Tag: ಅಕ್ರಮ ಸಂಬಂಧ

  • ಗಂಡ ಫಾರಿನ್‍ನಲ್ಲಿ, ಹೆಂಡ್ತಿ ಪಕ್ಕದ್ಮನೆಯವನ ತೆಕ್ಕೆಯಲ್ಲಿ!

    ಗಂಡ ಫಾರಿನ್‍ನಲ್ಲಿ, ಹೆಂಡ್ತಿ ಪಕ್ಕದ್ಮನೆಯವನ ತೆಕ್ಕೆಯಲ್ಲಿ!

    – ಸಿಟ್ಟಿಗೆದ್ದವ ಪತ್ನಿ ಮಕ್ಕಳ ಕೊಂದು ತಾನೂ ಸತ್ತ!

    ಕಪುರ್ತಲ (ಪಂಜಾಬ್): ವಿದೇಶದಿಂದ ವಾಪಸ್ಸಾದ ಐದು ಗಂಟೆಯಲ್ಲೇ ಪತಿರಾಯನೊಬ್ಬ ಬೆಂಕಿ ಹಚ್ಚಿ ಪತ್ನಿ ಹಾಗೂ ಮಕ್ಕಳನ್ನು ಸಾಯಿಸಿ, ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಲಸಂಘಿಯಾನ್ ನಲ್ಲಿ ನಡೆದಿದೆ. ಪತ್ನಿಗಿದ್ದ ಅಕ್ರಮ ಸಂಬಂಧವೇ ಘಟನೆಗೆ ಕಾರಣ ಎನ್ನಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

    ಘಟನೆಗೆ ಕಾರಣವೇನು?:
    ಜಲಂಧರ್ ನ ಕಪುರ್ತಲ ಜಿಲ್ಲೆಯ ಆಲಂಗೀರ್ ಮೊಹಲ್ಲಾದ ಕುಲ್ವಿಂದರ್ ಸಿಂಗ್ ಗೆ ಮನ್‍ದೀಪ್ ಕೌರ್ ಜೊತೆ ವಿವಾಹವಾಗಿತ್ತು. ಈ ದಾಂಪತ್ಯಕ್ಕೆ ಸಾಕ್ಷಿಯಾಗಿ ಇಬ್ಬರು ಮಕ್ಕಳು ಕೂಡಾ ಹುಟ್ಟಿದ್ದರು. ಆದರೆ ಗಂಡ ವಿದೇಶಕ್ಕೆ ತೆರಳಿದ್ದ ವೇಳೆ ಅದೇ ನಗರದ ಗುರುಪ್ರೀತ್ ಸಿಂಗ್ ಅಲಿಯಾಸ್ ಸನ್ನಿ ಎಂಬಾತನ ಜೊತೆ ಪತ್ನಿಗೆ ಲವ್ವಿ ಡವ್ವಿ ಶುರುವಾಗಿದೆ. ಇವರಿಬ್ಬರ ಪ್ರಣಯದಾಟ ಮೊಬೈಲಿನಲ್ಲಿ ಸೆರೆಯಾಗಿದೆ. ಅಲ್ಲದೆ ಈ ವೀಡಿಯೋ ಮಾಡಿದವರು ಇದನ್ನು ಪರಸ್ಪರ ಹಂಚಿಕೊಂಡಿದ್ದರು.

    ಜೋರ್ಡಾನ್ ನಲ್ಲಿದ್ದ ಕುಲ್ವಿಂದರ್ ಗೆ ಯಾರೋ ಫೋನ್ ಮಾಡಿ ನಿಮ್ಮ ಪತ್ನಿ ಅಕ್ರಮ ಸಂಬಂಧವಿಟ್ಟುಕೊಂಡಿದ್ದಾಳೆ. ಇದರ ವೀಡಿಯೋ ಕೂಡಾ ಇದೆ. ಇದನ್ನೇ ಮುಂದಿಟ್ಟುಕೊಂಡು ಸನ್ನಿ, ಆತನ ತಾಯಿ ಹಾಗೂ ಇನ್ನಿಬ್ಬರು ನಿಮ್ಮ ಪತ್ನಿಯನ್ನು ಬ್ಲ್ಯಾಕ್ ಮೇಲ್ ಮಾಡ್ತಿದ್ದಾರೆ ಎಂದು ತಿಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ರೊಚ್ಚಿಗೆದ್ದ ಪತಿ ಯಾರಿಗೂ ಮಾಹಿತಿ ನೀಡದೇ ವಿದೇಶದಿಂದ ಬುಧವಾರ ವಾಪಸ್ಸಾಗಿದ್ದಾನೆ. ರಾತ್ರಿ 11 ಗಂಟೆಗೆ ಮನೆಗೆ ವಾಪಸ್ಸಾದ ವೇಳೆಯೇ ಈ ವಿಚಾರದಲ್ಲಿ ಪತಿ ಪತ್ನಿ ಇಬ್ಬರ ನಡುವೆ ಜಗಳ ಶುರುವಾಗಿದೆ. ಇದು ಪತ್ನಿ ಹಾಗೂ ಮಕ್ಕಳ ಕೊಲೆಯಲ್ಲಿ ಅಂತ್ಯವಾಗಿದೆ.

    ಪೊಲೀಸರು ಹೇಳಿದ್ದೇನು?:
    ಘಟನೆ ಬಗ್ಗೆ ವಿವರ ನೀಡಿದ ಪೊಲೀಸರು, ಗುರುವಾರ ಬೆಳಗಿನ ಜಾವ 4 ಗಂಟೆಯ ಸುಮಾರಿಗೆ ಕುಲ್ವಿಂದರ್ ಈ ಕೃತ್ಯವೆಸಗಿದ್ದಾನೆ. ಕುಲ್ವಿಂದರ್ ಹಾಗೂ 5 ವರ್ಷದ ಪುತ್ರ ಸ್ಥಳದಲ್ಲೇ ಸಾವನ್ನಪ್ಪಿದರೆ, 8 ವರ್ಷದ ಪುತ್ರಿ ಕಪುರ್ತಲ ಆಸ್ಪತ್ರೆಯಲ್ಲಿ ಸಾವನ್ನಪಿದ್ದಾಳೆ. ಪತ್ನಿಯನ್ನು ಜಲಂಧರ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಪೊಲೀಸರ ಮುಂದೆ ಹೇಳಿಕೆ ನೀಡಿದ ಕೆಲವೇ ಹೊತ್ತಿನಲ್ಲಿ ಮನ್‍ದೀಪ್ ಕೂಡಾ ಸಾವನ್ನಪ್ಪಿದ್ದಾಳೆ ಎಂದು ತಿಳಿಸಿದ್ದಾರೆ.

    ಅಶ್ಲೀಲ ವೀಡಿಯೋ ಮುಂದಿಟ್ಟುಕೊಂಡು ಸನ್ನಿ ಮತ್ತೆ ಸೆಕ್ಸ್ ಗೆ ಸಹಕರಿಸುವಂತೆ ಆಹ್ವಾನಿಸಿದ್ದಾನೆ. ಈ ವಿಷಯವನ್ನು ನಾನು ನನ್ನ ಪತಿಗೆ ತಿಳಿಸಿದಾಗ ಅವರು ಸಿಟ್ಟಾಗಿದ್ದಾರೆ. ಇದಾದ ಬಳಿಕ ನಾವೆಲ್ಲಾ ಮಲಗಿದ್ದೆವು. ಈ ವೇಳೆ ನನ್ನ ಪತಿ ಕುಲ್ವಿಂದರ್ ನಮ್ಮ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಜೊತೆಗೆ ತಮಗೂ ಬೆಂಕಿ ಹಚ್ಚಿಕೊಂಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಮನ್‍ದೀಪ್ ಕೌರ್ ತಿಳಿಸಿದ್ದಾಳೆ.

    ಪಕ್ಕದ ಕೊಠಡಿಯಲ್ಲೇ ಮಲಗಿದ್ದ ಕುಲ್ವಿಂದರ್ ಸೋದರಿ ಜಸ್ವಿಂದರ್ ಕೌರ್ ಗೆ ಎಲ್ಲರ ಅರಚಾಟ, ನರಳಾಟ ಕೇಳಿಸಿದೆ. ಇವರ ರಕ್ಷಣೆಗೆ ಮುಂದಾಗಿದ್ದ ಜಸ್ವಿಂದರ್ ಗೂ ಸುಟ್ಟ ಗಾಯಗಳಾಗಿವೆ. ಪ್ರಾಥಮಿಕ ಚಿಕಿತ್ಸೆ ಬಳಿಕ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಜಲಂಧರ್ ಆಸ್ಪತ್ರೆಯ ಮೆಡಿಕಲ್ ಅಧೀಕ್ಷಕ ಎಂ.ಎಸ್.ಬಾವಾ ಹೇಳಿದ್ದಾರೆ.

