Tag: ಅಕ್ರಮ ಸಂಬಂಧ

  • ಅಕ್ರಮ ಸಂಬಂಧಕ್ಕೆ ಅಡ್ಡಿಯಾದವನ ಮಗಳನ್ನು ತುಂಡು ತುಂಡಾಗಿ ಕತ್ತರಿಸಿದ

    ಅಕ್ರಮ ಸಂಬಂಧಕ್ಕೆ ಅಡ್ಡಿಯಾದವನ ಮಗಳನ್ನು ತುಂಡು ತುಂಡಾಗಿ ಕತ್ತರಿಸಿದ

    – ಬಾಲಕಿಯ ಕುಟುಂಬಸ್ಥರಿಂದ ಆರೋಪ

    ಕಲಬುರಗಿ: ಜಿಲ್ಲೆಯ ಹಾವನೂರ ಗ್ರಾಮದ ಐದು ವರ್ಷದ ಬಾಲಕಿ ಶ್ವೇತಾ ಕೊಲೆ ಪ್ರಕರಣ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆಯುತ್ತಿದೆ.

    ಡಿಸೆಂಬರ್ 5 ರಂದು ಬಾಲಕಿ ನಾಪತ್ತೆಯಾಗಿ ಇಂದು ಬೆಳಗ್ಗೆ ಗ್ರಾಮದ ಬಳಿಯ ಹಳ್ಳದ ಬಳಿ ಬಾಲಕಿಯ ಶವ ತಂಡು ತುಂಡಾಗಿ ಪತ್ತೆಯಾಗಿದೆ. ಆದರೆ ಈ ಮಗು ನಿನ್ನೆ ಹುಣ್ಣಿಮೆ ನಿಮಿತ್ಯ ನಿಧಿ ಆಸೆಗೆ ಬಲಿಯಾಗಿದೆ ಎಂದು ಕೆಲ ಊರಿನ ಗ್ರಾಮಸ್ಥರು ಸಂಶಯಪಟ್ಟಿದ್ದಾರೆ.

    ಇನ್ನು ಕೆಲವರು ಇತ್ತೀಚೆಗೆ ಬಾಲಕಿಯ ತಂದೆ ಲಿಂಗಪ್ಪ ಅವರಿಗೆ ಗ್ರಾಮದ ಮುಕುಂದಪ್ಪ ಎಂಬವನ ಅನೈತಿಕ ಸಂಬಂಧ ವಿಚಾರ ಗೊತ್ತಾಗಿತ್ತು. ತನ್ನ ಸಂಬಂಧಿ ಜೊತೆ ಅನೈತಿಕ ಸಂಬಂಧ ಬೆಳೆದಿದ್ದನ್ನು ಲಿಂಗಪ್ಪ ಸೆರೆ ಹಿಡಿದು ಮುಂಕುದಪ್ಪನಿಗೆ ಧರ್ಮದೇಟು ನೀಡಿದ್ದರಂತೆ.

    ಈ ದ್ವೇಷಕ್ಕಾಗಿ ಬಾಲಕಿಯನ್ನು ಮುಕುಂದಪ್ಪ ಅಪಹರಿಸಿ ಕೊಲೆ ಮಾಡಿರಬಹುದು ಎಂಬ ಸಂಶಯ ಕುಟುಂಬಸ್ಥರು ವ್ಯಕ್ತಪಡಿಸುತ್ತಿದ್ದಾರೆ. ಪ್ರಕರಣ ಸಂಬಂಧ ದೂರು ದಾಖಲಿಸಿಕೊಂಡ ಪೊಲೀಸರು ಕೊಲೆಗೆ ನಿಖರ ಕಾರಣ ಈಗಲೇ ಹೇಳಲು ಸಾಧ್ಯವಿಲ್ಲ. ಶೀಘ್ರದಲ್ಲಿ ಆರೋಪಿಗಳನ್ನು ಬಂಧಿಸುವುದಾಗಿ ಹೇಳುತ್ತಿದ್ದಾರೆ.

  • ಅತ್ತೆಯ ಜೊತೆಗೆ ಸೊಸೆಯ ಅನೈತಿಕ ಸಂಬಂಧ – ಇಬ್ಬರನ್ನು ಇರಿದು ಕೊಂದ ನಿವೃತ್ತ ಶಿಕ್ಷಕ

    ಅತ್ತೆಯ ಜೊತೆಗೆ ಸೊಸೆಯ ಅನೈತಿಕ ಸಂಬಂಧ – ಇಬ್ಬರನ್ನು ಇರಿದು ಕೊಂದ ನಿವೃತ್ತ ಶಿಕ್ಷಕ

    ನವದೆಹಲಿ: ಅಕ್ರಮ ಸಂಬಂಧ ಹೊಂದಿದ್ದಾರೆ ಎಂಬ ಶಂಕೆಯ ಹಿನ್ನೆಲೆಯಲ್ಲಿ ನಿವೃತ್ತ ಶಿಕ್ಷಕನೋರ್ವ ಪತಿ ಮತ್ತು ಸೊಸೆಯನ್ನು ಕೊಲೆ ಮಾಡಿರುವ ಘಟನೆ ವಾಯುವ್ಯ ದೆಹಲಿಯಲ್ಲಿ ನಡೆದಿದೆ.

