Tag: ಅಕ್ರಮ ಸಂಬಂಧ

  • ಹೈಫೈ ಪಾರ್ಲರ್ ಮಾಲೀಕನ ಸಾವಿಗೆ ಟ್ವಿಸ್ಟ್: ಸ್ನೇಹಿತನ ಜೊತೆಗೂಡಿ ಪತ್ನಿಯಿಂದಲೇ ಕೊಲೆ?

    ಹೈಫೈ ಪಾರ್ಲರ್ ಮಾಲೀಕನ ಸಾವಿಗೆ ಟ್ವಿಸ್ಟ್: ಸ್ನೇಹಿತನ ಜೊತೆಗೂಡಿ ಪತ್ನಿಯಿಂದಲೇ ಕೊಲೆ?

    ನೆಲಮಂಗಲ: ಹೈಫೈ ಪಾರ್ಲರ್ ಮಾಲೀಕ ಶಶಿಕುಮಾರ್ ಅನುಮಾನಸ್ಪದ ರೀತಿಯಲ್ಲಿ ಸಾವನಪ್ಪಿದ, ಮೂರು ದಿನದ ನಂತರ ಪ್ರಕರಣಕ್ಕೆ ಈಗ ಟ್ವಿಸ್ಟ್ ಸಿಕ್ಕಿದೆ. ಪತ್ನಿಯೇ ಗೆಳೆಯನ ಜೊತೆ ಸೇರಿ ಈ ಕೊಲೆ ಮಾಡಿದ್ದಾಳೆ ಎಂದು ಶಶಿಕುಮಾರ್ ಸಂಬಂಧಿಕರು ಆರೋಪಿಸಿದ್ದಾರೆ.

    ಬೆಂಗಳೂರಿನ ಕೆಲವು ಕಡೆ ಹೈಫೈ ಸಲೂನ್ ಪಾರ್ಲರ್ ನಡೆಸುತ್ತಿದ್ದ ಶಶಿಕುಮಾರ್ ಸಾವಿನ ಬಗ್ಗೆ ಪತ್ನಿ ಪಲ್ಲವಿ ದ್ವಂದ್ವ ಉತ್ತರ ನೀಡಿದ್ದೇ ಅನುಮಾನಕ್ಕೆ ಕಾರಣವಾಗಿದೆ. ಈ ಸಂಬಂಧ ಶಶಿಕುಮಾರ್ ಮೃತದೇಹವನ್ನು ಹೊರ ತೆಗೆದು, ಮರಣೋತ್ತರ ಪರೀಕ್ಷೆ ಒಳಪಡಿಸಿ, ತನಿಖೆ ನಡೆಸಬೇಕು ಎಂದು ಸಹೋದರರಾದ ಶಿವಕುಮಾರ್ ಮತ್ತು ಮಂಜುನಾಥ್ ಆಗ್ರಹಿಸಿದ್ದಾರೆ.

    ಕುಟುಂಬಸ್ಥರ ಆರೋಪ ಏನು?
    ಎರಡು ತಿಂಗಳ ಹಿಂದೆ ಗೆಳೆಯ ಸತೀಶ್ ಎಂಬಾತನನ್ನು ಶಶಿಕುಮಾರ್ ತನ್ನ ವ್ಯವಹಾರದಲ್ಲಿ ಪಾಲುದಾರನನ್ನಾಗಿ ಸೇರಿಸಿಕೊಂಡಿದ್ದ. ವ್ಯವಹಾರದ ಮಾತುಕತೆಯ ವೇಳೆ ಸತೀಶ್ ಗೆ ಶಶಿಕುಮಾರ್ ಪತ್ನಿ ಪಲ್ಲವಿಯ ಪರಿಚಯವಾಗಿದೆ. ಬಳಿಕ ಸತೀಶ್ ಪಲ್ಲವಿ ಜೊತೆಗೆ ಒಡನಾಟ ಬೆಳೆಸಿಕೊಂಡಿದ್ದಾನೆ. ಮೊಬೈಲ್‍ನಲ್ಲಿ ಸತೀಶ್ ಹಾಗೂ ಪಲ್ಲವಿ ಮಾತನಾಡಲು ಪ್ರಾರಂಭಿಸಿದ್ದಾರೆ. ನಂತರ ಸತೀಶ್ ಮನೆಗೆ ಬರಲು ಪ್ರಾರಂಭಿಸಿ, ಪಲ್ಲವಿ ಜೊತೆಗೆ ಏಕಾಂತದಲ್ಲಿ ಇರುತ್ತಿದ್ದ. ಇವರಿಬ್ಬರ ಅಕ್ರಮ ಸಂಬಂಧ ಶಶಿಕುಮಾರ್ ಗಮನಕ್ಕೆ ಬರುತ್ತಿದ್ದಂತೆ, ಅನೇಕ ಬಾರಿ ಎಚ್ಚರಿಕೆ ನೀಡಿದ್ದ.

    ಲೋಹಿತ್ ನಗರದ ಮನೆಯಲ್ಲಿ ಶುಕ್ರವಾರ ದಿನಗಳ ಹಿಂದೆ ದೇವರ ಕಾರ್ಯದ ಹಬ್ಬವನ್ನ ಮಾಡಿದ್ದಾರೆ. ಅಂದು ಸಂಜೆ ಪತ್ನಿ ಪಲ್ಲವಿ, ಸತೀಶ್ ಹಾಗೂ ಕುಟುಂಬಸ್ಥರ ಜೊತೆ ಪಾರ್ಟಿ ಮಾಡಿ, ಕುಣಿದು ಕುಪ್ಪಳಿಸಿದ್ದಾರೆ. ಅಂದು ರಾತ್ರಿ ಪಲ್ಲವಿ ಕರೆ ಮಾಡಿ ಪತಿ ಶಶಿಕುಮಾರ್ ಮೃತಪಟ್ಟಿರುವ ವಿಚಾರ ತಿಳಿಸಿದ್ದಾಳೆ.

    ಒಮ್ಮೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಅಂತ ಹೇಳಿದ್ದ ಪಲ್ಲವಿ, ಮತ್ತೊಮ್ಮೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದ್ವಂದ್ವ ಹೇಳಿಕೆ ನೀಡಿದ್ದಾಳೆ. ಅಷ್ಟೇ ಅಲ್ಲದೆ ಯಾವುದೇ ಪ್ರಕರಣ ದಾಖಲಿಸಿದಂತೆ ಹಾಗೂ ಶಶಿಕುಮಾರ್ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸದಂತೆ ಸೇರಿದ್ದ ಜನರಿಗೆ ಕೇಳಿಕೊಂಡಿದ್ದಾಳೆ. ಹೀಗಾಗಿ ಪಲ್ಲವಿ ಮಾತಿನಂತೆ ಶಶಿಕುಮಾರ್ ಅಂತ್ಯಕ್ರಿಯೆ ಮಾಡಲಾಗಿದೆ.