    ಹಲವು ವರ್ಷಗಳಿಂದ ಜೋರ್ಡಾನ್ ನಲ್ಲಿದ್ದ ಕುಲ್ವಿಂದರ್ ಬುಧವಾರ ರಾತ್ರಿ ಊರಿಗೆ ವಾಪಸ್ಸಾಗಿದ್ದ. ಈ ವೇಳೆ ಪತ್ನಿ ಸ್ಥಳೀಯ ಯುವಕನೊಬ್ಬ ತನ್ನನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾನೆ. ಸಹಕರಿಸದಿದ್ದರೆ ಅಶ್ಲೀಲ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಬೆದರಿಕೆಯೊಡ್ಡುತ್ತಿದ್ದಾನೆ ಎಂದು ತಿಳಿಸಿದ್ದಾಳೆ. ಇದನ್ನು ಕೇಳಿ ಪತಿ ಸಿಟ್ಟಿಗೆದ್ದಿದ್ದಾನೆ ಎಂದು ಎಸ್‍ಪಿ ಜಗಜಿತ್ ಸಿಂಗ್ ಸರೋಯಾ ಹೇಳಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಸನ್ನಿ, ಸನ್ನಿಯ ತಾಯಿ ಸತ್ಯ ದೇವಿ, ಸ್ನೇಹಿತರಾದ ಬಲ್ಕರ್ ಸಿಂಗ್ ಹಾಗೂ ತೀರ್ಥ ಸಿಂಗ್ ವಿರುದ್ಧ ದೂರು ದಾಖಲಾಗಿದೆ. ಸದ್ಯ ಪೊಲೀಸರು ಸನ್ನಿ ಹಾಗೂ ಆತನ ಸ್ನೇಹಿತ ಬಲ್ಕರ್ ಸಿಂಗ್ ನನ್ನು ಬಂಧಿಸಿದ್ದಾರೆ. ಈ ವೀಡಿಯೋವನ್ನು ಶೂಟ್ ಮಾಡಿದ್ದು ಸನ್ನಿಯ ತಾಯಿ ಎನ್ನಲಾಗಿದ್ದು, ಈ ವೀಡಿಯೋ ಮುಂದಿಟ್ಟುಕೊಂಡೇ ಆಕೆ ಹಣಕ್ಕಾಗಿ ಬ್ಲ್ಯಾಕ್ ಮಾಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನಿಬ್ಬರ ಬಂಧನಕ್ಕಾಗಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ಲವ್ವರ್ ಜೊತೆ ಸೆಕ್ಸ್ ಮಾಡಿ, ಅದೇ ಮಂಚಕ್ಕೆ ಕಟ್ಟಿ ಬೆಂಕಿ ಹಚ್ಚಿದ್ಳು!

    ಲವ್ವರ್ ಜೊತೆ ಸೆಕ್ಸ್ ಮಾಡಿ, ಅದೇ ಮಂಚಕ್ಕೆ ಕಟ್ಟಿ ಬೆಂಕಿ ಹಚ್ಚಿದ್ಳು!

    ಹೈದರಾಬಾದ್: ಮಹಿಳೆಯೊಬ್ಬಳು ತನ್ನ ಪ್ರಿಯಕರನ ಜೊತೆ ಲೈಂಗಿಕ ಸಂಪರ್ಕ ಬೆಳಿಸಿ ಬಳಿಕ ಅದೇ ಮಂಚಕ್ಕೆ ಕಟ್ಟಿ ಹಾಕಿ ಬೆಂಕಿ ಹಚ್ಚಿ ಜೀವಂತವಾಗಿ ಸುಟ್ಟು ಹಾಕಿರುವ ಘಟನೆ ಘಟನೆ ಆಂಧ್ರ ಪ್ರದೇಶದ ವಿಜಯವಾಡದಲ್ಲಿ ನಡೆದಿದೆ.

    ಈ ಘಟನೆ ಪ್ರಕಾಶಂ ಜಿಲ್ಲೆಯ ಚೌಟಾಪಲ್ಲಿ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ. ಮೃತನನ್ನು ಪೊಡಿಲಿ ನಿವಾಸಿ ಶೇಕ್ ಶಬ್ಬೀರ್ (32) ಎಂದು ಗುರುತಿಸಲಾಗಿದೆ. ಅದೇ ಗ್ರಾಮದ ಶಕೀರಾ (28) ಕೊಲೆ ಮಾಡಿ ಬಳಿಕ ಪೊಲೀಸರಿಗೆ ಶರಣಾಗಿದ್ದಾಳೆ.

    ಘಟನೆಯ ವಿವರ:
    ಶಬ್ಬೀರ್ ಮರಿಪುಡಿ ಪೊಲೀಸ್ ಠಾಣೆಯಲ್ಲಿ ಹೋಮ್ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದನು. ಜೊತೆಗೆ ಕೋಳಿ ಫಾರಂ ಉದ್ಯಮವನ್ನು ಮಾಡುತ್ತಿದ್ದನು. ಇವರಿಬ್ಬರ ನಡುವೆ ಪ್ರೀತಿ ಇತ್ತು. ಆದರೆ ಶರೀರಾ ಮತ್ತು ಶಬ್ಬೀರ್ ಬೇರೆ ಬೇರೆ ಮದುವೆಯಾಗಿದ್ದರು. ಮದುವೆಯ ನಂತರವೂ ಇವರಿಬ್ಬರು ತಮ್ಮ ಅಕ್ರಮ ಸಂಬಂಧವನ್ನು ಮುಂದುವರಿಸಿದ್ದರು. ಇವರಿಬ್ಬವರು ಆಗಾಗ ಕೋಳಿ ಫಾರಂನಲ್ಲಿ ಭೇಟಿಯಾಗುತ್ತಿದ್ದರು.

    ಇವರಿಬ್ಬರ ನಡುವೆ ಕಳೆದ 8 ತಿಂಗಳಿಂದ ಹಣದ ವಿಚಾರವಾಗಿ ಗಲಾಟೆ ನಡೆಯುತ್ತಿತ್ತು. ಆದ್ದರಿಂದ ಶಕೀರಾ ಶನಿವಾರ ರಾತ್ರಿ ಶಬ್ಬೀರ್ ನನ್ನು ಭೇಟಿ ಮಾಡಲು ನಿರ್ಧಾರ ಮಾಡಿದ್ದಳು. ಆದರೆ ಆಕೆ ಮೊದಲೆ ಶಬ್ಬೀರನ್ನ ಕೊಲೆ ಮಾಡಲು ಪ್ಲಾನ್ ಮಾಡಿಕೊಂಡು ಪೆಟ್ರೋಲ್ ಸಮೇತ ಅಲ್ಲಿಗೆ ಬಂದಿದ್ದಳು. ನಂತರ ಆಕೆ ಶಬ್ಬೀರ್ ಗೆ ಸೆಕ್ಸ್ ಮಾಡುವಂತೆ ಹೇಳಿದ್ದಾಳೆ. ಅದರಂತೆಯೇ ಸೆಕ್ಸ್ ಆದ ಬಳಿಕ ಅದೇ ಕಬ್ಬಿಣದ ಮಂಚಕ್ಕೆ ಸರಪಳಿಯಿಂದ ಶಬ್ಬೀರ್ ಕಟ್ಟಿಹಾಕಿದ್ದಾಳೆ. ನಂತರ ತಾನು ತಂದಿದ್ದ ಪೆಟ್ರೋಟ್ ಹಾಕಿ ಬೆಂಕಿ ಹಚ್ಚಿದ್ದಾಳೆ ಹೋಗಿದ್ದಾಳೆ ಎಂದು ಪೊಡಿಲಿ ಇನ್ಸ್ ಪೆಕ್ಟರ್ ಎಂ. ಶ್ರೀನಿವಾಸರಾವ್ ಹೇಳಿದ್ದಾರೆ.

    ಸೋಮವಾರ ಮುಂಜಾನೆ ಕಾರ್ಮಿಕರು ಕೆಲಸಕ್ಕೆ ಬಂದಾಗ ನೋಡಿ ತಕ್ಷಣವೇ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಆದರೆ ಆರೋಪಿ ಶಕೀರಾ ಪೊಲೀಸ್ ಠಾಣೆಗೆ ಬಂದು ತಾನು ಕೊಲೆ ಮಾಡಿರುವುದನ್ನು ಹೇಳಿ ಶರಣಾಗಿದ್ದಾಳೆ. ಸದ್ಯಕ್ಕೆ ಆರೋಪಿ ಶಕೀರಾಳನ್ನು ಬಂಧಿಸಿದ್ದು, ಐಪಿಸಿ ಸೆಕ್ಷನ್ 302(ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.