    62 ವರ್ಷದ ನಿವೃತ್ತ ಶಿಕ್ಷಕ ಸತೀಶ್ ಚೌಧರಿ, ಸಿಂಗಪುರದಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ ತಮ್ಮ ಮಗ ಗೌರವ್ ಚೌಧರಿ ಅವರ ಪತ್ನಿ ಪ್ರಜ್ಞಾ ಚೌಧರಿ (35) ಮತ್ತು ಅವರ ಪತ್ನಿ 62 ವರ್ಷದ ಸ್ನೇಹಲತಾ ಚೌಧರಿ ಅವರನ್ನು ದೆಹಲಿಯ ರೋಹಿಣಿ ನಗರದಲ್ಲಿರುವ ತಮ್ಮ ಮನೆಯಲ್ಲಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.

    ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿ ಎಸ್.ಡಿ ಮಿಶ್ರಾ, ನಮಗೆ ಈ ಘಟನೆಯ ಬಗ್ಗೆ ಸತೀಶ್ ಚೌಧರಿ ಅವರ ಎರಡನೇ ಪುತ್ರ ಸೌರಭ್ ಚೌಧರಿ ಮಾಹಿತಿ ನೀಡಿದಾಗ ನಾವು ತಕ್ಷಣ ಸ್ಥಳಕ್ಕೆ ಹೋದೆವು. ಆಗ ದೆಹಲಿ ಸಾರಿಗೆ ನಿಗಮದಲ್ಲಿ ನಿವೃತ್ತ ಉದ್ಯೋಗಿಯಾಗಿರುವ ಪ್ರಜ್ಞಾ ಚೌಧರಿ ಮತ್ತು ಅವರ ಅತ್ತೆ ಸ್ನೇಹಲತಾ ಚೌಧರಿ ಅವರು ರಕ್ತದ ಮಡುವಿನಲ್ಲಿ ಬಿದ್ದು ಸಾವನ್ನಪ್ಪಿದ್ದರು ಎಂದು ಹೇಳಿದ್ದಾರೆ.

    ಇಂದು ಬೆಳಗ್ಗೆ ಈ ಘಟನೆ ನಡೆದಿದ್ದು, ಸುಮಾರು 6 ಗಂಟೆಗೆ ನಮಗೆ ಸೌರಭ್ ಅವರು ಕರೆ ಮಾಡಿದ್ದರು. ಈ ಘಟನೆಯಲ್ಲಿ ಅತ್ತಿಗೆ ಮತ್ತು ತಾಯಿಯ ಪ್ರಾಣ ಉಳಿಸಲು ಹೋದ ಸತೀಶ್ ಅವರ ಎರಡನೇ ಮಗ ಸೌರಭ್ ಚೌಧರಿ ಅವರಿಗೂ ಸಣ್ಣ ಪುಟ್ಟ ಗಾಯಗಳು ಆಗಿವೆ. ಈ ಸಂಬಂಧ ವಿಜಯ್ ವಿಹಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸತೀಶ್ ಚೌಧರಿ ಅವರನ್ನು ಅರೆಸ್ಟ್ ಮಾಡಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

  • ಸ್ಟೈಲಿಶ್ ಹುಡುಗರನ್ನು ಕಂಡರೆ ಆಂಟಿ ಆಗ್ತಾಳೆ ಬಲು ತುಂಟಿ

    ಸ್ಟೈಲಿಶ್ ಹುಡುಗರನ್ನು ಕಂಡರೆ ಆಂಟಿ ಆಗ್ತಾಳೆ ಬಲು ತುಂಟಿ

    -ಪತಿಯಿಲ್ಲದ ಸಮಯದಲ್ಲಿ ಪ್ರಿಯಕರನ ಜೊತೆ ಲವ್ವಿಡವ್ವಿ
    -ಬೆಡ್‍ರೂಮಿನಲ್ಲಿ ರೆಡ್‍ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಕ್ಕೆ ಪತಿಯ ಕೊಲೆ

    ತುಮಕೂರು: ಪ್ರಿಯತಮನ ಜೊತೆ ಲವ್ವಿಡವ್ವಿ ಮಾಡುವಾಗ ಮಹಿಳೆಯೊಬ್ಬಳು ತನ್ನ ಪತಿಯ ಕೈಯಲ್ಲಿ ರೆಡ್ ಹ್ಯಾಂಡ್ ಆಗಿ ಬೆಡ್‍ರೂಮಿನಲ್ಲಿ ಸಿಕ್ಕಿಬಿದ್ದ ಘಟನೆ ತುಮಕೂರಿನ ನಗರದ ಶಿರಾಗೇಟ್‍ನ ಹೊಂಬಯ್ಯನ ಪಾಳ್ಯದಲ್ಲಿ ನಡೆದಿದೆ.

