Tag: ಅಕ್ರಮ ಮದ್ಯ ಮಾರಾಟ

  • `ಮೇಡಂ ಎಣ್ಣೆಕಾಟ ತಪ್ಪಿಸಿ’-ಡಿಸಿ ರೋಹಿಣಿ ಸಿಂಧೂರಿಗೆ ರೇವಣ್ಣ ಮನವಿ

    `ಮೇಡಂ ಎಣ್ಣೆಕಾಟ ತಪ್ಪಿಸಿ’-ಡಿಸಿ ರೋಹಿಣಿ ಸಿಂಧೂರಿಗೆ ರೇವಣ್ಣ ಮನವಿ

    ಹಾಸನ: ಜಿಲ್ಲೆಯ ಹಳ್ಳಿಗಳಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಲೋಕೋಪಯೋಗಿ ಸಚಿವ ಎಚ್‍ಡಿ ರೇವಣ್ಣ ಅವರು ಡಿಸಿ ರೋಹಿಣಿ ಸಿಂಧೂರಿ ಅವರಲ್ಲಿ ಮನವಿ ಮಾಡಿದ್ದಾರೆ.

    ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಸಚಿವ ಸಭೆಯಲ್ಲಿ ಮಾತನಾಡಿದ ಸಚಿವ ರೇವಣ್ಣ, ಜಿಲ್ಲೆಯ ಎಲ್ಲೆಡೆ ಹಳ್ಳಿಗಳಲ್ಲಿ ಇರುವ ಕೆಲ ಟೀ ಕ್ಯಾಂಟೀನ್‍ಗಳು ಈಗ ಮದ್ಯದ ಅಂಗಡಿಯಾಗಿ ಬದಲಾಗಿವೆ. ಪ್ರತಿ ನಿತ್ಯ ಹಳ್ಳಿ ಹೆಂಗಸರು ಬಂದು ನನ್ನನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ ಎಂದರು.

    ಅಕ್ರಮ ಮದ್ಯ ಮಾರಾಟ ಕುರಿತು ಮಾಹಿತಿ ಲಭಿಸಿದರೆ ಅಂತ ಅಂಗಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಕೆಲ ಕ್ಯಾಂಟೀನ್‍ಗಳಲ್ಲಿ ಬೆಳಗ್ಗೆಯಿಂದ ರಾತ್ರಿ ವರೆಗೂ ಮಾರಾಟ ಮಾಡಲಾಗುತ್ತದೆ. ಅದ್ದರಿಂದ ಅವುಗಳಿಗೆ ಬೀಗ ಮುದ್ರೆ ಹಾಕಲು ಕೂಡ ಕ್ರಮಕೈಗೊಳ್ಳಿ ಎಂದು ಮನವಿ ಮಾಡಿದರು.

    ಮಾಜಿ ಪ್ರಧಾನಿ ದೇವೇಗೌಡರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಸಭೆಯಲ್ಲಿ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ರೇವಣ್ಣ ಅವರು ಗ್ರಾಮೀಣ ಭಾಗದ ಅಕ್ರಮ ಮದ್ಯ ಮಾರಾಟದ ಬಗ್ಗೆ ಜಿಲ್ಲಾಧಿಕಾರಿಗಳ ಗಮನಸೆಳೆದರು. ಇದನ್ನು ಓದಿ: ಮೂರೇ ತಿಂಗಳಲ್ಲಿ ಬಿಜೆಪಿಯನ್ನು ನಗರದಿಂದ ಕಳುಹಿಸಿಲ್ಲವೇ: ರೇವಣ್ಣ 

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಿದ್ದೆಗೆ ಜಾರಿದ ಕುಡುಕನನ್ನು ಕಚ್ಚಿ ಕಚ್ಚಿ ತಿಂದ ಕರಿ ಇರುವೆಗಳು!

    ನಿದ್ದೆಗೆ ಜಾರಿದ ಕುಡುಕನನ್ನು ಕಚ್ಚಿ ಕಚ್ಚಿ ತಿಂದ ಕರಿ ಇರುವೆಗಳು!