  • ತಾಯಿಯ ಅಕ್ರಮ ಸಂಬಂಧಕ್ಕೆ 14ರ ಮಗಳು ಬಲಿ

    ತಾಯಿಯ ಅಕ್ರಮ ಸಂಬಂಧಕ್ಕೆ 14ರ ಮಗಳು ಬಲಿ

    ಕೋಲಾರ: ತಾಯಿಯ ಅಕ್ರಮ ಸಂಬಂಧಕ್ಕೆ ಮಗಳು ಬಲಿಯಾಗಿರುವ ಅಮಾನವೀಯ ಘಟನೆ ಕೋಲಾರದಲ್ಲಿ ನಡೆದಿದೆ.

    ಮುಳಬಾಗಿಲು ತಾಲೂಕಿನ ಭೀಮಾಪುರ ಗ್ರಾಮದ ಸಿರಿಷಾ (14) ಕೊಲೆಯಾದ ಬಾಲಕಿ. ತಾಯಿ ತನ್ನ ಪ್ರಿಯಕರನ ಜೊತೆ ಸೇರಿ 14 ವರ್ಷದ ಮಗಳನ್ನ ಕೊಂದಿದ್ದಾಳೆ. ಸದ್ಯಕ್ಕೆ ಆರೋಪಿ ತಾಯಿ ಕೋಲಾರ ಪೊಲೀಸರ ಅತಿಥಿಯಾಗಿದ್ದಾಳೆ.

    ಇದೇ ತಿಂಗಳ 24 ರಂದು ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ತೊರ್ನಹಳ್ಳಿ ಬಳಿ ಅಪರಿಚಿತ ಶವ ಪತ್ತೆಯಾಗಿತ್ತು. ಬಳಿಕ ಮಾಲೂರು ಪೊಲೀಸರು ಈ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆಯನ್ನು ಮಾಡಿ ಈ ಪ್ರಕರಣವನ್ನ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಸದ್ಯಕ್ಕೆ ಮೃತಳ ಗುರುತು ಪತ್ತೆ ಮಾಡಿ ಕೊಲೆ ಆರೋಪಿಗಳನ್ನ ಬಂಧಿಸಿದ್ದಾರೆ.

    ಮೃತ ಸಿರಿಷಾ ತಾಯಿ ಮಾರಕ್ಕ ಹಾಗೂ ಆಕೆಯೊಂದಿಗೆ ಅಕ್ರಮ ಸಂಬಂಧ ಹೊಂದಿರುವ ರಮೇಶ್ ಇಬ್ಬರು ಸೇರಿ ಸಿರಿಷಾಳನ್ನು ಕೊಲೆ ಮಾಡಿದ್ದಾರೆ. ಮೂರು ತಿಂಗಳ ಹಿಂದೆಯಷ್ಟೆ ಸಿರಿಷಾಳ ಮೇಲೆ ಅತ್ಯಾಚಾರ ನಡೆದಿದ್ದು, ಪೋಕ್ಸೋ ಪ್ರಕರಣ ದಾಖಲಾಗಿತ್ತು. ತಾಯಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ರಮೇಶ್ ಮಗಳಿಗೂ ಲೈಂಗಿಕ ಕಿರುಕುಳ ಕೊಟ್ಟಿದ್ದ ಎಂದು ತಿಳಿದು ಬಂದಿತ್ತು.

    ತನಿಖೆ ಕೈಗೊಂಡಿದ್ದ ಮುಳಬಾಗಲು ಪೊಲೀಸರಿಗೆ ತಾವಿಬ್ಬರು ಸಿಕ್ಕಿ ಹಾಕಿಕೊಳ್ಳುವ ಭಯದಲ್ಲಿ ಇದೇ ತಿಂಗಳ 24 ರ ಭಾನುವಾರ ತೊರ್ನಹಳ್ಳಿ ಗ್ರಾಮದ ಬಳಿ ಕೊಲೆ ಮಾಡಿ ಗುರುತು ಪತ್ತೆಯಾಗದಂತೆ ಪೆಟ್ರೋಲ್ ಸುರಿದು ಸುಟ್ಟು ಬಿಸಾಡಲಾಗಿತ್ತು. ಪೊಲೀಸರು ತನಿಖೆ ಕೈಗೊಂಡಿದ್ದು, ತಾಯಿ ಹಾಗೂ ಅಕ್ರಮ ಸಂಬಂಧ ಹೊಂದಿದ್ದ ರಮೇಶ್ ನನ್ನ ಬಂಧಿಸಿದ್ದಾರೆ. 12 ವರ್ಷಗಳ ಹಿಂದೆ ಸಿರಿಷಾಳ ತಂದೆ ಸಾವನ್ನಪ್ಪಿದ್ದರು.

  • ಅಂಕಲ್‍ನೊಂದಿಗೆ ಲವ್-ಬ್ರೇಕಪ್ ಬಳಿಕ ಹಣಕ್ಕೆ ಬೇಡಿಕೆಯಿಟ್ಳು- ಕೊಡಲ್ಲ ಅಂದಿದ್ದಕ್ಕೆ ಕೊಂದೇ ಬಿಟ್ಳು!

    ಅಂಕಲ್‍ನೊಂದಿಗೆ ಲವ್-ಬ್ರೇಕಪ್ ಬಳಿಕ ಹಣಕ್ಕೆ ಬೇಡಿಕೆಯಿಟ್ಳು- ಕೊಡಲ್ಲ ಅಂದಿದ್ದಕ್ಕೆ ಕೊಂದೇ ಬಿಟ್ಳು!

    ನೊಯ್ಡಾ: ಪ್ರಿಯತಮನನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 23 ವರ್ಷದ ಯುವತಿಯೊಬ್ಬಳನ್ನು ಗ್ರೇಟರ್ ನೊಯ್ಡಾದ ಧನ್ ಕೌರ್ ಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದಾರೆ.

    ಸೋನಮ್ ಅಲಿಯಾಸ್ ಸೋನು, 37 ವರ್ಷದ ಜಿತೇಂದ್ರ ಸಿಂಗ್ ಎಂಬಾತನನ್ನು ಕೊಲೆ ಮಾಡಿದ್ದಾಳೆ. ಈಕೆಯನ್ನು ಖೇರ್ಲಿ ಕಾಲುವೆಯ ಸೇತುವೆ ಬಳಿ ಭಾನುವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಪೊಲೀಸರ ತಂಡವೊಂದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಹಣಕ್ಕೆ ಬೇಡಿಕೆ:
    ಮೃತ ಜಿತೇಂದ್ರಗೆ ಕೆಲ ತಿಂಗಳುಗಳ ಹಿಂದೆಯಷ್ಟೇ ಸೋನಮ್ ಪರಿಚಯವಾಗಿದ್ದು, ಇದೀಗ ಕೊಲೆ ಮಾಡುವ ಮೂಲಕ ಆತನ ಅಕ್ರಮ ಸಂಬಂಧ ಕೊನೆಯಾಗಿದೆ. ಸೋನಮ್ ಪರಿಚಯವಾದ ಬಳಿಕ ಆಕೆ ನಿಧಾನವಾಗಿ ಹಣಕ್ಕಾಗಿ ಜಿತೇಂದ್ರ ಬಳಿ ಬೇಡಿಕೆ ಇಡುತ್ತಿದ್ದಳು. ಅಲ್ಲದೇ ಹಣ ನೀಡದಿದ್ದಲ್ಲಿ ನಮ್ಮಿಬ್ಬರ ಸಂಬಂಧದ ಬಗ್ಗೆ ನಿನ್ನ ಪತ್ನಿಗೆ ತಿಳಿಸುವುದಾಗಿ ಬೆದರಿಕೆಯನ್ನೂ ಹಾಕಿದ್ದಳು. ಹೀಗೆ ಬೆದರಿಕೆ ನೀಡುತ್ತಾ ಸಾವಿರಕ್ಕೂ ಹೆಚ್ಚು ಹಣವನ್ನು ಜಿತೇಂದ್ರ ಕೈಯಿಂದ ಪಡೆದಿದ್ದಳು. ಆದ್ರೆ ಇತ್ತೀಚೆಗೆ ಸೋನಮ್ ಕೇಳಿದಾಗ ಹಣ ನೀಡಲು ಜಿತೇಂದ್ರ ನಿರಾಕರಿಸಿದ್ದನು. ಈ ಹಿನ್ನೆಲೆಯಲ್ಲಿ ಇಬ್ಬರ ಮಧ್ಯೆ ಜಗಳವಾಗಿದ್ದು, ಇದರಿಂದ ಸಿಟ್ಟಿಗೆದ್ದ ಸೋನಮ್ ಈ ಕೃತ್ಯ ಎಸಗಿದ್ದಾಳೆ ಅಂತ ದನ್ಕೌರ್ ಪೊಲೀಸ್ ಠಾಣೆಯ ಅಧಿಕಾರಿ ಫಾರ್ಮೂಡ್ ಆಲಿ ಪುಂದಿರ್ ತಿಳಿಸಿದ್ದಾರೆ.

