Tag: ಅಕ್ರಮ ಸಂಬಂಧ

  • ಸ್ಯಾಂಡಲ್‍ವುಡ್ ನಟಿ ಚೈತ್ರಾ ಪೋತರಾಜ್ ಸಂಸಾರದಲ್ಲಿ ಬಿರುಕು- ಲವ್ ಮಾಡಿ ಮದ್ವೆಯಾಗಿದ್ದ ಜೋಡಿ ವಿಚ್ಛೇದನಕ್ಕೆ ತಯಾರಿ

    ಸ್ಯಾಂಡಲ್‍ವುಡ್ ನಟಿ ಚೈತ್ರಾ ಪೋತರಾಜ್ ಸಂಸಾರದಲ್ಲಿ ಬಿರುಕು- ಲವ್ ಮಾಡಿ ಮದ್ವೆಯಾಗಿದ್ದ ಜೋಡಿ ವಿಚ್ಛೇದನಕ್ಕೆ ತಯಾರಿ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಚೈತ್ರಾ ಪೋತರಾಜ್ ಸಂಸಾರದಲ್ಲಿ ಬಿರುಕು ಮೂಡಿದ್ದು, ಲವ್ ಮಾಡಿ ಮದುವೆಯಾಗಿದ್ದ ಜೋಡಿ ಇದೀಗ ವಿಚ್ಛೇದನಕ್ಕೆ ತಯಾರಿ ನಡೆಸುತ್ತಿದ್ದಾರೆ.

    ಚೈತ್ರಾಗೆ ಲಿಕ್ಕರ್ ಉದ್ಯಮಿ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಯಾದ ಬಾಲಾಜಿ ಪೋತರಾಜ್ ಅವರ ಪರಿಚಯವಾಗಿ, ಡಿಸೆಂಬರ್ 12, 2006ರಂದು ಮೈಸೂರಿನ ಚಾಮುಂಡೇಶ್ವರಿ ಸ್ಟೇಡಿಯಂನಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆ ಮಾಡಿಕೊಂಡಿದ್ದರು. ಬಾಲಾಜಿ ಹಾಗೂ ಚೈತ್ರಾಗೆ 2 ಮುದ್ದಾದ ಮಕ್ಕಳಿದ್ದಾರೆ. ಚೈತ್ರಾ ಸಿನಿಮಾ ನಟಿಯಾಗಿದ್ದರಿಂದ ಪತಿ ಬಾಲಾಜಿ ತನ್ನ ಮೇಲೆ ಅನುಮಾನ ಪಡುತ್ತಿದ್ದರು. ಎಲ್ಲಿಗೆ ಹೋದರೂ ಜೊತೆಗೆ ಗನ್ ಮ್ಯಾನ್ ನನ್ನ ಕಳುಹಿಸುತ್ತಿದ್ದರು ಎಂದು ಚೈತ್ರಾ ಆರೋಪಿಸಿದ್ದಾರೆ.

    ಮದುವೆಯ ನಂತರ ಬಾಲಾಜಿ ನನಗೆ ಪ್ರತಿದಿನ ಹೊಡೆದು, ಬೈದು ಚಿಕ್ಕಪುಟ್ಟ ವಿಷಯಗಳಿಗೆ ಕಿರುಕುಳ ನೀಡುತ್ತಿದ್ದರು. ನನಗೆ ಎರಡನೇ ಮಗುವಾದ ನಂತರ ನಾನು ಅವರ ಜೊತೆ ಯಾವುದೇ ದೈಹಿಕ ಸಂಪರ್ಕವನ್ನು ಬೆಳೆಸಿಕೊಂಡಿಲ್ಲ. ಬಾಲಾಜಿ ನನ್ನನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿದ್ದರು. ಅಷ್ಟೇ ಅಲ್ಲದೇ ನಾನು ತವರು ಮನೆಗೆ ಹೋಗಬೇಕೆಂದರೆ ಅವರು ನನ್ನ ಜೊತೆ ಗನ್‍ಮ್ಯಾನ್ ಕಳುಹಿಸುತ್ತಿದ್ದರು. ನನ್ನ ಖರ್ಚಿಗೆ ಹಣ ಕೇಳಿದರೆ ಬಾಲಾಜಿ ನನ್ನನ್ನು ಹೊಡೆದು ಅಮಾನವೀಯವಾಗಿ ವರ್ತಿಸುತ್ತಿದ್ದರು ಎಂದು ನಟಿ ಚೈತ್ರಾ ದೂರಿನಲ್ಲಿ ತಿಳಿಸಿದ್ದಾರೆ.

    ಸಿನಿಮಾಗಳಲ್ಲಿ ನಾನು ನಟಿಸಬಾರದು ಎಂದು ಹೇಳಿದ್ದರಿಂದ ನನ್ನ ತವರು ಮನೆಯವರ ಸಹಾಯದಿಂದ ಧಾರವಾಹಿಯನ್ನು ನಿರ್ಮಾಣ ಮಾಡುತ್ತಿದೆ. ಆದರೆ ಧಾರವಾಹಿಯಿಂದ ಬಂದ ಹಣವನ್ನು ಕೂಡ ಬಾಲಾಜಿ ತೆಗೆದುಕೊಳ್ಳುತ್ತಿದ್ದರು. ಒಮ್ಮೆ ನಾನು ಬಾಲಾಜಿ ಜೊತೆ ಕಾರಿನಲ್ಲಿ ಹೋಗುತ್ತಿದ್ದಾಗ ನಮ್ಮಿಬ್ಬರ ನಡುವೆ ಗಲಾಟೆ ಆಗಿದ್ದು, ಆಗ ಬಾಲಾಜಿ ನನ್ನ ತಲೆಯನ್ನು ಕಾರಿನ ಕಿಟಕಿಗೆ ಡಿಕ್ಕಿ ಹೊಡೆಸಿದ್ದರು. ಆಗ ನನ್ನ ತಲೆ ಬುರುಡೆ ತೆರೆದುಕೊಂಡಿದ್ದು, ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿದ್ದೆ ಎಂದು ಚೈತ್ರಾ ಹೇಳಿದ್ದಾರೆ.