    ಪಲ್ಲವಿ ಹಾಗೂ ಸತೀಶ್ ಮೇಲೆ ಶಂಕೆ ವ್ಯಕ್ತಪಡಿಸಿರುವ ಶಶಿಕುಮಾರ್ ಕುಟುಂಬಸ್ಥರು ಈಗ ನೆಲಮಂಗಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಶಶಿಕುಮಾರ್ ಮೃತದೇಹವನ್ನು ಹೊರ ತೆಗೆದು, ಮರಣೋತ್ತರ ಪರೀಕ್ಷೆ ಒಳಪಡಿಸಿ, ತನಿಖೆ ನಡೆಸಬೇಕು ಎಂದು ಒತ್ತಾಯಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶೃಂಗೇರಿಯ ವಿವಾಹಿತ ಪ್ರೇಮಿಗಳು ಕುಂದಾಪುರದಲ್ಲಿ ಆತ್ಮಹತ್ಯೆ

    ಶೃಂಗೇರಿಯ ವಿವಾಹಿತ ಪ್ರೇಮಿಗಳು ಕುಂದಾಪುರದಲ್ಲಿ ಆತ್ಮಹತ್ಯೆ

    ಉಡುಪಿ: ಅಕ್ರಮ ಸಂಬಂಧ ಅಕ್ರಮವಲ್ಲ, ಅಪರಾಧವಲ್ಲ ಅಂತ ಬೆರಳೆಣಿಕೆ ದಿನಗಳ ಹಿಂದಷ್ಟೇ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ತೀರ್ಪು ಬಂದ ಎರಡು ದಿನಕ್ಕೆ ಶೃಂಗೇರಿಯ ವಿವಾಹಿತ ಪ್ರೇಮಿಗಳು ಉಡುಪಿಯ ಕುಂದಾಪುರದ ಲಾಡ್ಜ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಚಿಕ್ಕಮಗಳೂರು ಜಿಲ್ಲೆಯ ಸಿಂಧುವಳ್ಳಿ ಗ್ರಾಮದ ಗುರುಮೂರ್ತಿ (48) ಮತ್ತು ನೇತ್ರವಳ್ಳಿ ಗ್ರಾಮದ ಶಾರದಾ (30) ಆತ್ಮಹತ್ಯೆ ಮಾಡಿಕೊಂಡ ವಿವಾಹಿತ ಪ್ರೇಮಿಗಳು. ಘಟನಾ ಸ್ಥಳದಲ್ಲಿ ಶಾರದಾ ಬರೆದಿರುವ ಡೆತ್ ನೋಟ್ ಸಿಕ್ಕಿದ್ದು, ನಮ್ಮ ಸಾವಿಗೆ ನನ್ನ ಗಂಡ ರಮೇಶ ಕಾರಣ ಅಂತ ಬರೆದುಕೊಂಡಿದ್ದಾಳೆ. ಬೇಸಾಯ ಮಾಡುತ್ತಿದ್ದ ಗುರುಮೂರ್ತಿಗೆ ಪುತ್ರಿಯಿದ್ದಾಳೆ. ಅವರು ತನ್ನ ಪತ್ನಿ ಮತ್ತು ಪುತ್ರಿಯನ್ನು ತೊರೆದು ಶಾರದಾ ಜೊತೆಗೆ ಬಂದಿದ್ದ. ಶಾರದಾಗೂ ಪತಿ ಮತ್ತು ಒಬ್ಬಳು ಮಗಳು ಇದ್ದು ಅವರಿಬ್ಬರನ್ನು ಬಿಟ್ಟು ಬಂದಿದ್ದಳು.

    ನಡೆದದ್ದು ಏನು?
    ಸಪ್ಟೆಂಬರ್ 26ರಂದು ಶೃಂಗೇರಿಯ ಉಡುಪಿಯ ಕುಂದಾಪುರಕ್ಕೆ ಬಂದಿದ್ದ ಈ ಜೋಡಿ, ನಾಲ್ಕು ದಿನಕ್ಕಾಗಿ ಹರಿಪ್ರಸಾದ್ ಲಾಡ್ಜ್ ನಲ್ಲಿ ಕೊಠಡಿ ಪಡೆದಿತ್ತು. ಸುತ್ತಮುತ್ತ ಓಡಾಡಿಕೊಂಡು ಮತ್ತೆ ಬಂದು ಲಾಡ್ಜ್ ನಲ್ಲಿ ತಂಗುತ್ತಿದ್ದರು. ಆದರೆ ಕಳೆದ ರಾತ್ರಿಯಿಂದ ಕೊಠಡಿ ಬಂದ್ ಇತ್ತು. ಸಂಜೆಯವರೆಗೆ ಬಾಗಿಲು ತೆಗೆಯದ ಕಾರಣ ಲಾಡ್ಜ್ ಸಿಬ್ಬಂದಿ ಸಂಶಯ ವ್ಯಕ್ತಪಡಿಸಿ, ಬಾಗಿಲು ಒಡೆದಿದ್ದಾರೆ. ಈ ಸಂದರ್ಭ ಎರಡು ಮೃತದೇಹಗಳು ಕಂಡುಬಂದಿದೆ. ಗುರುಮೂರ್ತಿ ಮೃತದೇಹ ಬೆಡ್ ಮೇಲಿದ್ದರೆ, ಶಾರದಾ ದೇಹ ಕೆಳಗೆ ಮಲಗಿದ ಸ್ಥಿತಿಯಲ್ಲಿತ್ತು.

    ಮದ್ಯಕ್ಕೆ ಕೀಟನಾಶಕ ಬೆರೆಸಿ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಂದಾಪುರ ಪೊಲೀಸರು ಪ್ರಾಥಮಿಕ ಮಾಹಿತಿ ನೀಡಿದ್ದಾರೆ. ಕೊಠಡಿಯೊಳಗೆ ವಿಷದ ಬಾಟಲಿ ಮತ್ತು ಮದ್ಯದ ಬಾಟಲಿ ಸಿಕ್ಕಿದೆ. ಸ್ಥಳದಲ್ಲಿ ಶಾರದಾ ಬರೆದಿರುವ ಡೆತ್ ನೋಟ್ ಸಿಕ್ಕಿದೆ. ನಮ್ಮ ಸಾವಿಗೆ ನನ್ನ ಗಂಡ ರಮೇಶ ಕಾರಣ ಅಂತ ಬರೆದುಕೊಂಡಿದ್ದಾಳೆ.

