಟಣದ ಜಗದೀಶ್ ಕೊಲ್ಲಾಪುರ ಕೊಲೆಯಾದ ವ್ಯಕ್ತಿ. ಕೊಲೆಯಾದ ಜಗದೀಶ್‍ನ ಹೆಂಡತಿಯ ಪ್ರಿಯಕರನೇ ಆರೋಪಿ ಎಂಬುದನ್ನು ಪತ್ತೆ ಹಚ್ಚಿರುವ ಪೊಲೀಸರು, ಆರೋಪಿತನಾದ ಅದರಗುಂಚಿ ಗ್ರಾಮದ ಕಾಶಪ್ಪ ನಿಂಗಪ್ಪ ತಿಪ್ಪಣ್ಣನವರ ಬಂಧಿಸಿ ಪ್ರಕರಣವನ್ನು ಬೇಧಿಸಿದ್ದಾರೆ.

    ಜಗದೀಶ್ ಶವ ನಿನ್ನೆ ಹುಬ್ಬಳ್ಳಿ ಹೊರವಲಯದ ಅಂಚಟಗೇರಿ ಬಳಿಯ ಚೆನ್ನಾಪುರ ರಸ್ತೆಯಲ್ಲಿ ಸಿಕ್ಕಿತ್ತು. ಆತನ ತಲೆಯನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ಪ್ರಕರಣವನ್ನು ಬೆನ್ನತ್ತಿದ ಪೊಲೀಸರಿಗೆ ಕೊಲೆಗೆ ಕಾರಣ ಜಗದೀಶ್‍ನ ಹೆಂಡತಿಯ ಅಕ್ರಮ ಸಂಬಂಧ ಎಂದು ತಿಳಿದು ಬಂದಿತ್ತು. ಜಗದೀಶ್‍ನ ಪತ್ನಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಕಾಶಪ್ಪ ಆತನನ್ನು ಕೊಲೆ ಮಾಡಿ ಪರಾರಿಯಾಗಿದ್ದ.

    ಜಗದೀಶ್ ತವರಿನಲ್ಲಿದ್ದ ಪತ್ನಿ ಹಾಗೂ ಮಗುವನ್ನು ನೋಡಲು ಹುಬ್ಬಳ್ಳಿಗೆ ಬಂದಿದ್ದ. ಈ ವೇಳೆ ಅವನನ್ನು ಭೇಟಿ ಮಾಡಿದ ಕಾಶಪ್ಪ ಜಗದೀಶ್‍ನನ್ನು ಕರೆದುಕೊಂಡು ಊರ ಹೊರಗೆ ಪಾರ್ಟಿ ಮಾಡಿದ್ದಾನೆ. ಆತನಿಗೆ ಕಂಠ ಪೂರ್ತಿ ಮದ್ಯ ಕೂಡಿಸಿ, ಕುಡಿದ ನಶೆಯಲ್ಲಿದ್ದ ಜಗದೀಶ್‍ನ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿ ಪರಾರಿಯಾಗಿದ್ದ. ಈ ಪ್ರಕರಣವನ್ನು ಬೆನ್ನಟ್ಟಿದ ಪೊಲೀಸರು ಒಂದೇ ದಿನದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.

    ಈ ಕಾರ್ಯಾಚರಣೆಯಲ್ಲಿ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್ ರಮೇಶ್ ಗೋಕಾಕ್, ಪಿಎಸ್‍ಐಗಳಾದ ಮಂಜುಳಾ ಮತ್ತು ಚಾಮುಂಡೇಶ್ವರಿ, ಸಿಬ್ಬಂದಿಗಳಾದ ನಾರಾಯಣ ಹಿರೇಹೊಳಿ, ಮಂಜು ಹೆಳವರ, ಮಂಜು ಅಮ್ಮಿನಬಾಯಿ, ಅರ್ಜುನ ಟಕಾಯಿ, ಮಂಜು ವಾಲಿಕಾರ ಮತ್ತು ಚಂದ್ರು ಜನಗಣ್ಣನವರ ಭಾಗವಹಿಸಿದ್ದರು.