    ನಂತರ ಮತ್ತೆ ಮಾರ್ಚ್ 14ರಂದು ಚಿಕ್ಕ ವಿಷಯಕ್ಕೆ ಜಗಳ ತೆಗೆದು ಮುಖಕ್ಕೆ ಹೊಡೆದು ತಲೆ ಕೂದಲನ್ನು ಹಿಡಿದು ಗೋಡೆಗೆ ಡಿಕ್ಕಿ ಹೊಡೆಸಿದ್ದರು. ಆ ಹೊಡೆತದಿಂದ ನನ್ನ ಮೂಗು ಮತ್ತು ಬಾಯಿಂದ ರಕ್ತ ಬಂದು ಎಡಗಣ್ಣಿನ ಕೆಳಗೆ ಗಾಯವಾಯಿತು. ಅಷ್ಟೇ ಅಲ್ಲದೇ ನನ್ನನ್ನು ಕೊಲೆ ಮಾಡುವ ಉದ್ದೇಶದಿಂದ ಕುತ್ತಿಗೆಯನ್ನು ಹಿಡಿದು ಹೊಟ್ಟೆಯ ಭಾಗಕ್ಕೆ ಹೊಡೆದಿದ್ದಾರೆ. ನಾನು ಪ್ರಜ್ಞೆ ತಪ್ಪಿದ್ದರೂ ಚಿಕಿತ್ಸೆ ಕೊಡಿಸದೇ ಬಾಲಾಜಿ ಮನೆ ಬಿಟ್ಟು ಹೋಗಿದ್ದಾರೆ ಎಂದು ಚೈತ್ರಾ ದೂರಿದ್ದಾರೆ.

    ಬಾಲಾಜಿ ಅಮೂಲ್ಯ ಎಂಬ ಹುಡುಗಿ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದು, ನನ್ನನ್ನು ಮನೆಯಿಂದ ಹೊರಹಾಕುವ ಉದ್ದೇಶದಿಂದ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿದ್ದರು. ಸದ್ಯ ನಾನು ಈಗ ತವರು ಮನೆಯಲ್ಲಿದ್ದು, ಬಾಲಾಜಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಚೈತ್ರಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಪತಿಯ ವಿರುದ್ಧ ಚೈತ್ರಾ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

  • ಹೆಂಡ್ತಿ ಬೇರೆಯವರ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆಂದು ಶಂಕಿಸಿ ರೈಲಿನ ಮುಂದೆ ಜಿಗಿದು ಪತಿ ಆತ್ಮಹತ್ಯೆ!

    ಹೆಂಡ್ತಿ ಬೇರೆಯವರ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆಂದು ಶಂಕಿಸಿ ರೈಲಿನ ಮುಂದೆ ಜಿಗಿದು ಪತಿ ಆತ್ಮಹತ್ಯೆ!

    ಹೈದರಾಬಾದ್: ಪತ್ನಿ ಬೇರೆಯವರ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆಂಬ ವಿಷಯ ತಿಳಿದು ಬೇಸತ್ತ ಪತಿ ರೈಲಿನ ಮುಂದೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಆಂಧ್ರಪ್ರದೇಶದ ಕರ್ನೂಲ್‍ನಲ್ಲಿ ನಡೆದಿದೆ.

    ವಿನಯ್ ಕುಮಾರ್(24) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ವಿನಯ್ ಗೋನೆಗಾಂಡ್ಲಾ ಗ್ರಾಮದ ನಿವಾಸಿಯಾಗಿದ್ದು, 2017ರ ನವೆಂಬರ್ 1 ರಂದು ಸೌಜನ್ಯ ಜೊತೆ ಮದುವೆಯಾಗಿದ್ದನು. ನಂತರ ಸೌಜನ್ಯಳಿಗೆ ಬೇರೆಯವನ ಜೊತೆ ಅಕ್ರಮ ಸಂಬಂಧ ಇದೆ ಎಂದು ಶಂಕಿಸಿ ಪ್ರತಿನಿತ್ಯ ಜಗಳವಾಡುತ್ತಿದ್ದ.

    ದಿನನಿತ್ಯ ಇಬ್ಬರ ನಡುವೆ ಜಗಳವಾಗುತ್ತಿದ್ದ ಕಾರಣ ವಿನಯ್ ಪತ್ನಿ ಕೆಲವು ತಿಂಗಳ ಹಿಂದೆ ತನ್ನ ತವರು ಮನೆಯನ್ನು ಸೇರಿದ್ದಳು. ನಂತರ ಸೌಜನ್ಯ ಅವರ ಪೋಷಕರು ವಿಜಯ್‍ಗೆ ಕರೆ ಮಾಡಿ ಆಕೆಯ ಆರೋಗ್ಯ ಸರಿಯಿಲ್ಲ ಹಾಗೂ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದೇವೆ ಎಂದು ಕರೆ ಮಾಡಿದ್ದಾರೆ.

    ತನ್ನ ಪತ್ನಿ ಸೌಜನ್ಯಳನ್ನು ನೋಡಲು ವಿನಯ್ ತನ್ನ ಸಹೋದರ ವಂಶಿಕೃಷ್ಣ ಜೊತೆ ಆಸ್ಪತ್ರೆಗೆ ಭೇಟಿ ನೀಡಿದ್ದಾನೆ. ಆಗ ವಿನಯ್ ಹಾಗೂ ಸೌಜನ್ಯ ನಡುವೆ ಮತ್ತೆ ಜಗಳ ನಡೆದಿದೆ. ಜಗಳವಾಡಿದ ನಂತರ ವಿನಯ್ ಕರ್ನೂಲ್ ಹೊರವಲಯದಲ್ಲಿರುವ ಮಧುನಗರದ ಕಾರ್ಬೈಡ್ ಫ್ಯಾಕ್ಟರಿಗೆ ಹೋಗಿ ರೈಲಿನ ಮುಂದೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ರೈಲ್ವೇ ಸಿಬ್ಬಂದಿ ಮೃತದೇಹವನ್ನು ನೋಡಿ ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಈ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

  • ಪತಿಯಿಂದಲೇ ವಿಪ್ರೋ ಮಾಜಿ ಉದ್ಯೋಗಿಯ ಬರ್ಬರ ಹತ್ಯೆ

    ಪತಿಯಿಂದಲೇ ವಿಪ್ರೋ ಮಾಜಿ ಉದ್ಯೋಗಿಯ ಬರ್ಬರ ಹತ್ಯೆ

    ಬೆಂಗಳೂರು: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ವಿಪ್ರೋ ಮಾಜಿ ಉದ್ಯೋಗಿಯನ್ನು ಪತಿಯೇ ಕೊಲೆ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

    ಅಕ್ಷತಾ(30) ಕೊಲೆಯಾದ ಮಹಿಳೆ. ಪ್ರಕರಣದ ಸಂಬಂಧ ಪತಿ ಚಂದ್ರಕಾಂತ್ ಮತ್ತು ಕೃತ್ಯಕ್ಕೆ ಸಹಕರಿಸಿದ ಆರೋಪದ ಅಡಿ ರಾಜ್ ವೀರ್ ಸಿಂಗ್ ನನ್ನು ಸಂಪಂಗಿರಾಮ ನಗರ ಪೊಲೀಸರು ಬಂಧಿಸಿದ್ದಾರೆ.

