ಅಮರಾವತಿ: ತಾಯಿಯ ಅಕ್ರಮ ಸಂಬಂಧದಿಂದ ಬೇಸತ್ತ ಮಗಳೊಬ್ಬಳು ಆತನಿಗೆ ತಕ್ಕ ಪಾಠ ಕಲಿಸಿದ ಘಟನೆಯೊಂದು ಆಂಧ್ರಪ್ರದೇಶದ ಬಪಟ್ಟಾ ಜಿಲ್ಲೆಯ ತುಮ್ಮಲಪಾಲಂನಲ್ಲಿ ನಡೆದಿದೆ.
ರಾಮಚಂದ್ರ ರೆಡ್ಡಿ ಎಂಬಾತ 2 ವರ್ಷಗಳ ಹಿಂದೆ ಗುಂಟೂರು ಜಿಲ್ಲೆ ತೆನಾಲಿಯ ರೈಲ್ವೆ ನಿಲ್ದಾಣದಲ್ಲಿ ಕೂಲಿ ಕೆಲ ಮಾಡುತ್ತಿದ್ದನು. ಈ ವೇಳೆ ಮಹಿಳೆಗೆ ಈತನ ಪರಿಚಯವಾಗಿತ್ತು. ಈ ಪರಿಚಯವು ಇಬ್ಬರ ಪ್ರೇಮಕ್ಕೆ ತಿರುಗಿತ್ತು. ಕ್ರಮೇಣ ಇಬ್ಬರೂ ಜೊತೆಗೂಡಿ ಮದ್ಯ ಸೇವಿಸುತ್ತಿದ್ದು, ಅದರ ಅಮಲಿನಲ್ಲಿ ಇಬ್ಬರ ನಡುವೆ ದೈಹಿಕ ಸಂಪರ್ಕ ಕೂಡ ನಡೆದಿತ್ತು.
ಆದರೆ ಇತ್ತ ಮಹಿಳೆಗೆ ಈಗಾಗಲೇ ಮದುವೆಯಾಗಿದ್ದು, ಮಗಳು ಕೂಡ ಇದ್ದಾಳೆ. ಆದರೂ ರಾಮಚಂದ್ರ ಜೊತೆ ಅಕ್ರಮ ಸಂಬಂಧವನ್ನು ಹೊಂದಿದ್ದಳು. ತಾಯಿಯ ಈ ನಡವಳಿಕೆ ಮಗಳಿಗೆ ಇಷ್ಟವಾಗುತ್ತಿರಲಿಲ್ಲ. ಹೀಗಾಗಿ ತಾಯಿ-ಮಗಳ ಮಧ್ಯೆ ಇದೇ ವಿಚಾರಕ್ಕೆ ಆಗಾಗ ಜಗಳವಾಗುತಿತ್ತು.
ಒಟ್ಟಾರೆ ತಾಯಿಯ ಅಕ್ರಮ ಸಂಬಂಧವನ್ನು ನೋಡಿ ನೋಡಿ ಸಾಕಾಗಿದ್ದ ಮಗಳು ಒಮದು ಐಡಿಯಾ ಹುಡುಕಿಯೇ ಬಿಟ್ಟಳು. ಅದೇನೆಂದರೆ ರಾತ್ರಿ ಪ್ರಿಯಕರನ ಜೊತೆ ತಾಯಿ ಮಲಗಿದ್ದ ಸಂದರ್ಭದಲ್ಲಿ ಮಗಳು ತಕ್ಕ ಪಾಠ ಕಲಿಸಲು ರೆಡಿಯಾಗಿದ್ದಳು. ಅಂತೆಯೇ ಇಬ್ಬರೂ ಗಾಢ ನಿದ್ದೆಯಲ್ಲಿದ್ದ ಸಂದರ್ಭದಲ್ಲಿ ಮಗಳು ಹರಿತವಾದ ಬ್ಲೇಡ್ ತೆಗೆದುಕೊಂದು ರೆಡ್ಡಿಯ ಮರ್ಮಾಂಗವನ್ನೇ ಕತ್ತರಿಸಿದಳು. ಇದನ್ನೂ ಓದಿ: ಮೊಬೈಲ್ ಜಾಸ್ತಿ ಬಳಸಬೇಡ ಅಂದಿದ್ದಕ್ಕೆ ಯುವತಿ ಆತ್ಮಹತ್ಯೆ
ಸಾಂದರ್ಭಿಕ ಚಿತ್ರ
ಇತ್ತ ಮರ್ಮಾಂಗ ಕಳೆದುಕೊಂಡ ರೆಡ್ಡಿ ಜೋರಾಗಿ ಕಿರುಚಿಕೊಂಡಿದ್ದಾನೆ. ನಂತರ ಆತನನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆ ಆತನನ್ನು ಬೇರೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಸದ್ಯ ಈ ಸಂಬಂಧ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪಾಟ್ನಾ: ತನ್ನ ಅಕ್ಕನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದನ್ನು ವಿರೋಧಿಸಿದ್ದ ಪತ್ನಿಯನ್ನು ಪತಿಯೇ ಗುಂಡಿಕ್ಕಿ ಕೊಲೆ ಮಾಡಿದ ಘಟನೆ ಬಿಹಾರದ ಭೋಜ್‍ಪುರ ಜಿಲ್ಲೆಯಲ್ಲಿ ನಡೆದಿದೆ.