    ಉದ್ಯಾನವನದಲ್ಲಿ ಮರ್ಡರ್:
    ಶುಕ್ರವಾರ ಮಧ್ಯಾಹ್ನ ನಂತ್ರ ಸೋನಮ್, ಜಿತೇಂದ್ರನನ್ನು ಸ್ಥಳೀಯ ಉದ್ಯಾನವನವೊಂದರಲ್ಲಿ ಭೇಟಿಯಾಗುವಂತೆ ತಿಳಿಸಿದ್ದಳು. ಯಾವುದೋ ಗಂಭೀರ ವಿಚಾರದ ಬಗ್ಗೆ ಚರ್ಚೆ ನಡೆಸಲು ಕರೆದಿರಬಹುಂದು ತಿಳಿದ ಜಿತೇಂದ್ರ, ಬೇಗನೆ ಉದ್ಯಾನವನಕ್ಕೆ ಬಂದಿದ್ದನು. ಈ ವೇಳೆ ಏನೂ ಮಾತಾಡದ ಸೋನಮ್, ಜಿತೇಂದ್ರ ತಲೆಗೆ ಟಿಪಾಯಿ ಕಾಲಿನಿಂದ ಹಿಗ್ಗಾಮುಗ್ಗವಾಗಿ ಥಳಿಸಿದ್ದಾಳೆ. ಇದರಿಂದ ಜಿತೇಂದ್ರ ತಲೆಗೆ ಗಂಭೀರ ಗಾಯಗಳಾಗಿದ್ದು, ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಜಿತೇಂದ್ರ ಸಾವನ್ನಪ್ಪಿದ್ದಾನೆಂದು ತಿಳಿದ ಬಳಿಕ ಸೋನಮ್ ತನ್ನ ಸ್ಕೂಟರ್ ನಲ್ಲಿ ತೆರಳಿದ್ದಾಳೆ ಅಂತ ಅಧಿಕಾರಿ ವಿವರಿಸಿದ್ದಾರೆ.

    ಪರಾರಿಗೆ ಯತ್ನ:
    ಇತ್ತ ಘಟನೆಗೆ ಸಂಬಂಧಿಸಿದಂತೆ ಜಿತೇಂದ್ರ ಸಹೋದರ ಸೋನಮ್ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ ಅಂತ ತಿಳಿದ ಕೂಡಲೇ, ಆಕೆ ಜಿಲ್ಲೆಯಿಂದಲೇ ಪರಾರಿಯಾಗಲು ಯತ್ನಿಸಿದ್ದಳು. ಆದ್ರೆ ಗ್ರೇಟರ್ ನೊಯ್ಡಾದ ಖೆರ್ಲಿ ಕಾಲುವೆಯ ಸೇತುವೆ ಬಳಿ ಆಕೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದೇವೆ. ಇನ್ನು ಆರೋಪಿ ಕೃತ್ಯಕ್ಕೆ ಬಳಸಿದ ಟಿಪಾಯಿ ಕಾಲನ್ನು ವಶಕ್ಕೆ ಪಡೆದಿದ್ದೇವೆ ಅಂತ ಅವರು ಹೇಳಿದ್ದಾರೆ.

    ರೈತ ಕುಟುಂಬದವನಾಗಿರೋ ಜಿತೇಂದ್ರ, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾನೆ. ಸದ್ಯ ಆರೋಪಿ ಸೋನಮ್ ವಿರುದ್ಧ ಐಪಿಸಿ ಸೆಕ್ಷನ್ 302(ಕೊಲೆ)ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಅಂತ ಪುಂದಿರ್ ಹೇಳಿರುವುದಾಗಿ ವರದಿಯಾಗಿದೆ.

  • ಅಕ್ರಂ ಲೈಂಗಿಕ ಜೀವನದ ಬಗ್ಗೆ ಪುಸ್ತಕ ಬರೆದ ಇಮ್ರಾನ್ ಖಾನ್ ಮಾಜಿ ಪತ್ನಿ!

    ಅಕ್ರಂ ಲೈಂಗಿಕ ಜೀವನದ ಬಗ್ಗೆ ಪುಸ್ತಕ ಬರೆದ ಇಮ್ರಾನ್ ಖಾನ್ ಮಾಜಿ ಪತ್ನಿ!

    ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ರಾಜಕಾರಣಿ ಇಮ್ರಾನ್ ಖಾನ್ ರ ಮಾಜಿ ಪತ್ನಿ ರೇಹಮ್ ಖಾನ್ ಅವರಿಗೆ ಮಾಜಿ ನಾಯಕ ವಾಸೀಂ ಅಕ್ರಂ ನೋಟಿಸ್ ಜಾರಿ ಮಾಡಿದ್ದಾರೆ.

    ರೇಹಮ್ ಖಾನ್ ತಮ್ಮ ಮುಂಬರುವ ಪುಸ್ತಕದಲ್ಲಿ ಹಲವು ಪಾಕಿಸ್ತಾನಿ ಪ್ರಮುಖರ ಲೈಂಗಿಕ ಜೀವನ ಕುರಿತಂತೆ ವಿವಾದಾತ್ಮಕ ಅಂಶಗಳನ್ನು ಉಲ್ಲೇಖಿಸಿದ್ದಾರೆ. ಸದ್ಯ ರೇಹಮ್ ಖಾನ್ ಪುಸ್ತಕದ ಕೆಲ ಪುಟಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಪುಟಗಳಲ್ಲಿ ವಾಸೀಂ ಅಕ್ರಂರ ಮಾಜಿ ಮೊದಲ ಪತ್ನಿಯ ಕುರಿತು ವಿವಾದತ್ಮಾಕ ಮಾಹಿತಿ ನೀಡಿದ್ದಾರೆ.

    ವೈರಲ್ ಆಗಿರುವ ಪುಸ್ತಕದ 402 ಹಾಗೂ 572 ಪುಟಗಳು ವಿವಾದಕ್ಕೆ ಕಾರಣವಾಗಿದ್ದು, ಇದರಲ್ಲಿ ವಾಸೀಂ ಅಕ್ರಂ ತಮ್ಮ ಪತ್ನಿಯನ್ನು ಕಾಮ ತೃಷೆಗಾಗಿ ಬಳಕೆ ಮಾಡಿಕೊಳ್ಳುತ್ತಿದ್ದರು ಎಂದು ಉಲ್ಲೇಖಿಸಿದ್ದಾರೆ. ಅಲ್ಲದೇ ತನ್ನ ಪತ್ನಿಯೊಂದಿಗೆ ಸ್ವತಃ ತನ್ನ ಕಣ್ಣೆದುರೇ ಲೈಂಗಿಕ ಸಂಬಂಧ ಹೊಂದಲು ಕಪ್ಪು ವರ್ಣಿಯನನ್ನು ನೇಮಿಸಿದ್ದ ಎಂದು ನಮೂದಿಸಿದ್ದಾರೆ. ಅಲ್ಲದೇ ಆಕ್ರಂ ಹಲವು ಗಣ್ಯರ ಜೊತೆ ಅಕ್ರಮ ಲೈಂಗಿಕ ಸಂಕರ್ಪ ಹೊಂದಿದ್ದ ಎಂದು ಉಲ್ಲೇಖಿಸಿದ್ದಾರೆ.

    ಸದ್ಯ ಈ ಕುರಿತು ವಸೀಂ ಅಕ್ರಂ ವೆಸ್ಟ್ ಲಂಡನ್ ನ್ಯಾಯಾಲಯದಿಂದ ರೇಹಮ್ ಖಾನ್ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಅಲ್ಲದೇ ಇದೇ ಪುಸ್ತದಲ್ಲಿ ಮೂವರು ನಾಯಕರ ಖಾಸಗಿ ಲೈಂಗಿಕ ಜೀವನದ ಕುರಿತು ಉಲ್ಲೇಖಿಸಿದ್ದು, ಅವರು ಸಹ ನೋಟಿಸ್ ನೀಡಿದ್ದಾರೆ.

