Tag: ಅಕ್ರಮ ಮಾರಾಟ

  • ಐಎಸ್‌ಐ ಮಾರ್ಕ್ ಇಲ್ಲದ 70 ಲಕ್ಷ ಮೌಲ್ಯದ ಚೀನಾ ಆಟಿಕೆ ವಶ

    ಭೋಪಾಲ್: ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ಅಧಿಕಾರಿಗಳು ಗುರುವಾರ ನಗರದ ಖಾಸಗಿ ಮಾಲ್‌ಗಳಿಗೆ ದಾಳಿ ಮಾಡಿ ಸುಮಾರು 70 ಲಕ್ಷ ರೂ. ಮೌಲ್ಯದ ಐಎಸ್‌ಐ ಗುರುತು ಇಲ್ಲದ ಆಟಿಕೆಗಳನ್ನು ವಶಪಡಿಸಿಕೊಂಡಿದ್ದಾರೆ.

    ಬಿಐಎಸ್ ಹಿರಿಯ ವಿಜ್ಞಾನಿ ರಮಣ್ ತ್ರಿವೇದಿಯವರ ಮೇಲ್ವಿಚಾರಣೆಯಲ್ಲಿ ದಾಳಿ ನಡೆಸಲಾಗಿದ್ದು, ಮಾಲ್‌ಗಳಿಂದ ಐಎಸ್‌ಐ ಗುರುತು ಇಲ್ಲದ ಚೀನಾ ಆಟಿಕೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಗಳು ತಿಳಿಸಿವೆ.

    ಕೆಲವು ನಿರ್ದಿಷ್ಟ ಮಾಹಿತಿಯ ಮೇರೆಗೆ ಬಿಐಎಸ್ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಮಾಲ್‌ಗಳಿಂದ ದೊಡ್ಡ ಪ್ರಮಾಣದ ಆಟಿಕೆಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಆಟಿಕೆಗಳನ್ನು ಯಾವ ದೇಶಗಳಿಂದ ಆಮದು ಮಾಡಿಕೊಳ್ಳಲಾಗಿದೆ ಮತ್ತು ಇಂತಹ ವ್ಯವಹಾರ ಯಾವಾಗಿನಿಂದ ನಡೆಯುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಕೊಲ್ಲಲು ಬಂದವ್ರ ಕಣ್ಣಿಗೆ ಖಾರದ ಪುಡಿ ಎರಚಿ ಪತಿಯನ್ನು ಬಚಾವ್ ಮಾಡಿದ್ಲು!

    ಐಎಸ್‌ಐ ಗುರುತು ಇಲ್ಲದ ಆಟಿಕೆ ನಿಷೇಧ:
    ಐಎಸ್‌ಐ ಗುರುತು ಇಲ್ಲದ ಆಟಿಕೆಗಳನ್ನು ಮಾರಾಟ ಮಾಡುವುದನ್ನು ದೇಶದಲ್ಲಿ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಆದರೂ ಮಾರುಕಟ್ಟೆಗಳಲ್ಲಿ ಐಎಸ್‌ಐ ಗುರುತು ಇಲ್ಲದ ಆಟಿಕೆಗಳ ಮಾರಾಟ ನಡೆಯುತ್ತಿದೆ. ಇಂತಹ ಅಕ್ರಮ ಮಾರಾಟದ ಬಗ್ಗೆ ನಮಗೆ ಸಾಕಷ್ಟು ದೂರುಗಳು ಬರುತ್ತಿವೆ ಎಂದು ಅಧಿಕಾರಿ ಅಮರ್ ಉಜಾಲಾ ತಿಳಿಸಿದ್ದಾರೆ.