    ವಿದ್ಯಾ ಪತಿಯನ್ನೇ ಕೊಲೆ ಮಾಡಿದ ಪತ್ನಿ. ಮದುವೆಯಾಗಿ ಮಕ್ಕಳಿದ್ದರೂ ವಿದ್ಯಾಗೆ ಪಡ್ಡೆ ಹುಡುಗರ ಹುಚ್ಚು ಜೋರಾಗಿತ್ತು ಎನ್ನಲಾಗಿದೆ. ಪತಿ ಇಲ್ಲದ ಸಮಯ ನೋಡಿ ವಿದ್ಯಾ ಯುವಕ ಸತೀಶ್ ಅಲಿಯಾಸ್ ಜಾಕಿ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಪತಿ ಕೆಲಸಕ್ಕೆಂದು ಮುಂಬೈಗೆ ಹೋದಾಗ ಇವರಿಬ್ಬರು ಜೊತೆಯಲ್ಲಿ ಇರುತ್ತಿದ್ದರು. ಭಾನುವಾರ ಮಧ್ಯರಾತ್ರಿ ಪತಿ ಏಕಾಏಕಿಯಾಗಿ ಮನೆಗೆ ಹಿಂದಿರುಗಿದ್ದು, ಈ ವೇಳೆ ಇಬ್ಬರು ಪ್ರಣಯಪಕ್ಷಿಗಳು ಬೆಡ್ ರೂಮಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

    ವಿದ್ಯಾ ತುಮಕೂರು ನಗರದ ಶಿರಾಗೇಟ್‍ನ ಹೊಂಬಯ್ಯನ ಪಾಳ್ಯದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಳು. ಇತ್ತ ಸತೀಶ್ ಇದೇ ಶಿರಾ ಗೇಟ್‍ನ ಪಂಚನಾಥ ರಾಯರ ಪಾಳ್ಯದವನು. ಆಟೋ ಓಡಿಸಿಕೊಂಡಿದ್ದ ಸತೀಶ್‍ನಿಗೆ ಬ್ಯೂಟಿಪಾರ್ಲರ್ ನಡೆಸುವ ಆಂಟಿ ವಿದ್ಯಾ ಪರಿಚಯವಾಗುತ್ತಾಳೆ. ಅಲ್ಲಿಂದ ಇಬ್ಬರ ಕಳ್ಳಾಟ ಶುರುವಾಗುತ್ತದೆ.

    ವಿದ್ಯಾಳ ಪತಿ ಹನುಮೇಗೌಡ ಹೋಟೆಲ್ ಉದ್ಯಮ ನಡೆಸುತ್ತಾರೆ. ಮುಂಬೈನಲ್ಲೂ ಉದ್ಯಮ ಇರುವುದರಿಂದ ಅಲ್ಲಿಗೆ ಹೋಗಿ ಭಾನುವಾರ ಹಿಂದಿರುಗಿದ್ದರು. ಈ ವೇಳೆ ವಿದ್ಯಾ ಹಾಗೂ ಸತೀಶ್ ಜೊತೆಯಲ್ಲಿ ಇರೋದನ್ನು ಕಂಡ ಹನುಮೇಗೌಡ ಕೆಂಡಾಮಂಡಲವಾಗಿದ್ದಾನೆ. ತಮಗೆ ಉಳಿಗಾಲ ಇಲ್ಲ ಎಂದು ಭಾವಿಸಿದ ಪ್ರಿಯತಮ ಸತೀಶ್ ಹಾಗೂ ವಿದ್ಯಾ ಸೇರಿ ಚಾಕುವಿನಿಂದ ಚುಚ್ಚಿ ಹನುಮೇಗೌಡನ ಕೊಲೆ ಮಾಡಿ ಪರಾರಿಯಾಗಿದ್ದರು.

    ತುಮಕೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೊಲೆ ಮಾಡಿದ ಈ ಪ್ರಣಯಪಕ್ಷಿಗಳ ಹೆಡೆಮುರಿಕಟ್ಟಿದ್ದಾರೆ.

  • ಆಸ್ಟ್ರೇಲಿಯಾದಿಂದ ಮಧ್ಯರಾತ್ರಿ ಮನೆಗೆ ಬಂದ ಪತಿಗೆ ಶಾಕ್

    ಆಸ್ಟ್ರೇಲಿಯಾದಿಂದ ಮಧ್ಯರಾತ್ರಿ ಮನೆಗೆ ಬಂದ ಪತಿಗೆ ಶಾಕ್

    ಹೈದರಾಬಾದ್: ಪತ್ನಿಯೊಬ್ಬಳು ಬೇರೊಬ್ಬ ವ್ಯಕ್ತಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದು, ಪತಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿರುವ ಘಟನೆ ನಗರದ ಚೈನತ್ಯಪುರಿಯಲ್ಲಿ ನಡೆದಿದೆ.

    ಚೈನತ್ಯಪುರಿಯ ವಾಸವಿ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಸಂತೋಷ್ ರೆಡ್ಡಿ ಎಂಬಾತ ಸಮತಾ ಜೊತೆ ಮದುವೆಯಾಗಿದ್ದನು. ಆದರೆ ಉನ್ನತ ಶಿಕ್ಷಣಕ್ಕಾಗಿ ಸಂತೋಷ ಆಸ್ಟ್ರೇಲಿಯಾಕ್ಕೆ ಹೋಗಿದ್ದನು.

    ಸ್ವಲ್ಪ ದಿನಗಳು ಕಳೆದ ನಂತರ ಪತ್ನಿ ಸಮತಾಳನ್ನು ಆಸ್ಟ್ರೇಲಿಯಾಗೆ ಬರುವಂತೆ ಹೇಳಿದ್ದಾನೆ. ಆದರೆ ಪತ್ನಿ ಬೇರೆ ಬೇರೆ ನೆಪ ಹೇಳಿ ಆಸ್ಟ್ರೇಲಿಯಾಗೆ ಹೋಗುವುದನ್ನು ನಿರಾಕರಿಸುತ್ತಾ ಬಂದಿದ್ದಳು. ಇದರಿಂದ ಅನುಮಾನಗೊಂಡ ಸಂತೋಷ ರೆಡ್ಡಿ ಪತ್ನಿಗೂ ತಿಳಿಸದೆ ಹೈದರಾಬಾದ್‍ಗೆ ಬಂದಿದ್ದಾನೆ.

