Tag: ಅಕ್ರಮ ನೇಮಕಾತಿ

  • ಪಿಎಸ್‍ಐ ಕೇಸ್‍ನಲ್ಲಿ ಸಿಕ್ಕಿ ಬಿದ್ದ ಆರೋಪಿ ಈಗ ಪಿಡಬ್ಲ್ಯೂಡಿ ಕೇಸ್‍ನಲ್ಲಿ ಕಸ್ಟಡಿಗೆ

    ಪಿಎಸ್‍ಐ ಕೇಸ್‍ನಲ್ಲಿ ಸಿಕ್ಕಿ ಬಿದ್ದ ಆರೋಪಿ ಈಗ ಪಿಡಬ್ಲ್ಯೂಡಿ ಕೇಸ್‍ನಲ್ಲಿ ಕಸ್ಟಡಿಗೆ

    ಬೆಂಗಳೂರು: ಪಿಎಸ್‍ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣದ ಪ್ರಮುಖ ಆರೋಪಿ ಆರ್.ಡಿ. ಪಾಟೀಲ್ ನನ್ನು ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ.

    2021ರಲ್ಲಿ ನಗರದ ಖಾಸಗಿ ಕಾಲೇಜಿನಲ್ಲಿ ಪಿಡಬ್ಲ್ಯೂಡಿ ನೇಮಕಾತಿ ಪರೀಕ್ಷೆ ನಡೆಸಲಾಗಿತ್ತು. ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಎಸಗುತ್ತಿದ್ದ ಆರೋಪಿಗಳನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿ ತನಿಖೆಗೆ ಒಳಪಡಿಸಲಾಗಿದೆ. ಪ್ರಕರಣ ಸಂಬಂಧ ಒಟ್ಟು 16 ಮಂದಿಯನ್ನ ಬಂಧಿಸಿ ಚಾರ್ಜ್‍ಶೀಟ್ ಸಲ್ಲಿಕೆ ಮಾಡಲಾಗಿತ್ತು. ಪ್ರಕರಣದ ತನಿಖೆ ಮಾಡುತ್ತಿರುವ ಪೊಲೀಸರಿಗೆ ಪಿಡಬ್ಲ್ಯೂಡಿ ಪರೀಕ್ಷೆಯಲ್ಲಿ ನಡೆದ ಅಕ್ರಮದಲ್ಲಿ ಪಿಎಸ್‍ಐ ಕೇಸ್‍ನಲ್ಲಿ ಬಂಧನವಾಗಿರುವ ಆರೋಪಿ ಆರ್.ಡಿ. ಪಾಟೀಲ್ ಪಾತ್ರ ಇರುವ ಬಗ್ಗೆ ಒಂದಷ್ಟು ಅನುಮಾನಗಳು ಹಾಗೂ ಬಲ್ಲ ಮೂಲಗಳಿಂದ ಪೊಲೀಸರಿಗೆ ಮಾಹಿತಿ ಸಿಕ್ಕಿರುವ ಕಾರಣ ಕಲಬುರಗಿ ಜೈಲಿನಿಂದ ಬಾಡಿವಾರೆಂಟ್ ಮೇಲೆ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: 2-3 ದಿನದಲ್ಲಿ ಸಂಪುಟ ವಿಸ್ತರಣೆ : ಸಿಎಂ ಬೊಮ್ಮಾಯಿ

    court order law

    ಸದ್ಯ ಆರೋಪಿಯನ್ನು ಒಂದನೇ ಎಸಿಎಂಎಂ ಕೋರ್ಟ್‍ಗೆ ಹಾಜರು ಪಡಿಸಿ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ನ್ಯಾಯಾಲಯ 10 ದಿನ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ನೀಡಿದೆ. ಸದ್ಯ ಆರೋಪಿ ತನಿಖೆಯಿಂದ ಪಿಡಬ್ಲ್ಯೂಡಿ ನೇಮಕಾತಿ ಪರೀಕ್ಷೆಯಲ್ಲಾಗಿರುವ ಅಕ್ರಮದ ಬಗ್ಗೆ ಮತ್ತಷ್ಟು ಹುಳುಕು ಹೊರ ಬರುವ ಸಾದ್ಯತೆ ಹೆಚ್ಚಾಗಿದೆ. ಇದನ್ನೂ ಓದಿ: ಕರ್ತವ್ಯದ ವೇಳೆ ಕಂಠಪೂರ್ತಿ ಕುಡಿದು ರಂಪಾಟ ಮಾಡಿದ ಸರ್ಕಾರಿ ನೌಕರ

  • PSI ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದ ಹಾಸನ ಜಿಲ್ಲೆಯ ಮೂವರು CID ವಶಕ್ಕೆ

    PSI ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದ ಹಾಸನ ಜಿಲ್ಲೆಯ ಮೂವರು CID ವಶಕ್ಕೆ

    ಹಾಸನ: ರಾಜ್ಯದಲ್ಲೇ ಸದ್ದು ಮಾಡುತ್ತಿರುವ PSI ನೇಮಕಾತಿ ಹಗರಣ ಹಾಸನ ಜಿಲ್ಲೆಗೂ ಹಬ್ಬಿದೆ. PSI ಪರೀಕ್ಷೆ ಬರೆದು ತೇರ್ಗಡೆ ಹೊಂದಿದ್ದ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ, ಹಾಸನ, ಹೊಳೆನರಸೀಪುರ ತಾಲ್ಲೂಕಿಗೆ ಸೇರಿದ ಒಟ್ಟು ಮೂವರು ಅಭ್ಯರ್ಥಿಗಳನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    MLA