ಚಾರ್ಪೋಖಾರಿ ಮೃತ ಮಹಿಳೆ ಹಾಗೂ ಭೈನಸೂರ್ ಬಂಧಿತ ಆರೋಪಿ. ಭೈನಸೂರ್ ಚಾರ್ಪೋಖಾರಿಯ ಅಕ್ಕನೊಂದಿಗೆ ಅನೈತಿಕ ಸಂಬಂಧವನ್ನು ಹೊಂದಿದ್ದನು. ಈ ವಿಷಯ ಚಾರ್ಪೋಖಾರಿ ತಿಳಿದು, ಅದಕ್ಕೆ ವಿರೋಧ ವ್ಯಕ್ತಪಡಿಸಿದರು. ಇದರಿಂದಾಗಿ ಭೈನಸೂರ್ ಪತ್ನಿಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಾನೆ. ಅದರಂತೆ ಆತನಿಗೆ ಆತನ ತಂದೆ ಹಾಗೂ ಚಿಕ್ಕಪ್ಪ ಸಹಾಯ ಮಾಡಿದ್ದಾರೆ. ರಾತ್ರಿ ಮನೆಯಲ್ಲಿ ಟೆರೇಸಿನಲ್ಲಿದ್ದ ವೇಳೆ ಅವಳನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾರೆ.
ನಂತರ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಸ್ಪತ್ರೆಯ ಅಧಿಕಾರಿಗಳು ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ. ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿದರೂ, ಚಾರ್ಪೋಖಾರಿ ಸಾವನಪ್ಪಿದ್ದಳು. ಇದರಿಂದಾಗಿ ಪೊಲೀಸರು ರಾತ್ರಿಯೇ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಆದರೆ ಎಲ್ಲಿಯೂ ರಕ್ತದ ಗುರುತು ಪತ್ತೆ ಆಗಲಿಲ್ಲ.
ಭೋಜ್‍ಪುರ ಜಿಲ್ಲೆಯ ಚಾರ್ಪೋಖಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸರು ಕೇವಲ 12 ಗಂಟೆಗಳಲ್ಲಿ ಪ್ರಕರಣವನ್ನು ಭೇದಿಸಿದ್ದಾರೆ. ಘಟನೆಗೆ ಸಂಬಂಧಿಸಿ ಮೃತಳ ಪತಿ ಭೈನ್‍ಸೂರ್, ಮಾವ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಜೊತೆಗೆ ಹತ್ಯೆಗೆ ಬಳಸಿದ್ದ ಪಿಸ್ತೂಲ್‍ನ್ನು ವಶಪಡಿಸಿಕೊಳ್ಳಲಾಗಿದೆ. ಇದನ್ನೂ ಓದಿ:ಮಲಗಿದ್ದ ಕೂಲಿಕಾರ್ಮಿಕರ ಮೇಲೆ ಹರಿದ ಕಾರು – ಮುಂದೇನಾಯ್ತು ನೋಡಿ
ಈ ಬಗ್ಗೆ ಎಸ್‍ಪಿ ವಿನಯ್ ತಿವಾರಿ ಮಾತನಾಡಿ, ಪತಿ, ಮಾವ, ಚಿಕ್ಕಪ್ಪನಿಂದ ಪ್ರಕರಣಕ್ಕೆ ಬಳಸಿದ್ದ ದೇಶಿ ನಿರ್ಮಿತ ಪಿಸ್ತೂಲ್ ಜೊತೆಗೆ ನಾಲ್ಕು ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ವಿಚಾರಣೆ ವೇಳೆ ಪತಿ ಭೈನ್‍ಸೂರ್ ಕೂಡ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಈ ಬಗ್ಗೆ ಮೃತಳ ತಾಯಿ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಿದ್ದು, ಸಂಚು ರೂಪಿಸಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಪತಿ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ:ಈಶ್ವರಪ್ಪ ರಾಜೀನಾಮೆಗೂ ಮುನ್ನ 29 PDOಗಳ ಟ್ರಾನ್ಸ್‌ಫರ್
ಬೆಳಗಾವಿ: ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಮಹಿಳೆಯ ಪತಿಯನ್ನೇ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ಬೆಳಗಾವಿ ತಾಲೂಕಿನ ಕಣರ್ಗಿ ಗ್ರಾಮದಲ್ಲಿ ನಡೆದಿತ್ತು. ಈ ಹಿನ್ನೆಲೆ ಆರೋಪಿಯನ್ನು ಬೆಳಗಾವಿ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಬೆಳಗಾವಿ ತಾಲೂಕಿನ ಕಣರ್ಗಿ ಗ್ರಾಮದ ಪರಶುರಾಮ ಕುರುಬರ ಬಂಧಿತ ಆರೋಪಿ. ಕೊಲ್ಹಾಪುರ ಜಿಲ್ಲೆಯ ಚಂದಗಡದ ಸಂತೋಷ ನಾರಾಯಣ ಪರೀಟ್ (36) ಕೊಲೆಯಾದ ವ್ಯಕ್ತಿ.
