Tag: ಅಕ್ರಮ ಮದ್ಯ

  • ರಾಯಚೂರು ಅಬಕಾರಿ ಪೊಲೀಸರ ದಾಳಿ – 2.77 ಲಕ್ಷ ಮೌಲ್ಯದ ಮದ್ಯ ಜಪ್ತಿ

    ರಾಯಚೂರು ಅಬಕಾರಿ ಪೊಲೀಸರ ದಾಳಿ – 2.77 ಲಕ್ಷ ಮೌಲ್ಯದ ಮದ್ಯ ಜಪ್ತಿ

    ರಾಯಚೂರು: ಅಕ್ರಮವಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯ ಸಾಗಣೆ ಮಾಡುತ್ತಿದ್ದ ಆರೋಪಿಯನ್ನ ಅಬಕಾರಿ ಪೊಲೀಸರು ರೆಡ್‍ಹ್ಯಾಂಡ್ ಆಗಿ ಹಿಡಿದಿದ್ದಾರೆ.

    ರಾಯಚೂರು ತಾಲೂಕಿನ ಚಿಕ್ಕಮಂಚಾಲಿ ಬಳಿ ಮದ್ಯ ಸಾಗಾಟ ಮಾಡುತ್ತಿದ್ದ ಆಟೋ ಜಪ್ತಿ ಮಾಡಿದ್ದಾರೆ. ತಲಮಾರಿ ಗ್ರಾಮದ ಖಾಜಾ ಹುಸೇನ್ ಎಂಬಾತ ಅಕ್ರಮವಾಗಿ ಮದ್ಯ ಸಾಗಾಣೆ ಮಾಡುತ್ತಿದ್ದ. ದಾಳಿ ವೇಳೆ ಅಬಕಾರಿ ಪೊಲೀಸರು 2,41,920 ಲೀಟರ್ ಮದ್ಯ ಮತ್ತು 78 ಸಾವಿರ ಲೀಟರ್ ಬಿಯರ್ ಜಪ್ತಿಮಾಡಿದ್ದಾರೆ. ಇದನ್ನೂ ಓದಿ: ನಡು ರಸ್ತೆಯಲ್ಲೇ ಮಾರಕಾಸ್ತ್ರದಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ

    ಸುಮಾರು 2,77,996 ರೂ.ಮೌಲ್ಯದ ಮದ್ಯ ಜಪ್ತಿಯಾಗಿದೆ. ದಾಳಿ ಹಿನ್ನೆಲೆ ರಾಯಚೂರು ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಅತ್ಯಾಚಾರಕ್ಕೆ ವಿರೋಧಿಸಿದ ವೃದ್ಧೆಯ ಖಾಸಗಿ ಅಂಗಗಳ ಮೇಲೆ ಹಲ್ಲೆ ನಡೆಸಿ ಕೊಲೆಗೈದ!

  • ಅಕ್ರಮ ಮಾರಾಟ – ಮನೆಗೆ ನುಗ್ಗಿ ಮದ್ಯಗಳನ್ನು ನಾಶಗೊಳಿಸಿದ ಮಹಿಳೆಯರು

    ಅಕ್ರಮ ಮಾರಾಟ – ಮನೆಗೆ ನುಗ್ಗಿ ಮದ್ಯಗಳನ್ನು ನಾಶಗೊಳಿಸಿದ ಮಹಿಳೆಯರು

    ಕಾರವಾರ: ಅಕ್ರಮವಾಗಿ ದಂಧೆ ಮಾಡುತ್ತಿದ್ದವರ ಮನೆಗಳಿಗೆ ನೂರಾರು ಮಹಿಳೆಯರು ನುಗ್ಗಿ, ಮಾರಾಟಕ್ಕೆ ತರಲಾಗಿದ್ದ ಮದ್ಯದ ಪೊಟ್ಟಣಗಳನ್ನು ಪತ್ತೆ ಹಚ್ಚಿ ನಾಶಪಡಿಸಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ನಡೆದಿದೆ.

    ತಾಲೂಕಿನ ಕಣ್ಣಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಳಿಕೇರಿ ಸಮೀಪದ ದೇಶಪಾಂಡೆ ನಗರದಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ಹಾಗೂ ಪೊಲೀಸರಿಗೆ ದೂರು ನೀಡಲಾಗಿತ್ತು. ಆದರೂ ಅಧಿಕಾರಿಗಳು ಕ್ರಮ ಜರುಗಿಸದೇ ನಿರ್ಲಕ್ಷಿಸಿದ್ದರು. ಈ ಹಿನ್ನೆಲೆಯಲ್ಲಿ ಮಹಿಳೆಯರೇ ಅಕ್ರಮ ಮದ್ಯವನ್ನು ನಾಶ ಪಡಿಸಿದ್ದಾರೆ.

    ಗ್ರಾಮದ ಕೆಲವು ಮನೆಗಳು ಹಾಗೂ ಬಾರ್ ಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದು, ಹಲವು ಯುವಕರು ಮದ್ಯದ ವ್ಯಸನದಿಂದ ಅನಾರೋಗ್ಯ ಪೀಡಿತರಾಗಿದ್ದರು. ಅಕ್ರಮ ಮದ್ಯ ಮಾರಾಟ ಸಂಬಂಧಿಸಿದಂತೆ ಇಲಾಖೆಗಳಿಗೆ ದೂರು ನೀಡಿದರೂ, ಕ್ರಮ ಕೈಗೊಳ್ಳದಿದ್ದರಿಂದ ಅಕ್ರಮ ಮದ್ಯ ಮಾರಾಟ ಅಧಿಕವಾಗಿ ನಡೆಯುತ್ತಿತ್ತು.