    ಏನಿದು ಪ್ರಕರಣ?
    ಶಾಂತಿನಗರದಲ್ಲಿ ಸಿಲ್ವರ್ ಸ್ಪೂನ್ ಹೋಟೆಲ್ ನಡೆಸುತ್ತಿದ್ದ ಚಂದ್ರಕಾಂತ್ ಮತ್ತು ಅಕ್ಷತಾಗೆ 10 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಹೆಬ್ಬಾಳ ಸಮೀಪದ ಅಪಾರ್ಟ್ ಮೆಂಟ್ ನಲ್ಲಿ ದಂಪತಿ ವಾಸವಿದ್ದು, ಇವರಿಗೆ ನಾಲ್ಕು ವರ್ಷದ ಗಂಡು ಮಗು ಇದೆ.

    ದಂಪತಿ ಮಧ್ಯೆ ಆಗಾಗ ಜಗಳವಾಗುತಿತ್ತು. ಜ.6 ರಂದು ಮನೆಯಲ್ಲಿ ಇಬ್ಬರ ಮಧ್ಯೆ ಜಗಳವಾಗಿದೆ. ಈ ವೇಳೆ ಪತಿ ಚಂದ್ರಕಾಂತ್ ಅಕ್ಷತಾ ಮೇಲೆ ಹಲ್ಲೆ ನಡೆಸಿ ಬಳಿಕ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಬಳಿಕ ತನ್ನ ಸ್ನೇಹಿತ ರಾಜ್ ವೀರ್ ಸಿಂಗ್ ಗೆ ಕರೆ ಮಾಡಿ ವಿಷಯ ತಿಳಿಸಿದ್ದ. ರಾಜ್ ವೀರ್ ಸಿಂಗ್ ತಕ್ಷಣವೇ ತನ್ನ ಐ10 ಕಾರಿನಲ್ಲಿ ಅಪಾರ್ಟ್ ಮೆಂಟ್ ಬಳಿ ಬಂದಿದ್ದಾನೆ. ರಾತ್ರಿ ಯಾರಿಗೂ ತಿಳಿಯದಂತೆ ಅಕ್ಷತಾ ಮೊಬೈಲ್ ಜೊತೆ ಮೃತದೇಹವನ್ನು ಕಾರಿನಲ್ಲಿ ತುಂಬಿ ರಾಜ್‍ವೀರ್ ತಮಿಳುನಾಡಿಗೆ ಪ್ರಯಾಣಿಸಿದ್ದಾನೆ. ಶೂಲಗಿರಿ ಠಾಣಾ ವ್ಯಾಪ್ತಿಯ ಕಾಮನದೊಡ್ಡಿ ಅರಣ್ಯದಲ್ಲಿ ಶವ ಎಸೆದು, ಅದರ ಮೇಲೆ ಡೀಸೆಲ್ ಸುರಿದು ರಾಜ್‍ವೀರ್ ಬೆಂಕಿ ಹಚ್ಚಿದ್ದಾನೆ.

    ಪೋಷಕರಿಂದ ನಾಪತ್ತೆ ದೂರು:
    ಮಗಳ ನಂಬರ್ ರೀಚ್ ಆಗದ ಹಿನ್ನೆಲೆಯಲ್ಲಿ ಅಕ್ಷತಾ ಪೋಷಕರು ಸಂಪಂಗಿರಾಮ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸುತ್ತಾರೆ. ಪೊಲೀಸರು ಅಕ್ಷತಾ ಮೊಬೈಲ್ ನಂಬರ್ ಪರಿಶೀಲಿಸಿದಾಗ ಬೇರೆ ಬೇರೆ ರಾಜ್ಯದ ಟವರ್ ಗಳು ಪತ್ತೆಯಾಗಿದೆ. ಕರೆ ಮಾಡಿದರೆ ರಿಸೀವ್ ಮಾಡುತ್ತಿರಲಿಲ್ಲ. ಹೀಗಾಗಿ ಪೊಲೀಸರು ಹೊರರಾಜ್ಯಕ್ಕೆ ಹೋಗಿರಬಹುದು ಎಂದು ತಿಳಿದುಕೊಂಡಿದ್ದರು.

    ಪತಿ ಮತ್ತು ಪತ್ನಿಯ ನಡುವೆ ಆಗಾಗ ಜಗಳವಾಗುತ್ತಿದ್ದ ವಿಚಾರವನ್ನು ಅಕ್ಷತಾ ಪೋಷಕರು ಪೊಲೀಸರಿಗೆ ತಿಳಿಸಿದ್ದಾರೆ. ಹೀಗಾಗಿ ಶಂಕೆಯ ಆಧಾರದಲ್ಲಿ ಪೊಲೀಸರು ಚಂದ್ರಕಾಂತ್ ನನ್ನು ಮತ್ತಷ್ಟು ವಿಚಾರಣೆ ನಡೆಸಿದಾಗ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ. ಆತ ನೀಡಿದ ಮಾಹಿತಿ ಆಧರಿಸಿ ಶೂಲಗಿರಿ ಪೊಲೀಸರನ್ನು ಸಂಪರ್ಕಿಸಿದಾಗ ಅಲ್ಲಿ ಪತ್ತೆಯಾದ ಮೃತದೇಹ ಅಕ್ಷತಾಳದ್ದೇ ಎನ್ನುವುದು ಗೊತ್ತಾಗಿದೆ.

    ಕೊಲೆ ಮಾಡಿದ್ದು ಯಾಕೆ?
    ಪತ್ನಿಗೆ ಬೇರೊಬ್ಬ ವ್ಯಕ್ತಿಯ ಜೊತೆ ಅಕ್ರಮ ಸಂಬಂಧ ಇತ್ತು. ಈ ವಿಚಾರ ಕುಟುಂಬದವರಿಗೆ ತಿಳಿದಿತ್ತು. ಅಷ್ಟೇ ಅಲ್ಲದೇ ಆಕೆ ವಿಪರೀತವಾಗಿ ಮದ್ಯವನ್ನು ಕುಡಿಯುತ್ತಿದ್ದಳು. ಹೀಗಾಗಿ ನಾನು ಆಕೆಯನ್ನು ಕೊಲೆ ಮಾಡಿದ್ದೇನೆ ಎಂದು ತನಿಖೆ ವೇಳೆ ಚಂದ್ರಕಾಂತ್ ತಪ್ಪೊಪ್ಪಿಕೊಂಡಿದ್ದಾನೆ.