ಆರೋಪಿಯೊಂದಿಗೆ ಕೊಲೆಗೀಡಾದ ಸಂತೋಷ್‍ನ ಪತ್ನಿ ರೂಪಾ ಅನೈತಿಕ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಅಲ್ಲದೇ ಪತಿಯನ್ನು ಬಿಟ್ಟು ಪರಶುರಾಮನೊಂದಿಗೆ ಕಣರ್ಗಿಯಲ್ಲಿ ಇರುವ ಬಗ್ಗೆ ಮಾಹಿತಿ ಪಡೆದ ಸಂತೋಷ್ ಮಾ.1ರಂದು ಪತಿಯು ರೂಪಾಳನ್ನು ಭೇಟಿ ಮಾಡುವ ಉದ್ದೇಶದಿಂದ ಅಲ್ಲಿಗೆ ಬಂದಿದ್ದಾನೆ. ಈ ವೇಳೆ ಆರೋಪಿ ಪರಶುರಾಮ ಕುರುಬರ ಕಣರ್ಗಿ ಬಸ್ ತಂಗುದಾಣದಲ್ಲಿ ಸಂತೋಷ್‍ನನ್ನು ನೋಡಿ ತಕ್ಷಣ ಆತನನ್ನು ದ್ವಿಚಕ್ರ ವಾಹನ ಮೇಲೆ ಕೂರಿಸಿಕೊಂಡಿದ್ದಾನೆ. ನಂತರ ಸುರಭಿ ಕ್ರಾಸ್ ಬಳಿ ಇರುವ ನ್ಯೂ ರೇಣುಕಾ ನಗರ ಹತ್ತಿರವಿದ್ದ ವಂಟಮೂರಿ ಕಾಲೋನಿಯ ಯಲ್ಲಪ್ಪ ಬುಡುಗ ಎಂಬವರ ಕೃಷಿ ಜಮೀನಿಗೆ ಕರೆದುಕೊಂಡು ಹೋಗಿ ಕಂಠ ಪೂರ್ತಿ ಕುಡಿಸಿದ್ದಾನೆ. ಇದನ್ನೂ ಓದಿ: ಭಾರತಕ್ಕೆ ಗಟ್ಸ್ ಇಲ್ಲ ಅನ್ನೋರು ಮೊದಲು ಉಕ್ರೇನ್ ಗಡಿವರೆಗೆ ತಲುಪಿ ಧಮ್ ತೋರಿಸಬೇಕಿತ್ತು: ಸುಜಯ್
ನಶೆಯಲ್ಲಿ ಆರೋಪಿ ಪರಶುರಾಮ ತನ್ನ ಬಳಿಯಿದ್ದ ಟವೆಲ್‍ನಿಂದ ಸಂತೋಷನ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದಾನೆ. ಬಳಿಕ ಸಾಕ್ಷಿ ನಾಶ ಮಾಡುವ ಉದ್ದೇಶದಿಂದ ಸಂತೋಷನ ಶವವನ್ನು ಭತ್ತದ ಒಣಹುಲ್ಲಿನ ಬಣವಿಗೆ ಬೆಂಕಿ ಹಚ್ಚಿ ಪರಾರಿ ಆಗಿದ್ದನು. ಇತ್ತ ಭತ್ತದ ಬಣಿವೆಯಲ್ಲಿದ್ದ ಮೃತದೇಹ ಸುಟ್ಟುಕರಕಲಾಗಿತ್ತು. ಎಂದಿನಂತೆ ತನ್ನ ಜಮೀನಿಗೆ ಮಾ. 2ರಂದು ಆಗಮಿಸಿದ್ದ ಜಮೀನಿನ ಮಾಲೀಕ ಯಲ್ಲಪ್ಪಾ ಅರೆಬೆಂದ ದೇಹವನ್ನು ನೋಡಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಇದನ್ನೂ ಓದಿ: ಆಪರೇಷನ್ ಗಂಗಾ ಯಶಸ್ಸಿಗೆ ಭಾರತದ ಜಾಗತಿಕ ಪ್ರಭಾವವೇ ಕಾರಣ: ಮೋದಿ
ನಂತರ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಘಟನೆ ನಡೆದ ಕೇವಲ 48 ಗಂಟೆಗಳಲ್ಲಿ ಕೊಲೆಗೈದ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಮಾಳಮಾರುತಿ ಪೊಲೀಸ್ ಠಾಣೆಯ ಇನ್‍ಸ್ಪೆಕ್ಟರ್ ಸುನೀಲ್ ಪಾಟೀಲ್ ನೇತೃತ್ವದಲ್ಲಿ ಪಿಎಸ್‍ಐ ಹೊನ್ನಪ್ಪ ತಳವಾರ, ಪ್ರೋಬೆಶನರಿ ಪಿಎಸ್‍ಐ ಶ್ರೀಶೈಲ್ ಹುಳಗೇರಿ ತಂಡ ಯಶಸ್ವಿಯಾಗಿದೆ.
ಮಂಡ್ಯ: ಜಿಲ್ಲೆಯ ನಾಗಮಂಗಲ ತಾಲೂಕಿನ ಪಿಟ್ಟೆಕೊಪ್ಪಲು ಗ್ರಾಮದಲ್ಲಿ 6 ವರ್ಷದ ಮಗುವನ್ನು ಕೊಂದು ವ್ಯಕ್ತಿ ತಾನು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ತಿರುವು ಸಿಕ್ಕಿದ್ದು, ಪತ್ನಿಯ ಅಕ್ರಮ ಸಂಬಂಧವೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.
ಜ.13 ರಂದು ಪಿಟ್ಟೆಕೊಪ್ಪಲು ಗ್ರಾಮದ ಗಂಗಾಧರ್ ತನ್ನ ಮಗ ಜಶ್ವಿತ್ (6) ಜೊತೆಗೆ ಕೆರೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈತನ ಪತ್ನಿ ಸಿಂಧು, ನಂಜುಂಡೇಗೌಡ ಅವರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ನಂಜುಂಡೇಗೌಡನಿಗೆ ಸಿಂಧು ಅಕ್ಕನ ಮಗಳಾಗಬೇಕು. ಈ ವಿಷಯವನ್ನು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಗಂಗಾಧರ್ ಎಳೆ ಎಳೆಯಾಗಿ ತಿಳಿಸಿದ್ದಾನೆ.
