Tag: ಅಕ್ರಮ ಸಂಬಂಧ

  • ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಪತಿ ಆತ್ಮಹತ್ಯೆಗೆ ಶರಣು

    ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಪತಿ ಆತ್ಮಹತ್ಯೆಗೆ ಶರಣು

    ಹುಬ್ಬಳ್ಳಿ: ಮದುವೆಯಾಗಿ ಎರಡು ಮಕ್ಕಳಿದ್ದರೂ ಪತ್ನಿ ತನ್ನ ಜೊತೆಗೆ ಇಲ್ಲದೇ ಬೇರೆಯವನ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಮನನೊಂದ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಗರದಲ್ಲಿ ನಡೆದಿದೆ.

    ನಗರದ ಅಂಚಟಗೇರಿಯ ನಿವಾಸಿ ಬೂದಪ್ಪ ಕೋರಿಗೆ 23 ವರ್ಷಗಳ ಹಿಂದೆಯೇ ಮದುವೆಯಾಗಿ ಎರಡು ಮಕ್ಕಳಿದ್ದಾರೆ. ಆದರೆ ತನ್ನ ಪತ್ನಿ ಬೇರೊಬ್ಬನ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಮನನೊಂದು ಮನೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಆತ್ಮಹತ್ಯೆಗೂ ಮುನ್ನ ಮೃತ ಬೂದಪ್ಪ ಕೋರಿ ಡೆತ್ ನೋಟ್ ಬರೆದಿದ್ದು, ಪತ್ನಿ ಬೇರೆಯವರ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಆರೋಪಿಸಿದ್ದಾನೆ. ನಗರದ ಡಾ.ಎಂ.ಎಂ.ಜೋಶಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನನ್ನ ಪತ್ನಿ ಕಳೆದ ಎರಡು ವರ್ಷಗಳಿಂದ ಬೇರೊಬ್ಬರ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಬರೆದಿದ್ದಾನೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು, ತನಿಖೆ ಕೈಗೊಂಡಿದ್ದಾರೆ.

  • ಪರ ಸ್ತ್ರೀ ಜೊತೆ ಯುವಕನ ಚೆಲ್ಲಾಟ – ಸರಸ ಆಡುವಾಗಲೇ ಸಿಕ್ಕಿಬಿದ್ದು ನಡೀತು ದುರಂತ..!

    ಪರ ಸ್ತ್ರೀ ಜೊತೆ ಯುವಕನ ಚೆಲ್ಲಾಟ – ಸರಸ ಆಡುವಾಗಲೇ ಸಿಕ್ಕಿಬಿದ್ದು ನಡೀತು ದುರಂತ..!

    ಚಾಮರಾಜನಗರ: ಮನೆಯಲ್ಲಿ ಪತಿ ಇಲ್ಲದಿರುವಾಗ ಬರ್ತಾ ಇದ್ದ ಪ್ರಿಯಕರ ಪತ್ನಿ ಜತೆ ಸರಸ ಸಲ್ಲಾಪದಲ್ಲಿ ತೊಡಗುತ್ತಿದ್ದ, ಮುತ್ತಿಟ್ಟ ಫೋಟೋ ತೆಗೆದು ವಾಟ್ಸಾಪ್ ಸ್ಟೇಟಸ್ ಗೂ ಹಾಕಿದ್ದ. ಈ ವಿಷಯ ತಿಳಿದ ಪತಿ ಈ ಅಕ್ರಮ ಸಂಬಂಧವನ್ನು ಕೊಲೆಯಲ್ಲಿ ಅಂತ್ಯಗೊಳಿಸಿದ್ದಾನೆ.

    ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದಲ್ಲಿ ಬುಧವಾರ ರಾತ್ರಿ ಈ ಘನೆ ನಡೆದಿದೆ. ತನ್ನ ಮನೆಯಲ್ಲಿ ಪತ್ನಿ ಸೌಭಾಗ್ಯ ಜೊತೆ ಇದ್ದ ಪ್ರಿಯಕರ ಬಸವಶೆಟ್ಟಿ(37)ಯನ್ನು ಕಂಡ ಪತಿ ಶಿವಣ್ಣ ಕೊಲೆ ಮಾಡಿದ್ದಾನೆ.

    ಸೌಭಾಗ್ಯ ಮತ್ತು ಬಸವಶೆಟ್ಟಿ ನಡುವೆ ಹಲವು ದಿನಗಳಿಂದ ಅಕ್ರಮ ಸಂಬಂಧ ಇತ್ತು. ಈ ವಿಷಯ ಪತಿ ಶಿವಣ್ಣಗೆ ತಿಳಿಯಿತು. ಪ್ರಿಯಕರ ಮತ್ತು ಪತ್ನಿ ಚುಂಬಿಸಿದ ಫೋಟೋವನ್ನೂ ಶಿವಣ್ಣ ನೋಡಿದ. ಭಾನುವಾರ ರಾತ್ರಿ ಮನೆಗೆ ಹೋದಾಗ ಅಲ್ಲಿ ಪತ್ನಿ ಜೊತೆ ಇದ್ದ ಪ್ರಿಯಕರ ಬಸವಶೆಟ್ಟಿಯನ್ನು  ಕೊಂದಿದ್ದಾನೆ.

    ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ನಾಲ್ಕನೇ ಪತಿಯಿಂದ ಕೊಲೆಯಾದ 8 ತಿಂಗಳ ಗರ್ಭಿಣಿ ‘ಡ್ರಗ್ ಕ್ವೀನ್’ ಶಯನಾ

    ನಾಲ್ಕನೇ ಪತಿಯಿಂದ ಕೊಲೆಯಾದ 8 ತಿಂಗಳ ಗರ್ಭಿಣಿ ‘ಡ್ರಗ್ ಕ್ವೀನ್’ ಶಯನಾ

    – ಶಯನಾ ಸೋದರಿ ಜೊತೆ 4ನೇ ಪತಿಯ ಮಂಚದಾಟ

    ನವದೆಹಲಿ: ರಾಜಧಾನಿ ದೆಹಲಿಯ ನಿಜಾಮುದ್ದೀನ್ ಇಲಾಖೆಯಲ್ಲಿ ವಾಸವಾಗಿದ್ದ ಡ್ರಗ್ ಕ್ವೀನ್ ಶಯನಾ ಕೊಲೆಯಾಗಿದೆ. ಮಂಗಳವಾರ ಬೆಳಗ್ಗೆ 10.30ಕ್ಕೆ ಶಯನಾ ಆಕೆಯ ನಾಲ್ಕನೇ ಪತಿ ಕೊಲೆ ಮಾಡಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಗಾಯಾಳು ಶಯನಾಳನ್ನ ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ.