    ಸದ್ಯ ಜಾರಿಗೆ ಆಗಿರುವ ನೋಟಿಸ್ ನಲ್ಲಿ ವಾಸೀಂ ಅಕ್ರಂ ಒಬ್ಬ ಅಂತರಾಷ್ಟ್ರೀಯ ಕ್ರೀಡಾಪಟು. ಶ್ರೇಷ್ಠ ಕ್ರಿಕೆಟರ್ ಗಳಿಂದ ಗುರುತಿಸಲ್ಪಡುವ ವ್ಯಕ್ತಿ. ಒಬ್ಬ ಸಾಮಾಜಿಕ ವ್ಯಕ್ತಿಯಾಗಿರುವುದರಿಂದ ಅವರ ವಿರುದ್ಧ ಈ ರೀತಿಯ ಆಧಾರ ರಹಿತ ಆರೋಪ ಮಾಡಲಾಗಿದೆ. ಅಲ್ಲದೇ ಮೃತ ವಾಸೀಂ ಅವರ ಪತ್ನಿ ಗೌರವ ಮೇಲೆ ಪರಿಣಾಮ ಬೀರಲಿದೆ ಎಂದು ಉಲ್ಲೇಖಿಸಲಾಗಿದೆ.

    ಸದ್ಯ ರೇಹಮ್ ರ ಈ ಹೇಳಿಕೆ ಪಾಕಿಸ್ಥಾನದ ರಾಜಕೀಯದಲ್ಲೂ ಸಾಕಷ್ಟು ತಲ್ಲಣ ಮೂಡಿಸಿದ್ದು, ಪುಸ್ತಕದ ಭಾಗಗಳು ಈಗ ಅಂತರ್ಜಾಲದಲ್ಲಿ ಲೀಕ್ ಆಗಿದ್ದು ಇದೀಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ

    ಲೇಖಕಿ ರೇಹಮ್ ಖಾನ್ ಇಮ್ರಾನ್ ಖಾನ್ ಮಾಜಿ ಪತ್ನಿಯಾಗಿದ್ದು, ಜನವರಿ 2015 ರಲ್ಲಿ ಮದುವೆಯಾಗಿದ್ದರು. ಆದರೆ ಮದುವೆಯಾದ 15 ದಿನಗಳಲ್ಲಿ ಅಂದರೆ 2015 ಅಕ್ಟೋಬರ್ ನಲ್ಲಿ ಇವರ ಇಬ್ಬರ ನಡುವಿನ ದಾಂಪತ್ಯ ಜೀವನ ಮುರಿದು ಬಿದ್ದಿತ್ತು. ಇನ್ನು ವಾಸೀಂ ಬುಶ್ರಾ ಮನೇಕಾ ಅವರೊಂದಗೆ ಎರಡನೇ ಮದುವೆಯಾಗಿದ್ದರು. ಇದಕ್ಕೂ ಮೊದಲು 1995 ರಲ್ಲಿ ಜೆಮಿಮಾ ಗೋಲ್ಡ್ ಸ್ಮಿತ್ ಅವರೊಂದಿಗೆ ವಿವಾಹವಾಗಿ 9 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ್ದರು.

  • ಪೊಲೀಸನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಇನ್ನೋರ್ವ ಪೇದೆಗೆ ಬಿತ್ತು ಗೂಸಾ

    ಪೊಲೀಸನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಇನ್ನೋರ್ವ ಪೇದೆಗೆ ಬಿತ್ತು ಗೂಸಾ

    ಚಿತ್ರದುರ್ಗ: ವಿವಾಹಿತ ಮಹಿಳೆಯೊಂದಿಗೆ ಸ್ನೇಹ ಬೆಳೆಸಿ, ಅಕ್ರಮ ಸಂಬಂಧ ಹೊಂದಿದ್ದ ಪೊಲೀಸ್ ಪೇದೆಗೆ ಗ್ರಾಮಸ್ಥರು ಭರ್ಜರಿ ಗೂಸಾ ಕೊಟ್ಟ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನ ಕೆ.ಕೆ.ಹಟ್ಟಿಯಲ್ಲಿ ನಡೆದಿದೆ.

    ಲೋಕೇಶ್ ಅಕ್ರಮ ಸಂಬಂಧ ಹೊಂದಿದ್ದ ಪೊಲೀಸ್ ಪೇದೆ. ಸುಮಾರು ದಿನಗಳಿಂದ ಗ್ರಾಮಸ್ಥರ ಕಣ್ಣು ತಪ್ಪಿಸಿ ಅಕ್ರಮ ಸಂಬಂಧ ಹೊಂದಿದ್ದ ಲೋಕೇಶ್ ಭಾನುವಾರ ಸಿಕ್ಕಿಬಿದ್ದಿದ್ದಾನೆ.

    ಲೋಕೇಶ್ ಮೂಲತಃ ರಾಮನಗರ ಸಮೀಪದ ಗಿರೇಹಳ್ಳಿ ಗ್ರಾಮದ ನಿವಾಸಿ. ಪಕ್ಕದ ಹಳ್ಳಿಯ ಹುಡುಗಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪರಿಚಯ ಮಾಡಿಕೊಂಡಿದ್ದು, ಫೇಸ್ ಬುಕ್, ವಾಟ್ಸಪ್‍ನಲ್ಲಿ ಸಂಪರ್ಕದಲ್ಲಿದ್ದನು. ಕೆಲವು ದಿನಗಳ ನಂತರ ನಂಬರ್ ಬದಲಾಗಿದ್ದರಿಂದ ಸಂಪರ್ಕ ಕಳೆದುಕೊಂಡಿದ್ದರು. ಆದರೆ ಸಂತ್ರಸ್ತ ಮಹಿಳೆ ಪೊಲೀಸ್ ಪೇದೆ ದೇಹದಾಢ್ರ್ಯ ಪರೀಕ್ಷೆಗೆ ಬಂದಿದ್ದ ವೇಳೆ ಲೋಕೇಶ್ ಮತ್ತೇ ನಂಬರ್ ಪಡೆದಿದ್ದಾನೆ.

    ಲೋಕೇಶ್ ಮಹಿಳೆಯೊಂದಿಗೆ ನಡೆಸುತ್ತಿದ್ದನ್ನು ತನ್ನ ಮೊಬೈಲ್ ನಲ್ಲಿ ಚಿತ್ರೀಕರಿಸಿ ಬ್ಲಾಕ್ ಮೇಲ್ ಮಾಡುತ್ತಿದ್ದ. ಮದುವೆ ನಂತರವೂ ಸಂಪರ್ಕದಲ್ಲಿ ಇರುವಂತೆ ಒತ್ತಾಯಿಸಿದ್ದನು. ಹೀಗಾಗಿ ತನ್ನ ಪತಿಗೆ ಗೊತ್ತಾಗದಂತೆ ಇವರ ಕಣ್ಣಾಮುಚ್ಚಾಲೆ ಆಟ ನಡೆಯುತ್ತಿತ್ತು.

    ಇಂದು ಮಾರು ವೇಷದಲ್ಲಿ ಗ್ರಾಮಕ್ಕೆ ಬಂದಿದ್ದ ಲೋಕೇಶ್ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾನೆ. ಆತನನ್ನ ಗ್ರಾಮಸ್ಥರು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

    ಶನಿವಾರ ಮಧ್ಯರಾತ್ರಿ ನನ್ನ ಪತ್ನಿಯ ಫೋನ್‍ಗೆ ಲೋಕೇಶ್ ನಂಬರ್‍ನಿಂದ ವಾಟ್ಸಪ್ ಮೆಸೇಜ್ ಬಂದಿತ್ತು. ನಾನು ರಿಪ್ಲೈ ಮಾಡಿದ ಮೇಲೆ ಇವರ ಮಧ್ಯೆ ಅಕ್ರಮ ಸಂಬಂಧ ಇರುವುದು ಖಚಿತವಾಗಿ, ಪತ್ನಿಯನ್ನು ವಿಚಾರಿಸಿದಾಗ ಸತ್ಯ ತಿಳಿಯಿತು. ಈ ಹಿಂದೆ ಅಕ್ರಮ ಸಂಬಂಧದ ವಿಚಾರವಾಗಿ ನಮ್ಮಿಬ್ಬರ ನಡುವೆ ಅನೇಕ ಬಾರಿ ಜಗಳವಾಗಿದೆ. ಆದರೆ ಸೂಕ್ತ ಸಾಕ್ಷಿಯಿರಲಿಲ್ಲ, ಈಗ ಲೋಕೇಶ್ ಸಿಕ್ಕಿಬಿದ್ದಿದ್ದಾನೆ ಎಂದು ಸಂತ್ರಸ್ತೆಯ ಪತಿ ಲೋಕಣ್ಣ ಹೇಳಿದ್ದಾರೆ.