ಗಂಗಾಧರ್ ವೀಡಿಯೋದಲ್ಲಿ ತನ್ನ ಹೆಂಡತಿ ಸಿಂಧುವಿನ ಅಕ್ರಮ ಸಂಬಂಧ ಹಾಗೂ ಆಕೆ ನೀಡುತ್ತಿದ್ದ ಕಿರುಕುಳವನ್ನು ಹೇಳಿಕೊಂಡಿದ್ದಾನೆ. 8 ವರ್ಷಗಳ ದಾಂಪತ್ಯ ಜೀವನದಲ್ಲಿ ಕಳೆದೆರಡು ವರ್ಷದಿಂದ ಬಿರುಕು ಮೂಡಿತ್ತು ಎಂದು ಗಂಗಾಧರ್ ಹೇಳಿದ್ದಾನೆ. ನಂಜುಂಡೇಗೌಡನ ಮೋಹಕ್ಕೆ ಬಿದ್ದು ಪತಿ, ಮಗು ಬಗೆಗಿನ ಕಾಳಜಿಯನ್ನು ಸಿಂಧು ಮರೆತಿದ್ದಳು. ಪ್ರತಿನಿತ್ಯ ನಂಜುಂಡೇಗೌಡನ ಜೊತೆ ಮಾತುಕತೆಯಲ್ಲೇ ಸಿಂಧು ತೊಡಗಿದ್ದಳು.
ಕಳೆದ ಹಲವು ವರ್ಷಗಳ ಹಿಂದೆ ನಂಜುಂಡೇಗೌಡನ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಆತ್ಮಹತ್ಯೆಗೆ ನಂಜುಂಡೇಗೌಡನ ನಡತೆಯೇ ಕಾರಣ ಎಂಬ ಆರೋಪವು ಸಹ ಇದೆ. ಹೆಂಡತಿ ಆತ್ಮಹತ್ಯೆ ಬಳಿಕ ಗಂಗಾಧರ್ ಪತ್ನಿ ಸಿಂಧು ಜೊತೆ ನಂಜುಂಡೇಗೌಡ ಅಕ್ರಮ ಸಂಬಂಧವಿಟ್ಟುಕೊಂಡಿದ್ದ. ವಿವಾಹಿತೆ ಸಿಂಧುಳಿಗೆ ಐಷಾರಾಮಿ ಬದುಕಿನ ಆಮಿಷ ತೋರಿಸಿ ನಂಜುಂಡೇಗೌಡ ಪಾಟಯಿಸಿಕೊಂಡಿದ್ದ.
ಯಾರೂ ಇಲ್ಲದ ವೇಳೆ ಗಂಗಾಧರ್ ಮನೆಗೆ ನಂಜುಂಡೇಗೌಡ ಬಂದು ಸಿಂಧು ಜೊತೆ ಕಾಲ ಕಳೆದು ಹೋಗುತ್ತಿದ್ದ. ಸಿಂಧು ಸದಾ ಫೋನ್‌ನಲ್ಲಿ ಬ್ಯುಸಿಯಾಗಿ ಇರುತ್ತಿದ್ದಳು. ನಂಜುಂಡೇಗೌಡ ಜೊತೆ ಸಿಂಧು ವೀಡಿಯೋ ಕಾಲ್ ಮಾಡುತ್ತಿದ್ದಳು. ಇದನ್ನು ಕಂಡ ಪತಿ ಗಂಗಾಧರ್ ಪತ್ನಿ ಸಿಂಧು ವರ್ತನೆಯನ್ನು ಪ್ರಶ್ನಿಸಿದ ವೇಳೆ ಸಿಂಧು ಮತ್ತು ನಂಜುಂಡೇಗೌಡ ಬೆದರಿಕೆ ಹಾಕಿದ್ದರು. ಆಸ್ತಿ ಭಾಗ ಮಾಡಿ, ಹೆಂಡತಿಗೆ ಕಿರುಕುಳ ನೀಡುತ್ತಿದ್ದಾನೆ ಎಂದು ಠಾಣೆಗೆ ದೂರು ನೀಡುತ್ತೇವೆ. ಇಲ್ಲ ನಿನ್ನ ಮತ್ತು ಮಗನನ್ನು ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದರು.
ಪತ್ನಿ ಹಾಗೂ ಪ್ರಿಯಕರನ ನಿರಂತರ ಕಿರುಕುಳಕ್ಕೆ ಬೇಸತ್ತು ಹಾಗೂ ಮರ್ಯಾದೆಗೆ ಅಂಜಿ 6 ವರ್ಷದ ಮಗನೊಂದಿಗೆ ಗಂಗಾಧರ್ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರವನ್ನು ಮಾಡಿದ್ದಾರೆ. ಅಂದು ನಿದ್ರಾವಸ್ತೆಯಲ್ಲಿದ್ದ ತನ್ನ ಮಗನ ಮುಖಕ್ಕೆ ಬಟ್ಟೆ ಕಟ್ಟಿ ಗಂಗಾಧರ್ ಮಗನೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾಯುವ ಮುನ್ನ ಡೆತ್‌ನೋಟ್ ಹಾಗೂ ವಿಡಿಯೋದಲ್ಲಿ ತನಗೆ ಆಗಿರುವ ಅನ್ಯಾಯ ಮತ್ತು ಕಿರುಕುಳದ ಬಗ್ಗೆ ವಿವರವಾಗಿ ತಿಳಿಸಿದ್ದಾನೆ. ಇದನ್ನೂ ಓದಿ: UP Election – ಅಮಿತ್ ಶಾ ಮನೆ-ಮನೆ ಪ್ರಚಾರ
ಡೆತ್‌ನೋಟ್ ಹಾಗೂ ವೀಡಿಯೋದಲ್ಲಿ ಗಂಗಾಧರ್, ನನ್ನ ಮತ್ತು ಮಗನ ಸಾವಿಗೆ ಪತ್ನಿ ಸಿಂಧು ಹಾಗೂ ನಂಜುಂಡೇಗೌಡ ಕಾರಣ. ಅವರ ವಿರುದ್ಧ ಕಾನೂನು ಕ್ರಮಕೈಗೊಂಡು ನಮ್ಮ ಸಾವಿಗೆ ನ್ಯಾಯ ಕೊಡಿಸಿ ಎಂದು ಗಂಗಾಧರ್ ಮನವಿ ಮಾಡಿದ್ದಾನೆ.