    ಇದರಿಂದ ಆಕ್ರೋಶಗೊಂಡ ಸ್ಥಳೀಯ ಮಹಿಳೆಯರು ಹಾಗೂ ಮಂಜುನಾಥ ಪ್ರಗತಿ ಬಂಧು ಸಂಘದ ಸದಸ್ಯರು ಇಂದು ಮದ್ಯ ಮಾರಾಟ ಮಾಡುತ್ತಿದ್ದ ಅಂಗಡಿಗಳು ಹಾಗೂ ಮನೆಗೆ ತೆರಳಿ ಅಕ್ರಮ ಮದ್ಯವನ್ನು ಪತ್ತೆ ಮಾಡಿ ನಾಶ ಪಡಿಸಿದ್ದಾರೆ.

    ತಾಲೂಕಿನಲ್ಲಿ ನಡೆಯುತ್ತಿರುವ ಇಂತಹ ಅನೇಕ ಕಾನೂನು ಬಾಹಿರ ಚಟುವಟಿಕೆಗಳಿಗೆ ಸ್ಥಳೀಯ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಇದು ಜಿಲ್ಲೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ಬರಬೇಕು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಶಿರಸಿ ಡಿವೈಎಸ್ಪಿ ಹಾಗೂ ಶಿರಸಿ ಉಪ ವಿಭಾಗಾಧಿಕಾರಿಗಳು ಯಲ್ಲಾಪುರದಲ್ಲಿಯೇ ಸಾರ್ವಜನಿಕರ ಕುಂದುಕೊರತೆ ಸಭೆ ನಡೆಸಬೇಕು ಎಂದು ಗ್ರಾಮದ ಮಹಿಳೆಯರು ಪ್ರತಿಭಟನೆ ನಡೆಸಿ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಟ್ರ್ಯಾಕ್ಟರ್‌ಗೆ ಗುದ್ದಿದ ಕಾರ್- ಐದು ಮಂದಿ ಸ್ಥಳದಲ್ಲೇ ಸಾವು

    ಶ್ರೀ ಮಂಜುನಾಥ ಪ್ರಗತಿ ಬಂಧು ಸಂಘದ ಸದಸ್ಯರಾದ ನಕಲಿ ದೂಳು ಕೊಕರೆ, ನಾಗಿ ಲಕ್ಕು ಕೊಕರೆ, ಶೋಭಾ ದೋಂಡು ಕೊಕರೆ, ಸಾವಿತ್ರಿ ಮಾಕು ಕೊಕರೆ, ನಕಲಿ ನಾವು ಪಟಕಾರೆ, ಸವಿತಾ ಜಾನು ಖರಾತ್, ಕಣ್ಣಿಗೇರಿ ಗ್ರಾಮ ಪಂಚಾಯ್ತಿ ಸದಸ್ಯೆ ಲಕ್ಷ್ಮೀ ವಸಂತ ಪಾಟೀಲ ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದರು. ಇದನ್ನೂ ಓದಿ: ಕೆಟ್ಟದಾಗಿ ಮುಟ್ಟಿದ್ದಕ್ಕಾಗಿ ಛೀಮಾರಿ ಹಾಕಿದ ಮಹಿಳೆಯನ್ನೇ ಕೊಲ್ಲಲು ಮುಂದಾದ ವ್ಯಕ್ತಿ ಅರೆಸ್ಟ್

  • 76,080 ರೂ. ಗೋವಾ ಮದ್ಯ, ವಾಹನ ಜಪ್ತಿ- ಆರೋಪಿ ಪರಾರಿ

    76,080 ರೂ. ಗೋವಾ ಮದ್ಯ, ವಾಹನ ಜಪ್ತಿ- ಆರೋಪಿ ಪರಾರಿ

    ಕಾರವಾರ: ಗೋವಾ ಮೂಲಕ ಅಕ್ರಮವಾಗಿ ಮದ್ಯ ಸಾಗಿಸುತಿದ್ದ ವಾಹನವನ್ನು ಕಾರವಾರ ನಗರ ಪೊಲೀಸರು ಜಪ್ತಿ ಮಾಡಿದ್ದು, ವಾಹನದಲ್ಲಿದ್ದ ಒಟ್ಟು ಅಂದಾಜು 76,080 ರೂ.ಗಳ ದಾಖಲೆ ರಹಿತ ಗೋವಾ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ.

    ಆಟೋದಲ್ಲಿ ಮದ್ಯ ತುಂಬಿಕೊಂಡು ಹೋಗುತ್ತಿರುವಾಗ ಕಾರವಾರ ಶಹರ ಠಾಣಾ ವ್ಯಾಪ್ತಿಯ ಚಂದ್ರ ದೇವಿವಾಡ ಹಿರೇಶಿಟ್ಟಾ ಬಾಡದ ಬಳಿ ಪೊಲೀಸರು ದಾಳಿ ನಡೆಸಿ, ಮದ್ಯವನ್ನು ವಶಕ್ಕೆ ಪಡೆದಿದ್ದಾರೆ. ದಾಳಿ ವೇಳೆ ಆರೋಪಿ ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಕಾರವಾರದ ಹಿರೇಶಿಟ್ಟಾ ಬಾಡದ ನಿವಾಸಿ ಶ್ರೀಪಾದ್ ಪರಾರಿಯಾದ ಆರೋಪಿಯಾಗಿದ್ದಾನೆ.