    ಶಯನಾ ರಕ್ಷಣೆಗೆ ಬಂದ ನೌಕರ:
    ಶಯನಾ ಕೊಲೆಯ ವಿಷಯ ತಿಳಿಯುತ್ತಿದ್ದಂತೆ ನಿಜಾಮುದ್ದೀನ್ ವ್ಯಾಪ್ತಿಯ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಶಯನಾ ನಾಲ್ಕನೇ ಪತಿ ವಸೀಮ್ ಜೊತೆ ವಾಸವಾಗಿದ್ದರು. ವಸೀಮ್ ಬಳಿ ಎರಡು ಗನ್ ಗಳಿದ್ದು, ಶಯನಾ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಈ ವೇಳೆ ಮಧ್ಯೆ ಬಂದ ಮನೆಯ ಕೆಲಸಗಾರ ಶಹದತ್ ಸಹ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ. ಕೊಲೆಯ ಬಳಿಕ ವಸೀಮ್ ಠಾಣೆಗೆ ತೆರಳಿ ಪೊಲೀಸರಿಗೆ ಶರಣಾಗಿದ್ದಾನೆ. ಘಟನಾ ಸ್ಥಳಕ್ಕಾಗಮಿಸಿದ ಪೊಲೀಸರು ಮನೆಯ ಸಿಸಿಟಿವಿ ಫೋಟೋಜ್ ದೃಶ್ಯಗಳನ್ನ ವಶಕ್ಕೆ ಪಡೆದಿದ್ದು, ತನಿಖೆ ನಡೆಸುತ್ತಿದ್ದಾರೆ.

    ನಾಲ್ಕು ಮದುವೆಯಾಗಿತ್ತು:
    ಶಯಾನಳ ಇಬ್ಬರು ಪತಿಯರು ಈಕೆಯನ್ನ ತೊರೆದು ಬಾಂಗ್ಲಾಗೆ ತೆರಳಿದ್ದಾರೆ. ಇಬ್ಬರಿಂದ ದೂರವಾದ ಶಯನಾ ಡ್ರಗ್ ಕಿಂಗ್ ಶರಾಫತ್ ಶೇಖ್ ಜೊತೆ ಮದುವೆಯಾಗಿದ್ದಳು. ಡ್ರಗ್ ಪ್ರಕರಣದಲ್ಲಿ ಬಂಧಿಯಾಗಿ ಶಯನಾ ಮತ್ತು ಶರಾಫತ್ ತಿಹಾರ ಜೈಲು ಸೇರಿದ್ದರು. ಮದುವೆಯಾದ ಕೆಲವೇ ದಿನಗಳಲ್ಲಿ ಎನ್‍ಡಿಪಿಎಸ್ ಆ್ಯಕ್ಟ್ ಅಡಿ ಶರಾಫತ್ ನನ್ನು ಪೊಲೀಸರು ಬಂಧಿಸಿದ್ದರು.

    ವರ್ಷದ ಹಿಂದೆ ವಸೀಮ್ ಜೊತೆ ಮದುವೆ:
    ಮದುವೆ ಬಳಿಕ ಕೆಲವೇ ದಿನಗಳಲ್ಲಿ ಶರಾಫತ್ ಜೈಲು ಸೇರಿದ್ದರಿಂದ ವಸೀಮ್ ಎಂಬಾತನನ್ನು ಮದುವೆಯಾಗಿದ್ದಳು. ಇಬ್ಬರ ಸಂಸಾರ ಚೆನ್ನಾಗಿಯೇ ನಡೆಯುತ್ತಿತ್ತು. ನಾಲ್ಕನೇ ಮದುವೆಯ ಸಂಭ್ರಮದಲ್ಲಿದ್ದ ಶಯನಾಳನ್ನ ಡ್ರಗ್ಸ್ ಪ್ರಕರಣದಲ್ಲಿ ದೆಹಲಿ ಪೊಲೀಸರು ಬಂಧಿಸಿ ತಿಹಾರ್ ಜೈಲಿಗೆ ಅಟ್ಟಿದ್ದರು. ಇತ್ತ ಶಯನಾ ಜೈಲು ಸೇರುತ್ತಿದ್ದಂತಿ ವಸೀಮ್ ಆಕೆಯ ಸೋದರಿ ರೆಹಾನಾ ಜೊತೆ ಅಕ್ರಮ ಸಂಬಂಧ ಹೊಂದಿದ್ದನು. ಶಯಾನಾ ಜೈಲಿನಲ್ಲಿದ್ದರಿಂದ ಇಬ್ಬರ ಕಳ್ಳಾಟ ಯಾರ ಭಯವಿಲ್ಲದೇ ನಡೆದಿತ್ತು.

    ಮಂಚದಾಟ ಬಯಲಾಯ್ತು:
    ಜೈಲಿನಲ್ಲಿ ಶಯಾನಾ ಎಂಟು ತಿಂಗಳ ಗರ್ಭಿಣಿಯಾಗಿದ್ದರಿಂದ ಪೆರೋಲ್ ಮೇಲೆ ಹೊರ ಬಂದು ಮನೆ ಸೇರಿದ್ದಳು. ಈ ವೇಳೆ ಪತಿ ವಾಸೀಮ್ ಮಂಚದಾಟದ ವಿಷಯ ತಿಳಿದಿದೆ. ಇದೇ ವಿಷಯವಾಗಿ ಇಬ್ಬರ ನಡುವೆ ಹಲವು ಬಾರಿ ಜಗಳ ಸಹ ನಡೆದಿತ್ತು. ಮಂಗಳವಾರ ಮನೆಗೆ ಬಂದ ವಸೀಮ್ ಪತ್ನಿಯನ್ನ ಕೊಲೆ ಮಾಡಿದ್ದಾನೆ. ಈ ವೇಳೆ ಮಾಲಕಿ ಶಯಾನ ರಕ್ಷಣೆಗೆ ಬಂದ ನೌಕರನ ಮೇಲೆಯೂ ಗುಂಡು ಹಾರಿಸಿದ್ದಾನೆ. ನಂತರ ಠಾಣೆಗೆ ತೆರಳಿ ಕೃತ್ಯಕ್ಕೆ ಬಳಸಿದ ಗನ್ ಪೊಲೀಸರಿಗೆ ನೀಡಿ ಶರಣಾಗಿದ್ದಾನೆ.

  • ರೌಡಿಯೇ ಬೇಕೆಂದು ತಾಳಿ ಕಟ್ಟಿಸಿಕೊಂಡ್ಳು – ಮದ್ವೆ ಬಳಿಕ ಮತ್ತೊಬ್ಬನೊಂದಿಗೆ ಮಂಚ ಏರಿದ್ಳು!

    ರೌಡಿಯೇ ಬೇಕೆಂದು ತಾಳಿ ಕಟ್ಟಿಸಿಕೊಂಡ್ಳು – ಮದ್ವೆ ಬಳಿಕ ಮತ್ತೊಬ್ಬನೊಂದಿಗೆ ಮಂಚ ಏರಿದ್ಳು!