    ಕೇವಲ ಅಭ್ಯರ್ಥಿಗಳು ಮಾತ್ರವಲ್ಲದೇ, ಬೆಕ್ಕ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಕೇಶವಮೂರ್ತಿ ಸೇರಿದಂತೆ ಮೂವರು ಸ್ಥಳೀಯ ರಾಜಕಾರಣಿಗಳನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವರು ಜೆಡಿಎಸ್‌ನಲ್ಲಿ ಗುರುತಿಸಿಕೊಂಡಿದ್ದು, ಇತ್ತೀಚೆಗೆ ಬಿಜೆಪಿಯ ಜೊತೆಯು ಉತ್ತಮ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ. ಇದನ್ನೂ ಓದಿ: 15 ದಿನದ ಬಳಿಕ ಅಕ್ರಮ ಧ್ವನಿವರ್ಧಕಗಳ ವಿರುದ್ಧ ರಾಜ್ಯದಲ್ಲೂ ಕಾರ್ಯಾಚರಣೆ

    ಈ ಸಂಬಂಧ ಪ್ರತಿಕ್ರಿಯಿಸಿರುವ ಶಾಸಕ ಸಿ.ಎನ್.ಬಾಲಕೃಷ್ಣ, ಈ ಹಗರಣದಲ್ಲಿ ಎಲ್ಲರೂ ಒಂದಲ್ಲ ಒಂದು ಪಕ್ಷದಲ್ಲಿ ಗುರುತಿಸಿಕೊಂಡಿರುತ್ತಾರೆ. ಯಾವುದೇ ಪಕ್ಷ ಇಂತಹ ಕೆಲಸ ಮಾಡಿ ಅಂತ ಹೇಳಲ್ಲ. ಜನಪ್ರತಿನಿಧಿಗಳಾಗಿ ಒಳ್ಳೆಯ ಕೆಲಸ ಮಾಡಿ ಅಂತ ಹೇಳುತ್ತೆ. ಇದು ಅವರವರು ಮಾಡಿರುವಂತಹ ವೈಯಕ್ತಿಕ ತಪ್ಪುಗಳು. ತಪ್ಪು ಯಾರು ಮಾಡಿದರೂ ತಪ್ಪೇ. ಇದರಿಂದ ಪ್ರಾಮಾಣಿಕವಾಗಿ ಪರೀಕ್ಷೆ ಬರೆದಿರುವವರಿಗೆ ನ್ಯಾಯ ಒದಗಿಸಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಬಿತ್ತನೆ ಬೀಜ, ರಸಗೊಬ್ಬರದ ಕೊರತೆ ಇಲ್ಲ, ಕೃತಕ ಅಭಾವ ಸೃಷ್ಟಿಸಿದರೆ ಕಠಿಣ ಕ್ರಮ: ಬಿ.ಸಿ.ಪಾಟೀಲ್

    PSI SACAM

    ಪಿಎಸ್‌ಐ ಹಗರಣದಲ್ಲಿ ಜೆಡಿಎಸ್‌ನ ಇಬ್ಬರು ಪಕ್ಷದವರು ಭಾಗಿಯಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ನನಗೂ ಅದರ ಬಗ್ಗೆ ಸರಿಯಾಗಿ ಗೊತ್ತಿಲ್ಲ. ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಹಾಸನ ಜಿಲ್ಲೆಯ ಕೆಲವು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಹೆಸರು ಕೇಳಿ ಬರುತ್ತಿದ್ದು ಮುಂದಿನ ದಿನಗಳಲ್ಲಿ ಇದು ಯಾರ ಕೊರಳಿಗೆ ಸುತ್ತಿಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ ಎಂದು ತಿಳಿಸಿದ್ದಾರೆ.

  • PSI ನೇಮಕಾತಿಯಲ್ಲಿ ಅಕ್ರಮ – ಬೆಂಗ್ಳೂರಿನ 7 ಪರೀಕ್ಷಾ ಕೇಂದ್ರಗಳ ಮೇಲೆ ಕಣ್ಣು

    PSI ನೇಮಕಾತಿಯಲ್ಲಿ ಅಕ್ರಮ – ಬೆಂಗ್ಳೂರಿನ 7 ಪರೀಕ್ಷಾ ಕೇಂದ್ರಗಳ ಮೇಲೆ ಕಣ್ಣು

    ಬೆಂಗಳೂರು: PSI ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ತನಿಖೆಯು ಇದೀಗ ಕಲಬುರಗಿಯಿಂದ ಸಿಲಿಕಾನ್ ಸಿಟಿ ಬೆಂಗಳೂರಿಗೆ ವ್ಯಾಪಿಸಿದೆ.

    ಪಿಎಸ್‌ಐ 545 ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ, ಬೆಂಗಳೂರಿನಿಂದ ಆಯ್ಕೆಯಾಗಿದ್ದ 172 ಅಭ್ಯರ್ಥಿಗಳ ಎಫ್‌ಎಸ್‌ಎಲ್ ವರದಿಯಲ್ಲಿ 22 ಅಭ್ಯರ್ಥಿಗಳ ಅಸಲಿ ಓಎಂಆರ್ ಮತ್ತು ಓಎಂಆರ್ ಕಾರ್ಬನ್ ಪ್ರತಿಯಲ್ಲಿ ವ್ಯತ್ಯಾಸ ಕಂಡುಬಂದಿತ್ತು. ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ಅವರ ಹೆಸರು ಕೇಳಿಬರುತ್ತಿದ್ದಂತೆ ಬೆಂಗಳೂರಿನ ಪರೀಕ್ಷಾ ಕೇಂದ್ರಗಳ ಮೇಲೆ ಸಿಐಡಿ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ. ಇದನ್ನೂ ಓದಿ: PSI ಟಾಪರ್ಸ್‍ಗಳ ಅಸಲಿ ಮುಖವಾಡ ಬಯಲು – ತಾತ್ಕಾಲಿಕ ಪಟ್ಟಿಯಲ್ಲಿ ಬೆಂಗ್ಳೂರಿನ 172 ಮಂದಿ ಆಯ್ಕೆ!