  • ನಿನ್ನ ಹೆಂಡ್ತೀನ ನಾನು ಮದ್ವೆ ಆಗ್ತೀನಿ ಅಂದ – ಬೇಡ ಅಂದಿದ್ದಕ್ಕೆ ಅದೇ ಹೆಂಡ್ತಿ ಜೊತೆಗೂಡಿ ಕೊಂದ

    ನಿನ್ನ ಹೆಂಡ್ತೀನ ನಾನು ಮದ್ವೆ ಆಗ್ತೀನಿ ಅಂದ – ಬೇಡ ಅಂದಿದ್ದಕ್ಕೆ ಅದೇ ಹೆಂಡ್ತಿ ಜೊತೆಗೂಡಿ ಕೊಂದ

    – ಶ್ರೀನಿವಾಸ್ ಮಾಮಾ, ರಾಗಿಣಿ ಆಂಟಿ ಅಂದರ್

    ಚಿಕ್ಕಮಗಳೂರು: ನಿನ್ನ ಹೆಂಡತಿಯನ್ನ ನಾನು ಮದುವೆ ಆಗ್ತೀನಿ. ಒಂದು ಡಿವೋರ್ಸ್ ಕೊಡು ಇಲ್ಲ, ಬಿಟ್ಟೋಗು ಎಂದು ಪತ್ನಿಯ ಪ್ರಿಯಕರ ಹೇಳಿದ್ದಾನೆ. ಡಿವೋರ್ಷ್ ನೀಡಲು ವಿರೋಧ ವ್ಯಕ್ತಪಡಿಸಿದ 32 ವರ್ಷದ ವ್ಯಕ್ತಿಯನ್ನ ಹೆಂಡತಿಯೇ ಪ್ರಿಯಕರನ ಜೊತೆ ಸೇರಿ ಕೊಲೆಗೈದ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ದೊಡ್ಡಿಹಟ್ಟಿ ಗ್ರಾಮದಲ್ಲಿ ನಡೆದಿದೆ.

    ಮೃತನನ್ನ 32 ವರ್ಷದ ಪ್ರದೀಪ್ ಎಂದು ಗುರುತಿಸಲಾಗಿದೆ. ಪ್ರಿಯಕರನ ಜೊತೆ ಸೇರಿ ಗಂಡನನ್ನ ಕೊಂದ ಪತ್ನಿ ರಾಗಿಣಿ ಹಾಗೂ ಅಫ್ಟರ್ ಮ್ಯಾರೇಜ್ ಲವ್ವರ್ ಶ್ರೀನಿವಾಸ್ ಇಬ್ಬರು ಪೊಲೀಸರ ಅತಿಥಿಯಾಗಿದ್ದಾರೆ. ಕಳೆದ 10 ವರ್ಷಗಳ ಹಿಂದೆ ಪ್ರದೀಪ್ ಹಾಗೂ ರಾಗಿಣಿ ಮದುವೆಯಾಗಿತ್ತು. ಇಬ್ಬರಿಗೂ 10 ವರ್ಷದ ಮಗಳು ಹಾಗೂ 7 ವರ್ಷದ ಮಗನಿದ್ದಾನೆ. ಗಾರೆ ಕೆಲಸ ಮಾಡಿಕೊಂಡಿದ್ದ ಪ್ರದೀಪ್ ಮದ್ಯವ್ಯಸನಿಯೂ ಆಗಿದ್ದ. ಆಗಾಗ ಗಂಡ-ಹೆಂಡತಿ ಮಧ್ಯೆ ಜಗಳವೂ ನಡೆಯುತ್ತಿತ್ತು.

    ಶ್ರೀನಿವಾಸ್ ಮೇಲೆ ರಾಗಿಣಿಗೆ ಲವ್: ಪ್ರದೀಪನ ವೃತ್ತಿ ಮಿತ್ರ ಶ್ರೀನಿವಾಸ್ ಕೆಲಸ ಹಣ ನೀಡಲು ಆಗಾಗ ಮನೆಗೆ ಬಂದು ಹೋಗುತ್ತಿದ್ದ. ಆಗ ರಾಗಿಣಿ ಹಾಗೂ ಪತಿಯ ಮಿತ್ರ ಶ್ರೀನಿವಾಸ್ ಜೊತೆ ಆತ್ಮೀಯಳಾಗಿದ್ದಳು. ರಾಗಿಣಿಯೂ ಕೂಡ ಸರ್ಕಾರಿ ಇಲಾಖೆಯೊಂದರಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಳು. ರಾಗಿಣಿಗೆ ಯಾವಾಗ ಶ್ರೀನಿವಾಸನ ಮೇಲೆ ಪ್ರೀತಿ ಆಸಕ್ತಿ ಮೂಡತೊಡಗಿತೋ ಆಗ ಪತಿ ಪ್ರದೀಪ್ ಮೇಲಿನ ವ್ಯಾಮೋಹ ಕಡಿಮೆಯಾಗ ತೊಡಗಿತ್ತು. ಕಳೆದ ರಾತ್ರಿ ರಾಗಿಣಿ ಹಾಗೂ ಲವರ್ ಜೊತೆಗಿದ್ದಾಗ ಮನೆಗೆ ಬಂದ ಪ್ರದೀಪನ ಜೊತೆ ಗಲಾಟೆ ನಡೆದಿದೆ. ರಾಗಿಣಿ ನನ್ನನ್ನ ಬಿಡು ಎಂದಿದ್ದಾಳೆ. ಲವ್ವರ್ ಶ್ರೀನಿವಾಸ್ ಕೂಡ ಒಂದು ಡಿವೋರ್ಸ್ ಕೊಡು. ಇಲ್ಲ ಬಿಟ್ಟುಬಿಡು ಎಂದಿದ್ದಾನೆ. ಅದಕ್ಕೆ ಪ್ರದೀಪ್ ಒಪ್ಪದಿದ್ದಾಗ ರಾಗಿಣಿ ಹಾಗೂ ಶ್ರೀನಿವಾಸ್ ಇಬ್ಬರೂ ಸೇರಿ ಪ್ರದೀಪ್ ನನ್ನ ಮುಗಿಸಿದ್ದಾರೆ.