    ಗುರುಮೂರ್ತಿ ಹಾಗೂ ಶಾರದಾ ಪ್ರೀತಿಗೆ, ಅಕ್ರಮ ಸಂಬಂಧಕ್ಕೆ ಶಾರದಾ ಗಂಡ ರಮೇಶ ತಡೆಯೊಡ್ಡಿದ್ದನಂತೆ. ಈ ಬಗ್ಗೆ ಸಾಕಷ್ಟು ಬಾರಿ ಗಲಾಟೆಯಾಗಿದೆ ಅಂತ ಮೃತರ ಸಂಬಂಧಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ. ರಮೇಶನ ವಿರುದ್ಧ ಕುಂದಾಪುರ ಪೊಲೀಸರು ಪ್ರಕರಣ ದಾಖಲಿಸಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 2ನೇ ಹೆಂಡತಿಯ ಕೊಲೆಗೈದು ರುಂಡದೊಂದಿಗೆ ಪೊಲೀಸರಿಗೆ ಶರಣಾದ ಪತಿ!

    2ನೇ ಹೆಂಡತಿಯ ಕೊಲೆಗೈದು ರುಂಡದೊಂದಿಗೆ ಪೊಲೀಸರಿಗೆ ಶರಣಾದ ಪತಿ!

    ಕೋಲಾರ: ಅಕ್ರಮ ಸಂಬಂಧ ಹಿನ್ನೆಲೆ ತನ್ನ ಎರಡನೇ ಹೆಂಡತಿಯ ತಲೆ ಕಡಿದು, ರುಂಡದೊಂದಿಗೆ ಪತಿ ಪೊಲೀಸರಿಗೆ ಶರಣಾಗಿರುವ ಘಟನೆ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದಲ್ಲಿ ನಡೆದಿದೆ.

    ಬೆಂಗಳೂರಿನ ನೀಲಸಂದ್ರ ನಿವಾಸಿ ರೋಷಿಣಿ ಖಾನಂ ಕೊಲೆಯಾದ ಪತ್ನಿಯಾಗಿದ್ದಾಳೆ. ಸುಮಾರು 27 ವರ್ಷದ ಸದ್ದಾಂ ಹುಸೇನ್ ಅಲಿಯಾಸ್ ಅಜೀಜ್ ಪೊಲೀಸರಿಗೆ ಶರಣಾದ ಪತಿ. ಮೂಲತಃ ಶ್ರೀನಿವಾಸಪುರ ಪಟ್ಟಣದ ಗಫರ್ ಖಾನ್ ಮೊಹಲ್ಲಾದ ನಿವಾಸಿಯಾಗಿರುವ ಅಜೀಜ್ ತನ್ನ 2ನೇ ಹೆಂಡತಿಯ ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

    ಅಕ್ರಮ ಸಂಬಂಧ ಹೊಂದಿದ್ದ ಪತ್ನಿಯನ್ನು ಮುಗಿಸಬೇಕೆಂದು ಮೊದಲೇ ಸಂಚು ರೂಪಿಸಿದ್ದ ಅಜೀಜ್, ಗುರುವಾರ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮುರುಗಮುಲ್ಲಕ್ಕೆ ಹೆಂಡತಿಯನ್ನು ಬೈಕಿನಲ್ಲಿ ಕರೆದುಕೊಂಡು ಬಂದಿದ್ದಾನೆ. ಬಳಿಕ ಪತ್ನಿ ರೋಷಿಣಿ ಖಾನಂಗೆ ಪ್ರಜ್ಞೆ ತಪ್ಪಿಸಿ ಬರ್ಬರವಾಗಿ ಕತ್ತು ಕೊಯ್ದು ಹತ್ಯೆ ಮಾಡಿದ್ದಾನೆ.

    ನಂತರ ಹೆಂಡತಿಯ ತಲೆಯನ್ನು ತೆಗೆದುಕೊಂಡು ಬಂದು ಶ್ರೀನಿವಾಸಪುರ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ. ಅಲ್ಲದೆ ಠಾಣೆಯಲ್ಲೇ ಪತ್ನಿಯ ರುಂಡವನ್ನು ಹಿಡಿದು ಕೊಂಡು ಚಿನ್ನಾ, ರನ್ನಾ ಎನ್ನುತ್ತಾ ಮುದ್ದಾಡಿದ್ದಾನೆ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು, ಕೃತ್ಯಕ್ಕೆ ಬಳಸಿದ್ದ ಕತ್ತಿ ಹಾಗೂ ಮಹಿಳೆಯ ರುಂಡವನ್ನು ವಶಪಡಿಸಿಕೊಂಡಿದ್ದಾರೆ.

    ಆರೋಪಿ ಅಜೀಜ್‍ನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಅಲ್ಲದೇ ಪ್ರಕರಣವು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ವ್ಯಾಪ್ತಿಯಲ್ಲಿ ಜರುಗಿದ್ದರಿಂದ ಪೊಲೀಸರು ಕೆಂಚಾರಲಹಳ್ಳಿ ಪೊಲೀಸ್ ಠಾಣೆಗೆ ಆರೋಪಿಯನ್ನು ಒಪ್ಪಿಸಿದ್ದಾರೆ. ಘಟನೆ ಸಂಬಂಧ ಕೆಂಚಾರಲಹಳ್ಳಿಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪದೇ ಪದೇ ದೈಹಿಕ ಸಂಪರ್ಕಕ್ಕೆ ಒತ್ತಾಯ -ಕೊಲೆಯಲ್ಲಿ ಅಂತ್ಯ

    ಪದೇ ಪದೇ ದೈಹಿಕ ಸಂಪರ್ಕಕ್ಕೆ ಒತ್ತಾಯ -ಕೊಲೆಯಲ್ಲಿ ಅಂತ್ಯ

    ಹಾವೇರಿ: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ವಿವಾಹಿತ ಮಹಿಳೆಯನ್ನ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಬ್ಯಾಡಗಿ ತಾಲೂಕಿನ ದುಮ್ಯಾಳ ಗ್ರಾಮದ ಬಳಿ ನಡೆದಿದೆ.