  • ಅಕ್ರಮ ಸಂಬಂಧಕ್ಕೆ ಅಡ್ಡ ಬಂದ 28ರ ಮಗನನ್ನೇ ಕೊಂದ್ಳು!

    ಅಕ್ರಮ ಸಂಬಂಧಕ್ಕೆ ಅಡ್ಡ ಬಂದ 28ರ ಮಗನನ್ನೇ ಕೊಂದ್ಳು!

    ಲಕ್ನೋ: ವ್ಯಕ್ತಿಯೊಂದಿಗಿನ ಅಕ್ರಮ ಸಂಬಂಧಕ್ಕೆ ಅಡ್ಡ ಬಂದ 28 ವರ್ಷದ ತನ್ನ ಮಗನನ್ನೇ ತಾಯಿ ಕೊಲೆಗೈದ ಆಘಾತಕಾರಿ ಘಟನೆಯೊಂದು ಉತ್ತರಪ್ರದೇಶದ ಮೀರತ್ ನಲ್ಲಿ ನಡೆದಿದೆ.

    ಮೃತ ದುರ್ದೈವಿಯನ್ನು ಮುಕೇಶ್ ಪರಾಶರ್ ಎಂದು ಗುರುತಿಸಲಾಗಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ತಾಯಿ ಉಷಾ ಪರಾಶರ್, ಲವ್ವರ್ ನೌಶದ್ ಹಾಗೂ ಕೊಲೆಗೆ ಸಹಾಯ ಮಾಡಿದ್ದ ಬಿಲಾಲ್ ಎಂಬ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

    ಘಟನೆ ವಿವರ: ಮಗನ ಕೊಲೆಯ ಬಳಿಕ ಕುಟುಂಬ, ಯುವಕ ನಾಪತ್ತೆಯಾಗಿರುವುದಾಗಿ ಮೇ 20ರಂದು ಟಿಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು. ದೂರು ದಾಖಲಿಸಿಕೊಂಡು ತನಿಖೆ ನಡೆಸಿದಾಗ ಮೇ 21ರಂದು ನರ್ ಹೈದ ಗ್ರಾಮದ ಬ್ರಹ್ಮಪುರಿ ಪ್ರದೇಶದಲ್ಲಿ ಮುಕೇಶ್ ಮೃತದೇಹ ಪತ್ತೆಯಾಗಿದೆ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದಾಗ ಮುಕೇಶ್ ಅಸಹಜ ಸಾವಲ್ಲ. ಬದಲಾಗಿ ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ವರದಿಯಲ್ಲಿ ಬೆಳಕಿಗೆ ಬಂದಿದೆ.

    ವರದಿಯ ಬಳಿಕ ಸ್ಥಳೀಯ ಪೊಲೀಸರಿಗೆ ಈ ಕೊಲೆಯ ಉದ್ದೇಶ ಕಂಡುಹಿಡಿಯುವಲ್ಲಿ ವಿಫಲರಾದ್ರು. ಹೀಗಾಗಿ ಪೊಲೀಸರು ಕ್ರೈಂ ಬ್ರ್ಯಾಂಚ್ ಅವರ ಸಹಾಯ ಪಡೆದ್ರು. ಈ ವೇಳೆ ಮುಕೇಶ್ ತಾಯಿಗೆ ನೌಶದ್ ಜೊತೆ ಅಕ್ರಮ ಸಂಬಂಧವಿತ್ತು. ಇದನ್ನು ಮುಕೇಶ್ ವಿರೋಧಿಸಿದ್ದರು. ಈ ಹಿನ್ನೆಲೆಯಲ್ಲಿ ತಾಯಿ ಮಗನ ನಡುವೆ ಜಗಳ ನಡೆದಿದ್ದು, ಉಷಾ ತನ್ನ ಮಗನನ್ನೇ ಕೊಲೆ ಮಾಡಲು ನಿರ್ಧರಿಸಿದ್ದಳು. ಅದಕ್ಕಾಗಿ ತನ್ನ ಪ್ರಿಯತಮನ ಸಹಾಯ ಪಡೆದಿರುವುದು ಬೆಳಕಿಗೆ ಬಂದಿದೆ ಅಂತ ಎಸ್‍ಎಸ್‍ಪಿ ರಾಜೇಶ್ ಪಾಂಡೇ ತಿಳಿಸಿದ್ದಾರೆ.

    ವಿಚಾರಣೆಯ ವೇಳೆ 40 ವರ್ಷದ ಮಹಿಳೆ, ಮಗನ ಮೇಲೆಯೇ ಆರೋಪ ಮಾಡಿ ತನಿಖಾ ತಂಡವನ್ನು ದಾರಿ ತಪ್ಪಿಸಲು ಯತ್ನಿಸಿದ್ದಳು. ತನ್ನ ಮಗ ಕುಡಿದು ಜನರೊಂದಿಗೆ ಜಗಳವಾಡಿದ್ದಾನೆ. ಈ ವೇಳೆ ಆಕಸ್ಮಾತ್ತಾಗಿ ಟ್ಯೂಬ್ ವೆಲ್ ಗೆ ಬಿದ್ದು ಆತ ಮೃತಪಟ್ಟಿರಬೇಕು ಅಂತ ಹೇಳುವ ಮೂಲಕ ತನಿಖೆ ದಾರಿ ತಪ್ಪಿಸಲು ಮುಂದಾಗಿದ್ದಾಳೆ. ಆರೋಪಿ ಉಷಾ ಈ ಹಿಂದೆ ಅಂದರೆ ಎರಡು ತಿಂಗಳ ಹಿಂದೆಯಷ್ಟೇ ಪಾನೀಯದಲ್ಲಿ ಕ್ರಿಮಿನಾಶಕ ಹಾಕಿ ಕೊಟ್ಟಿದ್ದಳು. ಆದ್ರೆ ಈ ಪ್ಲಾನ್ ನಲ್ಲಿ ಆಕೆ ವಿಫಲವಾಗಿದ್ದಳು ಅಂತ ಪೊಲೀಸರು ತಿಳಿಸಿದ್ದಾರೆ.

    ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಉಷಾ ಹಾಗೂ ನೌಶದ್ ಮೊಬೈಲ್ ವಶಪಡಿಸಿಕೊಂಡು ಕರೆಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಕೊಲೆ ರಹಸ್ಯ ಬಯಲಾಗಿದೆ. ಮೇ 20ರಂದು ನೌಶದ್, ಮುಕೇಶ್ ಹಾಗೂ ರೌಡಿಶೀಟರ್ ಬಿಲಾಲ್ ಮದ್ಯಪಾನ ಮಾಡಿದ್ದಾರೆ. ಬಳಿಕ ನೌಶದ್ ಮತ್ತು ಬಿಲಾಲ್ ಸೇರಿ ಮುಕೇಶ್ ನನ್ನು ಅಜ್ಞಾನ ಪ್ರದೇಶವೊಂದಕ್ಕೆ ಕರೆದುಕೊಂಡು ಹೋಗಿ ಹಗ್ಗದಿಂದ ಆತನ ಕುತ್ತಿಗೆ ಬಿಗಿದಿದ್ದಾರೆ. ಮುಕೇಶ್ ಮೃತಪಟ್ಟ ನಂತರ ಆತನ ಮೃತದೇಹವನ್ನು ಹತ್ತಿರ ಟ್ಯೂಬ್ ವೆಲ್ ಗೆ ಬಿಸಾಕಿ ಹೋಗಿದ್ದಾರೆ. ಸದ್ಯ ಕೊಲೆಗೆ ಬಳಸಿದ್ದ ಹಗ್ಗವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಅಂತ ಪಾಂಡೇ ತಿಳಿಸಿದ್ದಾರೆ.

  • ಮಚ್ಚಿನಿಂದ ಕೊಚ್ಚಿ ಪತ್ನಿ, ಅತ್ತೆಯನ್ನು ಬರ್ಬರವಾಗಿ ಕೊಲೆಗೈದ!

    ಮಚ್ಚಿನಿಂದ ಕೊಚ್ಚಿ ಪತ್ನಿ, ಅತ್ತೆಯನ್ನು ಬರ್ಬರವಾಗಿ ಕೊಲೆಗೈದ!