    ಅಪ್ಪ ಮಲಗಿದ್ದಾರೆ: ಮೊದಲಿಗೆ ಪ್ರದೀಪ್ ಮುಖಕ್ಕೆ ಟವೆಲ್ ಮುಚ್ಚಿ ಉಸಿರುಗಟ್ಟಿಸುವ ಪ್ರಯತ್ನಿ ಮಾಡಿದ್ದಾರೆ. ಅದು ಸಾಧ್ಯವಾಗಿಲ್ಲ. ಇವನು ಬೆಳಗ್ಗೆ ಎಲ್ಲರಿಗೂ ಹೇಳುತ್ತಾನೆಂದು ಹೆದರಿ ವೇಲ್ ನಿಂದ ಕುತ್ತಿಗೆ ಬಿಗಿದು ಕೊಂದಿದ್ದಾರೆ. ಅಪ್ಪನಿಗೆ ಒಂದು ಗತಿ ಕಾಣಿಸಲೆಂದೇ ಅಮ್ಮ ರಾಗಿಣಿ ಮಕ್ಕಳನ್ನ ಟಿವಿ ನೋಡಲು ಪಕ್ಕದ ಮನೆಗೆ ಕಳಿಸಿದ್ದಳು. ಮಕ್ಕಳು ಬಂದು ಅಪ್ಪ ಎಂದಾಗ ಸತ್ತ ಅಪ್ಪನನ್ನ ತೋರಿಸಿ ಮಲಗಿದ್ದಾರೆ ಎಂದು ಮಕ್ಕಳನ್ನ ಮಲಗಿಸಿದ್ದಳು. ಸಹಜ ಸಾವು ಎಂದು ಕಾಣಲು ಮಾಡಬೇಕಾಗಿರೋದನ್ನೆಲ್ಲಾ ಮಾಡಿ ಶ್ರೀನಿವಾಸ್ ಹಾಗೂ ರಾಗಿಣಿಯೂ ಮಲಗಿದಳು. ಇದನ್ನೂ ಓದಿ: ಪ್ರೀತಿಸಿ ಮದ್ವೆಯಾದ್ರೂ ಅಕ್ರಮ ಸಂಬಂಧ – ಪ್ರಶ್ನಿಸಿ ದೂರವಾದ ಪತ್ನಿಯ ಬರ್ಬರ ಹತ್ಯೆ

    ಬೆಳಗ್ಗೆ ಏಳುವಷ್ಟರಲ್ಲಿ ಮತ್ತೊಂದು ನಡೆದಿತ್ತು. ಮೃತದೇಹದಿಂದ ರಕ್ತ ಹರಿದಿತ್ತು. ಪ್ರದೀಪ್ ಶರ್ಟ್ ನಿಂದಲೇ ರಕ್ತ ಒರೆಸಿದ ಶ್ರೀನಿವಾಸ್ ಕೊಲೆಗೆ ಬಳಸಿದ ವೇಲೆ, ರಕ್ತದ ಶರ್ಟ್ ಎಲ್ಲವನ್ನೂ ಗಂಟು ಕಟ್ಟಿಕೊಂಡು ಹೊತ್ತೊಯ್ದಿದ್ದ. ಬೆಳಗ್ಗೆ ಎಲ್ಲರೂ ಬಂದು ನೋಡಿದಾಗ ಕುತ್ತಿಗೆಯಲ್ಲಿ ಬಲವಾದ ಮಾರ್ಕುಗಳಿದ್ದವು. ಸ್ಥಳಕ್ಕೆ ಬಂದ ಪೊಲೀಸರು ನೋಡಿದ ಕೂಡಲೇ ಇದು ಕೊಲೆ ಎಂದರು. ಮಕ್ಕಳನ್ನ ಕೇಳಿದಾಗ, ನಾವು ರಾತ್ರಿ ಟಿವಿ ನೋಡಲು ಪಕ್ಕದ ಮನೆಗೆ ಹೋಗಿದ್ದೇವು. ಆಗ ಶ್ರೀನಿವಾಸ್ ಮಾಮಾ ಬಂದಿದ್ದರು ಹೇಳಿದ್ದಾರೆ. ಇದನ್ನೂ ಓದಿ: ಗೆಳತಿ ಜೊತೆ 2 ದಿನ ಕಳೆಯಲು ಫ್ಲ್ಯಾಟ್‍ಗೆ ಬಂದವ ಶವವಾಗಿ ಪತ್ತೆ – ಪ್ರೇಯಸಿ ನಾಪತ್ತೆ