    ಮೃತಳನ್ನ 35 ವಯಸ್ಸಿನ ರಾಧಾ ಕಾಂಡೇಕರ್ ಎಂದು ಗುರುತಿಸಲಾಗಿದೆ. ಮೃತಳ ಪತಿ ಹಾಲು ಮಾರಾಟ ಮಾಡಲು ಹೋಗಿದ್ದ ವೇಳೆ ಅರುಣ ಎಂಬಾತ ರಾಧಾಳನ್ನ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

    ಮೃತ ರಾಧಾ ಮತ್ತು ಆರೋಪಿ ಅರುಣ ಇಬ್ಬರು ಅನೈತಿಕ ಸಂಬಂಧವನ್ನು ಹೊಂದಿದ್ದರು. ಆರೋಪಿ ಅರುಣ ಪದೇ ಪದೇ ಮೃತ ರಾಧಾಳನ್ನ ದೈಹಿಕ ಸಂಬಂಧಕ್ಕೆ ಕರೆಯುತ್ತಿದ್ದ ಎಂದು ತಿಳಿದು ಬಂದಿದೆ. ಅದೇ ರೀತಿ ಗುರುವಾರ ರಾತ್ರಿ ರಾಧಾಳನ್ನ ಆರೋಪಿ ಅರುಣ ದೈಹಿಕ ಸಂಪರ್ಕಕ್ಕೆ ಕರೆದಿದ್ದಾನೆ. ಆದರೆ ಇದಕ್ಕೆ ಮೃತ ರಾಧಾ ನಿರಾಕರಿಸಿದ್ದಾರೆ. ಇದರಿಂದ ಕೋಪಗೊಂಡು ಆಕೆಯ ಮನೆಯ ಸಮೀಪದಲ್ಲೇ ಕತ್ತು ಹಿಸುಗಿ ಹತ್ಯೆಗೈದು ಪರಾರಿಯಾಗಿದ್ದಾನೆ.

    ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಎಸ್‍ಪಿ ಕೆ.ಪರಶುರಾಮ ಮತ್ತು ಕಾಗಿನೆಲೆ ಠಾಣೆ ಪೊಲೀಸರು ಭೇಟಿ ನೀಡಿ ಆರೋಪಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಸಂಬಂಧ ಕಾಗಿನೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ರೆಡ್ ಹ್ಯಾಂಡಾಗಿ ಸಿಕ್ಕ ಪತ್ನಿ, ಪ್ರಿಯಕರನನ್ನು ರೂಮಿನಲ್ಲಿ ಕೂಡಿಟ್ಟು ಗೂಸಾ ಕೊಟ್ಟ ಪತಿ!

    ರೆಡ್ ಹ್ಯಾಂಡಾಗಿ ಸಿಕ್ಕ ಪತ್ನಿ, ಪ್ರಿಯಕರನನ್ನು ರೂಮಿನಲ್ಲಿ ಕೂಡಿಟ್ಟು ಗೂಸಾ ಕೊಟ್ಟ ಪತಿ!

    ದಾವಣಗೆರೆ: ಪತ್ನಿಯ ಅಕ್ರಮ ಸಂಬಂಧ ಪತ್ತೆ ಹಚ್ಚಿ ಪ್ರಿಯಕರನ ಜೊತೆ ತನ್ನ ಪತ್ನಿ ರಾಸಲೀಲೆ ನಡೆಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಹಿಡಿದು ಸರಿಯಾಗಿ ಗೂಸ ಕೊಟ್ಟಂತಹ ಘಟನೆ ದಾವಣಗೆರೆಯ ಡಾಂಘೇ ಪಾರ್ಕ್ ಎದುರು ಇರುವ ಭಗತ್ ಸಿಂಗ್ ನಗರದಲ್ಲಿ ನಡೆದಿದೆ.

    ಗಿರೀಶ್ ಹಾಗೂ ಪೂರ್ಣಿಮಾ ಕಳೆದ ಹತ್ತು ವರ್ಷಗಳ ಹಿಂದೆ ಮದುವೆಯಾಗಿದ್ದರು. ಗಿರೀಶ್ ಫ್ಯಾನ್ಸಿ ಸ್ಟೋರ್ ನಡೆಸುತ್ತಿದ್ದರೆ, ಹೆಂಡತಿ ಪೂರ್ಣಿಮಾ ಹರ್ಬಲ್ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದಳು. ಆದರೆ ತನ್ನ ಪತ್ನಿಯ ಅಕ್ರಮ ಸಂಬಂಧ ಬಗ್ಗೆ ಅನುಮಾನವಿದ್ದ ಹಿನ್ನೆಲೆ ತನ್ನ ಪತ್ನಿ ಪ್ರಿಯಕರನ ಜೊತೆ ಇದ್ದ ಸಂದರ್ಭದಲ್ಲಿ ಮನೆಗೆ ಹಾಜರ್ ಆಗಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾನೆ.

    ಪತ್ನಿ ಪೂರ್ಣಿಮಾಳನ್ನು ಹಾಗೂ ಆಕೆಯ ಪ್ರಿಯಕರ ಹನುಮಂತನನ್ನು ರೂಮಿನ ಬಾಗಿಲಿಗೆ ಬೀಗ ಹಾಕಿ ರಾದ್ದಾಂತ ಮಾಡಿದ್ದಾನೆ. ಪೊಲೀಸರನ್ನು ಕರೆ ತಂದು ಪೊಲೀಸರ ಎದುರಿಗೆ ಸರಿಯಾಗಿ ಗೂಸ ಕೊಟ್ಟಿದ್ದಾನೆ. ಪ್ರ್ರಿಯಕರ ಹನುಮಂತ ಪೇಂಟಿಂಗ್ ಕೆಲಸ ಮಾಡುತ್ತಿದ್ದು, ಹಲವು ದಿನಗಳಿಂದ ಪೂರ್ಣಿಮ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡು ಮನೆಯಲ್ಲಿ ಯಾರು ಇಲ್ಲದ ವೇಳೆ ಹೋಗುತ್ತಿದ್ದ.

    ಹಲವು ದಿನಗಳಿಂದ ಗಿರೀಶ್ ತನ್ನ ಪತ್ನಿ ಪೂರ್ಣಿಮಾ ಅಕ್ರಮ ಸಂಬಂಧ ಬಗ್ಗೆ ಗಲಾಟೆ ನಡೆಯುತ್ತಿತ್ತು. ಸದ್ಯ ಇಬ್ಬರು ಮನೆಯಲ್ಲಿದ್ದಾಗ ಗಿರೀಶ್ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾನೆ. ಸ್ಥಳಕ್ಕೆ ಕೆಟಿಜೆ ನಗರ ಪೊಲೀಸರು ಭೇಟಿ ನೀಡಿ ಠಾಣೆಗೆ ಕರೆದೊಯ್ದು ಇಬ್ಬರ ಹೇಳಿಕೆ ದಾಖಲಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪ್ರೇಯಸಿಯ ಮುಂದೆಯೇ ಪ್ರಿಯಕರನ ಕೈ ಕಟ್ ಪ್ರಕರಣಕ್ಕೆ ಟ್ವಿಸ್ಟ್

    ಪ್ರೇಯಸಿಯ ಮುಂದೆಯೇ ಪ್ರಿಯಕರನ ಕೈ ಕಟ್ ಪ್ರಕರಣಕ್ಕೆ ಟ್ವಿಸ್ಟ್

    – ಪ್ರಿಯತಮೆಯಿಂದಲೇ ಸುಫಾರಿ

    ಬೆಂಗಳೂರು: ಬನ್ನೇರುಘಟಕ್ಕೆ ಬಂದಿದ್ದ ಪ್ರೇಮಿಗಳ ಮೇಲೆ ದಾಳಿ ಮಾಡಿ ಪ್ರಿಯಕರನ ಕೈ ಕಟ್ ಮಾಡಿಕೊಂಡು ಹೋಗಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಆತನ ಜೊತೆಗೆ ಬಂದಿದ್ದ ಪ್ರೇಯಸಿಯೇ ಸುಫಾರಿ ಕೊಟ್ಟಿದ್ದಾಳೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ. ಈಗ ಕೈ ಕಟ್ ಮಾಡಿದ್ದ ಆರೋಪಿಯ ಕಾಲಿಗೆ ಪೊಲೀಸರು ಗುಂಡು ಹೊಡೆದಿದ್ದಾರೆ.