    ಖಚಿತ ಮಾಹಿತಿ ಮೇರೆಗೆ ಸಿಪಿಐ ಸಂತೋಷ್ ಶಟ್ಟಿ ಮಾರ್ಗದರ್ಶನದಲ್ಲಿ ಪಿಎಸ್‍ಐ ಸಂತೋಷ್ ಕುಮಾರ್.ಎಮ್ ಹಾಗೂ ಡಿ.ವೈಎಸ್.ಪಿ ಅರವಿಂದ್ ಕಲ್ಲಗುಜ್ಜಿ ದಾಳಿ ನಡೆಸಿದ್ದಾರೆ. ಘಟನೆ ಸಂಬಂಧ ಕಾರವಾರ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸೀಜ್ ಮಾಡಿ ಠಾಣೆಯಲ್ಲಿಟ್ಟಿದ್ದ 1,459 ಬಾಕ್ಸ್ ಮದ್ಯ ನಾಪತ್ತೆ- ಇಲಿ ಕಾರಣವೆಂದ ಪೊಲೀಸರು

    ಸೀಜ್ ಮಾಡಿ ಠಾಣೆಯಲ್ಲಿಟ್ಟಿದ್ದ 1,459 ಬಾಕ್ಸ್ ಮದ್ಯ ನಾಪತ್ತೆ- ಇಲಿ ಕಾರಣವೆಂದ ಪೊಲೀಸರು

    – 35 ಲಕ್ಷ ರೂ. ಬೆಲೆಬಾಳುವ ಮದ್ಯ ಕಾಣೆ

    ಲಕ್ನೋ: ಸೀಜ್ ಮಾಡಿ ಪೊಲೀಸ್ ಠಾಣೆಯಲ್ಲಿರಿಸಿದ್ದ 1,459 ಬಾಕ್ಸ್ ಅಕ್ರಮ ಮದ್ಯ ಕಾಣೆಯಾಗಲು ಇಲಿಗಳು ಕಾರಣ ಎಂದು ಪೊಲೀಸರು ದೂರಿರುವ ಘಟನೆ ಉತ್ತರ ಪ್ರದೇಶದ ಇಟಾ ಜಿಲ್ಲೆಯಲ್ಲಿ ನಡೆದಿದೆ.

    ಇಟಾ ಜಿಲ್ಲೆಯ ಕೊತ್ವಾಲಿ ದೇಹತ್ ಪೊಲೀಸ್ ಠಾಣೆಯಲ್ಲಿದ್ದ 1,459 ಅಕ್ರಮ ಮದ್ಯದ ಬಾಕ್ಸ್ ಗಳು ಕಾಣೆಯಾಗಿದ್ದು, ಇದೆಲ್ಲವನ್ನೂ ಪೊಲೀಸರು ಸೀಜ್ ಮಾಡಿ ಠಾಣೆಯಲ್ಲಿಟ್ಟುಕೊಂಡಿದ್ದರು. ಆದರೆ ಇದೀಗ ಮದ್ಯದ ಎಲ್ಲ ಬಾಕ್ಸ್ ಗಳು ಕಾಣೆಯಾಗಿವೆ. ಈ ಬಗ್ಗೆ ಪೊಲೀಸರನ್ನು ಕೇಳಿದರೆ ಇದೆಲ್ಲದಕ್ಕೂ ಇಲಿಗಳೇ ಕಾರಣ, ಬಾಕ್ಸ್ ಗಳನ್ನು ಕಚ್ಚಿ ಹಾಳು ಮಾಡಿವೆ ಎಂದು ಹೇಳಿದ್ದಾರೆ.

    ಅಕ್ರಮ ಮದ್ಯ ತುಂಬಿದ್ದ ಪ್ಲಾಸ್ಟಿಕ್ ಕ್ಯಾನ್‍ಗಳನ್ನು ಇಲಿಗಳು ಕಚ್ಚಿದ್ದು, ಗಾಜಿನ ಬಾಟಲಿ ಒಡೆದು, ಇತರ ಹಾನಿಗೊಳಗಾದ ಚೀಲಗಳನ್ನು ಹರಿದಿವೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆಗ್ರಾ ವಲಯದ ಎಡಿಜಿ ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಿದ್ದು, ಅಲೀಘರ್ ಐಪಿಎಸ್ ಅಧಿಕಾರಿಗೆ ತನಿಖೆ ನಡೆಸುವಂತೆ ಸೂಚಿಸಲಾಗಿದೆ. ಬರೋಬ್ಬರಿ 35 ಲಕ್ಷ ರೂ. ಬೆಲೆಬಾಳುವ ಮದ್ಯ ಕಾಣೆಯಾಗಿದೆ ಎಂದು ಅಂದಾಜಿಸಲಾಗಿದೆ. ಪ್ರಾಥಮಿಕ ತನಿಖೆ ಪ್ರಕಾರ ಗ್ಯಾಂಗ್‍ಸ್ಟರ್ ಬಂಟು ಯಾದವ್‍ಗೆ ಪೊಲೀಸರು ಮದ್ಯವನ್ನು ಮಾರಾಟ ಮಾಡಿದ್ದಾರೆ ಎನ್ನಲಾಗಿದ್ದು, ಫೇಕ್ ಢಾಬಾ ಎನ್‍ಕೌಂಟರ್ ಕೇಸ್‍ಗೆ ಸಂಬಂಧಿಸಿದಂತೆ ಯಾದವ್‍ನನ್ನು ಶುಕ್ರವಾರ ಬಂಧಿಸಲಾಗಿದೆ.

    ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
    ಜಿಲ್ಲಾ ಮ್ಯಾಜಿಸ್ಟ್ರೇಟ್ ವಿಭಾ ಚಹಲ್ ಹಾಗೂ ಎಸ್‍ಎಸ್‍ಪಿ ಸುನಿಲ್ ಸಿಂಗ್ ಅವರು ಸರ್ಪ್ರೈಸ್ ಇನ್‍ಸ್ಪೆಕ್ಷನ್‍ಗೆ ಠಾಣೆಗೆ ಆಗಮಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. 1,459 ಬಾಕ್ಸ್ ಮದ್ಯ ಕಾಣೆಯಾಗಿರುವುದು ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. ಎಸ್‍ಎಚ್‍ಒ ಇಂದ್ರೇಶ್‍ಪಾಲ್ ಸಿಂಗ್ ಹಾಗೂ ಪ್ರಧಾನ ಕ್ಲರ್ಕ್ ರಸಾಲ್ ಸಿಂಗ್ ಪ್ರಕರಣದ ಕುರಿತು ವಿವರಿಸುವಲ್ಲಿ ವಿಫಲರಾಗಿದ್ದಾರೆ.