  • ಪತ್ನಿ ಜೊತೆ ಸರಸವಾಡ್ತಿದ್ದ ಸಹೋದರನನ್ನು ಕಬ್ಬಿಣದ ರಾಡ್‍ನಿಂದ ಹೊಡೆದು ಕೊಂದ!

    ಪತ್ನಿ ಜೊತೆ ಸರಸವಾಡ್ತಿದ್ದ ಸಹೋದರನನ್ನು ಕಬ್ಬಿಣದ ರಾಡ್‍ನಿಂದ ಹೊಡೆದು ಕೊಂದ!

    ಜೈಪುರ: ತನ್ನ ಹೆಂಡತಿ ಜೊತೆ ಸರಸವಾಡುತ್ತಿದ್ದ ಸಹೋದರನನ್ನು ಕಬ್ಬಿಣದ ರಾಡ್‍ನಿಂದ ಹೊಡೆದು ಅಣ್ಣನೇ ಕೊಂದಿರುವ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ.

    ಬುಂಡಿ ಜಿಲ್ಲೆಯ ತಾಲೇರಾ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ತನ್ನ ಪತ್ನಿಯೊಂದಿಗೆ ಸಹೋದರನೊಬ್ಬ ಅಕ್ರಮ ಸಂಬಂಧ ಹೊಂದಿದ್ದು ಗೊತ್ತಾಗುತ್ತಿದ್ದಂತೆ ಆಕ್ರೋಶಗೊಂಡ ಅಣ್ಣ ಆತನ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ.


    ಸೋಮವಾರ ರಾತ್ರಿ ಅಣ್ಣ ಮನೆಗೆ ಬಂದಿದ್ದಾನೆ. ಈ ಸಂದರ್ಭದಲ್ಲಿ 38 ವರ್ಷದ ತಮ್ಮ ಅತ್ತಿಗೆಯ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದನು. ಇದನ್ನು ನೋಡಿದ ಅಣ್ಣ ಕೋಪಗೊಂಡು ಅಲ್ಲೆ ಪಕ್ಕದಲ್ಲಿದ್ದ ಕಬ್ಬಿಣದ ರಾಡ್‍ನಿಂದ ತಮ್ಮ ಮತ್ತು ಹೆಂಡತಿಗೆ ಇಬ್ಬರಿಗೂ ಹೊಡೆದಿದ್ದಾನೆ. ಕಬ್ಬಿಣದ ರಾಡ್‍ನಿಂದ ಹಲ್ಲೆ ಮಾಡಿದ್ದರಿಂದ ತಮ್ಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಘಟನೆಯಲ್ಲಿ ಪತ್ನಿ ಸಹ ಗಾಯಗೊಂಡಿದ್ದಾಳೆ. ಪತ್ನಿಯನ್ನು ಕೋಟಾದಲ್ಲಿನ ಮಹಾರಾವ್ ಭೀಮ್ ಸಿಂಗ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾಳೆ. ಈಗಾಗಲೇ ಆರೋಪಿಯನ್ನ ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ದಶ್ರಾತ್ ಸಿಂಗ್ ತಿಳಿಸಿದ್ದಾರೆ.

  • ಪತಿ, ಪತ್ನಿಯನ್ನು ಬಿಟ್ಟು ಬಂದು ಅಕ್ರಮ ಸಂಬಂಧದಲ್ಲಿದ್ದ ಜೋಡಿ ಆತ್ಮಹತ್ಯೆ

    ಪತಿ, ಪತ್ನಿಯನ್ನು ಬಿಟ್ಟು ಬಂದು ಅಕ್ರಮ ಸಂಬಂಧದಲ್ಲಿದ್ದ ಜೋಡಿ ಆತ್ಮಹತ್ಯೆ

    ಮೈಸೂರು: ಅಕ್ರಮ ಸಂಬಂಧ ಹೊಂದಿದ್ದ ಪ್ರಿಯಕರ ಮತ್ತು ಆತನ ಪ್ರಿಯತಮೆ ಆತ್ಮಹತ್ಯೆಗೆ ಶರಣಾಗಿರೋ ಘಟನೆ ಮೈಸೂರಿನ ಹೆಚ್.ಡಿ.ಕೋಟೆ ತಾಲೂಕಿನ ಮಾದಾಪುರ ಗ್ರಾಮದಲ್ಲಿ ನಡೆದಿದೆ.

    ವರದಮ್ಮ(35) ಹಾಗೂ ಮಹದೇವಸ್ವಾಮಿ(31) ಮೃತ ಪ್ರೇಮಿಗಳು. ಇವರಿಬ್ಬರಿಗೂ ಈಗಾಗಲೇ ಮದುವೆಯಾಗಿದ್ದು, ವರದಮ್ಮ ತಮ್ಮ ಪತಿ ಹಾಗೂ ಮಹದೇವಸ್ವಾಮಿ ತನ್ನ ಪತ್ನಿಯನ್ನು ಬಿಟ್ಟು ಬಂದಿದ್ದರು. ಎರಡು ವರ್ಷದಿಂದ ಬೇರೊಂದು ಮನೆ ಮಾಡಿ ಸಂಸಾರ ನಡೆಸುತ್ತಿದ್ದರು. ಆದ್ರೆ ಭಾನುವಾರ ಬೆಳಗ್ಗೆ ವರದಮ್ಮ ನೇಣು ಬೀಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿಷಯ ತಿಳಿದ ಮಹದೇವಸ್ವಾಮಿ ಕೂಡ ಮಧ್ಯಾಹ್ನ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಇಬ್ಬರ ಮೃತದೇಹವನ್ನು ನಿನ್ನೆಯೇ ಹೆಚ್‍ಡಿ ಕೋಟೆ ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಸಂಬಂಧ ಹೆಚ್‍ಡಿ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಆಸ್ಪತ್ರೆಗೆ ದಾಖಲಿಸಿದ್ದ 2 ವರ್ಷದ ಮಗುವನ್ನ ಕೊಂಡೊಯ್ದು ಕೊಂದೇಬಿಟ್ಳು ತಾಯಿ!

    ಆಸ್ಪತ್ರೆಗೆ ದಾಖಲಿಸಿದ್ದ 2 ವರ್ಷದ ಮಗುವನ್ನ ಕೊಂಡೊಯ್ದು ಕೊಂದೇಬಿಟ್ಳು ತಾಯಿ!

    ಬೆಂಗಳೂರು: ಹೆತ್ತ ತಾಯಿಯೇ ತನ್ನ ಕರುಳ ಕುಡಿಯನ್ನೇ ಕೊಲೆ ಮಾಡಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನಲ್ಲಿ ನಡೆದಿದೆ.

    ಅನ್ನಪೂರ್ಣ (2) ತಾಯಿಂದಲೇ ಕೊಲೆಯಾದ ಮಗು. ಆರೋಪಿ ತಾಯಿ ನಿವೇದಿತಾಗೆ 5 ವರ್ಷದ ಹಿಂದೆ ತನ್ನ ಮಾವ ಚಂದ್ರಶೇಖರನೊಂದಿಗೆ ಮದುವೆಯಾಗಿತ್ತು. ಅವಡದೇನಹಳ್ಳಿಯ ಗಂಡನ ಮನೆಯಲ್ಲಿ ವಾಸವಿದ್ದಳು. ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದೆ ಎಂದು ಮಗುವನ್ನೇ ಕೊಂದಿದ್ದಾಳೆ.

    ಒಂದೂವರೆ ವರ್ಷದಿಂದ ನಿವೇದಿತಾ ತನ್ನ ಅತ್ತೆಯ ಮಗ ಸತೀಶ್ ನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಇಬ್ಬರು ಎಲ್ಲಾದರು ಓಡಿಹೋಗಿ ಬೇರೆ ಸಂಸಾರ ಮಾಡಲು ನಿರ್ಧರಿಸಿದ್ದರು.

    ಮಂಗಳವಾರ ಮಗು ಅನ್ನಪೂರ್ಣಾಗೆ ಹುಷಾರಿಲ್ಲ ಎಂದು ಆನೇಕಲ್ ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಈ ಸಂದರ್ಭವನ್ನು ಉಪಯೋಗಿಸಿಕೊಂಡ ನಿವೇದಿತಾ ಆಸ್ಪತ್ರೆಯಿಂದ ಮಗುವಿನೊಂದಿಗೆ ಸತೀಶ್ ಜೊತೆ ಬೈಕ್ ನಲ್ಲಿ ಪರಾರಿಯಾಗಿದ್ದಾಳೆ.

    ಇತ್ತ ಆಸ್ಪತ್ರೆಗೆ ಬಂದ ಚಂದ್ರಶೇಖರ್ ಮಗು ಮತ್ತು ಹೆಂಡತಿ ಕಾಣದಿದ್ದಾಗ ಆನೇಕಲ್ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಆಸ್ಪತ್ರೆಯ ಸಿಸಿಟಿವಿ ಪರಿಶೀಲಿಸಿದಾಗ ನಿವೇದಿತಾ ಪ್ರಿಯಕರನೊಂದಿಗೆ ಪರಾರಿಯಾಗಿರುವುದು ಗೊತ್ತಾಗಿದೆ. ನಂತರ ಅವರಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದು, ಅತ್ತಿಬೆಲೆಯಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ.

    ಪೊಲೀಸ್ ಮತ್ತು ಪತಿ ಮಗುವಿನ ಬಗ್ಗೆ ವಿಚಾರಿಸಿದಾಗ ಆರೋಪಿಗಳು ಮಗುವನ್ನು ಕೊಂದು ಪೊದೆಯಲ್ಲಿ ಎಸೆದಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಮಗುವನ್ನು ಕೊಲೆ ಮಾಡಿದ್ದ ಸ್ಥಳಕ್ಕೆ ಹೋಗಿ ಮಗುವಿನ ಶವವನ್ನು ಪರೀಕ್ಷೆಗಾಗಿ ಆಸ್ಪತ್ರೆಯಲ್ಲಿ ಇರಿಸಿದ್ದಾರೆ. ಸದ್ಯಕ್ಕೆ ಆನೇಕಲ್ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

  • ಮನೆಗೆ ಬಂದು ಜಗಳವಾಡಿದಳೆಂದು ಗೃಹಿಣಿಯನ್ನು ಕೊಲೆಗೈದ ಪ್ರಿಯಕರ

    ಮನೆಗೆ ಬಂದು ಜಗಳವಾಡಿದಳೆಂದು ಗೃಹಿಣಿಯನ್ನು ಕೊಲೆಗೈದ ಪ್ರಿಯಕರ

    ಮೈಸೂರು: ಗೃಹಿಣಿಯನ್ನು ತನ್ನ ಪ್ರಿಯಕರನೇ ಕೊಲೆಗೈದ ಘಟನೆ ಮೈಸೂರಿನಲ್ಲಿ ನಡೆದಿದೆ.

    ಮಾರುತಿ ಬಡಾವಣೆ ನಿವಾಸಿ ಜ್ಯೋತಿ(29) ಕೊಲೆಯಾದ ಮಹಿಳೆ. ಹುಣಸೂರು ಪಟ್ಟಣದ ಪ್ರವೀಣ್ ಕೊಲೆ ಮಾಡಿದ ಆರೋಪಿ. ಜ್ಯೋತಿಗೆ ಮದುವೆಯಾಗಿದ್ದು, ಮೂರು ಮಕ್ಕಳಿದ್ದಾರೆ.

    ಒಂದು ವರ್ಷದಿಂದ ಜ್ಯೋತಿ ಮತ್ತು ಪ್ರವೀಣ್ ನಡುವೆ ಅಕ್ರಮ ಸಂಬಂಧವಿತ್ತು. ಶುಕ್ರವಾರ ರಾತ್ರಿ ಜ್ಯೋತಿ, ಪ್ರವೀಣ್ ಮನೆಗೆ ಹೋಗಿ ಜಗಳವಾಡಿದ್ದಳು. ಇದರಿಂದ ಕುಪಿತನಾಗಿದ್ದ ಪ್ರವೀಣ್ ಇಂದು ಬೆಳಗ್ಗೆ ಜ್ಯೋತಿ ಮನೆಗೆ ನುಗ್ಗಿ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆಗೈದಿದ್ದಾನೆ.

    ಆರೋಪಿ ಪ್ರವೀಣ್ ಕೊಲೆ ಮಾಡಿ ಬೈಪಾಸ್ ರಸ್ತೆಯ ಪ್ರಶಾಂತ್ ಲಾಡ್ಜ್ ನ ಮೇಲಿನ ಮಹಡಿಗೆ ಹೋಗಿ ತನ್ನ ತಂದೆಗೆ ಫೋನ್ ಮಾಡಿದ್ದಾನೆ. ಬಳಿಕ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾನೆ. ಇದನ್ನು ಕೇಳಿದ ತಂದೆ ಕೂಡಲೇ ಸ್ಥಳಕ್ಕೆ ಆಗಮಿಸಿ ಪುತ್ರನ ಮನವೊಲಿಸಿದ್ದಾರೆ.

    ಡಿವೈಎಸ್ಪಿ ಭಾಸ್ಕರ್, ಸರ್ಕಲ್ ಇನ್ಸ್ ಪೆಕ್ಟರ್ ಪೂವಯ್ಯ ಹಾಗೂ ಪಿಎಸ್‍ಐ ಷಣ್ಮುಗಂ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಹುಣಸೂರು ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅಮ್ಮನ ಪರ ಮಾತಾಡ್ತಾಳೆಂದು 18 ವರ್ಷದ ಮಗಳನ್ನೇ ಕತ್ತುಹಿಸುಕಿ ಕೊಂದ!

    ಅಮ್ಮನ ಪರ ಮಾತಾಡ್ತಾಳೆಂದು 18 ವರ್ಷದ ಮಗಳನ್ನೇ ಕತ್ತುಹಿಸುಕಿ ಕೊಂದ!

    ಮಲಪ್ಪುರಂ: ತನ್ನ ಜೊತೆ ಅಮ್ಮನ ಪರ ಮಾತನಾಡುತ್ತಾಳೆ ಎಂದು ಸಿಟ್ಟುಗೊಂಡ ಪಾಪಿ ತಂದೆಯೊಬ್ಬ 18 ವರ್ಷದ ಮಗಳನ್ನೇ ಕತ್ತು ಹಿಸುಕಿ ಕೊಲೆಗೈದ ಆಘಾತಕಾರಿ ಘಟನೆಯೊಂದು ನಡೆದಿದೆ.

    ಈ ಘಟನೆ ಪೆರುವಲ್ಲುರ್ ಸಮೀಪದ ತೆನ್ಹಿಪ್ಪಲಮ್ ಜಿಲ್ಲೆಯಲ್ಲಿ ಬುಧವಾರ ರಾತ್ರಿ ನಡೆದಿದ್ದು, ಇಂದು ಆರೋಪಿ ತಂದೆ 46 ವರ್ಷದ ಶಶಿ ಪೊಲೀಸ್ ಠಾಣೆಗೆ ಶಾರಣಾದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

    ಏನಿದು ಪ್ರಕರಣ?: ಅಕ್ರಮ ಸಂಬಂಧದ ಬಗ್ಗೆ ತಾಯಿ ಮತ್ತು ತಂದೆ ಮಧ್ಯೆ ಮಾತಿಗೆ ಮಾತು ಬೆಳೆಯುತ್ತಿದ್ದ ಸಂದರ್ಭದಲ್ಲಿ ಮಗಳು ಶಾಲು ಇವರಿಬ್ಬರ ಮಧ್ಯೆ ಬಂದು ತಾಯಿ ಪರ ವಹಿಸಿ ಮಾತನಾಡಿದ್ದಾಳೆ. ಇದರಿಂದ ಸಿಟ್ಟುಗೊಂಡ ತಂದೆ ಬುಧವಾರ ಮಧ್ಯರಾತ್ರಿ ಕಿರುಚಾಡದಂತೆ ಬಾತ್ ಟವಲ್ ನನ್ನು ಆಕೆಯ ಮುಖಕ್ಕೆ ಹಾಕಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಇಡೀ ರಾತ್ರಿ ಶವದ ಜೊತೆ ಕಳೆದಿದ್ದಾನೆ. ಬೆಳಗ್ಗೆಯಾಗುತ್ತಿದ್ದಂತೆಯೇ ಆರೋಪಿ ತಂದೆ ನೇರವಾಗಿ ತೆನ್ಹಿಪ್ಪಲಮ್ ಪೊಲೀಸ್ ಠಾನೆಗೆ ಬಂದು ಶರಣಾಗಿದ್ದಾನೆ.

    ಮೃತ ಶಾಲು ತಾಯಿ ಶೈಲಜಾ ಪೆರಿಂಥಾಲ್ಮಣ್ಣಾದಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದರು. ಈ ವೇಳೆ ಆರೋಪಿ ತಂದೆ ಈ ಕೃತ್ಯ ಎಸಗಿದ್ದಾನೆ ಎಂದು ವರದಿಯಾಗಿದೆ. ಸದ್ಯ ಬಂಧಿತ ಶಶಿಯನ್ನು ಇಂದು ಪರಪ್ಪನಂಗಡಿಯಲ್ಲಿರೋ ಕೋರ್ಟ್ ಗೆ ಹಾಜರು ಪಡಿಸಲಾಗಿದೆ.

    ಬಂಧಿತ ಆರೋಪಿಗೆ ಆತನ ಪತ್ನಿಗೆ ಅಕ್ರಮ ಸಂಬಂಧವಿರೋ ಶಂಕೆ ವ್ಯಕ್ತವಾಗಿದ್ದು, ಪ್ರತೀ ಬಾರಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಅವರಿಬ್ಬರ ಮಧ್ಯೆ ಮಾತಿನ ಚಕಮಕಿ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಮಗಳು ಅಮ್ಮನ ಪರ ವಹಿಸಿ ಮಾತನಾಡುತ್ತಿದ್ದಳು. ಇದರಿಂದ ಆತನಿಗೆ ಮಗಳು ಶಾಲು ಮೇಲೆಯೂ ಸಂಶಯ ವ್ಯಕ್ತವಾಗಿ ಈ ಕೃತ್ಯ ಎಸಗಿದ್ದಾನೆ ಅಂತ ತಿರುರಂಗಡಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಹಾಗೂ ತನಿಖಾಧಿಕಾರಿ ಇ. ಸುನಿಲ್ ಕುಮಾರ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

    ಕಳೆದ ವರ್ಷವಷ್ಟೇ ಪೆರುವಲ್ಲರ್ ನ ಪ್ರೌಢಶಾಲೆಯಲ್ಲಿ ತನ್ನ ಓದು ಮುಗಿಸಿದ್ದ ಶಾಲು ಸದ್ಯ ಪಿಎಸ್‍ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಳು.

  • ಕೊತ ಕೊತ ಕುದಿಯುವ ಬಿಸಿ ಬಿಸಿ ಎಣ್ಣೆ ಗಂಡನ ‘ಅದಕ್ಕೇ’ ಸುರಿದ್ಳು ಪತ್ನಿ!

    ಕೊತ ಕೊತ ಕುದಿಯುವ ಬಿಸಿ ಬಿಸಿ ಎಣ್ಣೆ ಗಂಡನ ‘ಅದಕ್ಕೇ’ ಸುರಿದ್ಳು ಪತ್ನಿ!

    ಮದುರೈ: ತಾಳಿ ಕಟ್ಟಿದ ನಾನಿರಬೇಕಾದ್ರೆ ಇನ್ನೊಬ್ಳ ಜೊತೆ ಅಕ್ರಮ ಸಂಬಂಧವಿಟ್ಟುಕೊಳ್ಳಬೇಡ ಎಂದು ಹೇಳಿದರೂ ಕೇಳದ ಪತಿ ಮಹಾಶಯನಿಗೆ ಹೆಂಡತಿಯೊಬ್ಬಳು ತಕ್ಕ ಶಾಸ್ತಿ ಮಾಡಿದ್ದಾಳೆ. ಪತಿಯ ಲವ್ವಿ ಡವ್ವಿಯಿಂದ ಕೆರಳಿದ್ದ ಪತ್ನಿ ಕೊತ ಕೊತ ಕುದಿಯುತ್ತಿದ್ದ ಬಿಸಿ ಎಣ್ಣೆಯನ್ನು ಗಂಡನ ಗುಪ್ತಾಂಗದ ಮೇಲೆ ಸುರಿದಿದ್ದಾಳೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮದುರೈ ನಗರ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರೆಸಿದ್ದಾರೆ

    ಆಗಿದ್ದೇನು?: ಇಲ್ಲಿನ ನೆಹರೂ ನಗರದ ಎಂ.ಪರಮೇಶ್ವರನ್(37)ಗೆ ಶಶಿಕಲಾ ಎಂಬಾಕೆಯ ಜೊತೆ ಮದುವೆಯಾಗಿತ್ತು. ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದ ಪರಮೇಶ್ವರನ್ ಗೆ, ವಿರಟ್ಟಿಪತ್ತು ಎಂಬಲ್ಲಿನ ಮಹಿಳೆಯ ಜೊತೆ ಪರಿಚಯವಾಗಿದೆ. ಈ ಸಂಬಂಧವನ್ನು ಮತ್ತೂ ಒಂದು ಹೆಜ್ಜೆ ಮುಂದಕ್ಕೆ ಕೊಂಡೊಯ್ದ ಇಬ್ಬರೂ ಅಕ್ರಮ ಸಂಬಂಧವಿಟ್ಟುಕೊಂಡಿದ್ದರು. ಈ ವಿಚಾರ ಪತ್ನಿ ಶಶಿಕಲಾ ಗಮನಕ್ಕೆ ಬಂದು ಪರಮೇಶ್ವರನ್ ಜೊತೆ ಆಗಾಗ ಗಲಾಟೆ ಮಾಡುತ್ತಿದ್ದಳು. ಪತ್ನಿಯ ವಿಚಾರಣೆಯಿಂದ ಬೇಸತ್ತ ಪತಿ ಪರಮೇಶ್ವರ್ ಮನೆಗೆ ಬರುವುದನ್ನು ಬಿಟ್ಟುಬಿಟ್ಟಿದ್ದ. ಈ ವಿಚಾರ ಎಸ್.ಎಸ್.ಕಾಲೋನಿ ಠಾಣೆಯ ಮೆಟ್ಟಿಲೇರಿತ್ತು. ನಂತರ ಪೊಲೀಸರು ಪರಮೇಶ್ವರ್ ನನ್ನು ಕರೆದು ಎಚ್ಚರಿಕೆ ನೀಡಿ ಮನೆಗೆ ವಾಪಸ್ ಕಳಿಸಿದ್ದರು. ಆದರೆ ಕೆಲ ದಿನಗಳ ಬಳಿಕ ಪರಮೇಶ್ವರನ್ ಮತ್ತೆ ಅಕ್ರಮ ಸಂಬಂಧ ಶುರು ಮಾಡ್ಕೊಂಡ. ಆಕೆಯ ಜೊತೆಯೇ ವಾಸ್ತವ್ಯವನ್ನೂ ಆರಂಭಿಸಿದ.

    ಇದನ್ನೂ ಓದಿ: ಫಸ್ಟ್ ನೈಟ್‍ನಲ್ಲೇ ರಾಕ್ಷಸನಾದ ಪತಿ- ಚೂರಿಯಿಂದ ಇರಿದು, ಅಂಗಾಂಗ ಕಚ್ಚಿ ಹಲ್ಲೆ

    ಪ್ಲ್ಯಾನ್ ಮಾಡಿ ಕರೆಸಿಕೊಂಡ್ಳು!: ಕಳೆದ ವಾರ ಪರಮೇಶ್ವರನ್ ಗೆ ಫೋನ್ ಮಾಡಿದ ಪತ್ನಿ ಶಶಿಕಲಾ ಆತನ ಬಳಿ ನಯವಾಗಿಯೇ ಮಾತನಾಡಿದ್ದಾಳೆ. ಮನೆಗೆ ಬಂದು ನನ್ನ ಜೊತೆಯೇ ಸಂಸಾರ ಮಾಡು ಎಂದು ಕೇಳಿಕೊಂಡಿದ್ದಾಳೆ. ಹೀಗಾಗಿ ಕಳೆದ ಶನಿವಾರ ಪರಮೇಶ್ವರನ್ ಮನೆಗೆ ಬಂದು ಊಟ ಮಾಡಿ ಮಲಗಿದ್ದ. ಇದಕ್ಕಾಗಿಯೇ ಕಾಯುತ್ತಿದ್ದ ಶಶಿಕಲಾ ಬಾಣಲೆಯಲ್ಲಿ ಎಣ್ಣೆ ಕಾಯಿಸಲು ಇಟ್ಟಿದ್ದಾಳೆ. ಈತ ನಿದ್ರಾದೇವಿಗೆ ಸಂಪೂರ್ಣವಾಗಿ ಶರಣಾಗಿದ್ದಾನೆ ಎಂದು ಖಚಿತಪಡಿಸಿಕೊಂಡು ಬಾಣಲೆ ಎತ್ತಿಕೊಂಡು ಬಂದು ಅದರಲ್ಲಿದ್ದ ಬಿಸಿ ಬಿಸಿಯಾಗಿ ಕುದಿಯುತ್ತಿದ್ದ ಎಣ್ಣೆಯನ್ನು ಆತನ ಗುಪ್ತಾಂಗಕ್ಕೆ ಸುರಿದಿದ್ದಾಳೆ. ಎಣ್ಣೆ ಬೀಳುತ್ತಿದ್ದಂತೆಯೇ ಎಚ್ಚೆತ್ತ ಪರಮೇಶ್ವರನ್ ಕಿರುಚಾಡಲು ಶುರುಮಾಡಿದ್ದಾನೆ. ತಕ್ಷಣ ಸ್ಥಳೀಯರು ಆತನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಇದನ್ನೂ ಓದಿ: ಲವ್ ಮಾಡಿ ಗರ್ಭಿಣಿ ಮಾಡ್ದ, ಮದುವೆಯಾಗು ಎಂದಿದ್ದಕ್ಕೆ ಕೊಲೆಯೇ ಮಾಡ್ಬಿಟ್ಟ ಪಾಪಿ!