    PSI CASE TOPERS

    ಈಗಾಗಲೇ 12 ಅಭ್ಯರ್ಥಿಗಳ ಬಂಧನ ಮಾಡಿರೋ ಸಿಐಡಿ, ಇಂದು ಮತ್ತಷ್ಟು ಕಡೆ ದಾಳಿಯನ್ನು ಮಾಡಲಿದೆ. ಬೆಂಗಳೂರಿನ 7 ಪರೀಕ್ಷಾ ಕೇಂದ್ರಗಳ ಮೇಲೂ ದಾಳಿಯನ್ನು ಮಾಡಿ ಮತ್ತಷ್ಟು ಮಹತ್ವದ ಮಾಹಿತಿ ಬಯಲಿಗೆಳೆಯಲಿದೆ ಎಂದು ತಿಳಿದು ಬಂದಿದೆ.

    ಪಿಎಸ್‌ಐ ಪರೀಕ್ಷೆಯ ಅಕ್ರಮದಲ್ಲಿ ಬೆಂಗಳೂರಿನ ಪಾಲು ಬಹಳ ದೊಡ್ಡದಿದೆ. ಅದಕ್ಕೆ ಅರೆಸ್ಟ್ ಆಗಿ ಸಿಐಡಿ ಕಸ್ಟಡಿಯಲ್ಲಿರೋ ಅಭ್ಯರ್ಥಿಗಳ ಸಂಖ್ಯೆ ಸಾಕ್ಷಿ. ಅಲ್ಲದೆ, ಬಹುತೇಕ ಟಾಪರ್ಸ್‌ಗಳೇ ಹಿಟ್ ಲಿಸ್ಟ್ನಲ್ಲಿದ್ದಾರೆ. ಪಿಎಸ್‌ಐ ನೇಮಕಾತಿಯಲ್ಲಿ ನಡೆದಿರುವ ಅಕ್ರಮ ಬಗೆದಷ್ಟು ಬಯಲಾಗುತ್ತಿದೆ ತಾತ್ಕಾಲಿಕ ಪಟ್ಟಿಯಲ್ಲಿ ಆಯ್ಕೆ ಆಗಿರುವ ಟಾಪರ್ಸ್‌ಗಳೇ ಆರೋಪಿಗಳ ಪಟ್ಟಿಯಲ್ಲಿದ್ದಾರೆ. ಇದನ್ನೂ ಓದಿ: ಕುಂಬಳಕಾಯಿ ಕಳ್ಳ ಅಂದ್ರೆ ಅಶ್ವಥ್ ನಾರಾಯಣ ಹೆಗಲು ಮುಟ್ಟಿಕೊಂಡು ನೋಡಿಕೊಂಡಿದ್ದೇಕೆ: ಡಿಕೆಶಿ ಪ್ರಶ್ನೆ

    ASHWATH NARAYAN 1

    ಈ ಪ್ರಕರಣದಲ್ಲಿ ಬಿಜೆಪಿ ಪ್ರಮುಖ ಸಚಿವನನ್ನೇ ಟಾರ್ಗೆಟ್ ಮಾಡಿ ಗದ್ದಲ ಎಬ್ಬಿಸಿದೆ ಎಂಬ ಆರೋಪ ಕೇಳಿಬರುತ್ತದೆ.ಈಗಾಗಲೇ ಅಶ್ವಥ್ ನಾರಾಯಣ್ ವಿರುದ್ಧ ಸಮರ ಸಾರಿದ ಕಾಂಗ್ರೆಸ್ ಇನ್ನೂ ಇಬ್ಬರ ಮೇಲೆ ಕಣ್ಣು ಇಟ್ಟಿದೆ. ಶೀಘ್ರದಲ್ಲೇ ತನ್ನ ಬತ್ತಳಿಕೆಯಿಂದ ಅಸ್ತ್ರಗಳನ್ನು ಪ್ರಯೋಗಿಸಲಿದೆ ಎಂದು ಹೇಳಲಾಗುತ್ತಿದೆ.

  • ರಾಜ್ಯವನ್ನೇ ಹುಡುಕಿದರೂ ಸಿಗದ ಕಿಂಗ್‌ಪಿನ್ ದಿವ್ಯಾ ಹಾಗರಗಿ ಅರೆಸ್ಟ್ ಆದ ಕಥೆಯೇ ರೋಚಕ

    ರಾಜ್ಯವನ್ನೇ ಹುಡುಕಿದರೂ ಸಿಗದ ಕಿಂಗ್‌ಪಿನ್ ದಿವ್ಯಾ ಹಾಗರಗಿ ಅರೆಸ್ಟ್ ಆದ ಕಥೆಯೇ ರೋಚಕ

    ಬೆಂಗಳೂರು/ಕಲಬುರಗಿ: ರಾಜ್ಯಾದ್ಯಂತ ಹುಡುಕಾಡಿದರೂ ಸಿಗದ ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣದ ಕಿಂಗ್‌ಪಿನ್ ಆರೋಪಿ ದಿವ್ಯಾ ಹಾಗರಗಿ ಸಿಐಡಿ ಬೋನಿಗೆ ಬಿದ್ದದೆ ರೋಚಕ.