    ಬಳಿಕ ಎಸ್‍ಎಚ್‍ಒ ಹಾಗೂ ಕ್ಲರ್ಕ್ ವಿರುದ್ಧ ಎಫ್‍ಐಆರ್ ದಾಖಲಾಗಿದ್ದು, ಇಬ್ಬರನ್ನು ಅಮಾನತು ಮಾಡಲಾಗಿದೆ. ಇಬ್ಬರು ಪೊಲೀಸ್ ಅಧಿಕಾರಿಗಳ ವಿರುದ್ಧ ಸೆಕ್ಷನ್ 409(ನಂಬಿಕೆ ಇರಿಸಿದ್ದ ಸಾರ್ವಜನಿಕ ಸೇವೆಯಲ್ಲಿರುವವರಿಂದ ಅಪರಾಧ ಕೃತ್ಯ), ಭ್ರಷ್ಟಾಚಾರ ತಡೆ ಕಾಯ್ದೆ, ಎಕ್ಸೈಜ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಪ್ರಸ್ತುತ ಎಸ್‍ಎಚ್‍ಒ ತಲೆಮರೆಸಿಕೊಂಡಿದ್ದಾರೆ.

    ಈ ಕುರಿತು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದು, 239 ಬಾಕ್ಸ್ ಗಳನ್ನು ಇಲಿಗಳು ಡ್ಯಾಮೇಜ್ ಮಾಡಿವೆ ಎಂದು ಪೊಲೀಸ್ ಜನರಲ್ ಡೈರಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ, ಈ ವಿಷಯ ಬಾಲಿಶ ಎನ್ನಿಸುತ್ತದೆ. ಕೃತ್ಯವನ್ನು ಮುಚ್ಚಿಡಲು ಈ ರೀತಿ ಉಲ್ಲೇಖಿಸಲಾಗಿದೆ ಎಂದು ಭಾಸವಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

  • ಮದ್ಯ ಮಾಫಿಯಾಕ್ಕೆ  ಕಾನ್ಸ್‌ಟೇಬಲ್‌  ಬಲಿ – ಇನ್ಸ್‌ಪೆಕ್ಟರ್ ಗಂಭೀರ ಗಾಯ

    ಮದ್ಯ ಮಾಫಿಯಾಕ್ಕೆ ಕಾನ್ಸ್‌ಟೇಬಲ್‌ ಬಲಿ – ಇನ್ಸ್‌ಪೆಕ್ಟರ್ ಗಂಭೀರ ಗಾಯ

    ಲಕ್ನೋ: ಅಕ್ರಮ ಮದ್ಯ ಕಾರ್ಖಾನೆ ಮೇಲೆ ದಾಳಿ ನಡೆಸಿದ ಇನ್ಸ್‌ಪೆಕ್ಟರ್ ಹಾಗೂ  ಕಾನ್ಸ್‌ಟೇಬಲ್‌  ಮೇಲೆ ಅಪರಿಚಿತ ವ್ಯಕ್ತಿಗಳು ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದ ಕಾಸ್ಗಂಜ್ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ.

    ಘಟನೆ ವೇಳೆ ತೀವ್ರವಾಗಿ ಗಾಯಗೊಂಡ  ಕಾನ್ಸ್‌ಟೇಬಲ್  ದೇವೇಂದ್ರ ಮೃತಪಟ್ಟಿದ್ದು, ಸಬ್-ಇನ್ಸ್‌ಪೆಕ್ಟರ್ ಅಶೋಕ್ ಕುಮಾರ್ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಈ ಕುರಿತಂತೆ ಮಾತನಾಡಿದ ಜಿಲ್ಲಾಧಿಕಾರಿ ಚಂದ್ರಪ್ರಕಾಶ್ ಸಿಂಗ್, ಸಿಧ್ಪುರ್ ಪೊಲೀಸ್ ಠಾಣಾ ಪ್ರದೇಶದ ನಾಗ್ಲಾ ಧಿಮರ್ ಗ್ರಾಮದಲ್ಲಿರುವ ಅಕ್ರಮ ಮದ್ಯ ಕಾರ್ಖಾನೆ ಮೇಲೆ ಇವರು ದಾಳಿ ನಡೆಸಿದ್ದರು. ಈ ವೇಳೆ ಅಪರಿಚಿತ ವ್ಯಕ್ತಿಗಳು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಪರಿಣಾಮ  ಕಾನ್ಸ್‌ಟೇಬಲ್‌  ದೇವೇಂದ್ರ ತೀವ್ರ ಹೊಡೆತದಿಂದ ಮೃತಪಟ್ಟಿದ್ದು, ಇನ್ಸ್‌ಪೆಕ್ಟರ್ ಅಶೋಕ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

    ಘಟನೆ ವಿಚಾರವಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೃತ  ಕಾನ್ಸ್‌ಟೇಬಲ್‌  ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಘೋಷಿಸಿದ್ದು, ಕುಟುಂಬದ ಸದಸ್ಯರಿಗೆ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದಾರೆ ಹಾಗೂ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ಅಲ್ಲದೆ ಯುಪಿ ಸರ್ಕಾರ ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೇ ಅಪರಾಧ ಮತ್ತು ಅಪರಾಧಿಗಳ ಬಗ್ಗೆ ಶೂನ್ಯ ಸಹಿಷ್ಣುತೆಯ ನೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಹಾಗಾಗಿ ಪ್ರಕರಣಕ್ಕೆ ಸಂಬಂಧಿಸಿದವರ ವಿರುದ್ಧ ಕೂಡಲೇ ಕಠಿಣ ಕ್ರಮ ಕೈ ಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಟ್ವೀಟ್ ಮಾಡಿದ್ದಾರೆ.