    ಶರವಣ ಕುಮಾರ್  ಅಲಿಯಾಸ್ @ಮೆಂಟಲ್ ವಿಜಿ ಗುಂಟೇಟು ತಿಂದ ಆರೋಪಿ. ಚಿತ್ರದುರ್ಗ ಮೂಲದ ರವೀಶ್ (23) ಕೈ ಕಳೆದುಕೊಂಡಿದ್ದ ಪ್ರೇಮಿ. ಶರವಣ ಗುರುವಾರ ಬನ್ನೇರುಘಟ್ಟದಲ್ಲಿ ನಡೆದಿದ್ದ ಕೈ ಕಟ್ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಈತ ಬನ್ನೇರುಘಟ್ಟ ಅಭಯಾರಣ್ಯದ ಕಗ್ಗಲಿಪುರ ವಲಯದಲ್ಲಿ ಅಡಗಿದ್ದನು. ಆರೋಪಿಯನ್ನು ಶನಿವಾರ ಸಂಜೆ ಬಂಧಿಸಲಾಗಿತ್ತು. ಆದರೆ ಪೊಲೀಸರು ಸ್ಥಳ ಮಹಜರ್ ಗೆಂದು ಕರೆದುಕೊಂಡು ಹೋಗುವಾಗ ತಪ್ಪಿಸಿಕೊಳ್ಳಲು ಪೇದೆ ಸಿದ್ದಲಿಂಗಯ್ಯ ಮೇಲೆ ಹಲ್ಲೆ ನಡೆಸಿ ಕುತ್ತಿಗೆಗೆ ಚೈನಿನಿಂದ ಬಿಗಿದು ಕೊಲೆ ಮಾಡಲು ಯತ್ನಿಸಿದ್ದನು.

    ಈ ಸಮಯದಲ್ಲಿ ಪೊಲೀಸರು ಆತನಿಗೆ ಎಚ್ಚರಿಕೆ ನೀಡಿದರೂ ಲೆಕ್ಕಿಸದೇ ಪೇದೆ ಮೇಲೆ ಹಲ್ಲೆ ಮುಂದುವರಿಸಿದ್ದನು. ಬಳಿಕ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ್ದರು. ಆದರು ಭಯ ಬೀಳದ ವಿಜಿ ಮತ್ತಷ್ಟು ಹಲ್ಲೆ ನಡೆಸುತ್ತಿದ್ದನು. ಕೊನೆಗೆ ದಾರಿ ಕಾಣದೆ ಡಿವೈಎಸ್‍ಪಿ ಮತ್ತು ಎಸ್.ಕೆ.ಉಮೇಶ್ ಪೊಲೀಸರು ವಿಜಿಯ ಎಡಗಾಲಿಗೆ ಗುಂಡು ಹೊಡೆದು ಪೇದೆಯನ್ನು ರಕ್ಷಿಸಿದ್ದಾರೆ.

    ವಿ.ವಿ.ಪುರಂ ಠಾಣೆಯ ಪೇದೆ ಜಯಲಕ್ಷ್ಮಿಯೇ ಒಂದು ಲಕ್ಷ ರೂಪಾಯಿಗೆ ಸುಪಾರಿ ನೀಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಪೇದೆ ಜಯಲಕ್ಷ್ಮಿ ಮದುವೆಯಾಗಿದ್ದು, ರವೀಶ್ ಜೊತೆ ಅನೈತಿಕ ಸಂಬಂಧವಿಟ್ಟುಕೊಂಡಿದ್ದಳು. ಆದರೆ ರವೀಶ್ ಜಯಲಕ್ಷ್ಮಿಯ ಜೊತೆಗಿನ ಅನೈತಿಕ ಸಂಬಂಧದ ವಿಡಿಯೋಗಳನ್ನು ಇಟ್ಟುಕೊಂಡು ಪತಿ ರಾಘವೇಂದ್ರನಿಗೆ ವಿಚ್ಛೇದನ ನೀಡುವಂತೆ ಒತ್ತಡ ಹಾಕುವ ಮೂಲಕ ಹಿಂಸೆ ನೀಡುತ್ತಿದ್ದನಂತೆ. ಇವನ ವಿಕೃತವನ್ನು ಸಹಿಸದೇ ಕೊನೆಗೆ ಜಯಲಕ್ಷ್ಮಿಯೇ ವಿಜಿಗೆ ಒಂದು ಲಕ್ಷ ರೂ.ಗೆ ಸುಪಾರಿಕೊಟ್ಟು ಕೈ ಕತ್ತರಿಸಲು ತಿಳಿಸಿದ್ದಳು ಎಂದು ತನಿಖೆಯಲ್ಲಿ ಒಪ್ಪಿಕೊಂಡಿದ್ದಾಳೆ.

    ಈ ಕುರಿತು ಬನ್ನೇರುಘಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಪೊಲೀಸರು ತನಿಖೆ ನಡೆಸಿ ಈ ಪ್ರಕರಣವನ್ನು ಬೇಧಿಸಿದ್ದಾರೆ. ಈಗ ಪೇದೆ ಮತ್ತು ಸುಫಾರಿ ಪಡೆದ ವಿಜಿ ಅಲಿಯಾಸ್ ಮೆಂಟಲ್ ಕೂಡ ಜೈಲು ಪಾಲಾಗುತ್ತಿದ್ದಾನೆ.