    ದಿನಕ್ಕೊಂದು ರಹಸ್ಯಗಳನ್ನು ಬಯಲು ಮಾಡುತ್ತಿದ್ದ ಈ ಪ್ರಕರಣದಲ್ಲಿ ವಿಶೇಷ ತಂಡಗಳನ್ನು ರಚಿಸಿ ಫುಲ್ ಆಕ್ಟೀವ್ ಆಗಿ ಕೆಲಸ ಮಾಡುತ್ತಿದ್ದ ಸಿಐಡಿ ಅಧಿಕಾರಿಗಳು, ಹೊಂಚುಹಾಕಿ ಸಿನಿಮೀಯ ರೀತಿಯಲ್ಲಿ ಆಕೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಜಮೀರ್‌ಗೆ ಬಿಜೆಪಿ `ಮಹಾನಾಯಕ’ನ ಬೆಂಬಲವಿದೆ, ನಮ್ಮವರೇ ಸುಲಿಗೆ ಮಾಡುತ್ತಿದ್ದಾರೆ: ಯತ್ನಾಳ್

    Divya hagaragi (2)

    ದಿವ್ಯಾ ಎಸ್ಕೇಪ್ ಆಗಿದ್ದು ಹೇಗೆ?: ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ವಿಚಾರ ಕೇಳಿಬರುತ್ತಿದ್ದಂತೆ ದಿವ್ಯಾ ಹಾಗರಗಿ, ಕಾರುಚಾಲಕ ಸದ್ದಾಂ ಹುಸೇನ್‌ನ ಸಹಾಯದಿಂದ ತನ್ನ ಇನ್ನೋವಾ ಕಾರಿನಲ್ಲಿ ಅರ್ಚನಾ, ಸುನೀತಾಳನ್ನ ಕೂರಿಸಿಕೊಂಡು ಎಸ್ಕೇಪ್ ಆಗಿದ್ದಾಳೆ. ಅಷ್ಟರಲ್ಲಾಗಲೇ ಫುಲ್ ಆಕ್ಟೀವ್ ಆಗಿದ್ದ ಸಿಐಡಿಯ ಸೈಬರ್ ಕ್ರೈಂ ತಂಡವು ದಿವ್ಯಾ ಎಲ್ಲೆಲ್ಲಿ ಹೋಗ್ತಿದ್ದಾಳೆ? ಎಂಬ ಮಾಹಿತಿಯನ್ನು ಕಲೆಹಾಕತೊಡಗಿತ್ತು. ಇದಕ್ಕಾಗಿ ಸಿಐಡಿಯು 6 ವಿಶೇಷ ತಂಡಗಳನ್ನು ರಚಿಸಿಕೊಂಡಿತ್ತು. ಎಸ್ಪಿ ನಾಗೇಶ್ ಅವರ ಟೀಂ ನಿಂದ ಟೆಕ್ನಿಕಲ್ ಸಹಕಾರ ನೀಡಿತ್ತು. ಇದನ್ನೂ ಓದಿ: ತಾಕತ್ತಿದ್ದರೆ ನನ್ನ ವಿರುದ್ಧ ರೇವಣ್ಣ ನಿಲ್ಲಲಿ: ಪ್ರೀತಂ ಸವಾಲು

    divya hagaragi

    ಎಸ್ಕೇಪ್ ಆಗಿ ಸೊಲ್ಲಾಪುರಕ್ಕೆ ತೆರಳಿದ್ದ ದಿವ್ಯಾ ಅಲ್ಲಿ ಟೆಲಿಕಾಂ ಬ್ಯುಸಿನಸ್ ಮಾಡ್ತಿದ್ದ ಸುರೇಶ್ ಕಾಟ್ಗಾಂವ್ ನನ್ನ ಭೇಟಿಯಾಗಿದ್ದಳು. ನಂತರ ಆತನ ಬಳಿ ಆಶ್ರಯ ನೀಡುವಂತೆ ದುಂಬಾಲುಬಿದ್ದಿದ್ದಳು. ಈ ಹಿಂದೆ ಕಲಬುರಗಿಯ ಅಫ್ಜಲ್ ಪುರದಲ್ಲಿ ಸ್ಯಾಂಡ್ ಬ್ಯುಸಿನೆಸ್ ಮಾಡಿಕೊಂಡಿದ್ದಾಗ ಸುರೇಶ್‌ನ ಪರಿಚಯವಾಗಿತ್ತು. ದಿವ್ಯಾ ಸುರೇಶ್‌ಗೆ ಹಣಕಾಸಿನ ಸಹಾಯ ಮಾಡುತ್ತಿದ್ದಳು. ಆ ಋಣವನ್ನ ತೀರಿಸೋಕೆ ಸುರೇಶ್ ದಿವ್ಯಾ ಸಹಾಯಕ್ಕಾಗಿ ನಿಂತಿದ್ದನು.