  • ಅಕ್ರಮ ಮದ್ಯ ಮಾರಾಟ ಪರಿಶೀಲನೆ- ಬೀದಿಯಲ್ಲೇ ಬಡಿದಾಡಿಕೊಂಡ ಅಬಕಾರಿ ಪೊಲೀಸರು

    ಅಕ್ರಮ ಮದ್ಯ ಮಾರಾಟ ಪರಿಶೀಲನೆ- ಬೀದಿಯಲ್ಲೇ ಬಡಿದಾಡಿಕೊಂಡ ಅಬಕಾರಿ ಪೊಲೀಸರು

    ಮಡಿಕೇರಿ: ಅಕ್ರಮ ಮದ್ಯ ಮಾರಾಟ ಪರಿಶೀಲನೆ ಮಾಡಲು ಹೋಗಿದ್ದ ಅಬಕಾರಿ ಪೊಲೀಸರು ಅಶ್ಲೀಲ ಪದಗಳಿಂದ ಒಬ್ಬರನೊಬ್ಬರು ನಿಂದಿಸಿ, ನಡು ಬೀದಿಯಲ್ಲೇ ಬಡಿದಾಡಿಕೊಂಡಿದ್ದಾರೆ.

    ಕೊಡಗು ಜಿಲ್ಲೆಯ ಸೋಮವಾರಪೇಟೆ ಅಬಕಾರಿ ಇನ್ಸ್ ಪೆಕ್ಟರ್ ನಟರಾಜ್ ಮತ್ತು ಉಪ ಅಧೀಕ್ಷಕ ಶಿವಪ್ಪ ನಡುಬೀದಿಯಲ್ಲೇ ಹೊಡೆದಾಡಿಕೊಂಡಿದ್ದಾರೆ. ಲಾಕ್‍ಡೌನ್ ಆಗಿರುವುದರಿಂದ ಎಲ್ಲಿಯೂ ಮದ್ಯ ಮಾರುವಂತಿಲ್ಲ. ಹೀಗಾಗಿ ಗ್ರಾಮೀಣ ಭಾಗದ ಜನರು ಕಳ್ಳಬಟ್ಟಿ, ಅಕ್ರಮ ಮದ್ಯ ಮಾರಾಟಕ್ಕೆ ಮುಂದಾಗಿದ್ದಾರೆ ಎನ್ನುವ ಆರೋಪಗಳು ಕೇಳಿಬಂದಿವೆ. ಹೀಗಾಗಿ ಉಪ ಅಧೀಕ್ಷಕ ಶಿವಪ್ಪ ಮತ್ತು ತಂಡ ಪರಿಶೀಲನೆಗೆ ಹೋಗಿತ್ತು.

    ಈ ವೇಳೆ ಸ್ಥಳಕ್ಕೆ ಬಂದ ಅಬಕಾರಿ ಇನ್ಸ್ ಪೆಕ್ಟರ್ ನಟರಾಜ್ ಏಕಾಏಕಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಬಳಿಕ ಇಬ್ಬರೂ ಕೈ ಕೈ ಮಿಲಾಸಿ ಹಾದಿ ರಂಪ ಮಾಡಿಕೊಂಡಿದ್ದಾರೆ. ಪೊಲೀಸ್ ಅಧಿಕಾರಿಗಳು ಎನ್ನುವುದನ್ನೂ ಮರೆತು ರಸ್ತೆಯಲ್ಲೇ ಹೊಡೆದಾಡಿಕೊಂಡಿದ್ದಾರೆ.

  • ಲಾಕ್‍ಡೌನ್ ಮಧ್ಯೆಯೂ ಅಕ್ರಮ ಮದ್ಯದ ಕಾರುಬಾರು – ಓರ್ವ ಅರೆಸ್ಟ್

    ಲಾಕ್‍ಡೌನ್ ಮಧ್ಯೆಯೂ ಅಕ್ರಮ ಮದ್ಯದ ಕಾರುಬಾರು – ಓರ್ವ ಅರೆಸ್ಟ್

    ರಾಯಚೂರು: ಲಾಕ್‍ಡೌನ್ ಹಿನ್ನೆಲೆ ಮದ್ಯ ಮಾರಾಟಕ್ಕೆ ಸಂಪೂರ್ಣ ಬ್ರೇಕ್ ಬಿದ್ದಿದ್ದರೂ ಸಹ ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟ ಹಾಗೂ ಸಂಗ್ರಹ ಮಾತ್ರ ಎಗ್ಗಿಲ್ಲದೆ ನಡೆದಿದೆ.

    ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಅಬಕಾರಿ ಪೊಲೀಸರು ಸಿಂಧನೂರಿನಲ್ಲಿ ಗಾಂಧಿನಗರದಲ್ಲಿ ದಾಳಿ ಮಾಡಿ ಲಕ್ಷಾಂತರ ರೂಪಾಯಿ ಅಕ್ರಮ ಮದ್ಯ ಜಪ್ತಿ ಮಾಡಿದ್ದಾರೆ. ಜೊತೆಗೆ ರಂಗಾಪುರ ಕ್ಯಾಂಪ್ ನಿವಾಸಿ ತೇಜ ಎಂಬುವವನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

    ಗಾಂಧಿನಗರದ ಗೋದಾಮಿನಲ್ಲಿ ಸಂಗ್ರಹಿಸಿಡಲಾಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಅಕ್ರಮ ಮದ್ಯ ಹಾಗೂ ಒಂದು ಕಾರನ್ನು ಅಬಕಾರಿ ಪೊಲೀಸರು ಜಪ್ತಿ ಮಾಡಿದ್ದಾರೆ. ದಾಳಿ ವೇಳೆ 96 ಲೀಟರ್ ಮದ್ಯ, 41 ಲೀಟರ್ ಬಿಯರ್ ದೊರೆತಿದೆ. ಕೊರೊನಾ ವೈರಸ್ ಸೋಂಕು ಹರಡುವಿಕೆ ತಡೆಗಟ್ಟುವ ಹಿನ್ನೆಲೆ ಮದ್ಯ ಮಾರಾಟ ಲಾಕ್‍ಡೌನ್ ಆಗಿದ್ದರೂ ಅಕ್ರಮಕ್ಕೆ ಮಾತ್ರ ಬ್ರೇಕ್ ಬೀಳುತ್ತಿಲ್ಲ. ಹೀಗಾಗಿ ಅಬಕಾರಿ ಪೊಲೀಸರು ನಿರಂತರವಾಗಿ ದಾಳಿ ನಡೆಸಿದ್ದಾರೆ.

  • ಲಾಕ್‍ಡೌನ್ ಬಗ್ಗೆ ಜಾಗೃತಿ – ಅಕ್ರಮ ಮದ್ಯ ಮಾರಾಟಕ್ಕೆ ಪೊಲೀಸ್ ಬೆಂಬಲದ ಆರೋಪ

    ಲಾಕ್‍ಡೌನ್ ಬಗ್ಗೆ ಜಾಗೃತಿ – ಅಕ್ರಮ ಮದ್ಯ ಮಾರಾಟಕ್ಕೆ ಪೊಲೀಸ್ ಬೆಂಬಲದ ಆರೋಪ

    ರಾಯಚೂರು: ರಾಜ್ಯದಲ್ಲಿ ಮಹಾಮಾರಿ ಕೊರೊನಾ ವೈರಸ್‍ನ ಅಟ್ಟಹಾಸ ಮುಂದುವರೆದಿದೆ. ಕೊರೊನಾ ಭೀತಿಗೆ ನಗರದಿಂದ ಜನ ತಮ್ಮ ಹಳ್ಳಿಗಳತ್ತ ಮುಖ ಮಾಡಿದ್ದಾರೆ. ಈ ಬೆನ್ನಲ್ಲೇ ಹಳ್ಳಿಗಳಲ್ಲಿಯೂ ಈ ಬಗ್ಗೆ ಯುವಕರು ಹಾಗೂ ಗ್ರಾಮ ಪಂಚಾಯ್ತಿ ಸದಸ್ಯರು ಡಂಗೂರ ಬಾರಿಸುತ್ತಾ ಜಾಗೃತಿ ಮೂಡಿಸುತ್ತಿದ್ದಾರೆ.

    ರಾಯಚೂರು ಜಿಲ್ಲೆಯ ಡಿ.ರಾಂಪೂರ್ ಗ್ರಾಮದಲ್ಲಿ ಯುವಕರ ತಂಡ, ಗ್ರಾಮ ಪಂಚಾಯ್ತಿ ಸದಸ್ಯರು ಹಾಗೂ ಅಂಗನವಾಡಿ ಸಹಾಯಕಿಯರು ಸೇರಿ ಮನೆ ಮನೆಗೆ ಹೋಗಿ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಒಂದೆಡೆ ಮನೆಯಿಂದ ಹೊರ ಬರಬೇಡಿ, ತೀರಾ ಅಗತ್ಯ ಕೆಲಸಗಳಿದ್ದರೆ ಮಾತ್ರ ಮನೆಯಿಂದ ಹೊರ ಬನ್ನಿ, ಎಲ್ಲರೂ ಮಾಸ್ಕ್ ಗಳನ್ನ ಧರಿಸಿ ಎಂದು ಜಾಗೃತಿ ಮೂಡಿಸಲಾಗುತ್ತಿದೆ.

    ಇನ್ನೊಂದೆಡೆ 21 ದಿನಗಳ ತನಕ ಪ್ರಧಾನಿ ನರೇಂದ್ರ ಮೋದಿ ಲಾಕ್‍ಡೌನ್ ಘೋಷಿಸಿದರೂ ಈ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ. ಕಿರಾಣಿ ಅಂಗಡಿಗಳಲ್ಲಿ ಹೋಗುವ ಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ. ಜನ ಒಟ್ಟೊಟ್ಟಿಗೆ ಬಸ್ ನಿಲ್ದಾಣ, ಹಳ್ಳಿ ಕಟ್ಟೆಗಳಲ್ಲಿ ಗುಂಪು ಕಟ್ಟಿಕೊಂಡು ತಿರುಗಾಡುತ್ತಿದ್ದಾರೆ. ಹೀಗಾಗಿ ಗ್ರಾಮಸ್ಥರು ಯಾಪಲದಿನ್ನಿ ಪೊಲೀಸರಿಗೆ ಕೊರೊನಾ ವೈರಸ್ ಬಗ್ಗೆ ಗ್ರಾಮಗಳಿಗೆ ಬಂದು ಜಾಗೃತಿ ಮೂಡಿಸಿ ಎಂದು ಮನವಿ ಮಾಡಿದರೂ ಪೊಲೀಸರು ಮಾತ್ರ ಕಾಟಚಾರಕ್ಕೆ ಹಳ್ಳಿಗಳಿಗೆ ಬಂದು ಹೋಗ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

    ಹೀಗಾಗಿ ಸ್ವತಃ ಊರಿನ ಯುವಕರು ಹಾಗೂ ಪಂಚಾಯ್ತಿ ಸದಸ್ಯರು ಸೇರಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಗ್ರಾಮದಲ್ಲಿ ಅತ್ಯವಶ್ಯಕವಾಗಿರುವ ಅಂಗಡಿಗಳನ್ನು ಮಾತ್ರ ತೆರೆಯಬೇಕು. ಅಲ್ಲಿ ಕೂಡ ಸಾಮಾಜಿಕ ಅಂತರ ಕಾಯ್ದುಕೊಂಡು ಲೈನ್ ಬಾಕ್ಸ್ ಗಳಲ್ಲಿ ನಿಂತು ವ್ಯವಹರಿಸಬೇಕು ಅಂತ ಜಾಗೃತಿ ಮೂಡಿಸಲಾಗುತ್ತಿದೆ.