    ಪೊಲೀಸರು ಪೊಲೀಸ್ ಭಾಷೆಯಲ್ಲಿ ಕೇಳಿದಾಗ ರಾಗಿಣಿ ಆಂಟಿ ಎಲ್ಲವನ್ನೂ ಬಾಯಿ ಬಿಟ್ಟಿದ್ದಾಳೆ. ಪ್ರಿಯಕರ ಶ್ರೀನಿವಾಸ್ ಹೊತ್ತೊಯ್ದಿದ್ದ ವೇಲ್, ಶರ್ಟ್ ಎಲ್ಲವನ್ನೂ ತಂದ. ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿರೋ ಸಖರಾಯಪಟ್ಟಣ ಪೊಲೀಸರು ಶ್ರೀನಿವಾಸ್ ಮಾಮಾ ಹಾಗೂ ರಾಗಿಣಿ ಆಂಟಿಯನ್ನ ಅಂದರ್ ಮಾಡಿದ್ದಾರೆ. ಅಪ್ಪ ಸತ್ತ, ಅಮ್ಮ ಜೈಲು ಪಾಲಾದ್ಲು. ಮಕ್ಕಳು ಮಾತ್ರ ಅನಾಥರಾಗಿದ್ದಾರೆ.

  • ಡಬಲ್ ಮರ್ಡರ್ ಕೇಸ್‍ನಲ್ಲಿ ಅರೆಸ್ಟ್- ಬಿಚ್ಚಿಟ್ಟಿದ್ದು ಮತ್ತೊಂದು ಮರ್ಯಾದಾ ಹತ್ಯೆಯ ರಹಸ್ಯ

    ಡಬಲ್ ಮರ್ಡರ್ ಕೇಸ್‍ನಲ್ಲಿ ಅರೆಸ್ಟ್- ಬಿಚ್ಚಿಟ್ಟಿದ್ದು ಮತ್ತೊಂದು ಮರ್ಯಾದಾ ಹತ್ಯೆಯ ರಹಸ್ಯ

    – ತಮ್ಮ ಜೊತೆ ಗೆಳೆಯನ ಅಣ್ಣನನ್ನ ಜೈಲಿಗೆ ಕರೆದೊಯ್ದ ಆರೋಪಿಗಳು
    – ಇಬ್ಬಿಬ್ಬರನ್ನ ಪ್ರೀತಿಸಿದ್ದ ಸೋದರಿಯ ಉಸಿರು ನಿಲ್ಲಿಸಿದ್ದ ಅಣ್ಣ