    kalaburagi - divya

    ಅಕ್ರಮ ನೇಮಕಾತಿ ವಿಚಾರ ಬಯಲಾಗುತ್ತಿದ್ದಂತೆ ಅಫ್ಜಲ್‌ಪುರ ತಲುಪುವ ಮುನ್ನವೇ ದಿವ್ಯಾ ಮೊಬೈಲ್ ಸ್ವಿಚ್‌ಆಫ್ ಮಾಡಿಕೊಂಡಿದ್ದಾಳೆ. ನಂತರ ದಿವ್ಯಾ ಅಂಡ್ ಟೀಂ ಮೊಬೈಲ್ ಬಳಸದೇ ಮಹಾರಾಷ್ಟ್ರದ ಪುಣೆ ತಲುಪಿದೆ. ಇದಕ್ಕೂ ಮುನ್ನವೇ ಗುಜರಾತ್-ಮಹಾರಾಷ್ಟ್ರ ಭಾಗಗಳಲ್ಲಿ ಕಾರಿನಲ್ಲಿ ಓಡಾಟ ನಡೆಸಿದ್ದರು. ದಿವ್ಯಾಳ ಮೊಬೈಲ್ ಸ್ವಿಚ್ ಆಫ್ ಆಗೋಕು ಮುನ್ನ ಸುರೇಶನಿಗೆ ಕಾಲ್ ಮಾಡಿದ್ದಳು. ಈ ಆಧಾರದ ಮೇಲೆಯೇ ಸುರೇಶ್ ಚಲನವಲನದ ಬಗ್ಗೆ ಗಮನಹರಿಸಿದ್ದ ಸಿಐಡಿ ಟೀಂ ಸುರೇಶನ ಬೆಂಬಿದ್ದಿದೆ. ನಂತರ ಸುರೇಶ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ದಿವ್ಯಾಳ ಬಗ್ಗೆ ಸತ್ಯ ಬಾಯ್ಬಿಟ್ಟಿದ್ದಾನೆ. ಪುಣೆಗೆ ಹೋಗ್ತೀನಿ ಅಂದಿದ್ರು ಆದರೆ, ಎಲ್ಲಿ ಅಂತ ಗೊತ್ತಿಲ್ಲ ಎಂದು ಬಾಯ್ಬಿಟ್ಟಿದ್ದಾನೆ. ಇದನ್ನೂ ಓದಿ: ಮನೆಯಿಂದ ಹೋಗಬೇಕಾದ್ರೆ ರಾಜಕುಮಾರಿ ತರ ಹೋದ್ಳು, ಆದರೆ ಈಗ….: ಆ್ಯಸಿಡ್ ಸಂತ್ರಸ್ತೆ ತಾಯಿ ಅಳಲು 

    DIVYA - POLICE - KALBURAGI (3)

    ನಂತರ ಸಿಐಡಿ ಅಧಿಕಾರಿಗಳು ಸುರೇಶ್‌ನನ್ನು ಪುಣೆಗೆ ಕರೆದೊಯ್ದು ದಿವ್ಯಾಳಿಗೆ ಫೋನ್ ಮಾಡಿಸಿದ್ದಾರೆ. ಲಾಡ್ಜ್ ಒಂದರ ಮಾಹಿತಿಯನ್ನ ನೀಡಿದ್ದ ದಿವ್ಯಾ. ಆ ಲಾಡ್ಜ್ ನಲ್ಲಿ ಅಡುಗೆಭಟ್ಟ ಕಾಳಿದಾಸನಿಂದ ಬಗೆಬಗೆಯ ಅಡುಗೆ ಮಾಡಿಸಿಕೊಂಡು ತಿನ್ನುತ್ತಿದ್ದರು. ಕಾಳಿದಾಸನ ಮೊಬೈಲ್ ನಿಂದಲೇ ವಾಟ್ಸಪ್ ಕಾಲ್ ಮಾಡ್ತಿದ್ರು. ಇದರಿಂದ ಆಕೆ ಲಾಡ್ಜ್ನಲ್ಲಿ ಇರುವುದು ಕನ್ಫರ್ಮ್ ಆಗಿದೆ. ಲಾಡ್ಜ್ ಅನ್ನು ಸುತ್ತುವರಿದ ಪೊಲೀಸರು ದಿವ್ಯಾ, ಅರ್ಚನಾ, ಸುನೀತಾ, ಕಾರು ಚಾಲಕ ಸದ್ದಾಂನನ್ನು ಅರೆಸ್ಟ್ ಮಾಡಿದ್ದಾರೆ. ಉಳಿದಂತೆ ಎಂಎಸ್ ಬಿಲ್ಡಿಂಗ್‌ನ ಡಿಪಿಆರ್ ಸೆಕ್ಷನ್‌ನಲ್ಲಿದ್ದ ಜ್ಯೋತಿ ಸಹ ತಗಲ್ಲಾಕ್ಕೊಂಡಿದ್ದಾಳೆ.

    ಜ್ಯೋತಿ, ಶಾಂತಾಭಾಯಿ ಎಂಬಾಕೆಯನ್ನು ಪಿಎಸ್‌ಐ ಅಕ್ರಮ ನೇಮಕಾತಿ ಮಾಡಿಸಿದ್ದಳು. 15 ಉತ್ತರವನ್ನಷ್ಟೇ ಶಾಂತಾಭಾಯಿ ಉತ್ತರಿಸಿದ್ದಳು. ಆದರೆ, ಓಎಂಆರ್ ಶೀಟ್ ನಲ್ಲಿ 130 ಅಂಕ ಪಡೆಯುವಂತೆ ಮಾಡಲಾಗಿದೆ. ಒಟ್ಟಿನಲ್ಲಿ ಶಾಂತಾಭಾಯಿ ಎಸ್ಕೇಪ್ ಆಗಿದ್ದು ಆಕೆಯ ಹುಡುಕಾಟದಲ್ಲಿ ಸಿಐಡಿ ಬ್ಯುಸಿಯಾಗಿದೆ.