    ಅಂದು ನಡೆದಿದ್ದೇನು?
    ಸೆಪ್ಟೆಂಬರ್ 11 ಮಂಗಳವಾರ ರವೀಶ್ ಮತ್ತು ಪ್ರೇಯಸಿ ಇಬ್ಬರು ಸೇರಿ ಬನ್ನೇರುಘಟ್ಟದ ಚಂಪಕಧಾಮ ಸ್ವಾಮಿ ದೇವಾಲಯದ ಹಿಂಭಾಗದಿಂದ ಸುವರ್ಣಮುಖಿ ಆಂಜನೇಯ ದೇವಸ್ಥಾನಕ್ಕೆ ಹೋಗುತ್ತಿದ್ದರು. ಅಲ್ಲಿಗೆ ಅರಣ್ಯ ಪ್ರದೇಶದ 3 ಕಿ.ಮೀ. ಕಾಲು ದಾರಿಯ ಮೂಲಕವೇ ಹೋಗಬೇಕು. ಈ ವೇಳೆ ದಾರಿ ಮಧ್ಯದಲ್ಲಿಯೇ ಕೆಲ ದುಷ್ಕರ್ಮಿಗಳು ಲಾಂಗು ಹಾಗೂ ಮಚ್ಚು ಬಳಸಿ, ಯುವಕನ ಬಲಭಾಗದ ಮುಂಗೈ ಕತ್ತರಿಸಿದ್ದಾರೆ. ಇಷ್ಟಕ್ಕೂ ಸುಮ್ಮನಾಗದೇ ವಿಕೃತಿ ಮೆರೆದ ದುಷ್ಕರ್ಮಿಗಳು ಕತ್ತರಿಸಿ ಕೈಯನ್ನು ಕೊಂಡೊಯ್ದಿದ್ದರು.

    ಕೈ ಕಳೆದುಕೊಂಡು ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಪ್ರಿಯಕರನನ್ನು ಕಾಪಾಡಿ ಎಂದು ಯುವತಿ ಸ್ಥಳೀಯರಲ್ಲಿ ಕೇಳಿಕೊಂಡಿದ್ದಳು. ಬಳಿಕ ಸ್ಥಳೀಯರ ಸಹಾಯದಿಂದ ರವೀಶ್ ನನ್ನು ಬನ್ನೇರುಘಟ್ಟ ರಸ್ತೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅತಿಯಾದ ರಕ್ತಸ್ರಾವದಿಂದ ಬಳಲುತ್ತಿದ್ದ ರವೀಶ್ ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ಮಾಡಿಸಲಾಗಿದೆ. ಸದ್ಯ ರವೀಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 8 ಮಕ್ಕಳಿದ್ದರೂ ಸ್ನೇಹಿತನ ಪತ್ನಿಯ ಜೊತೆ ಲವ್ವಿಡವ್ವಿ-ಲವರ್ ಜೊತೆ ಸೇರಿ ಗಂಡನನ್ನೇ ಕೊಂದ ಪತ್ನಿ

    8 ಮಕ್ಕಳಿದ್ದರೂ ಸ್ನೇಹಿತನ ಪತ್ನಿಯ ಜೊತೆ ಲವ್ವಿಡವ್ವಿ-ಲವರ್ ಜೊತೆ ಸೇರಿ ಗಂಡನನ್ನೇ ಕೊಂದ ಪತ್ನಿ

    ಬಳ್ಳಾರಿ: ವ್ಯಕ್ತಿಯೊಬ್ಬ ತನ್ನ ಸ್ನೇಹಿತನ ಪತ್ನಿಯನ್ನು ಪ್ರೀತಿಸಿ ಕೊನೆಗೆ ಪ್ರೇಯಸಿಯ ಜೊತೆಗೂಡಿ ಆಪ್ತಮಿತ್ರನನ್ನೆ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಖಾನಾಹೊಸಹಳ್ಳಿಯಲ್ಲಿ ನಡೆದಿದೆ.

    ಮಹ್ಮದ್ ಫಯಾಜ್ ಕೊಲೆಯಾದ ದುರ್ದೈವಿ. ಪತ್ನಿ ಫಮೀದಾ ಹಾಗೂ ಆಪ್ತಮಿತ್ರ ನೂರೂಲ್ಲಾ ಇಬ್ಬರು ಸೇರಿ ಫಯಾಜ್ ನನ್ನು ಕೊಲೆ ಮಾಡಿದ್ದಾರೆ. ಪತಿಯನ್ನು ಕೊಲೆಗೈದು ಕಾರಿನಲ್ಲಿ ಮದ್ಯದ ಬಾಟಲಿ, ಸ್ತ್ರೀಯರ ಒಳ ಉಡುಪು ಮತ್ತು ಚಪ್ಪಲಿಗಳನ್ನಿಟ್ಟು ಪೊಲೀಸರ ದಿಕ್ಕು ತಪ್ಪಿಸಲು ಮುಂದಾಗಿದ್ದರು. ಆದರೆ ಇದೀಗ ಅವರಿಬ್ಬರು ಪೊಲೀಸರ ಅತಿಥಿಯಾಗಿದ್ದಾರೆ.

    ಕೊಲೆಯಾದ ಮಹ್ಮದ್ ಫಯಾಜ್ ಹಾಗೂ ಫಮೀದಾ ಮದುವೆಯಾಗಿ 12 ವರ್ಷಗಳಾಗಿದ್ದು, ಇಬ್ಬರು ಮಕ್ಕಳು ಕೂಡ ಇದ್ದರು. ಮಹ್ಮದ್ ಫಯಾಜ್ ಆರೋಪಿ ನೂರೂಲ್ಲಾ ಆಪ್ತ ಸ್ನೇಹಿತರಾಗಿದ್ದರು. ನೂರೂಲ್ಲಾ ಸ್ನೇಹಿತನ ಮನೆ ಹಾಗೂ ಫಮೀದಾ ನಡೆಸುತ್ತಿದ್ದ ಕಿರಾಣಿ ಅಂಗಡಿಗೆ ಬಂದು ಹೋಗುತ್ತಿದ್ದನು. ನೂರೂಲ್ಲಾ ಆಪ್ತಮಿತ್ರನ ಪತ್ನಿಯೊಂದಿಗೆ ಕಳೆದ 2 ವರ್ಷಗಳಿಂದ ಅನೈತಿಕ ಸಂಬಂಧ ಹೊಂದಿದ್ದನು. ನೂರೂಲ್ಲಾ ಲೈನ್‍ಮ್ಯಾನ್ ಕೆಲಸ ಮಾಡುತ್ತಿದ್ದು, ಮದುವೆಯಾಗಿ 8 ಮಕ್ಕಳಿದ್ದರು ಸ್ನೇಹಿತನ ಪತ್ನಿಯ ಅನೈತಿಕ ಸಂಬಂಧ ಇಟ್ಟುಕೊಂಡಿದ್ದನು.