    ತುಮಕೂರು: ತನ್ನ ಅತ್ತೆ ಮತ್ತು ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಆಘಾತಕಾರಿ ಘಟನೆಯೊಂದು ತುಮಕೂರಿನ ಪಾವಗಡ ತಾಲೂಕಿನ ಗೌಡಿ ಹಟ್ಟಿಯಲ್ಲಿ ನಡೆದಿದೆ.

    ರಾಮಾಂಜಿನಮ್ಮ(50), ನಾಗಮಣಿ(28) ಕೊಲೆಯಾದ ದುರ್ದೈವಿಗಳು. ಮಂಜುನಾಥ್ (30) ಹತ್ಯೆಗೈದ ಆರೋಪಿ.

    ದಿನಗೂಲಿ ಕೆಲಸ ಮಾಡುತ್ತಿದ್ದ ಮಂಜುನಾಥ್, ಪತ್ನಿ ನಾಗಮಣಿಯನ್ನು ವರಿಸಿ 6 ವರ್ಷವಾಗಿತ್ತು. ಆ ಬಳಿಕ ಪತ್ನಿಗೆ ಅಕ್ರಮ ಸಂಬಂಧವಿದೆಯೆಂದು ಶಂಕಿಸಿದ್ದನು. ಈ ವಿಚಾರವಾಗಿ ಕುಡಿದು ಬಂದು ಗಲಾಟೆ ಕೂಡ ಮಾಡುತ್ತಿದ್ದನು.

    ನಾಗಮಣಿ ಅವರು ತವರು ಮನೆಗೆ ತೆರಳಿದ್ದ ಸಂದರ್ಭದಲ್ಲಿ ಮಂಜುನಾಥ್ ಕುಡಿದು ಆಕೆಯ ಮನೆಗೆ ಹೋಗಿದ್ದಾನೆ. ಅಲ್ಲದೇ ಅಕ್ರಮ ಸಂಬಂಧ ವಿಚಾರವಾಗಿ ಮತ್ತೆ ತಗಾದೆ ತೆಗೆದಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದಿದ್ದು, ಮಂಜುನಾಥ್, ಮಚ್ಚಿನಿಂದ ಕೊಚ್ಚಿ ಪತ್ನಿಯನ್ನು ಬರ್ಬರವಾಗಿ ಕೊಲೆಗೈದಿದ್ದಾನೆ. ಈ ವೇಳೆ ನಾಗಮಣಿ ತಾಯಿ ಅಡ್ಡಬಂದಿದ್ದರಿಂದ ಇದರಿಂದ ಸಿಟ್ಟುಗೊಂಡ ಮಂಜುನಾಥ್ ಅತ್ತೆಯ ಮೇಲೂ ಮಚ್ಚು ಬೀಸಿದ್ದಾನೆ. ಪರಿಣಾಮ ಗಂಭೀರ ಗಾಯಗೊಂಡ ಅತ್ತೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಮಂಜುನಾಥ್ -ನಾಗಮಣಿ ದಂಪತಿಗೆ ಮಗನೊಬ್ಬನಿದ್ದು, ಇದೀಗ ತಾಯಿಯನ್ನು ಕಳೆದುಕೊಂಡಿದ್ದಾನೆ.

    ಸ್ಥಳಕ್ಕೆ ಪಾವಗಡ ಪೊಲೀಸರ ಭೇಟಿ, ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಹೆಂಡತಿಯೊಂದಿಗೆ ಅಕ್ರಮ ಸಂಬಂಧವಿದೆ ಎಂದು ಶಂಕಿಸಿ ಬಾಡಿಗೆದಾರನನ್ನ ಹೆಲ್ಮೆಟ್‍ನಿಂದ ಹೊಡೆದು ಕೊಂದೇಬಿಟ್ಟ

    ಹೆಂಡತಿಯೊಂದಿಗೆ ಅಕ್ರಮ ಸಂಬಂಧವಿದೆ ಎಂದು ಶಂಕಿಸಿ ಬಾಡಿಗೆದಾರನನ್ನ ಹೆಲ್ಮೆಟ್‍ನಿಂದ ಹೊಡೆದು ಕೊಂದೇಬಿಟ್ಟ

    ಹೈದರಾಬಾದ್: ತನ್ನ ಹೆಂಡತಿಯೊಂದಿಗೆ ಅಕ್ರಮ ಸಂಬಂಧವಿದೆ ಎಂದು ಶಂಕಿಸಿ ಬಾಡಿಗೆದಾರನನ್ನು ಕೊಂದ ವ್ಯಕ್ತಿಯನ್ನು ಹೈದರಾಬಾದ್‍ನಲ್ಲಿ ಪೊಲೀಸರು ಬಂಧಿಸಿದ್ದಾರೆ.

    ಓಮನ್ ನಲ್ಲಿ ಸಿಸಿಟಿವಿ ತಂತ್ರಜ್ಞನಾಗಿ ಕೆಲಸ ಮಾಡುತ್ತಿದ್ದ 32 ವರ್ಷದ ಕನ್ಹೈಯ್ಯ ಗುಪ್ತಾ ಬಂಧಿತ ಆರೋಪಿ. ಈತ ಪೂರ್ವ ಕಂಡಿವಲಿಯ ಅಪ್ಪಾ ಪಾಡಾ ನಿವಾಸಿಯಾಗಿದ್ದ. ತನ್ನ ಹೆಂಡತಿಯೊಂದಿಗೆ ಬಾಡಿಗೆದಾರ ರಮೇಶ್ ಚೆನಾರಾ ಅಕ್ರಮ ಸಂಬಂಧ ಹೊಂದಿದ್ದಾನೆಂದು ಕನ್ಹೈಯ್ಯ ಅನುಮಾನಿಸಿದ್ದ. ಇಬ್ಬರನ್ನೂ ಬೇರ್ಪಡಿಸುವ ಸಲುವಾಗಿ ಕಳೆದ ವರ್ಷ ತನ್ನ ಹೆಂಡತಿಗೆ ಏನೋ ಸುಳ್ಳು ಹೇಳಿ ಆಕೆಯನ್ನ ಬಿಹಾರದ ತವರುಮನೆಗೆ ಕಳಿಸಿ, ತಾನು ಕೆಲಸ ಮಾಡುತ್ತಿದ್ದ ಓಮನ್‍ಗೆ ಹಿಂದಿರುಗಿದ್ದ.

    ಆರೋಪಿ ತನ್ನ ಕೆಲಸ ಮುಂದುವರೆಸಿ, ಮಾರ್ಚ್ 7ರಂದು ಮುಂಬೈಗೆ ವಾಪಸ್ಸಾಗಿದ್ದ. ಮುಂಬೈಗೆ ಬಂದ ಮೇಲೆ ರಮೇಶ್ ಜೊತೆ ಮನೆ ಭೋಗ್ಯದ ಒಪ್ಪಂದದ ಬಗ್ಗೆ ಮಾತನಾಡಬೇಕೆಂದು ಹೇಳಿ, ಆತನೊಂದಿಗೆ ಭೇಟಿ ಮಾಡಿಸುವಂತೆ ಅದೇ ಏರಿಯಾದಲ್ಲಿ ವಾಸವಿದ್ದ ತನ್ನ ಸಹೋದರ ಪ್ರಭು ಕುಮಾರ್ ಗೆ ಕೇಳಿದ್ದ. ಮಾರ್ಚ್ 9ರಂದು ರಮೇಶ್ ಮಲಾಡ್ ನಲ್ಲಿ ಕನ್ಹೈಯ್ಯ ನನ್ನು ಭೇಟಿ ಮಾಡಿದ್ದ. ಅಲ್ಲಿಂದ ಇಬ್ಬರೂ ಆಟೋದಲ್ಲಿ ಮೀರಾ ರೋಡ್‍ಗೆ ಹೋಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.