  • PSI ನೇಮಕಾತಿ ಪರೀಕ್ಷೆಗೆ ಬ್ಲೂಟೂತ್ ಮೂಲಕ ಉತ್ತರ ರವಾನೆ

    PSI ನೇಮಕಾತಿ ಪರೀಕ್ಷೆಗೆ ಬ್ಲೂಟೂತ್ ಮೂಲಕ ಉತ್ತರ ರವಾನೆ

    ಬೆಂಗಳೂರು: PSI ನೇಮಕಾತಿ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರೋ ಕಿಂಗ್‌ಪಿನ್ ಸೇರಿ ಪ್ರಮುಖ ಆರೋಪಿಗಳನ್ನು ಖೆಡ್ಡಕ್ಕೆ ಬೀಳಿಸಿದ್ದಾರೆ. ಬ್ಲೂಟೂತ್‌ನಲ್ಲಿ ಆರೋಪಿತ ಅಭ್ಯರ್ಥಿಗಳಿಗೆ ಉತ್ತರ ರವಾನಿಸಿ ಅಕ್ರಮ ಎಸಗಿರುವ ಮತ್ತೊಂದು ಸ್ಫೋಟಕ ಅಂಶ ಬಯಲಾಗಿದೆ.

    PIS KINGPIN 02

    ಸಿನಿಮಾ ಮಾದರಿಯಲ್ಲಿ ಬ್ಲೂಟೂತ್ ಮೂಲಕ ಉತ್ತರ ರವಾನಿಸಿದ್ದಾರೆ. ಪರೀಕ್ಷೆಗೂ ಮುನ್ನ ಪ್ರಶ್ನೆಪತ್ರಿಕೆ ಲೀಕ್ ಆಗಿರುವ ಮಾಹಿತಿ ಬಹಿರಂಗಗೊಂಡಿದೆ. ಲೀಕ್ ಆದ ಪ್ರಶ್ನೆಪತ್ರಿಕೆಯ ಉತ್ತರಗಳನ್ನು ಸಿದ್ಧಪಡಿಸಿಕೊಂಡಿದ್ದ ಆರೋಪಿಗಳು ಹಣ ಕೊಟ್ಟು ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಬ್ಲೂಟೂತ್ ಮೂಲಕ ಉತ್ತರ ರವಾನೆ ಮಾಡಿಸಿದ್ದಾರೆ. ದಾಳಿ ನಡೆಸಿರುವ ಅಧಿಕಾರಿಗಳಿಗೆ ಎಲೆಕ್ಟ್ರಾನಿಕ್‌ ಡಿವೈಸ್‌ ಲಭ್ಯವಾಗಿದ್ದು, ಆರೋಪಿಗಳ ಎಟಿಎಂ ಕಾರ್ಡ್‌ಗಳು ಸಹ ದೊರೆತಿವೆ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ವಿಧ್ವಂಸಕ ಕೃತ್ಯಗಳಿಗೆ ಕಾಂಗ್ರೆಸ್ ಹೊಣೆ: ಆರ್.ಅಶೋಕ್

    ಎಲೆಕ್ಟ್ರಾನಿಕ್‌ ಡಿವೈಸ್‌ ಬಳಸಿ ಉತ್ತರ ನೀಡಲಾಗಿದ್ದು, ಹಣಕೊಟ್ಟ ಅಭ್ಯರ್ಥಿಗಳಿಗೆ A-B-C-D ಮಾದರಿ ಪ್ರಶ್ನೆಪತ್ರಿಕೆಗಳಂತೆ ಒಂದೇ ಬಾರಿಗೆ ಉತ್ತರ ಹೇಳಿಕೊಟ್ಟಿದ್ದಾರೆ. ಇದೀಗ ಪ್ರಶ್ನೆ ಪತ್ರಿಕೆಗೆ ಉತ್ತರ ಕೊಡುವ ವೀಡಿಯೋ ವೈರಲ್ ಆಗಿದೆ.

    PIS KINGPIN 02

    PSI ಅಕ್ರಮ ನೇಮಕಾತಿ ಪ್ರಕರಣದ ರೂವಾರಿಗಳು ಸಿಐಡಿ ಖೆಡ್ಡಕ್ಕೆ ಬೀಳುತ್ತಿದ್ದಂತೆ ಉಳಿದವರಿಗೆ ನಡುಕ ಶುರುವಾಗಿದೆ. ಕಿಂಗ್‌ಪಿನ್‌ಗಳ ವಿಚಾರಣೆ ವೇಳೆ ಹೆಸರುಗಳು ಬಾಯಿಬಿಟ್ರೆ ಸಂಕಷ್ಟ ಕಟ್ಟಿಟ್ಟ ಬುತ್ತಿ ಎಂಬ ಆತಂಕ ಉಳಿದ ಆರೋಪಿಗಳಿಗೆ ಶುರುವಾಗಿದೆ. ಇದನ್ನೂ ಓದಿ:  ಪ್ರಿಯಾಂಕ್ ಖರ್ಗೆ ಆಪ್ತರೆನ್ನಲಾದ ಕಾಂಗ್ರೆಸ್ ನಾಯಕರನ್ನ ಬಂಧಿಸಲಾಗಿದೆ: ಆರಗ

    ಪ್ರಕರಣದಲ್ಲಿ ಭಾಗಿಯಾಗಿ ತಲೆಮರಿಸಿಕೊಂಡಿರೋ ಆರೋಪಿಗಳನ್ನು ಸದ್ಯದಲ್ಲೇ ಬಂಧಿಸಿ ಪ್ರಕರಣಗಳ ಸತ್ಯಾಸತ್ಯತೆ ತಿಳಿದುಕೊಳ್ಳುವ ನಿಟ್ಟಿನಲ್ಲಿ ಸಿಐಡಿ ತನಿಖೆ ಮುಂದುವರೆದಿದೆ.

  • PSI ಅಕ್ರಮ ನೇಮಕಾತಿ: ಎಂಎಲ್‌ಎ ಮುಂದೆಯೇ ಗನ್‌ಮ್ಯಾನ್ ಅರೆಸ್ಟ್

    PSI ಅಕ್ರಮ ನೇಮಕಾತಿ: ಎಂಎಲ್‌ಎ ಮುಂದೆಯೇ ಗನ್‌ಮ್ಯಾನ್ ಅರೆಸ್ಟ್

    ಕಲಬುರಗಿ: ಪಿಎಸ್‌ಐ ಅಕ್ರಮ ನೇಮಕಾತಿ ವಿಚಾರಕ್ಕೆ ಸಂಬಂಧಿಸಿದಂತೆ ಅಫ್ಜಲ್‌ಪುರ ಎಂಎಲ್‌ಎ ಎಂ.ವೈ.ಪಾಟೀಲ್ ಗನ್‌ಮ್ಯಾನ್‌ನನ್ನು ಬಂಧಿಸಲಾಗಿದೆ.

    ಶಾಸಕ ಎಂ.ವೈ.ಪಾಟೀಲ್ ಅವರು ಪರಿಚಯಸ್ಥರ ಮದುವೆಗೆ ತೆರಳುತ್ತಿದ್ದ ವೇಳೆ, ಕಲಬುರಗಿ ನಗರದ ರಾಮಮಂದಿರ ಬಳಿ ಗನ್‌ಮ್ಯಾನ್ ಅಣ್ಣಯ್ಯ ದೇಸಾಯಿಯನ್ನು ಬಂಧಿಸಲಾಗಿದೆ. ಶಾಸಕರನ್ನು ಕಾರಿನಿಂದ ಇಳಿಸಿದ ಪೊಲೀಸರು, ಅವರ ಮುಂದೆಯೇ ಬಂಧಿಸಿದ್ದಾರೆ. ಬಳಿಕ ಶಾಸಕರಿಗೆ ಮತ್ತೊಬ್ಬ ಗನ್‌ಮ್ಯಾನ್‌ನನ್ನು ಕಳುಹಿಸಿಕೊಟ್ಟಿದ್ದಾರೆ. ಇದನ್ನೂ ಓದಿ: ಕಲಬುರಗಿಯಲ್ಲಿ ನಾಳೆಯಿಂದ 2 ದಿನ ಬಿಜೆಪಿ ಕೋರ್ ಕಮಿಟಿ ಸಭೆ – ಸಿಎಂ ಸೇರಿ ಹಲವರು ಭಾಗಿ

    MLA

    ಪಿಎಸ್‌ಐ ಪರೀಕ್ಷೆ ಅಕ್ರಮ ನೇಮಕಾತಿಗೆ ಸಂಬಂಧಿಸಿದಂತೆ ಈವರೆಗೆ ಮೂವರು ಕೊಠಡಿ ಮೇಲ್ವಿಚಾರಕರು, ನಾಲ್ವರು ಅಭ್ಯರ್ಥಿಗಳು ಹಾಗೂ ಜ್ಞಾನಜೋತಿ ಇಂಗ್ಲಿಷ್ ಶಾಲೆ ಅಧ್ಯಕ್ಷ ರಾಜೇಶ್ ಹಾಗರಗಿ ಸೇರಿ 8 ಮಂದಿಯನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಈ ಪೈಕಿ 6 ಆರೋಪಿಗಳನ್ನು 3 ದಿನಗಳ ಕಾಲ ವಿಚಾರಣೆ ನಡೆಸಲಾಗಿದೆ. ಆದರೂ ಅಭ್ಯರ್ಥಿಗಳು ಸತ್ಯ ಬಾಯಿಬಿಟ್ಟಿಲ್ಲ ಎನ್ನಲಾಗಿದೆ. ಇದನ್ನೂ ಓದಿ: ಬಸವಣ್ಣನಂತೆ ಬೊಮ್ಮಾಯಿ ಕೆಲಸ ಮಾಡುತ್ತಿದ್ದಾರೆ: ದೇಶಿಕೇಂದ್ರ ಮಹಾಸ್ವಾಮಿಜೀ

    Karnataka PSI exam scam (3)

    ತಮಗೇನೂ ಗೊತ್ತಿಲ್ಲ, ತಾವು ಅಕ್ರಮ ಮಾಡಿಯೇ ಇಲ್ಲ ಎಂದು ಹೇಳುತ್ತಿದ್ದಾರೆ. ಆದರೆ, ವೀರೇಶ್ ಎಂಬ ಅಭ್ಯರ್ಥಿ ಹಣ ನೀಡಿರುವ ಬಗ್ಗೆ ಹೇಳಿಕೆ ನೀಡಿದ್ದಾನೆ. ಕಿಂಗ್‌ಪಿನ್ ಮಂಜುನಾಥ ಎಂಬವನಿಗೆ 39 ಲಕ್ಷ ಹಣ ನೀಡಿರುವುದಾಗಿ ಹೇಳಿಕೆ ನೀಡಿದ್ದಾನೆ. ಅಕ್ರಮದ ಬಗ್ಗೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರು, ಬಂಧಿತ ಅಭ್ಯರ್ಥಿಗಳ ಬ್ಯಾಂಕ್ ಡಿಟೈಲ್ಸ್, ಹಣದ ವರ್ಗಾವಣೆ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.

  • ಅಂಗನವಾಡಿ ಶಿಕ್ಷಕಿ ಹುದ್ದೆಗಾಗಿ ವಿಕಲಚೇತನೆಯ ಒಂಟಿ ಹೋರಾಟ

    ಅಂಗನವಾಡಿ ಶಿಕ್ಷಕಿ ಹುದ್ದೆಗಾಗಿ ವಿಕಲಚೇತನೆಯ ಒಂಟಿ ಹೋರಾಟ

    ರಾಯಚೂರು: ಅಂಗನವಾಡಿ ಶಿಕ್ಷಕಿ ಹುದ್ದೆಗೆ ಅಕ್ರಮ ನೇಮಕಾತಿ ಮಾಡುವ ಮೂಲಕ ನನಗೆ ಅನ್ಯಾಯವಾಗಿದೆ ಅಂತ ರಾಯಚೂರಿನಲ್ಲಿ ವಿಕಲಚೇತನ ಮಹಿಳೆ ಒಂಟಿ ಹೋರಾಟ ನಡೆಸಿದ್ದಾರೆ.

    ಜಿಲ್ಲೆಯ ಮಾನ್ವಿ ತಾಲೂಕಿನ ಗೋರ್ಕಲ್ ಗ್ರಾಮದ ಹಂಪಮ್ಮ ಹುಟ್ಟುತ್ತಲೇ ಅಂಗವೈಕಲ್ಯ ಹೊಂದಿದ್ದರು. ಬೆಳವಣಿಗೆ ಇಲ್ಲದೆ ಈಗಲೂ ಕುಳ್ಳಗೆ ಇದ್ದಾರೆ. ಆದರೆ ವಿಷಯ ಅದೊಂದೇ ಅಲ್ಲಾ. ಅಂಗನವಾಡಿ ಶಿಕ್ಷಕಿ ಹುದ್ದೆಗೆ ನೇಮಕಾತಿ ಮಾಡಬೇಕಾದರೆ ಸ್ಥಳೀಯರಿಗೆ ಪ್ರಾಶಸ್ತ್ಯ ನೀಡಬೇಕು. ಆದರೆ ಸ್ಥಳೀಯರಲ್ಲದವರನ್ನು ನಕಲಿ ದಾಖಲೆಗಳ ಮೂಲಕ ಆಯ್ಕೆ ಮಾಡಿ ಸ್ಥಳೀಯರಿಗೆ ಅನ್ಯಾಯ ಮಾಡಲಾಗಿದೆ ಎಂದು ಹಂಪಮ್ಮ ಕಚೇರಿಯಿಂದ ಕಚೇರಿಗೆ ಅಲೆಯುತ್ತಿದ್ದಾರೆ.

    ಮಸ್ಕಿ ತಾಲೂಕಿನ ಹಿರೆದಿನ್ನಿ ಗ್ರಾಮದ ಸುಧಾಕಲಾ ಎಂಬುವವರನ್ನು ಗೋರ್ಕಲ್ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಶಿಕ್ಷಕಿಯಾಗಿ ನೇಮಕ ಮಾಡಲಾಗಿದೆ. ಆದರೆ ತವರು ಮನೆ, ಗಂಡನ ಮನೆ ಎರಡೂ ಹಿರೆದಿನ್ನಿ ಆಗಿದ್ದರು, ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ ಎಲ್ಲವೂ ಹಿರೆದಿನ್ನಿ ವಿಳಾಸದಲ್ಲಿದ್ದರೂ ಕಂದಾಯ ಇಲಾಖೆ ಅಧಿಕಾರಿಗಳು ಸುಳ್ಳು ವಾಸಸ್ಥಳ ಪ್ರಮಾಣ ಪತ್ರ ಕೊಟ್ಟು ವಂಚನೆ ಮಾಡಿದ್ದಾರೆ. ಸುಳ್ಳು ದಾಖಲೆಗಳ ಮೂಲಕ ಶಿಕ್ಷಕಿಯಾಗಿ ಗ್ರಾಮದಲ್ಲಿ ಸೇವೆ ಸಲ್ಲಿಸುತ್ತಿರುವ ಸುಧಾಕಲಾರನ್ನು ಬೇರೆಡೆ ವರ್ಗಾವಣೆ ಮಾಡಿ ಸ್ಥಳೀಯಳಾದ ನನಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಅವಿವಾಹಿತ ಮಹಿಳೆ ಹಂಪಮ್ಮ ಮನವಿ ಮಾಡಿದ್ದಾರೆ.

    ಶಿಶುಅಭಿವೃದ್ಧಿ ಯೋಜನೆ ಅಧಿಕಾರಿಗಳು ಶಿಕ್ಷಕಿ ಹುದ್ದೆಗೆ ಅರ್ಜಿ ಆಹ್ವಾನಿಸಿದಾಗ ನಾನೂ ಅರ್ಜಿ ಸಲ್ಲಿಸಿದ್ದು, ಸ್ಥಳೀಯಳಾಗಿ ನಾನು ಎಲ್ಲಾ ಅರ್ಹತೆ ಹೊಂದಿದ್ದರೂ ಬೇರೆ ಗ್ರಾಮದವರಿಗೆ ಮನ್ನಣೆ ನೀಡಿರುವುದು ಅಕ್ರಮ ಎಂದು ಹಂಪಮ್ನ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.