    ಲಕ್ನೋ: ಡಬಲ್ ಮರ್ಡರ್ ಪ್ರಕರಣದಲ್ಲಿ ಬಂಧಿತರಾಗಿದ್ದ ಆರೋಪಿಗಳಿಬ್ಬರು ಪೊಲೀಸರ ಮುಂದೆ ಈ ಹಿಂದೆ ನಡೆದಿದ್ದ ಮರ್ಯಾದಾ ಹತ್ಯೆಯ ರಹಸ್ಯ ಬಿಚ್ಚಿಟ್ಟಿದ್ದಾರೆ. ಜೈಲಿಗೆ ಹೋಗುವಾಗ ತಮ್ಮಿಬ್ಬರ ಜೊತೆ ಗೆಳೆಯನ ಅಣ್ಣನನ್ನು ಕರೆದುಕೊಂಡು ಹೋಗಿದ್ದಾರೆ. ಆರೋಪಿಗಳು ನೀಡಿದ ಮಾಹಿತಿ ಆಧಾರದ ಮೇಲೆ ಉತ್ತರ ಪ್ರದೇಶದ ಮುರಾದಾಬಾದ್ ಪೊಲೀಸರು ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ನವೆಂಬರ್ 6ರಂದು ಮುರಾದಾಬಾದ್ ನಾಗ್ಫಾನಿಯ ಕಿಸರೌಲ್ ನಲ್ಲಿ ಜೋಡಿ ಕೊಲೆ ನಡೆದಿತ್ತು. ದುಷ್ಕರ್ಮಿಗಳು ಪ್ರಾಪರ್ಟಿ ಡೀಲರ್ ನಜರತ್ ಹುಸೈನ್ ಮತ್ತು ಅವರ ಪುತ್ರಿ ಸಮ್ರೀನ್ ಳನ್ನು ಕೊಲೆಗೈದಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅದೇ ಏರಿಯಾದ ಮನ್ನಾನ್ ಮತ್ತು ಯೂನಸ್ ಎಂಬ ಇಬ್ಬರು ಯುವಕರನ್ನ ಬಂಧಿಸಿದ್ದರು. ಆರೋಪಿಗಳನ್ನು ತೀವ್ರ ವಿಚಾರಣೆ ನಡೆಸಿದಾಗ ಈ ಹಿಂದೆ ಗೆಳೆಯನ ಮನೆಯಲ್ಲಿ ನಡೆದ ಮರ್ಯಾದಾ ಹತ್ಯೆಯ ವಿಷಯವನ್ನ ಪೊಲೀಸರಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಮರ್ಯಾದಾ ಹತ್ಯೆ – ಕಿಡ್ನಾಪ್ ಮಾಡಿ 4 ತಿಂಗ್ಳ ಹಿಂದೆ ಮದ್ವೆಯಾಗಿದ್ದ ಯುವಕನ ಹತ್ಯೆ

    ಕತ್ತು ಹಿಸುಕಿ ಕೊಲೆ: ಒಮ್ಮೆ ನಶೆಯಲ್ಲಿದ್ದ ಗೆಳೆಯ ಟಿಂಕು ತನ್ನ ಅಣ್ಣನೇ ಸೋದರಿ ಅಕ್ಷಾಳ ಕತ್ತು ಹಿಸುಕಿ ಕೊಲೆಗೈದಿರುವ ವಿಚಾರವನ್ನು ಮನ್ನಾನ್ ಮತ್ತು ಯೂನಿಸ್ ಗೆ ಹೇಳಿದ್ದನು. ಅಕ್ಷಾಳ ಕತ್ತು ಹಿಸುಕಿ ಕೊಲೆಗೈದಿದ್ದ ಸೋದರ ತಾರೀಖ್ ಬೆಳಗ್ಗೆ ಕುಟುಂಬಸ್ಥರಿಗೆ ಹಾರ್ಟ್ ಅಟ್ಯಾಕ್ ಎಂದು ನಂಬಿಸಿ ಅಂತ್ಯಕ್ರಿಯೆ ಸಹ ನೆರವೇರಿಸಿದ್ದನು. ಆದ್ರೆ ಕೊಲೆಯ ರಹಸ್ಯ ಮಾತ್ರ ಸೋದರರಿಬ್ಬರಲ್ಲಿಯೇ ಉಳಿದುಕೊಂಡಿತ್ತು. ಪ್ರಕರಣದ ಮಾಹಿತಿ ಸಿಗುತ್ತಿದ್ದಂತೆ ಪೊಲೀಸರು ತನಿಖೆಗೆ ಇಳಿದಿದ್ದರು. ಇದನ್ನೂ ಓದಿ: ನೆಚ್ಚಿನ ನಟನನ್ನು ನೋಡಲು ಹೋಗಿ ಮರ್ಯಾದಾ ಹತ್ಯೆಗೆ ಬಲಿಯಾಯ್ತು ಯುವ ಜೋಡಿ..?

    ಅಕ್ಷಾಳ ಕೊಲೆ ಬಗ್ಗೆ ಪತಿ ಇರ್ಫಾನ್ ಅನುಮಾನ ವ್ಯಕ್ತಪಡಿಸಿರುವ ವಿಷಯ ತಿಳಿದಾಗ ಪೊಲೀಸರ ಅನುಮಾನ ಮತ್ತಷ್ಟು ಬಲವಾಗಿತ್ತು. ಅಕ್ಷಾಳ ಮೃತದೇಹ ಹೊರ ತೆಗೆದು ಮರಣೋತ್ತರ ಶವ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅಕ್ಷಾಳ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. ಅದು ಸಹಜ ಸಾವಲ್ಲ ಎಂದು ವೈದ್ಯರು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಡಿಸಿದ್ದರು. ಇದನ್ನೂ ಓದಿ: ಮರ್ಯಾದಾ ಹತ್ಯೆ: ಗರ್ಭಿಣಿ ಪತ್ನಿಯ ಎದುರೇ ಪತಿಯ ತಲೆಗೆ ಮಚ್ಚಿನಿಂದ ಏಟು