    ಲಾಕ್‍ಡೌನ್ ನಡುವೆಯೂ ಮೀನು ಹಿಡಿಯುತ್ತಿರುವ ಜನ
    ಲಾಕ್‍ಡೌನ್ ಘೋಷಣೆ ಬಳಿಕ ಜನರು ಮನೆಯಲ್ಲಿಯೇ ಇರಬೇಕು ಎಂದು ತಿಳಿಸಿ ಹೇಳಿದರೂ ಡಿ.ರಾಂಪೂರ್, ಆತ್ಕೂರು, ವಡ್ಡೆಪಲ್ಲಿ, ಯಾಪಲದಿನ್ನಿ, ಕೊರ್ತಕುಂದ ಗ್ರಾಮಗಳಲ್ಲಿ ಮೀನುಗಾರರು ಮೀನು ಹಿಡಿಯಲು ನದಿಗೆ ಇಳಿಯುತ್ತಿದ್ದಾರೆ. ಇತ್ತ ಯಾಪಲದಿನ್ನಿ ಪೊಲೀಸ್ ಠಾಣೆ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟವಾಗುತ್ತಿದ್ದರೂ ಪೊಲೀಸರು ಮಾತ್ರ ಕಣ್ಮುಂಚ್ಚಿಕೊಂಡು ಕುಳಿತಿದ್ದಾರೆ. ಮದ್ಯ ಮಾರಾಟಗಾರರ ಜೊತೆ ಪೊಲೀಸರು ಹಣ ವಸೂಲಿ ಮಾಡುತ್ತಿದ್ದಾರೆ. ಹೀಗಾಗಿ ಗ್ರಾಮಗಳಿಗೆ ಪೊಲೀಸರು ಭೇಟಿ ನೀಡ್ತಿಲ್ಲ. ಸಂಜೆಯಿಂದ ರಾತ್ರಿ ತನಕ ಮದ್ಯ ಖರೀದಿಗೆ ಜನ ಗುಂಪು ಸೇರ್ತಾರೆ ಅಂತ ಸ್ಥಳೀಯರು ಆರೋಪಿಸಿದ್ದಾರೆ.

  • 12 ಲಕ್ಷ ಮೌಲ್ಯದ ಅಕ್ರಮ ಗೋವಾ ಮದ್ಯ ವಶ- ಆರೋಪಿ ಬಂಧನ

    12 ಲಕ್ಷ ಮೌಲ್ಯದ ಅಕ್ರಮ ಗೋವಾ ಮದ್ಯ ವಶ- ಆರೋಪಿ ಬಂಧನ

    ಕಾರವಾರ: ಗೋವಾದಿಂದ ಅಕ್ರಮವಾಗಿ ರಾಜ್ಯಕ್ಕೆ ಲಾರಿ ಮೂಲಕ ಮದ್ಯ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಲಾರಿ ಸಮೇತ ವಶಪಡಿಸಿಕೊಳ್ಳಲಾಗಿದೆ.

    ಕಾರವಾರದ ಮಾಜಾಳಿಯಲ್ಲಿ ಘಟನೆ ನಡೆದಿದ್ದು, ತಮಿಳುನಾಡು ಮೂಲದ ಲಕ್ಷ್ಮಣ್ ನನ್ನು ಕಾರವಾರ ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈತನ ಲಾರಿಯಲ್ಲಿದ್ದ 12.57 ಲಕ್ಷ ರೂ. ಮೌಲ್ಯದ ಒಟ್ಟು 114 ಲೀಟರ್ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.

    ಆರೋಪಿಯು ಗೋವಾದಿಂದ ಕಬ್ಬಿಣ ತುಂಬಿದ ಲಾರಿಯಲ್ಲಿ ಕಾರವಾರದ ಮೂಲಕ ತಮಿಳುನಾಡಿಗೆ ಹೋಗುತ್ತಿದ್ದ. ಈ ವೇಳೆ ಗಡಿ ಭಾಗದ ಮಾಜಾಳಿ ತಪಾಸಣಾ ಕೇಂದ್ರದಲ್ಲಿ ತಪಾಸಣೆ ಮಾಡುವ ವೇಳೆ 12.57 ಲಕ್ಷ ರೂ. ಮೌಲ್ಯದ 72 ಸಾವಿರ ಲೀಟರ್ ವಿವಿಧ ಬ್ರಾಂಡ್ ನ ಗೋವಾ ಮದ್ಯ ಹಾಗೂ 42 ಸಾವಿರ ಲೀಟರ್ ನ ಬಿಯರ್ ವಶಪರಿಸಿಕೊಳ್ಳಲಾಗಿದೆ.

  • ಅಕ್ರಮ ಮದ್ಯ ಮಾರಾಟದ ವಿರುದ್ಧ ಸಮರ ಸಾರಿದ ಎಸ್‍ಪಿ – ಕೇವಲ 6 ತಿಂಗ್ಳಲ್ಲಿ ಸಾವಿರ ರೇಡ್

    ಅಕ್ರಮ ಮದ್ಯ ಮಾರಾಟದ ವಿರುದ್ಧ ಸಮರ ಸಾರಿದ ಎಸ್‍ಪಿ – ಕೇವಲ 6 ತಿಂಗ್ಳಲ್ಲಿ ಸಾವಿರ ರೇಡ್

    -ಎಸ್‍ಪಿಗೆ ಅಬಕಾರಿ ಅಧಿಕಾರಿಗಳು ಒತ್ತಡ
    -ಕ್ಯಾರೇ ಎನ್ನದ ಎಸ್‍ಪಿಗೆ ಜನರಿಂದ ಮೆಚ್ಚುಗೆ

    ಚಿಕ್ಕಬಳ್ಳಾಪುರ: ಜಿಲ್ಲೆಗೆ ಬಂದ ನೂತನ ಅಧಿಕಾರಿಯೊಬ್ಬರು ಅಕ್ರಮ ಮದ್ಯ ಮಾರಾಟದ ವಿರುದ್ಧ ಸಮರ ಸಾರಿದ್ದು, ಕೇವಲ 6 ತಿಂಗಳಲ್ಲೇ ಮಾರಾಟಕ್ಕೆ ಬ್ರೇಕ್ ಹಾಕುತ್ತಿದ್ದಾರೆ.

    ಜಿಲ್ಲೆಯಲ್ಲಿ ಒಂದು ಕಡೆ ಮಳೆಯಿಲ್ಲ, ಮತ್ತೊಂದೆಡೆ ಮಳೆಯಿಲ್ಲದೆ ಬೆಳೆಯೂ ಇಲ್ಲ. ಇತ್ತ ಸರ್ಕಾರ ಕುಡಿಯೋಕೆ ನೀರು ಕೊಡದಿದ್ದರೂ ಆ ಜಿಲ್ಲೆಗೆ ಸಾಕು ಎನ್ನುವಷ್ಟು ಮದ್ಯ ಸರಬರಾಜಾಗುತ್ತಿದೆ. ಹೀಗಾಗಿ ಪ್ರತಿ ಹಳ್ಳಿಯಲ್ಲಿರುವ ಚಿಲ್ಲರೆ ಅಂಗಡಿಗಳು ಮದ್ಯ ಮಾರಾಟ ಅಂಗಡಿಗಳಾಗಿ ಮಾರ್ಪಾಡಾಗಿದ್ದವು. ಇದರಿಂದ ಗ್ರಾಮೀಣ ಭಾಗದ ಬಹಳಷ್ಟು ಮಂದಿ ಹಳ್ಳಿಗಳಲ್ಲಿನ ಚಿಲ್ಲರೆ ಅಂಗಡಿಗಳಲ್ಲೇ ಸಿಗುತ್ತಿದ್ದ ಮದ್ಯದ ಚಟಕ್ಕೆ ದಾಸರಾಗಿ ಬದುಕು ಹಾಳು ಮಾಡಿಕೊಂಡಿದ್ದರು.

    ಈ ಬಗ್ಗೆ ಜಿಲ್ಲೆಗೆ ಬಂದ ನೂತನ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು ಅವರಿಗೆ ಯುವಕರು, ಮಹಿಳೆಯರು, ವಿದ್ಯಾರ್ಥಿಗಳು ಕರೆ ಮಾಡಿ ಅಕ್ರಮ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕಿಸುವಂತೆ ಮನವಿ ಮಾಡಿಕೊಂಡಿದ್ದರು. ಇದರಿಂದ ಎಚ್ಚೆತ್ತ ಎಸ್‍ಪಿ ಸಂತೋಷ್ ಬಾಬು, ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ. ಅಲ್ಲದೆ ಹಗಲು ರಾತ್ರಿ ಎನ್ನದೆ ಅಕ್ರಮ ಮದ್ಯ ಮಾರಾಟ ಹಾಗೂ ಸರಬರಾಜು ಕಂಡು ಬಂದರೆ ಸಾಕು ನಿರ್ಧಾಕ್ಷಿಣ್ಯವಾಗಿ ಕ್ರಮಕೈಗೊಂಡು ಕೇಸ್ ಮಾಡುವಂತೆ ತಾಕೀತು ಮಾಡಿದರು. ಹೀಗಾಗಿ ಕೇವಲ 6 ತಿಂಗಳಲ್ಲಿ 1000ಕ್ಕೂ ಹೆಚ್ಚು ಅಕ್ರಮ ಮದ್ಯ ಮಾರಾಟದ ಕೇಸ್ ದಾಖಲಾಗಿದ್ದು, ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕಿದಂತಾಗಿದೆ.

    ಜಿಲ್ಲೆಯ ಆರು ತಾಲೂಕುಗಳು, ಗಡಿಭಾಗದ ಹಳ್ಳಿಗಳಲ್ಲಂತೂ ಅಕ್ರಮ ಮದ್ಯ ಮಾರಾಟ ಬಲು ಜೋರಾಗಿಯೇ ಇತ್ತು. ಅದರಲ್ಲೂ ಅನುಮತಿ ಪಡೆದಿರುವ ಬಾರ್ ಮಾಲೀಕರೇ ಸ್ವತಃ ಅಬಕಾರಿ ಅಧಿಕಾರಿಗಳ ಕೊಡುವ ಟಾರ್ಗೆಟ್ ರೀಚ್ ಮಾಡೋಕೆ ಹಳ್ಳಿ ಹಳ್ಳಿಗಳಿಗೆ ಮದ್ಯ ಸರಬರಾಜು ಮಾಡುತ್ತಿದ್ದರು. ಆದರೆ ಈಗ ಅದೆಲ್ಲಕ್ಕೂ ಕಡಿವಾಣ ಬಿದ್ದಿದ್ದು ಎಸ್‍ಪಿ ಸಂತೋಷ್ ಬಾಬು ಕಾರ್ಯಕ್ಕೆ ಸಾರ್ವಜನಿಕರೇ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ಪೊಲೀಸರು ಅಕ್ರಮ ಮದ್ಯ ಮಾರಾಟ ಹಾಗೂ ಸಾಗಾಟಕ್ಕೆ ಬ್ರೇಕ್ ಹಾಕಿದ್ದೇ ತಡ ಅಬಕಾರಿ ಇಲಾಖಾಧಿಕಾರಿಗಳು ಸರ್ ಟಾರ್ಗೆಟ್ ರೀಚ್ ಮಾಡೋಕೆ ಕಷ್ಟ ಆಗುತ್ತದೆ. ಕುಡಿಯೋರು ಕುಡಿಯಲಿ ಬಿಡಿ ಎಂದು ಒತ್ತಡ ಹಾಕುತ್ತಿದ್ದಾರೆ. ಆದರೆ ಅಬಕಾರಿ ಅಧಿಕಾರಿಗಳು ಏನೇ ಹೇಳಿದರೂ ಕೇಳದ ಎಸ್‍ಪಿ ಮಾತ್ರ ಪ್ರತಿ ದಿನ ಅಕ್ರಮ ಮದ್ಯ ಮಾರಾಟದ ವಿರುದ್ಧ ಕಾರ್ಯಾಚರಣೆ ಮುಂದುವರಿಸಿದ್ದು, ಪ್ರತಿದಿನ ಹತ್ತಾರು ಕೇಸ್ ದಾಖಲಾಗುತ್ತಿವೆ.