    – ಪ್ರಿಯಕರನ ಬುರುಡೆ ಬಿಚ್ಚಿದ ರೌಡಿ ಗಂಡ

    ಮಂಡ್ಯ: ಆಕೆಗೆ ರೌಡಿ ಶೀಟರ್ ಜೊತೆ ಲವ್ ಆಗಿತ್ತು. ಹೆತ್ತವರು ವಿರೋಧ ಮಾಡಿದ್ರಿಂದ ಮನೆ ಬಿಟ್ಟೋಗಿ ಮದುವೆಯಾಗಿದ್ದ ಆಕೆಗೆ 8 ವರ್ಷದ ಗಂಡು ಮಗುವೂ ಇತ್ತು. ಈ ನಡುವೆ ಗಂಡನ ಸ್ನೇಹಿತನೊಂದಿಗೆ ಅನೈತಿಕ ಸಂಬಂಧ ಬೆಳೆಸಿದ್ದಳು. ಮೊದಲೇ ಆಕೆಯ ಬಗ್ಗೆ ಸಂಶಯಗೊಂಡಿದ್ದ ಗಂಡನಿಗೆ ರೆಡ್ ಹ್ಯಾಂಡ್ ಆಗಿ ಪ್ರಿಯಕರನೊಂದಿಗೆ ಸಿಕ್ಕಿಬಿದ್ದಿದ್ದು, ಪ್ರಿಯಕರನ ಬುರುಡೆಯನ್ನು ಗಂಡ ಬಿಚ್ಚಿದ್ದಾನೆ.

    ಮಂಡ್ಯ ತಾಲೂಕಿನ ಇಂಡುವಾಳು ಗ್ರಾಮ ಹರ್ಷಿತಾ ಶಾಲೆಯಲ್ಲಿ ಓದುವಾಗಲೇ ರೌಡಿ ಶೀಟರ್ ನಾಗೇಂದ್ರ ಅಲಿಯಾಸ್ ಕುಳ್ಳನಾಗ ಎಂಬಾತನ ಪ್ರೀತಯ ಬಲೆಗೆ ಬಿದ್ದಿದ್ದಳು. ಸುಮಾರು 6 ವರ್ಷ ಪ್ರೀತಿಯಲ್ಲಿ ತೇಲಾಡಿದ್ದ ಆ ಜೋಡಿಯ ಮದುವೆಗೆ ಹೆತ್ತವರು ವಿರೋಧ ವ್ಯಕ್ತಪಡಿಸಿದ್ರು. ಬಳಿಕ ಮನೆ ಬಿಟ್ಟೋಗಿ ಮದುವೆಯಾಗಿದ್ರು. ಆರಂಭದಲ್ಲಿ ಲೈಫು ಚೆನ್ನಾಗಿಯೇ ಇದ್ದ ಈ ಜೋಡಿಗೆ ಓರ್ವ ಮಗನೂ ಇದ್ದಾನೆ.

    ಹೀಗಿದ್ದ ಸಂಸಾರದಲ್ಲಿ ಮತ್ತೋರ್ವನ ಎಂಟ್ರಿ ಆಗುತ್ತೆ. ಅವನೇ ಮಂಡ್ಯದ ಶಂಕರಮಠ ಬಡಾವಣೆಯ ನಿವಾಸಿ ಚೇತನ್. ಅಂದಹಾಗೆ ಚೇತನ್, ಹರ್ಷಿತಾ ಪತಿ ಕುಳ್ಳನಾಗನ ಸ್ನೇಹಿತ. ಓಡಿ ಬಂದಾಗ ಸಹಾಯ ಮಾಡಿದ್ದ ಈತ, ಕ್ರಮೇಣ ಹರ್ಷಿತಾ ಜೊತೆಗೆ ಅನೈತಿಕ ಸಂಬಂಧ ಬೆಳೆಸಿದ್ದ. ಈ ವಿಚಾರ ನಾಗನಿಗೆ ತಿಳಿದು ಹರ್ಷಿತಾ ಜೊತೆ ಜಗಳ ಸಹ ಆಗಿತ್ತು. ಅಲ್ಲದೆ 2018ರಲ್ಲಿ ಚೇತನ್ ಮೇಲೆ ಮಾರಕಾಸ್ತ್ರಗಳಿಂದ ಹಲೆ ಮಾಡಿದ್ದ ನಾಗ ಒಂದು ವರ್ಷ ಜೈಲಿನಲ್ಲೂ ಇದ್ದ.

    ಇಷ್ಟಾದರೂ ಚೇತನ್ ಹಾಗೂ ಹರ್ಷಿತಾ ಲವ್ವಿಡವ್ವಿ ಬಿಟ್ಟಿರಲಿಲ್ಲ. ಏಪ್ರಿಲ್ 4ನೇ ತಾರೀಕು ಹರ್ಷಿತಾ ಮನೆಗೆ ಚೇತನ್ ಬಂದಿದ್ದ. ಈ ವೇಳೆ ಮನೆಗೆ ಬಂದ ಕುಳ್ಳ ನಾಗನಿಗೆ ಇಬ್ಬರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ರು. ಇದ್ರಿಂದ ಕೋಪಗೊಂಡ ಕುಳ್ಳನಾಗ ತನ್ನ ಸ್ನೇಹಿತ ಯೋಗೇಶ್ ಜೊತೆ ಸೇರಿ ಚೇತನ್‍ಗೆ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಹೆಂಡತಿ ಮೇಲೂ ಹಲ್ಲೆ ನಡೆಸಿದ್ದು, ಅಷ್ಟರಲ್ಲಿ ಸ್ಥಳಕ್ಕಾಗಮಿಸಿದ ಪೊಲೀಸರು ಹಲ್ಲೆ ಮಾಡುವುದನ್ನು ನಿಲ್ಲಿಸಿದ್ದಾರೆ.

    ಘಟನೆ ಸಂಬಂಧ ಪಶ್ಚಿಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಗಂಭೀರವಾಗಿ ಗಾಯಗೊಂಡಿರೊ ಚೇತನ್ ಚಿಕಿತ್ಸೆ ಪಡೆಯುತ್ತಿದ್ದಾನೆ. ಇತ್ತ ಹಲ್ಲೆ ನಡೆಸಿದ ಕುಳ್ಳನಾಗ ಹಾಗೂ ಆತನ ಸ್ನೇಹಿತ ಯೋಗೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ.

  • ಅಕ್ರಮ ಸಂಬಂಧ, ಭಿನ್ನಾಭಿಪ್ರಾಯ- ಪ್ರಿಯತಮೆ ಮಗನನ್ನೇ ಕೊಂದ ಪಾಪಿ

    ಅಕ್ರಮ ಸಂಬಂಧ, ಭಿನ್ನಾಭಿಪ್ರಾಯ- ಪ್ರಿಯತಮೆ ಮಗನನ್ನೇ ಕೊಂದ ಪಾಪಿ

    – 6 ವರ್ಷದ ಬಾಲಕನ ಅಸ್ಥಿಪಂಜರ ಪತ್ತೆ

    ಚಿಕ್ಕಬಳ್ಳಾಪುರ: ಪ್ರಿಯಕರನಿಂದಲೇ ಪ್ರಿಯತಮೆಯ ಮಗನನ್ನು ಕೊಲೆ ಮಾಡಿದ ಆಘಾತಕಾರಿ ಘಟನೆ ನಡೆದಿದ್ದು, ಕಾಣೆಯಾಗಿದ್ದ 06 ವರ್ಷದ ಬಾಲಕನ ಅಸ್ಥಿಪಂಜರ ಪತ್ತೆಯಾಗಿದೆ.