    ಇಬ್ಬಿಬ್ಬರ ಜೊತೆ ಲವ್: ಮೃತ ಅಕ್ಷಾ ಇರ್ಫಾನ್ ಎಂಬವನನ್ನು ಪ್ರೀತಿಸಿ ಮದುವೆ ಆಗಿದ್ದಳು. ದಂಪತಿಗೆ ಒಂದು ಮಗು ಸಹ ಇತ್ತು. ಆದರೆ ಮದುವೆ ಬಳಿಕ ಮತ್ತೋರ್ವನ ಪ್ರೇಮದ ಬಲೆಯಲ್ಲಿ ಸಿಲುಕಿದ ಅಕ್ಷಾ ಪತಿಯನ್ನು ಬಿಟ್ಟು ಓಡಿ ಹೋಗಿದ್ದಳು. ಕೆಲ ದಿನಗಳ ಬಳಿಕ ಹಿಂದಿರುಗಿದಾಗ ಇರ್ಫಾನ್ ಪತ್ನಿಯನ್ನ ಮನೆಗೆ ಸೇರಿಸಿಕೊಂಡಿರಲಿಲ್ಲ. ಹಾಗಾಗಿ ಅಕ್ಷಾ ತವರು ಮನೆ ಸೇರಿದ್ದಳು. ಸೋದರಿಯ ಈ ವರ್ತನೆಯಿಂದ ಅಕ್ಷಾ ಕುಟುಂಬಸ್ಥರು ಸಮಾಜದಲ್ಲಿ ಅವಮಾನಿತರಾಗಿದ್ದರು. ಅಕ್ಷಾಳ ನಡವಳಿಕೆಯಿಂದ ಬೇಸತ್ತಿದ್ದ ತಾರೀಖ್ ಸಮಯ ನೋಡಿಕೊಂಡು ಕತ್ತು ಹಿಸುಕಿ ಕೊಲೆ ಮಾಡಿದ್ದನು. ಕೊಲೆಯ ಬಳಿಕ ಎಲ್ಲರಿಗೂ ಹಾರ್ಟ್ ಅಟ್ಯಾಕ್ ಎಂದು ಹೇಳಿ ನಂಬಿಸಿ, ಅವಸರದಲ್ಲಿಯೇ ಅಂತ್ಯಕ್ರಿಯೆ ಮಾಡಿದ್ದನು. ದಿಢೀರ್ ಅಂತ್ಯಕ್ರಿಯೆ ನಡೆಸಿದ್ದರಿಂದ ಅಕ್ಷಾಳ ಪತಿ ಇರ್ಫಾನ್ ಅನುಮಾನ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಮತ್ತೆ ಮರ್ಯಾದಾ ಹತ್ಯೆಗೆ ಸುದ್ದಿಯಾದ ಮಂಡ್ಯ – ಯುವತಿ ಸಾವು, ಪ್ರಿಯತಮ ಆಸ್ಪತ್ರೆ ಪಾಲು

  • ಸೋದರತ್ತೆಯೊಂದಿಗೆ ಅಕ್ರಮ ಸಂಬಂಧ – ಯುವಕನನ್ನು ಕೊಂದು ನೇಣು ಹಾಕಿದ ಪತಿ

    ಸೋದರತ್ತೆಯೊಂದಿಗೆ ಅಕ್ರಮ ಸಂಬಂಧ – ಯುವಕನನ್ನು ಕೊಂದು ನೇಣು ಹಾಕಿದ ಪತಿ

    ಚಾಮರಾಜನಗರ: ವಿವಾಹೇತರ ಸಂಬಂಧ ಕಾರಣಕ್ಕೆ ಯುವಕನೊಬ್ಬನನ್ನು ಕೊಂದು ನೇಣು ಹಾಕಿಕೊಂಡಿದ್ದಾನೆ ಎಂದು ಬಿಂಬಿಸಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಗುಂಡೇಗಾಲದಲ್ಲಿ ನಡೆದಿದೆ.

    ಕೊಳ್ಳೇಗಾಲ ತಾಲೂಕಿನ ಕಂಡಯ್ಯನಪಾಲ್ಯದ ಪ್ರಕಾಶ್ (30) ಕೊಲೆಯಾದ ವ್ಯಕ್ತಿ. ಪ್ರಕಾಶ್ ವಾರಿಗೆಯಲ್ಲಿ ಸೋದರತ್ತೆಯಾಗುವ ಶಿವನ ಸಮುದ್ರದ ಲಕ್ಷ್ಮೀ ಎಂಬಾಕೆಯೊಂದಿಗೆ ವಿವಾಹೇತರ ಸಂಬಂಧ ಇಟ್ಟುಕೊಂಡಿದ್ದ. ಈ ವಿಚಾರ ಪತಿ ಮನೆಯವರಿಗೆ ತಿಳಿದು 5 ದಿನಗಳ ಹಿಂದೆ ತಮ್ಮ ಕೋಮಿನ ಪಂಜಾಯ್ತಿ ಕರೆದು ತೀರ್ಮಾನ ಮಾಡಿದ್ದರು ಎಂದು ತಿಳಿದು ಬಂದಿದೆ.

    ಪಂಚಾಯ್ತಿಯಲ್ಲಿ ಪ್ರಕಾಶನ ಜೊತೆಯೇ ಇರುವುದಾಗಿ ಲಕ್ಷ್ಮಿ ತಿಳಿಸಿದ್ದರಿಂದ 3 ಲಕ್ಷ ರೂ. ದಂಡವನ್ನು ನೀಡಿ ವಿವಾಹ ಮಾಡಿಕೊಳ್ಳುವಂತೆ ಕೋಮಿನ ಯಜಮಾನರು ತೀರ್ಪು ನೀಡಿದ್ದರು. ಜೊತೆಗೆ ಹಣ ಕೊಡುವ ತನಕ ಗುಂಡೇಗಾಲದಲ್ಲೇ ಇರುವಂತೆ ಮನೆಯೊಂದರಲ್ಲಿ ಕೂಡಿ ಹಾಕಿದ್ದರು ಎನ್ನಲಾಗಿದೆ. ಪ್ರಕಾಶ್‍ನ ಮನೆಯವರು ಹಣ ಹೊಂದಿಸುತ್ತಿರುವ ವಿಚಾರ ತಿಳಿದು ಲಕ್ಷ್ಮಿಯ ಗಂಡ ಕಾಂತರಾಜು ಮತ್ತು ಸಂಬಂಧಿಕರಾದ ರತ್ನಮ್ಮ, ನಿಂಗರಾಜು, ಸುನೀಲ್ ಉಸಿರುಗಟ್ಟಿಸಿ ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

    ಈ ಸಂಬಂಧ ಪ್ರಕಾಶ್‍ನ ತಾಯಿ ಮಂಜುಳಾ ಕೊಳ್ಳೇಗಾಲ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ಪ್ರಿಯತಮೆ ಲಕ್ಷ್ಮಿಯೂ ಸೇರಿದಂತೆ 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

  • ಗಂಡನ ಅಕ್ರಮ ಸಂಬಂಧ- ನೇಣು ಬಿಗಿದು ಮಡದಿ ಸಾವು, ವಿಷ ಸೇವಿಸಿದ್ದ ಪತಿ ಪಾರು

    ಗಂಡನ ಅಕ್ರಮ ಸಂಬಂಧ- ನೇಣು ಬಿಗಿದು ಮಡದಿ ಸಾವು, ವಿಷ ಸೇವಿಸಿದ್ದ ಪತಿ ಪಾರು

    ಚಿಕ್ಕಮಗಳೂರು: ಗಂಡನ ಅಕ್ರಮ ಸಂಬಂಧಕ್ಕೆ ಬೇಸತ್ತು, ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದರೆ, ಪತಿಯೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಸಾವಿನಿಂದ ಪಾರಾದ ಘಟನೆ ನಗರದ ಕೆಂಪನಹಳ್ಳಿಯಲ್ಲಿ ನಡೆದಿದೆ.

    ಮೃತಳನ್ನು 23 ವರ್ಷದ ರಂಜಿತಾ ಎಂದು ಗುರುತಿಸಲಾಗಿದ್ದು, ವಿಷ ಸೇವಿಸಿದ್ದ ಪತಿ ಅರುಣ್ ಸಾವಿನಿಂದ ಪಾರಾಗಿದ್ದಾನೆ. ಜಿಲ್ಲೆಯ ಕಡೂರು ತಾಲೂಕಿನ ಬೀರೂರು ಸಮೀಪದ ಹೊಗರೆಹಳ್ಳಿಯ ರಂಜಿತಾಳನ್ನು ಮೂರು ವರ್ಷದ ಹಿಂದೆ ಚಿಕ್ಕಮಗಳೂರು ನಗರದ ಅರುಣ್ ವಿವಾಹವಾಗಿದ್ದ. ಮದುವೆ ಮುಂಚೆಯಿಂದಲೂ ಅರುಣ್ ಪರ ಸ್ತ್ರೀಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ.

    ಅರುಣ್ ಹಾಗೂ ಇವನ ಗೆಳತಿಯ ಕಿರುಕುಳದಿಂದ ಬೇಸತ್ತು ರಂಜಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತ ರಂಜಿತಾ ಪೋಷಕರು ಆರೋಪಿಸಿದ್ದಾರೆ. ಮದುವೆಯಾಗಿ ಮೂರು ವರ್ಷವಾಗಿದ್ದರೂ ಒಂದು ದಿನ ಮಾತ್ರ ರಂಜಿತಾಳನ್ನು ತವರಿಗೆ ಕಳಿಸಿದ್ದನಂತೆ. ಅದು ಕೂಡ 24 ಗಂಟೆ ಮಾತ್ರ. ಅಷ್ಟೆ ಅಲ್ಲದೆ ಅರುಣ್ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆ ಜೊತೆ ಇದ್ದ ಫೋಟೋ ಹಾಗೂ ವಿಡಿಯೋಗಳಿದ್ದ ಪೆನ್ ಡ್ರೈವ್ ರಂಜಿತಾಳಿಗೆ ಸಿಕ್ಕು ಆಕೆ ವಿಷಯವನ್ನ ಹೆತ್ತವರು ಹಾಗೂ ಅಣ್ಣಂದಿರ ಗಮನಕ್ಕೂ ತಂದಿದ್ದಳು. ಆಗ ಅರುಣ್, ಇನ್ನೊಮ್ಮೆ ಹೀಗೆ ಮಾಡುವುದಿಲ್ಲ ಎಂದು ರಂಜಿತಾಳ ತಂದೆ ಕಾಲಿಗೆ ಬಿದ್ದು ಕ್ಷಮೆ ಕೋರಿದ್ದನಂತೆ. ಆದರೆ, ಅವರಿಬ್ಬರ ಮಾನಸಿಕ ಕಿರುಕುಳದಿಂದಲೇ ಮಗಳು ಸಾವನ್ನಪ್ಪಿದ್ದಾಳೆಂದು ಪೋಷಕರು ಆರೋಪಿಸಿದ್ದಾರೆ.

    ಪೋಷಕರು ಅರುಣ್ ನನ್ನ ಗಲ್ಲಿಗೇರಿಸಬೇಕೆಂದು ಆಗ್ರಹಿಸಿದ್ದಾರೆ. ಭಾನುವಾರ ಸಂಜೆ 4 ಗಂಟೆಗೆ ನೇಣಿನ ಕುಣಿಕೆಗೆ ಕೊರಳೊಡ್ಡಿದ್ದ ರಂಜಿತಾ ಕುಣಿಕೆಯ ಗಂಟು ಬಿಗಿ ಆದ ಮೇಲೆ ನನ್ನನ್ನು ಉಳಿಸು ಅಂತ ಅಣ್ಣನಿಗೆ ಕರೆ ಮಾಡಿದ್ದಾಳೆ. ಅಣ್ಣ ಬರುವಷ್ಟರಲ್ಲಿ ರಂಜಿತಾಳ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಹಳ್ಳಿಯಲ್ಲಿ ಕಟ್ಟಿಸುತ್ತಿದ್ದ ಮನೆಯಲ್ಲಿದ್ದ ಅರುಣ್, ಒಂದು ಕೇಸ್ ಬಿಯರ್ ನಲ್ಲಿ 9 ಬಾಟಲಿ ಕುಡಿದು ಮೂರನ್ನ ಹಾಗೇ ಉಳಿಸಿಕೊಂಡಿದ್ದ.

    ರಂಜಿತಾ ಅಣ್ಣಂದಿರೂ ಹೋಗಿ ವಿಷಯ ತಿಳಿಸಿದಾಗ ಕೈಯಲ್ಲಿ ಸಿಗರೇಟ್ ಹಿಡಿದು ನಾನೂ ವಿಷ ಕುಡಿದಿದ್ದೇನೆ ಎಂದನಂತೆ. ಅವನನ್ನ ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆತ ಸಾವಿನಿಂದ ಪಾರಾಗಿದ್ದಾನೆ. ಆದರೆ ರಂಜಿತಾ ಎರಡು ವರ್ಷದ ಮಗುವನ್ನು ಬಿಟ್ಟು ಬಾರದ ಲೋಕಕ್ಕೆ ಪಯಣಿಸಿದ್ದಾಳೆ. ಇದೀಗ, ರಂಜಿತಾ ಪೋಷಕರು ಅರುಣ್, ಆತನ ಪೋಷಕರು ಹಾಗೂ ಆ ಮಹಿಳೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಚಿಕ್ಕಮಗಳೂರಿನ ಬಸವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.