    ಬಿಸಿ ಬಿಸಿ ಎಣ್ಣೆ ಬಿದ್ದಿದ್ದರಿಂದ ಗುಪ್ತಾಂಗಕ್ಕೆ ಸುಟ್ಟಗಾಯಗಳಾಗಿದ್ದು ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮದುರೈ ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಆದರೆ ಮಹಿಳೆಯನ್ನು ಇನ್ನೂ ಬಂಧಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ದಂಪತಿಗೆ ಮೂವರು ಮಕ್ಕಳಿದ್ದಾರೆ.

  • ಬಿಸಿ ಕಾವಲಿ ಮೇಲೆ ಮಗುವನ್ನ ಕೂರಿಸಿದ್ಳು ಪಾಪಿ ತಾಯಿ

    ಬಿಸಿ ಕಾವಲಿ ಮೇಲೆ ಮಗುವನ್ನ ಕೂರಿಸಿದ್ಳು ಪಾಪಿ ತಾಯಿ

    ಹೈದರಾಬಾದ್: ಅಕ್ರಮ ಸಂಬಂಧಕ್ಕೆ ಅಡ್ಡಿಯಾಯಿತೆಂದು ಪಾಪಿ ತಾಯಿಯೊಬ್ಬಳು ತನ್ನ 4 ವರ್ಷದ ಮಗುವನ್ನ ಬಿಸಿ ಕಾವಲಿಯ ಮೇಲೆ ಕೂರಿಸಿದ ಘಟನೆ ತೆಲಂಗಾಣದ ಎಸ್‍ಆರ್ ನಗರದಲ್ಲಿ ಭಾನುವಾರದಂದು ನಡೆದಿದೆ.

    ಮೂಲತಃ ಶ್ರೀಕಾಕುಲಂ ಜಿಲ್ಲೆಯವಳಾದ ಲಲಿತಾ ಅದೇ ಜಿಲ್ಲೆಯವನಾದ ಪ್ರಕಾಶ್ ಎಂಬವನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಗಂಡನನ್ನು ತೊರೆದಿದ್ದ ಲಲಿತಾ 4 ವರ್ಷದ ಮಗಳನ್ನು ತನ್ನೊಂದಿಗೆ ಇರಿಸಿಕೊಂಡಿದ್ದಳು. 9 ತಿಂಗಳ ಹಿಂದೆ ಇಬ್ಬರೂ ಹೈದರಾಬಾದ್‍ಗೆ ಬಂದಿದ್ದರು. ಅಂದಿನಿಂದ ಲಲಿತಾ ಎಸ್‍ಆರ್ ನಗರದ ಶ್ರೀನಿವಾಸ್ ನಗರದ ಮನೆಯೊಂದರಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದಳು. ಪ್ರಕಾಶ್ ಸೆಕ್ಯೂರಿಟಿಯಾಗಿ ಕೆಲಸಕ್ಕೆ ಸೇರಿಕೊಂಡಿದ್ದ. ಆದ್ರೆ ಮಗಳು ರೂಪಳನ್ನ ದೂರ ಮಾಡುವಂತೆ ಪ್ರಕಾಶ್ ಲಲಿತಾಗೆ ಹೇಳುತ್ತಲೇ ಬಂದಿದ್ದ ಎಂದು ಪೊಲೀಸರು ಹೇಳಿದ್ದಾರೆ.

    ಈ ಮಧ್ಯೆ ಲಲಿತಾ ತನ್ನ ಮಗಳನ್ನ ಬಿಸಿಯಾದ ಕಾವಲಿ ಮೇಲೆ ಕೂರಿಸಿ, ನಂತರ ಅದರ ಮೇಲೆ ನಿಲ್ಲಿಸಿ ವಿಕೃತಿ ಮೆರೆದಿದ್ದಾಳೆ. ಈ ಜೋಡಿ ಮಗುವನ್ನ ಮಹಿಳಾ ಮತ್ತು ಮಕ್ಕಳ ಕೇಂದ್ರವಾದ ಭರೋಸಾಗೆ ಕರೆದುಕೊಂಡು ಹೋಗಿದ್ದು, ಇದು ಅನಾಥ ಮಗು. ರಸ್ತೆ ಬದಿಯಲ್ಲಿ ಸಿಕ್ಕಿತು ಎಂದು ಹೇಳಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ.

    ಭರೋಸಾ ಸಿಬ್ಬಂದಿ ಅಧಿಕೃತವಾಗಿ ದೂರು ದಾಖಲಿಸಲು ಮೂವರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಮಗುವಿನ ದೇಹದ ಮೇಲೆ ಗಾಯದ ಗುರುತುಗಳನ್ನ ನೋಡಿದ ಪೊಲೀಸರಿಗೆ ಅನುಮಾನ ಬಂದಿದ್ದು, ಎಸ್‍ಆರ್ ನಗರ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು.

    ಪ್ರಕಾಶ್ ಹಾಗೂ ಲಲಿತಾ ಮಗುವಿನಿಂದ ಮುಕ್ತಿ ಪಡೆಯಲು ಕಿರುಕುಳ ನೀಡುತ್ತಿದ್ದರು ಎಂದು ಪೊಲೀಸರು ಪತ್ತೆಹಚ್ಚಿದ್ದಾರೆ. ತಮ್ಮ ಸಂಬಂಧಕ್ಕೆ ಮಗು ಅಡ್ಡಿಯಾಯಿತೆಂದು ಬಿಸಿ ಕಾವಲಿ ಮೇಲೆ ಮಗುವನ್ನ ಕೂರಿಸಿ ಹಿಂಸೆ ನೀಡಿದ್ದಾರೆ.

    ಸದ್ಯ ಪೊಲೀಸರು ಲಲಿತಾ ಹಾಗೂ ಪ್ರಕಾಶ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಇಬ್ಬರನ್ನೂ ಬಂಧಿಸಿದ್ದಾರೆ. ಮಗುವನ್ನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.