    ಆಗ ಪತ್ನಿ ಬೇರೆಯೊಬ್ಬನ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ತಿಳಿದಿದೆ. ತಕ್ಷಣ ಪೊಲೀಸರಿಗೆ ಫೋನ್ ಮಾಡಿ ಅವರ ಜೊತೆ ಮಧ್ಯರಾತ್ರಿ ಅವರಿಬ್ಬರಿದ್ದ ಫ್ಲಾಟ್‍ಗೆ ನುಗ್ಗಿದ್ದಾನೆ. ಆಗ ಪತ್ನಿ ಬೇರೆಯೊಬ್ಬ ವ್ಯಕ್ತಿಯೊಂದಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾಳೆ. ನಂತರ ಪೊಲೀಸರು ಇಬ್ಬರನ್ನು ತಮ್ಮ ವಶಕ್ಕೆ ಪಡೆದುಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ. ಇವರಿಬ್ಬರ ಜೊತೆ ಆತನ ಇಬ್ಬರು ಸ್ನೇಹಿತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

  • ಪತಿಯನ್ನು ಕೊಲೆಗೈದು ಅಡುಗೆ ಮನೆಯಲ್ಲಿ ಹೂತಿಟ್ಟ ಪತ್ನಿ

    ಪತಿಯನ್ನು ಕೊಲೆಗೈದು ಅಡುಗೆ ಮನೆಯಲ್ಲಿ ಹೂತಿಟ್ಟ ಪತ್ನಿ

    – ಗಂಡ ಕಾಣೆಯಾಗಿದ್ದಾರೆಂದು ದೂರು
    – ಮೃತನ ಅಣ್ಣನ ಅನುಮಾನದ ಮೇರೆಗೆ ಪರಿಶೀಲನೆ

    ಲಕ್ನೋ: ಅಕ್ರಮ ಸಂಬಂಧ ಹೊಂದಿದ್ದ ಪತಿಯನ್ನು ಸ್ವತಃ ಪತ್ನಿಯೇ ಕೊಂದು ಅಡುಗೆ ಮನೆಯಲ್ಲಿ ಹೂತುಹಾಕಿರುವ ಘಟನೆ ಮಧ್ಯಪ್ರದೇಶದ ಅನುಪ್ಪೂರ ಜಿಲ್ಲೆಯಲ್ಲಿ ನಡೆದಿದೆ.

    ಕೊಲೆಯಾದ ಪತಿಯನ್ನು ಕರೋಂಡಿ ಗ್ರಾಮದ ವಕೀಲ ಮಹೇಶ್ ಬನವಾಲ್ (35) ಎಂದು ಗುರುತಿಸಲಾಗಿದೆ. ಈತನ ಪತ್ನಿ ಪ್ರಮೀಳಾ (32) ತನ್ನ ಪತಿ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಕೊಲೆಮಾಡಿ. ನಂತರ ಅಕ್ಟೋಬರ್ 22 ರಂದು ತನ್ನ ಪತಿ ಕಾಣೆಯಾಗಿದ್ದಾರೆ ಎಂದು ದೂರು ನೀಡಿದ್ದಾಳೆ.

    ಪತ್ನಿಯಿಂದ ದೂರು ಪಡೆದ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ಹುಡುಕಾಟ ಆರಂಭಿಸಿದ್ದಾರೆ. ಈ ವೇಳೆ ಒಂದು ದಿನ ಠಾಣೆಗೆ ಬಂದ ಮಹೇಶ್ ಬನವಾಲ್ ಅವರ ಅಣ್ಣ ಅರ್ಜನ್ ಬನವಾಲ್ ಅವರು, ನನಗೆ ನನ್ನ ತಮ್ಮನ ವಿಚಾರದಲ್ಲಿ ಆತನ ಹೆಂಡತಿಯ ಮೇಲೆ ಅನುಮಾನವಿದೆ. ಆತ ಕಾಣೆಯಾದ ನಂತರ ನಾವು ಆತನ ಮನೆಗೆ ಹೋದರೆ ಪ್ರಮೀಳಾ ನಮ್ಮನ್ನು ಒಳಗೆ ಬಿಡುತ್ತಿಲ್ಲ, ಬಾಗಿಲ ಬಳಿಯೇ ನನ್ನ ಗಂಡ ಕಾಣೆಯಾಗಿದ್ದಕ್ಕೆ ನೀವೇ ಕಾರಣ ಎಂದು ಬೈದು ಕಳುಹಿಸುತ್ತಾಳೆ ಎಂದು ಹೇಳಿದ್ದಾರೆ.