    ವಾಟದಹೊಸಹಳ್ಳಿಯ 6 ವರ್ಷದ ಬಾಲಕ ವಿಷ್ಣುವರ್ಧನ್‍ನನ್ನು ಕೊಲೆ ಮಾಡಲಾಗಿದೆ. ವಾಟದಹೊಸಹಳ್ಳಿ ಗ್ರಾಮದ ರಾಮಾಂಜಿ ಬಾಲಕನನ್ನು ಅಪಹರಿಸಿ ಕೊಲೆ ಮಾಡಿದ್ದಾನೆ. ಗೌರಿಬಿದನೂರು ತಾಲೂಕಿನ ಸಾದರ್ಲಹಳ್ಳಿ ಬಳಿ ಅಸ್ಥಿಪಂಜರ ಪತ್ತೆಯಾಗಿದೆ.

    ಬಾಲಕ ವಿಷ್ಣುವರ್ಧನ್ ಪ್ರಭಾವತಿ ಹಾಗೂ ನಾರಾಯಣಸ್ವಾಮಿ ದಂಪತಿಯ ಮಗನಾಗಿದ್ದು, ಮಾರ್ಚ್ 16 ರಂದು ನಿಗೂಢವಾಗಿ ಕಾಣೆಯಾಗಿದ್ದ. ವಿಷ್ಣುವರ್ಧನ್ ನಾಪತ್ತೆ ಪ್ರಕರಣ ಭೇದಿಸಿದ ಗೌರಿಬಿದನೂರು ಪೊಲೀಸರು, ರಾಮಾಂಜಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಪಹರಣ ಹಾಗೂ ಕೊಲೆ ಸತ್ಯ ಬಯಲಾಗಿದೆ.

    ಪ್ರಭಾವತಿ ಹಾಗೂ ರಾಮಾಂಜಿ ನಡುವೆ ಅನೈತಿಕ ಸಂಬಂಧ ಇತ್ತು. ಇತ್ತೀಚೆಗೆ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಮೂಡಿ ಬೇರೆಯಾಗಿದ್ದರು. ಅದೇ ದ್ವೇಷ ಹಾಗೂ ಮತ್ತೆ ಪ್ರಭಾವತಿ ಒಲಿಸಿಕೊಳ್ಳಲು ವಿಷ್ಣುವರ್ಧನ್‍ನನ್ನು ರಾಮಾಂಜಿ ಅಪಹರಿಸಿದ್ದಾನೆ. ಪೊಲೀಸ್ ಠಾಣೆಯಲ್ಲಿ ಕಿಡ್ನ್ಯಾಪ್ ಪ್ರಕರಣ ದಾಖಲಾಗಿದ್ದಕ್ಕೆ ಆರೋಪಿ ರಾಮಾಂಜಿ ಬಾಲಕ ವಿಷ್ಣುವರ್ಧನ್‍ನ ಕತ್ತು ಹಿಸುಕಿ ಕೊಲೆ ಮಾಡಿ, ಮೂಟೆಯಲ್ಲಿ ಹಾಕಿ ಬಿಸಾಡಿದ್ದ. ಗೌರಿಬಿದನೂರು ಪೊಲೀಸರು ಇದೀಗ ಆರೋಪಿ ರಾಮಾಂಜಿಯನ್ನು ಬಂಧಿಸಿದ್ದಾರೆ.

  • ಅಮ್ಮನ ಅಕ್ರಮ ಸಂಬಂಧದಿಂದ ಬೇಸತ್ತು ಮಗಳು ಆತ್ಮಹತ್ಯೆ

    ಅಮ್ಮನ ಅಕ್ರಮ ಸಂಬಂಧದಿಂದ ಬೇಸತ್ತು ಮಗಳು ಆತ್ಮಹತ್ಯೆ

    – ಬಾಲಕಿಗೆ ರಸ್ತೆಯಲ್ಲಿ ರೇಗಿಸ್ತಿದ್ದ ತಾಯಿಯ ಗೆಳೆಯ

    ಚಿಕ್ಕಮಗಳೂರು: ಅಮ್ಮನ ಅಕ್ರಮ ಸಂಬಂಧದಿಂದ ಮನನೊಂದು ಮಗಳು ಆತ್ಮಹತ್ಯೆಗೆ ಶರಣಾಗಿರೋ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಎಸ್.ಬಿದರೆ ಗ್ರಾಮದಲ್ಲಿ ನಡೆದಿದೆ.

    ಮೃತಳನ್ನ ಪೂರ್ಣಿಮಾ(16)ಎಂದು ಗುರುತಿಸಲಾಗಿದೆ. ಈಕೆ 10ನೇ ತರಗತಿಯಲ್ಲಿ ಓದುತ್ತಿದ್ದಳು. ಮೃತ ಪೂರ್ಣಿಮಾ ತಾಯಿ ಲೀಲಾವತಿಗೆ ಅದೇ ಊರಿನ ರಂಗಸ್ವಾಮಿ ಎಂಬವನ ಜೊತೆ ಅಕ್ರಮ ಸಂಬಂಧವಿತ್ತು. ಈ ವಿಷಯ ತಿಳಿದು ಮಗಳು ಮನನೊಂದಿದ್ದಳು. ಅಷ್ಟೆ ಅಲ್ಲದೆ ಲೀಲಾವತಿ ಜೊತೆ ಅಕ್ರಮ ಸಂಬಂಧ ಹೊಂದಿದ್ದ ರಂಗಸ್ವಾಮಿ, ಪೂರ್ಣಿಮಾ ಶಾಲೆಗೆ ಹೋಗಿ ಬರುವಾಗ ರಸ್ತೆಯಲ್ಲಿ ರೇಗಿಸುತ್ತಿದ್ದನಂತೆ. ಇದರಿಂದಲೂ ಪೂರ್ಣಿಮ ಮನನೊಂದಿದ್ದಳು ಎನ್ನಲಾಗಿದೆ.

    ದಾರಿಯಲ್ಲಿ ಛೇಡಿಸುತ್ತಿದ್ದ ರಂಗಸ್ವಾಮಿ ಬಗ್ಗೆ ಅಪ್ಪನ ಬಳಿಯೂ ಹೇಳಿದ್ದಳು. ಕಳೆದ ಮಂಗಳವಾರ ಪೂರ್ಣಿಮಾ ಶಾಲೆಗೆ ಹೋಗಿ ಬರುವಾಗಲೂ ರಂಗಸ್ವಾಮಿ ರಸ್ತೆ ಮಧ್ಯೆ ಛೇಡಿಸಿದ್ದನು. ಆಗಲೂ ಪೂರ್ಣಿಮಾ ಅಪ್ಪ-ಅಮ್ಮನ ಬಳಿ ಹೇಳಿಕೊಂಡಿದ್ದಳು. ಅಂದು ಊರಿನಿಂದ ಚಿಕ್ಕಮಗಳೂರಿಗೆ ಬಂದಿದ್ದರು. ಯಾಕಂದರೆ ಊರಲ್ಲಿ ಪೂರ್ಣಿಮ ಅಪ್ಪ ಲಕ್ಷ್ಮಣ ಶೆಟ್ಟಿ ಹಾಗೂ ಪೂರ್ಣಿಮಳಿಗೂ ರಸ್ತೆ ಮಧ್ಯೆ ರೇಗುವುದು, ಹಲ್ಲೆಗೆ ಮುಂದಾಗುವುದು ಮಾಡುತ್ತಿದ್ದನಂತೆ.

    ಶಾಲೆಗೆ ಹೋಗಿ ಬರುತ್ತಿದ್ದ ಬಾಲಕಿಗೆ ನಿನ್ನ ಮುಖ ಚರ್ಯೆಯನ್ನೇ ಕತ್ತರಿಸುತ್ತೇನೆ ಎಂದು ಹೆದರಿಸುತ್ತಿದ್ದನಂತೆ. ಆಗಲೂ ಬಾಲಕಿ ಮನೆಯಲ್ಲಿ ಹೇಳಿದ್ದಳು. ಅಂದಿನಿಂದಲೂ ಮನೆಯಲ್ಲಿ ಮಂಕಾಗಿ ಇರುತ್ತಿದ್ದಳು. ರಂಗಸ್ವಾಮಿ ಲೀಲಾವತಿಗೆ ಏನೂ ಮಾಡುತ್ತಿರಲಿಲ್ಲ. ಆದರೆ ಪೂರ್ಣಿಮ ಹಾಗೂ ಆಕೆಯ ಅಪ್ಪ ಲಕ್ಷ್ಮಣ ಶೆಟ್ಟಿಗೆ ಹೆದರಿಸುತ್ತಿದ್ದನಂತೆ. ಕಳೆದೊಂದು ವಾರದಿಂದ ತೀರಾ ಮಂಕಾಗಿದ್ದ ಪೂರ್ಣಿಮ ನಿನ್ನೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

    ಘಟನೆ ಸಂಬಂಧ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕಣ್ತಪ್ಪಿಸಿ ಕಳ್ಳ ಹೆಜ್ಜೆ ಇಟ್ಟು ತಡರಾತ್ರಿ ಹೊರ ಬಂದ್ಳು – ಆಕೆಯ ಹಿಂದೆಯೇ ಬಂದ್ರು ಕುಟುಂಬಸ್ಥರು

    ಕಣ್ತಪ್ಪಿಸಿ ಕಳ್ಳ ಹೆಜ್ಜೆ ಇಟ್ಟು ತಡರಾತ್ರಿ ಹೊರ ಬಂದ್ಳು – ಆಕೆಯ ಹಿಂದೆಯೇ ಬಂದ್ರು ಕುಟುಂಬಸ್ಥರು

    – ಕತ್ತಲಲ್ಲಿ ತಗ್ಲಾಕೊಂಡ ಜೋಡಿಗೆ ಹಗಲಲ್ಲಿ ಶಿಕ್ಷೆ

    ಬೆಳಗಾವಿ: ತಡರಾತ್ರಿ ಕುಟುಂಬಸ್ಥರ ಕಣ್ಣು ತಪ್ಪಿಸಿ ಇನಿಯನನ್ನ ಭೇಟಿಯಾಗಲು ಬಂದಿದ್ದ ವಿವಾಹಿತೆಯನ್ನ ಕುಟುಂಬಸ್ಥರು ರೆಡ್ ಹ್ಯಾಂಡ್ ಆಗಿ ಹಿಡಿದಿರುವ ಘಟನೆ ರಾಮದುರ್ಗ ತಾಲೂಕಿನ ಮುರುಕಟನಾಳ ಗ್ರಾಮದಲ್ಲಿ ನಡೆದಿದೆ. ಕುಟುಂಬಸ್ಥರನ್ನ ಇಬ್ಬರನ್ನ ಸಾರ್ವಜನಿಕವಾಗಿ ಟ್ರ್ಯಾಕ್ಟರ್ ಗೆ ಕಟ್ಟಿ ಹಾಕಿ ಶಿಕ್ಷೆ ನೀಡಿದ್ದಾರೆ.

    ಸರೋಜಿನಿ ಮತ್ತು ಮಹೇಶ್ (ಇಬ್ಬರ ಹೆಸರು ಬದಲಾಯಿಸಲಾಗಿದೆ) ಅಕ್ರಮ ಸಂಬಂಧ ಹೊಂದಿದ ಜೋಡಿ. ಪ್ರಿಯಕರ ಮಹೇಶ್ ರಾಮದುರ್ಗ ತಾಲೂಕಿನ ಚುಂಚನೂರು ಗ್ರಾಮದ ನಿವಾಸಿ. ಶುಕ್ರವಾರ ರಾತ್ರಿ ಸರೋಜಿನಿ ಪತಿ ಹಾಗೂ ಕುಟುಂಬಸ್ಥರು ಕಣ್ಣು ತಪ್ಪಿಸಿ ಕಳ್ಳ ಹೆಜ್ಜೆ ಹಾಕಿ ಮಹೇಶ್ ಭೇಟಿಗೆ ಬಂದಿದ್ದಳು. ಸರೋಜಿನಿಯನ್ನ ಪತಿ ಹಾಗೂ ಕುಟುಂಬಸ್ಥರು ಆಕೆಗೆ ತಿಳಿಯದಂತೆಯೇ ಹಿಂಬಾಲಿಸಿದ್ದಾರೆ. ಸರೋಜಿನಿ ಮತ್ತು ಮಹೇಶ್ ಸರಸ ಸಲ್ಲಾಪದಲ್ಲಿ ತೊಡಗಿದ್ದಾಗಲೇ ಹಿಡಿದಿದ್ದಾರೆ.

    ನಾಲ್ಕು ಗಂಟೆಗಳ ಕಾಲ ಇಬ್ಬರನ್ನ ಟ್ರ್ಯಾಕ್ಟರ್ ಗೆ ಕಟ್ಟಿ ಹಾಕಿದ್ದಾರೆ. ನಂತರ ಮಹೇಶನಿಗೆ ಮಹಿಳೆಯಿಂದ ದೂರವಿರುವಂತೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಕಟಕೋಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಪತ್ನಿ ಅಕ್ರಮ ಸಂಬಂಧ ಬಯಲು- ಮನನೊಂದ ಪತಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆ

    ಪತ್ನಿ ಅಕ್ರಮ ಸಂಬಂಧ ಬಯಲು- ಮನನೊಂದ ಪತಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆ

    – ಇಬ್ಬರನ್ನೂ ಕೂರಿಸಿ ಬುದ್ಧಿ ಹೇಳಿದರೂ ಪಟ್ಟು ಬಿಡದ ಜೋಡಿ
    – ವಿಚ್ಛೇದನ ನೀಡುವಂತೆ ಪತ್ನಿ ಒತ್ತಾಯ, ಪತಿ ಆತ್ಮಹತ್ಯೆ

    ಗಾಂಧಿನಗರ: ಪತ್ನಿ ಅಕ್ರಮ ಸಂಬಂಧ ಹೊಂದಿದ್ದರಿಂದ ಮನನೊಂದ ಪತಿ, ನಿರ್ಮಾಣ ಹಂತದಲ್ಲಿದ್ದ ಬಹು ಮಹಡಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ.

    ಗುಜರಾತ್‍ನ ಸೂರತ್‍ನ ಪಾಲ್ ಘಟನೆ ನಡೆದಿದ್ದು, ಸಂತ್ರಸ್ತನನ್ನು ಪರಾಸ್ ಖನ್ನಾ ಎಂದು ಗುರುತಿಸಲಾಗಿದೆ. ಖನ್ನಾ ಆಟೋಮೊಬೈಲ್ ರೀಸೆಲ್ಲರ್ ಆಗಿದ್ದು, 12 ವರ್ಷಗಳ ಹಿಂದೆ ಹೀನಾಳನ್ನು ವಿವಾಹವಾಗಿದ್ದ. ಆದರೆ ಪತ್ನಿ ಸ್ತುತಿ ಈಕಾನ್ ಅಪಾರ್ಟ್‍ಮೆಂಟ್‍ನಲ್ಲಿ ವಾಚ್‍ಮ್ಯಾನ್ ಕೆಲಸ ಮಾಡುತ್ತಿದ್ದ ಅಂಕಿತ್ ಪ್ರಸಾದ್ ಎಂಬುವವನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು.

    ಕೆಲ ದಿನಗಳ ಕಾಲ ಡೇಟಿಂಗ್ ಬಳಿಕ 12 ವರ್ಷಗಳ ಹಿಂದೆ ಖನ್ನಾ ಹಾಗೂ ಹೀನಾ ದಂಪತಿ ವಿವಾಹವಾಗಿದ್ದರು. ದಂಪತಿಗೆ ಮಕ್ಕಳಾಗಿಲ್ಲ. ಕಳೆದ 8 ತಿಂಗಳ ಹಿಂದೆ ಸ್ತುತಿ ಅಪಾರ್ಟ್‍ಮೆಂಟ್‍ಗೆ ಸ್ಥಳಾಂತರಗೊಂಡಿದ್ದರು. ಈ ವೇಳೆ ಹೀನಾ ಅದೇ ಅಪಾರ್ಟ್‍ಮೆಂಟ್‍ನಲ್ಲಿ ಕೆಲಸ ಮಾಡುತ್ತಿದ್ದ ಪ್ರಸಾದ್ ಜೊತೆ ಸಂಪರ್ಕ ಬೆಳೆಸಿದ್ದಾಳೆ. ಬಳಿಕ ಇಬ್ಬರ ನಡುವೆ ಸ್ನೇಹ ಬೆಳೆದಿದ್ದು, ನಂತರ ದೈಹಿಕ ಸಂಬಂಧವನ್ನೂ ಬೆಳೆಸಿದ್ದಾರೆ. ಅಕ್ರಮ ಸಂಬಂಧದ ಕುರಿತು ಅರಿತ ಖನ್ನಾ, ಇಬ್ಬರೊಂದಿಗೆ ಮಾತನಾಡಿ ಸಂಬಂಧವನ್ನು ಕೊನೆಗೊಳಿಸುವಂತೆ ಮನವಿ ಮಾಡಿದ್ದಾನೆ. ಆದರೆ ಇಬ್ಬರೂ ಇದನ್ನು ಒಪ್ಪಿಲ್ಲ.

    ಹೀನಾ ತನಗೆ ವಿಚ್ಛೇದನ ನೀಡುವಂತೆ ಪತಿಗೆ ಒತ್ತಡ ಹೇರಿದ್ದು, ಬಳಿಕ ಇಬ್ಬರೂ ದೂರವಾಗಿದ್ದರು. ಬಳಿಕ ಖನ್ನಾ ಆರಂಭದಲ್ಲಿ ನವೆಂಬರ್‍ನಲ್ಲಿ ಓಎನ್‍ಜಿಸಿ ಸೇತುವೆ ಮೇಲಿಂದ ಜಿಗಿಯಲು ಯೋಜನೆ ರೂಪಿಸಿದ್ದ. ಆದರೆ ಅಲ್ಲಿದ್ದವರು ತಡೆದಿದ್ದರು. ಪದೇ ಪದೇ ನಡೆಯುತ್ತಿದ್ದ ವಿವಾದಗಳಿಂದಾಗಿ ಬೇಸತ್ತು ಖನ್ನಾ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಘಟನೆ ಬಳಿಕ ಖನ್ನಾ ತಾಯಿ ನೀಲಂ ಅವರು ಪೊಲೀಸರಿಗೆ ದೂರು ನೀಡಿದ್ದು, ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಖನ್ನಾ ಆರೋಪಿ ಚಿತ್ರಗಳನ್ನು ತನ್ನ ಸ್ನೇಹಿತನಿಗೆ ಕಳುಹಿಸಿದ್ದು, ನನ್ನ ಆತ್ಮಹತ್ಯೆಗೆ ಇವನೇ ಕಾರಣ ಎಂದು ತಿಳಿಸಿದ್ದಾನೆ. ಇದೀಗ ಆರೋಪಿ ಪರಾರಿಯಾಗಿದ್ದು, ಹೀನಾಳನ್ನು ಪೊಲೀಸರು ಬಂಧಿಸಿದ್ದಾರೆ.

  • ಮದ್ವೆ ಬಳಿಕ ಆಂಟಿ ಜೊತೆಗಿನ ಕುಚ್ ಕುಚ್ ಕಟ್ – ನೌಕರನೊಂದಿಗೆ ಆಂಟಿಯ ಹೊಸ ತುಂಟಾಟ

    ಮದ್ವೆ ಬಳಿಕ ಆಂಟಿ ಜೊತೆಗಿನ ಕುಚ್ ಕುಚ್ ಕಟ್ – ನೌಕರನೊಂದಿಗೆ ಆಂಟಿಯ ಹೊಸ ತುಂಟಾಟ

    – ಮೂವರ ಅನೈತಿಕ ಸಂಬಂಧದಲ್ಲಿ ಓರ್ವ ಬಲಿ, ಇಬ್ಬರು ಜೈಲಿಗೆ
    – ಆಂಟಿಯ ತುಂಟಾಟಕ್ಕೆ ಅಡ್ಡಿಯಾಗಿದ್ದ ಮಾಜಿ ಇನಿಯ

    ರಾಂಚಿ: ಜನವರಿ 5ರಂದು ನಡೆದಿದ್ದ ಕೊಲೆ ಪ್ರಕರಣವನ್ನ ಬೇಧಿಸುವಲ್ಲಿ ಖೂಂಟಿ ಜಿಲ್ಲೆಯ ಪೊಲೀಸರು ಯಶಸ್ವಿಯಾಗಿದ್ದು, ಮೃತನ ಚಿಕ್ಕಮ್ಮ ಹಾಗೂ ಆಕೆಯ ಇನಿಯನನ್ನ ಕತ್ತಲ ಕೋಣೆಗೆ ತಳ್ಳಿದ್ದಾರೆ. ಮೃತ ಸಂಕೇತ್ ಮಿಶ್ರಾ ತನ್ನ ಚಿಕ್ಕಮ್ಮ ಸುಧಾ (ಹೆಸರು ಬದಲಾಯಿಸಲಾಗಿದೆ) ಜೊತೆ ಅಕ್ರಮ ಸಂಬಂಧ ಹೊಂದಿದ್ದನು.

    ಏನಿದು ಪ್ರಕರಣ?: ಮೃತ ಸಂಕೇತ್ ಸತತ ನಾಲ್ಕು ವರ್ಷಗಳ ಕಾಲ ಚಿಕ್ಕಮ್ಮ ಸುಧಾ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದನು. 2017ರಲ್ಲಿ ಮದುವೆಯಾದ ಬಳಿಕ ಸಂಕೇತ್ ಆಂಟಿ ಸ್ನೇಹವನ್ನ ಕಳೆದುಕೊಂಡಿದ್ದನು. ನಿಧಾನವಾಗಿ ಆಂಟಿಯಿಂದ ಅಂತರ ಕಾಯ್ದುಕೊಳ್ಳಲು ಆರಂಭಿಸಿದ್ದನು.

    ಆಂಟಿ ಮನೆಯಲ್ಲಿ ಠಿಕಾಣಿ: ಇತ್ತ ಸುಧಾ ಒಂಟಿಯಾಗಿರೋದನ್ನ ಗಮನಿಸಿದ ಮನೆ ಕೆಲಸಗಾರ ಹೇಮಬರೋಮ್ ಆಕೆಗೆ ಹತ್ತಿರವಾಗಿದ್ದಾನೆ. ಸಂಕೇತ್ ಬಳಿಕ ಒಂಟಿಯಾಗಿದ್ದ ಸುಧಾ ಕೆಲಸಗಾರನ ಜೊತೆಯಲ್ಲಿ ಹೊಸ ತುಂಟಾಟು ಶುರು ಹಚ್ಚಿಕೊಂಡಿದ್ದಳು. ಸುಧಾ ಮತ್ತು ಹೇಮಬರೋಮ ಚೆಲ್ಲಾಟದ ವಿಷಯ ಸಂಕೇತ್ ಗೂ ತಲುಪಿತ್ತು. ವಿಷಯ ಕೇಳಿ ಕೆಂಡಾಮಂಡಲಗೊಂಡ ಸಂಕೇತ್ ಮತ್ತೆ ಆಂಟಿಯ ಹತ್ತಿರಕ್ಕೆ ಬಂದಿದ್ದಾನೆ. ಹಾಗಾಗಿ ಚಿಕಮ್ಮನ ಮನೆಯಲ್ಲಿಯೇ ಠಿಕಾಣಿ ಹೂಡಿದ್ದನು.

    ನೌಕರನ ಜೊತೆಗಿನ ಸಂಬಂಧದ ಬಗ್ಗೆ ಸಂಕೇತ್ ಆಂಟಿಯನ್ನ ಪ್ರಶ್ನೆ ಮಾಡಿದ್ದ. ಆದ್ರೆ ಆಂಟಿ ಸುಧಾ ಸ್ಪಷ್ಟ ಉತ್ತರ ನೀಡದೇ ಮಾತನ್ನ ಮರೆಸಲು ಪ್ರಯತ್ನಿಸುತ್ತಿದ್ದಳು. ಈ ಸಂಬಂಧ ಇಬ್ಬರ ನಡುವೆ ಹಲವು ಬಾರಿ ಸಹ ಜಗಳ ನಡೆದಿತ್ತು.

    ಪಿಕ್‍ನಿಕ್‍ನಲ್ಲಿ ಕೊಲೆ: ಮೂವರು ಜನವರಿ 5ರಂದು ಪಿಕ್‍ನಿಕ್ ಅಂತ ಕರೋಗೆ ತೆರಳಿದ್ದರು. ಹೇಮಬರೋಮ ತಿಂಡಿ ತರುತ್ತೇನೆಂದು ಹೇಳಿ ಹೋಗಿದ್ದನು. ಹೇಮಬರೋಮ ಬಂದಾಗ ಇಬ್ಬರ ಮಧ್ಯೆ ಜಗಳ ನಡೆಯುತ್ತಿತ್ತು. ಸಂಕೇತ್ ಸುಧಾ ಮೇಲೆ ಹಲ್ಲೆ ಸಹ ನಡೆಸಿದ್ದನು. ಹೇಮಬರೋಮ ಬಂದ ಕೂಡಲೇ ಸಂಕೇತ್ ಆತನ ಮೇಲೆಯೂ ಹಲ್ಲೆಗೆ ಮುಂದಾಗಿದ್ದಾನೆ.

    ಈ ವೇಳೆ ಕೋಪಗೊಂಡ ಹೇಮಬರೋಮ ತೋಟದಲ್ಲಿ ಮೇವು ಕತ್ತರಿಸುತ್ತಿದ್ದ ಸಾಧನದಿಂದ ಸಂಕೇತ್ ಕುತ್ತಿಗೆ ಮೇಲೆ ದಾಳಿ ನಡೆಸಿದ್ದಾರೆ. ತೀವ್ರ ರಕ್ತಸ್ರಾವವಾದ ಪರಿಣಾಮ ಸಂಕೇತ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಇನ್ನು ಹೇಮಬರೋಮ ಅನುಮಾನ ಮತ್ತ ಸಾಕ್ಷ್ಯ ನಾಶ ಮಾಡುವ ದೃಷ್ಟಿಯಿಂದ ತನ್ನ ಬೈಕ್, ಧರಿಸಿದ್ದ ಜಾಕೆಟ್ ಮತ್ತು ಶವವನ್ನ ಸುಟ್ಟು ಹಾಕಿದ್ದಾನೆ.

    ಜನವರಿ 7ಕ್ಕೆ ಶವ ಪತ್ತೆ: ಸುಟ್ಟ ಸ್ಥಿತಿಯಲ್ಲಿ ಪೊಲೀಸರಿಗೆ ಅನಾಮಧೇಯ ಶವ ಸಿಕ್ಕಿತ್ತು. ತನಿಖೆಗಿಳಿದ ಪೊಲೀಸರು ಕೆಲವೇ ಗಂಟೆಯಲ್ಲಿ ಅದು ಸ್ಥಳೀಯ ಪತ್ರಕರ್ತ ಅನಿಲ್ ಮಿಶ್ರಾ ಪುತ್ರ ಸಂಕೇತ್ ಶವ ಅನ್ನೋದನ್ನ ಪತ್ತೆ ಹಚ್ಚಿದ್ದರು. ಸಂಕೇತ್ ಕೊನೆ ಬಾರಿ ಚಿಕ್ಕಮ್ಮ ಸುಧಾ ಜೊತೆ ಫೋನ್ ನಲ್ಲಿ ಮಾತಾಡಿದ್ದನು. ಸುಧಾಳನ್ನ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬಾಯಿಬಿಟ್ಟಿದ್ದಾಳೆ. ಸುಧಾ ಮತ್ತು ಹೇಮಬರೋಮ ಸೇರಿದಂತೆ ಒಟ್ಟು 8 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಎಲ್ಲರನ್ನ ಜೈಲಿಗೆ ಅಟ್ಟಲಾಗಿದೆ.

  • ಬೆಂಗಳೂರಲ್ಲಿ ಪತಿಯ ‘ನೈಟ್ ಶಿಫ್ಟ್’ ರಹಸ್ಯ ಭೇದಿಸಿ ಪತ್ನಿ ಆತ್ಮಹತ್ಯೆ..!

    ಬೆಂಗಳೂರಲ್ಲಿ ಪತಿಯ ‘ನೈಟ್ ಶಿಫ್ಟ್’ ರಹಸ್ಯ ಭೇದಿಸಿ ಪತ್ನಿ ಆತ್ಮಹತ್ಯೆ..!

    ಬೆಂಗಳೂರು: ಪತಿಯ ನೈಟ್ ಶಿಫ್ಟ್ ರಹಸ್ಯವನ್ನು ಭೇದಿಸಿ ಬಳಿಕ ಪತ್ನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿರುವುದಾಗಿ ಬೆಳಕಿಗೆ ಬಂದಿದೆ.

    ಪತಿ ಹಾಗೂ ಪತ್ನಿಯನ್ನು ಅಭಿಲಾಷ, ಶಶಿಕುಮಾರ್ ಎಂದು ಗುರುತಿಸಲಾಗಿದೆ. ಈ ದಂಪತಿ ಮದುವೆಯ ಬಳಿಕ ಬೆಂಗಳೂರಿನ ಶ್ರೀರಾಮಪುರದಲ್ಲಿ ವಾಸವಿತ್ತು. ವಿಶೇಷ ಎಂದರೆ ಈ ಜೋಡಿ ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತ್ತು. ಆದರೆ ತಾನು ಇಷ್ಟಪಟ್ಟವನ ಜೊತೆಯೇ ಬದುಕಿ ಸುಂದರ ಸಂಸಾರ ಮಾಡಬಹುದೆಂಬ ಖುಷಿಯಲ್ಲಿದ್ದ ಪತ್ನಿಗೆ ಮೂರು ತಿಂಗಳಲ್ಲಿ ಶಾಕೊಂದು ಎದುರಾಗಿತ್ತು.

    ಪ್ರತಿ ದಿನವೂ ಶಶಿಕುಮಾರ್ ನೈಟ್ ಶಿಫ್ಟ್ ಅಂತ ಪತ್ನಿಗೆ ಹೇಳಿ ಮನೆಯಿಂದ ಹೊರಹೋಗುತ್ತಿದ್ದ. ರಾತ್ರಿ 8 ಗಂಟೆ ಆದ್ರೆ ಸಾಕು ಬಾಸ್ ಬೈತಾರೆ. ಟೈಂ ಆಯ್ತು ಅಂತ ಅರ್ಜೆಂಟ್ ಆಗಿ ಮನೆ ಬಿಡ್ತಿದ್ದ. ಗಂಡನ ಪ್ರತಿ ದಿನದ ವರ್ತನೆ ನೋಡಿದ ಪತ್ನಿ ಒಂದು ದಿನ ಫಿಕ್ಸ್ ಮಾಡಿಯೇ ಬಿಟ್ಟಳು.

    ನೈಟ್ ಶಿಫ್ಟ್ ಅಂತ ಹೊರ ಹೋದ ಗಂಡನ ಫಾಲೋ ಮಾಡಿದಳು. ಈ ವೇಳೆ ಅಪರಿಚಿತರ ಮನೆ ಮುಂದೆ ಗಂಡನ ಬೈಕ್ ನೋಡಿ ಶಾಕ್ ಆದಳು. ಅಂತೆಯೇ ತನ್ನ ಪತಿಯ ಮೇಲೆ ಆಕೆಗೆ ಅನುಮಾನ ಬರಲು ಆರಂಭವಾಯಿತು. ಕೊನೆಗೆ ಒಂದು ದಿನ ಆಕೆ ಪತಿಯ ನೈಟ್ ಶಿಫ್ಟ್ ರಹಸ್ಯ ಭೇದಿಸಿಯೇ ಬಿಟ್ಟಳು. ನೈಟ್ ಶೀಫ್ಟ್ ಅಂತ ಹೇಳಿಕೊಂಡು ಹೋಗುತ್ತಿದ್ದ ಪತಿ ಆತನ ಪ್ರಿಯತಮೆಯ ಮನೆಯಲ್ಲಿ ರೆಡ್ ಹ್ಯಾಂಡಾಗಿ ಸಿಕ್ಕಿಬಿಟ್ಟ. ಮಂಚನದ ಕೆಳಗೆ ಅವಿತು ಕೂತಿದ್ದ ಪತಿರಾಯನನ್ನು ನೋಡಿ ಪತ್ನಿಯ ಸಿಟ್ಟು ನೆತ್ತಿಗೇರಿತ್ತು.

    ಈ ವೇಳೆ ಪತಿಮಹಾಶಯನು ಪತ್ನಿಯನ್ನು ಯಾಕೆ ಬಂದೆ ಅಂತ ಪ್ರಶ್ನಿಸಿ ಅಲ್ಲಿಯೇ ಆಕೆಯನ್ನು ಹಿಗ್ಗಾಮುಗ್ಗ ಥಳಿಸಿದ. ಪ್ರೀತಿಸಿ ಮದುವೆಯಾದರೂ ಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತ ಪತ್ನಿ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಅಭಿಲಾಷ ತನ್ನ ತಂಗಿಗೆ ಕರೆ ಮಾಡಿ ನಡೆದ ಘಟನೆಯನ್ನೆಲ್ಲಾ ವಿವರಿಸಿದ್ದಾಳೆ.

    ಶ್ರೀ ರಾಮಪುರ ಪೊಲೀಸರು ಮೃತಳ ಪತಿ ಶಶಿಕುಮಾರ್ ವಶಕ್ಕೆ ಪಡೆದಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.