    ನಾವು ಆಟಿಕೆಗಳ ಅಕ್ರಮ ಮಾರಾಟಕ್ಕೆ ಕಡಿವಾಣ ಹಾಕಿ ಕಠಿಣ ಕ್ರಮ ಕೈಗೊಂಡಿದ್ದೇವೆ. ಬಿಐಎಸ್ ಅಧಿಕಾರಿಗಳು ಅಂಗಡಿಗಳನ್ನು ಸೀಲ್ ಮಾಡಿದ್ದಾರೆ. ಜೊತೆಗೆ ಚೈನೀಸ್ ಆಟಿಕೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಧರ್ಮದ ವಿಚಾರಕ್ಕೆ ಬಂದ ಪಕ್ಕದ ಮನೆಯವರಿಗೆ ಸಲ್ಮಾನ್ ಕ್ಲಾಸ್

    ಭಾರತ ಸರ್ಕಾರ ಮಾರ್ಗಸೂಚಿಗಳ ಪ್ರಕಾರ ಐಎಸ್‌ಐ ಗುರುತು ಇಲ್ಲದ ಆಟಿಕೆಗಳು ಮಕ್ಕಳಿಗೆ ಹಾನಿಕಾರಕ. ಅಂಗಡಿಯವರು ಇದನ್ನೆಲ್ಲ ಲೆಕ್ಕಿಸದೇ ತಮ್ಮ ಲಾಭಕ್ಕಾಗಿ ವಿದೇಶದಿಂದ ಕಡಿಮೆ ಬೆಲೆಗೆ ಆಟಿಕೆಗಳನ್ನು ಆಮದು ಮಾಡಿಕೊಂಡು ಇಲ್ಲಿ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಾರೆ. ಇದೀಗ ಭೋಪಾಲ್‌ನಲ್ಲಿ ಬಿಐಎಸ್ ಅಧಿಕಾರಿಗಳ 13 ಸದಸ್ಯರ ತಂಡ ಹಲವೆಡೆ ದಾಳಿ ನಡೆಸುತ್ತಿದ್ದಾರೆ.

  • ಅಕ್ರಮ ಸೀಮೆಎಣ್ಣೆ ಮಾರಾಟ- ಸತ್ತವರ ಮೇಲೆ ಕೇಸ್ ದಾಖಲು

    ಅಕ್ರಮ ಸೀಮೆಎಣ್ಣೆ ಮಾರಾಟ- ಸತ್ತವರ ಮೇಲೆ ಕೇಸ್ ದಾಖಲು

    – ಅಕ್ರಮ ಸಾಗಾಟ ಬಯಲಿಗೆಳೆದಿದ್ದ ಪಬ್ಲಿಕ್ ಟಿವಿ

    ಕೊಪ್ಪಳ: ಸತ್ತವರು ಎದ್ದು ಬರೋದನ್ನು ನಾವು ಅಗಾಗ ಕೇಳಿದ್ದೇವೆ, ನೋಡಿದ್ದೇವೆ. ಆದರೆ ಕಳೆದ ಹಲವು ವರ್ಷಗಳ ಹಿಂದೆ ಸತ್ತವರ ಮೇಲೂ ಕೇಸ್ ದಾಖಲಾಗೋದನ್ನು ನೀವು ಎಂದು ಕೇಳಿರಲಿಕ್ಕಿಲ್ಲ. ಆದರೆ ಗಂಗಾವತಿಯಲ್ಲಿ ಸತ್ತವರ ಮೇಲೂ ಕೇಸ್ ದಾಖಲಾಗಿದೆ. ಆಹಾರ ಅಧಿಕಾರಿಗಳ ನೀಡಿದ ವರದಿಯ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ತನಿಖೆಯ ನಂತರ ಸತ್ತ ವ್ಯಕ್ತಿಯ ಮೇಲೆ ಪ್ರಕರಣ ದಾಖಲಾಗಿರುವುದು ಬೆಳಕಿಗೆ ಬಂದಿದೆ.

    ಬರೋಬ್ಬರಿ 3 ತಿಂಗಳ ಹಿಂದೆ ಕೊಪ್ಪಳದ ಗಂಗಾವತಿಯಲ್ಲಿ ಒಂದು ಘಟನೆ ನಡೆದಿತ್ತು. ಪಬ್ಲಿಕ್ ಟಿವಿ ಅಕ್ರಮ ಸೀಮೆ ಎಣ್ಣೆ ಮಾರಾಟ ಬಗ್ಗೆ ರಿಯಾಲಿಟಿ ಚೆಕ್ ಮಾಡಿ, ಅಕ್ರಮ ನಡೆಸುತ್ತಿದ್ದವರ ಬಗ್ಗೆ ವರದಿ ಮಾಡಿತ್ತು. ರೇಷನ್ ಪಡೆಯುವ ಬಡವರ ಮನೆ ಸೇರಬೇಕಿದ್ದ ಸೀಮೆ ಎಣ್ಣೆಯನ್ನು ಕದ್ದು ರಾತ್ರೋರಾತ್ರಿ ಅಕ್ರಮ ಮಾರಟ ಮಾಡಲಾಗುತ್ತಿತ್ತು. ಇದನ್ನ ಬೆನ್ನಟ್ಟಿ ಅಕ್ರಮದ ಬಗ್ಗೆ ಆಹಾರ ಇಲಾಖೆ ಗಮನಕ್ಕೆ ಪಬ್ಲಿಕ್ ಟಿವಿ ಮಾಹಿತಿ ನೀಡಿತ್ತು.