    ಚಿಕ್ಕಬಳ್ಳಾಪುರ: ಕಂಠಪೂರ್ತಿ ಮದ್ಯ ಕುಡಿದ ಅಮಲಿನಲ್ಲಿ ಗಡದ್ದಾಗಿ ನಿದ್ದೆಗೆ ಜಾರಿದ್ದ ವ್ಯಕ್ತಿಯೊಬ್ಬನನ್ನು ಕರಿ ಇರುವೆಗಳು ಕಚ್ಚಿ-ಕಚ್ಚಿ ತಿಂದಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಅಂತರಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಅಂತರಹಳ್ಳಿ ಗ್ರಾಮದ ತಿಮ್ಮರಾಜು ಇರುವೆಗಳ ದಾಳಿಗೆ ಒಳಗಾದ ವ್ಯಕ್ತಿ. ಅದೃಷ್ಟವಶಾತ್ ಮಧ್ಯಾಹ್ನವೇ ಘಟನೆ ನಡೆದಿದ್ದರಿಂದ ತಿಮ್ಮರಾಜು ಬದುಕುಳಿದಿದ್ದಾನೆ.

    ತಿಮ್ಮರಾಜು ಕುಡಿದ ಅಮಲಿನಲ್ಲಿ ಅಂತರಹಳ್ಳಿ ಗ್ರಾಮದ ದೇವಾಲಯವೊಂದರ ಮುಂದೆ ನಿದ್ದೆಗೆ ಜಾರಿದ್ದನು. ಈ ವೇಳೆ ತಿಮ್ಮರಾಜು ಮೈ ಮೇಲೆ ಮುತ್ತಿಕೊಂಡು ಕರಿ ಇರುವೆಗಳು, ಕಾಲು, ಕೈ, ಹೊಟ್ಟೆ, ಮೂಗು ಬಾಯಿ, ತಲೆ ಇಡೀ ದೇಹದ ಮೇಲೆ ದಾಳಿ ನಡೆಸಿದ್ದರಿಂದ ಅನೇಕ ಕಡೆ ಗಾಯಗಳಾಗಿವೆ. ಇರುವೆಗಳು ಕಚ್ಚುತ್ತಿವೆ ಎನ್ನುವ ಅರಿವು ಇಲ್ಲದೇ ತಿಮ್ಮರಾಜು ಬಿದ್ದಿದ್ದನು.

     

    ಇರುವೆ ಕಚ್ಚುತ್ತಿದ್ದರೂ ಹಾಗೇ ಮಲಗಿದ್ದನ್ನು ನೋಡಿದ ಗ್ರಾಮಸ್ಥರೊಬ್ಬರು ಬೆಚ್ಚಿಬಿದ್ದಿದ್ದಾರೆ. ಕೂಡಲೇ ವಿಷಯ ತಿಳಿದು ಗುಂಪುಗೂಡಿದ ಗ್ರಾಮಸ್ಥರು, ತಿಮ್ಮರಾಜುನನ್ನು ಎಚ್ಚರಿಸಿದ್ದಾರೆ. ಮಧ್ಯಾಹ್ನವೇ ಘಟನೆ ನಡೆದಿದ್ದರಿಂದ ತಿಮ್ಮರಾಜು ಭಾರೀ ಅನಾಹುತದಿಂದ ಪಾರಾಗಿದ್ದಾನೆ. ರಾತ್ರಿ ವೇಳೆ ಜನ ಮಲಗಿರುವಾಗ ಘಟನೆ ನಡೆದಿದ್ದರೇ ತಿಮ್ಮರಾಜು ಬದುಕುಳಿಯುವುದು ಕಷ್ಟವಾಗಿತ್ತು ಎಂದು ಗ್ರಾಮಸ್ಥರು ಹೇಳಿದ್ದಾರೆ.

    ಸದ್ಯ ಗಾಯಾಳು ತಿಮ್ಮರಾಜುನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ಗ್ರಾಮಸ್ಥರು ಅಕ್ರಮ ಮದ್ಯ ಮಾರಾಟದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಗ್ರಾಮದ ರೇಷನ್ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಹೀಗಾಗಿ ಇಂತಹ ಅನಾಹುತ ಸಂಭವಿಸಿದೆ. ಅಕ್ರಮ ಮದ್ಯ ಮಾರುವ ಅಂಗಡಿಗಳನ್ನು ಮುಚ್ಚಿಸಬೇಕು ಎಂದು ಆಗ್ರಹಿಸಿದ್ದಾರೆ.