Tag: ಅಕ್ರಮ ಮನೆ ತೆರವು

  • ವೃದ್ಧರು, ಮಹಿಳೆಯರೆನ್ನದೆ, ರಕ್ತ ಬಂದ್ರೂ ಬಿಡದೇ ಪೊಲೀಸರಿಂದ ಲಾಠಿಚಾರ್ಜ್- 2ನೇ ಯಮನೂರಾದ ಬುಳ್ಳಾಪುರ

    ವೃದ್ಧರು, ಮಹಿಳೆಯರೆನ್ನದೆ, ರಕ್ತ ಬಂದ್ರೂ ಬಿಡದೇ ಪೊಲೀಸರಿಂದ ಲಾಠಿಚಾರ್ಜ್- 2ನೇ ಯಮನೂರಾದ ಬುಳ್ಳಾಪುರ

    ದಾವಣಗೆರೆ: ಗೋಮಾಳ ಜಾಗದಲ್ಲಿ ನಿರ್ಮಿಸಿದ್ದ ಅಕ್ರಮ ಮನೆಗಳ ತೆರವು ಕಾರ್ಯಾಚರಣೆ ವೇಳೆ ಪೊಲೀಸರು ಲಾಠಿ ಬೀಸಿದ್ದಾರೆ. ವೃದ್ಧರು, ಮಹಿಳೆಯರೆನ್ನದೇ ಲಾಠಿ ಏಟು ಕೊಟ್ಟಿದ್ದಾರೆ.

    ದಾವಣಗೆರೆಯ ಹರಿಹರ ತಾಲೂಕಿನ ಬುಳ್ಳಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ಗ್ರಾಮದ ಸರ್ಕಾರಿ ಗೋಮಾಳದಲ್ಲಿ ಸರ್ವೆ ನಂಬರ್ 52ರ 10.33 ಗುಂಟೆ ಜಾಗದಲ್ಲಿ ಗ್ರಾಮಸ್ಥರು ರಾತ್ರೋರಾತ್ರಿ ಅಕ್ರಮವಾಗಿ 30 ಮನೆಗಳನ್ನು ನಿರ್ಮಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಮನೆಯನ್ನು ಖಾಲಿ ಮಾಡುವಂತೆ ಜಿಲ್ಲಾಡಳಿತ ಸೂಚಿಸಿತ್ತು. ಆದ್ರೆ ಖಾಲಿ ಮಾಡದ ಹಿನ್ನೆಲೆಯಲ್ಲಿ ಇಂದು ತೆರವು ಕಾರ್ಯಾಚರಣೆಗೆ ಮುಂದಾಗಿತ್ತು.

    ಗ್ರಾಮಸ್ಥರ ವಿರೋಧದ ನಡುವೆಯೇ ಅಧಿಕಾರಿಗಳು ತೆರವು ಮಾಡಿದ್ದರಿಂದ ಗ್ರಾಮಸ್ಥರು ರೊಚ್ಚಿಗೆದ್ದಿದ್ದಾರೆ. ಹೀಗಾಗಿ ಗ್ರಾಮಸ್ಥರನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ರು. ಅಲ್ಲದೇ 30 ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ. ವೃದ್ಧರು, ಮಹಿಳೆಯರನ್ನು ನೋಡದೆ, ರಕ್ತ ಬಂದರೂ ಬಿಡದೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.

    2016ರಲ್ಲಿ ಮಹದಾಯಿ ಹೋರಾಟ ತೀವ್ರಗೊಂಡ ಸಂದರ್ಭದಲ್ಲಿ ನವಲಗುಂದ ತಾಲೂಕಿನ ಯಮನೂರಿನಲ್ಲಿ ಪೊಲೀಸರು ಮಹಿಳೆಯರು, ವೃದ್ಧರು ಮೇಲೆ ಮನಬಂದಂತೆ ಲಾಠಿ ಚಾರ್ಜ್ ಮಾಡಿದ್ದರು.

    https://www.youtube.com/watch?v=tDKHZBurWR8

    https://www.youtube.com/watch?v=Ic2b-JmbR0Q