    ಅಕ್ರಮ ವಾಸನೆ ಹಿಡಿದು ಬಂದ ಅಧಿಕಾರಿಗಳು ಕೊಪ್ಪಳದ ಗಂಗಾವತಿಯ ಅಂಗಡಿ ಸಂಗಣ್ಣನ ಕ್ಯಾಂಪ್ ಅಲ್ಲಿ ದಾಳಿ ನಡೆಸಿದರು. ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 200 ಲೀಟರ್ ಸೀಮೆಎಣ್ಣೆ ತುಂಬಿದ ಬ್ಯಾರಲ್‍ಗಳು ಸಿಕ್ಕಿದ್ದು, ಖಾಲಿ ಬ್ಯಾರಲ್‍ಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದರು. ಆದರೆ ಇದರಲ್ಲಿ ಅಧಿಕಾರಿಗಳು ತಮ್ಮ ಜಾಣ್ಮೆ ಪ್ರದರ್ಶಿಸಿ ಅಕ್ರಮ ಮಾಡ್ತಿದ್ದವರನ್ನು ಬಿಟ್ಟು ಮನೆ ಬಾಡಿಗೆ ಕೊಟ್ಟಿದ್ದ ಅಮಾಯಕರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ನಂತರದ ದಾಳಿಯಲ್ಲಿ ಅಕ್ರಮ ಸೀಮೆಎಣ್ಣೆಯ ಕಿಂಗ್ ಪಿನ್ ಶೇಖ್‍ನಭಿ ಮೇಲೆ ಪ್ರಕರಣ ದಾಖಲಾಗಿಲ್ಲ. ಇದರ ಜೊತೆಗೆ 4 ವರ್ಷದ ಹಿಂದೆಯ ಸತ್ತಿದ್ದ ಒಬ್ಬ ಮಹಿಳೆಯ ಮೇಲೂ ಪ್ರಕರಣವನ್ನು ದಾಖಲಿಸಿ ಅಕ್ರಮಕ್ಕೆ ಅಧಿಕಾರಿಗಳು ಯಾವ ರೀತಿ ಬೆನ್ನೆಲುಬಾಗಿ ನಿಂತಿದ್ದಾರೆ ಎನ್ನುವುದು ಎತ್ತಿ ತೋರಿಸುತ್ತಿದೆ.

    ಸೀಮೆಎಣ್ಣೆಯ ಅಕ್ರಮದ ಕಿಂಗ್ ಪಿನ್ ಮಾಜಿ ಗಂಗಾವತಿ ನಗರ ಸಭೆಯ ಸದಸ್ಯ ಶೇಖ್‍ನಭಿ ಮತ್ತು ಸಹೋದರ ಮೊದಲು ಜೆಡಿಎಸ್ ಪಕ್ಷದಲ್ಲಿದ್ದರು. ಅಕ್ರಮ ಬಯಲಾಗುತ್ತಿದ್ದಂತೆ ಗಂಗಾವತಿ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಜೊತೆ ಕೈ ಜೊಡಿಸಿದ್ದಾರೆ. ಅಕ್ರಮದ ರೂವಾರಿಗಳನ್ನು ಇಕ್ಬಾಲ್ ಅನ್ಸಾರಿ ಜೆಡಿಎಸ್ ನಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿ ಆರೋಪಿಗಳಿಗೆ ಬೆಂಗಾವಲಾಗಿ ನಿಂತಿದ್ದಾರೆ. ಬಡವರ ಬಗ್ಗೆ ಕಾಳಜಿ ತೋರಿಸಬೇಕಾಗಿದ್ದ ಒಬ್ಬ ಮಾಜಿ ಶಾಸಕರು ಆರೋಪಿಗಳನ್ನು ಪಕ್ಷಕ್ಕೆ ಸೇರಿಸಿಕೊಂಡು ಅಕ್ರಮಕ್ಕೆ ತಾವೇ ಬೆನ್ನೆಲುಬಾಗಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