    ಕೊಲೆಯಾದ ರಮೇಶ್

    ನಂತರ ಕನ್ಹೈಯ್ಯ ರಮೇಶ್‍ನನ್ನು ಕಾಶಿಮಿರಾದಲ್ಲಿ ಕಾಡಿನೊಳಗೆ ಕರೆದುಕೊಂಡು ಹೋಗಿದ್ದ. ತನ್ನ ಹೆಂಡತಿಯೊಂದಿಗೆ ಅಕ್ರಮ ಸಂಬಂಧವಿರುವ ಬಗ್ಗೆ ಕನ್ಹೈಯ್ಯ ರಮೇಶ್‍ನನ್ನು ಪ್ರಶ್ನಿಸಿದ್ದ. ಬಳಿಕ ಇಬ್ಬರ ಮಧ್ಯೆ ವಾಗ್ವಾದ ನಡೆದಿದ್ದು, ಜಗಳ ವಿಕೋಪಕ್ಕೇರಿ ಕನ್ಹೈಯ್ಯ ಕಾಡಿನಲ್ಲಿ ಬಿದ್ದಿದ್ದ ಹೆಲ್ಮೆಟ್ ತೆಗೆದುಕೊಂಡು ರಮೇಶ್ ತಲೆ ಮೇಲೆ ಹೊಡೆದಿದ್ದ. ಇದರಿಂದ ರಮೇಶ್ ಕುಸಿದು ಬಿದ್ದಿದ್ದು, ಆತ ಸಾಯುವವರೆಗೆ ಕನ್ಹೈಯ್ಯ ಪದೇ ಪದೇ ತಲೆ ಮೇಲೆ ಹೆಲ್ಮೆಟ್‍ನಿಂದ ಹೊಡೆದಿದ್ದ ಎಂದು ತನಿಖಾ ತಂಡದ ಭಾಗವಾಗಿರುವ ಕಾಶಿಮಿರಾ ಕ್ರೈಂ ಬ್ರಾಂಚ್‍ನ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಮಾರ್ಚ್ 12ರಂದು ಸ್ಥಳೀಯರು ರಮೇಶ್ ಮೃತದೇಹದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ನಂತರ ಪೊಲೀಸರು ತನಿಖೆ ಆರಂಭಿಸಿದ್ದು, ಮಾರ್ಚ್ 10ರಂದು ಕುರಾರ್ ಪೊಲೀಸ್ ಠಾಣೆಯಲ್ಲಿ ರಮೇಶ್ ಕಾಣೆಯಾಗಿದ್ದಾನೆಂದು ದೂರು ದಾಖಲಾಗಿರುವುದು ಗೊತ್ತಾಗಿತ್ತು. ನಂತರ ಪೊಲೀಸರು ಆತನ ಕಾಲ್ ರೆಕಾಡ್ರ್ಸ್ ಪರಿಶೀಲಿಸಿದ್ದು, ಕೊನೆಯದಾಗಿ ರಮೇಶ್‍ಗೆ ಪ್ರಭು ಗುಪ್ತಾನಿಂದ ಕರೆ ಬಂದಿರುವುದು ಗೊತ್ತಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಭು ಗುಪ್ತನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದರು. ನಂತರ ಪ್ರಭು ಕನ್ಹೈಯ್ಯ ಬಗ್ಗೆ ಪೊಲೀಸರಿಗೆ ತಿಳಿಸಿದ್ದ.

    ಪೊಲೀಸರು ಕನ್ಹೈಯ್ಯ ನ ಕಾಲ್ ರೆಕಾಡ್ರ್ಸ್ ಪರಿಶೀಲಿಸಿದಾಗ ಆತ ಹೈದರಾಬಾದ್‍ನಲ್ಲಿರುವುದು ಗೊತ್ತಾಗಿತ್ತು. ಬಳಿಕ ಪೊಲೀಸ್ ತಂಡ ಅಲ್ಲಿಗೆ ಹೋಗಿದ್ದು, ಕನ್ಹೈಯ್ಯ ಓಮನ್‍ಗೆ ಹೋಗಲು ವಿಮಾನವೇರುವ ಮುನ್ನವೇ ಆತನನ್ನು ವಶಕ್ಕೆ ಪಡೆದಿದ್ದಾರೆ.

    ಕನ್ಹೈಯ್ಯ ಓಮನ್‍ಗೆ ಹೋಗಲು ಟಿಕೆಟ್ ಗಾಗಿ ಕಾಯುತ್ತಾ ತನ್ನ ಸ್ನೇಹಿತನ ಮನೆಯಲ್ಲಿದ್ದ. ದೇಶವನ್ನ ಬಿಟ್ಟು ಹೋಗುವ ಮುನ್ನವೇ ಆರೋಪಿಯನ್ನ ಬಂಧಿಸಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

  • ವರದಕ್ಷಿಣೆಗಾಗಿ ಪತ್ನಿಯ ಕೊಲೆ- ಅನುಮಾನ ಬರಬಾರೆಂದು ನೇಣು ಬಿಗಿದು ಅಕ್ರಮ ಸಂಬಂಧವಿತ್ತು ಎಂದ ಪತಿ!

    ವರದಕ್ಷಿಣೆಗಾಗಿ ಪತ್ನಿಯ ಕೊಲೆ- ಅನುಮಾನ ಬರಬಾರೆಂದು ನೇಣು ಬಿಗಿದು ಅಕ್ರಮ ಸಂಬಂಧವಿತ್ತು ಎಂದ ಪತಿ!

    ಹುಬ್ಬಳ್ಳಿ: ವರದಕ್ಷಿಣೆಗೆ ಅಮಾಯಕ ಜೀವವೊಂದು ಬಲಿಯಾದ ಘಟನೆ ಹುಬ್ಬಳ್ಳಿಯ ಕೇಶ್ವಾಪುರದ ಚಾಲುಕ್ಯ ನಗರದಲ್ಲಿ ನಡೆದಿದೆ.

    ಲೀವಿನಾ ಜೋಷಪ್ ಗಂಡ ಹೀನ ಕೃತ್ಯಕ್ಕೆ ಬಲಿಯಾದ ಮಹಿಳೆ. ಗಂಡ ಕಿಶೋರ್ ತನ್ನ ಪತ್ನಿ ಲೀವಿನಾಳನ್ನು ಉಸಿರುಗಟ್ಟಸಿ ಸಾಯಿಸಿ ನೇಣು ಹಾಕಿದ್ದಾನೆ.ಶುಕ್ರವಾರ ರಾತ್ರಿ ಲೀವಿನಾಳ ಪತಿ ಕಿಶೋರ್ ಕುಮಾರ್ ಕಂಠ ಪೂರ್ತಿ ಕುಡಿದು ಬಂದು ಪತ್ನಿಯ ಜೊತೆ ಜಗಳ ತೆಗೆದಿದ್ದಾನೆ.

    ತಾನು ಮಾಡುತ್ತಿದ್ದ ವ್ಯವಹಾರದಲ್ಲಿ ನಷ್ಟವಾದ ಹಿನ್ನೆಲೆಯಲ್ಲಿ ಕಿಶೋರ್ ಪತ್ನಿಗೆ ಕೂಡಲೇ ತವರು ಮನೆಯಿಂದ ಹಣ ತರುವಂತೆ ಹೇಳಿದ್ದಾನೆ. ಆದರೆ ಅದಕ್ಕೆ ಒಪ್ಪದ ಹಿನ್ನಲೆಯಲ್ಲಿ ಪತ್ನಿಯನ್ನು ಉಸಿರುಗಟ್ಟಿಸಿ ಸಾಯಿಸಿದ್ದಾನೆ. ನಂತರ ಯಾರಿಗೂ ಅನುಮಾನ ಬರಬಾರೆಂದು ನೇಣು ಬಿಗಿದು ತಾನೇ ಪೊಲೀಸರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾನೆ. ಪೊಲೀಸರು ಕೂಡ ಮೊದಲಿಗೆ ಇದೊಂದು ಸೂಸೈಡ್ ಕೇಸ್ ಎಂದು ತಿಳಿದಿದ್ದಾರೆ.

    ಸಾಲದಕ್ಕೆ ಆಕೆಗೆ ಅಕ್ರಮ ಸಂಬಂಧವಿತ್ತು ಅದನ್ನ ಪ್ರಶ್ನಸಿದ್ದಕ್ಕೆ ನೇಣು ಹಾಕಿಕೊಂಡಿದ್ದಾಳೆ ಎಂದು ಹೇಳಿ ಪೊಲೀಸರನ್ನು ನಂಬಿಸಿದ್ದ. ಆದರೆ ಇಂದು ಆಕೆಯ ಮರಣೋತ್ತರ ಪರೀಕ್ಷೆಯಲ್ಲಿ ಆಕೆ ಆತ್ಮಹತ್ಯೆಯಿಂದ ಮೃತಪಟ್ಟಿಲ್ಲ ಉಸಿರುಗಟ್ಟಿಸಿ ಹತ್ಯೆ ಮಾಡಲಾಗಿದೆ ಎನ್ನುವ ವರದಿ ಬಂದಿದೆ.

    ಈ ಲೀವಿನಾ ಕುಟುಂಬಸ್ಥರು ಪತಿ ಕಿಶೋರ್ ಸೇರಿದಂತೆ ನಾಲ್ವರ ವಿರುದ್ಧ ಕೊಲೆ ಕೇಸ್ ದಾಖಲಿಸಿದ್ದಾರೆ. ಅಲ್ಲದೆ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.