ಆತ್ಮಹತ್ಯೆ ಮಾಡಿಕೊಂಡ ದಿನ ಕೆರೆಯಲ್ಲಿ ಮೃತದೇಹ ಹುಡುಕಾಟ ನಡೆಸಿದ ವೇಳೆ ತಾನೂ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದಿದ್ದ ಸಿಂಧು, ಅಗ್ನಿ ಶಾಮಕ ದಳದ ಸಿಬ್ಬಂದಿ ಮೃತದೇಹ ಹುಡುಕುತ್ತಿದ್ದ ವೇಳೆ ಕೆರೆಗೆ ಹಾರಿದ್ದಾಳೆ. ಬಳಿಕ ಸ್ಥಳೀಯರು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಸಿಂಧು ರಕ್ಷಣೆ ಮಾಡಿದ್ದಾರೆ. ಇದನ್ನೂ ಓದಿ: UP Election: ಭಾರತದ ಅತಿ ಎತ್ತರದ ಮನುಷ್ಯ ಸಮಾಜವಾದಿ ಪಕ್ಷ ಸೇರ್ಪಡೆ
ಇದೀಗ ಮೃತ ಗಂಗಾಧರ್ ಅಣ್ಣ ನೀಡಿರುವ ದೂರಿನ ಹಿನ್ನೆಲೆ ಆರೋಪಿ ಸಿಂಧುವನ್ನು ಪೊಲೀಸರು ಬಂಧಿಸಿದ್ದು, ಸದ್ಯ ತಲೆಮರೆಸಿಕೊಂಡಿರುವ ನಂಜುಂಡೇಗೌಡನಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಈ ಸಂಬಂಧ ಬಿಂಡಿಗನವೀಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುಣೆ: ಕಳೆದ ಅಕ್ಟೋಬರ್ ತಿಂಗಳಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬ ವಿವಾಹಿತ ಮಹಿಳೆಯ ಜೊತೆಗಿನ ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಕೊಲೆಯಾಗಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ವಿವಾಹಿತ ಮಹಿಳೆಯ ಪತಿ ಸೇರಿ ಮೂವರನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ.
ಕೊಲೆಯಾದ ವ್ಯಕ್ತಿಯ ಚಪ್ಪಲಿಯ ಸಾಕ್ಷ್ಯ ಆಧಾರದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯ ಮನೆಗೆ ಕೊಲೆಯಾದ 27 ವರ್ಷದ ಯುವಕ ಬಂದಿದ್ದ. ಇದೇ ಮನೆಯ ಮುಂಭಾಗದಲ್ಲಿ ಚಪ್ಪಲಿಯೊಂದು ಸಿಕ್ಕಿತ್ತು. ಇದನ್ನೇ ಆಧಾರವಾಗಿಟ್ಟುಕೊಂಡು ತನಿಖೆ ನಡೆಸಿದ ಪೊಲೀಸರಿಗೆ ಮಹಿಳೆಯ ಪತಿ ಹಾಗೂ ಇನ್ನಿಬ್ಬರು ಸಿಕ್ಕಿಬಿದ್ದಿದ್ದಾರೆ.
ಕೊಲೆಯಾದ ಯುವಕ ಕಳೆದ ಅಕ್ಟೋಬರ್ 22ರಂದು ಬಾವ್ಧಾನ್ ಎಂಬಲ್ಲಿಂದ ನಾಪತ್ತೆಯಾಗಿದ್ದಾನೆ ಎಂದು ಆತನ ತಾಯಿ ದೂರು ನೀಡಿದ್ದರು. ಪ್ರಕರಣವನ್ನು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ ಪೊಲೀಸರು ಕಿಡ್ನ್ಯಾಪ್ ಆಗಿರಬಹುದು ಎಂದು ಕೂಡಾ ವಿಚಾರಣೆ ನಡೆಸಿದ್ದರು. ಇದೇ ವೇಳೆ ಮನೆಯೊಂದರ ಮುಂದೆ ಯುವಕ ಬಳಸುತ್ತಿದ್ದ ಚಪ್ಪಲಿ ಸಿಕ್ಕಿದೆ.
ಏನಾಯ್ತು?: ಪೊಲೀಸರು ಹೇಳುವ ಪ್ರಕಾರ, ಕೊಲೆಯಾದ ಯುವಕ ಚಪ್ಪಲಿ ಸಿಕ್ಕಿದ ಮನೆಯ ಮಾಲೀಕನ ಪತ್ನಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಎನ್ನುವುದು ವಿಚಾರಣೆ ವೇಳೆ ಗೊತ್ತಾಗಿದೆ. ಹತ್ಯೆ ಮಾಡುವುದಕ್ಕೂ ಮುನ್ನ ಆರೋಪಿ ತನ್ನ ಪತ್ನಿಯ ಮೊಬೈಲ್‍ನಲ್ಲಿ 2 ಮಿಸ್ಡ್ ಕಾಲ್ ಬಂದಿರೋದನ್ನ ನೋಡಿದ್ದಾನೆ. ಇದರಿಂದ ಆಕೆಯ ಪತಿಗೆ ಅನುಮಾನ ಶುರುವಾಗಿದೆ. ಅಕ್ಟೋಬರ್ 21ರಂದು ರಾತ್ರಿ ಇದೇ ನಂಬರ್‍ನಿಂದ ಯುವಕನಿಗೆ ಕಾಲ್ ಹೋಗಿದೆ. ಇದನ್ನೂ ಓದಿ: ನೈಟ್ ಕರ್ಫ್ಯೂ ಆದೇಶ ಹಿಂಪಡೆದ ರಾಜ್ಯ ಸರ್ಕಾರ
ಮಧ್ಯರಾತ್ರಿ ಬಳಿಕ ಯುವಕ ಮಹಿಳೆಯ ಮನೆಯತ್ತ ಹೋಗಿದ್ದಾನೆ. ಇದಕ್ಕಾಗಿ ಹೊಂಚು ಹಾಕಿ ಕೂತಿದ್ದ ಆರೋಪಿ ಇನ್ನಿಬ್ಬರ ಜೊತೆ ಸೇರಿ ಯುವಕನ ಎದೆ ಹಾಗೂ ಕಿಬ್ಬೊಟ್ಟೆಗೆ ಚುಚ್ಚಿದ್ದಾರೆ. ಆತ ಮೃತಪಟ್ಟಿರುವುದನ್ನು ಖಚಿತ ಪಡಿಸಿಕೊಂಡ ಬಳಿಕ ಆರೋಪಿಗಳಲ್ಲೊಬ್ಬನ ಕಳ್ಳಭಟ್ಟಿ ಕೇಂದ್ರಕ್ಕೆ ಕೊಂಡೊಯ್ದು ಮೃತದೇಹವನ್ನು ಸುಟ್ಟಿದ್ದಾರೆ. ಬಳಿಕ ಅಳಿದುಳಿದ ಅವಶೇಷಗಳನ್ನು ಪಟ್ಟಣದ ವಿವಿಧ ಪ್ರದೇಶಗಳಲ್ಲಿ ಎಸೆದು ಪರಾರಿಯಾಗಿದ್ದರು.