    ಫಮೀದಾಳ ಅನೈತಿಕ ಸಂಬಂಧದ ಬಗ್ಗೆ ಮಹಮ್ಮದ್ ಫಯಾಜ್‍ಗೆ ಗೊತ್ತಾಗುತ್ತಿದ್ದಂತೆ, ಇಬ್ಬರು ಸೇರಿ ಫಯಾಜ್‍ನನ್ನ ನೀರಿನಲ್ಲಿ ನಿದ್ರೆ ಮಾತ್ರೆ ಹಾಕಿ ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದಾರೆ. ನಂತರ ಹೊಸಪೇಟೆ- ಬೆಂಗಳೂರು ಹೆದ್ದಾರಿ ಮಧ್ಯೆ ಕಾರನ್ನ ನಿಲ್ಲಿಸಿ ಯಾರೋ ಕೊಲೆ ಮಾಡಿದ್ದಾರೆ ಅನ್ನೋ ರೀತಿ ಬಿಂಬಿಸಲು ಹೋಗಿದ್ದಾರೆ. ಆದರೆ ಫಯಾಜ್ ಪತ್ನಿ ಫಮೀದಾಳ ಪ್ಲಾನ್ ಪೊಲೀಸರ ತನಿಖೆಯಿಂದ ಬಯಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅರುಣ ರಂಗರಾಜನ್ ಹೇಳಿದ್ದಾರೆ.

    ಈ ಪ್ರಕರಣದ ಬಗ್ಗೆ ಕೂಟ್ಟೂರು ಸಿಪಿಐ ರವೀಂದ್ರ ಕುರಬಗಟ್ಟಿ ನೇತೃತ್ವದ ತಂಡ ತನಿಖೆ ನಡೆಸುತ್ತಿದ್ದಂತೆ ಲೈನಮ್ಯಾನ್ ಹಾಗೂ ಫಮಿದಾರ ಅಕ್ರಮ ಸಂಬಂಧದಿಂದ ಕೊಲೆಯಾಗಿರುವುದು ಇದೀಗ ಬೆಳಕಿಗೆ ಬಂದಿದೆ. ಹೀಗಾಗಿ ಖಾನಾಹೊಸಹಳ್ಳಿ ಪೊಲೀಸರು ಆರೋಪಿಗಳಿಬ್ಬರನ್ನೂ ಬಂಧಿಸಿ ಕಂಬಿ ಹಿಂದೆ ಕಳುಹಿಸುವಲ್ಲಿ ಯಶ್ವಸಿಯಾಗಿದ್ದಾರೆ. ಅಲ್ಲದೇ ಪೊಲೀಸರ ದಿಕ್ಕನ್ನೆ ತಪ್ಪಿಸಲು ಮುಂದಾಗಿದ್ದ ಆರೋಪಿ ಪ್ರಕರಣವನ್ನ ಮೂರೇ ದಿನದಲ್ಲಿ ಕೊಟ್ಟೂರು ಪೊಲೀಸರು ಬೇಧಿಸಿರುವುದು ನಿಜಕ್ಕೂ ವಿಶೇಷವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅನೈತಿಕ ಸಂಬಂಧ ನೋಡಿದ ಅಪ್ರಾಪ್ತೆ – ಪ್ರಿಯಕರನೊಂದಿಗೆ ಸೆಕ್ಸ್ ಮಾಡುವಂತೆ ತಾಯಿ ಒತ್ತಾಯ

    ಅನೈತಿಕ ಸಂಬಂಧ ನೋಡಿದ ಅಪ್ರಾಪ್ತೆ – ಪ್ರಿಯಕರನೊಂದಿಗೆ ಸೆಕ್ಸ್ ಮಾಡುವಂತೆ ತಾಯಿ ಒತ್ತಾಯ

    ಭುವನೇಶ್ವರ: ತಾಯಿಯೊಬ್ಬಳು ತಾನು ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯಿಂದಲೇ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಮಾಡಿಸಿರುವ ಅಮಾನವೀಯ ಘಟನೆ ಒಡಿಶಾದ ಬಾಲಸೋರ್ ನಲ್ಲಿ ನಡೆದಿದೆ.

    17 ವರ್ಷದ ಅಪ್ರಾಪ್ತ ಸದರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಎಫ್‍ಐಆರ್ ದಾಖಲಾಗಿದೆ. ತನ್ನ ತಾಯಿಯೊಂದಿಗಿನ ಅಕ್ರಮ ಸಂಬಂಧವನ್ನು ವಿರೋಧಿಸಿದಕ್ಕೆ 60 ವರ್ಷದ ವ್ಯಕ್ತಿ ಸುಮಾರು ಐದು ಬಾರಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾಳೆ.

    ಏನಿದು ಪ್ರಕರಣ?
    ಪಟ್ಟಣ ಹೊರವಲಯದಲ್ಲಿರುವ ಕುರುಡದಲ್ಲಿ ನಾವು ವಾಸಿಸುತ್ತಿದ್ದೆವು. ನಾನು ಮನೆಗೆ ಬಂದಾಗ ತನ್ನ ತಾಯಿ ಬೇರೆ ವ್ಯಕ್ತಿಯ ಜೊತೆ ಅಕ್ರಮ ಸಂಬಂಧ ಹೊಂದಿರುವ ಬಗ್ಗೆ ತಿಳಿಯಿತು. ಬಳಿಕ ನಾನು ಅವರ ಸಂಬಂಧವನ್ನು ವಿರೋಧಿಸಿದೆ. ಆಗ ನನ್ನ ತಾಯಿ ಆತನೊಂದಿಗೆ ಸೆಕ್ಸ್ ಮಾಡುವಂತೆ ಒತ್ತಾಯಿಸಿದಳು. ಬಳಿಕ ಆತ ನನ್ನ ಮೇಲೆ ಪದೇ ಪದೇ ಅತ್ಯಾಚಾರ ಮಾಡಿದ್ದಾನೆ ಎಂದು ದೂರಿಯಲ್ಲಿ ಸಂತ್ರಸ್ತೆ ಉಲ್ಲೇಖಿಸಿದ್ದಾಳೆ.

    ಸಂತ್ರಸ್ತೆ ಎಫ್‍ಐಆರ್ ದಾಖಲಿಸುತ್ತಿದ್ದಂತೆ ಆರೋಪಿ ತಾಯಿ ತನ್ನ ಮಗಳು ಮಾಡಿದ ಆರೋಪವನ್ನು ತಳ್ಳಿ ಹಾಕಿದ್ದಾಳೆ. ಅಷ್ಟೇ ಅಲ್ಲದೇ ಆಕೆಗೆ ಕಾಯಿಲೆ ಇದೆ, ದೀರ್ಘಕಾಲದಿಂದ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ಆರೋಪಿಸಿದ್ದಾಳೆ.