    ಆಹಾರ ಇಲಾಖೆ ಅವರು ಸತ್ತವರ ಮೇಲೆ ಪ್ರಕರಣ ನೀಡಿದ್ದಾರೆ. ಇವರ ಮೇಲೆ ಗಂಗಾವತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • 289 ಮದ್ಯದ ಬಾಕ್ಸ್ ವಶಕ್ಕೆ ಪಡೆದ ಅಬಕಾರಿ ಅಧಿಕಾರಿಗಳು

    289 ಮದ್ಯದ ಬಾಕ್ಸ್ ವಶಕ್ಕೆ ಪಡೆದ ಅಬಕಾರಿ ಅಧಿಕಾರಿಗಳು

    ಕಾರವಾರ: ಮನೆಯ ನೆಲಮಾಳಿಗೆಯಲ್ಲಿ ಅಡಗಿಸಿಟ್ಟು ಮಾರಾಟ ಮಾಡುತಿದ್ದ ಗೋವಾ ಮದ್ಯವನ್ನು ಬೆಂಗಳೂರು ಮೂಲದ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ನಡೆಸಿ 20 ಲಕ್ಷ ರೂ. ಮೌಲ್ಯದ 289 ಮದ್ಯದ ಬಾಕ್ಸ್ ಅನ್ನು ವಶಕ್ಕೆ ಪಡೆದಿದ್ದಾರೆ.

    ಉತ್ತರ ಕನ್ನಡ ಜಿಲ್ಲೆಯ ರಾಮನಗರದ ನಾಗನಾಥ ಗಲ್ಲಿ ಹಾಗೂ ಗಣೇಶ್ ಗಲ್ಲಿಯ ಎರಡು ಮನೆಗಳ ಮೇಲೆ ದಾಳಿ ನಡೆಸಿದ ಬೆಂಗಳೂರಿನಿಂದ ಆಗಮಿಸಿದ ವಿಶೇಷ ತಂಡ ನೆಲ ಮಾಳಿಗೆಯಲ್ಲಿ ಹುದುಗಿಸಿಟ್ಟಿದ್ದ ಗೋವಾ ಮದ್ಯವನ್ನು ವಶಪಡಿಸಿಕೊಂಡಿದೆ. ನಾಗನಾಥ ಗಲ್ಲಿಯ ಚಂದ್ರಕಾಂತ್ ಹಾಗೂ ಗಣೇಶ್ ಗಲ್ಲಿಯ ಹರ್ಷ ಗಾಂವ್ಕರ್, ಪರುಶುರಾಮ್ ಎಂಬವರನ್ನು ಅಕ್ರಮ ಮದ್ಯ ಸಂಗ್ರಹಣೆ ಆರೋಪದಡಿ ವಶಕ್ಕೆ ಪಡೆಯಲಾಗಿದೆ.

    ರಾಮನಗರದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಜಾಲ ಹಬ್ಬಿದ್ದು ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಯಾವುದೇ ಕ್ರಮ ಜರುಗಿಸಿರಲಿಲ್ಲ. ಈ ಹಿನ್ನಲೆಯಲ್ಲಿ ಸ್ಥಳೀಯರು ಬೆಂಗಳೂರಿನ ಅಬಕಾರಿ ಅಧಿಕಾರಿಗಳಿಗೆ ದೂರು ನೀಡಿದ್ದರು. ಬೆಂಗಳೂರಿನಿಂದ ಆಗಮಿಸಿದ ಅಬಕಾರಿ ಅಧಿಕಾರಿ ರವಿ ಕುಮಾರ್ ನೇತ್ರತ್ವದ ತಂಡ ದಾಳಿ ನಡೆಸಿ ದೊಡ್ಡ ಮೊತ್ತದ ಗೋವಾ ಮದ್ಯ ವಶಪಡಿಸಿಕೊಂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಚಿತ್ರದುರ್ಗದಲ್ಲಿ ಸರ್ಕಾರಿ ಸಸಿಗಳನ್ನು ಮಾರಿ ಅರಣ್ಯಾಧಿಕಾರಿ ಅಕ್ರಮ!

    ಚಿತ್ರದುರ್ಗದಲ್ಲಿ ಸರ್ಕಾರಿ ಸಸಿಗಳನ್ನು ಮಾರಿ ಅರಣ್ಯಾಧಿಕಾರಿ ಅಕ್ರಮ!

    ಚಿತ್ರದುರ್ಗ: ಕಾಡು ಬೆಳೆಸಲು ಎಂದು ಸರ್ಕಾರ ಕೊಟ್ಟಿದ್ದ ಸಸಿಗಳನ್ನು ಅರಣ್ಯಾಧಿಕಾರಿಯೊಬ್ಬರು ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪ ಕೋಟೆನಾಡಿನಲ್ಲಿ ಕೇಳಿ ಬರುತ್ತಿದೆ.

    ಚಿತ್ರದುರ್ಗದ ಆರ್‍ಎಫ್‍ಒ ಅಫ್ರಿನ್ ಎಂಬವರು ಸರ್ಕಾರ ನೀಡಿರುವ ಸಸಿಗಳನ್ನು ಖಾಸಗಿಯವರಿಗೆ ಮಾರಾಟ ಮಾಡಿ ಕಾಸು ಮಾಡಿಕೊಳ್ಳುತ್ತಿದ್ದಾರೆ ಎಂದು ಅವರ ವಿರುದ್ಧ ಅಕ್ರಮ ಆರೋಪ ಕೇಳಿಬಂದಿದೆ. ಅರಣ್ಯ ಇಲಾಖೆ ನರ್ಸರಿಗಳಲ್ಲಿ ಬೆಳೆಸಿದ ಎತ್ತರದ ಗಿಡಗಳನ್ನು ಸಂರಕ್ಷಿತ ಅರಣ್ಯ ಪ್ರದೇಶಗಳು ಹಾಗೂ ರಸ್ತೆ ಬದಿಗಳಲ್ಲಿ ನೆಡುತ್ತಿದ್ದಾರೆ. ಅಲ್ಲದೇ ಅಗತ್ಯವಿದ್ದಾಗ ಖಾಸಗಿ ನರ್ಸರಿಗಳಿಂದಲೂ ಸಸಿಗಳನ್ನ ಖರೀದಿಸಿ ಸಸಿಗಳನ್ನು ನೆಡಲಾಗುತ್ತದೆ.

    ಹೊಳಲ್ಕೆರೆ ವಲಯದ ಆರ್ ಎಫ್ ಒ ಅಫ್ರಿನ್ ಮಾತ್ರ ಗಿಡಗಳನ್ನ ಖಾಸಗಿಯವರಿಗೆ ಮಾರಾಟ ಮಾಡುತ್ತಿದ್ದಾರೆ. ನರ್ಸರಿಯಲ್ಲಿ ಖಾಸಗಿ ವಾಹನಕ್ಕೆ ಗಿಡಗಳನ್ನ ತುಂಬಿಸಿಕೊಳ್ಳುತ್ತಿರುವುದನ್ನು ಅರಣ್ಯ ಇಲಾಖೆ ಗಮನಿಸಿದ್ದು, ಬಳಿಕ ಅದನ್ನು ಹಿರಿಯ ಅಧಿಕಾರಿಗಳಿಗೆ ತಿಳಿಸಲಾಗಿದೆ.

    ಇಲಾಖೆಯ ಎಸಿಎಫ್ ಶ್ರೀನಿವಾಸ್, ನರ್ಸರಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ವಾಹನದ ಜೊತೆಗೆ ಸಸಿಗಳನ್ನು ಜಪ್ತಿ ಮಾಡಿ ಆರ್‍ಎಫ್‍ಒ ಅಫ್ರಿನ್ ವಿರುದ್ಧ ಮೇಲಾಧಿಕಾರಿಗಳಿಗೆ ಮುಂದಿನ ಕ್ರಮಕ್ಕಾಗಿ ಶಿಫಾರಸ್ಸು ಮಾಡಿದ್ದಾರೆ.