ಪೊಲೀಸರ ತನಿಖೆ ವೇಳೆ ಒಬ್ಬ ಪುಣೆಯಲ್ಲಿ ಪತ್ತೆಯಾದರೆ, ಪರಾರಿಯಾಗಿದ್ದ ಪ್ರಮುಖ ಆರೋಪಿ ಹಾಗೂ ಆತನ ಸಹಚರನನ್ನು ಮಧ್ಯಪ್ರದೇಶದಲ್ಲಿ ಬಂಧಿಸಿದ್ದಾರೆ.
ನೆಲಮಂಗಲ: ಪ್ರೇಯಸಿಯೇ ತನ್ನ ಪ್ರಿಯಕರನಿಗೆ ಸ್ಕೆಚ್ ಹಾಕಿ ಮರ್ಡರ್ ಮಾಡಿದ್ದ ಪ್ರಕರಣವನ್ನು ಮಾದನಾಯಕನಹಳ್ಳಿ ಪೊಲೀಸರು ಭೇದಿಸಿದ್ದಾರೆ.
ಸೆಪ್ಟೆಂಬರ್ 5 ರಂದು ಮಾದಾವರದ ನವಿಲೇ ಲೇಔಟ್‍ನ ನಿರ್ಜನ ಪ್ರದೇಶದಲ್ಲಿ ಕಿಡಿಗೇಡಿಗಳು ಕಿರಣ್ ಕುಮಾರ್ ಕೊಲೆ ಮಾಡಲು ಪ್ರಯತ್ನಿಸಿದ್ದರು. ಕೊನೆಗೆ ಬೆಂಗಳೂರಿನ ಪ್ರಕ್ರಿಯ ಆಸ್ಪತ್ರೆಯಲ್ಲಿ ಕಿರಣ್ ಕುಮಾರ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು. ಪ್ರಕರಣವನ್ನು ಕೊಲೆ ಎಂದು ದಾಖಲು ಮಾಡಿಕೊಂಡ ಮಾದನಾಯಕನಹಳ್ಳಿ ಪೊಲೀಸರು ತನಿಖೆ ಕೈಗೊಂಡು, 4 ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ವಿಚ್ಛೇದನ ಜೀವನಾಂಶ ಹಣ ಹೊಂದಿಸಲಾಗಿಲ್ಲ ಅಂತ ಪತಿ ಆತ್ಮಹತ್ಯೆ
5 ವರ್ಷ ಸಂಬಂಧ ಹೊಂದಿದ್ದ ಕಿರಣ್ ಕುಮಾರ್‌ನನ್ನು ಮುಗಿಸಲು ಶ್ವೇತಾ ಡೇವಿಡ್ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದಳು. ನಂತರ ಕಿರಣ್ ಮುಗಿಸಲು ಶ್ರೀಕಾಂತ್ ಮತ್ತು ದಿನೇಶ್ ಜೊತೆ ಸೇರಿ 1 ಲಕ್ಷ ರೂಪಾಯಿಗೆ ಡೀಲ್ ಮಾತನಾಡಿಕೊಂಡ ಡೇವಿಡ್ 10 ಸಾವಿರ ಹಣ ನೀಡಿ ತನ್ನ ಬೈಕ್ ಕೊಟ್ಟು ಕಿರಣ್ ಮೇಲೆ ಅಟ್ಯಾಕ್ ಮಾಡಿಸಿದ್ದ. ಈ ಕೊಲೆಗೆ ಕಿರಣ್ ಕುಮಾರ್ ಚಲನವಲನದ ಬಗ್ಗೆ ಸಂಪೂರ್ಣ ಅರಿತಿದ್ದ ಶ್ವೇತಾ ಎಲ್ಲಾ ಮಾಹಿತಿಗಳನ್ನು ನೀಡಿದ್ದಳು.
ಈ ಪ್ರಕರಣ ದಾಖಲಿಸಿಕೊಂಡ ಮಾದನಾಯಕನಹಳ್ಳಿ ಇನ್ಸ್‌ಪೆಕ್ಟರ್ ಮಂಜುನಾಥ್ ನೇತೃತ್ವದಲ್ಲಿ ತಂಡ ರಚಿಸಿ ಸಿಸಿಟಿವಿಯಲ್ಲಿ ಬೈಕ್ ಚಲನವಲನ ಆಧರಿಸಿ ಶ್ವೇತಾಳನ್ನು ವಿಚಾರಣೆಗೆ ಒಳಪಡಿಸಿದರು ಮತ್ತು ಕೃತ್ಯಕ್ಕೆ ಬಳಸಿದ್ದ ಬೈಕ್, ಚಾಕು, ಡಾಂಗಲ್ ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಎಸ್‍ಪಿ ಕೋನವಂಶಿ ಕೃಷ್ಣ ತಿಳಿಸಿದ್ದಾರೆ. ಇದನ್ನೂ ಓದಿ: ಕೊರೊನಾಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಕುಟುಂಬಕ್ಕೂ ಪರಿಹಾರ -ಕೇಂದ್ರ ಸರ್ಕಾರ
ಬೆಂಗಳೂರು: ಲವ್ವಿ ಡವ್ವಿಗೆ ಪತಿ ಅಡ್ಡಿ ಆಗುತ್ತಿದ್ದಾನೆಂದು ಪ್ರಿಯಕರನಿಗೆ ಹೇಳಿ ಕೊಲೆ ಮಾಡಿಸಿ ನವರಂಗಿ ಆಟವಾಡಿ ಕೈತೊಳೆದುಕೊಳ್ಳಲು ಮುಂದಾಗಿದ್ದ ಐನಾತಿ ಸುಂದರಿಯನ್ನ ಕೆ.ಜಿ ನಗರ ಪೊಲೀಸರು ಬಂಧಿಸಿದ್ದಾರೆ.
ರಂಜಿತಾ ಬಂಧಿತ ಆರೋಪಿ. ರಂಜಿತಾ ಐದು ವರ್ಷದ ಹಿಂದೆ ಆಟೋ ಚಾಲಕ ಕಾರ್ತಿಕ್ ಎಂಬತಾನನ್ನು ಪ್ರೀತಿಸಿ ಮದುವೆ ಆಗಿದ್ದಳು. ಇಬ್ಬರ ಮದುವೆಗೆ ಸಾಕ್ಷಿ ಎಂಬಂತೆ ನಾಲ್ಕು ವರ್ಷದ ಹೆಣ್ಣು ಮಗುವಿದೆ. ಕೊಲೆಯಾದ ಕಾರ್ತಿಕ್ ಸ್ನೇಹಿತ ಸಂಜೀವ್ ಗೆ ತನ್ನದೇ ಮನೆಯಲ್ಲಿ ಆಸರೆ ನೀಡಿದ್ದ. ಆರೋಪಿ ಸಂಜೀವ್ ಸ್ನೇಹ ಮರೆತು ಗೆಳೆಯನ ಪತ್ನಿ ರಂಜಿತಾ ಜೊತೆಯಲ್ಲಿ ಲವ್ವಿ ಡವ್ವಿ ಶುರು ಮಾಡಿಕೊಂಡಿದ್ದನು.
ರಂಜಿತಾ ಮತ್ತು ಸಂಜೀವ್ ಪ್ರೀತಿ ಮದುವೆ ಹಂತಕ್ಕೆ ಹೊಗುತ್ತಿದ್ದಂತೆ ಕಾರ್ತಿಕ್ ತಮಗೆ ಅಡ್ಡಿ ಆಗಬಹುದೆಂದು ತಿಳಿದು ಕೊಲೆಗೆ ಸ್ಕೆಚ್ ಹಾಕುತ್ತಾರೆ. ಜುಲೈ 29 ರಂದು ಕಾರ್ತಿಕ್ ನನ್ನ ಆರೋಪಿ ಸಂಜೀವ್, ಸುಬ್ರಮಣ್ಯ ಇಬ್ಬರು ಸೇರಿ ಚನ್ನಪಟ್ಟಣ ಕಡೆ ಕರೆದುಕೊಂಡು ಹೋಗಿದ್ದಾರೆ. ದಾರಿ ಮಧ್ಯೆ ಪಾರ್ಟಿ ಹೆಸರಲ್ಲಿ ಕಾರ್ತಿಕ್‍ಗೆ ಕಂಠ ಪೂರ್ತಿ ಮದ್ಯ ಕುಡಿಸಲಾಗಿದೆ. ಬಳಿಕ ಮಾರಕಾಸ್ತ್ರಗಳಿಂದ ಕೊಲೆ ಮಾಡಿ ವೃಷಭವತಿ ನದಿಗೆ ಮೂಟೆ ಕಟ್ಟಿ ಎಸೆದು ಬಂದಿರುತ್ತಾರೆ. ಇದನ್ನೂ ಓದಿ: ಪತಿಯನ್ನು ಖುಷಿಪಡಿಸಲು ಪತ್ನಿಯಿಂದ ನಗ್ನ ಫೋಟೋಶೂಟ್
ಕೊಲೆ ಬಳಿಕ ಪತ್ನಿ ರಂಜಿತಾ ನನ್ನ ಪತಿ ಕಾರ್ತಿಕ್ ಮಿಸ್ಸಿಂಗ್ ಆಗಿದ್ದಾರೆಂದು ಕೆಂಪೇಗೌಡ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಪೊಲೀಸರು ರಂಜಿತಾಳ ಬಗ್ಗೆ ಅನುಮಾನ ಬಂದು ತನಿಖೆಗೆ ಒಳಪಡಿಸಿದ್ದಾರೆ. ಆಗ ಕೊಲೆಯ ರಹಸ್ಯ ಬಯಲಾಗಿದೆ. ಸದ್ಯ ಘಟನೆ ಸಂಬಂಧ ಕೊಲೆಯಾದ ಕಾರ್ತಿಕ್ ಪತ್ನಿ ರಂಜಿತಾ, ಪ್ರಿಯಕರ ಸಂಜೀವ್, ಸುಬ್ರಮಣ್ಯ ಮೂವರನ್ನು ಬಂಧಿಸಿ ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ. ಇದನ್ನೂ ಓದಿ: ನಗ್ನ ಫೋಟೋ ಹಾಕಿ ಹಾಟ್ ಅವತಾರದಲ್ಲಿ ಮಿಂಚಿದ ಸನ್ನಿ
ಬೆಂಗಳೂರು: ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಶಂಕೆಯಿಂದ ಪತಿ ತನ್ನ ಪತ್ನಿಯನ್ನೇ ಕೊಲೆ ಮಾಡಿರುವ ಘಟನೆ ನಗರದ ಹುಳಿಮಾವು ಸಮೀಪದ ಅರಕೆರೆ ಬಿಟಿಎಸ್ ಲೇಔಟ್ ನಲ್ಲಿ ನಡೆದಿದೆ.
ಕೊಲೆಯಾದ ಮಹಿಳೆಯನ್ನು ಆಶಾ ಎಂದು ಗುರುತಿಸಲಾಗಿದ್ದು, ಆರೋಪಿ ಮಣಿ ತನ್ನ ಪತ್ನಿಯನ್ನು ಕೊಂದ ಪತಿರಾಯ. ಆಶಾ ಹಾಗೂ ಮಣಿ ನಡುವೆ ಆಗಾಗ ಗಲಾಟೆಯಾಗುತ್ತಿತ್ತು. ಅದೇ ರೀತಿ ನಿನ್ನೆ ರಾತ್ರಿಯೂ ಪತಿ, ಪತ್ನಿ ನಡುವೆ ಗಲಾಟೆಯಾಗಿದೆ. ಮಣಿ ಇತ್ತೀಚೆಗೆ ವಿಪರೀತ ಮದ್ಯ ಕುಡಿಯಲು ಆರಂಭಿಸಿದ್ದ. ಹೀಗಾಗಿ ಪತ್ನಿಯ ಶೀಲದ ಶಂಕಿಸಿ ಗಲಾಟೆ ಮಾಡುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡು ಯುವ ವೈದ್ಯೆ ಸಾವು
ನಿನ್ನೆ ರಾತ್ರಿ ನಡೆದ ಜಗಳದ ಸಿಟ್ಟಿನಿಂದ ಪತ್ನಿ ಆಶಾ ಮಲಗಿದ್ದ ಸಮಯದಲ್ಲಿ ಇಂದು ಬೆಳಗಿನಜಾವ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಬೆಳಗ್ಗೆಯಾದರೂ ಆಶಾ ಮನೆಯಿಂದ ಹೊರಬಾರದ ಹಿನ್ನೆಲೆ ಪಕ್ಕದ ಮನೆಯವರು ಹೋಗಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಕೂಡಲೇ ಹುಳಿಮಾವು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ಪತಿ ಮಣಿ ಕೊಲೆ ಮಾಡಿರುವ ಬಗ್ಗೆ ಮಾಹಿತಿ ಬಂದಿದ್ದು, ಆತನ ಹುಡುಕಾಟ ನಡೆಸುತ್ತಿದ್ದಾರೆ.
ಚಿಕ್ಕಬಳ್ಳಾಪುರ: ತನ್ನ ಮಗಳ ಜೊತೆ ಅಕ್ರಮ ಸಂಬಂಧ ಹೊಂದಿದ್ದಾನೆ ಅಂತ ತಂದೆಯೋರ್ವ ಯುವಕನ ಕೊಲೆಗೆ ಯತ್ನಿಸಿರುವ ಘಟನೆ ಚಿಕ್ಕಬಳ್ಳಾಪುರ ನಗರ ಗೌರಿಬಿದನೂರು ತಾಲೂಕಿನ ಕಲ್ಲಿನಾಯಜನಹಳ್ಳಿ ಬಳಿ ನಡೆದಿದೆ.
ಬಸವಾಪುರ ಗ್ರಾಮದ ಫೀರೋಜ್ ಖಾನ್(26) ಹಲ್ಲೆಗೊಳಗಾದವ. ಕಲ್ಲಿನಾಯಕನಹಳ್ಳಿಯ ಗಂಗಾಧರ್ ಎಂಬಾತ ಹಲ್ಲೆ ಮಾಡಿದವ. ಅಂದಹಾಗೆ ತನ್ನ ಮಗಳ ಜೊತೆ ಫಿರೋಜ್ ಖಾನ್ ಅಕ್ರಮ ಸಂಬಂಧ ಇಟ್ಟುಕೊಂಟಿದ್ದಾನೆ ಅಂತ ಅರಿತು ಗಂಗಾಧರ ದೊಡ್ಡಬಳ್ಳಾಪುರಕ್ಕೆ ಹೋಗಬೇಕು ಬಾ ಅಂತ ಫಿರೋಜ್ ಖಾನ್ ನನ್ನ ಕರೆಸಿಕೊಂಡಿದ್ದಾನೆ. ಈ ವೇಳೆ ಫಿರೋಜ್ ಕೊಲೆ ಮಾಡಲು ಯತ್ನಿಸಿದ್ದಾನೆ.
ಬಳಿಕ ಘಟನಾ ಸ್ಥಳದಿಂದ ಗಂಗಾಧರ್ ಪರಾರಿಯಾಗಿದ್ದಾನೆ. ಆದರೆ ಫಿರೋಜ್ ಖಾನ್ ಇಡೀ ರಾತ್ರಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದ. ಬೆಳಗ್ಗೆ ಸ್ಥಳೀಯರು ಫಿರೋಜ್ ಖಾನ್ ನೋಡಿ ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ರು.
ಸದ್ಯ ಗಾಯಾಳು ಸ್ಥಿತಿ ಗಂಭೀರವಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಆರೋಪಿ ಗಂಗಾಧರ್ ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದು, ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.