    ಅರ್ಜನ್ ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಪ್ರಮೀಳಾ ಮನೆಗೆ ಹೋಗಿದ್ದಾರೆ. ಈ ವೇಳೆ ಆಕೆಯ ಮನೆ ಬಳಿ ಹೋಗುತ್ತಿದ್ದಂತೆಯೇ ದುರ್ವಾಸನೆ ಬಂದಿದೆ. ಇದರಿಂದ ಮತ್ತಷ್ಟು ಅನುಮಾನಗೊಂಡ ಪೊಲೀಸರು ಮನೆಯನ್ನು ಪರಿಶೀಲನೆ ಮಾಡಿದಾಗ, ಅಡುಗೆ ಮಾಡುವ ಜಾಗದ ಕೆಳಗೆ ಗುಂಡಿ ತೆಗೆದಿರುವುದು ಕಂಡು ಬಂದಿದೆ. ಅಲ್ಲಿ ಅಗೆದು ನೋಡಿದಾಗ ಮಹೇಶ್ ಶವ ಪತ್ತೆಯಾಗಿದೆ.

    ನಂತರ ಪತ್ನಿ ಪ್ರಮೀಳಾಳನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ಮಾಡಿದಾಗ, ನನ್ನ ಪತಿ ನನ್ನ ಸಹೋದರ ಮಾವ ಗಂಗಾರಾಮ್ ಅವರ ಪತ್ನಿ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ಇದರಿಂದ ಬೇಸತ್ತು ನಾನು ಮತ್ತು ಸೋದರಮಾವ ಸೇರಿಕೊಂಡು ಆತನನ್ನು ಕೊಲೆ ಮಾಡಿದ್ದೆವು. ನಂತರ ಶವವನ್ನು ಸಾಗಿಸಲಾಗದೆ. ಅಡುಗೆ ಮನೆಯಲ್ಲಿ ಹೂತುಹಾಕಿದೆವು ಎಂದು ಒಪ್ಪಿಕೊಂಡಿದ್ದಾಳೆ.

    ಆದರೆ ಪ್ರಮೀಳಾ ಹೇಳಿಕೆಯನ್ನು ಒಪ್ಪದ ಸಹೋದರ ಮಾವ ಗಂಗಾರಾಮ್, ನಾನು ಮಹೇಶ್ ನನ್ನು ಕೊಲೆ ಮಾಡಲು ಸಹಾಯ ಮಾಡಿಲ್ಲ. ಆಕೆ ಸುಳ್ಳು ಹೇಳುತ್ತಿದ್ದಾಳೆ ಎಂದು ಹೇಳಿದ್ದಾನೆ. ಆದರೆ ಪೊಲೀಸರು ಪ್ರಮೀಳಾ ಒಬ್ಬಳೇ ಕೊಂದು ಹೂತುಹಾಕಲು ಸಾಧ್ಯವಿಲ್ಲ. ಅದರಲ್ಲಿ ಬೇರೆ ಯಾರೋ ಇದ್ದಾರೆ ನಾವು ತನಿಖೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

  • ಕಾಮದಾಸೆಗೆ ಸೊಸೆಯನ್ನು ಕೊಂದ ಮಾವ ಜೈಲಿನಲ್ಲಿ ಆತ್ಮಹತ್ಯೆ

    ಕಾಮದಾಸೆಗೆ ಸೊಸೆಯನ್ನು ಕೊಂದ ಮಾವ ಜೈಲಿನಲ್ಲಿ ಆತ್ಮಹತ್ಯೆ

    ಮಂಡ್ಯ: ಕಾಮದಾಸೆಗೆ ಸ್ವಂತ ಮಗನ ಹೆಂಡತಿಯನ್ನೇ ಕೊಲೆ ಮಾಡಿದ್ದ ಮಾವ ಜೈಲಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯದ ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ.

    ಮಂಡ್ಯ ತಾಲೂಕಿನ ರಾಗಿಮುದ್ದನಹಳ್ಳಿ ಗ್ರಾಮದ ನಾಗರಾಜು, ತನ್ನ ಮಗ ಅನಿಲ್ ಪತ್ನಿ ವೀಣಾ ರನ್ನು ನವೆಂಬರ್ 9 ರಂದು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದ. ಈ ವಿಚಾರವಾಗಿ ನನ್ನ ಅಪ್ಪನೇ ತನ್ನ ಹೆಂಡತಿಯನ್ನು ಅಕ್ರಮ ಸಂಬಂಧಕ್ಕೆ ಸ್ಪಂದಿಸದ ಹಿನ್ನೆಲೆಯಲ್ಲಿ ಕೊಲೆ ಮಾಡಿದ್ದಾನೆ ಎಂದು ವೀಣಾ ಪತಿ ಅನಿಲ್ ಆರೋಪ ಮಾಡಿದ್ದರು. ಈ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    ಈ ಪ್ರಕರಣ ಸಂಬಂಧ ಆರೋಪಿ ನಾಗರಾಜನನ್ನು ಬಂಧಿಸಿದ್ದ ಪೊಲೀಸರು ವಿಚಾರಣೆ ನಡೆಸಿದ ಬಳಿಕ ಕೋರ್ಟ್ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಮಂಡ್ಯದ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ನಾಗರಾಜು ಇಂದು ಮುಂಜಾನೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಾನೆ. ಅವರನ್ನು ತಕ್ಷಣ ಪೊಲೀಸರು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ನಾಗರಾಜು ಸಾವನ್ನಪ್ಪಿದ್ದಾನೆ.

    ಕಳೆದ ಹಲವು ದಿನಗಳಿಂದ ನಾಗರಾಜು ವೀಣಾಳ ಗಂಡ ಅನಿಲ್ ಇಲ್ಲದ ವೇಳೆ ಲೈಂಗಿಕವಾಗಿ ಕಿರುಕುಳ ನೀಡುತ್ತಿದ್ದ. ಇದರಿಂದ ವೀಣಾ ಮನನೊಂದ್ದಿದಳು. ನವೆಂಬರ್ 9 ಶನಿವಾರ ರಾತ್ರಿ ಯಾರು ಇಲ್ಲದ ವೇಳೆ ನಾಗರಾಜು ಲೈಂಗಿಕ ಕಿರುಕುಳ ನೀಡಲು ಮುಂದಾಗಿದ್ದಾನೆ. ಈ ವೇಳೆ ವಿರೋಧ ಮಾಡಿದ ಸೊಸೆ ವೀಣಾಳನ್ನು ನಾಗರಾಜು ಚಾಕುವಿನಿಂದ ಇರಿದು ಕೊಲೆ ಮಾಡಿದ್ದ.

  • ಅಕ್ರಮ ಸಂಬಂಧವನ್ನು ಪ್ರಶ್ನಿಸಿದ ಪ್ರೇಯಸಿಯ ಪತಿಯನ್ನೇ ಕೊಂದ

    ಅಕ್ರಮ ಸಂಬಂಧವನ್ನು ಪ್ರಶ್ನಿಸಿದ ಪ್ರೇಯಸಿಯ ಪತಿಯನ್ನೇ ಕೊಂದ

    ಬೆಂಗಳೂರು: ಪತ್ನಿಯ ಅಕ್ರಮ ಸಂಬಂಧದ ಬಗ್ಗೆ ಪ್ರಶ್ನಿಸಿದ್ದಕ್ಕೆ ಆಕೆಯ ಪ್ರಿಯಕರ ಪತಿಯನ್ನು ಗುಂಡಿಕ್ಕಿ ಕೊಲೆ ಮಾಡಿದ ಘಟನೆ ಆನೇಕಲ್ ತಾಲೂಕಿನ ಶ್ರೀರಾಂಪುರದಲ್ಲಿ ನಡೆದಿದೆ.

    ಶ್ರೀರಾಂಪುರ ನಿವಾಸಿ ರಮೇಶ್ ಮೃತ ದುರ್ದೈವಿ. ಕೊಲೆ ಮಾಡಿದ ಆರೋಪಿಯನ್ನು ಮುನಿಯಪ್ಪ ಎಂದು ಗುರುತಿಸಲಾಗಿದೆ. ರಮೇಶ್ ಪತ್ನಿ ಹಾಗೂ ಮುನಿಯಪ್ಪನ ನಡುವೆ ಅಕ್ರಮ ಸಂಬಂಧವಿತ್ತು. ಈ ಬಗ್ಗೆ ರಮೇಶ್‍ಗೆ ತಿಳಿದು ಕೋಪದಿಂದ ತನ್ನ ಹೆಂಡತಿಯೊಂದಿಗೆ ಮುನಿಯಪ್ಪ ಸಂಬಂಧವಿರಿಸಿಕೊಂಡಿದ್ದರ ಬಗ್ಗೆ ಪ್ರಶ್ನೆ ಮಾಡಿದ್ದನು. ಈ ವಿಚಾರಕ್ಕೆ ಪತಿ-ಪತ್ನಿ ನಡುವೆ ಜಗಳ ಕೂಡ ನಡೆದಿತ್ತು. ಹೀಗಾಗಿ ನಮ್ಮ ಸಂಬಂಧದ ಬಗ್ಗೆ ಬೈದುಕೊಂಡು ಓಡಾಡುತ್ತಿದ್ದಾನೆ ಎಂದು ಕೋಪಗೊಂಡ ಮುನಿಯಪ್ಪ ಸೋಮವಾರ ಮಧ್ಯರಾತ್ರಿ ರಮೇಶ್ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ.

    ಸಿಂಗಲ್ ಬ್ಯಾರೆಲ್ ಗನ್‍ನಿಂದ ರಮೇಶ್ ಮೇಲೆ ಶೂಟೌಟ್ ಮಾಡಿದ್ದಾನೆ. ಬಳಿಕ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ. ರಸ್ತೆ ಮಧ್ಯೆ ರಮೇಶ್ ಮೃತದೇಹವನ್ನು ಕಂಡ ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

  • ಅಕ್ರಮ ಸಂಬಂಧಕ್ಕೆ ಅಡ್ಡಿ- ಪ್ರಿಯತಮೆಯ ಗಂಡನನ್ನೇ ಕೊಲೆ ಮಾಡಿದ ಪ್ರಿಯತಮ

    ಅಕ್ರಮ ಸಂಬಂಧಕ್ಕೆ ಅಡ್ಡಿ- ಪ್ರಿಯತಮೆಯ ಗಂಡನನ್ನೇ ಕೊಲೆ ಮಾಡಿದ ಪ್ರಿಯತಮ

    ಬಳ್ಳಾರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪ್ರಿಯತಮೆಯ ಗಂಡನನ್ನೇ ಮಚ್ಚಿನಿಂದ ಕೊಚ್ಚಿ ಪ್ರಿಯಕರ ಕೊಲೆ ಮಾಡಿದ ಘಟನೆಯೊಂದು ಹೂವಿನಹಡಗಲಿ ತಾಲೂಕಿನ ಹಿರೇಹಡಗಲಿ ಗ್ರಾಮದಲ್ಲಿ ನಡೆದಿದೆ.

    ಕೊಲೆಯಾದ ಗಂಡನನ್ನು 33 ವರ್ಷದ ಹನುಮಂತಪ್ಪ ಎಂದು ಗುರುತಿಸಲಾಗಿದೆ. ಹನುಮಂತಪ್ಪನ ಹೆಂಡತಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಹಾರಕನಾಳ ಗ್ರಾಮದ ಹನುಮಂತಪ್ಪ ಎನ್ನುವ ವ್ಯಕ್ತಿ ತಡ ರಾತ್ರಿ ಮದ್ಯಪಾನ ಮಾಡಿಸಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.

    ಈ ಇಬ್ಬರು ಹನುಮಂತಪ್ಪರು ಶನಿವಾರ ರಾತ್ರಿ ಹಿರೇಹಡಗಲಿ ಗ್ರಾಮದ ವೈನ್ ಶಾಪ್‍ನಲ್ಲಿ ಕುಡಿದು ರಾತ್ರಿ ಮನೆಗೆ ಮರಳುವ ಸಂದರ್ಭದಲ್ಲಿ ತುಂಬಿನಕೇರಿ ಗ್ರಾಮದ ಬಳಿಯ ಹಳ್ಳದಲ್ಲಿ ಒಬ್ಬರಿಗೊಬ್ಬರು ಬಡಿದಾಡಿಕೊಂಡಿದ್ದಾರೆ. ಈ ಇಬ್ಬರ ಜಗಳ ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿದೆ. ಕೊಲೆಯಾಗಿರುವ ಹನುಮಂತಪ್ಪನಿಗೆ ಕಂಠಪೂರ್ತಿ ಕುಡಿಸಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ.

    ಈ ಸಂಬಂಧ ಆರೋಪಿ ಹನುಮಂತಪ್ಪನನ್ನು ವಶಕ್ಕೆ ಪಡೆದಿರುವ ಹಿರೇಹಡಗಲಿ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

  • ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ತಂದೆಗೆ ಸುಪಾರಿ ಕೊಟ್ಟ ಮಗಳು ಅರೆಸ್ಟ್

    ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ತಂದೆಗೆ ಸುಪಾರಿ ಕೊಟ್ಟ ಮಗಳು ಅರೆಸ್ಟ್

    ಹಾಸನ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ತಂದೆಗೆ ಸುಪಾರಿ ಕೊಟ್ಟು ಪ್ರೇಮಿ ಮೂಲಕ ತಂದೆಯನ್ನೇ ಕೊಲೆ ಮಾಡಿಸಿದ ಪಾಪಿ ಮಗಳು ಸೇರಿ ಮೂವರನ್ನು ಹಾಸನದ ಪೊಲೀಸರು ಬಂಧಿಸಿದ್ದಾರೆ.

    ಬಂಧಿತರನ್ನು ನಾಗಮಂಗಲ ತಾಲೂಕಿನ ದೊಂದೆಮಾದನಹಳ್ಳಿಯ ವಿದ್ಯಾ (23), ಬೆಂಗಳೂರಿನ ಅಂಚೆಪಾಳ್ಯದ ಚಿದಾನಂದ್ (25) ಹಾಗು ರಘು (24) ಎಂದು ಗುರುತಿಸಲಾಗಿದೆ. ಬೆಂಗಳೂರಿನ ಮುನೇಶ್ವರ ನಗರದ ಮುನಿರಾಜು (48) ಕೊಲೆಯಾದ ತಂದೆ.

    ಅಗಸ್ಟ್ 26 ರಂದು ಆಲೂರು ತಾಲೂಕಿನ ಮಣಿಗನಹಳ್ಳಿಯಲ್ಲಿ ಅಪರಿಚಿತ ಮೃತದೇಹ ಪತ್ತೆಯಾಗಿತ್ತು. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಮಾಡಿದ್ದ ಅಲೂರು ಪೊಲೀಸರು. ಈ ಪ್ರಕರಣದಲ್ಲಿ ಆತನ ಮಗಳು ವಿದ್ಯಾಳನ್ನು ತನಿಖೆ ಮಾಡಿದಾಗ ತನ್ನ ತಂದೆಯನ್ನು ತಾನೇ ಸುಪಾರಿ ಕೊಟ್ಟು ಕೊಲೆ ಮಾಡಿಸಿದೆ ಎಂದು ಒಪ್ಪಿಕೊಂಡಿದ್ದಾಳೆ. ಈ ಮೂಲಕ ಘಟನೆ ನಡೆದ ಒಂದೇ ವಾರದೊಳಗೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ.

    ತನಿಖೆ ವೇಳೆ ನನಗೆ ಈ ಹಿಂದೆ ಅಪಘಾತವಾಗಿತ್ತು. ಅದರಿಂದ ಬಂದಿದ್ದ ಪರಿಹಾರ ಹಣ ಕೊಡು ಎಂದು ನನ್ನ ತಂದೆ ಕೇಳುತ್ತಿದ್ದರು ಅದಕ್ಕೆ 15 ಲಕ್ಷ ರೂ.ಗೆ ಸುಪಾರಿ ನೀಡಿ ನನ್ನ ತಂದೆಯನ್ನು ಕೊಲೆ ಮಾಡಿಸಿದೆ ಎಂದು ವಿದ್ಯಾ ಹೇಳಿದ್ದಾಳೆ. ಆದರೆ ಮುನಿರಾಜು ಮಗಳಿಂದ ಹಣ ಪಡೆಯುವ ವ್ಯಕ್ತಿ ಅಲ್ಲ. ವಿದ್ಯಾಳ ನಡುವಳಿಕೆ ಸರಿ ಇರಲಿಲ್ಲ. ಆಕೆ ಚಿದಾನಂದ್ ಜೊತೆ ಅಕ್ರಮ ಸಂಬಂಧ ಇಟ್ಟಿಕೊಂಡಿದ್ದಳು ಇದನ್ನು ತಂದೆ ವಿರೋಧ ಮಾಡಿದಕ್ಕೆ ಈ ರೀತಿ ಮಾಡಿದ್ದಾಳೆ ಎಂದು ಮುನಿರಾಜು ಕುಟುಂಬಸ್ಥರು ಆರೋಪ ಮಾಡಿದ್ದಾರೆ.

  • ಅಳಿಯನೊಂದಿಗೆ ಅಕ್ರಮ ಸಂಬಂಧ- ಮಹಿಳೆಯ ಕೂದಲು ಕತ್ತರಿಸುವಂತೆ ತೀರ್ಪು ನೀಡಿದ ಪಂಚಾಯಿತಿ

    ಅಳಿಯನೊಂದಿಗೆ ಅಕ್ರಮ ಸಂಬಂಧ- ಮಹಿಳೆಯ ಕೂದಲು ಕತ್ತರಿಸುವಂತೆ ತೀರ್ಪು ನೀಡಿದ ಪಂಚಾಯಿತಿ

    ರಾಂಚಿ: ಮಹಿಳೆ ತನ್ನ ಸೋದರಳಿಯನ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಆರೋಪದ ಮೇಲೆ ಆಕೆಯನ್ನು ಮನೆಯಿಂದ ಹೊರಗೆಳೆದು, ಊರಿನ ಪಂಚಾಯಿತಿಗೆ ಕರೆ ತಂದು ತಲೆ ಕೂದಲನ್ನು ಕತ್ತರಿಸಿರುವ ಘಟನೆ ಜಾರ್ಖಂಡ್‍ನ ಕೋಡೆರ್ಮಾದಲ್ಲಿ ನಡೆದಿದೆ.

    ಪತಿ ಇಲ್ಲದಿದ್ದಾಗ ತನ್ನ ಸ್ವಂತ ಸೋದರಳಿಯನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಡೆಂಗೋಡಿಹ್ ಗ್ರಾಮದ ಸ್ಥಳೀಯರು ಆರೋಪಿಸಿದ್ದಾರೆ. ಈ ಕುರಿತು ಗ್ರಾಮದಲ್ಲಿ ಪಂಚಾಯಿತಿ ನಡೆಸಲಾಗಿದ್ದು, ಪಂಚಾಯತ್ ನಿರ್ಧಾರದ ಮೇರೆಗೆ ಮಹಿಳೆಯ ತಲೆಯ ಕೂದಲನ್ನು ಕತ್ತರಿಸಲಾಗಿದೆ.

    ಈ ಕುರಿತು ಮಹಿಳೆ ದೂರು ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದ್ದು, ಪತಿ ಇಲ್ಲದಿದ್ದಾಗ 22 ವರ್ಷದ ಸೋದರಳಿಯ ಸಂದೀಪ್ ಸಾ ನನ್ನನ್ನು ಹೆದರಿಸಿ ಲೈಂಗಿಕ ಕ್ರಿಯೆ ನಡೆಸುತ್ತಿದ್ದ. ಅಲ್ಲದೆ, ಈ ಸಂಬಂಧವನ್ನು ಮುಂದುವರಿಸುವಂತೆ ಹೆದರಿಸುತ್ತಿದ್ದ ಎಂದು ಮಹಿಳೆ ಆರೋಪಿಸಿದ್ದಾಳೆ.

    ಈ ವಿಷಯ ಗ್ರಾಮಸ್ಥರಿಗೆ ತಿಳಿದ ನಂತರ ಮಹಿಳೆಯ ಮೇಲೆಯೇ ಆಪಾದನೆ ಹೊರಿಸಿದ್ದು, ಅವಳೇ ನನ್ನನ್ನು ಸಂಬಂಧಕ್ಕೆ ಆಕರ್ಷಿಸಿದ್ದಾಳೆ ಎಂದು ಆರೋಪಿಸಿದ್ದಾನೆ.

    ಪ್ರಕರಣದ ಕುರಿತು ತಿಳಿಯುತ್ತಿದ್ದಂತೆ ಮಹಿಳೆಯನ್ನು ಹೊರಗೆಳೆದು, ಪಂಚಾಯತ್‍ಗೆ ಕರೆತರಲಾಗಿದ್ದು, ಪಂಚಾಯತ್‍ನಲ್ಲಿ ಮಹಿಳೆಯ ತಲೆಯ ಕೂದಲನ್ನು ಕತ್ತರಿಸುವಂತೆ ಆದೇಶ ನೀಡಲಾಗಿದೆ. ಒಟ್ಟು 11 ಆರೋಪಿಗಳನ್ನು ಗುರುತಿಸಲಾಗಿದ್ದು, ಪ್ರಕರಣ ದಾಖಲಿಸಲಾಗಿದೆ. ಆದರೆ, ಈವರೆಗೆ ಯಾರನ್ನೂ ಬಂಧಿಸಿಲ್ಲ.