    ಆರೋಪಿ ಮಹಿಳೆ ಪತಿಯಿಂದ ದೂರವಿದ್ದು, ಮೂರು ಮಕ್ಕಳಿದ್ದಾರೆ. ಸ್ಥಳೀಯ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಸದ್ಯಕ್ಕೆ ಈ ಬಗ್ಗೆ ದೂರು ದಾಖಲಾಗಿದ್ದು, ಆರೋಪಿಗಳ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ತನಿಖೆ ಬಳಿಕ ಸತ್ಯಾಸತ್ಯತೆ ತಿಳಿದು ಬರುತ್ತದೆ ಎಂದು ಸದಾರ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹೆಂಡತಿ ತಲೆ ಕಡಿದು ಸ್ಟೇಷನ್‍ಗೆ ತಂದ ಭೂಪ

    ಹೆಂಡತಿ ತಲೆ ಕಡಿದು ಸ್ಟೇಷನ್‍ಗೆ ತಂದ ಭೂಪ

    -ತಲೆಯೊಂದಿಗೆ ಬಸ್ಸಿನಲ್ಲಿ 20 ಕಿ.ಮೀ ಪ್ರಯಾಣಿಸಿದ ಪತಿ

    ಚಿಕ್ಕಮಗಳೂರು: ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಕೊಲೆ ಮಾಡಿ, ಆಕೆಯ ತಲೆಯನ್ನು ಪೊಲೀಸ್ ಠಾಣೆಗೆ ತಂದಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ನಡೆದಿದೆ.

    ಈ ಘಟನೆ ಅಜ್ಜಂಪುರ ಹೋಬಳಿಯ ಶಿವನಿ ರೈಲ್ವೆ ಸ್ಟೇಷನ್ ಬಳಿ ನಡೆದಿದೆ. ರೂಪ (30) ಕೊಲೆಯಾದ ಹೆಂಡತಿ. ಪತಿ ಸತೀಶ್ ಅಕ್ರಮ ಸಂಬಂಧದ ಶಂಕೆ ಹಿನ್ನೆಲೆಯಲ್ಲಿ ಪತ್ನಿಯನ್ನ ಕೊಲೆ ಮಾಡಿ ತಲೆಯನ್ನು ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.

    ಸತೀಶ್ ಮತ್ತು ರೂಪ ಐದು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಆದರೆ ರೂಪ ಅದೇ ಗ್ರಾಮದಲ್ಲಿ ಸುನೀಲ್ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಸತೀಶ್ ಅನುಮಾನ ಪಟ್ಟಿದ್ದನು. ಆದರೆ ಭಾನುವಾರ ಇಬ್ಬರು ಒಟ್ಟಿಗೆ ಇದ್ದರು ಎಂದು ಶಂಕಿಸಿ ಕೋಪಗೊಂಡು ಆಕ್ರೋಶದಿಂದ ಕತ್ತಿಯಿಂದ ಹೆಂಡತಿಯ ತಲೆ ಕತ್ತರಿಸಿದ್ದಾನೆ.

    ಈ ವೇಳೆ ಸುನೀಲ್ ತಪ್ಪಿಕೊಂಡಿದ್ದಾನೆ. ಬಳಿಕ ಸತೀಶ್ ತಲೆಯನ್ನು ಬ್ಯಾಗಿನಲ್ಲಿಟ್ಟುಕೊಂಡು ಸುಮಾರು 20 ಕಿ.ಮೀ. ವರೆಗೂ ಬಸ್ ಸಂಚಾರ ಮಾಡಿ ಶಿವನಿ ರೈಲ್ವೆ ಸ್ಟೇಷನ್‍ನಿಂದ ಅಜ್ಜಂಪುರ ಠಾಣೆಗೆ ಬಂದಿದ್ದು, ಕತ್ತಿ ಹಾಗೂ ತಲೆ ಎರಡನ್ನೂ ಪೊಲೀಸ್ ಠಾಣೆಗೆ ತಂದು  ಸತೀಶ್ ಸರೆಂಡರ್ ಆಗಿದ್ದಾನೆ.

    ಅಷ್ಟೇ ಅಲ್ಲದೇ ನನಗೆ ಯಾವ ಶಿಕ್ಷೆ ಕೊಡಬೇಕೋ ಕೊಡಿ, ಆದರೆ ಜೈಲಿನಿಂದ ಬಿಡುಗಡೆಯಾದ ನಂತರ ಆತನನ್ನು ಹುಡುಕಿ ಬಂದು ಕೊಲೆ ಮಾಡಿ ಮತ್ತೆ ಬರುತ್ತೇನೆ ಎಂದು ಹೇಳಿದ್ದಾನೆ ಅಂತ ಪೊಲೀಸರು ತಿಳಿಸಿದ್ದಾರೆ.

    ಈ ಸಂಬಂಧ ಅಜ್ಜಂಪುರ ಪೊಲೀಸ್ ಠಾಣೆಯಲ್ಲ ಎಫ್‍ಐಆರ್ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗಂಡನ ಅನೈತಿಕ ಸಂಬಂಧಕ್ಕೆ ಬೇಸತ್ತು ಡೆತ್ ನೋಟ್ ಬರೆದಿಟ್ಟು ಶಿಕ್ಷಕಿ ಆತ್ಮಹತ್ಯೆ!

    ಗಂಡನ ಅನೈತಿಕ ಸಂಬಂಧಕ್ಕೆ ಬೇಸತ್ತು ಡೆತ್ ನೋಟ್ ಬರೆದಿಟ್ಟು ಶಿಕ್ಷಕಿ ಆತ್ಮಹತ್ಯೆ!

    ಬೆಂಗಳೂರು: ಗಂಡನ ಅನೈತಿಕ ಸಂಬಂಧಕ್ಕೆ ಬೇಸತ್ತು ಶಿಕ್ಷಕಿಯೊಬ್ಬರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜೆ ಪಿ ನಗರದ ಶಾಕಾಂಬರಿನಗರದಲ್ಲಿ ನಡೆದಿದೆ.

    ಕಳೆದ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದು, ದೇವಿಕಾ(32) ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕಿ. ಬನಶಂಕರಿಯಲ್ಲಿರುವ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದು, ಗಂಡ ಸುನೀಲ್ ಕುಮಾರ್ (38)ಕೂಡ ಅದೇ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಈ ವೇಳೆ ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. ಈ ನಡುವೆ ಗಂಡ ಬೇರೊಬ್ಬರ ಜೊತೆ ಅಕ್ರಮ ಸಂಬಂಧ ಬೆಳೆಸಿದ್ದನು. ಈ ಬಗ್ಗೆ ದೇವಿಕಾ ಪ್ರಶ್ನಿಸಿ ಜಗಳ ಮಾಡಿದ್ದರು. ಆದರೆ ಕಳೆದ ರಾತ್ರಿ 12 ಗಂಟೆ ಸುಮಾರಿಗೆ ತನ್ನ ಸಾವಿಗೆ ಗಂಡನೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.

    ಸದ್ಯ ಕಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗಾಗಿ ದೇವಿಕಾ ಮೃತದೇಹ ರವಾನೆ ಮಾಡಲಾಗಿದ್ದು, ಘಟನೆಗೆ ಸಂಬಂಧಪಟ್ಟಂತೆ ಜೆಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv